Jio Cloud PC : ಮನೆಯ ಟಿವಿಯನ್ನು ಕಂಪ್ಯೂಟರ್ ಆಗಿ ಪರಿವರ್ತಿಸಲಿದೆ 'ಜಿಯೋ ಕ್ಲೌಡ್ ಪಿಸಿ' - Vistara News

ಹೊಸ ಸುದ್ದಿ

Jio Cloud PC : ಮನೆಯ ಟಿವಿಯನ್ನು ಕಂಪ್ಯೂಟರ್ ಆಗಿ ಪರಿವರ್ತಿಸಲಿದೆ ‘ಜಿಯೋ ಕ್ಲೌಡ್ ಪಿಸಿ’

Jio Cloud PC : ಮನೆಗಳ ಸ್ಮಾರ್ಟ್ ಟಿವಿಗಳನ್ನು ಸುಲಭವಾಗಿ ಕಂಪ್ಯೂಟರ್‌ಗಳಾಗಿ ಪರಿವರ್ತಿಸುವ ತಂತ್ರಜ್ಞಾನವನ್ನು ರಿಲಯನ್ಸ್ ಜಿಯೋ ಇಂಡಿಯಾ ಮೊಬೈಲ್ ಕಾಂಗ್ರೆಸ್ 2024ರಲ್ಲಿ ಪ್ರದರ್ಶಿಸಿದೆ. ಜಿಯೋ ಕ್ಲೌಡ್ ಪಿಸಿ ಎಂಬುದು ತಂತ್ರಜ್ಞಾನವಾಗಿದ್ದು, ಯಾವುದೇ ಟಿವಿಯು ಇಂಟರ್ ನೆಟ್ ಮೂಲಕ ಕ್ಲೌಡ್ ಕಂಪ್ಯೂಟಿಂಗ್‌ಗೆ ಸಂಪರ್ಕಿಸಲು ಸಾಧ್ಯವಾಗುತ್ತದೆ.

VISTARANEWS.COM


on

Jio Cloud PC to turn home TV into computer
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ

ನವದೆಹಲಿ : ಮನೆಗಳ ಸ್ಮಾರ್ಟ್ ಟಿವಿಗಳನ್ನು ಸುಲಭವಾಗಿ ಕಂಪ್ಯೂಟರ್‌ಗಳಾಗಿ ಪರಿವರ್ತಿಸುವ ತಂತ್ರಜ್ಞಾನವನ್ನು ರಿಲಯನ್ಸ್ ಜಿಯೋ ಇಂಡಿಯಾ ಮೊಬೈಲ್ ಕಾಂಗ್ರೆಸ್ 2024ರಲ್ಲಿ ಪ್ರದರ್ಶಿಸಿದೆ. ಜಿಯೋ ಕ್ಲೌಡ್ ಪಿಸಿ (Jio Cloud PC) ಹೆಸರಿನ ಈ ತಂತ್ರಜ್ಞಾನವು ಕೇವಲ ನೂರು ರೂಪಾಯಿಗಳಿಗೆ ಟಿವಿಯನ್ನು ಕಂಪ್ಯೂಟರ್ ಆಗಿ ಪರಿವರ್ತಿಸುತ್ತದೆ. ಇದಕ್ಕೆ ಬೇಕಾಗಿರುವುದು ಇಂಟರ್ ನೆಟ್ ಸಂಪರ್ಕ, ಸ್ಮಾರ್ಟ್ ಟಿವಿ, ಟೈಪಿಂಗ್ ಕೀಬೋರ್ಡ್, ಮೌಸ್ ಮತ್ತು ಜಿಯೋ ಕ್ಲೌಡ್ ಪಿಸಿ ಅಪ್ಲಿಕೇಷನ್. ಟಿವಿಗಳು ಸ್ಮಾರ್ಟ್ ಅಲ್ಲದಿದ್ದಲ್ಲಿ ಸಾಮಾನ್ಯ ಟಿವಿಗಳು ಸಹ ಜಿಯೋಫೈಬರ್ (JioFiber) ಅಥವಾ ಜಿಯೋಏರ್ ಫೈಬರ್ (JioAirFiber) ಜತೆಗೆ ಬರುವ ಸೆಟ್-ಟಾಪ್ ಬಾಕ್ಸ್ ಮೂಲಕ ಕಂಪ್ಯೂಟರ್ ಆಗಬಹುದು.

ಜಿಯೋ ಕ್ಲೌಡ್ ಪಿಸಿ ಎಂಬುದು ತಂತ್ರಜ್ಞಾನವಾಗಿದ್ದು, ಯಾವುದೇ ಟಿವಿಯು ಇಂಟರ್ ನೆಟ್ ಮೂಲಕ ಕ್ಲೌಡ್ ಕಂಪ್ಯೂಟಿಂಗ್‌ಗೆ ಸಂಪರ್ಕಿಸಲು ಸಾಧ್ಯವಾಗುತ್ತದೆ. ಇದು ಬಳಸುವುದಕ್ಕೆ ಸಹ ಸುಲಭ. ಆದರೆ ಗ್ರಾಹಕರು ಅಪ್ಲಿಕೇಷನ್‌ಗೆ ಲಾಗಿನ್ ಮಾಡಬೇಕಾಗುತ್ತದೆ ಮತ್ತು ಕ್ಲೌಡ್‌ನಲ್ಲಿ ಸಂಗ್ರಹವಾಗಿರುವ ಎಲ್ಲ ಡೇಟಾ ಟಿವಿಯಲ್ಲಿ ಕಾಣಿಸುತ್ತದೆ. ಇಮೇಲ್, ಸಂದೇಶ ಕಳುಹಿಸುವುದು, ಸಾಮಾಜಿಕ ನೆಟ್‌ವರ್ಕಿಂಗ್, ಇಂಟರ್ ನೆಟ್ ಸರ್ಫಿಂಗ್, ಶಾಲಾ ಪ್ರಾಜೆಕ್ಟ್ ಗಳು, ಕಚೇರಿ ಪ್ರಸೆಂಟೇಷನ್ ಮುಂತಾದ ಕಂಪ್ಯೂಟರ್‌ನಲ್ಲಿ ಮಾಡಬಹುದಾದ ಎಲ್ಲ ಕೆಲಸಗಳನ್ನು ಮನೆಯ ಟಿವಿಯಲ್ಲಿ ಮಾಡಬಹುದು. ಸರಳವಾಗಿ ಹೇಳುವುದಾದರೆ, ಎಲ್ಲ ಡೇಟಾವು ಕ್ಲೌಡ್‌ನಲ್ಲಿರುತ್ತದೆ ಮತ್ತು ಸರ್ವರ್, ಸ್ಟೋರೇಜ್, ಡೇಟಾಬೇಸ್, ನೆಟ್‌ವರ್ಕಿಂಗ್, ಸಾಫ್ಟ್‌ವೇರ್ ಮತ್ತು ಅನಲಿಟಿಕ್ಸ್ ಥರದ ಸೇವೆಗಳನ್ನು ಟಿವಿ ಮೂಲಕ ಬಳಕೆ ಮಾಡಬಹುದು.

 Jio Cloud PC to turn home TV into computer

ಭಾರತೀಯ ಮಧ್ಯಮ ವರ್ಗದ ಕುಟುಂಬಗಳು ಹೆಚ್ಚಿನ ಪ್ರಮಾಣದಲ್ಲಿ ಕಂಪ್ಯೂಟರ್‌ಗೆ ಸಂಪರ್ಕ ಹೊಂದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಈ ತಂತ್ರಜ್ಞಾನ ವರದಾನವಿದ್ದಂತೆ. ಏಕೆಂದರೆ ಕ್ಲೌಡ್ ಕಂಪ್ಯೂಟಿಂಗ್ ಸಾಮರ್ಥ್ಯವನ್ನು ಅಗತ್ಯಕ್ಕೆ ತಕ್ಕಂತೆ ಹೆಚ್ಚಿಸಬಹುದು ಅಥವಾ ಕಡಿಮೆ ಮಾಡಬಹುದು. ಇದು ಸುರಕ್ಷಿತ ಮಾತ್ರವಲ್ಲ, ಡೇಟಾ ಮರುಪಡೆಯುವಿಕೆ ಸಹ ಸಾಮಾನ್ಯ ಕಂಪ್ಯೂಟರ್ ಅನ್ನು ಬಳಸುವುದಕ್ಕಿಂತ ಸುಲಭವಾಗಿದೆ. ಟಿವಿ ಜೊತೆಗೆ ಮೊಬೈಲ್ ನಲ್ಲೂ ಬಳಸಬಹುದು. ಕಂಪನಿಯು ಈ ಅಪ್ಲಿಕೇಷನ್‌ ಬಿಡುಗಡೆ ದಿನಾಂಕವನ್ನು ಇನ್ನೂ ಘೋಷಿಸದಿದ್ದರೂ ಮುಂದಿನ ಕೆಲವು ತಿಂಗಳಲ್ಲಿ ಇದನ್ನು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಬಹುದು.

ಭಾರತದ ಡೇಟಾವು ಭಾರತೀಯ ಡೇಟಾ ಕೇಂದ್ರಗಳಲ್ಲಿಯೇ ಇರಬೇಕು: ಆಕಾಶ್ ಅಂಬಾನಿ

ಭಾರತದ ಡೇಟಾವನ್ನು ಭಾರತೀಯ ಡೇಟಾ ಕೇಂದ್ರಗಳಲ್ಲಿಯೇ ಇರಿಸಬೇಕು ಎಂದು ರಿಲಯನ್ಸ್ ಜಿಯೋದ ಅಧ್ಯಕ್ಷರಾದ ಆಕಾಶ್ ಅಂಬಾನಿ ಅವರು ಪ್ರತಿಪಾದನೆ ಮಾಡಿದ್ದಾರೆ. ದೆಹಲಿಯಲ್ಲಿ ನಡೆಯುತ್ತಿರುವ ಇಂಡಿಯಾ ಮೊಬೈಲ್ ಕಾಂಗ್ರೆಸ್- 2024ರಲ್ಲಿ ಭಾಗವಹಿಸಿದ್ದ ಅವರು ಈ ಅಭಿಪ್ರಾಯ ಪಟ್ಟರು. ಭಾರತದಲ್ಲಿ ಡೇಟಾ ಉತ್ಪಾದನೆ ಪ್ರಮಾಣ ಹಾಗೂ ವೇಗ ಎರಡೂ ತೀವ್ರವಾಗಿ ಹೆಚ್ಚಾಗಿದೆ. ಇನ್ನು ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ನೊಂದಿಗೆ (ಕೃತಕ ಬುದ್ಧಿಮತ್ತೆ) ಇದು ಇನ್ನಷ್ಟು ವೇಗವನ್ನು ಪಡೆದುಕೊಳ್ಳುತ್ತದೆ. ಈ ಕಾರಣದಿಂದ ದೇಶದಲ್ಲಿಯೇ ಎಐ ಹಾಗೂ ಮಶೀನ್ ಲರ್ನಿಂಗ್ ಡೇಟಾ ಸೆಂಟರ್ ಗಳನ್ನು ಸ್ಥಾಪಿಸುವ ಅಗತ್ಯವಿದೆ. ಇದಕ್ಕಾಗಿ ಭಾರತೀಯ ಕಂಪನಿಗಳಿಗೆ ಸರ್ಕಾರದಿಂದ ಪ್ರೋತ್ಸಾಹ ಸಿಗಬೇಕು. ದತ್ತಾಂಶ ಕೇಂದ್ರ ನೀತಿ- 2020ರ ಕರಡನ್ನು ಶೀಘ್ರದಲ್ಲಿಯೇ ನವೀಕರಿಸಬೇಕು ಎಂದು ಅವರು ಸರ್ಕಾರನ್ನು ಮನವಿ ಮಾಡಿದರು.

ಆಕಾಶ್ ಅಂಬಾನಿ ಅವರು ಮಾತು ಮುಂದುವರಿಸಿ, “ಅಭಿವೃದ್ಧಿ ಹೊಂದಿದ ಭಾರತದ ಕನಸನ್ನು ನನಸಾಗಿಸಲು ಕೃತಕ ಬುದ್ಧಿಮತ್ತೆ (AI) ಅತ್ಯಂತ ಮುಖ್ಯವಾಗಿದೆ. ಮತ್ತು ಕೃತಕ ಬುದ್ಧಿಮತ್ತೆಯ ಪ್ರಯೋಜನಗಳನ್ನು ಪ್ರತಿ ಭಾರತೀಯರಿಗೂ ತಲುಪಿಸಲು ಜಿಯೋ ಪ್ರಯತ್ನಗಳನ್ನು ಆರಂಭಿಸಿದೆ. ನಾವು ಮೊಬೈಲ್ ಬ್ರಾಡ್‌ಬ್ಯಾಂಡ್‌ನೊಂದಿಗೆ ಮಾಡಿದಂತೆಯೇ ಕೈಗೆಟುಕುವ ಬೆಲೆಯಲ್ಲಿ ಶಕ್ತಿಯುತವಾದ ಎಐ ಮಾದರಿಗಳು ಮತ್ತು ಸೇವೆಗಳನ್ನು ತಲುಪಿಸಲು ಬದ್ಧರಾಗಿದ್ದೇವೆ. ಇದಕ್ಕಾಗಿ, ನಾವು ರಾಷ್ಟ್ರೀಯ ಎಐ ಮೂಲಸೌಕರ್ಯದ ಆಧಾರ ಸಿದ್ಧಪಡಿಸುತ್ತಿದ್ದೇವೆ ಎಂದು ಹೇಳಿದರು.

