Railway news: ಪ್ರಯಾಣಿಕರ ಗಮನಕ್ಕೆ; ಸುರಕ್ಷತಾ ಕಾಮಗಾರಿ ಹಿನ್ನೆಲೆ ಈ ರೈಲುಗಳ ಓಡಾಟ ಸ್ಥಗಿತ - Vistara News

ಬೆಂಗಳೂರು

Railway news: ಪ್ರಯಾಣಿಕರ ಗಮನಕ್ಕೆ; ಸುರಕ್ಷತಾ ಕಾಮಗಾರಿ ಹಿನ್ನೆಲೆ ಈ ರೈಲುಗಳ ಓಡಾಟ ಸ್ಥಗಿತ

railway news: ನೈರುತ್ಯ ರೈಲ್ವೆ ಪತ್ರಿಕಾ ಪ್ರಕಟಣೆ ಸಂಖ್ಯೆ 226 ಪ್ರಕಾರ ದಿನಾಂಕ: 02.09.2024ರಂದು ರೈಲುಗಳ ಭಾಗಶಃ ರದ್ದು / ಮಾರ್ಗ ಬದಲಾವಣೆಯಾಗಲಿದೆ.

VISTARANEWS.COM


on

Job Alert
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಡಾ. ಮಂಜುನಾಥ ಕನಮಡಿ
ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ
ನೈರುತ್ಯ ರೈಲ್ವೆ, ಹುಬ್ಬಳ್ಳಿ

ಬೆಂಗಳೂರು ವಿಭಾಗದ (railway news) ಪೆನುಕೊಂಡ-ಮಕ್ಕಾಜಿಪಲ್ಲಿ ನಿಲ್ದಾಣಗಳ ನಡುವೆ ಇಂಜಿನಿಯರಿಂಗ್ ಮತ್ತು ಸುರಕ್ಷತೆಗೆ ಸಂಬಂಧಿಸಿದ ಕಾಮಗಾರಿ ಹಿನ್ನಲೆಯಲ್ಲಿ ಈ ಕೆಳಗಿನ ರೈಲುಗಳನ್ನು ಭಾಗಶಃ ರದ್ದು ಮತ್ತು ಬದಲಾದ ಮಾರ್ಗದ ಮೂಲಕ ಸಂಚರಿಸಲಾಗುತ್ತದೆ. ಅವುಗಳು ಈ ಕೆಳಗಿನಂತಿವೆ:

indian railway

ಭಾಗಶಃ ರದ್ದು

ರೈಲು ಸಂಖ್ಯೆ 06515 ಕೆಎಸ್ಆರ್ ಬೆಂಗಳೂರು-ಶ್ರೀ ಸತ್ಯ ಸಾಯಿ ಪ್ರಶಾಂತಿ ನಿಲಯಂ ಮೆಮು ವಿಶೇಷ ರೈಲು ಸೆಪ್ಟೆಂಬರ್ 5, 10, 11 ಮತ್ತು 12, 2024 ರಂದು ಹಿಂದೂಪುರ-ಶ್ರೀ ಸತ್ಯ ಸಾಯಿ ಪ್ರಶಾಂತಿ ನಿಲಯಂ ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳ್ಳಲಿದೆ. ಈ ರೈಲು ಹಿಂದೂಪುರದಲ್ಲಿ ಕೊನೆಗೊಳ್ಳುತ್ತದೆ.

ರೈಲು ಸಂಖ್ಯೆ 06516 ಶ್ರೀ ಸತ್ಯ ಸಾಯಿ ಪ್ರಶಾಂತಿ ನಿಲಯಂ-ಕೆಎಸ್ಆರ್ ಬೆಂಗಳೂರು ಮೆಮು ವಿಶೇಷ ರೈಲು ಸೆಪ್ಟೆಂಬರ್ 5, 10, 11 ಮತ್ತು 12, 2024 ರಂದು ಶ್ರೀ ಸತ್ಯ ಸಾಯಿ ಪ್ರಶಾಂತಿ ನಿಲಯಂ-ಹಿಂದೂಪುರ ನಿಲ್ದಾಣಗಳ ನಡುವೆ ಭಾಗಶಃ ರದ್ದಾಗಲಿದೆ. ಈ ರೈಲು ಶ್ರೀ ಸತ್ಯ ಸಾಯಿ ಪ್ರಶಾಂತಿ ನಿಲಯಂ ನಿಲ್ದಾಣದ ಬದಲು ಹಿಂದೂಪುರದಿಂದ ನಿಗದಿತ ನಿರ್ಗಮನ ಸಮಯದಲ್ಲಿ ತನ್ನ ಪ್ರಯಾಣವನ್ನು ಪ್ರಾರಂಭಿಸುತ್ತದೆ.

ರೈಲು ಸಂಖ್ಯೆ 07693 ಗುಂತಕಲ್-ಹಿಂದೂಪುರ ಡೆಮು ವಿಶೇಷ ರೈಲು ಸೆಪ್ಟೆಂಬರ್ 9 ರಿಂದ 11, 2024 ರವರೆಗೆ ಧರ್ಮಾವರಂ-ಹಿಂದೂಪುರ ನಿಲ್ದಾಣಗಳ ನಡುವೆ ಭಾಗಶಃ ರದ್ದಾಗಿದೆ. ಈ ರೈಲು ಧರ್ಮಾವರಂನಲ್ಲಿ ಕೊನೆಗೊಳ್ಳುತ್ತದೆ.

