ಇಂಗ್ಲೆಂಡಿನ ದಂಡಿ ವಿವಿಗೆ ಸಚಿವ ಅಶ್ವತ್ಥನಾರಾಯಣ ಭೇಟಿ - Vistara News

ಶಿಕ್ಷಣ

ಇಂಗ್ಲೆಂಡಿನ ದಂಡಿ ವಿವಿಗೆ ಸಚಿವ ಅಶ್ವತ್ಥನಾರಾಯಣ ಭೇಟಿ

ಜೀವವಿಜ್ಞಾನ ವಿಭಾಗವು ಹೊರಗಿನ ಮಾರುಕಟ್ಟೆಯಲ್ಲಿ ಕೈಗೊಳ್ಳುವ ವಾಣಿಜ್ಯ ಚಟುವಟಿಕೆಗಳ ಮೂಲಕ ಹಣಕಾಸು ಕ್ರೋಡೀಕರಣ ಮಾಡಬಹುದು ಎಂದು ದಂಡಿ ವಿವಿ ಪ್ರತಿನಿಧಿಗಳು ಭರವಸೆ ನೀಡಿದ್ದಾರೆ.

VISTARANEWS.COM


on

ದಂಡಿ ವಿ.ವಿ.
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಲಂಡನ್‌: ದಂಡಿ ವಿಶ್ವವಿದ್ಯಾಲಯದಲ್ಲಿ ಕರ್ನಾಟಕದ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕಾಗಿ ಹೇರಳ ಅವಕಾಶಗಳಿದ್ದು, ಮುಂದಿನ ದಿನಗಳಲ್ಲಿ ಒಡಂಬಡಿಕೆ ಬಗ್ಗೆ ಚಿಂತನೆ ನಡೆಸಲಾಗುತ್ತದೆ ಎಂದು ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್‌. ಅಶ್ವತ್ಥನಾರಾಯಣ ತಿಳಿಸಿದ್ದಾರೆ.

ಇಂಗ್ಲೆಂಡ್‌ನ ದಂಡಿ ವಿವಿಗೆ ತೆರಳಿ ಅಲ್ಲಿನ ಅಧಿಕಾರಿಗಳೊಂದಿಗೆ ಅಶ್ವತ್ಥನಾರಾಯಣ ಮಾತುಕತೆ ನಡೆಸಿದರು. ಈಗಾಗಲೇ ಸಿಂಗಪುರ ಮತ್ತು ಚೀನಾದೊಂದಿಗೆ ವಿವಿಯು ಸಹಭಾಗಿತ್ವ ಹೊಂದಿದೆ. ಇಲ್ಲಿನ ಬೋಧಕರು ಪ್ರತಿವರ್ಷ ಚೀನಾಗೆ ಹೋಗಿ ಬೋಧಿಸುತ್ತಿದ್ದಾರೆ. ಎರಡು ವರ್ಷಗಳ ಕಾಲ ಸ್ಥಳೀಯವಾಗಿ ಅಧ್ಯಯನ ಮಾಡುವ ವಿದ್ಯಾರ್ಥಿಗಳನ್ನು ನಂತರ ಇಂಗ್ಲೆಂಡಿನ ಕ್ಯಾಂಪಸ್ಸಿಗೇ ಕರೆಸಿಕೊಳ್ಳಲಾಗುವುದು ಎಂದು ವಿವಿ ಸಿಬ್ಬಂದಿ ಮಾಹಿತಿ ನೀಡಿದರು.

ಇದಕ್ಕೆ ಸ್ಪಂದಿಸಿದ ಸಚಿವರು, ಒಡಂಬಡಿಕೆಗೆ ಇರುವ ಸಾಧ್ಯತೆಗಳನ್ನು ಪರಿಶೀಲಿಸಿ, ಮುಂದಿನ ಹೆಜ್ಜೆ ಇಡಲಾಗುತ್ತದೆ. ದಂಡಿ ವಿವಿಯಲ್ಲಿ ದುಬಾರಿ ಮತ್ತು ಅತ್ಯಾಧುನಿಕ ಜೀವವಿಜ್ಞಾನ ಸಾಧನ-ಸಲಕರಣೆಗಳಿವೆ. ಇಲ್ಲಿ ಇಮೇಜ್ ಅನಾಲಿಸಿಸ್, ಡೇಟಾ ಕಮ್ಯುನಿಕೇಷನ್, ಸೈನ್ಸ್ ಕಮ್ಯುನಿಕೇಷನ್, ಡೇಟಾ ಸೈನ್ಸ್, ಮಷೀನ್‌ ಲರ್ನಿಂಗ್ ಕೋರ್ಸುಗಳಿವೆ. ಇದರಿಂದ ಕರ್ನಾಟಕದ ವಿದ್ಯಾರ್ಥಿಗಳ ಸಾಮರ್ಥ್ಯ ವೃದ್ಧಿಗೆ ಹೇರಳ ಅವಕಾಶಗಳು ಸಿಗಲಿವೆ. ಜತೆಗೆ, ನಾವು ಪದವಿ, ಸ್ನಾತಕೋತ್ತರ ಮತ್ತು ಪಿಎಚ್.ಡಿ. ಸಂಶೋಧನಾ ಕ್ರಮಗಳ ವಿನ್ಯಾಸವನ್ನೂ ಅಭಿವೃದ್ಧಿ ಪಡಿಸಿ ಕೊಡಲಿದ್ದೇವೆ ಎಂದರು.

ಕರ್ನಾಟಕ ಸರ್ಕಾರವು ಒಡಂಬಡಿಕೆ ಮಾಡಿಕೊಂಡರೆ, ವಿವಿ ವತಿಯಿಂದ ರಾಜ್ಯದಲ್ಲಿ ಅಧ್ಯಯನ ಮತ್ತು ಸಂಶೋಧನೆ ಕೈಗೊಳ್ಳಲು ಸಹಕಾರ ನೀಡಲಾಗುವುದು. ಇದಲ್ಲದೆ, ಜೀವವಿಜ್ಞಾನ ವಿಭಾಗವು ಹೊರಗಿನ ಮಾರುಕಟ್ಟೆಯಲ್ಲಿ ಕೈಗೊಳ್ಳುವ ವಾಣಿಜ್ಯ ಚಟುವಟಿಕೆಗಳ ಮೂಲಕ ಹಣಕಾಸು ಕ್ರೋಡೀಕರಣ ಮಾಡಬಹುದು ಎಂದು ದಂಡಿ ವಿವಿ ಪ್ರತಿನಿಧಿಗಳು ಭರವಸೆ ನೀಡಿದರು.

