Mallikarjun Kharge | ಪದಗ್ರಹಣ ಬೆನ್ನಲ್ಲೇ ಸಂಚಾಲನಾ ಸಮಿತಿ ರಚಿಸಿದ ಖರ್ಗೆ, ಕನ್ನಡಿಗರು ಯಾರಿದ್ದಾರೆ? - Vistara News

ದೇಶ

Mallikarjun Kharge | ಪದಗ್ರಹಣ ಬೆನ್ನಲ್ಲೇ ಸಂಚಾಲನಾ ಸಮಿತಿ ರಚಿಸಿದ ಖರ್ಗೆ, ಕನ್ನಡಿಗರು ಯಾರಿದ್ದಾರೆ?

ಕಾಂಗ್ರೆಸ್‌ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರು ಸಂಚಾಲನಾ ಸಮಿತಿ (Steering Committee) ರಚಿಸಿದ್ದಾರೆ. ಅಲ್ಲದೆ, ಸಮಿತಿಯಲ್ಲಿ ಕನ್ನಡಿಗರೂ ಸ್ಥಾನ ನೀಡಿದ್ದು, ಯಾರಿದ್ದಾರೆ ಎಂಬುದರ ಮಾಹಿತಿ ಇಲ್ಲಿದೆ.

VISTARANEWS.COM


on

Mallikarjun Kharge
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವದೆಹಲಿ: ಎಐಸಿಸಿ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರು ಬುಧವಾರ ಪದಗ್ರಹಣ ಮಾಡಿದ ಬೆನ್ನಲ್ಲೇ 47 ಸದಸ್ಯರನ್ನೊಳಗೊಂಡ ಸಂಚಾಲನಾ ಸಮಿತಿ (Steering Committee) ರಚಿಸಿದ್ದಾರೆ. ಕಾಂಗ್ರೆಸ್‌ ಅಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆದ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಕಾರ್ಯಕಾರಿ ಸಮಿತಿಯ (CWC) ವಿಸರ್ಜನೆಯಾಗಿದೆ. ಈಗ ಪಕ್ಷದ ಆಗುಹೋಗುಗಳ ಕುರಿತು ಸಂಚಾಲನಾ ಸಮಿತಿಯೇ ತೀರ್ಮಾನ ತೆಗೆದುಕೊಳ್ಳಲಿದೆ. ಹಾಗಾಗಿ ಸಂಚಾಲನಾ ಸಮಿತಿಯು ಪ್ರಮುಖವೆನಿಸಿದೆ.

ಮೂವರು ಕನ್ನಡಿಗರಿಗೆ ಸ್ಥಾನ

ಮಲ್ಲಿಕಾರ್ಜುನ ಖರ್ಗೆ ಅವರು ಸಂಚಾಲನಾ ಸಮಿತಿಯಲ್ಲಿ ಮೂವರು ಕನ್ನಡಿಗರಿಗೆ ಮಣೆ ಹಾಕಿದ್ದಾರೆ. ಕರ್ನಾಟಕ ಕಾಂಗ್ರೆಸ್‌ ನಾಯಕರಾದ ದಿನೇಶ್‌ ಗುಂಡೂರಾವ್‌, ಎಚ್‌.ಕೆ.ಪಾಟೀಲ್‌ ಹಾಗೂ ಕೆ.ಎಚ್‌.ಮುನಿಯಪ್ಪ ಅವರು ಸಮಿತಿಯಲ್ಲಿದ್ದಾರೆ. ಇನ್ನು ನಿರ್ಗಮಿತ ಅಧ್ಯಕ್ಷೆ ಸೋನಿಯಾ ಗಾಂಧಿ, ನಾಯಕರಾದ ರಾಹುಲ್‌ ಗಾಂಧಿ, ಪ್ರಿಯಾಂಕಾ ವಾದ್ರಾ, ಮಾಜಿ ಪ್ರಧಾನಿ ಡಾ.ಮನಮೋಹನ್‌ ಸಿಂಗ್‌ ಸೇರಿ ಹಲವರಿಗೆ ಸ್ಥಾನ ನೀಡಲಾಗಿದೆ.

ಸಂಚಾಲನಾ ಸಮಿತಿ ಸದಸ್ಯರ ಪಟ್ಟಿ ಹೀಗಿದೆ…

  1. ಸೋನಿಯಾ ಗಾಂಧಿ
  2. ಡಾ.ಮನಮೋಹನ್‌ ಸಿಂಗ್‌
  3. ರಾಹುಲ್‌ ಗಾಂಧಿ
  4. ಎ.ಕೆ.ಆ್ಯಂಟನಿ
  5. ಡಾ.ಅಭಿಷೇಕ್‌ ಮನು ಸಿಂಘ್ವಿ
  6. ಅಜಯ್‌ ಮಕೇನ್‌
  7. ಅಂಬಿಕಾ ಸೋನಿ
  8. ಆನಂದ್‌ ಶರ್ಮಾ
  9. ಅವಿನಾಶ್‌ ಪಾಂಡೆ
  10. ಗೈಖಂಗಮ್‌
  11. ಹರೀಶ್‌ ರಾವತ್‌
  12. ಜೈರಾಮ್‌ ರಮೇಶ್‌
  13. ಜಿತೇಂದ್ರ ಸಿಂಗ್‌
  14. ಸೆಲ್ಜಾ
  15. ಕೆ.ಸಿ.ವೇಣುಗೋಪಾಲ್‌
  16. ಲಲ್ತನ್‌ವಾಲಾ
  17. ಮುಕುಲ್‌ ವಸ್ನಿಕ್
  18. ಊಮನ್‌ ಚಾಂಡಿ
  19. ಪ್ರಿಯಾಂಕಾ ವಾದ್ರಾ
  20. ಪಿ.ಚಿದಂಬರಂ
  21. ರಣದೀಪ್‌ ಸುರ್ಜೇವಾಲಾ
  22. ರಘುಬೀರ್‌ ಮೀನಾ
  23. ತಾರಿಕ್‌ ಅನ್ವರ್‌
  24. ಡಾ.ಎ.ಚೆಲ್ಲ ಕುಮಾರ್‌
  25. ಡಾ.ಅಜಯ್‌ ಕುಮಾರ್‌
  26. ಅಧೀರ್‌ ರಂಜನ್‌ ಚೌಧರಿ
  27. ಭಕ್ತ ಚರಣ್‌ ದಾಸ್‌
  28. ದೇವೇಂದ್ರ ಯಾದವ್‌
  29. ದಿಗ್ವಿಜಯ್‌ ಸಿಂಗ್
  30. ದಿನೇಶ್‌ ಗುಂಡೂರಾವ್‌
  31. ಹರೀಶ್‌ ಚೌಧರಿ
  32. ಎಚ್‌.ಕೆ.ಪಾಟೀಲ್‌
  33. ಜಯಪ್ರಕಾಶ್‌ ಅಗರ್ವಾಲ್‌
  34. ಕೆ.ಎಚ್‌.ಮುನಿಯಪ್ಪ
  35. ಬಿ.ಮಣಿಕಮ್‌ ಟ್ಯಾಗೋರ್‌
  36. ಮನೀಶ್‌ ಚತ್ರಾತ್‌
  37. ಮೀರಾ ಕುಮಾರ್‌
  38. ಪಿ.ಎಲ್‌.ಪುನಿಯಾ
  39. ಪವನ್‌ ಕುಮಾರ್‌ ಬನ್ಸಾಲ್‌
  40. ಪ್ರಮೋದ್‌ ತಿವಾರಿ
  41. ರಜನಿ ಪಾಟೀಲ್‌
  42. ಡಾ.ರಘು ಶರ್ಮಾ
  43. ರಾಜೀವ್‌ ಶುಕ್ಲಾ
  44. ಸಲ್ಮಾನ್‌ ಖುರ್ಷಿದ್‌
  45. ಶಕ್ತಿಸಿಂಗ್‌ ಗೊಹಿಲ್‌
  46. ಟಿ.ಸುಬ್ಬಿರಾಮಿ ರೆಡ್ಡಿ
  47. ತಾರಿಕ್‌ ಅಹ್ಮದ್‌ ಕರ‍್ರಾ

