SundayRead | ಗಾಂಧಿ ಜಯಂತಿ | ಗಾಂಧಿ ರಾಜಕೀಯದ ಮರು ಮೌಲ್ಯಮಾಪನ - Vistara News

ಕಲೆ/ಸಾಹಿತ್ಯ

SundayRead | ಗಾಂಧಿ ಜಯಂತಿ | ಗಾಂಧಿ ರಾಜಕೀಯದ ಮರು ಮೌಲ್ಯಮಾಪನ

ಮಹಾತ್ಮ ಗಾಂಧಿ ಅವರ ರಾಜಕೀಯವನ್ನು ನಾವು ಇಂದು ಹೇಗೆ ಗ್ರಹಿಸಬೇಕು? ಅವರು ಇಂದು ಅಪ್ರಸ್ತುತರೇ? ಅವರ ಹೋರಾಟಕ್ಕೆ ಬೆದರಿ ಬ್ರಿಟಿಷರು ದೇಶ ಬಿಟ್ಟಿದ್ದಲ್ಲವೇ? ಗಾಂಧಿ ಜಯಂತಿ ನಿಮಿತ್ತ ಒಂದು ಚಿಂತನೆ.

VISTARANEWS.COM


on

M K Gandhi
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo
RG hegade

| ಪ್ರೊ.ಆರ್.ಜಿ. ಹೆಗಡೆ

ದೇಶಕ್ಕೆ ಗಾಂಧಿ ಕೊಡುಗೆಯ ಮರು ಮೌಲ್ಯಮಾಪನ ನಡೆಯುತ್ತಿರುವಂತಿದೆ. ಗಾಂಧಿ ಪುಣ್ಯತಿಥಿಯ ದಿನ ಹಲವು ಲೇಖನಗಳು, ಮಾತುಗಳು ಬಂದವು. ಅಂತಹ ಅಭಿಪ್ರಾಯಗಳು ಹಿಂದೆಯೂ ನಿರಂತರವಾಗಿ ಬಂದಿವೆ. ಅವುಗಳಲ್ಲಿ ಕೆಲವು ನೇರವಾಗಿ, ಕೆಲವು ಸೂಕ್ಷ್ಮವಾಗಿ ಹೇಳಿದ್ದು ಒಂದೇ. ಏನೆಂದರೆ ಗಾಂಧಿ ಹೆಚ್ಚುಕಡಿಮೆ ಅಪ್ರಸ್ತುತ. ಕೆಲವು ಬರಹಗಳು ಇನ್ನೂ ಒಂದು ಮಾತು ಹೇಳಿದವು. ಏನೆಂದರೆ ಸ್ವಾತಂತ್ರ್ಯ ಚಳುವಳಿಯಲ್ಲಿ ಕೂಡ ಗಾಂಧಿಯ ಪಾತ್ರ ಹೇಳುವಷ್ಟು ದೊಡ್ಡದೇನೂ ಇರಲಿಲ್ಲ. ಬ್ರಿಟಿಷರು ಗಾಂಧಿ ಚಳವಳಿಗೆ ಹೆದರಿ ಬಿಟ್ಟು ಹೋದರೆನ್ನುವುದು ಹಾಸ್ಯಾಸ್ಪದ ಮಾತು. ಮತ್ತೆ ಕೆಲವು ಗಾಂಧಿ ಹಿಂದೂ ಧರ್ಮಕ್ಕೆ ದೊಡ್ಡ ಅಪಚಾರ ಮಾಡಿ ಇನ್ನೊಂದು ಧರ್ಮವನ್ನು ಎತ್ತಿಹಿಡಿದರು ಎಂಬ ಅಭಿಪ್ರಾಯವನ್ನೂ ಮಂಡಿಸಿವೆ/ಸುತ್ತಲೇ ಇವೆ (ದೀರ್ಘಕಾಲದಿಂದ ಪ್ರಚಲಿತವಿರುವ ಮಾತು). ಗೋಡ್ಸೆ ಗಾಂಧಿಯನ್ನು ಏಕೆ ಕೊಲ್ಲಬೇಕಾಯಿತು ಎನ್ನುವುದನ್ನು ಹಲವು ಕಾರಣಗಳ ಮೂಲಕ ಅವು ವಿಶದೀಕರಿಸಿವೆ/ಕರಿಸುತ್ತಿವೆ. ಅಂದರೆ ಗೋಡ್ಸೆಗೆ ಬಲವಾದ ಕಾರಣಗಳಿದ್ದವು ಎನ್ನುವುದು ವಾದ.

ಐತಿಹಾಸಿಕ ವ್ಯಕ್ತಿಗಳನ್ನು, ಘಟನೆಗಳನ್ನು ಮರುಮೌಲ್ಯಮಾಪನ ಮಾಡುವುದು ತಪ್ಪೇನೂ ಅಲ್ಲ. ಹಾಗೆಯೇ ಅಭಿಪ್ರಾಯಗಳಿಗೆಲ್ಲ ಉತ್ತರ ಬರೆದು ಗಾಂಧೀಜಿಯನ್ನು ‘ರಕ್ಷಿಸುವ’ ಅಗತ್ಯವೂ ಇಲ್ಲ. ಬದುಕಿರುವಾಗ ಕೂಡ ಆತ ತಮ್ಮನ್ನು ವಿಮರ್ಶೆಗಳಿಗೆ ತೆರೆದೇ ಇಟ್ಟಿದ್ದರು. ತಪ್ಪಿದ್ದಿದ್ದು ಗೊತ್ತಾದರೆ ಪಶ್ಚಾತ್ತಾಪ ಪಡುತ್ತಿದ್ದರು. ಕ್ಷಮೆ ಕೇಳುತ್ತಿದ್ದರು. ಸರಿಪಡಿಸಿಕೊಳ್ಳುತ್ತಿದ್ದರು. ಹಾಗಾಗಿ ಗಾಂಧಿ ಕುರಿತ ಹೊಸ, ಬೇರೆ ಬೇರೆ ದೃಷ್ಟಿಕೋನಗಳನ್ನು ನಿಂದಿಸುವ, ಖಂಡಿಸುವ ಅಗತ್ಯವೇನೂ ಇಲ್ಲ. ಆದರೂ ಈ ಹಿನ್ನೆಲೆಯಲ್ಲಿ ಬಹುಶಃ ನಾವು ಮಾಡಬೇಕಿರುವುದೆಂದರೆ ಗಾಂಧಿ ತತ್ವಗಳನ್ನು, ಗಾಂಧಿಯನ್ನು ಮತ್ತೊಮ್ಮೆ ನೋಡಿ ನಮ್ಮ ನಿಲುವುಗಳನ್ನು ಖಾತ್ರಿಪಡಿಸಿಕೊಳ್ಳುವುದು. ಈ ಲೇಖನದ ಉದ್ದೇಶ ಅದು.

1.. ಸಮಕಾಲೀನ ಗಾಂಧಿ ‘ವಿಮರ್ಶೆ’ಯ ಭಾಗವಾಗಿ ಬಂದಿರುವ ಮೊದಲ ಮಾತು ಗಾಂಧಿಯನ್ ಸತ್ಯಾಗ್ರಹಕ್ಕೆ ಬೆದರಿ ಬ್ರಿಟಿಷರು ಬಿಟ್ಟು ಹೋಗಲಿಲ್ಲ. ಅಂತಹ ಕ್ರೆಡಿಟ್‌ ಅನ್ನು ಗಾಂಧಿಗೆ ನೀಡುವುದು ಸರಿಯಲ್ಲ ಎನ್ನುವದು. ವಾದವನ್ನು ಪರಿಶೀಲಿಸಿಕೊಳ್ಳಬೇಕು. ಏಕೆಂದರೆ ಈ ವಿಷಯವೇ ಗಾಂಧಿ ತತ್ವದ ಪ್ರಸ್ತುತತೆಯನ್ನು ಅಥವಾ ಅಪ್ರಸ್ತುತತೆಯನ್ನು ನಿರ್ಣಯಿಸುವ ಪ್ರಮುಖ ಅಂಶ. ಒಂದು ರೀತಿಯಲ್ಲಿ ನೋಡಿದರೆ ಬಂದಿರುವ ಮಾತು ಸರಿ. ಗಾಂಧಿ ಸತ್ಯಾಗ್ರಹಕ್ಕೆ ʻಹೆದರಿ’ ಬ್ರಿಟಿಷರು ಭಾರತವನ್ನು ಬಿಟ್ಟು ಹೋಗಿರಲಿಕ್ಕಿಲ್ಲ. ಅಂತಹ ದಾಖಲೆಗಳೂ ಇದ್ದಂತಿಲ್ಲ. ಆದರೆ ಇಲ್ಲಿ ಒಂದು ಮಹತ್ವದ ವಿಷಯ. ಏನೆಂದರೆ ಸ್ವಾತಂತ್ರ್ಯ ಹೋರಾಟದ ಉದ್ದೇಶ ಕೂಡ ಬ್ರಿಟಿಷರನ್ನು ʻಹೆದರಿಸಿ’ ಓಡಿಸುವುದು ಇರಲಿಲ್ಲ. ಗಾಂಧಿ ಅಂತಹ ಭಾಷೆ ಮಾತನಾಡುತ್ತಿರಲಿಲ್ಲ. ಚಳವಳಿ ಬ್ರಿಟಿಷರ ʻವಿರುದ್ಧ’ ಇರಲೂ ಇಲ್ಲ. ಅಥವಾ ಅದು ಕೇವಲ ʻಸ್ವಾತಂತ್ರ್ಯ’ ಪಡೆಯುವ ಉದ್ದೇಶ ಹೊಂದಿದ ʻಹೋರಾಟ’ವೂ ಆಗಿರಲಿಲ್ಲ.

ಈ ಕುರಿತು ಅರಿಯಲು ಗಾಂಧಿ ಬರೆದ ಪುಸ್ತಕ ʻಹಿಂದ್ ಸ್ವರಾಜ್’ ಅನ್ನು ಓದಿಕೊಳ್ಳಬೇಕು. ತಮ್ಮ ʻಹೋರಾಟವನ್ನು’ ಆರಂಭಿಸುವುದಕ್ಕೆ ಮುನ್ನುಡಿಯಾಗಿ ಕೆಲವು ಪ್ರಶ್ನೆಗಳನ್ನು ಗಾಂಧಿ ತಮಗೆ ತಾವು ಕೇಳಿಕೊಳ್ಳುತ್ತಾರೆ. ಏನೆಂದರೆ ಬ್ರಿಟಿಷರ ವಿರುದ್ಧ ನಾವು ಯಾಕೆ ಹೋರಾಡಬೇಕು? ಅವರು ದೇಶವನ್ನು ಆಳಿದರೆ ಏನು ತೊಂದರೆ? ಸ್ವಾತಂತ್ರ್ಯ ಎಂದರೇನು? ಅವರನ್ನು ಓಡಿಸಿದ ನಂತರ ನಾವು ಯಾವ ರೀತಿಯ ಸರಕಾರವನ್ನು ರಚಿಸಬೇಕು? ಬಿಳಿ ಸಾಹಿಬ್‌ಗಳು(ಬ್ರಿಟಿಷರು) ಹೋಗಿ ಬ್ರೌನ್ ಸಾಹಿಬ್‌ಗಳು (ನಮ್ಮವರು) ಬಂದರೆ ಎಲ್ಲವೂ ಸರಿಹೋಗುತ್ತದೆಯೇ? ಈ ಪ್ರಶ್ನೆಗಳನ್ನು ಮುಂದಿಟ್ಟುಕೊಂಡು ಉತ್ತರ ಹುಡುಕುತ್ತ ಗಾಂಧಿ ಗಾಢ ಚಿಂತನೆಯಲ್ಲಿ ತೊಡಗುತ್ತಾರೆ. ಓದಿನಲ್ಲಿ, ದೇಶಸಂಚಾರದಲ್ಲಿ, ಆತ್ಮವಿಮರ್ಶೆಯಲ್ಲಿ ತೊಡಗಿಕೊಳ್ಳುತ್ತಾರೆ. ನಂತರ ತಮಗೆ ತಾವು ಸ್ಪಷ್ಟಪಡಿಸಿಕೊಳ್ಳುವುದೆಂದರೆ ಚಳವಳಿಯ ಉದ್ದೇಶ ಕೇವಲ ಬ್ರಿಟಿಷರನ್ನು ತೊಲಗಿಸುವುದು ಅಲ್ಲವೇ ಅಲ್ಲ. ಹೋರಾಟವಿರುವುದು ಪಾಶ್ಚಿಮಾತ್ಯ ಸಂಸ್ಕೃತಿಯ ವಿರುದ್ಧ. ಆ ʻಸೈತಾನನ ಸಂಸ್ಕೃತಿ’ಯ ಅಥವಾ ʻವೇಶ್ಯಾ ಸಂಸ್ಕ್ರತಿʼಯ ವಿರುದ್ಧ. ಬೇರೆಲ್ಲೂ ಬಳಸದ ಕಟು ಶಬ್ದಗಳನ್ನು ಆ ಸಂಸ್ಕೃತಿಯನ್ನು ವರ್ಣಿಸಲು ಗಾಂಧಿ ಬಳಸುತ್ತಾರೆ.

