Congress President | ರಾಜಸ್ಥಾನ ಸಿಎಂ ಬಗ್ಗೆ ಎರಡು ದಿನದಲ್ಲಿ ಸೋನಿಯಾ ಗಾಂಧಿ ನಿರ್ಧಾರ! - Vistara News

ದೇಶ

Congress President | ರಾಜಸ್ಥಾನ ಸಿಎಂ ಬಗ್ಗೆ ಎರಡು ದಿನದಲ್ಲಿ ಸೋನಿಯಾ ಗಾಂಧಿ ನಿರ್ಧಾರ!

ಎಐಸಿಸಿ ಅಧ್ಯಕ್ಷ (Congress President) ಸ್ಥಾನಕ್ಕೆ ನಾಮಪತ್ರ ಸಲ್ಲಿಸಲು ಸೆ.30 ಕೊನೆಯ ದಿನ. ಹಾಗಾಗಿ ಎರಡು ದಿನದಲ್ಲಿ ರಾಜಸ್ಥಾನ ಸಿಎಂ ಬಗ್ಗೆ ಸೋನಿಯಾ ಗಾಂಧಿ ನಿರ್ಧರಿಸಲಿದ್ದಾರೆ ಎಂದು ಕಾಂಗ್ರೆಸ್ ಹೇಳಿದೆ.

VISTARANEWS.COM


on

Sonia and Ashok
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವ ದೆಹಲಿ: ರಾಜಸ್ಥಾನ ಮುಖ್ಯಮಂತ್ರಿ ಹುದ್ದೆಯಲ್ಲಿ ಯಾರು ಮುಂದುವರಿಯಬೇಕು ಎಂಬುದರ ಕುರಿತು ಎರಡು ದಿನಗಳಲ್ಲಿ ಸೋನಿಯಾ ಗಾಂಧಿ ಅವರು ನಿರ್ಧರಿಸಲಿದ್ದಾರೆ ಎಂದು ಕಾಂಗ್ರೆಸ್ (Congress) ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರು ತಿಳಿಸಿದ್ದಾರೆ. ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಗುರುವಾರ ದಿಲ್ಲಿಯಲ್ಲಿ ಸೋನಿಯಾ ಗಾಂಧಿ ಅವರನ್ನು ಭೇಟಿಯಾಗಿ ರಾಜಸ್ಥಾನದ ಬೆಳವಣಿಗೆಗಳ ಸಂಬಂಧ ಚರ್ಚಿಸಿದರು.

ಎಐಸಿಸಿ ಅಧ್ಯಕ್ಷ ಸ್ಥಾನದ ಎಲೆಕ್ಷನ್‌ಗೆ ನಾಮಪತ್ರ ಸಲ್ಲಿಸಲು ಸೆ.30 ಕೊನೆಯ ದಿನವಾಗಿದ್ದು, ಯಾರೆಲ್ಲ ನಾಮಪತ್ರ ಸಲ್ಲಿಸಲಿದ್ದಾರೆಂಬ ಬಗ್ಗೆ ನಾಳೆ ಸ್ಪಷ್ಟ ಚಿತ್ರಣ ದೊರೆಯಲಿದೆ. ಹಾಗಾಗಿ, ರಾಜಸ್ಥಾನ ಸಿಎಂ ಸ್ಥಾನದಲ್ಲಿ ಅಶೋಕ್ ಗೆಹ್ಲೋಟ್ ಇರಲಿದ್ದಾರೆಯೇ ಇಲ್ಲವೆ ಎಂಬುದು ತಿಳಿಯಲಿದೆ ಎಂದು ಕೆ.ಸಿ.ವೇಣುಗೋಪಾಲ್ ಅವರು ತಿಳಿಸಿದ್ದಾರೆ.

ಸೋನಿಯಾ ಕ್ಷಮೆ ಕೋರಿದ ಗೆಹ್ಲೋಟ್
ಏತನ್ಮಧ್ಯೆ, ಕಾಂಗ್ರೆಸ್ ಅಧ್ಯಕ್ಷ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಹೇಳಿರುವ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು, ಎಐಸಿಸಿ ಅಧ್ಯಕ್ಷೆ (Congress President) ಸೋನಿಯಾ ಗಾಂಧಿ ಅವರಿಗೆ ಕ್ಷಮೆ ಕೋರಿದ್ದಾರೆ. ಕಳೆದ 50 ವರ್ಷಗಳಿಂದ ನಾನು ಕಾಂಗ್ರೆಸ್‌ಗೆ ಸೈನಿಕನ ರೀತಿಯಲ್ಲಿ ಕೆಲಸ ಮಾಡಿದ್ದೇನೆ ಎಂದು ತಿಳಿಸಿದರು.

ರಾಜಸ್ಥಾನ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಅಶೋಕ್ ಗೆಹ್ಲೋಟ್ ಅವರು ಸ್ಪರ್ಧಿಸಬೇಕೆಂದು ಹೈಕಮಾಂಡ್ ಹೇಳಿದ ಬೆನ್ನಲ್ಲೇ, ಗೆಹ್ಲೋಟ್ ನಿಷ್ಠ ಶಾಸಕರು ಸಾಮೂಹಿಕ ರಾಜೀನಾಮೆಗೆ ಮುಂದಾಗಿದ್ದರು. ಇದರಿಂದ ಹೈಕಮಾಂಡ್ ತೀವ್ರ ಮುಜುಗರಕ್ಕೆ ಒಳಗಾಗಿತ್ತು. ಈ ಹಿನ್ನೆಲೆಯಲ್ಲಿ ಅಶೋಕ್ ಗೆಹ್ಲೋಟ್ ಅವರು ಗುರುವಾರ ದಿಲ್ಲಿಯಲ್ಲಿ ಸೋನಿಯಾ ಗಾಂಧಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.

ಎಐಸಿಸಿ ಅಧ್ಯಕ್ಷ ಎಲೆಕ್ಷನ್‌ಗೆ ಸ್ಪರ್ಧಿಸಲು ತಿರುವನಂಥಪುರದ ಸಂಸದ ಶಶಿ ತರೂರ್ ಈಗಾಗಲೇ ನಾಮಪತ್ರ ಪಡೆದುಕೊಂಡಿದ್ದು, ಶುಕ್ರವಾರ ತಮ್ಮ ಉಮೇದುವಾರಿಕೆಯನ್ನು ಸಲ್ಲಿಸಲಿದ್ದಾರೆ. ಅದೇ ರೀತಿ, ಕಾಂಗ್ರೆಸ್‌ನ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಅವರೂ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ. ಅವರು ಕಾಂಗ್ರೆಸ್ ಕಚೇರಿಯಲ್ಲಿ ತಮ್ಮ ನಾಮಪತ್ರ ಪಡೆದುಕೊಂಡಿದ್ದು, ನಾಳೆ ಸಲ್ಲಿಸಲಿದ್ದಾರೆ.

