PAK VS BANGLA | ಬಾಂಗ್ಲಾದೇಶದ ವಿರುದ್ಧ ಗೆದ್ದು ಸೆಮಿಫೈನಲ್​ ಪ್ರವೇಶಿಸಿದ ಪಾಕಿಸ್ತಾನ - Vistara News

Latest

PAK VS BANGLA | ಬಾಂಗ್ಲಾದೇಶದ ವಿರುದ್ಧ ಗೆದ್ದು ಸೆಮಿಫೈನಲ್​ ಪ್ರವೇಶಿಸಿದ ಪಾಕಿಸ್ತಾನ

ಟಿ20 ವಿಶ್ವ ಕಪ್​ನ ಅಂತಿಮ ಸೂಪರ್​-12 ಪಂದ್ಯದಲ್ಲಿ ಬಾಂಗ್ಲೇದೇಶ ವಿರುದ್ಧ 5 ವಿಕೆಟ್​ಗಳ ಭರ್ಜರಿ ಗೆಲುವು ದಾಖಲಿಸಿದ ಪಾಕಿಸ್ತಾನ ಸೆಮಿ ಫೈನಲ್​ ಪ್ರವೇಶಿಸಿದೆ.

VISTARANEWS.COM


on

pak
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಅಡಿಲೇಡ್​: ಟಿ20 ವಿಶ್ವ ಕಪ್​ನ ಆರಂಭಿಕ ಎರಡು ಪಂದ್ಯದಲ್ಲಿ ಹಿನಾಯವಾಗಿ ಸೋತು ಕೂಟದಿಂದಲೇ ಹೊರ ಬೀಳುವ ಸ್ಥಿತಿಯಲ್ಲಿದ್ದ ಪಾಕಿಸ್ತಾನ(PAK VS BANGLA) ತಂಡ ಯಾರು ಊಹಿಸದ ರೀತಿಯಲ್ಲಿ ಅಚ್ಚರಿ ಎಂಬಂತೆ ಸೆಮಿಫೈನಲ್​ ಪ್ರವೇಶಿಸಿದೆ. ಬಾಂಗ್ಲಾ ವಿರುದ್ಧ 5 ವಿಕೆಟ್​ಗಳ ಗೆಲುವು ಸಾಧಿಸಿ ಬಿ ಗ್ರೂಪ್​ನಿಂದ ದ್ವಿತೀಯ ಸ್ಥಾನಿಯಾಗಿ ಬಾಬರ್​ ಅಜಂ ಪಡೆ​ ಸೆಮಿ ಅವಕಾಶ ಗಿಟ್ಟಿಸಿಕೊಂಡಿತು. ಬಾಂಗ್ಲಾ ಈ ಸೋಲಿನೊಂದಿಗೆ ಕೂಟದಿಂದ ಹೊರಬಿದ್ದಿದೆ. ಇದಕ್ಕೂ ಮುನ್ನ ನೆದರ್ಲೆಂಡ್ಸ್​ ವಿರುದ್ಧ ದಕ್ಷಿಣ ಆಫ್ರಿಕಾ ತಂಡ 13 ರನ್ ಸೋಲಿನಿಂದ ಕೂಟದಿಂದ ನಿರ್ಗಮಿಸಿತ್ತು.

ಅಡಿಲೇಡ್​ ಓವಲ್​​ ಕ್ರೀಡಾಂಗಣದಲ್ಲಿ ನಡೆದ ಭಾನುವಾರದ ಸೂಪರ್​-12 ಪಂದ್ಯದಲ್ಲಿ ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ ನಡೆಸಿದ ಬಾಂಗ್ಲಾದೇಶ ತಂಡ ನಿಗದಿತ 20 ಓವರ್​ಗಳಲ್ಲಿ 8 ವಿಕೆಟ್​ಗೆ 127 ರನ್​ ಗಳಿಸಿತು. ಸಾಧಾರಣ ಮೊತ್ತದ ಗುರಿ ಬೆನ್ನಟ್ಟಿದ ಪಾಕಿಸ್ತಾನ 18.1 ಓವರ್​ಗಳಲ್ಲಿ 5 ವಿಕೆಟ್​ ನಷ್ಟಕ್ಕೆ 128 ರನ್​ ಪೇರಿಸಿ ಗೆಲುವಿನ ನಗೆ ಬೀರಿತು.

ಗರಿ ಬೆನ್ನಟ್ಟಿದ ಪಾಕಿಸ್ತಾನ ತಂಡ ಉತ್ತಮ ಆರಂಭ ಪಡೆಯಿತು. ಆರಂಭಿಕ ಆಟಗಾರ ಮೊಹಮ್ಮದ್​ ರಿಜ್ವಾನ್​(32) ನಾಯಕ ಬಾಬರ್​ ಅಜಂ(25) ಮೊದಲ ವಿಕೆಟ್​ಗೆ 57 ರನ್​ ಒಟ್ಟುಗೂಡಿಸಿ ತಂಡಕ್ಕೆ ಉತ್ತಮ ಅಡಿಪಾಯ ನಿರ್ಮಿಸಿದರು. ಈ ಜೋಡಿಯ ವಿಕೆಟ್​ ಪತನದ ಬಳಿಕ ಆಡಲಿಳಿದ ಮಹಮ್ಮದ್​ ಹ್ಯಾರಿಸ್(31) ರನ್​ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.

ಸೆಮಿ ಫೈನಲ್​ಗೇರುವ ಅವಕಾಶದೊಂದಿಗೆ ಆಡಲಿಳಿದ ಬಾಂಗ್ಲಾ ಮೊದಲು ಬ್ಯಾಟಿಂಗ್​ ಮಾಡುವ ನಿರ್ಧಾರ ಮಾಡಿತು. ಅದರಂತೆ ತಂಡದ ಆರಂಭಿಕ ಆಟಗಾರ ಶಂಟೊ ಆಕರ್ಷಕ ಅರ್ಧಶತಕ ಸಿಡಿಸಿ ಉತ್ತಮ ಆರಂಭ ನೀಡಿದರು. ಆದರೆ ಈ ವಿಕೆಟ್​ ಪತನದ ಬಳಿಕ ಬಾಂಗ್ಲಾ ತಂಡ ನಾಟಕೀಯ ಕುಸಿತ ಕಂಡಿತು. ಒಬ್ಬರ ಹಿಂದೆ ಒಬ್ಬರಂತೆ ವಿಕೆಟ್​ ಕೈಚೆಲ್ಲಿದರು. ಇದರಿಂದ ತಂಡ ಬೃಹತ್​ ಮೊತ್ತ ಕಲೆಹಾಕುವಲ್ಲಿ ಹಿನ್ನಡೆ ಅನುಭವಿಸಿ ಸೋಲಿಗೆ ತುತ್ತಾಯಿತು. ಮಧ್ಯಮ ಕ್ರಮಾಂಕದಲ್ಲಿ ಆಫೀಫ್ ಹೊಸೈನ್​(ಅಜೇಯ 24) ಸಣ್ಣ ​ಹೋರಾಟವನ್ನು ನಡೆಸಿದರೂ ಅವರಿಗೆ ಯಾರಿಂದಲೂ ಉತ್ತಮ ಬೆಂಬಲ ಸಿಗಲಿಲ್ಲ. ಆರಂಭಿಕ ಆಟಗಾರ ಶಂಟೊ 48 ಎಸೆತದಲ್ಲಿ 54 ರನ್​ ಸಿಡಿಸಿದರು. ಈ ಇನಿಂಗ್ಸ್​ ವೇಳೆ 7 ಬೌಂಡರಿ ದಾಖಲಾಯಿತು. ಪಾಕಿಸ್ತಾನ ಪರ ಶಾಹಿನ್​ ಅಫ್ರಿದಿ 4 ಓವರ್​ಗೆ 22 ರನ್​ ಬಿಟ್ಟುಕೊಟ್ಟು 4 ವಿಕೆಟ್​ ಕಬಳಿಸಿದರು.

