Clash In JNU | ಜೆಎನ್‌ಯುನಲ್ಲಿ 2 ಗುಂಪುಗಳ ಮಧ್ಯೆ ಘರ್ಷಣೆ, ದೊಣ್ಣೆ ಹಿಡಿದು ಬಡಿದಾಟ, ಇಬ್ಬರಿಗೆ ಗಾಯ - Vistara News

ದೇಶ

Clash In JNU | ಜೆಎನ್‌ಯುನಲ್ಲಿ 2 ಗುಂಪುಗಳ ಮಧ್ಯೆ ಘರ್ಷಣೆ, ದೊಣ್ಣೆ ಹಿಡಿದು ಬಡಿದಾಟ, ಇಬ್ಬರಿಗೆ ಗಾಯ

ದೆಹಲಿಯಲ್ಲಿರುವ ಜವಾಹರ ಲಾಲ್‌ ನೆಹರು ವಿಶ್ವವಿದ್ಯಾಲಯದಲ್ಲಿ ಏಕಾಏಕಿ ಎರಡು ಗುಂಪುಗಳ ಮಧ್ಯೆ ಗಲಾಟೆ (Clash In JNU) ನಡೆದಿದೆ. ಪೊಲೀಸರು ಬಂದ ಬಳಿಕವೇ ಪರಿಸ್ಥಿತಿ ತಿಳಿಯಾಗಿದೆ.

VISTARANEWS.COM


on

Clashes In JNU
ದೊಣ್ಣೆ ಹಿಡಿದು ಓಡಾಡಿದ ವಿದ್ಯಾರ್ಥಿಗಳು.
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿರುವ ಜವಾಹರ ಲಾಲ್‌ ನೆಹರು ವಿಶ್ವವಿದ್ಯಾಲಯವು (JNU) ಸದಾ ಒಂದಿಲ್ಲೊಂದು ವಿಷಯಗಳಿಂದ ಸುದ್ದಿಯಲ್ಲಿರುತ್ತದೆ. ಈಗ ಮತ್ತೊಂದು ವಿಷಯದ ಮೂಲಕ ವಿವಿ ಸುದ್ದಿಯಾಗುತ್ತಿದೆ. ವಿಶ್ವವಿದ್ಯಾಲಯದ ಆವರಣದಲ್ಲಿ ಎರಡು ಗುಂಪುಗಳ ಮಧ್ಯೆ ಸಂಘರ್ಷ (Clash In JNU) ಉಂಟಾಗಿದ್ದು, ವಿದ್ಯಾರ್ಥಿಗಳು ದೊಣ್ಣೆಗಳಿಂದ ಬಡಿದಾಡಿಕೊಂಡಿದ್ದಾರೆ. ಗಲಾಟೆಯ ವಿಡಿಯೊ ಸಹ ವೈರಲ್‌ ಆಗಿದೆ.

ಶಾಂತವಾಗಿದ್ದ ಕ್ಯಾಂಪಸ್‌ನಲ್ಲಿ ಏಕಾಏಕಿ ಗಲಾಟೆ ನಡೆದಿದೆ. ಎರಡು ಗುಂಪುಗಳ ಮಧ್ಯೆ ನಡುವೆ ನಡೆದ ಗಲಾಟೆಯಲ್ಲಿ ಇಬ್ಬರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಗಲಾಟೆಗೆ ನಿಖರ ಮಾಹಿತಿ ತಿಳಿದುಬಂದಿಲ್ಲ. ಸುದ್ದಿ ತಿಳಿಯುತ್ತಲೇ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ.

“ಪ್ರಾಥಮಿಕ ಮಾಹಿತಿ ಪ್ರಕಾರ ಎರಡು ಗುಂಪುಗಳ ಮಧ್ಯೆ ವೈಯಕ್ತಿಕ ಕಾರಣಕ್ಕಾಗಿ ಗಲಾಟೆ ನಡೆದಿದೆ. ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದ್ದು, ಹೆಚ್ಚಿನ ಭದ್ರತೆ ಒದಗಿಸಲಾಗಿದೆ. ಯಾರೂ ದೂರು ನೀಡದ ಕಾರಣ ಪ್ರಕರಣ ದಾಖಲಿಸಿಕೊಂಡಿಲ್ಲ. ಹಾಗಾಗಿ, ವಿವಿ ಕ್ಯಾಂಪಸ್‌ನಲ್ಲಿ ಪರಿಸ್ಥಿತಿ ತಹಬಂದಿಗೆ ಬಂದಿದೆ” ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ | ಆಳಂದದ ಕೇಂದ್ರೀಯ ವಿವಿಯಲ್ಲಿ ವಿದ್ಯಾರ್ಥಿಗಳ ಮಾರಾಮಾರಿ, ಸಾರ್ವಜನಿಕರ ಆತಂಕ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

Lok Sabha Election 2024

RSS V/S BJP: ಮೋಹನ್ ಭಾಗವತ್ ʼಅಹಂಕಾರʼದ ಹೇಳಿಕೆ ಮೋದಿ ವಿರುದ್ಧವೆ? ಆರ್‌ಎಸ್‌ಎಸ್ ಸ್ಪಷ್ಟನೆ ಇದು!

ಆರ್‌ಎಸ್‌ಎಸ್ ಮತ್ತು ಬಿಜೆಪಿ (RSS V/S BJP) ನಡುವೆ ಯಾವುದೇ ಬಿರುಕು ಇಲ್ಲ. ಮೋಹನ್ ಭಾಗವತ್ ಅವರು ನಿಜವಾದ ಸೇವಕ ಎಂದಿಗೂ ಅಹಂಕಾರ ಪಡುವುದಿಲ್ಲ ಎಂದು ಹೇಳಿರುವುದು ಒಂದು ಸಂದೇಶವಾಗಿದೆ ಎಂದು ಆರ್‌ಎಸ್‌ಎಸ್‌ ಹೇಳಿದೆ. 2014 ಮತ್ತು 2019ರ ಲೋಕಸಭಾ ಚುನಾವಣೆಯ ಅನಂತರ ಭಾಗವತ್ ಅವರು ನೀಡಿದ ಭಾಷಣಕ್ಕೆ ಹೆಚ್ಚಿನ ವ್ಯತ್ಯಾಸವಿಲ್ಲ ಎಂದು ಆರ್‌ಎಸ್‌ಎಸ್‌ ಹೇಳಿದೆ.