ರೈಲು ಸಂಖ್ಯೆ 07694 ಹಿಂದೂಪುರ-ಗುಂತಕಲ್ ಡೆಮು ವಿಶೇಷ ರೈಲು ಸೆಪ್ಟೆಂಬರ್ 10 ರಿಂದ 12, 2024 ರವರೆಗೆ ಹಿಂದೂಪುರ ನಿಲ್ದಾಣದ ಬದಲು ಧರ್ಮಾವರಂನಿಂದ ನಿಗದಿತ ನಿರ್ಗಮನ ಸಮಯದಲ್ಲಿ ತನ್ನ ಪ್ರಯಾಣವನ್ನು ಪ್ರಾರಂಭಿಸುತ್ತದೆ. ಹೀಗಾಗಿ ಹಿಂದೂಪುರ-ಧರ್ಮಾವರಂ ನಿಲ್ದಾಣಗಳ ನಡುವೆ ರದ್ದುಗೊಂಡಿರುತ್ತದೆ.

railway
railway

ರೈಲುಗಳ ಮಾರ್ಗ ಬದಲಾವಣೆ

ಸೆಪ್ಟೆಂಬರ್ 5 ಮತ್ತು 12, 2024ರಂದು ಪ್ರಾರಂಭವಾಗುವ ರೈಲು ಸಂಖ್ಯೆ 20703 ಕಾಚಿಗುಡ-ಯಶವಂತಪುರ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಧರ್ಮಾವರಂ, ಶ್ರೀ ಸತ್ಯ ಸಾಯಿ ಪ್ರಶಾಂತಿ ನಿಲಯಂ, ಪೆನುಕೊಂಡ ಮತ್ತು ಯಶವಂತಪುರ ನಿಲ್ದಾಣಗಳ ಮೂಲಕ ಸಂಚರಿಸಲಿದೆ.

ಸೆಪ್ಟೆಂಬರ್ 5 ಮತ್ತು 12, 2024ರಂದು ಪ್ರಾರಂಭವಾಗುವ ರೈಲು ಸಂಖ್ಯೆ 22231 ಕಲಬುರಗಿ-ಎಸ್ಎಂವಿಟಿ ಬೆಂಗಳೂರು ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಅನಂತಪುರ, ಧರ್ಮಾವರಂ, ಶ್ರೀ ಸತ್ಯ ಸಾಯಿ ಪ್ರಶಾಂತಿ ನಿಲಯಂ, ಪೆನುಕೊಂಡ ಮತ್ತು ಯಲಹಂಕ ನಿಲ್ದಾಣಗಳ ಮೂಲಕ ಸಂಚರಿಸಲಿದೆ.

ಸೆಪ್ಟೆಂಬರ್ 9, 2024ರಂದು ಹೊರಡುವ ರೈಲು ಸಂಖ್ಯೆ 12976 ಜೈಪುರ-ಮೈಸೂರು ಎಕ್ಸ್ ಪ್ರೆಸ್ ರೈಲು ಧರ್ಮಾವರಂ, ಶ್ರೀ ಸತ್ಯ ಸಾಯಿ ಪ್ರಶಾಂತಿ ನಿಲಯಂ, ಪೆನುಕೊಂಡ ಮತ್ತು ಹಿಂದೂಪುರ ನಿಲ್ದಾಣಗಳ ಮೂಲಕ ಸಂಚರಿಸಲಿದೆ.

ಸೆಪ್ಟೆಂಬರ್ 10 ಮತ್ತು 11, 2024ರಂದು ಹೊರಡುವ ರೈಲು ಸಂಖ್ಯೆ 16572 ಬೀದರ್-ಯಶವಂತಪುರ ಎಕ್ಸ್ ಪ್ರೆಸ್ ರೈಲು ಧರ್ಮಾವರಂ, ಶ್ರೀ ಸತ್ಯ ಸಾಯಿ ಪ್ರಶಾಂತಿ ನಿಲಯಂ, ಪೆನುಕೊಂಡ ಮತ್ತು ಹಿಂದೂಪುರ ನಿಲ್ದಾಣಗಳ ಮೂಲಕ ಸಂಚರಿಸಲಿದೆ.

ಸೆಪ್ಟೆಂಬರ್ 10 ಮತ್ತು 11, 2024ರಂದು ಹೊರಡುವ ರೈಲು ಸಂಖ್ಯೆ 16593 ಕೆಎಸ್ಆರ್ ಬೆಂಗಳೂರು-ನಾಂದೇಡ್ ಎಕ್ಸ್ ಪ್ರೆಸ್ ರೈಲು ಪೆನುಕೊಂಡ, ಶ್ರೀ ಸತ್ಯ ಸಾಯಿ ಪ್ರಶಾಂತಿ ನಿಲಯಂ & ಧರ್ಮಾವರಂ ನಿಲ್ದಾಣಗಳ ಮೂಲಕ ಸಂಚರಿಸಲಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಬೆಂಗಳೂರು

PSI Exam: ಸೆ.22ಕ್ಕೆ ಪಿಎಸ್ಐ ಪರೀಕ್ಷೆ; ಒಟ್ಟು 402 ಹುದ್ದೆಗಳಿಗೆ ಆಹ್ವಾನ

ಒಟ್ಟು 402 ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಹುದ್ದೆಗಳಿಗೆ ಇದೇ ತಿಂಗಳ 22ರಂದು ಲಿಖಿತ ಪರೀಕ್ಷೆ ನಡೆಯಲಿದ್ದು ಇದಕ್ಕೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸಕಲ ಸಿದ್ಧತೆ ನಡೆಸಿದೆ.

VISTARANEWS.COM


on

PSI exam
Koo

ಬೆಂಗಳೂರು: ಒಟ್ಟು 402 ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಹುದ್ದೆಗಳಿಗೆ ಇದೇ ತಿಂಗಳ 22ರಂದು ಲಿಖಿತ ಪರೀಕ್ಷೆ (PSI Exam) ನಡೆಯಲಿದ್ದು ಇದಕ್ಕೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸಕಲ ಸಿದ್ಧತೆ ನಡೆಸಿದೆ. ಒಟ್ಟು 66,000 ಮಂದಿ ಅರ್ಜಿ ಸಲ್ಲಿಸಿದ್ದು, ಪರೀಕ್ಷೆಗೆ ಒಂದು ವಾರ ಮೊದಲು ಪ್ರವೇಶ ಪತ್ರ ಬಿಡುಗಡೆ ಮಾಡಲಾಗುವುದು ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಸೋಮವಾರ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

