T20 World Cup | ರೋಚಕ ಪಂದ್ಯದಲ್ಲಿ ಜಿಂಬಾಬ್ವೆ ವಿರುದ್ಧ ಬಾಂಗ್ಲಾಗೆ 3 ರನ್​ ಜಯ, ಕೊನೇ ಓವರ್‌ನಲ್ಲಿ ಹೈಡ್ರಾಮಾ - Vistara News

Latest

T20 World Cup | ರೋಚಕ ಪಂದ್ಯದಲ್ಲಿ ಜಿಂಬಾಬ್ವೆ ವಿರುದ್ಧ ಬಾಂಗ್ಲಾಗೆ 3 ರನ್​ ಜಯ, ಕೊನೇ ಓವರ್‌ನಲ್ಲಿ ಹೈಡ್ರಾಮಾ

ಟಿ20 ವಿಶ್ವ ಕಪ್​ನ (T20 World Cup) ಭಾನುವಾರದ ಮೊದಲ ಪಂದ್ಯದಲ್ಲಿ ಜಿಂಬಾಬ್ವೆ ವಿರುದ್ಧ ಬಾಂಗ್ಲಾದೇಶ ತಂಡ ಲಾಸ್ಟ್​ ಓವರ್​ನಲ್ಲಿ 3 ರನ್​ ಥ್ರಿಲ್ಲಿಂಗ್​ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದೆ.

VISTARANEWS.COM


on

bng
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬ್ರಿಸ್ಬೇನ್​: ಟಿ20 ವಿಶ್ವ ಕಪ್‌ (T20 World Cup) ನಲ್ಲಿ ಮತ್ತೊಂದು ರೋಚಕ ಫಲಿತಾಂಶಕ್ಕೆ ಅಭಿಮಾನಿಗಳು ಸಾಕ್ಷಿಯಾಗಿದ್ದಾರೆ. ಭಾನುವಾರದ ಬಾಂಗ್ಲಾದೇಶ ಹಾಗೂ ಜಿಂಬಾಬ್ವೆ ತಂಡಗಳ ಮುಖಾಮುಖಿಯಲ್ಲಿ ಅಂತಿಮ ಓವರ್‌ನಲ್ಲಿ ಎರಡು ತಂಡಗಳಿಗೂ ಗೆಲ್ಲುವ ಅವಕಾಶವಿದ್ದರೂ ಜಿಂಬಾಬ್ವೆ ತಂಡ ಎಡವಿ ಬಾಂಗ್ಲಾದೇಶ ವಿರುದ್ಧ 3 ರನ್‌ ಅಂತರದಿಂದ ಸೋಲನುಭವಿಸಿತು.

ಟಾಸ್​ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಬಾಂಗ್ಲಾದೇಶ 7 ವಿಕೆಟ್ ನಷ್ಟಕ್ಕೆ 150 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಜಿಂಬಾಬ್ವೆ ತನ್ನ ಪಾಲಿನ ಓವರ್​ನಲ್ಲಿ 8 ವಿಕೆಟ್ ನಷ್ಟಕ್ಕೆ 147 ರನ್ ಗಳಿಸಲಷ್ಟೇ ಶಕ್ತವಾಯಿತು. ಪಾಕ್​ ವಿರುದ್ಧ ಐತಿಹಾಸಿಕ ಗೆಲುವು ಸಾಧಿಸಿ ಬೀಗಿದ್ದ ಜಿಂಬಾಬ್ವೆಗೆ ಈ ಪಂದ್ಯದಲ್ಲಿ ಮೇಲುಗೈ ಸಾಧಿಸಲು ಸಾಧ್ಯವಾಗಲಿಲ್ಲ. ಒಂದೊಮ್ಮೆ ಜಿಂಬಾಬ್ವೆ ಈ ಪಂದ್ಯದಲ್ಲಿಯೂ ಗೆಲುವು ಸಾಧಿಸಿದ್ದರೆ ಸೆಮಿಫೈನಲ್​ಗೇರುವ ಅವಕಾಶವೊಂದು ಜೀವಂತ ಇರಿಸಬಹುದಿತ್ತು. ಆದರೆ ಈ ಸೋಲಿನಿಂದ ಜಿಂಬ್ವಾಬೆ ಸೆಮಿ ಹಾದಿ ಮತ್ತಷ್ಟು ಕ್ಷೀಣವಾದಂತಾಗಿದೆ.

ಮೊದಲು ಬ್ಯಾಟಿಂಗ್ ನಡೆಸಿದ ಬಾಂಗ್ಲಾದೇಶಕ್ಕೆ ಆರಂಭಿಕ ಆಟಗಾರ ಶಂಟೋ ಅರ್ಧಶತಕದ ನೆರವು ನೀಡಿದರು. 55 ಎಸೆತ ಆಡಿದ ಶಂಟೋ 71 ರನ್ ಗಳಿಸಿದರೆ, ಅಫಿಫ್ ಹೊಸೈನ್ 29 ರನ್, ಶಕೀಬ್ ಅಲ್​ ಹಸನ್​ 23 ರನ್ ಗಳಿಸಿದರು. ಗುರಿ ಬೆನ್ನತ್ತಿದ ಜಿಂಬಾಬ್ವೆ ಉತ್ತಮ ಆರಂಭ ಪಡೆಯಲಿಲ್ಲ. ಆದರೆ ತಂಡವನ್ನು ಆಧರಿಸಿದ ಸೀನ್ ವಿಲಿಯಮ್ಸ್ 64 ರನ್ ಗಳಿಸಿದರು. ರಿಯಾನ್ ಬುರ್ಲ್ (27) ಉತ್ತಮ ನಿರ್ವಹಣೆ ತೋರಿದರು. ಬಾಂಗ್ಲಾ ಪರ ಟಸ್ಕಿನ್​ ಅಹ್ಮದ್​ ನಾಲ್ಕು ಓವರ್​ನಲ್ಲಿ ಒಂದು ಮೇಡನ್​ ಸಹಿತ 19 ರನ್​ ಬಿಟ್ಟುಕೊಟ್ಟು 3 ವಿಕೆಟ್​ ಉರುಳಿಸಿದರು.

ಮತ್ತೆ ಲಾಸ್ಟ್​ ಓವರ್​ ಥ್ರಿಲ್ಲಿಂಗ್​

ಕಳೆದ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಜಿಂಬಾಬ್ವೆ ಲಾಸ್ಟ್ ಓವರ್​ನಲ್ಲಿ ಗೆಲುವು ಸಾಧಿಸಿತ್ತು. ಆದರೆ ಬಾಂಗ್ಲಾ ವಿರುದ್ಧದ ಲಾಸ್ಟ್​ ಓವರ್​ನಲ್ಲಿ ಗೆಲ್ಲುವ ಅವಕಾಶವನ್ನು ಜಿಂಬಾಬ್ವೆ ಕಳೆದುಕೊಂಡಿತು. ಕೊನೆಯ ಓವರ್​ನಲ್ಲಿ​ ಜಿಂಬಾಬ್ವೆ ಗೆಲುವಿಗೆ 16 ರನ್ ಅಗತ್ಯವಿತ್ತು. ಮೊಸದಿಕ್ ಹುಸೈನ್ ಎಸೆದ ಓವರ್​ನ ಮೊದಲ ಎಸೆತದಲ್ಲಿ ಬುರ್ಲ್ ಸಿಂಗಲ್ ತೆಗೆದರು. ಎರಡನೇ ಎಸೆತಕ್ಕೆ ಇವಾನ್ಸ್ ಔಟ್. ಮೂರನೇ ಎಸೆತಕ್ಕೆ ಎಂಗರವಾ ಲೆಗ್ ಬೈ ಮೂಲಕ ನಾಲ್ಕು ರನ್ ಗಳಿಸಿದರು. ನಾಲ್ಕನೇ ಎಸೆತಕ್ಕೆ ಭರ್ಜರಿ ಸಿಕ್ಸರ್. ಎರಡು ಎಸೆತಕ್ಕೆ ಐದು ರನ್ ಬೇಕಾಗಿದ್ದಾಗ ಎಂಗರವಾ ಔಟ್ ಆದರು. ಕೊನೆಯ ಎಸೆತಕ್ಕೆ ಬ್ಯಾಟಿಂಗ್ ನಡೆಸಲು ಬಂದ ಬ್ಲೆಸಿಂಗ್ ಮುಜುರಬಾನಿ ಸ್ಟಂಪೌಟಾದರು.