VISTARANEWS.COM


on

By

RSS V/S BJP
Koo

ನವದೆಹಲಿ: ಲೋಕಸಭೆ ಚುನಾವಣೆಯಲ್ಲಿ (loksabha election) ಕೇಸರಿ ಪಕ್ಷವು (BJP) ಸ್ಪಷ್ಟ ಬಹುಮತದ ಕೊರತೆಯನ್ನು ಅನುಭವಿಸಿದ ಅನಂತರ ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಮುಖ್ಯಸ್ಥ ಮೋಹನ್ ಭಾಗವತ್ (Mohan Bhagwat) ಸೇರಿದಂತೆ ಹಲವು ಆರ್ ಎಸ್ ಎಸ್ ನಾಯಕರು ನೀಡಿರುವ ಹೇಳಿಕೆಗಳು ಪ್ರಧಾನಿ (PM) ನರೇಂದ್ರ ಮೋದಿ (narendra modi) ಅಥವಾ ಬಿಜೆಪಿಯನ್ನು ಗುರಿಯಾಗಿಸಿಕೊಂಡಿವೆ ಎಂಬ ಬಗ್ಗೆ ಭಾರಿ ಚರ್ಚೆ ನಡೆಯುತ್ತಿದೆ. ಈ ನಡುವೆ, ಈ ಚರ್ಚೆಗಳಿಗೆ ಆರ್‌ಎಸ್‌ಎಸ್‌ ಸ್ಪಷ್ಟನೆ ನೀಡಿದೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಮತ್ತು ಆರ್ ಆರ್ ಎಸ್ ಎಸ್ ನಡುವೆ ಉಂಟಾಗಬಹುದಾದ ಬಿರುಕುಗಳ ಸಂಭಾವ್ಯತೆಯನ್ನು ಹೋಗಲಾಡಿಸುವ ಪ್ರಯತ್ನವನ್ನು ಆರ್‌ಎಸ್‌ಎಸ್ ಮಾಡಿದೆ. ಆರ್ ಎಸ್ ಎಸ್ ಮತ್ತು ಬಿಜೆಪಿ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಆಗಸ್ಟ್ 31ರಿಂದ ಕೇರಳದ ಪಾಲಕ್ಕಾಡ್ ಜಿಲ್ಲೆಯಲ್ಲಿ ಆರ್ ಎಸ್ ಎಸ್ ತನ್ನ ಅಂಗಸಂಸ್ಥೆಗಳಾದ ಸಂಘಟನೆಯೊಂದಿಗೆ ನಡೆಸುವ ಮೂರು ದಿನಗಳ ವಾರ್ಷಿಕ ಸಮನ್ವಯ ಸಭೆಯಲ್ಲಿ ಬಿಜೆಪಿ ಹಿರಿಯ ನಾಯಕರು ಭಾಗವಹಿಸಲಿದ್ದಾರೆ. ಬಿಜೆಪಿ ಅಧ್ಯಕ್ಷರು ಸೇರಿದಂತೆ ಬಿಜೆಪಿಯ ಹಿರಿಯ ನಾಯಕರು ಸಭೆಗೆ ಹಾಜರಾಗುವ ನಿರೀಕ್ಷೆಯಿದೆ ಎಂದು ಆರ್ ಎಸ್ ಎಸ್ ಮೂಲಗಳು ತಿಳಿಸಿವೆ.

ಆರ್‌ಎಸ್‌ಎಸ್ ಮತ್ತು ಬಿಜೆಪಿ ನಡುವೆ ಯಾವುದೇ ಬಿರುಕು ಇಲ್ಲ. ಮೋಹನ್ ಭಾಗವತ್ ಅವರು ನಿಜವಾದ ಸೇವಕ ಎಂದಿಗೂ ಅಹಂಕಾರ ಪಡುವುದಿಲ್ಲ ಎಂದು ಹೇಳಿರುವುದು ಒಂದು ಸಂದೇಶವಾಗಿದೆ. 2014 ಮತ್ತು 2019ರ ಲೋಕಸಭಾ ಚುನಾವಣೆಯ ಅನಂತರ ಭಾಗವತ್ ಅವರು ನೀಡಿದ ಭಾಷಣಕ್ಕೆ ಹೆಚ್ಚಿನ ವ್ಯತ್ಯಾಸವಿಲ್ಲ. ಯಾವುದೇ ಸಂದರ್ಭವಾಗಿರಲಿ ಅದು ರಾಷ್ಟ್ರೀಯ ಚುನಾವಣೆಯಂತಹ ಪ್ರಮುಖ ಘಟನೆಯನ್ನು ಉಲ್ಲೇಖಿಸುತ್ತದೆ. ಗೊಂದಲವನ್ನು ಸೃಷ್ಟಿಸಲು ಅದನ್ನು ತಪ್ಪಾಗಿ ಅರ್ಥೈಸಲಾಗಿದೆ. ಭಾಗವತ್ ಅವರು ನೀಡಿರುವ ʼದುರಹಂಕಾರʼ ಕುರಿತ ಹೇಳಿಕೆಯು ಪ್ರಧಾನಿ ನರೇಂದ್ರ ಮೋದಿ ಅಥವಾ ಯಾವುದೇ ಬಿಜೆಪಿ ನಾಯಕರನ್ನು ಉದ್ದೇಶಿಸಿಲ್ಲ ಎಂದು ಆರ್ ಎಸ್ ಎಸ್ ಮೂಲಗಳು ತಿಳಿಸಿವೆ.

ತಮ್ಮ ಭಾಷಣದಲ್ಲಿ ಭಾಗವತ್ ಅವರು ಒಂದು ವರ್ಷದ ಅನಂತರವೂ ಮಣಿಪುರದಲ್ಲಿ ಶಾಂತಿ ಸ್ಥಾಪನೆ ಆಗದಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು. ಫಲಿತಾಂಶಗಳು ಪ್ರಕಟವಾದ ಅನಂತರ ಚುನಾವಣಾ ಪ್ರಕ್ರಿಯೆಗಳ ಮೇಲೆ ಅನಗತ್ಯವಾಗಿ ಚಿಂತಿಸುವ ಬದಲು ಮುಂದುವರಿಯುವತ್ತ ಗಮನ ಹರಿಸುವಂತೆ ಒತ್ತಾಯಿಸಿದ್ದರು.

ಬಿಜೆಪಿ ಮತ್ತು ಪ್ರಧಾನಿ ಮೋದಿಯನ್ನು ಟೀಕಿಸಲು ವಿರೋಧ ಪಕ್ಷದ ನಾಯಕರು ಅವರ ಈ ಹೇಳಿಕೆಗಳನ್ನು ಬಳಸಿಕೊಂಡರು. ಇದರಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಕೂಡ ಪ್ರತಿಕ್ರಿಯಿಸಿ ಪ್ರಧಾನ ಮಂತ್ರಿಯವರಿಗೆ ಆತ್ಮಸಾಕ್ಷಿ ಇದ್ದಿದ್ದರೆ ಮಣಿಪುರದ ಜನರ ಬೇಡಿಕೆಗಳನ್ನು ಆಲಿಸಲು ಹೋಗುತ್ತಿದ್ದರು ಎಂದು ಹೇಳಿದ್ದಾರೆ. ಈ ಟೀಕೆಗಳಿಗೆ ಪ್ರತಿಕ್ರಿಯಿಸಿದ ಆರ್‌ಎಸ್‌ಎಸ್, ಗೊಂದಲವನ್ನು ಬಿತ್ತುವ ರಾಜಕೀಯ ಪ್ರೇರಿತ ಪ್ರಯತ್ನ ಇದು ಎಂದು ಹೇಳಿ ತಳ್ಳಿಹಾಕಿವೆ.

