IND VS ZIM | ಜಿಂಬಾಬ್ವೆ ವಿರುದ್ಧ 71 ರನ್​ ಭರ್ಜರಿ ಗೆಲುವು ದಾಖಲಿಸಿದ ಟೀಮ್​ ಇಂಡಿಯಾ - Vistara News

Latest

IND VS ZIM | ಜಿಂಬಾಬ್ವೆ ವಿರುದ್ಧ 71 ರನ್​ ಭರ್ಜರಿ ಗೆಲುವು ದಾಖಲಿಸಿದ ಟೀಮ್​ ಇಂಡಿಯಾ

ಟಿ20 ವಿಶ್ವ ಕಪ್​ನ ಅಂತಿಮ ಸೂಪರ್​-12 ಪಂದ್ಯದಲ್ಲಿ ಜಿಂಬಾಬ್ವೆ ವಿರುದ್ಧ ಟೀಮ್​ ಇಂಡಿಯಾ ಭರ್ಜರಿ 71 ರನ್​ ಅಂತರದ ಗೆಲುವು ದಾಖಲಿಸಿದೆ.

VISTARANEWS.COM


on

ind
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮೆಲ್ಬೋರ್ನ್​: ಬ್ಯಾಟಿಂಗ್​ ಮತ್ತು ಬೌಲಿಂಗ್​ನಲ್ಲಿ ಉತ್ಕೃಷ್ಟ ಮಟ್ಟದ ಪ್ರದರ್ಶನ ತೋರಿದ ಟೀಮ್​ ಇಂಡಿಯಾ ಐಸಿಸಿ ಟಿ20 ವಿಶ್ವ ಕಪ್​ನ ಅಂತಿಮ ಸೂಪರ್​-12 ಪಂದ್ಯದಲ್ಲಿ ಜಿಂಬಾಬ್ವೆ (IND VS ZIM) ವಿರುದ್ಧ 71 ರನ್​ಗಳ ಭರ್ಜರಿ ಗೆಲುವು ದಾಖಲಿಸಿದೆ. ಈ ಮೊದಲೇ ಭಾರತ ಸೆಮಿಫೈನಲ್​ ಪ್ರವೇಶಿಸಿದ್ದರಿಂದ ಇದೊಂದು ಭಾರತದ ಪಾಲಿಗೆ ಔಪಚಾರಿಕ ಪಂದ್ಯದಂತಿತ್ತು. ಇದರಲ್ಲಿಯೂ ಮೇಲುಗೈ ಸಾಧಿಸಿದ ರೋಹಿತ್​ ಪಡೆ ಬಿ ಗ್ರೂಪ್​ನ ಅಗ್ರ ಸ್ಥಾನಿಯಾಗಿ ತನ್ನ ಲೀಗ್​ ಪಂದ್ಯಕ್ಕೆ ಅಂತ್ಯ ಹಾಡಿತು. ಅದರಂತೆ ಭಾರತ ಸೆಮಿಫೈನಲ್​ನಲ್ಲಿ ಎ ಗ್ರೂಪ್​ನ ದ್ವಿತೀಯ ಸ್ಥಾನಿ ಇಂಗ್ಲೆಂಡ್ ವಿರುದ್ಧ ಸೆಣಸಾಟ ನಡೆಸಲಿದೆ. ಈ ಮುಖಾಮುಖಿ ನವೆಂಬರ್​ 10ರಂದು ಅಡಿಲೇಡ್​ ಓವಲ್​ ಮೈದಾನದಲ್ಲಿ ನಡೆಯಲಿದೆ.

ಮೆಲ್ಬೋರ್ನ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಈ ಮುಖಾಮುಖಿಯಲ್ಲಿ ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ ನಡೆಸಿದ ಭಾರತ ತಂಡ ರಾಹುಲ್(51)​ ಮತ್ತು ಸೂರ್ಯಕುಮಾರ್​(ಅಜೇಯ61) ಅವರ ಅರ್ಧಶತಕದ ಬ್ಯಾಟಿಂಗ್​ ಸಾಹಸದಿಂದ ನಿಗದಿತ 20 ಓವರ್​ಗಳಲ್ಲಿ 5 ವಿಕೆಟ್​ ನಷ್ಟಕ್ಕೆ 186 ರನ್​ ಪೇರಿಸಿತು. ಬಳಿಕ ಬೃಹತ್​ ಮೊತ್ತ ಬೆನ್ನಟ್ಟಿದ ಜಿಂಬಾಬ್ವೆ ತಂಡ 17.2 ಓವರ್​ಗಳಲ್ಲಿ 115 ರನ್​ ಗಳಿಸಿ ಶರಣಾಯಿತು.

ಗುರಿ ಬೆನ್ನಟ್ಟಿದ ಜಿಂಬಾಬ್ವೆ ಬೃಹತ್​ ಮೊತ್ತವನ್ನು ಕಂಡು ಆರಂಭದಲ್ಲೆ ಮಂಕಾಯಿತು. ತಂಡದ ಖಾತೆ ತೆರೆಯುವ ಮುನ್ನವೇ ವೆಸ್ಲಿ ಮಾಧೆವೆರೆ(0) ವಿಕೆಟ್​ ಕಳೆದುಕೊಂಡು ಆರಂಭಿಕ ಆಘಾತ ಅನುಭವಿಸಿತು. ಭುವನೇಶ್ವರ್​ ಕುಮಾರ್​ ಮೊದಲ ಓವರ್​ನಲ್ಲಿಯೇ ಮೇಡನ್​ ಸಹಿತ ಈ ವಿಕೆಟ್​ ಕಿತ್ತು ಭಾರತಕ್ಕೆ ಮುನ್ನಡೆ ತಂದುಕೊಟ್ಟರು. ಇದರ ಬೆನ್ನಲ್ಲೆ ಮುಂದಿನ ಓವರ್​ ಎಸೆಯಲು ಬಂದ ಎಡಗೈ ವೇಗಿ ಅರ್ಶ್​ದೀಪ್​ ಸಿಂಗ್​ ಕೂಡ ರೆಗಿಸ್ ಚಕಬ್ವಾ(0) ವಿಕೆಟ್​ ಉರುಳಿಸಿದರು. ಜಿಂಬಾಬ್ವೆ ತಂಡ 30 ರನ್​ ಗಡಿದಾಡುವ ವೇಳೆ ಪ್ರಮುಖ ನಾಲ್ಕು ವಿಕೆಟ್​ ಕಳೆದುಕೊಂಡು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿತು. ಇನ್ನೇನು 50 ರನ್​ ಒಳಗಡೆ ಗಂಟು ಮೂಟೆ ಕಟ್ಟಲಿದೆ ಎನ್ನುವಾಗ ಮಧ್ಯಮ ಕ್ರಮಾಂಕದಲ್ಲಿ ಆಡಲಿಳಿದ ಸಿಕಂದರ್​ ರಾಜಾ ಮತ್ತು ರಿಯಾನ್ ಬರ್ಲ್ ಜತೆಗೂಡಿ ಸಣ್ಣ ಮಟ್ಟದ ಹೊರಟವೊಂದನ್ನು ನಡೆಸಿದರು. ಈ ಉಭಯ ಆಟಗಾರರ ನೆರವಿನಿಂದ ಜಿಂಬಾಬ್ವೆ ನೂರರ ಗಡಿದಾಟಿತು. ಜತೆಗೆ ಸೋಲಿನ ಅಂತರವನ್ನು ತಗ್ಗಿಸಿತು. ರಿಯಾನ್ ಬರ್ಲ್ 35 ರನ್​ ಸಿಡಿಸಿ ಅಶ್ವಿನ್​ಗೆ ವಿಕೆಟ್​ ಒಪ್ಪಿಸಿದರು. ಸಿಕಂದರ್​ ರಾಜಾ 24 ಎಸೆತದಿಂದ 34 ರನ್​ ಕಲೆಹಾಕಿದರು.