ಜೀವವಿಜ್ಞಾನ ಅಧ್ಯಯನ
ದಂಡಿ ವಿ.ವಿ

ನಮ್ಮ ತಂಡವು ಸೆಪ್ಟೆಂಬರಿನಲ್ಲಿ ಭಾರತಕ್ಕೆ ಭೇಟಿ ನೀಡಲಿದೆ. ಕರ್ನಾಟಕ ಸರ್ಕಾರ ಆಸಕ್ತಿ ವಹಿಸಿದರೆ ಜೀವವಿಜ್ಞಾನ ಅಧ್ಯಯನಕ್ಕೆ ಸಹಭಾಗಿತ್ವ ಹೊಂದಲು ಒಡಂಬಡಿಕೆಗೆ ಸಿದ್ಧರಿದ್ದೇವೆ. ಇಂತಹ ಕೇಂದ್ರಗಳನ್ನು ರಾಜ್ಯದ ಹಲವು ವಿವಿಗಳಲ್ಲಿ ತೆರೆಯಬಹುದು ಎಂದು ವಿವಿ ಪ್ರತಿನಿಧಿಗಳು ಹೇಳಿದರು.

ರಾಜ್ಯ ಸರಕಾರದ ನಿಯೋಗದಲ್ಲಿ ಸಚಿವರ ಜತೆಗೆ ಉನ್ನತ ಶಿಕ್ಷಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಿ.ಕುಮಾರ್ ನಾಯಕ್, ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಆಯುಕ್ತ ಪಿ.ಪ್ರದೀಪ್, ಡಾ.ಬಿ.ಆರ್ ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ವಿವಿ ಕುಲಪತಿ ಡಾ.ಭಾನುಮೂರ್ತಿ, ಉನ್ನತ ಶಿಕ್ಷಣ ಪರಿಷತ್ತಿನ ಗೋಪಾಲಕೃಷ್ಣ ಜೋಶಿ, ಆಡಳಿತಾಧಿಕಾರಿ ತಾಂಡವ ಗೌಡ ಇದ್ದರು.

ಇದನ್ನೂ ಓದಿ| ಕ್ರಾಂತಿಕಾರಕ ಬದಲಾವಣೆಗಾಗಿಯೇ ನೂತನ ಶಿಕ್ಷಣ ನೀತಿ: ನೃಪತುಂಗ ವಿವಿ ಉದ್ಘಾಟಿಸಿದ ಅಮಿತ್‌ ಷಾ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

PGCET 2024: ಪಿಜಿಸಿಇಟಿ 2024ಕ್ಕೆ ಮೇ 27ರಿಂದ ಅರ್ಜಿ ಸಲ್ಲಿಕೆ ಆರಂಭ; ಪರೀಕ್ಷೆ ಯಾವಾಗ, ಇಲ್ಲಿದೆ ವೇಳಾಪಟ್ಟಿ

PGCET 2024: ಪಿಜಿಸಿಇಟಿ 2024 ಪರೀಕ್ಷೆಗೆ ಮೇ 27ರಿಂದ ಜೂನ್ 17 ರವರೆಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಜೂನ್ 18 ಶುಲ್ಕ ಪಾವತಿಸಲು ಕೊನೆಯ ದಿನವಾಗಿದೆ.

VISTARANEWS.COM


on

PGCET 2024
Koo

ಬೆಂಗಳೂರು: 2024-25ನೇ ಸಾಲಿನ ಎಂಬಿಎ, ಎಂಸಿಎ, ಎಂ.ಟೆಕ್, ಎಂಇ, ಎಂ.ಆರ್ಕಿಟೆಕ್ಟರ್ ಸ್ನಾತಕೋತ್ತರ ಕೋರ್ಸ್‌ಗಳ ಪ್ರವೇಶಕ್ಕೆ ಸ್ನಾತಕೋತ್ತರ ಸಾಮಾನ್ಯ ಪ್ರವೇಶ ಪರೀಕ್ಷೆ (PGCET 2024) ನಡೆಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ದಿನಾಂಕ ನಿಗದಿ ಮಾಡಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಜುಲೈ 13 ಮತ್ತು 14ರಂದು ಪಿಜಿಸಿಇಟಿ-24 ನಡೆಯಲಿದೆ.

ಎಂಇ, ಎಂ.ಟೆಕ್, ಎಂ.ಆರ್ಕಿಟೆಕ್ಟರ್ ಕೋರ್ಸ್‌ಗಳ ಪ್ರವೇಶ ಪರೀಕ್ಷೆಯನ್ನು ಜುಲೈ 13 ರಂದು ಹಾಗೂ ಎಂಸಿಎ ಮತ್ತು ಎಂಬಿಎ ಕೋರ್ಸ್ ಪ್ರವೇಶ ಪರೀಕ್ಷೆಯನ್ನು ಜುಲೈ 14ರಂದು ನಡೆಸಲಾಗುತ್ತದೆ. ಪಿಜಿಸಿಇಟಿ ಪರೀಕ್ಷೆಗೆ ಮೇ 27ರಿಂದ ಜೂನ್ 17 ರವರೆಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಜೂನ್ 18 ಶುಲ್ಕ ಪಾವತಿಸಲು ಕೊನೆಯ ದಿನಾಂಕವಾಗಿದೆ.

ಎಂಜಿನಿಯರಿಂಗ್ ಹಾಗೂ ಟೆಕ್ನಾಲಜಿ ವಿಭಾಗದಲ್ಲಿ ಗೇಟ್‌ (GATE) ಪರೀಕ್ಷೆಯಲ್ಲಿ ಅರ್ಹತೆ ಪಡೆದಿರುವ ಅಭ್ಯರ್ಥಿಗಳು ಮಾತ್ರ ವಿಟಿಯು, ಬೆಳಗಾವಿ ಅಡಿಯಲ್ಲಿನ ವಿವಿಧ ಎಂ.ಟೆಕ್ ಕೋರ್ಸುಗಳಿಗೆ ಪ್ರವೇಶ ಪಡೆಯಲು ಅರ್ಹರಾಗುತ್ತಾರೆ. ಗೇಟ್ ಪರೀಕ್ಷೆಯಲ್ಲಿ ಮಾನ್ಯತೆ ಅಂಕಗಳನ್ನು ಹೊಂದಿರುವವರು (Valid GATE Score) ಎಂಇ / ಎಂ.ಟೆಕ್ / ಎಂ. ಆರ್ಕ್ ಕೋರ್ಸ್‌ಗಳ ಪ್ರವೇಶಕ್ಕಾಗಿ, ಪಿಜಿಸಿಇಟಿ-2024ಕ್ಕೆ ಹಾಜರಾಗುವ ಅವಶ್ಯಕತೆ ಇರುವುದಿಲ್ಲ. ಆದರೆ ಅಂತಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿಗಳನ್ನು ಭರ್ತಿ ಮಾಡಿ ಶುಲ್ಕವನ್ನು ಪಾವತಿಸಿ ಪ್ರವೇಶಕ್ಕೆ ಅರ್ಹರಾಗಬಹುದು. ಎಸ್‌-ಎಸ್‌ಟಿ, ಒಬಿಸಿ ಅರ್ಹತಾ ಮಾನದಂಡಗಳು ಕರ್ನಾಟಕದ ಅಭ್ಯರ್ಥಿಗಳಿಗೆ ಮಾತ್ರ ಅನ್ವಯಿಸುತ್ತದೆ.

