ಸುಖಿ ದಾಂಪತ್ಯ | ಪ್ರೀತಿಯೇ ಉಸಿರಾಗಿರುವ ಪರ್ಫೆಕ್ಟ್‌ ಫ್ಯಾಮಿಲಿಗೆ 10 ಗುಟ್ಟುಗಳು! - Vistara News

ಪ್ರಮುಖ ಸುದ್ದಿ

ಸುಖಿ ದಾಂಪತ್ಯ | ಪ್ರೀತಿಯೇ ಉಸಿರಾಗಿರುವ ಪರ್ಫೆಕ್ಟ್‌ ಫ್ಯಾಮಿಲಿಗೆ 10 ಗುಟ್ಟುಗಳು!

ಪ್ರೀತಿಸುವ ಜೋಡಿಗಳ ಸಂಬಂಧ ಚೆನ್ನಾಗಿರಬೇಕೆಂದರೆ, ಇಬ್ಬರಲ್ಲೂ ಕೊಡುಕೊಳ್ಳುವ ಗುಣವಿರಬೇಕು. ಒಬ್ಬರಿಗೊಬ್ಬರು ನೀಡಬೇಕಾದ ಸಪೋರ್ಟ್‌ ಇದ್ದರೆ ಮಾತ್ರ ಅಲ್ಲಿ ಜೀವಂತಿಕೆ, ಖುಷಿ, ಎಲ್ಲವೂ ಇರುತ್ತದೆ.

VISTARANEWS.COM


on

couple tips
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಪರ್ಫೆಕ್ಷನ್!‌ ಎಲ್ಲವೂ ಪರ್ಫೆಕ್ಟ್‌ ಆಗಿರಬೇಕು, ಲೈಫೂ ಕೂಡಾ, ಸಂಬಂಧಗಳೂ ಕೂಡಾ ಎಂದು ಎಲ್ಲರೂ ಬಯಸುವುದು ಸಹಜವೇ. ಆದರೆ, ಎಲ್ಲದರಲ್ಲೂ ಪರ್ಫೆಕ್ಷನ್‌ ಸಾಧ್ಯವೇ ಹೇಳಿ. ಪ್ರತಿಯೊಂದು ಸಂಬಂಧಕ್ಕೂ ಇದು ಅನ್ವಯಿಸುವ ಮಾತು. ಪರ್ಫೆಕ್ಟ್‌ ಅಮ್ಮ, ಪರ್ಫೆಕ್ಟ್‌ ಅಪ್ಪ, ಪರ್ಫೆಕ್ಟ್‌ ಗಂಡ, ಪರ್ಫೆಕ್ಟ್‌ ಹೆಂಡತಿ ಹೀಗೆಲ್ಲ ಅಂದುಕೊಂಡರೂ ಯಾವ ಕುಂದುಕೊರತೆಯೂ ಇಲ್ಲದಂತೆ ಪರ್ಫೆಕ್ಟ್‌ ಆಗಿರುವುದು ಸಾಧ್ಯವೇ ಇಲ್ಲ. ಎಷ್ಟೇ ಪ್ರೀತಿಸಿ ಮದುವೆಯಾಗಿರಲಿ, ʻಒಂದೇ ಉಸಿರಂತೆ ಇಂದು ನಾನೂ ನೀನುʼ ಎಂದು ಹಾಡಲಿ, ಯಾವ ಸಂಬಂಧವೂ ಪರ್ಫೆಕ್ಟ್‌ ಆಗಿರುವುದಿಲ್ಲ. ಜೊತೆಗೆ ಒಬ್ಬರಿಗೆ ಪರ್ಫೆಕ್ಟ್‌ ಆಗಿ ಕಂಡಿದ್ದು ಮತ್ತೊಬ್ಬರಿಗೆ ಹಾಗೆ ಕಾಣಬೇಕಿಲ್ಲ. ಯಾಕೆಂದರೆ ಪರ್ಫೆಕ್ಷನ್‌ ಎಂಬುದು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತದೆ!

ಎಷ್ಟೇ ಒಳ್ಳೆಯವರಾದರೂ ಪ್ರತಿಯೊಬ್ಬರಲ್ಲೂ ನ್ಯೂನತೆಗಳಿದ್ದೇ ಇರುತ್ತವೆ. ಪ್ರೀತಿಸುವ ಜೋಡಿಗಳ ಸಂಬಂಧ ಚೆನ್ನಾಗಿರಬೇಕೆಂದರೆ, ಇಬ್ಬರಲ್ಲೂ ಒಬ್ಬರಿಗೊಬ್ಬರು ಕೊಡುಕೊಳ್ಳುವ ಗುಣವಿರಬೇಕು.

೧. ಅಲ್ಲಿ ಜಡ್ಜ್‌ಮೆಂಟ್‌ ಇರಬಾರದು. ಸಂಬಂಧಗಳಲ್ಲಿ ಖುಷಿ ಇರುವುದು ಇಬ್ಬರೂ ಒಬ್ಬರಿಗೊಬ್ಬರು ತಮ್ಮೆಲ್ಲ ಒಳಹೊರಗನ್ನು ಯಾವ ಮುಜುಗರವೂ ಇಲ್ಲದೆ ಪರಸ್ಪರ ವ್ಯಕ್ತಪಡಿಸಲು ಸಾಧ್ಯವಾದಾಗ. ಜೊತೆಗೆ, ಹಾಗೆ ವ್ಯಕ್ತಪಡಿಸಿದಾಗ ಮತ್ತೊಬ್ಬರು ಈ ಬಗ್ಗೆ ತಪ್ಪು ತಿಳಿಯದಿದ್ದಾಗ, ಬೇಕಾದಾಗ ಹೆಗಲು ಕೊಟ್ಟು ನಿಂತಾಗ, ಜಡ್ಜ್‌ಮೆಂಟಲ್‌ ಆಗದೆ ಇದ್ದಾಗ. ಇಂಥದ್ದೊಂದು ಭಾವ, ಒಬ್ಬರಿಗೊಬ್ಬರು ನೀಡಬೇಕಾದ ಸಪೋರ್ಟ್‌ ಇದ್ದರೆ ಮಾತ್ರ ಅಲ್ಲಿ ಜೀವಂತಿಕೆ, ಖುಷಿ, ಎಲ್ಲವೂ ಇರುತ್ತದೆ.

೨. ಒಬ್ಬರ ಜೊತೆಗೇ ಜೀವನ ನಡೆಸುವಾಗ ಚರ್ಚೆ, ವಾಗ್ವಾದ ಸಾಮಾನ್ಯ. ಆದರೆ ಆರೋಗ್ಯಕರ ಸಂಬಂಧದಲ್ಲಿ ಜಗಳಕ್ಕಿಂತಲೂ ಚರ್ಚೆಯಾದರೆ ಚೆನ್ನ. ನಾವು ಕೇವಲ ಚರ್ಚೆ ಮಾಡುತ್ತಿದ್ದೇವೆ, ಇದು ಜಗಳ ಅಲ್ಲ ಎಂಬುದು ಇಬ್ಬರಿಗೂ ಗೊತ್ತಿರಬೇಕು ಹಾಗೂ ಚರ್ಚೆಯ ನಂತರ ಮೊದಲಿನ ಸಂಬಂಧ ಸಾಧ್ಯವಾಗಬೇಕು.

