ಪಾಸಿಟಿವ್‌ ಮನೋಭಾವ ಬೆಳೆಸಿಕೊಳ್ಳುವುದು ಹೇಗೆ? ಇಲ್ಲಿವೆ 7 ಸಲಹೆಗಳು! - Vistara News

ಲೈಫ್‌ಸ್ಟೈಲ್

ಪಾಸಿಟಿವ್‌ ಮನೋಭಾವ ಬೆಳೆಸಿಕೊಳ್ಳುವುದು ಹೇಗೆ? ಇಲ್ಲಿವೆ 7 ಸಲಹೆಗಳು!

ಧನಾತ್ಮಕ ಮನೋಭಾವ ಗೆಲುವಿನ ಹಾದಿ. ಯಾವೆಲ್ಲ ಅಭ್ಯಾಸಗಳಿಂದ ನಮ್ಮ ಮಿದುಳು ಪಾಸಿಟಿವ್‌ ಮನೋಭಾವದ ಹಾದಿಗೆ ಪಳಗುತ್ತದೆ, ಅದಕ್ಕೆ ಪ್ರಯತ್ನ ಪಡುವುದು ಹೇಗೆ ಎಂಬುದಕ್ಕೆ ಇಲ್ಲಿವೆ ಏಳು ಸಲಹೆಗಳು.

VISTARANEWS.COM


on

positive attitude
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಸಕಾರಾತ್ಮಕ ಮನೋಭಾವ (ಪಾಸಿಟಿವ್‌ ಥಿಂಕಿಂಗ್‌) ಬೆಳೆಸಿಕೊಳ್ಳಿ ಎಂದು ಹೇಳುವುದು ಸುಲಭ. ಆದರೆ ಬದುಕಿನಲ್ಲಿ ಅಳವಡಿಸಿಕೊಳ್ಳುವುದು ಕಷ್ಟ ಅಂತನಿಸುತ್ತಿದೆಯೇ? ಹೌದು. ಪಾಸಿಟಿವ್‌ ಥಿಂಕಿಂಗ್‌ ತಾನೇ ತಾನಾಗಿ ಬರುವುದಿಲ್ಲ. ಅದನ್ನು ಸಾಧಿಸಲು ಕೊಂಚ ಪ್ರಯತ್ನವನ್ನೂ ಪಡಬೇಕಾಗುತ್ತದೆ. ಪ್ರಯತ್ನ ಪಡುತ್ತಲೇ ಇದ್ದರೆ ನಿಧಾನವಾಗಿ ಅದು ನಮ್ಮ ಹಾದಿಗೆ ಬರುತ್ತದೆ. ಹಾಗಾದರೆ ಪಾಸಿಟಿವ್‌ ಮನೋಭಾವ ಬೆಳೆಸಿಕೊಳ್ಳುವುದು ಹೇಗೆ? ಯಾವೆಲ್ಲ ಅಭ್ಯಾಸಗಳಿಂದ ನಮ್ಮ ಮಿದುಳು ಪಾಸಿಟಿವ್‌ ಮನೋಭಾವದ ಹಾದಿಗೆ ಪಳಗುತ್ತದೆ, ಅದಕ್ಕೆ ಪ್ರಯತ್ನ ಪಡುವುದು ಹೇಗೆ ಎಂಬುದಕ್ಕೆ ಇಲ್ಲಿವೆ ಏಳು ಸಲಹೆಗಳು.

೧. ಯಾವುದೇ ಕೆಲಸದ ಸಂದರ್ಭ ಸವಾಲುಗಳು ಹಾಗೂ ಅಡೆತಡೆಗಳು ಸಾಮಾನ್ಯ. ಆದರೆ, ಆ ಕೆಲಸದತ್ತ ಗಮನ ಹರಿಸುವಾಗ ಪ್ರಯತ್ನಪಟ್ಟು ಒಳ್ಳೆಯ ವಿಚಾರಗಳನ್ನಷ್ಟೆ ಗಣನೆಗೆ ತೆಗೆದುಕೊಳ್ಳುವುದನ್ನು ರೂಢಿಸಿಕೊಳ್ಳಿ. ಪಾಸಿಟಿವ್‌ ವಿಚಾರ ತೀರಾ ಸಣ್ಣದಿರಬಹುದು. ಕಷ್ಟ ದೊಡ್ಡದಿರಬಹುದು. ಆದರೂ, ಮಾಡಿ ಮುಗಿಸಬೇಕೆಂಬ ಹಠದೊಂದಿಗೆ ಆಗುವ ಲಾಭಗಳನ್ನಷ್ಟೇ ಯೋಚಿಸಿ. ಹೀಗೆ ಮಾಡಲು ಅಭ್ಯಾಸ ಮಾಡುವುದರಿಂದ ಪ್ರತಿಯೊಂದರಲ್ಲೂ ಆಶಾಕಿರಣ ನಿಮ್ಮೆದುರು ಕಾಣಲಾರಂಭಿಸುತ್ತದೆ. ಅದರಲ್ಲಿ ಸಿಗುವ ಸುಖ ಯಾವ ಸವಾಲಿಗೂ ಕಮ್ಮಿ ಇಲ್ಲ ಎಂಬ ಸತ್ಯದ ಅರಿವಾಗಲಾರಂಭಿಸುತ್ತದೆ.

೨. ಕೃತಜ್ಞತೆಯನ್ನು ಅಭ್ಯಾಸ ಮಾಡಿಕೊಳ್ಳಿ. ನಿಮ್ಮ ಹಲವು ಒತ್ತಡಗಳನ್ನು, ಮಾನಸಿಕ ತುಮುಲಗಳ್ನು ನಿವಾಳಿಸಿ ಎಸೆದುಬಿಡುವ ಸಾಮರ್ಥ್ಯ ಈ ಕೃತಜ್ಞತೆಗಿದೆ. ಇದು ನಿಮ್ಮಲ್ಲಿ ಒತ್ತಡವನ್ನು ಕಡಿಮೆ ಮಾಡುವುದಷ್ಟೇ ಅಲ್ಲ, ಕಷ್ಟಕಾಲದಲ್ಲಿ ಆತ್ಮವಿಶ್ವಾಸ, ಛಲದ ಜೊತೆಗೆ ಸರ್ವರನ್ನೂ ಪ್ರೀತಿಸುವ, ಮಮತೆ ಹಂಚುವ ಗುಣವನ್ನೂ ಚಿಮ್ಮಿಸುತ್ತದೆ. ನಿಮಗೆ ಕಂಫರ್ಟ್‌ ನೀಡುವ ಜನರು, ಸ್ಥಳ, ಇತ್ಯಾದಿಗಳ ಬಗ್ಗೆ ಯೋಚಿಸಿ. ಪ್ರತಿ ದಿನವೂ ಬದುಕಿನ ಉತ್ತಮ ವಿಷಯಗಳಿಗೆ ಕೃತಜ್ಞತಾ ಭಾವ ಹೊಂದುವುದನ್ನು, ನೆನಪಿಸಿಕೊಳ್ಳುವುದನ್ನು ರೂಢಿಸಿಕೊಳ್ಳಿ. ನಿಮಗೆ ಸಹಾಯ ಮಾಡಿದ ಯಾರೋ ಅಪರಿಚಿತ, ಅಥವಾ ಒಂದು ನಾಯಿ, ಅಥವಾ ಊಟ ಹಾಕಿದ ಪುಣ್ಯಾತ್ಮ ಎಲ್ಲವೂ ನಿಮಗೆ ಬದುಕಿನ ಬಗೆಗೆ ಬೇರೆಯದೇ ದೃಷ್ಠಿಕೋನವನ್ನು ಹೊಂದುವಂತೆ ಮಾಡುತ್ತದೆ.