ಶಶಿ ತರೂರ್, ದಿಗ್ವಿಜಯ್ ಸಿಂಗ್ ಮಾತ್ರವಲ್ಲದೇ, ರಾಜ್ಯಸಭೆಯಲ್ಲಿ ಪ್ರತಿಪಕ್ಷ ನಾಯಕನಾಗಿರುವ ಕರ್ನಾಟಕದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ, ಕೆ.ಸಿ.ವೇಣುಗೋಪಾಲ್, ಮುಕುಲ್ ವಾಸ್ನಿಕ್ ಅವರು ಸೇರಿದಂತೆ ಕೆಲವರು ಹೆಸರುಗಳು ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಕೇಳಿ ಬರುತ್ತಿವೆ. ವಾಸ್ತವದಲ್ಲಿ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಅಶೋಕ್ ಗೆಹ್ಲೋಟ್ ಅವರು ಗಾಂಧಿ ಕುಟುಂಬದ ಆಯ್ಕೆಯಾಗಿತ್ತು. ಆದರೆ, ಎಐಸಿಸಿ ಅಧ್ಯಕ್ಷ ಸ್ಥಾನದ ಜತೆಗೇ ರಾಜಸ್ಥಾನ ಸಿಎಂ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದರು. ಇದನ್ನು ರಾಹುಲ್ ಗಾಂಧಿ ಅವರು ಬಹಿರಂಗವಾಗಿಯೇ ವಿರೋಧಿಸಿದ್ದರು. ಬಳಿಕ ರಾಜಸ್ಥಾನದಲ್ಲಿ ಬಂಡಾಯದ ನಾಟಕ ನಡೆಯಿತು. ಅಕ್ಟೋಬರ್ 17ರಂದು ಎಐಸಿಸಿ ಅಧ್ಯಕ್ಷ ಸ್ಥಾನಕ್ಷೆ ಎಲೆಕ್ಷನ್ ನಡೆಯಲಿದೆ.

ಇದನ್ನೂ ಓದಿ Congress President Election | ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ಅಕ್ಟೋಬರ್​ 17ಕ್ಕೆ; ಮತ ಎಣಿಕೆ 19ಕ್ಕೆ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ವಾಣಿಜ್ಯ

Exit Polls: ಚುನಾವಣೋತ್ತರ ಸಮೀಕ್ಷೆ ಪ್ರಕಟವಾದ ಬೆನ್ನಲ್ಲೇ ಭಾರತೀಯ ಷೇರು ಮಾರುಕಟ್ಟೆಯಲ್ಲಿ ಜಿಗಿತ ಸಾಧ್ಯತೆ

Exit Polls: ಲೋಕಸಭಾ ಚುನಾವಣೆಯ ಎಲ್ಲ ಹಂತಗಳ ಮತದಾನ ಮುಗಿದಿದ್ದು, ಚುನಾವಣೋತ್ತರ ಸಮೀಕ್ಷೆ ಪ್ರಕಟವಾಗಿದೆ. ಇದರಲ್ಲಿ ಎನ್‌ಡಿಎಗೆ ಬಹುಮತ ದೊರೆಯುವ ಸಾಧ್ಯತೆ ಇದೆ ಎನ್ನುವ ಅಂಶ ಕಂಡು ಬಂದಿದ್ದು, ಭಾರತೀಯ ಷೇರುಗಳು, ಬಾಂಡ್‌ಗಳು ಮತ್ತು ರೂಪಾಯಿ ಮೌಲ್ಯ ಸೋಮವಾರ ಏರಿಕೆಯಾಗಲಿದೆ ಎಂದು ಆರ್ಥಿಕ ತಜ್ಞರು ಊಹಿಸಿದ್ದಾರೆ.

VISTARANEWS.COM


on

Exit Polls
Koo

ಮುಂಬೈ: ಬಹು ನಿರೀಕ್ಷಿತ ಲೋಕಸಭಾ ಚುನಾವಣೆ (Lok Sabha Election 2024)ಯ 7 ಹಂತಗಳ ಮತದಾನ ಪೂರ್ಣಗೊಂಡಿದೆ. ಶನಿವಾರ (ಜೂನ್‌ 1) ಚುನಾವಣೋತ್ತರ ಸಮೀಕ್ಷೆ (Exit Polls) ಪ್ರಕಟವಾಗಿದ್ದು, ಬಿಜೆಪಿ ನೇತೃತ್ವದ ಎನ್‌ಡಿಎ ಅಧಿಕಾರಕ್ಕೆ ಬರುವ ಸಾಧ್ಯತೆ ಇದೆ. ನರೇಂದ್ರ ಮೋದಿ ಮೂರನೇ ಬಾರಿ ಪ್ರಧಾನಿ ಹುದ್ದೆಗೆ ಏರುವುದು ಬಹುತೇಕ ಖಚಿತವಾಗಿದ್ದು, ಈ ಹಿನ್ನೆಲೆಯಲ್ಲಿ ಭಾರತೀಯ ಷೇರುಗಳು, ಬಾಂಡ್‌ಗಳು ಮತ್ತು ರೂಪಾಯಿ ಮೌಲ್ಯ ಸೋಮವಾರ ಏರಿಕೆಯಾಗಲಿದೆ ಎಂದು ಆರ್ಥಿಕ ತಜ್ಞರು ಊಹಿಸಿದ್ದಾರೆ.

ಸಂಸತ್ತಿನಲ್ಲಿ ಬಹುಮತಕ್ಕೆ ಅಗತ್ಯವಾದ 272 ಸೀಟನ್ನು ಬಿಜೆಪಿ ನೇತೃತ್ವದ ಎನ್‌ಡಿಎ ಸುಲಭವಾಗಿ ಪಡೆದುಕೊಳ್ಳಲಿದೆ ಎಂದು ಬಹುತೇಕ ಎಲ್ಲ ಸಮೀಕ್ಷೆಗಳು ಭವಿಷ್ಯ ನುಡಿದಿವೆ. ಫಲಿತಾಂಶ ಮಂಗಳವಾರ (ಜೂನ್‌ 4) ಪ್ರಕಟವಾಗಲಿದೆ. ಕಡಿಮೆ ಮತದಾನದ ಪ್ರಮಾಣ ಮತ್ತು ಹಲವಾರು ರಾಜ್ಯಗಳಲ್ಲಿ ಬಿಗಿಯಾದ ಸ್ಪರ್ಧೆಗಳಿಂದಾಗಿ ಪ್ರಧಾನಿ ಮೋದಿ ಅವರ ಮಹತ್ವಾಕಾಂಕ್ಷೆಯ 400 ಸ್ಥಾನಗಳ ಗುರಿಯನ್ನು ತಲುಪಲು ಬಿಜೆಪಿ ವಿಫಲವಾಗಬಹುದು ಎಂಬ ಆತಂಕದಿಂದ ಇತ್ತೀಚಿನ ಷೇರು ಮಾರುಕಟ್ಟೆ ಚಂಚಲತೆಯಿಂದ ಕೂಡಿತ್ತು. ಇದುವ ಹೂಡಿಕೆದಾರರನ್ನು ಆತಂಕಕ್ಕೆ ತಳ್ಳಿತ್ತು. ಸದ್ಯ ಚುನಾವಣೋತ್ತರ ಸಮೀಕ್ಷೆಯಿಂದ ಷೇರು ಮಾರುಕಟ್ಟೆಯಲ್ಲಿ ಜಿಗಿತ ಕಂಡು ಬರುವ ಸಾಧ್ಯತೆ ಇದೆ.