ಬಾಂಗ್ಲಾ ಆಟಗಾರರು ಗೆಲುವಿನ ಸಂಭ್ರಮ ಆಚರಿಸಿದರು. ಆದರೆ ಅಂಪೈರ್ ಈ ಎಸೆತವನ್ನು ನೋಬಾಲ್ ನೀಡಿದರು. ಮತ್ತೆ ಬಾಂಗ್ಲಾ ಪಾಳಯದಲ್ಲಿ ನಡುಕ ಹುಟ್ಟಿಕೊಂಡಿತು. ಬಾಂಗ್ಲಾ ವಿಕೆಟ್ ಕೀಪರ್ ನೂರುಲ್ ಸ್ಟಂಪ್ಡ್​ ಮಾಡುವ ಭರದಲ್ಲಿ ಸ್ಟಂಪ್ ಗಿಂತ ಮುಂದೆ ಚೆಂಡನ್ನು ಕಲೆಕ್ಟ್ ಮಾಡಿ ಔಟ್ ಮಾಡಿದ್ದು ಇದಕ್ಕೆ ಕಾರಣ. ಆದರೆ ಗೆಲುವಿಗೆ ಸಿಕ್ಕ ಮತ್ತೊಂದು ಸುವರ್ಣಾವಕಾಶವನ್ನು ಬಳಸಿಕೊಳ್ಳುವಲ್ಲಿ ಎಡವಿದ ಬ್ಲೆಸಿಂಗ್ ಮುಜುರಬಾನಿ ರನ್ ಗಳಿಸಲು ವಿಫಲರಾದರು. ಇಲ್ಲಿಗೆ ಬಾಂಗ್ಲಾ ಕೈ ಮೇಲಾಯಿತು. ಮೂರು ರನ್​ ಅಂತರದ ಗೆಲುವು ಸಾಧಿಸಿ ಮತ್ತೆ ಗೆಲುವಿನ ಸಂಭ್ರಮಾಚರಣೆ ಮಾಡಿತು.

ಸಂಕ್ಷಿಪ್ತ ಸ್ಕೋರ್​

ಬಾಂಗ್ಲಾದೇಶ: 20 ಓವರ್​ಗಳಲ್ಲಿ 7 ವಿಕೆಟ್ ನಷ್ಟಕ್ಕೆ 150 (ಶಂಟೋ 71, ಅಫಿಫ್ ಹೊಸೈನ್ 29, ಮುಜುರಬಾನಿ 13ಕ್ಕೆ 2)

ಜಿಂಬಾಬ್ವೆ: 20 ಓವರ್​ಗಳಲ್ಲಿ 8 ವಿಕೆಟ್ ನಷ್ಟಕ್ಕೆ 147 (ಸೀನ್ ವಿಲಿಯಮ್ಸ್ 64, ಟಸ್ಕಿನ್​ ಅಹ್ಮದ್​ 19ಕ್ಕೆ3)

ಇದನ್ನೂ ಓದಿ | T20 World Cup | ಗ್ಲೆನ್​ ಫಿಲಿಪ್ಸ್​ ಶತಕ; ಲಂಕಾ ವಿರುದ್ಧ ನ್ಯೂಜಿಲೆಂಡ್‌ಗೆ 65 ರನ್​ ಗೆಲುವು

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

Lok Sabha Election 2024

Rajat Sharma: ಕಾಂಗ್ರೆಸ್ ನಾಯಕರ ವಿರುದ್ಧ ಖ್ಯಾತ ಪತ್ರಕರ್ತ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದೇಕೆ?

Rajat sharma: ಕಾಂಗ್ರೆಸ್ ನಾಯಕರಾದ ರಾಗಿಣಿ ನಾಯಕ್, ಜೈರಾಮ್ ರಮೇಶ್ ಮತ್ತು ಪವನ್ ಖೇರಾ ವಿರುದ್ಧ ಹಿರಿಯ ಪತ್ರಕರ್ತ ರಜತ್ ಶರ್ಮಾ ದೆಹಲಿ ಹೈಕೋರ್ಟ್‌ನಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದು, ಲೋಕಸಭೆ ಚುನಾವಣೆ ಫಲಿತಾಂಶದ ದಿನ (Lok Sabha Election Result) ತಮ್ಮ ಕಾರ್ಯಕ್ರಮದ ವೇಳೆ “ನಿಂದನೀಯ ಭಾಷೆ” ಬಳಸಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಸುಳ್ಳು ಆರೋಪ‌ ಮಾಡಿದ್ದಾರೆಂದು ದೂರಿದ್ದಾರೆ.

VISTARANEWS.COM


on

By

Lok Sabha Election Result
Koo

ಲೋಕಸಭೆ ಚುನಾವಣೆ ಫಲಿತಾಂಶದ (Lok Sabha Election Result) ದಿನ ತಮ್ಮ ಕಾರ್ಯಕ್ರಮದ ವೇಳೆ “ನಿಂದನೀಯ ಭಾಷೆ” (abusive language) ಬಳಸಿದ್ದಾರೆಂದು ಆರೋಪಿಸಿದ್ದ ಕಾಂಗ್ರೆಸ್ (congress) ನಾಯಕರಾದ ರಾಗಿಣಿ ನಾಯಕ್ (Ragini Nayak), ಜೈರಾಮ್ ರಮೇಶ್ (Jairam Ramesh) ಮತ್ತು ಪವನ್ ಖೇರಾ (Pawan Khera) ಅವರ ವಿರುದ್ಧ ಹಿರಿಯ ಪತ್ರಕರ್ತ (journalist) ರಜತ್ ಶರ್ಮಾ (Rajat Sharma) ದೆಹಲಿ ಹೈಕೋರ್ಟ್‌ನಲ್ಲಿ (delhi high court) ಮಾನನಷ್ಟ ಮೊಕದ್ದಮೆ (defamation suit) ದಾಖಲಿಸಿದ್ದಾರೆ.

ರಜತ್ ಶರ್ಮಾ ವಿರುದ್ಧ ಸಾಮಾಜಿಕ ಮಾಧ್ಯಮದಲ್ಲಿ ಆಕ್ಷೇಪಾರ್ಹ ಟ್ವೀಟ್‌ಗಳು ಮತ್ತು ವಿಡಿಯೋಗಳನ್ನು ತೆಗೆದುಹಾಕಬೇಕು, ರಾಜಕೀಯ ನಾಯಕರು ಅವರ ವಿರುದ್ಧ ಆರೋಪ ಮಾಡುವುದನ್ನು ತಡೆಯುವಂತೆ, ಮಾನನಷ್ಟ ಪರಿಹಾರ ನೀಡುವಂತೆ ಶರ್ಮಾ ಅವರ ವಕೀಲರು ನ್ಯಾಯಾಲಯವನ್ನು ಕೋರಿದ್ದಾರೆ.

ಈ ಕುರಿತು ವಿಚಾರಣೆ ಕೈಗೆತ್ತಿಕೊಂಡ ನ್ಯಾಯಮೂರ್ತಿ ನೀನಾ ಬನ್ಸಾಲ್ ಕೃಷ್ಣ ಅವರು ರಜತ್ ಶರ್ಮಾ ಪರ ವಕೀಲರ ವಾದಗಳನ್ನು ಆಲಿಸಿದ ಅನಂತರ ಮಧ್ಯಂತರ ವಿಚಾರಣೆಗಾಗಿ ಆದೇಶವನ್ನು ಕಾಯ್ದಿರಿಸಿದರು. ಎರಡು ಪಕ್ಷದವರ ವಾದವನ್ನು ಆಲಿಸಲಾಗಿದೆ ಎಂದು ನ್ಯಾಯಾಧೀಶರು ತಿಳಿಸಿದ್ದಾರೆ.

ಇಂಡಿಪೆಂಡೆಂಟ್ ನ್ಯೂಸ್ ಸರ್ವಿಸ್ ಪ್ರೈವೇಟ್ ಲಿಮಿಟೆಡ್ (ಇಂಡಿಯಾ ಟಿವಿ) ಅಧ್ಯಕ್ಷ ಮತ್ತು ಸಂಪಾದಕ-ಮುಖ್ಯಸ್ಥ ರಜತ್ ಶರ್ಮಾ ಕೂಡ ವಿಚಾರಣೆಯ ಸಂದರ್ಭದಲ್ಲಿ ಹಾಜರಿದ್ದರು.

2024ರ ಲೋಕಸಭಾ ಚುನಾವಣೆಯ ಮತ ಎಣಿಕೆಯ ದಿನದಂದು ಕಾರ್ಯಕ್ರಮದ ಚರ್ಚೆಯ ಸಂದರ್ಭದಲ್ಲಿ ರಾಷ್ಟ್ರೀಯ ದೂರದರ್ಶನದಲ್ಲಿ ರಜತ್ ಶರ್ಮಾ ತಮ್ಮನ್ನು ನಿಂದಿಸಿದ್ದಾರೆ ಎಂದು ರಾಗಿಣಿ ನಾಯಕ್ ಆರೋಪಿಸಿದ ಅನಂತರ ಈ ವಿವಾದ ಹುಟ್ಟಿಕೊಂಡಿತು.