೩. ಡೈರಿ ಬರೆಯಿರಿ. ದಿನವೂ ಕೊಂಚ ಹೊತ್ತು, ನಿಮ್ಮ ಬದುಕಿಗೆ ಆ ದಿನ ಸಂತಸ ಕೊಟ್ಟ ಜೀವಗಳು, ಮನಸುಗಳು ಅಥವಾ ಖುಷಿ ಕೊಟ್ಟ ಗಳಿಗೆಗಳನ್ನು ಬರೆಯಲು ಮೀಸಲಿಡಿ. ನೀವು ನಿಮ್ಮ ಜೊತೆ ಕಳೆಯುವ ನಿಮ್ಮದೇ ಸಮಯವಿದು. ಈ ಸಂಪೂರ್ಣ ಸಮಯ ನಿಮ್ಮ ಶ್ರೇಯಸ್ಸಿಗೇ ಮೀಸಲು. ನಿಮ್ಮ ಮೇಲೆ ವರ್ಕ್‌ ಮಾಡಿ. ದಿನಚರಿ ಬರೆಹ ರೂಪಕ್ಕೆ ಇಳಿಯುವಾಗ ಪ್ರತಿದಿನದ ಸಣ್ಣ ಸಣ್ಣ ಕ್ಷಣಗಳೂ ಅಮೋಘ ಖುಷಿ ಕೊಡುವ ಸಾಮರ್ಥ್ಯ ಹೊಂದಿವೆ ಎಂದು ಅರಿವಾಗುತ್ತದೆ.

ಇದನ್ನೂ ಓದಿ | World heart day | ಕಾಪಾಡಿಕೊಳ್ಳಲು ಹೃದಯವನ್ನು, ಸೇವಿಸಿ ಪ್ರತಿದಿನ ಇವನ್ನು

೪. ನಗು, ತಮಾಷೆಗೆ ಸಮಯ ಕೊಡಿ. ನಗುವಿನಷ್ಟು ದಿವ್ಯೌಷಧ ಇನ್ನೊಂದಿಲ್ಲ. ಒತ್ತಡ, ಚಿಂತೆ, ಖಿನ್ನತೆಯಂತಹ ಮಾನಸಿಕ ತುಮುಲಗಳನ್ನು ದೂರ ಇಡುವ ಸಾಮರ್ಥ್ಯ ಹೊಂದಿದೆ. ಹಾಗಾಗಿ, ನಿಮ್ಮ ಪ್ರೀತಿಪಾತ್ರರ ಜೊತೆ ಕಳೆಯಲು ಕೊಂಚ ಸಮಯ ಮೀಸಲಿಡಿ. ಸಂಬಂಧಗಳ ಮಹತ್ವ ಅರಿತು ಅವರ ಜೊತೆಗೆ ಪ್ರಿತಿ, ತಮಾಷೆ, ಲಘು ಹರಟೆಗಳಲ್ಲಿ ನಕ್ಕು ಹಗುರಾಗಿ.

೫. ಪಾಸಿಟಿವ್‌ ಮನಸ್ಥಿತಿಯ ಮಂದಿಯೊಂದಿಗೆ ಕಾಲ ಕಳೆಯಿರಿ. ಅವರ ಮಾತುಗಳು, ಅವರು ಮಾಡುವ ಕೆಲಸಗಳು ನಿಮಗೆ ಸ್ಪೂರ್ತಿ ಕೊಡುವಂತಿರಲಿ. ಸಮಯದ ಸದ್ಭಳಕೆ ಇಂಥವರಿಂದ ನೋಡಿ ಕಲಿಯಬೇಕು ಎಂದು ಅನಿಸುವ ಮಂದಿಯ ಜೊತೆಗೆ ಸ್ನೇಹವಿರಲಿ. ಪ್ರತಿಯೊಂದರಲ್ಲೂ ಹೊಸತನ ಕಾಣುವ, ಬದುಕನ್ನು ಖುಷಿಯಿಂದ ಪಾಸಿಟಿವ್‌ ಆಗಿ ತೆಗೆದುಕೊಳ್ಳುವ, ಕಷ್ಟದ ಸಂದರ್ಭದಲ್ಲೂ ಪಟ್ಟು ಬಿಡದೆ ಪಾಸಿಟಿವ್‌ ಮನೋಭಾವದಿಂದ ಹೋರಾಡುವ ಮಂದಿ ನಿಮ್ಮ ಜೊತೆಗಿದ್ದರೆ, ಖಂಡಿತ ನಿಮಗೂ ಅವರ ಗಾಳಿ ಬೀಸುತ್ತದೆ.

೬. ನೀವು ಮಾಡಿದ ಕೆಲಸಗಳ ಬಗೆಗೆ ನಿಮ್ಮ ನೆಗೆಟಿವ್‌ ವಿಚಾರಗಳ ಮೇಲೆ ವರ್ಕ್‌ ಮಾಡಿ. ನಿಮ್ಮ ವೀಕ್‌ನೆಸ್‌ಗಳನ್ನು ಪತ್ತೆ ಹಚ್ಚಿ. ಅವುಗಳನ್ನು ಸರಿಪಡಿಸಿಕೊಳ್ಳುವಲ್ಲಿಗೆ ಗಮನ ಕೊಡಿ. ಇನ್ನೊಬ್ಬರು ನಿಮ್ಮ ನೆಗೆಟಿವ್‌ ಅಂಶಗಳನ್ನು ಹೇಳಿದಾಗ ಅದನ್ನು ಉತ್ತಮ ಮನೋಭಾವದಲ್ಲಿ ಸ್ವೀಕರಿಸಲು ಪ್ರಯತ್ನಿಸಿ.

೭. ಪ್ರತಿದಿನದ ಆರಂಭವನ್ನೂ ಒಂದು ಪಾಸಿಟಿವ್‌ ಮನೋಭಾವದಿಂದ ಆರಂಭಿಸಿ. ಬೆಳಗ್ಗೆ ಬೇಗ ಏಳುವುದರಿಂದ ಹಿಡಿದು, ನಿಮ್ಮ ಪ್ರೀತಿ ಪಾತ್ರರಿಗೆ ನೆರವಾಗುವುದು, ನಿಮ್ಮ ದೈಹಿಕ ಮಾನಸಿಕ ಆರೋಗ್ಯಕ್ಕೆ ಪೂರಕವಾದ ವ್ಯಾಯಾಮಗಳನ್ನು ಮಾಡುವುದು ಹೀಗೆ ಎಲ್ಲವೂ ನಿಮ್ಮ ಇಡೀ ದಿನಕ್ಕೆ ಚೈತನ್ಯ ನೀಡುತ್ತದೆ. ಇತರರ ಕೆಲಸಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿ. ಇತರರ ಕೆಲಸಗಳಿಗೆ ನೀವೂ ಹೆಗಲು ಕೊಟ್ಟು ಖುಷಿಯನ್ನು ಹಂಚಿ. ನಿಮ್ಮ ಪ್ರಯತ್ನ ಪ್ರಾಮಾಣಿಕವಾಗಿದ್ದರೆ ಖಂಡಿತವಾಗಿಯೂ ಇದರಲ್ಲಿ ನೀವು ಸಫಲರಾಗುತ್ತೀರಿ.