ಸೂರ್ಯಕುಮಾರ್​ ಬ್ಯಾಟಿಂಗ್ ಆರ್ಭಟ

ವಿರಾಟ್​ ಕೊಹ್ಲಿ ಮತ್ತು ರಾಹುಲ್​ ವಿಕೆಟ್​ ಪತನಗೊಂಡಾಗ ಒಂದು ಹಂತದಲ್ಲಿ ಭಾರತ ತಂಡದ ಸ್ಕೋರ್‌ 160ರ ಗಡಿ ದಾಟುವುದು ಕಷ್ಟ ಎಂಬಂತಿತ್ತು. ಇದೇ ವೇಳೆ ಬ್ಯಾಟಿಂಗ್​ಗೆ ಇಳಿದ ಸೂರ್ಯಕುಮಾರ್​ ಯಾದವ್,​ ಪತ್ರಿ ಪಂದ್ಯದಂತೆ ಈ ಪಂದ್ಯದಲ್ಲಿಯೂ ಸ್ಫೋಟಕ ಬ್ಯಾಟಿಂಗ್​ ನಡೆಸಿದರು. ಆರಂಭದಿಂದಲೇ ಸಿಕ್ಸರ್​ ಮತ್ತು ಬೌಂಡರಿ ಮೂಲಕ ಜಿಂಬಾಬ್ಬೆ ಬೌಲರ್​ಗಳನ್ನು ಮನಬಂದಂತೆ ಡಂಡಿಸಿದರು. ಅವರ ಈ ಬ್ಯಾಟಿಂಗ್​ ಆರ್ಭಟದಿಂದ ಕೊನೇ 5 ಓವರ್‌ಗಳಲ್ಲಿ 79 ರನ್​ ಹರಿದು ಬಂದು ತಂಡ ಬೃಹತ್​ ಮೊತ್ತ ದಾಖಲಿಸಿತು. ಒಟ್ಟು 25 ಎಸೆತ ಎದುರಿಸಿ ಸೂರ್ಯಕುಮಾರ್​ ಅಜೇಯ 61 ರನ್​ ಬಾರಿಸಿದರು. ಈ ಸೊಗಸಾದ ಇನಿಂಗ್ಸ್​ ವೇಳೆ 6 ಬೌಂಡರಿ ಮತ್ತು 4 ಸಿಕ್ಸರ್​ ಸಿಡಿಯಿತು. ಉಳಿದಂತೆ ಆಲ್​ರೌಂಡರ್​ ಹಾರ್ದಿಕ್​ ಪಾಂಡ್ಯ 18 ರನ್​ ಗಳಿಸಿದರು. ಜಿಂಬಾಬ್ವೆ ಪರ ಸೇನ್​ ವಿಲಿಯಮ್ಸನ್​ 9 ರನ್​ಗೆ 2 ವಿಕೆಟ್​ ಕಿತ್ತು ಮಿಂಚಿದರು.

ರಾಹುಲ್​ ಅರ್ಧಶತಕ

ಬಾಂಗ್ಲಾದೇಶದ ವಿರುದ್ಧ ಅರ್ಧಶತಕ ಸಿಡಿಸಿ ಮಿಂಚಿದ್ದ ಕೆ.ಎಲ್​. ರಾಹುಲ್​ ಬ್ಯಾಟಿಂಗ್​ ಪ್ರದರ್ಶನ ಈ ಪಂದ್ಯದಲ್ಲಿಯೂ ಮುಂದುವರಿಯಿತು. ಆರಂಭಿಕ ವಿಕೆಟ್​ಗೆ ನಾಯಕ ರೋಹಿತ್​ ಜತೆಗೂಡಿ ತಂಡಕ್ಕೆ 27 ರನ್​ ಒಟ್ಟುಗೂಡಿಸಿದ ಅವರು ಬಳಿಕ ವಿರಾಟ್​ ಕೊಹ್ಲಿ ಜತೆ ದ್ವಿತೀಯ ವಿಕೆಟ್​ಗೆ 60 ರನ್​ ಜತೆಯಾಟ ನಡೆಸಿ ತಂಡಕ್ಕೆ ನೆರವಾದರು. ಆರಂಭದಲ್ಲಿ ಕೊಂಚ ನಿಧಾನಗತಿಯ ಬ್ಯಾಟಿಂಗ್​ಗೆ ಮುಂದಾದ ರಾಹುಲ್​ ನಾಲ್ಕು ಎಸೆತದ ಬಳಿಕ ರನ್​ ಖಾತೆ ತೆರೆದರು. ಬಳಿಕ ಬಿರುಸಿನ ಆಟಕ್ಕೆ ಮುಂದಾಗಿ 35 ಎಸೆತಗಳಲ್ಲಿ ಮೂರು ಬೌಂಡರಿ ಮತ್ತು ಮೂರು ಸಿಕ್ಸರ್​ ನೆರವಿನಿಂದ 51 ರನ್​ ಗಳಿಸಿದರು. ಉಳಿದಂತೆ ವಿರಾಟ್​ ಕೊಹ್ಲಿ 25 ಎಸೆತದಿಂದ 26 ರನ್​ ಬಾರಿಸಿದರು. ಕಳೆದ ಪಂದ್ಯಕ್ಕೆ ಹೋಲಿಕೆ ಮಾಡಿದರೆ ವಿರಾಟ್​ ಕೊಹ್ಲಿ ಈ ಪಂದ್ಯದಲ್ಲಿ ನಿಧಾನ ಗತಿಯ ಆಟವಾಡಿದಂತೆ ಕಂಡುಬಂತು. ಎಸೆತಕ್ಕೆ ಒಂದರಂತೆ ರನ್​ ಗಳಿಸಿದರು. ಒಟ್ಟಾರೆ ಕೊಹ್ಲಿ ಈ ಪಂದ್ಯದಲ್ಲಿ 2 ಬೌಂಡರಿ ಮಾತ್ರ ಸಿಡಿಸಿದರು.

ರೋಹಿತ್​ ಮತ್ತೆ ವಿಫಲ

ಭಾರತ ತಂಡದ ನಾಯಕ ರೋಹಿತ್​ ಶರ್ಮ ಈ ಪಂದ್ಯದಲ್ಲಿಯೂ ಮತ್ತೆ ಬ್ಯಾಟಿಂಗ್​ ವೈಫಲ್ಯ ಅನುಭವಿಸಿದರು. 13 ಎಸೆತದಲ್ಲಿ 15 ರನ್​ಗೆ ವಿಕೆಟ್​ ಒಪ್ಪಿಸಿದರು. ಈ ವಿಕೆಟ್​ ಬ್ಲೆಸಿಂಗ್ ಮುಜರಬಾನಿ ಪಾಲಾಯಿತು. ದಿನೇಶ್​ ಕಾರ್ತಿಕ್​ ಬದಲು ಆಡಲಿಳಿದ ರಿಷಭ್​ ಪಂತ್​ ಕೇವಲ ಮೂರು ರನ್​ಗೆ ಔಟಾದರು. ಈ ಮೂಲಕ ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳುವಲ್ಲಿ ವಿಫಲರಾದರು.