ಬಿಜೆಪಿಯ ಚುನಾವಣಾ ಕಾರ್ಯವೈಖರಿಯನ್ನು ಟೀಕಿಸಿದ್ದ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಇಂದ್ರೇಶ್ ಕುಮಾರ್ ಅವರು ಚುನಾವಣಾ ಫಲಿತಾಂಶಗಳನ್ನು ಉಲ್ಲೇಖಿಸಿ, “ಸೊಕ್ಕಿನವರನ್ನು ಭಗವಾನ್‌ ಶ್ರೀರಾಮ 241 ಸ್ಥಾನಗಳಲ್ಲಿ ನಿಲ್ಲಿಸಿದ್ದಾನೆ” ಎಂದು ಹೇಳಿದ್ದು ಮತ್ತಷ್ಟು ವಿವಾದ ಹೆಚ್ಚಿಸಿತ್ತು. ಬಳಿಕ ಅವರು ಬಿಜೆಪಿಯ ಚುನಾವಣಾ ಯಶಸ್ಸು ಮತ್ತು ಪ್ರಧಾನಿ ಮೋದಿಯವರ ಮರುಚುನಾವಣೆಯಿಂದ ದೇಶವು ಸಂತೃಪ್ತವಾಗಿದೆ ಎಂದು ತಮ್ಮ ಹೇಳಿಕೆಯನ್ನು ಬದಲಾಯಿಸಿಕೊಂಡರು.

ಭಾಗವತ್ ಅವರ ಭಾಷಣದ ಮೇಲಿನ ಚರ್ಚೆಗೆ ಸಂಬಂಧಿಸಿ ಸ್ಪಷ್ಟೀಕರಣಕ್ಕಾಗಿ ಅಧಿಕೃತ ಸಂಘದ ಪದಾಧಿಕಾರಿಗಳನ್ನು ಉಲ್ಲೇಖಿಸಲು ಕುಮಾರ್ ಸಲಹೆ ನೀಡಿದ್ದಾರೆ. ಕುಮಾರ್ ಅವರ ಅಭಿಪ್ರಾಯಗಳು ವೈಯಕ್ತಿಕ ಮತ್ತು ಸಾಂಸ್ಥಿಕ ನಿಲುವನ್ನು ಪ್ರತಿಬಿಂಬಿಸುವುದಿಲ್ಲ ಎಂದು ಆರ್‌ಎಸ್‌ಎಸ್ ಪುನರುಚ್ಚರಿಸಿದೆ.

ಬಿಜೆಪಿಯ ಚುನಾವಣಾ ಕಾರ್ಯತಂತ್ರದಲ್ಲಿ ಆರ್‌ಎಸ್‌ಎಸ್ ತೊಡಗಿಸಿಕೊಂಡಿರುವ ಕುರಿತು ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಆರ್‌ಎಸ್‌ಎಸ್ ಅಧಿಕಾರಿಯೊಬ್ಬರು, ನೇರ ಪ್ರಚಾರಕ್ಕಿಂತ ಜಾಗೃತಿ ಮೂಡಿಸುವಲ್ಲಿ ತಮ್ಮ ಪಾತ್ರವನ್ನು ಒತ್ತಿ ಹೇಳಿದರು. ದೇಶದಾದ್ಯಂತ ನಾವು ದೆಹಲಿಯಲ್ಲಿಯೇ ಒಂದು ಲಕ್ಷಕ್ಕೂ ಹೆಚ್ಚು ಸಣ್ಣ ಗುಂಪು ಸಭೆಗಳನ್ನು ಒಳಗೊಂಡಂತೆ ಹಲವಾರು ಸಭೆಗಳನ್ನು ನಡೆಸಿದ್ದೇವೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: Indresh Kumar: ರಾಮ ಭಕ್ತರು ಅಧಿಕಾರದಲ್ಲಿದ್ದಾರೆ, ರಾಮ ವಿರೋಧಿಗಳು ಸೋತಿದ್ದಾರೆ; ಆರ್‌ಎಸ್‌ಎಸ್‌ ನಾಯಕನ ಹೊಸ ಹೇಳಿಕೆ

ಕೇಂದ್ರ ಸಚಿವ ಸಂಪುಟಕ್ಕೆ ಜೆ.ಪಿ. ನಡ್ಡಾ ಸೇರ್ಪಡೆಗೊಂಡ ಅನಂತರ ಹೊಸ ಬಿಜೆಪಿ ಅಧ್ಯಕ್ಷರನ್ನು ನೇಮಿಸಬೇಕಿದೆ. ಆರ್‌ಎಸ್‌ಎಸ್ ಸಮಾಲೋಚನಾ ಪ್ರಕ್ರಿಯೆಯಲ್ಲಿ ತಮ್ಮ ನಿರಂತರ ಪಾಲ್ಗೊಳ್ಳುವಿಕೆಯನ್ನು ಬಿಜೆಪಿ ದೃಢಪಡಿಸಿವೆ.

Continue Reading

ಕ್ರೀಡೆ

Paris Olympics 2024: ಒಲಿಂಪಿಕ್ಸ್ ಆಯೋಜನೆ; ಫ್ರಾನ್ಸ್​ ಅಧ್ಯಕ್ಷರಿಗೆ ಶುಭ ಕೋರಿದ ಪ್ರಧಾನಿ ಮೋದಿ

Paris Olympics 2024: ಜಿ-7 ಶೃಂಗಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಮೋದಿ, “ತಂತ್ರಜ್ಞಾನದ ಅಳವಡಿಕೆ ಜತೆಗೆ ಮಾನವ ಕೇಂದ್ರಿತವಾಗಿಯೇ ಏಳಿಗೆ ಹೊಂದಲು ಭಾರತ ಆದ್ಯತೆ ನೀಡುತ್ತಿದೆ. ಜಾಗತಿಕವಾಗಿ ತಂತ್ರಜ್ಞಾನದ ಜತೆಗೇ ಮಾನವ ಕೇಂದ್ರಿತ ಅಭಿವೃದ್ಧಿಯು ಪ್ರಮುಖ ವಿಷಯವಾಗಬೇಕಿದೆ” ಎಂದು ಪ್ರತಿಪಾದಿಸಿದರು.