ಪ್ರಧಾನಿ ನರೇಂದ್ರ ಮೋದಿಯವರ ದೂರದೃಷ್ಟಿಯ ನಾಯಕತ್ವವನ್ನು ಶ್ಲಾಘಿಸಿದ ಆಕಾಶ್ ಅಂಬಾನಿ, “ಇಂದು ಭಾರತೀಯ ಮೊಬೈಲ್ ಕಂಪನಿಗಳು ಮತ್ತು ಅಭಿವೃದ್ಧಿ ಹೊಂದುತ್ತಿರುವ ಸ್ಟಾರ್ಟ್-ಅಪ್ ಪರಿಸರ ವ್ಯವಸ್ಥೆಯಿಂದಾಗಿ ಭಾರತವು ಅಭಿವೃದ್ಧಿ ಹೊಂದಿದ ದೇಶಗಳು ಸೇರಿದಂತೆ ಜಗತ್ತಿಗೆ ಎಐ ಸಲ್ಯೂಷನ್ ಗಳನ್ನು ಒದಗಿಸಬಹುದು. ಸರ್ಕಾರವು ಉದ್ಯಮ ಮತ್ತು ನಾವೀನ್ಯತೆಗೆ ಹೆಚ್ಚು ಪ್ರೋತ್ಸಾಹ- ಉತ್ತೇಜನ ನೀಡುವುದರಿಂದ ಭಾರತದಲ್ಲಿ ಅತಿದೊಡ್ಡ ಡಿಜಿಟಲ್ ಕ್ರಾಂತಿ ಸಂಭವಿಸಿದೆ. ನವ ಭಾರತದಲ್ಲಿ ಈಗ ವ್ಯಾಪಾರ ಸಂಪೂರ್ಣ ಬದಲಾಗಿದೆ. 145 ಕೋಟಿ ಭಾರತೀಯರ ಅಗತ್ಯಗಳು ಮತ್ತು ನಿರೀಕ್ಷೆಗಳನ್ನು ಪೂರೈಸಲು ಸರ್ಕಾರ ಮತ್ತು ಉದ್ಯಮವು ಉತ್ತಮ ಬಾಂಧವ್ಯದಲ್ಲಿ ಕೆಲಸ ಮಾಡುತ್ತಿವೆ ಎಂದು ಅವರು ಹೇಳಿದರು.

ಭಾರತವು ಮೊಬೈಲ್ ಆವಿಷ್ಕಾರದಲ್ಲಿ ಮುಂಚೂಣಿಯಲ್ಲಿರುತ್ತದೆ. ಆದರೆ ನಾವು ಸಂಪರ್ಕಿತ (ಕನೆಕ್ಟೆಡ್), ಬುದ್ಧಿವಂತ (ಇಂಟೆಲಿಜೆಂಟ್) ಭವಿಷ್ಯಕ್ಕಾಗಿ ಎಐ ಶಕ್ತಿಯನ್ನು ಬಳಸಿಕೊಳ್ಳುತ್ತೇವೆ. ಕಂಪ್ಯೂಟರ್ ಮತ್ತು ಇಂಟರ್‌ನೆಟ್ ಅಳವಡಿಕೆ ಸಮಯದಲ್ಲಿ ಆದಂತೆಯೇ ಇದರಿಂದಲೂ ಉದ್ಯೋಗವೂ ಹೆಚ್ಚಾಗುತ್ತವೆ ಎಂದು ಅವರು ಅಭಿಪ್ರಾಯ ಪಟ್ಟರು.

ಜುಲೈ- ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ನಿವ್ವಳ ಲಾಭ 16,563 ಕೋಟಿ ರೂಪಾಯಿ

ಮುಂಬೈ: ರಿಲಯನ್ಸ್ ಇಂಡಸ್ಟ್ರೀಸ್ ನಿಂದ ಸೋಮವಾರ (ಅಕ್ಟೋಬರ್ 14) ಜುಲೈನಿಂದ ಸೆಪ್ಟೆಂಬರ್ ಅವಧಿಯ ಎರಡನೇ ತ್ರೈಮಾಸಿಕದ ಹಣಕಾಸು ಫಲಿತಾಂಶವನ್ನು ಘೋಷಣೆ ಮಾಡಿದೆ. ಹಿಂದಿನ ತ್ರೈಮಾಸಿಕಕ್ಕೆ ಹೋಲಿಸಿದರೆ ಈ ಬಾರಿ ನಿವ್ವಳ ಲಾಭವು ಶೇಕಡಾ 9.4ರಷ್ಟು ಏರಿಕೆಯಾಗಿ 16,563 ಕೋಟಿ ರೂಪಾಯಿ ತಲುಪಿದೆ. ಭಾರತದ ಅತ್ಯಂತ ಮೌಲ್ಯಯುತ ಕಂಪನಿ ಎನಿಸಿಕೊಂಡಿರುವ ರಿಲಯನ್ಸ್ ಇಂಡಸ್ಟ್ರೀಸ್, ಪ್ರಸಕ್ತ ತ್ರೈಮಾಸಿಕದಲ್ಲಿ ಕಾರ್ಯಾಚರಣೆ ಮೂಲಕ ಗಳಿಸಿರುವ ಆದಾಯವು 2.35 ಲಕ್ಷ ಕೋಟಿಗಳಾಗಿದ್ದು, ಕಳೆದ ತ್ರೈಮಾಸಿಕದಲ್ಲಿ ಆದಾಯವು 2.36 ಲಕ್ಷ ಕೋಟಿ ರೂಪಾಯಿಗಳಿತ್ತು.

ಜಿಯೋ ಪ್ಲಾಟ್ ಫಾರ್ಮ್

ರಿಲಯನ್ಸ್ ಕಂಪನಿಯ ಡಿಜಿಟಲ್ ಸೇವೆ ವ್ಯವಹಾರದ ಅಂಗವಾದ ಜಿಯೋ ಪ್ಲಾಟ್ ಫಾರ್ಮ್ಸ್ ಜುಲೈನಿಂದ ಸೆಪ್ಟೆಂಬರ್ ಕೊನೆ ತನಕದ ತ್ರೈಮಾಸಿಕದಲ್ಲಿ ದಾಖಲೆಯ 6,536 ಕೋಟಿ ರೂಪಾಯಿ ಲಾಭ ಗಳಿಸಿದೆ. ವರ್ಷದಿಂದ ವರ್ಷಕ್ಕೆ ಹೋಲಿಕೆ ಮಾಡಿದರೆ ಶೇ 23.2ರಷ್ಟು ಬೆಳವಣಿಗೆ ಕಂಡಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಜಿಯೋ 5,058 ಕೋಟಿ ರೂಪಾಯಿ ವರದಿ ಮಾಡಿತ್ತು. ಕಂಪನಿಯ ಆದಾಯವು ವರ್ಷದಿಂದ ವರ್ಷಕ್ಕೆ ಶೇ 14.5ರಷ್ಟು ಏಇಕೆ ಕಂಡು, 28,338 ಕೋಟಿ ರೂಪಾಯಿ ತಲುಪಿದೆ. “ಡಿಜಿಟಲ್ ಸೇವೆಯಲ್ಲಿನ ಬೆಳವಣಿಗೆಗೆ ಮುಖ್ಯ ಕಾರಣ ನೋಡುವುದಾದರೆ ಪ್ರತಿ ಬಳಕೆದಾರರಿಂದ ಬರುವ ಸರಾಸರಿ ಆದಾಯದಲ್ಲಿನ ಹೆಚ್ಚಳ ಹಾಗೂ ಗ್ರಾಹಕರು ತೊಡಗಿಕೊಳ್ಳುವ ಪ್ರಮಾಣದಲ್ಲಿನ ಸುಧಾರಣೆಯಿಂದ ನಮ್ಮ ಸೇವೆಗಳಲ್ಲಿ ಪ್ರಬಲವಾದ ಮೌಲ್ಯ ಸೇರ್ಪಡೆಯಾಗಿದೆ,” ಎಂದು ಕಂಪನಿಯ ಅಧ್ಯಕ್ಷ ಹಾಗೂ ಕಾರ್ಯನಿರ್ವಾಹಕ ನಿರ್ದೇಶಕ ಮುಕೇಶ್ ಅಂಬಾನಿ ಹೇಳಿದ್ದಾರೆ.

ಜಿಯೋದ ತಿಂಗಳ ಎಆರ್ ಪಿಯು (ಪ್ರತಿ ಬಳಕೆದಾರರಿಂದ ಬರುವಂಥ ಸರಾಸರಿ ಆದಾಯ) ವರ್ಷದಿಂದ ವರ್ಷಕ್ಕೆ ಶೇಕಡಾ 7.4ರಷ್ಟು ಏರಿಕೆಯಾಗಿ, 195.1 ರೂಪಾಯಿ ತಲುಪಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಸರಾಸರಿ ಆದಾಯವು 181.70 ರೂಪಾಯಿ ಇತ್ತು. ಇನ್ನು ಮುಂದಿನ ಎರಡು- ಮೂರು ತ್ರೈಮಾಸಿಕದಲ್ಲಿ ದರ ಏರಿಕೆಯ ಪೂರ್ಣ ಪ್ರಮಾಣದ ಪ್ರಭಾವ ತಿಳಿಯಲಿದೆ ಎಂದು ಕಂಪನಿ ಹೇಳಿದೆ. 5ಜಿ ಸೇವೆಯ ವಿಚಾರದಲ್ಲಿ ಮಾರುಕಟ್ಟೆಯಲ್ಲಿ ಜಿಯೋ ನಾಯಕತ್ವದ ಸ್ಥಾನದಲ್ಲಿದೆ. ಒಟ್ಟಾರೆ ಜಿಯೋ 5ಜಿ ಬಳಕೆದಾರರ ಸಂಖ್ಯೆ 14.8 ಕೋಟಿ ತಲುಪಿದೆ. ರಿಲಯನ್ಸ್ ಜಿಯೋದ ಒಟ್ಟಾರೆ ವೈರ್ ಲೆಸ್ ಡೇಟಾ ದಟ್ಟಣೆಯ ಶೇಕಡಾ 34ರಷ್ಟು ಈ ಸೆಗ್ಮೆಂಟ್ ನಿಂದ ಬಂದಿದೆ. ಇನ್ನು ಸದ್ಯದಲ್ಲೆ ಜಿಯೋಕ್ಲೌಡ್ ಬೀಟಾ ಜಿಯೋದಿಂದ ಆರಂಭವಾಗಲಿದೆ.

“ಜಿಯೋದ ವ್ಯಾಪಕ ಶ್ರೇಣಿ ಕೊಡುಗೆಗಳು ಭಾರತದ ಪ್ರತಿ ಹಳ್ಳಿ, ಪಟ್ಟಣ ಮತ್ತು ನಗರಗಳನ್ನು ಡಿಜಿಟಲ್ ಆಗಿ ಸಶಕ್ತಗೊಳಿಸಲು, ಹಾಗೆಯೇ ದೇಶದ ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ಯಮಗಳನ್ನು ಸಹ ಸಕ್ರಿಯಗೊಳಿಸುತ್ತದೆ. ಡಿಜಿಟಲ್ ಸೇವೆಗಳ ವ್ಯವಹಾರವು ರಾಷ್ಟ್ರೀಯ ಮಟ್ಟದಲ್ಲಿ ನವೀನ ಡೀಪ್-ಟೆಕ್ ಸಲ್ಯೂಷನ್ ಗಳ ಮೇಲೆ ಕೇಂದ್ರೀಕರಿಸುವುದನ್ನು ಮುಂದುವರಿಸಿದೆ ಮತ್ತು ಎಲ್ಲ ಭಾರತೀಯರಿಗೆ ಕೃತಕ ಬುದ್ಧಿಮತ್ತೆಯ (ಆರ್ಟಿಫಿಷಿಯಲ್ ಇಂಟೆಲಿಜೆನ್ಸ್) ಪ್ರಯೋಜನಗಳನ್ನು ತಲುಪಿಸುವ ಹಾದಿಯಲ್ಲಿದೆ,” ಎಂದು ಮುಕೇಶ್ ಅಂಬಾನಿ ಹೇಳಿದರು.

ಜಿಯೋ ಪ್ಲಾಟ್‌ಫಾರ್ಮ್‌ಗಳ ಅಧ್ಯಕ್ಷ ಕಿರಣ್ ಥಾಮಸ್ ಮಾತನಾಡಿ, ಕಂಪನಿಯ ಗೃಹ ಬಳಕೆಯ ಬ್ರಾಡ್‌ಬ್ಯಾಂಡ್ ವಿಭಾಗವು ಗಮನಾರ್ಹ ಬೆಳವಣಿಗೆ ದರವನ್ನು ಕಂಡಿದೆ. ಕಳೆದ ನಾಲ್ಕು ತ್ರೈಮಾಸಿಕಗಳಲ್ಲಿ ಮೂರು ಪಟ್ಟು ಹೆಚ್ಚಾಗಿದೆ ಎಂದರು. ಪ್ರತಿ ತಿಂಗಳು ತಮ್ಮ ಬ್ರಾಡ್‌ಬ್ಯಾಂಡ್ ಸೇವೆಗೆ 1 ಮಿಲಿಯನ್, ಅಂದರೆ ಹತ್ತು ಲಕ್ಷ ಹೊಸ ಮನೆಗಳನ್ನು ತಲುಪುವುದು ಮಹತ್ವಾಕಾಂಕ್ಷೆಯ ಗುರಿಯಾಗಿದೆ ಎಂದು ಅವರು ಒತ್ತಿ ಹೇಳಿದರು.