ಇನ್ನು ಕರ್ನಾಟಕೇತರ ಅಭ್ಯರ್ಥಿಗಳು ಎಂಬಿಎ ಮತ್ತು ಎಂಸಿಎ ಪ್ರವೇಶಕ್ಕೆ ಆಡಳಿತ ಮಂಡಳಿಯವರು ಸರ್ಕಾರಕ್ಕೆ ಬಿಟ್ಟುಕೊಡುವ ಸೀಟುಗಳನ್ನು ಮಾತ್ರ ಆಯ್ಕೆ ಮಾಡಲು ಅರ್ಹತೆ ಪಡೆಯುತ್ತಾರೆ. ಕರ್ನಾಟಕೇತರ ಅಭ್ಯರ್ಥಿಗಳಿಗೆ ಯಾವುದೇ ಮೀಸಲಾತಿಯ ಸವಲತ್ತುಗಳು ಅನ್ವಯಿಸುವುದಿಲ್ಲ. ಆದ್ದರಿಂದ ಸಾಮಾನ್ಯ ವರ್ಗಕ್ಕೆ ನಿಗದಿಪಡಿಸಿರುವ ಕನಿಷ್ಠ ಅಂಕಗಳನ್ನು ಪಡೆದಿದ್ದಲ್ಲಿ ಮಾತ್ರ (50%) ಅರ್ಹತೆಯನ್ನು ಪಡೆಯಬಹುದಾಗಿದೆ ಹಾಗೂ ಪ್ರವೇಶಕ್ಕಾಗಿ ನೊಂದಣಿಯನ್ನು ಮಾಡಿಕೊಳ್ಳಬಹುದಾಗಿದೆ.

ಇದನ್ನೂ ಓದಿ | COMEDK UGET Result 2024: ಕಾಮೆಡ್‌ ಕೆ ಫಲಿತಾಂಶ ಪ್ರಕಟ; ಬೆಂಗಳೂರಿನ ಬಾಲಸತ್ಯ ಸರವಣನ್ ಫಸ್ಟ್‌ ರ‍್ಯಾಂಕ್‌

ಎಂಬಿಎ, ಎಂಸಿಎ, ಎಂಇ, ಎಂ.ಟೆಕ್, ಎಂ.ಆರ್ಕಿಟೆಕ್ಟರ್ ಕೋರ್ಸುಗಳ ಪ್ರವೇಶಕ್ಕೆ, ಅಭ್ಯರ್ಥಿಗಳು ಅರ್ಹತಾ ಪರೀಕ್ಷೆಯಲ್ಲಿ ಒಟ್ಟು ಕನಿಷ್ಟ ಶೇ.50 ಹಾಗೂ ಕರ್ನಾಟಕದ ಎಸ್.ಸಿ., ಎಸ್.ಟಿ., ಪ್ರವರ್ಗ-1 ರ ಅಭ್ಯರ್ಥಿಗಳು ಕನಿಷ್ಠ ಶೇ.45% ಅಂಕಗಳನ್ನು ಪಡೆದಿರಬೇಕು. CGPA / SGPA ಗ್ರೇಡ್‌ಗಳ ಮಾದರಿಯಲ್ಲಿ ನಿಗದಿಪಡಿಸಿರುವ ಅರ್ಹತಾ ಪರೀಕ್ಷೆಯ ಅಂಕಗಳು, ಅಗತ್ಯವಿರುವ ಕನಿಷ್ಠ ಅರ್ಹತಾ ಅಂಕಗಳನ್ನು ಅಥವಾ ಅದಕ್ಕಿಂತ ಹೆಚ್ಚು ಅಂಕಗಳನ್ನು ಗ್ರೇಡ್‌ಗಳ ಅಂಕಗಳು ಸೂಚಿಸುತ್ತಿರುವ ಬಗ್ಗೆ ಖಾತರಿ ಪಡಿಸಿಕೊಳ್ಳಬೇಕು ಎಂದು ಕೆಇಎ ಮಾಹಿತಿ ನೀಡಿದೆ.

Continue Reading

ಶಿಕ್ಷಣ

COMEDK UGET Result 2024: ಕಾಮೆಡ್‌ ಕೆ ಫಲಿತಾಂಶ ಪ್ರಕಟ; ಬೆಂಗಳೂರಿನ ಬಾಲಸತ್ಯ ಸರವಣನ್ ಫಸ್ಟ್‌ ರ‍್ಯಾಂಕ್‌

COMEDK UGET Result 2024 : ಯುಜಿ ಪ್ರವೇಶಕ್ಕಾಗಿ ಮೇ 12ರಂದು ನಡೆದಿದ್ದ ಕಾಮೆಡ್ ಕೆ ಫಲಿತಾಂಶ ಮೇ 24ರಂದು ಪ್ರಕಟಗೊಂಡಿದೆ. ಮೊದಲ ನಾಲ್ಕು ಸ್ಥಾನದಲ್ಲಿ ಕರ್ನಾಟಕದವರೇ ಇದ್ದು, ಮೊದಲ 10 ರ‍್ಯಾಂಕ್‌ ಪಡೆದವರಲ್ಲಿ 8 ಅಭ್ಯರ್ಥಿಗಳು ಕರ್ನಾಟಕದವರೇ ಆಗಿದ್ದಾರೆ. ಅಭ್ಯರ್ಥಿಗಳು ಪರೀಕ್ಷಾ ಫಲಿತಾಂಶವನ್ನು ಕಾಮೆಡ್‌ ಕೆ ಅಧಿಕೃತ ವೆಬ್‌ಸೈಟ್‌ನಲ್ಲಿ ವೀಕ್ಷಿಸಬಹುದಾಗಿದೆ.

