Agnipath | ವಾಯುಪಡೆಗೆ ಅಗ್ನಿವೀರರ ನೇಮಕ; ಆರು ದಿನಗಳಲ್ಲಿ 1.83 ಲಕ್ಷ ಅರ್ಜಿ - Vistara News

ಉದ್ಯೋಗ

Agnipath | ವಾಯುಪಡೆಗೆ ಅಗ್ನಿವೀರರ ನೇಮಕ; ಆರು ದಿನಗಳಲ್ಲಿ 1.83 ಲಕ್ಷ ಅರ್ಜಿ

ಅಗ್ನಿಪಥ್‌ ಯೋಜನೆ ಪ್ರಕಟವಾದಾಗ ತೀವ್ರ ಪ್ರತಿಭಟನೆ ನಡೆದಿದ್ದರೂ ವಾಯುಪಡೆಯ ಅಗ್ನಿವೀರರ ನೇಮಕಕ್ಕೆ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದುವರೆಗೆ 1,83,634 ಅರ್ಜಿಗಳು ಸಲ್ಲಿಕೆಯಾಗಿವೆ.

VISTARANEWS.COM


on

Agnipath
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವ ದೆಹಲಿಕೇಂದ್ರ ಸರ್ಕಾರವು ಇತ್ತೀಚೆಗೆ ಪ್ರಕಟಿಸಿದ ಸೇನಾ ನೇಮಕಾತಿ ಯೋಜನೆ ʼಅಗ್ನಿಪಥ್‌ʼ (Agnipath) ಅಡಿಯಲ್ಲಿ ಮೊದಲಿಗೆ ಭಾರತೀಯ ವಾಯುಪಡೆಯು (ಐಎಎಫ್‌) ʼಅಗ್ನಿವೀರʼ ರನ್ನು (ಸೈನಿಕರನ್ನು) ನೇಮಿಸಿಕೊಳ್ಳಲು ಅರ್ಜಿ ಆಹ್ವಾನಿಸಿದ್ದು, ಇದುವರೆಗೆ ೧.೮೩ ಲಕ್ಷ ಅರ್ಜಿಗಳು ಸಲ್ಲಿಕೆಯಾಗಿವೆ.

ಕಳೆದ ಆರು ದಿನಗಳ ಹಿಂದೆ (ಜೂ. ೨೪) ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಜೂನ್‌ ೨೮ರ ಸಂಜೆಯವರೆಗೆ 1,83,634 ಅರ್ಜಿಗಳು ಸಲ್ಲಿಕೆಯಾಗಿವೆ ಎಂದು ವಾಯುಪಡೆಯು ಟ್ವಿಟ್ಟರ್‌ನಲ್ಲಿ ತಿಳಿಸಿದೆ. ಅರ್ಜಿ ಸಲ್ಲಿಸಲು ಜುಲೈ ೫ (ಸಂಜೆ ೫ ಗಂಟೆಯವರೆಗೆ ಮಾತ್ರ) ಕೊನೆಯ ದಿನವಾಗಿರುತ್ತದೆ. ಇನ್ನೂ ಅರ್ಜಿ ಸಲ್ಲಿಸದೇ ಇರುವ ಅಭ್ಯರ್ಥಿಗಳು ಕೂಡಲೇ ಅರ್ಜಿ ಸಲ್ಲಿಸುವಂತೆ ವಾಯು ಪಡೆಯು ಕೋರಿದೆ.

ವಾಯಪಡೆಗೆ ಈ ವರ್ಷ ೩,೦೦೦ ಅಗ್ನಿವೀರರನ್ನು ನೇಮಿಸಿಕೊಳ್ಳಲಿದೆ. ಅರ್ಹ ಪುರುಷ ಅಭ್ಯರ್ಥಿಗಳು ಮಾತ್ರ ಈ ನೇಮಕ ಪ್ರಕ್ರಿಯೆಯಲ್ಲಿ ಭಾಗವಹಿಸಬಹುದಾಗಿದ್ದು, ಆಸಕ್ತರು ಈ ನೇಮಕ ಪ್ರಕ್ರಿಯೆಗಾಗಿ ವಿಶೇಷವಾಗಿ ಆರಂಭಿಸಿರುವ ವೆಬ್‌ಸೈಟ್‌ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ವೆಬ್‌ ವಿಳಾಸ ಇಂತಿದೆ; https://agnipathvayu.cdac.in

ಇತ್ತ ಗಮನಿಸಿ
ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭಿಕ ದಿನಾಂಕ : ೨೪-೦೬-೨೦೨೨
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ೦೫-೦೭-೨೦೨೨ (ಸಂಜೆ ೫ ಗಂಟೆಯವರೆಗೆ ಮಾತ್ರ)
ಮೊದಲ ಹಂತದ ಪರೀಕ್ಷೆ ಆರಂಭ: ಜುಲೈ ಕೊನೆಯ ವಾರ
ಅಗ್ನಿವೀರರ ಮೊದಲ ನೇಮಕ: ೧೧-೧೨-೨೦೨೨
ಅರ್ಜಿ ಶುಲ್ಕ : ೨೫೦ ರೂ. (ಆನ್‌ಲೈನ್‌ನಲ್ಲಿಯೇ ಪಾವತಿಸಬಹುದಾಗಿದೆ)
ಮಾಹಿತಿಗೆ ದೂರವಾಣಿ ಸಂಖ್ಯೆ: 20-25503105/25503106
ಹೆಚ್ಚಿನ ಮಾಹಿತಿಗೆ ವೆಬ್‌ ಸೈಟ್‌: 
https://indianairforce.nic.in/agniveer/
ಅರ್ಜಿ ಸಲ್ಲಿಸಲು ವೆಬ್‌: https://agnipathvayu.cdac.in

ಅಗ್ನಿಪಥ್‌ ಯೋಜನೆ ಪ್ರಕಟಿಸಿದ ನಂತರ ದೇಶಾದ್ಯಂತ ಹಿಂಸಾತ್ಮಕ ಪ್ರತಿಭಟನೆ ನಡೆದಿದ್ದರೂ ಈ ನೇಮಕಕ್ಕೆ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಭಾರತೀಯ ಸೇನೆ ಮತ್ತು ಭಾರತೀಯ ನೌಕಾಪಡೆ ಕೂಡ ಜುಲೈನಲ್ಲಿ ನೇಮಕ ಪ್ರಕ್ರಿಯೆ ಆರಂಭಿಸಲಿವೆ. ಭಾರತೀಯ ಸೇನೆಯು ನೇಮಕಕ್ಕಾಗಿ ನಡೆಸಲಾಗುವ ರ‍್ಯಾಲಿಗಳ ತಾತ್ಕಾಲಿಕ ವೇಳಾಪಟ್ಟಿಯನ್ನು ಮಂಗಳವಾರ ಬಿಡುಗಡೆ ಮಾಡಿದೆ.

ಇದನ್ನೂ ಓದಿ| Agnipath | ಭಾರತೀಯ ವಾಯುಪಡೆಗೆ ಅಗ್ನಿವೀರರ ನೇಮಕ ಇಂದಿನಿಂದಲೇ ಶುರು

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Teachers Recruitment: ಪ್ರಾಥಮಿಕ, ಪ್ರೌಢಶಾಲಾ ಸಹ ಶಿಕ್ಷಕರು, ಮುಖ್ಯ ಶಿಕ್ಷಕರ ನೇಮಕಾತಿ: ಕೌನ್ಸೆಲಿಂಗ್‌ಗೆ ಪರಿಷ್ಕೃತ ವೇಳಾಪಟ್ಟಿ ಪ್ರಕಟ

Teachers Recruitment: ರಾಜ್ಯದ ಪ್ರಾಥಮಿಕ, ಪ್ರೌಢಶಾಲಾ ಸಹ ಶಿಕ್ಷಕರು ಮತ್ತು ಮುಖ್ಯ ಶಿಕ್ಷಕರ ನಿರ್ದಿಷ್ಟಪಡಿಸಿದ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಕೌನ್ಸೆಲಿಂಗ್‌ ನಡೆಸಿ, ಸ್ಥಳ ನಿಯುಕ್ತಿಗೊಳಿಸಲು ಪರಿಷ್ಕೃತ ವೇಳಾಪಟ್ಟಿಯನ್ನು ಶಿಕ್ಷಣ ಇಲಾಖೆ ಪ್ರಕಟಿಸಿದೆ.