ಇದನ್ನೂ ಓದಿ | Bad dreams | ಪದೇ ಪದೇ ದುಃಸ್ವಪ್ನ ಬೀಳುತ್ತಿದೆಯೇ? ಇದು ಮರೆವಿನ ಕಾಯಿಲೆಯ ಲಕ್ಷಣ!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಲೈಫ್‌ಸ್ಟೈಲ್

Sleep After Lunch: ಊಟದ ನಂತರ ನಮಗೆ ಆಕಳಿಕೆ, ನಿದ್ದೆ ಬರುವುದೇಕೆ?

Sleep after Lunch: ಮಧ್ಯಾಹ್ನ ವಿಪರೀತ ಹಸಿವಾಗುತ್ತದೆ. ಹಸಿವು ಅಂತ ಚೆನ್ನಾಗಿ ಊಟ ಮಾಡಿದರೆ ಆಕಳಿಕೆ ಬಂದು ನಿದ್ದೆ ಆವರಿಸುತ್ತದೆ. ಹೀಗೆ ಊಟದ ನಂತರ ಕಾಲು ಚಾಚಿ ಮೈ ಚೆಲ್ಲಬೇಕೆಂಬ ಬಯಕೆ ಬಹಳಷ್ಟು ಜನರಿಗೆ ಬರುತ್ತದೆ. ಊಟದ ನಂತರ ಕಣ್ಣೆಳೆದು ನಿದ್ದೆ ಬರುವಂತಾಗುವುದೇಕೆ? ಉಂಡಿದ್ದಕ್ಕೇ ದಣಿವಾಗುವುದೇಕೆ? ಇಲ್ಲಿದೆ ಅದಕ್ಕೆ ಕಾರಣಗಳ ವಿವರ.

VISTARANEWS.COM


on

Sleep After Lunch
Koo

ಈಗಷ್ಟೇ ಮಧ್ಯಾಹ್ನದ ಊಟ ಮುಗಿಸಿ (Sleep after Lunch) ಬಂದು ಆಫೀಸ್‌ನಲ್ಲಿ ಕುಳಿತಿದ್ದೀರಿ. ಅಲ್ಲಿಯವರೆಗೆ ಇಲ್ಲದ್ದು ಇದ್ದಕ್ಕಿದ್ದಂತೆ ಗಂಟು ಬೀಳುತ್ತದೆ- ಆಕಳಿಕೆ! ಹತ್ತಿಪ್ಪತ್ತು ಸಾರಿ ಆಕಳಿಸುವಷ್ಟರಲ್ಲಿ, ಮೆಲ್ಲಗೆ ತೂಕಡಿಕೆ ಆವರಿಸುತ್ತದೆ. ಎಷ್ಟು ಪ್ರಯತ್ನಿಸಿದರೂ ಕಣ್ಣು ತೆರೆದು ಕೂರುವುದಕ್ಕೇ ಆಗುತ್ತಿಲ್ಲ. ಸಣ್ಣದೊಂದು ಕೋಳಿ ನಿದ್ದೆ ಮಾಡಿದ ಮೇಲೆಯೇ ಈ ಅವಸ್ಥೆಯಿಂದ ಬಿಡುಗಡೆ ಅನಿಸಬಹುದು. ಕೂತಲ್ಲೇ ತೂಕಡಿಸಿ ನಿದ್ದೆ ತೆಗೆಯುವ ಸಾಮರ್ಥ್ಯ ಇದ್ದರೆ ಸರಿ, ಇಲ್ಲದಿದ್ದರೆ? ಫಜೀತಿ ತಪ್ಪಿದ್ದಲ್ಲ. ಹೀಗೆ ಊಟದ ನಂತರ ಕಾಲು ಚಾಚಿ ಮೈ ಚೆಲ್ಲಬೇಕೆಂಬ ಬಯಕೆ ಬಹಳಷ್ಟು ಜನರಿಗೆ ಬರುತ್ತದೆ. ಊಟದ ನಂತರ ಕಣ್ಣೆಳೆದು ನಿದ್ದೆ ಬರುವಂತಾಗುವುದೇಕೆ? ಉಂಡಿದ್ದಕ್ಕೇ ದಣಿವಾಗುವುದೆಂದರೆ! ಇದಕ್ಕೆ ಕಾರಣಗಳು ಇಲ್ಲಿವೆ.

Asian man is sleeping snoring

ಏಕೆ ಹೀಗೆ?

ಗಡದ್ದು ಊಟದ ನಂತರ ನಿದ್ದೆ ಬರುವುದಕ್ಕೆ ಕಾರಣಗಳು ಇಲ್ಲದಿಲ್ಲ. ದೇಹದಲ್ಲಿ ಹೆಚ್ಚುವ ಸೆರೋಟೀನಿನ್‌ ಎಂಬ ಅಂಶವೇ ಇದಕ್ಕೆ ಕಾರಣ. ವಿವರವಾಗಿ ಹೇಳುವುದಾದರೆ, ಪಿಷ್ಟ ಮತ್ತು ಪ್ರೊಟೀನ್‌ ಅಂಶಗಳು ಹೆಚ್ಚಿರುವಂಥ ಆಹಾರಗಳು ಸಾಮಾನ್ಯವಾಗಿ ನಿದ್ದೆ ಬರಿಸುತ್ತವೆ. ಕಾರಣ ಪ್ರೊಟೀನ್‌ಭರಿತ ಆಹಾರಗಳಲ್ಲಿ ಟ್ರಿಪ್ಟೋಫ್ಯಾನ್‌ ಎಂಬ ಅಮೈನೊ ಆಮ್ಲಗಳು ಧಾರಾಳವಾಗಿ ಇರುತ್ತವೆ. ಈ ಅಮೈನೊ ಆಮ್ಲಗಳಿಂದ ಸೆರೋಟೋನಿನ್‌ ಎನ್ನುವ ಹ್ಯಾಪಿ ಹಾರ್ಮೋನು ಬಿಡುಗಡೆ ಆಗುತ್ತದೆ. ನಮ್ಮ ಮೂಡ್‌ ಬದಲಾವಣೆ, ನಿದ್ದೆ ಮುಂತಾದ ಬಹಳಷ್ಟು ವಿಷಯಗಳ ಮೇಲೆ ಇದು ಪ್ರಭಾವ ಬೀರುತ್ತದೆ. ಈ ಸೆರೋಟೋನಿನ್‌ ಹೀರಿಕೊಳ್ಳುವುದಕ್ಕೆ ಪಿಷ್ಟಭರಿತ ಆಹಾರಗಳು ಪ್ರೋತ್ಸಾಹ ನೀಡುತ್ತವೆ. ಗಡದ್ದು ಊಟದ ನಂತರ ನಿದ್ದೆ ಬರುವುದಕ್ಕೆ ಇಷ್ಟು ಸಾಲದೇ?

ಯಾವ ಆಹಾರಗಳು?

