Kantara Movie | ʻಇದು ಸಿನಿಮಾದ ಪವರ್‌, ಅದ್ಭುತ ನಿರೂಪಣೆʼ: ಕಾಂತಾರ ಸಿನಿಮಾ ಹೊಗಳಿದ ನಟಿ ಶಿಲ್ಪಾ ಶೆಟ್ಟಿ - Vistara News

ಸಿನಿಮಾ

Kantara Movie | ʻಇದು ಸಿನಿಮಾದ ಪವರ್‌, ಅದ್ಭುತ ನಿರೂಪಣೆʼ: ಕಾಂತಾರ ಸಿನಿಮಾ ಹೊಗಳಿದ ನಟಿ ಶಿಲ್ಪಾ ಶೆಟ್ಟಿ

ಕಾಂತಾರ ಸಿನಿಮಾವನ್ನು(Kantara Movie ) ನಟಿ ಶಿಲ್ಪಾ ಶೆಟ್ಟಿ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಿನಿಮಾದ ಕ್ಲೈಮ್ಯಾಕ್ಸ್‌ ಫೋಟೊವೊಂದನ್ನು ಹಂಚಿಕೊಂಡಿದ್ದಾರೆ.

VISTARANEWS.COM


on

Kantara Movie
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಕಾಂತಾರ ಸಿನಿಮಾ ಭಾರತದಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಕಾಂತಾರ ಸಿನಿಮಾ (Kantara Movie) ವೀಕ್ಷಿಸಿದ ಬಳಿಕ ದಕ್ಷಿಣ ಭಾರತದ ಸ್ಟಾರ್‌ ನಟರು ಸೋಷಿಯಲ್‌ ಮೀಡಿಯಾ ಮೂಲಕ ಹಾಡಿ ಹೊಗಳಿದ್ದಾರೆ. ಈ ಸಾಲಿಗೆ ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿ ಕೂಡ ಸೇರಿಕೊಂಡಿದ್ದಾರೆ. ಅಕ್ಟೋಬರ್‌ 16ರಂದು ಕಾಂತಾರ ಸಿನಿಮಾವನ್ನು ವೀಕ್ಷಿಸಿದ ಬಳಿಕ ಕ್ಲೈಮ್ಯಾಕ್ಸ್‌ ದೃಶ್ಯದ ಫೋಟೊವೊಂದನ್ನು ತಮ್ಮ ಅಧಿಕೃತ ಇನ್‌ಸ್ಟಾ ಖಾತೆಯಲ್ಲಿ ಹಂಚಿಕೊಳ್ಳುವುದರ ಮೂಲಕ ಕಾಂತಾರ ಚಿತ್ರದ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.

”ನಾನು ಥಿಯೇಟರ್‌ನಲ್ಲಿ ಸಿನಿಮಾ ವೀಕ್ಷಿಸಿದೆ. OMG! ಎಂತಹ ನಿರೂಪಣೆ, ಭಾವನೆ, ವೈಬ್ ಮತ್ತು ಪ್ರಪಂಚ. ಕ್ಲೈಮ್ಯಾಕ್ಸ್ ರೋಮಾಂಚನಗೊಳಿಸಿತ್ತು. ಇದು ಸಿನಿಮಾದ ಪವರ್. ಪ್ರೇಕ್ಷಕನನ್ನು ಬೇರೊಂದು ಜಗತ್ತಿಗೆ ಕೊಂಡೊಯ್ಯುತ್ತದೆ. ನಾನು ಹುಟ್ಟಿ ಬೆಳೆದಂತಹ ಪ್ರಪಂಚಕ್ಕೆ (ಕರಾವಳಿ)ಗೆ ಕೊಂಡೊಯ್ಯುವ ಸಿನಿಮಾʼʼ ಎಂದು ಹೊಗಳಿದ್ದಾರೆ.

ಇದನ್ನೂ ಓದಿ | Kantara Movie | ಕಾಂತಾರ ಸಿನಿಮಾ ಹೊಗಳಿದ ತಮಿಳು ನಟ ಕಾರ್ತಿ: ರಿಷಬ್‌ ಮೇಲೆ ಕನ್ನಡಿಗರು ಗರಂ ಆಗಿದ್ಯಾಕೆ?

ನಟ ಪ್ರಭಾಸ್‌ ಎರಡು ಬಾರಿ ಸಿನಿಮಾ ನೋಡಿ ಹೊಗಳಿ, ಟ್ವೀಟ್‌ ಮೂಲಕ ಸಂತಸ ವ್ಯಕ್ತಪಡಿಸಿದ್ದರು. ಕರಾವಳಿ ಬೆಡಗಿ, ಟಾಲಿವುಡ್‌ ನಟಿ ಅನುಷ್ಕಾ ಶೆಟ್ಟಿ ಕೂಡ ಸಿನಿಮಾ ನೋಡಿ ಸೋಷಿಯಲ್‌ ಮೀಡಿಯಾ ಮೂಲಕ ಖುಷಿ ಹಂಚಿಕೊಂಡಿದ್ದರು.

ʻಕಾಂತಾರ ವೀಕ್ಷಿಸಿದೆ. ಸಂಪೂರ್ಣವಾಗಿ ಸಿನಿಮಾ ಇಷ್ಟವಾಯಿತು, ಪ್ರತಿಯೊಬ್ಬ ನಟ, ನಿರ್ಮಾಪಕರು, ತಂತ್ರಜ್ಞರಿಗೆ ಅಭಿನಂದನೆಗಳು. ಕಾಂತಾರ ತಂಡ ನೀವೆಲ್ಲರೂ ಅದ್ಭುತ. ತೆರೆ ಮೇಲೆ ಇಂತಹ ಅನುಭವ ನೀಡಿದಕ್ಕಾಗಿ ಎಲ್ಲರಿಗೂ ಧನ್ಯವಾದಗಳು. ರಿಷಬ್ ಶೆಟ್ಟಿ ನೀವು ನಿಜಕ್ಕೂ ಅದ್ಭುತ. ದಯವಿಟ್ಟು ಚಿತ್ರಮಂದಿರದಲ್ಲಿ ಸಿನಿಮಾವನ್ನು ನೋಡಿ, ಮಿಸ್‌ ಮಾಡಲೇಬೇಡಿʼʼ ಎಂದು ಬರೆದುಕೊಂಡಿದ್ದರು. ರಾಣಾ ದಗ್ಗುಬಾಟಿ, ಧನುಷ್, ಪ್ರಭಾಸ್‌, ಪೃಥ್ವಿರಾಜ್‌ ಸೇರಿದಂತೆ ದಕ್ಷಿಣ ಭಾರತ ಚಿತ್ರರಂಗದ ಸಾಕಷ್ಟು ಜನ ಸ್ಟಾರ್‌ಗಳು ಸಿನಿಮಾ ನೋಡಿ ಮೆಚ್ಚುಗೆ ಸೂಚಿಸಿದ್ದರು.

