Personality test | ಈ 10 ಅಭ್ಯಾಸಗಳು ನಿಮ್ಮ ವ್ಯಕ್ತಿತ್ವವನ್ನು ಇನ್ನೊಬ್ಬರ ಮುಂದೆ ಬಿಚ್ಚಿಡುತ್ತವೆ! - Vistara News

ಲೈಫ್‌ಸ್ಟೈಲ್

Personality test | ಈ 10 ಅಭ್ಯಾಸಗಳು ನಿಮ್ಮ ವ್ಯಕ್ತಿತ್ವವನ್ನು ಇನ್ನೊಬ್ಬರ ಮುಂದೆ ಬಿಚ್ಚಿಡುತ್ತವೆ!

‌ನಿಮ್ಮ ಕೆಲವು ವರ್ತನೆಗಳು ನಿಮ್ಮ ಪರ್ಸನಾಲಿಟಿ ಏನು ಎಂಬುದನ್ನು ಅನ್ಯರ ಮುಂದೆ ಬಹು ಸುಲಭವಾಗಿ ಬಿಚ್ಚಿಡುತ್ತವೆ. so, watch them.

VISTARANEWS.COM


on

personality signs
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ

ಯಾರೇ ಒಬ್ಬರನ್ನು ಇಷ್ಟವಾಗಲು/ಆಗದಿರಲು ಮೊದಲ ಭೇಟಿ ಸಾಕು ಎಂಬೊಂದು ಹಳೆಯ ಮಾತಿದೆ. ಬಹಳಷ್ಟು ಸಾರಿ ನಮ್ಮ ಬಗ್ಗೆ ಬೇರೆಯವರು ಏನು ತಿಳಿದುಕೊಳ್ಳುತ್ತಾರೆ ಎಂದು ಯೋಚಿಸುವುದರಲ್ಲೇ ನಮ್ಮ ಬಹಳಷ್ಟು ಸಮಯ ಪೋಲಾಗುತ್ತದೆ. ಸೂಕ್ಷ್ಮವಾಗಿ ಗಮನಿಸಿದರೆ ನಮ್ಮ ಹಲವು ಅಭ್ಯಾಸಗಳು ಕೂಡಾ ನಮ್ಮ ವ್ಯಕ್ತಿತ್ವಕ್ಕೆ ಕನ್ನಡಿ ಹಿಡಿಯುತ್ತದೆ. ಆದರೆ, ಇಂತಹ ಸಣ್ಣ ಸಣ್ಣ ಸೂಕ್ಷ್ಮಗಳನ್ನು ಗಮನಿಸದೆ, ಮತ್ತೊಬ್ಬರ ಮೇಲೆ ನಮ್ಮ ಬಗ್ಗೆ ಒಳ್ಳೆಯ ಅಭಿಪ್ರಾಯ ಮೂಡಿಸಲು ಅನವಶ್ಯಕ ತಲೆಬಿಸಿ ಮಾಡಿಕೊಳ್ಳುತ್ತೇವೆ. ಹಾಗಾಗಿ ನಮ್ಮ ವ್ಯಕ್ತಿತ್ವದ ಸುಳಿವನ್ನು ಬಿಚ್ಚಿಡುವ ಸಣ್ಣ ಸಣ್ಣ ಅಭ್ಯಾಸಗಳು ಯಾವುವು ಎಂದು ನೋಡೋಣ.

೧. ಎಲ್ಲರ ಜೊತೆಗೆ ಕೂತು ಉಣ್ಣುವಾಗ ನಾವು ಹೇಗೆ ಉಣ್ಣುತ್ತೇವೆ ಎಂಬ ಬಗ್ಗೆ ಎಂದಾದರೂ ತಲೆ ಕೆಡಿಸಿಕೊಂಡಿದ್ದೀರಾ? ಇದರಲ್ಲೂ ನಿಮ್ಮ ವ್ಯಕ್ತಿತ್ವದ ಸಣ್ಣ ಸುಳಿವು ಇತರರಿಗೆ ಸಿಗುತ್ತದೆ. ನಿಧಾನವಾಗಿ ತಾಳ್ಮೆಯಿಂದ ಊಟ ಮಾಡುವ ಮಂದಿ ಪ್ರತಿಯೊಂದರಲ್ಲೂ ತುಂಬ ನಿಯಂತ್ರಣ ಹೊಂದಿದವರಾಗಿಯೂ, ಬೇಗ ಬೇಗನೆ ಗಬಗಬ ಉಂಡು ಮುಗಿಸುವ ಮಂದಿ ಮಹತ್ವಾಕಾಂಕ್ಷಿಗಳೂ, ಗುರಿಯ ಬಗ್ಗೆ ಹೆಚ್ಚು ಪೋಕಸ್ಡ್‌ ಆಗಿರುವವರಾಗಿಯೂ ಇರುತ್ತಾರೆ. ಸಿಕ್ಕಸಿಕ್ಕಲ್ಲಿ ಹೊಸತನ್ನು ಟ್ರೈ ಮಾಡುವ ಆಹಾರದ ವಿಷಯದಲ್ಲಿ ಸಾಹಸೀ ಪ್ರವೃತ್ತಿಯ ಮಂದಿ ಜೀವನದಲ್ಲಿ ತಮ್ಮ ಕಂಫರ್ಟ್‌ ಝೋನ್‌ನಿಂದ ಹೊರಗೆ ಬಂದು ಪ್ರತಿಯೊಂದನ್ನೂ ಸೊಗಸಾಗಿ ಅನುಭವಿಸುವವರು ಹಾಗೂ, ಏನು ಉಂಡರೂ ಅದರಲ್ಲಿ ಬೇಡಗಳ ದೊಡ್ಡ ಪಟ್ಟಿಯೇ ಇರುವ ತುಂಬ ಚ್ಯೂಸಿ ಮಂದಿ ಸದಾ ಚಿಂತೆಯಲ್ಲಿ ಮುಳುಗಿರುವವರು ಎಂದು ಅರ್ಥವಂತೆ.