VISTARANEWS.COM


on

Paris Olympics 2024
Koo

ಬಾರಿ(ಇಟಲಿ): ಇಟಲಿಯಲ್ಲಿ ನಡೆಯುತ್ತಿರುವ ಜಿ7 ಶೃಂಗಸಭೆಯಲ್ಲಿ (G7 Summit Italy) ಪಾಲ್ಗೊಂಡಿರುವ ಪ್ರಧಾನಿ ನರೇಂದ್ರ ಮೋದಿ(Narendra Modi) ಅವರು ಫ್ರಾನ್ಸ್​ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್‌(Emmanuel Macron)​ ಅವರನ್ನು ಭೇಟಿಯಾದ ವೇಳೆ ಪ್ಯಾರಿಸ್​ ಒಲಿಂಪಿಕ್ಸ್ ಆಯೋಜಿಸುತ್ತಿರುವುದಕ್ಕೆ ಶುಭ ಹಾರೈಸಿದ್ದಾರೆ. ಟೂರ್ನಿ ಅತ್ಯಂತ ಯಶಸ್ವಿಯಾಗಿ ಸಾಗಲಿ ಎಂದು ಮೋದಿ ಹಾರೈಸಿದ್ದಾರೆ. ಉಭಯ ನಾಯಕರು ಮಾತುಕತೆ ನಡೆಸಿದ ಫೋಟೊವನ್ನು ಮೋದಿ ಅವರು ತಮ್ಮ ಅಧಿಕೃತ ಟ್ವಿಟರ್​ ಎಕ್ಸ್​ನಲ್ಲಿ ಹಂಚಿಕೊಂಡಿದ್ದಾರೆ.​ ಬಹುನಿರೀಕ್ಷಿತ ಪ್ಯಾರಿಸ್​ ಒಲಿಂಪಿಕ್ಸ್​(Paris Olympics 2024) ಜುಲೈ 26ರಿಂದ ಆರಂಭಗೊಳ್ಳಲಿದೆ. ಆಗಸ್ಟ್​ 11ರ ತನಕ ಈ ಟೂರ್ನಿ ಸಾಗಲಿದೆ.

ಭಾರತವು ಜಿ7 ರಾಷ್ಟ್ರಗಳ ಒಕ್ಕೂಟದ ಸದಸ್ಯ ರಾಷ್ಟ್ರವಾಗಿರದಿದ್ದರೂ ಜಾರ್ಜಿಯಾ ಮೆಲೋನಿ ಅವರು ನರೇಂದ್ರ ಮೋದಿ ಅವರನ್ನು ವಿಶೇಷವಾಗಿ ಆಹ್ವಾನಿಸಿದ್ದರು. ಮೋದಿ ಅವರು ಶುಕ್ರವಾರ ಫ್ರಾನ್ಸ್‌ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್‌, ಬ್ರಿಟನ್‌ ಪ್ರಧಾನಿ ರಿಷಿ ಸುನಕ್‌ ಸೇರಿ ಹಲವು ನಾಯಕರೊಂದಿಗೆ ಮಾತುಕತೆ ನಡೆಸಿದ್ದಾರೆ. ಶನಿವಾರವೂ ಹಲವು ನಾಯಕರೊಂದಿಗೆ ಮೋದಿ ಅವರು ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ.

ತಂತ್ರಜ್ಞಾನ ಜತೆಗೆ ಮಾನವ ಕೇಂದ್ರಿತ ಏಳಿಗೆಗೆ ಭಾರತ ಆದ್ಯತೆ


ಜಿ-7 ಶೃಂಗಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಮೋದಿ, “ತಂತ್ರಜ್ಞಾನದ ಅಳವಡಿಕೆ ಜತೆಗೆ ಮಾನವ ಕೇಂದ್ರಿತವಾಗಿಯೇ ಏಳಿಗೆ ಹೊಂದಲು ಭಾರತ ಆದ್ಯತೆ ನೀಡುತ್ತಿದೆ. ಜಾಗತಿಕವಾಗಿ ತಂತ್ರಜ್ಞಾನದ ಜತೆಗೇ ಮಾನವ ಕೇಂದ್ರಿತ ಅಭಿವೃದ್ಧಿಯು ಪ್ರಮುಖ ವಿಷಯವಾಗಬೇಕಿದೆ” ಎಂದು ಪ್ರತಿಪಾದಿಸಿದರು.

“ತಂತ್ರಜ್ಞಾನವನ್ನು ಸೃಜನಶೀಲತೆಯ ಸೃಷ್ಟಿಗಾಗಿ, ಅಭಿವೃದ್ಧಿಗಾಗಿ, ಏಳಿಗೆಗಾಗಿ ಬಳಸಬೇಕೇ ಹೊರತು, ವಿನಾಶಕ್ಕಾಗಿ ಅದನ್ನು ಬಳಸಬಾರದು. ಜಗತ್ತಿನಾದ್ಯಂತ ಬೇರೂರಿರುವ ಸಾಮಾಜಿಕ ಅಸಮಾನತೆಯನ್ನು ನಿರ್ಮೂಲನೆ ಮಾಡುವ ದಿಸೆಯಲ್ಲಿ ಇಂದು ತಂತ್ರಜ್ಞಾನವನ್ನು ಬಳಸಬೇಕಾಗಿದೆ. ಭಾರತವು, ಇಂತಹ ಪ್ರಯತ್ನ ಮಾಡುತ್ತಿದೆ. ಕೃತಕ ಬುದ್ಧಿಮತ್ತೆ ಸೇರಿ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಏಳಿಗೆಯತ್ತ ಮುಂದೆ ಸಾಗುತ್ತಿದೆ. ಎಲ್ಲರಿಗೂ ಕೃತಕ ಬುದ್ಧಿಮತ್ತೆ (AI For All) ಎಂಬ ತತ್ವದೊಂದಿಗೆ, ಕೃತಕ ಬುದ್ಧಿಮತ್ತೆ ಬಳಕೆಗೆ ರಾಷ್ಟ್ರೀಯ ಸ್ಟ್ರ್ಯಾಟಜಿಯೊಂದಿಗೆ ಮುನ್ನಡೆಯುತ್ತಿದೆ” ಎಂದು ತಿಳಿಸಿದರು.

ಮೋದಿಯನ್ನು ಹಾಡಿ ಹೊಗಳಿದ್ದ ಮೆಲೋನಿ

ಜಾರ್ಜಿಯಾ ಮೆಲೋನಿ ಅವರು ಇದಕ್ಕೂ ಮೊದಲು ನರೇಂದ್ರ ಮೋದಿ ಅವರನ್ನು ಹೊಗಳಿದ್ದರು. ರೈಸಿನಾ ಶೃಂಗಸಭೆಯ ಹಿನ್ನೆಲೆಯಲ್ಲಿ ಭಾರತಕ್ಕೆ ಆಗಮಿಸಿದ್ದ ಜಾರ್ಜಿಯಾ ಮೆಲೋನಿ, “ನರೇಂದ್ರ ಮೋದಿ ಅವರು ವಿಶ್ವದ ನಾಯಕರಲ್ಲಿಯೇ ಹೆಚ್ಚು ಪ್ರೀತಿಗೆ ಪಾತ್ರರಾಗಿದ್ದಾರೆ. ಅವರು ಧೀಮಂತ ನಾಯಕರು ಎಂಬುದು ಸಾಬೀತಾಗಿದೆ. ಇದಕ್ಕಾಗಿ ಮೋದಿ ಅವರಿಗೆ ಅಭಿನಂದನೆಗಳು” ಎಂದಿದ್ದರು. “ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾರತ ಹಾಗೂ ಇಟಲಿ ಸಂಬಂಧ ಮತ್ತಷ್ಟು ವೃದ್ಧಿಯಾಗುತ್ತಿದೆ. ಉಭಯ ದೇಶಗಳ ಸಂಬಂಧವನ್ನು ವ್ಯೂಹಾತ್ಮಕ ಸಂಬಂಧವಾಗಿ ಮಾರ್ಪಡಿಸಲು ನಾವು ಉತ್ಸುಕರಾಗಿದ್ದೇವೆ. ಇದರಿಂದ ಎರಡೂ ದೇಶಗಳ ಸಂಬಂಧ ಇನ್ನಷ್ಟು ವೃದ್ಧಿಯಾಗಲಿದೆ” ಎಂದು ತಿಳಿಸಿದ್ದರು.