ಚುನಾವಣಾ ಫಲಿತಾಂಶ ಬಂದ ಜೂನ್ 4ರ ಸಂಜೆ ವಾಹಿನಿಯಲ್ಲಿ ಚರ್ಚೆ ನಡೆಯುತ್ತಿದ್ದಾಗ ಕಾಂಗ್ರೆಸ್ ನಾಯಕರು ಜೂನ್ 10 ಮತ್ತು 11ರಂದು ಮಾನಹಾನಿಕರ ಟ್ವೀಟ್ ಮಾಡಲು ಆರಂಭಿಸಿದ್ದಾರೆ ಎಂದು ಶರ್ಮಾ ಪರ ವಕೀಲರು ಹೇಳಿದ್ದಾರೆ.

ಶರ್ಮಾ ಅವರನ್ನು ಪ್ರತಿನಿಧಿಸಿದ ಹಿರಿಯ ವಕೀಲ ಮಣಿಂದರ್ ಸಿಂಗ್, ಶೋನ ಕ್ಲಿಪ್ ಅನ್ನು ಪ್ರಸಾರ ಮಾಡಲಾಗುತ್ತಿದೆ. ಅದರಲ್ಲಿ ನಿಂದನೆಯನ್ನು ಸೇರಿಸಲಾಗಿದೆ. ಆದರೆ ಮೂಲ ತುಣುಕಿನಲ್ಲಿ ಅಂತಹ ಯಾವುದೇ ಆಕ್ಷೇಪಾರ್ಹ ವಿಷಯವನ್ನು ಹೊಂದಿಲ್ಲ ಎಂದು ಪ್ರತಿಪಾದಿಸಿದರು.

ನ್ಯಾಯಾಲಯದ ಪರಿಶೀಲನೆಗಾಗಿ ಅವರು ವೀಡಿಯೊ ಕ್ಲಿಪ್ ಅನ್ನು ಸಹ ಪ್ಲೇ ಮಾಡಿದರು.

ಯಾವುದೇ ನಿಂದನೆ ಇಲ್ಲ. ಲೈವ್ ಶೋ ನಡೆದ ಆರು ದಿನಗಳ ಅನಂತರ ಅವರು ರಾಗಿಣಿ ನಾಯಕ್ ವಿರುದ್ಧ ಶರ್ಮಾ ನಿಂದನೆ ಮಾಡಿದ್ದಾರೆ ಎಂದು ಟ್ವೀಟ್ ಮಾಡಲಾಗಿದೆ. ಅವರು ಜೂನ್ 11ರಂದು ಪತ್ರಿಕಾಗೋಷ್ಠಿ ನಡೆಸಿ ಆರೋಪಿಸಿದ್ದರು.


ಕಾರ್ಯಕ್ರಮವು ನೇರ ಪ್ರಸಾರವಾಗಿದೆ. ಅವರು ಜೂನ್ 10 ರ ರಾತ್ರಿಯವರೆಗೆ ಆರು ದಿನಗಳವರೆಗೆ ಯಾವುದೇ ಅಸಮಾಧಾನವನ್ನು ಹೊಂದಿರಲಿಲ್ಲ. ಆ ಬಳಿಕ ಇದ್ದಕ್ಕಿದ್ದಂತೆ ಆರೋಪಿಸಿದ್ದೇಕೆ ಎಂದು ಸಿಂಗ್ ವಾದಿಸಿದರು.

ಇದನ್ನೂ ಓದಿ: Suresh Gopi: ಇಂದಿರಾ ಗಾಂಧಿ ಭಾರತದ ಮಾತೆ ಎಂದ ಬಿಜೆಪಿ ಸಂಸದ ಸುರೇಶ್‌ ಗೋಪಿ

ಕಳೆದ ನಾಲ್ಕು ದಶಕಗಳಲ್ಲಿ ಗಳಿಸಿದ ಪತ್ರಕರ್ತನ ಪ್ರತಿಷ್ಠೆಗೆ ಸಾಮಾಜಿಕ ಮಾಧ್ಯಮದಲ್ಲಿ ಕಾಂಗ್ರೆಸ್ ನಾಯಕರು ಮಾಡುತ್ತಿರುವ ಹುಸಿ ಆರೋಪ ನಷ್ಟವನ್ನುಂಟು ಮಾಡುತ್ತಿದ್ದು, ತಕ್ಷಣವೇ ಟ್ವೀಟ್‌ಗಳನ್ನು ತೆಗೆದುಹಾಕಬೇಕೆಂದು ರಜತ್ ಶರ್ಮಾ ಪರ ವಕೀಲರು ಮನವಿ ಮಾಡಿದರು.

ಇದು ಲೈವ್ ಶೋ ಆಗಿತ್ತು ಮತ್ತು ಲಕ್ಷಾಂತರ ಜನರು ಇದನ್ನು ವೀಕ್ಷಿಸುತ್ತಾರೆ. ಕಾಂಗ್ರೆಸ್ ನಾಯಕರು ಮಾಡಿರುವ ಆರೋಪಗಳು ಸಾಮಾಜಿಕ ಜಾಲತಾಣದಲ್ಲಿ ಇದ್ದರೆ ನಿರಂತರ ನಿಂದನೆ ಎದುರಿಸಬೇಕಾಗುತ್ತದೆ. ಹೀಗಾಗಿ ತಕ್ಷಣವೇ ಅದನ್ನು ತೆಗೆದುಹಾಕಬೇಕು. ನಾನು ಯಾರನ್ನೂ ಬೈಯುವುದಕ್ಕೆ ಅಥವಾ ನಿಂದಿಸುವುದಕ್ಕೆ ಹೆಸರಾಗಿಲ್ಲ. ನಾನು ನನ್ನ ಸುಸಂಸ್ಕೃತ ನಡವಳಿಕೆಗೆ ಹೆಸರುವಾಸಿಯಾಗಿದ್ದೇನೆ ಎಂದು ರಜತ್ ಶರ್ಮಾ ಅವರು ನ್ಯಾಯಾಲಯಕ್ಕೆ ತಿಳಿಸಿದರು.

Continue Reading

ಆಟೋಮೊಬೈಲ್

Auto Launches: ಸ್ಕೋಡಾ ಕುಶಾಕ್‌, ಬಿಎಂಡಬ್ಲ್ಯು ಆರ್ 1300 ಸೇರಿ ಇನ್ನೂ ಹಲವು ಹೊಸ ವಾಹನ ಮಾರುಕಟ್ಟೆಗೆ!

ಅಟೋಮೊಬೈಲ್ ನಲ್ಲಿ ಈ ವಾರ ಹಲವು ಕಾರು, ಸ್ಕೂಟರ್ ಸೇರಿ ಉನ್ನತ ಬ್ರ್ಯಾಂಡ್ ನ ಸಾಕಷ್ಟು ಹೊಸ ಮಾದರಿಗಳು ಮಾರುಕಟ್ಟೆ (Auto Launches) ಪ್ರವೇಶಿಸಲಿದೆ. ವಿನೂತನ ತಂತ್ರಜ್ಞಾನದೊಂದಿಗೆ ಹಲವಾರು ವೈಶಿಷ್ಟ್ಯಗಳೊಂದಿಗೆ ಬರಲಿರುವ ಈ ವಾಹನಗಳು ತಮ್ಮ ವಿನೂತನ ತಂತ್ರಜ್ಞಾನದಿಂದ ಗ್ರಾಹಕರನ್ನು ಸೆಳೆಯಲಿವೆ.

VISTARANEWS.COM


on

By

Auto Launches
Koo

ಆಟೋಮೊಬೈಲ್ (automobile) ಉದ್ಯಮದಲ್ಲಿ ಈ ವಾರ ಮೈಲುಗಲ್ಲೊಂದು ದಾಖಲಾಗಿದೆ. ಯಾಕೆಂದರೆ ಉನ್ನತ ಬ್ರ್ಯಾಂಡ್ ನ ಸಾಕಷ್ಟು ಹೊಸ ಮಾದರಿಗಳು ಮಾರುಕಟ್ಟೆ ಪ್ರವೇಶಿಸಿವೆ ಮತ್ತು ಪ್ರವೇಶಿಸುತ್ತಿವೆ. ವಿನೂತನ ತಂತ್ರಜ್ಞಾನದೊಂದಿಗೆ ಹಲವಾರು ವೈಶಿಷ್ಟ್ಯಗಳೊಂದಿಗೆ ಸ್ಕೋಡಾ ಕುಶಾಕ್‌ (Skoda Kushaq), ಬಿಎಂಡಬ್ಲ್ಯು ಆರ್ 1300 (BMW R 1300 GS), ಯಮಹಾ ಫ್ಯಾಸಿನೊ (Yamaha Fascino S) ಸೇರಿ ಹಲವು ಕಾರುಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ.

