Personality test | ಈ 10 ಅಭ್ಯಾಸಗಳು ನಿಮ್ಮ ವ್ಯಕ್ತಿತ್ವವನ್ನು ಇನ್ನೊಬ್ಬರ ಮುಂದೆ ಬಿಚ್ಚಿಡುತ್ತವೆ! - Vistara News

ಲೈಫ್‌ಸ್ಟೈಲ್

Personality test | ಈ 10 ಅಭ್ಯಾಸಗಳು ನಿಮ್ಮ ವ್ಯಕ್ತಿತ್ವವನ್ನು ಇನ್ನೊಬ್ಬರ ಮುಂದೆ ಬಿಚ್ಚಿಡುತ್ತವೆ!

‌ನಿಮ್ಮ ಕೆಲವು ವರ್ತನೆಗಳು ನಿಮ್ಮ ಪರ್ಸನಾಲಿಟಿ ಏನು ಎಂಬುದನ್ನು ಅನ್ಯರ ಮುಂದೆ ಬಹು ಸುಲಭವಾಗಿ ಬಿಚ್ಚಿಡುತ್ತವೆ. so, watch them.

VISTARANEWS.COM


on

personality signs
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಯಾರೇ ಒಬ್ಬರನ್ನು ಇಷ್ಟವಾಗಲು/ಆಗದಿರಲು ಮೊದಲ ಭೇಟಿ ಸಾಕು ಎಂಬೊಂದು ಹಳೆಯ ಮಾತಿದೆ. ಬಹಳಷ್ಟು ಸಾರಿ ನಮ್ಮ ಬಗ್ಗೆ ಬೇರೆಯವರು ಏನು ತಿಳಿದುಕೊಳ್ಳುತ್ತಾರೆ ಎಂದು ಯೋಚಿಸುವುದರಲ್ಲೇ ನಮ್ಮ ಬಹಳಷ್ಟು ಸಮಯ ಪೋಲಾಗುತ್ತದೆ. ಸೂಕ್ಷ್ಮವಾಗಿ ಗಮನಿಸಿದರೆ ನಮ್ಮ ಹಲವು ಅಭ್ಯಾಸಗಳು ಕೂಡಾ ನಮ್ಮ ವ್ಯಕ್ತಿತ್ವಕ್ಕೆ ಕನ್ನಡಿ ಹಿಡಿಯುತ್ತದೆ. ಆದರೆ, ಇಂತಹ ಸಣ್ಣ ಸಣ್ಣ ಸೂಕ್ಷ್ಮಗಳನ್ನು ಗಮನಿಸದೆ, ಮತ್ತೊಬ್ಬರ ಮೇಲೆ ನಮ್ಮ ಬಗ್ಗೆ ಒಳ್ಳೆಯ ಅಭಿಪ್ರಾಯ ಮೂಡಿಸಲು ಅನವಶ್ಯಕ ತಲೆಬಿಸಿ ಮಾಡಿಕೊಳ್ಳುತ್ತೇವೆ. ಹಾಗಾಗಿ ನಮ್ಮ ವ್ಯಕ್ತಿತ್ವದ ಸುಳಿವನ್ನು ಬಿಚ್ಚಿಡುವ ಸಣ್ಣ ಸಣ್ಣ ಅಭ್ಯಾಸಗಳು ಯಾವುವು ಎಂದು ನೋಡೋಣ.

೧. ಎಲ್ಲರ ಜೊತೆಗೆ ಕೂತು ಉಣ್ಣುವಾಗ ನಾವು ಹೇಗೆ ಉಣ್ಣುತ್ತೇವೆ ಎಂಬ ಬಗ್ಗೆ ಎಂದಾದರೂ ತಲೆ ಕೆಡಿಸಿಕೊಂಡಿದ್ದೀರಾ? ಇದರಲ್ಲೂ ನಿಮ್ಮ ವ್ಯಕ್ತಿತ್ವದ ಸಣ್ಣ ಸುಳಿವು ಇತರರಿಗೆ ಸಿಗುತ್ತದೆ. ನಿಧಾನವಾಗಿ ತಾಳ್ಮೆಯಿಂದ ಊಟ ಮಾಡುವ ಮಂದಿ ಪ್ರತಿಯೊಂದರಲ್ಲೂ ತುಂಬ ನಿಯಂತ್ರಣ ಹೊಂದಿದವರಾಗಿಯೂ, ಬೇಗ ಬೇಗನೆ ಗಬಗಬ ಉಂಡು ಮುಗಿಸುವ ಮಂದಿ ಮಹತ್ವಾಕಾಂಕ್ಷಿಗಳೂ, ಗುರಿಯ ಬಗ್ಗೆ ಹೆಚ್ಚು ಪೋಕಸ್ಡ್‌ ಆಗಿರುವವರಾಗಿಯೂ ಇರುತ್ತಾರೆ. ಸಿಕ್ಕಸಿಕ್ಕಲ್ಲಿ ಹೊಸತನ್ನು ಟ್ರೈ ಮಾಡುವ ಆಹಾರದ ವಿಷಯದಲ್ಲಿ ಸಾಹಸೀ ಪ್ರವೃತ್ತಿಯ ಮಂದಿ ಜೀವನದಲ್ಲಿ ತಮ್ಮ ಕಂಫರ್ಟ್‌ ಝೋನ್‌ನಿಂದ ಹೊರಗೆ ಬಂದು ಪ್ರತಿಯೊಂದನ್ನೂ ಸೊಗಸಾಗಿ ಅನುಭವಿಸುವವರು ಹಾಗೂ, ಏನು ಉಂಡರೂ ಅದರಲ್ಲಿ ಬೇಡಗಳ ದೊಡ್ಡ ಪಟ್ಟಿಯೇ ಇರುವ ತುಂಬ ಚ್ಯೂಸಿ ಮಂದಿ ಸದಾ ಚಿಂತೆಯಲ್ಲಿ ಮುಳುಗಿರುವವರು ಎಂದು ಅರ್ಥವಂತೆ.

೨. ನಿಮ್ಮ ಹ್ಯಾಂಡ್‌ಶೇಕ್‌ ಕೂಡಾ ನಿಮ್ಮ ವ್ಯಕ್ತಿತ್ವವನ್ನು ನಿರ್ಧರಿಸುತ್ತದೆ. ಸಾಮಾನ್ಯವಾಗಿ ಮೊದಲ ಭೇಟಿಯಲ್ಲಿ ಮುಖ್ಯವಾಗುವುದು ಇವೇ ಸಣ್ಣಪುಟ್ಟ ಸಂಗತಿಗಳು. ನೀವು ಎದುರಿಗಿನ ವ್ಯಕ್ತಿಯ ಕೈಯನ್ನು ಗಟ್ಟಿಯಾಗಿ ಹಿಡಿದು ಹ್ಯಾಂಡ್‌ಶೇಕ್‌ ಮಾಡುತ್ತೀರಿ ಎಂದಾದಲ್ಲಿ ನಿಮಗೆ ಓಪನ್‌ ಮೈಂಡೆಡ್‌ ಹಾಗೂ ಆತ್ಮವಿಶ್ವಾಸಿ ಎಂಬರ್ಥ ಬರುತ್ತದೆ. ಬೇಕೋ, ಬೇಡವೋ ಎಂದು ಸಡಿಲಾಗಿ ಹಿಡಿದು ಹ್ಯಾಂಡ್‌ಶೇಕ್‌ ಮಾಡಿದಲ್ಲಿ ನೀವೊಬ್ಬ ನಾಚಿಕೆ ಸ್ವಭಾವದ, ಅಂತರ್ಮುಖಿ ಹಾಗೂ ಬಹಳ ಚಿಂತೆ ಮಾಡುತ್ತಿರುವ ಗುಣವುಳ್ಳದವರು ಎಂದರ್ಥ. ನೀವು ಮತ್ತೊಬ್ಬರ ಕೈಯನ್ನು ಹಿಡಿದು ಶೇಕ್‌ ಮಾಡುವ ಹಿಡಿತ, ಬಿಗಿತ, ಕೈಯ ಉಷ್ಣತೆ, ಶುಷ್ಕತೆ, ಅವಧಿ, ಸ್ಪರ್ಷದ ನವಿರುತನ ಎಲ್ಲವೂ ಇಲ್ಲಿ ಮುಖ್ಯವಾಗುತ್ತದೆ.

೩. ನಿಮಗೆ ಉಗುರು ಕಚ್ಚುವ ಅಭ್ಯಾಸವಿದೆಯೇ? ಹಾಗಾದರೆ ಇಲ್ಲಿ ಕೇಳಿ. ಉಗುರು ಕಚ್ಚುವ, ಚರ್ಮ ಕೀಳುವ ಹಾಗೂ ಕೂದಲು ಕೀಳುವ ಅಭ್ಯಾಸವಿರುವ ಮಂದಿ ಬಹಳ ಪರ್ಫೆಕ್ಷನಿಸ್ಟ್‌ಗಳಂತೆ!