Continue Reading

ದೇಶ

Maoists Killed: ಛತ್ತೀಸ್‌ಗಢದಲ್ಲಿ 8 ಮಾವೋವಾದಿಗಳನ್ನು ಹೊಡೆದುರುಳಿಸಿದ ಭದ್ರತಾ ಪಡೆ; ಓರ್ವ ಯೋಧ ಹುತಾತ್ಮ

Maoists Killed: ಛತ್ತೀಸ್‌ಗಢದ ನಾರಾಯಣಪುರ ಜಿಲ್ಲೆಯ ಅಬುಜ್ಮಾರ್ಹ್‌ನಲ್ಲಿ ಭದ್ರತಾ ಪಡೆಗಳೊಂದಿಗೆ ನಡೆದ ಎನ್‌ಕೌಂಟರ್‌ನಲ್ಲಿ ಕನಿಷ್ಠ 8 ಮಾವೋವಾದಿಗಳು ಸಾವನ್ನಪ್ಪಿದ್ದಾರೆ. ಈ ವೇಳೆ ಓರ್ವ ಯೋಧ ಹುತಾತ್ಮರಾಗಿದ್ದು, ಇಬ್ಬರು ಗಾಯಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅಬುಜ್ಮಾರ್ಹ್ ಒಂದು ಗುಡ್ಡಗಾಡು ಅರಣ್ಯ ಪ್ರದೇಶವಾಗಿದ್ದು, ಇದು ನಾರಾಯಣಪುರ, ಬಿಜಾಪುರ ಮತ್ತು ದಾಂತೇವಾಡ ಜಿಲ್ಲೆಗಳ ಮಧ್ಯದಲ್ಲಿದೆ. ಇದು 4,000 ಚದರ ಕಿಲೋಮೀಟರ್ ಪ್ರದೇಶದಲ್ಲಿ ಹರಡಿದ್ದು ಮಾವೋವಾದಿಗಳ ಅಡುಗುತಾಣವಾಗಿ ಬದಲಾಗಿದೆ.

VISTARANEWS.COM


on

Maoists Killed
Koo

ಹೊಸದಿಲ್ಲಿ:‌ ಛತ್ತೀಸ್‌ಗಢದ ಅಬುಜ್ಮಾರ್ಹ್‌ನಲ್ಲಿ ಭದ್ರತಾ ಪಡೆಗಳೊಂದಿಗೆ ನಡೆದ ಎನ್‌ಕೌಂಟರ್‌ನಲ್ಲಿ ಕನಿಷ್ಠ 8 ಮಾವೋವಾದಿಗಳು ಸಾವನ್ನಪ್ಪಿದ್ದಾರೆ (Maoists Killed). ಈ ವೇಳೆ ಓರ್ವ ಯೋಧ ಹುತಾತ್ಮರಾಗಿದ್ದು, ಇಬ್ಬರು ಗಾಯಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಕಳೆದ ಎರಡು ದಿನಗಳಿಂದ ಅಬುಜ್ಮಾರ್ಹ್‌ ಒಳಗೊಂಡ ನಾರಾಯಣಪುರ ಜಿಲ್ಲೆಯಲ್ಲಿ ಗುಂಡಿನ ಚಕಮಕಿ ನಡೆಯುತ್ತಿದೆ.

ಅಬುಜ್ಮಾರ್ಹ್ ಒಂದು ಗುಡ್ಡಗಾಡು ಅರಣ್ಯ ಪ್ರದೇಶವಾಗಿದ್ದು, ಇದು ನಾರಾಯಣಪುರ, ಬಿಜಾಪುರ ಮತ್ತು ದಾಂತೇವಾಡ ಜಿಲ್ಲೆಗಳ ಮಧ್ಯದಲ್ಲಿದೆ. ಇದು 4,000 ಚದರ ಕಿಲೋಮೀಟರ್ ಪ್ರದೇಶದಲ್ಲಿ ಹರಡಿದ್ದು ಮಾವೋವಾದಿಗಳ ಅಡುಗುತಾಣವಾಗಿ ಬದಲಾಗಿದೆ. ಜನ ಸಂಚಾರ ಕಡಿಮೆ ಇರುವ, ಭೌಗೋಳಿಕವಾಗಿ ಪ್ರತ್ಯೇಕವಾಗಿರುವ ಈ ಪ್ರದೇಶವನ್ನು ಮಾವೋವಾದಿಗಳ ಚಟುವಟಿಕೆಗಳ ಕೇಂದ್ರವೆಂದು ಪರಿಗಣಿಸಲಾಗಿದೆ.

ನಾರಾಯಣಪುರ, ಕಂಕರ್, ದಾಂತೇವಾಡ ಮತ್ತು ಕೊಂಡಗಾಂವ್ ಜಿಲ್ಲೆಗಳ ಭದ್ರತಾ ಸಿಬ್ಬಂದಿಯ ಜಂಟಿ ತಂಡವು ನಕ್ಸಲ್ ವಿರೋಧಿ ಕಾರ್ಯಾಚರಣೆಯಲ್ಲಿ ತೊಡಗಿದ್ದಾಗ ಇಂದು ಬೆಳಿಗ್ಗೆ ಅಬುಜ್ಮಾರ್ಹ್ ಅರಣ್ಯದಲ್ಲಿ ಗುಂಡಿನ ಚಕಮಕಿ ನಡೆದಿದೆ ಎಂದು ಪಿಟಿಐ ವರದಿ ಮಾಡಿದೆ. ಗುಂಡಿನ ಚಕಮಕಿ ಮುಂದುವರಿದಿದೆ.

ಈ ನಾಲ್ಕು ಜಿಲ್ಲೆಗಳ ಜಿಲ್ಲಾ ರಿಸರ್ವ್ ಗಾರ್ಡ್ (DRG), ವಿಶೇಷ ಕಾರ್ಯಪಡೆ (STF) ಮತ್ತು ಇಂಡೋ ಟಿಬೆಟಿಯನ್ ಬಾರ್ಡರ್ ಪೊಲೀಸ್ (ITBP)ನ 53ನೇ ಬೆಟಾಲಿಯನ್ ಸಿಬ್ಬಂದಿಯನ್ನು ಒಳಗೊಂಡ ತಂಡ ಜೂನ್ 12ರಂದು ಇಲ್ಲಿ ಕಾರ್ಯಾಚರಣೆ ಆರಂಭಿಸಿತ್ತು. ಈ ವೇಳೆ ಮಾವೋವಾದಿಗಳು ದಾಳಿ ನಡೆಸಿದಾಗ ಗುಂಡಿನ ಚಕಮಕಿ ಆರಂಭವಾಯಿತು.