gandhi

ಪಾಶ್ಚಿಮಾತ್ಯ ಸಂಸ್ಕೃತಿಯ ವಿರುದ್ಧ ಗಾಂಧಿ ಇಂತಹ ನಿಲುವು ತಳೆಯುವುದಕ್ಕೆ ಕಾರಣಗಳಿವೆ. ಏನೆಂದರೆ ಅವರು ಭಾವಿಸಿದಂತೆ ಆ ಸಂಸ್ಕೃತಿ ಆತ್ಮವಿಲ್ಲದ, ನೈತಿಕತೆ ಪ್ರಧಾನವಲ್ಲದ ಸಂಸ್ಕೃತಿ. ಅದು ಮೆಟೀರಿಯಲಿಸ್ಟಿಕ್ ಆದ, ಸುಖಭೋಗಕ್ಕೆ ಸಂಬಂಧಿಸಿದ ಉಪಕರಣಗಳನ್ನು ಉತ್ಪಾದಿಸುವುದು ಮತ್ತು ಇಂತಹ ಉಪಕರಣಗಳನ್ನು ಬಳಸಿ ಮನುಷ್ಯ ಸುಖಪಡುವುದಕ್ಕೆ ಪ್ರಾಮುಖ್ಯತೆ ನೀಡುವ ಸಂಸ್ಕೃತಿ. ಗಾಂಧಿ ಬಹುಶಃ ಭಾವಿಸಿದಂತೆ ಇಂತಹ ಸಂಸ್ಕೃತಿಗಳಿಂದಾಗಿಯೇ ಜಗತ್ತಿನಲ್ಲಿ ವಸಾಹತುಶಾಹಿ ಮನಸ್ಥಿತಿ ಹುಟ್ಟಿಕೊಂಡಿದ್ದು ಮತ್ತು ಜಾಗತಿಕ ಯುದ್ಧಗಳು ಸಂಭವಿಸಿದ್ದು. ಮತ್ತೂ ಅವರು ಭಾವಿಸಿದಂತೆ ಇಂತಹ ಮಟೀರಿಯಲಿಸಂನಿಂದಾಗಿಯೇ ಭಾರೀ ಪ್ರಮಾಣದ ಆರ್ಥಿಕ ಅಸಮಾನತೆ ಜಗತ್ತಿನಲ್ಲಿ ಆರಂಭವಾಗಿದ್ದು. ಕೆಲವು ಪಾಶ್ಚಾತ್ಯ ರಾಷ್ಟ್ರಗಳು ಶ್ರೀಮಂತವಾಗುತ್ತ ಹೋಗಿ ಜಗತ್ತಿನ ಕೋಟ್ಯಂತರ ಜನ ಬಡವರಾಗಿ ಹೋಗಿದ್ದು. ಮತ್ತು ಇಂತಹ ಸಂಸ್ಕೃತಿಯಿಂದಾಗಿಯೇ ಜಗತ್ತಿನಾದ್ಯಂತ ಜನ ತಮ್ಮ ದೇಶದಲ್ಲಿಯೇ ಅನ್ಯರಾಗಿ ಹೋಗಿ, ಘನತೆಯನ್ನು ಕಳೆದುಕೊಂಡು ಪಾಶ್ಚಿಮಾತ್ಯ ಸಂಸ್ಕೃತಿಯ ದಾಸರಾಗಿ ಹೋಗಿದ್ದು. ವಿಷಯವೆಂದರೆ ಸಂಸ್ಕೃತಿಯನ್ನು ಕಳೆದುಕೊಂಡು ಜನ ಪಶ್ಚಿಮದ ದಾಸರಾಗಿ ಹೋಗುತ್ತಿರುವುದರ ಕುರಿತು ಗಾಂಧಿಗೆ ತೀವ್ರ ಕಳವಳವಿತ್ತು.

ಇಂತಹ ಮೆಟೀರಿಯಲಿಸ್ಟಿಕ್ ಸಂಸ್ಕೃತಿಗೆ ವಿರುದ್ಧವಾಗಿ ಇನ್ನೊಂದು ರೀತಿಯ ಮೆಟೀರಿಯಲಿಸ್ಟಿಕ್ ಸಂಸ್ಕೃತಿಯನ್ನು ಹುಟ್ಟುಹಾಕುವುದರ ಮೂಲಕ ಕಾರ್ಲ್ ಮಾರ್ಕ್ಸ್ ಅದಕ್ಕೆ ಸ್ಪಂದಿಸಿದ್ದರೆ ಗಾಂಧಿ ಅದಕ್ಕೆ ಭಾರತೀಯ ಸಂಸ್ಕೃತಿಯ ಆಳದಲ್ಲಿರುವ ತಾತ್ವಿಕತೆಯ, ಧಾರ್ಮಿಕತೆಯ ಪುನರುತ್ಥಾನಕ್ಕೆ ಪ್ರಯತ್ನಿಸುವುದರ ಮೂಲಕ ಸ್ಪಂದಿಸಿದ್ದರು. ಸಂಸ್ಕೃತಿಯ ಪುನರುತ್ಥಾನ ಗಾಂಧಿ ಸ್ವಾತಂತ್ರ್ಯ ಹೋರಾಟದ ಪ್ರಾಥಮಿಕ ಗುರಿ. ಕೇವಲ ಬ್ರಿಟಿಷರನ್ನು ರಾಜಕೀಯವಾಗಿ ಓಡಿಸುವದು ಅಲ್ಲ. ಏಕೆಂದರೆ ಬ್ರಿಟಿಷರನ್ನು ಓಡಿಸಿಬಿಟ್ಟರೂ ಕೂಡ ಬ್ರಿಟಿಷ್ ಸಂಸ್ಕೃತಿ ನಮ್ಮಲ್ಲಿ ಉಳಿದುಹೋದರೆ ಏನನ್ನೂ ಸಾಧಿಸಿದಂತಾಗುವುದಿಲ್ಲ ಎನ್ನುವುದು ಗಾಂಧಿಗೆ ಗೊತ್ತಿತ್ತು. ಉದ್ದೇಶ ದೇಶಕ್ಕೆ ಕೇವಲ ಬ್ರಿಟಿಶ್ ದೇಶದಿಂದ ಸ್ವಾತಂತ್ರ‍್ಯ ಪಡೆಯುವುದಿರಲಿಲ್ಲ. ಗಾಂಧಿ ಚಳವಳಿ ಒಂದು ನಾಗರಿಕತೆಗಳ ಸಮರ. ಆ ಸಂಸ್ಕೃತಿಯಿಂದ ಮುಕ್ತಿ ಪಡೆದು ರಾಜಕೀಯ ಸ್ವಾತಂತ್ರ್ಯಕ್ಕೆ ಜನರನ್ನು ಅರ್ಹರನ್ನಾಗಿಸಿ ನಂತರ ರಾಜಕೀಯ ಸ್ವಾತಂತ್ರ್ಯ ಪಡೆಯುವ ಗುರಿ ಹೊಂದಿದ ಸಂಕೀರ್ಣ ʻಸಮರ’ ಅದು. ಮೂಲತಃ ಸಾಂಸ್ಕೃತಿಕ ಹೋರಾಟ.

ಹಾಗಾಗಿಯೇ ಅಲ್ಲಿ ಗಾಂಧಿ ಬಳಸಿದ ಆಯುಧಗಳು ಹಿಂದೂ ಸಂಸ್ಕೃತಿಯ ಆಳದಲ್ಲಿರುವ ಶ್ರೇಷ್ಠ ಮೌಲ್ಯಗಳು. ಮತ ಪ್ರತಿರೋಧದ ತಂತ್ರಗಳು. (ಉಪವಾಸ, ಭಜನೆ, ಹರತಾಳ ಮತ್ತು ಅಹಿಂಸೆ) ಅವುಗಳಿಗೆ ಅಪಾರ ಶಕ್ತಿಯಿದೆ ಎನ್ನುವುದು ಗಾಂಧಿಗೆ ಗೊತ್ತಿತ್ತು. ನಮ್ಮ ಋಷಿಮುನಿಗಳು, ಸಂತರು, ಧರ್ಮಸುಧಾರಕರು ಬಳಸಿದ ಮಾರ್ಗಗಳು ಅವೇ ಎನ್ನುವುದು ಗೊತ್ತಿತ್ತು. ನಮ್ಮ ಮೌಲ್ಯಗಳು ಬ್ರಿಟಿಷ್ ಮೌಲ್ಯಗಳಿಗೆ ಮುಖಾಮುಖಿಯಾದಾಗ ಆ ಸಂಸ್ಕೃತಿ ತನ್ನ ಕುರಿತು ನಾಚಿಕೊಳ್ಳುತ್ತದೆ. ಮತ್ತು ಹಾಗೆ ಆಗಬೇಕು. ಹಾಗೆ ಆದಾಗ ಇಂಗ್ಲೆಂಡ್ ಶರಣಾಗಿ ಹಿಂದೆ ಸರಿಯುತ್ತದೆ ಎನ್ನುವುದು ಗಾಂಧಿ ನಂಬುಗೆಯಾಗಿತ್ತು. ಇಂತಹ ಪ್ರಯತ್ನದಲ್ಲಿ ಗಾಂಧಿ ಕೆಲವು ಮಟ್ಟಿಗಾದರೂ ಯಶಸ್ವಿಯಾಗಿದ್ದು ನಮಗೆ ಗೊತ್ತಿದೆ. ಉದಾಹರಣೆಗಳಿವೆ. ಗಾಂಧಿಗೆ ಜೈಲುಶಿಕ್ಷೆ ವಿಧಿಸಿದ್ದ ನ್ಯಾಯಾಧೀಶ ಪಾಪಪ್ರಜ್ಞೆಯಿಂದ ಎದ್ದು ನಿಂತು ಬಿಡುತ್ತಾನೆ. ಉಪ್ಪಿನ ಸತ್ಯಾಗ್ರಹದ ಸಂದರ್ಭದಲ್ಲಿ ಇಡೀ ದೇಶವೇ ಉಪ್ಪು ತಯಾರಿಸಲು ಆರಂಭಿಸಿದಾಗ ಇಂಗ್ಲೆಂಡ್‌ಗೆ ಏನು ಮಾಡಬೇಕೆಂದೇ ತಿಳಿಯದೆ ಜಾಗತಿಕವಾಗಿ ಮುಖಭಂಗ ಅನುಭವಿಸುತ್ತದೆ. ಮತ್ತೆ ದೇಶ ಸ್ವತಂತ್ರವಾದ ನಂತರ ಕಲ್ಕತ್ತಾದಲ್ಲಿ ಆರಂಭವಾಗುವ ಭಾರೀ ಪ್ರಮಾಣದ ಕೋಮುಗಲಭೆಯನ್ನು ಗಾಂಧಿ ಏಕಾಂಗಿಯಾಗಿ ಹತೋಟಿಗೆ ತಂದಿದ್ದು ನೋಡಿದ ವಿಶ್ವ ದಂಗುಬಡಿದು ಹೋಗುತ್ತದೆ. ಅವರು ತಮ್ಮ ರಾಜಕೀಯ ಹೋರಾಟದ ಗೆಲ್ಲುವಿಕೆಗೆ ಒಂದು ನಿರ್ದಿಷ್ಟ ತಾರೀಕು ಇತ್ಯಾದಿ ಇಟ್ಟುಕೊಂಡಿರಲಿಲ್ಲ. ಮುಖ್ಯ ವಿಷಯ ಸಂಸ್ಕೃತಿಯ ಪುನರುತ್ಥಾನ. ಪುನರುತ್ಥಾನದ ನಾಯಕರಾಗಿದ್ದವರು ಗಾಂಧಿ. ಸಾಂಸ್ಕೃತಿಕ ಗೆಲುವಿನ ಮೂಲಕ ರಾಜಕೀಯ ಗೆಲುವು ತಂದವರು.

2. ಗಾಂಧೀಜಿಯನ್ನು ಇನ್ನೊಂದು ದೃಷ್ಟಿಯಿಂದ ಕೂಡ ನೋಡಬೇಕು. ಏನೆಂದರೆ ಇತಿಹಾಸಕಾರ್ತಿ ರೋಮಿಲಾ ಥಾಪರ್ ಹೇಳುವಂತೆ ಭಾರತಕ್ಕೆ ʻರಾಷ್ಟ್ರೀಯತೆಯ ಪರಿಕಲ್ಪನೆ’ಯನ್ನು ನೀಡಿಹೋದವರು ಗಾಂಧಿ. ಹಿಂದೆ ನಮ್ಮ ದೇಶದಲ್ಲಿ ರಾಜಕೀಯ ಐಕ್ಯತೆಯ ಪರಿಕಲ್ಪನೆಯೇ ಇರಲಿಲ್ಲ. (ಸಾಂಸ್ಕೃತಿಕ ಏಕತೆ ಇತ್ತು). ರಾಜರುಗಳು, ರಾಣಿಯರು ಅಲ್ಲಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿದ್ದು ತಮ್ಮ ಸಲುವಾಗಿ. ತಮ್ಮ ದತ್ತು ಪುತ್ರರ ಸಲುವಾಗಿ. ಭಾರತದ ಸಲುವಾಗಿ ಅಲ್ಲ. ಅವೆಲ್ಲ ಸ್ವಾತಂತ್ರ್ಯ ಹೋರಾಟಗಳಾಗಿರಲಿಲ್ಲ. ಹಾಗೆಯೇ ಮೊದಲನೆಯ ಪೀಳಿಗೆಯ ಮೋತಿಲಾಲ್ ನೆಹರು ಅಂತವರ ʻಸ್ವಾತಂತ್ರ್ಯ ಹೋರಾಟ’ಗಳಲ್ಲಿ ಸಾಮಾನ್ಯ ಜನರ, ಬಡವರ, ದೀನದಲಿತರ, ಮಹಿಳೆಯರ ಮಕ್ಕಳ ಭಾಗವಹಿಸುವಿಕೆ ಇರಲಿಲ್ಲ. ಇಂತಹ ಸಮುದಾಯಗಳಿಗೆ ಆ ಹೋರಾಟದಲ್ಲಿ ಗೌರವವೂ ಇರಲಿಲ್ಲ. ದೇಶಕ್ಕೆ ಗಾಂಧೀಜಿಯ ಕೊಡುಗೆ ಸ್ವಾತಂತ್ರ್ಯ ಹೋರಾಟವನ್ನು ಜನರ ಹೋರಾಟವನ್ನಾಗಿಸಿ ತಾವೆಲ್ಲರೂ ಒಂದು ನೇಶನ್ ಸ್ಟೇಟ್‌ನಲ್ಲಿ ಭಾಗಿದಾರರು ಎಂಬ ಭಾವನೆಯನ್ನು ಅವರ ಮನಸ್ಸುಗಳೊಳಗೆ ಮೂಡಿಸಿದ್ದು. ದೇಶದ ಜನ ಒಂದು ರಾಜಕೀಯ ಕೊಡೆಯ ಕೆಳಗೆ ಬಂದಿದ್ದು ಈಗ.