೩. ಒಬ್ಬರಿಗೊಬ್ಬರು ಬೆಂಗಾವಲಾಗಬೇಕು. ಇಬ್ಬರ ನಡುವಿನ ಆಸಕ್ತಿ ಜೀವನದ ಗುರಿಗಳಲ್ಲಿ ವ್ಯತ್ಯಾಸ ಇದ್ದರೂ ಇಬ್ಬರೂ ಒಬ್ಬರಿಗೊಬ್ಬರು ಸಹಕಾರ, ಕಾಳಜಿ ಮಾಡುವುದನ್ನು ಮರೆಯಬಾರದು. ಒಂದು ಪ್ರಾಮಾಣಿಕ, ಕಾಳಜಿ, ಪ್ರೀತಿ ಗೌರವಗಳು ಇದ್ದಲ್ಲಿ ಆರೋಗ್ಯಕರ ಸಂಬಂಧ ನೆಲೆಸಿರುತ್ತದೆ. ಗುರಿ ಸುಲಭವಾಗುತ್ತದೆ.

೪. ಕೇವಲ ಮಾನಸಿಕ ಸಾಂಗತ್ಯವಷ್ಟೇ ಅಲ್ಲ, ದೈಹಿಕ ಸಾಂಗತ್ಯವೆಂಬುದು ಗಂಡಹೆಂಡಿರ ಸಂಬಂಧದ ಬಹುಮುಖ್ಯ ಘಟ್ಟ. ಇಬ್ಬರೂ ಒಬ್ಬರನ್ನೊಬ್ಬರು ಅರಿತು ಖುಷಿ ಪಡುವುದು ಹಾಗೂ ಪಡಿಸುವುದು ಬಹಳ ಮುಖ್ಯ.

ಇದನ್ನೂ ಓದಿ | Soulmate | ದಾಂಪತ್ಯದಲ್ಲಿ ಪವರ್‌ ಜೋಡಿಯಾಗಿ ಬದಲಾಗಲು ಐದು ಸೂತ್ರಗಳು!

೫. ನಂಬಿಕೆಯೆಂಬುದು ಪ್ರೀತಿಯಲ್ಲಿ, ದಾಂಪತ್ಯದಲ್ಲಿ ಬಹುಮುಖ್ಯ. ಸಂಗಾತಿಯ ನಂಬಿಕೆಯನ್ನು ಒಮ್ಮೆ ಮುರಿದರೆ, ಮತ್ತೆ ಸಂಬಂಧ ಮೊದಲಿನಂತಾಗುದು ಬಹಳ ಕಷ್ಟ. ಅದಕ್ಕಾಗಿ ಸಾಕಷ್ಟು ಶ್ರದ್ಧೆ, ಪ್ರೀತಿ ಕಾಳಜಿಗಳು ಅತ್ಯಗತ್ಯ. ತನ್ನ ಸಂಗಾತಿ ತನ್ನ ಮೇಲೆ ಸಂಶಯ ಪಡುತ್ತಿದ್ದಾನೆ/ಳೆ ಎಂಬುದು ಯಾರಿಗೇ ಆದರೂ ಅರಗಿಸಿಕೊಳ್ಳಲಾಗದ ಸತ್ಯ.

೬. ಒಬ್ಬರ ಮೇಲೆ ಮತ್ತೊಬ್ಬರಿಗೆ ಪ್ರೀತಿಯಷ್ಟೇ ಗೌರವವೂ ಇರಬೇಕಾದುದು ಬಹಳ ಮುಖ್ಯ. ಪ್ರಾಮಾಣಿಕತೆ, ನಂಬಿಕೆ, ಗೆಳೆತನ ಹಾಗೂ ಸಾಂಗತ್ಯ ಎಲ್ಲವೂ ಒಬ್ಬರ ಮೇಲೆ ಮತ್ತೊಬ್ಬರಿಗೆ ಗೌರವವನ್ನೂ ಹೆಚ್ಚಿಸುತ್ತದೆ.

೭. ಇಬ್ಬರಿಗೂ ತಮ್ಮ ಬದುಕಿನ ಬಗೆಗೆ ಒಂದೇ ಮಾದರಿಯ ಗುರಿಯಿರಬೇಕು. ಇಬ್ಬರ ಗುರಿಗಳೂ, ಬದುಕಿನ ಬಗೆಗಿನ ಒಳನೋಟ, ರುಚಿಗಳೂ ಒಂದಕ್ಕೊಂದು ಹೊಂದಿಕೆಯಾಗುವಂತಿರಬೇಕು. ಹಾಗಿದ್ದಲ್ಲಿ, ಜೊತೆಯಾಗಿ ಮುನ್ನಡೆಯಲು ಯಾವ ಅಡೆತಡೆಯೂ ಬರುವುದಿಲ್ಲ.

೮. ಪರಸ್ಪರ ರಾಜಿ ಮಾಡಿಕೊಳ್ಳುವುದು ಬಹಳ ಮುಖ್ಯ. ಒಬ್ಬರ ಸುಖಕ್ಕೆ ಮತ್ತೊಬ್ಬರು ಕೆಲವೊಂದು ವಿಚಾರಗಳಿಗೆ ಸಂಸಾರದಲ್ಲಿ ರಾಜಿಯಾಗಲೇ ಬೇಕಾಗುತ್ತದೆ. ಪ್ರೀತಿ ಇದ್ದಲ್ಲಿ ಇದು ಕಷ್ಟವಿಲ್ಲ. ಆದರೆ, ಪರಿಸ್ಥಿತಿಯ ಬಗ್ಗೆ ರಾಜಿಯಾಗುವುದು ಇಬ್ಬರಿಗೂ ಸಾಧ್ಯವಾಗದೆ ಇದ್ದಲ್ಲಿ ನಡುವೆ ಅಹಂ ಎಂಬ ಕಂದಕ ಬೃಹದಾಕಾರ ತಾಳಿ ಸಂಬಂಧ ಹದಗೆಡುತ್ತದೆ.

ಇದನ್ನೂ ಓದಿ | Viral news | ತಿಂಗಳಿಗೊಂದು ಫ್ರೀ ಪಿಜ್ಜಾ: ಮದುವೆಯ ವಿಚಿತ್ರ ಒಪ್ಪಂದಕ್ಕೆ ಸಿಕ್ಕ ಉಡುಗೊರೆ!

೯. ಇಬ್ಬರಿಗೂ ತಮ್ಮ ಸಂಗಾತಿಗೂ ಒಂದು ಭೂತಕಾಲವಿತ್ತು ಎಂಬುದರ ಬಗ್ಗೆ ಗೌರವವಿರಬೇಕು. ಹಳೆಯ ಪ್ರೀತಿ, ಭಗ್ನಪ್ರೇಮಗಳು ಈ ಸಂಬಂಧವನ್ನು ಹಾಳುಗೆಡವದಂತೆ ನೋಡಿಕೊಳ್ಳಬೇಕು. ಇಬ್ಬರ ಹಳೆಯ ಕಥೆಗಳ ಬಗ್ಗೆ ವಿಪರೀತ ಕೆದಕುವುದು ಅಗತ್ಯವಿಲ್ಲ.