“ಫಲಿತಾಂಶದ ಬಗ್ಗೆ ಕೆಲವು ಸಂದೇಹಗಳು ಇದ್ದವು. ಈ ಬಗ್ಗೆ ಕೆಲವರು ಆತಂಕಕ್ಕೊಳಗಾಗಿದ್ದರಿಂದ ಷೇರು ಮಾರುಕಟ್ಟೆಯಲ್ಲಿ ಚಂಚಲತೆ ಹೆಚ್ಚಾಗಿತ್ತು. ಚುನಾವಣೋತ್ತರ ಸಮೀಕ್ಷೆಯಿಂದ ಆತಂಕ ನಿವಾರಣೆಯಾಗಿದೆ. ಹೀಗಾಗಿ ಮಾರುಕಟ್ಟೆಗಳು ಸೋಮವಾರ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಬಹುದುʼʼ ಎಂದು ಮುಂಬೈಯ ಡಿಎಸ್‌ಪಿ ಮ್ಯೂಚುವಲ್ ಫಂಡ್‌ನ ಈಕ್ವಿಟಿಗಳ ಮುಖ್ಯಸ್ಥ ವಿನೀತ್ ಸಾಂಬ್ರೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಅಂತಿಮ ಫಲಿತಾಂಶಗಳು ಚುನಾವಣೋತ್ತರ ಸಮೀಕ್ಷೆಗಳಿಗಿಂತ ಭಿನ್ನವಾಗಿದ್ದರೂ, ಎನ್‌ಡಿಎ ಒಕ್ಕೂಟಕ್ಕೆ ಗೆಲುವು ನಿಶ್ಚಿತ ಎನ್ನಲಾಗಿದೆ. ಭಾರತೀಯ ಷೇರುಗಳು ಮೇ ತಿಂಗಳಲ್ಲಿ ದಾಖಲೆಯ ಮಟ್ಟವನ್ನು ತಲುಪಿದರೆ, ಬಾಂಡ್ ಸುಮಾರು ಒಂದು ವರ್ಷದಲ್ಲಿ ಗರಿಷ್ಠ ಮಟ್ಟದ ಹತ್ತಿರದಲ್ಲಿದೆ. ಜೂನ್ 4ರ ಫಲಿತಾಂಶ ಚುನಾವಣೋತ್ತರ ಸಮೀಕ್ಷೆಯೊಂದಿಗೆ ಹೊಂದಿಕೆಯಾದರೆ ಎನ್ಎಸ್ಇ ನಿಫ್ಟಿ 50 ಸೂಚ್ಯಂಕವು ಹೊಸ ದಾಖಲೆಯನ್ನು ತಲುಪಲಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಚುನಾವಣಾ ಫಲಿತಾಂಶಕ್ಕೆ ಮುಂಚಿತವಾಗಿ ವಿದೇಶಿ ಹೂಡಿಕೆದಾರರು ಎಚ್ಚರಿಕೆಯಿಂದ ಹೆಜ್ಜೆ ಇಟ್ಟಿದ್ದರಿಂದ ಮುಖ್ಯ ಗೇಜ್ ಕಳೆದ ವಾರ ಸುಮಾರು ಶೇ. 2ರಷ್ಟು ಕುಸಿದು 22,531ಕ್ಕೆ ತಲುಪಿದೆ.

ಇದನ್ನೂ ಓದಿ: Equity Market: ದೇಶದ ಷೇರುಪೇಟೆಯಲ್ಲಿ ಗೂಳಿ ನೆಗೆತ; 6 ತಿಂಗಳಲ್ಲಿ 1 ಲಕ್ಷ ಕೋಟಿ ಡಾಲರ್‌ ಗಳಿಕೆ!

ಕೆಲವು ದಿನಗಳ ಹಿಂದೆ ಪ್ರಧಾನ ಮಂತ್ರಿ ನರೇಂದ್ರ ಮೋದಿ, ʼʼಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟವಾಗುವ ಜೂನ್‌ 4ರ ಬಳಿಕ ಭಾರತದ ಷೇರು ಮಾರುಕಟ್ಟೆಯನ್ನು ಹಿಡಿಯಲು ಆಗುವುದಿಲ್ಲʼʼ ಎಂದು ಹೇಳಿದ್ದರು. ʼʼಜೂನ್‌ 4ರ ಬಳಿಕ ಹೂಡಿಕೆದಾರರಿಗೆ ಭಾರಿ ಲಾಭವಾಗಲಿದೆʼʼ ಎಂದು ಗೃಹ ಸಚಿವ ಅಮಿತ್‌ ಶಾ ಕೂಡ ವಿಶ್ವಾಸ ವ್ಯಕ್ತಪಡಿಸಿದ್ದರು. ಜಾಗತಿಕ ಷೇರು ಮಾರುಕಟ್ಟೆಯಲ್ಲಿ ಭಾರತದ ಷೇರುಪೇಟೆಯು ಮಹತ್ವದ ಸ್ಥಾನ ಪಡೆದಿದೆ. ಹಾಂಕಾಂಗ್‌, ಜಪಾನ್‌, ಚೀನಾ ಹಾಗೂ ಅಮೆರಿಕದ ನಂತರ ಭಾರತದ ಷೇರುಪೇಟೆಯು ಬೃಹತ್‌ ಷೇರು ಮಾರುಕಟ್ಟೆ ಎನಿಸಿದೆ. ಹೀಗಾಗಿ ಚುನಾವಣಾ ಫಲಿತಾಂಶದತ್ತ ಎಲ್ಲರ ಕಣ್ಣು ನೆಟ್ಟಿದೆ. 

Continue Reading

ದೇಶ

Arvind Kejriwal: ತಿಹಾರ್‌ ಜೈಲಿಗೆ ಮರಳಿದ ದಿಲ್ಲಿ ಸಿಎಂ ಅರವಿಂದ ಕೇಜ್ರಿವಾಲ್‌; ಜೂ. 5ರಂದು ಮತ್ತೆ ಜಾಮೀನು ಅರ್ಜಿ ವಿಚಾರಣೆ

Arvind Kejriwal: ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ಅಬಕಾರಿ ನೀತಿ ಜಾರಿ (Delhi Excise Policy Case) ವೇಳೆ ನಡೆದಿದೆ ಎನ್ನಲಾದ ನೂರಾರು ಕೋಟಿ ರೂ. ಹಗರಣದ ಆರೋಪ ಎದುರಿಸುತ್ತಿರುವ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರ ಮಧ್ಯಂತರ ಜಾಮೀನು ಅವಧಿ ಪೂರ್ಣಗೊಂಡಿದ್ದು, ಇಂದು (ಜೂ. 2) ಅವರು ತಿಹಾರ್‌ ಜೈಲಿಗೆ ಮರಳಿದ್ದಾರೆ.