ಇದನ್ನೂ ಓದಿ | Mallikarjun Kharge | ಕಾಂಗ್ರೆಸ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಕನ್ನಡಿಗ ಮಲ್ಲಿಕಾರ್ಜುನ ಖರ್ಗೆ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Hosur Airport: ಬೆಂಗಳೂರಿನಿಂದ ಕೇವಲ 40 ಕಿ.ಮೀ ದೂರದ ಹೊಸೂರಿನಲ್ಲಿ ಹೊಸ ಏರ್‌ಪೋರ್ಟ್‌!

Hosur Airport: ಹೂಸೂರು, ಕೃಷ್ಣಗಿರಿ ಹಾಗೂ ಧರ್ಮಪುರಿಯಲ್ಲಿ ಸಾಮಾಜಿಕ-ಆರ್ಥಿಕ ಅಭಿವೃದ್ಧಿ ಕೈಗೊಳ್ಳಲು ಹೊಸೂರಿನಲ್ಲಿ ವಿಮಾನ ನಿಲ್ದಾಣದ ನಿರ್ಮಾಣವು ಅತ್ಯವಶ್ಯಕವಾಗಿದೆ ಎಂಬುದಾಗಿ ತಮಿಳುನಾಡು ವಿಧಾನಸಭೆಯಲ್ಲಿ ಎಂ.ಕೆ.ಸ್ಟಾಲಿನ್‌ ಘೋಷಣೆ ಮಾಡಿದ್ದಾರೆ. ಸುಮಾರು 2 ಸಾವಿರ ಎಕರೆಯಲ್ಲಿ ಹೊಸೂರಿನಲ್ಲಿ ವಿಮಾನ ನಿಲ್ದಾಣ ನಿರ್ಮಿಸುವ ಗುರಿ ಹೊಂದಲಾಗಿದೆ.

VISTARANEWS.COM


on

Hosur Airport
Koo

ಚೆನ್ನೈ: ಕರ್ನಾಟಕದ ಬೆಂಗಳೂರಿನಿಂದ (Bengaluru) ಕೇವಲ 4೦ ಕಿಲೋಮೀಟರ್‌ ದೂರದಲ್ಲಿರುವ, ತಮಿಳುನಾಡಿನ (Tamil Nadu) ಹೊಸೂರಿನಲ್ಲಿ ನೂತನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (Hosur Airport) ನಿರ್ಮಿಸಲಾಗುವುದು ಎಂಬುದಾಗಿ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ (MK Stalin) ಘೋಷಣೆ ಮಾಡಿದ್ದಾರೆ. ಇದರಿಂದ ಬೆಂಗಳೂರಿನ ಜನತೆಗೂ ಅನುಕೂಲವಾಗಲಿದೆ ಎಂಬುದು ಗಮನಾರ್ಹ ಸಂಗತಿಯಾಗಿದೆ. ಬೆಂಗಳೂರಿನಲ್ಲಿಯೇ ಇನ್ನೊಂದು ವಿಮಾನ ನಿಲ್ದಾಣ ನಿರ್ಮಿಸುವ ಕುರಿತು ಸಚಿವ ಎಂ.ಬಿ.ಪಾಟೀಲ್‌ ಅವರು ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬೆನ್ನಲ್ಲೇ ಎಂ.ಕೆ.ಸ್ಟಾಲಿನ್‌ ಅವರು ಹೊಸೂರಿನಲ್ಲಿ ಹೊಸ ಏರ್‌ಪೋರ್ಟ್‌ ನಿರ್ಮಿಸಲಾಗುವುದು ಎಂಬುದಾಗಿ ಘೋಷಣೆ ಮಾಡಿದ್ದಾರೆ.

“ಇತ್ತೀಚಿನ ವರ್ಷಗಳಲ್ಲಿ ಹೊಸೂರು ಹೆಚ್ಚಿನ ಪ್ರಮಾಣದ ಹೂಡಿಕೆಯನ್ನು ಆಕರ್ಷಿಸುತ್ತಿದೆ. ಹಾಗಾಗಿ, ಹೊಸೂರಿನಲ್ಲಿ ಹಲವು ಆಧುನಿಕ ಮೂಲ ಸೌಕರ್ಯ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಅದನ್ನು ಆರ್ಥಿಕ ಕೇಂದ್ರವನ್ನಾಗಿ ರೂಪಿಸುವ ಗುರಿ ಇದೆ. ಹೊಸೂರಿಗಾಗಿ ಹೊಸ ಮಾಸ್ಟರ್‌ ಪ್ಲಾನ್‌ ಕೂಡ ಅಂತಿಮ ಹಂತಕ್ಕೆ ಬಂದಿದೆ. ಹೂಸೂರು, ಕೃಷ್ಣಗಿರಿ ಹಾಗೂ ಧರ್ಮಪುರಿಯಲ್ಲಿ ಸಾಮಾಜಿಕ-ಆರ್ಥಿಕ ಅಭಿವೃದ್ಧಿ ಕೈಗೊಳ್ಳಲು ಹೊಸೂರಿನಲ್ಲಿ ವಿಮಾನ ನಿಲ್ದಾಣದ ನಿರ್ಮಾಣವು ಅತ್ಯವಶ್ಯಕವಾಗಿದೆ” ಎಂಬುದಾಗಿ ವಿಧಾನಸಭೆಯಲ್ಲಿ ಎಂ.ಕೆ.ಸ್ಟಾಲಿನ್‌ ತಿಳಿಸಿದರು.