ಸಂಕ್ಷಿಪ್ತ ಸ್ಕೋರ್​:

ಬಾಂಗ್ಲಾದೇಶ: 20 ಓವರ್​ಗಳಲ್ಲಿ 8 ವಿಕೆಟ್​ಗೆ 127(ಶಂಟೊ 54,ಆಫೀಫ್ ಹೊಸೈನ್ ಅಜೇಯ 24, ಶಾಹಿನ್​ ಅಫ್ರಿದಿ 22ಕ್ಕೆ 4, ಶಾದಾಬ್​ ಖಾನ್​ 30ಕ್ಕೆ2)

ಪಾಕಿಸ್ತಾನ: 18.1 ಓವರ್​ಗಳಲ್ಲಿ 5 ವಿಕೆಟ್​ ನಷ್ಟಕ್ಕೆ 128( ರಿಜ್ವಾನ್​ 32, ಮಹಮ್ಮದ್​ ಹ್ಯಾರಿಸ್ 31, ನಸುಮ್​ ಅಹ್ಮದ್​ 14ಕ್ಕೆ 1)

ಇದನ್ನೂ ಓದಿ | T20 World Cup | ನೆದರ್ಲೆಂಡ್ಸ್​ ವಿರುದ್ಧ ದಕ್ಷಿಣ ಆಫ್ರಿಕಾಕ್ಕೆ ಸೋಲು; ಸೆಮಿಫೈನಲ್​ ಪ್ರವೇಶಿಸಿದ ಭಾರತ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಆರೋಗ್ಯ

International Yoga Day 2024: ಗರ್ಭಿಣಿಯರೂ ಯೋಗ ಮಾಡಬಹುದೇ? ಯಾವ ಆಸನಗಳು ಸೂಕ್ತ?

ಗರ್ಭಿಣಿಯರು ಕೆಲಸ ಮಾಡುತ್ತಿದ್ದರೆ ಮೈ ಹಗುರ ಇರುತ್ತದೆಂಬುದು ಪರಂಪರಾಗತ ತಿಳಿವಳಿಕೆ. ಇದಕ್ಕೆ ಅನುಗುಣವಾಗಿ, ಗರ್ಭಾವಸ್ಥೆಯಲ್ಲಿ ಕೆಲವು ಯೋಗಾಸನ ಮತ್ತು ಉಸಿರಾಟದ ತಂತ್ರಗಳನ್ನು (International Yoga Day 2024) ಮಾಡಬಹುದು. ಪ್ರಿನೇಟಲ್‌ ಯೋಗದ ಬಗ್ಗೆ ಕುತೂಹಲವಿದ್ದರೆ, ಇಲ್ಲಿದೆ ಮಾಹಿತಿ.

VISTARANEWS.COM


on

International Yoga Day 2024
Koo

ಮಗುವಿನ ನಿರೀಕ್ಷೆಯಲ್ಲಿದ್ದೀರೇ? ಅಭಿನಂದನೆಗಳು! ಕೌತುಕ, ತಳಮಳ, ಹೆದರಿಕೆ, ನಿರೀಕ್ಷೆ, ಆಯಾಸ- ಏನೇನೆಲ್ಲ ಆಗುತ್ತಿರಬೇಕಲ್ಲವೇ ಈಗ. ಜೀವದೊಳಗೆ ಜೀವವಿರುವ ಅನುಭವವೇ ವರ್ಣನೆಗೆ ನಿಲುಕದ್ದು. ಈ ನವಮಾಸಗಳು ಮಹಿಳೆಯರ ಬದುಕಿನ ಮಹತ್ವದ ಹಂತಗಳು. ಇವು ಆಯಾ ಮಹಿಳೆಯ ಬದುಕಿಗಷ್ಟೇ ಅಲ್ಲ, ಇಡೀ ಕುಟುಂಬಕ್ಕೇ ನಿರೀಕ್ಷೆಯ ಮಾಸಗಳು. ಈ ದಿನಗಳಲ್ಲಿ ಆಕೆಯ ಆರೋಗ್ಯ ಸ್ಥಿರವಾಗಿ ಇರಬೇಡವೇ? ಆರೋಗ್ಯವೆಂದರೆ ದೇಹಾರೋಗ್ಯ ಮಾತ್ರವೇ ಅಲ್ಲ, ಮಾನಸಿಕ, ಭಾವನಾತ್ಮಕ ಸ್ಥಿತಿಗಳೂ ಸುದೃಢವಾಗಿ ಇರಬೇಕು. ಈ ಹಂತದಲ್ಲಿ ನೆರವಾಗುವುದು ಗರ್ಭಿಣಿಯರಿಗಾಗಿಯೇ ಇರುವ ಪ್ರೀನೇಟಲ್‌ ಯೋಗ. ಮೊದಲಿಗೆ ಯೋಗ ಮಾಡುವುದು ಆಯಾ ಗರ್ಭಿಣಿಯ ಆರೋಗ್ಯಕ್ಕೆ ಸೂಕ್ತವೇ ಎಂಬುದನ್ನು ವೈದ್ಯರಲ್ಲಿ ದೃಢಪಡಿಸಿಕೊಳ್ಳಬೇಕು. ಆನಂತರ ಅನುಭವಿ ಯೋಗ (International Yoga Day 2024) ಶಿಕ್ಷಕರ ಮಾರ್ಗದರ್ಶನ ಪಡೆಯುವುದು ಸರಿಯಾದ ಮಾರ್ಗ.

International Yoga Day 2024

ಏನು ಪ್ರಯೋಜನ?

  • ಗರ್ಭಿಣಿಯ ಆರೋಗ್ಯ ಸ್ಥಿರವಾಗಿದೆ ಎಂದಾದರೆ, ಒಂದಿಲ್ಲೊಂದು ವ್ಯಾಯಾಮ ಈ ದಿನಗಳಲ್ಲಿ ಬೇಕು. ಅದರಲ್ಲೂ ಯೋಗವನ್ನೇ ಅಭ್ಯಾಸ ಮಾಡುವುದರಿಂದ ಹಲವು ರೀತಿಯ ಲಾಭಗಳಿವೆ.
  • ಮೊದಲಿಗೆ, ಶರೀರ ಬಿಗಿಯದಂತೆ ಹಗುರವಾಗಿ ಇರಿಸಿಕೊಳ್ಳಬಹುದು. ಹೆರಿಗೆಯ ಸಂದರ್ಭದಲ್ಲಿ ಇದು ಅತಿ ಹೆಚ್ಚಿನ ಪ್ರಯೋಜನವನ್ನು ನೀಡುತ್ತದೆ.
  • ಪ್ರಾಣಾಯಾಮ, ಧ್ಯಾನದ ಜೊತೆಗೆ ಯೋಗವನ್ನು ಅಭ್ಯಾಸ ಮಾಡಿದಾಗ ಮನಸ್ಸನ್ನು ಶಾಂತವಾಗಿ ಇರಿಸಿಕೊಳ್ಳಲು, ಉದ್ವೇಗವನ್ನು ದೂರ ಮಾಡಲು ಸಾಧ್ಯ. ಅದರಲ್ಲೂ ದೀರ್ಘ ಉಸಿರಾಟದ ತಂತ್ರಗಳನ್ನು ಅಭ್ಯಾಸ ಮಾಡಿದರೆ, ಹೆರಿಗೆಯ ಸಮಯದಲ್ಲಿ ಅನುಕೂಲ ಹೆಚ್ಚು.
  • ಯೋಗಾಭ್ಯಾಸದಿಂದ ಬೆಳಗಿನ ತಳಮಳಗಳು, ಕಾಲಿನ ಸೆಳೆತ, ಪಾದಗಳು ಊದಿಕೊಳ್ಳುವುದು, ಕೀಲಿನಲ್ಲಿ ನೋವು, ಮಲಬದ್ಧತೆ ಮುಂತಾದ ಆರೋಗ್ಯದ ಕಿರಿಕಿರಗಳನ್ನು ನಿಭಾಯಿಸುವುದು ಕಷ್ಟವಾಗುವುದಿಲ್ಲ
  • ಗರ್ಭಾವಸ್ಥೆಯಲ್ಲಿ ಯೋಗಾಭ್ಯಾಸ ಮಾಡುವುದರಿಂದ ಹೆರಿಗೆಯ ನಂತರ ಶರೀರ ಬೇಗ ಮೊದಲಿನ ಸ್ಥಿತಿಗೆ ಬರುತ್ತದೆ.

ಯಾವ ಆಸನಗಳನ್ನು ಮಾಡಬಹುದು?

ಮೊದಲಿನ ಮೂರು ತಿಂಗಳು ನಿಂತು ಮಾಡುವ ಆಸನಗಳು ಬೇಕಾಗುತ್ತವೆ. ಇದರಿಂದ ಕಾಲುಗಳ ಶಕ್ತಿಯನ್ನು ಹೆಚ್ಚಿಸಬಹುದು. ಆದರೆ ಯಾವುದೇ ಸಂದರ್ಭದಲ್ಲಿ ಕಿಬ್ಬೊಟ್ಟೆಯ ಮೇಲೆ ಒತ್ತಡ ಬೀಳುವಂಥ ಭಂಗಿಗಳು ಗರ್ಭಿಣಿಯರಿಗೆ ಸೂಕ್ತವಲ್ಲ. ತಿರುಗುವ ಆಸನಗಳು ಶರೀರದ ಮೇಲಿನ ಭಾಗಗಳಿಗೇ ಹೊರತು ಕಿಬ್ಬೊಟ್ಟೆ ಮತ್ತು ಕಟಿಯ ಭಾಗಕ್ಕಲ್ಲ. ತಲೆಕೆಳಗು ಮಾಡುವ ಆಸನಗಳು ಸಹ ಗರ್ಭಿಣಿಯರಿಗೆ ಸಲ್ಲದು.