ಸಂಕ್ಷಿಪ್ತ ಸ್ಕೋರ್​:

ಭಾರತ: 20 ಓವರ್​ಗಳಲ್ಲಿ 5 ವಿಕೆಟ್​ಗೆ 186 (ರಾಹುಲ್​ 51, ಸೂರ್ಯಕುಮಾರ್​ ಅಜೇಯ 61, ವಿರಾಟ್​ ಕೊಹ್ಲಿ 26, ಸೇನ್​ ವಿಲಿಯಮ್ಸನ್​ 9ಕ್ಕೆ 2).

ಜಿಂಬಾಬ್ವೆ: 17.2 ಓವರ್​ಗಳಲ್ಲಿ 115ಕ್ಕೆ​ ಆಲೌಟ್​ (ರಿಯಾನ್ ಬರ್ಲ್ 35, ಸಿಕಂದರ್​ ರಾಜಾ 24, ಅಶ್ವಿನ್​ 22ಕ್ಕೆ 3, ಮೊಹಮ್ಮದ್​​ ಶಮಿ 14ಕ್ಕೆ2, ಹಾರ್ದಿಕ್​ ಪಾಂಡ್ಯ 16ಕ್ಕೆ2) ಪಂದ್ಯಶ್ರೇಷ್ಠ: ಸೂರ್ಯಕುಮಾರ್​ ಯಾದವ್​

ಇದನ್ನೂ ಓದಿ |PAK VS BANGLA | ಬಾಂಗ್ಲಾದೇಶದ ವಿರುದ್ಧ ಗೆದ್ದು ಸೆಮಿಫೈನಲ್​ ಪ್ರವೇಶಿಸಿದ ಪಾಕಿಸ್ತಾನ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Narendra Modi 3.0 : ಮೋದಿ ಅಧಿಕಾರಕ್ಕೆ ಬಾರದಿರಲಿ ಎಂದು ಕಾದು ಕೂತು, ಕೊನೆಗೂ ಅಭಿನಂದನೆ ತಿಳಿಸಿದ ಪಾಕಿಸ್ತಾನ!

Narendra Modi 3.0 : ಚುನಾವಣೆಯಲ್ಲಿ ಅವರು ಮತ್ತೊಂದು ಬಾರಿ ಆರಿಸಿ ಬರದಿರಲಿ ಎಂದು ಆಶಿಸಿದ್ದರು. ಅದರೆ, ಪಾಕ್​ನ ಲೆಕ್ಕಾಚಾರ ಉಲ್ಟಾ ಆಗಿದೆ. ಮೋದಿ ಮೂರನೇ ಬಾರಿಗೆ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಇನ್ನೀಗ ಶುಭಾಶಯ ಹೇಳದೆ ವಿಧಿಯಿಲ್ಲ. ಹೀಗಾಗಿ ಭಾರತದ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನರೇಂದ್ರ ಮೋದಿ ಅವರಿಗೆ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಅಭಿನಂದನೆ ಸಲ್ಲಿಸಿದ್ದಾರೆ

VISTARANEWS.COM


on

Narendra Modi 3.20
Koo

ಬೆಂಗಳೂರು: ನರೇಂದ್ರ ಮೋದಿ ಮತ್ತೊಂದು ಅವಧಿಗೆ ಭಾರತದ ಪ್ರಧಾನಿಯಾಗುವುದು (Narendra Modi 3.0) ಪಾಕಿಸ್ತಾನದ ಸರ್ಕಾರಕ್ಕೆ ಇಷ್ಟವಿರಲಿಲ್ಲ. ಹಿಂದೂಸ್ತಾನದಲ್ಲೀಗ ಮೋದಿ ಯುಗ, ‘ಮೋದಿಯ ಭಾರತ’ ಎಂದು ಆಗಾಗ ಕರೆಯುತ್ತಿದ್ದರು. ಚುನಾವಣೆಯಲ್ಲಿ ಅವರು ಮತ್ತೊಂದು ಬಾರಿ ಆರಿಸಿ ಬರದಿರಲಿ ಎಂದು ಆಶಿಸಿದ್ದರು. ಅದರೆ, ಪಾಕ್​ನ ಲೆಕ್ಕಾಚಾರ ಉಲ್ಟಾ ಆಗಿದೆ. ಮೋದಿ ಮೂರನೇ ಬಾರಿಗೆ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಇನ್ನೀಗ ಶುಭಾಶಯ ಹೇಳದೆ ವಿಧಿಯಿಲ್ಲ. ಹೀಗಾಗಿ ಭಾರತದ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನರೇಂದ್ರ ಮೋದಿ ಅವರಿಗೆ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಅಭಿನಂದನೆ ಸಲ್ಲಿಸಿದ್ದಾರೆ. “ಭಾರತದ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ @narendramodi ಅವರಿಗೆ ಅಭಿನಂದನೆಗಳು” ಎಂದು ಷರೀಫ್ ಎಕ್ಸ್​ ಪೋಸ್ಟ್​ ಮಾಡಿದ್ದಾರೆ.

ಪಾಕಿಸ್ತಾನದ ವಿದೇಶಾಂಗ ಕಚೇರಿ ವಕ್ತಾರ ಮುಮ್ತಾಜ್ ಜಹ್ರಾ ಬಲೂಚ್ ಅವರು ಶನಿವಾರ ಪ್ರಧಾನಿ ಮೋದಿಯವರನ್ನು ಅಭಿನಂದಿಸುವ ಬಗ್ಗೆ ಕೇಳಿದಾಗ, “ಅವರ ಚುನಾವಣಾ ಪ್ರಕ್ರಿಯೆಯ ಬಗ್ಗೆ ನಾವು ಯಾವುದೇ ಪ್ರತಿಕ್ರಿಯೆಗಳನ್ನು ಹೊಂದಿಲ್ಲ” ಎಂದು ಹೇಳಿದ್ದರು. ಹೊಸ ಭಾರತ ಸರ್ಕಾರ ಅಧಿಕೃತವಾಗಿ ಪ್ರಮಾಣವಚನದ ಪ್ರಕಟಣೆ ಹೊರಡಿಸದ ಕಾರಣ, ಅಭಿನಂದನಾ ಸಂದೇಶಗಳನ್ನು ಚರ್ಚಿಸಲು ಕಾಲ ಪಕ್ವವಾಗಿಲ್ಲ ಎಂದು ಅವರು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ, ಲೋಕಸಭೆ ಚುನಾವಣೆಯಲ್ಲಿ 543 ಸ್ಥಾನಗಳಲ್ಲಿ 293 ಸ್ಥಾನಗಳನ್ನು ಗೆಲ್ಲುವ ಮೂಲಕ ನಿರ್ಣಾಯಕ ಗೆಲುವು ಸಾಧಿಸಿದೆ.