೧೦. ಚಿಕ್ಕಚಿಕ್ಕ ಖುಷಿಗಳು, ಸಂತಸಗಳು ಬದುಕನ್ನು ಕಾಪಿಡುತ್ತವೆ. ಮುನ್ನಡೆಸುತ್ತವೆ. ಪರಸ್ಪರ ಒಬ್ಬರಿಗೊಬ್ಬರು ಕೊಟ್ಟುಕೊಳ್ಳುವ ಸಮಯ, ಜೊತೆಯಾಗಿ ಅನುಭವಿಸಬಲ್ಲ ನಿಜದ ಖುಷಿಗಳಷ್ಟೇ ಬಾಳುತ್ತವೆ. ಸಂಗಾತಿಯ ಹೊಗಳಿಕೆ, ಕಾಳಜಿ, ಕೆಲಸಕ್ಕೆ ನೀಡುವ ಸಹಕಾರ ಇತ್ಯಾದಿ ಇತ್ಯಾದಿಗಳು ಸಣ್ಣದೆನಿಸಿದರೂ ಇವುಗಳ ಪಾತ್ರ ಬಹಳ ದೊಡ್ಡದು ಎಂಬ ಸತ್ಯ ಅರಿವಾದವನು/ಳು ನಿಜದ ಸುಖಿ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

Latest

Accident Case: ಕಾರು ಡಿಕ್ಕಿ ರಭಸಕ್ಕೆ ಹತ್ತಾರು ಅಡಿ ದೂರ ಹಾರಿ ಬಿದ್ದ ಮಹಿಳೆ; ಭಯಾನಕ ವಿಡಿಯೊ

Accident Case: ದಿನ ಬೆಳಗಾದರೆ ಅಲ್ಲೊಂದು ಆ್ಯಕ್ಸಿಡೆಂಟ್, ಇಲ್ಲೊಂದು ಆಕ್ಸಿಡೆಂಟ್ ಎಂಬ ಸುದ್ದಿ ಕೇಳುತ್ತೇವೆ. ಜನಸಂಖ್ಯೆ ಜಾಸ್ತಿ ಆದ ಹಾಗೇ ವಾಹನಗಳ ಸಂಖ್ಯೆಯೂ ಜಾಸ್ತಿ ಆಗಿದೆ. ಮಹಾರಾಷ್ಟ್ರದಲ್ಲಿ ರಸ್ತೆ ದಾಟುತ್ತಿದ್ದ ಮಹಿಳೆಗೆ ವೇಗವಾಗಿ ಬಂದ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಆಕೆ ಸುಮಾರು ದೂರದವರೆಗೆ ಹಾರಿ ಬಿದ್ದು ರಸ್ತೆಯಲ್ಲಿ ಪ್ರಜ್ಞಾಹೀನಳಾಗಿ ಬಿದ್ದ ಘಟನೆ ನಡೆದಿದೆ.

VISTARANEWS.COM


on

Accident Case
Koo

ಮಹಾರಾಷ್ಟ್ರ : ಇತ್ತೀಚಿನ ದಿನಗಳಲ್ಲಿ ರಸ್ತೆ ಅಪಘಾತಗಳು (Accident Case ) ಸರ್ವೇ ಸಾಮಾನ್ಯವಾಗಿ ಬಿಟ್ಟಿದೆ. ದಿನದಲ್ಲಿ ಒಂದಲ್ಲ ಒಂದು ಕಡೆ ರಸ್ತೆ ಅಪಘಾತ ಸಂಭವಿಸುತ್ತಿರುತ್ತದೆ. ಅದರಲ್ಲೂ ಡಬಲ್ ರೋಡ್ ಆದ ಮೇಲಂತೂ ವಾಹನಗಳ ವೇಗಕ್ಕೆ ಮಿತಿಯೇ ಇಲ್ಲ, ಮನುಷ್ಯರ ಜೀವಕ್ಕೂ ಬೆಲೆಯೇ ಇಲ್ಲದಂತಾಗಿದೆ. ಶಾಲಾ ಮಕ್ಕಳು ಓಡಾಡುವ ಸ್ಥಳ, ಜನಸಂದಣಿ ಹೆಚ್ಚಾಗಿರುವ ಸ್ಥಳ, ತಿರುವುಗಳಲ್ಲಿ ಕೂಡ ನಿಧಾನವಾಗಿ ಚಲಿಸುವ ಬದಲು ವೇಗವಾಗಿ ಬಂದು ಡಿಕ್ಕಿ ಹೊಡೆದು ಹೋಗುತ್ತಿರುತ್ತಾರೆ. ಟ್ರಾಫಿಕ್ ರೂಲ್ಸ್ ಗಳಿಗೆ ಬೆಲೆಯೇ ಇಲ್ಲದಂತಾಗಿದೆ. ಇದೀಗ ಅಂತಹದೊಂದು ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.

ರಸ್ತೆ ದಾಟುತ್ತಿದ್ದ ಮಹಿಳೆಗೆ ವೇಗವಾಗಿ ಬಂದ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಆಕೆ ಹತ್ತಾರು ಅಡಿ ದೂರ ಹಾರಿ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾಳೆ. ಮಹಾರಾಷ್ಟ್ರದ ಪಿಂಪ್ರಿ-ಚಿಂಚ್‌ವಾಡ್‌ನಲ್ಲಿ ಸ್ವರಾಜ್ ಚೌಕ್‌ನಲ್ಲಿ ಈ ಅಪಘಾತ ಸಂಭವಿಸಿದೆ. ಸಿಸಿಟಿವಿಯಲ್ಲಿ ಈ ದೃಶ್ಯ ಸೆರೆಯಾಗಿದ್ದು, ಮಹಿಳೆ ರಸ್ತೆ ದಾಟುವಾಗ ಬಿಳಿ ಬಣ್ಣದ ವ್ಯಾಗನ್ ಆರ್ ಕಾರೊಂದು ಅತಿವೇಗವಾಗಿ ಬಂದು ಆಕೆಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಆಕೆ ಸುಮಾರು ದೂರದವರೆಗೆ ಹಾರಿ ಬಿದ್ದು ರಸ್ತೆಯಲ್ಲಿ ಪ್ರಜ್ಞಾಹೀನಳಾಗಿ ಬಿದ್ದಿದ್ದಳು. ಆಗ ಅಲ್ಲಿದ್ದವರು ಆಕೆಯ ಸಹಾಯಕ್ಕೆ ಧಾವಿಸಿದರು. ನಂತರ ಚಾಲಕನೇ ಆಕೆಯನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದದಿದ್ದಾನೆ. ಗಂಭೀರವಾಗಿ ಗಾಯಗೊಂಡ ಆಕೆ ಈಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.


ಸಂತ್ರಸ್ತೆಯ ಹೆಸರು ರೇಖಾ ಎಂದು ತಿಳಿದು ಬಂದಿದೆ. ಆರೋಪಿ ಚಾಲಕ 24 ವರ್ಷ ವಯಸ್ಸಿನ ವಿನಯ್ ವಿಲಾಸ್ ನಾಯಕ್, ಆತ ಪೊಲೀಸ್ ಅಧಿಕಾರಿಯ ಮಗ ಎಂದು ವರದಿಯಾಗಿದೆ. ಈ ಪ್ರಕರಣ ಪಿಂಪ್ರಿ-ಚಿಂಚ್‌ವಾಡ್‌ನ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ, ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

ಭಾರತೀಯ ದಂಡ ಸಂಹಿತೆಯ ಸೆಕ್ಷನ್ 279 ಮತ್ತು 337 ಮತ್ತು ವೋಟಾರು ವಾಹನ ಕಾಯ್ದೆಗೆ ಸಂಬಂಧಿಸಿದ ವಿಭಾಗಗಳ ಅಡಿಯಲ್ಲಿ ಆರೋಪಗಳು ದಾಖಲಾಗಿದೆ.

ಇದನ್ನೂ ಓದಿ: Akira Nandan: ಅಕಿರಾ ನಂದನ್‌; ಆರೂವರೆ ಅಡಿ ಎತ್ತರದ ಪವನ್ ಕಲ್ಯಾಣ್ ಪುತ್ರನಿಗೆ ಭಾರಿ ಡಿಮ್ಯಾಂಡ್‌!

ವರದಿಗಳ ಪ್ರಕಾರ ಚಾಲಕ ಕಾರಿನ ಮೇಲೆ ನಿಯಂತ್ರಣ ಕಳೆದುಕೊಂಡು ಪರಿಣಾಮ ಈ ಅಪಘಾತ ಸಂಭವಿಸಿದೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ ಎಂದು ಪಿಂಪ್ರಿ-ಚಿಂಚ್‌ವಾಡ್‌ನ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎನ್ನಲಾಗಿದೆ. ಇದು ಕುಡಿದು ವಾಹನ ಚಲಾಯಿಸಿದ ಪ್ರಕರಣವಲ್ಲ ಎಂದು ಅವರು ತಿಳಿಸಿದ್ದಾರೆ.