೨. ನಿಮ್ಮ ಹ್ಯಾಂಡ್‌ಶೇಕ್‌ ಕೂಡಾ ನಿಮ್ಮ ವ್ಯಕ್ತಿತ್ವವನ್ನು ನಿರ್ಧರಿಸುತ್ತದೆ. ಸಾಮಾನ್ಯವಾಗಿ ಮೊದಲ ಭೇಟಿಯಲ್ಲಿ ಮುಖ್ಯವಾಗುವುದು ಇವೇ ಸಣ್ಣಪುಟ್ಟ ಸಂಗತಿಗಳು. ನೀವು ಎದುರಿಗಿನ ವ್ಯಕ್ತಿಯ ಕೈಯನ್ನು ಗಟ್ಟಿಯಾಗಿ ಹಿಡಿದು ಹ್ಯಾಂಡ್‌ಶೇಕ್‌ ಮಾಡುತ್ತೀರಿ ಎಂದಾದಲ್ಲಿ ನಿಮಗೆ ಓಪನ್‌ ಮೈಂಡೆಡ್‌ ಹಾಗೂ ಆತ್ಮವಿಶ್ವಾಸಿ ಎಂಬರ್ಥ ಬರುತ್ತದೆ. ಬೇಕೋ, ಬೇಡವೋ ಎಂದು ಸಡಿಲಾಗಿ ಹಿಡಿದು ಹ್ಯಾಂಡ್‌ಶೇಕ್‌ ಮಾಡಿದಲ್ಲಿ ನೀವೊಬ್ಬ ನಾಚಿಕೆ ಸ್ವಭಾವದ, ಅಂತರ್ಮುಖಿ ಹಾಗೂ ಬಹಳ ಚಿಂತೆ ಮಾಡುತ್ತಿರುವ ಗುಣವುಳ್ಳದವರು ಎಂದರ್ಥ. ನೀವು ಮತ್ತೊಬ್ಬರ ಕೈಯನ್ನು ಹಿಡಿದು ಶೇಕ್‌ ಮಾಡುವ ಹಿಡಿತ, ಬಿಗಿತ, ಕೈಯ ಉಷ್ಣತೆ, ಶುಷ್ಕತೆ, ಅವಧಿ, ಸ್ಪರ್ಷದ ನವಿರುತನ ಎಲ್ಲವೂ ಇಲ್ಲಿ ಮುಖ್ಯವಾಗುತ್ತದೆ.

೩. ನಿಮಗೆ ಉಗುರು ಕಚ್ಚುವ ಅಭ್ಯಾಸವಿದೆಯೇ? ಹಾಗಾದರೆ ಇಲ್ಲಿ ಕೇಳಿ. ಉಗುರು ಕಚ್ಚುವ, ಚರ್ಮ ಕೀಳುವ ಹಾಗೂ ಕೂದಲು ಕೀಳುವ ಅಭ್ಯಾಸವಿರುವ ಮಂದಿ ಬಹಳ ಪರ್ಫೆಕ್ಷನಿಸ್ಟ್‌ಗಳಂತೆ!

೪. ಹೇಳಿದ ಸಮಯಕ್ಕಿಂತ ತಡ ಮಾಡುವ, ತಡವಾಗಿ ತಲುಪುವ, ಕೆಲಸ ಮುಗಿಸುವ ಮಂದಿಯೂ ಪರ್ಫೆಕ್ಷನಿಸ್ಟ್‌ಗಳಂತೆ. ಅವರು ಪರ್ಫೆಕ್ಟ್‌ ಆಗಿ ಕೆಲಸ ಮಾಡುವ ಭರದಲ್ಲಿ ತಡವಾಗುವ ಸಂಭವ ಹೆಚ್ಚಂತೆ.

೫. ನಿಮ್ಮ ಫೋನ್‌ ಎಷ್ಟು ಬಾರಿ ಚೆಕ್‌ ಮಾಡುತ್ತಿರುತ್ತೀರಿ ಎಂಬುದೂ ಕೂಡಾ ನಿಮ್ಮ ಅಳತೆಗೋಲಂತೆ. ಆಗಾಗ ಫೋನ್‌ ಚೆಕ್‌ ಮಾಡುವವರು ಮಾನಸಿಕವಾಗಿ ಸ್ವಲ್ಪ ವೀಕ್‌ ಹಾಗೂ ಅವರು ತಮ್ಮ ಮೂಡ್‌ ಸುಧಾರಿಸಿಕೊಳ್ಳಲು ಆಸಕ್ತಿಕರವೇನಾದರೂ ಸಿಗುತ್ತದೋ ಎಂದು ಆಗಾಗ ನೋಡುತ್ತಿರುತ್ತಾರಂತೆ.

ಇದನ್ನೂ ಓದಿ | International fashion day | ಭಾರತೀಯ ಟಾಪ್ ಫ್ಯಾಷನ್ ವಿನ್ಯಾಸಕರು

೬. ಐ ಕಾಂಟಾಕ್ಟ್‌ ಕೂಡಾ ವ್ಯಕ್ತಿತ್ವವನ್ನು ಬಿಚ್ಚಿಡುತ್ತದೆ. ನೀವು ಧೈರ್ಯವಾಗಿ ನಿಮ್ಮ ಎದುರಿಗಿರುವ ವ್ಯಕ್ತಿಯೊಂದಿಗೆ ಐ ಕಾಂಟಾಕ್ಟ್‌ ಮಾಡಬಲ್ಲಿರೆಂದರೆ ನೀವು ಆತ್ಮವಿಶ್ವಾಸಿಗಳು. ಅಂತರ್ಮುಖಿಗಳು, ನಾಚಿಕೆಯ ಸ್ವಭಾವದ ಮಂದಿ, ಹಿಂಜರಿಕೆಯ ಗುಣದ ಮಂದಿ ಎದುರಿಗಿರುವ ವ್ಯಕ್ತಿಯ ಕಣ್ಣನ್ನು ನೋಡಿ ಮಾತನಾಡುವುದಿಲ್ಲ. ಆಗಾಗ ದೃಷ್ಟಿ ಬದಲಾಯಿಸುತ್ತಿರುತ್ತಾರೆ.

೭. ಸಂಗೀತದ ಆಸಕ್ತಿಯ ಮೇಲೂ ವ್ಯಕ್ತಿತ್ವ ನಿರ್ಧರಿಸಬಹುದು. ಮಧುರವಾದ ಸಂಗೀತ ಕೇಳಬಯಸುವವರು ಭಾವನಾತ್ಮಕ ವ್ಯಕ್ತಿಗಳೆಂದು, ಕೊಂಚ ಆಳವಾದ ಹಾಗೂ ಸಂಕೀರ್ಣವಾದ ಹಾಡುಗಳನ್ನು ಕೇಳಬಯಸುವ ಮಂದಿ ವಿವೇಕಶಾಲಿಗಳೆಂದೂ ಅರ್ಥವಂತೆ.