“ಪಾಕಿಸ್ತಾನವು ಯಾವಾಗಲೂ ಭಾರತ ಸೇರಿದಂತೆ ತನ್ನ ಎಲ್ಲಾ ನೆರೆಹೊರೆಯವರೊಂದಿಗೆ ಸಹಕಾರ ಸಂಬಂಧವನ್ನು ಬಯಸುತ್ತದೆ. ಜಮ್ಮು ಮತ್ತು ಕಾಶ್ಮೀರದ ಪ್ರಮುಖ ವಿವಾದ ಸೇರಿದಂತೆ ಬಾಕಿ ಇರುವ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲು ರಚನಾತ್ಮಕ ಮಾತುಕತೆ ಮತ್ತು ತೊಡಗಿಸಿಕೊಳ್ಳುವಿಕೆಯನ್ನು ನಾವು ನಿರಂತರವಾಗಿ ಪ್ರತಿಪಾದಿಸಿದ್ದೇವೆ” ಎಂದು ಬಲೂಚ್ ಹೇಳಿದ್ದರು.

ಇದನ್ನೂ ಓದಿ: Narendra Modi 3.0 : ಮೋದಿ ಅಧಿಕಾರಕ್ಕೆ ಬಾರದಿರಲಿ ಎಂದು ಕಾದು ಕೂತು, ಕೊನೆಗೂ ಅಭಿನಂದನೆ ತಿಳಿಸಿದ ಪಾಕಿಸ್ತಾನ!

ಪಾಕಿಸ್ತಾನದೊಂದಿಗೆ ಸೌಹಾರ್ದಯುತ ಸಂಬಂಧವನ್ನು ಬಯಸುವುದಾಗಿ ಭಾರತ ಸಮರ್ಥಿಸಿಕೊಂಡಿದೆ, ಇಸ್ಲಾಮಾಬಾದ್ ಮೊದಲು ಭಯೋತ್ಪಾದನೆ ಮತ್ತು ಹಗೆತನ ಮುಕ್ತ ವಾತಾವರಣವನ್ನು ಸೃಷ್ಟಿಸಬೇಕು ಎಂದು ಒತ್ತಿಹೇಳಿದೆ.

Continue Reading

ಪ್ರಮುಖ ಸುದ್ದಿ

Reasi Terror Attack : ಉಗ್ರರ ಮುಂದೆ ಸತ್ತಂತೆ ನಟಿಸಿ ಬದುಕುಳಿದ ಹಿಂದೂ ಯಾತ್ರಿಗಳು…

Reasi Terror Attack : ತಂಡದಲ್ಲಿ 6ರಿಂದ 7 ಭಯೋತ್ಪಾದಕರು ಇದ್ದರು. ಅವರು ಮಾಸ್ಕ್​ನಿಂದ ಮುಖ ಮುಚ್ಚಿದ್ದರು. ಆರಂಭದಲ್ಲಿ, ಅವರು ಬಸ್ ಹಿಂದೆ – ಮುಂದೆ ಚಲಿಸದಂತೆ ರಸ್ತೆಯ ಎಲ್ಲಾ ಬದಿಗಳಿಂದ ಮುಚ್ಚಿದರು. ಬಳಿಕ ಗುಂಡು ಹಾರಿಸಲು ಆರಂಭಿಸಿದರು. ಬಸ್ ಕಮರಿಗೆ ಹತ್ತಿರ ಬಂದು ಎಲ್ಲರೂ ಸಾಯುವಂತೆ ನಿರಂತ ಗುಂಡು ಹಾರಿಸುತ್ತಲೇ ಇದ್ದರು ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.

VISTARANEWS.COM


on

Reasi Terror Attack
Koo

ಬೆಂಗಳೂರು: ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯಲ್ಲಿ ಹಿಂದೂ ಯಾತ್ರಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಬಸ್ ಮೇಲೆ ನಡೆದ ಭಯೋತ್ಪಾದಕರ ದಾಳಿಯಲ್ಲಿ (Reasi Terror Attack) ಬದುಕುಳಿದವರು ಆ ಭಯಾನಕ ಕ್ಷಣವನ್ನು ವಿವರಿಸಿದ್ದಾರೆ. ಎಲ್ಲರನ್ನೂ ಸಾಯಿಸಬೇಕು ಎಂಬ ಉದ್ದೇಶದಿಂದ ಭಯೋತ್ಪಾದಕರು ಬಸ್​ ಕಮರಿಗೆ ಬಿದ್ದಿದ್ದರೂ ಗುಂಡು ಹಾರಿಸುತ್ತಲೇ ಇದ್ದರು ಎಂದು ಅವರು ಹೇಳಿದ್ದಾರೆ. ನಾವೆಲ್ಲರೂ ಗುಂಡು ಬಿದ್ದು ಸತ್ತಂತೆ ನಟಿಸಿ ಬದುಕಿಕೊಂಡೆವು ಎಂದು ಅವರು ಭಯಭೀತ ಘಟನೆಯನ್ನು ವಿವರಿಸಿದ್ದಾರೆ.

ತಂಡದಲ್ಲಿ 6ರಿಂದ 7 ಭಯೋತ್ಪಾದಕರು ಇದ್ದರು. ಅವರು ಮಾಸ್ಕ್​ನಿಂದ ಮುಖ ಮುಚ್ಚಿದ್ದರು. ಆರಂಭದಲ್ಲಿ, ಅವರು ಬಸ್ ಹಿಂದೆ – ಮುಂದೆ ಚಲಿಸದಂತೆ ರಸ್ತೆಯ ಎಲ್ಲಾ ಬದಿಗಳಿಂದ ಮುಚ್ಚಿದರು. ಬಳಿಕ ಗುಂಡು ಹಾರಿಸಲು ಆರಂಭಿಸಿದರು. ಬಸ್ ಕಮರಿಗೆ ಹತ್ತಿರ ಬಂದು ಎಲ್ಲರೂ ಸಾಯುವಂತೆ ಕೂಗುತ್ತಾ ನಿರಂತರ ಗುಂಡು ಹಾರಿಸುತ್ತಲೇ ಇದ್ದರು ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.

ನಾವೆಲ್ಲರೂ ಸತ್ತಿದ್ದೇವೆ ಎಂದು ಅವರನ್ನು ನಂಬಿಸಲು ನಾವು ಮೌನವಾಗಿಯೇ ಇದ್ದೆವು. ಸಂಜೆ 6 ಗಂಟೆಗೆ ಶಿವಖೋರ್ಹಿಯಿಂದ (ರಿಯಾಸಿ) ವೈಷ್ಣೋದೇವಿಗೆ ಬಸ್ ಮೂಲಕ ಬರುವಾಗ 30 ನಿಮಿಷಗಳ ದಾರಿಯ ನಡುವೆ ಘಟನೆ ನಡೆದಿದೆ. ನಾವು ಭಯಭೀತರಾಗಿದ್ದೆವು. ಬಸ್ಸಿನಲ್ಲಿ ಮಕ್ಕಳು ಮತ್ತು ಮಹಿಳೆಯರು ಸಹ ಇದ್ದರು. ಎಲ್ಲರೂ ಗಾಯಗೊಂಡಿದ್ದಾರೆ. ದಾಳಿ ನಡೆದ 10 ರಿಂದ 15 ನಿಮಿಷಗಳ ನಂತರ ಪೊಲೀಸರು ಮತ್ತು ಸ್ಥಳೀಯರು ನಮ್ಮನ್ನು ರಕ್ಷಿಸಲು ಬಂದರು ಎಂದು ಯಾತ್ರಿಯೊಬ್ಬರು ಹೇಳಿದರು.