Beautiful pregnant woman doing prenatal yoga on nature outdoors.

ಯಾವುದು ಸೂಕ್ತ?

ವಜ್ರಾಸನ, ತಾಡಾಸನ, ಕೋನಾಸನ, ಬದ್ಧಕೋನಾಸನ, ವೀರಭದ್ರಾಸನ, ಮಾರ್ಜರಿಯಾಸನ, ಶವಾಸನ, ಯೋಗನಿದ್ರೆ ಮುಂತಾದವು ಗರ್ಭಿಣಿಯರಿಗೆ ಹಿತವಾದ ಭಂಗಿಗಳು.

ಯಾವುದು ಬೇಡ?

ನೌಕಾಸನ, ಚಕ್ರಾಸನ, ಅರ್ಧಮತ್ಸೇಂದ್ರಾನಸ, ಭುಜಂಗಾಸನ, ವಿಪರೀತ ಶಲಭಾಸನ, ಹಲಾಸನ, ಧನುರಾಸನ ಮುಂತಾದ ಕಟಿ, ಹೊಟ್ಟೆ, ಕಿಬ್ಬೊಟ್ಟೆಯ ಮೇಲೆ ಒತ್ತಡ ಬೀಳುವಂಥ ಯಾವ ಆಸನಗಳೂ ಸೂಕ್ತವಲ್ಲ.

Pranayama Yoga Poses For Bright And Glowing Skin

ಪ್ರಾಣಾಯಾಮ

ದೀರ್ಘ ಉಸಿರಾಟದಿಂದಲೂ ಬಹಳಷ್ಟು ಪ್ರಯೋಜನವಿದೆ ಭಾವೀ ತಾಯಂದಿರಿಗೆ. ಕಡೆಯ ಮೂರು ತಿಂಗಳುಗಳಲ್ಲಿ ದೀರ್ಘ ಉಸಿರಾಟದಿಂದ ಹೆಚ್ಚಿನ ಪ್ರಯೋಜನ ಕಾಣಬಹುದು. ಆದರೆ ಭಸ್ತ್ರಿಕಾ, ಕಪಾಲಭಾತಿಯಂಥ ಉಸಿರಾಟದ ಕ್ರಮಗಳನ್ನು ಈ ದಿನಗಳಲ್ಲಿ ಮಾಡದಿದ್ದರೆ ಒಳಿತು. ಬದಲಿಗೆ, ನಾಡಿಶೋಧನ ಮತ್ತು ಭ್ರಾಮರಿಯಂಥ ಪ್ರಾಣಾಯಾಮ, ಧ್ಯಾನ ಮುಂತಾದವು ಗರ್ಭಿಣಿಯರಿಗೆ ಸೂಕ್ತವಾದದ್ದು.

Pregnant young women doing prenatal yoga

ಎಚ್ಚರಿಕೆ ಬೇಕು

  • ಪ್ರೀನೇಟಲ್‌ ಯೋಗವನ್ನು ಅನುಭವಿಯಾದ ಮಾರ್ಗದರ್ಶಕರ ನೆರವಿನಿಂದಲೇ ಮಾಡುವುದು ಸರಿಯಾದ ಕ್ರಮ. ಜೊತೆಗೆ ಕೆಲವು ಎಚ್ಚರಿಕೆಗಳೂ ಬೇಕಾಗುತ್ತವೆ.
  • ಮೊದಲ ಮೂರು ತಿಂಗಳು ನಿಂತು ಮಾಡುವ ಆಸನಗಳು ಸೂಕ್ತ. ಇದರಿಂದ ಕಾಲುಗಳನ್ನು ಬಲಪಡಿಸಬಹುದು, ರಕ್ತ ಪರಿಚಲನೆ ಹೆಚ್ಚಿಸಬಹುದು ಮತ್ತು ಕಾಲು ಸೆಳೆತ ಕಡಿಮೆಯಾಗಬಹುದು
  • ಗರ್ಭಾವಸ್ಥೆಯ ನಡುವಿನ ಮೂರು ತಿಂಗಳಲ್ಲಿ ಆಯಾಸವಾಗದೆ ಎಷ್ಟು ಆಸನಗಳು ಸಾಧ್ಯವೋ ಅಷ್ಟೇ ಮಾಡಿ. ಆಸನಗಳಲ್ಲಿ ಹೆಚ್ಚು ಕಾಲ ತೊಡಗಿಸಿಕೊಳ್ಳಬೇಡಿ, ಬೇಗ ಮುಗಿಸಿ.
  • ಕಡೆಯ ಮೂರು ತಿಂಗಳಲ್ಲಿ ಆಸನಗಳಿಗಿಂತ ಧ್ಯಾನ ಮತ್ತು ಪ್ರಾಣಾಯಾಮದತ್ತ ಗಮನ ನೀಡಿ. ಉಸಿರಾಟವನ್ನು ಬಲಪಡಿಸಿಕೊಂಡು, ದೇಹಕ್ಕೆ ಹೆಚ್ಚಿನ ಆಮ್ಲಜನಕ ಒದಗಿಸುವುದು ಕಡೆಯ ದಿನಗಳಲ್ಲಿ ಅಗತ್ಯವಾಗುತ್ತದೆ.

ಇದನ್ನೂ ಓದಿ: International Yoga Day 2024: ಧ್ಯಾನ ಎಂದರೇನು? ಇದರಿಂದ ಏನೇನು ಪ್ರಯೋಜನ?

Continue Reading

ಕ್ರೈಂ

Bribe Case: ಕಸ ಗುಡಿಸುತ್ತಲೇ ಉನ್ನತ ಹುದ್ದೆಗೇರಿದ್ದ ಮಹಿಳೆ ಕಸ ಗುಡಿಸುವವರಿಂದಲೇ ಲಂಚ ಸ್ವೀಕರಿಸುವಾಗ ಬಂಧನ!

ರಾಜ್ಯ ನಾಗರಿಕ ಸೇವಾ ಪರೀಕ್ಷೆ ಬರೆದು ಎಲ್ಲರಿಗೂ ಮಾದರಿಯಾಗಿದ್ದ ಸ್ವೀಪರ್ ಆಶಾ ಕಂದರ ಈಗ ಭಾರೀ ಲಂಚ (Bribe Case) ಪಡೆದು ಉದ್ಯೋಗ ದಂಧೆ ನಡೆಸುತ್ತಿದ್ದ ಆರೋಪದಲ್ಲಿ ಬಂಧನಕ್ಕೆ ಒಳಗಾಗಿದ್ದಾರೆ.
ರಾಜಸ್ಥಾನದ ಭ್ರಷ್ಟಾಚಾರ ನಿಗ್ರಹ ದಳವು ಅವರನ್ನು 1.75 ಲಕ್ಷ ರೂಪಾಯಿ ಲಂಚದೊಂದಿಗೆ ಬಂಧಿಸಿದೆ.

VISTARANEWS.COM


on

By

Bribe Case
Koo

ಜೋಧ್‌ಪುರ: ಕೆಲವು ವರ್ಷಗಳ ಹಿಂದೆ ಕಸ ಗುಡಿಸುವ (sweeper) ಕೆಲಸ ಮಾಡುತ್ತಿದ್ದು, ಬಳಿಕ ರಾಜಸ್ಥಾನ (Rajasthan) ಆಡಳಿತ ಸೇವೆ (RAS) ಪರೀಕ್ಷೆಯಲ್ಲಿ (Exam) ಉತ್ತೀರ್ಣರಾಗಿ ಸುದ್ದಿಯಾಗಿದ್ದ ಆಶಾ ಕಂದರ (ಭಾಟಿ) (Asha Kandara) ಈಗ ಮತ್ತೆ ಗಮನ ಸೆಳೆದಿದ್ದಾರೆ. ಆದರೆ ಈ ಬಾರಿ ಅವರು ಸುದ್ದಿಯಾಗಿರುವುದು ಲಂಚ (Bribe Case) ಪಡೆದಿರುವುದರಿಂದ. ಭಾರೀ ಲಂಚ ಪಡೆದು ಉದ್ಯೋಗ ದಂಧೆ ನಡೆಸುತ್ತಿದ್ದ ಆಶಾ ಅವರನ್ನು ರಾಜ್ಯ ಭ್ರಷ್ಟಾಚಾರ ನಿಗ್ರಹ ದಳ (state Anti-Corruption Bureau) ಬಂಧಿಸಿದೆ. ವಿಶೇಷವೆಂದರೆ ಅವರು ಕಸ ಗುಡಿಸುವ ಕೆಲಸ ಕೊಡಿಸುವಾಗಿ ಲಂಚ ಪಡೆದು ಸಿಕ್ಕಿ ಬಿದ್ದಿದ್ದಾರೆ.