ಇದನ್ನೂ ಓದಿ| Kantara Movie | ʻರಿಷಬ್‌ ಶೆಟ್ಟಿ ನೀವು ನಿಜಕ್ಕೂ ಅದ್ಭುತʼ ಎಂದ ಕರಾವಳಿ ಚೆಲುವೆ ಅನುಷ್ಕಾ ಶೆಟ್ಟಿ!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Daali Dhananjay : ಯಾರೂ ಗುರುತಿಸದಂತೆ ಮಾಸ್ಕ್​ ಧರಿಸಿ ಮೆಟ್ರೊದಲ್ಲಿ ಪ್ರಯಾಣಿಸಿದ ನಟ ಡಾಲಿ ಧನಂಜಯ್​

Daali Dhananjay : ಡಾಲಿ ಧನಂಜಯರ್ ಅವರು ಕೆಂಗೇರಿಯಿಂದ ಕುಂದಲಹಳ್ಳಿಯ ತನಕ ಮೆಟ್ರೊದಲ್ಲಿ ಪ್ರಯಾಣ ಮಾಡಿದ್ದಾರೆ. ಮೆಟ್ರೊ ರೈಲಿನಲ್ಲಿ ಕುಳಿತಿದ್ದ ವೇಳೆ ಅವರು ಬಾಕ್ಸ್​ ಒಂದನ್ನು ಹಿಡಿದುಕೊಂಡಿದ್ದರು. ಕೆಂಗೇರಿಯಿಂದ ಕುಂದಲಹಳ್ಳಿಯವರೆಗೆ ಅವರು 36 ಕಿಲೋ ಮೀಟರ್ ಮೆಟ್ರೊ ಹಾದಿಯಲ್ಲಿ ಪ್ರಯಾಣಿಸಿದ್ದಾರೆ.

VISTARANEWS.COM


on

Dali Dhananjay
Koo

ಬೆಂಗಳೂರು: ‘ಕೋಟಿ’ ಸಿನಿಮಾದ ಯಶಸ್ಸಿನಲ್ಲಿರುವ ಪ್ರತಿಭಾವಂತ ನಟ ಡಾಲಿ ಧನಂಜಯ್ (Daali Dhananjay)​ ಶನಿವಾರ ಸಂಜೆ ತಮ್ಮ ಕಾರನ್ನು ಬಿಟ್ಟು ಮೆಟ್ರೊ ರೈಲಿನಲ್ಲಿ ಸಂಚರಿಸಿದರು. ಕನ್ನಡ ಸಿನಿಮಾ ಕ್ಷೇತ್ರದಲ್ಲಿ ಅವಕಾಶಗಳು ಹಾಗೂ ಯಶಸ್ಸಿನ ಮೂಲಕ ಮಿಂಚುತ್ತಿರುವ ಅವರು ಯಾವುದೇ ಹಮ್ಮು ಇಲ್ಲದೆ ಮೆಟ್ರೊ ರೈಲಿನಲ್ಲಿ ಸಂಚರಿಸಿದರು. ಡಾಲಿ ಧನಂಜಯ್ ಅವರು ಮೆಟ್ರೊ ರೈಲಿನಲ್ಲಿ ಪ್ರಯಾಣಿಸುವ ವೇಳೆ ಮಾಸ್ಕ್​ ಹಾಗೂ ಕನ್ನಡಕ ಧರಿಸಿಕೊಂಡಿದ್ದರು. ಹೀಗಾಗಿ ಬಹುತೇಕರಿಗೆ ಅವರು ಪರಿಚಯ ತಕ್ಷಣಕ್ಕೆ ಸಿಗಲಿಲ್ಲ.

ಡಾಲಿ ಧನಂಜಯರ್ ಅವರು ಕೆಂಗೇರಿಯಿಂದ ಕುಂದಲಹಳ್ಳಿಯ ತನಕ ಮೆಟ್ರೊದಲ್ಲಿ ಪ್ರಯಾಣ ಮಾಡಿದ್ದಾರೆ. ಮೆಟ್ರೊ ರೈಲಿನಲ್ಲಿ ಕುಳಿತಿದ್ದ ವೇಳೆ ಅವರು ಬಾಕ್ಸ್​ ಒಂದನ್ನು ಹಿಡಿದುಕೊಂಡಿದ್ದರು. ಕೆಂಗೇರಿಯಿಂದ ಕುಂದಲಹಳ್ಳಿಯವರೆಗೆ ಅವರು 36 ಕಿಲೋ ಮೀಟರ್ ಮೆಟ್ರೊ ಹಾದಿಯಲ್ಲಿ ಪ್ರಯಾಣಿಸಿದ್ದಾರೆ. ಸುಮಾರು ಒಂದೂವರೆ ಗಂಟೆ ಅವಧಿಯ ಪ್ರಯಾಣದ ವೇಳೆ ಅವರು ಮೊಬೈಲ್​ ವೀಕ್ಷಿಸುತ್ತಿದ್ದರು.

ಡಾಲಿ ಧನಂಜಯ್​ ಅವರು ಪರಮ್​ ನಿರ್ದೇಶನದ ಕೋಟಿ ಸಿನಿಮಾದ ಯಶಸ್ವಿನಲ್ಲಿದ್ದಾರೆ. ಮಧ್ಯಮ ವರ್ಗದ ಕುಟುಬದ ಕತೆಯನ್ನು ಹೊಂದಿರುವ ಈ ಸಿನಿಮಾವು ಚಿತ್ರಮಂದಿರಗಳಲ್ಲಿ ಭರ್ಜರಿಯಾಗಿ ತೆರೆ ಕಾಣುತ್ತಿದೆ. ಇದೇ ವೇಳೆ ಕೆಲವು ಸೆಲೆಬ್ರಿಟಿಗಳು ಸಿನಿಮಾವನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಡಾಲಿ ಧನಂಜರ್ ಅವರು ಪಾತ್ರಾಭಿನಯಕ್ಕೆ ಹೆಚ್ಚಿನ ಮಾರ್ಕ್​ಗಳನ್ನು ಕೊಟ್ಟಿದ್ದಾರೆ. ಜಿಯೋ ಸ್ಟುಡಿಯೋನಿರ್ಮಿಸಿರುವ ಸಿನಿಮಾದಲ್ಲಿ ಧನಂಜಯ್ ಅವರಲ್ಲದೆ, ಮೋಕ್ಷಾ ಕುಶಾಲ್, ರಮೇಶ್ ಇಂದಿರಾ, ತಾರಾ, ರಂಗಾಯಣ ರಘು, ಪೃಥ್ವಿ ಶಾಮನೂರು, ದುನಿಯಾ ವಿಜಯ್ ಮೊದಲಾದವರು ಇದ್ದಾರೆ.