20 ನಿಮಿಷ ಗುಂಡು ಹಾರಿಸಿದ್ದರು

ಭಯಾನಕ ದಾಳಿಯನ್ನು ವಿವರಿಸಿದ ಸಂತ್ರಸ್ತರೊಬ್ಬರು “ಭಯೋತ್ಪಾದಕರಲ್ಲಿ ಒಬ್ಬ ಬಸ್ ಮೇಲೆ ಗುಂಡು ಹಾರಿಸುವುದನ್ನು ನಾನು ನೋಡಿದ್ದೇನೆ. ಬಸ್ ಕಮರಿಗೆ ಬಿದ್ದ ನಂತರವೂ ಅವರು 20 ನಿಮಿಷಗಳ ಕಾಲ ಗುಂಡು ಹಾರಿಸುತ್ತಲೇ ಇದ್ದರು. ಬಸ್ ಚಾಲಕನಿಗೆ ಗುಂಡು ತಗುಲಿದ ಕಾರಣ ನಿಯಂತ್ರಣ ಕಳೆದುಕೊಂಡು ವಾಹನವು ಕಮರಿಗೆ ಬಿದ್ದಿದೆ.

ಮಕ್ಕಳೂ ಎಂದೂ ನೋಡದೆ ಕೊಂಡಿದ್ದರು

ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯ ದೇವಾಲಯದಿಂದ ಯಾತ್ರಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಬಸ್ ಮೇಲೆ ಭಯೋತ್ಪಾದಕರು ಗುಂಡು ಹಾರಿಸಿದ ಪರಿಣಾಮ 10 ಜನರು ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ 33 ಜನರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: Narendra Modi 3.0 : ಅಧಿಕಾರ ಸ್ವೀಕರಿಸಿದ ಮರುದಿನವೇ ಮೊದಲ ಫೈಲ್​ಗೆ ಸಹಿ ಹಾಕಿದ ಪ್ರಧಾನಿ ಮೋದಿ; ಯಾವ ಕಡತ ಅದು?

ರಿಯಾಸಿ ಬಸ್ ದಾಳಿಯಲ್ಲಿ ಎರಡರಿಂದ ಮೂರು ಭಯೋತ್ಪಾದಕರು ಭಾಗಿಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಕಳೆದ ತಿಂಗಳು ರಾಜೌರಿ ಮತ್ತು ಪೂಂಛ್​​ನಲ್ಲಿ ದಾಳಿಗಳನ್ನು ನಡೆಸಿದ ಲಷ್ಕರ್ ಉಗ್ರರ ಗುಂಪು ಟಿಆರ್​ಎಫ್​ ಭಯೋತ್ಪಾದಕರು ದಾಳಿ ನಡೆಸಿದ್ದಾರೆ.

ಭಯೋತ್ಪಾದಕರನ್ನು ಪತ್ತೆಹಚ್ಚಲು ಬೃಹತ್ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದೆ. ದಾಳಿಯ ತನಿಖೆಗಾಗಿ ರಾಷ್ಟ್ರೀಯ ತನಿಖಾ ಸಂಸ್ಥೆಯನ್ನು (ಎನ್ಐಎ) ನಿಯೋಜಿಸಲಾಗಿದೆ ಎಂದು ಗೃಹ ಸಚಿವಾಲಯದ ಮೂಲಗಳು ತಿಳಿಸಿವೆ.

Continue Reading

ದೇಶ

Suresh Gopi : ಪ್ರಮಾಣವಚನ ಸ್ವೀಕರಿಸಿದ ಒಂದೇ ಗಂಟೆಯೊಳಗೆ ಸಚಿವ ಸ್ಥಾನ ಬೇಡ ಎಂದ ಸುರೇಶ್​ ಗೋಪಿ!

Suresh GopiL

VISTARANEWS.COM


on

Suresh Gopi
Koo

ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಕ್ಕೆ ಟಿಕೆಟ್​ ಪಡೆಯುವುದೇ ಹರಸಾಹಸ. ಅದಕ್ಕೆ ನೂರಾರು ಮಾದರಿಯಲ್ಲಿ ಪ್ರಭಾವ ಬೀರಬೇಕು. ಸಿಕ್ಕಿ ಗೆದ್ದರಂತೂ ಆಕಾಶಕ್ಕೆ ಮೂರೇ ಗೇಣು. ಗೆದ್ದ ಮೇಲೆ ಸಚಿವ ಸ್ಥಾನ ದೊರೆತರೆ ಅದು ಅವರ ಜೀವನ ಅತ್ಯುನ್ನತ ಸಾಧನೆಯಾಗುತ್ತದೆ. ರಾಜಕಾರಣಿಗಳ ಪರಿಸ್ಥಿತಿ ಈ ರೀತಿ ಇದೆ ಎಂಬುದು ರಾಜಕಾರಣದಲ್ಲಿ ಇಲ್ಲದವರಿಗೂ ಗೊತ್ತಿರುವ ಸಂಗತಿ. ಇಂಥದ್ದರಲ್ಲಿ ಮೊದಲ ಪ್ರಯತ್ನದಲ್ಲೇ ಗೆದ್ದು ಸಚಿವ ಸ್ಥಾನ ದೊರೆತರೆ ಅದನ್ನು ಒಲ್ಲೆ ಎನ್ನುವುದುಂಟೆ? ಆದರೆ, ಅಚ್ಚರಿ ಎಂಬಂತೆ ಕೇರಳದ ತ್ರಿಶ್ಯೂರ್​ ಸಂಸದ, ಸಿನಿಮಾ ನಟ ಸುರೇಶ್​ ಗೋಪಿ (Suresh Gopi) ಈ ರೀತಿಯ ಹೇಳಿಕೆಯೊಂದನ್ನು ನೀಡಿದ್ದಾರೆ. ಅದೂ ಮೋದಿ 3.0 ಸರ್ಕಾರದಲ್ಲಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಒಂದೇ ಗಂಟೆಯೊಳಗೆ. ನನಗೆ ಕೇಂದ್ರದಲ್ಲಿ ಸಚಿವ ಸ್ಥಾನದ ಜವಾಬ್ದಾರಿ ಬೇಡ, ನಾನು ತ್ರಿಶ್ಯೂರ್​ ಸಂಸದನಾಗಿಯೇ ಇರುತ್ತೇನೆ. ಅದಕ್ಕಿಂತಲೂ ಮಿಗಿಲಾಗಿ ನಾನು ಸಿನಿಮಾಗಳನ್ನು ಒಪ್ಪಿಕೊಂಡಿದ್ದು ಅದನ್ನು ಮುಗಿಸಬೇಕಾಗಿದೆ ಎಂದು ಹೇಳಿದ್ದಾರೆ.