೮. ನಾಯಿ ಹಾಗೂ ಬೆಕ್ಕುಗಳನ್ನು ಇಷ್ಟಪಡುವ ಆಧಾರದಲ್ಲೂ ವ್ಯಕ್ತಿತ್ವ ನಿರ್ಧರಿಸಲಾಗುತ್ತದಂತೆ. ನಾಯಿಯನ್ನು ಇಷ್ಟಪಡುವ ಮಂದಿ ಹೆಚ್ಚು ಸದಾ ಚುರುಕಾಗಿರುವ ಹಾಗೂ ತಿರುಗಾಡ ಬಯಸುವವರೆಂದೂ, ಬೆಕ್ಕನ್ನು ಇಷ್ಟಪಡುವ ಮಂದಿ ಸ್ವಲ್ಪ ಸೆನ್ಸಿಟಿವ್‌ ಹಾಗೂ ಅಂತರ್ಮುಖಿಗಳು ಆದರೆ ಬುದ್ಧಿವಂತರು ಎಂದು ಅಂದಾಜಿಸಲಾಗುತ್ತದೆಯಂತೆ.

ಇದನ್ನೂ ಓದಿ | Motivational story | ಗುಜರಿಯಲ್ಲಿ ಬಿದ್ದ ಕಬ್ಬಿಣ ತುಂಡಿನ ಬೆಲೆಯೇ ಬೇರೆ, ಅದನ್ನೇ ಬಳಸಿ ಮಾಡಿದ ಮೂರ್ತಿ ಬೆಲೆಯೇ ಬೇರೆ!

೯. ಹಸ್ತಾಕ್ಷರದ ಮೇಲೂ ವ್ಯಕ್ತಿತ್ವ ನಿರ್ಧಾರ ಮಾಡಬಹುದು. ಚಿಕ್ಕ ಚಿಕ್ಕ ಅಕ್ಷರ ಹೊಂದಿರುವ ಮಂದಿ ಸ್ವಲ್ಪ ಅಂತರ್ಮುಖಿಗಳೆಂದೂ ದೊಡ್ಡ ಅಕ್ಷರದ ಮಂದಿ ಹೆಚ್ಚು ಜನರ ಜೊತೆ ಬೆರೆಯಲು ಇಷ್ಟಪಡುವ ಮಂದಿ ಎಂದು ಅಳೆಯಲಾಗುತ್ತದೆ. ವಾಲಿದಂತೆ ಬರೆವ ಮಂದಿ ಫ್ರೆಂಡ್ಲೀ ಹಾಗೂ ಸೆಂಟಿಮೆಂಟ್‌ಗಳು, ನೇರವಾಗಿ ಬರೆವ ಮಂದಿ ವ್ಯವಹಾರ ಚತುರರು ಹಾಗೂ ಎಡಕ್ಕೆ ವಾಲಿದಂತೆ ಬರೆವ ಮಂದಿ ಎಚ್ಚು ಆತ್ಮಾವಲೋಕನ ಮಾಡುವ ಮಂದಿ ಎನ್ನಲಾಗುತ್ತದೆ.

೧೦. ಹೊಟೇಲಿನಲ್ಲಿ ಸರ್ವರ್‌ ಜೊತೆ ಹೇಗೆ ನಡೆದುಕೊಳ್ಳುತ್ತೇವೆ ಎಂಬುದರ ಮೇಲೂ ನಮ್ಮ ವ್ಯಕ್ತಿತ್ವ ನಿರ್ಧಾರವಾಗುತ್ತದಂತೆ. ಸಾಮಾನ್ಯವಾಗಿ ಸರ್ವರ್‌ ಜೊತೆಗೆ ಕೆಟ್ಟದಾಗಿ ವರ್ತಿಸುವ, ಬೈಯುವ ಮಂದಿ ನಿಜ ಜೀವನದಲ್ಲೂ ಬಹಳ ಒರಟರು ಎಂದು ಹೇಳಲಾಗುತ್ತದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ

ದೇಶ

ದೇಶದ ಪ್ರಧಾನಿಗೆ ಕೈಯಾರ ಚುರುಮುರಿ ಕೊಟ್ಟರೂ ಇಲ್ಲ ಖುಷಿ! ಆ ತಪ್ಪು ಮಾಡಬಾರದಿತ್ತು ಅಂದ ವ್ಯಾಪಾರಿ

VISTARANEWS.COM


on

ಪಶ್ಚಿಮ ಬಂಗಾಳದ ಜಾರ್ಗ್ರಾಮ್‌ನಲ್ಲಿ ಚುರುಮುರಿ (ಝಲ್ಮುರಿ) ವ್ಯಾಪಾರ ಮಾಡುವ ವಿಕ್ರಮ್ ಶಾ ಅವರ ಬದುಕಿನಲ್ಲಿ ಮರೆಯಲಾಗದ ಘಟನೆಯೊಂದು ನಡೆದಿದೆ. ಚುನಾವಣಾ ಪ್ರಚಾರದ ನಡುವೆ ಪ್ರಧಾನಿ ನರೇಂದ್ರ ಮೋದಿ ಅವರು ಅಚಾನಕ್ಕಾಗಿ ವಿಕ್ರಮ್ ಅವರ ಪುಟ್ಟ ಅಂಗಡಿಯ ಮುಂದೆ ಬಂದು ನಿಂತಿದ್ದರು. ದೇಶದ ಪ್ರಧಾನಿಯೇ ತಮ್ಮ ಅಂಗಡಿಗೆ ಬಂದಿದ್ದನ್ನು ಕಂಡು ವಿಕ್ರಮ್ ಮೊದಲು ಗಾಬರಿಯಾದರೂ, ಮೋದಿ ಅವರು ಅತ್ಯಂತ ಸರಳವಾಗಿ ಮಾತುಕತೆ ನಡೆಸಿ ವಿಕ್ರಮ್ ಕೈಯಾರೆ ಸಿದ್ಧಪಡಿಸಿದ ಚುರುಮುರಿಯನ್ನು ಇಷ್ಟಪಟ್ಟು ಸವಿದರು.

ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ಕೇವಲ ವಿಕ್ರಮ್ ಕೊಟ್ಟ ತಿಂಡಿ ತಿಂದಿದ್ದಲ್ಲದೇ ಅವರ ಕುಟುಂಬ ಮತ್ತು ಜೀವನದ ಬಗ್ಗೆಯೂ ವಿಚಾರಿಸಿದರು. ಬಡತನದ ಕಾರಣ 9ನೇ ತರಗತಿಗೆ ಓದು ಬಿಟ್ಟಿದ್ದ ವಿಕ್ರಮ್, ಪ್ರಧಾನಿಯವರ ಆತ್ಮೀಯತೆಗೆ ಮನಸೋತರು. ತಿಂಡಿ ತಿಂದ ನಂತರ ಮೋದಿ ಅವರು ಹಠ ಹಿಡಿದು ಹಣ ಪಾವತಿಸಿ ವಿಕ್ರಮ್ ಅವರ ಪ್ರಾಮಾಣಿಕತೆಯನ್ನು ಮೆಚ್ಚಿಕೊಂಡರು. ಪ್ರಧಾನಿಯವರ ಈ ಸರಳತೆಯನ್ನು ಕಂಡು ಅಲ್ಲಿದ್ದ ಜನಸಮೂಹ ಚಪ್ಪಾಳೆ ತಟ್ಟಿ ಸಂಭ್ರಮಿಸಿತು.

ಆದರೆ, ಈ ಇಡೀ ಘಟನೆಯಲ್ಲಿ ವಿಕ್ರಮ್ ಶಾ ಅವರಿಗೆ ಒಂದು ಸಣ್ಣ ವಿಷಾದ ಉಳಿದುಬಿಟ್ಟಿದೆ. ಪ್ರಧಾನಿ ತಮ್ಮ ಮುಂದೆಯೇ ಅಷ್ಟು ಹೊತ್ತು ನಿಂತಿದ್ದರೂ, ಆತಂಕದ ನಡುವೆ ಅವರಿಂದ ಒಂದು ಹಸ್ತಾಕ್ಷರ (Autograph) ಪಡೆಯಲು ಅವರಿಗೆ ಸಾಧ್ಯವಾಗಲಿಲ್ಲ. “ಒಂದು ವೇಳೆ ನಾನು ಅವರ ಸಹಿ ಕೇಳಿದ್ದರೆ ಅದು ನನ್ನ ಜೀವನದ ದೊಡ್ಡ ಆಸ್ತಿಯಾಗಿರುತ್ತಿತ್ತು” ಎಂದು ವಿಕ್ರಮ್ ಈಗ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಆದರೂ, ದೇಶದ ಪ್ರಧಾನಿ ತಮ್ಮ ಅಂಗಡಿಗೆ ಬಂದು ಚುರುಮುರಿ ತಿಂದ ಆ ಕ್ಷಣಗಳು ಮಾತ್ರ ವಿಕ್ರಮ್ ಅವರ ಬದುಕಿನ ಸುವರ್ಣ ನೆನಪಾಗಿ ಉಳಿದಿವೆ.

Continue Reading

ಬೆಂಗಳೂರು

Bengaluru News : 5 ವರ್ಷದಿಂದ ವ್ಯಕ್ತಿಯ ಹೊಟ್ಟೆಯೊಳಗಿತ್ತು ಮೀನಿನ ಮೂಳೆ!

ಐದು ವರ್ಷದಿಂದ ಹೊಟ್ಟೆಯಲ್ಲೇ ಇದ್ದ 2 ಸೆಂ.ಮೀ ಉದ್ದದ ಮೀನಿನ ಮೂಳೆಯನ್ನು ಯಶಸ್ವಿಯಾಗಿ ಹೊರತೆಗೆದ ಫೋರ್ಟಿಸ್‌ ಆಸ್ಪತ್ರೆ ವೈದ್ಯರ ತಂಡ

VISTARANEWS.COM


on

Doctors at Fortis Hospital remove fish bone from man's stomach for 5 years

ಬೆಂಗಳೂರು: ಕಳೆದ ಐದು ವರ್ಷದಿಂದ ಒಂದಿಲ್ಲೊಂದು ರೀತಿಯ ಹೊಟ್ಟೆ ನೋವಿನಿಂದ ಬಳಲುತ್ತಿದ್ದ 61 ವರ್ಷದ ವ್ಯಕ್ತಿಯ ಹೊಟ್ಟೆಯಿಂದ 2 ಸೆಂ.ಮೀ ಉದ್ದದ ಮೀನಿನ ಮೂಳೆಯನ್ನು ಬೆಂಗಳೂರಿನ (Bengaluru News) ಫೋರ್ಟಿಸ್‌ ಆಸ್ಪತ್ರೆ ವೈದ್ಯರ ತಂಡ ಯಶಸ್ವಿಯಾಗಿ ಹೊರತೆಗೆದಿದೆ.

ಈ ಕುರಿತು ಮಾತನಾಡಿದ ನಾಗರಭಾವಿ ಫೋರ್ಟಿಸ್ ಆಸ್ಪತ್ರೆಯ ಜೀರ್ಣಾಂಗವ್ಯೂಹದ ಶಸ್ತ್ರಚಿಕಿತ್ಸಾ ಸಮಾಲೋಚಕ ಡಾ. ಪ್ರಣವ್ ಹೊನ್ನಾವರ ಶ್ರೀನಿವಾಸನ್, 61 ವರ್ಷದ ರೋಗಿ ರಾಜೇಶ್ (ಹೆಸರು ಬದಲಾಯಿಸಲಾಗಿದೆ) ಎಂಬುವವರು ಐದು ವರ್ಷದ ಹಿಂದೆ ಮೀನು ಸೇವಿಸಿದ್ದರು. ಆಗ ಗಂಟಲಿನಲ್ಲಿ ಮೀನಿನ ಮೂಳೆ ಸಿಲುಕಿ, ಅದು ಹೊಟ್ಟೆ ಸೇರಿತ್ತು. ಬಳಿಕ ಅವರು ಖಾಸಗಿ ಆಸ್ಪತ್ರೆಯೊಂದರಲ್ಲಿ ಎಂಡೋಸ್ಕೋಪಿಕ್‌ ಕಾರ್ಯವಿಧಾನಕ್ಕೆ ಒಳಗಾಗುವ ಮೂಲಕ ಒಂದು ಮೂಳೆ ತೆಗೆಸಿಕೊಂಡಿದ್ದರು. ಮತ್ತೊಂದು ಮೂಳೆ ಇರುವುದು ಅವರಿಗೆ ತಿಳಿದಿರಲಿಲ್ಲ.