MK Stalin

ಹೊಸೂರಿನಲ್ಲಿ ಸುಮಾರು 2 ಸಾವಿರ ಎಕರೆ ಪ್ರದೇಶದಲ್ಲಿ ಅತ್ಯಾಧುನಿಕ ವಿಮಾನ ನಿಲ್ದಾಣ ನಿರ್ಮಿಸಲಾಗುವುದು. ವರ್ಷಕ್ಕೆ ಸುಮಾರು 3 ಕೋಟಿ ಪ್ರಯಾಣಿಕರನ್ನು ನಿರ್ವಹಿಸುವ ರೀತಿಯಲ್ಲಿ ಏರ್‌ಪೋರ್ಟ್‌ ನಿರ್ಮಿಸಲಾಗುತ್ತದೆ ಎಂಬುದಾಗಿ ಅವರು ಹೇಳಿದ್ದಾರೆ. ಹೊಸೂರಿನಲ್ಲಿ ಹೊಸ ಏರ್‌ಪೋರ್ಟ್‌ ನಿರ್ಮಾಣವಾದರೆ ಬೆಂಗಳೂರಿನ ಕೋರಮಂಗಲ, ಎಲೆಕ್ಟ್ರಾನಿಕ್‌ ಸಿಟಿ ಸೇರಿ ಹಲವು ನಗರಗಳ ನಾಗರಿಕರಿಗೆ ಭಾರಿ ಅನುಕೂಲವಾಗಲಿದೆ. ಹಾಗಾಗಿ, ಹೊಸೂರು ವಿಮಾನ ನಿಲ್ದಾಣದ ನಿರ್ಮಾಣವು ಪ್ರಮುಖ ಸಂಗತಿಯಾಗಿದೆ.

2033ರ ನಂತರವೇ ಚಾಲನೆ?

ಹೊಸೂರಿನಲ್ಲಿ ಈಗಾಗಲೇ ತನೇಜಾ ಏರೋಸ್ಪೇಸ್‌ ಮತ್ತು ಏವಿಯೇಷನ್‌ ಲಿಮಿಟೆಡ್‌ (TAAL) ಕಂಪನಿಯು ಥಾಲಿ ವಿಮಾನ ನಿಲ್ದಾಣವನ್ನು ನಿರ್ವಹಿಸುತ್ತಿದೆ. ಆದರೆ, ಕೇಂದ್ರ ಸರ್ಕಾರ ಹಾಗೂ ಬೆಂಗಳೂರು ವಿಮಾನ ನಿಲ್ದಾಣದ ನಡುವೆ ಒಪ್ಪಂದ ಮಾಡಿಕೊಂಡ ಕಾರಣ ಥಾಲಿ ವಿಮಾನ ನಿಲ್ದಾಣದಿಂದ ವಾಣಿಜ್ಯಿಕ ವಿಮಾನಗಳ ಹಾರಾಟ ಸಾಧ್ಯವಾಗಿಲ್ಲ. ಬೆಂಗಳೂರು ವಿಮಾನ ನಿಲ್ದಾಣದಿಂದ 150 ಕಿಲೋಮೀಟರ್‌ ವೈಮಾನಿಕ ಮಾರ್ಗದ ಅಂತರದಲ್ಲಿ 25 ವರ್ಷ ಯಾವುದೇ ಹೊಸ ಏರ್‌ಪೋರ್ಟ್‌ ನಿರ್ಮಾಣ ಮಾಡುವಂತಿಲ್ಲ ಎಂಬುದು ಒಪ್ಪಂದವಾಗಿದೆ. ಹಾಗಾಗಿ ಒಪ್ಪಂದದ ಪ್ರಕಾರ, ಹೊಸೂರಿನಲ್ಲಿ 2033ರ ನಂತರವೇ ವಿಮಾನ ಹಾರಾಟವಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. 2008ರಲ್ಲಿ ಬೆಂಗಳೂರು ವಿಮಾನ ನಿಲ್ದಾಣದ ಕಾರ್ಯಾಚರಣೆ ಆರಂಭವಾಗಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊಸೂರಿಗೆ 86 ಕಿಲೋಮೀಟರ್‌ ಅಂತರ ಇದೆ.

ಇದನ್ನೂ ಓದಿ: Electric Airport Taxi : ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ ಇನ್ಮುಂದೆ ಮಹಿಳೆಯರಿಗಾಗಿ ಗುಲಾಬಿ ಟ್ಯಾಕ್ಸಿ

Continue Reading

ದೇಶ

Sudipa Chatterjee: ಗೋಮಾಂಸ ಸೇವನೆಗೆ ಪ್ರಚಾರ- TMC ನಾಯಕ ಬಬೂಲ್‌ ಸುಪ್ರಿಯೋ ಆಪ್ತೆ, ಬೆಂಗಾಳಿ ನಟಿಗೆ ಜೀವ ಬೆದರಿಕೆ

Sudipa Chatterjee: ಬಾಂಗ್ಲಾದೇಶಿ ಕುಕ್ಕಿಂಗ್‌ ಶೋವೊಂದರ ಆಂಕರ್‌ ಆಗಿರುವ ಸುದೀಪಾ ಅವರು ಬೀಫ್‌ ಖಾದ್ಯ ತಯಾರಿಸುತ್ತಿದ್ದ ಸ್ಪರ್ಧಿ ಜೊತೆಗೆ ಮಾತುಕತೆ ನಡೆಸಿದ್ದರು. ಈ ವಿಡಿಯೋದಲ್ಲಿ ಬಹಳ ವೇಗವಾಗಿ ವೈರಲ್‌ ಆಗಿತ್ತು. ವಿಡಿಯೋ ವೈರಲ್‌ ಆಗುತ್ತಿದ್ದಂತೆ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಹಲವರಿಂದ ಖಂಡನೆ ವ್ಯಕ್ತವಾಗಿತ್ತು. ಅದೂ ಅಲ್ಲದೇ ಸುದೀಪಾ ಅವರು ಪಶ್ಚಿಮ ಬಂಗಾಳದ ಆಡಳಿತ ಪಕ್ಷದ ಸಚಿವ ಬಬುಲ್‌ ಸುಪ್ರಿಯೋ ಅವರಿಗೆ ಆಪ್ತರಾಗಿರುವ ಕಾರಣ ಈ ವಿಚಾರ ರಾಜಕೀಯ ಆಯಾಮವನ್ನೂ ಪಡೆದುಕೊಂಡಿತ್ತು.