VISTARANEWS.COM


on

Arvind Kejriwal
Koo

ನವದೆಹಲಿ: ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ಅಬಕಾರಿ ನೀತಿ ಜಾರಿ (Delhi Excise Policy Case) ವೇಳೆ ನಡೆದಿದೆ ಎನ್ನಲಾದ ನೂರಾರು ಕೋಟಿ ರೂ. ಹಗರಣದ ಆರೋಪ ಎದುರಿಸುತ್ತಿರುವ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ (Arvind Kejriwal) ಅವರ ಮಧ್ಯಂತರ ಜಾಮೀನು ಅವಧಿ ಪೂರ್ಣಗೊಂಡಿದ್ದು, ಇಂದು (ಜೂ. 2) ಅವರು ತಿಹಾರ್‌ ಜೈಲಿಗೆ ಮರಳಿದ್ದಾರೆ. ಲೋಕಸಭಾ ಚುನಾವಣೆ ಪ್ರಚಾರ ಕಾರ್ಯದಲ್ಲಿ ಭಾಗಿಯಾಗಲು ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿ ಕೋರ್ಟ್‌ ಈ ಹಿಂದೆ ಮೇ 10ರಂದು ಮಧ್ಯಂತರ ಜಾಮೀನು ಮಂಜೂರು ಮಾಡಿತ್ತು. ಚುನಾವಣೆ ಪೂರ್ಣಗೊಂಡ ಮರುದಿನವೇ ಜೈಲಿಗೆ ಮರಳುವಂತೆ ಕೋರ್ಟ್‌ ಹೇಳಿತ್ತು. ಅದರಂತೆ ಅವರು 21 ದಿನಗಳ ಬಳಿಕ ಶರಣಾಗಿದ್ದಾರೆ.

ಕೇಜ್ರಿವಾಲ್‌ ಜೈಲಿಗೆ ತೆರಳುವ ಮುನ್ನ ರಾಜ್‌ ಘಾಟ್‌ನಲ್ಲಿರುವ ಮಹಾತ್ಮಾ ಗಾಂಧಿ ಸ್ಮಾರಕಕ್ಕೆ ಭೇಟಿ ನೀಡಿದರು. ಬಳಿಕ ಪತ್ನಿ ಸುನೀತಾ ಅವರೊಂದಿಗೆ ಹನುಮಾನ್‌ ದೇಗುಲಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿದರು. ನಂತರ ಆಮ್‌ ಆದ್ಮಿ ಪಾರ್ಟಿ ಕಚೇರಿಗೆ ಭೇಟಿ ನೀಡಿ ಕಾರ್ಯಕರ್ತರೊಂದಿಗೆ ಸಮಾಲೋಚನೆ ನಡೆಸಿದರು.

ಇನ್ನು ಅರವಿಂದ ಕೇಜ್ರಿವಾಲ್‌ ಅವರ ಜಾಮೀನು ಅರ್ಜಿ ವಿಚಾರಣೆ ಜೂ. 5ರಂದು ದಿಲ್ಲಿ ಕೋರ್ಟ್‌ನಲ್ಲಿ ನಡೆಯಲಿದೆ. ಶನಿವಾರ ಈ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ್ದ ಅವರು, ʼʼಈ ಬಾರಿ ಅವರು ನನಗೆ ಹೆಚ್ಚು ಚಿತ್ರಹಿಂಸೆ ನೀಡುವ ಸಾಧ್ಯತೆಯಿದೆ. ಅದಕ್ಕೆ ನಾನು ತಲೆಬಾಗುವುದಿಲ್ಲ” ಎಂದು ಅವರು ಹೇಳಿದ್ದರು. ಜತೆಗೆ ʼʼದೆಹಲಿಯ ಜನರಿಗೆ ಲಭ್ಯವಿರುವ ಎಲ್ಲ ಸೌಲಭ್ಯಗಳು ಅವರ ಅನುಪಸ್ಥಿತಿಯಲ್ಲಿಯೂ ಮುಂದುವರಿಯುತ್ತವೆʼʼ ಎಂದು ಭರವಸೆ ನೀಡಿದ್ದರು.

ʼʼನೀವು ನಿಮ್ಮ ಬಗ್ಗೆ ಕಾಳಜಿ ವಹಿಸಿ, ಜೈಲಿನಲ್ಲಿ ನಿಮ್ಮ ಬಗ್ಗೆ ನಾನು ತುಂಬಾ ಚಿಂತೆ ಮಾಡುತ್ತೇನೆ. ನೀವು ಸಂತೋಷವಾಗಿದ್ದರೆ ನಿಮ್ಮ ಕೇಜ್ರಿವಾಲ್ ಕೂಡ ಸಂತೋಷವಾಗಿರುತ್ತಾರೆ. ನಾನು ಖಂಡಿತವಾಗಿಯೂ ನಿಮ್ಮ ನಡುವೆ ಇರುವುದಿಲ್ಲ, ಆದರೆ ನಿಮ್ಮ ಎಲ್ಲ ಕೆಲಸಗಳು ಮುಂದುವರಿಯುತ್ತವೆ. ಹಿಂದಿರುಗಿದ ನಂತರ ನಾನು ಪ್ರತಿ ತಾಯಿ ಮತ್ತು ಸಹೋದರಿಗೆ ಪ್ರತಿ ತಿಂಗಳು 1,000 ರೂ.ಗಳನ್ನು ನೀಡಲು ಪ್ರಾರಂಭಿಸುತ್ತೇನೆ” ಎಂದು ಕೇಜ್ರಿವಾಲ್‌ ಭಾವುಕರಾಗಿ ಹೇಳಿದ್ದರು.

ವೈದ್ಯಕೀಯ ಪರೀಕ್ಷೆಗಳಿಗಾಗಿ ಕೇಜ್ರಿವಾಲ್‌ ಅವರ ಮಧ್ಯಂತರ ಜಾಮೀನನ್ನು ಏಳು ದಿನಗಳವರೆಗೆ ವಿಸ್ತರಿಸುವ ಮನವಿಯನ್ನು ತುರ್ತಾಗಿ ಪರಿಗಣಿಸಲು ಮಾಡಲು ಸುಪ್ರೀಂ ಕೋರ್ಟ್ ರಿಜಿಸ್ಟ್ರಿ ನಿರಾಕರಿಸಿದ ನಂತರ ಅವರು ದೆಹಲಿ ನ್ಯಾಯಾಲಯದ ಮೊರೆ ಹೋಗಿದ್ದರು. ಅರವಿಂದ್ ಕೇಜ್ರಿವಾಲ್ ಅವರು ವಿಚಾರಣಾ ನ್ಯಾಯಾಲಯದಿಂದ ನಿಯಮಿತ ಜಾಮೀನು ಪಡೆಯುವ ಆಯ್ಕೆಯನ್ನು ಹೊಂದಿರುವುದರಿಂದ ಅವರ ಮನವಿಯನ್ನು ನಿರ್ವಹಿಸಲಾಗುವುದಿಲ್ಲ ಎಂದು ಹೈಕೋರ್ಟ್​ ಹೇಳಿತ್ತು.

ಇದನ್ನೂ ಓದಿ: Arvind Kejriwal: ತಿಹಾರ್‌ ಜೈಲಿನಲ್ಲಿ ಅರವಿಂದ ಕೇಜ್ರಿವಾಲ್‌ ಫಸ್ಟ್‌ ನೈಟ್‌ ಹೇಗಿತ್ತು?