ಇದನ್ನೂ ಓದಿ: Encounter In Kanker: ಭದ್ರತಾ ಪಡೆಗಳೊಂದಿಗೆ ಎನ್‌ಕೌಂಟರ್‌; ಓರ್ವ ನಕ್ಸಲ್‌ ಸಾವು

29ಕ್ಕೂ ಹೆಚ್ಚು ಮಾವೋವಾದಿಗಳ ಹತ್ಯೆ

ಏಪ್ರಿಲ್‌ನಲ್ಲಿ ಭದ್ರತಾ ಪಡೆಯ ಸಿಬ್ಬಂದಿ 29 ಮಾವೋವಾದಿಗಳನ್ನು ಹತ್ಯೆ ಮಾಡಿದ್ದರು. ಛತ್ತೀಸ್‌ಗಢದ ಕಂಕೇರ್ ಜಿಲ್ಲೆಯಲ್ಲಿ ಈ ಎನ್‌ಕೌಂಟರ್‌ ನಡೆದಿತ್ತು. ಗುಪ್ತಚರದ ಖಚಿತ ಮಾಹಿತಿಯ ಮೇರೆಗೆ ಬಿಎಸ್ಎಫ್ (BSF) ಮತ್ತು ಜಿಲ್ಲಾ ರಿಸರ್ವ್ ಗಾರ್ಡ್ (DRG) ಕಂಕರ್‌ನ ಚೋಟೆಬೆಟಿಯಾ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿರುವ ಬಿನಗುಂಡ ಪ್ರದೇಶದಲ್ಲಿ ಜಂಟಿ ಕಾರ್ಯಾಚರಣೆ ನಡೆಸಿ ಮಾವೋವಾದಿಗಳನ್ನು ಕೊಂದಿದ್ದರು.

ಎನ್‌ಕೌಂಟರ್‌ ನಡೆದ ಸ್ಥಳದಿಂದ ಬಳಿಕ ಮಾವೋವಾದಿಗಳ ಶವಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಕಾರ್ಯಾಚರಣೆಯ ಸ್ಥಳದಿಂದ ಏಳು ಏಕೆ ಸರಣಿ ರೈಫಲ್‌ಗಳು ಮತ್ತು ಮೂರು ಲೈಟ್ ಮೆಷಿನ್ ಗನ್‌ಗಳನ್ನೂ (LMGs) ವಶಕ್ಕೆ ತೆಗೆದುಕೊಳ್ಳಲಾಗಿತ್ತು. ಗುಂಡಿನ ಚಕಮಕಿ ವೇಳೆ ಇಬ್ಬರು ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದರು. ಹತರಾದ ಮಾವೋವಾದಿಗಳ ಪೈಕಿ ಉನ್ನತ ನಕ್ಸಲ್ ನಾಯಕ ಶಂಕರ್ ರಾವ್ ಕೂಡ ಸೇರಿದ್ದ. ಪೊಲೀಸ್ ಅಧಿಕಾರಿಗಳ ಪ್ರಕಾರ ಶಂಕರ್‌ ತಲೆಗೆ 25 ಲಕ್ಷ ರೂ. ಬಹುಮಾನ ಘೋಷಿಸಲಾಗಿತ್ತು.

ಹಲವು ವರ್ಷಗಳಿಂದ ಸಮಸ್ಯೆ

ಛತ್ತೀಸ್‌ಗಢವು ಹಲವು ದಶಕಗಳಿಂದ ನಕ್ಸಲೈಟ್‌, ಮಾವೋವಾದಿಗಳ ಭೀತಿ ಎದುರಿಸುತ್ತಿದೆ. ವಿಶೇಷವಾಗಿ ಬಸ್ತಾರ್ ಪ್ರದೇಶವು ನಕ್ಸಲ್ ಚಟುವಟಿಕೆಗಳ ಕೇಂದ್ರ ಸ್ಥಾನವಾಗಿದೆ. ಇಲ್ಲಿ ಆಗಾಗ ಹಿಂಸಾಚಾರ ಮತ್ತು ಭದ್ರತಾ ಪಡೆಗಳ ನಡುವೆ ಎನ್‌ಕೌಂಟರ್‌ ನಡೆಯುತ್ತಲೇ ಇರುತ್ತದೆ. ನಕ್ಸಲರ ಹಾವಳಿಯನ್ನು ತಡೆಗಟ್ಟಲು ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ. ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಹೆಚ್ಚಿನ ಭದ್ರತಾ ಪಡೆಗಳನ್ನು ನಿಯೋಜಿಸುವುದು, ಸ್ಥಳೀಯ ಅಭಿವೃದ್ಧಿಗೆ ಆದ್ಯತೆ ನೀಡುವುದು ಮತ್ತು ಶರಣಾಗುವ ನಕ್ಸಲರಿಗೆ ಪುನರ್ವಸತಿ ಕಲ್ಪಸಿಸುವುದು ಸೇರಿದಂತೆ ವಿವಿಧ ಯೋಜನೆಗಳನ್ನು ಹಮ್ಮಿಕೊಂಡಿದೆ. ಆದಾಗ್ಯೂ ಈ ಪ್ರಯತ್ನಗಳ ಹೊರತಾಗಿಯೂ ರಾಜ್ಯದಲ್ಲಿ ನಕ್ಸಲ್ ಹಾವಳಿ ಮುಂದುವರಿದಿದೆ.

Continue Reading

Lok Sabha Election 2024

Indresh Kumar: ರಾಮ ಭಕ್ತರು ಅಧಿಕಾರದಲ್ಲಿದ್ದಾರೆ, ರಾಮ ವಿರೋಧಿಗಳು ಸೋತಿದ್ದಾರೆ; ಆರ್‌ಎಸ್‌ಎಸ್‌ ನಾಯಕನ ಹೊಸ ಹೇಳಿಕೆ

ಜೈಪುರದ ಕಾರ್ಯಕ್ರಮವೊಂದರಲ್ಲಿ ಆರ್‌ಎಸ್‌ಎಸ್‌ ಹಿರಿಯ ನಾಯಕ ಇಂದ್ರೇಶ್‌ ಕುಮಾರ್‌ ಅವರು, ಬಿಜೆಪಿಯ ದುರಹಂಕಾರದಿಂದ ಅದಕ್ಕೆ 240 ಸ್ಥಾನಗಳು ಸಿಕ್ಕಿತು ಎಂದು (Indresh Kumar) ಹೇಳಿದ್ದು ಚರ್ಚೆಗೆ ಕಾರಣವಾಗಿತ್ತು. ಇದು ಆರ್ ಎಸ್ ಎಸ್ ಮತ್ತು ಬಿಜೆಪಿ ನಡುವಿನ ಭಿನ್ನಮತದ ಬಗ್ಗೆ ವದಂತಿಗಳನ್ನು ಹುಟ್ಟು ಹಾಕಿತ್ತು. ಇದೀಗ ಇಂದ್ರೇಶ್ ಅವರು ಹೊಸ ಹೇಳಿಕೆ ನೀಡಿದ್ದಾರೆ.