೪. ಹೇಳಿದ ಸಮಯಕ್ಕಿಂತ ತಡ ಮಾಡುವ, ತಡವಾಗಿ ತಲುಪುವ, ಕೆಲಸ ಮುಗಿಸುವ ಮಂದಿಯೂ ಪರ್ಫೆಕ್ಷನಿಸ್ಟ್‌ಗಳಂತೆ. ಅವರು ಪರ್ಫೆಕ್ಟ್‌ ಆಗಿ ಕೆಲಸ ಮಾಡುವ ಭರದಲ್ಲಿ ತಡವಾಗುವ ಸಂಭವ ಹೆಚ್ಚಂತೆ.

೫. ನಿಮ್ಮ ಫೋನ್‌ ಎಷ್ಟು ಬಾರಿ ಚೆಕ್‌ ಮಾಡುತ್ತಿರುತ್ತೀರಿ ಎಂಬುದೂ ಕೂಡಾ ನಿಮ್ಮ ಅಳತೆಗೋಲಂತೆ. ಆಗಾಗ ಫೋನ್‌ ಚೆಕ್‌ ಮಾಡುವವರು ಮಾನಸಿಕವಾಗಿ ಸ್ವಲ್ಪ ವೀಕ್‌ ಹಾಗೂ ಅವರು ತಮ್ಮ ಮೂಡ್‌ ಸುಧಾರಿಸಿಕೊಳ್ಳಲು ಆಸಕ್ತಿಕರವೇನಾದರೂ ಸಿಗುತ್ತದೋ ಎಂದು ಆಗಾಗ ನೋಡುತ್ತಿರುತ್ತಾರಂತೆ.

ಇದನ್ನೂ ಓದಿ | International fashion day | ಭಾರತೀಯ ಟಾಪ್ ಫ್ಯಾಷನ್ ವಿನ್ಯಾಸಕರು

೬. ಐ ಕಾಂಟಾಕ್ಟ್‌ ಕೂಡಾ ವ್ಯಕ್ತಿತ್ವವನ್ನು ಬಿಚ್ಚಿಡುತ್ತದೆ. ನೀವು ಧೈರ್ಯವಾಗಿ ನಿಮ್ಮ ಎದುರಿಗಿರುವ ವ್ಯಕ್ತಿಯೊಂದಿಗೆ ಐ ಕಾಂಟಾಕ್ಟ್‌ ಮಾಡಬಲ್ಲಿರೆಂದರೆ ನೀವು ಆತ್ಮವಿಶ್ವಾಸಿಗಳು. ಅಂತರ್ಮುಖಿಗಳು, ನಾಚಿಕೆಯ ಸ್ವಭಾವದ ಮಂದಿ, ಹಿಂಜರಿಕೆಯ ಗುಣದ ಮಂದಿ ಎದುರಿಗಿರುವ ವ್ಯಕ್ತಿಯ ಕಣ್ಣನ್ನು ನೋಡಿ ಮಾತನಾಡುವುದಿಲ್ಲ. ಆಗಾಗ ದೃಷ್ಟಿ ಬದಲಾಯಿಸುತ್ತಿರುತ್ತಾರೆ.

೭. ಸಂಗೀತದ ಆಸಕ್ತಿಯ ಮೇಲೂ ವ್ಯಕ್ತಿತ್ವ ನಿರ್ಧರಿಸಬಹುದು. ಮಧುರವಾದ ಸಂಗೀತ ಕೇಳಬಯಸುವವರು ಭಾವನಾತ್ಮಕ ವ್ಯಕ್ತಿಗಳೆಂದು, ಕೊಂಚ ಆಳವಾದ ಹಾಗೂ ಸಂಕೀರ್ಣವಾದ ಹಾಡುಗಳನ್ನು ಕೇಳಬಯಸುವ ಮಂದಿ ವಿವೇಕಶಾಲಿಗಳೆಂದೂ ಅರ್ಥವಂತೆ.

೮. ನಾಯಿ ಹಾಗೂ ಬೆಕ್ಕುಗಳನ್ನು ಇಷ್ಟಪಡುವ ಆಧಾರದಲ್ಲೂ ವ್ಯಕ್ತಿತ್ವ ನಿರ್ಧರಿಸಲಾಗುತ್ತದಂತೆ. ನಾಯಿಯನ್ನು ಇಷ್ಟಪಡುವ ಮಂದಿ ಹೆಚ್ಚು ಸದಾ ಚುರುಕಾಗಿರುವ ಹಾಗೂ ತಿರುಗಾಡ ಬಯಸುವವರೆಂದೂ, ಬೆಕ್ಕನ್ನು ಇಷ್ಟಪಡುವ ಮಂದಿ ಸ್ವಲ್ಪ ಸೆನ್ಸಿಟಿವ್‌ ಹಾಗೂ ಅಂತರ್ಮುಖಿಗಳು ಆದರೆ ಬುದ್ಧಿವಂತರು ಎಂದು ಅಂದಾಜಿಸಲಾಗುತ್ತದೆಯಂತೆ.

ಇದನ್ನೂ ಓದಿ | Motivational story | ಗುಜರಿಯಲ್ಲಿ ಬಿದ್ದ ಕಬ್ಬಿಣ ತುಂಡಿನ ಬೆಲೆಯೇ ಬೇರೆ, ಅದನ್ನೇ ಬಳಸಿ ಮಾಡಿದ ಮೂರ್ತಿ ಬೆಲೆಯೇ ಬೇರೆ!

೯. ಹಸ್ತಾಕ್ಷರದ ಮೇಲೂ ವ್ಯಕ್ತಿತ್ವ ನಿರ್ಧಾರ ಮಾಡಬಹುದು. ಚಿಕ್ಕ ಚಿಕ್ಕ ಅಕ್ಷರ ಹೊಂದಿರುವ ಮಂದಿ ಸ್ವಲ್ಪ ಅಂತರ್ಮುಖಿಗಳೆಂದೂ ದೊಡ್ಡ ಅಕ್ಷರದ ಮಂದಿ ಹೆಚ್ಚು ಜನರ ಜೊತೆ ಬೆರೆಯಲು ಇಷ್ಟಪಡುವ ಮಂದಿ ಎಂದು ಅಳೆಯಲಾಗುತ್ತದೆ. ವಾಲಿದಂತೆ ಬರೆವ ಮಂದಿ ಫ್ರೆಂಡ್ಲೀ ಹಾಗೂ ಸೆಂಟಿಮೆಂಟ್‌ಗಳು, ನೇರವಾಗಿ ಬರೆವ ಮಂದಿ ವ್ಯವಹಾರ ಚತುರರು ಹಾಗೂ ಎಡಕ್ಕೆ ವಾಲಿದಂತೆ ಬರೆವ ಮಂದಿ ಎಚ್ಚು ಆತ್ಮಾವಲೋಕನ ಮಾಡುವ ಮಂದಿ ಎನ್ನಲಾಗುತ್ತದೆ.

೧೦. ಹೊಟೇಲಿನಲ್ಲಿ ಸರ್ವರ್‌ ಜೊತೆ ಹೇಗೆ ನಡೆದುಕೊಳ್ಳುತ್ತೇವೆ ಎಂಬುದರ ಮೇಲೂ ನಮ್ಮ ವ್ಯಕ್ತಿತ್ವ ನಿರ್ಧಾರವಾಗುತ್ತದಂತೆ. ಸಾಮಾನ್ಯವಾಗಿ ಸರ್ವರ್‌ ಜೊತೆಗೆ ಕೆಟ್ಟದಾಗಿ ವರ್ತಿಸುವ, ಬೈಯುವ ಮಂದಿ ನಿಜ ಜೀವನದಲ್ಲೂ ಬಹಳ ಒರಟರು ಎಂದು ಹೇಳಲಾಗುತ್ತದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಆರೋಗ್ಯ

FSSAI Warning: ಎದೆಹಾಲು ಮಾರಾಟ ಮಾಡುವಂತಿಲ್ಲ: ಎಫ್‌ಎಸ್‌ಎಸ್‌ಎಐ ಖಡಕ್ ಎಚ್ಚರಿಕೆ

ಮಾನವ ಹಾಲು ಮತ್ತು ಅದರ ಉತ್ಪನ್ನಗಳ ಬಗ್ಗೆ ವಾಣಿಜ್ಯ ಉದ್ದೇಶಗಳಿಗಾಗಿ ವಿವಿಧ ಸಮಾಜದ ನಾಗರಿಕರನ್ನು ಸಂಪರ್ಕಿಸಲಾಗಿದೆ ಎನ್ನುವ ಕುರಿತು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರಕ್ಕೆ ಮಾಹಿತಿ ಬಂದಿದ್ದು, ಎಫ್‌ಎಸ್‌ಎಸ್‌ಎಐ ಯು (FSSAI Warning) ಇಂತಹ ಯಾವುದೇ ಅಭ್ಯಾಸಗಳಲ್ಲಿ ತೊಡಗಿರುವ ಘಟಕಗಳಿಗೆ ಯಾವುದೇ ರೀತಿಯ ಪರವಾನಗಿಗಳನ್ನು ನೀಡುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು ಕೇಂದ್ರ ಮತ್ತು ರಾಜ್ಯ ಪರವಾನಗಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ.