VISTARANEWS.COM


on

Sudipa Chatterjee
Koo

ಕೋಲ್ಕತ್ತಾ: ಅಡುಗೆ ಕಾರ್ಯಕ್ರಮವೊಂದರಲ್ಲಿ ಸ್ಪರ್ಧಿಯೋರ್ವ ತಯಾರಿಸಿದ್ದ ಬೀಫ್‌ ಖಾದ್ಯವನ್ನು ಪ್ರೊಮೋಟ್‌ ಮಾಡಿದ್ದಾರೆ ಎಂಬ ಕಾರಣಕ್ಕೆ ಖ್ಯಾತ ಬೆಂಗಾಳಿ ನಟಿ(Bengali actress)ಯೊಬ್ಬರಿಗೆ ಜೀವ ಬೆದರಿಕೆ ಕರೆ ಬಂದಿದೆ. ನಟಿ ಸುದೀಪಾ ಚಟರ್ಜಿ(Sudipa Chatterjee) ತಮಗೆ ನಿರಂತರವಾಗಿ ಬೆದರಿಕೆ(Death threats) ಬರುತ್ತಿದೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.

ಬಾಂಗ್ಲಾದೇಶಿ ಕುಕ್ಕಿಂಗ್‌ ಶೋವೊಂದರ ಆಂಕರ್‌ ಆಗಿರುವ ಸುದೀಪಾ ಅವರು ಬೀಫ್‌ ಖಾದ್ಯ ತಯಾರಿಸುತ್ತಿದ್ದ ಸ್ಪರ್ಧಿ ಜೊತೆಗೆ ಮಾತುಕತೆ ನಡೆಸಿದ್ದರು. ಈ ವಿಡಿಯೋದಲ್ಲಿ ಬಹಳ ವೇಗವಾಗಿ ವೈರಲ್‌ ಆಗಿತ್ತು. ವಿಡಿಯೋ ವೈರಲ್‌ ಆಗುತ್ತಿದ್ದಂತೆ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಹಲವರಿಂದ ಖಂಡನೆ ವ್ಯಕ್ತವಾಗಿತ್ತು. ಅದೂ ಅಲ್ಲದೇ ಸುದೀಪಾ ಅವರು ಪಶ್ಚಿಮ ಬಂಗಾಳದ ಆಡಳಿತ ಪಕ್ಷದ ಸಚಿವ ಬಬುಲ್‌ ಸುಪ್ರಿಯೋ ಅವರಿಗೆ ಆಪ್ತರಾಗಿರುವ ಕಾರಣ ಈ ವಿಚಾರ ರಾಜಕೀಯ ಆಯಾಮವನ್ನೂ ಪಡೆದುಕೊಂಡಿತ್ತು. ಅದೂ ಅಲ್ಲದೇ ಈ ಬಗ್ಗೆ ಸ್ವತಃ ಬಬುಲ್‌ ಸುಪ್ರಿಯೋ ಪ್ರತಿಕ್ರಿಯಿಸಿದ್ದು, ರಾಜಕೀಯ ಕಾರಣಕ್ಕಾಗಿ ಆಕೆಯನ್ನು ಟಾರ್ಗೆಟ್‌ ಮಾಡಲಾಗುತ್ತಿದೆ ಎಂದು ಹೇಳಿಕೆ ನೀಡಿದ್ದರು.

ಈ ಬಗ್ಗೆ ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಮಾಡಿರುವ ಸುದೀಪಾ, ನನ್ನನ್ನು ಟ್ರೋಲ್ ಮಾಡುತ್ತಿರುವ ಹೆಚ್ಚಿನ ಜನರು ವೀಡಿಯೊವನ್ನು ನೋಡಿಲ್ಲ ಎಂದು ನನಗೆ ಖಾತ್ರಿಯಿದೆ. ನಾನು ಎಂದಿಗೂ ಗೋಮಾಂಸವನ್ನು ತಿನ್ನುವುದಿಲ್ಲ, ಅದನ್ನು ಬೇಯಿಸುವುದು ಬಿಟ್ಟುಬಿಡಿ, ಅದನ್ನು ಮುಟ್ಟಲಿಲ್ಲ. ಎರಡನೆಯದಾಗಿ, ಕರೀಂ ಜಹಾನ್ (ಕಾರ್ಯಕ್ರಮದಲ್ಲಿ ಭಾಗವಹಿಸಿದವರು) ಅಡುಗೆ ಮಾಡುವ ವೀಡಿಯೊಗಳು ಇನ್ನೂ ಎಡಿಟ್ ಆಗಿಲ್ಲ, ನಾನು ಗೋಮಾಂಸವನ್ನು ಮುಟ್ಟಿದ್ದೇನೆ ಎಂದು ತಪ್ಪು ಭಾವಿಸಿದ್ದೀರಿ ಎಂದು ಹೇಳಿದ್ದಾರೆ.

ಇನ್ನು ಕೆಲವು ತಿಂಗಳುಗಳ ಹಿಂದೆ ಖ್ಯಾತ ಯೂಟ್ಯೂಬರ್‌ ಕಾಮಿಯಾ ಜಾನಿ (Kamiya Jani) ವಿರುದ್ಧವೂ ಇಂತಹದ್ದೇ ಆರೋಪ ಕೇಳಿ ಬಂದಿತ್ತು. ಕಾಮಿಯಾ ಜಾನಿ ಸೋಶಿಯಲ್‌ ಮೀಡಿಯಾ ಇನ್‌ಫ್ಲುಯೆನ್ಸರ್‌ ಆಗಿದ್ದು, ʼಕರ್ಲಿ ಟೇಲ್ಸ್‌ʼ ಎಂಬ ಯೂಟ್ಯೂಬ್ ಚಾನೆಲ್ ನಡೆಸುತ್ತಿದ್ದಾರೆ. ಕಾಮಿಯಾ ಜಾನಿ ಈ ಹಿಂದೆ ತಮ್ಮ ಯುಟ್ಯೂಬ್ ಚಾನೆಲ್‌ನಲ್ಲಿ ಗೋಮಾಂಸ ಭಕ್ಷಣೆಯ ಕುರಿತು ವಿಡಿಯೋ ಮಾಡಿದ್ದರು. ಅವರು ಪುರಿ ಜಗನ್ನಾಥ ದೇವಸ್ಥಾನದ ಅಭಿವೃದ್ದಿಗಾಗಿ ಅಲ್ಲಿನ ಸರ್ಕಾರ ರೂಪಿಸಿರುವ ‘ಪರಿಕ್ರಮ’ ಎಂಬ ಯೋಜನೆಯಲ್ಲಿ ಪಾಲ್ಗೊಂಡಿರುವುದಕ್ಕೆ ಭಾರೀ ವಿರೋಧ ವ್ಯಕ್ತವಾಗಿತ್ತು.