SSLC Exam

ಇದಲ್ಲದೆ ಗ್ರಾಮ ಆಡಳಿತಾಧಿಕಾರಿ ಹುದ್ದೆಗೆ ಕನ್ನಡ ಕಡ್ಡಾಯ ಪರೀಕ್ಷೆ ಸೆ.29ರಂದು ನಡೆಯಲಿದೆ. ಈ ಪರೀಕ್ಷೆಯಲ್ಲಿ ಉತ್ತೀರ್ಣರಾದವರು ಮಾತ್ರ ಅಕ್ಟೋಬರ್ 27ಕ್ಕೆ ನಡೆಯುವ ಪ್ರಮುಖ ಪರೀಕ್ಷೆಗೆ ಅರ್ಹತೆ ಪಡೆಯಲಿದ್ದಾರೆ ಎಂದು ಅವರು ವಿವರಿಸಿದ್ದಾರೆ. ಒಂದು ಸಾವಿರ ಗ್ರಾಮ ಆಡಳಿತಾಧಿಕಾರಿ ಹುದ್ದೆಗಳಿಗೆ 5.7 ಲಕ್ಷ ಮಂದಿ ಅರ್ಜಿ ಸಲ್ಲಿಸಿದ್ದು ಈ ಪರೀಕ್ಷೆಗೂ ತಯಾರಿ‌ ನಡೆಸಲಾಗಿದೆ‌ ಎಂದು ಅವರು ವಿವರಿಸಿದರು.

Continue Reading

ಸ್ಯಾಂಡಲ್ ವುಡ್

Actor Darshan: ನಟ ದರ್ಶನ್‌ಗೆ ಬೆನ್ನುಹುರಿ ನೋವು; ಸರ್ಜಿಕಲ್ ಚೇರ್‌ಗೆ ಸಮ್ಮತಿ

Actor Darshan: ನಟ ದರ್ಶನ್‌ಗೆ ಸ್ಪೈನಲ್ ಕಾರ್ಡ್‌ ಸಮಸ್ಯೆ ಇರೋದ್ರಿಂದ ಸರ್ಜಿಕಲ್ ಚೇರ್‌ಗೆ ಕುಟುಂಬಸ್ಥರ ಮೂಕಲ ಮನವಿ ಮಾಡಿದರು. ಮೆಲು ನೋಟಕ್ಕೆ ದರ್ಶನ್‌ಗೆ ಬೆನ್ನು ನೋವು ಇರೋದು ಬೆಳಕಿಗೆ ಬಂದಿದೆ. ಡಿಐಜಿ ಅನುಮತಿ ಮೇರೆಗೆ ಜಿಲ್ಲಾ ಆಸ್ಪತ್ರೆಯ ಸರ್ಕಾರಿ ವೈದ್ಯರು, ಆರ್ಥೋಫೆಡಿಕ್ ಪರಿಶೀಲನೆ ಬಳಿಕ ದರ್ಶನ್‌ಗೆ ಸರ್ಜಿಕಲ್ ಚೇರ್ ನೀಡೋದಕ್ಕೆ ಬಹುತೇಕ ಜೈಲಾಧಿಕಾರಿಗಳು ಒಪ್ಪಿದ್ದು ಇಂದು ಸಂಜೆಯೇ ಸರ್ಜಿಕಲ್ ಚೇರ್ ನೀಡಲಾಗ್ತದೆ ಎಂದು ಹೇಳಿದ್ದಾರೆ.

VISTARANEWS.COM


on

Actor Darshan
Koo

ಬಳ್ಳಾರಿ: ಪರಪ್ಪನ ಅಗ್ರಹಾರ ಜೈಲಿನಿಂದ ಸೆಂಟ್ರಲ್ ಜೈಲಿಗೆ ಎತ್ತಂಗಡಿ ಆಗಿರೋ ಕೊಲೆ ಆರೋಪಿ ದರ್ಶನ್ (Actor Darshan) ಐದು ದಿನ ಕಳೆದಿದ್ದಾರೆ. ಜೈಲಿನಲ್ಲಿ ಕಳೆದ ಪ್ರತಿ ದಿನವನ್ನು ವರ್ಷದ ರೀತಿ ಕಳೀತಿದ್ದಾರೆ‌. ಅತ್ತ ಸ್ನೇಹಿತೆ ಪವಿತ್ರಾಗೌಡ ಜಾಮೀನು ಅರ್ಜಿ ವಜಾ ಆಗಿದ್ದರಿಂದ ಇತ್ತ ದರ್ಶನ್ ಜೈಲಿನಲ್ಲಿ ಟೆನ್ಶನ್‌ಗೆ ಒಳಗಾಗಿದ್ದಾರೆ.