VISTARANEWS.COM


on

By

FSSAI Warning
Koo

ವಾಣಿಜ್ಯ ಉದ್ದೇಶಗಳಿಗಾಗಿ ಮನುಷ್ಯರ ಎದೆಹಾಲು (Breast Milk ) ಮತ್ತು ಅದರಿಂದ ಪಡೆದ ಉತ್ಪನ್ನಗಳ ವಿರುದ್ಧ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಆಹಾರ ವ್ಯಾಪಾರ ನಿರ್ವಾಹಕರಿಗೆ (FBO) ಎಚ್ಚರಿಕೆಯನ್ನು (FSSAI Warning) ನೀಡಿದೆ. 2006ರ ಆಹಾರ ಸುರಕ್ಷತೆ ಮತ್ತು ಗುಣಮಟ್ಟ (FSS) ಕಾಯಿದೆ ಮತ್ತು ಅದಕ್ಕೆ ಸಂಬಂಧಿಸಿದ ನಿಯಮಗಳ ಅಡಿಯಲ್ಲಿ ಇಂತಹ ಉತ್ಪನ್ನಗಳ ಸಂಸ್ಕರಣೆ ಮತ್ತು ಮಾರಾಟಕ್ಕೆ ಅನುಮತಿ ನೀಡಲಾಗಿಲ್ಲ ಎಂದು ಆಹಾರ ಸುರಕ್ಷತಾ ನಿಯಂತ್ರಕ ಶುಕ್ರವಾರ ನೀಡಿದ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಪರವಾನಗಿ ನೀಡುವುದಿಲ್ಲ

ಮಾನವ ಹಾಲು ಮತ್ತು ಅದರ ಉತ್ಪನ್ನಗಳ ಬಗ್ಗೆ ವಾಣಿಜ್ಯ ಉದ್ದೇಶಗಳಿಗಾಗಿ ವಿವಿಧ ಸಮಾಜದ ನಾಗರಿಕರನ್ನು ಸಂಪರ್ಕಿಸಲಾಗಿದೆ ಎನ್ನುವ ಕುರಿತು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರಕ್ಕೆ ಮಾಹಿತಿ ಬಂದಿದ್ದು, ಎಫ್‌ಎಸ್‌ಎಸ್‌ಎಐ ಯು ಇಂತಹ ಯಾವುದೇ ಅಭ್ಯಾಸಗಳಲ್ಲಿ ತೊಡಗಿರುವ ಘಟಕಗಳಿಗೆ ಯಾವುದೇ ರೀತಿಯ ಪರವಾನಗಿಗಳನ್ನು ನೀಡುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು ಕೇಂದ್ರ ಮತ್ತು ರಾಜ್ಯ ಪರವಾನಗಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ.

ಮಾನವ ಹಾಲು ಅಥವಾ ಅದರ ಉತ್ಪನ್ನಗಳ ವಾಣಿಜ್ಯೀಕರಣದಲ್ಲಿ ತೊಡಗಿರುವ ಯಾವುದೇ ಆಹಾರ ವ್ಯಾಪಾರ ನಿರ್ವಾಹಕರು ಭಾರಿ ದಂಡವನ್ನು ತೆರಬೇಕಾಗುವುದು ಎಂದು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಎಚ್ಚರಿಸಿದೆ.

ಎಚ್ಚರಿಕೆ ಏನು?

ಮಾನವನ ಎದೆ ಹಾಲು ಮಾರಾಟಕ್ಕೆ ಸಂಬಂಧಿಸಿ ಯಾವುದೇ ಉಲ್ಲಂಘನೆಯ ವಿರುದ್ಧ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಎಚ್ಚರಿಕೆಯನ್ನು ನೀಡಿದೆ. ಮಾನವ ಹಾಲು ಮತ್ತು ಅದರ ಉತ್ಪನ್ನಗಳ ವಾಣಿಜ್ಯೀಕರಣಕ್ಕೆ ಸಂಬಂಧಿಸಿದ ಎಲ್ಲಾ ಚಟುವಟಿಕೆಗಳನ್ನು ತಕ್ಷಣವೇ ನಿಲ್ಲಿಸಬೇಕು ಎಂದು ಸಲಹೆ ನೀಡಲಾಗಿದೆ.

ಇದರ ಯಾವುದೇ ಉಲ್ಲಂಘನೆಯನ್ನು ಮಾಡಿದವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು. ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯಿದೆ 2006 ಮತ್ತು ಅದರ ಅಡಿಯಲ್ಲಿ ಮಾಡಿದ ನಿಯಮಗಳಿಗೆ ಅನುಸಾರವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆಯನ್ನು ನೀಡಿದೆ.

ಇದನ್ನೂ ಓದಿ: Egg Benefits: ನೀವು ಮೊಟ್ಟೆ ಪ್ರಿಯರೆ? ಹಾಗಾದರೆ ಎಷ್ಟು ಮೊಟ್ಟೆ ತಿನ್ನಬಹುದು ಎಂಬುದೂ ಅರಿವಿರಲಿ!

ಪ್ರೊಟೀನ್‌ ಪುಡಿಗಳಿಂದ ದೂರವಿರಿ: ಎಚ್ಚರಿಕೆ

ಬಹಳಷ್ಟು ಮಂದಿಗೆ ನಿತ್ಯವೂ ಪ್ರೊಟೀನ್‌ ಪುಡಿಗಳಿಂದ ಮಾಡಿದ ಶೇಕ್‌ಗಳನ್ನು ಕುಡಿಯುವ ಅಭ್ಯಾಸವಿರಬಹುದು. ಜಿಮ್‌ಗೆ ಹೋಗುವ, ವ್ಯಾಯಾಮ ಮಾಡುವ, ತೂಕ ಇಳಿಸುವ ಪ್ರಯತ್ನದಲ್ಲಿರುವ ಎಲ್ಲ ಮಂದಿಯೂ ಈಗ ಯಾವ ವೈದ್ಯರ ಸಲಹೆಯನ್ನೂ ಕೇಳದೆ ನೇರವಾಗಿ ಪ್ರೊಟೀನ್‌ ಪೌಡರ್‌ಗಳು ಸಿಗುವ ಔಟ್‌ಲೆಟ್‌ಗಳಿಂದ ಪೌಡರನ್ನು ಕೊಂಡು ತಂದು ಸೇವಿಸಲು ಆರಂಭಿಸುತ್ತಾರೆ.

ಮಾಂಸಖಂಡಗಳ ಬಲವರ್ಧನೆಗೆ, ಪ್ರೊಟೀನ್‌ ಡಯಟ್‌ನಲ್ಲಿರುವ ಮಂದಿ, ಅಥ್ಲೀಟ್‌ಗಳು ಸೇರಿದಂತೆ ಎಲ್ಲರೂ ಇತ್ತೀಚೆಗೆ ಪ್ರೊಟೀನ್‌ ಪೌಡರ್‌ ಶೇಕ್‌ ಮಾಡಿ ಕುಡಿಯುವ ಟ್ರೆಂಡ್‌ ಹೆಚ್ಚಾಗುತ್ತಿದೆ. ಇದು ನಿಜಕ್ಕೂ ಆರೋಗ್ಯಕ್ಕೆ ಒಳ್ಳೆಯದನ್ನೇ ಮಾಡುತ್ತದೆಯೋ ಅಥವಾ ಇದರಿಂದ ಅಡ್ಡ ಪರಿಣಾಮಗಳೇನಾದರೂ ಇವೆಯೇ ಎಂಬ ಯೋಚನೆಯನ್ನೂ ಮಾಡುವುದಿಲ್ಲ.

ಇತ್ತೀಚೆಗೆ ಹೆಚ್ಚುತ್ತಿರುವ ಈ ಟ್ರೆಂಡ್‌ಗೆ ಉತ್ತರವಾಗಿ ಇಂಡಿಯನ್‌ ಕೌನ್ಸಿಲ್‌ ಆಫ್‌ ಮೆಡಿಕಲ್‌ ರೀಸರ್ಚ್‌- ನ್ಯಾಷನಲ್‌ ಆಫ್‌ ನ್ಯೂಟ್ರಿಷನ್‌ ಇದೀಗ ಮಾರ್ಗಸೂಚಿಗಳನ್ನೂ ಬಿಡುಗಡೆ ಮಾಡಿದ್ದು ಪ್ರೊಟೀನ್‌ ಪೌಡರುಗಳ ಕುರಿತಾದ ಆಘಾತಕಾರಿ ಸತ್ಯವನ್ನು ವಿವರಿಸಿದೆ. ಇದರ ಅಧಿಕ ಸೇವನೆಯಿಂದ ಯಾವೆಲ್ಲ ಪರಿಣಾಮಗಳನ್ನು ಎದುರಿಸಬೇಕಾದೀತು ಎಂಬ ಎಚ್ಚರವನ್ನೂ ನೀಡಿದೆ.