ಇದನ್ನೂ ಓದಿ:Lakshmi Hebbalkar: ಅಂಗನವಾಡಿಗಳಿಗೆ ಕಳಪೆ ಆಹಾರ ಪೂರೈಕೆಯಾದರೆ ಉಪನಿರ್ದೇಶಕರ ಮೇಲೆ ಕಠಿಣ ಕ್ರಮ: ಹೆಬ್ಬಾಳಕರ್

Continue Reading

ದೇಶ

Jio Tariffs: ಜಿಯೋ ಬಳಕೆದಾರರಿಗೆ ಬ್ಯಾಡ್‌ ನ್ಯೂಸ್;‌ ಶೇ.20ರಷ್ಟು ಶುಲ್ಕ ಹೆಚ್ಚಳ, ನೂತನ ದರಪಟ್ಟಿ ಇಲ್ಲಿದೆ

Jio Tariffs: ಭಾರತದಲ್ಲಿ ಸುಮಾರು 45 ಕೋಟಿಗೂ ಅಧಿಕ ಜನ ರಿಲಯನ್ಸ್‌ ಜಿಯೋ ಬಳಸುತ್ತಾರೆ. ಹಾಗಾಗಿ, ಇದು ದೇಶದಲ್ಲೇ ಬೃಹತ್‌ ಟೆಲಿಕಾಮ್‌ ಕಂಪನಿ ಎನಿಸಿದೆ. ಈಗ ರಿಲಯನ್ಸ್‌ ಜಿಯೋ ಪ್ಲಾನ್‌ಗಳ ಬೆಲೆಯನ್ನು ಶೇ.20ರಷ್ಟು ಏರಿಕೆ ಮಾಡಿದ್ದು, ಕೋಟ್ಯಂತರ ಗ್ರಾಹಕರಿಗೆ ಹೊರೆಯಾಗಲಿದೆ.

VISTARANEWS.COM


on

Jio Tariffs
Koo

ಮುಂಬೈ: ರಿಲಯನ್ಸ್‌ ಜಿಯೋ (Reliance Jio) ಪ್ರಿಪೇಯ್ಡ್‌ ಬಳಕೆದಾರರಿಗೆ ಕಂಪನಿಯು ಕಹಿ ಸುದ್ದಿ ನೀಡಿದೆ. ಜಿಯೋ ಪ್ರಿಪೇಯ್ಡ್‌ ಪ್ಲಾನ್‌ನ ಶುಲ್ಕಗಳನ್ನು (Jio Tariffs) ಶೇ.20ರಷ್ಟು ಏರಿಕೆ ಮಾಡಿದ್ದು, ಇದರಿಂದ ಗ್ರಾಹಕರಿಗೆ ಹೊರೆಯಾಗಲಿದೆ. ಅದರಲ್ಲೂ, ಇತ್ತೀಚೆಗೆ ಕರ್ನಾಟಕದಲ್ಲಿ ಪೆಟ್ರೋಲ್‌, ಡೀಸೆಲ್‌, ಹಾಲಿನ ಬೆಲೆಯೇರಿಕೆ ಆಗಿದ್ದು, ಇದರ ಬೆನ್ನಲ್ಲೇ ಜಿಯೋ ಪ್ರಿಪೇಯ್ಡ್‌ ಪ್ಲಾನ್‌ಗಳ ಶುಲ್ಕವೂ ಜಾಸ್ತಿಯಾಗಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಜುಲೈ 3ರಿಂದ ರಿಲಯನ್ಸ್‌ ಜಿಯೋ ಹೊಸ ರೇಟ್‌ ಅನ್ವಯವಾಗಲಿದೆ.

ತಿಂಗಳ ಪ್ಲಾನ್‌ಗೆ ಇಷ್ಟಾಗಲಿದೆ ಹೊರೆ

28 ದಿನಗಳವರೆಗೆ 2 ಜಿಬಿ ಡೇಟಾ (ಪ್ರತಿದಿನ ಅಲ್ಲ), ಅನ್‌ಲಿಮಿಟೆಡ್‌ ಕರೆಗಳು ಇರುವ 155 ಪ್ಲಾನ್‌ಗೆ ಇನ್ನು 189 ರೂ. ಪಾವತಿಸಬೇಕಾಗುತ್ತದೆ. ಹಾಗೆಯೇ, ಪ್ರತಿದಿನ 1 ಜಿಬಿ ಇಂಟರ್‌ನೆಟ್‌ ಪ್ಲಾನ್‌ಗೆ 28 ದಿನಗಳಿಗೆ 209 ರೂ. ಬದಲು 249 ರೂ., ನಿತ್ಯ 1.5 ಜಿಬಿ ಪ್ಲಾನ್‌ಗೆ 239 ರೂ. ಬದಲು 299 ರೂ., 2 ಜಿಬಿ ಪ್ಲಾನ್‌ಗೆ 299 ರೂ. ಬದಲು 349 ರೂ., 2.5 ಜಿಬಿಗೆ 349 ರೂ. ಬದಲು 399 ರೂ., 3 ಜಿಬಿಗೆ 399 ರೂ. ಬದಲು 449 ರೂ. ಪಾವತಿಸಬೇಕಾಗುತ್ತದೆ.

2 ಹಾಗೂ 3 ತಿಂಗಳ ಪ್ಲಾನ್‌

ಎರಡು ಹಾಗೂ ಮೂರು ತಿಂಗಳ ಪ್ಲಾನ್‌ಗಳ ಬೆಲೆಯನ್ನೂ ಏರಿಕೆ ಮಾಡಲಾಗಿದೆ. ಪ್ರತಿ ದಿನ 1.5 ಜಿಬಿ ಇಂಟರ್‌ನೆಟ್‌, ಅನ್‌ಲಿಮಿಟೆಡ್‌ ಕರೆಗಳಿಗೆ ಇನ್ನು 479 ರೂ. ಬದಲು 579 ರೂ., 2 ಜಿಬಿಗೆ 533 ರೂ. ಬದಲು 629, 3 ತಿಂಗಳು ಅನ್‌ಲಿಮಿಟೆಡ್‌ ಕರೆ, 6 ಜಿಬಿ ಇಂಟರ್‌ನೆಟ್‌ (ಪ್ರತಿದಿನ ಅಲ್ಲ) ಪ್ಲಾನ್‌ಗೆ 395 ರೂ. ಬದಲಾಗಿ 479 ರೂ. ಪಾವತಿಸಬೇಕಾಗುತ್ತದೆ. ಮೂರು ತಿಂಗಳು ಪ್ರತಿ ದಿನ 1.5 ಜಿಬಿ ಅಂತರ್ಜಾಲ, ಅನ್‌ಲಿಮಿಟೆಡ್‌ ಕಾಲ್ಸ್‌ ಪ್ಲಾನ್‌ಗೆ 666 ರೂ. ಬದಲಾಗಿ 799 ರೂ. 2 ಜಿಬಿಗೆ 719 ರೂ. ಬದಲು 859 ರೂ., 3 ಜಿಬಿಗೆ 999 ರೂ. ಬದಲಾಗಿ 1,199 ರೂ. ತೆರಬೇಕಾಗಿದೆ.