ಜನರ ಮನಸ್ಸುಗಳೊಳಗೆ ಧೈರ್ಯವನ್ನು, ಮೋಟಿವೇಶನ್‌ ಅನ್ನು ತುಂಬಿದ ಗಾಂಧಿ ಅವರನ್ನೆಲ್ಲ ಘನತೆವಂತರನ್ನಾಗಿ ಮಾಡಿಬಿಟ್ಟರು. ಎಂತಹ ಘನತೆವಂತರೆಂದರೆ ಯಾವ ಹಣ ಬಲವೂ, ಸೈನ್ಯ ಬಲವೂ ಬಗ್ಗಿಸಲಾರದಂತದ್ದು. ಹೀಗಾಗಿ ನಮ್ಮ ಹೋರಾಟ ಪ್ರಜಾಪ್ರಭುತ್ವ ಪರಂಪರೆಯ ಹೋರಾಟ ಕೂಡ ಆಗಿಹೋಯಿತು. ಗಮನಿಸಬೇಕು. ಭಾರತದ ಸ್ವಾತಂತ್ರ್ಯ ಹಿಂಸಾತ್ಮಕ ಮಾರ್ಗಗಳಿಂದ ಬಂದಿದ್ದರೆ ನಾವು ಪ್ರಜಾಪ್ರಭುತ್ವ ದೇಶವಾಗಿ ಉಳಿಯುತ್ತಿರಲಿಲ್ಲವೇನೋ. ಏಕೆಂದರೆ ಹಿಂಸಾತ್ಮಕ ಚಳವಳಿಗಳ ನಾಯಕತ್ವ ವಹಿಸಿದವರಿಗೆ ಅಧಿಕಾರ ಬಿಟ್ಟು ಕೊಡುವ ಮನಸ್ಸಿರುವುದಿಲ್ಲ. ಸೈನ್ಯ ಬಲದ ಹೋರಾಟಗಳು ಒಂದು ವ್ಯಕ್ತಿ ಅಥವಾ ವ್ಯವಸ್ಥೆ ತನ್ನನ್ನು ತಾನು ಬಲಪಡಿಸಿಕೊಳ್ಳುವ ಹೋರಾಟಗಳಾಗಿರುತ್ತವೆ. ಅಂತಹ ಹೋರಾಟಗಳು ಜನರ ಕೈಗೆ ಅಧಿಕಾರ ನೀಡುವುದಿಲ್ಲ. ಆದರೆ ಗಾಂಧಿ ದೇಶಾದ್ಯಂತ ಸೃಷ್ಟಿಸಿದ ಜನ ಬಡವರಾಗಿದ್ದರೂ ಕೂಡ ನೈತಿಕವಾಗಿ ಶ್ರೀಮಂತರಾಗಿದ್ದವರು. ಬೇರೆಯವರ ದಮ್ಮಡಿ ಕಾಸು ಬಯಸಿದವರಲ್ಲ. ಸರಕಾರದಿಂದಲೂ ಕೂಡ ಏನನ್ನೂ ಬಯಸಿದವರಲ್ಲ. ತ್ಯಾಗ ಮಾಡಲು ಸಿದ್ಧವಿದ್ದವರು.

ಇನ್ನೂ ಒಂದು ಸೂಕ್ಷ್ಮ ವಿಚಾರವಿದೆ. ಬಹುಶಃ ಗಾಂಧೀಜಿಗೂ ಗೊತ್ತಿತ್ತು. ಏನೆಂದರೆ ಅಂದಿನ ಸಂದರ್ಭದಲ್ಲಿ ಸೈನ್ಯದ ಮೂಲಕ ಹೋರಾಟ ನಡೆಸಿದ್ದರೆ ಬಹುಶಃ ನಾವು ಗೆಲ್ಲುವುದು ಅನುಮಾನವಿತ್ತು. ಏಕೆಂದರೆ ಭಾರತಕ್ಕೆ ಅಂದು ಅಂತಹ ಸೈನ್ಯದ ಶಕ್ತಿ ಇರಲಿಲ್ಲ. ಮತ್ತು ಯುದ್ಧಗಳಿಗೆ ಬೇಕಾಗುವ ಹಣ ನಮ್ಮ ಬಳಿ ಇರಲಿಲ್ಲ. ಅಲ್ಲದೆ ನಾವು ಅಂದು ಗೆಲ್ಲಲು ಬೇರೆ ದೇಶದ ಸಹಾಯ ಪಡೆದಿದ್ದರೆ ನಾವು ಆ ದೇಶದ ಅಡಿಯಾಳಾಗಿ ಹೋಗುತ್ತಿದ್ದೆವು. ಯಾಕೆಂದರೆ ಯಾವ ದೇಶವೂ ಇನ್ನೊಂದಕ್ಕೆ ಪುಕ್ಕಟೆ ಸಹಾಯ ಮಾಡುವುದಿಲ್ಲ. ಗಾಂಧಿ ಪ್ರಸ್ತುತತೆ /ಅಪ್ರಸ್ತುತತೆ ಚರ್ಚಿಸುವಾಗ ಬಹುಶಃ ನಾವು ಈ ವಿಚಾರಗಳನ್ನು ಲಕ್ಷ್ಯದಲ್ಲಿಕೊಳ್ಳಬೇಕು.

3. ಇನ್ನೂ ಒಂದು ಮಹತ್ವದ ವಿಷಯ. ಏನೆಂದರೆ ಗಾಂಧಿಗೆ ದೇಶಗಳ, ಸರಕಾರಗಳ ಕುರಿತೇ ಅನುಮಾನವಿತ್ತು. ಅಂದರೆ ಸಂಘಟಿತ ದೇಶಗಳನ್ನು, ಸರಕಾರಗಳನ್ನು ನಡೆಸುವ ʻನಾಯಕರು’ ಒಳಗಿನಿಂದ ಜನವಿರೋಧಿಯಾಗಿರಲು ಸಾಧ್ಯವಿದೆ ಎಂಬುದು ಅವರಿಗೆ ತಿಳಿದಿತ್ತು. ಅಂದಿನ ರಶಿಯಾ, ಚೀನಾ ಇಂತಹ ದೇಶಗಳ ಜನರ ಪರಿಸ್ಥಿತಿ ನೋಡಿದ್ದ ಗಾಂಧಿಗೆ ದೇಶಕ್ಕಿಂತಲೂ ಜನರ ಕಲ್ಯಾಣ ಮುಖ್ಯ ಎನ್ನುವುದು ತಿಳಿದಿತ್ತು. ದುರ್ಬಲರ, ದೀನ ದಲಿತರ, ಮಹಿಳೆಯರ ಮತ್ತು ಅಶಕ್ತರ ಕಾಳಜಿಯೇ ಹೆಚ್ಚು ಮಹತ್ವದ್ದಾಗಿತ್ತು. ನಿಜದ ಪ್ರಜಾಪ್ರಭುತ್ವ ಸಾಧಿಸಲು ಹೊರಟವರು ಗಾಂಧಿ. ಗ್ರಾಮ ಸ್ವರಾಜ್ಯದ ಪರಿಕಲ್ಪನೆಯನ್ನು ಅವರು ಮುಂದಿಟ್ಟಿದ್ದು ಇಂತಹ ಸಮಸ್ಯೆಯನ್ನು ಬಗೆಹರಿಸುವ ಸಲುವಾಗಿಯೇ. ವಿಕೇಂದ್ರೀಕ್ರತ ಆಡಳಿತದಲ್ಲಿ ಸರಕಾರಗಳು ವಿಪರೀತ ಬಲಗೊಳ್ಳುವ ಅಗತ್ಯತೆ ಇರುವುದಿಲ್ಲ. ಆಗ ಅವು ನಿಜವಾಗಿ ಜನರ ಸೇವೆಯಲ್ಲಿ ತೊಡಗಬಹುದು ಎನ್ನುವುದು ಗಾಂಧಿಗೆ ಅರಿವಿತ್ತು.

ಇದನ್ನೂ ಓದಿ | ಸವಿಸ್ತಾರ ಅಂಕಣ | ‘ಭಾರತದ ಜಾತ್ಯತೀತತೆʼ ಎನ್ನುವುದು ʼತುಷ್ಟೀಕರಣʼಕ್ಕೆ ಹೊದಿಸಿದ ಕವಚ

4. ಗಾಂಧಿ ದೇವಮಾನವರಾಗಿರಲಿಲ್ಲ. ಅವರೊಳಗೂ ಎಕ್ಸೆಂಟ್ರಿಕ್ ಎಂದು ಹೇಳಬೇಕಾದ ವರ್ತನೆಗಳಿದ್ದವು. ಉದಾಹರಣೆಗೆ ಗಾಂಧಿ ಕಸ್ತೂರಬಾ ಮೇಲೆ ವಿಪರೀತದ ಕಂಡಿಷನ್‌ಗಳನ್ನು ಹೇರಿದ್ದರು. ಕಾಮವನ್ನು ತ್ಯಜಿಸಿದ್ದರು. ಮಕ್ಕಳ ಮೇಲೆ ಕೂಡ ಅಪಾರ ಒತ್ತಡಗಳನ್ನು ಹೇರಿದ್ದರು. ಅದು ಹೋಗಲಿ. ಗಾಂಧಿ ತೆಗೆದುಕೊಂಡ ಇತರ ಹಲವಾರು ನಿರ್ಣಯಗಳು ಕೂಡ ರಾಜಕೀಯದ ದೃಷ್ಟಿಯಿಂದ ತಪ್ಪಾಗಿದ್ದವು ಎಂದೇ ಹೇಳಬೇಕು. ಮುಖ್ಯವಾಗಿ (ದೇಶವಿಭಜನೆ ತಪ್ಪಿಸಲು) ʻಜಿನ್ನಾ ಪ್ರಧಾನಿಯಾಗಲಿ’ ಎಂದು ಗಾಂಧಿ ಹೇಳಿದ್ದರು. ಅಲ್ಲದೆ ಪಾಕಿಸ್ತಾನ ಹೋರಾಟದ ಸಿದ್ಧತೆಯಲ್ಲಿದ್ದರೂ ಕೂಡ ಆ ದೇಶಕ್ಕೆ ಒಪ್ಪಂದದ ಪ್ರಕಾರ ನೀಡಬೇಕಾಗಿದ್ದ ಹಣವನ್ನು ನೀಡಬೇಕು ಎಂದು ಹೇಳಿದ್ದರು. ತಮ್ಮ ವೃದ್ಧಾಪ್ಯದಲ್ಲಿ ತಮಗೆ ಕಾಮವನ್ನು ಗೆಲ್ಲಲು ಸಾಧ್ಯವಾಗಿದೆಯೇ ಎನ್ನುವದನ್ನು ಖಾತ್ರಿಪಡಿಸಿಕೊಳ್ಳುವ ಸಲವಾಗಿ ಚಿತ್ರವಿಚಿತ್ರ ಪರೀಕ್ಷೆಗಳಿಗೆ ತಮ್ಮನ್ನು ಒಡ್ಡಿಕೊಂಡಿದ್ದರು. ಆದರೆ ಇಲ್ಲೆಲ್ಲ ನಾವು ಒಂದು ವಿಷಯ ಗಮನಿಸಬೇಕು. ಏನೆಂದರೆ ಗಾಂಧಿ ಬರೇ ರಾಜಕಾರಣಿಯಾಗಿರಲಿಲ್ಲ. ಆಳವಾಗಿ ಧಾರ್ಮಿಕರಾಗಿದ್ದ ಅವರು ಸಂತನಾಗುವ, ಅಂದರೆ ತಮ್ಮನ್ನು ಪರಿಶುದ್ಧನನ್ನಾಗಿಸಿಕೊಳ್ಳುವ, ಆತ್ಮವನ್ನು ಉನ್ನತಮಟ್ಟಕ್ಕೆ ಕರೆದೊಯ್ಯುವ, ʻಸತ್ಯವನ್ನು’ ಅರಸುವ ನಿರಂತರ ಪರೀಕ್ಷೆಯಲ್ಲಿ ತೊಡಗಿದ್ದರು. ಬರೇ ರಾಜಕಾರಣಿಯಾದರೆ ಅವರು ಹಲವು ವಿಷಯಗಳನ್ನು ಮುಚ್ಚಿಡುತ್ತಿದ್ದರೇನೋ. ಆದರೆ ಗಾಂಧಿ ತಮ್ಮ ಜೀವನವನ್ನು ಪಾರದರ್ಶಕವಾಗಿಟ್ಟುಕೊಳ್ಳುವ ಹಂಬಲದಲ್ಲಿ ಎಲ್ಲವನೂ ಹೇಳಿಕೊಂಡುಬಿಟ್ಟರು. ಬಹುಶಃ ಅವರಿಗೆ ತಮ್ಮ ಸಾವೂ ದೊಡ್ಡ ವಿಷಯವಾಗಿರಲಿಲ್ಲ. ಆತ್ಮಶುದ್ಧಿ ಹೆಚ್ಚು ಮಹತ್ವದ್ದಾಗಿತ್ತು.