Continue Reading

ದೇಶ

Narendra Modi: ತಂತ್ರಜ್ಞಾನ ಜತೆಗೆ ಮಾನವ ಕೇಂದ್ರಿತ ಏಳಿಗೆಗೆ ಭಾರತ ಆದ್ಯತೆ; ಇಟಲಿ ಜಿ7 ಸಭೆಯಲ್ಲಿ ಮೋದಿ

Narendra Modi: ಜಿ-7 ಶೃಂಗಸಭೆಯಲ್ಲಿ ನರೇಂದ್ರ ಮೋದಿ ಅವರು ಸೈಬರ್‌ ಭದ್ರತೆ, ಗ್ಲೋಬಲ್‌ ಸೌತ್‌, ಭಾರತದ ಅಧ್ಯಕ್ಷತೆಯಲ್ಲಿ ನಡೆದ ಜಿ-20 ಶೃಂಗಸಭೆ, ವಿಕಸಿತ ಭಾರತದ ಗುರಿ, ಇಂಧನದ ಸದ್ಬಳಕೆ, ಪರಿಸರ ಜಾಗೃತಿ ಸೇರಿ ಹಲವು ವಿಷಯಗಳನ್ನು ಪ್ರಸ್ತಾಪಿಸಿದರು. ಹಾಗೆಯೇ, ಇತ್ತೀಚೆಗೆ ನಡೆದ ಲೋಕಸಭೆ ಚುನಾವಣೆ, ಫಲಿತಾಂಶವನ್ನೂ ಮೋದಿ ಸ್ಮರಿಸಿದರು. ಅವರ ಭಾಷಣದ ಪ್ರಮುಖ ಅಂಶಗಳು ಇಲ್ಲಿವೆ.

VISTARANEWS.COM


on

Narendra Modi
Koo

ರೋಮ್: ಲೋಕಸಭೆ ಚುನಾವಣೆ ಬಳಿಕ ಮೊದಲ ಬಾರಿಗೆ ವಿದೇಶಕ್ಕೆ ತೆರಳಿರುವ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಜಿ-7 ಶೃಂಗಸಭೆಯಲ್ಲಿ (G7 Summit Italy) ಪಾಲ್ಗೊಂಡರು. ಇದೇ ವೇಳೆ ಮಾತನಾಡಿದ ಅವರು, “ತಂತ್ರಜ್ಞಾನದ ಅಳವಡಿಕೆ ಜತೆಗೆ ಮಾನವ ಕೇಂದ್ರಿತವಾಗಿಯೇ ಏಳಿಗೆ ಹೊಂದಲು ಭಾರತ ಆದ್ಯತೆ ನೀಡುತ್ತಿದೆ. ಜಾಗತಿಕವಾಗಿ ತಂತ್ರಜ್ಞಾನದ ಜತೆಗೇ ಮಾನವ ಕೇಂದ್ರಿತ ಅಭಿವೃದ್ಧಿಯು ಪ್ರಮುಖ ವಿಷಯವಾಗಬೇಕಿದೆ” ಎಂದು ಪ್ರತಿಪಾದಿಸಿದರು.

“ತಂತ್ರಜ್ಞಾನವನ್ನು ಸೃಜನಶೀಲತೆಯ ಸೃಷ್ಟಿಗಾಗಿ, ಅಭಿವೃದ್ಧಿಗಾಗಿ, ಏಳಿಗೆಗಾಗಿ ಬಳಸಬೇಕೇ ಹೊರತು, ವಿನಾಶಕ್ಕಾಗಿ ಅದನ್ನು ಬಳಸಬಾರದು. ಜಗತ್ತಿನಾದ್ಯಂತ ಬೇರೂರಿರುವ ಸಾಮಾಜಿಕ ಅಸಮಾನತೆಯನ್ನು ನಿರ್ಮೂಲನೆ ಮಾಡುವ ದಿಸೆಯಲ್ಲಿ ಇಂದು ತಂತ್ರಜ್ಞಾನವನ್ನು ಬಳಸಬೇಕಾಗಿದೆ. ಭಾರತವು, ಇಂತಹ ಪ್ರಯತ್ನ ಮಾಡುತ್ತಿದೆ. ಕೃತಕ ಬುದ್ಧಿಮತ್ತೆ ಸೇರಿ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಏಳಿಗೆಯತ್ತ ಮುಂದೆ ಸಾಗುತ್ತಿದೆ. ಎಲ್ಲರಿಗೂ ಕೃತಕ ಬುದ್ಧಿಮತ್ತೆ (AI For All) ಎಂಬ ತತ್ವದೊಂದಿಗೆ, ಕೃತಕ ಬುದ್ಧಿಮತ್ತೆ ಬಳಕೆಗೆ ರಾಷ್ಟ್ರೀಯ ಸ್ಟ್ರ್ಯಾಟಜಿಯೊಂದಿಗೆ ಮುನ್ನಡೆಯುತ್ತಿದೆ” ಎಂದು ತಿಳಿಸಿದರು.

ಚುನಾವಣೆ ಗೆಲುವಿನ ಪ್ರಸ್ತಾಪ

ಕಳೆದ ಲೋಕಸಭೆ ಚುನಾವಣೆ ಕುರಿತು ಕೂಡ ನರೇಂದ್ರ ಮೋದಿ ಮಾತನಾಡಿದರು. “ಇತ್ತೀಚೆಗೆ ಭಾರತದಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲೂ ತಂತ್ರಜ್ಞಾನವನ್ನು ಬಳಸಿಕೊಳ್ಳಲಾಯಿತು. ತಂತ್ರಜ್ಞಾನದ ಸಹಾಯದಿಂದ ಪಾರದರ್ಶಕವಾಗಿ ಚುನಾವಣೆ ನಡೆಸಲಾಯಿತು. ಜಗತ್ತಿನ ದೊಡ್ಡ ಪ್ರಜಾಪ್ರಭುತ್ವ ದೇಶದಲ್ಲಿ ನಡೆದ ಚುನಾವಣೆ ಫಲಿತಾಂಶವನ್ನು ಕೆಲವೇ ಗಂಟೆಗಳಲ್ಲಿ ಪ್ರಕಟಿಸಲಾಯಿತು. ನಮ್ಮ ದೇಶದ ಜನ ನನಗೆ ಮೂರನೇ ಬಾರಿಗೆ ಸೇವೆ ಮಾಡಲು ಅವಕಾಶ ಕೊಟ್ಟಿರುವುದಕ್ಕೆ ನಾನು ಧನ್ಯನಾಗಿದ್ದೇನೆ” ಎಂದು ಹೇಳಿದರು.

“ಸತತ ಮೂರನೇ ಬಾರಿಗೆ ಭಾರತದ ಪ್ರಧಾನಿಯಾಗಿ ಜನ ನನ್ನನ್ನು ಆಯ್ಕೆ ಮಾಡಿದ್ದಾರೆ. ಕಳೆದ ಆರು ದಶಕಗಳಲ್ಲಿಯೇ ಮೊದಲ ಬಾರಿಗೆ ನಮ್ಮ ದೇಶದ ಜನ ಸತತ ಮೂರನೇ ಬಾರಿಗೆ ಆಯ್ಕೆ ಮಾಡಿದ್ದಾರೆ. ಭಾರತದ ಮತದಾರರು ನೀಡಿದ ಜಯವು ಪ್ರಜಾಪ್ರಭುತ್ವದ ಜಯವಾಗಿದೆ” ಎಂದು ಹೇಳಿದರು. ಸೈಬರ್‌ ಭದ್ರತೆ, ಗ್ಲೋಬಲ್‌ ಸೌತ್‌, ಭಾರತದ ಅಧ್ಯಕ್ಷತೆಯಲ್ಲಿ ನಡೆದ ಜಿ-20 ಶೃಂಗಸಭೆ, ವಿಕಸಿತ ಭಾರತದ ಗುರಿ, ಇಂಧನದ ಸದ್ಬಳಕೆ, ಪರಿಸರ ಜಾಗೃತಿ ಸೇರಿ ಹಲವು ವಿಷಯಗಳನ್ನು ಮೋದಿ ಪ್ರಸ್ತಾಪಿಸಿದರು.