ಇದನ್ನೂ ಓದಿ: Actor Darshan: ಜೈಲು ಸೇರಿದ ನಟ ದರ್ಶನ್ ಮುಂದೆ ಇರೋ ಆಯ್ಕೆಗಳೇನು?

`ನಾಡಪ್ರಭು ಕೆಂಪೇಗೌಡ’ ಪಾತ್ರದಲ್ಲಿ ಡಾಲಿ ಧನಂಜಯ್‌

ಬೆಂಗಳೂರು: ಕನ್ನಡ ಸಿನಿಮಾ ರಂಗದಲ್ಲಿ ʻನಾಡಪ್ರಭು ಕೆಂಪೇಗೌಡʼರ (nadaprabhu kempegowda) ಜೀವನವನ್ನು (Kannada New Movie) ಆಧರಿಸಿದ ಸಂಪೂರ್ಣ ಸಿನಿಮಾ ಬಾರದೇ ಇದ್ದರೂ, ಕೆಲವು ಚಿತ್ರಗಳಲ್ಲಿ ಇವರ ಝಲಕ್‌ಗಳು ಕಾಣಿಸಿಕೊಂಡಿವೆ. ಅಷ್ಟೇ ಅಲ್ಲ ಹಾಡುಗಳಲ್ಲೂ ಮಿಂಚಿದ್ದಾರೆ. ಅಲ್ಲದೇ, ಕೆಂಪೇಗೌಡರ ಪ್ರತಿಮೆಯನ್ನು ಹಿನ್ನೆಲೆಯಾಗಿ ಇಟ್ಟುಕೊಂಡು ಹೆಣೆದಿರುವ ಹಲವು ದೃಶ್ಯಗಳನ್ನೂ ಕಾಣಬಹುದಾಗಿದೆ. ಆದರೀಗ ಬೆಂಗಳೂರಿನ ನಿರ್ಮಾತೃ ನಾಡಪ್ರಭು ಕೆಂಪೇಗೌಡರವರ ಜೀವನ ಚರಿತ್ರೆ ಸಿನಿಮಾವಾಗುತ್ತಿದೆ. ʻಬೆಂದಕಾಳೂರುʼ ಕಟ್ಟಿದ ನಾಡಪ್ರಭುವಿನ‌ ಕಥೆಯನ್ನು ತೆರೆಗೆ ತರುವ ಕಾಲ ಕೂಡಿ ಬಂದಿದೆ. ಧರ್ಮಬೀರು ನಾಡಪ್ರಭು ಕೆಂಪೇಗೌಡ ಎಂಬ ಶೀರ್ಷಿಕೆಯಡಿ ಸಿನಿಮಾ ಘೋಷಣೆಯಾಗಿದೆ. ನಾಡಪ್ರಭು ಕೆಂಪೇಗೌಡರಾಗಿ ಡಾಲಿ ಧನಂಜಯ್ ಅಬ್ಬರಿಸಲಿದ್ದಾರೆ.

ಆ ಸಿನಿಮಾದಲ್ಲಿ ದರ್ಶನ್ ಅಥವಾ ಸುದೀಪ್ ನಟಿಸುತ್ತಾರಾ ಎಂಬ ಚರ್ಚೆಗಳು ಸಹ ನಡೆದಿದ್ದವು, ಆದರೆ ಈಗ ಡಾಲಿ ಧನಂಜಯ್ ಕೆಂಪೇಗೌಡರ ಪಾತ್ರದಲ್ಲಿ ಮಿಂಚಲಿದ್ದಾರೆ. ಈಗಾಗಲೇ ಪೋಸ್ಟರ್ ಬಿಡುಗಡೆ ಆಗಿದೆ. ನಿರ್ದೇಶಕ ಟಿಎಸ್ ನಾಗಾಭರಣ ನಿರ್ದೇಶನ ಮಾಡಲಿದ್ದಾರೆ. ಸಿನಿಮಾಕ್ಕೆ ಎಂಎನ್ ಶಿವರುದ್ರಪ್ಪ, ಶುಭಂ ಗುಂಡಾಲ ನಿರ್ಮಾಣ ಮಾಡುತ್ತಿದ್ದಾರೆ. ‘ಸಂತ ಶಿಷುನಾಳ ಶರೀಫ, ‘ನೀಲ’, ‘ಕಲ್ಲರಳಿ ಹೂವಾಗಿ’ ಇನ್ನೂ ಕೆಲವು ಪೀರಿಯಡ್ ಸಿನಿಮಾಗಳನ್ನು ನಾಗಾಭರಣ ನಿರ್ದೇಶಿಸಿದ್ದಾರೆ. ಈಗ ಕೆಂಪೇಗೌಡರ ಕತೆಯನ್ನು ಸಿನಿಮಾ ಮಾಡಲಿದ್ದಾರೆ.

.ಈ ಹಿಂದೆ ಅಲ್ಲಮನ ಕುರಿತಾದ ಸಿನಿಮಾದಲ್ಲಿ ಧನಂಜಯ್ ನಟಿಸಿದ್ದರು. ಧನಂಜಯ್ ಈ ಪಾತ್ರಕ್ಕಾಗಿ ವಿಶೇಷ ತಯಾರಿ ಮಾಡಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.

ಈ ಹಿಂದೆ ದಿನೇಶ್ ಬಾಬು ಅವರು ನಾಡಪ್ರಭು ಕೆಂಪೇಗೌಡರ ಸಿನಿಮಾ ಮಾಡುವುದಾಗಿ ಘೋಷಿಸಿದ್ದರು. ‘ನಾಗಾಭರಣ ನ್ಯಾಯಾಲಯದ ಮೂಲಕ ತಡೆ ತಂದರು.

ಇದೀಗ ಈ ‘ನಾಡಪ್ರಭು ಕೆಂಪೇಗೌಡ’ ಸಿನಿಮಾಕ್ಕೆ ನಾಗಾಭರಣ ಅವರೇ ಚಿತ್ರಕತೆ ಬರೆದಿದ್ದು, ಸಾಹಿತಿ ಪ್ರತಿಭಾ ನಂದಕುಮಾರ್ ಅವರು ಬರವಣಿಗೆಯಲ್ಲಿ ಸಹಾಯ ಮಾಡಲಿದ್ದಾರೆ. ನಾಗಾಭರಣ ಅವರ ಪುತ್ರ ನಿರ್ದೇಶಕ ಪನ್ನಗಾಭರಣ ಕಾರ್ಯಕಾರಿ ನಿರ್ಮಾಪಕರಾಗಿ ಕೆಲಸ ಮಾಡಲಿದ್ದಾರೆ. ವಾಸುಕಿ ವೈಭವ್ ಸಂಗೀತ ನೀಡಲಿದ್ದಾರೆ. ಶಶಿಧರ ಅಡಪ ಅವರು ಸಿನಿಮಾದ ಸೆಟ್ ನೋಡಿಕೊಳ್ಳುತ್ತಿದ್ದಾರೆ.