ವಾರ್ಷಿಕ ಹಾಗೂ ಡೇಟಾ ಆ್ಯಡ್‌ ಆನ್‌ಗೆ ಎಷ್ಟು ಏರಿಕೆ

336 ದಿನಗಳವರೆಗೆ ಅನ್‌ಲಿಮಿಟೆಡ್‌ ಕರೆಗಳು, 24 ಜಿಬಿ ಡೇಟಾ (ಪ್ರತಿದಿನ ಅಲ್ಲ) ಪ್ಲಾನ್‌ಗೆ 1,559 ರೂ. ಬದಲು 1,899 ರೂ., ಒಂದು ವರ್ಷಕ್ಕೆ ನಿತ್ಯ 2.5 ಜಿಬಿ ಪ್ಲಾನ್‌ಗೆ 2,999 ರೂ. ಬದಲು 3,599 ರೂ. ಪಾವತಿಸಬೇಕಾಗುತ್ತದೆ. ಡೇಟಾ ಆ್ಯಡ್‌ ಆನ್‌ ಪ್ಲಾನ್‌ಗಳನ್ನೂ ಬಿಟ್ಟಿಲ್ಲ. 1 ಜಿಬಿ ಡೇಟಾಗೆ 15 ರೂ.ನಿಂದ 19 ರೂ.ಗೆ ಏರಿಕೆ ಮಾಡಲಾಗಿದೆ. ಇನ್ನು 2 ಜಿಬಿ ಡೇಟಾಗೆ 25 ರೂ.ನಿಂದ 29 ರೂ., 6 ಜಿಬಿ ಡೇಟಾಗೆ 61 ರೂ.ನಿಂದ 69 ರೂ.ಗೆ ಹೆಚ್ಚಳ ಮಾಡಲಾಗಿದೆ. ಭಾರತದಲ್ಲಿ ಸುಮಾರು 45 ಕೋಟಿಗೂ ಅಧಿಕ ಜನ ರಿಲಯನ್ಸ್‌ ಜಿಯೋ ಬಳಸುತ್ತಾರೆ. ಹಾಗಾಗಿ, ಇದು ದೇಶದಲ್ಲೇ ಬೃಹತ್‌ ಟೆಲಿಕಾಮ್‌ ಕಂಪನಿ ಎನಿಸಿದೆ.

ಇದನ್ನೂ ಓದಿ: GST Council Meeting : ಪೆಟ್ರೋಲ್, ಡೀಸೆಲ್ ಜಿಎಸ್​​ಟಿ ವ್ಯಾಪ್ತಿಗೆ ಬರಲಿದೆಯೇ? ಸಭೆಯ ಬಳಿಕ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದೇನು?

Continue Reading

ದೇಶ

Arvind Kejriwal: ಪ್ಯಾಂಟ್‌ ಲೂಸ್‌ ಆಗಿದೆ, ಒಂದು ಬೆಲ್ಟ್‌ ಕೊಡಿ; ಕೋರ್ಟ್‌ಗೆ ಅರವಿಂದ್‌ ಕೇಜ್ರಿವಾಲ್‌ ಮನವಿ‌

Arvind Kejriwal: ಅರವಿಂದ್‌ ಕೇಜ್ರಿವಾಲ್‌ ಅವರು ಸಿಬಿಐ ಕಸ್ಟಡಿಯಲ್ಲಿರುವಾಗ ಮನೆಯಿಂದ ತರುವ ಊಟ ಮಾಡಬಹುದು, ವೈದ್ಯರು ಸೂಚಿಸಿದ ಮಾತ್ರೆಗಳನ್ನು ಸೇವಿಸಬಹುದು ಹಾಗೂ ಪ್ರತಿ ದಿನ ಅರ್ಧ ಗಂಟೆ ಪತ್ನಿಯನ್ನು ಮತ್ತು ಇನ್ನರ್ಧ ಗಂಟೆ ವಕೀಲರನ್ನು ಭೇಟಿಯಾಗಬಹುದು ಎಂದು ನ್ಯಾಯಾಲಯವು ಅನುಮತಿ ನೀಡಿದೆ.

VISTARANEWS.COM


on

Arvind Kejriwal
Koo

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಅಬಕಾರಿ ನೀತಿ ಜಾರಿ ವೇಳೆ ಹಗರಣ (Delhi Excise Policy Case) ನಡೆದಿದೆ ಎನ್ನಲಾದ ಪ್ರಕರಣದಲ್ಲಿ ತಿಹಾರ ಜೈಲುಪಾಲಾಗಿರುವ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ (Arvind Kejriwal) ಅವರೀಗ ಸಿಬಿಐ ಕಸ್ಟಡಿಯಲ್ಲಿದ್ದಾರೆ. ಮೂರು ದಿನ ಸಿಬಿಐ ಕಸ್ಟಡಿಗೆ ವಹಿಸಿ ಬುಧವಾರ (ಜೂನ್‌ 26) ದೆಹಲಿಯ ರೋಸ್‌ ಅವೆನ್ಯೂ ಕೋರ್ಟ್‌ ಆದೇಶ ಹೊರಡಿಸಿದೆ. ಇದರ ಬೆನ್ನಲ್ಲೇ, ಅರವಿಂದ್‌ ಕೇಜ್ರಿವಾಲ್‌ ಅವರು ಕೋರ್ಟ್‌ಗೆ ವಿಶೇಷ ಮನವಿ ಮಾಡಿದ್ದಾರೆ. “ತಿಹಾರ ಜೈಲಿಗೆ ಹೋಗುವಾಗ ಪ್ಯಾಂಟ್‌ ಹಿಡಿದುಕೊಂಡೇ ಹೋಗಬೇಕಾಗಿದೆ. ಹಾಗಾಗಿ, ನನಗೊಂದು ಬೆಲ್ಟ್‌ ಬಳಸಲು ಅವಕಾಶ ಮಾಡಿಕೊಡಿ” ಎಂದು ಮನವಿ ಮಾಡಿದ್ದಾರೆ. ಇದಕ್ಕೆ ನ್ಯಾಯಾಲಯವು ಅನುಮತಿ ನೀಡಿದೆ.