ಮೋದಿ 3.0 ಕ್ಯಾಬಿನೆಟ್​ನಲ್ಲಿ ಭಾನುವಾರ ಕೇಂದ್ರ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಕೆಲವೇ ಗಂಟೆಗಳ ನಂತರ, ಸುರೇಶ್ ಗೋಪಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹುದ್ದೆಯಿಂದ ಮುಕ್ತರಾಗಲು ಮತ್ತು ತ್ರಿಶೂರ್ ಜನರಿಗಾಗಿ ಸಂಸದರಾಗಿ ಕೆಲಸ ಮಾಡಲು ಬಯಸುವುದಾಗಿ ಹೇಳಿದ್ದಾರೆ. ನಟ-ರಾಜಕಾರಣಿ ಸುರೇಶ್ ಗೋಪಿ ಅವರು ಚಲನಚಿತ್ರಗಳಿಗೆ ಸಹಿ ಹಾಕಿದ್ದಾರೆ. ಅವುಗಳನ್ನು ಮುಗಿಸಲೇಬೇಕು ಎಂದು ಹೇಳಿದ್ದಾರೆ.

ಸಂಸದನಾಗಿ ಕೆಲಸ ಮಾಡುವುದು ನನ್ನ ಗುರಿ. ನಾನು ಏನನ್ನೂ ಕೇಳಲಿಲ್ಲ. ನನಗೆ ಈ ಹುದ್ದೆ ಅಗತ್ಯವಿಲ್ಲ ಎಂದು ನಾನು ಹೇಳಿದ್ದೆ. ನಾನು ಶೀಘ್ರದಲ್ಲೇ ಹುದ್ದೆಯಿಂದ ಮುಕ್ತನಾಗುತ್ತೇನೆ ಎಂದು ನಾನು ಭಾವಿಸುತ್ತೇನೆ. ತ್ರಿಶೂರ್ ಮತದಾರರಿಗೆ ಯಾವುದೇ ಸಮಸ್ಯೆ ಇಲ್ಲ. ಅವರಿಗೆ ಅದು ತಿಳಿದಿದೆ ಮತ್ತು ಸಂಸದನಾಗಿ ನಾನು ಅವರಿಗಾಗಿ ಕಾರ್ಯನಿರ್ವಹಿಸುತ್ತೇನೆ. ನಾನು ನನ್ನ ಚಲನಚಿತ್ರಗಳನ್ನು ಮುಗಿಸಬೇಕು ಎಂದು ಪ್ರಮಾಣ ವಚನ ಸ್ವೀಕಾರ ಸಮಾರಂಭದ ನಂತರ ದೆಹಲಿಯಲ್ಲಿ ಮನೋರಮಾ ಜತೆ ಮಾತನಾಡಿದ ಸುರೇಶ್ ಗೋಪಿ ಹೇಳಿದ್ದಾರೆ.

ಸೋಮವಾರ ನಡೆಯಲಿರುವ ಕೇಂದ್ರ ಸಚಿವ ಸಂಪುಟದ ಮೊದಲ ನಿಗದಿತ ಸಭೆಗೆ ಮುಂಚಿತವಾಗಿ ಗೋಪಿ ಅವರ ಹೇಳಿಕೆ ಬಂದಿದೆ. ಗೋಪಿ ಮತ್ತು ಪಕ್ಷದ ಹಿರಿಯ ನಾಯಕ ಜಾರ್ಜ್ ಕುರಿಯನ್ ಅವರು ಕೇರಳದಿಂದ ಕೇಂದ್ರ ಸಚಿವ ಸಂಪುಟಕ್ಕೆ ಸೇರ್ಪಡೆಗೊಂಡಿದ್ದರು.

ಇದನ್ನೂ ಓದಿ: Election Commission : ಜುಲೈ 10ರಂದು 7 ರಾಜ್ಯಗಳ 13 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ

ಎಡರಂಗದ ಭದ್ರಕೋಟೆಯಾಗಿದ್ದ ತ್ರಿಶೂರ್ ಲೋಕಸಭಾ ಕ್ಷೇತ್ರದಲ್ಲಿ ಸುರೇಶ್ ಗೋಪಿ ಗೆಲುವು ಸಾಧಿಸಿದ್ದು, ಕೇರಳದ ಮೊದಲ ಬಿಜೆಪಿ ಸಂಸದರಾಗಿ ಇತಿಹಾಸ ನಿರ್ಮಿಸಿದ್ದಾರೆ. ಸುರೇಶ್ ಗೋಪಿ ಅವರು ಸಿಪಿಐನ ವಿ.ಎಸ್.ಸುನಿಲ್ ಕುಮಾರ್ ಅವರನ್ನು 74,000 ಮತಗಳ ಅಂತರದಿಂದ ಸೋಲಿಸಿದ್ದಾರೆ. ತ್ರಿಶೂರ್ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಕೆ ಮುರಳೀಧರನ್ ಅವರನ್ನು ಕಣಕ್ಕಿಳಿಸಿತ್ತು.

2024 ರ ಲೋಕಸಭಾ ಚುನಾವಣಾ ಪ್ರಚಾರದ ಸಮಯದಲ್ಲಿ, ಸುರೇಶ್ ಗೋಪಿ ‘ತ್ರಿಶೂರ್​ಗೆ ಕೇಂದ್ರ ಸಚಿವ ಸ್ಥಾನ, ಮೋದಿಯವರ ಗ್ಯಾರಂಟಿ’ ಎಂಬ ಘೋಷಣೆಯೊಂದಿಗೆ ಪ್ರಚಾರ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.

Continue Reading

ಪ್ರಮುಖ ಸುದ್ದಿ

Election Commission : ಜುಲೈ 10ರಂದು 7 ರಾಜ್ಯಗಳ 13 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ

Election Commission :ಜುಲೈ 10 ರಂದು ಉಪಚುನಾವಣೆ ನಡೆಯಲಿದ್ದು, ಜುಲೈ 13 ರಂದು ಮತ ಎಣಿಕೆ ನಡೆಯಲಿದೆ. ಜುಲೈ 15 ರೊಳಗೆ ಉಪಚುನಾವಣೆಗಳನ್ನು ಪೂರ್ಣಗೊಳಿಸಬೇಕು ಎಂದು ಚುನಾವಣಾ ಆಯೋಗ ಹೇಳಿದೆ. ಹಾಲಿ ಸದಸ್ಯರ ಮರಣ ಅಥವಾ ರಾಜೀನಾಮೆಯಿಂದ ಉಂಟಾಗಿರುವ ಖಾಲಿ ಸ್ಥಾನಗಳಿಗೆ ಉಪಚುನಾವಣೆ ನಡೆಯಲಿದೆ.

VISTARANEWS.COM


on

Election Commission
Koo

ಬೆಂಗಳೂರು: ಜುಲೈ 10, 2024 ರಂದು ಏಳು ರಾಜ್ಯಗಳ 13 ವಿಧಾನಸಭಾ ಸ್ಥಾನಗಳಿಗೆ ಉಪಚುನಾವಣೆ ನಡೆಯಲಿದೆ ಎಂದು ಭಾರತದ ಚುನಾವಣಾ ಆಯೋಗ (Election Commission ) ಘೋಷಿಸಿದೆ. ಬಿಹಾರ, ತಮಿಳುನಾಡು ಮತ್ತು ಮಧ್ಯಪ್ರದೇಶದ ತಲಾ ಒಂದು, ಪಶ್ಚಿಮ ಬಂಗಾಳದ ನಾಲ್ಕು ಮತ್ತು ಉತ್ತರಾಖಂಡ, ಪಂಜಾಬ್ ಮತ್ತು ಹಿಮಾಚಲ ಪ್ರದೇಶದ ತಲಾ ಎರಡು ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದೆ.