Actor Darshan

ಕೊಲೆ ಆರೋಪಿ ನಟ ದರ್ಶನ್ ಪರಪ್ಪನ ಅಗ್ರಹಾರ ಜೈಲಿನಲ್ಲಿ ಸ್ವರ್ಗದ ಬಾಗಿಲನ್ನೇ ಧರೆಗೆ ಇಳಿಸಿದ್ದರು. ಮೋಜು – ಮಗಿಸಿ ಅಂತ ರಾಜಾರೋಷವಾಗಿ ಜೀವನ ಕಳೆದ್ದರು. ಆದರೆ ಕಳೆದ ನಾಲ್ಕು ರಾತ್ರಿ, ಐದು ಹಗಲು ಕಳೀದಿರೋ ದರ್ಶನ್ ಒಂದು ದಿನವನ್ನ ಒಂದು ವರ್ಷದ ರೀತಿ ಕಳೆದಿದ್ದಾರೆ. ಪ್ರತಿ ಕ್ಷಣ, ಪ್ರತಿ ದಿನ ಟೆನ್ಶನ್‌ನಲ್ಲೇ ಕಾಲ ಇದ್ದಾರೆ. ಅದ್ರಲ್ಲೂ ಮುಖ್ಯವಾಗಿ ಜೈಲಿಗೆ ಬಂದ ದಿನವೇ ಕೈಗೆ ಬಟ್ಟೆ ಧರಿಸಿಯೇ ಬಂದಿದ್ದರು. ಸೆಂಟ್ರಲ್‌ ಜೈಲ್ ನೂರಾರು ವರ್ಷದ ಹಳೆಯ ಜೈಲ್‌ ಆಗಿರುವುದರಿಂದ ಇಂಡಿಯನ್ ಶೌಚಾಲಯ ವ್ಯವಸ್ಥೆ ಇದ್ದು ನಟ ದರ್ಶನ್‌ಗೆ ಸ್ಪೈನಲ್ ಕಾರ್ಡ್‌ ಸಮಸ್ಯೆ ಇರೋದ್ರಿಂದ ಸರ್ಜಿಕಲ್ ಚೇರ್‌ಗೆ ಕುಟುಂಬಸ್ಥರ ಮೂಕಲ ಮನವಿ ಮಾಡಿದರು. ಮೆಲು ನೋಟಕ್ಕೆ ದರ್ಶನ್‌ಗೆ ಬೆನ್ನು ನೋವು ಇರೋದು ಬೆಳಕಿಗೆ ಬಂದಿದೆ. ಡಿಐಜಿ ಅನುಮತಿ ಮೇರೆಗೆ ಜಿಲ್ಲಾ ಆಸ್ಪತ್ರೆಯ ಸರ್ಕಾರಿ ವೈದ್ಯರು, ಆರ್ಥೋಫೆಡಿಕ್ ಪರಿಶೀಲನೆ ಬಳಿಕ ದರ್ಶನ್‌ಗೆ ಸರ್ಜಿಕಲ್ ಚೇರ್ ನೀಡೋದಕ್ಕೆ ಬಹುತೇಕ ಜೈಲಾಧಿಕಾರಿಗಳು ಒಪ್ಪಿದ್ದು ಇಂದು ಸಂಜೆಯೇ ಸರ್ಜಿಕಲ್ ಚೇರ್ ನೀಡಲಾಗ್ತದೆ ಎಂದು ಹೇಳಿದ್ದಾರೆ.

ದರ್ಶನ್ ಸಾಮಾನ್ಯ ಖೈದಿ ಆಗಿದ್ದರೆ ಇಷ್ಟೊಂದು ತಲೆಕೆಡಸಿಕೊಳ್ಳಬೇಕಾದ ಅವಶ್ಯಕತೆ ಇರಲಿಲ್ಲ. ಕರಿಯನ ವಿರುದ್ಧ ಕೇಳಿ ಬಂದಿರೋ ಕೊಲೆ ಆರೋಪ ಹೈಪ್ರೋಫೈಲ್ ಕೇಸ್ ಆಗಿದ್ದರಿಂದ ದರ್ಶನ್ ಮೇಲೆ ಇಂಚಿಂಚು ನಿಗಾ ವಹಿಸಲಾಗಿದೆ. ಅದರಲ್ಲೂ ಪರಪ್ಪನ ಅಗ್ರಹಾರ ಜೈಲಿನಲ್ಲಾದ ಲೋಪಗಳು ಸೆಂಟ್ರಲ್ ಜೈಲಿನಲ್ಲಿ ಆಗಬಾರದು ಅಂತ 10/10 ಅಡಿಯ ಹೈಸೆಕ್ಯೂರಿಟಿ ಕೋಣೆಯಲ್ಲಿ ದರ್ಶನ್‌ನನ್ನು ಇರಿಸಲಾಗಿದೆ. 15ನೇ ಸೆಲ್‌ನಲ್ಲಿರೋ ದರ್ಶನ್ ಅಕ್ಕ-ಪಕ್ಕದ ಸೆಲ್‌ನಲ್ಲಿ ಯಾವೊಬ್ಬ ಖೈದಿಯನ್ನ ಇರಿಸಲಾಗಿಲ್ಲ. ಅದ್ರಲ್ಲೂ ಒಬ್ಬ ಎಎಸ್ಐ, ಇಬ್ಬರು ಸಿಬ್ಬಂದಿ, ಮೂರು ಸಿಸಿ ಕ್ಯಾಮರಾ, ಕುಟುಂಬಸ್ಥರು ಬಂದು ಹೋಗುವ ಚಲನವಲನ ದೃಶ್ಯಾವಳಿಗಳನ್ನ ಪ್ರತ್ಯೇಕವಾಗಿಯೇ ಸಂಗ್ರಹಿಸಿಡಲಾಗುತ್ತಿದೆ. ದೃಶ್ಯಾವಳಿ ಸಂಗ್ರಹಣೆಗೆ ಅಂತಲೇ ಹೊಸ ಹಾರ್ಡ್ ಸಿಸ್ಕ್ ಖರೀದಿಸಲಾಗಿದೆ‌.