5. ಮತ್ತೊಂದು ವಿಷಯ ಬಹುಶಃ ನಾವು ಮರೆಯಬಾರದು. ಏನೆಂದರೆ ಗಾಂಧಿ ಹಿಂದೂ ಧರ್ಮದ ಕಟ್ಟಾ ಅನುಯಾಯಿ. ತಮ್ಮನ್ನು ತಾನು ಸನಾತನಿ ಹಿಂದು ಎಂದು ಕರೆದುಕೊಂಡವರು. ನಮ್ಮ ದೇಶದ ಸ್ವಾತಂತ್ರ್ಯ ಚಳವಳಿ ಹಿಂದೂ ಧರ್ಮದ ಮೌಲ್ಯಗಳನ್ನು, ತಂತ್ರಗಳನ್ನು ಆಧಾರಸ್ತಂಭಗಳನ್ನಾಗಿ ಇಟ್ಟುಕೊಂಡ ಚಳವಳಿ. ಹಿಂದೂ ಮೌಲ್ಯಗಳ ಪುನರುತ್ಥಾನ ಸಾಧಿಸಿದ ಚಳವಳಿ. ಆದರೂ ಕೂಡ ಮುಖ್ಯವಾಗಿ ಸ್ವಾತಂತ್ರ್ಯಾನಂತರದ ಕೆಲವು ಘಟನೆಗಳನ್ನು ಬಿಡಿಬಿಡಿಯಾಗಿ ನೋಡಿದರೆ ಗಾಂಧಿ ಉದ್ದೇಶಗಳ ಕುರಿತು ಸಾಧಾರಣ ವ್ಯಕ್ತಿಯೊಬ್ಬನಿಗೆ ಅನುಮಾನ ಬಂದರೆ ಆಶ್ಚರ್ಯವಿಲ್ಲ. ಗಾಂಧಿಯ ಇಂತಹ ಕೆಲವು ವೈರುಧ್ಯಗಳನ್ನು ಹೇಗೆ ಅರ್ಥಮಾಡಿಕೊಳ್ಳುವುದು ಎಂಬ ಪ್ರಶ್ನೆ ಇದೆ. ಬಹುಶಃ ಇವನ್ನು ಗಾಂಧಿಯ ಸಮಗ್ರ ವ್ಯಕ್ತಿತ್ವದ ಭಾಗವಾಗಿ ನೋಡಬೇಕು. ಬಹುಶಃ ತಮ್ಮ ಜೀವನದ ಕೊನೆಯ ಹಂತಗಳಲ್ಲಿ ಗಾಂಧಿಗೆ ತಾವು ರಾಜಕೀಯವನ್ನು ಮೀರಿದ ಒಂದು ಮಹಾ ಆತ್ಮವಾಗಬೇಕು, ಸಂತನಾಗಬೇಕು ಎಂದು ಇದ್ದ ಅಭಿಲಾಷೆಯೇ ಅವರ ಕೆಲವು ನಿರ್ಣಯಗಳನ್ನು ನಿರೂಪಿಸಿರಬಹುದು.

ಇದನ್ನೂ ಓದಿ | ರಾಜ್‌ಘಾಟ್‌ನಲ್ಲಿ ಮಹಾತ್ಮ ಗಾಂಧಿಗೆ ಮೋದಿ ನಮನ

6. ಗಾಂಧಿಯಂತಹ ಇಡೀ ದೇಶದ ಮೈಮನಗಳನ್ನು ಆವರಿಸಿದ ವ್ಯಕ್ತಿ ಅಪ್ರಸ್ತುತವೆಂದು, ಅಥವಾ ದೇಶದ ಯುವಜನತೆ ಗಾಂಧಿಯಿಂದ ದೂರಹೋಗುತ್ತಿರಬಹುದೆಂದು, ಹಲವರು ಅಥವಾ ಕನಿಷ್ಟ ಕೆಲವರು ಭಾವಿಸುತ್ತಿರುವ ಕಾರಣಗಳನ್ನೂ ಹುಡುಕಿಕೊಳ್ಳಬೇಕು. ಬಹುಶಃ ಇದಕ್ಕೆ ಕಾರಣ ಗಾಂಧಿಯಲ್ಲ. ಗಾಂಧೀಜಿಯ ಹೆಸರನ್ನು, ಭಾವಚಿತ್ರವನ್ನು ಬಳಸಿಕೊಂಡು ಸುದೀರ್ಘಕಾಲ ನಡೆದುಬಂದ ʻಖುಷಿಪಡಿಸುವ ರಾಜಕೀಯ’ ಮತ್ತು ಸಬ್ಸಿಡಿ ರಾಜಕೀಯ. ಈ ರಾಜಕೀಯದಿಂದ ಬೇಸತ್ತಿರುವ ಸಮಕಾಲೀನ ಯುವಜನತೆ ಅದಕ್ಕೆಲ್ಲ ಗಾಂಧಿಯೇ ಕಾರಣ ಎಂದು ನಂಬಿರಲೂ ಸಾಧ್ಯವಿದೆ.

ಬಹುಶಃ ಗಾಂಧೀಜಿಯ ಮರುಮೌಲ್ಯಮಾಪನ ಮೇಲೆ ಕಾಣಿಸಿದ ವಿಷಯಗಳನ್ನೂ ಪರಿಗಣಿಸಬೇಕು.

(ಲೇಖಕರು ಪ್ರಾಧ್ಯಾಪಕ, ಕವಿ, ಕತೆಗಾರ, ವಿಮರ್ಶಕ)

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಕರ್ನಾಟಕ

Book Release: ಬೆಂಗಳೂರಿನಲ್ಲಿ ಜೂ.29ರಂದು ‘ಭಾವರಾಮಾಯಣ ರಾಮಾವತರಣʼ ಪುಸ್ತಕ ಲೋಕಾರ್ಪಣೆ

Bengaluru News: ಶ್ರೀ ಸಂಸ್ಥಾನ ಶ್ರೀ ರಾಮಚಂದ್ರಾಪುರ ಮಠ ವಿರಚಿತ “ಭಾವರಾಮಾಯಣ ರಾಮಾವತರಣ” ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮವನ್ನು ನಗರದ ಹೊಸಕೆರೆಹಳ್ಳಿಯ ಪಿ.ಇ.ಎಸ್‌. ವಿಶ್ವವಿದ್ಯಾಲಯದ ಜಿ.ಜೆ.ಬಿ.ಸಿ. ಸಭಾಂಗಣದಲ್ಲಿ ಇದೇ ಜೂ. 29ರಂದು ಶನಿವಾರ ಸಂಜೆ 5 ಗಂಟೆಗೆ ಏರ್ಪಡಿಸಲಾಗಿದೆ.

VISTARANEWS.COM


on

Bhaavaramayana Ramavatarana book release programme on June 29 in Bengaluru
Koo

ಬೆಂಗಳೂರು: ಶ್ರೀ ಸಂಸ್ಥಾನ ಶ್ರೀ ರಾಮಚಂದ್ರಾಪುರ ಮಠ ವಿರಚಿತ ʼಭಾವರಾಮಾಯಣ ರಾಮಾವತರಣʼ ಪುಸ್ತಕ ಲೋಕಾರ್ಪಣೆ (Book Release) ಕಾರ್ಯಕ್ರಮವನ್ನು ನಗರದ ಹೊಸಕೆರೆಹಳ್ಳಿಯ ಪಿ.ಇ.ಎಸ್‌. ವಿಶ್ವವಿದ್ಯಾಲಯದ ಜಿ.ಜೆ.ಬಿ.ಸಿ. ಸಭಾಂಗಣದಲ್ಲಿ ಇದೇ ಜೂ. 29ರಂದು ಶನಿವಾರ ಸಂಜೆ 5 ಗಂಟೆಗೆ ಏರ್ಪಡಿಸಲಾಗಿದೆ.

ಇದನ್ನೂ ಓದಿ: Gold Rate Today: ಆಭರಣ ಪ್ರಿಯರಿಗೆ ಗುಡ್‌ನ್ಯೂಸ್‌; ಚಿನ್ನದ ದರ ಇಳಿಕೆ

ಕಾರ್ಯಕ್ರಮದಲ್ಲಿ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾರು ಹಾಗೂ ಶ್ರೀಸಂಸ್ಥಾನ ಗೋಕರ್ಣ ಶ್ರೀ ರಾಮಚಂದ್ರಾಪುರ ಮಠದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿಯವರು ಸಾನ್ನಿಧ್ಯ ವಹಿಸುವರು. ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಶಿವರಾಜ ವಿ. ಪಾಟೀಲ ಮತ್ತು ಪಿ.ಇ.ಎಸ್‌. ವಿಶ್ವವಿದ್ಯಾಲಯದ ಕುಲಾಧಿಪತಿ ಡಾ. ಎಂ.ಆರ್‌. ದೊರೆಸ್ವಾಮಿ ಉಪಸ್ಥಿತರಿರುವರು.

ಇದನ್ನೂ ಓದಿ: Para Badminton Ranking: ಮೊದಲ ಬಾರಿಗೆ ವಿಶ್ವ ನಂ.1 ಸ್ಥಾನಕ್ಕೇರಿದ ಕನ್ನಡಿಗ ಸುಹಾಸ್‌ ಯತಿರಾಜ್

ಸಂಜೆ 5 ಗಂಟೆಗೆ ಕಲಾಸ್ನೇಹಿ ಹಾಗೂ ನರ್ತನಯೋಗ ಸಂಸ್ಥೆಯ ನಿರ್ದೇಶಕಿ ಸ್ನೇಹಾ ನಾರಾಯಣ ಮತ್ತು ಯೋಗೇಶ್‌ ಕುಮಾರ್‌ ಅವರಿಂದ ಭರತನಾಟ್ಯ, ಸಂಜೆ 5.30 ಕ್ಕೆ ನೂರಕ್ಕೂ ಹೆಚ್ಚು ಗಣ್ಯರಿಂದ ಪುಸ್ತಕ ಲೋಕಾರ್ಪಣೆ, ಶ್ರೀಸಂಸ್ಥಾನದವರೊಂದಿಗೆ ಸಂವಾದ, ಎನ್. ರವಿಶಂಕರ್‌ ಸಂವಾದಕರಾಗಿ ಪಾಲ್ಗೊಳ್ಳುವರು. ಮಂತ್ರಾಲಯ ಶ್ರೀಗಳಿಂದ ಆಶೀರ್ವಚನ ಕಾರ್ಯಕ್ರಮ ಜರುಗಲಿದೆ.

Continue Reading

ಕಲೆ/ಸಾಹಿತ್ಯ

ಕಥೆ ನಿಜ, ಕಥೆಗಾರ ಸುಳ್ಳು: ಕಥೆಕೂಟ ಸಮಾವೇಶದಲ್ಲಿ ಟಿಎನ್‌ ಸೀತಾರಾಮ್‌

ಸಕಲೇಶಪುರದ ಮಕ್ಕಿತಿಟ್ಟದಲ್ಲಿ ನಡೆದ ʼಕಥೆಕೂಟʼ ವಾಟ್ಸ್ಯಾಪ್‌ ಗುಂಪಿನ ಒಂಬತ್ತನೇ ವಾರ್ಷಿಕೋತ್ಸವ ಹಾಗೂ ಆರನೇ ಸಮಾವೇಶದ ಎರಡನೇ ದಿನ ನಡೆದ ‘ಮುಕ್ತಕಥಾ’ ಸಂವಾದ ಕಾರ್ಯಕ್ರಮದಲ್ಲಿ ಟಿಎನ್ನೆಸ್ ಮತ್ತು ಡುಂಡಿರಾಜ್ ತಮ್ಮ ಕಥಾಜೀವನ- ಕಾವ್ಯಜೀವನದ ಅಂತರಂಗವನ್ನು ತೆರೆದಿಟ್ಟರು.

VISTARANEWS.COM


on

ಕಥೆಕೂಟ literature meet
Koo

ಬೆಂಗಳೂರು: ನಾನು ಸಾಹಿತ್ಯ ಸಿನಿಮಾ ಎಂದು ಬೆಂಗಳೂರಿನಲ್ಲಿ ಬದುಕು ಹುಡುಕಿಕೊಳ್ಳುತ್ತಿದ್ದಾಗ ತಂದೆ ಊರಿನಲ್ಲಿ ನನಗಾಗಿ ಜಮೀನು ಮಾಡಿಟ್ಟು ಊರಿಗೆ ಬಾ ಎಂದು ಕರೆದರು. ನಾನು, ನಿಮ್ಮ ಜಮೀನು ನನಗೆ ಬೇಕಿಲ್ಲ ಎಂದು ಉತ್ತರಿಸಿ ಪತ್ರ ಬರೆದೆ. ಇದಾದ ತಿಂಗಳೊಳಗೆ ಅವರು ಕಾಯಿಲೆ ಉಲ್ಬಣಿಸಿ ತೀರಿಕೊಂಡರು. ಊರಿಗೆ ಹೋದೆ. ತಂದೆ ನನ್ನ ಪತ್ರ ತಲುಪಿದ ಬಳಿಕ ಕೊರಗಿನಲ್ಲಿ ತಮ್ಮ ಮಾತ್ರೆಗಳನ್ನು ಸೇವಿಸಿರಲಿಲ್ಲ ಎಂದು ಗೊತ್ತಾಯಿತು. ತಂದೆಯ ಸಾವಿಗೆ ಕಾರಣವಾದೆ ಎಂಬ ಪಶ್ಚಾತ್ತಾಪದಿಂದ ದಗ್ಧನಾದೆ. ಮುಂದೆ ಇದೇ ಘಟನೆಯನ್ನಿಟ್ಟುಕೊಂಡು ಒಂದು ನಾಟಕ ಬರೆದೆ. ಅದೇ ‘ಬದುಕ ಮನ್ನಿಸು ಪ್ರಭುವೆ’. ಇದಕ್ಕೆ ಲಂಕೇಶ್, ರಾಮಚಂದ್ರ ಶರ್ಮ ಅವರೆಲ್ಲ ಸ್ಪರ್ಧಿಸಿದ್ದ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಬಂತು. ಅದು ನನ್ನ ಕಣ್ಣೀರಿನಿಂದ ಮೂಡಿದ ಕೃತಿ. ನಮ್ಮ ನಮ್ಮ ಕಣ್ಣೀರುಗಳನ್ನು, ನಿಟ್ಟುಸಿರುಗಳನ್ನು ಹಿಂಬಾಲಿಸುತ್ತ ಹೋದರೆ ನೈಜ ಕತೆಗಳೋ ಕಾದಂಬರಿಗಳೋ ಬರೆಸಿಕೊಳ್ಳುತ್ತವೆ.

  • ಟಿಎನ್ ಸೀತಾರಾಮ್ ಹೀಗೆ ತಮ್ಮ ಬದುಕಿನಿಂದ ಆಯ್ದ ಒಂದು ಘಟನೆಯನ್ನು ಎತ್ತಿಕೊಂಡು, ಅದಕ್ಕೂ ತಮ್ಮ ಸೃಜನಶೀಲತೆಗೂ ಇದ್ದ ಸಂಬಂಧವನ್ನು ವಿವರಿಸುತ್ತಾ ಇದ್ದರೆ ಎದುರು ಕುಳಿತ ಕಥೆಕೂಟಿಗರು ಮಂತ್ರಮುಗ್ಧ.