ರೀಟೇಲ್ ವೆಂಚರ್ಸ್
ರಿಲಯನ್ಸ್ ರೀಟೇಲ್ ವೆಂಚರ್ಸ್ ತೆರಿಗೆ ನಂತರದ ಲಾಭವು 2,935 ಕೋಟಿ ರೂಪಾಯಿ ಬಂದಿದೆ. ಕಳೆದ ತ್ರೈಮಾಸಿಕಕ್ಕೆ ಹೋಲಿಕೆ ಮಾಡಿದರೆ ಇದು ಶೇ 20ರಷ್ಟಕ್ಕೆ ಹತ್ತಿರವಾಗುತ್ತದೆ. ಈ ರೀಟೇಲ್ ಘಟಕದ ಕಾರ್ಯಾಚರಣೆ ಮೂಲಕದ ಆದಾಯವು 66,502 ಕೋಟಿ ರೂಪಾಯಿ ಬಂದಿದೆ. ಕಳೆದ ತ್ರೈಮಾಸಿಕದಲ್ಲಿ ಇದು 66,260 ಕೋಟಿ ರೂಪಾಯಿ ಬಂದಿತ್ತು. “ರೀಟೇಲ್ ಸೆಗ್ಮೆಂಟ್ ತನ್ನ ಗ್ರಾಹಕರ ನೆಲೆಯನ್ನು ಭಾರೀ ಪ್ರಮಾಣದಲ್ಲಿ ಹೆಚ್ಚಿಸಿಕೊಂಡಿದೆ. ಆನ್ ಲೈನ್ ಅಥವಾ ಆಫ್ ಲೈನ್ ಹೀಗೆ ಎಲ್ಲ ಚಾನೆಲ್ ಗಳಲ್ಲೂ ಪರಿಣಾಮಕಾರಿಯಾಗಿ ಗ್ರಾಹಕರನ್ನು ತಲುಪಿ, ಅವರ ಅಗತ್ಯಗಳ ಎಲ್ಲ ಮಾದರಿ ಉತ್ಪನ್ನಗಳನ್ನು ತಲುಪಿಸಲಾಗುತ್ತಿದೆ,” ಎಂದು ಅಂಬಾನಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ತೈಲ ಹಾಗೂ ಅನಿಲ
ರಿಲಯನ್ಸ್ ಇಂಡಸ್ಟ್ರೀಸ್ ತೈಲ ಹಾಗೂ ಅನಿಲ ವ್ಯವಹಾರದಲ್ಲಿ ಇಬಿಐಟಿಡಿಎ ವರ್ಷದಿಂದ ವರ್ಷಕ್ಕೆ ಶೇಕಡಾ 11ರಷ್ಟು ಹೆಚ್ಚಳವಾಗಿ 5290 ಕೋಟಿ ರೂಪಾಯಿ ಮುಟ್ಟಿದೆ. ಕಳೆದ ವರ್ಷ ಇಬಿಐಟಿಡಿಎ 4760 ಕೋಟಿ ರೂಪಾಯಿ ಇತ್ತು. ಇನ್ನೂ ಮುಖ್ಯ ಸಂಗತಿ ಏನೆಂದರೆ, ವರ್ಷದಿಂದ ವರ್ಷಕ್ಕೆ ಇಬಿಐಟಿಡಿಎ ಮಾರ್ಜಿನ್ ಶೇ 72ರಿಂದ ಶೇ 85ಕ್ಕೆ ತಲುಪಿದೆ.

ಕಂಪನಿಯ ನ್ಯೂ ಎನರ್ಜಿ ಗಿಗಾ-ಫ್ಯಾಕ್ಟರಿಗಳ ಪ್ರಗತಿಯ ಬಗ್ಗೆ ಮುಕೇಶ್ ಅಂಬಾನಿ ಗಮನ ಸೆಳೆದರು. “ನಮ್ಮ ಮೊದಲ ನ್ಯೂ ಎನರ್ಜಿ ಗಿಗಾ-ಕಾರ್ಖಾನೆಗಳು ಈ ವರ್ಷದ ಅಂತ್ಯದ ವೇಳೆಗೆ ಸೌರ ಪಿವಿ ಮಾಡ್ಯೂಲ್‌ಗಳ ಉತ್ಪಾದನೆಯನ್ನು ಪ್ರಾರಂಭಿಸುವ ಹಾದಿಯಲ್ಲಿದೆ. ನವೀಕರಿಸಬಹುದಾದ ಸಮಗ್ರ ಶ್ರೇಣಿಯೊಂದಿಗೆ ಸೌರಶಕ್ತಿ, ಇಂಧನ ಶೇಖರಣಾ ವ್ಯವಸ್ಥೆಗಳು, ಹಸಿರು ಜಲಜನಕ, ಜೈವಿಕ ಶಕ್ತಿ ಮತ್ತು ಪವನ ಸೇರಿದಂತೆ ಸಲ್ಯೂಷನ್ ಗಳು, ನ್ಯೂ ಎನರ್ಜಿ ವ್ಯವಹಾರವು ಜಾಗತಿಕ ಸ್ವಚ್ಛ ಇಂಧನ ಪರಿವರ್ತನೆಗೆ ಗಮನಾರ್ಹ ಕೊಡುಗೆ ನೀಡಲು ಸಿದ್ಧವಾಗಿದೆ,” ಎಂದು ಅವರು ಹೇಳಿದರು.

ಇನ್ನು ಒಟ್ಟಾರೆ ಹಣಕಾಸು ಫಲಿತಾಂಶದ ಬಗ್ಗೆ ತೃಪ್ತಿಯನ್ನು ವ್ಯಕ್ತಪಡಿಸಿದ ಮುಕೇಶ್ ಅಂಬಾನಿ, ರಿಲಯನ್ಸ್ ಇಂಡಸ್ಟ್ರೀಸ್ ನ ವೈವಿಧ್ಯಮಯವಾದ ವ್ಯವಹಾರಗಳ ಪೋರ್ಟ್ ಫೋಲಿಯೋಗೆ ಇರುವಂಥ ಸಾಮರ್ಥ್ಯದ ಬಗ್ಗೆ ಒತ್ತಿ ಹೇಳಿದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ

ದೇಶ

ದೇಶದ ಪ್ರಧಾನಿಗೆ ಕೈಯಾರ ಚುರುಮುರಿ ಕೊಟ್ಟರೂ ಇಲ್ಲ ಖುಷಿ! ಆ ತಪ್ಪು ಮಾಡಬಾರದಿತ್ತು ಅಂದ ವ್ಯಾಪಾರಿ

VISTARANEWS.COM


on

ಪಶ್ಚಿಮ ಬಂಗಾಳದ ಜಾರ್ಗ್ರಾಮ್‌ನಲ್ಲಿ ಚುರುಮುರಿ (ಝಲ್ಮುರಿ) ವ್ಯಾಪಾರ ಮಾಡುವ ವಿಕ್ರಮ್ ಶಾ ಅವರ ಬದುಕಿನಲ್ಲಿ ಮರೆಯಲಾಗದ ಘಟನೆಯೊಂದು ನಡೆದಿದೆ. ಚುನಾವಣಾ ಪ್ರಚಾರದ ನಡುವೆ ಪ್ರಧಾನಿ ನರೇಂದ್ರ ಮೋದಿ ಅವರು ಅಚಾನಕ್ಕಾಗಿ ವಿಕ್ರಮ್ ಅವರ ಪುಟ್ಟ ಅಂಗಡಿಯ ಮುಂದೆ ಬಂದು ನಿಂತಿದ್ದರು. ದೇಶದ ಪ್ರಧಾನಿಯೇ ತಮ್ಮ ಅಂಗಡಿಗೆ ಬಂದಿದ್ದನ್ನು ಕಂಡು ವಿಕ್ರಮ್ ಮೊದಲು ಗಾಬರಿಯಾದರೂ, ಮೋದಿ ಅವರು ಅತ್ಯಂತ ಸರಳವಾಗಿ ಮಾತುಕತೆ ನಡೆಸಿ ವಿಕ್ರಮ್ ಕೈಯಾರೆ ಸಿದ್ಧಪಡಿಸಿದ ಚುರುಮುರಿಯನ್ನು ಇಷ್ಟಪಟ್ಟು ಸವಿದರು.

ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ಕೇವಲ ವಿಕ್ರಮ್ ಕೊಟ್ಟ ತಿಂಡಿ ತಿಂದಿದ್ದಲ್ಲದೇ ಅವರ ಕುಟುಂಬ ಮತ್ತು ಜೀವನದ ಬಗ್ಗೆಯೂ ವಿಚಾರಿಸಿದರು. ಬಡತನದ ಕಾರಣ 9ನೇ ತರಗತಿಗೆ ಓದು ಬಿಟ್ಟಿದ್ದ ವಿಕ್ರಮ್, ಪ್ರಧಾನಿಯವರ ಆತ್ಮೀಯತೆಗೆ ಮನಸೋತರು. ತಿಂಡಿ ತಿಂದ ನಂತರ ಮೋದಿ ಅವರು ಹಠ ಹಿಡಿದು ಹಣ ಪಾವತಿಸಿ ವಿಕ್ರಮ್ ಅವರ ಪ್ರಾಮಾಣಿಕತೆಯನ್ನು ಮೆಚ್ಚಿಕೊಂಡರು. ಪ್ರಧಾನಿಯವರ ಈ ಸರಳತೆಯನ್ನು ಕಂಡು ಅಲ್ಲಿದ್ದ ಜನಸಮೂಹ ಚಪ್ಪಾಳೆ ತಟ್ಟಿ ಸಂಭ್ರಮಿಸಿತು.

ಆದರೆ, ಈ ಇಡೀ ಘಟನೆಯಲ್ಲಿ ವಿಕ್ರಮ್ ಶಾ ಅವರಿಗೆ ಒಂದು ಸಣ್ಣ ವಿಷಾದ ಉಳಿದುಬಿಟ್ಟಿದೆ. ಪ್ರಧಾನಿ ತಮ್ಮ ಮುಂದೆಯೇ ಅಷ್ಟು ಹೊತ್ತು ನಿಂತಿದ್ದರೂ, ಆತಂಕದ ನಡುವೆ ಅವರಿಂದ ಒಂದು ಹಸ್ತಾಕ್ಷರ (Autograph) ಪಡೆಯಲು ಅವರಿಗೆ ಸಾಧ್ಯವಾಗಲಿಲ್ಲ. “ಒಂದು ವೇಳೆ ನಾನು ಅವರ ಸಹಿ ಕೇಳಿದ್ದರೆ ಅದು ನನ್ನ ಜೀವನದ ದೊಡ್ಡ ಆಸ್ತಿಯಾಗಿರುತ್ತಿತ್ತು” ಎಂದು ವಿಕ್ರಮ್ ಈಗ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಆದರೂ, ದೇಶದ ಪ್ರಧಾನಿ ತಮ್ಮ ಅಂಗಡಿಗೆ ಬಂದು ಚುರುಮುರಿ ತಿಂದ ಆ ಕ್ಷಣಗಳು ಮಾತ್ರ ವಿಕ್ರಮ್ ಅವರ ಬದುಕಿನ ಸುವರ್ಣ ನೆನಪಾಗಿ ಉಳಿದಿವೆ.

Continue Reading

ಬೆಂಗಳೂರು

Bengaluru Airport : ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಟೈಗರ್‌ ವಿಂಗ್ಸ್‌; 2ನಲ್ಲಿ ಅತಿದೊಡ್ಡ ವರ್ಟಿಕಲ್‌ ಗಾರ್ಡನ್‌ ಅನಾವರಣ

Bengaluru Airport : ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್‌ 2ನಲ್ಲಿ ಅತಿದೊಡ್ಡ ವರ್ಟಿಕಲ್‌ ಗಾರ್ಡನ್‌ ಅನಾವರಣಗೊಂಡಿದೆ.

VISTARANEWS.COM


on

Bengaluru airport

ಬೆಂಗಳೂರು: ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (BLR ವಿಮಾನ ನಿಲ್ದಾಣ) ಟರ್ಮಿನಲ್‌ 2 ನಲ್ಲಿ ‘ಟೈಗರ್ ವಿಂಗ್ಸ್’ ಶೀರ್ಷಿಕೆಯ “ವರ್ಟಿಕಲ್‌ ಗಾರ್ಡನ್‌”ನನ್ನು ಅನಾವರಣಗೊಳಿಸಲಾಗಿದೆ. ಫ್ರೆಂಚ್ ದೇಶದ ರಾಷ್ಟ್ರೀಯ ವೈಜ್ಞಾನಿಕ ಸಂಶೋಧನಾ ಕೇಂದ್ರದೊಂದಿಗೆ ಗುರುತಿಸಿಕೊಂಡಿರುವ ವಿಶ್ವದರ್ಜೆಯ ಸಸ್ಯಶಾಸ್ತ್ರಜ್ಞ ಪ್ಯಾಟ್ರಿಕ್ ಬ್ಲಾಂಕ್ ಅವರ ಸಹಯೋಗದೊಂದಿಗೆ ಈ ವರ್ಟಿಕಲ್‌ ಗಾರ್ಡನ್‌ನನ್ನು ಸುಂದರವಾಗಿ ವಿನ್ಯಾಸಗೊಳಿಸಲಾಗಿದೆ.