VISTARANEWS.COM


on

Teachers Recruitment
Koo

ಬೆಂಗಳೂರು: 2023-24ನೇ ಸಾಲಿಗೆ ರಾಜ್ಯದ ಪ್ರಾಥಮಿಕ, ಪ್ರೌಢಶಾಲಾ ಸಹ ಶಿಕ್ಷಕರು ಮತ್ತು ಮುಖ್ಯ ಶಿಕ್ಷಕರು ತತ್ಸಮಾನ ವೃಂದದ ನಿರ್ದಿಷ್ಟಪಡಿಸಿದ ಹುದ್ದೆಗಳಿಗೆ (Specified Post) ಲಿಖಿತ ಪರೀಕ್ಷೆ ನಡೆಸುವ ಮೂಲಕ ಭರ್ತಿ ಮಾಡಲು (Teachers Recruitment) ಶಾಲಾ ಶಿಕ್ಷಣ ಇಲಾಖೆ ಪರಿಷ್ಕೃತ ಆದೇಶ ಹೊರಡಿಸಿತ್ತು. ಇದೀಗ ನಿರ್ದಿಷ್ಟಪಡಿಸಿದ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಕೌನ್ಸೆಲಿಂಗ್‌ ನಡೆಸಿ, ಸ್ಥಳ ನಿಯುಕ್ತಿಗೊಳಿಸಲು ಪರಿಷ್ಕೃತ ವೇಳಾಪಟ್ಟಿಯನ್ನು ಶಿಕ್ಷಣ ಇಲಾಖೆ ಪ್ರಕಟಿಸಿದೆ.

ಪ್ರಾಥಮಿಕ, ಪ್ರೌಢಶಾಲಾ ಸಹ ಶಿಕ್ಷಕರು ಮತ್ತು ಪ್ರೌಢಶಾಲಾ ಮುಖ್ಯ ಶಿಕ್ಷಕರ ಹುದ್ದೆಗಳ ಭರ್ತಿಗೆ ಲಿಖಿತ ಪರೀಕ್ಷೆ ನಡೆಸಲು ಇತ್ತೀಚೆಗೆ ಅಧಿಸೂಚನೆ ಹೊರಡಿಸಲಾಗಿತ್ತು. ಲೋಕಸಭಾ ಚುನಾವಣಾ ಮಾದರಿ ನೀತಿ ಸಹಿತೆ ಹಿನ್ನೆಲೆ ಕೌನ್ಸೆಲಿಂಗ್ ದಿನಾಂಕ ಪ್ರಕಟಿಸಿರಲಿಲ್ಲ. ಆದ್ದರಿಂದ ನಿರ್ದಿಷ್ಟಪಡಿಸಿದ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಕೌನ್ಸಿಲಿಂಗ್‌ ನಡೆಸಲು ಇದೀಗ ಪರಿಷ್ಕೃತ ವೇಳಾ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.

ನಿರ್ದಿಷ್ಟಪಡಿಸಿದ ಹುದ್ದೆಗಳಿಗೆ ನಡೆದ ಪರೀಕ್ಷೆಯ ಫಲಿತಾಂಶ ಪಟ್ಟಿ ಪ್ರಕಟಣೆ (ಪರೀಕ್ಷಾ ಅಂಕಗಳ ಜತೆಗೆ ಅಭ್ಯರ್ಥಿಗಳ ಸೇವಾ ಅನುಭವ ಹಾಗೂ ಹೆಚ್ಚಿನ ವಿದ್ಯಾರ್ಹತೆಗೆ ನಿಗದಿಪಡಿಸಿರುವ ಅಂಕಗಳ ಕ್ರೋಡೀಕರಣದೊಂದಿಗೆ) ಮಾಡಲು ಜೂನ್‌ 11 ನಿಗದಿ ಮಾಡಲಾಗಿದೆ. ಪ್ರಕಟಿತ ಫಲಿತಾಂಶ ಪಟ್ಟಿಗೆ ಸೇವಾನುಭವ ಹಾಗೂ ವಿದ್ಯಾರ್ಹತೆ ಸಂಬಂಧ ಅಂಕಗಳ ಬಗ್ಗೆ ಆಕ್ಷೇಪಣೆಗಳನ್ನು ಸಲ್ಲಿಸಲು ಜೂನ್‌ 11ರಿಂದ 14ರವರೆಗೆ ಅವಕಾಶ ನೀಡಲಾಗಿದೆ.

ಇನ್ನು ಆಕ್ಷೇಪಣೆಗಳನ್ನು ಪರಿಶೀಲಿಸಿ ತಂತ್ರಾಂಶದಲ್ಲಿ ಸರಿಪಡಿಸಿ ಸರಿಪಡಿಸಲು ಜೂನ್‌ 15ರಿಂದ 19ರವರೆಗೆ ಅವಕಾಶ ನೀಡಲಾಗಿದೆ. ಅದೇ ರೀತಿ ಜೂನ್‌ 24ರಂದು ಅಂತಿಮ ಅರ್ಹತಾ ಪಟ್ಟಿ ಪ್ರಕಟಿಸಲು ಸೂಚಿಸಲಾಗಿದೆ.

ಇದನ್ನೂ ಓದಿ | University Grants Commission : ಇನ್ನು ಮುಂದೆ ವಿಶ್ವವಿದ್ಯಾಲಯಗಳಲ್ಲಿ ವರ್ಷಕ್ಕೆ ಎರಡು ಬಾರಿ ಅಡ್ಮಿಷನ್​

Continue Reading

ಉದ್ಯೋಗ

Job Alert: ಎಚ್‌ಎಎಲ್‌ನಲ್ಲಿದೆ ಉದ್ಯೋಗಾವಕಾಶ; ಡಿಪ್ಲೋಮಾ ಪಾಸಾದವರು ಅಪ್ಲೈ ಮಾಡಿ

Job Alert: ಹಿಂದೂಸ್ತಾನ್‌ ಏರೋನಾಟಿಕ್ಸ್‌ ಲಿಮಿಟೆಡ್‌ನಲ್ಲಿ ಖಾಲಿ ಇರುವ 116 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ. ಟೆಕ್ನಿಶಿಯನ್ ಹುದ್ದೆ ಇದಾಗಿದ್ದು, ತಾತ್ಕಾಲಿಕ ಅವಧಿಗೆ ನೇಮಿಸಿಕೊಳ್ಳಲಾಗುತ್ತದೆ. ಮೆಕ್ಯಾನಿಕಲ್, ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಸ್‌ ವಿಷಯಗಳಲ್ಲಿ ಡಿಪ್ಲೋಮಾ ಪಾಸಾದವರು ಅರ್ಜಿ ಸಲ್ಲಿಸಬಹು. ಆಸಕ್ತರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕಿದ್ದು, ಕೊನೆಯ ದಿನ ಜೂನ್‌ 20.

VISTARANEWS.COM


on

Job Alert
Koo

ಬೆಂಗಳೂರು: ಒಂದೊಳ್ಳೆ ಉದ್ಯೋಗದ ಹುಡುಕಾಟದಲ್ಲಿದ್ದೀರಾ? ಹಾಗಾದರೆ ಇಲ್ಲಿದೆ ಗುಡ್‌ನ್ಯೂಸ್‌. ಹಿಂದೂಸ್ತಾನ್‌ ಏರೋನಾಟಿಕ್ಸ್‌ ಲಿಮಿಟೆಡ್‌ (Hindustan Aeronautics Limited)ನಲ್ಲಿ ಖಾಲಿ ಇರುವ 116 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ (HAL Recruitment 2024). ಟೆಕ್ನಿಶಿಯನ್ ಹುದ್ದೆ ಇದಾಗಿದ್ದು, ತಾತ್ಕಾಲಿಕ ಅವಧಿಗೆ ನೇಮಿಸಿಕೊಳ್ಳಲಾಗುತ್ತದೆ. ಮೆಕ್ಯಾನಿಕಲ್, ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಸ್‌ ವಿಷಯಗಳಲ್ಲಿ ಡಿಪ್ಲೋಮಾ ಪಾಸಾದವರು ಅರ್ಜಿ ಸಲ್ಲಿಸಬಹು. ಆಸಕ್ತರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕಿದ್ದು, ಕೊನೆಯ ದಿನ ಜೂನ್‌ 20 (Job Alert).