Continue Reading

ಬಾಲಿವುಡ್

The Lion King: ಆಲ್‌ ಟೈಮ್‌ ಫೇವರೇಟ್‌ ಕಾರ್ಟೂನ್‌ `ದಿ ಲಯನ್ ಕಿಂಗ್’ 30ನೇ ವಾರ್ಷಿಕೋತ್ಸವ

The Lion King: ನಟರು ಮತ್ತು ಅಭಿಮಾನಿಗಳು ʻದಿ ಲಯನ್ ಕಿಂಗ್ʼನಲ್ಲಿ ಕೆಲಸ ಮಾಡಿರುವಂತಹ ನೆನಪುಗಳು, ಮತ್ತು ಅನುಭವಗಳ ಬಗ್ಗೆ ಮಾತನಾಡಿದರು. 30 ವರ್ಷಗಳ ಹಿಂದೆ ಜೂನ್ 15 ರಂದು ಬಿಡುಗಡೆಯಾದ `ದಿ ಲಯನ್ ಕಿಂಗ್’ (1994) ಎಲ್ಲ ವಯೋಮಾನದವರನ್ನು ರಂಜಿಸಿತ್ತು. ಇಂದಿಗೂ ಈ ಕಾರ್ಟೂನ್‌ನಲ್ಲಿರುವ ಅದ್ಭುತ ಸನ್ನಿವೇಶಗಳನ್ನು ಹಲವರು ನೆನಪಿಸಿಕೊಳ್ಳುತ್ತಾರೆ.

VISTARANEWS.COM


on

The Lion King 30 years influence on fans and actors
Koo

ಬೆಂಗಳೂರು: ʻದಿ ಲಯನ್ ಕಿಂಗ್ʼ ತನ್ನ 30ನೇ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿದೆ. ಅದರ ನಟರು ಮತ್ತು ಅಭಿಮಾನಿಗಳು ʻದಿ ಲಯನ್ ಕಿಂಗ್ʼನಲ್ಲಿ ಕೆಲಸ ಮಾಡಿರುವಂತಹ ನೆನಪುಗಳು, ಮತ್ತು ಅನುಭವಗಳ ಬಗ್ಗೆ ಮಾತನಾಡಿದರು. 30 ವರ್ಷಗಳ ಹಿಂದೆ ಜೂನ್ 15 ರಂದು ಬಿಡುಗಡೆಯಾದ `ದಿ ಲಯನ್ ಕಿಂಗ್’ (1994) ಎಲ್ಲ ವಯೋಮಾನದವರನ್ನು ರಂಜಿಸಿತ್ತು. ಇಂದಿಗೂ ಈ ಕಾರ್ಟೂನ್‌ನಲ್ಲಿರುವ ಅದ್ಭುತ ಸನ್ನಿವೇಶಗಳನ್ನು ಹಲವರು ನೆನಪಿಸಿಕೊಳ್ಳುತ್ತಾರೆ. 2019ರ ಫೋಟೊರಿಯಾಲಿಸ್ಟಿಕ್ ಆವೃತ್ತಿಯನ್ನು ಒಳಗೊಂಡಂತೆ ಹಲವಾರು ಬಾರಿ ರೀಮೇಕ್ ಮಾಡಲಾಗಿದೆ. ಲಯನ್ ಕಿಂಗ್ ಹಿಂದಿಯಲ್ಲಿ ಬಿಡುಗಡೆಯಾಯಿತು, ಇದರಲ್ಲಿ ಶಾರುಖ್ ಖಾನ್, ಆಶಿಶ್ ವಿದ್ಯಾರ್ಥಿ, ಅಸ್ರಾನಿ, ಶ್ರೇಯಸ್ ತಲ್ಪಾಡೆ ಮತ್ತು ಸಂಜಯ್ ಮಿಶ್ರಾ ಮುಂತಾದ ಹೆಸರುಗಳನ್ನು ಒಳಗೊಂಡ ಪಾತ್ರಗಳು ಇದ್ದವು. ಇದೀಗ `ದಿ ಲಯನ್ ಕಿಂಗ್‌ಗೆ 30 ವರ್ಷ ಸಂದಿದೆ.

ನಟ ಶ್ರೇಯಸ್ ತಲ್ಪಾಡೆ ಈ ಬಗ್ಗೆ ಮಾತನಾಡಿ ʻʻಹಿಂದಿ ಆವೃತ್ತಿಯಲ್ಲಿ ಶಾರುಖ್ ಖಾನ್, ಸಂಜಯ್ ಮಿಶ್ರಾ ಮತ್ತು ಆಶಿಶ್ ವಿದ್ಯಾರ್ಥಿ ಸೇರಿದಂತೆ ಪೌರಾಣಿಕ ನಟರು ಕೆಲಸ ಮಾಡಿದ್ದರು. ಲಯನ್‌ ಕಿಂಗ್ ಮಾಡಲು ಮುಖ್ಯ ಕಾರಣವೆಂದರೆ ನನ್ನ ಮಗಳು.ಅವಳ ತಂದೆ ಈ ಲಯನ್‌ ಕಿಂಗ್‌ ಆವೃತ್ತಿಗೆ ಧ್ವನಿ ನೀಡಿದ್ದಾರೆ ಎಂದರೆ ಖಷಿ ಪಡುತ್ತಿದ್ದಳುʼʼಎಂದರು.

ಇದನ್ನೂ ಓದಿ: Child Death : ಮಕ್ಕಳ ಮಾರಾಟ ಜಾಲದಲ್ಲಿ ರಕ್ಷಣೆಯಾಗಿದ್ದ ಮಗು ಮೃತ್ಯು; ಅಂತ್ಯ ಸಂಸ್ಕಾರ ನೆರವೇರಿಸಿದ ಪೊಲೀಸರು