ಪ್ರೊಟೀನ್‌ ಹೆಚ್ಚಿರುವಂಥ ಮೊಟ್ಟೆ, ಚಿಕನ್‌, ಹಾಲು, ಮೊಸರಿನಂಥ ಡೇರಿ ಉತ್ಪನ್ನಗಳು, ಸೋಯ್‌ ಉತ್ಪನ್ನಗಳು, ಮೀನು, ಬೀಜಗಳು ಇತ್ಯಾದಿ ಆಹಾರಗಳಲ್ಲಿ ಟ್ರಿಪ್ಟೊಫ್ಯಾನ್‌ ಅಮೈನೊ ಆಮ್ಲ ಹೆಚ್ಚಾಗಿರುತ್ತದೆ. ಪಿಷ್ಟ ಹೆಚ್ಚಾಗಿರುವ ಆಹಾರಗಳೆಂದರೆ- ಅನ್ನ, ಚಪಾತಿ, ಬ್ರೆಡ್‌, ಪಾಸ್ತಾ, ಯಾವುದೇ ಸಿಹಿ ತಿಂಡಿಗಳು, ಕೇಕ್‌ನಂಥ ಬೇಕ್‌ ಮಾಡಿದ ತಿನಿಸುಗಳು, ಆಲೂಗಡ್ಡೆ ಮತ್ತು ಗೆಣಸಿನಂಥ ಗಡ್ಡೆಗಳು. ಇವುಗಳ ಮಿಶ್ರಣ ಆಹಾರದಲ್ಲಿದ್ದರೆ, ಊಟದ ನಂತರ ಕಣ್ಣೆಳೆಯುವುದು ಖಚಿತ. ಹಳೆಯ ಕಾಲದಲ್ಲಿ ಮಕ್ಕಳಿಗೆ ಮಲಗುವಾಗ ಹಾಲು ಕುಡಿಸುವ ಕ್ರಮದ ಹಿಂದೆಯೂ ಇಂಥದ್ದೇ ಕಾರಣಗಳು ಇರಬಹುದು.

ಎಷ್ಟು ತಿನ್ನುತ್ತೀರಿ?

ಆಹಾರವನ್ನು ತಿನ್ನುವ ಪ್ರಮಾಣ ಎಷ್ಟು ಎನ್ನುವುದು ಸಹ ಮುಖ್ಯವಾಗುತ್ತದೆ. ಭೂರಿ ಭೋಜನದ ನಂತರ ನಿದ್ದೆಯನ್ನು ತಪ್ಪಿಸುವುದು ಕಷ್ಟ. ಭರ್ಜರಿ ಊಟದ ನಂತರ ರಕ್ತದಲ್ಲಿನ ಸಕ್ಕರೆ ಅಂಶಗಳೂ ಏರಿಳಿತವಾಗಿ ಆಯಾಸದ ಅನುಭವ ಆಗಬಹುದು, ನಿದ್ದೆ ಬೇಕೆನಿಸಬಹುದು. ಆದರೆ ಊಟದ ಪ್ರಾರಂಭದಲ್ಲಿ ಒಂದಿಷ್ಟು ಸಲಾಡ್‌ಗಳನ್ನು ತಿನ್ನುವುದರಿಂದ, ಅತಿಯಾಗಿ ಊಟ ಮಾಡುವುದನ್ನು ತಪ್ಪಿಸಬಹುದು. ಸಲಾಡ್‌ಗಳು ಒಮ್ಮೆ ಹೊಟ್ಟೆ ತುಂಬಿದ ಅನುಭವ ನೀಡಿದರೂ, ನಂತರ ದೀರ್ಘ ಕಾಲದವರೆಗೆ ಹೊಟ್ಟೆ ಭಾರವಾದ ಅನುಭವವನ್ನು ನೀಡುವುದಿಲ್ಲ. ಅದರಿಂದಾಗಿ ಮಧ್ಯಾಹ್ನದ ತೂಕಡಿಕೆಯನ್ನು ತಡೆಯಲು ಸಾಧ್ಯವಾಗುತ್ತದೆ. ಹಾಗಾಗಿ ಮಧ್ಯಾಹ್ನದ ಊಟ ಮಿತವಾಗಿರುವುದು ಅಗತ್ಯ.

Health Tips Kannada sleepy is good

ನಿದ್ದೆ

ರಾತ್ರಿಯ ಹೊತ್ತು ಸರಿಯಾಗಿ ನಿದ್ದೆಯಿಲ್ಲವೇ? ಮಧ್ಯಾಹ್ನ ತೂಕಡಿಕೆ ಬೆನ್ನುಹತ್ತುವುದು ನಿಶ್ಚಿತ. ಹಾಗಾಗಿ ರಾತ್ರಿ ಕಣ್ತುಂಬಾ ನಿದ್ರಿಸಲು ಆದ್ಯತೆ ನೀಡಿ. ಸಾಮಾನ್ಯವಾಗಿ 7 ತಾಸುಗಳ ರಾತ್ರಿಯ ನಿದ್ದೆಯಿಂದ ಹಗಲು ಹೊತ್ತಿನ ಆಯಾಸವನ್ನು ತಪ್ಪಿಸಲು ಸಾಧ್ಯವಿದೆ. ಇಷ್ಟಾಗಿಯೂ ನಿದ್ದೆ ತಡೆಯಲು ಆಗುತ್ತಿಲ್ಲವೆಂದರೆ, ಹತ್ತು ನಿಮಿಷಗಳಿಗೆ ಅಲರಾಂ ಇಟ್ಟು ನಿದ್ರಿಸಿ. ಈ ಕಿರು ನಿದ್ರೆ ಚೈತನ್ಯವನ್ನು ನೀಡಬಲ್ಲದು.

ಇದನ್ನೂ ಓದಿ: Mouth Sleeping: ನಿದ್ದೆಯಲ್ಲಿದ್ದಾಗ ಬಾಯಿಯಿಂದ ಉಸಿರಾಡುತ್ತೀರಾ? ಹಾಗಾದರೆ ಮುಂದೆ ಸಮಸ್ಯೆಯಾಗಬಹುದು!

ಉಪಾಯಗಳು ಬೇರೆಯೂ ಇವೆ

ಊಟದ ನಂತರ ಹತ್ತಿಪ್ಪತ್ತು ನಿಮಿಷಗಳ ಲಘು ನಡಿಗೆ ನೆರವಾಗುತ್ತದೆ. ಕೊಂಚ ತಾಜಾ ಗಾಳಿ, ಬೆಳಕು ಮೈಸೋಕಿದಾಗಲೂ ನಿದ್ದೆಯನ್ನು ದೂರ ಓಡಿಸಬಹುದು. ಹಾಗೆಂದು ಬಿರು ಬಿಸಿಲಿನಲ್ಲಿ ವಾಕಿಂಗ್‌ ಮಾಡಿದರೆ ತೂಕಡಿಕೆ ಹೆಚ್ಚಲೂಬಹುದು, ಜಾಗ್ರತೆ! ಊಟದ ಜೊತೆಗೆ ಆಲ್ಕೊಹಾಲ್‌ ಸೇವನೆ ಬೇಡ. ಇದು ಸಮಸ್ಯೆಯನ್ನು ಬಿಗಡಾಯಿಸುತ್ತದೆ. ಊಟದ ನಂತರದ ನಿದ್ದೆಯನ್ನು ತಡಯುವುದಕ್ಕೆಂದೇ, ಆ ಹೊತ್ತಿನಲ್ಲಿ ಒಂದು ಖಡಕ್‌ ಚಹಾ ಅಥವಾ ಸ್ಟ್ರಾಂಗ್‌ ಕಾಫಿ ಕುಡಿಯುವವರು ಬಹಳ ಜನರಿದ್ದಾರೆ.