ಅಥ್ಲೀಟ್‌ಗಳೂ ಸೇರಿದಂತೆ, ಕ್ರೀಡಾಳುಗಳಿಗೆ ನಿತ್ಯವೂ ಆಹಾರ ಮೂಲಗಳಿಂದಲೇ ಪ್ರೊಟೀನ್‌ ನಮ್ಮ ದೇಹಕ್ಕೆ ಸೇರುವಂತೆ ಮಾಡಬೇಕು ಎಂಬ ನಿಯಮಾವಳಿ ಇದೆ. ಸಪ್ಲಿಮೆಂಟ್‌ಗಳ ಮೂಲಕ ಪ್ರೊಟೀನ್‌ ಅಥವಾ ಪೋಷಕಾಂಶಗಳು ದೇಹಕ್ಕೆ ಸೇರುವಂತೆ ಮಾಡುವುದು ಉತ್ತಮ ವಿಧಾನವಲ್ಲ ಎಂದು ಹೇಳಿದೆ.

ನಿತ್ಯವೂ ಹೀಗೆ ಪ್ರೊಟೀನ್‌ ಪುಡಿಗಳು ಹಾಗೂ ಇತರ ಸಪ್ಲಿಮೆಂಟ್‌ಗಳನ್ನು ಹೆಚ್ಚು ಪ್ರಮಾಣದಲ್ಲಿ ಸೇವಿಸುತ್ತಲೇ ಇದ್ದರೆ ಎಲುಬಿನಲ್ಲಿ ಖನಿಜಾಂಶಗಳ ನಷ್ಟ ಸೇರಿದಂತೆ ಕಿಡ್ನಿಯ ಸಮಸ್ಯೆಗಳು ಬರುವ ಸಾಧ್ಯತೆಗಳು ಹೆಚ್ಚು ಎಂದು ಎಚ್ಚರಿಕೆ ನೀಡಿದೆ.

Continue Reading

ಫ್ಯಾಷನ್

Mango Nail Art: ಸಮ್ಮರ್‌ ಸೀಸನ್‌ನಲ್ಲಿ ಬಂತು ಮ್ಯಾಂಗೋ ನೇಲ್‌ ಆರ್ಟ್!

ಸಮ್ಮರ್‌ ಸೀಸನ್‌ನಲ್ಲಿ ಅದರಲ್ಲೂ ಮಾವಿನ ಹಣ್ಣಿನ ಸೀಸನ್‌ನಲ್ಲಿ ಮ್ಯಾಂಗೋ ನೇಲ್‌ ಆರ್ಟ್ (Mango Nail Art) ಟ್ರೆಂಡಿಯಾಗಿದೆ. ಬ್ಯೂಟಿ ಬ್ಲಾಗ್‌-ವ್ಲಾಗ್‌ಗಳಲ್ಲಿ ಇವುಗಳ ನಾನಾ ರೂಪ ದರ್ಶನವಾಗುತ್ತಿದೆ ಎನ್ನುವ ನೇಲ್‌ ಆರ್ಟ್ ಡಿಸೈನರ್‌ ರಿಂಕಿ ಒಂದಿಷ್ಟು ಮಾಹಿತಿ ನೀಡಿದ್ದಾರೆ.

VISTARANEWS.COM


on

Mango Nail Art
ಚಿತ್ರಕೃಪೆ: ಇನ್ಸ್‌ಟಾಗ್ರಾಮ್‌
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಮ್ಯಾಂಗೋ ನೇಲ್‌ ಆರ್ಟ್ ಸದ್ಯ ನೇಲ್‌ ಆರ್ಟ್ (Mango Nail Art) ಲೋಕದಲ್ಲಿ ಟ್ರೆಂಡಿಯಾಗಿದೆ. ಈ ಬಾರಿಯ ಬೇಸಿಗೆಯಲ್ಲಿ ನಾನಾ ಬಗೆಯ ಮಾವಿನ ಹಣ್ಣಿನ ಚಿತ್ತಾರಗಳು ನೇಲ್‌ ಆರ್ಟ್ ಡಿಸೈನ್‌ನಲ್ಲಿ ಮೂಡಿ ಬಂದಿದ್ದು, ಬ್ಯೂಟಿ ಪ್ರಿಯರು ತಮ್ಮ ಊಹೆಗೆ ತಕ್ಕಂತೆ ಬಗೆಬಗೆಯ ಡಿಸೈನ್‌ನಲ್ಲಿ ಇವುಗಳ ಚಿತ್ತಾರವನ್ನು ಬೆರಳುಗಳ ಉಗುರುಗಳ ಮೇಲೆ ಮೂಡಿಸತೊಡಗಿದ್ದಾರೆ.

Mango Nail Art

ಸೀಸನ್‌ಗೆ ಬಂತು ಮಾವಿನ ಚಿತ್ತಾರ

“ನೇಲ್‌ ಆರ್ಟ್ ಸೀಸನ್‌ಗೆ ತಕ್ಕಂತೆ ಬದಲಾಗುತ್ತಿರುತ್ತದೆ. ಆಯಾ ಸೀಸನ್‌ನಲ್ಲಿ ಪ್ರಚಲಿತದಲ್ಲಿರುವ ಟಾಪಿಕ್‌ ಆಗಬಹುದು, ಕಲರ್‌ ಆಗಬಹುದು, ಹಬ್ಬ ಆಗಬಹುದು ಅಥವಾ ಹಣ್ಣು-ತರಕಾರಿಯೂ ಆಗಬಹುದು. ಇನ್ನು ಈ ಸೀಸನ್‌ನಲ್ಲಿ ಎಲ್ಲರಿಗೂ ತಿಳಿದಿರುವಂತೆ ಮಾವಿನ ಹಣ್ಣುಗಳ ಅಬ್ಬರ. ಇದಕ್ಕೆ ಪೂರಕ ಎಂಬಂತೆ, ನಾನಾ ಜಾತಿಯ ಅಂದರೇ, ವೆರೈಟಿ ಮಾವಿನ ಹಣ್ಣಿನ ರೂಪಗಳು ಮಿನಿಯೇಚರ್‌ ರೂಪದಲ್ಲಿ ಉಗುರುಗಳ ಮೇಲೆ ಸಿಂಗಾರಗೊಳ್ಳುತ್ತಿವೆ. ಕೆಲವರು, ನೇಲ್‌ ಪಾರ್ಲರ್‌ಗೆ ಹೋಗಿ ಡಿಸೈನ್‌ ಮಾಡಿಸಿಕೊಂಡರೇ, ಇನ್ನು ಕೆಲವರು ಖುದ್ದು ತಾವೇ ವಿನ್ಯಾಸ ಮಾಡಿಕೊಳ್ಳುತ್ತಾರೆ. ಇಲ್ಲವೇ ತಮ್ಮ ಆಪ್ತರಿಗೆ ಸಹೋದರಿಯರಿಗೆ ತಾವೇ ಬಿಡಿಸುತ್ತಾರೆ ಎನ್ನುವ ನೇಲ್‌ ಆರ್ಟ್ ಡಿಸೈನರ್‌ ರಿಂಕಿ ಪ್ರಕಾರ, ಯಾವುದೇ ಡಿಸೈನ್‌ ಮೂಡಿಸಲು ಕಲಾವಿದರ ಮನಸ್ಸು ಅಗತ್ಯ ಎನ್ನುತ್ತಾರೆ.

Mango Nail Art

ಬ್ಯೂಟಿ ಬ್ಲಾಗ್‌-ವ್ಲಾಗ್‌ಗಳಲ್ಲಿ ಆರಂಭವಾದ ಟ್ರೆಂಡ್‌

ಈ ಸಮ್ಮರ್‌ ಸೀಸನ್‌ನಲ್ಲಿ ಅದರಲ್ಲೂ ಮಾವಿನ ಹಣ್ಣಿನ ಸೀಸನ್‌ನಲ್ಲಿ ಇದೀಗ ನೇಲ್‌ ಆರ್ಟ್ ಪ್ರಿಯರು ಮ್ಯಾಂಗೋ ನೇಲ್‌ ಆರ್ಟ್ ಚಿತ್ತಾರಗಳಿಗೆ ಮನ ಸೋತಿದ್ದಾರೆ. ಬ್ಯೂಟಿ ಬ್ಲಾಗ್‌-ವ್ಲಾಗ್‌ಗಳಲ್ಲಿ ಇವುಗಳ ನಾನಾ ರೂಪ ದರ್ಶನವಾಗುತ್ತಿದೆ. ಬ್ಯೂಟಿ ಹಾಗೂ ಫ್ಯಾಷನ್‌ ಇನ್ಫೂಯೆನ್ಸರ್ಸ್ ತಮ್ಮ ನೇಲ್‌ ಆರ್ಟ್‌ಗಳನ್ನು ಪ್ರದರ್ಶಿಸುತ್ತಿರುವುದು ಟ್ರೆಂಡ್‌ಗೆ ಕಾರಣವಾಗಿದೆ ಎನ್ನುತ್ತಾರೆ ಎಕ್ಸ್‌ಫರ್ಟ್ಸ್.