ಟರ್ಮಿನಲ್ 2 (T2) ನಲ್ಲಿ ನಿರ್ಮಿಸಿರುವ ಈ ವರ್ಟಿಕಲ್‌ ಗಾರ್ಡನ್‌ 30 ಅಡಿ ಎತ್ತರ ಹಾಗೂ 160 ಅಡಿ ಅಗಲ (2 ಗೋಡೆಗಳಿದ್ದು, ಪ್ರತಿ ಗೊಡೆ 80 ಅಡಿ ಅಗಲವಿದೆ)ದಲ್ಲಿ ವಿಸ್ತೃತವಾಗಿ ಬೆಳೆಸಲಾಗಿದೆ. ಪ್ಯಾಟ್ರಿಕ್‌ ಬ್ಲಾಂಕ್‌ ಅವರು ಭಾರತದಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ವರ್ಟಿಕಲ್‌ ಗಾರ್ಡನ್‌ ನಿರ್ಮಿಸಿದ್ದು ಇದೇ ಮೊದಲು, ಮೂಲಭೂತ ಸೌಕರ್ಯಗಳೊಂದಿಗೆ ಪ್ರಕೃತಿಯನ್ನು ಸೆರೆ ಹಿಡಿದಂತ ಸುಂದರ ದೃಶ್ಯಾವಳಿಂದ ಈ ಗೋಡೆ ಉದ್ಯಾನ ಕಂಗೊಳಿಸಲಿದೆ. ಈ ಮೂಲಕ ಟಿ2 ನ ಅಡಿಪಾಯದ ಮೂಲತತ್ವವನ್ನು ಉದಾರಿಸಿದೆ. ‘ಟೈಗರ್ ವಿಂಗ್ಸ್’ ನ ಈ ವರ್ಟಿಕಲ್‌ ಗಾರ್ಡನ್‌ 153 ವಿವಿಧ ಜಾತಿಗಳ 15,000 ಕ್ಕೂ ಹೆಚ್ಚು ಸಸ್ಯಗಳಿಂದ ನಿರ್ಮಿಸಲಾಗಿದೆ. ಪ್ಯಾಟ್ರಿಕ್‌ ಬ್ಲಾಂಕ್‌ ಅವರು ಕರ್ನಾಟಕ ಸೇರಿದಂತೆ ಸುತ್ತಮುತ್ತಲಿನ ಪಶ್ಚಿಮ ಘಟ್ಟಗಳ ಕಾಡುಗಳಿಗೆ ತೆರಳಿ, ಅಪರೂಪದ ಆಯ್ದ ಸಸ್ಯ ಪ್ರಭೇದಗಳನ್ನು ಸಂಗ್ರಹಿಸಿ, ಈ ಗೋಡೆ ಉದ್ಯಾನವನ್ನು ನಿರ್ಮಿಸಿದ್ದಾರೆ.

The largest vertical garden has been unveiled at Terminal 2 of the Kempegowda International Airport

ಈ ಗೋಡೆ ಉದ್ಯಾನವನ್ನು ಮಣ್ಣು ರಹಿತವಾಗಿ ನಿರ್ಮಿಸಲಾಗಿದ್ದು, ಈ ಟೆಕ್ನಾಲಜಿಯನ್ನು ಜರ್ಮನಿಯಿಂದ ಆಮದು ಮಾಡಿಕೊಳ್ಳಲಾಗಿದೆ. ಮತ್ತೊಂದು ವಿಶೇಷವೆಂದರೆ, ನಮ್ಮ ರಾಷ್ಟ್ರೀಯ ಪ್ರಾಣಿ ಹುಲಿಯ ಶಕ್ತಿ ಮತ್ತು ಅದರ ಗಾಂಭೀರ್ಯತೆಯನ್ನು ಪ್ರತಿಬಿಂಬಿಸುವಂತೆ ಈ ಗೋಡೆ ಉದ್ಯಾನ ನಿರ್ಮಾಣಗೊಂಡಿದೆ. ಅದಕ್ಕಾಗಿಯೇ ಈ ವರ್ಟಿಕಲ್‌ ಗಾರ್ಡನ್‌ಗೆ ‘ಟೈಗರ್ ವಿಂಗ್ಸ್’ ಎಂದು ಹೆಸರಿಡಲಾಗಿದೆ. ಶತಾವರಿ ಸಸ್ಯಗಳು ವಿಮಾನದ ರೆಕ್ಕೆಗಳ ಸಿಲೂಯೆಟ್ ಅನ್ನು ಗುರುತಿಸುತ್ತದೆ. ಇನ್ನು, ಕೆಂಪು, ಕಿತ್ತಳೆ, ಹಳದಿ ಮತ್ತು ಬಿಳಿ ಇಕ್ಸೋರಾ ಹೂವುಗಳು ಹುಲಿ ಬಣ್ಣಗಳನ್ನು ಪ್ರತಿನಿಧಿಸುತ್ತವೆ.

ಟೈಗರ್ ವಿಂಗ್ಸ್‌

  • ಭಾರತದಲ್ಲಿ ಪ್ಯಾಟ್ರಿಕ್ ಬ್ಲಾಂಕ್‌ ಅವರ ಅತಿದೊಡ್ಡ ಗೋಡೆ ಉದ್ಯಾನ ಇದೇ ಮೊದಲು
  • 4000 ಚದರ ಅಡಿಗಳಲ್ಲಿ ನಿರ್ಮಿಸಲಾಗಿದೆ.
  • 15000 ಗಿಡಗಳನ್ನು ಒಳಗೊಂಡಿದೆ
  • 150ಕ್ಕೂ ಹೆಚ್ಚು ಜಾತಿಯ ಸಸ್ಯಗಳು ಇವೆ.
  • ಮಣ್ಣುರಹಿತ ತಂತ್ರಜ್ಞಾನವನ್ನು ಬಳಸಲಾಗಿದೆ.


ಬೆಂಗಳೂರು ಇಂಟರ್‌ನ್ಯಾಶನಲ್ ಏರ್‌ಪೋರ್ಟ್ ಲಿಮಿಟೆಡ್‌ನ (ಬಿಐಎಎಲ್) ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಹರಿ ಮರಾರ್ ಮಾತನಾಡಿ, “ಬೆಂಗಳೂರಿನಲ್ಲಿ ಸುಸ್ಥಿರತೆ, ಕಲಾತ್ಮಕತೆ ಮತ್ತು ತಾಂತ್ರಿಕ ಪ್ರಗತಿಯಲ್ಲಿ ಹೊಸ ದೃಷ್ಟಿಕೋನವನ್ನು ತರಲು ಬಯಸಿದ್ದೇವೆ. ಬಿಎಲ್‌ಆರ್‌ ವಿಮಾನ ನಿಲ್ದಾಣದಲ್ಲಿ ಪ್ಯಾಟ್ರಿಕ್‌ನ ಅವರ ಹೊಸ ವಿಧಾನದಿಂದ ಪ್ರಕೃತಿಯ ಮಡಿಲಿನಲ್ಲಿ ಸಸ್ಯಗಳನ್ನು ಬೆಳೆಯುವಂತೆಯೇ ಬೆಳೆಯಲು ಅನುವು ಮಾಡಿಕೊಟ್ಟಿದೆ. ಟರ್ಮಿನಲ್ 2 ನಾಲ್ಕು ಮೂಲ ತತ್ವಗಳಿಂದ ನಿರ್ಮಿಸಲ್ಪಟ್ಟಿದೆ, ಉದ್ಯಾನವದಲ್ಲಿ ಟರ್ಮಿನಲ್, ತಂತ್ರಜ್ಞಾನ, ಕಲೆ ಮತ್ತು ಸುಸ್ಥಿರತೆ ಈ ನಾಲ್ಕು ತತ್ವಗಳ ಮೂಲಕ ಬೆಂಗಳೂರಿನ ನೈಜ ಸೌಂದರ್ಯವನ್ನು ಪ್ರತಿಬಿಂಬಿಸುತ್ತದೆ ಎಂದರು.

The largest vertical garden has been unveiled at Terminal 2 of the Kempegowda International Airport

ಹೆಸರಾಂತ ಸಸ್ಯಶಾಸ್ತ್ರಜ್ಞ ಪ್ಯಾಟ್ರಿಕ್ ಬ್ಲಾಂಕ್ ಮಾತನಾಡಿ, “ಟೈಗರ್ ವಿಂಗ್ಸ್” ಪ್ರಕೃತಿ ಮತ್ತು ವಾಸ್ತುಶಿಲ್ಪದ ನಡುವಿನ ಸಂಬಂಧವನ್ನು ಸಾಕಾರಗೊಳ್ಳುವ ಸ್ವಪ್ನವಾಗಿದೆ. ವಿಶೇಷವಾದ ಭಾವನೆಯನ್ನು ಬಳಸಿಕೊಳ್ಳುವ ಮೂಲಕ, ಪ್ರಕೃತಿಯ ಮಡಿಲಿನಲ್ಲಿ ಸಸ್ಯಗಳು ಬೆಳೆಯುವ ವಾತಾವರಣವನ್ನು ಇಲ್ಲಿ ನಿರ್ಮಿಸಲಾಗಿದೆ. ಈ ಯೋಜನೆಯು ಕೇವಲ ವಿಮಾನ ನಿಲ್ದಾಣದ ದೃಶ್ಯವನ್ನು ಇನ್ನಷ್ಟು ವರ್ಧಿಸುತ್ತದೆ. ಅಷ್ಟೇ ಅಲ್ಲದೆ, ಪ್ರಯಾಣಿಕರಿಗೆ ತಮ್ಮ ಪ್ರಯಾಣದ ಅನುಭವವನ್ನು ಇನ್ನಷ್ಟು ಉಲ್ಲಾಸಗೊಳಿಸಲಿದೆ. ನಮ್ಮ ಸುತ್ತಲೂ ಪರಿಸರವೇ ತುಂಬಿರುವ ಸಂತಸ ನೀಡಲಿದೆ.

ಈ ವರ್ಟಿಕಲ್‌ ಉದ್ಯಾನವು ಹೆಚ್ಚು ನೀರಿನ-ಸಮರ್ಥವಾಗಿದೆ, ಎಚ್ಚರಿಕೆಯಿಂದ ವಿನ್ಯಾಸಗೊಳಿಸಿದ ನೀರಾವರಿ ವ್ಯವಸ್ಥೆಯನ್ನು ಬಳಸಲಾಗಿದ್ದು, ಪದರಗಳ ಮೂಲಕ ಸಸ್ಯಗಳಿಗೆ ಸರಿಯಾದ ಪ್ರಮಾಣದ ನೀರನ್ನು ಒದಗಿಸುತ್ತದೆ. ಈ ವಿಧಾನವು ಹೆಚ್ಚು ಸಮರ್ಥನೀಯವಾಗಿದ್ದು, ನೈಸರ್ಗಿಕ ಬಂಡೆ ಅಥವಾ ಕಲ್ಲಿನ ಗೋಡೆಗಳ ಮೇಲೆ ಸಸ್ಯಗಳು ಹೇಗೆ ಬೆಳೆಯುತ್ತವೆ ಎಂಬುದನ್ನು ತೋರಿಸುತ್ತದೆ. ಇಂತಹ ಸ್ಥಳಗಳಲ್ಲಿ ನೀರು ಮತ್ತು ಪೋಷಕಾಂಶಗಳು ಕಡಿಮೆ ಇದ್ದರೂ ಸಸ್ಯಗಳು ಸೊಂಪಾಗಿ ಬೆಳೆಯುತ್ತವೆ. ಬ್ಲಾಂಕ್‌ನ ಅವರ ಹೈಡ್ರೋಪೋನಿಕ್ ವಿಧಾನವು ವೈವಿಧ್ಯಮಯವಾದ ಸಸ್ಯ ಪ್ರಭೇದಗಳನ್ನು ಕಾಂಪ್ಯಾಕ್ಟ್ ಲಂಬ ಜಾಗದಲ್ಲಿ ಸಹಬಾಳ್ವೆ ಮಾಡಲು ಅನುವು ಮಾಡಿಕೊಡುತ್ತದೆ, ಇದು ಗಾಳಿಯ ಗುಣಮಟ್ಟವನ್ನು ಹೆಚ್ಚಿಸಿ, ತಂಪಾದ, ಹೆಚ್ಚು ಆಹ್ಲಾದಕರ ವಾತಾವರಣಕ್ಕೆ ಕೊಡುಗೆ ನೀಡುವ ಅಭಿವೃದ್ಧಿ ಹೊಂದುತ್ತಿರುವ ಪರಿಸರ ವ್ಯವಸ್ಥೆಯನ್ನು ಸೃಷ್ಟಿಸುತ್ತದೆ.