ಸ್ಕೋಡಾ ಕುಶಾಕ್

ಸ್ಕೋಡಾ ಕುಶಾಕ್ ಓನಿಕ್ಸ್ ವೇರಿಯಂಟ್ ಐದು ಆಸನಗಳ ಕಾಂಪ್ಯಾಕ್ಟ್ ಎಸ್‌ಯುವಿ ಭಾರತದಲ್ಲಿ ಲಭ್ಯವಿದೆ. ಕುಶಾಕ್ ಬೆಲೆ 11.99 ಲಕ್ಷದಿಂದ 20.49 ಲಕ್ಷ ರೂ.ನಷ್ಟಿದ್ದರೆ, ಓನಿಕ್ಸ್ ಆವೃತ್ತಿಯು 12.89 ಲಕ್ಷದಿಂದ 13.49 ಲಕ್ಷ ರೂ.ವರೆಗೆ ಇದೆ. ಈ ಮಾದರಿಯು ಐದು ವಿಶಾಲವಾದ ರೂಪಾಂತರಗಳಲ್ಲಿ ಲಭ್ಯವಿದೆ: ಆಕ್ಟಿವ್, ಓನಿಕ್ಸ್, ಆಂಬಿಷನ್, ಸ್ಟೈಲ್ ಮತ್ತು ಮಾಂಟೆ ಕಾರ್ಲೋ.

ಇದು 10 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 8 ಇಂಚಿನ ಡಿಜಿಟಲ್ ಡ್ರೈವರ್ ಡಿಸ್ ಪ್ಲೇ (ಸ್ಟೈಲ್ ಮತ್ತು ಮಾಂಟೆ ಕಾರ್ಲೋ ರೂಪಾಂತರಗಳಲ್ಲಿ) ಮತ್ತು ಸನ್‌ರೂಫ್‌ನೊಂದಿಗೆ ಬರಲಿದೆ. ಎಸ್ ಯುವಿ ಗಾಳಿಯ ಮುಂಭಾಗದ ಆಸನಗಳು, ಚಾಲಿತ ಚಾಲಕ ಮತ್ತು ಸಹ-ಚಾಲಕ ಆಸನ, ಸಬ್ ವೂಫರ್‌ನೊಂದಿಗೆ 6 ಸ್ಪೀಕರ್ ಸೌಂಡ್ ಸಿಸ್ಟಮ್ ಮತ್ತು ವೈರ್‌ಲೆಸ್ ಫೋನ್ ಚಾರ್ಜಿಂಗ್ ಅನ್ನು ಸಹ ಒಳಗೊಂಡಿದೆ.


ಟಾಟಾ ಆಲ್ಟ್ರೋಜ್ ರೇಸರ್

ಟಾಟಾ ಮೋಟಾರ್ಸ್ ಭಾರತದಲ್ಲಿ ಆಲ್ಟ್ರೋಜ್ ನ ಸ್ಪೋರ್ಟಿ ಆವೃತ್ತಿಯಾದ ಬಹುನಿರೀಕ್ಷಿತ ರೇಸರ್ ಅನ್ನು ಬಿಡುಗಡೆ ಮಾಡಿದೆ. ಇದು ಮೂರು ರೂಪಾಂತರಗಳಲ್ಲಿ ಲಭ್ಯವಿದೆ. ಅರ್1, ಅರ್2 ಮತ್ತು ಅರ್3. ಅರ್1 ಬೆಲೆ 9.49 ಲಕ್ಷ (ಎಕ್ಸ್ ಶೋ ರೂಂ), ಅರ್2 ಬೆಲೆ10.49 ಲಕ್ಷ. ಆದರೆ ಅರ್3 ರೂಪಾಂತರವು 10.99 ಲಕ್ಷ ರೂ. ಎಕ್ಸ್ ಶೋ ರೂಂನಲ್ಲಿ ಬರುತ್ತದೆ. ರೂಪಾಂತರವು ಸ್ಪೋರ್ಟಿ ಮತ್ತು ಸೊಗಸಾದ ಆಯ್ಕೆಯನ್ನು ನೀಡುತ್ತದೆ. ಇದು ಪ್ಯೂರ್ ಗ್ರೇ, ಅವೆನ್ಯೂ ವೈಟ್ ಮತ್ತು ಅಟಾಮಿಕ್ ಆರೆಂಜ್‌ನಲ್ಲಿ ಲಭ್ಯವಿದೆ. ಸ್ಪೋರ್ಟಿಯರ್ ರೂಪಾಂತರವು 1.2 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್‌ನಿಂದ 120ಪಿಎಸ್ ಮತ್ತು 170ಎನ್ ಎಂ ಜೊತೆಗೆ 6 ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ ಜೋಡಿಸಲ್ಪಟ್ಟಿದೆ.

ಎಂಜಿ ಗ್ಲೋಸ್ಟರ್ 2024

ಎಂಜಿ ಗ್ಲೋಸ್ಟರ್ ಎಸ್ ಯುವಿ ಭಾರತದಲ್ಲಿ ಸುಮಾರು 39.50 ಲಕ್ಷ ರೂ. ಎಕ್ಸ್-ಶೋರೂಮ್ ವೆಚ್ಚದಲ್ಲಿ ಗ್ರಾಹಕರಿಗೆ ಸಿಗುವ ಸಾಧ್ಯತೆ ಇದೆ. ಎಂಜಿ ಗ್ಲೋಸ್ಟರ್ 2024 ಅದರ ತಾಂತ್ರಿಕ ಸಮಗ್ರತೆಯನ್ನು ಕಾಪಾಡಿಕೊಳ್ಳಲು ಯೋಜಿಸಿದೆ. ಇದರರ್ಥ ಎರಡು ರೂಪಾಂತರಗಳು 2.0 ಲೀಟರ್ ಡೀಸೆಲ್ ಮತ್ತು 2.0 ಲೀಟರ್ ಟ್ವಿನ್- ಟರ್ಬೊ ಡೀಸೆಲ್ ನೀಡಲಾಗುವುದು. ಇದು ಡೀಸೆಲ್ ಮತ್ತು ಸ್ವಯಂಚಾಲಿತ ಪವರ್‌ಟ್ರೇನ್ ಆಯ್ಕೆಗಳೊಂದಿಗೆ ಲಭ್ಯವಿರುತ್ತದೆ.

ಮಾರುತಿ ಡಿಜೈರ್ 2024

ಹೊಸ ಪೀಳಿಗೆಯ ಮಾರುತಿ ಡಿಜೈರ್ ವೈರ್‌ಲೆಸ್ ಫೋನ್ ಚಾರ್ಜಿಂಗ್, 9 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಟೋ ಎಸಿ, ಕ್ರೂಸ್ ಕಂಟ್ರೋಲ್ ಮತ್ತು ಪುಶ್ ಬಟನ್ ಸ್ಟಾರ್ಟ್‌ನಂತಹ ಹೊಸ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಸುರಕ್ಷತಾ ಪ್ಯಾಕೇಜ್‌ನಲ್ಲಿ ಆರು ಏರ್‌ಬ್ಯಾಗ್‌ಗಳು, ಹಿಲ್ ಹೋಲ್ಡ್ ಅಸಿಸ್ಟ್ ಮತ್ತು ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC) ಸೇರಿವೆ. 2024 ರಲ್ಲಿ ಡಿಜೈರ್‌ನಲ್ಲಿ ಅಸ್ತಿತ್ವದಲ್ಲಿರುವ ನಾಲ್ಕು ಸಿಲಿಂಡರ್ ಎಂಜಿನ್ ಅನ್ನು ಹೊಸ 1.2 ಲೀಟರ್, ಮೂರು ಸಿಲಿಂಡರ್ ನೈಸರ್ಗಿಕವಾಗಿ ಆಕಾಂಕ್ಷಿತ ಪೆಟ್ರೋಲ್ ಎಂಜಿನ್‌ನಿಂದ ಬದಲಾಯಿಸಲಾಗುತ್ತದೆ. ಇದರ ಬೆಲೆ 7- 10 ಲಕ್ಷ ರೂ. ಇರುವ ಸಾಧ್ಯತೆ ಇದೆ.