Mango Nail Art

ಪ್ರಯೋಗಾತ್ಮಕ ವಿನ್ಯಾಸ

ಇನ್ನು, ಪ್ರಯೋಗಾತ್ಮಕ ಶೇಡ್‌ ಚಿತ್ತಾರ ಮೂಡಿಸಿರುವ ಕೆಲವು ನೇಲ್‌ ಆರ್ಟ್‌ ಪ್ರೇಮಿಗಳು ಸೋಷಿಯಲ್‌ ಮೀಡಿಯಾದ ತಮ್ಮ ಬ್ಯೂಟಿ ಪೇಜ್‌ಗಳಲ್ಲಿ, ಬೆರಳ ಚಿತ್ರಗಳನ್ನು ಪ್ರಕಟಿಸುತ್ತಿದ್ದಾರೆ. ಹಾಗಾಗಿ ಈ ಬಾರಿ ಫ್ರೂಟ್ಸ್‌ ನೇಲ್‌ ಆರ್ಟ್‌ ಡಿಸೈನ್‌ನಲ್ಲಿ ಮಾವಿನ ಹಣ್ಣಿನ ಡಿಸೈನ್‌ ಟ್ರೆಂಡಿಯಾಗಿದೆ. ಹಾಗೆಂದು ಇಂಟರ್‌ನ್ಯಾಷನಲ್‌ ಫ್ಯಾಷನ್‌ನಲ್ಲಿ ಸದ್ಯಕ್ಕೆ ಇದು ಇಲ್ಲ. ಈ ಡಿಸೈನ್‌ ಏನಿದ್ದರೂ ನಮ್ಮ ರಾಷ್ಟ್ರದಲ್ಲಿ ಮಾತ್ರ. ಅದರಲ್ಲೂ ಸೌತ್‌ ಇಂಡಿಯಾದಲ್ಲಿ ಎಂಬುದು ಗೊತ್ತಿರಲಿ ಎನ್ನುತ್ತಾರೆ ಡಿಸೈನರ್ಸ್‌.

ಇದನ್ನೂ ಓದಿ: Saree Fashion: ಮಹಿಳೆಯರ ಮನಗೆದ್ದ ಕಟ್‌ ವರ್ಕ್ ಬಾರ್ಡರ್‌ ಪಾರ್ಟಿ ಸೀರೆ

ಮ್ಯಾಂಗೋ ನೇಲ್‌ ಆರ್ಟ್ ಟಿಪ್ಸ್

  • ಸನ್‌ ಕಲರ್‌ ಹಾಗೂ ಗ್ರೀನ್‌ ನೇಲ್‌ ಕಲರ್‌ ಬಳಸಿ.
  • ಒಂದು ಉಗುರಿಗೆ ಮಾತ್ರ ಡಿಸೈನ್‌ ಮಾಡುವ ಟ್ರೆಂಡ್‌ ಕೂಡ ಇದೆ.
  • ಮ್ಯಾಂಗೋ ಡಿಸೈನ್‌ ಮಾಡುವುದಿದ್ದಲ್ಲಿ ಮೊದಲೇ ಯಾವ ಬಗೆಯದ್ದನ್ನು ಚಿತ್ರಿಸಬೇಕು ಎಂಬುದನ್ನು ಮೊದಲೇ ಡಿಸೈಡ್‌ ಮಾಡಿ.

( ಲೇಖಕಿ ಫ್ಯಾಷನ್‌ ಪತ್ರಕರ್ತೆ )

Continue Reading

ಲೈಫ್‌ಸ್ಟೈಲ್

How To Get Rid Of Cockroaches: ಜಿರಳೆಗಳು ಮನೆಯೊಳಗೆ ಬರದಂತೆ ಮಾಡುವ ಈ ಉಪಾಯಗಳು ನಿಮಗೆ ತಿಳಿದಿದೆಯೆ?

ಜಿರಳೆಯ ಸಮಸ್ಯೆ ಮಾತ್ರ ಅತ್ಯಂತ ಅಸಹ್ಯ ತರಿಸುವ, ಕಿಚನ್‌ನಲ್ಲಿ ಅತ್ಯಂತ ಕಾಟ ಕೊಡಬಹುದಾದ ಸಮಸ್ಯೆ. ಬನ್ನಿ, ಜಿರಳೆಯ ಸಮಸ್ಯೆಯನ್ನು ನೀವು ಯಾವೆಲ್ಲ ಕ್ರಮಗಳನ್ನು ಕೈಗೊಳ್ಳುವ ಮೂಲಕ ಹೊಡೆದೋಡಿಸಬಹುದು (how to get rid of cockroaches) ಎಂಬುದನ್ನು ನೋಡೋಣ.

VISTARANEWS.COM


on

How To Get Rid Of Cockroaches
Koo

ಬೆಳಗಿನ ತಿಂಡಿಗೆ ಬೇಳೆ ನೆನೆಸಿಡಲು ಮರೆತು ಹೋಯಿತು ಎಂದು ಮಧ್ಯರಾತ್ರಿಯ ನಿದ್ದೆಯಿಂದ ಎದ್ದಾಗ ನೆನಪಾಗಿ ಕಣ್ಣುಜ್ಜಿಕೊಳ್ಳುತ್ತಾ ಹೋಗಿ ಕಿಚನ್‌ನ ಲೈಟ್‌ ಆನ್‌ ಮಾಡುತ್ತೀರಿ. ನಾಲ್ಕೈದು ದೊಡ್ಡ ಜಿರಳೆಗಳು ನಿಮ್ಮ ಲೈಟ್‌ನ ಬೆಳಕಿಗೆ ದಬದಬನೆ ಮೂಲೆ ಸೇರುತ್ತವೆ. ಇದು ನಿಮ್ಮ ಅರೆನಿದ್ದೆಯನ್ನು ಅಲ್ಲಾಡಿಸಿಬಿಡುವುದಷ್ಟೇ ಅಲ್ಲ, ಮತ್ತೆ ಬರಬೇಕಾದ ನಿದ್ದೆಗೂ ಸಂಚಕಾರ ತರುತ್ತದೆ. ಯಾವೆಲ್ಲ ಪಾತ್ರೆಗಳ ಮೇಲೆ ಹರಿದಾಡಿಯೋ, ಯಾವೆಲ್ಲ ವಸ್ತುಗಳನ್ನು ತಿಂದು ಹಾಕಿದೆಯೋ ಎಂಬ ಯೋಚನೆಯಲ್ಲಿ ನಿಮಗೆ ನಿದ್ದೆಯೂ ಹತ್ತಿರ ಸುಳಿಯದು. ಜಿರಳೆಯ ಸಮಸ್ಯೆ ಮಾತ್ರ ಅತ್ಯಂತ ಅಸಹ್ಯ ತರಿಸುವ. ಕಿಚನ್‌ನಲ್ಲಿ ಅತ್ಯಂತ ಕಾಟ ಕೊಡಬಹುದಾದ ಸಮಸ್ಯೆ. ಬನ್ನಿ, ಜಿರಳೆಯ ಸಮಸ್ಯೆಯನ್ನು ನೀವು ಯಾವೆಲ್ಲ ಕ್ರಮಗಳನ್ನು ಕೈಗೊಳ್ಳುವ ಮೂಲಕ ಹೊಡೆದೋಡಿಸಬಹುದು (how to get rid of cockroaches) ಎಂಬುದನ್ನು ನೋಡೋಣ.