ಇದನ್ನೂ ಓದಿ: Narendra Modi: ಸ್ನೇಹಿತ ಮೋದಿಯನ್ನು ಕೈಮುಗಿದು ಆತ್ಮೀಯವಾಗಿ ಸ್ವಾಗತಿಸಿದ ಇಟಲಿ ಪ್ರಧಾನಿ ಮೆಲೋನಿ; Video ಇದೆ

Continue Reading

ಕರ್ನಾಟಕ

Teachers Transfer 2024: ಶಿಕ್ಷಕರ ವರ್ಗಾವಣೆಯ ಪರಿಷ್ಕೃತ ವೇಳಾಪಟ್ಟಿ ಇಂದು ಪ್ರಕಟ ಸಾಧ್ಯತೆ

Teachers Transfer 2024: ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಪಕರನ್ನೂ ಒಳಗೊಂಡಂತೆ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರ ವರ್ಗಾವಣೆಯ ಪರಿಷ್ಕೃತ ವೇಳಾಪಟ್ಟಿ ಇಂದು ಜೂನ್‌ 15ರಂದು ಪ್ರಕಟಗೊಳ್ಳುವ ಸಾಧ್ಯತೆ ಇದೆ. ಈ ವೇಳಾಪಟ್ಟಿ ಪ್ರಕಟವಾದ ಬಳಿಕ ವರ್ಗಾವಣೆಗೆ ಸಂಬಂಧಿಸಿ ಕೌನ್ಸೆಲಿಂಗ್‌ ನಡೆಯಲಿದೆ. ವರ್ಗಾವಣೆ ಕೋರಿ ರಾಜ್ಯಾದ್ಯಂತ ಸಾವಿರಾರು ಶಿಕ್ಷಕರು ಅರ್ಜಿ ಸಲ್ಲಿಸಿದ್ದಾರೆ.

VISTARANEWS.COM


on

Teachers Transfer 2024
Koo

ಬೆಂಗಳೂರು: ರಾಜ್ಯಾದ್ಯಂತ (Teachers Transfer 2024) ಸಾವಿರಾರು ಸರ್ಕಾರಿ ಶಿಕ್ಷಕರು ಭಾರಿ ನಿರೀಕ್ಷೆಯಿಂದ ಕಾಯುತ್ತಿರುವ ವರ್ಗಾವಣೆ ವೇಳಾಪಟ್ಟಿ ಇಂದು (ಜೂನ್‌ 15) ಪ್ರಕಟಗೊಳ್ಳುವ ಸಾಧ್ಯತೆ ಇದೆ.
ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಪಕರನ್ನೂ ಒಳಗೊಂಡಂತೆ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಯ ಭಾಗವಾಗಿ ಈ ವೇಳಾಪಟ್ಟಿ ಪ್ರಕಟವಾಗಲಿದೆ. ವೇಳಾಪಟ್ಟಿ ಪ್ರಕಟವಾದ ಬಳಿಕ ವರ್ಗಾವಣೆಗೆ ಸಂಬಂಧಿಸಿ ಕೌನ್ಸೆಲಿಂಗ್‌ ನಡೆಯಲಿದೆ. ವರ್ಗಾವಣೆಗೆ ಅರ್ಜಿ ಇತ್ಯಾದಿ ಪ್ರಕ್ರಿಯೆ ಮಾರ್ಚ್‌ 18ರಿಂದ ಪ್ರಾರಂಭವಾಗಿತ್ತು. ಲೋಕಸಭೆ ಚುನಾವಣೆ (Lok Sabha Election 2024) ಘೋಷಣೆ ಮತ್ತು ನೀತಿ ಸಂಹಿತೆ ಜಾರಿಯು ಈ ಪ್ರಕ್ರಿಯೆಗೆ ತೊಡಕಾಗಿತ್ತು.

ಹೆಚ್ಚುವರಿ ಶಿಕ್ಷಕರ ಸಮರ್ಪಕ ಮರುಹಂಚಿಕೆ ಮತ್ತು ಕಡ್ಡಾಯ ವಲಯ ವರ್ಗಾವಣೆಗಳನ್ನು ಒಂದರ ನಂತರ ಒಂದನ್ನು ಪರ್ಯಾಯ ವರ್ಷಗಳಲ್ಲಿ ಹಮ್ಮಿಕೊಳ್ಳಬೇಕಾಗುತ್ತದೆ. ಅಂತೆಯೇ ಈ ಬಾರಿಯ ವರ್ಗಾವಣೆ ಪ್ರಕ್ರಿಯೆ ಆರಂಭಿಸಲಾಗಿತ್ತು. ವರ್ಗಾವಣೆಗೆ ಪೂರಕವಾದ ಇ.ಇ.ಡಿ.ಎಸ್ ದತ್ತಾಂಶ, ಖಾಲಿ ಹುದ್ದೆಗಳ ಮಾಹಿತಿ, ಶಾಲಾ ವಲಯಗಳ ಮಾಹಿತಿಯನ್ನು ಪರಿಷ್ಕರಿಸಲಾಗಿತ್ತು.

ಆನ್‌ಲೈನ್‌ ಪ್ರಕ್ರಿಯೆ

ಸಾಮಾನ್ಯ ಹಾಗೂ ಪರಸ್ಪರ ವರ್ಗಾವಣೆಗಳು ಆನ್​ಲೈನ್ ಮೂಲಕವೇ ನಡೆಯಲಿದೆ. ಶಿಕ್ಷಕರ (Weighted score) ಅಂಕಗಳ ಪ್ರಕಟ, ಆಕ್ಷೇಪಣೆ ಸಲ್ಲಿಕೆ, ವರ್ಗಾವಣಾ ಅರ್ಜಿ ಸಲ್ಲಿಸುವುದು, ಅರ್ಜಿಗಳ ಪರಿಶೀಲನೆ, ಅರ್ಜಿಗಳ ಅನುಮೋದನೆ/ ತಿರಸ್ಕಾರ, ಕರಡು ಪಟ್ಟಿ ಪ್ರಕಟಣೆ, ಆಕ್ಷೇಪಣೆಗಳ ಸಲ್ಲಿಕೆ, ಅಂತಿಮ ಆದ್ಯತಾ ಪಟ್ಟಿ ಪ್ರಕಟಣೆ, ಆದ್ಯತಾ ಪಟ್ಟಿ ಅನುಸಾರ ವರ್ಗಾವಣಾ ಕೌನ್ಸೆಲಿಂಗ್ ಪ್ರಕ್ರಿಯೆಗಳು ಇಲಾಖೆಯ ನಿಗದಿತ ತಂತ್ರಾಂಶದಲ್ಲಿಯೇ ನಿರ್ವಹಣೆಯಾಗಿದೆ.