ಜುಲೈ 10 ರಂದು ಉಪಚುನಾವಣೆ ನಡೆಯಲಿದ್ದು, ಜುಲೈ 13 ರಂದು ಮತ ಎಣಿಕೆ ನಡೆಯಲಿದೆ. ಜುಲೈ 15 ರೊಳಗೆ ಉಪಚುನಾವಣೆಗಳನ್ನು ಪೂರ್ಣಗೊಳಿಸಬೇಕು ಎಂದು ಚುನಾವಣಾ ಆಯೋಗ ಹೇಳಿದೆ. ಹಾಲಿ ಸದಸ್ಯರ ಮರಣ ಅಥವಾ ರಾಜೀನಾಮೆಯಿಂದ ಉಂಟಾಗಿರುವ ಖಾಲಿ ಸ್ಥಾನಗಳಿಗೆ ಉಪಚುನಾವಣೆ ನಡೆಯಲಿದೆ.

ಉಪಚುನಾವಣೆಯ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ

  • ಅಧಿಸೂಚನೆ ಪ್ರಕಟಣೆ: ಜೂನ್ 14
  • ನಾಮಪತ್ರ ಸಲ್ಲಿಕೆಗೆ ಕೊನೆಯ ದಿನಾಂಕ: ಜೂನ್ 21
  • ನಾಮಪತ್ರ ಪರಿಶೀಲನೆ: ಜೂನ್ 24
  • ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕ: ಜೂನ್ 26
  • ಮತದಾನದ ದಿನಾಂಕ: ಜುಲೈ 10
  • ಫಲಿತಾಂಶ: ಜುಲೈ 13

ಇದನ್ನೂ ಓದಿ: Narendra Modi 3.0 : ಅಧಿಕಾರ ಸ್ವೀಕರಿಸಿದ ಮರುದಿನವೇ ಮೊದಲ ಫೈಲ್​ಗೆ ಸಹಿ ಹಾಕಿದ ಪ್ರಧಾನಿ ಮೋದಿ; ಯಾವ ಕಡತ ಅದು?

ಜುಲೈ 10 ರಂದು ಉಪಚುನಾವಣೆ ನಡೆಯಲಿರುವ ಕ್ಷೇತ್ರಗಳ ಪಟ್ಟಿ

ಬಿಹಾರ: ಬಿಮಾ ಭಾರತಿ ರಾಜೀನಾಮೆಯಿಂದ ತೆರವಾಧ ರುಪೌಲಿ ಕ್ಷೇತ್ರ
ಪಶ್ಚಿಮ ಬಂಗಾಳ: ಶ್ರೀ ಕೃಷ್ಣ ಕಲ್ಯಾಣಿ ರಾಜೀನಾಮೆಯಿಂದ ತೆರವಾದ ರಾಯ್​ಗಂಜ್ ಸ್ಥಾನ
ಪಶ್ಚಿಮ ಬಂಗಾಳ: ಮುಕುಟ್​​ ಮಣಿ ಅಧಿಕಾರಿ ರಾಜೀನಾಮೆಯಿಂದ ತೆರವಾದ ರಣಘಾಟ್ ದಕ್ಷಿಣ ಕ್ಷೇತ್ರ
ಪಶ್ಚಿಮ ಬಂಗಾಳ: ಬಿಸ್ವಜಿತ್ ದಾಸ್ ರಾಜೀನಾಮೆಯಿಂದ ಬಾಗ್ಡಾ ಸ್ಥಾನ
ಪಶ್ಚಿಮ ಬಂಗಾಳ: ಸಾಧನ್ ಪಾಂಡೆ ನಿಧನದಿಂದ ತೆರವಾದ ಮಣಿಕ್​ತಾಲ್​ ಕ್ಷೇತ್ರ
ತಮಿಳುನಾಡು: ತಿರು ಎನ್​ ಪುಗಳೆಂದಿ ನಿಧನದಿಂದ ತೆರವಾದ ವಿಕ್ರಾವಂಡಿ ಕ್ಷೇತ್ರ
ಮಧ್ಯಪ್ರದೇಶ: ಕಮಲೇಶ್ ಪ್ರತಾಪ್ ಶಾ ರಾಜೀನಾಮೆಯಿಂದಾಗಿ ಅಮರವಾರಾ ಸ್ಥಾನ
ಉತ್ತರಾಖಂಡ: ರಾಜೇಂದ್ರ ಸಿಂಗ್ ಭಂಡಾರಿ ರಾಜೀನಾಮೆಯಿಂದಾಗಿ ಬದರೀನಾಥ್ ಸ್ಥಾನ
ಉತ್ತರಾಖಂಡ: ಸರ್ವತ್ ಕರೀಂ ಅನ್ಸಾರಿ ಅವರ ನಿಧನದಿಂದಾಗಿ ಮಂಗಳೌರ್ ಕ್ಷೇತ್ರ
ಪಂಜಾಬ್​: ಶೀತಲ್ ಅಂಗುರಾ ಅವರ ರಾಜೀನಾಮೆಯಿಂದ ತೆರವಾದ ಪಂಜಾಬ್ ಜಲಂಧರ್ ಪಶ್ಚಿಮ ಸ್ಥಾನ
ಹಿಮಾಚಲ ಪ್ರದೇಶ: ಹೋಶ್ಯಾರ್ ಸಿಂಗ್ ಅವರ ರಾಜೀನಾಮೆಯಿಂದಾಗಿ ಡೆಹ್ರಾಡೂನ್ ಕ್ಷೇತ್ರ
ಹಿಮಾಚಲ ಪ್ರದೇಶ: ಆಶಿಶ್ ಶರ್ಮಾ ಅವರ ರಾಜೀನಾಮೆಯಿಂದಾಗಿ ತೆರವಾದ ಹಮೀರ್ಪುರ ಸ್ಥಾನ
ಹಿಮಾಚಲ ಪ್ರದೇಶ: ಕೆ.ಎಲ್.ಠಾಕೂರ್ ಅವರ ರಾಜೀನಾಮೆಯಿಂದಾಗಿ ತೆರವಾದ ನಲಘರ್ ಸ್ಥಾನ

ಚುನಾವಣೆಗೆ ನಡೆಯುವ ವಿಧಾನಸಭಾ ಕ್ಷೇತ್ರದ ಸಂಪೂರ್ಣ ಅಥವಾ ಯಾವುದೇ ಭಾಗವನ್ನು ಒಳಗೊಂಡಿರುವ ಜಿಲ್ಲೆಗಳಲ್ಲಿ ಮಾದರಿ ನೀತಿ ಸಂಹಿತೆ (ಎಂಸಿಸಿ) ತಕ್ಷಣದಿಂದ ಜಾರಿಗೆ ಬರಲಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.ಜುಲೈ 15 ರೊಳಗೆ ಉಪಚುನಾವಣೆಗಳನ್ನು ಪೂರ್ಣಗೊಳಿಸಬೇಕು ಎಂದು ಅದು ಹೇಳಿದೆ.