ರಾಜ್ಯ ನಾಗರಿಕ ಸೇವಾ ಪರೀಕ್ಷೆ ಬರೆದು ಎಲ್ಲರಿಗೂ ಮಾದರಿಯಾಗಿದ್ದ ಅವರ ಈ ಕ್ರಮಕ್ಕೆ ಸಾಕಷ್ಟು ಟೀಕೆಯೂ ವ್ಯಕ್ತವಾಗಿದೆ. ಜೂನ್ 12ರಂದು ರಾತ್ರಿ ಭ್ರಷ್ಟಾಚಾರ ನಿಗ್ರಹ ದಳವು 1.75 ಲಕ್ಷ ರೂಪಾಯಿ ಲಂಚದೊಂದಿಗೆ ಆಶಾ ಅವರನ್ನು ಬಂಧಿಸಿದೆ ಎಂದು ರಾಜಸ್ಥಾನ ಭ್ರಷ್ಟಾಚಾರ ನಿಗ್ರಹ ದಳದ ಪ್ರತಿನಿಧಿಯೊಬ್ಬರು ತಿಳಿಸಿದ್ದಾರೆ. ಜೈಪುರದ ಹೆರಿಟೇಜ್ ನಗರ ನಿಗಮದಲ್ಲಿ ಕೆಲಸ ಮಾಡುತ್ತಿರುವ ಆಶಾ ಅವರು ಸ್ವೀಪರ್ ನೇಮಕಾತಿಗೆ ಬದಲಾಗಿ ಲಂಚ ಸ್ವೀಕರಿಸುತ್ತಿದ್ದಾರೆ ಎಂಬ ಮಾಹಿತಿ ಎಸಿಬಿಗೆ ಲಭಿಸಿದ್ದರಿಂದ ಅವರನ್ನು ಬಂಧಿಸಲಾಗಿದೆ.


ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳ ಪ್ರಕಾರ, ಆಶಾ ಅವರು ಜೂನ್ 11ರಂದು ರಾತ್ರಿ ಜೈಪುರದಿಂದ ಪಾಲಿಗೆ ಹೊರಟರು. ಆದರೆ ಅವರ ಮಗ ಹಣದೊಂದಿಗೆ ಜೈತರನ್‌ಗೆ ಬಂದಿದ್ದು, ಈತನೊಂದಿಗೆ ಯೋಗೇಂದ್ರ ಚೌಧರಿ ಎಂಬ ಬ್ರೋಕರ್ ಕೂಡ ಇದ್ದರು. ಜೈತರನ್ ಬಾರ್‌ನ ಹೃದಯಭಾಗದಲ್ಲಿರುವ ಹೊಟೇಲ್ ವೊಂದರಲ್ಲಿ ಇಬ್ಬರೂ ತಂಗಿದ್ದರು.
ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಎಸಿಬಿ ಇನ್ಸ್‌ಪೆಕ್ಟರ್ ಕಾಂಚನ್ ಭಾಟಿ ಅವರು 1.75 ಲಕ್ಷ ರೂ. ನಗದು ಹಣದೊಂದಿಗೆ ಆಶಾ ಅವರನ್ನು ಬಂಧಿಸಲಾಗಿದೆ. ಅವರು ಮೂರೂವರೆ ಲಕ್ಷಕ್ಕೆ ಉದ್ಯೋಗ ಒಪ್ಪಂದ ಮಾಡಿಕೊಂಡಿರುವುದಾಗಿ ಎಸಿಪಿ ತಿಳಿಸಿದ್ದಾರೆ.

ಇದನ್ನೂ ಓದಿ: Anekal News : ಯುವತಿ ಕೈ ಬಲಿ ಪಡೆದ ಅಕ್ರಮ ಡ್ರೈ ಕ್ಲೀನಿಂಗ್ ಕಾರ್ಖಾನೆ; ಚಿಕಿತ್ಸೆ ಕೊಡಿಸದೆ ಮಾಲೀಕ ಎಸ್ಕೇಪ್‌

ಸ್ವೀಪರ್ ಆಗಿ ಕೆಲಸ ಮಾಡುತ್ತಿದ್ದ ಆಶಾ 2018ರಲ್ಲಿ ಪ್ರಮುಖ ಆರ್‌ಎಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅನಂತರ ಸುದ್ದಿಯಾಗಿದ್ದರು. 2021ರಲ್ಲಿ ಪರೀಕ್ಷೆ ಫಲಿತಾಂಶಗಳನ್ನು ಪ್ರಕಟಿಸಲಾಯಿತು. ಒಂಟಿ ತಾಯಿಯಾದ ಆಶಾ ಅವರು ಐಎಎಸ್ ಪರೀಕ್ಷೆಗಳಿಗೆ ತಯಾರಾಗುವುದಾಗಿ ಹೇಳಿದ್ದರು.

ವಿದ್ಯುತ್ ಶಾಕ್ ನಿಂದ ಬಾಲಕ ಸಾವು

ವಿದ್ಯುತ್ ಶಾಕ್‌ನಿಂದ 7ನೇ ತರಗತಿ ವಿದ್ಯಾರ್ಥಿಯೊಬ್ಬ ಮೃತಪಟ್ಟ ಘಟನೆ ಚಿಕ್ಕಮಗಳೂರಿನ ಕಡೂರು ತಾಲೂಕಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಘಟನೆ ನಡೆದಿದೆ. ಆಕಾಶ್ (13) ಮೃತ ದುರ್ದೈವಿ.

ಕಡೂರು ತಾಲೂಕಿನ ಕುಪ್ಪಾಳು ಗ್ರಾಮದ ಮೊರಾರ್ಜಿ ವಸತಿ ಶಾಲೆ ಆವರಣದ ನೇರಳೆ ಮರದಲ್ಲಿ ಹಣ್ಣು ಕೀಳಲು ಆಕಾಶ್ ಮರ ಹತ್ತಿದ್ದ. ಈತನ ಜತೆಗೆ ಮೂವರು ವಿದ್ಯಾರ್ಥಿಗಳು ಮರ ಹತ್ತಿದ್ದರು. ಹಣ್ಣು ಕೀಳುವಾಗ ಆಕಾಶ್‌ ಮರದಿಂದ ಜಾರಿ ಬೀಳುತ್ತಿದ್ದ. ಈ ವೇಳೆ ಅಚಾನಕ್‌ ಆಗಿ ವಿದ್ಯುತ್ ತಂತಿ ಹಿಡಿದಿದ್ದಾನೆ. ಇದರಿಂದ ಕರೆಂಟ್‌ ಶಾಕ್‌ ಆಗಿ ಆತ ಕೆಳಗೆ ಬಿದ್ದಿದ್ದಾನೆ.

ಕೂಡಲೇ ಅಲ್ಲಿದ್ದವರು ಆಕಾಶ್‌ನನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಆಕಾಶ್ ಮೃತಪಟ್ಟಿದ್ದಾನೆ. ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Continue Reading

ವಿದೇಶ

Giorgia Meloni: ಇಟಲಿ ಪ್ರಧಾನಿ ಮೆಲೋನಿ ಕಾರ್ಮಿಕ ಮಹಿಳೆಯ ಮಗಳು! ಅವರ ಕುರಿತ ಕುತೂಹಲಕರ ಸಂಗತಿಗಳಿವು

Giorgia Meloni: 45 ವರ್ಷದ ಜಾರ್ಜಿಯಾ ಮೆಲೋನಿ ಅವರು 2022ರಲ್ಲಿ ಇಟಲಿಯ ಮೊದಲ ಮಹಿಳಾ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡರು. ವಿಶ್ವ ನಾಯಕರ ಗಮನ ಸೆಳೆದಿರುವ ಜಾರ್ಜಿಯಾ ಮೆಲೋನಿ ಬಗ್ಗೆ ತಿಳಿದುಕೊಳ್ಳಬೇಕಾದ ಪ್ರಮುಖ ಐದು ವಿಷಯಗಳು ಇಲ್ಲಿವೆ.