ಹೆಚ್ಚಿನ ಕೀಟೋನ್ ಮಟ್ಟ ಹೆಚ್ಚಳದಿಂದಾಗಿ ತೂಕ ನಷ್ಟದಿಂದಾಗಿ ಪಿಇಟಿ-ಸಿಟಿ ಸ್ಕ್ಯಾನ್ ಸೇರಿದಂತೆ ಹಲವು ವೈದ್ಯಕೀಯ ಪರೀಕ್ಷೆಗಳಿಗೆ ಒಳಗಾಗಲು ಕೇಜ್ರಿವಾಲ್ ತಮ್ಮ ಮಧ್ಯಂತರ ಜಾಮೀನು ವಿಸ್ತರಣೆ ಕೋರಿದ್ದರು. ಈ ರೋಗಲಕ್ಷಣಗಳು ಮೂತ್ರಪಿಂಡದ ಸಮಸ್ಯೆಗಳು, ಗಂಭೀರ ಹೃದಯದ ಪರಿಸ್ಥಿತಿಗಳು ಅಥವಾ ಕ್ಯಾನ್ಸರ್​ಗೆ ಕಾರಣವಾಗಬಹುದು ಎಂದು ಆಪ್​ ವಕೀಲರು ವಾದಿಸಿದ್ದರು.

Continue Reading

ವಾಣಿಜ್ಯ

GST Collection: ಜಿಎಸ್‌ಟಿ ಸಂಗ್ರಹದಲ್ಲಿ ಕರ್ನಾಟಕ ನಂ. 2; ಇಲ್ಲಿ ಸಂಗ್ರಹವಾಗಿದ್ದು ಎಷ್ಟು?

GST Collection: ಕಳೆದ ತಿಂಗಳ ಜಿಎಸ್‌ಟಿ ಸಂಗ್ರಹದ ಅಂಕಿ-ಅಂಶ ಬಿಡುಗಡೆಯಾಗಿದೆ. ಮೇಯಲ್ಲಿ ಬರೋಬ್ಬರಿ 1.73 ಲಕ್ಷ ಕೋಟಿ ರೂ. ಜಿಎಸ್‌ಟಿ ಸಂಗ್ರವಾಗಿದ್ದು, ಕರ್ನಾಟಕ ಎರಡನೇ ಸ್ಥಾನವನ್ನು ಕಾಯ್ದುಕೊಂಡಿದೆ. ರೀಫಂಡ್ ಕಳೆದ ಬಳಿಕ ನಿವ್ವಳ ಜಿಎಸ್​ಟಿ ಸಂಗ್ರಹ ಮೇಯಲ್ಲಿ 1.44 ಲಕ್ಷ ಕೋಟಿ ರೂ. ಆಗಿದೆ ಎಂದು ವರದಿ ತಿಳಿಸಿದೆ. ಮಹಾರಾಷ್ಟ್ರವು 26,854 ಕೋಟಿ ರೂ. ಸಂಗ್ರಹಿಸುವ ಮೂಲಕ ಎಂದಿನಂತೆ ಮೊದಲ ಸ್ಥಾನದಲ್ಲಿದೆ. ಎರಡನೇ ಸ್ಥಾನದಲ್ಲಿ ಕರ್ನಾಟಕ ಇದೆ. ಇಲ್ಲಿ 11,889 ಕೋಟಿ ರೂ. ಸಂಗ್ರಹವಾಗಿದೆ.

VISTARANEWS.COM


on

GST Collection
Koo

ನವದೆಹಲಿ: ಕಳೆದ ತಿಂಗಳ ಜಿಎಸ್‌ಟಿ ಸಂಗ್ರಹದ ಅಂಕಿ-ಅಂಶ ಬಿಡುಗಡೆಯಾಗಿದೆ (GST Collection). ಮೇಯಲ್ಲಿ ಬರೋಬ್ಬರಿ 1.73 ಲಕ್ಷ ಕೋಟಿ ರೂ. ಜಿಎಸ್‌ಟಿ ಸಂಗ್ರವಾಗಿದ್ದು, ಕರ್ನಾಟಕ ಎರಡನೇ ಸ್ಥಾನವನ್ನು ಕಾಯ್ದುಕೊಂಡಿದೆ. ಕಳೆದ ವರ್ಷದಕ್ಕೆ ಹೋಲಿಸಿದರೆ ಒಟ್ಟು ಜಿಎಸ್​ಟಿ ಸಂಗ್ರಹದಲ್ಲಿ ಶೇ. 10ರಷ್ಟು ಹೆಚ್ಚಳವಾಗಿದೆ. ರೀಫಂಡ್ ಕಳೆದ ಬಳಿಕ ನಿವ್ವಳ ಜಿಎಸ್​ಟಿ ಸಂಗ್ರಹ ಮೇಯಲ್ಲಿ 1.44 ಲಕ್ಷ ಕೋಟಿ ರೂ. ಆಗಿದೆ ಎಂದು ವರದಿ ತಿಳಿಸಿದೆ.

ಹಣಕಾಸು ಸಚಿವಾಲಯ ಈ ಬಗ್ಗೆ ಮಾಹಿತಿ ನೀಡಿ, ʼʼಮೇಯಲ್ಲಿ ಜಿಎಸ್‌ಟಿ ಆದಾಯ 1.73 ಲಕ್ಷ ಕೋಟಿ ರೂ. ಆಗಿದ್ದು, ಕಳೆದ ವರ್ಷದಕ್ಕೆ ಹೋಲಿಸಿದರೆ ಒಟ್ಟು ಜಿಎಸ್​ಟಿ ಸಂಗ್ರಹದಲ್ಲಿ ಶೇ. 10ರಷ್ಟು ಹೆಚ್ಚಳ ದಾಖಲಿಸಿದೆ. ಜತೆಗೆ ದೇಶೀಯ ವಹಿವಾಟುಗಳಲ್ಲಿ ಬಲವಾದ ಹೆಚ್ಚಳ (ಶೇಕಡಾ 15.3ರಷ್ಟು ಏರಿಕೆ) ಮತ್ತು ಆಮದುಗಳಲ್ಲಿ ಇಳಿಕೆ (ಶೇಕಡಾ 4.3ರಷ್ಟು ಕಡಿಮೆ) ಕಂಡು ಬಂದಿದೆʼʼ ಎಂದು ತಿಳಿಸಿದೆ.

ರಾಜ್ಯವಾರು ಸಂಗ್ರಹ

ಮಹಾರಾಷ್ಟ್ರವು 26,854 ಕೋಟಿ ರೂ. ಸಂಗ್ರಹಿಸುವ ಮೂಲಕ ಎಂದಿನಂತೆ ಮೊದಲ ಸ್ಥಾನದಲ್ಲಿದೆ. ಎರಡನೇ ಸ್ಥಾನದಲ್ಲಿ ಕರ್ನಾಟಕ ಇದೆ. ಇಲ್ಲಿ 11,889 ಕೋಟಿ ರೂ. ಸಂಗ್ರಹವಾಗಿದೆ. ಗುಜರಾತ್‌ನಲ್ಲಿ 11,325 ಕೋಟಿ ರೂ. ಸಂಗ್ರಹವಾಗಿದ್ದು ಮೂರನೇ ಸ್ಥಾನದಲ್ಲಿದೆ.