ಹುದ್ದೆಗಳ ವಿವರ ಮತ್ತು ವಿದ್ಯಾರ್ಹತೆ

ಮೆಕ್ಯಾನಿಕಲ್ 64 ಹುದ್ದೆ, ವಿದ್ಯಾರ್ಹತೆ: ಡಿಪ್ಲೋಮಾ ಇನ್‌ ಎಂಜಿನಿಯರಿಂಗ್‌ ಇನ್‌ ಮೆಕ್ಯಾನಿಕಲ್‌ / ಪ್ರೊಡಕ್ಷನ್‌.
ಎಲೆಕ್ಟ್ರಿಕಲ್ 44 ಹುದ್ದೆ, ವಿದ್ಯಾರ್ಹತೆ: ಡಿಪ್ಲೋಮಾ ಇನ್‌ ಎಂಜಿನಿಯರಿಂಗ್‌ ಇನ್‌ ಎಲೆಕ್ಟ್ರಿಕಲ್‌ / ಎಲೆಕ್ಟ್ರಿಕಲ್‌ & ಎಲೆಕ್ಟ್ರಾನಿಕ್ಸ್‌.
ಎಲೆಕ್ಟ್ರಾನಿಕ್ಸ್‌ 8 ಹುದ್ದೆ, ವಿದ್ಯಾರ್ಹತೆ: ಡಿಪ್ಲೋಮಾ ಇನ್‌ ಎಂಜಿನಿಯರಿಂಗ್‌ ಇನ್‌ ಎಲೆಕ್ಟ್ರಾನಿಕ್ಸ್‌ / ಎಲೆಕ್ಟ್ರಿಕಲ್‌ & ಎಲೆಕ್ಟ್ರಾನಿಕ್ಸ್‌ / ಎಲೆಕ್ಟ್ರಾನಿಕ್ಸ್‌ & ಕಮ್ಯುನಿಕೇಷನ್‌ / ಎಲೆಕ್ಟ್ರಾನಿಕ್ಸ್‌ & ಟೆಲಿಕಮ್ಯುನಿಕೇಷನ್‌.

ವಯೋಮಿತಿ

ಅರ್ಜಿ ಸಲ್ಲಿಸುವವರ ಗರಿಷ್ಠ ವಯಸ್ಸು 28 ವರ್ಷ. ಮೀಸಲಾತಿಗೆ ಅನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ ಲಭ್ಯ. ಒಬಿಸಿ-ಎನ್‌ಸಿಎಸ್‌ ಅಭ್ಯರ್ಥಿಗಳಿಗೆ 3 ವರ್ಷ, ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳಿಗೆ, ಪಿಡಬ್ಲ್ಯುಡಿ ಅಭ್ಯರ್ಥಿಗಳಿಗೆ 10 ವರ್ಷಗಳ ರಿಯಾಯಿತಿ ಇದೆ.

ಆಯ್ಕೆ ವಿಧಾನ

ಲಿಖಿತ ಪರೀಕ್ಷೆ, ದಾಖಲಾತಿ ಪರಿಶೀಲನೆ, ವೈದ್ಯಕೀಯ ಪರೀಕ್ಷೆಗಳ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ಜುಲೈ 7ರಂದು ಲಿಖಿತ ಪರೀಕ್ಷೆ ನಡೆಯಲಿದೆ. ಆಯ್ಕೆಯಾದವರಿಗೆ ಬೆಂಗಳೂರು (ಕರ್ನಾಟಕ), ಜೋಧಪುರ (ರಾಜಸ್ಥಾನ), ನಾಗತಲಾವ್ (ರಾಜಸ್ಥಾನ), ಭುವನೇಶ್ವರ್ (ಒಡಿಸ್ಸಾ), ಪೋರ್‌ಬಂದರ್‌ (ಗುಜರಾತ್), ರತ್ನಗಿರಿ (ಮಹಾರಾಷ್ಟ್ರ), ಶಿಕ್ರಾ-ಮುಂಬೈ (ಮಹಾರಾಷ್ಟ್ರ), ಕೊಚ್ಚಿ (ಕೇರಳ), ಪುದುಚೇರಿ, ಪರುಂಡು-ರಾಮೇಶ್ವರಂ, ಚೆನ್ನೈ, ಸೂಲೂರು (ತಮಿಳುನಾಡು), ದೇಗಾ ವೈಜಾಗ್, ತೇಜ್ಪುರ್ (ಅಸ್ಸಾಂ), ಮಿಸ್ಸಮರಿ (ಅಸ್ಸಾಂ), ದಿಂಜನ್ (ಅಸ್ಸಾಂ), ಲಿಕಾಬಲಿ (ಅಸ್ಸಾಂ), ಉಧಂಪುರ (ಜಮ್ಮು ಮತ್ತು ಕಾಶ್ಮೀರ), ಲೇಹ್, ಭಟಿಂಡಾ (ಪಂಜಾಬ್), ಮಾಮುನ್ (ಪಂಜಾಬ್), ಹಲ್ದ್ವಾನಿ (ಉತ್ತರಖಂಡ), ಟಿಬ್ರಿ (ಪಂಜಾಬ್) ಪೈಕಿ ಒಂದು ಕಡೆ ಪೋಸ್ಟಿಂಗ್‌ ನೀಡಲಾಗುತ್ತದೆ.

HAL Recruitment 2024 ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್‌ ಮಾಡಿ.

ಅರ್ಜಿ ಸಲ್ಲಿಸುವ ವಿಧಾನ

  • ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್‌ ಮಾಡಿ (halmro.formflix.com).
  • ಅಗತ್ಯ ಮಾಹಿತಿ ತುಂಬಿ ಅಪ್ಲಿಕೇಷನ್‌ ಫಾರಂ ಭರ್ತಿ ಮಾಡಿ.
  • ಕ್ಯಾಪ್ಚಾ ನಮೂದಿಸಿ.
  • ವಿವರಗಳನ್ನು ಮತ್ತೊಮ್ಮೆ ಪರಿಶೀಲಿಸಿ ಎಲ್ಲವೂ ಸರಿ ಇದ್ದರೆ Submit ಬಟನ್‌ ಕ್ಲಿಕ್‌ ಮಾಡಿ.
  • ಭವಿಷ್ಯದ ಅಗತ್ಯಗಳಿಗಾಗಿ ಅಪ್ಲಿಕೇಷನ್‌ ಫಾರಂನ ಪ್ರಿಂಟ್ ತೆಗೆದಿಟ್ಟುಕೊಳ್ಳಿ.

ಇದನ್ನು ಗಮನಿಸಿ

  • ಭಾರತೀಯ ನಾಗರಿಕರು ಮಾತ್ರ ಅಪ್ಲೈ ಮಾಡಬಹುದು
  • ಒಬ್ಬರು ಒಂದು ಪೋಸ್ಟ್‌ಗೆ ಮಾತ್ರ ಅರ್ಜಿ ಸಲ್ಲಿಸಬೇಕು.
  • ಒಮ್ಮೆ ಸಲ್ಲಿಸಿದ ಅರ್ಜಿಯನ್ನು ಮತ್ತೆ ತಿದ್ದಲು ಅವಕಾಶವಿಲ್ಲ.
  • ಆನ್‌ಲೈನ್‌ ಮೂಲಕವೇ ಅರ್ಜಿ ಸಲ್ಲಿಸಬೇಕು.
  • ಇವು ಖಾಯಂ ಹುದ್ದೆಗಳಲ್ಲ. ತಾತ್ಕಾಲಿಕ ಅವಧಿಗೆ ನೇಮಿಸಿಕೊಳ್ಳಲಾಗುತ್ತದೆ.