VISTARANEWS.COM


on

By

Giorgia Meloni
Koo

ಇಟಲಿಯಲ್ಲಿ (Italy) ನಡೆಯುತ್ತಿರುವ ಗ್ರೂಪ್ ಆಫ್ ಸೆವೆನ್ (G7) ಪ್ರಮುಖ ಪ್ರಜಾಪ್ರಭುತ್ವ ರಾಷ್ಟ್ರಗಳ ನಾಯಕರ ವಾರ್ಷಿಕ ಶೃಂಗಸಭೆಯಲ್ಲಿ ಅಲ್ಲಿಯ ಪ್ರಧಾನಿ (Prime Minister) ಜಾರ್ಜಿಯಾ ಮೆಲೋನಿ (Giorgia Meloni) ಅವರು ಸಾಂಪ್ರದಾಯಿಕವಾಗಿ ಭಾರತೀಯರ ಶೈಲಿಯಲ್ಲಿ ‘ನಮಸ್ತೆ’ (namaste) ಎನ್ನುವ ಮೂಲಕ ವಿಶ್ವದ ನಾಯಕರನ್ನು ಸ್ವಾಗತಿಸಿದ್ದು, ಇದು ಈಗ ಎಲ್ಲರ ಗಮನ ಸೆಳೆದಿದೆ.

ಜೂನ್ 13ರಿಂದ 15ರವರೆಗೆ ನಡೆದ ಜಿ7 ಶೃಂಗಸಭೆಯ ಅಧಿವೇಶನದಲ್ಲಿ ಶುಕ್ರವಾರ ವಿಶ್ವ ನಾಯಕರೊಂದಿಗೆ ವ್ಯಾಪಕ ಶ್ರೇಣಿಯ ವಿಷಯಗಳ ಕುರಿತು ದ್ವಿಪಕ್ಷೀಯ ಮಾತುಕತೆ ನಡೆಸಲು ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ದಕ್ಷಿಣ ಇಟಲಿಯ ಅಪುಲಿಯಾಗೆ ಆಗಮಿಸಿದ್ದರು. ಇಟಲಿ ಪ್ರಧಾನಮಂತ್ರಿ ಜಾರ್ಜಿಯಾ ಮೆಲೋನಿ ಅವರು ಆಯೋಜಿಸಿರುವ ಕೃತಕ ಬುದ್ಧಿಮತ್ತೆ, ಶಕ್ತಿ, ಆಫ್ರಿಕಾ-ಮೆಡಿಟರೇನಿಯನ್ ಎಂಬ ಶೀರ್ಷಿಕೆಯ ಶೃಂಗಸಭೆಯಲ್ಲಿ ಪೋಪ್ ಫ್ರಾನ್ಸಿಸ್ ಕೂಡ ಭಾಗವಹಿಸಿದ್ದಾರೆ.

45 ವರ್ಷದ ಜಾರ್ಜಿಯಾ ಮೆಲೋನಿ ಅವರು 2022ರಲ್ಲಿ ಇಟಲಿಯ ಮೊದಲ ಮಹಿಳಾ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡರು. ವಿಶ್ವ ನಾಯಕರ ಗಮನ ಸೆಳೆದಿರುವ ಜಾರ್ಜಿಯಾ ಮೆಲೋನಿ ಬಗ್ಗೆ ತಿಳಿದುಕೊಳ್ಳಬೇಕಾದ ಪ್ರಮುಖ ಐದು ಕುತೂಹಲಕರ ವಿಷಯಗಳು ಇಲ್ಲಿವೆ.


ಕಾರ್ಮಿಕ ವರ್ಗದ ಹಿನ್ನೆಲೆ

ಜಾರ್ಜಿಯಾ ಮೆಲೋನಿ ಅವರ ಜನನದ ಬಳಿಕ ತಂದೆ ಇವರ ತಾಯಿಯನ್ನು ತೊರೆದರು. ಹಾಗಾಗಿ ಒಂಟಿ ತಾಯಿಯ ಆರೈಕೆಯಲ್ಲಿ ಇವರು ಬೆಳೆಯಬೇಕಾಯಿತು. ಹೆಚ್ಚು ಓದದ ಇವರ ತಾಯಿಯು ಬೇಬಿ ಸಿಟ್ಟರ್ ಮತ್ತು ಬಾರ್ ಟೆಂಡರ್ ಆಗಿ ಕೆಲಸ ಮಾಡಿ ಮಗಳನ್ನು ಸಾಕಿದ್ದರು.

ಸಣ್ಣ ವಯಸ್ಸಿನಲ್ಲೇ ರಾಜಕೀಯ ಪ್ರವೇಶ

ಜಾರ್ಜಿಯಾ ಮೆಲೋನಿ ರೋಮ್‌ನ ಕಾರ್ಮಿಕ ವರ್ಗದ ಗಾರ್ಬಟೆಲ್ಲಾದಲ್ಲಿ ರಾಜಕೀಯ ಪ್ರವೇಶ ಮಾಡಿದರು. ಆಗ ಅವರಿಗೆ ಕೇವಲ 15 ವರ್ಷ. 1990ರ ದಶಕದ ಆರಂಭದಲ್ಲಿ ಇಟಾಲಿಯನ್ ಸೋಶಿಯಲ್ ಮೂವ್‌ಮೆಂಟ್ (MSI)ನ ಯುವ-ವಿಭಾಗವಾದ ಯೂತ್ ಫ್ರಂಟ್‌ಗೆ ಸೇರಿದ ಮೆಲೋನಿ ನ್ಯಾಷನಲ್ ಅಲೈಯನ್ಸ್ (AN)ನ ವಿದ್ಯಾರ್ಥಿ ಚಳವಳಿಯ ವಿದ್ಯಾರ್ಥಿ ಆಕ್ಷನ್‌ನ ರಾಷ್ಟ್ರೀಯ ನಾಯಕರಾದರು. 21ನೇ ವಯಸ್ಸಿನಲ್ಲಿ ಮೊದಲ ಸ್ಥಳೀಯ ಚುನಾವಣೆಯಲ್ಲಿ ಗೆದ್ದ ಅವರು ಹತ್ತು ವರ್ಷಗಳ ಅನಂತರ 2008ರಲ್ಲಿ ಮಾಜಿ ಪ್ರಧಾನಮಂತ್ರಿ ಸಿಲ್ವಿಯೊ ಬೆರ್ಲುಸ್ಕೋನಿ ಅವರ ನೇತೃತ್ವದ ಸರ್ಕಾರದಲ್ಲಿ ಇಟಲಿಯ ಅತ್ಯಂತ ಕಿರಿಯ ಸಚಿವರಾದರು. 2011ರವರೆಗೆ ಅವರು ಆ ಸ್ಥಾನದಲ್ಲಿ ಇದ್ದರು.

ಬ್ರದರ್ಸ್ ಆಫ್ ಇಟಲಿ ಪಕ್ಷದ ಮುಖ್ಯಸ್ಥರು

ಮೆಲೋನಿ ಪ್ರಸ್ತುತ ಬ್ರದರ್ಸ್ ಆಫ್ ಇಟಲಿ ರಾಜಕೀಯ ಪಕ್ಷದ ಮುಖ್ಯಸ್ಥರಾಗಿದ್ದಾರೆ. ಇದು ಎರಡನೇ ಮಹಾಯುದ್ಧದ ಅನಂತರ ರೂಪುಗೊಂಡ ಬಲಪಂಥೀಯ ಗುಂಪಿನಲ್ಲಿ ತನ್ನ ಬೇರುಗಳನ್ನು ಹೊಂದಿದೆ. ಇದನ್ನು 2012ರಲ್ಲಿ ಸ್ಥಾಪಿಸಲಾಯಿತು. 2018ರ ಇಟಲಿ ಚುನಾವಣೆಯ ಅನಂತರ ಮೆಲೋನಿ ಅವರ ಪಕ್ಷವು ಅಭಿಪ್ರಾಯ ಸಂಗ್ರಹಣೆಯಲ್ಲಿ ಜನಪ್ರಿಯತೆಯನ್ನು ಗಳಿಸಿತು. ವಿಶೇಷವಾಗಿ ಪ್ರಧಾನಮಂತ್ರಿ ಮಾರಿಯೋ ಡ್ರಾಘಿ ಅವರ ಕ್ಯಾಬಿನೆಟ್ ಸಮಯದಲ್ಲಿ ಈ ಪಕ್ಷ ಮಾತ್ರ ವಿರೋಧ ಪಕ್ಷವಾಗಿತ್ತು.