ಬಿಎಂಡಬ್ಲ್ಯೂ 1300 ಜಿಎಸ್

ಬಿಎಂಡಬ್ಲ್ಯೂ ಭಾರತದಲ್ಲಿ ಆರ್ 1300 ಜಿಎಸ್ ಅನ್ನು ಬಿಡುಗಡೆ ಮಾಡಿದೆ. ಇದು 20.95 ಲಕ್ಷ ರೂ. ಎಕ್ಸ್ ಶೋ ರೂಂ ಬೆಲೆಯೊಂದಿಗೆ ಲಭ್ಯವಾಗಲಿದೆ. ಬಿಎಂಡಬ್ಲ್ಯೂ ಆರ್ 1300 ಜಿಎಸ್ ಮೂರು ಆಯ್ಕೆಯ ಶೈಲಿಗಳಲ್ಲಿ ಲಭ್ಯವಿದೆ. ಸ್ಟೈಲ್ ಟ್ರಿಪಲ್ ಬ್ಲಾಕ್, ಸ್ಟೈಲ್ ಜಿಎಸ್ ಟ್ರೋಫಿ, ಮತ್ತು 719 ಟ್ರಮುಂಟಾನಾ. ಸಂಪೂರ್ಣವಾಗಿ ಹೊಸ ವಿನ್ಯಾಸವು ಸಾಂಪ್ರದಾಯಿಕ ಜಿಎಸ್ ಐಕಾನ್‌ಗಳನ್ನು ಆಧರಿಸಿದೆ.

ಬೇಸ್ ಇನ್ ಲೈಟ್ ವೈಟ್ ಮೆಟಾಲಿಕ್, ಟ್ರಿಪಲ್ ಬ್ಲ್ಯಾಕ್,ಬ್ಲ್ಯಾಕ್‌ಸ್ಟಾರ್ಮ್, ಮೆಟಾಲಿಕ್ ಪೇಂಟ್‌ವರ್ಕ್, ರೇಸಿಂಗ್ ಬ್ಲೂ ಮೆಟಾಲಿಕ್ ಪೇಂಟ್‌ವರ್ಕ್‌ನಲ್ಲಿ ಜಿಎಸ್ ಟ್ರೋಫಿ ಮತ್ತು ಆರೆಲಿಯಸ್ ಗ್ರೀನ್ ಮೆಟಾಲಿಕ್ ಪೇಂಟ್‌ವರ್ಕ್‌ನಲ್ಲಿ 719 ಟ್ರಮುಂಟಾನಾ ಲಭ್ಯವಿದೆ.

ಇದನ್ನೂ ಓದಿ: Maruti Suzuki: ಮಾರುತಿ ಸುಜುಕಿ ಸಿಎನ್‌ಜಿ ವಾಹನದ ಟೀಸರ್ ಔಟ್‌; ಹಲವು ವೈಶಿಷ್ಟ್ಯಗಳ ನಿರೀಕ್ಷೆ


ಯಮಹಾ ಫಾಸಿನೊ ಎಸ್

ಇಂಡಿಯಾ ಯಮಹಾ ಮೋಟಾರ್ ಪ್ರೈ. ಲಿಮಿಟೆಡ್ ತನ್ನ ಪೋರ್ಟ್ ಪೋಲಿಯೊಗೆ ಹೊಸ ಸ್ಕೂಟರ್ ಅನ್ನು ಪರಿಚಯಿಸಿತು. ಫ್ಯಾಸಿನೊ ಎಸ್ ಮಾದರಿಯನ್ನು ಯಮಹಾದ ಮೊಬೈಲ್ ಅಪ್ಲಿಕೇಶನ್ ಮೂಲಕ ನೋಡಬಹುದು. ಈ ಅಪ್ಲಿಕೇಶನ್ ಅನ್ನು ಗೂಗಲ್ ಪ್ಲೇ ಸ್ಟೋರ್, ಆಪ್ ಸ್ಟೋರ್ ನಿಂದ ಡೌನ್‌ಲೋಡ್ ಮಾಡಬಹುದು.

ಈ ಮಾದರಿಯು ಸಾಮಾನ್ಯ ಮೋಡ್ ಮತ್ತು ಟ್ರಾಫಿಕ್ ಮೋಡ್‌ನೊಂದಿಗೆ ಸುಧಾರಿತ ಸ್ವಯಂಚಾಲಿತ ಸ್ಟಾಪ್ ಮತ್ತು ಸ್ಟಾರ್ಟ್ ಸಿಸ್ಟಮ್ (ಎಸ್‌ಎಸ್‌ಎಸ್) ಅನ್ನು ಸಹ ಒಳಗೊಂಡಿದೆ. ಫ್ಯಾಸಿನೊ ಎಸ್ ಮಾದರಿಯ ದೆಹಲಿಯಲ್ಲಿನ ಎಕ್ಸ್ ಶೋ ರೂಂ ಬೆಲೆಗಳು ಮ್ಯಾಟ್ ರೆಡ್ ಮತ್ತು ಮ್ಯಾಟ್ ಬ್ಲ್ಯಾಕ್ ಬಣ್ಣಗಳಿಗೆ 93,730 ರೂ. ಮತ್ತು ಡಾರ್ಕ್ ಮ್ಯಾಟ್ ಬ್ಲೂ ಬಣ್ಣಕ್ಕೆ 94,530 ರೂ. ಆಗಿದೆ.

Continue Reading

ಮನಿ-ಗೈಡ್

Money Guide: ಹಿರಿಯ ನಾಗರಿಕರಿಗಾಗಿ ಅತ್ಯಾಕರ್ಷಕ ಉಳಿತಾಯ ಯೋಜನೆ

ಅತ್ಯಾಕರ್ಷಕ ಬಡ್ಡಿ ದರದೊಂದಿಗೆ ಅಂಚೆ ಇಲಾಖೆ ಒದಗಿಸಿರುವ ಹಿರಿಯ ನಾಗರಿಕರ ಉಳಿತಾಯ ಯೋಜನೆಯಲ್ಲಿ 60 ವರ್ಷಕ್ಕಿಂತ ಮೇಲ್ಪಟ್ಟವರು ಹೂಡಿಕೆ (Money Guide) ಮಾಡಬಹುದು. ಖಾತ್ರಿ ಮರುಪಾವತಿ ನೀಡುವ ಯೋಜನೆ ಇದಾಗಿದ್ದು, ಇದರಲ್ಲಿ ಹೂಡಿಕೆ ಮಾಡುವುದರಿಂದ ಏನು ಲಾಭ, ಸಿಗುವ ಬಡ್ಡಿ ದರ ಎಷ್ಟಿದೆ ಗೊತ್ತೇ? ಹಿರಿಯ ನಾಗರಿಕರಿಗೆ ಉಪಯುಕ್ತವಾದ ಮಾಹಿತಿ ಇಲ್ಲಿದೆ.

VISTARANEWS.COM


on

By

Money Guide
Koo

ಹಿರಿಯ ನಾಗರಿಕರ (Senior Citizen) ಉಳಿತಾಯ ಯೋಜನೆಯು (SCSS) 60 ವರ್ಷಕ್ಕಿಂತ ಮೇಲ್ಪಟ್ಟವರು ಹೂಡಿಕೆ (Money Guide) ಮಾಡಬಹುದಾದ ಖಾತ್ರಿ ಮರುಪಾವತಿ (guaranteed return) ನೀಡುವ ಯೋಜನೆಯಾಗಿದೆ. ಇದರಲ್ಲಿ ಜಂಟಿ ಖಾತೆಯನ್ನು ಸಂಗಾತಿಯೊಂದಿಗೆ ಮಾತ್ರ ತೆರೆಯಬಹುದು.

ಅಂಚೆ ಇಲಾಖೆಯು (post office) ಈ ಸಣ್ಣ ಉಳಿತಾಯ ಯೋಜನೆಗೆ (small savings scheme) ವಾರ್ಷಿಕ ಶೇ. ಶೇ. 8.2 ಬಡ್ಡಿ ದರವನ್ನು (interest rate) ನೀಡುತ್ತಿದೆ. ನೀವು ಈ ಯೋಜನೆಯನ್ನು 5 ವರ್ಷಗಳವರೆಗೆ ತೆರೆಯಬಹುದು. ಆದರೆ ಮೆಚ್ಯೂರಿಟಿಯ ದಿನಾಂಕದಿಂದ ಮುಂದಿನ 3 ವರ್ಷಗಳವರೆಗೆ ಇದನ್ನು ವಿಸ್ತರಿಸಬಹುದು.

ಎಷ್ಟು ಹೂಡಿಕೆ ಮಾಡಬಹುದು?

ಒಂದು ಬಾರಿಯ ಮೊತ್ತದ ಹೂಡಿಕೆಯನ್ನು ಮಾಡಬೇಕು. ಇದರಲ್ಲಿ ಕನಿಷ್ಠ 1,000 ರೂ. ನಿಂದ ಗರಿಷ್ಠ 30 ಲಕ್ಷ ರೂ. ವರೆಗೆ ಹೂಡಿಕೆ ಮಾಡಲು ಅವಕಾಶವಿದೆ. ಇದರಲ್ಲಿ ಮಾಡಿದ ಠೇವಣಿಗಳ ಮೇಲೆ ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 80C ಅಡಿಯಲ್ಲಿ ತೆರಿಗೆ ಪ್ರಯೋಜನಗಳನ್ನು ಪಡೆಯಬಹುದು.