Continue Reading
Advertisement
Suspension Order tumkur News
ತುಮಕೂರು3 mins ago

Suspension Order : ಕ್ರಿಮಿನಲ್‌ಗಳಿಗೆ ಮಾಹಿತಿ ಸೋರಿಕೆ; ಐವರು ಪೊಲೀಸ್‌ ಸಿಬ್ಬಂದಿ ಅಮಾನತು

Niveditha Gowda Chandan Shetty Divorce Case
ಸಿನಿಮಾ11 mins ago

Niveditha Gowda: ಸೃಜನ್‌, ಸಂಬರಗಿ, ಜೀವನಾಂಶ, ಮಗು; ಎಲ್ಲದಕ್ಕೂ ಸ್ಪಷ್ಟನೆ ಕೊಟ್ಟ ಚಂದನ್‌-ನಿವೇದಿತಾ!

Yuva Rajkumar
ಸಿನಿಮಾ13 mins ago

Yuva Rajkumar: ಯುವ-ಶ್ರೀದೇವಿ ಡಿವೋರ್ಸ್‌ ಬಗ್ಗೆ ಮೊದಲೇ ಗೊತ್ತಿತ್ತು; ಶ್ರೀದೇವಿ ತಂದೆ ಭೈರಪ್ಪ ಹೇಳಿಕೆ

K S Bhagavan
ಪ್ರಮುಖ ಸುದ್ದಿ18 mins ago

K S Bhagavan: ರಾಮ ದಶರಥನ ಮಗನೇ ಅಲ್ಲ, ಪುರೋಹಿತನಿಗೆ ಹುಟ್ಟಿದವನು: ಪ್ರೊ. ಭಗವಾನ್ ವಿವಾದಿತ ಹೇಳಿಕೆ

Karnataka weather Forecast
ಮಳೆ36 mins ago

Karnataka Weather : ಭಾರಿ ಮಳೆಗೆ ಮನೆ ಗೋಡೆ ಕುಸಿದು ಎಮ್ಮೆಗಳು ಸಾವು; ಆಕಳಿನ ಜೀವ ತೆಗೆದ ವಿದ್ಯುತ್‌ ತಂತಿ

IND vs PAK
ಕ್ರೀಡೆ51 mins ago

IND vs PAK : ಭಾರತ ವಿರುದ್ಧ ಸೋಲುವುದಕ್ಕಾಗಿ ಮ್ಯಾಚ್ ಫಿಕ್ಸಿಂಗ್ ಮಾಡಿದ ಪಾಕ್​ ಆಟಗಾರ; ಆರೋಪ

Tshering Tobgay
ದೇಶ52 mins ago

Tshering Tobgay: ಮೋದಿ ನನ್ನ ಗುರು, ದೊಡ್ಡಣ್ಣ;‌ ಭೂತಾನ್‌ ಪ್ರಧಾನಿ ತ್ಶೆರಿಂಗ್‌ ತೋಬ್ಗೆ ಬಹುಪರಾಕ್!

Sambhavami Yuge Yuge in june 21st Release
ಸಿನಿಮಾ1 hour ago

Kannada New Movie: ಹಳ್ಳಿಗಳನ್ನು ಉಳಿಸುವ ಹುಡುಗರ ಕಥೆ ʻಸಂಭವಾಮಿ ಯುಗೇ ಯುಗೇʼ: ಇದೇ ಜೂನ್‌ 21ಕ್ಕೆ ತೆರೆಗೆ!

Prajwal Revanna Case
ಪ್ರಮುಖ ಸುದ್ದಿ1 hour ago

Prajwal Revanna Case: ಪ್ರಜ್ವಲ್ ರೇವಣ್ಣಗೆ 14 ದಿನ ನ್ಯಾಯಾಂಗ ಬಂಧನ; ಪರಪ್ಪನ ಅಗ್ರಹಾರ ಜೈಲಿಗೆ ಶಿಫ್ಟ್‌

Noor Malabika Das
ಸಿನಿಮಾ1 hour ago

Noor Malabika Das: ಕಾಜೋಲ್‌ ಜತೆ ನಟಿಸಿದ್ದ, ದಿ ಟ್ರಯಲ್‌ ಖ್ಯಾತಿಯ ಬಾಲಿವುಡ್‌ ನಟಿ ದಾಸ್‌ ಆತ್ಮಹತ್ಯೆ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka weather Forecast
ಮಳೆ36 mins ago

Karnataka Weather : ಭಾರಿ ಮಳೆಗೆ ಮನೆ ಗೋಡೆ ಕುಸಿದು ಎಮ್ಮೆಗಳು ಸಾವು; ಆಕಳಿನ ಜೀವ ತೆಗೆದ ವಿದ್ಯುತ್‌ ತಂತಿ

Karnataka weather Forecast
ಮಳೆ3 days ago

Karnataka weather : ಮಳೆಯಲ್ಲೆ ತಪಸ್ಸಿಗೆ ಕುಳಿತ ವೃದ್ಧ; ಇನ್ನೊಂದು ವಾರ ನಾನ್‌ ಸ್ಟಾಪ್‌ ವರುಣನ ಅಬ್ಬರ

Sigandur launch
ಶಿವಮೊಗ್ಗ3 days ago

Sigandur launch: ಸಿಗಂದೂರು ಲಾಂಚ್‌ನಲ್ಲಿ ಭಾರಿ ವಾಹನಗಳಿಗೆ ನಿರ್ಬಂಧ

Karnataka Rain
ಮಳೆ4 days ago

Karnataka Rain : ಭಾರಿ ಮಳೆಗೆ ಮರ ಬಿದ್ದು ಮೇಕೆಗಳು ಸಾವು; ಸಿಡಿಲಿಗೆ ಎಲೆಕ್ಟ್ರಿಕ್‌ ಅಂಗಡಿ ಸುಟ್ಟು ಭಸ್ಮ

Lok Sabha Election Result 2024 Live
ದೇಶ6 days ago

Lok Sabha Election Result 2024 Live: ಲೋಕಸಭೆ ಚುನಾವಣೆ ಫಲಿತಾಂಶದ ಲೈವ್‌ ಇಲ್ಲಿ ವೀಕ್ಷಿಸಿ

Karnataka Rain
ಮಳೆ1 week ago

Karnataka Rain : 133 ವರ್ಷದ ರೆಕಾರ್ಡ್ ಬ್ರೇಕ್ ಮಾಡಿದ ʻಬೆಂಗಳೂರು ಮಳೆʼ

Snake Rescue Snakes spotted in heavy rain
ಮಳೆ1 week ago

Snake Rescue: ಮಳೆ ನೀರಿನಲ್ಲಿ ಹರಿದು ಬಂದು ಬೈಕ್‌ನಲ್ಲಿ ಸೇರಿಕೊಂಡ ಹಾವು; ಮನೆಗಳಲ್ಲೂ ಪ್ರತ್ಯಕ್ಷ

Karnataka Rain
ಮಳೆ1 week ago

Karnataka Rain : ವೀಕೆಂಡ್‌ ಮೋಜಿಗೆ ವರುಣ ಅಡ್ಡಿ; ಭಾನುವಾರ ಸಂಜೆಗೆ ಮಳೆ ಕಾಟ

Liquor ban
ಬೆಂಗಳೂರು1 week ago

Liquor Ban : ಮುಂದಿನ ಏಳು ದಿನಗಳಲ್ಲಿ ನಾಲ್ಕೂವರೆ ದಿನ ಬಾರ್ ಕ್ಲೋಸ್; ಎಣ್ಣೆ ಸಿಗೋದು ಯಾವ ದಿನ?

Assault Case in Shivamogga
ಕ್ರೈಂ2 weeks ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

ಟ್ರೆಂಡಿಂಗ್‌