ಈ ಸಸ್ಯಶಾಸ್ತ್ರೀಯ ಮೇರುಕೃತಿಯು ಭಾರತದ ವನ್ಯಜೀವಿ ಪರಂಪರೆಯನ್ನು ವೈಭವೀಕರಿಸುವುದರಲ್ಲೆ, ಆಧುನಿಕ, ಪರಿಸರ ಸ್ನೇಹಿ ಸ್ಥಳವಾಗಿ BLR ವಿಮಾನ ನಿಲ್ದಾಣದ ದೃಷ್ಟಿಯನ್ನು ಸಾಕಾರಗೊಳಿಸುತ್ತದೆ, ಕರ್ನಾಟಕದ ಜೀವವೈವಿಧ್ಯದ ಶ್ರೀಮಂತಿಕೆಯನ್ನು ಬೆಂಗಳೂರಿನ ಪ್ರಮುಖ ಟ್ರಾವೆಲ್ ಹಬ್‌ ಆಗಿ ಪರಿವರ್ತಿಸುತ್ತದೆ.

Continue Reading

ಮೈಸೂರು

Mysuru News : ಪರ್ಯಾವರಣ ಸಂರಕ್ಷಣ ಗತಿವಿಧಿಯಿಂದ ತ್ಯಾಜ್ಯ ಸಂಗ್ರಹಣ ಅಭಿಯಾನಕ್ಕೆ ಚಾಲನೆ

Mysuru News : ದೇಶದಲ್ಲಿ ಪ್ರತಿ ವರ್ಷ ಸರಿ ಸುಮಾರು 1,60000 ಟನ್ ಎಲೆಕ್ಟ್ರಾನಿಕ್ ತ್ಯಾಜ್ಯ ಉತ್ಪಾದನೆ ಆಗುತ್ತಿದ್ದು, ಇದರಲ್ಲಿ ಕೇವಲ 15 ಪ್ರತಿಶತ ಮಾತ್ರ ವೈಜ್ಞಾನಿಕವಾಗಿ ವಿಲೇವಾರಿ ಆಗುತ್ತಿದೆ. ಎಲೆಕ್ಟ್ರಾನಿಕ್ ತ್ಯಾಜ್ಯ ನಿರ್ವಹಣೆ ಇಂದು ಬಹುದೊಡ್ಡ ಸಮಸ್ಯೆ ಆಗಿದ್ದು, ಪರ್ಯಾವರಣ ಸಂರಕ್ಷಣ ಗತಿವಿಧಿಯಿಂದ ತ್ಯಾಜ್ಯ ಸಂಗ್ರಹಣ ಅಭಿಯಾನ ಆರಂಭವಾಗಿದೆ.

VISTARANEWS.COM


on

Mysuru News

ಮೈಸೂರು: ಪರ್ಯಾವರಣ ಸಂರಕ್ಷಣಾ ಗತಿ ವಿಧಿ ಮೈಸೂರು ಜೆಎಸ್ಎಸ್ ಮಹಾವಿದ್ಯಾಲಯದಲ್ಲಿ (JSS College) ಆಯೋಜಿಸಿದ್ದ “ಇಯಂತ್ರಣ ನಿಯಂತ್ರಣ” ಎಲೆಕ್ಟ್ರಾನಿಕ್ ವೇಸ್ಟ್ ಮ್ಯಾನೇಜ್ಮೆಂಟ್ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಚಾಲನೆ ನೀಡಿ ಮಾತನಾಡಿದ ಮೈಸೂರಿನ (Mysuru News) ಜೆಎಸ್ಎಸ್ ವಿಜ್ಞಾನ ಮತ್ತು ತಂತ್ರಜ್ಞಾನ ಮಹಾವಿದ್ಯಾಲಯದ ಉಪ ಕುಲಪತಿ ಡಾ. ಎನ್ ಸಂತೋಷ್, ಹೊಸ ಹೊಸ ತಂತ್ರಜ್ಞಾನ ಬಂದಂತತೆಲ್ಲ ಅದನ್ನು ಅಳವಡಿಸಿಕೊಳ್ಳಲು ಅತ್ಯಂತ ಉತ್ಸುಕರಾಗುತ್ತೇವೆ. ಹೊಸ ಎಲೆಕ್ಟ್ರಾನಿಕ್ ಯಂತ್ರೋಪಕರಣ ಲಭ್ಯವಾಗುತ್ತಿದ್ದಂತೆ ಖರೀದಿಗೆ ಮುಂದಾಗುತ್ತೇವೆ.

ಆದರೆ ಹಳೆಯ ಉಪಕರಣಗಳ ವಿಲೇವಾರಿ ಬಗ್ಗೆ ಯೋಚನೆ ಮಾಡುವುದೇ ಇಲ್ಲ. ಹಾಗಾಗಿ ಎಲೆಕ್ಟ್ರಾನಿಕ್ ತ್ಯಾಜ್ಯ ನಿರ್ವಹಣೆ ಇಂದು ಬಹುದೊಡ್ಡ ಸಮಸ್ಯೆ ಆಗಿ ಮುಂದೆ ನಿಂತಿದೆ. ಇಂತಹ ಸಮಸ್ಯೆಗಳ ಬಗ್ಗೆ ಪರಿಸರ ವಿಜ್ಞಾನಿಗಳು, ಪರಿಸರ ಕಾರ್ಯಕರ್ತರು ಯೋಚಿಸಬೇಕು ಎಂದು ಸರ್ವೇ ಸಾಮಾನ್ಯವಾಗಿ ಎಲ್ಲರೂ ಯೋಚನೆ ಮಾಡುತ್ತಾರೆ. ಆದರೆ ಈ ತ್ಯಾಜ್ಯ ಉತ್ಪನ್ನಕ್ಕೆ ಕಾರಣವಾಗುವ ಎಲ್ಲರೂ ಜವಾಬ್ದಾರಿಯುತವಾಗಿ ನಡೆದುಕೊಳ್ಳುವ ಅವಶ್ಯಕತೆ ಇದೆ. ಈ ಬಗ್ಗೆ ಪ್ರತಿಯೊಬ್ಬರು ಸ್ವಯಂ ಜಾಗೃತಿಗೊಂಡು ಸಮಾಜವನ್ನು ಜಾಗೃತಗೊಳಿಸಬೇಕಾಗಿದೆ ಎಂದು ಮೈಸೂರಿನ ಜೆಎಸ್ಎಸ್ ವಿಜ್ಞಾನ ಮತ್ತು ತಂತ್ರಜ್ಞಾನ ಮಹಾವಿದ್ಯಾಲಯದ ಉಪ ಕುಲಪತಿ ಡಾ. ಎನ್ ಸಂತೋಷ್ ಅವರು ಹೇಳಿದರು. ಪ್ರಸ್ತುತ ನಾವು ಬದುಕುವ ಜೊತೆಗೆ ಮುಂದಿನ ಜನಾಂಗಕ್ಕೆ ಉತ್ತಮ ಪರಿಸರ ಉಳಿಸುವ ಗುರುತರ ಜವಾಬ್ದಾರಿ ನಮ್ಮ ಮೇಲಿದೆ. ಹಾಗಾಗಿ ಪರಿಸರ ಸಂರಕ್ಷಣೆ ಬಗ್ಗೆ ಜವಾಬ್ದಾರಿಯುತವಾಗಿ ವರ್ತಿಸೋಣ ಎಂದು ಕರೆ ನೀಡಿದರು.

ಪರ್ಯಾವರಣ ಸಂರಕ್ಷಣ ಗತಿವಿಧಿ ಕಾರ್ಯಕರ್ತರಾದ ಡಾ.ಶ್ರೀಹರ್ಷ ಪ್ರಾಸ್ತಾವಿಕ ಮಾತನಾಡಿ ನಮ್ಮ ದೇಶದಲ್ಲಿ ಪ್ರತಿ ವರ್ಷ ಸರಿ ಸುಮಾರು 1,60000 ಟನ್ ಎಲೆಕ್ಟ್ರಾನಿಕ್ ತ್ಯಾಜ್ಯ ಉತ್ಪಾದನೆಯಾಗುತ್ತಿದ್ದು, ಇದರಲ್ಲಿ ಕೇವಲ 15 ಪ್ರತಿಶತ ಮಾತ್ರ ವೈಜ್ಞಾನಿಕವಾಗಿ ವಿಲೇವಾರಿ ಆಗುತ್ತಿದೆ. ಈ ನಾಲ್ಕು ತಿಂಗಳ ಅಭಿಯಾನದಲ್ಲಿ ನಾವು ವಸತಿ ಸಮುಚ್ಚಯ, ಕಾಲೇಜು ವಿಶ್ವವಿದ್ಯಾನಿಲಯದ ಕಾರ್ಪೋರೇಟ್ ಆಫೀಸ್ ಹೀಗೆ ಹಲವಾರು ಕಡೆ ಅಭಿಯಾನದ ಮೂಲಕ ಈ ತ್ಯಾಜ್ಯ ಸಂಗ್ರಹಿಸುವ ವೈಜ್ಞಾನಿಕ ವಿಲೇವಾರಿ ಗುರಿ ಹೊಂದಿದ್ದೇವೆ ಎಂದು ಹೇಳಿದರು.

Mysuru News

ಕೇಶವ ಮತ್ತು ಅಭಿಲಾಷ ಪಿಪಿಟಿ ಮತ್ತು ವಿಡಿಯೋ ತುಣುಕುಗಳ ಪ್ರದರ್ಶನದ ಮೂಲಕ ಈ ತ್ಯಾಜ್ಯ ನಿರ್ವಹಣೆ ಏಕೆ ಹೇಗೆ ಎನ್ನುವ ಸಂಪೂರ್ಣ ಮಾಹಿತಿ ನೀಡಿದರು. ಪರ್ಯಾವರಣ ಸಂರಕ್ಷಣ ಗತಿವಿಧಿ ಸಂಯೋಜಕ ವೆಂಕಟೇಶ್ ಸಂಗನಾಳ್, ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಾದೇಶಿಕ ಕಚೇರಿಯ ಹಿರಿಯ ಪರಿಸರ ಅಧಿಕಾರಿ ರಾಜಶೇಖರ ಡಿನ್ ಅಕಾಡಮಿಕ್ಸ್ ನ ಡಾ.ಮನೋಜ್ ಕುಮಾರ ಪರಿಸರ ಇಂಜಿನಿಯರಿಂಗ್ ವಿಭಾಗ ಮುಖ್ಯಸ್ಥರಾದ ಡಾಕ್ಟರ್ ಸದಾಶಿವ ಮೂರ್ತಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಅತಿಥಿಗಳು ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಈ ವೇಸ್ಟ್ ಸಂಗ್ರಹ ಬಿನ್‌ಗೆ ಎಲೆಕ್ಟ್ರಾನಿಕ್ ತ್ಯಾಜ್ಯಗಳನ್ನು ಹಾಕುವುದರ ಮೂಲಕ ಆರಂಭಗೊಂಡ ತ್ಯಾಜ್ಯ ಸಂಗ್ರಹಣ ಅಭಿಯಾನ ನಿರಂತರ ನಾಲ್ಕು ತಿಂಗಳ ಕಾಲ ನಡೆಯಲಿದೆ. ಪರ್ಯಾವರಣ ಸಂರಕ್ಷಣ ಗತಿವಿಧಿ ಈ ಅಭಿಯಾನಕ್ಕೆ ಅನೇಕ ಸ್ವಯಂ ಸೇವಾ ಸಂಸ್ಥೆಗಳು, ವಿದ್ಯಾ ಸಂಸ್ಥೆಗಳು ಕೈ ಜೋಡಿಸಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಪ್ರಮುಖ ಸುದ್ದಿ

World Retinal Day 2024 : ಶಾಕಿಂಗ್‌ ನ್ಯೂಸ್‌; ಜಾಗತಿಕವಾಗಿ 1 ಬಿಲಿಯನ್ ಜನರು ತಮ್ಮ ದೃಷ್ಟಿಯನ್ನು ಕಳೆದುಕೊಳ್ಳುತ್ತಿದ್ದರಂತೆ!

World Retinal Day 2024: ಕುರುಡುತನವನ್ನು ಶೇ. 90% ತಡೆಗಟ್ಟಬಹುದು ಅಥವಾ ಅದಕ್ಕೆ ಚಿಕಿತ್ಸೆಯನ್ನು ನೀಡಬಹುದು. ಆದರೂ ಜಾಗತಿಕವಾಗಿ 1 ಬಿಲಿಯನ್ ಜನರು ದೃಷ್ಟಿಯನ್ನು ಕಳೆದುಕೊಳ್ಳುತ್ತಿದ್ದಾರೆ.