Actor Darshan
Actor Darshan

ಪರಪ್ಪನ ಅಗ್ರಹಾರ ಜೈಲಿನಲ್ಲಾದಲ್ಲಾದ ಲೋಪ ಬಳ್ಳಾರಿ ಜೈಲಲ್ಲಿ ನಡೆಬಾರದು ಎಂದು ಬಹಳ ಜಾಗೃತಿ ವಹಿಸುತ್ತಾ ಇದ್ದಾರೆ. ಇದರ ಮಧ್ಯೆ ಜೈಲು ಊಟ ಕೊಡಲು ಹೋದ ಸಿಬ್ಬಂದಿಗರ ಇತರೇ ಖೈದಿಗಳಿಗು ದರ್ಶನ್ ಎಲ್ಲಿದ್ದಾರೆ‌? ದರ್ಶನ್ ಯಾವ ಸೆಲ್ ನಲ್ಲಿದ್ದಾರೆ? ದರ್ಶನ್ ರನ್ನ ಹೊರಗಡೆ ನೋಡೋದಕ್ಕೆ ಆಗಲ್ಲ‌‌. ಹೀಗಾಗಿ ದರ್ಶನ್ ಅವರನ್ನ ನೋಡೋದಕ್ಕೆ ಅವಕಾಶ ಮಾಡಿಕೊಡಿ ಅಂತ ದುಂಬಾಲು ಬಿದ್ದಿದ್ದಾರಂತೆ. ದರ್ಶನ್ ಸೆಂಟ್ರಲ್ ಜೈಲಿಗೆ ಬಂದಿದ್ದು ಸಿಬ್ಬಂದಿಗೆ ಒಂದ್ಕಡೆ ತಲೆನೋವಾದ್ರೆ ಇತರ ಖೈದಿಗಳ ಬೇಡಿಕೆ ಮತ್ತೊಂದು ತಲೆನೋವಾಗಿದೆ. ಇದ್ರ ಮಧ್ಯೆ ನನಗೆ ಬೇಲ್ ಸಿಕ್ರೆ, ಜೈಲು ಅಧಿಕಾರಿಗಳು ಅನುಮತಿ ಕೊಟ್ರೆ ಖಂಡಿತ ನಿಮ್ಮನ್ನ ಭೇಟಿ ಮಾಡ್ತಾರಂತೆ ಅಂತೇಳಿ ಅಂತ ಜೈಲು ಸಿಬ್ಬಂದಿಗೆ ದರ್ಶನ್ ಹೇಳಿದ್ದಾರಂತೆ.

ಇದನ್ನೂ ಓದಿ: Actor Darshan : ರೇಣುಕಾಸ್ವಾಮಿ ಕೊಲೆ ಕೇಸ್‌; ದರ್ಶನ್‌ ಗ್ಯಾಂಗ್‌ ವಿರುದ್ಧ ಇನ್ನೆರಡು ದಿನಗಳಲ್ಲಿ ಚಾರ್ಜ್‌ಶೀಟ್‌ ಸಲ್ಲಿಕೆ!

ದರ್ಶನ್ ಪರಪ್ಪನ ಅಗ್ರಹಾರದಲ್ಲಿದ್ದಾಗ ಬೇಕಾದವರು ಅವಶ್ಯಕ ಸಂದರ್ಭದಲ್ಲಿ ಭೇಟಿ ಮಾಡಿದ್ದರು. ದರ್ಶನ್ ಕೂಡಾ ತನಗಾದ ಸಂಕಷ್ಟವನ್ನು ಆಪ್ತರ ಬಳಿ ಹೇಳಿಕೊಳ್ಳುತ್ತಿದ್ದರು. ಆದರೆ ಬಳ್ಳಾರಿ ಜೈಲಿನಲ್ಲಿ ರಕ್ತ ಸಂಬಂಧಿಕರ ಭೇಟಿಗೆ ಮಾತ್ರ ಅವಕಾಶ ಕೊಟ್ಟಿದ್ದರಿಂದ ತನ್ನ ನೋವನ್ನ ಯಾರ ಬಳಿ ಹೇಳಿಕೊಳ್ಳೋದಕ್ಕೆ ದರ್ಶನ್‌ಗೆ ಆಗುತ್ತಿಲ್ಲ. ಇದರ ಮಧ್ಯೆ ಬಂದಾಗಿನಿಂದಲೂ ಯಾರ ಬಳಿಯೂ ಮಾತನಾಡದ ದರ್ಶನ್ ಪತ್ನಿ ಬಂದು ಹೋದ ಬಳಿಕ ಎರಡೂ ದಿನವೂ ಬೆಳಗ್ಗೆ ವಾಕ್ ಮಾಡಿದ್ದಾರೆ. ಆದರೆ ಪತ್ನಿ ತಂದ ಬೇಕರಿ ಐಟೆಮ್ ಜೊತೆಜೆ ಜೈಲು ಊಟ ಮಾಡಿರುವ ದರ್ಶನ್ ಯಾರ ಬಳಿಯೂ ಮಾತಾಡದೇ ಬಹುತೇಕ ಮೌನಕ್ಕೆ ಜಾರಿದ್ದಾರೆ ಎನ್ನಲಾಗಿದೆ.

Continue Reading

ಕರ್ನಾಟಕ

BYJU’S : ಲಿಂಕ್‌ ಕ್ಲಿಕ್‌ ಮಾಡುತ್ತಿದ್ದಂತೆ ಬ್ಯಾಂಕ್‌ನಿಂದ ಕಟ್‌ ಆಯ್ತು ಹಣ; ಬೈಜೂಸ್ ಸೆಂಟರ್‌ ಹೆಸ್ರಲ್ಲಿ ವಂಚನೆ!

BYJU’S : ಸಂಪಂಗಿರಾಮನಗರ ಪೊಲೀಸ್‌ ಠಾಣೆಯಲ್ಲಿ ಬೈಜೂಸ್ ಟ್ಯೂಷನ್ ಸೆಂಟರ್ ವಿರುದ್ಧ ವಂಚನೆ ದೂರು ದಾಖಲಾಗಿದೆ.