ಜಿಎಸ್‌ಟಿ ಸಂಗ್ರಹದಲ್ಲಿ ಟಾಪ್‌ 10 ರಾಜ್ಯಗಳು

ರಾಜ್ಯ ಜಿಎಸ್‌ಟಿ ಸಂಗ್ರಹ (ಕೋಟಿ ರೂ.ಗಳಲ್ಲಿ)
ಮಹಾರಾಷ್ಟ್ರ26,854
ಕರ್ನಾಟಕ11,889
ಗುಜರಾತ್11,325
ತಮಿಳುನಾಡು9,768
ಹರಿಯಾಣ9,289
ಉತ್ತರಪ್ರದೇಶ9,091
ದೆಹಲಿ7,512
ಪಶ್ಚಿಮ ಬಂಗಾಳ5,377
ಒಡಿಶಾ5,027
ತೆಲಂಗಾಣ4,986

ವಿವಿಧ ತೆರಿಗೆಗಳ ಅಂಕಿ ಅಂಶ

  • ಕೇಂದ್ರ ಸರಕು ಮತ್ತು ಸೇವಾ ತೆರಿಗೆ (CGST): 32,409 ಕೋಟಿ ರೂ.
  • ರಾಜ್ಯ ಸರಕು ಮತ್ತು ಸೇವಾ ತೆರಿಗೆ (SGST): 40,265 ಕೋಟಿ ರೂ.
  • ಸಮಗ್ರ ಸರಕು ಮತ್ತು ಸೇವಾ ತೆರಿಗೆ (IGST): ಆಮದು ಸರಕುಗಳ ಮೇಲೆ ಸಂಗ್ರಹಿಸಿದ 39,879 ಕೋಟಿ ರೂ. ಸೇರಿದಂತೆ ಒಟ್ಟು 87,781 ಕೋಟಿ ರೂ.
  • ಸೆಸ್: ಆಮದು ಮಾಡಿದ ಸರಕುಗಳ ಮೇಲೆ ಸಂಗ್ರಹಿಸಿದ 1,076 ಕೋಟಿ ರೂ. ಸೇರಿದಂತೆ ಒಟ್ಟು 12,284 ಕೋಟಿ ರೂ.

ಏಪ್ರಿಲ್‌ನಲ್ಲಿ ಸಾರ್ವಕಾಲಿಕ ದಾಖಲೆ ನಿರ್ಮಿಸಿದ್ದ ಜಿಎಸ್‌ಟಿ ಸಂಗ್ರಹ

ಏಪ್ರಿಲ್‌ನ ಜಿಎಸ್‌ಟಿ ಸಂಗ್ರಹ ಸಾರ್ವಕಾಲಿಕ ದಾಖಲೆ ನಿರ್ಮಿಸಿತ್ತು. 2024ರ ಏಪ್ರಿಲ್‌ನ ಒಟ್ಟು ಜಿಎಸ್‌ಟಿ ಸಂಗ್ರಹವು 2.10 ಲಕ್ಷ ಕೋಟಿ ರೂ.ಗೆ ತಲುಪಿತ್ತು. ಒಟ್ಟಾರೆಯಾಗಿ ಪರೋಕ್ಷ ತೆರಿಗೆ ಆದಾಯವು ಶೇ. 12.4ರಷ್ಟು ಬೆಳವಣಿಗೆಯನ್ನು ದಾಖಲಿಸಿತ್ತು. ದೇಶೀಯ ವಹಿವಾಟು ಮತ್ತು ಆಮದುಗಳಲ್ಲಿನ ಹೆಚ್ಚಳ ಇದಕ್ಕೆ ಕಾರಣ.

ಟ್ಯಾಕ್ಸ್ ಕನೆಕ್ಟ್ ಅಡ್ವೈಸರಿ ಸರ್ವೀಸಸ್ ಎಲ್‌ಎಲ್‌ಪಿಯ ಪಾಲುದಾರ ವಿವೇಕ್ ಜಲನ್ ಈ ಬಗ್ಗೆ ಮಾತನಾಡಿ,  ʼʼ2017ರ ಜುಲೈಯಲ್ಲಿ ಈ ನಿಯಮ ಜಾರಿಗೆ ಬಂದಾಗಿನಿಂದ 2024ರ ಏಪ್ರಿಲ್‌ವರೆಗೆ ಜಿಎಸ್‌ಟಿ ಸಂಗ್ರಹವು ಸರಾಸರಿ ಮಾಸಿಕ ಆದಾಯವನ್ನು ಸುಮಾರು 0.9 ಲಕ್ಷ ಕೋಟಿ ರೂ.ಗೆ ಹೆಚ್ಚಿಸಿದೆʼʼ ಎಂದು ತಿಳಿಸಿದ್ದರು.

ಇದನ್ನೂ ಓದಿ: GST Collection: ಸಾರ್ವಕಾಲಿಕ ದಾಖಲೆ ನಿರ್ಮಿಸಿದ ಜಿಎಸ್‌ಟಿ ಸಂಗ್ರಹ; ಏಪ್ರಿಲ್‌ನ ಕಲೆಕ್ಷನ್‌ ಎಷ್ಟು?

Continue Reading

ಕಾಲಿವುಡ್

Kamal Haasan: ತಮಿಳಿಗನೊಬ್ಬ ದೇಶ ಆಳುವ ದಿನ ಏಕೆ ಬರಬಾರದು? ಕಮಲ್‌ ಹಾಸನ್‌ ಪ್ರಶ್ನೆ!

Kamal Haasan: ಜುಲೈ 12ಕ್ಕೆ ಚಿತ್ರ ವಿಶ್ವಾದ್ಯಂತ ತೆರೆಗೆ ಬರಲಿದೆ. ಹೀಗಾಗಿ ಚಿತ್ರತಂಡ ಪ್ರಚಾರಕ್ಕೆ ಚಾಲನೆ ನೀಡಿದೆ. ಹಿರಿಯ ಸ್ವಾತಂತ್ರ‍್ಯ ಹೋರಾಟಗಾರ ಸೇನಾಪಾತಿಯು ಭ್ರಷ್ಟಾಚಾರದ ವಿರುದ್ಧ ಹೋರಾಡುವ ಕಥೆ ಈ ಸಿನಿಮಾದಲ್ಲಿದ್ದು, ಕಮಲ್ ಹಾಸನ್ ಜತೆಗೆ ಸಿದ್ಧಾರ್ಥ್, ರಕುಲ್ ಪ್ರೀತ್ ಸಿಂಗ್, ಕಾಳಿದಾಸ್ ಜಯರಾಮ್, ಪ್ರಿಯಾ ಭವಾನಿ ಶಂಕರ್, ಗುಲ್ಷನ್ ಗ್ರೊವರ್, ವಿವೇಕ್, ಸಮುದ್ರಖನಿ, ನೆಡುಮುಡಿ ವೇಣು, ಬಾಬಿ ಸಿಂಹ, ದೀಪಾ ಶಂಕರ್ ಮುಂತಾದವರು ನಟಿಸಿದ್ದಾರೆ.