ಅರವಿಂದ್‌ ಕೇಜ್ರಿವಾಲ್‌ ಅವರು ಸಿಬಿಐ ಕಸ್ಟಡಿಯಲ್ಲಿರುವಾಗ ಮನೆಯಿಂದ ತರುವ ಊಟ ಮಾಡಬಹುದು, ವೈದ್ಯರು ಸೂಚಿಸಿದ ಮಾತ್ರೆಗಳನ್ನು ಸೇವಿಸಬಹುದು ಹಾಗೂ ಪ್ರತಿ ದಿನ ಅರ್ಧ ಗಂಟೆ ಪತ್ನಿಯನ್ನು ಮತ್ತು ಇನ್ನರ್ಧ ಗಂಟೆ ವಕೀಲರನ್ನು ಭೇಟಿಯಾಗಬಹುದು ಎಂದು ಅನುಮತಿ ನೀಡಿದೆ. ಹಾಗೆಯೇ, ಓದಲು ಭಗವದ್ಗೀತೆ, ಒಂದು ಬೆಲ್ಟ್‌ ಬಳಕೆ ಮಾಡಲು ಕೂಡ ರೋಸ್‌ ಅವೆನ್ಯೂ ಕೋರ್ಟ್‌ ಸಮ್ಮತಿ ಸೂಚಿಸಿದೆ. ಅನಾರೋಗ್ಯದ ಹಿನ್ನೆಲೆಯಲ್ಲಿ ಅರವಿಂದ್‌ ಕೇಜ್ರಿವಾಲ್‌ ಅವರು ಮನೆಯ ಊಟ ಸೇವಿಸಲು ಅನಮತಿ ನೀಡಲಾಗಿದೆ ಎಂದು ತಿಳಿದುಬಂದಿದೆ.

Arvind Kejriwal

ಏನಿದು ಪ್ರಕರಣ?

ದೆಹಲಿ ಸರ್ಕಾರವು 2021ರ ನವೆಂಬರ್ 17ರಂದು ಅಬಕಾರಿ ನೀತಿಯನ್ನು ಜಾರಿಗೆ ತಂದಿತ್ತು. ಆದರೆ ಭ್ರಷ್ಟಾಚಾರದ ಆರೋಪದ ನಡುವೆ 2022ರ ಸೆಪ್ಟೆಂಬರ್ ಕೊನೆಯಲ್ಲಿ ಅದನ್ನು ರದ್ದುಗೊಳಿಸಲಾಗಿತ್ತು. ತನಿಖಾ ಸಂಸ್ಥೆಗಳ ಪ್ರಕಾರ ಹೊಸ ನೀತಿಯ ಅಡಿಯಲ್ಲಿ ಸಗಟು ವ್ಯಾಪಾರಿಗಳ ಲಾಭಾಂಶವನ್ನು ಶೇ. 5ರಿಂದ 12ಕ್ಕೆ ಹೆಚ್ಚಿಸಲಾಗಿತ್ತು. ಅಬಕಾರಿ ನೀತಿ ಜಾರಿ ವೇಳೆ ನೂರಾರು ಕೋಟಿ ರೂಪಾಯಿ ಹಗರಣ ನಡೆದಿದೆ ಎಂಬ ಆರೋಪ ಕೇಳಿಬಂದಿದ್ದು, ಇದರಲ್ಲಿ ಕೆ. ಕವಿತಾ ಅವರ ಪಾಲೂ ಇದೆ ಎಂಬ ಆರೋಪವಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಇ.ಡಿ ಅಧಿಕಾರಿಗಳು ಅರವಿಂದ್‌ ಕೇಜ್ರಿವಾಲ್‌ ಮಾತ್ರವಲ್ಲ ಬಿಆರ್‌ಎಸ್‌ ನಾಯಕಿ ಕೆ. ಕವಿತಾ ಅವರನ್ನೂ ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.

ಈ ಪ್ರಕರಣದಲ್ಲಿ ಅರವಿಂದ್ ಕೇಜ್ರಿವಾಲ್​ ಅವರಿಗೆ ಇ.ಡಿ. 9 ಬಾರಿ ನೋಟಿಸ್ ಜಾರಿ ಮಾಡಿತ್ತು. ಬಳಿಕ ಮಾರ್ಚ್​ 21ರಂದು ಅವರನ್ನು ಬಂಧಿಸಲಾಗಿತ್ತು. ಇದಾದ ಬಳಿಕ ಅವರು ಮಧ್ಯಂತರ ಜಾಮೀನು ಪಡೆದು ಒಂದು ತಿಂಗಳು ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಚುನಾವಣೆ ಮುಗಿಯುತ್ತಿದ್ದಂತೆ ಜೈಲಿಗೆ ಮರಳುವಂತೆ ಕೋರ್ಟ್‌ ಈ ಹಿಂದೆಯೇ ಆದೇಶಿಸಿತ್ತು. ಅದರಂತೆ ಅವರು ಜೈಲಿಗೆ ತೆರಳಿದ್ದರು.

ಇದನ್ನೂ ಓದಿ: Arvind Kejriwal : ಜಾಮೀನು ಅರ್ಜಿ ವಿಚಾರಣೆಗೂ ಮುನ್ನ ಅರವಿಂದ್ ಕೇಜ್ರಿವಾಲ್ ಬಂಧಿಸಿದ ಸಿಬಿಐ

Continue Reading
Advertisement
Tata Motors has taken the lead in the SUV market with Nexon Punch
ಕರ್ನಾಟಕ9 mins ago

Tata Motors: ನೆಕ್ಸಾನ್, ಪಂಚ್‌ ಮೂಲಕ ಎಸ್‌ಯುವಿ ಮಾರುಕಟ್ಟೆಯಲ್ಲಿ ಮುನ್ನಡೆ ಸಾಧಿಸಿದ ಟಾಟಾ ಮೋಟಾರ್ಸ್

Rohit Sharma
ಕ್ರೀಡೆ11 mins ago

Rohit Sharma: ಟಿ20 ವಿಶ್ವಕಪ್​ ಟೂರ್ನಿಯಲ್ಲಿ ವಿಶ್ವ ದಾಖಲೆ ಬರೆದ ಹಿಟ್​ಮ್ಯಾನ್ ರೋಹಿತ್

virat kohli
ಕ್ರೀಡೆ39 mins ago

Virat Kohli: ಮೊದಲ ಬಾರಿಗೆ ಸೆಮಿಫೈನಲ್​ನಲ್ಲಿ ಸಿಂಗಲ್​ ಡಿಜಿಟ್​ಗೆ ಔಟ್​ ಆದ​ ಕೊಹ್ಲಿ; ಸಮಾಧಾನಪಡಿಸಿದ ಕೋಚ್​

DCM DK Shivakumar latest statement about CM change issue
ಪ್ರಮುಖ ಸುದ್ದಿ43 mins ago