VISTARANEWS.COM


on

byju's
Koo

ಬೆಂಗಳೂರು: ಮತ್ತಷ್ಟು ಅವನತಿ ಹಾದಿ ತಲುಪಿದ ಬೈಜೂಸ್ (BYJU’S ) ಆನ್‌ಲೈನ್ ಟ್ಯೂಷನ್ ಸೆಂಟರ್ ಇದೀಗ ವಂಚನೆ ಮಾಡುತ್ತಿದ್ದಾರೆ ಎಂಬ ಆರೋಪವೂ ಕೇಳಿ ಬಂದಿದೆ. ರಾಮ್ ಕೈಲಾಶ್ ಯಾದವ್ ಎಂಬ ಗ್ರಾಹಕ ಸಂಪಂಗಿರಾಮನಗರ ಪೊಲೀಸ್‌ ಠಾಣೆಯಲ್ಲಿ ಬೈಜೂಸ್ ಟ್ಯೂಷನ್ ಸೆಂಟರ್ ವಿರುದ್ಧ ದೂರು ನೀಡಿದ್ದಾರೆ. “ಇತ್ತ ಟ್ಯೂಷನ್ ಇಲ್ಲ , ರೀಫಂಡ್ ಇಲ್ಲ ಅಷ್ಟಲ್ಲದೆ ಅಕೌಂಟ್‌ನಿಂದ ಹಣ ಸಹ ಕಟ್ ಆಗಿದೆ” ಎಂದು ಅಳಲು ತೋಡಿಕೊಂಡಿದ್ದಾರೆ. ಮೊದಲು ಸಣ್ಣ ಮಟ್ಟಿನ ಹೊಸತನದ ಉದ್ಯಮವಾಗಿ ಹೊರಹೊಮ್ಮಿದ ಬೈಜೂಸ್ , ಕೋವಿಡ್ ಸಂಧರ್ಭದಲ್ಲಿ ಸಾಕಷ್ಟು ಖ್ಯಾತಿ ಪಡೆದುಕೊಂಡಿತ್ತು‌. ಇದಕ್ಕೆ ಈ ಹಿಂದೆ ಖ್ಯಾತ ನಟ ಶಾರುಕ್ ಖಾನ್ ಕೂಡ ಪಬ್ಲಿಸಿಟಿ ಮಾಡಿದ್ದರು.

Byju's To Layoff its Employees
Byju's To Layoff its Employees

ನಂತರ ಆರ್ಥಕ‌ ಸಂಕಷ್ಟ ಮಕ್ಕಳು ಆನ್‌ಲೈನ್ ಕ್ಲಾಸ್‌ನಲ್ಲಿ ಭಾಗವಹಿಸದ ಹಿನ್ನಲೆ ಕ್ರಮೇಣ ಉದ್ಯಮ ತಳ ಹಿಡಿಯಲು ಶುರುವಾಗಿತ್ತು ಸದ್ಯ ಅದರ ಎಫೆಕ್ಟ್ ಎಂಬಂತೆ ಈಗ ಮತ್ತೊಂದು ಪ್ರಕರಣ ಎಸ್ ಆರ್ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ದೂರುದಾರ ರಾಮ್ ಕೈಲಾಸ್ ಅವರು ತಮ್ಮ ಮಗನನ್ನ ಸಂಪಂಗಿರಾಮನಗರ ಬಳಿ ಇರುವ ಬೈಜೂಸ್ ಸೆಂಟರ್‌ನಲ್ಲಿ ಟ್ಯೂಷನ್‌ಗೆ ಸೇರಿಸಿದ್ದರು. ಸ್ವಲ್ಪ ದಿನಗಳ ಬಳಿಕ ಟ್ಯೂಷನ್ ಸರಿಯಾಗಿ ಮಾಡದ ಕಾರಣ ರಿಫಂಡ್ ಮಾಡಿ ಎಂದು ದೂರುದಾರ ಕೇಳಿಕೊಂಡಿದ್ದರು.

ಇದರ ಮಧ್ಯೆ ಕಟ್ಟಡದ ಬಾಡಿಗೆ ಕಟ್ಟಿಲ್ಲ ಎಂಬ ಕಾರಣಕ್ಕೆ ಬೈಜೂಸ್ ಸೆಂಟರ್ ಅನ್ನು ಕ್ಲೋಸ್ ಮಾಡಲಾಗಿತ್ತು. ಈ ವೇಳೆ ರಿಫಂಡ್ ಮಾಡಿ ಎಂದು ಬೈಜೂಸ್ ಸೆಂಟರ್‌ಗೆ ಕರೆ ಮಾಡಿದ್ದರು. ರಿಫಂಡ್ ಮಾಡುತ್ತೆವೆ ಆದರೆ ನಿಮ್ಮ ಅಕೌಂಟ್ ವರ್ಕ್ ಆಗುತ್ತಿಲ್ಲ. ಒಂದು ಆ್ಯಪ್ ಕಳಿಸುತ್ತೇವೆ. ಅದನ್ನು ಇನ್‌ಸ್ಟಾಲ್ ಮಾಡಿ ಎಂರು ಹೇಳಿದ್ದರು. ನಂತರ ರಸ್ಟ್ ಡೆಸ್ಕ್ ಎಂಬ ಆ್ಯಪ್‌ನ ಲಿಂಕ್ ಕಳಿಸಿದ್ದಾರೆ. ಇದನ್ನ ಇನ್‌ಸ್ಟಾಲ್‌ ಮಾಡಿದ ಕೂಡಲೇ ಯಾದವ್ ಅಕೌಂಟ್‌ನಿಂದ ಬರೋಬ್ಬರಿ 1 ಲಕ್ಷದ 30 ಸಾವಿರ ಹಣ ಕಟ್ ಆಗಿದೆ. ಅಷ್ಟೆಲ್ಲದೆ ನಿಮ್ಮ ಟ್ಯೂಷನ್ ಹಣ ಬಾಕಿ ಇದೆ ಎಂದು ಮೆಸೇಜ್ ಕೂಡ ಕಳಿಸಿದ್ದಾರೆಂದು ದೂರಿದ್ದಾರೆ.

Continue Reading

ಮಳೆ

Karnataka Weather : ದಿಢೀರ್‌ ಮಳೆಯಿಂದಾಗಿ ಕೆರೆಯಂತಾದ ಆನೇಕಲ್ ರಸ್ತೆ; ನಾಳೆಯೂ ಭಾರಿ ಮಳೆ ಎಚ್ಚರಿಕೆ

Karnataka Weather Forecast : ಆನೇಕಲ್‌, ಬನ್ನೇರುಘಟ್ಟ ಸುತ್ತಮುತ್ತ ಮಳೆಯಾಗಿದ್ದು, ದಿಢೀರ್‌ ಮಳೆಯಿಂದಾಗಿ ರಸ್ತೆಗಳು ಜಲಾವೃತಗೊಂಡಿತ್ತು. ಯಾದಗಿರಿಯಲ್ಲಿ ನಿರಂತರ ಮಳೆಗೆ (Rain News) ಜಮೀನುಗಳು ಕೆರೆಯಂತಾಗಿದ್ದವು.