VISTARANEWS.COM


on

By

COMEDK UGET Result 2024 Out
ಫಸ್ಟ್‌ ರ‍್ಯಾಂಕ್‌ ಪಡೆದ ಬಾಲಸತ್ಯ ಸರವಣನ್ ಹಾಗೂ ಎರಡನೇ ರ‍್ಯಾಂಕ್‌ ದೇವಾಂಶ್ ತ್ರಿಪಾಠಿ
Koo

ಬೆಂಗಳೂರು: ಕಾಮೆಡ್‌ ಕೆ ನಡೆಸಿದ್ದ ಯುಜಿಇಟಿ ಪರೀಕ್ಷೆ ಫಲಿತಾಂಶ ಮೇ 24ರ ಶುಕ್ರವಾರ ಮಧ್ಯಾಹ್ನ ಪ್ರಕಟಗೊಂಡಿದೆ. ಬೆಂಗಳೂರಿನ ಬಾಲಸತ್ಯ ಸರವಣನ್ ಪ್ರಥಮ ಸ್ಥಾನ ಗಳಿಸಿದ್ದಾರೆ. ಅಭ್ಯರ್ಥಿಗಳು ಪರೀಕ್ಷಾ ಫಲಿತಾಂಶವನ್ನು ಕಾಮೆಡ್‌ಕೆ www.comedk.org ಅಧಿಕೃತ ವೆಬ್‌ಸೈಟ್‌ನಲ್ಲಿ ವೀಕ್ಷಿಸಬಹುದಾಗಿದೆ. ರ‍್ಯಾಂಕ್‌ ಮತ್ತು ಸ್ಕೋರ್ ಕಾರ್ಡ್‌ಗಳನ್ನು 24ರ ಮಧ್ಯಾಹ್ನ 3 ಗಂಟೆಯಿಂದ ಅಭ್ಯರ್ಥಿಗಳಿಗೆ ಲಭ್ಯವಿರುತ್ತವೆ. ಮೊದಲ 10 ರ‍್ಯಾಂಕ್‌ ಪಡೆದವರಲ್ಲಿ 8 ಅಭ್ಯರ್ಥಿಗಳು ಕರ್ನಾಟಕದವರೇ ಆಗಿದ್ದಾರೆ.

ಕರ್ನಾಟಕದ 150 ಖಾಸಗಿ ಎಂಜಿನಿಯರಿಂಗ್ ಕಾಲೇಜು, ದೇಶದ ಕೆಲವು ಕಡೆ ಇರುವ 40 ಖಾಸಗಿ ವಿವಿಗಳಲ್ಲಿನ ಸುಮಾರು 22 ಸಾವಿರ ಎಂಜಿನಿಯರಿಂಗ್ ಸೀಟುಗಳ ಪ್ರವೇಶಾತಿಗಾಗಿ ಈ ಅರ್ಹತಾ ಪರೀಕ್ಷೆಯನ್ನು ನಡೆಸಲಾಗಿತ್ತು. ದೇಶದ 1,03,799 (ಶೇಕಡಾ 87.96) ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆದಿದ್ದರು. ವಿದ್ಯಾರ್ಥಿಗಳು ತಮ್ಮ ಶ್ರೇಯಾಂಕದ ಪಟ್ಟಿಯನ್ನು ಪರಿಶೀಲಿಸಿಕೊಂಡು ಸ್ಕೋರ್‌ ಕಾರ್ಡ್‌ ಅನ್ನು ಡೌನ್‌ಲೋಡ್‌ ಮಾಡಿಕೊಳ್ಳಬಹುದು.

2024ನೇ ಸಾಲಿನ ಎಂಜಿನಿಯರಿಂಗ್ ಕೋರ್ಸ್‌ಗಳ ಪ್ರವೇಶಕ್ಕಾಗಿ ಮೇ 12 ರಂದು ಪರೀಕ್ಷೆ ನಡೆದಿತ್ತು. ಕಾಮೆಡ್‌ ಕೆ ಕೀ ಉತ್ತರಗಳನ್ನು ಮೇ 21ರಂದು ಬಿಡುಗಡೆ ಮಾಡಿತ್ತು. ದೇಶಾದ್ಯಾಂತ 191 ನಗರಗಳಲ್ಲಿರುವ 264 ಪರೀಕ್ಷಾ ಕೇಂದ್ರಗಳಲ್ಲಿ ಮೂರು ಸೆಷನ್‌ಗಳಲ್ಲಿ ಆನ್‌ಲೈನ್‌ನಲ್ಲಿ ಪರೀಕ್ಷೆ ನಡೆಸಲಾಗಿತ್ತು. ಎಂಜಿನಿಯರಿಂಗ್ ಯುಜಿ ಸೀಟುಗಳನ್ನು ಕೋರಿ 1,18,005 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರು. ಈ ಪೈಕಿ ಸುಮಾರು 1,03,799 ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು. 35,124 ಮಂದಿ ಕರ್ನಾಟಕದವರು ಮತ್ತು 68,675 ಕರ್ನಾಟಕೇತರ ಅಭ್ಯರ್ಥಿಗಳು ಪರೀಕ್ಷೆಯನ್ನು ಬರೆದಿದ್ದರು.

COMEDK UGET Result 2024

COMEDK UGET ಫಲಿತಾಂಶ 2024 ಪರಿಶೀಲನೆ ಹೇಗೆ?

ಹಂತ 1: ಕಾಮೆಡ್‌ಕೆ ಪರೀಕ್ಷಾ ಪೋರ್ಟಲ್‌ಗೆ ಭೇಟಿ ನೀಡಿ.

ಹಂತ 2: COMEDK UGET 2024 ಫಲಿತಾಂಶದ ಲಾಗಿನ್ ಲಿಂಕ್ ಮೇಲೆ ಕ್ಲಿಕ್ ಮಾಡಿ.

ಹಂತ 3: ನಿಮ್ಮ ಲಾಗಿನ್ ರುಜುವಾತುಗಳನ್ನು ನಮೂದಿಸಿ – ಅಪ್ಲಿಕೇಶನ್ ಸಂಖ್ಯೆ ಅಥವಾ ಬಳಕೆದಾರ ID ಮತ್ತು ಪಾಸ್‌ವರ್ಡ್ ಮತ್ತು ನಂತರ ಸಲ್ಲಿಸು ಮೇಲೆ ಕ್ಲಿಕ್ ಮಾಡಿ.

ಹಂತ 4: COMEDK UGET ಫಲಿತಾಂಶ 2024 ಪರದೆಯ ಮೇಲೆ ಕಾಣಿಸುತ್ತದೆ.

ಹಂತ 5: ಕೀ ಉತ್ತರವನ್ನು ಪರಿಶೀಲಿಸಿ ಮತ್ತು ಡೌನ್‌ಲೋಡ್ ಮಾಡಿ.