ಇದನ್ನೂ ಓದಿ: Job Alert: ಇಂದಿರಾ ಗಾಂಧಿ ಸೆಂಟರ್ ಫಾರ್ ಅಟಾಮಿಕ್ ರಿಸರ್ಚ್‌ನಲ್ಲಿದೆ ಉದ್ಯೋಗಾವಕಾಶ; ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿ

Continue Reading

ಉದ್ಯೋಗ

Job Alert: ಬಿಎಸ್ಎಫ್‌ನಲ್ಲಿದೆ ಬರೋಬ್ಬರಿ 1,526 ಹುದ್ದೆ; ದ್ವಿತೀಯ ಪಿಯು ಪಾಸಾದವರು ಇಂದೇ ಅರ್ಜಿ ಸಲ್ಲಿಸಿ

Job Alert: ಗಡಿ ಭದ್ರತಾ ಪಡೆಯಲ್ಲಿ ಉದ್ಯೋಗ ನಿರ್ವಹಿಸಬೇಕು ಎನ್ನುವ ನಿಮ್ಮ ಕನಸು ನನಸಾಗುವ ದಿನ ಹತ್ತಿರದಲ್ಲೇ ಇದೆ. ಯಾಕೆಂದರೆ ಬಿಎಸ್‌ಎಫ್‌ ಖಾಲಿ ಇರುವ ಬರೋಬ್ಬರಿ 1,526 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. 12ನೇ ತರಗತಿ ಪಾಸಾದವರು ಅರ್ಜಿ ಸಲ್ಲಿಸಬಹುದು. ಆಸಕ್ತರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕಿದ್ದು, ಕೊನೆ ದಿನಾಂಕ ಜುಲೈ 8. ಅಸಿಸ್ಟೆಂಟ್‌ ಸಬ್‌ ಇನ್ಸ್‌ಪೆಕ್ಟರ್‌ ಮತ್ತು ವಾರೆಂಟ್‌ ಆಫೀಸರ್‌, ಹೆಡ್‌ ಕಾನ್ಸ್‌ಟೇಬಲ್‌ ಮತ್ತು ಹವಲ್ದಾರ್‌ ಹುದ್ದೆಗಳಿದ್ದು, ಪುರುಷರು ಮತ್ತು ಮಹಿಳೆಯರು ಅರ್ಜಿ ಸಲ್ಲಿಸಬಹುದು.

VISTARANEWS.COM


on

Job Alert
Koo

ನವದೆಹಲಿ: ಗಡಿ ಭದ್ರತಾ ಪಡೆ (Border Security Force-BSF)ಯಲ್ಲಿ ಉದ್ಯೋಗ ನಿರ್ವಹಿಸಬೇಕು ಎನ್ನುವುದು ಬಹುತೇಕ ಯುವ ಜನತೆಯ ಕನಸು. ಅಂತಹ ಕನಸು ಕಾಣುವವರಿಗೆ ಇಲ್ಲಿದೆ ಗುಡ್‌ನ್ಯೂಸ್‌. ಬಿಎಸ್ಎಫ್‌ ತನ್ನಲ್ಲಿ ಖಾಲಿ ಇರುವ ಅಸಿಸ್ಟೆಂಟ್‌ ಸಬ್‌ ಇನ್ಸ್‌ಪೆಕ್ಟರ್‌, ಹೆಡ್‌ ಕಾನ್ಸ್‌ಟೇಬಲ್‌ ಸೇರಿ ಬರೋಬ್ಬರಿ 1,526 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ (BSF Recruitment 2024). 12ನೇ ತರಗತಿ ಪಾಸಾದವರು ಅರ್ಜಿ ಸಲ್ಲಿಸಬಹುದು. ಆಸಕ್ತರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕಿದ್ದು, ಕೊನೆ ದಿನಾಂಕ ಜುಲೈ 8 (Job Alert).

ಹುದ್ದೆಗಳ ವಿವರ

ಅಸಿಸ್ಟೆಂಟ್‌ ಸಬ್‌ ಇನ್ಸ್‌ಪೆಕ್ಟರ್‌ ಮತ್ತು ವಾರೆಂಟ್‌ ಆಫೀಸರ್‌ – 243 ಮತ್ತು ಹೆಡ್‌ ಕಾನ್ಸ್‌ಟೇಬಲ್‌ ಮತ್ತು ಹವಲ್ದಾರ್‌ (ಕ್ಲರ್ಕ್‌) – 1,283 ಹುದ್ದೆಗಳಿವೆ. ಪುರುಷರು ಮತ್ತು ಮಹಿಳೆಯರು ಅರ್ಜಿ ಸಲ್ಲಿಸಬಹುದು.

ವಿದ್ಯಾರ್ಹತೆ ಮತ್ತು ವಯೋಮಿತಿ

ಯಾವುದೇ ಅಂಗೀಕೃತ ಶಿಕ್ಷಣ ಮಂಡಳಿ ಅಥವಾ ವಿಶ್ವ ವಿದ್ಯಾನಿಲಯದಿಂದ 12ನೇ ತರಗತಿ ತೇರ್ಗಡೆಯಾದವರು ಅರ್ಜಿ ಸಲ್ಲಿಸಲು ಅರ್ಹರು. ಅರ್ಜಿ ಸಲ್ಲಿಸುವವರ ಕನಿಷ್ಠ ವಯಸ್ಸು 18 ವರ್ಷ ಮತ್ತು ಗರಿಷ್ಠ ವಯಸ್ಸು 25 ವರ್ಷ. ಮೀಸಲಾತಿಗೆ ಅನುಗುಣವಾಗಿ ವಯೋಮಿತಿಯಲ್ಲಿ ರಿಯಾಯಿತಿ ಲಭ್ಯ. ಎಸ್‌ಸಿ / ಎಸ್‌ಟಿ ವರ್ಗಕ್ಕೆ 5 ವರ್ಷ ಮತ್ತು ಮಾಜಿ ಯೋಧರು / ಒಬಿಸಿ ವರ್ಗಕ್ಕೆ 3 ವರ್ಷಗಳ ವಿನಾಯಿತಿ ಇದೆ.

ಅರ್ಜಿ ಶುಲ್ಕ ಮತ್ತು ಆಯ್ಕೆ ವಿಧಾನ

ಅರ್ಜಿ ಸಲ್ಲಿಸುವ ಎಸ್‌ಸಿ / ಎಸ್‌ಟಿ / ಮಾಜಿ ಯೋಧರು / ಮಹಿಳೆಯರು ಶುಲ್ಕ ಪಾವತಿಸಬೇಕಾಗಿಲ್ಲ. ಇನ್ನು ಉಳಿದ ಎಲ್ಲ ಅಭ್ಯರ್ಥಿಗಳು ಅರ್ಜಿ ಶುಲ್ಕವಾಗಿ 100 ರೂ. ಪಾವತಿಸಬೇಕು. ಇದಕ್ಕಾಗಿ ಆನ್‌ಲೈನ್‌ ವಿಧಾನವನ್ನು ಬಳಸಬಹುದು.

ಆಯ್ಕೆ ವಿಧಾನ ಮತ್ತು ಮಾಸಿಕ ವೇತನ

ಲಿಖಿತ ಪರೀಕ್ಷೆ (Written Examination), ದೈಹಿಕ ಸಾಮರ್ಥ್ಯ ಪರೀಕ್ಷೆ (Physical Standards Test), ಸ್ಕಿಲ್‌ ಟೆಸ್ಟ್‌ (Skill Test), ದಾಖಲಾತಿ ಪರಿಶೀಲನೆ (Document Verification) ಮತ್ತು ವೈದ್ಯಕೀಯ ಪರೀಕ್ಷೆ (Medical Examination) ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ಆಯ್ಕೆಯಾದ ಅಸಿಸ್ಟೆಂಟ್‌ ಸಬ್‌ ಇನ್ಸ್‌ಪೆಕ್ಟರ್‌ & ವಾರೆಂಟ್‌ ಆಫೀಸರ್‌ ಹುದ್ದೆಗೆ 29,200 ರೂ. -92,300 ರೂ. ಮತ್ತು ಹೆಡ್‌ ಕಾನ್ಸ್‌ಸ್ಟೇಬಲ್‌ & ಹವಲ್ದಾರ್‌ ಹುದ್ದೆಗೆ 25,500 ರೂ. – 81,100 ರೂ. ಮಾಸಿಕ ವೇತನ ದೊರೆಯಲಿದೆ.