ಲಯನ್ ಕಿಂಗ್ ಹಲವಾರು ಕಾರಣಗಳಿಗಾಗಿ ನೋಡುಗರನ್ನು ಮೆಚ್ಚಿಸಿದೆ. ತಾಂತ್ರಿಕ ಕಾರಂಣಗಳಿಂದಲೂ ಪ್ರೇಕ್ಷರನ್ನು ಮೆಚ್ಚಿಸಿತ್ತು. ಬಿಡುಗಡೆ ಕಂಡಾಗ ಈ ಸಿನಿಮಾ ವರ್ಷದ ಅತಿ ಹೆಚ್ಚು ಗಳಿಕೆಯ ಚಲನಚಿತ್ರವಾಗಿ ಹೊರಹೊಮ್ಮಿತ್ತು. ಅತ್ಯುತ್ತಮ ಮೂಲ ಸ್ಕೋರ್ ಮತ್ತು ಅತ್ಯುತ್ತಮ ಮೂಲ ಗೀತೆಗಾಗಿ ಎರಡು ಅಕಾಡೆಮಿ ಪ್ರಶಸ್ತಿಗಳನ್ನು ಗೆದ್ದಿತ್ತು.
ಲಯನ್ ಕಿಂಗ್ ಬಗ್ಗೆ ಜನರು ಹೆಚ್ಚು ನೆನಪಿಸಿಕೊಳ್ಳುವ ವಿಷಯವೆಂದರೆ ಅದರ ಸೊಗಸಾದ ಸಂಗೀತ. ಸಂಯೋಜಕ ಹ್ಯಾನ್ಸ್ ಝಿಮ್ಮರ್ ಈ ಹಿಂದೆ ಡಿಸ್ನಿ ಸಂಗೀತ ತಂಡದೊಂದಿಗೆ ಮಾತನಾಡುತ್ತಾ, ʻದಿ ಲಯನ್ ಕಿಂಗ್ ಹೃದಯದಲ್ಲಿ ವಿಶೇಷ ಸ್ಥಾನವನ್ನು ಪಡೆದಿದೆ. ಕೇವ ಸಂಗೀತವನ್ನು ಸಂಯೋಜಿಸಿದ ಮಾತ್ರಕ್ಕಲ್ಲʼʼ ಎಂದು ಹೇಳಿದರು.

ಅನೇಕ ಅಭಿಮಾನಿಗಳಿಗೆ, ಲಯನ್ ಕಿಂಗ್ ಅನ್ನು ವೀಕ್ಷಿಸುವುದು ಅವರ ಬಾಲ್ಯದ ಪ್ರಮುಖ ಭಾಗವಾಗಿತ್ತು.
ಚಿತ್ರದ ಹಿಂದಿ ಆವೃತ್ತಿಯಲ್ಲಿ ʻಸ್ಕಾರ್‌ʼ ಪಾತ್ರಕ್ಕೆ ಧ್ವನಿ ನೀಡಿದ ನಟ ಆಶಿಶ್ ವಿದ್ಯಾರ್ಥಿ, ಡಬ್ಬಿಂಗ್ ಸವಾಲುಗಳ ಬಗ್ಗೆ ಅದೆಷ್ಟೋ ಬಾರಿ ಹೇಳಿಕೊಂಡಿದ್ದರು.

“ಸ್ಕಾರ್ ಒಂದು ಒಳ್ಳೆಯ ಪಾತ್ರವಾಗಿದೆ, ಅದಕ್ಕೆ ನನ್ನ ಧ್ವನಿಯನ್ನು ನೀಡುವ ಅನುಭವವು ಅಸಾಧಾರಣವಾಗಿದೆ. ತುಂಬ ಸವಾಲಾಗಿತ್ತು. ಮೂಲ ಇಂಗ್ಲಿಷ್ ಆವೃತ್ತಿ ಆದರೂ ಹಿಂದಿಯಲ್ಲಿ ಪಾತ್ರದ ಡೈಲಾಗ್‌ ಕೂಡ ಚೆನ್ನಾಗಿ ಬರೆಯಲಾಗಿದೆ ಹಿಂದಿ ಆವೃತ್ತಿ ಕೂಡ ಚೆಂದವಾಗಿ ಮೂಡಿತ್ತು. ‘ಹೂನ್ ತಯಾರ್’ ಹಾಡನ್ನು ಹಾಡಲು ನನ್ನನ್ನು ಕರೆದರು. ಹಾಡುವಾಗ, ಸ್ಕಾರ್‌ಗಾಗಿ ಸಂಪೂರ್ಣ ಧ್ವನಿಯನ್ನು ಏಕೆ ಮಾಡಬಾರದು ಎಂದು ಸಲಹೆ ನೀಡಿದರು. ಅದರಂತೆ ಬಳಿಕ ಧ್ವನಿ ನೀಡಿದೆʼʼಎಂದು ಹೇಳಿದರು. ಬಿಡುಗಡೆಯಾಗಿ ಮೂವತ್ತು ವರ್ಷಗಳೇ ಕಳೆದರೂ ಚಿತ್ರ ಇನ್ನೂ ಔಟ್‌ ಡೇಟ್ ಆಗಿಲ್ಲ.

Continue Reading

ಟಾಲಿವುಡ್

Shobha Shetty: ಭಾವಿ ಪತಿಗೆ ಕಾರ್ ಗಿಫ್ಟ್ ನೀಡಿದ ‘ಅಗ್ನಿಸಾಕ್ಷಿ’ ಖ್ಯಾತಿಯ ನಟಿ!

Shobha Shetty: ಅಗ್ನಿಸಾಕ್ಷಿ’ ಧಾರಾವಾಹಿ ಮೂಲಕ ಗಮನ ಸೆಳೆದ ಶೋಭಾ ಶೆಟ್ಟಿ ವರ್ಷಗಳ ಹಿಂದೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ‘ರುಕ್ಕು’ ಧಾರಾವಾಹಿಯಲ್ಲಿ ನಟಿಸಿ, ಅದನ್ನೂ ಅರ್ಧಕ್ಕೆ ಬಿಟ್ಟಿದ್ದರು. ‘ಪಡುವಾರಹಳ್ಳಿ ಪಡ್ಡೆಗಳು’ ಧಾರಾವಾಹಿಯೊಂದಿಗೆ ಚಿತ್ರರಂಗಕ್ಕೆ ಕಾಲಿಟ್ಟ ಶೋಭಾ ಅವರು ಕನ್ನಡದ ಧಾರಾವಾಹಿಗಳಲ್ಲಿ ಪೋಷಕ ಪಾತ್ರಗಳಲ್ಲಿ ಹೆಚ್ಚು ಕಾಣಿಸಿಕೊಂಡರು. ಆ ನಂತರ ಮತ್ತೆ ಅವರು ತೆಲುಗಿನಲ್ಲಿಯೇ ಬ್ಯುಸಿ ಆದರು.

VISTARANEWS.COM


on

Shobha Shetty car gift to yashwanth birthday
Koo

‘ಅಗ್ನಿಸಾಕ್ಷಿ’ (Shobha Shetty) ಹಾಗೂ ‘ನಮ್ಮ ರುಕ್ಕು’ ಧಾರಾವಾಹಿಗಳಲ್ಲಿ ನಟಿಸಿದ ಶೋಭಾ ಶೆಟ್ಟಿ ಸದ್ಯ ತೆಲುಗು ವೀಕ್ಷಕರ ಮನ ಗೆದ್ದಿದ್ದಾರೆ.