VISTARANEWS.COM


on

By

Karnataka Weather Forecast
Koo

ಆನೇಕಲ್‌: ಸೋಮವಾರ ಆನೇಕಲ್ ತಾಲ್ಲೂಕಿನಾದ್ಯಂತ (Karnataka Weather Forecast) ಮಳೆರಾಯನ ಅಬ್ಬರ (Rain News) ಜೋರಾಗಿತ್ತು. ಆನೇಕಲ್, ಬನ್ನೇರುಘಟ್ಟ, ಜಿಗಣಿ, ಅತ್ತಿಬೆಲೆ ಸುತ್ತಮುತ್ತ ಮಳೆಯ ಸಿಂಚನವಾಗಿದೆ. ಬೆಳಗ್ಗೆಯಿಂದ ಮೋಡ ಕವಿದ ವಾತಾವರಣವಿತ್ತು, ಬಳಿಕ ಮಧ್ಯಾಹ್ನದ ಹೊತ್ತಿಗೆ ದಿಢೀರ್ ಮಳೆಯಿಂದ ವಾಹನ ಸವಾರರು ಪರದಾಡಬೇಕಾಯಿತು.

ಕೆಲವರು ಬಸ್ ನಿಲ್ದಾಣದಲ್ಲಿ ಆಶ್ರಯ ಪಡೆಯಬೇಕಾಯಿತು. ಮಳೆರಾಯನ ಆಗಮನದಿಂದ ವಾತಾವರಣ ಕೂಲ್ ಆಗಿತ್ತು. ಕೆಲ ತಾಸು ಸುರಿದ ಮಳೆಗೆ ಆನೇಕಲ್‌ ರಸ್ತೆಗಳು ಜಲಾವೃತಗೊಂಡಿದ್ದವು. ಇತ್ತ ಮಳೆಯಿಂದಾಗಿ ಬನ್ನೇರುಘಟ್ಟ ರಸ್ತೆ ಕೆರೆಯಂತಾಗಿತ್ತು. ಮುಕ್ಕಾಲು ಅಡಿ ನೀರು ನಿಂತ ಕಾರಣ ವಾಹನ ಸವಾರರು ಪರದಾಡಿದರು. ಬನ್ನೇರುಘಟ್ಟದಿಂದ ಆನೇಕಲ್ ಗೆ ಸಂಪರ್ಕ ಕಲ್ಪಿಸುವ ಮಾರ್ಗ ಇದಾಗಿದ್ದು, ರಸ್ತೆ ಕಾಣದೆ ಸವಾರರ ಕಂಗಲಾದರು. ಬನ್ನೇರುಘಟ್ಟ ರಸ್ತೆಯ ರಾಗೀಹಳ್ಳಿ ಬಳಿ ಘಟನೆ ನಡೆದಿದೆ.

karnataka weather Forecast
karnataka weather Forecast

ಯಾದಗಿರಿಯಲ್ಲಿ ನಿರಂತರ ಮಳೆ

ಯಾದಗಿರಿ ಜಿಲ್ಲೆಯಲ್ಲಿ ನಿರಂತರ ಸುರಿದ ಮಳೆಯಿಂದಾಗಿ ಅಪಾರ ಪ್ರಮಾಣದ ಬೆಳೆ ನೀರು ಪಾಲಾಗಿತ್ತು. ಮಳೆ ನೀರಿನಿಂದ ರೈತರ ಜಮೀನು ಪ್ರದೇಶ ನದಿಯಂತಾಗಿತ್ತು. ಯಾದಗಿರಿ ಜಿಲ್ಲೆಯ ಪಗಲಾಪುರ, ನಂದೆಪಲ್ಲಿ, ಬದ್ದೆಪಲ್ಲಿ, ವಂಕಸಂಬ್ರ ಸೇರಿದಂತೆ ಮೊದಲಾದ ಕಡೆ ಬೆಳೆ ಹಾಳಾಗಿತ್ತು. ಹತ್ತಿ, ಭತ್ತ, ತೊಗರಿ ಬೆಳೆ ಎಲ್ಲವೂ ನೀರುಪಾಲಾಗಿದ್ದವು. ಬೆಳೆ ಹಾನಿಯಿಂದ ಯಾದಗಿರಿ ಜಿಲ್ಲೆಯ ರೈತರ ಸಂಕಷ್ಟ ಎದುರಿಸಬೇಕಾಯಿತು. ಸರಕಾರ ಸೂಕ್ತ ಪರಿಹಾರ ಕಲ್ಪಿಸುವಂತೆ ಉಮೇಶ ಮುದ್ನಾಳ ಒತ್ತಾಯಸಿದರು.

ಇಂದು- ನಾಳೆ ಭಾರಿ ಮಳೆ ಎಚ್ಚರಿಕೆ

ಸೆ.2ರ ಸಂಜೆ ನಂತರ ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಪ್ರತ್ಯೇಕವಾಗಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಉಡುಪಿಯಲ್ಲಿ ಹೆಚ್ಚಿನ ಸ್ಥಳಗಳಲ್ಲಿ ಸಾಧಾರಣ ಮಳೆಯಾಗಲಿದೆ. ಒಳನಾಡಿನ ಸುತ್ತಮುತ್ತ ಕೆಲವು ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಇನ್ನು ನಾಳೆ ಮಂಗಳವಾರ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಕರ್ನಾಟಕದ ಒಳನಾಡಿನ ಜಿಲ್ಲೆಗಳಲ್ಲಿ ಪ್ರತ್ಯೇಕ ಸ್ಥಳಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆಯಿದೆ. ಬೆಂಗಳೂರಿನಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಲಿದ್ದು, ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 30 ಡಿ.ಸೆ ಮತ್ತು 21 ಡಿ.ಸೆ ಇರಲಿದೆ.