BSF Recruitment 2024 ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್‌ ಮಾಡಿ.

ಅರ್ಜಿ ಸಲ್ಲಿಸುವ ವಿಧಾನ

  • ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್‌ ಮಾಡಿ.
  • ಹೆಸರು, ಮೊಬೈಲ್‌ ನಂಬರ್‌ ಮತ್ತು ಇಮೇಲ್‌ ಐಡಿ ನಮೂದಿಸಿ ನೋಂದಾಯಿಸಿ. ಒಟಿಪಿಯನ್ನು ನಮೂದಿಸಿ.
  • ಈಗ ತೆರೆದುಕೊಳ್ಳುವ ಅಪ್ಲಿಕೇಷನ್‌ ಫಾರಂ ಅನ್ನು ಎಚ್ಚರಿಕೆಯಿಂದ ಭರ್ತಿ ಮಾಡಿ.
  • ಅಗತ್ಯ ದಾಖಲೆಗಳನ್ನು ಅಪ್‌ಲೋಡ್‌ ಮಾಡಿ.
  • ಅರ್ಜಿ ಶುಲ್ಕ ಪಾವತಿಸಿ (ಅಗತ್ಯವಿದ್ದರೆ ಮಾತ್ರ).
  • ಭರ್ತಿ ಮಾಡಿದ ವಿವರಗಳನ್ನು ಮತ್ತೊಮ್ಮೆ ಪರಿಶೀಲಿಸಿ ಎಲ್ಲವೂ ಸರಿ ಇದ್ದರೆ Submit ಬಟನ್‌ ಕ್ಲಿಕ್‌ ಮಾಡಿ.
  • ಅಪ್ಲಿಕೇಷನ್‌ ನಂಬರ್‌ ಅಥವಾ ರಿಕ್ವೆಸ್ಟ್‌ ನಂಬರ್‌ ನೋಟ್‌ ಮಾಡಿಟ್ಟುಕೊಳ್ಳಿ.

ಹೆಚ್ಚಿನ ಮಾಹಿತಿಗೆ ವೆಬ್‌ಸೈಟ್‌ ವಿಳಾಸ: rectt.bsf.gov.in ಇಲ್ಲಿಗೆ ಭೇಟಿ ನೀಡಿ.

ಇದನ್ನೂ ಓದಿ: Job Alert: ಇಂದಿರಾ ಗಾಂಧಿ ಸೆಂಟರ್ ಫಾರ್ ಅಟಾಮಿಕ್ ರಿಸರ್ಚ್‌ನಲ್ಲಿದೆ ಉದ್ಯೋಗಾವಕಾಶ; ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿ

Continue Reading

ಉದ್ಯೋಗ

Job Alert: ಯುಪಿಎಸ್‌ಸಿಯಿಂದ 312 ಹುದ್ದೆ ಭರ್ತಿ; ಅರ್ಜಿ ಸಲ್ಲಿಕೆಗೆ ಜೂ. 13 ಕೊನೆಯ ದಿನ

Job Alert: ಯೂನಿಯನ್‌ ಪಬ್ಲಿಕ್‌ ಸರ್ವಿಸ್‌ ಕಮಿಷನ್‌ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಅಸಿಸ್ಟಂಟ್ ಪ್ರೊಫೆಸರ್, ಟ್ರೈನಿಂಗ್ ಆಫೀಸರ್, ಎಂಜಿನಿಯರ್ ಮತ್ತು ಶಿಪ್ ಸರ್ವೇಯರ್ ಕಮ್ ಡೆಪ್ಯೂಟಿ ಡೈರೆಕ್ಟರ್ ಜನರಲ್ ಸೇರಿ ಸುಮಾರು 312 ಹುದ್ದೆಗಳಿವೆ. ಪದವಿ, ಡಿಪ್ಲೋಮಾ ಅರ್ಹತೆ ಇರುವವರು ಅರ್ಜಿ ಸಲ್ಲಿಸಬಹುದು. ಆಸಕ್ತರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕಿದ್ದು, ಕೊನೆಯ ದಿನಾಂಕ ಜೂನ್‌ 13.

VISTARANEWS.COM


on

Job Alert
Koo

ನವದೆಹಲಿ: ಯೂನಿಯನ್‌ ಪಬ್ಲಿಕ್‌ ಸರ್ವಿಸ್‌ ಕಮಿಷನ್‌ (UPSC) ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಅಸಿಸ್ಟಂಟ್ ಪ್ರೊಫೆಸರ್, ಟ್ರೈನಿಂಗ್ ಆಫೀಸರ್, ಎಂಜಿನಿಯರ್ ಮತ್ತು ಶಿಪ್ ಸರ್ವೇಯರ್ ಕಮ್ ಡೆಪ್ಯೂಟಿ ಡೈರೆಕ್ಟರ್ ಜನರಲ್ ಸೇರಿ ಸುಮಾರು 312 ಹುದ್ದೆಗಳಿವೆ (UPSC Specialist Grade III, Assistant Director Grade-II & Other Recruitment 2024). ಪದವಿ, ಡಿಪ್ಲೋಮಾ ಅರ್ಹತೆ ಇರುವವರು ಅರ್ಜಿ ಸಲ್ಲಿಸಬಹುದು. ಆಸಕ್ತರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕಿದ್ದು, ಕೊನೆಯ ದಿನಾಂಕ ಜೂನ್‌ 13. ಅಪ್ಲಿಕೇಶನ್‌ ಪ್ರಿಂಟ್ ತೆಗೆದುಕೊಳ್ಳಲು ಕೊನೆಯ ದಿನಾಂಕ ಜೂನ್‌ 14 (Job Alert).