ನಟ ಯಶ್ವಂತ್ ಎಂಬುವವರನ್ನು ಪ್ರೀತಿಸಿ ಮದುವೆ ಆಗಲು ಆಕೆ ಮುಂದಾಗಿದ್ದಾರೆ. ಈಗಾಗಲೇ ಇಬ್ಬರು ಮದುವೆ ನಿಶ್ಚಯವಾಗಿದೆ.

ಶೋಭಾ ಈಗಾಗಲೇ ಹೈದರಾಬಾದ್‌ನಲ್ಲಿ ಹೊಸ ಮನೆ ಖರೀದಿಸಿದ್ದಾರೆ. ಗೃಹ ಪ್ರವೇಶ ಕೂಡ ಆಗಿದ್ದು, ಮುಂದಿನ ತಿಂಗಳು ಆ ಮನೆಗೆ ಶಿಫ್ಟ್ ಆಗಲಿದ್ದಾರೆ. ಬೀಸ್ಟ್ ಎಕ್ಸ್‌ಯುವಿ 700 ಕಾರ್‌ ಅನ್ನು ಈ ವರ್ಷ ಯಶ್ವಂತ್ ಹುಟ್ಟುಹಬ್ಬಕ್ಕೆ ಸರ್‌ಪ್ರೈಸ್ ಆಗಿ ಕೊಟ್ಟಿದ್ದಾರೆ.

ಕನ್ನಡದಲ್ಲಿ ‘ಅಗ್ನಿಸಾಕ್ಷಿ’ ಧಾರಾವಾಹಿಯ ತನು ಪಾತ್ರ ಆಕೆಗೆ ಹೆಸರು ತಂದುಕೊಟ್ಟಿತ್ತು.

ಇದನ್ನೂ ಓದಿ: Duniya Vijay: ʻಭೀಮʼ ರಿಲೀಸ್‌ ಡೇಟ್‌ ಅನೌನ್ಸ್‌ ಮಾಡಿದ ದುನಿಯಾ ವಿಜಯ್‌; ಸ್ಟಾರ್‌ ಹಿರೋ ಸಿನಿಮಾ ಜತೆ ಕ್ಲ್ಯಾಶ್‌?

ಅಗ್ನಿಸಾಕ್ಷಿ’ ಧಾರಾವಾಹಿ ಮೂಲಕ ಗಮನ ಸೆಳೆದ ಶೋಭಾ ಶೆಟ್ಟಿ ವರ್ಷಗಳ ಹಿಂದೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ‘ರುಕ್ಕು’ ಧಾರಾವಾಹಿಯಲ್ಲಿ ನಟಿಸಿ, ಅದನ್ನೂ ಅರ್ಧಕ್ಕೆ ಬಿಟ್ಟಿದ್ದರು. ‘ಪಡುವಾರಹಳ್ಳಿ ಪಡ್ಡೆಗಳು’ ಧಾರಾವಾಹಿಯೊಂದಿಗೆ ಚಿತ್ರರಂಗಕ್ಕೆ ಕಾಲಿಟ್ಟ ಶೋಭಾ ಅವರು ಕನ್ನಡದ ಧಾರಾವಾಹಿಗಳಲ್ಲಿ ಪೋಷಕ ಪಾತ್ರಗಳಲ್ಲಿ ಹೆಚ್ಚು ಕಾಣಿಸಿಕೊಂಡರು. ಆ ನಂತರ ಮತ್ತೆ ಅವರು ತೆಲುಗಿನಲ್ಲಿಯೇ ಬ್ಯುಸಿ ಆದರು.

Continue Reading

ರಾಜಕೀಯ

Actor Darshan: ನಾನು ದರ್ಶನ್ ಸೇಫ್ ಮಾಡ್ತಿರೋದು ಸುಳ್ಳು; ಬಿಜೆಪಿ ಶಾಸಕ ಸತೀಶ್ ರೆಡ್ಡಿ !

Actor Darshan: ಸಾಕಷ್ಟು ಊಹಾಪೋಹಗಳ ಮಧ್ಯೆ ದರ್ಶನ್ ಪ್ರಕರಣದಲ್ಲಿ ಸತೀಶ್ ರೆಡ್ಡಿ ಅವರ ಹೆಸರು ಚರ್ಚೆಗೆ ಗುರಿಯಾಗಿತ್ತು. ಇದೀಗ ಮಾಧ್ಯಮದ ಮುಂದೆ ಸತೀಶ್‌ ರೆಡ್ಡಿ ʻʻನಾನು ದರ್ಶನ್ ಅವರನ್ನು ಸೇಫ್ ಮಾಡುತ್ತಿರುವ ಸುದ್ದಿ ಸುಳ್ಳು.. ಇಂಡಸ್ಟ್ರಿಯ ಬಹುತೇಕರು ನನಗೆ ಕ್ಲೋಸ್ ಫ್ರೆಂಡ್ಸ್ʼʼಎಂದಿದ್ದಾರೆ.

VISTARANEWS.COM


on

Actor darshan Satish Reddy On Darshan Case
Koo

ಬೆಂಗಳೂರು: ನಟ ದರ್ಶನ್ (Actor Darshan) ಅವರನ್ನು ಸೇಫ್ ಮಾಡಲು ಪ್ರಭಾವಿ ಶಾಸಕರು, ಸಚಿವರು ಪ್ರಯತ್ನಿಸಿದ್ದರು ಎನ್ನುವ ಮಾತು ಕೇಳಿ ಬಂದಿತ್ತು. ನಟ ದರ್ಶನ್ ಬಂಧನದ ಬಳಿಕ ಬೊಮ್ಮನಹಳ್ಳಿ ಬಿಜೆಪಿ ಶಾಸಕ ಸತೀಶ್ ರೆಡ್ಡಿ ಅವರ ಹೆಸರು ತಳುಕು ಹಾಕಿಕೊಂಡಿತ್ತು. ಸಾಕಷ್ಟು ಊಹಾಪೋಹಗಳ ಮಧ್ಯೆ ದರ್ಶನ್ ಪ್ರಕರಣದಲ್ಲಿ ಸತೀಶ್ ರೆಡ್ಡಿ ಅವರ ಹೆಸರು ಚರ್ಚೆಗೆ ಗುರಿಯಾಗಿತ್ತು. ಇದೀಗ ಮಾಧ್ಯಮದ ಮುಂದೆ ಸತೀಶ್‌ ರೆಡ್ಡಿ ʻʻನಾನು ದರ್ಶನ್ ಅವರನ್ನು ಸೇಫ್ ಮಾಡುತ್ತಿರುವ ಸುದ್ದಿ ಸುಳ್ಳು.. ಇಂಡಸ್ಟ್ರಿಯ ಬಹುತೇಕರು ನನಗೆ ಕ್ಲೋಸ್ ಫ್ರೆಂಡ್ಸ್ʼʼಎಂದಿದ್ದಾರೆ.