ನಿರಾಶ್ರಿತರಿಗೆ ನಿರ್ಬಂಧ, ತೆರಿಗೆ ಕಡಿತ

ಪ್ರಧಾನ ಮಂತ್ರಿಯಾಗಿ ಮೆಲೋನಿ ಇಟಲಿಯಲ್ಲಿ ಹಲವಾರು ಸಂಪ್ರದಾಯವಾದಿ ನೀತಿಗಳನ್ನು ತಂದಿದ್ದಾರೆ. ವಿಶೇಷವಾಗಿ ವಲಸೆ ನಿಯಂತ್ರಣ. ಅವರ ಸರ್ಕಾರವು ಅಕ್ರಮ ವಲಸೆ, ಕಠಿಣ ಗಡಿ ನಿಯಂತ್ರಣಗಳು ಮತ್ತು ವಾಪಸಾತಿ ನೀತಿಗಳನ್ನು ಜಾರಿಗೆ ತರುವುದರ ಬಗ್ಗೆ ಕಠಿಣ ನಿಲುವು ತೆಗೆದುಕೊಂಡಿದೆ. ಹೆಚ್ಚುವರಿಯಾಗಿ, ಮೆಲೋನಿ ಇಟಲಿಯ ಜನನ ದರವನ್ನು ಹೆಚ್ಚಿಸುವ ಗುರಿಯನ್ನು ಹೊಂದಿರುವ ನೀತಿಗಳನ್ನು ಬೆಂಬಲಿಸುತ್ತದೆ ಮತ್ತು ಕುಟುಂಬಗಳನ್ನು ಆರ್ಥಿಕವಾಗಿ ಬೆಂಬಲಿಸುವ ಕ್ರಮಗಳನ್ನು ಉತ್ತೇಜಿಸುತ್ತಿದೆ.

ಮೆಲೋನಿಯ ಆರ್ಥಿಕ ನೀತಿಗಳು ತೆರಿಗೆಗಳನ್ನು ಕಡಿಮೆ ಮಾಡುವುದು, ಆರ್ಥಿಕತೆಯನ್ನು ನಿಯಂತ್ರಣ ಮುಕ್ತಗೊಳಿಸುವುದು ಮತ್ತು ಇಟಾಲಿಯನ್ ವ್ಯವಹಾರಗಳನ್ನು ಉತ್ತೇಜಿಸುವತ್ತ ಕೇಂದ್ರೀಕೃತವಾಗಿವೆ.

ಇದನ್ನೂ ಓದಿ: Narendra Modi: ನಗು ನಗುತ್ತಾ ಸೆಲ್ಫಿಗೆ ಪೋಸ್‌ ಕೊಟ್ಟ ಮೋದಿ, ಮೆಲೋನಿ; ಸೋಷಿಯಲ್‌ ಮೀಡಿಯಾದಲ್ಲಿ ʼಮೆಲೋಡಿʼಯದ್ದೇ ಸದ್ದು

ಕುಟುಂಬ ಮೌಲ್ಯಗಳಿಗೆ ಒತ್ತು

ಮೆಲೋನಿಯ ರಾಜಕೀಯ ಸಿದ್ಧಾಂತವು ಇಟಲಿಯ ರಾಜಕೀಯದಲ್ಲಿ ಬಲವಾದ ಛಾಪು ಬೀರಿದೆ. ರಾಷ್ಟ್ರೀಯ ಗಡಿಗಳು, ರಾಷ್ಟ್ರೀಯ ಹಿತಾಸಕ್ತಿಗಳು ಮತ್ತು ಸಾಂಪ್ರದಾಯಿಕ ಕುಟುಂಬ ಮೌಲ್ಯಗಳನ್ನು ರಕ್ಷಿಸುವಲ್ಲಿ ಅವರ ಸರ್ಕಾರ ಗಮನ ಕೇಂದ್ರೀಕರಿಸಿದೆ.

ನಾನು ಜಾರ್ಜಿಯಾ. ನಾನು ಮಹಿಳೆ, ನಾನು ತಾಯಿ, ನಾನು ಕ್ರಿಶ್ಚಿಯನ್ ಎಂಬುದು ಮೆಲೋನಿಯ ಅತ್ಯಂತ ಜನಪ್ರಿಯ ಮಾತು. ಇದನ್ನು ಅವರ ಬೆಂಬಲಿಗರು ನಿಯಮಿತವಾಗಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಾರೆ. ಅವರು ಡ್ರಗ್ಸ್ ಮತ್ತು ಗರ್ಭಪಾತದ ವಿರೋಧಿಯಾಗಿದ್ದಾರೆ. ಆದರೆ ಅವರು ತಾವು ಗರ್ಭಪಾತವನ್ನು ನಿಷೇಧಿಸುವುದಿಲ್ಲ ಎಂದೂ ಹೇಳಿದ್ದಾರೆ.

Continue Reading

ದೇಶ

Amazon India: ನೀರು ಕುಡಿಯುವಂತಿಲ್ಲ, ವಾಶ್ ರೂಮ್ ಗೆ ಹೋಗುವಂತಿಲ್ಲ; ಸಿಬ್ಬಂದಿಗೆ ಅಮೆಜಾನ್ ಕಂಪನಿ ತಾಕೀತು!

ಹರಿಯಾಣದ ಅಮೆಜಾನ್ ನ (Amazon India) ಗೋದಾಮುಗಳಲ್ಲಿ ಕೆಲಸ ಮಾಡುವವರಿಗೆ ಶಿಫ್ಟ್ ಸಮಯದಲ್ಲಿ ನೀರು ಕುಡಿಯುವುದಿಲ್ಲ, ವಾಶ್ ರೂಮ್ ಗೆ ಹೋಗುವುದಿಲ್ಲ ಎಂದು ಪ್ರತಿಜ್ಞೆ ಮಾಡಲು ಒತ್ತಾಯಿಸಲಾಗಿದೆ. ವಿಶ್ರಾಂತಿ ಕೊಠಡಿ ಇದ್ದರೂ ಹತ್ತು ನಿಮಿಷಕ್ಕಿಂತ ಹೆಚ್ಚು ಹೊತ್ತು ಕಳೆಯುವಂತಿಲ್ಲ ಎಂದು ಕಾರ್ಮಿಕರು ಆರೋಪಿಸಿದ್ದಾರೆ. ಈ ಸಂಗತಿ ಈಗ ಭಾರಿ ಚರ್ಚೆಗೆ ಕಾರಣವಾಗಿದೆ.

VISTARANEWS.COM


on

By

Amazon India
Koo

ಅಮೆಜಾನ್ ನ (Amazon India) ಗೋದಾಮುಗಳಲ್ಲಿ (warehouse) ಕೆಲಸ ಮಾಡುವವರು ನೀರು ಕುಡಿಯಬಾರದು, ವಾಶ್ ರೂಮ್ ಗೆ ಹೋಗಬಾರದು (no toilet, water breaks) ಎಂದು ಒತ್ತಾಯಿಸಿರುವುದು ಬೆಳಕಿಗೆ ಬಂದಿದೆ. ಹರಿಯಾಣದ (Haryana) ಮಾನೇಸರ್‌ನಲ್ಲಿರುವ (Manesar) ಅಮೆಜಾನ್‌ನ ಐದು ಗೋದಾಮುಗಳ ಕೆಲಸ ಮಾಡುವವರಿಗೆ ಈ ಕಠಿಣ ಪ್ರತಿಜ್ಞೆ ಮಾಡಲು ಒತ್ತಾಯಿಸಲಾಗಿದೆ.

ಆರು ಟ್ರಕ್‌ಗಳಿಂದ ಪ್ಯಾಕೇಜ್‌ಗಳನ್ನು ಇಳಿಸುವ ಕಾರ್ಯ ಪೂರ್ಣಗೊಳ್ಳುವವರೆಗೆ ನೀರು ಕುಡಿಯುವುದಿಲ್ಲ, ವಾಶ್ ರೂಮ್ ಗೆ ಹೋಗುವುದಿಲ್ಲ ಎಂದು ಪ್ರತಿಜ್ಞೆ ಮಾಡುವಂತೆ ಒತ್ತಾಯಿಸಲಾಯಿತು.

ಶಿಫ್ಟ್ ಸಮಯದಲ್ಲಿ ಕಾರ್ಮಿಕರು ಸಮಯ ವ್ಯರ್ಥ ಮಾಡುತ್ತಿಲ್ಲವೇ ಎಂದು ಪರಿಶೀಲಿಸಲು ಹಿರಿಯರು ವಾಶ್‌ರೂಮ್‌ಗಳನ್ನು ಪರಿಶೀಲಿಸುತ್ತಾರೆ. ಹರಿಯಾಣದ ಮನೇಸರ್‌ನಲ್ಲಿರುವ ಅಮೆಜಾನ್ ಇಂಡಿಯಾದ ಐದು ಗೋದಾಮುಗಳಲ್ಲಿ ತಿಂಗಳಿಗೆ 10,088 ರೂ ಆದಾಯ ಪಡೆಯುವ 24 ವರ್ಷ ವಯಸ್ಸಿನವರು ವಾರದಲ್ಲಿ ಐದು ದಿನಗಳಲ್ಲಿ ದಿನಕ್ಕೆ ಹತ್ತು ಗಂಟೆ ಕೆಲಸ ಮಾಡುತ್ತಾರೆ.