ಬಡ್ಡಿ ದರ

ತ್ರೈಮಾಸಿಕ ಆಧಾರದಲ್ಲಿ ಬಡ್ಡಿಯನ್ನು ಪಾವತಿಸಲಾಗುತ್ತದೆ. ಠೇವಣಿ ಮಾಡಿದ ದಿನಾಂಕದಿಂದ ಮಾರ್ಚ್ 31, ಜೂನ್ 30, ಸೆಪ್ಟೆಂಬರ್ 30, ಡಿಸೆಂಬರ್ 31ರಂದು ಬಡ್ಡಿಯನ್ನು ಪಾವತಿಸಲಾಗುತ್ತದೆ. ಯಾವುದೇ ತ್ರೈಮಾಸಿಕದಲ್ಲಿ ಬಡ್ಡಿಯನ್ನು ಕ್ಲೈಮ್ ಮಾಡದಿದ್ದರೆ ಹೆಚ್ಚುವರಿ ಬಡ್ಡಿಯನ್ನು ಗಳಿಸಲು ಸಾಧ್ಯವಾಗುವುದಿಲ್ಲ. ಉಳಿತಾಯ ಖಾತೆಗೆ ಸ್ವಯಂ ಕ್ರೆಡಿಟ್ ಮೂಲಕ ಬಡ್ಡಿಯನ್ನು ಡ್ರಾ ಮಾಡಬಹುದು.


ಬಡ್ಡಿಗೆ ತೆರಿಗೆ

ಎಲ್ಲಾ ಹಿರಿಯ ನಾಗರಿಕರ ಉಳಿತಾಯ ಯೋಜನೆಯ ಖಾತೆಗಳಲ್ಲಿನ ಒಟ್ಟು ಬಡ್ಡಿಯು 50,000 ರೂ. ಗಳನ್ನು ಮೀರಿದರೆ ಬಡ್ಡಿಗೆ ತೆರಿಗೆ ವಿಧಿಸಲಾಗುತ್ತದೆ. ಅನಂತರ ಬಡ್ಡಿಯ ಮೇಲೆ ತೆರಿಗೆಯನ್ನು ಪಾವತಿಸಬೇಕಾಗುತ್ತದೆ. ಫಾರ್ಮ್ 15 ಜಿ /15ಹೆಚ್ ಅನ್ನು ಸಲ್ಲಿಸಿದರೆ ಮತ್ತು ಸಂಚಿತ ಬಡ್ಡಿಯು 50,000 ರೂ. ಗಿಂತ ಹೆಚ್ಚಿಲ್ಲದಿದ್ದರೆ ಯಾವುದೇ ಟಿಡಿಎಸ್ ಅನ್ನು ಕಡಿತಗೊಳಿಸಲಾಗುವುದಿಲ್ಲ.

ಎಷ್ಟು ಲಾಭ?

ಪ್ರಸ್ತುತ ಪೋಸ್ಟ್ ಆಫೀಸ್ ಎಸ್‌ಸಿಎಸ್‌ಎಸ್‌ನಲ್ಲಿ ತಲಾ 1 ಲಕ್ಷ, 2 ಲಕ್ಷ, 5 ಲಕ್ಷ ಮತ್ತು 10 ಲಕ್ಷ ರೂ. ಹೂಡಿಕೆ ಮಾಡಿದರೆ ಎಷ್ಟು ಲಾಭ ಸಿಗುತ್ತದೆ ಎಂಬುದರ ಮಾಹಿತಿ ಇಲ್ಲಿದೆ. ಯೋಜನೆಯ ಒಟ್ಟು ಅವಧಿಯು 5 ವರ್ಷಗಳು ಮತ್ತು ಬಡ್ಡಿ ದರವು ವಾರ್ಷಿಕ ಶೇ. 8.2. ಗಳಾದರೆ 1 ಲಕ್ಷ ರೂ. ಹೂಡಿಕೆ ಮಾಡಿದರೆ ಒಟ್ಟು ಬಡ್ಡಿ 41,000, 2,050 ತ್ರೈಮಾಸಿಕ ಬಡ್ಡಿ ಹಾಗೂ ಐದು ವರ್ಷಗಳಲ್ಲಿ ಮುಕ್ತಾಯದ ಮೊತ್ತ 1,41,000 ರೂ. ಅನ್ನು ಪಡೆಯಬಹುದು. ಅದೇ ರೀತಿ 2 ಲಕ್ಷ ರೂ. ಹೂಡಿಕೆ ಮಾಡಿದರೆ 82,000, 4,100, 2,82,000, 3 ಲಕ್ಷ ಹೂಡಿಕೆ ಮಾಡಿದರೆ 1,23,000, 6,150, 4,23,000, 4 ಲಕ್ಷ ಹೂಡಿಕೆ ಮಾಡಿದರೆ 1,64,000, 8,200, 5,64,000, 5 ಲಕ್ಷ ರೂ. ಹೂಡಿಕೆ ಮಾಡಿದರೆ 2,05,000, 10,250, 7,05,000, 10 ಲಕ್ಷ ರೂ. ಹೂಡಿಕೆ ಮಾಡಿದರೆ 4,10,000, 20500, 14,10,000, 20 ಲಕ್ಷ ರೂ. ಹೂಡಿಕೆ ಮಾಡಿದರೆ 8,20,000, 41,000, 28,20,000, 30 ಲಕ್ಷ ಹೂಡಿಕೆ ಮಾಡಿದರೆ 12,30,000, 61,500, 42,30,000 ಪಡೆಯಬಹುದು.

ಇದನ್ನೂ ಓದಿ: Money Guide: ಅಸಂಘಟಿತ ವಲಯದ ಕಾರ್ಮಿಕರು ಪ್ರತಿ ತಿಂಗಳು 3 ಸಾವಿರ ರೂ. ಪಿಂಚಣಿ ಪಡೆಯಲು ಹೀಗೆ ಮಾಡಿ

ಅಕಾಲಿಕ ಮುಚ್ಚುವಿಕೆ

ಹಿರಿಯ ನಾಗರಿಕರ ಉಳಿತಾಯ ಯೋಜನೆಯನ್ನು ಯಾವುದೇ ಸಮಯದಲ್ಲಿ ಅಕಾಲಿಕವಾಗಿ ಮುಚ್ಚಬಹುದು. ಆದರೂ ಖಾತೆಯನ್ನು ತೆರೆಯುವ 1 ವರ್ಷದ ಮೊದಲು ಮುಚ್ಚಿದ್ದರೆ ಯಾವುದೇ ಬಡ್ಡಿಯನ್ನು ಪಾವತಿಸಲಾಗುವುದಿಲ್ಲ. ಅಂಚೆ ಕಚೇರಿಯು ಒಟ್ಟು ಮೊತ್ತದಿಂದ ಪಾವತಿಸಿದ ಬಡ್ಡಿಯನ್ನು ಸಹ ಪಡೆಯುತ್ತದೆ. 1 ವರ್ಷದಿಂದ 2 ವರ್ಷಗಳ ಅವಧಿಯಲ್ಲಿ ಖಾತೆಯನ್ನು ಮುಚ್ಚಿದ್ದರೆ, ಮೊತ್ತದ ಶೇ. 1.5ರಷ್ಟನ್ನು ಕಡಿತಗೊಳಿಸಿದ ಅನಂತರ ಮೂಲ ಮೊತ್ತವನ್ನು ಪಾವತಿಸಲಾಗುತ್ತದೆ.

Continue Reading

Latest

Apple With sticker: ಸೇಬು ಹಣ್ಣುಗಳ ಮೇಲೆ ಸ್ಟಿಕ್ಕರ್; ಏನಿದರ ಹಿಂದಿರುವ ರಹಸ್ಯ?