VISTARANEWS.COM


on

Kamal Haasan gives a fiery speech at Indian 2 event
Koo

ಚೆನ್ನೈ: ಕಮಲ್‌ ಹಾಸನ್‌ (Kamal Haasan) ಅಭಿನಯದ ʻಇಂಡಿಯನ್ 2ʼ ಸಿನಿಮಾ ಆಡಿಯೊ ಲಾಂಚ್‌ ಕಾರ್ಯಕ್ರಮ ಅದ್ಧೂರಿಯಾಗಿ ನೆರವೇರಿದೆ. ನಿರ್ದೇಶಕ ಶಂಕರ್, ಕಮಲ್ ಹಾಸನ್, ಅನಿರುದ್ಧ್ ರವಿಚಂದರ್, ರಕುಲ್ ಪ್ರೀತ್ ಸಿಂಗ್ ಮತ್ತು ಕಾಜಲ್ ಅಗರ್ವಾಲ್, ಸಿಲಂಬರಸನ್ ಟಿಆರ್, ಲೋಕೇಶ್ ಕನಕರಾಜ್, ನೆಲ್ಸನ್ ದಿಲೀಪ್‌ಕುಮಾರ್, ಬಾಬಿ ಸಿಂಹ ಮತ್ತು ಬ್ರಹ್ಮಾನಂದಂ ಹಾಜರಿದ್ದರು. ಕಾರ್ಯಕ್ರಮದಲ್ಲಿ ಅತ್ಯಂತ ಖಡಕ್‌ ಆಗಿ ಭಾಷಣ ಮಾಡಿದರು ಕಮಲ್‌ ಹಾಸನ್‌.

ಕಮಲ್‌ ಭಾಷಣದಲ್ಲಿ ʻʻನಾನು ತಮಿಳಿಗ ಮತ್ತು ಭಾರತೀಯ. ನಾನು ಒಮ್ಮೆ ತಮಿಳಿಗ ಹಾಗೂ ಒಮ್ಮೆ ಭಾರತೀಯ ಎರಡೂ ಆಗಬಲ್ಲೆ. ಒಡೆದು ಆಳುವುದು ಬ್ರಿಟಿಷ್ ಪರಿಕಲ್ಪನೆಯಾಗಿತ್ತು. ಅವರು ಹಾಗೆ ಮಾಡಿದರು. ಏಕೆಂದರೆ ಭಾರತೀಯರು ಒಗ್ಗಟ್ಟಾದಾಗ ಓಡಿಹೋಗಲು ಅವರಿಗೆ ಒಂದು ಮನೆ ಎಂಬುದಿತ್ತು. ಆದರೆ ಇಂದು ಒಡೆದು ಆಳುತ್ತಿರುವವರು ಎಲ್ಲಿಗೆ ಓಡಿಹೋಗುತ್ತಾರೆ?’ ಎಂದು ಅವರು ಪ್ರಶ್ನೆ ಮಾಡಿದರು. ಭಾರತವನ್ನು ಒಡೆದು ಆಳುತ್ತಿರುವವರ ವಿರುದ್ಧ ಭಾರತೀಯರು ಒಂದಲ್ಲ ಒಂದು ದಿನ ದಂಗೆ ಏಳುತ್ತಾರೆ ಎಂದರು.

“ಪ್ರತಿಯೊಂದು ನಗರವೂ ​​ನಿಮ್ಮ ನಗರವೇ, ಎಲ್ಲರೂ ನಿಮ್ಮ ಬಂಧುಗಳೇ. ನಮ್ಮ ಈ ತಮಿಳು ರಾಜ್ಯಕ್ಕೆ ಬಂದವರಿಗೆ ನಾವು ಜೀವ ಕೊಡುವುದರಲ್ಲಿಯೂ ಹೆಸರುವಾಸಿಯಾಗಿದ್ದೇವೆ. ತಮಿಳಿಗನೊಬ್ಬ ದೇಶವನ್ನು ಆಳುವ ದಿನ ಏಕೆ ಬರಬಾರದು? ಇದು ನನ್ನ ದೇಶ, ಮತ್ತು ನಾವು ಏಕತೆಯನ್ನು ಕಾಪಾಡಬೇಕುʼʼಎಂದರು.  ಕಮಲ್ ಹಾಸನ್ ನಟರಾಗಿರುವ ಜೊತೆಗೆ ರಾಜಕಾರಣಿಯೂ ಹೌದು, ‘ಮಕ್ಕಳ್ ನಿಧಿ ಮಯಂ’ ಹೆಸರಿನ ಪಕ್ಷ ಕಟ್ಟಿ ನಡೆಸುತ್ತಿದ್ದಾರೆ.

ಇದನ್ನೂ ಓದಿ: Dolly Dhananjay: ದಾವಣಗೆರೆಯಲ್ಲಿ ‘ಕೋಟಿ’ ಅಬ್ಬರ; ಜೂನ್ 14ರಂದು ಸಿನಿಮಾ ತೆರೆಗೆ!

ಈ ವರ್ಷದ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾದ `ಇಂಡಿಯನ್ 2‘ (Indian 2 Audio Launch) ಬಿಡುಗಡೆಗೆ ಮುಂಚಿತವಾಗಿ, ಜೂನ್ 1ರಂದು ಚೆನ್ನೈನ ನೆಹರು ಕ್ರೀಡಾಂಗಣದಲ್ಲಿ ಮೆಗಾ ಆಡಿಯೊ ಬಿಡುಗಡೆ ಕಾರ್ಯಕ್ರಮ ಅದ್ಧೂರಿಯಾಗಿ ನೆರವೇರಿತು.

ಜುಲೈ 12ಕ್ಕೆ ಚಿತ್ರ ವಿಶ್ವಾದ್ಯಂತ ತೆರೆಗೆ ಬರಲಿದೆ. ಹೀಗಾಗಿ ಚಿತ್ರತಂಡ ಪ್ರಚಾರಕ್ಕೆ ಚಾಲನೆ ನೀಡಿದೆ. ಹಿರಿಯ ಸ್ವಾತಂತ್ರ‍್ಯ ಹೋರಾಟಗಾರ ಸೇನಾಪಾತಿಯು ಭ್ರಷ್ಟಾಚಾರದ ವಿರುದ್ಧ ಹೋರಾಡುವ ಕಥೆ ಈ ಸಿನಿಮಾದಲ್ಲಿದ್ದು, ಕಮಲ್ ಹಾಸನ್ ಜತೆಗೆ ಸಿದ್ಧಾರ್ಥ್, ರಕುಲ್ ಪ್ರೀತ್ ಸಿಂಗ್, ಕಾಳಿದಾಸ್ ಜಯರಾಮ್, ಪ್ರಿಯಾ ಭವಾನಿ ಶಂಕರ್, ಗುಲ್ಷನ್ ಗ್ರೊವರ್, ವಿವೇಕ್, ಸಮುದ್ರಖನಿ, ನೆಡುಮುಡಿ ವೇಣು, ಬಾಬಿ ಸಿಂಹ, ದೀಪಾ ಶಂಕರ್ ಮುಂತಾದವರು ನಟಿಸಿದ್ದಾರೆ.

ಅನಿರುದ್ಧ್ ರವಿಚಂದರ್ ಅವರು ಈ ಸಿನಿಮಾಗೆ ಸಂಗೀತ ಜವಾಬ್ದಾರಿ ಹೊತ್ತಿದ್ದು, ರವಿವರ್ಮನ್ ಹಾಗೂ ರತ್ನವೇಲು ಅವರು ಛಾಯಾಗ್ರಹಣ ಮಾಡಿದ್ದಾರೆ. ಎ. ಶ್ರೀಕರ್ ಪ್ರಸಾದ್ ಸಂಕಲನದ ಕೆಲಸ ನಿಭಾಯಿಸಿದ್ದಾರೆ.