VISTARANEWS.COM


on

World Retinal Day 2024

ಬೆಂಗಳೂರು: ಪ್ರಪಂಚವು ತಾನು ಬೆಳೆಯುತ್ತಿರುವ ವೇಗದಲ್ಲಿ ತನ್ನ ದೃಷ್ಟಿಯನ್ನು ಕಳೆದುಕೊಳ್ಳುತ್ತಿದೆ. ಅದಕ್ಕಾಗಿ ತುರ್ತು ಕ್ರಮವನ್ನು ತೆಗೆದುಕೊಳ್ಳಬೇಕು ಎಂದು ಆರೋಗ್ಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ವಿಶ್ವ ರೆಟಿನಾ ದಿನವನ್ನಾಗಿ (World Retinal Day 2024) ಆಚರಿಸಲಾಗುತ್ತಿದ್ದು, ಜನರಲ್ಲಿ ಜಾಗೃತಿ ಮೂಡಿಸುವ ಅವಶ್ಯಕತೆ ಇದೆ. ಕುರುಡುತನವನ್ನು ಶೇ. 90% ತಡೆಗಟ್ಟಬಹುದು ಅಥವಾ ಅದಕ್ಕೆ ಚಿಕಿತ್ಸೆಯನ್ನು ನೀಡಬಹುದು. ಆದರೂ ಜಾಗತಿಕವಾಗಿ 1 ಬಿಲಿಯನ್ ಜನರು ದೃಷ್ಟಿಯನ್ನು ಕಳೆದುಕೊಳ್ಳುತ್ತಿದ್ದಾರೆ. 2020ರಲ್ಲಿ ಮಾತ್ರವೇ ದೃಷ್ಟಿ ದೋಷವು ಜಾಗತಿಕವಾಗಿ 410.9 ಬಿಲಿಯನ್ ಅಷ್ಟು ಆರ್ಥಿಕ ಉತ್ಪಾದಕತೆಯನ್ನು ಕಡಿಮೆಗೊಳಿಸಿತು. DR, DME ಮತ್ತು NAMD ನಂತಹ ರೆಟಿನಾದ ಸಮಸ್ಯೆಗಳು ಶಾಶ್ವತ ಮತ್ತು ಬದಲಾಯಿಸಲಾಗದ ದೃಷ್ಟಿ ನಷ್ಟಕ್ಕೆ ಕಾರಣವಾಗಬಹುದು.

21 ಮಿಲಿಯನ್ ಜನರು DME (Durable medical equipment) ಬಳಸುತ್ತಿದ್ದು, ಇದು ಕೆಲಸ ಮಾಡುವ ವಯಸ್ಸಿನ ವಯಸ್ಕರಲ್ಲಿ ದೃಷ್ಟಿ ನಷ್ಟಕ್ಕೆ ಪ್ರಮುಖ ಕಾರಣವಾಗಿದೆ. 20 ಮಿಲಿಯನ್ ಜನರು NAMD (Nanoscale Molecular Dynamics) ಇದು 60 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಜನರಲ್ಲಿ ದೃಷ್ಟಿ ನಷ್ಟಕ್ಕೆ ಪ್ರಮುಖ ಕಾರಣವಾಗಿದೆ.
ವಿಶ್ವದ ಅಂಧ ಜನಸಂಖ್ಯೆಯ 1/3 ನೇ ಭಾಗವು ಭಾರತದಲ್ಲಿ ಕಂಡು ಬರುತ್ತಿದೆ. 11 + ಮಿಲಿಯನ್ ಜನರು ರೆಟಿನಾದ ಸಮಸ್ಯೆಗಳಿಂದ ಪ್ರಭಾವಿತರಾಗಿದ್ದಾರೆ ಹಾಗೂ 3.88 ಮಿಲಿಯನ್ ಜನರು DME ಮತ್ತು nAMD ಯಿಂದ ಬಳಲುತ್ತಿದ್ದಾರೆ. ಭಾರತದಲ್ಲಿ ಕುರುಡುತನಕ್ಕೆ ರೆಟಿನಾದ ಅಸ್ವಸ್ಥತೆಗಳ ಕೊಡುಗೆಯು 4.7% (2010) ರಿಂದ 8% (2019) ಕ್ಕೆ ಹೆಚ್ಚಾಗಿದೆ. 100 ಮಿಲಿಯನ್ ಮಧುಮೇಹಿಗಳು ಮತ್ತು ವಯಸ್ಸಾದ ಜನಸಂಖ್ಯೆಯನ್ನು ಹೊಂದಿರುವ ಭಾರತದಲ್ಲಿ ರೆಟಿನಾದ ಆರೋಗ್ಯಕ್ಕೆ ಆದ್ಯತೆಯನ್ನು ನೀಡಬೇಕಾಗುತ್ತದೆ.

ದೃಷ್ಟಿ ನಷ್ಟದಿಂದಾಗಿ ನಿರಂತರವಾಗಿ ಹೆಚ್ಚುತ್ತಿರುವ ಸಾಮಾಜಿಕ-ಆರ್ಥಿಕ ಹೊರೆಯು ಜಾಗತಿಕವಾಗಿ ಹಾಗೂ ಭಾರತದಲ್ಲಿ ಬೆಳೆಯುತ್ತಿರುವ ಸಾರ್ವಜನಿಕ ಆರೋಗ್ಯ ಕಾಳಜಿಯಾಗಿದೆ. ಜಾಗತಿಕವಾಗಿ ರಕ್ತಹೀನತೆ ಮತ್ತು ಶ್ರವಣ ನಷ್ಟದ ನಂತರ ದೃಷ್ಟಿ ನಷ್ಟವು ಮೂರನೇ ಅತಿದೊಡ್ಡ ದುರ್ಬಲತೆಯಾಗಿದೆ. ಕಣ್ಣಿನ ಪೊರೆ, ಗ್ಲುಕೋಮಾ ಮತ್ತು ವಕ್ರೀಕಾರಕ ದೋಷಗಳಂತಹ ಕೆಲವು ರೀತಿಯ ದೃಷ್ಟಿಹೀನತೆಗಳ ಬಗ್ಗೆ ಸಾಮಾನ್ಯವಾಗಿ ಸಾರ್ವಜನಿಕರಿಗೆ ಅರಿವು ಇದ್ದರೂ ಸಹ, ರೆಟಿನಾದ ಅಸ್ವಸ್ಥತೆಗಳಿಂದ ಉಂಟಾಗುವ ದೃಷ್ಟಿ ಅಸಾಮರ್ಥ್ಯಗಳು ನಿರಂತರವಾಗಿ ಹೆಚ್ಚಾಗುತ್ತಿವೆ.

ಜಾಗತಿಕವಾಗಿ, ರೆಟಿನಾದ ಕಾಯಿಲೆಗಳು ಸುಮಾರು 6% ಕುರುಡುತನಕ್ಕೆ ಕಾರಣವಾಗಿವೆ. ರಕ್ತದಲ್ಲಿ ಇರುವ ಅನಿಯಂತ್ರಿತ ಸಕ್ಕರೆ ಮಟ್ಟಗಳು (DR ಮತ್ತು DME) ಹಾಗೂ ವಯಸ್ಸಿನ (nAMD) ಪರಿಣಾಮವಾಗಿ ಉಂಟಾಗಬಹುದಾದ ಕೆಲವು ರೆಟಿನಾದ ಅಸ್ವಸ್ಥತೆಗಳು ದೃಷ್ಟಿಯ ವಿಷಯದಲ್ಲಿ ಬೆದರಿಕೆಯನ್ನು ಉಂಟುಮಾಡುತ್ತವೆ, ಇದು ಸಕಾಲಿಕ ವಿಧಾನದಲ್ಲಿ ರೋಗನಿರ್ಣಯ ಮಾಡಿ ಹಾಗೂ ಚಿಕಿತ್ಸೆಯನ್ನು ನೀಡದಿದ್ದಲ್ಲಿ ಶಾಶ್ವತ ಮತ್ತು ಬದಲಾಯಿಸಲಾಗದ ದೃಷ್ಟಿ ನಷ್ಟಕ್ಕೆ ಕಾರಣವಾಗುತ್ತದೆ.

ಭಾರತದಲ್ಲಿ ಅಂಧತ್ವ ಮತ್ತು ದೃಷ್ಟಿಹೀನತೆಯ ನಿಯಂತ್ರಣಕ್ಕಾಗಿ ರಾಷ್ಟ್ರೀಯ ಕಾರ್ಯಕ್ರಮ (NPCBVI) ದಂತಹ ಉಪಕ್ರಮಗಳು ಕಣ್ಣಿನ ಪೊರೆ ಹಾಗೂ ಗ್ಲುಕೋಮಾ ಸಂಬಂಧಿತ ಕುರುಡುತನವನ್ನು (ಕಣ್ಣಿನ ಮುಂಭಾಗದ ಅಥವಾ ಮುಂಭಾಗ) ಕಡಿಮೆ ಮಾಡುವಲ್ಲಿ ಶ್ಲಾಘನೀಯ ಪ್ರಗತಿಯನ್ನು ಸಾಧಿಸಿವೆ. ಪ್ರಸ್ತುತ, ಅಕ್ಷಿಪಟಲದ ಆರೋಗ್ಯದ (ಕಣ್ಣಿನ ಹಿಂಭಾಗ ಅಥವಾ ಹಿಂದೆ) ಮೇಲೆ ಕೇಂದ್ರೀಕರಿಸುವ ತುರ್ತು ಅವಶ್ಯಕತೆಯಿದೆ. ರೆಟಿನಾದ ನರ ಕೋಶಗಳಿಗೆ ಉಂಟಾಗುವ ಹಾನಿಯನ್ನು ಬದಲಾಯಿಸಲು ಬರುವುದಿಲ್ಲ ಹಾಗೂ ಕೇಂದ್ರೀಕೃತ ನಷ್ಟವನ್ನು ಉಂಟು ಮಾಡಬಹುದು. ಇದು ದೃಷ್ಟಿಯನ್ನು ಹೆಚ್ಚು ದುರ್ಬಲಗೊಳಿಸುವ, ಗಾಯದ ಅಪಾಯ ಮತ್ತು ಜೀವನದಲ್ಲಿ ಕಳಪೆ ಗುಣಮಟ್ಟವನ್ನು ಉಂಟುಮಾಡುವ ಸಾಧ್ಯತೆ ಇದೆ.