Cockroach isolated on white background
  • ನಿಮ್ಮ ಕಿಚನ್‌ ಅನ್ನು ಸದಾ ಕ್ಲೀನಾಗಿ ಇಟ್ಟುಕೊಳ್ಳಿ. ಶುಚಿತ್ವ ಇದ್ದಲ್ಲಿ ಜಿರಳೆ ಸುಳಿಯದು. ಅಲ್ಲಲ್ಲಿ ತೇವವಾಗಿದ್ದಲ್ಲಿ, ಆಹಾರಗಳು ಚೆಲ್ಲಿಕೊಂಡಿದ್ದರೆ ಅಥವಾ ಯಾವುದಾದರೂ ಆಹಾರ ಪದಾರ್ಥಗಳು ತೆರೆದಿದ್ದರೆ ಅವೆಲ್ಲ ಜಿರಳೆಯನ್ನು ಆಹ್ವಾನಿಸುತ್ತವೆ. ಪ್ರತಿದಿನವೂ ರಾತ್ರಿ ನಿಮ್ಮ ಕಿಚನ್‌ನ ಕೆಲಸ ಮುಗಿದ ತಕ್ಷಣ ನೀಟಾಗಿ ಸ್ವಚ್ಛಗೊಳಿಸಿ, ಒರೆಸಿ, ಒಣಗಿಸಿದ ಮೇಲೆ ಕಿಚನ್‌ ಲೈಟ್‌ ಆಫ್‌ ಮಾಡಿ. ಆಗ ಜಿರಳೆಗಳ ಓಡಾಟ ಕಡಿಮೆಯಾಗುತ್ತದೆ.
  • ಆಹಾರಗಳನ್ನು ಸರಿಯಾಗಿ ಸಂರಕ್ಷಿಸಿಡಿ. ಆಹಾರದ ಪ್ಯಾಕೆಟ್ಟುಗಳನ್ನು ಬಂದ್‌ ಮಾಡಿಡಿ. ಆಹಾರದ ಪ್ಯಾಕೆಟ್ಟುಗಳಿಂದ ಆಹಾರಗಳನ್ನು ಡಬ್ಬಕ್ಕೆ ಸುರಿದಿದ್ದರೆ ಉಳಿದವನ್ನು ಪ್ಯಾಕೆಟ್ಟುಗಳಲ್ಲಿ ಭದ್ರವಾಗಿ ರಬ್ಬರ್‌ ಬ್ಯಾಂಡ್‌ ಹಾಕಿ, ಡಬ್ಬಗಳಲ್ಲಿ ಮುಚ್ಚಿಡಿ. ಆಹಾರವನ್ನು ಡಬ್ಬಗಳಲ್ಲಿ ಸ್ಟೋರ್‌ ಮಾಡಿ ಇಡಲು ಗಾಳಿಯಾಡದ, ಭದ್ರವಾದ ಮುಚ್ಚಳಗಳಿರುವ ಡಬ್ಬಗಳನ್ನೇ ಬಳಸಿ. ಪೈಪ್‌ಗಳು, ನಳ್ಳಿಗಳು ಶೊರುತ್ತಿದ್ದರೆ ಅವನ್ನು ಸರಿಮಾಡಿಸಿ. ಹೆಚ್ಚು ಕಾಲ ಸೋರುತ್ತಲೆ ಇರಲು ಬಿಡಬೇಡಿ. ತೇವವಾಗಿರುವ ಮೇಲ್ಮೈಗಳನ್ನು ಒರೆಸಿ ಒಣಗಿಸಿಡಿ.
  • ಕಿಚನ್‌ನಲ್ಲಿ, ಅಥವಾ ಮನೆಯ ಎಲ್ಲ ಜಾಗಗಳಲ್ಲೂ ಸಣ್ಣ ಪುಟ್ಟ ರಂಧ್ರಗಳು, ತೂತುಗಳು ಕಾಣಿಸಿದರೆ ಅವನ್ನು ಸೀಲ್‌ ಮಾಡಿಸಿ. ರಾತ್ರಿ ಮಲಗುವ ಸಂದರ್ಭ ಬಾತ್‌ರೂಂ, ಟಾಯ್ಲೆಟ್‌ಗಳ ಬಾಗಿಲು ಭದ್ರ ಪಡಿಸಿ. ಬಾಲ್ಕನಿ, ಸ್ಟೋರ್‌ ರೂಂ, ಯುಟಿಲಿಟಿ ಏರಿಯಾಗಳಿಂದ ಜಿರಳೆಗಳು ಬರುವ ಸಂಭವ ಹೆಚ್ಚು. ಹೀಗಾಗಿ, ಇವೆಲ್ಲ ಜಾಗಗಳನ್ನು ಚೆನ್ನಾಗಿ ಭದ್ರಪಡಿಸಿ, ಆ ಜಾಗಗಳ ಮೂಲಕ ಕಿಚನ್‌ಗೆ ಬರದಂತೆ ಮೊದಲೇ ಕ್ರಮ ಕೈಗೊಳ್ಳಿ.
  • ಅನಗತ್ಯ ವಸ್ತುಗಳನ್ನು ಕಿಚನ್‌ನಲ್ಲಿ ಸ್ಟೋರ್‌ ಮಾಡುವುದನ್ನು ಕಡಿಮೆ ಮಾಡಿ. ಬೇಕಾದಷ್ಟೇ ವಸ್ತುಗಳನ್ನು ಇಡಿ. ಹಳೆಯ ವಸ್ತುಗಳನ್ನು ತೆಗೆಯಿರಿ. ಕಪ್‌ಬೋರ್ಡ್‌, ಶೆಲ್ಫ್‌ಗಳನ್ನು ತಿಂಗಳಿಗೊಮ್ಮೆಯಾದರೂ ಸ್ವಚ್ಛಗೊಳಿಸುತ್ತಿರಿ. ಆಗ ಜಿರಳೆಗಳ ಬೆಳವಣಿಗೆಗೆ ಆಸ್ಪದವಿರುವುದಿಲ್ಲ.
  • ನೈಸರ್ಗಿಕ ಕ್ರಿಮಿನಾಶಕಗಳನ್ನು ಆಗಾಗ ಬಳಸಬಹುದು. ಮಾರುಕಟ್ಟೆಯಲ್ಲಿ ರಾಸಾಯನಿಕಯುಕ್ತ ಕೀಟನಾಶಕಗಳು ಸಿಕ್ಕರೂ, ಅವುಗಳಿಂದ ಆರೋಗ್ಯಕ್ಕೆ ಹಾನಿ ಹೆಚ್ಚು. ಹೀಗಾಗಿ ಸೊಳ್ಳೆ, ಜಿರಳೆಗಳಿಗೆ ಆಗದಂತ ಕೆಲವು ನೈಸರ್ಗಿಕ ವಸ್ತುಗಳನ್ನು ಅಲ್ಲಿಲ್ಲಿ ಸ್ಪ್ರೇ ಮಾಡಿ. ಟೀ ಟ್ರೀ ಆಯಿಲ್‌, ಪೆಪ್ಪರ್‌ ಮಿಂಟ್‌ ಇತ್ಯಾದಿಗಳನ್ನು ಬಳಸಿ ರಿಪಲೆಂಟ್‌ ಮಾಡಿ ಸ್ಪ್ರೇ ಮಾಡಿ. ಜಿರಳೆಗಳು ಎಂಟ್ರಿ ಕೊಡುವಂಥ ಜಾಗಗಳನ್ನು ಗುರುತಿಸಿ ಅಂತಹ ಜಾಗಕ್ಕೆ ಆಗಾಗ ಇಂತಹ ಸ್ಪ್ರೇಗಳನ್ನು ಮಾಡುತ್ತಿರಿ. ಉದಾಹರಣೆಗೆ ಸಿಂಕ್‌ನ ನೀರು ಹರಿದು ಹೋಗುವ ಕ್ಯಾಬಿನ್‌ ಒಳಗೆ ಅಲ್ಲಿರುವ ತೂತುಗಳ ಮುಖಾಂತರ ಜಿರಣೆಗಳು ನುಸುಳುತ್ತವೆ. ಅಂತಹ ಸ್ಥಳದಲ್ಲಿ ಲೀಕೇಜ್‌ ಇದ್ದರೆ ಸರಿಪಡಿಇಸಿ, ಒರೆಸಿ ಒಣಗಿಸಿ ಅಲ್ಲಿಗೆ ಸ್ಪ್ರೇ ಮಾಡಿ. ಆಗ ಜಿರಳೆಗಳಿಗೆ ಆಹ್ವಾನ ಸಿಗುವುದಿಲ್ಲ.

ಇದನ್ನೂ ಓದಿ: Mint Leaf Water: ಪುದಿನ ಎಲೆಗಳ ನೀರನ್ನು ನಿತ್ಯವೂ ಕುಡಿಯಿರಿ, ಈ ಲಾಭಗಳನ್ನು ಪಡೆಯಿರಿ!

Continue Reading

ಆರೋಗ್ಯ

Mint Leaf Water: ಪುದಿನ ಎಲೆಗಳ ನೀರನ್ನು ನಿತ್ಯವೂ ಕುಡಿಯಿರಿ, ಈ ಲಾಭಗಳನ್ನು ಪಡೆಯಿರಿ!