ಸಂಪೂರ್ಣ ಮೂಳೆ ತೆಗೆಯದ ಕಾರಣ, 2 ಸೆಂ.ಮೀ ಉದ್ದದ ಮೀನಿನ ಮೂಳೆ ಹೊಟ್ಟೆಯಲ್ಲೇ ಉಳಿದಿತ್ತು. ಇದು ಅವರ ಗಮನಕ್ಕೂ ಬಂದಿಲ್ಲ. ಇದಾಗಿ ಐದು ವರ್ಷ ಕಳೆದಿದೆ. ಐದು ವರ್ಷಗಳಿಂದಲೂ ಒಂದಲ್ಲ ಒಂದು ರೀತಿಯ ಹೊಟ್ಟೆನೋವು, ವಿವಿಧ ರೀತಿಯ ಅಸ್ವಸ್ಥತೆ ಅನುಭವಿಸುತ್ತಿದ್ದರು. ಆಸ್ಪತ್ರೆಗಳಿಗೆ ತೆರಳಿ ಪರೀಕ್ಷೆಗೆ ಒಳಗಾಗಿದ್ದರೂ ಈ ಮೂಳೆ ಕಾಣಿಸಿಕೊಂಡಿಲ್ಲ. ಈ ಮೂಳೆಯಿಂದ ಅವರ ಆರೋಗ್ಯ ಕ್ಷೀಣಿಸುತ್ತಾ ಹೊಟ್ಟೆ ನೋವು ಹೆಚ್ಚುತ್ತಲೇ ಹೋಗಿದೆ.

Doctors at Fortis Hospital remove fish bone from man's stomach for 5 years

ನಂತರ ಅವರು ಫೋರ್ಟಿಸ್‌ ಆಸ್ಪತ್ರೆಗೆ ದಾಖಲಾದರು. ಅವರ ಸಂಪೂರ್ಣ ತಪಾಸಣೆಯ ಬಳಿಕ ಓಮೆಂಟಮ್‌ನಲ್ಲಿ (ಕಿಬ್ಬೊಟ್ಟೆಯ ಅಂಗಗಳ ಸುತ್ತಲಿನ ಅಂಗಾಂಶದ ಪದರ) ಈ ಮೂಳೆ ಇರುವುದು ಕಂಡು ಬಂದಿತು. ಐದು ವರ್ಷಗಳ ಹಿಂದಿನಿಂದಲೂ ಈ ಮೂಳೆ ಒಂದಿಲ್ಲೊಂದು ರೀತಿಯಲ್ಲಿ ನೋವು ನೀಡುತ್ತಿರುವುದು ರೋಗಿಗೂ ಆಗಲೇ ತಿಳಿದಿದ್ದು. ಅವರಿಗೆ ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸಾ ವಿಧಾನದ ಮೂಲಕ ಮೂಳೆಯನ್ನು ತೆಗೆದು ಹಾಕಲಾಗಿದ್ದು, ರೋಗಿಯು ಚೇತರಿಸಿಕೊಳ್ಳುತ್ತಿದ್ದಾರೆ ಎಂದರು. ಈ ಶಸ್ತ್ರಚಿಕಿತ್ಸೆ ವೇಳೆ ಅವರಿಗೆ ಪಿತ್ತಕೋಶದ ಕಾಯಿಲೆ ಹಾಗೂ ಹೊಕ್ಕುಳಿನ ಅಂಡವಾಯು ಸಮಸ್ಯೆ ಇರುವುದು ತಿಳಿದು ಬಂತು. ಈ ಸಮಸ್ಯೆಗಳಿಗೂ ಚಿಕಿತ್ಸೆ ನೀಡಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

Continue Reading

ಬೆಂಗಳೂರು

Breast cancer: ಬೈಕಥಾನ್‌ ಮೂಲಕ ಗಲ್ಲಿ ಗಲ್ಲಿಯಲ್ಲೂ ಸ್ತನ ಕ್ಯಾನ್ಸರ್‌ ಜಾಗೃತಿ ಮೂಡಿಸಿದ ಬೈಕರ್ಸ್‌ಗಳು

Breast cancer : ಸ್ತನ ಕ್ಯಾನ್ಸರ್‌ ಜಾಗೃತಿ ಮಾಸದ ಅಂಗವಾಗಿ ಎಚ್‌ಸಿಜಿ ಕ್ಯಾನ್ಸರ್‌ ಸೆಂಟರ್‌ ವತಿಯಿಂದ ಬೈಕಥಾನ್‌ ಆಯೋಜನೆ ಮಾಡಲಾಗಿತ್ತು.

VISTARANEWS.COM


on

Breast Cancer Awareness Month celebrated through bikethon

ಬೆಂಗಳೂರು: ಸ್ತನಕ್ಯಾನ್ಸರ್‌ (Breast cancer) ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಬೆಂಗಳೂರು ಎಚ್‌ಸಿಜಿ ಕ್ಯಾನ್ಸರ್‌ ಸೆಂಟರ್‌ ವತಿಯಿಂದ ಪಿಂಕ್‌ ವುಮೆನ್ಸ್‌ ಶೀರ್ಷಿಕೆಯಡಿ ಬೈಕಥಾನ್‌ ಆಯೋಜಿಸಿತ್ತು. ಸ್ತನಕ್ಯಾನ್ಸರ್‌ ಜಾಗೃತಿ ಮಾಸದ ಅಂಗವಾಗಿ ನಡೆದ ಈ ಬೈಕಥಾನ್‌ ಕೆ.ಆರ್‌. ರಸ್ತೆಯ ಎಚ್‌ಸಿಜಿ ಕ್ಯಾನ್ಸರ್ ಕೇಂದ್ರದಿಂದ ಸೋಮವಾರ ಬೆಳಗ್ಗೆ 7 ಗಂಟೆಗೆ ಪ್ರಾರಂಭಗೊಂಡು, ಎಂ.ಜಿ. ರಸ್ತೆ, ಟ್ರಿನಿಟಿ ಸರ್ಕಲ್‌, ವಿಧಾನಸೌಧದ ಮುಂಭಾಗದಿಂದ ಹಾದು 10 ಕಿಲೋಮೀಟರ್ ದೂರದವರೆಗೆ ಸಾಗಿತು.