ವರ್ಗಾವಣೆಗೆ ಕಾಯುತ್ತಿರುವ ಶಿಕ್ಷಕರು

ಕೌಟುಂಬಿಕ, ಶೈಕ್ಷಣಿಕ ಇತ್ಯಾದಿ ಕಾರಣಗಳಿಂದ ರಾಜ್ಯಾದ್ಯಂತ ಸಾವಿರಾರು ಶಿಕ್ಷಕರು ವರ್ಗಾವಣೆಯನ್ನು ಎದುರು ನೋಡುತ್ತಿದ್ದಾರೆ. ಪ್ರತಿ ಬಾರಿಯೂ ರಾಜ್ಯ ಸರ್ಕಾರ, ಶೈಕ್ಷಣಿಕ ವರ್ಷ ಆರಂಭಕ್ಕೆ ಮೊದಲೇ ವರ್ಗಾವಣೆ ಪ್ರಕ್ರಿಯೆ ಮುಗಿಸಲಾಗುವುದು ಎಂದು ಹೇಳುತ್ತದೆ. ಆದರೆ ನಾನಾ ಕಾರಣಗಳಿಂದ ಇದು ವಿಳಂಬವಾಗುತ್ತಲೇ ಇರುತ್ತದೆ. ಈಗಾಗಲೇ ಪ್ರಾಥಮಿಕ ಮತ್ತು ಪ್ರೌಢಶಾಲೆಗಳು ಆರಂಭವಾಗಿವೆ. ಆದರೆ ಇನ್ನೂ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಮುಗಿದಿಲ್ಲ. ಈ ತಿಂಗಳಲ್ಲಿ ಕೌನ್ಸೆಲಿಂಗ್‌ ಆರಂಭವಾದರೂ ಈ ಪ್ರಕ್ರಿಯೆ ಅಂತಿಮವಾಗಿ ಮುಗಿಯಲು ಕನಿಷ್ಠ ಇನ್ನೆರಡು ತಿಂಗಳು ಬೇಕಾಗಬಹುದು.

ಹಲವರು ಬದಲಾವಣೆ

ಶಿಕ್ಷಕರ ಸಂಘಗಳ ಕೋರಿಕೆ ಮೇರೆಗೆ ಈ ಬಾರಿ ವರ್ಗಾವಣೆ ಪ್ರಕ್ರಿಯೆಯಲ್ಲಿ ಕೆಲವು ಬದಲಾವಣೆ ಮಾಡಲಾಗಿದೆ ಎನ್ನಲಾಗುತ್ತಿದೆ. ವಲಯ ವರ್ಗಾವಣೆಯನ್ನು ಕೈಬಿಡುವ ಸಾಧ್ಯತೆ ಇದೆ. ಅಭಿಮತ ವರ್ಗಾವಣೆ ಸೇರಿದಂತೆ ಪರಸ್ಪರ ಕೋರಿಕೆ ವರ್ಗಾವಣೆ ಪ್ರಕ್ರಿಯೆ ಪೂರ್ಣಗೊಳಿಸುವ ಕುರಿತಂತೆ ಶಿಕ್ಷಣ ಸಚಿವರಿಂದ ಕಡತ ಅನುಮೋದನೆಗೊಂಡಿದೆ ಎನ್ನಲಾಗಿದೆ.

ಇದನ್ನೂ ಓದಿ: Shira News: ಸರ್ಕಾರಿ ಶಾಲಾ ಕೊಠಡಿ ಚಾವಣಿ ಕುಸಿತ; ಶಿಕ್ಷಕಿ ತಲೆಗೆ ಪೆಟ್ಟು, ವಿದ್ಯಾರ್ಥಿಗಳು ಪಾರು

Continue Reading

ದೇಶ

India’s Aamras : ಮಾವಿನಹಣ್ಣಿನ ಖಾದ್ಯಗಳ ಟಾಪ್‌ ಟೆನ್‌ ಪಟ್ಟಿಯಲ್ಲಿ ಭಾರತದ ಆಮ್‌ರಸ್‌ ವಿಶ್ವದಲ್ಲೇ ನಂಬರ್‌ ಒನ್!

ಇದು ಮಾವಿನಹಣ್ಣಿನ ಕಾಲ ಎಂಬ ಪ್ರೀತಿಯು ಅದಕ್ಕಾಗಿ ಕಾಯುವಂತೆ ಮಾಡುತ್ತದೆ. ಸೆಖೆಗಾಲದಲ್ಲಿ ಮಾವಿನಹಣ್ಣಿಗಾಗಿ ಕಾಯುವುದು, ಮಾವಿನಹಣ್ಣಿನಲ್ಲಿ ಬಗೆಬಗೆಯ ಭಕ್ಷ್ಯಗಳನ್ನು ತಯಾರಿಸುವುದು, ಇನ್ನೂ ಕೆಲವು ತಿಂಗಳುಗಳಿಗಾಗಿ ಮಾವಿನ ಹಣ್ಣಿನಿಂದ ಕೆಲವೊಂದು ಖಾದ್ಯಗಳನ್ನು ತಯಾರಿಸಿ ಇಡುವುದು ಎಲ್ಲವೂ ಪ್ರತಿ ಮನೆಯಲ್ಲೂ ಸಂಭ್ರಮವೇ. ಇಂತಹ ಪಾಕಪ್ರವೀಣರಾದ ನಮ್ಮ ಹಿರಿಮೆಗೆ ಇನ್ನೊಂದು ಗರಿ (India’s aamras)  ದೊರೆತಿದೆ.

VISTARANEWS.COM


on

Aamras
Koo

ಭಾರತೀಯರಿಗೆ ಮಾವಿನಹಣ್ಣಿನ ಕಾಲ ಎಂದರೆ ಪರ್ವಕಾಲ. ಎಷ್ಟೇ ಸೆಖೆ ಇರಲಿ, ಬೇಸಿಗೆಯ ಬಿಸಿಯಿಂದ ಮೈಯೆಲ್ಲ ಸುಡುತ್ತಿರಲಿ, ಇದು ಮಾವಿನಹಣ್ಣಿನ ಕಾಲ ಎಂಬ ಪ್ರೀತಿಯು ಅದಕ್ಕಾಗಿ ಕಾಯುವಂತೆ ಮಾಡುತ್ತದೆ. ಸೆಖೆಗಾಲದಲ್ಲಿ ಮಾವಿನಹಣ್ಣಿಗಾಗಿ ಕಾಯುವುದು, ಮಾವಿನಹಣ್ಣಿನಲ್ಲಿ ಬಗೆಬಗೆಯ ಭಕ್ಷ್ಯಗಳನ್ನು ತಯಾರಿಸುವುದು, ಇನ್ನೂ ಕೆಲವು ತಿಂಗಳುಗಳಿಗಾಗಿ ಮಾವಿನ ಹಣ್ಣಿನಿಂದ ಕೆಲವೊಂದು ಖಾದ್ಯಗಳನ್ನು ತಯಾರಿಸಿ ಇಡುವುದು ಎಲ್ಲವೂ ಪ್ರತಿ ಮನೆಯಲ್ಲೂ ಸಂಭ್ರಮವೇ. ಭಾರತದಲ್ಲಿ ಹಣ್ಣುಗಳ ರಾಜನಾಗಿ ಮೆರೆಯುವ ಈ ಮಾವಿನಹಣ್ಣು ತನ್ನ ವಿಶೇಷವಾದ ರುಚಿಯಿಂದ ತನ್ನತ್ತ ಪ್ರತಿಯೊಬ್ಬರನ್ನೂ ಸೆಳೆಯುತ್ತದೆ. ಅದರಲ್ಲೂ ನಾವು ಭಾರತೀಯರು ಮಾವಿನಹಣ್ಣಿನ ಬಗೆಬಗೆಯ ಭಕ್ಷ್ಯಗಳನ್ನು ಮಾಡಿ ತಿನ್ನುವುದರಲ್ಲಿ ಸಿದ್ಧಹಸ್ತರು. ಇಂತಹ ಪಾಕಪ್ರವೀಣರಾದ ನಮ್ಮ ಹಿರಿಮೆಗೆ ಇನ್ನೊಂದು ಗರಿ (India’s aamras) ದೊರೆತಿದೆ.