ಇಂದಿನಿಂದಲೇ ಕೌನ್ಸೆಲಿಂಗ್‌ ನೋಂದಣಿ ಆರಂಭ

ಕೌನ್ಸೆಲಿಂಗ್ ನೋಂದಣಿ ಮತ್ತು ಡಾಕ್ಯುಮೆಂಟ್ ಅಪ್ಲೋಡ್ ಮೇ 24 ರ ಸಂಜೆ 4 ರಿಂದ ಪ್ರಾರಂಭವಾಗುತ್ತದೆ. ಅಭ್ಯರ್ಥಿಗಳ ಶೇಕಡವಾರು ಅಂಕ ಹಾಗೂ ರ‍್ಯಾಂಕ್‌ ಆಧಾರದ ಮೇಲೆ ಶಾರ್ಟ್‌ ಲಿಸ್ಟ್‌ ಮಾಡಿ ಕೌನ್ಸಿಲಿಂಗ್‌ ನಡೆಸುವುದಾಗಿ ಕಾಮೆಡ್‌ಕೆ ತಿಳಿಸಿದೆ. ಕರ್ನಾಟಕದಲ್ಲಿರುವ 150 ಖಾಸಗಿ ಎಂಜಿನಿಯರಿಂಗ್ ಕಾಲೇಜು ಮತ್ತು ದೇಶದ ವಿವಿಧ ಕಡೆ ಇರುವ 40 ಖಾಸಗಿ ವಿಶ್ವವಿದ್ಯಾಲಯಗಳಲ್ಲಿ ಯಾವ ಕಡೆಯಲ್ಲಾದರೂ ಪ್ರವೇಶ ಪಡೆಯಬೇಕೆಂದರೆ ಇಲ್ಲಿ ನೋಂದಣಿಯನ್ನು ಮಾಡಿಕೊಂಡಿರಬೇಕು.

ಟಾಪ್‌ 10 ರ‍್ಯಾಂಕ್‌ ಪಡೆದವರು

1) ಬಾಲಸತ್ಯ ಸರವಣನ್- ಕರ್ನಾಟಕ
2) ದೇವಾಂಶ್ ತ್ರಿಪಾಠಿ – ಕರ್ನಾಟಕ
3) ಸನಾ ತಬಸ್ಸುಮ್ – ಕರ್ನಾಟಕ
4) ಪ್ರಕೇತ್ ಗೋಯೆಲ್- ಕರ್ನಾಟಕ
5)ಮಾನಸ್ ಸಿಂಗ್ ರಜಪೂತ- ಹಿಮಾಚಲ ಪ್ರದೇಶ
6)ಗಾನಿಪಿಸೆಟ್ಟಿ ನಿಸ್ಚಲ್- ಆಂಧ್ರಪ್ರದೇಶ
7)ನಿಕೇತ್ ಪ್ರಕಾಶ್ ಅಚಂತಾ- ಕರ್ನಾಟಕ
8) ನೇಹಾ ಪ್ರಭು -ಕರ್ನಾಟಕ
9)ಜಗದೀಶ್ ರೆಡ್ಡಿ ಮಾರ್ಲ -ಕರ್ನಾಟಕ
10) ಈಶ್ವರ್ ಚಂದ್ರ ರೆಡ್ಡಿ ಮುಲ್ಕಾ- ಕರ್ನಾಟಕ

COMEDK UGET Result 2024 Comed K on May 24  Published Result

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಪ್ರಮುಖ ಸುದ್ದಿ

COMEDK UGET 2024 : ಇಂದು ಮಧ್ಯಾಹ್ನ ಕಾಮೆಡ್‌ – ಕೆ ಫಲಿತಾಂಶ; ರಿಸಲ್ಟ್​ ನೋಡೋದು, ಡೌನ್‌ಲೋಡ್‌ ಮಾಡಿಕೊಳ್ಳೋದು ಹೇಗೆ?

COMEDK UGET 2024: ಕಾಮೆಡ್‌ – ಕೆ ಪರೀಕ್ಷೆಯನ್ನು ದೇಶಾದ್ಯಂತ 200ಕ್ಕೂ ಹೆಚ್ಚು ಕೇಂದ್ರಗಳಲ್ಲಿ ನಡೆದಿತ್ತು. ಪ್ರತಿ ವರ್ಷ ಮೇ ತಿಂಗಳಲ್ಲಿ ನಡೆಸಲಾಗುವ ಈ ಪ್ರವೇಶ ಪರೀಕ್ಷೆ ಪದವಿ ಪೂರ್ವ ಮೆಡಿಕಲ್, ಎಂಜಿನಿಯರಿಂಗ್, ಡೆಂಟಲ್‌ ಕೋರ್ಸ್‌ಗಳ ಪ್ರವೇಶಕ್ಕೆ ಹೆದ್ದಾರಿಯಾಗಿದೆ. ಶುಕ್ರವಾರ (ಮೇ 24) ಮಧ್ಯಾಹ್ನ 2 ಗಂಟೆಗೆ ಪ್ರಕಟಿಸಲಾಗುತ್ತದೆ. COMEDK UGET 2024ರ ಫಲಿತಾಂಶವನ್ನು ಅಧಿಕೃತ ವೆಬ್‌ಸೈಟ್‌ನಲ್ಲಿ ಪರಿಶೀಲಿಸಿಕೊಳ್ಳಬಹುದಾಗಿದೆ.

VISTARANEWS.COM


on

COMEDK UGET 2024
Koo

ಬೆಂಗಳೂರು: ಕರ್ನಾಟಕದ ವೈದ್ಯಕೀಯ, ಎಂಜಿನಿಯರಿಂಗ್ ಮತ್ತು ದಂತ ವೈದ್ಯಕೀಯ ಕಾಲೇಜುಗಳ ಒಕ್ಕೂಟ (COMEDK) ನಡೆಸಿರುವ 2024ರ ವರ್ಷದ ಪ್ರವೇಶ ಪರೀಕ್ಷೆಯ (UGET) ಫಲಿತಾಂಶವನ್ನು ಶುಕ್ರವಾರ (ಮೇ 24) ಮಧ್ಯಾಹ್ನ 2 ಗಂಟೆಗೆ ಪ್ರಕಟಗೊಳ್ಳಲಿದೆ . COMEDK UGET 2024ರ ಫಲಿತಾಂಶವನ್ನು ಅಧಿಕೃತ ವೆಬ್‌ಸೈಟ್​​ನಲ್ಲಿ ಪರಿಶೀಲಿಸಿಕೊಳ್ಳಬಹುದಾಗಿದ್ದು, ಡೌನ್‌ಲೋಡ್ ಮಾಡಿಕೊಳ್ಳುವ ಅವಕಾಶವನ್ನೂ ಕಲ್ಪಿಸಲಾಗಿದೆ.