ಕಳೆದ ದಶಕ ಒಂದರಲ್ಲಿಯೇ ಭಾರತದಲ್ಲಿ, ಕುರುಡುತನಕ್ಕೆ ಕಾರಣವಾಗುವ ರೆಟಿನಾದ ಅಸ್ವಸ್ಥತೆಗಳ ಪಾಲಿನಲ್ಲಿ ಆತಂಕಕಾರಿ ಹೆಚ್ಚಳವು ಕಂಡುಬಂದಿದೆ. ನಮ್ಮ ಜನಸಂಖ್ಯೆಯು ಬೆಳೆದಂತೆ ಹಾಗೂ ಅವರಿಗೆ ವಯಸ್ಸಾದಂತೆ ಈ ಸಂಖ್ಯೆಗಳು ಹೆಚ್ಚಾಗುತ್ತಲೇ ಇರುತ್ತವೆ ಮತ್ತು ಮಧುಮೇಹ ಹಾಗೂ ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವ ಜನರ ಸಂಖ್ಯೆಯು ಹೆಚ್ಚಾಗುತ್ತಲೇ ಇರುತ್ತದೆ. ರೋಗನಿರ್ಣಯದಲ್ಲಿ ಪರಿಸರ ವ್ಯವಸ್ಥೆ ಒಡ್ಡುವ ಸವಾಲುಗಳು ಮತ್ತು ಅಡೆತಡೆಗಳು ಭಾರತದಲ್ಲಿ ಅಕ್ಷಿಪಟಲದ ಆರೋಗ್ಯದ ಬಗ್ಗೆ ಹೆಚ್ಚುತ್ತಿರುವ ಕಾಳಜಿಯ ಹೊರತಾಗಿಯೂ, ಪರಿಸರ ವ್ಯವಸ್ಥೆಯು ಒಡ್ಡುವ ಅಡೆತಡೆಗಳು, ನೀತಿ ಅಂತರಗಳು, ಜಾಗೃತಿ ಸವಾಲುಗಳು ಮತ್ತು ಚಿಕಿತ್ಸೆಯ ಅನುಸರಣೆಯ ಕೊರತೆಗಳು ಅಸ್ತಿತ್ವದಲ್ಲಿವೆ:
● ಸಾಮರ್ಥ್ಯದ ಬಗೆಗಿನ ನಿರ್ಬಂಧಗಳು ಮತ್ತು ತರಬೇತಿ ಪಡೆದ ರೆಟಿನಾ ತಜ್ಞರ ತೀವ್ರ ಕೊರತೆ: ಭಾರತದಲ್ಲಿ, ನೇತ್ರಶಾಸ್ತ್ರಜ್ಞರ ಪೂಲ್ ಕಣ್ಣಿನ ಮುಂಭಾಗದ ಭಾಗಕ್ಕೆ ಹೆಚ್ಚು ವಾಲುತ್ತಿದ್ದು ಸುಮಾರು 80% ರಷ್ಟು ಇದೆ, ಆದರಲ್ಲಿ ಕೇವಲ 5% ರಿಂದ 8% ರಷ್ಟು ಮಾತ್ರವೇ ರೆಟಿನಾದಲ್ಲಿ ಪರಿಣತಿಯನ್ನು ಹೊಂದಿರುವವರಿದ್ದು, ಅದೂ ಸಹ ಶ್ರೇಣಿ 1 ನಗರಗಳಲ್ಲಿ ಮಾತ್ರವೇ ಕೇಂದ್ರೀಕೃತವಾಗಿದೆ.
● ಪ್ರಮಾಣೀಕೃತ ಚಿಕಿತ್ಸಾ ಮಾರ್ಗಸೂಚಿಗಳ ಕೊರತೆ: ಭಾರತದಲ್ಲಿ, ರೋಗಿಗಳ ಫಲಿತಾಂಶಗಳ ಮೇಲೆ ತೀವ್ರ ಪರಿಣಾಮ ಬೀರುವ ಚಿಕಿತ್ಸಾ ಪ್ರೋಟೋಕಾಲ್‌ಗಳಲ್ಲಿ ಪ್ರಾದೇಶಿಕ ವ್ಯತ್ಯಾಸದ ಅಭ್ಯಾಸವಿದೆ. ಸ್ಟ್ಯಾಂಡರ್ಡ್ ಅಭ್ಯಾಸವೆಂದರೆ ‘ಸ್ಟೆಪ್ ಥೆರಪಿ’ ಇದರಲ್ಲಿ ಹೊಸ ಚಿಕಿತ್ಸಾ ಆಯ್ಕೆಗಳನ್ನು ಮರುಕಳಿಸುವ ರೋಗಿಗಳಿಗೆ ಕಾಯ್ದಿರಿಸಲಾಗಿದೆ, ಇದರಲ್ಲಿ ದೃಷ್ಟಿ ಎನ್ನುವುದು ಈಗಾಗಲೇ ಹದಗೆಟ್ಟಿದೆ, ಈ ನವೀನ ಚಿಕಿತ್ಸೆಗಳು ದೃಷ್ಟಿಯನ್ನು ಪುನಃಸ್ಥಾಪಿಸುವಲ್ಲಿ ಕಡಿಮೆ ಅಥವಾ ಯಾವುದೇ ಫಲಿತಾಂಶವನ್ನು ಪ್ರದರ್ಶಿಸುವುದಿಲ್ಲ.
● ರೋಗನಿರ್ಣಯ ಮತ್ತು ರೋಗಿಗಳ ಉಲ್ಲೇಖಗಳಿಗಾಗಿ ಕಳಪೆ ಸಮಗ್ರ ಆರೋಗ್ಯ ವ್ಯವಸ್ಥೆಗಳು: ವಿಶೇಷವಾಗಿ ಮಧುಮೇಹ ರೋಗಿಗಳಿಗೆ, ಉಲ್ಲೇಖಿತ ಮಾರ್ಗಗಳು ಮುಗಿದುಹೋಗಿವೆ. ಈ ಅಸ್ವಸ್ಥತೆಗಳು ಮುಂದುವರಿದ ಹಂತಗಳನ್ನು ತಲುಪಿದಾಗ ಮಾತ್ರವೇ ರೋಗಿಗಳು ತಮ್ಮನ್ನು ರೆಟಿನಾ ತಜ್ಞರಿಗೆ ತೋರಿಸುತ್ತಾರೆ.
● ಲಭ್ಯವಿರುವ ಚಿಕಿತ್ಸೆಗಳ ಮೇಲಿನ ಚಿಕಿತ್ಸಾ ಹೊರೆ: ಪ್ರಸ್ತುತ ಅಸ್ತಿತ್ವದಲ್ಲಿರುವ ಚಿಕಿತ್ಸೆಗಳು ಸಾಕಷ್ಟು ಹೊರೆಯನ್ನು ಉಂಟುಮಾಡುತ್ತವೆ, ಇದರಿಂದಾಗಿ ಆಗಾಗ್ಗೆ ಕಣ್ಣಿಗೆ ಚುಚ್ಚುಮದ್ದಿನ ಅಗತ್ಯವಿರುತ್ತದೆ. ಅಂಟಿಕೊಳ್ಳುವಿಕೆಯ ಅಂತರದಿಂದ ಉಂಟಾಗುವ ಇದು ಅಂಡರ್-ಟ್ರೀಟ್ಮೆಂಟ್ಗೆ ಕಾರಣವಾಗಬಹುದು, ಇದು ಮತ್ತಷ್ಟು ರೆಟಿನಾದ ಹಾನಿಗೆ ಕಾರಣವಾಗುತ್ತದೆ.
● ಸಾರ್ವಜನಿಕ ಅರಿವಿನ ಕೊರತೆ: ನಮ್ಮ ದೇಶದಲ್ಲಿ ಚಾಲ್ತಿಯಲ್ಲಿರುವ ಅಭ್ಯಾಸದ ಒಂದು ಭಾಗವಾಗಿ, ಕಣ್ಣಿನ ಆರೋಗ್ಯವನ್ನು ನಿರ್ಲಕ್ಷಿಸಲಾಗುತ್ತದೆ. ಕುಟುಂಬಗಳು, ಕಾರ್ಪೊರೇಟ್‌ಗಳು ಮತ್ತು ಸಂಸ್ಥೆಗಳು ವಾರ್ಷಿಕ ಆರೋಗ್ಯ ತಪಾಸಣೆ ಪ್ಯಾಕೇಜ್‌ಗಳಲ್ಲಿ ರೆಟಿನಾವನ್ನು ಸೇರಿಸುವುದಿಲ್ಲ. ಮಧುಮೇಹದಂತಹ ಸಮಸ್ಯೆಗಳು ದೃಷ್ಟಿಯ ಮೇಲೆ ಪರಿಣಾಮ ಬೀರಬಹುದು ಎನ್ನುವುದು ಸಾಮಾನ್ಯ ಜನರಿಗೆ ಸಂಪೂರ್ಣವಾಗಿ ತಿಳುವಳಿಕೆ ಇಲ್ಲ.

ಪ್ರಸ್ತುತ ಚಿಕಿತ್ಸಾ ಭೂದೃಶ್ಯದಲ್ಲಿ ಎದುರಿಸುತ್ತಿರುವ ಸವಾಲುಗಳು ಹಾಗೂ ನವೀನ ಚಿಕಿತ್ಸೆಗಳ ಅವಶ್ಯಕತೆ.
ರೋಗಿಯ ದೃಷ್ಟಿಕೋನದಿಂದ ನೋಡಿದಲ್ಲಿ, ಅವರು ತಮ್ಮ ಚಿಕಿತ್ಸೆಯ ಭಾಗವಾಗಿ ಕಣ್ಣಿನಲ್ಲಿ ಚುಚ್ಚುಮದ್ದು ಹಾಕಿಸಿಕೊಳ್ಳಲು ಭಯಪಡುತ್ತಾರೆ. ಕಳಪೆ ದೃಷ್ಟಿಯೊಂದಿಗೆ ವ್ಯವಹರಿಸುವಾಗ ಆಗಾಗ್ಗೆ ಚುಚ್ಚುಮದ್ದುಗಳನ್ನು ಪಡೆಯುವ ಸವಾಲು ಮತ್ತು ಕಣ್ಣಿನ ಆರೈಕೆ ಸೌಲಭ್ಯಗಳನ್ನು ಪಡೆಯಲು ಅನೇಕ ಭೇಟಿಗಳ ಕಷ್ಟವು ಕೂಡ ಅದರಲ್ಲಿ ಸೇರಿರುತ್ತದೆ. ಆಂಟಿ-VEGFಗಳಂತಹ ಹಳೆಯ ಚಿಕಿತ್ಸಾ ಆಯ್ಕೆಗಳನ್ನು ಸಾಮಾನ್ಯವಾಗಿ ಬಳಸಲಾಗಿದ್ದರೂ ಸಹ ಅನೇಕರು ಈ ಸಮಸ್ಯೆಯನ್ನು ಎದುರಿಸುತ್ತಾರೆ.

ಹಿಂದೆ ಅನುಮೋದಿಸಲಾದ ಚಿಕಿತ್ಸೆಗಳು nAMD ಮತ್ತು DME ಗಳ ಅಭಿವೃದ್ಧಿ ಹಾಗೂ ಪ್ರಗತಿಯನ್ನು ಹೆಚ್ಚಿಸುವ ಪ್ರಕ್ರಿಯೆಗಳನ್ನು – ಅಥವಾ ‘ಪಾತ್‌ವೇಸ್’ ಅನ್ನು ಮಾತ್ರವೇ ಭಾಗಶಃ ತಿಳಿಸಿವೆ. ಪ್ರಸ್ತುತ ಪರಿಸ್ಥಿತಿಯಲ್ಲಿ ಸ್ಟ್ಯಾಂಡರ್ಡ್ IVT ಚಿಕಿತ್ಸೆಯನ್ನು ಕೂಡ ಮೀರಿ ನಾವೀನ್ಯತೆಯ ಅವಶ್ಯಕತೆಯಿದೆ. IVT ಚುಚ್ಚುಮದ್ದುಗಳು (ಕಣ್ಣಿನ ಚುಚ್ಚುಮದ್ದು) ರೋಗಿಗಳಿಗೆ ಭರವಸೆಯ ಹೊಸ ಆಯ್ಕೆಗಳನ್ನು ತಂದಿದ್ದರೂ ಸಹ, DME ಮತ್ತು nAMD ಚಿಕಿತ್ಸೆಯಲ್ಲಿ ಇನ್ನೂ ಪೂರೈಸದ ಅಗತ್ಯತೆಗಳು ಸಾಕಷ್ಟಿವೆ. ಪ್ರಸ್ತುತ ಚಿಕಿತ್ಸೆಗೆ ಪುನರಾವರ್ತಿತ ವೆಚ್ಚ, ಪ್ರಯಾಣದ ಅನಾನುಕೂಲತೆ ಮತ್ತು ಆರೈಕೆದಾರರ ಮೇಲೆ ಅವಲಂಬಿತರಾಗುವ ಅಗತ್ಯವನ್ನು ಹೊಂದಿರುವ ರೋಗಿಗೆ ಆಗಾಗ್ಗೆ ಚುಚ್ಚುಮದ್ದು ಅಗತ್ಯವಿರುತ್ತದೆ. ಹೊಸ ಉದಯೋನ್ಮುಖ ಚಿಕಿತ್ಸೆಗಳು ಚುಚ್ಚುಮದ್ದಿನ ಸಂಖ್ಯೆ ಮತ್ತು ಆವರ್ತನದ ವಿಷಯದಲ್ಲಿ ರೋಗಿಗಳ ಮೇಲೆ ಕಡಿಮೆ ಹೊರೆಯೊಂದಿಗೆ ಉತ್ತಮ ಫಲಿತಾಂಶಗಳನ್ನು ಒದಗಿಸುವುದರ ಮೇಲೆ ಕೇಂದ್ರೀಕರಿಸುತ್ತವೆ.

ಸುಧಾರಿತ ಚಿಕಿತ್ಸಾ ಆಯ್ಕೆಗಳನ್ನು ಅಳವಡಿಸಿಕೊಳ್ಳಬೇಕಾದ ಅಗತ್ಯತೆ: ಪರಿಪೂರ್ಣ ದೃಷ್ಟಿಯನ್ನು ಹೊಂದಲು, ನಮ್ಮ ರೆಟಿನಾದಲ್ಲಿನ ನಾಳಗಳು ಸ್ಥಿರವಾಗಿರಬೇಕು ಹಾಗೂ ಬಲವಾಗಿರಬೇಕು. ಆದಾಗ್ಯೂ, ರೆಟಿನಾದ ಸಮಸ್ಯೆಗಳೊಂದಿಗೆ ವಾಸಿಸುವ ಜನರ ನಾಳಗಳು ಅಸ್ಥಿರವಾಗಿರುತ್ತವೆ, ಸೋರಿಕೆಯಾಗುತ್ತವೆ, ಉರಿಯುತ್ತವೆ ಮತ್ತು ಅಸಹಜವಾಗಿ ಬೆಳೆಯುತ್ತವೆ. VEGFಎನ್ನುವುದು ರೆಟಿನಾದ ಸಮಸ್ಯೆಗಳ ಅಭಿವೃದ್ಧಿ ಮತ್ತು ಪ್ರಗತಿಯನ್ನು ಒಳಗೊಂಡಿರುವ ಒಂದು ಪ್ರಮುಖ ಮಾರ್ಗವಾಗಿದೆ. VEGF ಮಾರ್ಗವನ್ನು ನಿರ್ಬಂಧಿಸುವುದರಿಂದ ರೆಟಿನಾದಲ್ಲಿನ ನಾಳಗಳು ರಕ್ತ ಮತ್ತು ದ್ರವ ಸೋರಿಕೆಯನ್ನು ಯಶಸ್ವಿಯಾಗಿ ನಿಲ್ಲಿಸುತ್ತದೆ ಹಾಗೂ ಹೊಸ ಅನಾರೋಗ್ಯಕರ ನಾಳಗಳು ಬೆಳೆಯುವುದನ್ನು ತಡೆಯುತ್ತದೆ. ಆದಾಗ್ಯೂ, VEGF ಮಾತ್ರವೇ ಏಕೈಕ ಮಾರ್ಗವಲ್ಲ. Ang-2 ಎನ್ನುವುದು ನಾಳೀಯ ಅಸ್ಥಿರತೆಗೆ ಕೊಡುಗೆ ನೀಡುತ್ತದೆ, ಉರಿಯೂತವನ್ನು ಉಂಟುಮಾಡುತ್ತದೆ ಹಾಗೂ ನಾಳಗಳ ಮೇಲೆ VEGF ನ ಕ್ರಿಯೆಗಳನ್ನು ಸುಗಮಗೊಳಿಸುತ್ತದೆ ಮತ್ತು ವರ್ಧಿಸುತ್ತದೆ, ಇದು ದೀರ್ಘಾವಧಿಯಲ್ಲಿ ಹೆಚ್ಚು ತೀವ್ರ ಸ್ಥಿತಿಗೆ ಕಾರಣವಾಗುತ್ತದೆ. VEGF ಅನ್ನು ಮಾತ್ರವೇ ಗುರಿಯಾಗಿಟ್ಟುಕೊಂಡು ನೀಡುವ ಚಿಕಿತ್ಸಾ ಆಯ್ಕೆಗಳು ರೋಗದ ಜೀವಶಾಸ್ತ್ರವನ್ನು ಭಾಗಶಃ ಮಾತ್ರವೇ ಪರಿಹರಿಸುತ್ತವೆ.