ಸಕಲೇಶಪುರದ ಮಕ್ಕಿತಿಟ್ಟದಲ್ಲಿ ನಡೆದ ʼಕಥೆಕೂಟʼ ವಾಟ್ಸ್ಯಾಪ್‌ ಗುಂಪಿನ ಒಂಬತ್ತನೇ ವಾರ್ಷಿಕೋತ್ಸವ ಹಾಗೂ ಆರನೇ ಸಮಾವೇಶದ ಎರಡನೇ ದಿನ ನಡೆದ ‘ಮುಕ್ತಕಥಾ’ ಸಂವಾದ ಕಾರ್ಯಕ್ರಮದಲ್ಲಿ ಟಿಎನ್ನೆಸ್ ಮತ್ತು ಡುಂಡಿರಾಜ್ ತಮ್ಮ ಕಥಾಜೀವನ- ಕಾವ್ಯಜೀವನದ ಅಂತರಂಗವನ್ನು ತೆರೆದಿಟ್ಟರು.

ನಾವು ನೊಂದ ನೋವಿನಲ್ಲಿ ನಮ್ಮ ಜೀವವಿರುತ್ತದೆ. ನಮ್ಮ ಕಣ್ಣೀರು ನಿಟ್ಟುಸಿರನ್ನು ಹಿಂಬಾಲಿಸಿದಾಗಲೇ ನಾವು ಬರೆಯಬೇಕಾದ ಕತೆ ಸಿಗುತ್ತದೆ. ಹಾಗಾಗಿ ನಾನು ಬರೆಯುವ ಕತೆಗಳಲ್ಲಿ ನಿಜವಾದ ನಾನು ಇರುತ್ತೇನೆ. ಹೊರತು, ನಿಮ್ಮ ಜೊತೆ ಒಡನಾಡುತ್ತಿರುವ ನಾನು ಸುಳ್ಳಿರಬಹುದು. ಆದರೆ ನನ್ನ ಕತೆಗಳು ಸುಳ್ಳಲ್ಲ. ನನ್ನ ಕತೆಯೇ ಸತ್ಯ ಎಂದರು ಟಿಎನ್ನೆಸ್. ನಾನು ಇದುವರೆಗೂ ಸೀರಿಯಲ್‌ಗಳಿಗಾಗಿ ಪ್ರತಿದಿನದಂತೆ ಸುಮಾರು 7000 ಕತೆಗಳನ್ನು ಬರೆದಿದ್ದೇನೆ. ಮನುಷ್ಯ ಮೂಲಭೂತವಾಗಿ ಕತೆ ಕಟ್ಟುವವನಾದ್ದರಿಂದ ಇದು ಸಾಧ್ಯವಾಗಿದೆ ಎಂದವರ ಮಾತು.

ಹಾಸ್ಯಕವನ, ಹನಿಕವನ ಬರೆಯುವುದು ನನ್ನ ಆಯ್ಕೆಯಾಗಿರಲಿಲ್ಲ. ಅದು ಅನಿವಾರ್ಯ ಆಗಿತ್ತು. ಮಾಧ್ಯಮಗಳೂ ಕೆಲವೊಮ್ಮೆ ಅದನ್ನೇ ಬಯಸುತ್ತಿದ್ದವು. ನನಗೆ ಗಂಭೀರ ಕಾವ್ಯ ರಚನೆ ಇಷ್ಟವೇ. ಹಲವು ಗಂಭೀರ ಕಾವ್ಯ ರಚಿಸಿದ್ದೇನೆ ಕೂಡಾ. ಆದರೆ ಜನರ ಗಮನ ಹೆಚ್ಚು ಸೆಳೆದದ್ದು ಹನಿಗವನಗಳು ಎಂಬುದು ಡುಂಡಿರಾಜ್ ಮಾತಾಗಿತ್ತು. ಹಾಲು ಮಾರಲು ಬರುತ್ತಿದ್ದ ಹುಡುಗಿಯ ಬಗ್ಗೆ ಬರೆದ ಮೊದಲ ಕವನ ನೆನಪಿಸಿಕೊಂಡರು ಡುಂಡಿ.

ಗಂಭೀರ ಕವನ ಬರೆಯಲು ಸಾಕಷ್ಟು ಜನರಿದ್ದಾರೆ; ಆದರೆ ಹನಿಗವನ ಬರೆಯುವುದರಲ್ಲಿ ನಿನಗೆ ಸ್ಪರ್ಧಿಗಳಿಲ್ಲ ಎಂದು ಗೆಳೆಯ ಬಿಆರೆಲ್ ತನಗೆ ಒತ್ತಾಸೆಯಾಗಿ ನಿಂತುದನ್ನು ಡುಂಡಿ ನೆನಪಿಸಿಕೊಂಡರು. ಆತ್ಮತೃಪ್ತಿಯ ರಚನೆಗಳು ಮತ್ತು ಜನಪ್ರಿಯ ರಚನೆಗಳು- ಎರಡರ ನಡುವೆ ಭೇದ ಇದ್ದೇ ಇರುತ್ತದೆ. ಹೊಟ್ಟೆಪಾಡಿನ ಪ್ರಶ್ನೆ ಬಂದಾಗ ಜನಪ್ರಿಯ ರಚನೆಗಳು ಅನಿವಾರ್ಯವಾಗುತ್ತವೆ; ಆತ್ಮತೃಪ್ತಿ ಬದಿಗೆ ಸರಿಯುತ್ತದೆ ಎಂಬುದು ಇಬ್ಬರ ಒಕ್ಕೊರಲ ಉತ್ತರವಾಗಿತ್ತು.

ಅನಂತ ಕುಣಿಗಲ್ ಚುರುಕಾದ ಪ್ರಶ್ನೆಗಳ ಮೂಲಕ ಈ ಕಾರ್ಯಕ್ರಮ ನಡೆಸಿಕೊಟ್ಟರು. ಕವಿತಾ ಹೆಗಡೆ ಅಭಯಂ ಕಾರ್ಯಕ್ರಮವನ್ನು ನಿರ್ವಹಿಸಿದರು. ಜೋಗಿ, ಗೋಪಾಲಕೃಷ್ಣ ಕುಂಟಿನಿ ಉಪಸ್ಥಿತರಿದ್ದರು.

ಇದನ್ನೂ ಓದಿ: Pustaka Sante : ವೀರಲೋಕ ಪುಸ್ತಕ ಸಂತೆ ಅದ್ಧೂರಿ ಆರಂಭ, ವೆರಿ ಗುಡ್ ಎಂದು ಬೆನ್ನುತಟ್ಟಿದ ಸಿಎಂ ಸಿದ್ದರಾಮಯ್ಯ

Continue Reading

ಅಂಕಣ

ನನ್ನ ದೇಶ ನನ್ನ ದನಿ ಅಂಕಣ: “ನೀವು ಭಾರತೀಯರೋ, ರಾಷ್ಟ್ರೀಯರೋ?” ಎಮರ್ಜೆನ್ಸಿಯ ಕರಾಳ ನೆನಪು

ನನ್ನ ದೇಶ ನನ್ನ ದನಿ ಅಂಕಣ: ಇದೆಲ್ಲಾ ನಡೆದು ನಲವತ್ತೇಳು ವರ್ಷಗಳೇ ಉರುಳಿವೆ. ಕರಾಳ ತುರ್ತುಪರಿಸ್ಥಿತಿಯ ನೂರೆಂಟು ನೆನಪುಗಳು ಕಣ್ಮುಂದೆ ಸುತ್ತುತ್ತವೆ. ಇಡೀ ದೇಶದಲ್ಲಿ ಈ ತುರ್ತುಪರಿಸ್ಥಿತಿಯನ್ನು ವಿರೋಧಿಸಿ ಇಂದಿರಾ ಗಾಂಧಿಯವರ ಕಾಂಗ್ರೆಸ್ ಪಕ್ಷಕ್ಕೆ ಸೇರಿದ ಒಬ್ಬನೇ ಒಬ್ಬ MP, MLA, MLC ಸತ್ಯಾಗ್ರಹ ಮಾಡಲಿಲ್ಲ, ಪ್ರತಿಭಟಿಸಲಿಲ್ಲ, ಬಂಧನಕ್ಕೆ ಒಳಗಾಗಲಿಲ್ಲ. ನಾವೇ ಸ್ವಾತಂತ್ರ್ಯಕ್ಕಾಗಿ ಹೋರಾಡಿದೆವು, ಬ್ರಿಟಿಷರಿಂದ ನಾವೇ ಸ್ವಾತಂತ್ರ್ಯವನ್ನು ಪಡೆದೆವು, ಎಂದು ದಶಕಗಳಿಂದ ಸುಳ್ಳು ಹೇಳಿಕೊಂಡೇ ಬಂದ ಕಾಂಗ್ರೆಸ್ಸಿನವರಿಗೆ ಇದು ಪ್ರಜಾದ್ರೋಹ, ಇದು ಸ್ವಾತಂತ್ರ್ಯಹರಣ, ಈ ತುರ್ತುಪರಿಸ್ಥಿತಿಯು ಅನ್ಯಾಯದ ಪರಮಾವಧಿ ಎಂದು ಅನ್ನಿಸಲೇ ಇಲ್ಲ!

VISTARANEWS.COM


on

indira gandhi ನನ್ನ ದೇಶ ನನ್ನ ದನಿ
Koo

ಇಂದು ತುರ್ತುಪರಿಸ್ಥಿತಿ ಹೇರಿಕೆಯ ʼಚಿನ್ನದ “ಹಬ್ಬʼ !

ajjampura manjunath ನನ್ನ ದೇಶ ನನ್ನ ದನಿ

ನನ್ನ ದೇಶ ನನ್ನ ದನಿ ಅಂಕಣ: ಅವು ತುರ್ತುಪರಿಸ್ಥಿತಿಯ (internal Emergency) ದಿನಗಳು. ತಮ್ಮ ಅಧಿಕಾರ ಉಳಿಸಿಕೊಳ್ಳುವ ಏಕೈಕ ದುರುದ್ದೇಶದಿಂದ ಇಂದಿರಾ ಗಾಂಧಿಯವರು (Indira Gandhi) ದೇಶದಾದ್ಯಂತ ಆಂತರಿಕ ತುರ್ತುಪರಿಸ್ಥಿತಿ ಹೇರಿದ್ದರು. ಎಲ್ಲ ಮಾಧ್ಯಮದವರು, ಓರಾಟಗಾರರು, ಬುದ್ಧಿಜೀವಿಗಳು, ಬಹುತೇಕ ವಿರೋಧ ಪಕ್ಷಗಳವರು ಶರಣಾಗತರಾಗಿಬಿಟ್ಟಿದ್ದರು, ಅಷ್ಟೇ ಅಲ್ಲ, ಮನೆಯಲ್ಲಿ ಮಂಚದ ಅಡಿಯಲ್ಲಿ ಅಡಗಿಕೊಂಡುಬಿಟ್ಟಿದ್ದರು. ತುರ್ತುಪರಿಸ್ಥಿತಿಯನ್ನು ರಾಷ್ಟೀಯ ಸ್ವಯಂಸೇವಕ ಸಂಘ (RSS) ಮತ್ತು ಅದರ ಪರಿವಾರ ಸಂಘಟನೆಗಳು ಮಾತ್ರವೇ ವಿರೋಧಿಸುತ್ತಿದ್ದುದರಿಂದ ಇಂದಿರಾ ಗಾಂಧಿಯವರು ಆರೆಸ್ಸೆಸ್ ಎಂದರೆ ಸಿಡಿಮಿಡಿಗೊಳ್ಳುತ್ತಿದ್ದರು.

1975ರ ಆ ವರ್ಷದ ಗಾಂಧೀ ಜಯಂತಿ (Gandhi Jayanthi) ಒಂದು ವಿಶೇಷ ಸಂದೇಶ ಹೊತ್ತು ತಂದಿತು. ಆದರೆ ಆ ಸಂದೇಶ, ಸರಕಾರದ ಕಾರ್ಯಕ್ರಮಗಳ ಭಾಗವಾಗಿ ಮೂಡಿಬಂದಿರಲಿಲ್ಲ. ಆ ದಿನಗಳಲ್ಲಿ ಗಾಂಧೀಜಯಂತಿ ಆಚರಿಸಿದವರು ಸಂಘದ ಭೂಗತ ಕಾರ್ಯಕರ್ತರು. ಎದೆಯ ಮೇಲೆ ಧರಿಸಲು ಗಾಂಧೀ ಬಿಲ್ಲೆಗಳು, ಗೋಡೆಗಳನ್ನು ಅಲಂಕರಿಸಲು ಗಾಂಧೀ ಭಿತ್ತಿಚಿತ್ರಗಳು. ಎರಡರಲ್ಲೂ ಗಾಂಧೀ ಚಿತ್ರದ ಕೆಳಗೆ “ಅಸತ್ಯ, ಅನ್ಯಾಯ, ದಬ್ಬಾಳಿಕೆಗಳಿಗೆ ತಲೆಬಾಗುವುದು ಹೇಡಿತನ” ಎನ್ನುವ ಗಾಂಧೀ ಉಕ್ತಿ. ಆದರೆ ಅಂದಿನ ಇಂದಿರಾ – ದೇವರಾಜ ಅರಸು ಅವರ ಕಾಂಗ್ರೆಸ್ ಸರ್ಕಾರಗಳಿಗೆ ಗಾಂಧಿಯ ಚಿತ್ರ, ಗಾಂಧಿಯ ಉಕ್ತಿ, ಗಾಂಧಿಯ ನೆನಪು ಎಲ್ಲಾ ನಿಷಿದ್ಧವಾಗಿತ್ತು.