Breast Cancer Awareness Month celebrated through bikethon

180ಕ್ಕೂ ಹೆಚ್ಚು ಮಹಿಳಾ ಬೈಕರ್ಸ್‌ಗಳು ಈ ಬೈಕಥಾನ್‌ನಲ್ಲಿ ಪಾಲ್ಗೊಂಡು, ಸ್ತನಕ್ಯಾನ್ಸರ್‌ನ ಬಗ್ಗೆ ಹಾಗೂ ಆರಂಭಿಕ ತಪಾಸಣೆಗೆ ಆದ್ಯತೆ ನೀಡುವ ಕುರಿತು ಜಾಗೃತಿ ಮೂಡಿಸಿದರು. ಇದಷ್ಟೇ ಅಲ್ಲದೆ, ಬೈಕಥಾನ್‌ಗೂ ಮುನ್ನ, ಜುಂಬಾ ಸೆಷನ್‌, ಮೈಕಲ್‌ ಜಾಕ್ಸನ್‌ ಅವರ “ಡೇಂಜರಸ್‌” ಪ್ರೇರಿತಗೊಂಡ ಸ್ಟೆಪ್ಸ್‌ ಹಾಕುವ ಮೂಲಕ ಸ್ತನ ಕ್ಯಾನ್ಸರ್‌ ಆರಂಭಿಕ ಪತ್ತೆಯ ಬಗ್ಗೆ “ಬೀಟ್ ಇಟ್” ಶೀರ್ಷಿಕೆಯ ಫಲಕಗಳನ್ನು ಹಿಡಿದು ವಿಭಿನ್ನವಾಗಿ ಜಾಗೃತಿ ಮೂಡಿಸಿದರು.

ಎಚ್‌ಸಿಜಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮನೀಶಾ ಕುಮಾರ್, ಮೆಡಿಕಲ್‌ ಆಂಕೊಲಾಜಿಸ್ಟ್ ಡಾ. ರೋಶನಿ ದಾಸ್‌ಗುಪ್ತ, ಸರ್ಜಿಕಲ್ ಆಂಕೊಲಾಜಿಸ್ಟ್ ಡಾ ಮಹೇಶ್ ಬಂಡೇಮೆಗಲ್ ಈ ಬೈಕಥಾನ್‌ಗೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಮನೀಶಾ ಕುಮಾರ್, ಇತ್ತೀಚಿನ ದಿನಗಳಲ್ಲಿ ಮಹಿಳೆಯರಲ್ಲಿ ಹೆಚ್ಚಾಗಿ ಸ್ತನಕ್ಯಾನ್ಸರ್‌ ಕಾಡುತ್ತಿರುವುದು ಆತಂಕಕಾರಿ ಬೆಳವಣಿಗೆ. ಆರಂಭದಲ್ಲಿಯೇ ಈ ಕ್ಯಾನ್ಸರ್‌ನನ್ನು ಪತ್ತೆ ಹಚ್ಚಿದರೆ ಸುಲಭವಾಗಿ ಚಿಕಿತ್ಸೆ ಮೂಲಕ ಗುಣಪಡಿಸಬಹುದು. ನಾವಷ್ಟೇ ಜಾಗೃತರಾದೆ ಸಾಲದು, ನಮ್ಮ ಸುತ್ತಮುತ್ತ ಹಾಗೂ ಗ್ರಾಮೀಣ ಭಾಗದ ಮಹಿಳೆಯರಿಗೂ ಕೂಡ ಈ ಬಗ್ಗೆ ಅರಿವು ಮೂಡಿಸಬೇಕು. ಆಗಷ್ಟೇ ಎಲ್ಲರಿಗೂ ಸ್ತನಕ್ಯಾನ್ಸರ್‌ನ ಬಗ್ಗೆ ಜಾಗೃತಿ ಮೂಡಲಿದೆ. ಮಹಿಳಾ ಬೈಕರ್ಸ್‌ಗಳು ವಿಶೇಷವಾಗಿ ಬೈಕ್‌ ಸವಾರಿ ಮೂಲಕ ಈ ಬಗ್ಗೆ ಜಾಗೃತಿ ಮೂಡಿಸಿದ್ದು ಪ್ರಶಂಸನೀಯ ಎಂದರು.

ಮೆಡಿಕಲ್‌ ಆಂಕೊಲಾಜಿಸ್ಟ್ ಡಾ ರೋಶನಿ ದಾಸ್‌ಗುಪ್ತ ಮಾತನಾಡಿ, ಸ್ತನಕ್ಯಾನ್ಸರ್‌ ಬಗ್ಗೆ ಜಾಗೃತಿ ಮೂಡಿಸಿದಷ್ಟೂ ಈ ಬಗ್ಗೆ ಭಯಗೊಳ್ಳುವವರ ಸಂಖ್ಯೆಯೂ ಕಡಿಮೆಯಾಗಲಿದೆ. ಜನರು ಈ ಕ್ಯಾನ್ಸರ್‌ನ ಪ್ರಾರಂಭದಲ್ಲಿಯೇ ಪತ್ತೆ ಹಚ್ಚಿ, ಅದಕ್ಕೆ ಚಿಕಿತ್ಸೆ ಪಡೆದುಕೊಳ್ಳುವ ಮೂಲಕ ಈ ರೋಗದಿಂದ ಮುಕ್ತಿಗೊಂಡು ಎಂದಿನಂತೆ ಜೀವನ ನಡೆಸಬಹುದು, ಹೀಗಾಗಿ ಜನರು ಈ ಬಗ್ಗೆ ಹೆಚ್ಚು ಜಾಗೃತರಾಗುವುದು ಒಳಿತು ಎಂದು ಸಲಹೆ ನೀಡಿದರು.

ಸರ್ಜಿಕಲ್ ಆಂಕೊಲಾಜಿಸ್ಟ್ ಡಾ. ಮಹೇಶ್ ಬಂಡೇಮೆಗಲ್ ಮಾತನಾಡಿ, “ಸ್ತನ ಕ್ಯಾನ್ಸರ್ ಜಾಗೃತಿ ತಿಂಗಳಂದು ಪಿಂಕ್ ಮಹಿಳಾ ಬೈಕ್‌ಥಾನ್ 2024 ನಂತಹ ಕಾರ್ಯಕ್ರಮಗಳ ಮೂಲಕ ಜಾಗೃತಿ ಮೂಡಿಸುವ ಅವಶ್ಯಕತೆ ಹೆಚ್ಚಿದೆ. ಇದರಿಂದಲಾದರೂ ಮಹಿಳೆಯರು ಎಚ್ಚೆತ್ತುಕೊಳ್ಳುತ್ತಾರೆ ಎಂದು ಹೇಳಿದರು.