ಪುದಿನಾದಲ್ಲಿರುವ ರಿಫ್ರೆಶಿಂಗ್‌ ಗುಣ ಬೇಸಿಗೆಯಲ್ಲಿ ತಂಪಾದ ಅನುಭೂತಿ ನೀಡುತ್ತದೆ. ಪುದಿನದಿಂದ ನಮಗೆ ಆರೋಗ್ಯದ ಉಪಯೋಗಗಳೂ ಬೇಕಾದಷ್ಟಿದೆ. ಚರ್ಮದ ಆರೋಗ್ಯ, ರೋಗನಿರೋಧಕತೆ, ಜೀರ್ಣಕ್ರಿಯೆ, ದಂತಕಾಂತಿ ಸೇರಿದಂತೆ ಅನೇಕ ಉಪಯೋಗಗಳು ನಮಗೆಲ್ಲಾ ಗೊತ್ತಿದೆ. ಆದರೆ, ಪುದಿನವನ್ನು ನಿತ್ಯವೂ ಉಪಯೋಗಿಸುವುದು ಹೇಗೆ ಎಂಬ ಗೊಂದಲ ಅನೇಕರಲ್ಲಿ ಇರಬಹುದು. ಈ ಕುರಿತ (Mint leaf water) ವಿವರಣೆ ಇಲ್ಲಿದೆ.

VISTARANEWS.COM


on

Mint Leaf Water
Koo

ಬೇಸಿಗೆ ಕಾಲಕ್ಕೂ ಪುದಿನಕ್ಕೂ ಚಂದನೆಯ ಬಾಂಧವ್ಯವಿದೆ. ಇದರಲ್ಲಿರುವ ರಿಫ್ರೆಶಿಂಗ್‌ ಗುಣ ಬೇಸಿಗೆಯಲ್ಲಿ ತಂಪಾದ ಅನುಭೂತಿ ನೀಡುತ್ತದೆ. ಪುದಿನವನ್ನು ಚಟ್ನಿ, ಸಲಾಡ್‌, ಕರಿ, ಪೇಯಗಳಲ್ಲಿ ಬಳಸಿದರೆ ಸಾಕು, ತನ್ನಲ್ಲಿರುವ ಅಪರೂಪದ ಘಮವನ್ನು ಅದು ಈ ಎಲ್ಲ ಆಹಾರಕ್ಕೆ ನೀಡಿ ಬೇರೆಯದೇ ಬಗೆಯ ಫೀಲ್‌ ನೀಡುತ್ತದೆ. ಇಂಥ ಪುದಿನದಿಂದ ನಮಗೆ ಆರೋಗ್ಯದ ಉಪಯೋಗಗಳೂ ಬೇಕಾದಷ್ಟಿದೆ. ಚರ್ಮದ ಆರೋಗ್ಯ, ರೋಗನಿರೋಧಕತೆ, ಜೀರ್ಣಕ್ರಿಯೆ, ದಂತಕಾಂತಿ ಸೇರಿದಂತೆ ಅನೇಕ ಉಪಯೋಗಗಳು ನಮಗೆಲ್ಲಾ ಗೊತ್ತಿದೆ. ಆದರೆ, ಪುದಿನವನ್ನು ನಿತ್ಯವೂ ಉಪಯೋಗಿಸುವುದು ಹೇಗೆ ಎಂಬ ಗೊಂದಲ ಅನೇಕರಲ್ಲಿರುಬಹುದು. ಕೇವಲ ಒಂದು ಪುದಿನ ಇನ್‌ಫ್ಯೂಸ್ಡ್‌ ವಾಟರ್‌ನಿಂದ ಪುದಿನದ ಲಾಭಗಳನ್ನು ಪಡೆಯಬಹುದು. ಅಧವಾ ಪುದಿನ ಹಾಗೂ ನಿಂಬೆಹಣ್ಣಿನ ರಸವನ್ನು ಸೇರಿಸಿದ ನೀರನ್ನು, ನೀರಿನ ಬದಲಾಗಿಯೂ ದಿನಕ್ಕೊಮ್ಮೆ ಕುಡಿಯಬಹುದು. ಬನ್ನಿ, ಪುದಿನ ನೀರನ್ನು ಕುಡಿಯುವುದರಿಂದ ಏನೆಲ್ಲ ಲಾಭಗಳಿವೆ (Mint leaf water) ಎಂಬುದನ್ನು ನೋಡೋಣ.

drink water

ದೇಹಕ್ಕೆ ನೀರು ಅಗತ್ಯ

ಬೇಸಿಗೆಯಲ್ಲಿ ದೇಹಕ್ಕೆ ನೀರು ಎಲ್ಲಕ್ಕಿಂತ ಹೆಚ್ಚು ಅಗತ್ಯ. ಹೈಡ್ರೇಟೆಡ್‌ ಆಗಿರುವುದು ಆರೋಗ್ಯಕ್ಕೆ ಮೂಲ. ಆದರೆ ಇಡೀ ದಿನ ಇಷ್ಟು ನೀರು ಕುಡಿಯಬೇಕು ಎಂಬ ಒತ್ತಡಕ್ಕೆ ಬಿದ್ದು ಖಾಲಿ ನೀರು ಕುಡಿಯುವುದು ಹೇಗೆ ಎಂಬ ಸಮಸ್ಯೆ ಎದುರಿಸುವ ಮಂದಿಗೆ ಪುದಿನ ನೀರು ಒಳ್ಳೆಯದು. ಪುದಿನವನ್ನು ಕೈಯಲ್ಲಿ ಕೊಂಚ ರಸ ಬಿಡುವ ಹಾಗೆ ಹಿಸುಕಿ ನೀರಿಗೆ ಹಾಕಿಟ್ಟು ಆಗಾಗ ಅವಶ್ಯಕತೆ ಬಿದ್ದಾಗ ಹೀರುತ್ತಿರಬಹುದು. ಇದರಿಂದ ಪುದಿನದ ಸತ್ವಗಳೂ ದೇಹಕ್ಕೆ ಸೇರಿ, ಬೇಸಿಗೆಯಲ್ಲಿ ರಿಫ್ರೆಶಿಂಗ್‌ ಅನುಭವ ನೀಡುತ್ತದೆ.

ealthy internal organs of human digestive system / highlighted blue organs

ಜೀರ್ಣಕ್ರಿಯೆಗೆ ಪುದಿನ ಒಳ್ಳೆಯದು

ಜೀರ್ಣಕ್ರಿಯೆಗೆ ಪುದಿನ ಬಹಳ ಒಳ್ಳೆಯದು. ಪುದಿನದಲ್ಲಿ ಮೆಂಥಾಲ್‌ ಇರುವುದರಿಂದ ಇದು ಜೀರ್ಣಕ್ರಿಯೆಯನ್ನು ಪ್ರಚೋದಿಸುತ್ತದೆ. ಜೀರ್ಣಕ್ರಿಯೆಗೆ ಸಹಾಯ ಮಾಡುವ ಕಿಣ್ವಗಳಿಗೆ ಅನುಕೂಲಕರ ವಾತಾವರಣ ಇದು ನಿರ್ಮಿಸುವುದರಿಂದ ಸಹಜವಾಗಿ, ಸುಲಭವಾಗಿ ಜೀರ್ಣವಾಗುತ್ತದೆ. ಹೊಟ್ಟೆಯ ಎಲ್ಲ ಬಗೆಯ ಸಮಸ್ಯೆಗಳಿಗೆ ಪುದಿನದಲ್ಲಿ ಉತ್ತರವಿದೆ. ಹೊಟ್ಟೆ ಉಬ್ಬರಿಸಿದಂತಾಗುವುದು, ಗ್ಯಾಸ್‌, ಹೊಟ್ಟಿಯಲ್ಲಿ ಕಿಚ್ಚು ಹೊತ್ತಿಸಿದಂತಃ ಅನುಭವ, ಅಸಿಡಿಟಿ ಈ ಎಲ್ಲ ಸಮಸ್ಯೆಗಳಿಗೆ ಪುದಿನ ಸಮಾಧಾನಕರ ಉತ್ತರ ನೀಡುತ್ತದೆ.

weight loss

ತೂಕ ಇಳಿಸುವಲ್ಲಿ ಪ್ರಮುಖ ಪಾತ್ರ

ತೂಕ ಇಳಿಸುವಲ್ಲಿ ಪುದಿನದ ಪಾತ್ರ ದೊಡ್ಡದು. ಪುದಿನದ ಎಲೆ ಜೀರ್ಣಕ್ರಿಯೆಯ ಕಿಣ್ವಗಳಿಗೆ ಸೂಕ್ತ ವಾತಾವರಣ ನಿರ್ಮಾಣ ಮಾಡಿಕೊಡುವುದರಿಂದ ಜೀರ್ಣಕ್ರಿಯೆ ಸಹಜವಾಗಿ ಆಗುತ್ತದೆ. ಜೊತೆಗೆ ತೂಕ ಇಳಿಕೆಗೆ ನೆರವಾಗುತ್ತದೆ. ಜೀರ್ಣಕ್ರಿಯೆ ಸರಿಯಾಗಿ ಆರೋಗ್ಯಕರವಾದ ರೀತಿಯಲ್ಲಿ ಆದರೆ ತೂಕ ಇಳಿಕೆಯೂ ಆಗುತ್ತದೆ. ಸರಿಯಾದ ಆಹಾರದ ಜೊತೆಜೊತೆಗೇ, ಪುದಿನ ನೀರನ್ನು ಆಗಾಗ ಕುಡಿಯುವುದರಿಂದ ತೂಕ ಇಳಿಕೆಯ ಪ್ರಯತ್ನವನ್ನು ಮಾಡಬಹುದು.