ಹುದ್ದೆಗಳ ವಿವರ ಮತ್ತು ವಿದ್ಯಾರ್ಹತೆ

ಉಪ ಅಧೀಕ್ಷಕ ಪುರಾತತ್ವ ರಸಾಯನ ಶಾಸ್ತ್ರಜ್ಞ – 4 ಹುದ್ದೆ, ವಿದ್ಯಾರ್ಹತೆ- ಪದವಿ / ಸ್ನಾತಕೋತ್ತರ ಪದವಿ (ರಸಾಯನ ಶಾಸ್ತ್ರ)
ಉಪ ಅಧೀಕ್ಷಕ ಪುರಾತತ್ವ ಶಾಸ್ತ್ರಜ್ಞ – 67 ಹುದ್ದೆ, ವಿದ್ಯಾರ್ಹತೆ- ಪಿಜಿ (ಪುರಾತತ್ವಶಾಸ್ತ್ರ / ಭಾರತೀಯ ಇತಿಹಾಸ)
ಸಿವಿಲ್ ಹೈಡ್ರೋಗ್ರಾಫಿಕ್ ಆಫೀಸರ್, ಇಂಟಿಗ್ರೇಟೆಡ್ ಹೆಡ್‌ಕ್ವಾರ್ಟಸ್‌ (ನೌಕಾಪಡೆ) – 4 ಹುದ್ದೆ, ವಿದ್ಯಾರ್ಹತೆ: ಪದವಿ / ಪಿಜಿ (ಸಂಬಂಧಿತ ಎಂಜಿನಿಯರಿಂಗ್)
ಸ್ಪೆಷಲಿಸ್ಟ್ ಗ್ರೇಡ್ 3 ಅಸಿಸ್ಟೆಂಟ್ ಪ್ರೊಫೆಸರ್ (ಫೋರೆನ್ಸಿಕ್ ಮೆಡಿಸಿನ್) – 6 ಹುದ್ದೆ, ವಿದ್ಯಾರ್ಹತೆ: ಎಂಬಿಬಿಎಸ್
ಸ್ಪೆಷಲಿಸ್ಟ್ ಗ್ರೇಡ್ 3 ಅಸಿಸ್ಟೆಂಟ್ ಪ್ರೊಫೆಸರ್ (ಜನರಲ್ ಮೆಡಿಸಿನ್) – 61 ಹುದ್ದೆ, ವಿದ್ಯಾರ್ಹತೆ: ಎಂಬಿಬಿಎಸ್ / ಪಿಜಿ (ಸಂಬಂಧಪಟ್ಟ ವಿಷಯಗಳಲ್ಲಿ)
ಸ್ಪೆಷಲಿಸ್ಟ್ ಗ್ರೇಡ್ 3 ಅಸಿಸ್ಟೆಂಟ್ ಪ್ರೊಫೆಸರ್ (ಜನರಲ್ ಸರ್ಜರಿ) – 39 ಹುದ್ದೆ, ವಿದ್ಯಾರ್ಹತೆ: ಎಂಬಿಬಿಎಸ್ / ಪಿಜಿ (ಸಂಬಂಧಪಟ್ಟ ವಿಷಯಗಳಲ್ಲಿ)
ಸ್ಪೆಷಲಿಸ್ಟ್ ಗ್ರೇಡ್ 3 ಅಸಿಸ್ಟೆಂಟ್ ಪ್ರೊಫೆಸರ್ (ಪೀಡಿಯಾಟ್ರಿಕ್ ನೆಫ್ರಾಲಜಿ) 3 ಹುದ್ದೆ, ವಿದ್ಯಾರ್ಹತೆ: ಎಂಬಿಬಿಎಸ್ / ಪಿಜಿ (ಸಂಬಂಧಪಟ್ಟ ವಿಷಯಗಳಲ್ಲಿ)
ಸ್ಪೆಷಲಿಸ್ಟ್ ಗ್ರೇಡ್ 3 ಅಸಿಸ್ಟೆಂಟ್ ಪ್ರೊಫೆಸರ್ (ಪೀಡಿಯಾಟ್ರಿಕ್ಸ್) – 23 ಹುದ್ದೆ, ವಿದ್ಯಾರ್ಹತೆ: ಎಂಬಿಬಿಎಸ್ / ಪಿಜಿ (ಸಂಬಂಧಪಟ್ಟ ವಿಷಯಗಳಲ್ಲಿ)
ಸ್ಪೆಷಲಿಸ್ಟ್ ಗ್ರೇಡ್-3 (ಅನಸ್ತೇಶಿಯಾಲಜಿ) – 2 ಹುದ್ದೆ, ವಿದ್ಯಾರ್ಹತೆ: ಎಂಬಿಬಿಎಸ್ / ಪಿಜಿ ಡಿಪ್ಲೋಮಾ / ಪಿಜಿ (ಸಂಬಂಧಪಟ್ಟ ಸ್ಪೆಷಾಲಿಟಿ)
ಸ್ಪೆಷಲಿಸ್ಟ್ ಗ್ರೇಡ್-3 (ಡರ್ಮಟಾಲಜಿ, ವೆನೆರಿಯಾಲಜಿ ಮತ್ತು ಕುಷ್ಠರೋಗ) – 2 ಹುದ್ದೆ, ವಿದ್ಯಾರ್ಹತೆ: ಎಂಬಿಬಿಎಸ್ / ಪಿಜಿ ಡಿಪ್ಲೊಮಾ / ಪಿಜಿ (ಸಂಬಂಧಪಟ್ಟ ಸ್ಪೆಷಾಲಿಟಿ)
ಸ್ಪೆಷಲಿಸ್ಟ್ ಗ್ರೇಡ್-3 (ಜನರಲ್ ಮೆಡಿಸಿನ್) – 4 ಹುದ್ದೆ, ವಿದ್ಯಾರ್ಹತೆ: ಎಂಬಿಬಿಎಸ್ / ಪಿಜಿ ಡಿಪ್ಲೋಮಾ / ಪಿಜಿ (ಸಂಬಂಧಪಟ್ಟ ಸ್ಪೆಷಾಲಿಟಿ)
ಸ್ಪೆಷಲಿಸ್ಟ್ ಗ್ರೇಡ್-3 (ಜನರಲ್ ಸರ್ಜರಿ) – 7 ಹುದ್ದೆ, ವಿದ್ಯಾರ್ಹತೆ: ಎಂಬಿಬಿಎಸ್ / ಪಿಜಿ ಡಿಪ್ಲೋಮಾ / ಪಿಜಿ (ಸಂಬಂಧಪಟ್ಟ ಸ್ಪೆಷಾಲಿಟಿ)
ಸ್ಪೆಷಲಿಸ್ಟ್ ಗ್ರೇಡ್-3 (ಪ್ರಸೂತಿ ಮತ್ತು ಜ್ಞಾನಶಾಸ್ತ್ರ) – 5 ಹುದ್ದೆ, ವಿದ್ಯಾರ್ಹತೆ: ಎಂಬಿಬಿಎಸ್ / ಪಿಜಿ ಡಿಪ್ಲೊಮಾ / ಪಿಜಿ (ಸಂಬಂಧಪಟ್ಟ ಸ್ಪೆಷಾಲಿಟಿ)
ಸ್ಪೆಷಲಿಸ್ಟ್ ಗ್ರೇಡ್-3 (ನೇತ್ರಶಾಸ್ತ್ರ) – 3 ಹುದ್ದೆ, ವಿದ್ಯಾರ್ಹತೆ: ಎಂಬಿಬಿಎಸ್ / ಪಿಜಿ ಡಿಪ್ಲೋಮಾ / ಪಿಜಿ (ಸಂಬಂಧಪಟ್ಟ ಸ್ಪೆಷಾಲಿಟಿ)
ಸ್ಪೆಷಲಿಸ್ಟ್ ಗ್ರೇಡ್-3 (ಆರ್ಥೋಪೆಡಿಕ್ಸ್) – 2 ಹುದ್ದೆ, ವಿದ್ಯಾರ್ಹತೆ: ಎಂಬಿಬಿಎಸ್ / ಪಿಜಿ ಡಿಪ್ಲೋಮಾ / ಪಿಜಿ (ಸಂಬಂಧಪಟ್ಟ ಸ್ಪೆಷಾಲಿಟಿ)
ಸ್ಪೆಷಲಿಸ್ಟ್ ಗ್ರೇಡ್-3 ಓಟೊ-ರೈನೋ-ಲಾರಿಂಗಲಜಿ (ಕಿವಿ, ಮೂಗು ಮತ್ತು ಗಂಟಲು) – 3 ಹುದ್ದೆ, ವಿದ್ಯಾರ್ಹತೆ: ಎಂಬಿಬಿಎಸ್ / ಪಿಜಿ ಡಿಪ್ಲೋಮಾ / ಪಿಜಿ (ಸಂಬಂಧಪಟ್ಟ ಸ್ಪೆಷಾಲಿಟಿ)
ಸ್ಪೆಷಲಿಸ್ಟ್ ಗ್ರೇಡ್-3 (ಪೀಡಿಯಾಟ್ರಿಕ್ಸ್) – 2 ಹುದ್ದೆ, ವಿದ್ಯಾರ್ಹತೆ: ಎಂಬಿಬಿಎಸ್ / ಪಿಜಿ ಡಿಪ್ಲೋಮಾ / ಪಿಜಿ (ಸಂಬಂಧಪಟ್ಟ ಸ್ಪೆಷಾಲಿಟಿ)
ಸ್ಪೆಷಲಿಸ್ಟ್ ಗ್ರೇಡ್-3 (ಪ್ಯಾಥಾಲಜಿ) – 4 ಹುದ್ದೆ, ವಿದ್ಯಾರ್ಹತೆ: ಎಂಬಿಬಿಎಸ್ / ಪಿಜಿ ಡಿಪ್ಲೋಮಾ / ಪಿಜಿ (ಸಂಬಂಧಪಟ್ಟ ಸ್ಪೆಷಾಲಿಟಿ)
ಸ್ಪೆಷಲಿಸ್ಟ್ ಗ್ರೇಡ್-3 (ಸೈಕಿಯಾಟ್ರಿ) – 1 ಹುದ್ದೆ, ವಿದ್ಯಾರ್ಹತೆ: ಎಂಬಿಬಿಎಸ್ / ಪಿಜಿ ಡಿಪ್ಲೋಮಾ / ಪಿಜಿ (ಸಂಬಂಧಪಟ್ಟ ಸ್ಪೆಷಾಲಿಟಿ)
ಡೆಪ್ಯುಟಿ ಸೆಂಟ್ರಲ್ ಇಂಟೆಲಿಜೆನ್ಸ್ ಆಫೀಸರ್ (ಟೆಕ್ನಿಕಲ್) (ಡಿಸಿಐಒ / ಟೆಕ್) 9 ಹುದ್ದೆ, ವಿದ್ಯಾರ್ಹತೆ: ಪದವಿ / ಪಿಜಿ (ಸಂಬಂಧಿತ ಎಂಜಿನಿಯರಿಂಗ್)
ಸಹಾಯಕ ನಿರ್ದೇಶಕರು (ತೋಟಗಾರಿಕೆ) 4 ಹುದ್ದೆ, ವಿದ್ಯಾರ್ಹತೆ ಎಂಎಸ್‌ಸಿ ತೋಟಗಾರಿಕೆ
ಅಸಿಸ್ಟೆಂಟ್ ಡೈರೆಕ್ಟರ್ ಗ್ರೇಡ್-2 (ಐಇಡಿಎಸ್) (ಕೆಮಿಕಲ್) 5 ಹುದ್ದೆ, ವಿದ್ಯಾರ್ಹತೆ: ಪದವಿ (ಸಂಬಂಧಿತ ವಿಭಾಗ)/ ಪಿಜಿ (ರಸಾಯನಶಾಸ್ತ್ರ)
ಅಸಿಸ್ಟೆಂಟ್ ಡೈರೆಕ್ಟರ್ ಗ್ರೇಡ್-2 (ಐಇಡಿಎಸ್) (ಆಹಾರ) 19 ಹುದ್ದೆ, ವಿದ್ಯಾರ್ಹತೆ: ಪದವಿ (ಫುಡ್ ಟೆಕ್ನಾಲಜಿ)/ ಪಿಜಿ ಡಿಪ್ಲೋಮಾ (ಫ್ರೂಟ್ಸ್ ಟೆಕ್ನಾಲಜಿ)
ಅಸಿಸ್ಟೆಂಟ್ ಡೈರೆಕ್ಟರ್ ಗ್ರೇಡ್-2 (ಐಇಡಿಎಸ್) (ಹೊಸೇರಿ) 12 ಹುದ್ದೆ, ವಿದ್ಯಾರ್ಹತೆ: ಪದವಿ (ಟೆಕ್ಸ್ ಟೈಲ್ ಟೆಕ್ನಾಲಜಿ ಅಥವಾ ಹೋಸಿಯರಿ ಟೆಕ್ನಾಲಜಿ ಅಥವಾ ನೈಟಿಂಗ್‌ ಟೆಕ್ನಾಲಜಿ)
ಅಸಿಸ್ಟೆಂಟ್ ಡೈರೆಕ್ಟರ್ ಗ್ರೇಡ್-2 (ಐಇಡಿಎಸ್) (ಲೆದರ್ & ಪಾದರಕ್ಷೆ) – 8 ಹುದ್ದೆ, ವಿದ್ಯಾರ್ಹತೆ: ಪದವಿ (ಲೆದರ್ ಟೆಕ್ನಾಲಜಿ)
ಅಸಿಸ್ಟೆಂಟ್ ಡೈರೆಕ್ಟರ್ ಗ್ರೇಡ್-2 (ಐಇಡಿಎಸ್) (ಮೆಟಲ್ ಫಿನಿಶಿಂಗ್) – 2 ಹುದ್ದೆ, ವಿದ್ಯಾರ್ಹತೆ: ಪದವಿ (ಕೆಮಿಕಲ್)
ಟೆಕ್ನಾಲಜಿ ಅಥವಾ ಕೆಮಿಕಲ್ ಎಂಜಿನಿಯರಿಂಗ್) / ಪಿಜಿ (ಕೆಮಿಸ್ಟ್ರಿ)
ಎಂಜಿನಿಯರ್ ಮತ್ತು ಹಡಗು ಸರ್ವೇಯರ್ ಕಮ್-ಡೆಪ್ಯುಟಿ ಡೈರೆಕ್ಟರ್ ಜನರಲ್ (ಟೆಕ್ನಿಕಲ್) – 2 ಹುದ್ದೆ, ವಿದ್ಯಾರ್ಹತೆ: ಮೆರೈನ್ ಎಂಜಿನಿಯರ್ ಆಫೀಸರ್ ಕ್ಲಾಸ್ -1ರ ಪ್ರಮಾಣ ಪತ್ರ
ತರಬೇತಿ ಅಧಿಕಾರಿ (ಮಹಿಳಾ ತರಬೇತಿ)- ಉಡುಪು ತಯಾರಿಕೆ – 5 ಹುದ್ದೆ, ವಿದ್ಯಾರ್ಹತೆ: ಡಿಪ್ಲೋಮಾ / ಪದವಿ (ಎಂಜಿನಿಯರಿಂಗ್ ಅಥವಾ ತಂತ್ರಜ್ಞಾನ)
ತರಬೇತಿ ಅಧಿಕಾರಿ (ಮಹಿಳಾ ತರಬೇತಿ) – ಎಲೆಕ್ಟ್ರಾನಿಕ್ ಮಕಾನಿಕ್ – 3 ಹುದ್ದೆ, ವಿದ್ಯಾರ್ಹತೆ: ಡಿಪ್ಲೋಮಾ / ಪದವಿ (ಎಂಜಿನಿಯರಿಂಗ್ ಅಥವಾ ತಂತ್ರಜ್ಞಾನ)
ಅಸಿಸ್ಟೆಂಟ್‌ ಫೊಫೆಸರ್‌ – 1 ಹುದ್ದೆ, ವಿದ್ಯಾರ್ಹತೆ: ಎಂ.ಸಿ.ಎಚ್. ಯುರಾಲಜಿ ಅಥವಾ ಡಿಎನ್‌ಬಿ (ಯುರಾಲಜಿ)