Continue Reading

ಬೆಂಗಳೂರು

Aplastic anemia : ಅತಿ ವಿರಳ ಅಪ್ಲ್ಯಾಸ್ಟಿಕ್‌ ರಕ್ತ ಹೀನತೆಯಿಂದ ಬಳಲುತ್ತಿದ್ದ ಆಫ್ರಿಕಾ ಮೂಲದ ಬಾಲಕನಿಗೆ ಯಶಸ್ವಿ ಶಸ್ತ್ರಚಿಕಿತ್ಸೆ

Aplastic anemia : ಆಫ್ರಿಕಾ ಮೂಲದ ಬಾಲಕ ಅಪ್ಲ್ಯಾಸ್ಟಿಕ್‌ ರಕ್ತ ಹೀನತೆಯಿಂದ ಬಳಲುತ್ತಿದ್ದ. ಆತನಿಗೆ ಬೆಂಗಳೂರಿನ ಫೋರ್ಟಿಸ್‌ ಆಸ್ಪತ್ರೆಯಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆ ನೀಡಿದೆ.

VISTARANEWS.COM


on

African boy successfully undergoes surgery for rare aplastic anemia
ಸಾಂದರ್ಭಿಕ ಚಿತ್ರ

ಬೆಂಗಳೂರು: ಅಸ್ಥಿಮಜ್ಜೆಯು ರಕ್ತಕಣಗಳನ್ನು ಉತ್ಪಾದಿಸುವಲ್ಲಿ ವಿಫಲವಾಗಿದ್ದ ಕಾರಣ ಅತಿ ವಿರಳ ಕಾಯಿಲೆಯಾದ ಅಪ್ಲ್ಯಾಸ್ಟಿಕ್ ರಕ್ತ ಹೀನತೆಯಿಂದ ಬಳಲುತ್ತಿದ್ದ 16 ವರ್ಷದ ಬಾಲಕನಿಗೆ ಬೆಂಗಳೂರಿನ ಫೋರ್ಟಿಸ್‌ ಆಸ್ಪತ್ರೆಯಲ್ಲಿ ಯಶಸ್ವಿ ಚಿಕಿತ್ಸೆ (Aplastic anemia) ನೀಡಲಾಗಿದೆ.

ಫೋರ್ಟಿಸ್ ಆಸ್ಪತ್ರೆಯ ಮೆಡಿಕಲ್‌ ಮತ್ತು ಹೆಮಟೋ ಆಂಕೊಲಾಜಿಯ ಹಿರಿಯ ನಿರ್ದೇಶಕಿ ಡಾ. ನೀತಿ ರೈಜಾದಾ, ಹೆಮಟೋ ಆಂಕೊಲಾಜಿ ಸಮಾಲೋಚಕ ಡಾ ನಿಶಿತ್ ಓಜ್ಹಾ, ಪೀಡಿಯಾಟ್ರಿಕ್ ಹೆಮಟೋ ಆಂಕೊಲಾಜಿಯ ಸಲಹೆಗಾರರಾದ ಡಾ ತನುಶ್ರೀ ಪಾಲ್ ಅವರ ವೈದ್ಯ ತಂಡ ಈ ಬಾಲಕನಿಗೆ ಸಮಯೋಚಿತವಾಗಿ ಶಸ್ತ್ರಚಿಕಿತ್ಸೆ ನಡೆಸುವ ಮೂಲಕ ಬಾಲಕನ ಜೀವ ಉಳಿಸಲಾಗಿದೆ.

ಈ ಕುರಿತು ಮಾತನಾಡಿದ ಡಾ. ನೀತಿ ರೈಜಾದಾ, ಆಫ್ರೀಕಾ ಮೂಲದ 16 ವರ್ಷದ ಮೈಕೆಲ್ ಎಂಬಾತನಿಗೆ ಕಳೆದ ಎರಡು ತಿಂಗಳಿನಿಂದ ತೀವ್ರವಾದ ಜ್ವರ, ಆಯಾಸ, ದೌರ್ಬಲ್ಯಗಳಿಂದ ಬಳಲುತ್ತಿದ್ದರು. ಅಷ್ಟೇ ಅಲ್ಲದೆ, ಆತನ ಬಲ ಕಿವಿಯಿಂದ ರಕ್ತಸ್ತ್ರಾವವಾಗಲು ಪ್ರಾರಂಭಗೊಂಡಿತ್ತು. ಇದರಿಂದ ಭಯಭೀತಗೊಂಡ ಅವರ ಕುಟುಂಬ ಆಫ್ರಿಕಾದಲ್ಲಿರುವ ಎಲ್ಲಾ ಆಸ್ಪತ್ರೆಗಳಿಗೆ ತೋರಿಸಿದರೂ, ಬಾಲಕನ ಆರೋಗ್ಯ ಸಮಸ್ಯೆ ಏನೆಂದು ತಿಳಿಯಲಿಲ್ಲ. ಹೀಗಾಗಿ ಅವರು ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯಲ್ಲಿನ ಫೋರ್ಟಿಸ್‌ ಆಸ್ಪತ್ರೆಗೆ ದಾಖಲಾದರು.

African boy successfully undergoes surgery for rare aplastic anemia

ಬಾಲಕನ ಸಂಪೂರ್ಣ ತಪಾಸಣೆ ಬಳಿಕ, ಆ ಬಾಲಕನಿಗೆ ಅತಿ ವಿರಳ ಅಪ್ಲ್ಯಾಸ್ಟಿಕ್‌ ರಕ್ತ ಹೀನತೆ ಆಗಿರುವುದು ತಿಳಿದುಬಂತು. ಇದು ಅಸ್ಥಿಮಜ್ಜೆಯು ರಕ್ತಕಣಗಳನ್ನು ಉತ್ಪಾದಿಸುವಲ್ಲಿ ವಿಫಲವಾದ ಕಾರಣ ಆ ಬಾಲಕ ರಕ್ತ ಹೀನತೆಗೆ ಒಳಗಾಗಿದ್ದ. ಹೀಗಾಗಿ ಆತನಿಗೆ ಹ್ಯಾಪ್ಲೋಡೆಂಟಿಕಲ್‌ ಸ್ಟೆಮ್‌ ಸೆಲ್‌ ಕಸಿ ಮಾಡುವ ಅವಶ್ಯಕತೆ ಅನಿವಾರ್ಯವಾಗಿತ್ತು. ಆದರೆ, ಬಾಲಕನ ರಕ್ತದ ಗುಂಪಿಗೆ ಹೊಂದುವಂತೆ ಸ್ಟೆಮ್‌ಸೆಲ್‌ ಸಿಗದೇ ಸಮಸ್ಯೆ ಎದುರಾಗಿತ್ತು.