ಸತೀಶ್ ರೆಡ್ಡಿ ಮಾತನಾಡಿ ʻ ನಾನು ದರ್ಶನ್ ಸೇಫ್ ಮಾಡ್ತಿರೋದು ಸುಳ್ಳು.. ಇಂಡಸ್ಟ್ರಿಯ ಬಹುತೇಕರು ನನಗೆ ಕ್ಲೋಸ್ ಫ್ರೆಂಡ್ಸ್.. ನಾನು ದರ್ಶನ್ ಭೇಟಿಯಾಗಿ 3 ತಿಂಗಳು ಆಗಿದೆ. ದರ್ಶನ್ ವಿಚಾರದಲ್ಲಿ ನನ್ನ ಹೆಸರು ತರುತ್ತಿರುವುದು ಸರಿಯಲ್ಲ. ತಪ್ಪು ಯಾರೇ ಮಾಡಿದ್ರು ಶಿಕ್ಷೆ ಆಗ್ಬೇಕು.. ನಾನು ದರ್ಶನ್ ಸೇಫ್ ಮಾಡ್ತಿರೋದು ಸುಳ್ಳು.. ನಾನು ಯಾರ ಬಳಿಯೂ ಕೇಳಿಲ್ಲ.. ನಾನು ಒತ್ತಡ ಹಾಕ್ತಿದ್ದೀನಿ ಅನ್ನೋದು ಸುಳ್ಳು.. ನನಗೆ ಕಾಲು ಮುರಿದಿದ್ದ ಸಂದರ್ಭದಲ್ಲಿ ದರ್ಶನ್ ನನ್ನನ್ನು ಭೇಟಿಯಾಗಿದ್ರು. ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗ್ಬೇಕು. ನಾನು ಈ ವಿಚಾರವಾಗಿ ದರ್ಶನ್ ಪರ ನಿಲ್ಲಲ್ಲ.. ದರ್ಶನ್ ತಪ್ಪು ಮಾಡಿದ್ದಾರಾ, ಇಲ್ವಾ ಅನ್ನೋದು ನ್ಯಾಯಾಲಯದ ಮೆಟ್ಟಿಲಲ್ಲಿದೆ. ಮುಂದೆ ನೋಡೋಣʼʼಎಂದಿದ್ದಾರೆ.

ಇದನ್ನೂ ಓದಿ: Actor Darshan: ರೇಣುಕಾಸ್ವಾಮಿ ಹತ್ಯೆ ಶ್ವಾನದ ಮೇಲೆ ʻಆನೆʼ ದಾಳಿ ಮಾಡಿದಂತೆ ಎಂದ ರಾಮ್​ ಗೋಪಾಲ್ ವರ್ಮಾ!

ದರ್ಶನ್ ಅವರನ್ನು ಬಚಾವ್ ಮಾಡಲು ಸಚಿವರು ಪ್ರಯತ್ನಿಸುತ್ತಿದ್ದಾರೆ ಎನ್ನುತ್ತಿದ್ದಂತೆ ಅವರು ಯಾರಾಗಿರಬಹುದು ಎನ್ನುವ ಚರ್ಚೆಯೂ ಜೋರಾಗಿತ್ತು. ದರ್ಶನ್​ ಹಾಗೂ ಆತನ ಗ್ಯಾಂಗ್​ನ ಸದಸ್ಯರು ಇದ್ದ ಪೊಲೀಸ್ ಠಾಣೆಗೆ ಭದ್ರತೆಯನ್ನು ಹೆಚ್ಚಿಸಲಾಗಿತ್ತು . ವಿಐಪಿ ಆರೋಪಿಗಳ ಮೇಲೆ ದಾಳಿಯಾಗುವ ಅಥವಾ ಇನ್ಯಾವುದೇ ಅನಾಹುತಗಳನ್ನು ತಪ್ಪಿಸುವ ಉದ್ದೇಶದಿಂದ ಠಾಣೆಯ ಹೊರಗಡೆ ಕೆಎಸ್​ಆರ್​​ಪಿ ಪೊಲೀಸ್​ ತಂಡವೊಂದನ್ನು ನಿಯೋಜಿಸಲಾಗಿತ್ತು.

ಇಂದು ನಟ ದರ್ಶನ್ ಜತೆಗೆ ವಿನಯ್, ಪ್ರದೋಶ್ ಮತ್ತು ಧನರಾಜ್ ಕಸ್ಟಡಿ ಅಂತ್ಯವಾಗುತ್ತಿದ್ದು, ಪೊಲೀಸರು ಸಂಜೆ ಬೆಂಗಳೂರಿನ 24ನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ. ಪ್ರಕರಣ ಸಂಬಂಧ ಜೂನ್ 11ರಂದು ಕಾಮಾಕ್ಷಿಪಾಳ್ಯ ಪೊಲೀಸರು ಮೈಸೂರಿನಲ್ಲಿ ದರ್ಶನ್‌ನನ್ನು ಬಂಧಿಸಿದ್ದರು. ಈಗಾಗಲೇ 12 ದಿನ ಪೊಲೀಸ್ ಕಸ್ಟಡಿಯಲ್ಲಿ ಕಳೆದಿರುವ ದರ್ಶನ್ ಮತ್ತು ಇನ್ನಿತರ ಆರೋಪಿಗಳಿಗೆ ಕೋರ್ಟ್‌ ಬಹುತೇಕ ನ್ಯಾಯಾಂಗ ಬಂಧನದ ಆದೇಶ ನೀಡುವ ಸಾಧ್ಯತೆ ಇದೆ.

Continue Reading
Advertisement
Suraj Revanna Case
ಕರ್ನಾಟಕ7 mins ago

Suraj Revanna Case: ಅಸಹಜ ಲೈಂಗಿಕ ದೌರ್ಜನ್ಯ ಕೇಸ್‌; ಎಂಎಲ್‌ಸಿ ಪ್ರಜ್ವಲ್‌ ರೇವಣ್ಣ ಅರೆಸ್ಟ್‌

Doodle V3 E-Cycle
ಆಟೋಮೊಬೈಲ್14 mins ago

Doodle V3 E-Cycle: ‘ಕಲ್ಕಿ 2898 ಎಡಿ’ನಿಂದ ಪ್ರೇರಿತವಾದ ಇ-ಸೈಕಲ್ ಮಾರುಕಟ್ಟೆಗೆ

Suraj Revanna Case
ಕರ್ನಾಟಕ36 mins ago

Suraj Revanna Case:  ಸಲಿಂಗ ಕಾಮ ಆರೋಪ; ಸಂತ್ರಸ್ತನ ವೈದ್ಯಕೀಯ ಪರೀಕ್ಷೆ ಬಳಿಕ ಇಂದೇ ಅರೆಸ್ಟ್‌ ಆಗ್ತರಾ ಸೂರಜ್‌ ರೇವಣ್ಣ?