VISTARANEWS.COM


on

By

Indresh Kumar
Koo

ರಾಮನನ್ನು (ram) ವಿರೋಧಿಸಿದವರು ಅಧಿಕಾರದಿಂದ ಹೊರಗೆ ಉಳಿದಿದ್ದಾರೆ. ರಾಮ ಭಕ್ತಿ ಪ್ರತಿಜ್ಞೆ ಮಾಡಿದವರು ಅಧಿಕಾರದಲ್ಲಿದ್ದಾರೆ. ನರೇಂದ್ರ ಮೋದಿ (narendra modi) ನೇತೃತ್ವದಲ್ಲಿ ಮೂರನೇ ಬಾರಿಗೆ ಸರ್ಕಾರ ರಚನೆಯಾಗಿದೆ ಎಂದು ಆರ್ ಎಸ್ ಎಸ್ ನಾಯಕ (RSS Leader) ಇಂದ್ರೇಶ್ ಕುಮಾರ್ (Indresh Kumar) ಹೇಳಿದ್ದಾರೆ. ಬಿಜೆಪಿಯ ದುರಂಹಕಾರ (BJP’s Arrogance) ಕುರಿತು ಇವರು ಈ ಹಿಂದೆ ನೀಡಿದ ಹೇಳಿಕೆ ಭಾರಿ ಚರ್ಚೆಗೆ ಒಳಗಾಗಿತ್ತು. ಇವರ ಹೇಳಿಕೆ ಮೋದಿ ವಿರುದ್ಧ ಮತ್ತು ಬಿಜೆಪಿ ವಿರುದ್ಧ ಎಂಬ ವ್ಯಾಖ್ಯಾನ ಕೇಳಿ ಬಂದಿತ್ತು. ಇದೀಗ ಇಂದ್ರೇಶ್‌ ಕುಮಾರ್‌ ಯುಟರ್ನ್‌ ಹೊಡೆದಿದ್ದಾರೆ. ಮೋದಿ ಮತ್ತು ಬಿಜೆಪಿ ಪರ ಹೇಳಿಕೆ ನೀಡಿದ್ದಾರೆ.

ಇತ್ತೀಚಿನ ಲೋಕಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷವು (ಬಿಜೆಪಿ) 240 ಸ್ಥಾನಗಳಿಗೆ ಸೀಮಿತವಾಗಿದೆ. ಬಿಜೆಪಿ ನಾಯಕರ “ಅಹಂಕಾರ”ದಿಂದ ಪಕ್ಷವು ಬಹುಮತದ ಅಂಕವನ್ನು ಕಳೆದುಕೊಂಡಿದೆ ಎಂದು ಅವರು ಹೇಳಿದ್ದು ಸಂಚಲನ ಸೃಷ್ಟಿಸಿತ್ತು.

ಲೋಕಸಭೆ ಸ್ಥಾನಗಳಲ್ಲಿ 240 ಸ್ಥಾನಗಳನ್ನು ಪಡೆದ ನರೇಂದ್ರ ಮೋದಿ ನೇತೃತ್ವದ ಬಿಜೆಪಿಯ ಕುರಿತು ಜೈಪುರ ಬಳಿಯ ಕನೋಟಾದಲ್ಲಿ ಗುರುವಾರ ನಡೆದ ‘ರಾಮರಥ ಅಯೋಧ್ಯೆ ಯಾತ್ರಾ ದರ್ಶನ ಪೂಜಾ ಸಮಾರೋಹ್’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಮನ ಭಕ್ತಿ ಮಾಡಿದ ಸೊಕ್ಕಿನ ಪಕ್ಷವನ್ನು 241ಕ್ಕೆ ನಿಲ್ಲಿಸಲಾಯಿತು. ಆದರೆ ಅದುವೇ ಅತಿದೊಡ್ಡ ಪಕ್ಷವಾಯಿತು ಎಂದು ಟೀಕಿಸಿದ್ದರು.


ಅಹಿಂಸೆ ಮತ್ತು ಸತ್ಯದ ತತ್ವಗಳನ್ನು ಉಲ್ಲೇಖಿಸಿ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಎಲ್ಲರ ಬಗ್ಗೆ ವಿನಮ್ರತೆ ಮತ್ತು ಸದ್ಭಾವನೆಯ ಅಗತ್ಯವನ್ನು ಒತ್ತಿ ಹೇಳಿದ್ದರು ಹಾಗೂ ನಿಜವಾದ ‘ಸೇವಕ’ ಅಹಂಕಾರವಿಲ್ಲದೆ ಜನರ ಸೇವೆ ಮಾಡಬೇಕು ಮತ್ತು ಘನತೆಯನ್ನು ಕಾಪಾಡಿಕೊಳ್ಳಬೇಕು ಎಂದು ಹೇಳಿದ್ದರು.

ಇದನ್ನೂ ಓದಿ: Lok Sabha Election : ಅಹಂಕಾರ ತೋರಿಸಿದ್ದಕ್ಕೆ ರಾಮನೇ 241 ಸ್ಥಾನಕ್ಕೆ ನಿಲ್ಲಿಸಿದ; ಪರೋಕ್ಷ ಟಾಂಗ್​ ಕೊಟ್ಟ ಆರ್​ಎಸ್​ಎಸ್​​ ಸಿದ್ಧಾಂತವಾದಿ

ಇದು ಆರ್‌ಎಸ್‌ಎಸ್ ಮತ್ತು ಬಿಜೆಪಿಯೊಂದಿಗಿನ ಭಿನ್ನಾಭಿಪ್ರಾಯವನ್ನು ಎತ್ತಿ ಹಿಡಿದು ವಿವಾದವನ್ನು ಹುಟ್ಟು ಹಾಕಿತ್ತು. ಇಂತಹ ಹೇಳಿಕೆಗಳು ಗೊಂದಲವನ್ನು ಬಿತ್ತುವ ಉದ್ದೇಶದಿಂದ ಮಾಡಲಾಗಿದೆ. ಇದು ಕೇವಲ ಊಹಾಪೋಹ ಎಂದು ಆರ್ ಎಸ್ ಎಸ್ ಸ್ಪಷ್ಟಪಡಿಸಿದೆ.

Continue Reading
Advertisement
Self Harming
ಕ್ರೈಂ12 mins ago

Self Harming: ಅತ್ತೆ ಮಗಳು ಪ್ರೀತಿ ‌ನಿರಾಕರಿಸಿದಕ್ಕೆ ವಿಷ ಸೇವಿಸಿ ಯುವಕ ಆತ್ಮಹತ್ಯೆ

Fathers Day 2024
ಪ್ರಮುಖ ಸುದ್ದಿ27 mins ago

Fathers Day 2024: ʼಅಪ್ಪʼನೆಂದರೆ ಆಕಾಶ… ಎನ್ನುವವರು ಈ ಭಾನುವಾರ ತಪ್ಪದೇ ವಿಶ್‌ ಮಾಡಿ!