Apple With sticker: ಸೇಬು ಹಣ್ಣು ಎಂದರೆ ಯಾರಿಗೆ ಇಷ್ಟವಿರಲ್ಲ? ದಿನಕ್ಕೊಂದು ಸೇಬು ತಿನ್ನಿ ವೈದ್ಯರಿಂದ ದೂರವಿರಿ ಇರುತ್ತಾರೆ. ಇದೆಲ್ಲಾ ಸರಿ ಮಾರುಕಟ್ಟೆಯಲ್ಲಿ ಹಣ್ಣು ತರಲು ಹೋದಾಗ ಈ ಸೇಬು ಹಣ್ಣುಗಳ ಮೇಲೆ ಚಿಕ್ಕದಾದ ಸ್ಟಿಕ್ಕರ್‌ವೊಂದು ಹಚ್ಚಿರುತ್ತಾರೆ ಅಲ್ವಾ ಅದರ ಹಿಂದಿರುವ ರಹಸ್ಯವೇನೆಂದು ನಿಮಗೆ ಗೊತ್ತಾ? ಆ ಭಾಗ ಹಾಳಾದ ಕಾರಣ ಸ್ಟಿಕರ್‌ನಿಂದ ಮುಚ್ಚಿರುತ್ತಾರೆ ಎನ್ನುತ್ತಾರೆ ಕೆಲವರು ಅದರ ನಿಜವಾದ ಕಾರಣ ಬೇರೆಯೇ ಇದೆ. ಈ ಕುರಿತ ವಿವರ ಇಲ್ಲಿದೆ.

VISTARANEWS.COM


on

Apple With sticker
Koo

ಬೆಂಗಳೂರು : ಮಾರುಕಟ್ಟೆಯಲ್ಲಿ ಸೇಬುಹಣ್ಣುಗಳು ಹಲವು ವಿಧಗಳಲ್ಲಿ ಕಂಡುಬರುತ್ತದೆ. ಕೆಲವು ಸೇಬುಗಳು ಹಸಿರು ಬಣ್ಣದಲ್ಲಿರುತ್ತದೆ. ಕೆಲವು ಸೇಬುಗಳು ಕೆಂಪು ಬಣ್ಣದಲ್ಲಿರುತ್ತದೆ. ಹಾಗೇ ಕೆಲವು ಸೇಬು ಹಣ್ಣಿನ (Apple With sticker) ಮೇಲೆ ಸ್ಟಿಕ್ಕರ್‌ಗಳನ್ನು ಅಂಟಿಸಿರುತ್ತಾರೆ. ಅದಕ್ಕೆ ಬೆಲೆ ಕೂಡ ಹೆಚ್ಚಾಗಿರುತ್ತದೆ. ಹಾಗಾಗಿ ಕೆಲವರು ಅದು ಉತ್ತಮವಾಗಿರುವುದು, ಆರೋಗ್ಯಕ್ಕೆ ಒಳ್ಳೆಯದು ಎಂದು ಅದನ್ನೇ ಕಂಡುಕೊಳ್ಳುತ್ತಾರೆ. ಆದರೆ ಕೆಲವರು ಅದು ಹಾಳಾದ ಕಾರಣ ಆ ಭಾಗವನ್ನು ಸ್ಟಿಕರ್ ನಿಂದ ಮುಚ್ಚಿದ್ದಾರೆ ಎಂದು ಭಾವಿಸುತ್ತಾರೆ. ಸೇಬಿನ ಮೇಲೆ ಸ್ಟಿಕ್ಕರ್ ಯಾಕೆ ಅಂಟಿಸುತ್ತಾರೆ. ಅದು ಏನನ್ನು ಸೂಚಿಸುತ್ತದೆ ಎಂಬುದನ್ನು ಮೊದಲು ತಿಳಿಯಿರಿ.

ಸ್ಟಿಕ್ಕರ್ ಇರುವ ಸೇಬು ಒಳ್ಳೆಯ ಗುಣಮಟ್ಟದಾಗಿರುತ್ತದೆ ಮತ್ತು ಅದಕ್ಕೆ ಬೆಲೆ ಕೂಡ ಹೆಚ್ಚು ಎಂದು ವ್ಯಾಪಾರಿಗಳು ಮಾರಾಟ ಮಾಡುತ್ತಾರೆ. ಆದರೆ ವಾಸ್ತವಾಗಿ ಕೆಟ್ಟ ಭಾಗವನ್ನು ಮುಚ್ಚಲು ಅಥವಾ ಕೊಳೆತ ಭಾಗವನ್ನು ಮರೆಮಾಚಲು ಸ್ಟಿಕ್ಕರ್ ಅನ್ನು ಅಂಟಿಸಿರುವುದಿಲ್ಲ.

ತಜ್ಞರು ತಿಳಿಸಿದ ಪ್ರಕಾರ, ಸೇಬು ಮಾತ್ರವಲ್ಲ ಕಿತ್ತಳೆ ಹಣ್ಣುಗಳನ್ನು ಸಹ ಸ್ಟಿಕ್ಕರ್‌ಗಳೊಂದಿಗೆ ಮಾರಾಟ ಮಾಡಲಾಗುತ್ತದೆ. ಸ್ಟಿಕ್ಕರ್ ನೋಡಿದವರು ಅದು ದುಬಾರಿ ಎಂದು ಭಾವಿಸುತ್ತಾರೆ. ಆದರೆ ಸ್ಟಿಕ್ಕರ್ ನೇರವಾಗಿ ಆರೋಗ್ಯಕ್ಕೆ ಸಂಬಂಧಿಸಿದ್ದಾಗಿದೆಯಂತೆ. ಹಾಗಾಗಿ ನೀವು ಸೇಬು ಖರೀದಿಸುವಾಗ ಅದರ ಮೇಲಿರುವ ಸ್ಟಿಕ್ಕರ್ ಅನ್ನು ಓದಿ.

ಸೇಬಿನ ಮೇಲಿನ ಸ್ಟಿಕ್ಕರ್‌ನಲ್ಲಿ ಸೇಬಿನ ಗುಣಮಟ್ಟ ಹಾಗೂ ಅದನ್ನು ಹೇಗೆ ಬೆಳೆಸಲಾಗಿದೆ ಎಂಬುದರ ಕುರಿತು ಮಾಹಿತಿ ಇದೆಯಂತೆ. ಕೆಲವು ಸ್ಟಿಕ್ಕರ್ ಗಳ ಮೇಲೆ ನಾಲ್ಕು ಸಂಖ್ಯೆಯ ನಂಬರ್ ಇರುತ್ತದೆ. ಅಂದರೆ ಅವು 4026 ಅಥವಾ 4987 ನಂತಹ ಸಂಖ್ಯೆ ಇರುತ್ತದೆ. ಇದು ಕೀಟ ನಾಶಕ ಮತ್ತು ರಾಸಾಯನಿಕಗಳನ್ನು ಬಳಸಿ ಬೆಳೆಸಲಾಗಿದೆ ಎಂದು ಸೂಚಿಸುತ್ತದೆಯಂತೆ. ಈ ಹಣ್ಣುಗಳ ಮೇಲೆ ಕೀಟನಾಶಕವನ್ನು ಹೆಚ್ಚಾಗಿ ಬಳಸಿರುತ್ತಾರಂತೆ. ಈ ಹಣ್ಣು ಅಗ್ಗವಾಗಿರುತ್ತದೆ.

ಕೆಲವು ಹಣ್ಣುಗಳ ಮೇಲೆ ಐದು ಅಂಕಿಯ ಸಂಖ್ಯೆಯನ್ನು ಬರೆಯಲಾಗುತ್ತದೆ. ಅಂದರೆ 84131 ಅಥವಾ 86532 ಹೀಗೆ 8ರಿಂದ ಪ್ರಾರಂಭವಾಗುವ ನಂಬರ್ ಇರುತ್ತದೆ. ಈ ಹಣ್ಣುಗಳು ನೈಸರ್ಗಿಕವಲ್ಲ. ಇವುಗಳನ್ನು ರಾಸಾಯನಿಕಗಳಿಂದ ಸಂಸ್ಕರಿಸಿದ್ದು, ಇದು ತುಂಬಾ ದುಬಾರಿಯಾಗಿರುತ್ತದೆ.

ಕೆಲವು ಹಣ್ಣುಗಳಲ್ಲಿ 9ರಿಂದ ಪ್ರಾರಂಭವಾಗುವ ಐದು ಅಂಕಿಯ ನಂಬರ್ ಇರುತ್ತದೆ. ಅದು 93435 ಇರುತ್ತದೆ. ಈ ಹಣ್ಣು ಸಾವಯವವಾಗಿ ಬೆಳೆದಿರುತ್ತದೆ. ಇದಕ್ಕೆ ಕೀಟನಾಶಕ ಮತ್ತು ರಾಸಾಯನಿಕ ಬಳಸಿಲ್ಲ ಎಂಬುದನ್ನು ಸೂಚಿಸುತ್ತದೆ. ಇದಕ್ಕೆ ಬೆಲೆ ಜಾಸ್ತಿಯಾದರೂ ಇದು ಆರೋಗ್ಯಕ್ಕೆ ಒಳ್ಳೆಯದು.

ಇದನ್ನೂ ಓದಿ: Viral Video: ಜೀವಂತ ಹಾವನ್ನೇ ತರಕಾರಿಯಂತೆ ಕಚ್ಚಿ ತಿಂದ ಬೆಡಗಿ! ಈ ವಿಡಿಯೊ ನೋಡುವ ಮುನ್ನ ಯೋಚಿಸಿ!