Continue Reading
Advertisement
Job Alert
ಬೆಂಗಳೂರು30 seconds ago

Railway news: ಪ್ರಯಾಣಿಕರ ಗಮನಕ್ಕೆ; ಸುರಕ್ಷತಾ ಕಾಮಗಾರಿ ಹಿನ್ನೆಲೆ ಈ ರೈಲುಗಳ ಓಡಾಟ ಸ್ಥಗಿತ

PSI exam
ಬೆಂಗಳೂರು56 seconds ago

PSI Exam: ಸೆ.22ಕ್ಕೆ ಪಿಎಸ್ಐ ಪರೀಕ್ಷೆ; ಒಟ್ಟು 402 ಹುದ್ದೆಗಳಿಗೆ ಆಹ್ವಾನ

Actor Darshan
ಸ್ಯಾಂಡಲ್ ವುಡ್1 hour ago

Actor Darshan: ನಟ ದರ್ಶನ್‌ಗೆ ಬೆನ್ನುಹುರಿ ನೋವು; ಸರ್ಜಿಕಲ್ ಚೇರ್‌ಗೆ ಸಮ್ಮತಿ

byju's
ಕರ್ನಾಟಕ2 hours ago

BYJU’S : ಲಿಂಕ್‌ ಕ್ಲಿಕ್‌ ಮಾಡುತ್ತಿದ್ದಂತೆ ಬ್ಯಾಂಕ್‌ನಿಂದ ಕಟ್‌ ಆಯ್ತು ಹಣ; ಬೈಜೂಸ್ ಸೆಂಟರ್‌ ಹೆಸ್ರಲ್ಲಿ ವಂಚನೆ!

Karnataka Weather Forecast
ಮಳೆ2 hours ago

Karnataka Weather : ದಿಢೀರ್‌ ಮಳೆಯಿಂದಾಗಿ ಕೆರೆಯಂತಾದ ಆನೇಕಲ್ ರಸ್ತೆ; ನಾಳೆಯೂ ಭಾರಿ ಮಳೆ ಎಚ್ಚರಿಕೆ

Three more FIRs filed against Actor Darshan
ಸಿನಿಮಾ3 hours ago

Actor Darshan : ರೇಣುಕಾಸ್ವಾಮಿ ಕೊಲೆ ಕೇಸ್‌; ದರ್ಶನ್‌ ಗ್ಯಾಂಗ್‌ ವಿರುದ್ಧ ಇನ್ನೆರಡು ದಿನಗಳಲ್ಲಿ ಚಾರ್ಜ್‌ಶೀಟ್‌ ಸಲ್ಲಿಕೆ!

CM Siddaramaiah
ರಾಜಕೀಯ4 hours ago

CM Siddaramaiah : ಸಿಎಂ ಸಿದ್ದರಾಮಯ್ಯಗೆ ತಾತ್ಕಾಲಿಕ ರಿಲೀಫ್; ಸೆ.9ಕ್ಕೆ ವಿಚಾರಣೆ ಮುಂದೂಡಿದ ಹೈಕೋರ್ಟ್

Independence Day 2024
ಬೆಂಗಳೂರು4 hours ago

D.K. Shivakumar: ಸಿಎಂ ಕುರ್ಚಿ ಖಾಲಿಯಿಲ್ಲ; ಡಿಸಿಎಂ ಡಿ.ಕೆ.ಶಿವಕುಮಾರ್

SSLC examination-2 to begin from tomorrow at over 700 centres
ಕರ್ನಾಟಕ5 hours ago

KPSC Exam: ಕೆಪಿಎಸ್ಸಿ ಮರು ಪರೀಕ್ಷೆ; ಕೆಟ್ಟ ಮೇಲೆ ಕಾಂಗ್ರೆಸ್ ಸರ್ಕಾರಕ್ಕೆ ಬುದ್ಧಿ ಬಂತು- ಆರ್‌ ಅಶೋಕ್‌‌ ವ್ಯಂಗ್ಯ

Billa Ranga Baashaa
ಸಿನಿಮಾ5 hours ago

Billa Ranga Baashaa: ಕಿಚ್ಚೋತ್ಸವಕ್ಕೆ ‘ಬಿಲ್ಲ ರಂಗ ಭಾಷಾ’; ಹನುಮಾನ್ ಸಿನಿಮಾ ನಿರ್ಮಾಪಕ ಜೊತೆ ಕೈ ಜೋಡಿಸಿದ ಸುದೀಪ್

Kannada Serials
ಕಿರುತೆರೆ11 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ11 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Bigg Boss- Saregamapa 20 average TRP
ಕಿರುತೆರೆ11 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ11 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

galipata neetu
ಕಿರುತೆರೆ9 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Bigg Boss' dominates TRP; Sita Rama fell to the sixth position
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ9 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ12 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ10 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Sudeep's birthday location shift
ಸ್ಯಾಂಡಲ್ ವುಡ್2 days ago

Kichcha Sudeepa: ಸುದೀಪ್‌ ಬರ್ತ್‌ ಡೇ ಲೊಕೇಶನ್‌ ಶಿಫ್ಟ್; ದರ್ಶನ್‌ ಭೇಟಿಗೆ ಬಳ್ಳಾರಿ ಜೈಲಿಗೆ ಹೋಗ್ತಾರಾ ಕಿಚ್ಚ

Actor Darshan
ಸ್ಯಾಂಡಲ್ ವುಡ್4 days ago

Actor Darshan : ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದಿಂದ ದರ್ಶನ್‌ ಬಳ್ಳಾರಿಗೆ ಸ್ಥಳಾಂತರ; ಸೆಲ್‌ನಲ್ಲಿ ಏನೆಲ್ಲ ವ್ಯವಸ್ಥೆ ಇದೆ ಗೊತ್ತಾ?

ಮಳೆ1 week ago

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

karnataka Weather Forecast
ಮಳೆ4 weeks ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ4 weeks ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ4 weeks ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು4 weeks ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ4 weeks ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ4 weeks ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ1 month ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

ಟ್ರೆಂಡಿಂಗ್‌