Continue Reading

ಫ್ಯಾಷನ್

Monsoon Trench Coat Fashion: ಮಾನ್ಸೂನ್‌ಗೂ ಕಾಲಿಟ್ಟ ಟ್ರೆಂಚ್‌ ಕೋಟ್‌ ಫ್ಯಾಷನ್‌!

Monsoon trench coat fashion: ಚಳಿಗಾಲದಲ್ಲಿ ಮಾತ್ರ ಟ್ರೆಂಡಿಯಾಗುತ್ತಿದ್ದ ಟ್ರೆಂಚ್‌ ಕೋಟ್‌ಗಳು ಇದೀಗ ಮಾನ್ಸೂನ್‌ ಸೀಸನ್‌ಗೂ ಕಾಲಿಟ್ಟಿವೆ. ಕೇವಲ ಸೆಲೆಬ್ರೆಟಿಗಳ ಚಾಯ್ಸ್ನಲ್ಲಿದ್ದ ಈ ಡ್ರೆಸ್‌ಕೋಡ್‌ ಇದೀಗ ಸಾಮಾನ್ಯ ಹುಡುಗಿಯರನ್ನು ಸವಾರಿ ಮಾಡತೊಡಗಿವೆ. ಏನಿದು ಟ್ರೆಂಚ್‌ ಕೋಟ್‌? ಇದನ್ನು ಹೇಗೆಲ್ಲಾ ಸ್ಟೈಲಿಂಗ್‌ ಮಾಡಬಹುದು ಎಂಬುದರ ಬಗ್ಗೆ ಸ್ಟೈಲಿಸ್ಟ್‌ಗಳು ಸಿಂಪಲ್ಲಾಗಿ ತಿಳಿಸಿದ್ದಾರೆ.

VISTARANEWS.COM


on

Monsoon Trench Coat Fashion
ಚಿತ್ರಗಳು: ಸುಹಾನಾ ಖಾನ್‌, ನಟಿ
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಮಳೆಗಾಲಕ್ಕೂ ಟ್ರೆಂಚ್‌ ಕೋಟ್‌ (Monsoon trench coat fashion) ಫ್ಯಾಷನ್‌ ಎಂಟ್ರಿ ನೀಡಿದೆ. ಹೌದು, ಕೇವಲ ಚಳಿಗಾಲದಲ್ಲಿ ಟ್ರೆಂಡಿಯಾಗುತ್ತಿದ್ದ, ಟ್ರೆಂಚ್‌ ಕೋಟ್‌ಗಳು ಇದೀಗ ಮಾನ್ಸೂನ್‌ ಸೀಸನ್‌ಗೂ ಕಾಲಿಟ್ಟಿದ್ದು, ಸೆಲೆಬ್ರೆಟಿಗಳನ್ನು ಮಾತ್ರವಲ್ಲ, ಸಾಮಾನ್ಯ ಹುಡುಗಿಯರನ್ನು ಸವಾರಿ ಮಾಡತೊಡಗಿವೆ. ಇದಕ್ಕೆ ಪೂರಕ ಎಂಬಂತೆ, ಕಿಂಗ್‌ ಖಾನ್‌ ಮಗಳು ಹಾಗೂ ನಟಿ ಸುಹಾನಾ ಖಾನ್‌ ಟ್ರೆಂಚ್‌ ಕೋಟ್‌ ಧರಿಸಿದ್ದು, ಈ ಫ್ಯಾಷನ್‌ ಜೆನ್‌ ಜಿ ಹುಡುಗಿಯರನ್ನು ಸೆಳೆದಿದೆ. ಮಾನ್ಸೂನ್‌ನಲ್ಲೂ ಟ್ರೆಂಚ್‌ ಕೋಟ್‌ ಕ್ಲಾಸಿಯಾಗಿ ಕಾಣಿಸುತ್ತದೆ ಎಂಬುದನ್ನು ಪ್ರೂವ್‌ ಮಾಡಿದೆ.

Monsoon Trench Coat Fashion

ಟ್ರೆಂಚ್‌ಕೋಟ್‌ ವೆರೈಟಿ ವಿನ್ಯಾಸ

ಟ್ರೆಂಚ್‌ ಕೋಟ್‌ಗಳು ನೋಡಲು ಒಂದೇ ಬಗೆಯದ್ದಾಗಿ ಕಾಣುತ್ತವಾದರೂ ಸ್ಟಿಚ್ಚಿಂಗ್‌ ನಾನಾ ಶೈಲಿಯಲ್ಲಿರುತ್ತವೆ. ಸ್ಲೀಕ್‌ ಲುಕ್‌, ಫಾರ್ಮಲ್‌ ಬ್ಲೇಜರ್‌ ಸ್ಟೈಲ್‌ನಲ್ಲೂದೊರಕುತ್ತವೆ. ಮೊದಲೆಲ್ಲಾ ಹಿಲ್‌ ಸ್ಟೇಷನ್‌ಗಳಲ್ಲಿ ಮಾತ್ರ ಇವುಗಳ ಬಳಕೆ ಹೆಚ್ಚಾಗಿತ್ತು. ಬರಬರುತ್ತಾ ಸಿನಿಮಾ ತಾರೆಯರ ವಾರ್ಡ್‌ರೋಬ್‌ ಸೇರಿದ ನಂತರ ಸಾಮಾನ್ಯ ಹುಡುಗಿಯರ ಮನಸ್ಸನ್ನು ಗೆಲ್ಲತೊಡಗಿದವು. ಸ್ವೆಟರ್‌ ಹಾಗೂ ಜಾಕೆಟ್‌ ಧರಿಸುವಂತೆ, ಟ್ರೆಂಚ್‌ ಕೋಟ್‌ಗಳನ್ನು ಧರಿಸುವುದು ಹೆಚ್ಚಾಯಿತು ಎನ್ನುತ್ತಾರೆ ಜಿಯಾ.

ಕ್ಲಾಸಿಕ್‌ ಲುಕ್‌ ಗ್ಯಾರಂಟಿ

ಅಂದಹಾಗೆ, ವೆಸ್ಟರ್ನ್‌ ಲುಕ್‌ ನೀಡುವಲ್ಲಿಈ ಟ್ರೆಂಚ್‌ ಕೋಟ್‌ಗಳು ಪ್ರಮುಖ ಪಾತ್ರ ವಹಿಸುತ್ತವೆ. ಡಿಸೈನರ್‌ ಋತು ಹೇಳುವಂತೆ, ಇದೀಗ ಇಂಡೋ – ವೆಸ್ಟರ್ನ್ ಸ್ಟೈಲ್‌ನಲ್ಲೂ ಈ ಕೋಟ್‌ಗಳನ್ನು ಬಳಸುವುದು ಹೆಚ್ಚಾಗತೊಡಗಿದೆ. ಹಾಗಾಗಿ ಫಾರ್ಮಲ್‌ , ಎಥ್ನಿಕ್‌ ಡ್ರೆಸ್‌ ಧರಿಸುವ ಮಾನಿನಿಯರಿಗೂ ಪ್ರಿಯವಾಗತೊಡಗಿವೆ ಎನ್ನುತ್ತಾರೆ ಅವರು.