Aamras Or aam ras

ಇದಕ್ಕಿದೆ ಗತಕಾಲದ ಇತಿಹಾಸ

ಮಾವಿನ ಹಣ್ಣಿನ ಆಮ್‌ರಸ್‌ ಎಂಬುದಕ್ಕೆ ಗತಕಾಲದ ಇತಿಹಾಸವಿದೆ. ತಂಪಾದ ಆಮ್‌ರಸ್‌ ಹೆಸರು ಹೇಳಿದರೆ ಸಾಕು ಬಾಯಲ್ಲಿ ನೀರು ಜಿನುಗೀತು. ಇಂತಹ ಆಮ್‌ರಸ್‌ಗೀಗ ಪ್ರಪಂಚದಲ್ಲೇ ನಂಬರ್‌ ವನ್‌ ಸ್ಥಾನ ದೊರೆತಿದೆ.
ಹೌದು. 2024ರ ಜೂನ್‌ ತಿಂಗಳ ಟೇಸ್ಟ್‌ ಅಟ್ಲಾಸ್‌ ಸ್ಪರ್ಧೆಯಲ್ಲಿ ವಿಶ್ವದ ಟಾಪ್‌ 10 ಮಾವಿನ ಹಣ್ಣಿನ ಭಕ್ಷ್ಯಗಳ ಪೈಕಿ ಭಾರತದ ಆಮ್‌ರಸ್‌ಗೆ ಮೊದಲೇ ಸ್ಥಾನ ದೊರೆತಿದೆ.
ಮಹಾರಾಷ್ಟ್ರ ಹಾಗೂ ಗುಜರಾತ್‌ ರಾಜ್ಯಗಳಲ್ಲಿ ಅತ್ಯಂತ ಪ್ರಸಿದ್ಧವಾದ ಆಮ್‌ರಸ್‌ ಎಂಬ ಮಾವಿನಹಣ್ಣಿನ ತಿನಿಸು ಬಹಳ ಸರಳವಾದ ಆರದೆ, ಅಮೋಘ ರುಚಿಯ ಮಾವಿನಹಣ್ಣಿನ ಭಕ್ಷ್ಯ. ಮಾವಿನಹಣ್ಣಿನ ಕಾಲದಲ್ಲಿ ಪ್ರತಿಯೊಬ್ಬರೂ ತಮ್ಮ ಮನೆಗಳಲ್ಲಿ ಇದನ್ನು ಮಾಡುವ ಜೊತೆಗೆ ಬೆಳಗಿನ ಪೂರಿಯ ಜೊತೆಗೂ ಸೈಡ್‌ ಡಿಶ್‌ ಆಗಿ ತಿನ್ನುತ್ತಾರೆ. ಮಾವಿನ ಹಣ್ಣಿನ ಪಲ್ಪ್‌ ತೆಗೆದು ಅದಕ್ಕೆ ಕೇಸರಿ, ಒಣಶುಠಿ ಪುಡಿ, ಏಲಕ್ಕಿ ಹಾಗೂ ಸಕ್ಕರೆ ಸೇರಿಸಿ ಮಾಡುವ ಸರಳವಾದ ಆಮ್‌ರಸ್‌ ಬಹಳ ರುಚಿಕರ. ಆಲ್ಫೋನ್ಸೋ, ಕೇಸರ್‌ ಮತ್ತಿತರ ಮಾವಿನಹಣ್ಣಿನಲ್ಲಿ ಈ ಆಮ್‌ರಸ್‌ ಮಾಡಿದರೆ ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಎಂದರೆ ತಪ್ಪಾಗದು. ಅಷ್ಟು ರುಚಿಕರ. ಇಂತಹ ಆಮ್‌ರಸ್‌ ವಿಶ್ವದಲ್ಲೇ ಮೊದಲ ಸ್ಥಾನ ಗಳಿಸಿದ್ದರಲ್ಲಿ ಅಚ್ಚರಿಯೇನಿಲ್ಲ.

Mango Chutney

ಮಾವಿನಕಾಯಿಯ ಚಟ್ನಿಗೂ ಸ್ಥಾನ

ಮಾವಿನಕಾಯಿಯ ಚಟ್ನಿಯೂ ಟೇಸ್ಟ್‌ ಅಟ್ಲಾಸ್‌ನ ಈ ಸ್ಪರ್ಧೆಯಲ್ಲಿ ಐದನೇ ಸ್ಥಾನ ಪಡೆದಿದೆ. ವಿಶ್ವದ ಅತ್ಯಂತ ರುಚಿಕರ ಡಿಪ್‌ಗಳ ಪೈಕಿ ಮಾವಿನಹಣ್ಣಿನ ಚಟ್ನಿ ಐದನೇ ಸ್ಥಾನ ಪಡೆದಿದ್ದು ವಿಶೇಷ. ಮಾವಿನಹಣ್ಣು, ಬೆಳ್ಳುಳ್ಳಿ, ಕೆಂಪು ಮೆಣಸಿನಕಾಯಿ, ಜೀರಿಗೆ, ಕೊತ್ತಂಬರಿ, ಅರಿಶಿನ, ಲವಂಗ, ಚಕ್ಕೆ, ಏಲಕ್ಕಿ, ಸಕ್ಕರೆ ಹಾಗೂ ವಿನೆಗರ್‌ ಸೇರಿಸಿ ಈ ಚಟ್ನಿಯನ್ನು ಮಾಡಲಾಗುತ್ತದೆಯಂತೆ. ಈ ವಿಶೇಷ ಬಗೆಯ ಚಟ್ನಿಗೆ ವಿಶೇಷ ಸ್ಥಾನ ಲಭಿಸಿದೆ.
ಇನ್ನುಳಿದಂತೆ, ಟಾಪ್‌ ಟೆನ್‌ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿ ಥಾಯ್ಲೆಂಡಿನ ಮ್ಯಾಂಗೋ ಸ್ಟಿಕಿ ರೈಸ್‌, ಮೂರನೇ ಸ್ಥಾನದಲ್ಲಿ ಸೋರ್ಬೆಟಿಸ್‌, ನಾಲ್ಕನೇ ಸ್ಥಾನದಲ್ಲಿ ಇಂಡೋನೇಷ್ಯಾದ ರುಜಕ್‌, ಐದನೇ ಸ್ಥಾನದಲ್ಲಿ ಮಾವಿನಹಣ್ಣಿನ ಚಟ್ನಿ ಇವೆ. ನಂತರದ ಸ್ಥಾನಗಳಲ್ಲಿ ಹಾಂಗ್‌ಕಾಂಗ್‌ನ ಮ್ಯಾಂಗೋ ಪೊಮೇಲೋ ಸಾಗೋ, ಚೈನಾದ ಮಂಗುವೋ ಬುಡಿಂಗ್‌, ಇಂಡೋನೇಷ್ಯಾದ ರುಜಕ್‌ ಸಿಂಗುರ್, ಚೈನಾದ ಬಾವೋಬಿಂಗ್‌, ಥಾಯ್ಲೆಂಡಿನ ಮಾಮುಂಗ್‌ ನಾಮ್‌ ಪ್ಲಾವಾನ್‌ ಟಾಪ್‌ ಟೆನ್‌ ಪಟ್ಟಿಯಲ್ಲಿ ಸ್ಥಾನ ಗಳಿಸಿವೆ. ಮಾವಿನಹಣ್ಣಿನ ವಿಶೇಷಚವಾದ ಚಟ್ನಿಯೂ ಕೂಡಾ ಈ ಪಟ್ಟುಯಲ್ಲಿ ಐದನೇ ಸ್ಥಾನ ಗಳಿಸಿರುವುದು ವಿಶೇಷ.