ಹೀಗೆ ಒಂದೊಂದು ಸ್ಟಿಕ್ಕರ್‌ಗೂ ಬೇರೆ ಬೇರೆ ಅರ್ಥವಿದ್ದರೂ ಕೂಡ ಕೆಲವೊಮ್ಮೆ ನಕಲಿ ಸ್ಟಿಕ್ಕರ್‌ಗಳನ್ನು ಅಂಟಿಸಿ ಮಾರಾಟ ಮಾಡುತ್ತಾರೆ. ಹಾಗಾಗಿ ಯಾವುದೇ ಹಣ್ಣುಗಳನ್ನು ಖರೀದಿಸುವಾಗ ತುಂಬಾ ಜಾಗರೂಕರಾಗಿರಿ.

Continue Reading
Advertisement
water Price hike in bwssb
ಬೆಂಗಳೂರು48 seconds ago

Water Price Hike : ತೈಲ ದರ ಬಳಿಕ ಕುಡಿಯುವ ನೀರು ದುಬಾರಿ! ನೀರಿನ ದರ ಏರಿಕೆಗೆ ಜಲಮಂಡಳಿ ಪ್ರಸ್ತಾವನೆ!

Maoists Killed
ದೇಶ17 mins ago

Maoists Killed: ಭದ್ರತಾ ಪಡೆಗಳ ಕಾರ್ಯಾಚರಣೆ; ಮತ್ತೆ 4 ಮಾವೋವಾದಿಗಳ ಹತ್ಯೆ

petrol diesel price hike
ಪ್ರಮುಖ ಸುದ್ದಿ25 mins ago

Petrol Diesel Price: ಪೆಟ್ರೋಲ್‌ ಬೆಲೆ ಏರಿಕೆ ವಿರೋಧಿಸಿ ಇಂದು ಬಿಜೆಪಿ ಮಿಂಚಿನ ಪ್ರತಿಭಟನೆ

Shah Rukh Khan Took ₹1 As Signing Amount For 'Nayak'
ಬಾಲಿವುಡ್34 mins ago

Shah Rukh Khan: ʻನಾಯಕ್‌ʼ ಸಿನಿಮಾಗೆ ಶಾರುಖ್‌ ಹೀರೊ ಆಗಬೇಕಿತ್ತು! 1 ರೂ. ಅಡ್ವಾನ್ಸ್ ಪಡೆದಿದ್ದರು!

Encounter In Bandipora
ದೇಶ55 mins ago

Encounter In Bandipora: ಬಂಡಿಪೋರಾದಲ್ಲಿ ಎನ್‌ಕೌಂಟರ್‌; ಓರ್ವ ಉಗ್ರನನ್ನು ಹೊಡೆದುರುಳಿಸಿದ ಭದ್ರತಾ ಪಡೆ

BAN vs NEP
ಕ್ರೀಡೆ56 mins ago

BAN vs NEP: ಸ್ವಿಮ್ಮಿಂಗ್ ಪೂಲ್​ಗೆ ಜಿಗಿದು ಸಂಭ್ರಮಿಸಿದ ನೇಪಾಳ ಅಭಿಮಾನಿ; ವಿಡಿಯೊ ವೈರಲ್​

BS Yediyurappa pocso case
ಪ್ರಮುಖ ಸುದ್ದಿ1 hour ago

BS Yediyurappa: ಇಂದು ಸಿಐಡಿ ಮುಂದೆ ಹಾಜರಾಗಲಿರುವ ಮಾಜಿ ಸಿಎಂ ಬಿ.ಎಸ್‌ ಯಡಿಯೂರಪ್ಪ

Kiccha Sudeep Replies To Darshan Ban Matter Entertainment
ಸ್ಯಾಂಡಲ್ ವುಡ್1 hour ago

Kiccha Sudeep: ಜಗ್ಗೇಶ್‌ಗೆ ಹೇಗೆ ಮಾತನಾಡಬೇಕು, ಹೇಗೆ ಎಸ್ಕೇಪ್ ಆಗಬೇಕು ಅನ್ನೋದು ಗೊತ್ತು ಎಂದ ಕಿಚ್ಚ!

T20 World Cup 2024
ಕ್ರೀಡೆ1 hour ago

T20 World Cup 2024: ಸೂಪರ್​-8 ಹಂತದ ವೇಳಾಪಟ್ಟಿ ಪ್ರಕಟ; 8 ತಂಡಗಳ ಮಾಹಿತಿ ಹೀಗಿದೆ

Nikhil Gupta
ವಿದೇಶ1 hour ago

Nikhil Gupta: ಗುರುಪತ್ವಂತ್‌ ಸಿಂಗ್‌ ಪನ್ನುನ್‌ ಹತ್ಯೆಗೆ ಸಂಚು ಆರೋಪ; ಜೆಕ್‌ ಗಣರಾಜ್ಯದಿಂದ ನಿಖಿಲ್‌ ಗುಪ್ತಾ ಅಮೆರಿಕಕ್ಕೆ ಹಸ್ತಾಂತರ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Renukaswamy murder case The location of the accused is complete
ಸಿನಿಮಾ17 hours ago

Renuka Swamy murder : ಭೀಕರವಾಗಿ ಕೊಂದರೂ ಆರೋಪಿಗಳಿಗೆ ಕಾಡುತ್ತಿಲ್ವಾ ಪಾಪಪ್ರಜ್ಞೆ? ನಗುತ್ತಲೇ ಹೊರಬಂದ ಪವಿತ್ರಾ ಗೌಡ, ಪವನ್‌

Renuka swamy murder
ಚಿತ್ರದುರ್ಗ18 hours ago

Renuka swamy Murder : ರೇಣುಕಾಸ್ವಾಮಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಾಳೆಹೊನ್ನೂರು ಶ್ರೀಗಳು

Vijayanagara News
ವಿಜಯನಗರ23 hours ago

Vijayanagara News : ಕೆಲಸಕ್ಕೆ ಚಕ್ಕರ್, ಸಂಬಳಕ್ಕೆ ಹಾಜರ್! ಹಾರಕನಾಳು ಗ್ರಾಪಂ ಪಿಡಿಓಗಾಗಿ ಗ್ರಾಮಸ್ಥರ ಹುಡುಕಾಟ

Actor Darshan
ಯಾದಗಿರಿ2 days ago

Actor Darshan : ಬಾಸ್‌ ಅಂತ ಯಾಕ್‌ ಬಕೆಟ್‌ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!

Karnataka Weather Forecast
ಮಳೆ3 days ago

Karnataka Weather : ಕರಾವಳಿ, ಉತ್ತರ ಒಳನಾಡಿನಲ್ಲಿ ವರುಣಾರ್ಭಟ; ನಾಳೆಯು ಹಲವೆಡೆ ಸಿಕ್ಕಾಪಟ್ಟೆ ಮಳೆ

Actor Darshan
ಬೆಂಗಳೂರು3 days ago

Actor Darshan : ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್ ಮಾಡಿ ಕರೆತರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ!

actor Darshan
ಬೆಂಗಳೂರು3 days ago

Actor Darshan : ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಮತ್ತಿಬ್ಬರು ಸರೆಂಡರ್‌; ಆರೋಪಿಗಳ ಸಂಖ್ಯೆ 16ಕ್ಕೆ ಏರಿಕೆ

Actor Darshan
ಸಿನಿಮಾ3 days ago

Actor Darshan : ರೇಣುಕಾಸ್ವಾಮಿ ‌ಮೃತದೇಹ ಬಿಸಾಡಿ ಬಳಿಕ ಸಾಕ್ಷ್ಯಇದ್ದ 2 ಮೊಬೈಲ್‌ಗಳನ್ನು ಮೋರಿಗೆ ಎಸೆದ್ರಾ ಆರೋಪಿಗಳು?

karnataka weather Forecast
ಮಳೆ6 days ago

Karnataka Weather : ಭಾರಿ ಮಳೆಗೆ ಗುಡ್ಡದಿಂದ ಉರುಳಿ ಬಿದ್ದ ಬಂಡೆಗಲ್ಲು; ಬೆಂಗಳೂರಲ್ಲೂ ಸಂಜೆ ವರ್ಷಧಾರೆ

actor Darshan
ಚಿತ್ರದುರ್ಗ6 days ago

Actor Darshan: ರೇಣುಕಾ ಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್‌ ಅರೆಸ್ಟ್‌; ಪ್ರಕರಣವನ್ನು ಸಿಬಿಐಗೆ ವಹಿಸಲು ಒತ್ತಾಯ

ಟ್ರೆಂಡಿಂಗ್‌