ಇದನ್ನೂ ಓದಿ: Ms/Mrs india Karnataka Audition: ಮಿಸ್‌&ಮಿಸೆಸ್‌ ಇಂಡಿಯಾ ಕರ್ನಾಟಕ 8ನೇ ಆವೃತ್ತಿಗೆ ಆಡಿಷನ್‌

ಹೀಗಿರಲಿ ಟ್ರೆಂಚ್‌ ಕೋಟ್‌ ಸ್ಟೈಲಿಂಗ್‌

  • ಟ್ರೆಂಚ್‌ ಕೋಟ್‌ ಬೆಚ್ಚಗಿಡುವುದರಿಂದ ಧರಿಸುವವರು ಸಿಂಪಲ್‌ ಇನ್ನರ್‌ ಡ್ರೆಸ್‌ ಧರಿಸುವುದು ಬೆಸ್ಟ್.
  • ಉದ್ದಗಿರುವವರಿಗೆ ಯಾವುದೇ ಬಗೆಯ ಟ್ರೆಂಚ್‌ ಕೋಟ್‌ ಆದರೂ ಸೂಟ್‌ ಆಗುತ್ತವೆ.
  • ಪ್ಲಂಪಿಯಾಗಿರುವವರು ಆದಷ್ಟು ಡಿಸೈನರ್‌ ಕೋಟ್‌ ಧರಿಸುವುದು ಉತ್ತಮ.
  • ವಿಂಟೆಂಜ್‌ ಹಾಗೂ ರಾಯಲ್‌ ಕಲರ್‌ಗಳ ಟ್ರೆಂಚ್‌ ಕೋಟ್‌ಗಳು ರಾಯಲ್‌ ಲುಕ್‌ ನೀಡುತ್ತವೆ.
  • ಪ್ರಿಂಟೆಡ್‌ ಕೋಟ್‌ಗಳು ಟ್ರೆಂಡ್‌ನಲ್ಲಿಲ್ಲ.
  • ಫಿಟ್ಟಿಂಗ್‌ ಇದ್ದರೇ ಮಾತ್ರ ಚೆನ್ನಾಗಿ ಕಾಣಿಸುತ್ತವೆ.
  • ( ಲೇಖಕಿ ಫ್ಯಾಷನ್‌ ಪತ್ರಕರ್ತೆ )
Continue Reading

ಬೆಳಗಾವಿ

Contaminated Water : ಬೆಳಗಾವಿ, ಕೋಲಾರದಲ್ಲಿ ಕಲುಷಿತ ನೀರು ಸೇವಿಸಿ ಇಬ್ಬರು ಸಾವು

Polluted Water: ಕನಸಗೇರಿ ಗ್ರಾಮದಲ್ಲಿ ಕಲುಷಿತ ನೀರು ಕುಡಿದು ಅಸ್ವಸ್ಥಗೊಂಡಿದ್ದವರಲ್ಲಿ ಮಹಿಳೆಯೊಬ್ಬರು ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಇತ್ತ ಕೋಲಾರದಲ್ಲಿ ಕಲುಷಿತ ನೀರು ಕುಡಿದ ವೃದ್ಧರೊಬ್ಬರು (Contaminated Water) ಅಸುನೀಗಿದ್ದಾರೆ.

VISTARANEWS.COM


on

By

contaminated water
Koo

ಬೆಳಗಾವಿ: ಕಲುಷಿತ ನೀರು ಸೇವಿಸಿ ಮಹಿಳೆಯೊಬ್ಬರು (Contaminated Water) ಮೃತಪಟ್ಟಿದ್ದಾರೆ. ಹೊಳೆವ್ವಾ ಬಾಳಪ್ಪ ಧನದವರ (38) ಮೃತ ದುರ್ದೈವಿ. ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಕನಸಗೇರಿ ಗ್ರಾಮದಲ್ಲಿ ಘಟನೆ ನಡೆದಿದೆ.

ಕನಸಗೇರಿ ಗ್ರಾಮದಲ್ಲಿ ಬಾವಿಯ ನೀರು ಸೇವಿಸಿ ಸುಮಾರು ಹತ್ತು ಮಂದಿ ಅಸ್ವಸ್ಥಗೊಂಡಿದ್ದರು. ನಿನ್ನೆ ಸಂಜೆ ಭಾನುವಾರ ಹೊಳೆವ್ವಾ ಬಾಳಪ್ಪ ಅವರಿಗೆ ವಾಂತಿಭೇದಿ ಕಾಣಿಸಿಕೊಂಡು ತೀವ್ರ ಅಸ್ವಸ್ಥಗೊಂಡಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲಿ ಮೃತಪಟ್ಟಿದ್ದರು.

ಸ್ಥಳಕ್ಕೆ ಡಿಎಚ್ಒ ಮಹೇಶ್ ಕೋಣಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತರ ಕುಟುಂಬಸ್ಥರಿಂದ ಮಾಹಿತಿ ಪಡೆದು ಸಾಂತ್ವನ ಹೇಳಿದರು. ಗ್ರಾಮದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಕೂಡ ಪರಿಶೀಲನೆ ನಡೆಸಿ, ಇದೇ ವೇಳೆ ಅಸ್ವಸ್ಥಗೊಂಡವರ ಆರೋಗ್ಯವನ್ನು ವಿಚಾರಿಸಿದರು.

ಇದನ್ನೂ ಓದಿ: Road Accident : ಚಲಿಸುತ್ತಿದ್ದಾಗಲೇ ಆಂಬ್ಯುಲೆನ್ಸ್‌ ಟಯರ್‌ ಬ್ಲಾಸ್ಟ್‌; ಬೈಕ್‌ನಿಂದ ಸ್ಕಿಡ್ ಆಗಿ ಬಿದ್ದು ವ್ಯಕ್ತಿ ಸಾವು

ಕೋಲಾರದಲ್ಲಿ ವೃದ್ಧ ಸಾವು

ವೃದ್ಧರೊಬ್ಬರು ಮನೆಯಲ್ಲೇ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದಾರೆ. ವೆಂಕಟರಮಣಪ್ಪ (60) ಮೃತದುರ್ದೈವಿ. ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಮಿಣಜೇನಹಳ್ಳಿಯಲ್ಲಿ ಘಟನೆ ನಡೆದಿದೆ. ಕಲುಷಿತ ನೀರು ಸೇವಿಸಿದ್ದರಿಂದಲೇ ಮೃತಪಟ್ಟಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಇದಕ್ಕೆ ಪುಷ್ಠಿ ನೀಡುವಂತೆ ಗ್ರಾಮದಲ್ಲಿ 5 ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡಿದ್ದು, ಕೋಲಾರ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ. ಪಂಚಾಯಿತಿಯಿಂದಲೇ ಮನೆ ಮನೆಗೂ ನೀರು ಬಿಡುಗಡೆ ಆಗಿದ್ದು, ಆ ನೀರು ಸೇವಿಸಿಯೇ ವೃದ್ಧ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಊರುಕುಂಟೆ ಮಿಟ್ಟೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಮುಳಬಾಗಿಲು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಬೆಂಗಳೂರು

Dengue Fever : ಬಿಬಿಎಂಪಿ ಆಯುಕ್ತರಿಗೂ ಡೆಂಗ್ಯೂ; ಬೆಂಗಳೂರಲ್ಲಿ 1,230 ಮಂದಿಗೆ ಫೀವರ್‌!