ಗಾಂಧೀ ಭಿತ್ತಿಪತ್ರ ಅಂಟಿಸುತ್ತಿದ್ದ ಹಲವಾರು ಜನರನ್ನು ಪೊಲೀಸರು ಬಂಧಿಸಿದರು. ಅಹಿಂಸೆ, ಅಹಿಂಸೆ ಎಂದವರ ಚಿತ್ರ ಹಿಡಿದಿದ್ದಕ್ಕೆ ಹೊಡೆದು ಬಡಿದು ಬಂಧಿಸಿ, ಅವರ ಮೇಲೆ ಮೊಕದ್ದಮೆ ಹೂಡಲಾಯಿತು. ಆಪಾದಿತರನ್ನು ಪೊಲೀಸರು ನ್ಯಾಯಾಧೀಶರ ಮುಂದೆ ತಂದು ನಿಲ್ಲಿಸಿದಾಗ, ನ್ಯಾಯಾಧೀಶರು ತಮ್ಮ ಕಣ್ಣು – ಕಿವಿಗಳನ್ನು ನಂಬದಾದರು. “ಏನು, ಈ ದೇಶದಲ್ಲಿ ಗಾಂಧೀ ಚಿತ್ರ ಅಂಟಿಸುವುದು ಕ್ರಿಮಿನಲ್ ಅಪರಾಧವಾಯಿತೇ?” ಎಂದು ಪ್ರಶ್ನಿಸಿದರು. ಇದಕ್ಕೆ ಪೊಲೀಸಿನವರು ಏನು ಹೇಳಿಯಾರು! “ಇವರೆಲ್ಲಾ ಆರೆಸ್ಸೆಸ್ ಕಾರ್ಯಕರ್ತರು” ಎಂಬ ನೆಪ ಹೇಳಿದರು. “ಇರಬಹುದು, ಆದರೆ ಇವರು ಮಾಡಿದ ಅಪರಾಧವೇನು?” ಎಂದ ನ್ಯಾಯಾಧೀಶರ ಪ್ರಶ್ನೆಗಳಿಗೆ ಪೊಲೀಸರು ನಿರುತ್ತರರಾದರು. ನ್ಯಾಯಾಧೀಶರು (ಕೆಲವೆಡೆ) ಪೊಲೀಸರಿಗೆ ಛೀಮಾರಿ ಹಾಕಿ ಬಂಧಿತರನ್ನು ಬಿಡುಗಡೆ ಮಾಡಿದರು.

ಹಿಂದೆ ಉಪ್ಪಿನ ಸತ್ಯಾಗ್ರಹದಲ್ಲಿ, ಭಾರತ್ ಛೋಡೋ ಚಳವಳಿಯಲ್ಲಿ ಭಾಗವಹಿಸಿ ‘ವಂದೇ ಮಾತರಂ’, ‘ಮಹಾತ್ಮಾ ಗಾಂಧೀ ಕೀ ಜೈ’, ‘ಬೋಲೋ ಭಾರತ್ ಮಾತಾ ಕೀ ಜೈ’ ಎಂದು ಘೋಷಿಸುತ್ತಿದ್ದವರ ಮೇಲೆ ಬ್ರಿಟಿಷ್ ಪೊಲೀಸರ ಲಾಠಿಯೇಟು, ಬೂಟಿನೇಟು ಬೀಳುತ್ತಿತ್ತು. ‘ಸ್ವಾತಂತ್ರ್ಯ’ ಬಂದ ಮೇಲೂ ಹಾಗೆ ಘೋಷಣೆ ಕೂಗಿದವರ ಮೇಲೆ, ಕಾಂಗ್ರೆಸ್ ಸರಕಾರದ ಪೊಲೀಸರ ಲಾಠಿಯೇಟು ಬಿದ್ದುದು, ಬರಿಯ ವಿಸ್ಮಯದ – ವಿಷಾದಭಾವದ ಮಾತಲ್ಲ. ಸ್ವಾತಂತ್ರ್ಯದ ಪರಿಕಲ್ಪನೆಯನ್ನು ನಾವು ಸರಿಯಾಗಿ ಅರ್ಥಮಾಡಿಕೊಳ್ಳದೆಯೇ, ಕಾಂಗ್ರೆಸ್ಸಿನಂತಹ ಪಕ್ಷಗಳನ್ನು ಬೆಂಬಲಿಸಿ ಮತ ಹಾಕುವುದರ ದುಷ್ಪರಿಣಾಮಗಳ ಅಂತಿಮ ಹಂತವಿದು.

1975ರ ನವೆಂಬರ್ 14ರಿಂದ ದೇಶಾದ್ಯಂತ ಪ್ರತಿಭಟನೆಯನ್ನು ಆರೆಸ್ಸೆಸ್ ಪರಿವಾರ ಸಂಘಟನೆಗಳು ಹಮ್ಮಿಕೊಂಡಿದ್ದವು. ಬಹುಪಾಲು ರಾಜಕಾರಣಿಗಳು, ನಾಯಕರು ಸೆರೆಮನೆಯಲ್ಲಿದ್ದರು. ಪ್ರತಿಭಟನೆಯನ್ನು ವಿಫಲಗೊಳಿಸಲು ಅಂದಿನ ಕೇಂದ್ರ ಸರ್ಕಾರ ಮುನ್ನೆಚ್ಚರಿಕೆಯ ಬಂಧನಗಳಿಗೆ (Preventive Arrests) ಆಜ್ಞೆ ಮಾಡಿತ್ತು. ಆ ಕಾರಣಕ್ಕೆ ನಾವೆಲ್ಲಾ ಬಂಧನಕ್ಕೆ ಒಳಗಾದುದು ನವೆಂಬರ್ 13ರಂದು. ಪೊಲೀಸರು “ನೀವು ಭಾರತೀಯರೋ ರಾಷ್ಟ್ರೀಯರೋ?” ಎಂದು ಪ್ರಶ್ನೆ ಹಾಕಿದಾಗ ನಾನೂ ನನ್ನ ಉಳಿದ ಸ್ವಯಂಸೇವಕ ಬಂಧುಗಳೂ ಕಕ್ಕಾಬಿಕ್ಕಿಯಾದೆವು. ನಮ್ಮ ಮುಂದೆ PSR (Prisoners’ Search Register) ಹರಡಿಕೊಂಡಿತ್ತು. ಏನು ಹೇಳಬೇಕೆಂಬುದೇ ತಿಳಿಯಲಿಲ್ಲ. ಮುಗ್ಧತೆಯಿಂದ “ನಾವೆಲ್ಲಾ ಭಾರತೀಯರೂ ಹೌದು, ರಾಷ್ಟ್ರೀಯರೂ ಹೌದು” ಎಂದೆವು. “ಎರಡರಲ್ಲಿ ಒಂದು ಹೇಳ್ರೀ” ಎಂದು ಅವರು ಅಬ್ಬರಿಸಿದಾಗ ಇನ್ನಷ್ಟು ಗೊಂದಲ. ಕೊನೆಗೆ ಆ ಪ್ರಶ್ನೆ ನಾವು ರಾಷ್ಟೀಯ ಸ್ವಯಂಸೇವಕ ಸಂಘಕ್ಕೆ ಸಂಬಂಧಿಸಿದವರೋ, ಭಾರತೀಯ ಜನಸಂಘಕ್ಕೆ ಸಂಬಂಧಿಸಿದವರೋ ಎಂಬುದಾಗಿತ್ತು ಎಂದು ತಿಳಿದಾಗ, ಗೊಂದಲದಿಂದ ಪರಿಹಾರ. ನಾವೆಲ್ಲಾ ಒಕ್ಕೊರಲಿನಿಂದ “ನಾವು ರಾಷ್ಟೀಯ ಸ್ವಯಂಸೇವಕ ಸಂಘದ ಸ್ವಯಂಸೇವಕರು” ಎಂದೆವು. ಅಂದಿನ ದಿನಮಾನಗಳಲ್ಲಿ ರಾಷ್ಟೀಯ ಸ್ವಯಂಸೇವಕ ಸಂಘದ ಹೆಸರನ್ನು ಸರಿಯಾಗಿ ಉಚ್ಚರಿಸಲು, ಉಲ್ಲೇಖಿಸಲು ಬಹಳ ಜನರಿಗೆ ಬರುತ್ತಿರಲಿಲ್ಲ (ಕೆಲವರಿಗೆ ಈಗಲೂ ಗೊಂದಲ!).

ಇದೆಲ್ಲಾ ನಡೆದು ನಲವತ್ತೇಳು ವರ್ಷಗಳೇ ಉರುಳಿವೆ. ಕರಾಳ ತುರ್ತುಪರಿಸ್ಥಿತಿಯ ನೂರೆಂಟು ನೆನಪುಗಳು ಕಣ್ಮುಂದೆ ಸುತ್ತುತ್ತವೆ. ಇಡೀ ದೇಶದಲ್ಲಿ ಈ ತುರ್ತುಪರಿಸ್ಥಿತಿಯನ್ನು ವಿರೋಧಿಸಿ ಇಂದಿರಾ ಗಾಂಧಿಯವರ ಕಾಂಗ್ರೆಸ್ ಪಕ್ಷಕ್ಕೆ ಸೇರಿದ ಒಬ್ಬನೇ ಒಬ್ಬ MP, MLA, MLC ಸತ್ಯಾಗ್ರಹ ಮಾಡಲಿಲ್ಲ, ಪ್ರತಿಭಟಿಸಲಿಲ್ಲ, ಬಂಧನಕ್ಕೆ ಒಳಗಾಗಲಿಲ್ಲ ಎಂಬುದು ಇಂದಿಗೂ ಪ್ರಶ್ನೆಯಾಗಿ ಕಾಡುತ್ತದೆ. ಎಂತಹ ಪಕ್ಷವಿದು. ನಾವೇ ಸ್ವಾತಂತ್ರ್ಯಕ್ಕಾಗಿ ಹೋರಾಡಿದೆವು, ಬ್ರಿಟಿಷರಿಂದ ನಾವೇ ಸ್ವಾತಂತ್ರ್ಯವನ್ನು ಪಡೆದೆವು, ಎಂದು ದಶಕಗಳಿಂದ ಸುಳ್ಳು ಹೇಳಿಕೊಂಡೇ ಬಂದ ಕಾಂಗ್ರೆಸ್ಸಿನವರಿಗೆ ಇದು ಪ್ರಜಾದ್ರೋಹ, ಇದು ಸ್ವಾತಂತ್ರ್ಯಹರಣ, ಈ ತುರ್ತುಪರಿಸ್ಥಿತಿಯು ಅನ್ಯಾಯದ ಪರಮಾವಧಿ ಎಂದು ಅನ್ನಿಸಲೇ ಇಲ್ಲ! ಕಾಂಗ್ರೆಸ್ಸಿನ ಒಬ್ಬನೇ ಒಬ್ಬ MP ,MLA, MLC ತನ್ನ ಸ್ಥಾನಕ್ಕೆ ರಾಜೀನಾಮೆ ಕೊಡಲೇ ಇಲ್ಲ. ಕಾಸು ಮಾಡಿಕೊಳ್ಳುವ ಧಂಧೆಯನ್ನು ಎಲ್ಲ ಕಾಂಗ್ರೆಸ್ಸಿಗರೂ ಇನ್ನಷ್ಟು ನಿರಾಳವಾಗಿ ಮುಂದುವರಿಸಿಕೊಂಡುಹೋದರು. ಕಳೆದ ಏಳೆಂಟು ದಶಕಗಳ ಭಾರತೀಯ ಇತಿಹಾಸವನ್ನು ಅವಲೋಕಿಸಿದರೆ ಈ ಕಾಂಗ್ರೆಸ್ ಎನ್ನುವುದು ಕೇವಲ ಒಂದು ರಾಜಕೀಯ ಪಕ್ಷವಾಗಿರದೆ, ದೇಶಕ್ಕೆ ಅಂಟಿದ ಒಂದು ಶಾಪ, ಒಂದು ರೋಗ ಎಂಬುದು ಖಚಿತವಾಗುತ್ತದೆ.

ಗಾಂಧೀಜಿಯವರ ಕಾರ್ಯದರ್ಶಿಯಾಗಿದ್ದ ಪ್ಯಾರೇಲಾಲರು, ‘Mahatma Gandhi : The Last Phase’ ಎನ್ನುವ ಬೃಹತ್ ಗ್ರಂಥ ರಚಿಸಿದ್ದಾರೆ. ಅದನ್ನು ಗಾಂಧೀವಾದಿ ಕೆ.ವಿ.ಶಂಕರಗೌಡರು ‘ಮಹಾತ್ಮಾಗಾಂಧಿ: ಅಂತಿಮ ಹಂತ’ ಎಂದು ಅನುವಾದಿಸಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯವು ಹೊರತಂದಿರುವ ಈ ಸಂಪುಟಗಳು ಓದಲೇಬೇಕಾದ ಅಪೂರ್ವ ಮಾಹಿತಿಗಳನ್ನು ದಾಖಲೆಗಳನ್ನು ಸಂಗತಿಗಳನ್ನು ಒಳಗೊಂಡಿದೆ.