ಕರ್ನಾಟಕದ 150 ಪ್ರೈವೇಟ್‌ ಎಂಜಿನಿಯರಿಂಗ್ ಕಾಲೇಜು, ದೇಶದ ಕೆಲವು ಕಡೆ ಇರುವ 40 ಖಾಸಗಿ ವಿವಿಗಳಲ್ಲಿನ ಸುಮಾರು 22 ಸಾವಿರ ಎಂಜಿನಿಯರಿಂಗ್ ಸೀಟುಗಳ ಪ್ರವೇಶಾತಿಗಾಗಿ ಈ ಅರ್ಹತಾ ಪರೀಕ್ಷೆಯನ್ನು ನಡೆಸಲಾಗಿತ್ತು. ದೇಶದ 1,03,799 (ಶೇಕಡಾ 87.96) ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆದಿದ್ದು, ಶುಕ್ರವಾರ ಅವರ ಭವಿಷ್ಯ ನಿರ್ಧಾರ ಆಗಲಿದೆ. ವಿದ್ಯಾರ್ಥಿಗಳು ತಮ್ಮ ಶ್ರೇಯಾಂಕದ ಪಟ್ಟಿಯನ್ನು ಪರಿಶೀಲಿಸಿಕೊಂಡು ಸ್ಕೋರ್‌ ಕಾರ್ಡ್‌ ಅನ್ನು ಡೌನ್‌ಲೋಡ್‌ ಮಾಡಿಕೊಳ್ಳಬಹುದು.

COMEDK UGET ಫಲಿತಾಂಶ 2024 ಪರಿಶೀಲನೆ ಹೇಗೆ?

  • ಹಂತ 1: ಕಾಮೆಡ್‌ಕೆ ಪರೀಕ್ಷಾ ಪೋರ್ಟಲ್‌ಗೆ ಭೇಟಿ ನೀಡಿ.
  • ಹಂತ 2: COMEDK UGET 2024 ಫಲಿತಾಂಶದ ಲಾಗಿನ್ ಲಿಂಕ್ ಮೇಲೆ ಕ್ಲಿಕ್ ಮಾಡಿ.
  • ಹಂತ 3: ನಿಮ್ಮ ಲಾಗಿನ್ ರುಜುವಾತುಗಳನ್ನು ನಮೂದಿಸಿ – ಅಪ್ಲಿಕೇಶನ್ ಸಂಖ್ಯೆ ಅಥವಾ ಬಳಕೆದಾರ ID ಮತ್ತು ಪಾಸ್‌ವರ್ಡ್ ಮತ್ತು ನಂತರ ಸಲ್ಲಿಸು ಮೇಲೆ ಕ್ಲಿಕ್ ಮಾಡಿ.
  • ಹಂತ 4: COMEDK UGET ಫಲಿತಾಂಶ 2024 ಪರದೆಯ ಮೇಲೆ ಕಾಣಿಸುತ್ತದೆ.
  • ಹಂತ 5: ಕೀ ಉತ್ತರವನ್ನು ಪರಿಶೀಲಿಸಿ ಮತ್ತು ಡೌನ್‌ಲೋಡ್ ಮಾಡಿ.

ವಾರದಲ್ಲಿ ಕೌನ್ಸೆಲಿಂಗ್‌ ನೋಂದಣಿ ಆರಂಭ

ಮೇ 24ರಂದು ಕಾಮೆಡ್‌ಕೆ ರಿಸಲ್ಟ್‌ ಪ್ರಕಟವಾಗಿ ವಾರದಲ್ಲಿ ಕೌನ್ಸೆಲಿಂಗ್‌ ನೋಂದಣಿ ಆರಂಭವಾಗಲಿದೆ. ಕರ್ನಾಟಕದಲ್ಲಿರುವ 150 ಖಾಸಗಿ ಎಂಜಿನಿಯರಿಂಗ್ ಕಾಲೇಜು ಮತ್ತು ದೇಶದ ವಿವಿಧ ಕಡೆ ಇರುವ 40 ಖಾಸಗಿ ವಿಶ್ವವಿದ್ಯಾಲಯಗಳಲ್ಲಿ ಯಾವ ಕಡೆಯಲ್ಲಾದರೂ ಪ್ರವೇಶ ಪಡೆಯಬೇಕೆಂದರೆ ಇಲ್ಲಿ ನೋಂದಣಿಯನ್ನು ಮಾಡಿಕೊಂಡಿರಬೇಕು.

ಇದನ್ನೂ ಓದಿ: Share Market: ಸೆನ್ಸೆಕ್ಸ್‌ ನೆಗೆತ, ನಿಫ್ಟಿ ಜಿಗಿತ; ಮೋದಿ ಭವಿಷ್ಯ ನಿಜವಾಗುತ್ತಾ? ಇಂದಿನ ಏರಿಕೆಗೆ ಕಾರಣಗಳು ಗೊತ್ತಾ?

ಪ್ರತಿ ವರ್ಷ ಮೇ ತಿಂಗಳಲ್ಲಿ ಕಾಮೆಡ್‌-ಕೆ ಪರೀಕ್ಷೆ

ಕಾಮೆಡ್‌ – ಕೆ ಪರೀಕ್ಷೆಯನ್ನು ದೇಶಾದ್ಯಂತ ನಡೆಸಲಾಗಿದ್ದು, 200ಕ್ಕೂ ಹೆಚ್ಚು ಕೇಂದ್ರಗಳಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಪ್ರತಿ ವರ್ಷ ಮೇ ತಿಂಗಳಲ್ಲಿ ನಡೆಯುವ ಈ ಪ್ರವೇಶ ಪರೀಕ್ಷೆಯು ಪದವಿ ಪೂರ್ವ ಮೆಡಿಕಲ್, ಎಂಜಿನಿಯರಿಂಗ್, ಡೆಂಟಲ್‌ ಕೋರ್ಸ್‌ಗಳ ಪ್ರವೇಶಕ್ಕೆ ಬುನಾದಿಯಾಗಲಿದೆ.

Continue Reading

ಶಿಕ್ಷಣ

COMEDK UGET 2024: ನಾಳೆ ಮಧ್ಯಾಹ್ನ ಕಾಮೆಡ್‌ – ಕೆ ಫಲಿತಾಂಶ ಪ್ರಕಟ; ವೀಕ್ಷಣೆ, ಡೌನ್‌ಲೋಡ್‌ ಮಾಡಿಕೊಳ್ಳೋದು ಹೇಗೆ?