Empty Stomach Foods
ಆರೋಗ್ಯ1 hour ago

Empty Stomach Foods: ಬೆಳಗ್ಗೆ ಎದ್ದ ಕೂಡಲೇ ಖಾಲಿ ಹೊಟ್ಟೆಯಲ್ಲಿ ಈ ಆಹಾರಗಳನ್ನು ತಿನ್ನಬೇಡಿ!

karnataka weather Forecast
ಮಳೆ2 hours ago

Karnataka Weather : ಕರಾವಳಿ, ಮಲೆನಾಡಿಗೆ ಗುಡುಗು ಸಹಿತ ಭಾರಿ ಮಳೆ; 9 ಜಿಲ್ಲೆಗಳಿಗೆ ರೆಡ್‌ ಅಲರ್ಟ್‌

Menopausal Weight Gain
ಆರೋಗ್ಯ2 hours ago

Menopausal Weight Gain: ಋತುಚಕ್ರ ನಿಂತ ಬಳಿಕ ತೂಕ ಹೆಚ್ಚುವುದನ್ನು ತಡೆಯಬಹುದೇ?

Vastu Tips
ಧಾರ್ಮಿಕ3 hours ago

Vastu Tips: ತಿಳಿದಿರಲಿ, ಕನ್ನಡಿಯೂ ನುಡಿಯುತ್ತದೆ ನಮ್ಮ ಭವಿಷ್ಯ!

Virat kohli
ಪ್ರಮುಖ ಸುದ್ದಿ3 hours ago

Virat Kohli : ಐಸಿಸಿ ಟೂರ್ನಿಯಲ್ಲಿ ಗರಿಷ್ಠ ರನ್ ಬಾರಿಸಿ ವಿಶೇಷ ಮೈಲುಗಲ್ಲು ಸ್ಥಾಪಿಸಿದ ವಿರಾಟ್​ ಕೊಹ್ಲಿ

Dina bhavishya
ಭವಿಷ್ಯ3 hours ago

Dina Bhavishya : ಈ ರಾಶಿಯವರು ಮಡದಿಯ ಪ್ರೀತಿಗೆ ಸೋಲುವಿರಿ; ಮನೆಯಲ್ಲಿ ಸಂತೋಷದ ದಿನ

NEET UG
ಪ್ರಮುಖ ಸುದ್ದಿ8 hours ago

NEET UG : ನೀಟ್​ ಪರೀಕ್ಷೆ ಅಕ್ರಮಗಳ ತನಿಖೆ ಹೊಣೆ ಸಿಬಿಐಗೆ ಒಪ್ಪಿಸಿದ ಕೇಂದ್ರ ಸರ್ಕಾರ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka weather Forecast
ಮಳೆ2 days ago

Karnataka Weather : ರಭಸವಾಗಿ ಹರಿಯುವ ನೀರಲ್ಲಿ ಸಿಲುಕಿದ ಬೊಲೆರೋ; ಬಿರುಗಾಳಿ ಸಹಿತ ಮಳೆ ಎಚ್ಚರಿಕೆ

International Yoga Day 2024
ಕರ್ನಾಟಕ2 days ago

International Yoga Day 2024: ಎಲ್ಲೆಲ್ಲೂ ಯೋಗಾಯೋಗ‌ಕ್ಕೆ ಮಂಡಿಯೂರಿದ ಜನತೆ

Karnataka Weather Forecast
ಮಳೆ3 days ago

Karnataka Weather : ಬಾಗಲಕೋಟೆ, ಬೆಂಗಳೂರು ಸೇರಿ ಚಿಕ್ಕಮಗಳೂರಲ್ಲಿ ಸುರಿದ ಗಾಳಿ ಸಹಿತ ಮಳೆ

Actor Darshan
ಮೈಸೂರು6 days ago

Actor Darshan : ಕೊಲೆ ಕೇಸ್‌ ಬೆನ್ನಲ್ಲೇ ನಟ ದರ್ಶನ್‌ ಸೇರಿ ಪತ್ನಿ ವಿಜಯಲಕ್ಷ್ಮಿಗೆ ಬಾರ್ ಹೆಡೆಡ್ ಗೂಸ್ ಸಂಕಷ್ಟ!

Bakrid 2024
ಬೆಂಗಳೂರು6 days ago

Bakrid 2024 : ಮತ್ತೊಂದು ಧರ್ಮವನ್ನೂ ಪ್ರೀತಿಸಿ; ಬಕ್ರೀದ್‌ ಪ್ರಾರ್ಥನೆಯಲ್ಲಿ ಸಿಎಂ ಸಿದ್ದರಾಮಯ್ಯ ಕರೆ

Renukaswamy murder case The location of the accused is complete
ಸಿನಿಮಾ7 days ago

Renuka Swamy murder : ಭೀಕರವಾಗಿ ಕೊಂದರೂ ಆರೋಪಿಗಳಿಗೆ ಕಾಡುತ್ತಿಲ್ವಾ ಪಾಪಪ್ರಜ್ಞೆ? ನಗುತ್ತಲೇ ಹೊರಬಂದ ಪವಿತ್ರಾ ಗೌಡ, ಪವನ್‌

Renuka swamy murder
ಚಿತ್ರದುರ್ಗ7 days ago

Renuka swamy Murder : ರೇಣುಕಾಸ್ವಾಮಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಾಳೆಹೊನ್ನೂರು ಶ್ರೀಗಳು

Vijayanagara News
ವಿಜಯನಗರ7 days ago

Vijayanagara News : ಕೆಲಸಕ್ಕೆ ಚಕ್ಕರ್, ಸಂಬಳಕ್ಕೆ ಹಾಜರ್! ಹಾರಕನಾಳು ಗ್ರಾಪಂ ಪಿಡಿಓಗಾಗಿ ಗ್ರಾಮಸ್ಥರ ಹುಡುಕಾಟ

Actor Darshan
ಯಾದಗಿರಿ1 week ago

Actor Darshan : ಬಾಸ್‌ ಅಂತ ಯಾಕ್‌ ಬಕೆಟ್‌ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!

Karnataka Weather Forecast
ಮಳೆ1 week ago

Karnataka Weather : ಕರಾವಳಿ, ಉತ್ತರ ಒಳನಾಡಿನಲ್ಲಿ ವರುಣಾರ್ಭಟ; ನಾಳೆಯು ಹಲವೆಡೆ ಸಿಕ್ಕಾಪಟ್ಟೆ ಮಳೆ

ಟ್ರೆಂಡಿಂಗ್‌