Dengue Fever : ರಾಜ್ಯದಲ್ಲಿ ಡೆಂಗ್ಯೂ ಹೆಚ್ಚಾಗುತ್ತಿದ್ದು, ಜನರು ಮುನ್ನೆಚ್ಚರಿಕೆಯನ್ನು ವಹಿಸುವಂತೆ ವೈದ್ಯರು ಸಲಹೆ ನೀಡಿದ್ದಾರೆ. ಬೆಂಗಳೂರಲ್ಲಿ ಬಿಬಿಎಂಪಿ ಆಯುಕ್ತರು ಸೇರಿ ಸಾವಿರಕ್ಕೂ ಹೆಚ್ಚು ಮಂದಿ ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದಾರೆ.

VISTARANEWS.COM


on

By

Dengue fever rises across the state including Bengaluru BBMP Commissioner also get fever
ಸಾಂದರ್ಭಿಕ ಚಿತ್ರ
Koo

ಬೆಂಗಳೂರು: ಮಳೆ ಶುರುವಾದರೆ ಸಾಕು ಇದರ ಜತೆಗೆ ಸೊಳ್ಳೆಗಳ ಕಾಟವೂ ಹೆಚ್ಚಲಿದೆ. ಇದೇ ಋತುವಿನಲ್ಲಿ ಡೆಂಗ್ಯೂ ಜ್ವರ (Dengue Fever) ಹೆಚ್ಚಳ ಆಗುವುದರಿಂದ ಎಚ್ಚರ ವಹಿಸುವುದು ಅತಿ ಅವಶ್ಯಕ. ಸದ್ಯ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಡೆಂಗ್ಯೂ ಭೀತಿ ಹೆಚ್ಚಾಗಿದೆ. ಬೆಂಗಳೂರಿನ ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಅವರಿಗೂ ಡೆಂಗ್ಯೂ ಜ್ವರ ಕಾಣಿಸಿಕೊಂಡಿದೆ. ನಾಲ್ಕು ದಿನಗಳ ಹಿಂದೆ ಜ್ವರ ಕಾಣಿಸಿಕೊಂಡು, ಡೆಂಗ್ಯೂ ಧೃಡಪಟ್ಟಿದೆ.

ಹವಾಮಾನ ವೈಪರೀತ್ಯ ಮತ್ತು ಮಳೆಯಿಂದಾಗಿ ಡೆಂಗ್ಯೂ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿರುವುದು ಆತಂಕ ಮೂಡಿಸಿದೆ. 2022ರಲ್ಲಿ ರಾಜ್ಯದಲ್ಲಿ 7,317 ಡೆಂಗ್ಯೂ ಜ್ವರ (Dengue fever) ಪ್ರಕರಣಗಳು ಪತ್ತೆಯಾಗಿದ್ದು, ಈ ಪೈಕಿ ನಾಲ್ವರು ಮೃತಪಟ್ಟಿದ್ದರು. 2023ರಲ್ಲಿ 2003 ಪ್ರಕರಣಗಳು ವರದಿಯಾಗಿದ್ದವು. 2024ರಲ್ಲಿ ಈ ವರೆಗೆ (ಜೂನ್‌) 85,365 ಶಂಕಿತವಾಗಿದ್ದು, ಇದರಲ್ಲಿ 37,144 ಮಂದಿಯ ರಕ್ತ ಮಾದರಿಯನ್ನು ಸಂಗ್ರಹಿಸಲಾಗಿತ್ತು. ಆ ಪ್ರಕಾರ 3,957 ಮಂದಿಗೆ ಡೆಂಗ್ಯೂ ಜ್ವರ ದೃಢಪಟ್ಟಿದೆ. ಬೆಂಗಳೂರಲ್ಲಿ 1230 ಮಂದಿಗೆ ಡೆಂಗ್ಯೂ ಜ್ವರ ಕಂಡು ಬಂದಿದೆ. ಈವರೆಗೆ ಡೆಂಗ್ಯೂನಿಂದ ಮೃತಪಟ್ಟ ವರದಿ ಆಗಿಲ್ಲ.

ಇದನ್ನೂ ಓದಿ: Empty Stomach Foods: ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಈ ಆಹಾರಗಳನ್ನು ಸೇವಿಸಿದರೆ ಆರೋಗ್ಯಕ್ಕೆ ಉತ್ತಮ!

Dengue fever rises across the state including Bengaluru BBMP Commissioner also get fever

ಡೆಂಗ್ಯೂ ಹೇಗೆ ಹರಡುತ್ತದೆ?

ಡೆಂಗ್ಯೂ ಜ್ವರ ಸೊಳ್ಳೆಯಿಂದ ಹರಡುವ ವೈರಲ್ ಸೋಂಕು ಆಗಿದೆ. ಇದು ಈಡಿಪಸ್‌ ಎಂಬ ಹೆಣ್ಣು ಸೊಳ್ಳೆಗಳ ಕಡಿತದಿಂದ ಹರಡುತ್ತದೆ. ಸೊಳ್ಳೆ ಕಚ್ಚಿದ 4-7 ದಿನಗಳ ನಂತರ ರೋಗ ಲಕ್ಷಣಗಳು ಸಾಮಾನ್ಯವಾಗಿ ಕಂಡು ಬರುತ್ತವೆ. ಇದರ ಪ್ರಭಾವ 10 ದಿನಗಳವರೆಗೆ ಇರುತ್ತದೆ. ಹೀಗಾಗಿ ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳುವುದು, ಸ್ವಚ್ಛತೆಗೆ ಆದ್ಯತೆ ನೀಡುವುದು ಉತ್ತಮವಾಗಿದೆ.

ಡೆಂಗ್ಯೂ ಜ್ವರ ತಲೆನೋವಿನಂತಹ ರೋಗಲಕ್ಷಣಗಳನ್ನು ಉಂಟು ಮಾಡಬಹುದು. ಡೆಂಗ್ಯೂವನ್ನು ಹೆಮರಾಜಿಕ್ ಜ್ವರ ಎಂದೂ ಕರೆಯಲಾಗುತ್ತದೆ. ಡೆಂಗ್ಯೂ ಜ್ವರದ ತೀವ್ರ ಸ್ವರೂಪವು ತೀವ್ರ ರಕ್ತಸ್ರಾವ, ರಕ್ತದೊತ್ತಡ ಹಾಗೂ ರಕ್ತಕಣಗಳ ಸಂಖ್ಯೆಯಲ್ಲಿ ಭಾರಿ ಕುಸಿತವಾಗಿ ವ್ಯಕ್ತಿಯ ಸಾವಿಗೂ ಕಾರಣವಾಗಬಹುದು. ಅಧಿಕ ಜ್ವರ, ತೀವ್ರ ತಲೆನೋವು, ವಾಂತಿ, ದೇಹದ ವಿವಿಧ ಭಾಗಗಳಲ್ಲಿ ದದ್ದುಗಳು, ಗ್ರಂಥಿಗಳಲ್ಲಿ ಊತ, ಮೂಳೆ ಮತ್ತು ಕೀಲು ನೋವು, ರಕ್ತಸ್ರಾವವಾಗವುದು ರೋಗ ಲಕ್ಷಣಗಳಾಗಿವೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
union Minister Pralhad Joshi took oath in the name of God in his mother tongue
ಕರ್ನಾಟಕ3 mins ago

Pralhad Joshi: ಮಾತೃಭಾಷೆ, ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಸಚಿವ ಪ್ರಲ್ಹಾದ್‌ ಜೋಶಿ