COMEDK UGET 2024: ಕಾಮೆಡ್‌ – ಕೆ ಪರೀಕ್ಷೆಯನ್ನು ದೇಶಾದ್ಯಂತ ನಡೆಸಲಾಗಿದ್ದು, 200ಕ್ಕೂ ಹೆಚ್ಚು ಕೇಂದ್ರಗಳಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಪ್ರತಿ ವರ್ಷ ಮೇ ತಿಂಗಳಲ್ಲಿ ನಡೆಯುವ ಈ ಪ್ರವೇಶ ಪರೀಕ್ಷೆಯು ಪದವಿ ಪೂರ್ವ ಮೆಡಿಕಲ್, ಎಂಜಿನಿಯರಿಂಗ್, ಡೆಂಟಲ್‌ ಕೋರ್ಸ್‌ಗಳ ಪ್ರವೇಶಕ್ಕೆ ಬುನಾದಿಯಾಗಲಿದೆ. ಶುಕ್ರವಾರ (ಮೇ 24) ಮಧ್ಯಾಹ್ನ 2 ಗಂಟೆಗೆ ಪ್ರಕಟಿಸಲಾಗುತ್ತದೆ. COMEDK UGET 2024ರ ಫಲಿತಾಂಶವನ್ನು ಅಧಿಕೃತ ವೆಬ್‌ಸೈಟ್‌ನಲ್ಲಿ ಪರಿಶೀಲಿಸಿಕೊಳ್ಳಬಹುದಾಗಿದೆ.

VISTARANEWS.COM


on

COMEDK UGET 2024 Result Declared Tomorrow Afternoon How to view and download
Koo

ಬೆಂಗಳೂರು: ಕರ್ನಾಟಕದ ವೈದ್ಯಕೀಯ, ಎಂಜಿನಿಯರಿಂಗ್ ಮತ್ತು ದಂತ ವೈದ್ಯಕೀಯ ಕಾಲೇಜುಗಳ ಒಕ್ಕೂಟ (COMEDK) 2024ರ ಪ್ರವೇಶ ಪರೀಕ್ಷೆಯ (UGET) ಫಲಿತಾಂಶವನ್ನು ಶುಕ್ರವಾರ (ಮೇ 24) ಮಧ್ಯಾಹ್ನ 2 ಗಂಟೆಗೆ ಪ್ರಕಟಿಸಲಾಗುತ್ತದೆ. COMEDK UGET 2024ರ ಫಲಿತಾಂಶವನ್ನು ಅಧಿಕೃತ ವೆಬ್‌ಸೈಟ್ನಲ್ಲಿ ಪರಿಶೀಲಿಸಿಕೊಳ್ಳಬಹುದಾಗಿದ್ದು, ಡೌನ್‌ಲೋಡ್ ಮಾಡಿಕೊಳ್ಳುವ ಅವಕಾಶವನ್ನೂ ಕಲ್ಪಿಸಲಾಗಿದೆ.

ಕರ್ನಾಟಕದ 150 ಪ್ರೈವೇಟ್‌ ಎಂಜಿನಿಯರಿಂಗ್ ಕಾಲೇಜು, ದೇಶದ ಕೆಲವು ಕಡೆ ಇರುವ 40 ಖಾಸಗಿ ವಿವಿಗಳಲ್ಲಿನ ಸುಮಾರು 22 ಸಾವಿರ ಎಂಜಿನಿಯರಿಂಗ್ ಸೀಟುಗಳ ಪ್ರವೇಶಾತಿಗಾಗಿ ಈ ಅರ್ಹತಾ ಪರೀಕ್ಷೆಯನ್ನು ನಡೆಸಲಾಗಿತ್ತು. ದೇಶದ 1,03,799 (ಶೇಕಡಾ 87.96) ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆದಿದ್ದು, ಶುಕ್ರವಾರ ಅವರ ಭವಿಷ್ಯ ನಿರ್ಧಾರ ಆಗಲಿದೆ. ವಿದ್ಯಾರ್ಥಿಗಳು ತಮ್ಮ ಶ್ರೇಯಾಂಕದ ಪಟ್ಟಿಯನ್ನು ಪರಿಶೀಲಿಸಿಕೊಂಡು ಸ್ಕೋರ್‌ ಕಾರ್ಡ್‌ ಅನ್ನು ಡೌನ್‌ಲೋಡ್‌ ಮಾಡಿಕೊಳ್ಳಬಹುದು.

COMEDK UGET ಫಲಿತಾಂಶ 2024 ಪರಿಶೀಲನೆ ಹೇಗೆ?

ಹಂತ 1: ಕಾಮೆಡ್‌ಕೆ ಪರೀಕ್ಷಾ ಪೋರ್ಟಲ್‌ಗೆ ಭೇಟಿ ನೀಡಿ.

ಹಂತ 2: COMEDK UGET 2024 ಫಲಿತಾಂಶದ ಲಾಗಿನ್ ಲಿಂಕ್ ಮೇಲೆ ಕ್ಲಿಕ್ ಮಾಡಿ.

ಹಂತ 3: ನಿಮ್ಮ ಲಾಗಿನ್ ರುಜುವಾತುಗಳನ್ನು ನಮೂದಿಸಿ – ಅಪ್ಲಿಕೇಶನ್ ಸಂಖ್ಯೆ ಅಥವಾ ಬಳಕೆದಾರ ID ಮತ್ತು ಪಾಸ್‌ವರ್ಡ್ ಮತ್ತು ನಂತರ ಸಲ್ಲಿಸು ಮೇಲೆ ಕ್ಲಿಕ್ ಮಾಡಿ.

ಹಂತ 4: COMEDK UGET ಫಲಿತಾಂಶ 2024 ಪರದೆಯ ಮೇಲೆ ಕಾಣಿಸುತ್ತದೆ.

ಹಂತ 5: ಕೀ ಉತ್ತರವನ್ನು ಪರಿಶೀಲಿಸಿ ಮತ್ತು ಡೌನ್‌ಲೋಡ್ ಮಾಡಿ.

ವಾರದಲ್ಲಿ ಕೌನ್ಸೆಲಿಂಗ್‌ ನೋಂದಣಿ ಆರಂಭ

ಮೇ 24ರಂದು ಕಾಮೆಡ್‌ಕೆ ರಿಸಲ್ಟ್‌ ಪ್ರಕಟವಾಗಿ ವಾರದಲ್ಲಿ ಕೌನ್ಸೆಲಿಂಗ್‌ ನೋಂದಣಿ ಆರಂಭವಾಗಲಿದೆ. ಕರ್ನಾಟಕದಲ್ಲಿರುವ 150 ಖಾಸಗಿ ಎಂಜಿನಿಯರಿಂಗ್ ಕಾಲೇಜು ಮತ್ತು ದೇಶದ ವಿವಿಧ ಕಡೆ ಇರುವ 40 ಖಾಸಗಿ ವಿಶ್ವವಿದ್ಯಾಲಯಗಳಲ್ಲಿ ಯಾವ ಕಡೆಯಲ್ಲಾದರೂ ಪ್ರವೇಶ ಪಡೆಯಬೇಕೆಂದರೆ ಇಲ್ಲಿ ನೋಂದಣಿಯನ್ನು ಮಾಡಿಕೊಂಡಿರಬೇಕು.