“ವಿಧಾನ ಪರಿಷತ್ತು ಮತ್ತು ವಿಧಾನಸಭೆಯ ಸದಸ್ಯರನೇಕರು, ಗಾಳಿ ಬಂದಾಗ ತೂರಿಕೋ ಎನ್ನುವ ರೀತಿಯಲ್ಲಿ ಹಣ ಮಾಡಲು ಹೊರಟಿದ್ದಾರೆ. ಕಾಂಗ್ರೆಸ್‍ನಲ್ಲಿ ತಲೆದೋರಿರುವ ಗುಂಪುಗಾರಿಕೆ ಮತ್ತು ಮಂತ್ರಿಗಳ ದೌರ್ಬಲ್ಯವನ್ನು ಕಂಡ ಜನರಲ್ಲಿ ಒಂದು ಬಗೆಯ ದಂಗೆಯ ಮನೋಭಾವ ಮೂಡುತ್ತಿದೆ. ಜನರು ಬ್ರಿಟಿಷ್ ಸರ್ಕಾರವೇ ವಾಸಿಯಾಗಿತ್ತು ಎನ್ನುತ್ತಿದ್ದಾರಲ್ಲದೆ, ಕಾಂಗ್ರೆಸ್ಸನ್ನು ಹಳಿಯುತ್ತಿದ್ದಾರೆ” ಎಂದರು. ಗಾಂಧೀಜಿ. ಸರಿಯಾಗಿ ಗಮನಿಸಿ. ಇದು ಸ್ವಾತಂತ್ರ್ಯ ಬಂದ ಕೆಲವೇ ದಿನಗಳ ಅನಂತರ ಗಾಂಧೀಜಿಯವರು ಹೇಳಿದ ಮಾತುಗಳು. ಡಿಸೆಂಬರ್ 1947ರಲ್ಲಿ ಮತ್ತೆ ಗಾಂಧೀಜಿ ಹೇಳಿದರು “ಕಾಂಗ್ರೆಸ್‍ನಂತಹ ಬೃಹತ್ ಸಂಸ್ಥೆಗಳಿಂದ ಭ್ರಷ್ಟಾಚಾರ, ಅಸತ್ಯ ಮುಂತಾದ ಪೀಡೆಗಳನ್ನು ಉಚ್ಚಾಟಿಸದೇ ಹೋದರೆ, ನಾಲ್ಕೂ ಕಡೆಗಳಿಂದ ಸ್ವಾರ್ಥಿಗಳು ಕಾಂಗ್ರೆಸ್ಸನ್ನು ಮುತ್ತಿ, ಈ ಸಂಸ್ಥೆಯು ಧೂಳೀಪಟವಾಗುತ್ತದೆ ಮತ್ತು ಹಾಗಾದಾಗ ನಾನು ಒಂದು ತೊಟ್ಟು ಕಣ್ಣೀರನ್ನೂ ಸುರಿಸುವುದಿಲ್ಲ. ದೊಡ್ಡ ರೋಗದಿಂದ ಬಳಲುತ್ತಿರುವ ರೋಗಿಯನ್ನು ಗುಣಮಾಡಲು ಸಾಧ್ಯವಿಲ್ಲದೆ ಹೋದರೆ, ರೋಗಿ ಸಾಯುವುದು ಮೇಲು” (ಪುಟ 721).

ಈ ಪರಿಪ್ರೇಕ್ಷ್ಯದಲ್ಲಿ, ತುರ್ತುಪರಿಸ್ಥಿತಿಯ ಹೇರಿಕೆಯ (25/6/1975) ವಾರ್ಷಿಕೋತ್ಸವದ ಕಹಿನೆನಪುಗಳ ಹಿನ್ನೆಲೆಯಲ್ಲಿ, ಸ್ವಾತಂತ್ರ್ಯದ ಪರಿಕಲ್ಪನೆಯ ಮೂಲದ್ರವ್ಯವು ನಮ್ಮಲ್ಲಿ ಅರ್ಥಪೂರ್ಣ ವಿಚಾರಗಳನ್ನು ಹೊಮ್ಮಿಸಲಿ.

ಇತಿಹಾಸ, ಸ್ವಾತಂತ್ರ್ಯ ಹೋರಾಟಗಳ ಸರಿಯಾದ ವಿಮರ್ಶಾತ್ಮಕ ವಿಶ್ಲೇಷಣೆಗಳು ನಮ್ಮ ಮೇಲೆ ಬೆಳಕು ಚೆಲ್ಲಲಿ, ನಮ್ಮನ್ನು ಕವಿದಿರುವ ಕತ್ತಲನ್ನು ಮತ್ತೊಮ್ಮೆ ನೀಗಲಿ.

ಇದನ್ನೂ ಓದಿ: ನನ್ನ ದೇಶ ನನ್ನ ದನಿ ಅಂಕಣ: ʼಹಿಂದೂಗಳೇ ಕೊಲೆಗಾರರುʼ ಎಂಬ ಭಾರತ ವಿರೋಧಿ ಬಹುಸಂಖ್ಯಾತ-ವಾದ

Continue Reading

ವಾಣಿಜ್ಯ

JioMart: ಕುಶಲಕರ್ಮಿಗಳು, ನೇಕಾರರ ಉತ್ತೇಜನಕ್ಕೆ ಜಿಯೋಮಾರ್ಟ್‌ನಿಂದ ಮತ್ತೊಂದು ಘೋಷಣೆ

JioMart: ಜಿಯೋಮಾರ್ಟ್‌ನಿಂದ ಸೋಮವಾರ ಮಹತ್ತರವಾದ ಸಹಭಾಗಿತ್ವವನ್ನು ಘೋಷಣೆ ಮಾಡಲಾಗಿದ್ದು, ಸಣ್ಣ ಪ್ರಮಾಣದ ಮಾರಾಟಗಾರರು, ಕುಶಲಕರ್ಮಿಗಳು ಹಾಗೂ ಸಾಂಪ್ರದಾಯಿಕರರು ಒಳಗೊಂಡಂತೆ ಅವರ ಬೆಳವಣಿಗೆಗೆ ಸಹಕರಿಸಬೇಕು ಹಾಗೂ ಅವರನ್ನು ಸಬಲಗೊಳಿಸಬೇಕು ಎಂಬ ದೃಷ್ಟಿಕೋನದ ಹಿನ್ನೆಲೆಯಲ್ಲಿ JASCOLAMPF ಹಾಗೂ JHARCRAFT ಜತೆಗೆ ಸಹಭಾಗಿತ್ವ ವಹಿಸಲಾಗಿದೆ.

VISTARANEWS.COM


on

Jiomart partnership with JASCOLAMPF and JHARCRAFT
Koo

ಮುಂಬೈ: ರಿಲಯನ್ಸ್ ರೀಟೇಲ್‌ನ ಇ-ಮಾರ್ಕೆಟ್ ಪ್ಲೇಸ್ ಅಂಗವಾದ ಜಿಯೋಮಾರ್ಟ್‌ನಿಂದ (JioMart) ಸೋಮವಾರ ಮಹತ್ತರವಾದ ಸಹಭಾಗಿತ್ವವನ್ನು ಘೋಷಣೆ ಮಾಡಲಾಗಿದ್ದು, ಸಣ್ಣ ಪ್ರಮಾಣದ ಮಾರಾಟಗಾರರು, ಕುಶಲಕರ್ಮಿಗಳು ಹಾಗೂ ಸಾಂಪ್ರದಾಯಿಕ ವೃತ್ತಿಯವರು ಒಳಗೊಂಡಂತೆ ಅವರ ಬೆಳವಣಿಗೆಗೆ ಸಹಕರಿಸಬೇಕು ಹಾಗೂ ಅವರನ್ನು ಸಬಲಗೊಳಿಸಬೇಕು ಎಂಬ ಉದ್ದೇಶದಿಂದ JASCOLAMPF ಹಾಗೂ JHARCRAFT ಜತೆಗೆ ಸಹಭಾಗಿತ್ವ ವಹಿಸಲಾಗಿದೆ.

ಅಂದ ಹಾಗೆ ಮೊದಲನೆಯದು ಜಾರ್ಖಂಡ್‌ನ ರಾಜ್ಯ ಸರ್ಕಾರಿ ಎಂಪೋರಿಯಂ ಹಾಗೂ ಎರಡನೆಯದು ಜಾರ್ಖಂಡ್ ರಾಜ್ಯ ಸರ್ಕಾರದ ಅಡಿಯಲ್ಲಿ ಕಾರ್ಯ ನಿರ್ವಹಿಸುವಂಥದ್ದು. ಜಾರ್ಖಂಡ್‌ನಲ್ಲಿನ ಕುಶಲಕರ್ಮಿಗಳ ಬದುಕಿನಲ್ಲಿ ಬಹುದೊಡ್ಡ ಬದಲಾವಣೆಯನ್ನು ತರುವ ನಿಟ್ಟಿನಲ್ಲಿ ಈ ಜಂಟಿ ಉಪಕ್ರಮವು ಬಹಳ ದೊಡ್ಡ ಮೈಲುಗಲ್ಲಾಗಿದೆ. ಮತ್ತು ಇದರೊಂದಿಗೆ ಜಿಯೋಮಾರ್ಟ್ ಮೂಲಕ ದೇಶದಾದ್ಯಂತ ತಲುಪುವುದಕ್ಕೆ ಅನುಕೂಲ ಆಗುತ್ತದೆ.

ಇದನ್ನೂ ಓದಿ: Team India : ಜಿಂಬಾಬ್ವೆ ಪ್ರವಾಸಕ್ಕೆ ಟೀಮ್ ಇಂಡಿಯಾ ಪ್ರಕಟ, ಶುಭ್​ಮನ್ ಗಿಲ್​ಗೆ ನಾಯಕತ್ವ

ಜಾರ್ಖಂಡ್‌ನ ಪಟ್ಟಣ ಮತ್ತು ನಗರಗಳಾದ ಗುಮ್ಲಾ, ಸರೈಕೆಲಾ ಹಾಗೂ ಪಲಮೌ ಸೇರಿದಂತೆ ಇತರೆಡೆಗಳಿಂದ ಅಪಾರ ಸಂಖ್ಯೆಯ ಕುಶಲಕರ್ಮಿಗಳನ್ನು ಜಿಯೋಮಾರ್ಟ್ ವೇದಿಕೆಗೆ ಕರೆತರುವಲ್ಲಿ ಈ ಸಹಯೋಗ ನೆರವಾಗಿದೆ. ಇದೀಗ ಈ ಕುಶಲಕರ್ಮಿಗಳು ತನ್ನ ಅದ್ಭುತ ಕರಕುಶಲ ವಸ್ತುಗಳನ್ನು ಪ್ರದರ್ಶಿಸುವುದಕ್ಕೆ ಮಾತ್ರವಲ್ಲ, ಅದರ ಜತೆಗೆ ದೇಶದಾದ್ಯಂತ ಇರುವಂಥ ಗ್ರಾಹಕರನ್ನು ತಲುಪುವುದಕ್ಕೆ ಮತ್ತು ತಮ್ಮ ವ್ಯಾಪಾರ- ವ್ಯವಹಾರವನ್ನು ವಿಸ್ತರಿಸುವುದಕ್ಕೆ ಸಹಾಯ ಆಗುತ್ತದೆ.

ಜಾರ್ಖಂಡ್‌ನ ರಾಜ್ಯ ಸರ್ಕಾರದ ಎಂಪೋರಿಯಂ ಅನ್ನು JASCOLAMPF ಎಂದು ಕರೆಯಲಾಗುತ್ತದೆ. ತಮ್ಮ ವ್ಯವಹಾರವನ್ನು ಆರಂಭಿಸುವುದಕ್ಕೆ ಯಾವುದೇ ಸಮಸ್ಯೆ ಆಗದಂಥ, ಗ್ರಾಹಕರಿಗೆ ಸಂಪೂರ್ಣ ಪಾರದರ್ಶಕವಾದಂಥ ಹಾಗೂ ಜತೆಗೆ ಮೀಸಲು ಇರಿಸಿದಂಥ ಮಾರ್ಕೆಟಿಂಗ್ ಬೆಂಬಲದೊಂದಿಗೆ ಇನ್ನು ಲಭ್ಯವಿರುತ್ತದೆ.

ಈ ಸಹಯೋಗದ ಮೂಲಕ ಜಿಯೋಮಾರ್ಟ್‌ನ ಲಕ್ಷಾಂತರ ಸಂಖ್ಯೆಯ ಗ್ರಾಹಕರು ಜಿಐ- ಟ್ಯಾಗ್ ಆದಂಥ ಮರದ ಉತ್ಪನ್ನಗಳು, ಬಿದಿರಿನ ವಸ್ತುಗಳು, ಧೋಕ್ರಾ ಕಲಾಕೃತಿಗಳು, ಟೆರಾಕೋಟಾ ವಸ್ತುಗಳು, ಲ್ಯಾಕ್ ಬಳೆಗಳು, ಹತ್ತಿ ಕೈಮಗ್ಗ, ಅಪ್ಲಿಕ್ ವರ್ಕ್, ಝರ್ಡೋಜಿ ವರ್ಕ್, ತಸರ್ ಕೈ ಮಗ್ಗ ಸೀರೆಗಳು, ಪುರುಷರ ಅಂಗಿಗಳು, ಹೊಲಿಗೆ ಹಾಕಿರದಂಥ ಡ್ರೆಸ್ ಮಟಿರೀಯಲ್ ಗಳು, ಕರಕುಶಲ ಬ್ಯಾಗ್, ಬೆಡ್ ಶೀಟ್ ಗಳು, ಪೇಂಟಿಂಗ್ ಗಳು, ಗೃಹಾಲಂಕಾರ ವಸ್ತುಗಳು, ಮತ್ತು ಇನ್ನೂ ಹಲವು ಕೈಯಿಂದ ಸಿದ್ಧಪಡಿಸಲಾದ ಹಲವು ವಿಧದ ಕಲಾ ವಸ್ತುಗಳು ದೊರೆಯುತ್ತವೆ.

ಇದರಿಂದಾಗಿ ಕೇವಲ ಸ್ಥಳೀಯ ಕರಕುಶಲತೆ ಜತೆಗೆ ನಿಕಟ ಬಂಧವನ್ನು ಮಾತ್ರ ಸೃಷ್ಟಿಸುವುದಲ್ಲದೆ “ವೋಕಲ್ ಫಾರ್ ಲೋಕಲ್”ಎಂಬ ಸ್ಥಳೀಯ ವಸ್ತುಗಳಿಗೆ ಉತ್ತೇಜನ ನೀಡಬೇಕು ಎಂಬ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಆತ್ಮನಿರ್ಭರ್ ಭಾರತ್ ದೃಷ್ಟಿಕೋನದೊಂದಿಗೆ ಸಾಗುತ್ತದೆ.