1996ರಲ್ಲಿ ತೆರೆಕಂಡ ಎಸ್‌. ಶಂಕರ್‌ ನಿರ್ದೇಶನದ ʼಇಂಡಿಯನ್‌ʼ ತಮಿಳು ಚಿತ್ರದಲ್ಲಿ ಕಮಲ್‌ ಹಾಸನ್‌ ಜತೆಗೆ ಮನೀಶಾ ಕೊಯಿರಾಲ, ಊರ್ಮಿಳಾ ಮಾತೋಂಡ್ಕರ್‌, ಸುಕನ್ಯಾ, ಮನೋರಮಾ, ನೆಡುಮುಡಿ ವೇಣು, ಕಸ್ತೂರಿ ಮತ್ತಿತರರು ಮುಖ್ಯ ಪಾತ್ರಗಳಲ್ಲಿ ನಟಿಸಿದ್ದರು. ಭಾರತದ ಕ್ಲಾಸಿಕ್‌ ಚಿತ್ರಗಳಲ್ಲಿ ಇದೂ ಒಂದು ಎಂದು ಪರಿಗಣಿಸಲಾಗುತ್ತದೆ. ಪ್ರತಿಷ್ಠಿತ ಆಸ್ಕರ್‌ ಪ್ರಶಸ್ತಿಯ ನಾಮನಿರ್ದೇಶನಕ್ಕೂ ಇದನ್ನು ಪರಿಗಣಿಸಲಾಗಿತ್ತು. ಮಾತ್ರವಲ್ಲ ಕಮಲ್‌ ಹಾಸನ್‌ ತಮ್ಮ ನಟನೆಗಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನೂ ಪಡೆದುಕೊಂಡಿದ್ದರು. ಎ.ಆರ್‌.ರೆಹಮಾನ್‌ ಅವರ ಸಂಗೀತವೂ ಸಿನಿಪ್ರಿಯರ ಗಮನ ಸೆಳೆದಿತ್ತು.

Continue Reading
Advertisement
Karnataka Weather Forecast
ಮಳೆ29 mins ago

Karnataka Weather : ಕೋಲಾರದಲ್ಲಿ ಅಬ್ಬರಿಸಿದ ವರುಣ; ಒಳನಾಡಿನಲ್ಲಿ ತಾಪಮಾನ ಇಳಿಕೆ

Exit Polls
ವಾಣಿಜ್ಯ31 mins ago

Exit Polls: ಚುನಾವಣೋತ್ತರ ಸಮೀಕ್ಷೆ ಪ್ರಕಟವಾದ ಬೆನ್ನಲ್ಲೇ ಭಾರತೀಯ ಷೇರು ಮಾರುಕಟ್ಟೆಯಲ್ಲಿ ಜಿಗಿತ ಸಾಧ್ಯತೆ

Raichur Lok Sabha Constituency
ರಾಯಚೂರು46 mins ago

Raichur Lok Sabha Constituency: ರಾಯಚೂರಿನಲ್ಲಿ ನಾಯಕರ ನಡುವಿನ ಕಾಳಗದಲ್ಲಿ ಯಾರು ರಾಜ?

Accident Case
ಕ್ರೈಂ55 mins ago

Accident Case : ಕರೆಂಟ್‌ ಶಾಕ್‌ಗೆ ಕಂಬದಲ್ಲೇ ಕಾರ್ಮಿಕನ ನರಳಾಟ; ಭೀಕರ ಅಪಘಾತಕ್ಕೆ ಇಬ್ಬರು ಬಲಿ

Lok Sabha Election 2024
ಕರ್ನಾಟಕ1 hour ago

Lok Sabha Election 2024: ಮೈಸೂರು ಕ್ಷೇತ್ರದಲ್ಲಿ ಗೆಲುವು ಯಾರಿಗೆ? ಶ್ವಾನದಿಂದ ಅಚ್ಚರಿಯ ಭವಿಷ್ಯ!

Aam Panna Recipe
ಆಹಾರ/ಅಡುಗೆ1 hour ago

Aam Panna Recipe: ಆಮ್‌ ಪನ್ನಾ! ಮಾವಿನಕಾಯಿಯ ಅದ್ಭುತ ಪೇಯ ಇದು; ನೀವೂ ಮಾಡಿ ನೋಡಿ

Arvind Kejriwal
ದೇಶ2 hours ago

Arvind Kejriwal: ತಿಹಾರ್‌ ಜೈಲಿಗೆ ಮರಳಿದ ದಿಲ್ಲಿ ಸಿಎಂ ಅರವಿಂದ ಕೇಜ್ರಿವಾಲ್‌; ಜೂ. 5ರಂದು ಮತ್ತೆ ಜಾಮೀನು ಅರ್ಜಿ ವಿಚಾರಣೆ

GST Collection
ವಾಣಿಜ್ಯ2 hours ago

GST Collection: ಜಿಎಸ್‌ಟಿ ಸಂಗ್ರಹದಲ್ಲಿ ಕರ್ನಾಟಕ ನಂ. 2; ಇಲ್ಲಿ ಸಂಗ್ರಹವಾಗಿದ್ದು ಎಷ್ಟು?

Kamal Haasan gives a fiery speech at Indian 2 event
ಕಾಲಿವುಡ್2 hours ago

Kamal Haasan: ತಮಿಳಿಗನೊಬ್ಬ ದೇಶ ಆಳುವ ದಿನ ಏಕೆ ಬರಬಾರದು? ಕಮಲ್‌ ಹಾಸನ್‌ ಪ್ರಶ್ನೆ!

CET Ranking
ಬೆಂಗಳೂರು2 hours ago

CET Ranking : ಸಿಇಟಿ ರ‍್ಯಾಂಕಿಂಗ್‌ನಲ್ಲಿ ಎಂಜಿನಿಯರಿಂಗ್‌ನ 10 ಟಾಪರ್ಸ್‌ಗಳು ಬೆಂಗಳೂರಿನ ವಿದ್ಯಾರ್ಥಿಗಳು!

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ8 hours ago

Karnataka Rain : ವೀಕೆಂಡ್‌ ಮೋಜಿಗೆ ವರುಣ ಅಡ್ಡಿ; ಭಾನುವಾರ ಸಂಜೆಗೆ ಮಳೆ ಕಾಟ

Liquor ban
ಬೆಂಗಳೂರು1 day ago

Liquor Ban : ಮುಂದಿನ ಏಳು ದಿನಗಳಲ್ಲಿ ನಾಲ್ಕೂವರೆ ದಿನ ಬಾರ್ ಕ್ಲೋಸ್; ಎಣ್ಣೆ ಸಿಗೋದು ಯಾವ ದಿನ?

Assault Case in Shivamogga
ಕ್ರೈಂ3 days ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ5 days ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು5 days ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ6 days ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ1 week ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು1 week ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ1 week ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ2 weeks ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

ಟ್ರೆಂಡಿಂಗ್‌