ತಲಾ 30 ನಿಮಿಷಗಳ ಊಟ ಮತ್ತು ಚಹಾ ವಿರಾಮಗಳು ಸೇರಿ ಉಳಿದ ಯಾವುದೇ ವಿರಾಮವಿಲ್ಲದೆ ಕೆಲಸ ಮಾಡುತ್ತಿದ್ದರೂ ದಿನಕ್ಕೆ ನಾಲ್ಕು ಟ್ರಕ್‌ಗಳಿಗಿಂತ ಹೆಚ್ಚು ಇಳಿಸಲು ಸಾಧ್ಯವಿಲ್ಲ. ಎರಡು ದಿನಗಳ ಹಿಂದೆ, ಕಾರ್ಯಕ್ಷಮತೆಯನ್ನು ಸುಧಾರಿಸಲು ಮತ್ತು ಗುರಿಯನ್ನು ಸಾಧಿಸಲು ನಾವು ನೀರು ಮತ್ತು ವಾಶ್‌ರೂಮ್ ವಿರಾಮಗಳನ್ನು ತ್ಯಜಿಸುವುದಾಗಿ ಪ್ರತಿಜ್ಞೆ ಮಾಡಿಸಿದ್ದಾರೆ ಎಂದು ಕಾರ್ಮಿಕರು ದೂರಿದ್ದಾರೆ.


ಹರಿಯಾಣದ ಕೈಗಾರಿಕಾ ಕೇಂದ್ರವಾದ ಮನೇಸರ್‌ನಲ್ಲಿರುವ ಗೋದಾಮುಗಳಲ್ಲಿ ಕಾರ್ಮಿಕರಿಂದ ಆರೋಪ ಕೇಳಿ ಬಂದ ಬಳಿಕ ಅಮೆಜಾನ್ ಇಂಡಿಯಾದ ವಕ್ತಾರರು ಪರಿಶೀಲನೆ ನಡೆಸಿದರು.

ಕಾರ್ಮಿಕರ ಆರೋಪಗಳಿಗೆ ಪ್ರತಿಕ್ರಿಯಿಸಿದ ಅಮೆಜಾನ್ ಇಂಡಿಯಾದ ವಕ್ತಾರರು, ನಾವು ಈ ಬಗ್ಗೆ ತನಿಖೆ ನಡೆಸಿದ್ದೇವೆ. ಸ್ಪಷ್ಟವಾಗಿ ಹೇಳಬೇಕೆಂದರೆ ನಾವು ನಮ್ಮ ಉದ್ಯೋಗಿಗಳ ಮೇಲೆ ಈ ರೀತಿಯ ವಿನಂತಿಗಳನ್ನು ಎಂದಿಗೂ ಮಾಡುವುದಿಲ್ಲ. ಇಂತಹ ಘಟನೆ ಕಂಡುಬಂದರೆ ತಕ್ಷಣವೇ ಅದನ್ನು ನಿಲ್ಲಿಸುತ್ತೇವೆ. ತಂಡದ ಬೆಂಬಲ, ಆರೋಗ್ಯ ಮತ್ತು ಸುರಕ್ಷತೆಯ ಕುರಿತು ನಮ್ಮ ನಿರೀಕ್ಷೆಗಳು ಒಳಗೊಂಡಿರುತ್ತವೆ ಎಂದು ಹೇಳಿದ್ದಾರೆ.

ಕಂಪೆನಿಯು ತನ್ನ ಉದ್ಯೋಗಿಗಳ ಸುರಕ್ಷತೆ ಮತ್ತು ಯೋಗಕ್ಷೇಮವನ್ನು ಗಂಭೀರವಾಗಿ ಪರಿಗಣಿಸುತ್ತದೆ. ನಮ್ಮ ಎಲ್ಲಾ ಕಟ್ಟಡಗಳು ಶಾಖ ಸೂಚ್ಯಂಕ ಮಾನಿಟರಿಂಗ್ ಸಾಧನಗಳನ್ನು ಹೊಂದಿವೆ. ವಿಶೇಷವಾಗಿ ಬೇಸಿಗೆಯ ತಿಂಗಳುಗಳಲ್ಲಿ ತಾಪಮಾನದಲ್ಲಿನ ಬದಲಾವಣೆಗಳನ್ನು ನಾವು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತೇವೆ. ರೆಸ್ಟ್ ರೂಂ ಅನ್ನು ಬಳಸಲು, ನೀರು ಪಡೆಯಲು ಅಥವಾ ಮ್ಯಾನೇಜರ್ ಅಥವಾ ಹೆಚ್ ಆರ್ ನೊಂದಿಗೆ ಮಾತನಾಡಲು ಉದ್ಯೋಗಿಗಳು ತಮ್ಮ ಪಾಳಿಗಳ ಉದ್ದಕ್ಕೂ ಅನೌಪಚಾರಿಕ ವಿರಾಮಗಳನ್ನು ತೆಗೆದುಕೊಳ್ಳಲು ಮುಕ್ತರಾಗಿರುತ್ತಾರೆ ಎಂದು ಅವರು ತಿಳಿಸಿದ್ದಾರೆ.

ಅಮೆಜಾನ್ ವಿದೇಶದಲ್ಲಿ ಇಂತಹ ಆರೋಪಗಳನ್ನು ಎದುರಿಸಿದೆ. ಯುಎಸ್ ನಲ್ಲಿನ ಔದ್ಯೋಗಿಕ ಸುರಕ್ಷತೆ ಮತ್ತು ಆರೋಗ್ಯ ಆಡಳಿತವು 2022 ಮತ್ತು 2023 ರಲ್ಲಿ ಕಂಪೆನಿಯ ಅಸುರಕ್ಷಿತ ಕೆಲಸದ ಪರಿಸ್ಥಿತಿಗಳು ಮತ್ತು ಆರು ಗೋದಾಮುಗಳಲ್ಲಿ ಕಾರ್ಮಿಕರಿಗೆ ಆದ ಗಾಯಗಳ ಕುರಿತು ಸರಿಯಾದ ವರದಿ ಮಾಡಲು ವಿಫಲವಾಗಿದೆ ಎನ್ನುವ ದೂರು ಕೇಳಿ ಬಂದಿತ್ತು.

ಇದನ್ನೂ ಓದಿ: Windfall Tax: ಕಚ್ಚಾ ತೈಲದ ಲಾಭ ತೆರಿಗೆಯನ್ನು ಪ್ರತಿ ಟನ್‌ಗೆ 3,250 ರೂ.ಗೆ ಇಳಿಸಿದ ಸರ್ಕಾರ

ಟ್ರಕ್‌ಗಳು ಹೊರಗೆ ನಿಲ್ಲಿಸುವುದರಿಂದ ಹೆಚ್ಚು ಬಿಸಿಯಾಗಿರುತ್ತವೆ. ಕಾರ್ಮಿಕರು ಅದರಿಂದ ವಸ್ತುಗಳನ್ನು ಇಳಿಸುವಾಗ ಬಹು ಬೇಗನೆ ದಣಿಯುತ್ತಾರೆ. ಇದು ಮಹಿಳೆಯರ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ ಎಂದು ಹರಿಯಾಣದ ಗೋದಾಮಿನಲ್ಲಿ ಕೆಲಸ ಮಾಡುವ ಮಹಿಳೆಯೊಬ್ಬರು ಹೇಳಿದ್ದಾರೆ.

ಗೋದಾಮಿನಲ್ಲಿ ಕೆಲಸ ಮಾಡುವ ಮಹಿಳೆಯರು ಸಾಕಷ್ಟಿದ್ದಾರೆ. ಆದರೆ ಈ ಆವರಣದಲ್ಲಿ ವಿಶ್ರಾಂತಿ ಕೊಠಡಿ ಇಲ್ಲ. ನಾವು ಅಸ್ವಸ್ಥರಾಗಿದ್ದರೆ ವಾಶ್‌ರೂಮ್ ಅಥವಾ ಲಾಕರ್ ಕೋಣೆಗೆ ಹೋಗುವುದು ಒಂದೇ ಆಯ್ಕೆಯಾಗಿದೆ. ಹಾಸಿಗೆ ಇರುವ ಒಂದು ಕೋಣೆ ಇದೆ. ಆದರೆ ಇಲ್ಲಿ ಕಾರ್ಮಿಕರನ್ನು 10 ನಿಮಿಷಗಳ ಅನಂತರ ಹೊರಡಲು ಕೇಳಲಾಗುತ್ತದೆ. ನಾನು ದಿನಕ್ಕೆ ಒಂಬತ್ತು ಗಂಟೆಗಳ ಕಾಲ ನಿಲ್ಲುತ್ತೇನೆ ಮತ್ತು ಪ್ರತಿ ಗಂಟೆಗೆ 60 ಸಣ್ಣ ಉತ್ಪನ್ನ ಅಥವಾ 40 ಮಧ್ಯಮ ಗಾತ್ರದ ಉತ್ಪನ್ನಗಳನ್ನು ತೆಗೆದುಕೊಂಡು ಹೋಗಬೇಕು ಎಂದು ದೂರಿದ್ದಾರೆ.