ಈ ಮಧ್ಯೆ ಬಾಲಕನ ಹಿರಿಯ ಸಹೋದರಿಯೇ ತನ್ನ ತಮ್ಮನಿಗೆ ಹ್ಯಾಪ್ಲೊಂಡೆಂಟಿಕಲ್‌ ದಾನ ಮಾಡಲು ಮುಂದಾದರು. ಆದರೆ, ಬಾಲಕನಿಗೆ ಬಲಕಿವಿ ಸೋಂಕಿನಿಂದ ಸೋರುತ್ತಿದ್ದ ಕಾರಣ, ಮೊದಲು ಕಿವಿ ಶಸ್ತ್ರಚಿಕಿತ್ಸೆ ಮುಂದಾಗಬೇಕಾಯಿತು. ಬಾಲಕನ ಬಲ ಕಾರ್ಟಿಕಲ್‌ ಮಾಸ್ಟೊಡೆಕ್ಟಮಿ (ಕಿವಿ ಸುತ್ತ ಇರುವ ಸೋಂಕಿನ ಅಂಗಾಂಶ) ತೆಗೆದು ಹಾಕಿ ಶಸ್ತ್ರಚಿಕಿತ್ಸೆ ಮಾಡಲಾಯಿತು. ಇದಾದ ಬಳಿಕ ಬಾಲಕನಿಗೆ ಹ್ಯಾಪ್ಲೋಡೆಂಟಿಕಲ್‌ ಸ್ಟೆಮ್‌ ಸೆಲ್‌ ಕಸಿಯನ್ನು ಯಶಸ್ವಿಯಾಗಿ ನಡೆಸಲಾಯಿತು. ಇದೀಗ ಬಾಲಕ ಗುಣಮುಖರಾಗುತ್ತಿದ್ದಾನೆ ಎಂದು ವಿವರಿಸಿದರು.

Continue Reading
Advertisement
Latest15 hours ago

ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ ಬೆಲೆಯಲ್ಲಿ ಭಾರೀ ಏರಿಕೆ: ಒಂದೇ ದಿನ 993 ರೂ ಹೆಚ್ಚಳ

Latest1 day ago

ಜನಪ್ರಿಯತೆಯಲ್ಲಿ ಪ್ರಧಾನಿ ಮೋದಿ ಈಗಲೂ ನಂ.1

Latest1 day ago

ಕುರ್ಚಿ ಕದನಕ್ಕೆ ಹೊಸ ಟ್ವಿಸ್ಟ್ : ದಲಿತ ಸಿಎಂ ಕೂಗು ಜೋರು

Latest1 day ago

ಟಿವಿಕೆ-ಎನ್‌ಡಿಎ ಮೈತ್ರಿ?, ತಮಿಳುನಾಡಿನಲ್ಲಿ ಸಂಚಲನ, ಸ್ಟಾಲಿನ್‌ ಸಭೆ

Latest1 day ago

ಎಕ್ಸಿಟ್‌ ಪೋಲ್‌: ಅಸ್ಸಾಂ, ಪುದುಚೇರಿ ಪ.ಬಂಗಾಳದಲ್ಲಿ ಬಿಜೆಪಿ, ತ.ನಾಡಲ್ಲಿ ಡಿಎಂಕೆ, ಕೇರಳಂನಲ್ಲಿ ಯುಡಿಎಫ್‌

Latest1 day ago

ತಮಿಳುನಾಡಿನಲ್ಲಿ ದಳಪತಿಯೇ ಅಧಿಪತಿ? ಎಂಜಿಆರ್‌ ಆಗ್ತಾರಾ ವಿಜಯ್‌?

Latest2 days ago

ಪಂಚರಾಜ್ಯ ಚುನಾವಣಾ ಫಲಿತಾಂಶ: “ಎಕ್ಸಿಟ್ ಪೋಲ್‌ಗಿಂತ ಉತ್ತಮ ಪ್ರದರ್ಶನ ನಿರೀಕ್ಷೆ” – ಖರ್ಗೆ

Latest2 days ago

ರಾಜ್ಯದಲ್ಲಿ ನಾಯಕತ್ವ ಗೊಂದಲ: “ಸದ್ಯಕ್ಕೆ ಸಿಎಂ ಬದಲಾವಣೆ ಪ್ರಶ್ನೆಯೇ ಇಲ್ಲ” – ಖರ್ಗೆ ಸ್ಪಷ್ಟನೆ

Latest2 days ago

ಬೆಂಗಳೂರು ಸೇರಿದಂತೆ 18 ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್: ಇಂದು ಮತ್ತು ನಾಳೆ ಆಲಿಕಲ್ಲು ಮಳೆ ಸಾಧ್ಯತೆ

Latest2 days ago

ಬೌರಿಂಗ್‌ ಆಸ್ಪತ್ರೆ ಕಾಂಪೌಂಡ್‌ ಕುಸಿದು 7 ಮಂದಿ ಬಲಿ

galipata neetu
ಕಿರುತೆರೆ2 years ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ3 years ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ3 years ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ3 years ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Bigg Boss- Saregamapa 20 average TRP
ಕಿರುತೆರೆ3 years ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ3 years ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ3 years ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ2 years ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ3 years ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ2 years ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Action Prince Dhruva Sarja much awaited film Martin to hit the screens on October 11
ಸಿನಿಮಾ2 years ago

Martin Movie : ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಅಭಿನಯದ ಬಹು ನಿರೀಕ್ಷಿತ ʻಮಾರ್ಟಿನ್ʼ ಚಿತ್ರ ಅಕ್ಟೋಬರ್ 11ರಂದು ತೆರೆಗೆ

Sudeep's birthday location shift
ಸ್ಯಾಂಡಲ್ ವುಡ್2 years ago

Kichcha Sudeepa: ಸುದೀಪ್‌ ಬರ್ತ್‌ ಡೇ ಲೊಕೇಶನ್‌ ಶಿಫ್ಟ್; ದರ್ಶನ್‌ ಭೇಟಿಗೆ ಬಳ್ಳಾರಿ ಜೈಲಿಗೆ ಹೋಗ್ತಾರಾ ಕಿಚ್ಚ

Actor Darshan
ಸ್ಯಾಂಡಲ್ ವುಡ್2 years ago

Actor Darshan : ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದಿಂದ ದರ್ಶನ್‌ ಬಳ್ಳಾರಿಗೆ ಸ್ಥಳಾಂತರ; ಸೆಲ್‌ನಲ್ಲಿ ಏನೆಲ್ಲ ವ್ಯವಸ್ಥೆ ಇದೆ ಗೊತ್ತಾ?

ಮಳೆ2 years ago

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

karnataka Weather Forecast
ಮಳೆ2 years ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ2 years ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ2 years ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು2 years ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 years ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ2 years ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

ಟ್ರೆಂಡಿಂಗ್‌