Divisional Level Progress Review Meeting of Revenue Department by Minister Krishna Byregowda
ಕಲಬುರಗಿ9 mins ago

krishna byre gowda: ಪಹಣಿ-ಆಧಾರ್ ಲಿಂಕ್‌ ಮಾಡಲು ಜುಲೈಗೆ ಅಂತಿಮ ಗಡುವು; ಕೃಷ್ಣ ಬೈರೇಗೌಡ

Hardeep Singh Nijjar
ದೇಶ16 mins ago

Hardeep Singh Nijjar: ಪಾಕಿಸ್ತಾನಕ್ಕೂ ಭೇಟಿ ಕೊಟ್ಟಿದ್ದನಂತೆ ನಿಜ್ಜರ್‌; ಖಲಿಸ್ತಾನಿ ಉಗ್ರನ ಬಗ್ಗೆ ಮತ್ತಷ್ಟು ಭೀಕರ ಸಂಗತಿ ಬಯಲು

Sleep After Lunch
ಲೈಫ್‌ಸ್ಟೈಲ್20 mins ago

Sleep After Lunch: ಊಟದ ನಂತರ ನಮಗೆ ಆಕಳಿಕೆ, ನಿದ್ದೆ ಬರುವುದೇಕೆ?

R Ashok demands that the Congress apologize for imposing emergency
ಕರ್ನಾಟಕ26 mins ago

R Ashok: ತುರ್ತು ಪರಿಸ್ಥಿತಿ ಹೇರಿದ ಕಾಂಗ್ರೆಸ್‌ ಕ್ಷಮೆ ಕೋರಲಿ, ರಾಹುಲ್‌ ಗಾಂಧಿ ತಲೆಬಾಗಲಿ; ಆರ್‌. ಅಶೋಕ್‌

Viral Video
Latest33 mins ago

Viral Video: ರೀಲ್ಸ್ ಮಾಡಲು ಹೋದ ವಿದ್ಯಾರ್ಥಿನಿಗೆ ಕೊನೆಗೆ ಆಗಿದ್ದೇನು? ವಿಡಿಯೊ ನೋಡಿ

JP Nadda
ದೇಶ40 mins ago

JP Nadda: ರಾಜ್ಯಸಭೆ ಸದನ ನಾಯಕರಾಗಿ ಜೆ.ಪಿ. ನಡ್ಡಾ ಆಯ್ಕೆ; ಪಿಯೂಷ್‌ ಗೋಯಲ್‌ ಬದಲು ನೇಮಕ

LKG UKG in Anganwadis
ಪ್ರಮುಖ ಸುದ್ದಿ40 mins ago

LKG UKG in Anganwadis: ಅಂಗನವಾಡಿಗಳಲ್ಲೇ ಎಲ್‌ಕೆಜಿ, ಯುಕೆಜಿ ಆರಂಭಿಸಲು ಸಿಎಂ ಸಹಮತ

Monsoon Trench Coat Fashion
ಫ್ಯಾಷನ್50 mins ago

Monsoon Trench Coat Fashion: ಮಾನ್ಸೂನ್‌ಗೂ ಕಾಲಿಟ್ಟ ಟ್ರೆಂಚ್‌ ಕೋಟ್‌ ಫ್ಯಾಷನ್‌!

Kamal Haasan predicts Deepika Padukone baby choose cinema career
ಟಾಲಿವುಡ್1 hour ago

Kamal Haasan: ಮುಂದೊಂದು ದಿನ ದೀಪಿಕಾ ಮಗು ಸಿನಿಮಾ ಮಾಡಬಹುದು ಎಂದು ಭವಿಷ್ಯ ನುಡಿದ ಕಮಲ್‌ ಹಾಸನ್‌!

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka weather Forecast
ಮಳೆ3 days ago

Karnataka Weather : ರಭಸವಾಗಿ ಹರಿಯುವ ನೀರಲ್ಲಿ ಸಿಲುಕಿದ ಬೊಲೆರೋ; ಬಿರುಗಾಳಿ ಸಹಿತ ಮಳೆ ಎಚ್ಚರಿಕೆ

International Yoga Day 2024
ಕರ್ನಾಟಕ3 days ago

International Yoga Day 2024: ಎಲ್ಲೆಲ್ಲೂ ಯೋಗಾಯೋಗ‌ಕ್ಕೆ ಮಂಡಿಯೂರಿದ ಜನತೆ

Karnataka Weather Forecast
ಮಳೆ4 days ago

Karnataka Weather : ಬಾಗಲಕೋಟೆ, ಬೆಂಗಳೂರು ಸೇರಿ ಚಿಕ್ಕಮಗಳೂರಲ್ಲಿ ಸುರಿದ ಗಾಳಿ ಸಹಿತ ಮಳೆ

Actor Darshan
ಮೈಸೂರು1 week ago

Actor Darshan : ಕೊಲೆ ಕೇಸ್‌ ಬೆನ್ನಲ್ಲೇ ನಟ ದರ್ಶನ್‌ ಸೇರಿ ಪತ್ನಿ ವಿಜಯಲಕ್ಷ್ಮಿಗೆ ಬಾರ್ ಹೆಡೆಡ್ ಗೂಸ್ ಸಂಕಷ್ಟ!

Bakrid 2024
ಬೆಂಗಳೂರು1 week ago

Bakrid 2024 : ಮತ್ತೊಂದು ಧರ್ಮವನ್ನೂ ಪ್ರೀತಿಸಿ; ಬಕ್ರೀದ್‌ ಪ್ರಾರ್ಥನೆಯಲ್ಲಿ ಸಿಎಂ ಸಿದ್ದರಾಮಯ್ಯ ಕರೆ

Renukaswamy murder case The location of the accused is complete
ಸಿನಿಮಾ1 week ago

Renuka Swamy murder : ಭೀಕರವಾಗಿ ಕೊಂದರೂ ಆರೋಪಿಗಳಿಗೆ ಕಾಡುತ್ತಿಲ್ವಾ ಪಾಪಪ್ರಜ್ಞೆ? ನಗುತ್ತಲೇ ಹೊರಬಂದ ಪವಿತ್ರಾ ಗೌಡ, ಪವನ್‌

Renuka swamy murder
ಚಿತ್ರದುರ್ಗ1 week ago

Renuka swamy Murder : ರೇಣುಕಾಸ್ವಾಮಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಾಳೆಹೊನ್ನೂರು ಶ್ರೀಗಳು

Vijayanagara News
ವಿಜಯನಗರ1 week ago

Vijayanagara News : ಕೆಲಸಕ್ಕೆ ಚಕ್ಕರ್, ಸಂಬಳಕ್ಕೆ ಹಾಜರ್! ಹಾರಕನಾಳು ಗ್ರಾಪಂ ಪಿಡಿಓಗಾಗಿ ಗ್ರಾಮಸ್ಥರ ಹುಡುಕಾಟ

Actor Darshan
ಯಾದಗಿರಿ1 week ago

Actor Darshan : ಬಾಸ್‌ ಅಂತ ಯಾಕ್‌ ಬಕೆಟ್‌ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!

Karnataka Weather Forecast
ಮಳೆ1 week ago

Karnataka Weather : ಕರಾವಳಿ, ಉತ್ತರ ಒಳನಾಡಿನಲ್ಲಿ ವರುಣಾರ್ಭಟ; ನಾಳೆಯು ಹಲವೆಡೆ ಸಿಕ್ಕಾಪಟ್ಟೆ ಮಳೆ

ಟ್ರೆಂಡಿಂಗ್‌