ಇದನ್ನೂ ಓದಿ: Rave party: ರೇವ್‌ ಪಾರ್ಟಿಯಲ್ಲಿ ಹೇಮಾ, ಆಶಿ ಸೇರಿ 86 ಮಂದಿಯಿಂದ ಮಾದಕ ವಸ್ತು ಸೇವನೆ; ಬ್ಲಡ್‌ ರಿಪೋರ್ಟ್‌ ಪಾಸಿಟಿವ್‌

ಪ್ರತಿ ವರ್ಷ ಮೇ ತಿಂಗಳಲ್ಲಿ ಕಾಮೆಡ್‌-ಕೆ ಪರೀಕ್ಷೆ

ಕಾಮೆಡ್‌ – ಕೆ ಪರೀಕ್ಷೆಯನ್ನು ದೇಶಾದ್ಯಂತ ನಡೆಸಲಾಗಿದ್ದು, 200ಕ್ಕೂ ಹೆಚ್ಚು ಕೇಂದ್ರಗಳಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಪ್ರತಿ ವರ್ಷ ಮೇ ತಿಂಗಳಲ್ಲಿ ನಡೆಯುವ ಈ ಪ್ರವೇಶ ಪರೀಕ್ಷೆಯು ಪದವಿ ಪೂರ್ವ ಮೆಡಿಕಲ್, ಎಂಜಿನಿಯರಿಂಗ್, ಡೆಂಟಲ್‌ ಕೋರ್ಸ್‌ಗಳ ಪ್ರವೇಶಕ್ಕೆ ಬುನಾದಿಯಾಗಲಿದೆ.

Continue Reading
Advertisement
India Head Coach
ಕ್ರೀಡೆ25 mins ago

India Head Coach: ಗಂಭೀರ್‌ ಕೋಚ್​ ಆಗುವುದು ಬಹುತೇಕ ಖಚಿತ; ಕುತೂಹಲ ಮೂಡಿಸಿದ ಜಯ್‌ ಶಾ ಭೇಟಿ

hindalaga jail assault case
ಕ್ರೈಂ44 mins ago

Assault Case: ಹಿಂಡಲಗಾ ಜೈಲಿನಲ್ಲಿ ಕೈದಿಯಿಂದಲೇ ಮಾರಣಾಂತಿಕ ಹಲ್ಲೆ; ಭಯದಲ್ಲಿ ಬದುಕುತ್ತಿರುವ ಸಿಬ್ಬಂದಿ!

Viral Video
ವೈರಲ್ ನ್ಯೂಸ್44 mins ago

Viral Video: ನಡು ರಸ್ತೆಯಲ್ಲಿ ಪಿಸ್ತೂಲ್‌ ತೋರಿಸಿ ವ್ಯಕ್ತಿ ಮೇಲೆ ಹಲ್ಲೆ; ಅಂತಾರಾಷ್ಟ್ರೀಯ ಮಟ್ಟದ ಶೂಟರ್‌ನಿಂದ ದಾಂಧಲೆ

swagat babu no more
ಸಿನಿಮಾ1 hour ago

Swagat Babu: ಕನ್ನಡ ಚಲನಚಿತ್ರ ನಿರ್ಮಾಪಕ ಸ್ವಾಗತ್ ಬಾಬು ಇನ್ನಿಲ್ಲ

Porsche car accident ವಿಸ್ತಾರ ಸಂಪಾದಕೀಯ
ಪ್ರಮುಖ ಸುದ್ದಿ2 hours ago

ವಿಸ್ತಾರ ಸಂಪಾದಕೀಯ: ಕುಡುಕ ಬಾಲಕನಿಂದ ಅಪಘಾತ ಪ್ರಕರಣ; ಪುಣೆ ಪೊಲೀಸರ ದಿಟ್ಟ ಕ್ರಮ ಶ್ಲಾಘನೀಯ

Cooking In An Iron Pot
ಆರೋಗ್ಯ2 hours ago

Cooking In An Iron Pot: ಕಬ್ಬಿಣದ ಪಾತ್ರೆಯಲ್ಲಿ ಅಡುಗೆ ಮಾಡುವುದು ಒಳ್ಳೆಯದು! ಯಾಕೆ ಗೊತ್ತೇ?

karnataka weather Forecast
ಮಳೆ2 hours ago

Karnataka Weather : ಕರಾವಳಿ, ಮಲೆನಾಡಲ್ಲಿ ಗುಡುಗು, ಮಿಂಚು; ಒಳನಾಡಿನಲ್ಲಿ ಸಾಧಾರಣ ಮಳೆ

Which Type Of Roti Is Best
ಆಹಾರ/ಅಡುಗೆ3 hours ago

Which Type Of Roti Is Best: ಯಾರಿಗೆ ಯಾವ ರೊಟ್ಟಿ ಸೂಕ್ತ? ತಿನ್ನುವ ಮೊದಲು ತಿಳಿದುಕೊಂಡಿರಿ!

Dina Bhavishya
ಭವಿಷ್ಯ4 hours ago

Dina Bhavishya : ಈ ರಾಶಿಯವರು ಇಂದು ದೊಡ್ಡದೊಂದು ಸಮಸ್ಯೆಯಿಂದ ಹೊರ ಬರುತ್ತೀರಿ

Vijayapura news
ಪ್ರಮುಖ ಸುದ್ದಿ9 hours ago

Vijayapura News : ಪ್ರೀತಿಸಿದವಳನ್ನೇ ಮದುವೆಯಾಗಲು ಯುವಕನ ಹಠ; ಪರಸ್ಪರ ಪೆಟ್ರೋಲ್ ಎರಚಿ ಬೆಂಕಿ ಹಚ್ಚಿಕೊಂಡು ಆಸ್ಪತ್ರೆ ಸೇರಿದರು!

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Weather Forecast
ಮಳೆ15 hours ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ2 days ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು2 days ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ3 days ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ5 days ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ6 days ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ7 days ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು7 days ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

Contaminated Water
ಮೈಸೂರು7 days ago

Contaminated Water : ಡಿ ಸಾಲುಂಡಿಯಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ ಯುವಕ ಸಾವು

Karnataka Rain
ಮಳೆ1 week ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

ಟ್ರೆಂಡಿಂಗ್‌