ಅರ್ಜಿ ಶುಲ್ಕ ಮತ್ತು ವಯೋಮಿತಿ

ಅರ್ಜಿ ಶುಲ್ಕವಾಗಿ ಸಾಮಾನ್ಯ ವರ್ಗ ಅಭ್ಯರ್ಥಿಗಳಿ 25 ರೂ. ಪಾವತಿಸಬೇಕು. ಮೀಸಲಾತಿ ಹೊಂದಿರುವವರಿಗೆ ಅರ್ಜಿ ಶುಲ್ಕವಿಲ್ಲ. ಇನ್ನು ಒಂದೊಂದು ಹುದ್ದೆಗೆ ಒಂದೊಂದು ರೀತಿಯ ವಯೋಮಾನ ನಿಗದಿಪಡಿಸಲಾಗಿದೆ.

ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್‌ ಮಾಡಿ.

ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್‌ ಮಾಡಿ.

ಇದನ್ನೂ ಓದಿ: Job Alert: ಬರೋಬ್ಬರಿ 9,923 ಬ್ಯಾಂಕ್‌ ಹುದ್ದೆಗಳ ಭರ್ತಿಗೆ ಮುಂದಾದ ಐಬಿಪಿಎಸ್‌; ಇಂದೇ ಅರ್ಜಿ ಸಲ್ಲಿಸಿ

Continue Reading
Advertisement
Hassan Ali
ದೇಶ4 hours ago

Hassan Ali: ರಿಯಾಸಿ ಉಗ್ರರ ದಾಳಿ ಖಂಡಿಸಿದ ಪಾಕ್‌ ಕ್ರಿಕೆಟಿಗ ಹಸನ್‌ ಅಲಿ; ಆಲ್‌ ಐಸ್‌ ಆನ್‌ ವೈಷ್ಣೋದೇವಿ ಎಂದಿದ್ದೇಕೆ?