Continue Reading
Advertisement
Siddaramaiah
ಸಂಪಾದಕೀಯ11 mins ago

ವಿಸ್ತಾರ ಸಂಪಾದಕೀಯ: ಬೆಲೆ ಏರಿಕೆ ಮಾಡುವುದೇ ರಾಜ್ಯ ಸರ್ಕಾರದ 6ನೇ ‘ಗ್ಯಾರಂಟಿ’ ಆಗದಿರಲಿ!

International Yoga Day 2024
ಆರೋಗ್ಯ12 mins ago

International Yoga Day 2024: ಗರ್ಭಿಣಿಯರೂ ಯೋಗ ಮಾಡಬಹುದೇ? ಯಾವ ಆಸನಗಳು ಸೂಕ್ತ?

Dina Bhavishya
ಭವಿಷ್ಯ1 hour ago

Dina Bhavishya : ಬಹುದಿನಗಳ ಕನಸು ನನಸಾಗುವ ಸಮಯವಿದು; ಕುಟುಂಬ ಸದಸ್ಯರಿಂದ ಸಿಗಲಿದೆ ಬೆಂಬಲ

Teachers Transfer
ಪ್ರಮುಖ ಸುದ್ದಿ7 hours ago

Teachers Transfer: ಶಿಕ್ಷಕರ ವರ್ಗಾವಣೆ ವೇಳಾಪಟ್ಟಿ ಪ್ರಕಟ; ಕಡ್ಡಾಯ, ಹೆಚ್ಚುವರಿ‌ ಟ್ರಾನ್ಸ್‌ಫರ್ ಇಲ್ಲ, ಕೋರಿಕೆ ವರ್ಗ ಮಾತ್ರ

T20 World Cup 2024
T20 ವಿಶ್ವಕಪ್8 hours ago

T20 World Cup 2024: ಭಾರತ-ಕೆನಡಾ ಪಂದ್ಯ ಮಳೆಯಿಂದ ರದ್ದು; ಅಗ್ರಸ್ಥಾನಿಯಾಗಿ ರೋಹಿತ್‌ ಪಡೆ ಸೂಪರ್‌ 8ಕ್ಕೆ ಎಂಟ್ರಿ

Hiriya vidwamsa Sagri Raghavendra Upadhyaya passed away
ಶ್ರದ್ಧಾಂಜಲಿ9 hours ago

Sagri Raghavendra Upadhyaya: ಹಿರಿಯ ವಿದ್ವಾಂಸ ಸಗ್ರಿ ರಾಘವೇಂದ್ರ ಉಪಾಧ್ಯಾಯ ನಿಧನ

Government has no money to clean tankers no ability to provide clean drinking water says R Ashok
ಪ್ರಮುಖ ಸುದ್ದಿ9 hours ago

R Ashok: ಟ್ಯಾಂಕರ್ ಸ್ವಚ್ಛಗೊಳಿಸಲೂ ಸಿದ್ದು ಸರ್ಕಾರದ ಬಳಿ ಹಣವಿಲ್ಲ; ಆರ್. ಅಶೋಕ್‌ ಆಕ್ರೋಶ

Union Minister Pralhad Joshi statement about increase in petrol and diesel prices in the state
ಕರ್ನಾಟಕ9 hours ago

Pralhad Joshi: ತೈಲ ಬೆಲೆ ಏರಿಸಿ ಕರ್ನಾಟಕದವರ ಕೈಗೆ ಗ್ಯಾರಂಟಿ ಚೊಂಬು ಕೊಟ್ಟ ಕಾಂಗ್ರೆಸ್: ಪ್ರಲ್ಹಾದ್‌ ಜೋಶಿ

Bribe Case
ಕ್ರೈಂ9 hours ago

Bribe Case: ಕಸ ಗುಡಿಸುತ್ತಲೇ ಉನ್ನತ ಹುದ್ದೆಗೇರಿದ್ದ ಮಹಿಳೆ ಕಸ ಗುಡಿಸುವವರಿಂದಲೇ ಲಂಚ ಸ್ವೀಕರಿಸುವಾಗ ಬಂಧನ!

Minister dr G Parameshwar inaugurated the hasiru grama programme in Koratagere
ತುಮಕೂರು10 hours ago

Koratagere News: ಹಸಿರೇ ಉಸಿರು, ಹಸಿರಿದ್ದೆಡೆ ಮಾನವನ ಸರ್ವಾಂಗಿಣ ಪ್ರಗತಿ: ಸಚಿವ ಜಿ. ಪರಮೇಶ್ವರ್‌

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Actor Darshan
ಯಾದಗಿರಿ16 hours ago

Actor Darshan : ಬಾಸ್‌ ಅಂತ ಯಾಕ್‌ ಬಕೆಟ್‌ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!

Karnataka Weather Forecast
ಮಳೆ2 days ago

Karnataka Weather : ಕರಾವಳಿ, ಉತ್ತರ ಒಳನಾಡಿನಲ್ಲಿ ವರುಣಾರ್ಭಟ; ನಾಳೆಯು ಹಲವೆಡೆ ಸಿಕ್ಕಾಪಟ್ಟೆ ಮಳೆ

Actor Darshan
ಬೆಂಗಳೂರು2 days ago

Actor Darshan : ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್ ಮಾಡಿ ಕರೆತರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ!

actor Darshan
ಬೆಂಗಳೂರು2 days ago

Actor Darshan : ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಮತ್ತಿಬ್ಬರು ಸರೆಂಡರ್‌; ಆರೋಪಿಗಳ ಸಂಖ್ಯೆ 16ಕ್ಕೆ ಏರಿಕೆ

Actor Darshan
ಸಿನಿಮಾ2 days ago

Actor Darshan : ರೇಣುಕಾಸ್ವಾಮಿ ‌ಮೃತದೇಹ ಬಿಸಾಡಿ ಬಳಿಕ ಸಾಕ್ಷ್ಯಇದ್ದ 2 ಮೊಬೈಲ್‌ಗಳನ್ನು ಮೋರಿಗೆ ಎಸೆದ್ರಾ ಆರೋಪಿಗಳು?

karnataka weather Forecast
ಮಳೆ5 days ago

Karnataka Weather : ಭಾರಿ ಮಳೆಗೆ ಗುಡ್ಡದಿಂದ ಉರುಳಿ ಬಿದ್ದ ಬಂಡೆಗಲ್ಲು; ಬೆಂಗಳೂರಲ್ಲೂ ಸಂಜೆ ವರ್ಷಧಾರೆ

actor Darshan
ಚಿತ್ರದುರ್ಗ5 days ago

Actor Darshan: ರೇಣುಕಾ ಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್‌ ಅರೆಸ್ಟ್‌; ಪ್ರಕರಣವನ್ನು ಸಿಬಿಐಗೆ ವಹಿಸಲು ಒತ್ತಾಯ

Actor Darshan gets a series of questions from the police
ಸಿನಿಮಾ5 days ago

Actor Darshan : ಪವಿತ್ರಗೌಡ ಬಗ್ಗೆ ಪೋಸ್ಟ್‌ ಮಾಡಿದ್ರೆ ನಿಮಗ್ಯಾಕೆ ಕೋಪ? ದರ್ಶನ್‌ಗೆ ಪೊಲೀಸರ ಪ್ರಶ್ನೆಗಳ ಸುರಿಮಳೆ

Actor Darshan
ಸಿನಿಮಾ5 days ago

Actor Darshan : ದರ್ಶನ್‌ ಜೈಲಿಗೆ ಹೋಗುತ್ತಿರುವುದು ಇದೇ ಮೊದಲಲ್ಲ; ನಟನ ಮೇಲಿವೆ ಹತ್ತಾರು ಕೇಸ್‌ಗಳು!

Saptami Gowda
ಸಿನಿಮಾ5 days ago

Saptami Gowda : ಯುವ ಪತ್ನಿ ಶ್ರೀದೇವಿ ವಿರುದ್ಧ ಮಾನಹಾನಿ ಕೇಸ್; ಕಾನೂನು ಹೋರಾಟಕ್ಕೆ ಮುಂದಾದ ನಟಿ ಸಪ್ತಮಿ ಗೌಡ!

ಟ್ರೆಂಡಿಂಗ್‌