DK Shivakumar: ಸಿಎಂ ಬದಲಾವಣೆ; ಹೈಕಮಾಂಡ್ ತೀರ್ಮಾನಕ್ಕೆ ಬದ್ಧ ಎಂದ ಡಿ.ಕೆ. ಶಿವಕುಮಾರ್

roopantara Movie First Look Poster released
ಕರ್ನಾಟಕ49 mins ago

Kannada New Movie: ‘ರೂಪಾಂತರ’ಗೊಂಡ ರಾಜ್ ಬಿ. ಶೆಟ್ಟಿ! ಮತ್ತೊಂದು ವಿಭಿನ್ನ ಚಿತ್ರ

Hosur Airport
ಪ್ರಮುಖ ಸುದ್ದಿ52 mins ago

Hosur Airport: ಬೆಂಗಳೂರಿನಿಂದ ಕೇವಲ 40 ಕಿ.ಮೀ ದೂರದ ಹೊಸೂರಿನಲ್ಲಿ ಹೊಸ ಏರ್‌ಪೋರ್ಟ್‌!

Sudipa Chatterjee
ದೇಶ1 hour ago

Sudipa Chatterjee: ಗೋಮಾಂಸ ಸೇವನೆಗೆ ಪ್ರಚಾರ- TMC ನಾಯಕ ಬಬೂಲ್‌ ಸುಪ್ರಿಯೋ ಆಪ್ತೆ, ಬೆಂಗಾಳಿ ನಟಿಗೆ ಜೀವ ಬೆದರಿಕೆ

Kalki 2898AD
ಸಿನಿಮಾ2 hours ago

Kalki 2898AD: ಕಲಿಯುಗದಲ್ಲಿ ʼಕಲ್ಕಿʼಯ ಆಗಮನದ ಚರ್ಚೆ ಹುಟ್ಟು ಹಾಕಿದ ‘ಕಲ್ಕಿ 2898ಎಡಿ’ ಸಿನಿಮಾ!

Agumbe Ghats
ಕರ್ನಾಟಕ2 hours ago

Agumbe Ghat: ಭಾರಿ ಮಳೆ; ಸೆ.15ರವರೆಗೆ ಆಗುಂಬೆ ಘಾಟಿಯಲ್ಲಿ ಭಾರಿ ವಾಹನಗಳ ಸಂಚಾರ ನಿಷೇಧ!

IND vs ENG
ಕ್ರೀಡೆ2 hours ago

IND vs ENG: ಟಾಸ್​ ಗೆದ್ದ ಇಂಗ್ಲೆಂಡ್​; ಭಾರತಕ್ಕೆ ಬ್ಯಾಟಿಂಗ್ ಆಹ್ವಾನ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Weather Forecast
ಮಳೆ3 hours ago

Karnataka Weather : ಭಾರಿ ಮಳೆ ಹಿನ್ನೆಲೆ ದಕ್ಷಿಣ ಕನ್ನಡಕ್ಕೆ ರೆಡ್ ಅಲರ್ಟ್; ಶುಕ್ರವಾರವೂ ಶಾಲೆಗಳಿಗೆ ರಜೆ ಘೋಷಣೆ

karnataka Weather Forecast
ಮಳೆ5 hours ago

Karnataka Weather : ಭಾರಿ ಮಳೆಗೆ ಸೇತುವೆಯಿಂದ ಹೊಳೆಗೆ ಬಿದ್ದ ಕಾರು; ಮರ ಹಿಡಿದು ಪ್ರಾಣ ಉಳಿಸಿಕೊಂಡ ಸವಾರರು

Heart Attack
ಕೊಡಗು7 hours ago

Heart Attack : ಕೊಡಗಿನಲ್ಲಿ ಹೃದಯಾಘಾತಕ್ಕೆ ಯುವತಿ ಬಲಿ; ಹೆಚ್ಚಾಯ್ತು ಅಲ್ಪಾಯುಷ್ಯದ ಭಯ

karnataka Rains Effected
ಮಳೆ10 hours ago

Karnataka Rain : ಧಾರಾಕಾರ ಮಳೆಗೆ ಸಡಿಲಗೊಂಡ ಗುಡ್ಡಗಳು; ಧರೆ ಕುಸಿದು ಮಣ್ಣಿನಡಿ ಸಿಲುಕಿದ ಇಬ್ಬರು ಮಕ್ಕಳು

karnataka Weather Forecast
ಮಳೆ3 days ago

Karnataka Weather : ಕರಾವಳಿಯಲ್ಲಿ ಮುಂದುವರಿದ ವರುಣಾರ್ಭಟ; ಸಾಂಪ್ರದಾಯಿಕ ಮೀನುಗಾರಿಕೆಗೂ ಬ್ರೇಕ್

karnataka weather Forecast
ಮಳೆ6 days ago

Karnataka Weather : ರಭಸವಾಗಿ ಹರಿಯುವ ನೀರಲ್ಲಿ ಸಿಲುಕಿದ ಬೊಲೆರೋ; ಬಿರುಗಾಳಿ ಸಹಿತ ಮಳೆ ಎಚ್ಚರಿಕೆ

International Yoga Day 2024
ಕರ್ನಾಟಕ6 days ago

International Yoga Day 2024: ಎಲ್ಲೆಲ್ಲೂ ಯೋಗಾಯೋಗ‌ಕ್ಕೆ ಮಂಡಿಯೂರಿದ ಜನತೆ

Karnataka Weather Forecast
ಮಳೆ1 week ago

Karnataka Weather : ಬಾಗಲಕೋಟೆ, ಬೆಂಗಳೂರು ಸೇರಿ ಚಿಕ್ಕಮಗಳೂರಲ್ಲಿ ಸುರಿದ ಗಾಳಿ ಸಹಿತ ಮಳೆ

Actor Darshan
ಮೈಸೂರು1 week ago

Actor Darshan : ಕೊಲೆ ಕೇಸ್‌ ಬೆನ್ನಲ್ಲೇ ನಟ ದರ್ಶನ್‌ ಸೇರಿ ಪತ್ನಿ ವಿಜಯಲಕ್ಷ್ಮಿಗೆ ಬಾರ್ ಹೆಡೆಡ್ ಗೂಸ್ ಸಂಕಷ್ಟ!

Bakrid 2024
ಬೆಂಗಳೂರು1 week ago

Bakrid 2024 : ಮತ್ತೊಂದು ಧರ್ಮವನ್ನೂ ಪ್ರೀತಿಸಿ; ಬಕ್ರೀದ್‌ ಪ್ರಾರ್ಥನೆಯಲ್ಲಿ ಸಿಎಂ ಸಿದ್ದರಾಮಯ್ಯ ಕರೆ

ಟ್ರೆಂಡಿಂಗ್‌