ಇದನ್ನೂ ಓದಿ: Pralhad Joshi: ಮಾತೃಭಾಷೆ, ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಸಚಿವ ಪ್ರಲ್ಹಾದ್‌ ಜೋಶಿ

ಈ ಕುರಿತು ಜಾರ್ಖಂಡ್ ಸ್ಟೇಟ್ ಕೋ-ಆಪರೇಟಿವ್ ಲ್ಯಾಕ್ ಮಾರ್ಕೆಟಿಂಗ್ ಅಂಡ್ ಪ್ರೊಕ್ಯೂರ್‌ಮೆಂಟ್ ಫೆಡರೇಷನ್ ಲಿಮಿಟೆಡ್ (JASCOLAMPF) ವ್ಯವಸ್ಥಾಪಕ ನಿರ್ದೇಶಕ ರಾಕೇಶ್ ಕುಮಾರ್ ಸಿಂಗ್ ಮಾತನಾಡಿ, “ಜಾರ್ಖಂಡ್‌ನ ಕರಕುಶಲ ಕಲಾವಿದರು, ಕೈಮಗ್ಗ ನೇಕಾರರು ಮತ್ತು ಕುಶಲಕರ್ಮಿಗಳು ಈ ಪ್ರದೇಶದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಸಾಕಾರಗೊಳಿಸುವ ಅದ್ಭುತ ಕೌಶಲಗಳನ್ನು ಹೊಂದಿದ್ದಾರೆ.

ಅವರೊಂದಿಗೆ ಸಹಯೋಗವು ಜಾರ್ಖಂಡ್‌ನ ರೋಮಾಂಚಕ ಕರಕುಶಲತೆ ಮತ್ತು ಕಾಲಾತೀತ ಸಂಪ್ರದಾಯಗಳಲ್ಲಿ ಆಳವಾದ ತೊಡಗುಕೊಳ್ಳುವಿಕೆಗೆ ಭರವಸೆ ನೀಡುತ್ತದೆ. ಆದರೆ ಇದು ಜಾರ್ಖಂಡ್‌ನ ಇತರ ಎಂಎಸ್‌ಎಂಇ (ಕಿರು, ಸಣ್ಣ ಮತ್ತು ಮಧ್ಯಮ ಉದ್ಯಮಗಳು) ತಯಾರಕರಿಗೆ ಸಹ ಪ್ರಯೋಜನಗಳನ್ನು ನೀಡುತ್ತದೆ. ಆದರೂ ಹಂಚಿಕೆಯ ಜ್ಞಾನ ಮತ್ತು ಅವಕಾಶಗಳ ಮೂಲಕ, ಈ ಬಾಂಧವ್ಯದ ಬೆಳವಣಿಗೆ, ನಾವೀನ್ಯತೆ ಮತ್ತು ಜಾರ್ಖಂಡ್‌ನ ಗುರುತನ್ನು ವ್ಯಾಖ್ಯಾನಿಸುವ ಸಂಕೀರ್ಣವಾದ ಕರಕುಶಲತೆಗೆ ಗಹನವಾದ ಮೆಚ್ಚುಗೆಯನ್ನು ನೀಡುತ್ತದೆ ಎಂದು ತಿಳಿಸಿದ್ದಾರೆ.

ಜಾರ್ಖಂಡ್ ಸಿಲ್ಕ್ ಟೆಕ್ಸ್‌ಟೈಲ್ ಮತ್ತು ಕರಕುಶಲ ಅಭಿವೃದ್ಧಿ ನಿಗಮ ಲಿಮಿಟೆಡ್ (JHARCRAFT) ನ ಉಪ ಪ್ರಧಾನ ವ್ಯವಸ್ಥಾಪಕಿ ಅಶ್ವಿನಿ ಸಹಾಯ್ ಮಾತನಾಡಿ, “ದೇಶೀಯ ಉತ್ಪನ್ನಗಳ ವಿಶಿಷ್ಟ ಅಗತ್ಯಗಳನ್ನು ಅರ್ಥ ಮಾಡಿಕೊಳ್ಳುವ ಜಿಯೋಮಾರ್ಟ್ ನಂತಹ ಸ್ಥಳೀಯ ವೇದಿಕೆಯಲ್ಲಿ ಪ್ರಾರಂಭಿಸಲು ನಾವು ಉತ್ಸುಕರಾಗಿದ್ದೇವೆ. ನಮಗೆ, ಈ ಬಿಡುಗಡೆಯು ಜಾರ್ಖಂಡ್‌ನ ವೈವಿಧ್ಯಮಯ ಕಲಾ ಪ್ರಕಾರಗಳೊಂದಿಗೆ ಜಿಯೋಮಾರ್ಟ್ ಮಾರುಕಟ್ಟೆಯನ್ನು ಶ್ರೀಮಂತಗೊಳಿಸುವ ಬದ್ಧತೆಯ ಸಂಕೇತವಾಗಿದೆ. ಆ ಮೂಲಕ ಕುಶಲಕರ್ಮಿಗಳಿಗೆ ಪ್ರಯೋಜನವನ್ನು ನೀಡುತ್ತದೆ ಮತ್ತು ಭಾರತದ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಕಾಪಾಡುತ್ತದೆ ಎಂದು ತಿಳಿಸಿದರು.

ಇದನ್ನೂ ಓದಿ: Artificial Colours Ban: ರಾಜ್ಯದಲ್ಲಿ ಚಿಕನ್‌, ಫಿಶ್‌ ಕಬಾಬ್‌ನಲ್ಲಿ ಕೃತಕ ಬಣ್ಣ ಬಳಕೆ ನಿಷೇಧ!

2022ರಲ್ಲಿ ಪ್ರಾರಂಭ ಆದಾಗಿನಿಂದ ಜಿಯೋಮಾರ್ಟ್ ದೇಶವ್ಯಾಪಿ 20 ಸಾವಿರ ಕುಶಲಕರ್ಮಿಗಳು ಮತ್ತು ನೇಕಾರರಿಗೆ ಬಲ ತುಂಬಿದೆ. ಇಂಥ ಸರ್ಕಾರಿ ಸಂಸ್ಥೆಗಳ ಜತೆಗೆ ಸಹಭಾಗಿತ್ವ ವಹಿಸುವ ಮೂಲಕ ಡಿಜಿಟಲ್ ವಿಭಜನೆಯಿಂದ ಸೃಷ್ಟಿ ಆಗಿರುವ ಕಂದಕದ ಮಧ್ಯೆ ಸೇತುವೆ ನಿರ್ಮಿಸುವುದಕ್ಕೆ ಹಾಗೂ ಕುಶಲಕರ್ಮಿ ಸಮುದಾಯದ ಏಳ್ಗೆಗೆ ಸಹಕಾರಿ ಆಗುತ್ತದೆ. ಇನ್ನೂ ಮುಂದುವರಿದು ಕರಕುಶಲ ಮೇಳದಂಥ ಉಪಕ್ರಮಗಳು ಮತ್ತು ಇತರ ಕ್ರಮಗಳು ಸ್ಥಳೀಯ ಕಲೆಯನ್ನು ಪ್ರೋತ್ಸಾಹಿಸುವ ಬದ್ಧತೆಯನ್ನು ಒತ್ತಿ ಹೇಳುತ್ತದೆ.

Continue Reading
Advertisement
Monsoon Rain Boots Fashion
ಫ್ಯಾಷನ್20 mins ago

Monsoon Rain Boots Fashion: ಮಕ್ಕಳ ಮಾನ್ಸೂನ್‌ ಫ್ಯಾಷನ್‌ನಲ್ಲಿ ಟ್ರೆಂಡಿಯಾದ 3 ಬಗೆಯ ರೈನ್‌ ಬೂಟ್ಸ್

Narendra Modi
ದೇಶ44 mins ago

Narendra Modi: ಸಂಸತ್ತಿನಲ್ಲಿ ಇಬ್ಬರು ‘ಪುಟಾಣಿ’ ಅತಿಥಿಗಳನ್ನು ಸ್ವಾಗತಿಸಿದ ಮೋದಿ; ಯಾರವರು? Video ನೋಡಿ

Weight Loss Tips
ಆರೋಗ್ಯ50 mins ago

Weight Loss Tips: ನಲವತ್ತರ ನಂತರ ತೂಕ ಇಳಿಸುವುದು ಹೇಗೆ?

Nadaprabhu Kempegowda
ಬೆಂಗಳೂರು57 mins ago

Essay on Kempegowda in Kannada: ನಾಡಪ್ರಭು ಕೆಂಪೇಗೌಡರು ಆಧುನಿಕ ಬೆಂಗಳೂರಿನ ಮೂಲ ಶಿಲ್ಪಿ!

Nitin Gadkari
ದೇಶ2 hours ago

Nitin Gadkari: ಜಿಪಿಎಸ್‌ ತಂತ್ರಜ್ಞಾನದಿಂದ ಹೆದ್ದಾರಿ ಪ್ರಾಧಿಕಾರಕ್ಕೆ ಬಂಪರ್;‌ 10 ಸಾವಿರ ಕೋಟಿ ರೂ. ಆದಾಯ!

Paris Fashion Week
ಫ್ಯಾಷನ್2 hours ago

Paris Fashion Week: ಪ್ಯಾರಿಸ್‌ ಹಾಟ್‌ ಕೌಚರ್‌ ಫ್ಯಾಷನ್‌ ವೀಕ್ 2024ರ ಹೈಲೈಟ್ಸ್

Anant Ambani
ದೇಶ2 hours ago

Anant Ambani Video: ಮಹಾರಾಷ್ಟ್ರ ಸಿಎಂ ಹೆಗಲ ಮೇಲೆ ಕೈ ಹಾಕಿದ ಅಂಬಾನಿ ಮಗ! ನೀವೇನಂತೀರಿ?

Viral Video
Latest2 hours ago

Viral Video: ಜಿಮ್‌ಗೆ ಹೋಗುವವರೇ ಹುಷಾರ್‌! ಈ ವಿಡಿಯೊ ನೋಡಿ!

Acharya Pramod Krishnam
ದೇಶ2 hours ago

ಕಾಂಗ್ರೆಸ್‌ನಂತೆ 15 ತಿಂಗಳಲ್ಲಿ ಪ್ರತಿಪಕ್ಷಗಳೂ ರಾಹುಲ್‌ ಗಾಂಧಿಯಿಂದ ನಿರ್ನಾಮ; ಆಚಾರ್ಯ ಪ್ರಮೋದ್‌ ಸ್ಫೋಟಕ ಹೇಳಿಕೆ!

Viral Video
Latest3 hours ago

Viral Video: ಬಾಗಿಲ ಬಳಿ ಇದ್ದ ಆಹಾರ ಪ್ಯಾಕೆಟ್‌ ಕದ್ದೊಯ್ದ ಜೊಮ್ಯಾಟೊ ಡೆಲಿವರಿ ಬಾಯ್‌!

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Weather Forecast
ಮಳೆ2 days ago

Karnataka Weather : ಕರಾವಳಿಯಲ್ಲಿ ಮುಂದುವರಿದ ವರುಣಾರ್ಭಟ; ಸಾಂಪ್ರದಾಯಿಕ ಮೀನುಗಾರಿಕೆಗೂ ಬ್ರೇಕ್

karnataka weather Forecast
ಮಳೆ5 days ago

Karnataka Weather : ರಭಸವಾಗಿ ಹರಿಯುವ ನೀರಲ್ಲಿ ಸಿಲುಕಿದ ಬೊಲೆರೋ; ಬಿರುಗಾಳಿ ಸಹಿತ ಮಳೆ ಎಚ್ಚರಿಕೆ

International Yoga Day 2024
ಕರ್ನಾಟಕ5 days ago

International Yoga Day 2024: ಎಲ್ಲೆಲ್ಲೂ ಯೋಗಾಯೋಗ‌ಕ್ಕೆ ಮಂಡಿಯೂರಿದ ಜನತೆ

Karnataka Weather Forecast
ಮಳೆ6 days ago

Karnataka Weather : ಬಾಗಲಕೋಟೆ, ಬೆಂಗಳೂರು ಸೇರಿ ಚಿಕ್ಕಮಗಳೂರಲ್ಲಿ ಸುರಿದ ಗಾಳಿ ಸಹಿತ ಮಳೆ

Actor Darshan
ಮೈಸೂರು1 week ago

Actor Darshan : ಕೊಲೆ ಕೇಸ್‌ ಬೆನ್ನಲ್ಲೇ ನಟ ದರ್ಶನ್‌ ಸೇರಿ ಪತ್ನಿ ವಿಜಯಲಕ್ಷ್ಮಿಗೆ ಬಾರ್ ಹೆಡೆಡ್ ಗೂಸ್ ಸಂಕಷ್ಟ!

Bakrid 2024
ಬೆಂಗಳೂರು1 week ago

Bakrid 2024 : ಮತ್ತೊಂದು ಧರ್ಮವನ್ನೂ ಪ್ರೀತಿಸಿ; ಬಕ್ರೀದ್‌ ಪ್ರಾರ್ಥನೆಯಲ್ಲಿ ಸಿಎಂ ಸಿದ್ದರಾಮಯ್ಯ ಕರೆ

Renukaswamy murder case The location of the accused is complete
ಸಿನಿಮಾ1 week ago

Renuka Swamy murder : ಭೀಕರವಾಗಿ ಕೊಂದರೂ ಆರೋಪಿಗಳಿಗೆ ಕಾಡುತ್ತಿಲ್ವಾ ಪಾಪಪ್ರಜ್ಞೆ? ನಗುತ್ತಲೇ ಹೊರಬಂದ ಪವಿತ್ರಾ ಗೌಡ, ಪವನ್‌

Renuka swamy murder
ಚಿತ್ರದುರ್ಗ1 week ago

Renuka swamy Murder : ರೇಣುಕಾಸ್ವಾಮಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಾಳೆಹೊನ್ನೂರು ಶ್ರೀಗಳು

Vijayanagara News
ವಿಜಯನಗರ1 week ago

Vijayanagara News : ಕೆಲಸಕ್ಕೆ ಚಕ್ಕರ್, ಸಂಬಳಕ್ಕೆ ಹಾಜರ್! ಹಾರಕನಾಳು ಗ್ರಾಪಂ ಪಿಡಿಓಗಾಗಿ ಗ್ರಾಮಸ್ಥರ ಹುಡುಕಾಟ

Actor Darshan
ಯಾದಗಿರಿ2 weeks ago

Actor Darshan : ಬಾಸ್‌ ಅಂತ ಯಾಕ್‌ ಬಕೆಟ್‌ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!

ಟ್ರೆಂಡಿಂಗ್‌