IND vs USA
ಪ್ರಮುಖ ಸುದ್ದಿ5 hours ago

IND vs USA: ಅರ್ಶದೀಪ್​ ಮಾರಕ ದಾಳಿಗೆ ಪತರುಗುಟ್ಟಿದ ಅಮೆರಿಕ; ಟೀಮ್​ ಇಂಡಿಯಾ ಸೂಪರ್​-8 ಪ್ರವೇಶ

disqualification for hanawala Gram Panchayat Vice President and Cancellation of membership ordered
ಕರ್ನಾಟಕ5 hours ago

Koppala News: ಹಣವಾಳ ಗ್ರಾ.ಪಂ ಉಪಾಧ್ಯಕ್ಷೆಗೆ ಅನರ್ಹತೆಯ ಶಿಕ್ಷೆ; ಸದಸ್ಯತ್ವ ರದ್ದುಗೊಳಿಸಿ ಆದೇಶ

Court Order
ದೇಶ5 hours ago

ಬಾಲಕಿಯ ಒಳ ವಸ್ತ್ರ ಕಳಚಿ ಬೆತ್ತಲೆಗೊಳಿಸುವುದು ಅತ್ಯಾಚಾರ ಯತ್ನವಲ್ಲ ಎಂದ ಹೈಕೋರ್ಟ್! ನಿಮ್ಮ ಅಭಿಪ್ರಾಯವೇನು?

Virat Kohli
ಕ್ರೀಡೆ6 hours ago

Virat Kohli: ಟಿ20 ವಿಶ್ವಕಪ್​ನಲ್ಲಿ ಮೊದಲ ಗೋಲ್ಡನ್​ ಡಕ್ ಸಂಕಟಕ್ಕೆ ಸಿಲುಕಿದ ವಿರಾಟ್​ ಕೊಹ್ಲಿ

Mumbai
ಪ್ರಮುಖ ಸುದ್ದಿ6 hours ago

300 ಕೋಟಿ ರೂ. ಆಸ್ತಿಗಾಗಿ 1 ಕೋಟಿ ರೂ. ಸುಪಾರಿ ಕೊಟ್ಟು ಮಾವನನ್ನೇ ಕೊಲ್ಲಿಸಿದ ದುಷ್ಟ ಸೊಸೆ!

ICC T20 Rankings
ಕ್ರೀಡೆ7 hours ago

ICC T20 Rankings: ಅಗ್ರಸ್ಥಾನದಲ್ಲೇ ಮುಂದುವರಿದ ಟೀಮ್​ ಇಂಡಿಯಾ; ಕುಸಿತ ಕಂಡ ಪಾಕ್

Rain News
ಪ್ರಮುಖ ಸುದ್ದಿ7 hours ago

Rain News: ವಿಜಯನಗರ, ಕೊಪ್ಪಳ ಜಿಲ್ಲೆಯಲ್ಲಿ ಮಳೆ ಆರ್ಭಟ; ಕೆರೆಯಂತಾದ ರಸ್ತೆಗಳು!

Chellagurki Shri Yerrithathanavara Maharathotsava in Ballari
ಧಾರ್ಮಿಕ7 hours ago

Ballari News: ಭಕ್ತಿ ಭಾವದಿಂದ ನಡೆದ ಚೇಳ್ಳಗುರ್ಕಿ ಶ್ರೀ ಎರ‍್ರಿತಾತ ಮಹಾರಥೋತ್ಸವ

Narendra Modi
ದೇಶ7 hours ago

Narendra Modi: ಆಂಧ್ರದಲ್ಲಿ ಮೆಗಾ ಸ್ಟಾರ್‌, ಪವರ್‌ ಸ್ಟಾರ್‌ ಜತೆ ‘ಪೊಲಿಟಿಕಲ್‌ ಸ್ಟಾರ್’‌ ಮೋದಿ; Video ನೋಡಿ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka weather Forecast
ಮಳೆ1 day ago

Karnataka Weather : ಭಾರಿ ಮಳೆಗೆ ಗುಡ್ಡದಿಂದ ಉರುಳಿ ಬಿದ್ದ ಬಂಡೆಗಲ್ಲು; ಬೆಂಗಳೂರಲ್ಲೂ ಸಂಜೆ ವರ್ಷಧಾರೆ

actor Darshan
ಚಿತ್ರದುರ್ಗ1 day ago

Actor Darshan: ರೇಣುಕಾ ಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್‌ ಅರೆಸ್ಟ್‌; ಪ್ರಕರಣವನ್ನು ಸಿಬಿಐಗೆ ವಹಿಸಲು ಒತ್ತಾಯ

Actor Darshan gets a series of questions from the police
ಸಿನಿಮಾ2 days ago

Actor Darshan : ಪವಿತ್ರಗೌಡ ಬಗ್ಗೆ ಪೋಸ್ಟ್‌ ಮಾಡಿದ್ರೆ ನಿಮಗ್ಯಾಕೆ ಕೋಪ? ದರ್ಶನ್‌ಗೆ ಪೊಲೀಸರ ಪ್ರಶ್ನೆಗಳ ಸುರಿಮಳೆ

Actor Darshan
ಸಿನಿಮಾ2 days ago

Actor Darshan : ದರ್ಶನ್‌ ಜೈಲಿಗೆ ಹೋಗುತ್ತಿರುವುದು ಇದೇ ಮೊದಲಲ್ಲ; ನಟನ ಮೇಲಿವೆ ಹತ್ತಾರು ಕೇಸ್‌ಗಳು!

Saptami Gowda
ಸಿನಿಮಾ2 days ago

Saptami Gowda : ಯುವ ಪತ್ನಿ ಶ್ರೀದೇವಿ ವಿರುದ್ಧ ಮಾನಹಾನಿ ಕೇಸ್; ಕಾನೂನು ಹೋರಾಟಕ್ಕೆ ಮುಂದಾದ ನಟಿ ಸಪ್ತಮಿ ಗೌಡ!

Karnataka weather Forecast
ಮಳೆ2 days ago

Karnataka Weather : ಭಾರಿ ಮಳೆಗೆ ಮನೆ ಗೋಡೆ ಕುಸಿದು ಎಮ್ಮೆಗಳು ಸಾವು; ಆಕಳಿನ ಜೀವ ತೆಗೆದ ವಿದ್ಯುತ್‌ ತಂತಿ

Karnataka weather Forecast
ಮಳೆ5 days ago

Karnataka weather : ಮಳೆಯಲ್ಲೆ ತಪಸ್ಸಿಗೆ ಕುಳಿತ ವೃದ್ಧ; ಇನ್ನೊಂದು ವಾರ ನಾನ್‌ ಸ್ಟಾಪ್‌ ವರುಣನ ಅಬ್ಬರ

Sigandur launch
ಶಿವಮೊಗ್ಗ5 days ago

Sigandur launch: ಸಿಗಂದೂರು ಲಾಂಚ್‌ನಲ್ಲಿ ಭಾರಿ ವಾಹನಗಳಿಗೆ ನಿರ್ಬಂಧ

Karnataka Rain
ಮಳೆ7 days ago

Karnataka Rain : ಭಾರಿ ಮಳೆಗೆ ಮರ ಬಿದ್ದು ಮೇಕೆಗಳು ಸಾವು; ಸಿಡಿಲಿಗೆ ಎಲೆಕ್ಟ್ರಿಕ್‌ ಅಂಗಡಿ ಸುಟ್ಟು ಭಸ್ಮ

Lok Sabha Election Result 2024 Live
ದೇಶ1 week ago

Lok Sabha Election Result 2024 Live: ಲೋಕಸಭೆ ಚುನಾವಣೆ ಫಲಿತಾಂಶದ ಲೈವ್‌ ಇಲ್ಲಿ ವೀಕ್ಷಿಸಿ

ಟ್ರೆಂಡಿಂಗ್‌