Drown in Quarry
ಕರ್ನಾಟಕ44 mins ago

Drown in Quarry: ಕ್ವಾರಿಯಲ್ಲಿ ಈಜಲು ತೆರಳಿದ್ದ ಇಬ್ಬರು ಯುವಕರು ನೀರುಪಾಲು‌

Kannada New Movie hiranys song out
ಸ್ಯಾಂಡಲ್ ವುಡ್54 mins ago

Kannada New Movie: ರಾಜವರ್ಧನ್ ನಟನೆಯ ‘ಹಿರಣ್ಯ’ ಸಿನಿಮಾದ ಮೆಲೋಡಿ ಹಾಡು ರಿಲೀಸ್

Actor Darshan
ಯಾದಗಿರಿ1 hour ago

Actor Darshan : ಬಾಸ್‌ ಅಂತ ಯಾಕ್‌ ಬಕೆಟ್‌ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!

Narendra Modi
ವೈರಲ್ ನ್ಯೂಸ್1 hour ago

Narendra Modi: ನಗು ನಗುತ್ತಾ ಸೆಲ್ಫಿಗೆ ಪೋಸ್‌ ಕೊಟ್ಟ ಮೋದಿ, ಮೆಲೋನಿ; ಸೋಷಿಯಲ್‌ ಮೀಡಿಯಾದಲ್ಲಿ ʼಮೆಲೋಡಿʼಯದ್ದೇ ಸದ್ದು

Viral Video
ಕ್ರಿಕೆಟ್1 hour ago

Viral Video: ಪಾಕ್​ ಕ್ರಿಕೆಟಿಗ ವಾಸಿಂ ಅಕ್ರಮ್ ಜತೆ​ ಬ್ರೇಕ್​ ಡ್ಯಾನ್ಸ್​ ಮಾಡಿದ ಸುನಿಲ್ ಗಾವಸ್ಕರ್

ಪ್ರಮುಖ ಸುದ್ದಿ1 hour ago

Karnataka Politics: ಶಾಸಕ ಸ್ಥಾನಕ್ಕೆ ಎಚ್‌.ಡಿ. ಕುಮಾರಸ್ವಾಮಿ, ಬೊಮ್ಮಾಯಿ ರಾಜೀನಾಮೆ

Kannappa Teaser Kannada Vishnu Manchu Mohan Babu
ಟಾಲಿವುಡ್2 hours ago

Kannapp Teaser : ವಿಷ್ಣು ಮಂಚು ನಾಯಕನಾಗಿ ನಟಿಸಿರುವ `ಕಣ್ಣಪ್ಪ’ ಚಿತ್ರದ ಟೀಸರ್‌ ಬಿಡುಗಡೆ

RSS V/S BJP
Lok Sabha Election 20242 hours ago

RSS V/S BJP: ಮೋಹನ್ ಭಾಗವತ್ ʼಅಹಂಕಾರʼದ ಹೇಳಿಕೆ ಮೋದಿ ವಿರುದ್ಧವೆ? ಆರ್‌ಎಸ್‌ಎಸ್ ಸ್ಪಷ್ಟನೆ ಇದು!

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Actor Darshan
ಯಾದಗಿರಿ1 hour ago

Actor Darshan : ಬಾಸ್‌ ಅಂತ ಯಾಕ್‌ ಬಕೆಟ್‌ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!

Karnataka Weather Forecast
ಮಳೆ21 hours ago

Karnataka Weather : ಕರಾವಳಿ, ಉತ್ತರ ಒಳನಾಡಿನಲ್ಲಿ ವರುಣಾರ್ಭಟ; ನಾಳೆಯು ಹಲವೆಡೆ ಸಿಕ್ಕಾಪಟ್ಟೆ ಮಳೆ

Actor Darshan
ಬೆಂಗಳೂರು22 hours ago

Actor Darshan : ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್ ಮಾಡಿ ಕರೆತರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ!

actor Darshan
ಬೆಂಗಳೂರು23 hours ago

Actor Darshan : ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಮತ್ತಿಬ್ಬರು ಸರೆಂಡರ್‌; ಆರೋಪಿಗಳ ಸಂಖ್ಯೆ 16ಕ್ಕೆ ಏರಿಕೆ

Actor Darshan
ಸಿನಿಮಾ23 hours ago

Actor Darshan : ರೇಣುಕಾಸ್ವಾಮಿ ‌ಮೃತದೇಹ ಬಿಸಾಡಿ ಬಳಿಕ ಸಾಕ್ಷ್ಯಇದ್ದ 2 ಮೊಬೈಲ್‌ಗಳನ್ನು ಮೋರಿಗೆ ಎಸೆದ್ರಾ ಆರೋಪಿಗಳು?

karnataka weather Forecast
ಮಳೆ4 days ago

Karnataka Weather : ಭಾರಿ ಮಳೆಗೆ ಗುಡ್ಡದಿಂದ ಉರುಳಿ ಬಿದ್ದ ಬಂಡೆಗಲ್ಲು; ಬೆಂಗಳೂರಲ್ಲೂ ಸಂಜೆ ವರ್ಷಧಾರೆ

actor Darshan
ಚಿತ್ರದುರ್ಗ4 days ago

Actor Darshan: ರೇಣುಕಾ ಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್‌ ಅರೆಸ್ಟ್‌; ಪ್ರಕರಣವನ್ನು ಸಿಬಿಐಗೆ ವಹಿಸಲು ಒತ್ತಾಯ

Actor Darshan gets a series of questions from the police
ಸಿನಿಮಾ4 days ago

Actor Darshan : ಪವಿತ್ರಗೌಡ ಬಗ್ಗೆ ಪೋಸ್ಟ್‌ ಮಾಡಿದ್ರೆ ನಿಮಗ್ಯಾಕೆ ಕೋಪ? ದರ್ಶನ್‌ಗೆ ಪೊಲೀಸರ ಪ್ರಶ್ನೆಗಳ ಸುರಿಮಳೆ

Actor Darshan
ಸಿನಿಮಾ4 days ago

Actor Darshan : ದರ್ಶನ್‌ ಜೈಲಿಗೆ ಹೋಗುತ್ತಿರುವುದು ಇದೇ ಮೊದಲಲ್ಲ; ನಟನ ಮೇಲಿವೆ ಹತ್ತಾರು ಕೇಸ್‌ಗಳು!

Saptami Gowda
ಸಿನಿಮಾ4 days ago

Saptami Gowda : ಯುವ ಪತ್ನಿ ಶ್ರೀದೇವಿ ವಿರುದ್ಧ ಮಾನಹಾನಿ ಕೇಸ್; ಕಾನೂನು ಹೋರಾಟಕ್ಕೆ ಮುಂದಾದ ನಟಿ ಸಪ್ತಮಿ ಗೌಡ!

ಟ್ರೆಂಡಿಂಗ್‌