ಇದನ್ನೂ ಓದಿ: Drinks for Summer: ಬೇಸಿಗೆಯಲ್ಲಿ ತಂಪಾಗಿರಬೇಕೆ? ಈ ಪೇಯಗಳನ್ನು ತಪ್ಪದೇ ಕುಡಿಯಿರಿ

ರೋಗ ನಿರೋಧಕ ಶಕ್ತಿ

ಪುದಿನದಲ್ಲಿರುವ ಇನ್ನೊಂದು ಅತ್ಯಂತ ಅಮೂಲ್ಯವಾದ ಶಕ್ತಿ ಎಂದರೆ ಅದರಲ್ಲಿರುವ ರೋಗ ನಿರೋಧಕ ಶಕ್ತಿ. ಪುದಿನ ನೀರನ್ನು ಆಗಾಗ ಕುಡಿಯುತ್ತಿರುವುದರಿಂದ ನಾವು ಸೇವಿಸುವ ಆಹಾರದಲ್ಲಿರುವ ಎಲ್ಲ ಪೋಷಕಾಂಶಗಳೂ ದೇಹದಲ್ಲಿ ಹೀರಲ್ಪಟ್ಟು ದೇಹದ ಆರೋಗ್ಯ ವೃದ್ಧಿಯಾಗುತ್ತದೆ. ಜೊತೆಗೆ ಪುದಿನದಲ್ಲಿ ಆಂಟಿ ಇನ್ಫ್ಲಮೇಟರಿ ಗುಣಗಳು ಇರುವುದರಿಂದ ದೇಹಕ್ಕೆ ಎಲ್ಲ ವಿಧದಲ್ಲೂ ಇದು ಸಹಾಯ ಮಾಡುತ್ತದೆ. ಜೊತೆಗೆ ರೋಗನಿರೋಧಕ ಶಕ್ತಿಯೂ ವೃದ್ಧಿಯಾಗುತ್ತದೆ.

Skin Care

ಚರ್ಮದ ಆರೋಗ್ಯಕ್ಕೆ ಒಳ್ಳೆಯದು

ಪುದಿನ ಚರ್ಮದ ಆರೋಗ್ಯಕ್ಕೆ ಅತ್ಯಂತ ಒಳ್ಳೆಯದು. ಚರ್ಮದ ರಂಧ್ರಗಳನ್ನು ಬಿಗಿಯಾಗಿಸಲು, ಚರ್ಮಕ್ಕೆ ಸರಿಯಾದ ಪ್ರಮಾಣದಲ್ಲಿ ನೀರು ಪೂರೈಸಲು, ಪುದಿನ ಬಹಳ ಒಳ್ಳೆಯದು. ಪುದಿನದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಆಂಟಿ ಆಕ್ಸಿಡೆಂಟ್‌ಗಳು ಇರುವುದರಿಂದ ಚರ್ಮದ ಯಾವುದೇ ಸಮಸ್ಯೆಗಳಿದ್ದರೂ ಉತ್ತರ ನೀಡುತ್ತದೆ. ಮೊಡವೆ, ಕಜ್ಜಿಗಳು, ಬೆವರು ಸಾಲೆ, ಚರ್ಮದ ಸುಕ್ಕು, ನಿರಿಗೆಗಳು, ಒಣಕಕಲು ಚರ್ಮ, ಎಣ್ಣೆಯುಕ್ತ ಚರ್ಮ, ಕಪ್ಪು ಕಲೆ ಇತ್ಯಾದಿ ಇತ್ಯಾದಿ ಮುಖದ ಚರ್ಮದ ಸಮಸ್ಯೆಗಳೂ ಕೂಡಾ ಪುದಿನ ನೀರು ಕುಡಿಯುವುದರಿಂದ ಪರಿಹಾರ ಪಡೆಯುತ್ತದೆ.

Continue Reading
Advertisement
Dina Bhavishya
ಭವಿಷ್ಯ8 mins ago

Dina Bhavishya : ಈ ರಾಶಿಯವರಿಗೆ ಇಂದು ಆಪ್ತರಿಂದಲೇ ಸಮಸ್ಯೆ; ದಿನದ ಕೊನೆಯಲ್ಲಿ ಕೌಟುಂಬಿಕ ಕಲಹ

Snake
ಕರ್ನಾಟಕ5 hours ago

Snake: ಸ್ಟ್ಯಾಂಡ್‌ನಲ್ಲಿಟ್ಟಿದ್ದ ಚಪ್ಪಲಿಯೊಳಗೆ ಕೂತಿದ್ದ ಬುಸ್‌ ಬುಸ್‌ ನಾಗಪ್ಪ; ಸ್ವಲ್ಪ ಹುಷಾರಾಗಿರ‍್ರಪ್ಪ! Video ಇಲ್ಲಿದೆ

Varanasi
ದೇಶ6 hours ago

Varanasi: ಮೋದಿ ಕುರಿತು ವಾರಾಣಸಿಯಲ್ಲಿರುವ ಕನ್ನಡಿಗರು ಏನಂತಾರೆ? ಇಲ್ಲಿದೆ ‘ವಿಸ್ತಾರ ನ್ಯೂಸ್’ ಗ್ರೌಂಡ್‌ ರಿಪೋರ್ಟ್!

Virat kohli
ಕ್ರೀಡೆ6 hours ago

Virat Kohli : ಐಪಿಎಲ್​ 2024ರ ಆರೆಂಜ್ ಕ್ಯಾಪ್ ಗೆದ್ದು ಹೊಸ ದಾಖಲೆ ಬರೆದ ವಿರಾಟ್​ ಕೊಹ್ಲಿ

IPL 2024 Final
ಪ್ರಮುಖ ಸುದ್ದಿ7 hours ago

IPL 2024 Final : 3ನೇ ಬಾರಿ ಐಪಿಎಲ್ ಚಾಂಪಿಯನ್ ಪಟ್ಟಕ್ಕೇರಿದ ಕೆಕೆಆರ್​​; ಹೈದರಾಬಾದ್​ಗೆ ನಿರಾಸೆ

The Kapil Sharma Show
ದೇಶ7 hours ago

Physical Abuse: ಕಪಿಲ್‌ ಶರ್ಮಾ ಶೋನಲ್ಲಿ ಪಾತ್ರ ಕೊಡುವುದಾಗಿ ನಂಬಿಸಿ ಮಹಿಳೆ ಮೇಲೆ ಅತ್ಯಾಚಾರ

IPL 2024
ಕ್ರೀಡೆ7 hours ago

IPL 2024 Final : ಐಪಿಎಲ್ ಫೈನಲ್​​ನಲ್ಲಿ ಕಡಿಮೆ ಸ್ಕೋರ್​ನ ಕಳಪೆ ದಾಖಲೆ ಬರೆದ ಸನ್​ರೈಸರ್ಸ್​ ಹೈದರಾಬಾದ್​​

Hardik Pandya
ಕ್ರೀಡೆ8 hours ago

Hardik Pandya : ಡೈವೋರ್ಸ್​ ಗಾಸಿಪ್​ ನಡುವೆ ಹಾರ್ದಿಕ್ ಪಾಂಡ್ಯ ನಾಪತ್ತೆ!

Rain News
ಕರ್ನಾಟಕ8 hours ago

Rain News: ಮಳೆ ಅವಾಂತರ; ಮನೆಯ ಶೀಟ್‌ ಮೇಲಿದ್ದ ಕಲ್ಲು ಬಿದ್ದು ಬಾಲಕಿ ಸಾವು

Phalody Satta Bazar
ದೇಶ8 hours ago

Phalodi Satta Bazar: ಮೋದಿಗೆ 330 ಸೀಟು ಖಚಿತ ಎಂದ ಸಟ್ಟಾ ಬಜಾರ್‌ ಸಮೀಕ್ಷೆ; ರಾಜ್ಯವಾರು ವರದಿ ಇಲ್ಲಿದೆ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ11 hours ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು12 hours ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ2 days ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ4 days ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ5 days ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ5 days ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು6 days ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

Contaminated Water
ಮೈಸೂರು6 days ago

Contaminated Water : ಡಿ ಸಾಲುಂಡಿಯಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ ಯುವಕ ಸಾವು

Karnataka Rain
ಮಳೆ7 days ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

Karnataka Rain
ಮಳೆ1 week ago

Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

ಟ್ರೆಂಡಿಂಗ್‌