DME ಮತ್ತು nAMD ನಂತಹ ರೆಟಿನಾದ ಸಮಸ್ಯೆಗಳು ಶಾಶ್ವತ ಮತ್ತು ಬದಲಾಯಿಸಲಾಗದ ದೃಷ್ಟಿ ಹಾನಿಗೆ ಕಾರಣವಾಗಬಹುದು ಎಂದು ನಮಗೆ ತಿಳಿದಿದೆ; ಹಾಗೂ ಚಿಕಿತ್ಸೆಗಾಗಿ ಸಿಗುವ ಮೊದಲ ಅವಕಾಶವು ಚಿಕಿತ್ಸೆಯ ಅತ್ಯುತ್ತಮ ಅವಕಾಶವಾಗಿರುತ್ತದೆ. ಆದ್ದರಿಂದ ದೃಷ್ಟಿಯ ಸ್ಥಿತಿಯು ಕಾಲಾನಂತರದಲ್ಲಿ ಹದಗೆಟ್ಟ ರೋಗಿಗಳಿಗೆ ಅಂತಹ ಚಿಕಿತ್ಸೆಗಳನ್ನು ಕಾಯ್ದಿರಿಸುವ ಬದಲು ಮೊದಲ ಸಾಲಿನ ಸೆಟ್ಟಿಂಗ್‌ಗಳಲ್ಲಿ ಹೊಸ ನವೀನ ಚಿಕಿತ್ಸೆಗಳೊಂದಿಗೆ ರೋಗಿಗಳಿಗೆ ಚಿಕಿತ್ಸೆ ನೀಡುವ ಗುರಿಯನ್ನು ಹೊಂದಿರುತ್ತದೆ.

Ang-2 ಮತ್ತು VEGF-A ಒಳಗೊಂಡಿರುವ ಎರಡೂ ಮಾರ್ಗಗಳನ್ನು ನಿರ್ಬಂಧಿಸುವ ಸುಧಾರಿತ ಚಿಕಿತ್ಸಾ ಆಯ್ಕೆಗಳು, ರಕ್ತನಾಳಗಳನ್ನು ಸ್ಥಿರಗೊಳಿಸುವಂತೆ ವಿನ್ಯಾಸಗೊಳಿಸಲಾಗಿದೆ, ಇದರಿಂದಾಗಿ ಉರಿಯೂತ, ಸೋರಿಕೆ ಮತ್ತು ಅಸಹಜ ನಾಳಗಳ ಬೆಳವಣಿಗೆಯನ್ನು ಕಡಿಮೆ ಮಾಡಬಹುದು, ಇದು ನಿರಂತರ ರೋಗ ನಿಯಂತ್ರಣವನ್ನು ಒದಗಿಸಲು ಹಾಗೂ ದೃಷ್ಟಿ ಫಲಿತಾಂಶಗಳನ್ನು ಕಾಪಾಡಿಕೊಳ್ಳಲು ಬಹಳ ಸಹಾಯವನ್ನು ಮಾಡುತ್ತದೆ.

HCP ಯಿಂದ ಉಲ್ಲೇಖ – ದೃಷ್ಟಿ ನಷ್ಟವನ್ನು ಹೊಂದಿರುವ ರೋಗಿಗಳು ಸಾಮಾಜಿಕ ಬಹಿಷ್ಕಾರ, ಆತಂಕ, ಖಿನ್ನತೆಯ ಲಕ್ಷಣಗಳು ಮತ್ತು ಅವರ ದೈನಂದಿನ ಜೀವನದಲ್ಲಿ ಅನೇಕ ಕಷ್ಟಗಳನ್ನು ಎದುರಿಸುತ್ತಾರೆ. ಸರಳವಾದ ಕಾರ್ಯಗಳನ್ನು ನಿರ್ವಹಿಸುವ ಸಾಮರ್ಥ್ಯವು ಸೀಮಿತಗೊಳ್ಳುತ್ತದೆ. ಬಹು ಕ್ಲಿನಿಕ್ ಭೇಟಿಗಳು ಮತ್ತು ಆಗಾಗ್ಗೆ ಕಣ್ಣಿನ ಚುಚ್ಚುಮದ್ದಿನ ಹೊರೆಯ ಚಿಕಿತ್ಸೆಯ ವೇಳಾಪಟ್ಟಿಯನ್ನು ಕೂಡ ಇದಕ್ಕೆ ಸೇರಿಸಿದಂತೆ. ವಿಸ್ತೃತ ಚಿಕಿತ್ಸೆಯ ಬಾಳಿಕೆಯೊಂದಿಗೆ ಬರುವ ಪರಿಣಾಮಕಾರಿ ವೈದ್ಯಕೀಯ ಪ್ರಯೋಜನಗಳನ್ನು ನೀಡುವ ಹೊಸ, ನವೀನ ಚಿಕಿತ್ಸಾ ಆಯ್ಕೆಗಳ ಅವಶ್ಯಕತೆಯಿದೆ. ಇಂತಹ ಚಿಕಿತ್ಸಾ ಆಯ್ಕೆಗಳು ರೋಗಿಗಳಿಗೆ ಅನುಕೂಲವನ್ನು ಒದಗಿಸುವುದಲ್ಲದೆ, ಉತ್ತಮ ಫಲಿತಾಂಶಗಳಿಗಾಗಿ ಚಿಕಿತ್ಸೆಯ ಅನುಸರಣೆಯನ್ನು ಖಾತ್ರಿಪಡಿಸುತ್ತದೆ, ಹಾಗೂ ನಮ್ಮ ಆರೋಗ್ಯ ವ್ಯವಸ್ಥೆಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡುತ್ತದೆ. – ಡಾ. ವಿವೇಕ್ ಎಂ ಭಾಸ್ಕರ್ – ಹಿರಿಯ ಸಲಹೆಗಾರ (ವಿಟ್ರಿಯೋ ರೆಟಿನಾಲ್) – ಶೇಖರ್ ಕಣ್ಣಿನ ಆಸ್ಪತ್ರೆ, ಬೆಂಗಳೂರು.

HCP ಯಿಂದ ಉಲ್ಲೇಖ – ಕಣ್ಣಿನ ಪೊರೆ ಮತ್ತು ಗ್ಲುಕೋಮಾ ಸಂಬಂಧಿತ ಕುರುಡುತನವನ್ನು ಕಡಿಮೆ ಮಾಡುವಲ್ಲಿ ಭಾರತವು ಮಹತ್ತರವಾದ ಪ್ರಗತಿಯನ್ನು ಸಾಧಿಸಿದೆ. ಆದರೆ ದುರದೃಷ್ಟವಶಾತ್, ನಮ್ಮ ದೇಶದಲ್ಲಿ ರೆಟಿನಾ ಸಂಬಂಧಿತ ದೃಷ್ಟಿ ನಷ್ಟದ ಪಾಲು ಹೆಚ್ಚಾಗುತ್ತಲಿದೆ. ಹಲವಾರು ಅಂಶಗಳು ಇದಕ್ಕೆ ಕಾರಣವಾಗಿವೆ… ಅರಿವಿನ ಕೊರತೆ, ರೋಗನಿರ್ಣಯದಲ್ಲಿ ತಡ ಮಾಡುವಿಕೆ, ಕಳಪೆ ಜೀವನಶೈಲಿ, ಮಧುಮೇಹ ಜನಸಂಖ್ಯೆಯ ಹೆಚ್ಚಳ, ನಮ್ಮ ದೇಶದ ವಯಸ್ಸಾದ ಜನಸಂಖ್ಯೆ, ನಮ್ಮ ಆರೋಗ್ಯ ವ್ಯವಸ್ಥೆಗಳಲ್ಲಿನ ಸಾಮರ್ಥ್ಯದ ನಿರ್ಬಂಧಗಳು ಮತ್ತು ರೆಟಿನಾದ ಪರಿಸ್ಥಿತಿಗಳಿಗೆ ಆದ್ಯತೆ ನೀಡುವಲ್ಲಿ ದುರ್ಬಲವಾದ ನೀತಿ ಗಮನ ಮುಂತಾದವುಗಳು.

Continue Reading
Advertisement
Latest7 minutes ago

ಅಬುಧಾಬಿಯಲ್ಲಿ ಮೋದಿ: ಯುಎಇ ಜೊತೆ ಮಹತ್ವದ ಒಪ್ಪಂದಕ್ಕೆ ಸಹಿ

Latest5 hours ago

ವಾಹನ ಸವಾರರಿಗೆ ಶಾಕ್! ಪೆಟ್ರೋಲ್, ಡೀಸೆಲ್ ತಲಾ ₹3 ಏರಿಕೆ.

Latest5 hours ago

ನಟ ದರ್ಶನ್‌ಗೆ ಸುಪ್ರೀಂ ಕೋರ್ಟ್ ಶಾಕ್‌, ಜಾಮೀನು ಅರ್ಜಿ ವಜಾ

Latest23 hours ago

ಚೀನಾದಲ್ಲಿ ಟ್ರಂಪ್‌, ಶಿ ಜಿನ್‌‌ಪಿಂಗ್‌ ಹೈವೋಲ್ಟೇಜ್‌ ಮೀಟಿಂಗ್‌‌

Latest23 hours ago

ಪಶ್ಚಿಮ ಬಂಗಾಳದಲ್ಲಿ ಗೋ ಹತ್ಯೆ ನಿಷೇಧ ಕಾನೂನು ಜಾರಿ; ನಿಯಮ ಉಲ್ಲಂಘಿಸಿದ್ರೆ ಜೈಲು ಶಿಕ್ಷೆ, ದಂಡ

ಪ್ರಮುಖ ಸುದ್ದಿ24 hours ago

ಕರ್ನಾಟಕ ಸೇರಿ 16 ರಾಜ್ಯ, 3 ಕೇಂದ್ರಾಡಳಿತ ಪ್ರದೇಶಗಳಲ್ಲಿ ಎಸ್‌ಐಆರ್‌

Latest1 day ago

ಹಿಜಾಬ್‌ ಓಕೆ, ಕೇಸರಿ ಶಾಲುಗೆ ನೋ: ಪರ- ವಿರೋಧ ಚರ್ಚೆ ಶುರು

Latest1 day ago

ವಿ.ಡಿ. ಸತೀಶನ್‌ ಸಿಎಂ ಆಗಿ ಆಯ್ಕೆ ಹಿಂದಿನ ರಿಯಲ್ ಸ್ಟೋರಿ

Latest1 day ago

ಕೇರಳಂ ನೂತನ ಸಿಎಂ ಆಗಿ ವಿ.ಡಿ. ಸತೀಶನ್‌ ಆಯ್ಕೆ

Latest2 days ago

ಮನಸೆಳೆದ ಎಸ್‌ಜೆಬಿಐಟಿ ವಿದ್ಯಾರ್ಥಿಗಳ ʼವರ್ಚಸ್ವ ಫ್ಲ್ಯಾಶ್ ಮಾಬ್ʼ

galipata neetu
ಕಿರುತೆರೆ2 years ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ3 years ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ3 years ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ3 years ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Bigg Boss- Saregamapa 20 average TRP
ಕಿರುತೆರೆ3 years ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ3 years ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ3 years ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ2 years ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ3 years ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ2 years ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Action Prince Dhruva Sarja much awaited film Martin to hit the screens on October 11
ಸಿನಿಮಾ2 years ago

Martin Movie : ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಅಭಿನಯದ ಬಹು ನಿರೀಕ್ಷಿತ ʻಮಾರ್ಟಿನ್ʼ ಚಿತ್ರ ಅಕ್ಟೋಬರ್ 11ರಂದು ತೆರೆಗೆ

Sudeep's birthday location shift
ಸ್ಯಾಂಡಲ್ ವುಡ್2 years ago

Kichcha Sudeepa: ಸುದೀಪ್‌ ಬರ್ತ್‌ ಡೇ ಲೊಕೇಶನ್‌ ಶಿಫ್ಟ್; ದರ್ಶನ್‌ ಭೇಟಿಗೆ ಬಳ್ಳಾರಿ ಜೈಲಿಗೆ ಹೋಗ್ತಾರಾ ಕಿಚ್ಚ

Actor Darshan
ಸ್ಯಾಂಡಲ್ ವುಡ್2 years ago

Actor Darshan : ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದಿಂದ ದರ್ಶನ್‌ ಬಳ್ಳಾರಿಗೆ ಸ್ಥಳಾಂತರ; ಸೆಲ್‌ನಲ್ಲಿ ಏನೆಲ್ಲ ವ್ಯವಸ್ಥೆ ಇದೆ ಗೊತ್ತಾ?

ಮಳೆ2 years ago

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

karnataka Weather Forecast
ಮಳೆ2 years ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ2 years ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ2 years ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು2 years ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 years ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ2 years ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

ಟ್ರೆಂಡಿಂಗ್‌