Continue Reading
Advertisement
Accident Case
Latest21 mins ago

Accident Case: ಕಾರು ಡಿಕ್ಕಿ ರಭಸಕ್ಕೆ ಹತ್ತಾರು ಅಡಿ ದೂರ ಹಾರಿ ಬಿದ್ದ ಮಹಿಳೆ; ಭಯಾನಕ ವಿಡಿಯೊ

karnataka weather forecast
ಮಳೆ23 mins ago

Karnataka Weather : ಬೆಂಗಳೂರಲ್ಲಿ ವೀಕೆಂಡ್‌ಗೆ ಬ್ರೇಕ್‌ ಕೊಟ್ಟ ವರುಣ! ಈ 3 ಜಿಲ್ಲೆಗಳಿಗೆ ಮಳೆ ಎಚ್ಚರಿಕೆ

Life Insurance
ಮನಿ-ಗೈಡ್26 mins ago

Life Insurance: ಜೀವ ವಿಮೆ ನಿಯಮಗಳಲ್ಲಿ ಹಲವು ಬದಲಾವಣೆ; ಐಆರ್‌ಡಿಎಐಯಿಂದ ಗ್ರಾಹಕಸ್ನೇಹಿ ಕ್ರಮ

Betel leaves health benefits
ಆರೋಗ್ಯ45 mins ago

Betel Leaves Health Benefits: ರಾತ್ರಿ ಊಟದ ಬಳಿಕ ವೀಳ್ಯದೆಲೆ ಸೇವನೆ ಆರೋಗ್ಯಕ್ಕೆ ಉತ್ತಮ

Narendra Modi
ದೇಶ52 mins ago

Narendra Modi: ತಂತ್ರಜ್ಞಾನ ಜತೆಗೆ ಮಾನವ ಕೇಂದ್ರಿತ ಏಳಿಗೆಗೆ ಭಾರತ ಆದ್ಯತೆ; ಇಟಲಿ ಜಿ7 ಸಭೆಯಲ್ಲಿ ಮೋದಿ

Teachers Transfer 2024
ಕರ್ನಾಟಕ1 hour ago

Teachers Transfer 2024: ಶಿಕ್ಷಕರ ವರ್ಗಾವಣೆಯ ಪರಿಷ್ಕೃತ ವೇಳಾಪಟ್ಟಿ ಇಂದು ಪ್ರಕಟ ಸಾಧ್ಯತೆ

Aamras
ದೇಶ2 hours ago

India’s Aamras : ಮಾವಿನಹಣ್ಣಿನ ಖಾದ್ಯಗಳ ಟಾಪ್‌ ಟೆನ್‌ ಪಟ್ಟಿಯಲ್ಲಿ ಭಾರತದ ಆಮ್‌ರಸ್‌ ವಿಶ್ವದಲ್ಲೇ ನಂಬರ್‌ ಒನ್!

International Yoga Day 2024
ಆರೋಗ್ಯ2 hours ago

International Yoga Day 2024: ಧ್ಯಾನ ಎಂದರೇನು? ಇದರಿಂದ ಏನೇನು ಪ್ರಯೋಜನ?

Dina Bhavishya
ಭವಿಷ್ಯ2 hours ago

Dina Bhavishya : ದಿನದ ಕೊನೆಯಲ್ಲಿ ಸಂಗಾತಿಯೊಂದಿಗೆ ಮನಸ್ತಾಪ; ಈ ರಾಶಿಯವರು ಮೌನವಾಗಿರಿ

T20 World Cup 2024
ಕ್ರಿಕೆಟ್7 hours ago

T20 World Cup 2024: ಟಿ-20 ವಿಶ್ವಕಪ್‌ನಿಂದ ಪಾಕಿಸ್ತಾನ ಔಟ್;‌ ಸೂಪರ್‌ 8ಕ್ಕೆ ಲಗ್ಗೆ ಇಟ್ಟ ಅಮೆರಿಕ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Weather Forecast
ಮಳೆ13 hours ago

Karnataka Weather : ಕರಾವಳಿ, ಉತ್ತರ ಒಳನಾಡಿನಲ್ಲಿ ವರುಣಾರ್ಭಟ; ನಾಳೆಯು ಹಲವೆಡೆ ಸಿಕ್ಕಾಪಟ್ಟೆ ಮಳೆ

Actor Darshan
ಬೆಂಗಳೂರು14 hours ago

Actor Darshan : ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್ ಮಾಡಿ ಕರೆತರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ!

actor Darshan
ಬೆಂಗಳೂರು14 hours ago

Actor Darshan : ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಮತ್ತಿಬ್ಬರು ಸರೆಂಡರ್‌; ಆರೋಪಿಗಳ ಸಂಖ್ಯೆ 16ಕ್ಕೆ ಏರಿಕೆ

Actor Darshan
ಸಿನಿಮಾ15 hours ago

Actor Darshan : ರೇಣುಕಾಸ್ವಾಮಿ ‌ಮೃತದೇಹ ಬಿಸಾಡಿ ಬಳಿಕ ಸಾಕ್ಷ್ಯಇದ್ದ 2 ಮೊಬೈಲ್‌ಗಳನ್ನು ಮೋರಿಗೆ ಎಸೆದ್ರಾ ಆರೋಪಿಗಳು?

karnataka weather Forecast
ಮಳೆ4 days ago

Karnataka Weather : ಭಾರಿ ಮಳೆಗೆ ಗುಡ್ಡದಿಂದ ಉರುಳಿ ಬಿದ್ದ ಬಂಡೆಗಲ್ಲು; ಬೆಂಗಳೂರಲ್ಲೂ ಸಂಜೆ ವರ್ಷಧಾರೆ

actor Darshan
ಚಿತ್ರದುರ್ಗ4 days ago

Actor Darshan: ರೇಣುಕಾ ಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್‌ ಅರೆಸ್ಟ್‌; ಪ್ರಕರಣವನ್ನು ಸಿಬಿಐಗೆ ವಹಿಸಲು ಒತ್ತಾಯ

Actor Darshan gets a series of questions from the police
ಸಿನಿಮಾ4 days ago

Actor Darshan : ಪವಿತ್ರಗೌಡ ಬಗ್ಗೆ ಪೋಸ್ಟ್‌ ಮಾಡಿದ್ರೆ ನಿಮಗ್ಯಾಕೆ ಕೋಪ? ದರ್ಶನ್‌ಗೆ ಪೊಲೀಸರ ಪ್ರಶ್ನೆಗಳ ಸುರಿಮಳೆ

Actor Darshan
ಸಿನಿಮಾ4 days ago

Actor Darshan : ದರ್ಶನ್‌ ಜೈಲಿಗೆ ಹೋಗುತ್ತಿರುವುದು ಇದೇ ಮೊದಲಲ್ಲ; ನಟನ ಮೇಲಿವೆ ಹತ್ತಾರು ಕೇಸ್‌ಗಳು!

Saptami Gowda
ಸಿನಿಮಾ4 days ago

Saptami Gowda : ಯುವ ಪತ್ನಿ ಶ್ರೀದೇವಿ ವಿರುದ್ಧ ಮಾನಹಾನಿ ಕೇಸ್; ಕಾನೂನು ಹೋರಾಟಕ್ಕೆ ಮುಂದಾದ ನಟಿ ಸಪ್ತಮಿ ಗೌಡ!

Karnataka weather Forecast
ಮಳೆ5 days ago

Karnataka Weather : ಭಾರಿ ಮಳೆಗೆ ಮನೆ ಗೋಡೆ ಕುಸಿದು ಎಮ್ಮೆಗಳು ಸಾವು; ಆಕಳಿನ ಜೀವ ತೆಗೆದ ವಿದ್ಯುತ್‌ ತಂತಿ

ಟ್ರೆಂಡಿಂಗ್‌