Yuvraj Singh | ವಿಲ್ಲಾ ನೋಂದಣಿ ಮಾಡದ ಆರೋಪ; ಯುವರಾಜ್​ಗೆ ನೋಟಿಸ್​ ನೀಡಿದ ಗೋವಾ ಸರ್ಕಾರ - Vistara News

Latest

Yuvraj Singh | ವಿಲ್ಲಾ ನೋಂದಣಿ ಮಾಡದ ಆರೋಪ; ಯುವರಾಜ್​ಗೆ ನೋಟಿಸ್​ ನೀಡಿದ ಗೋವಾ ಸರ್ಕಾರ

ವಿಲ್ಲಾ ನೋಂದಣಿ ಮಾಡದ ಆರೋಪದ ಮೇಲೆ ಟೀಮ್​ ಇಂಡಿಯಾ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಅವರಿಗೆ ಗೋವಾ ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳು ನೋಟಿಸ್​ ನೀಡಿದ್ದಾರೆ.

VISTARANEWS.COM


on

yuvaraj
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಪಣಜಿ: ಮೋರ್ಜಿಮ್‌ನಲ್ಲಿರುವ ವಿಲ್ಲಾ ನೋಂದಣಿ ಮಾಡದ ಆರೋಪದ ಮೇಲೆ ಟೀಮ್​ ಇಂಡಿಯಾ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್(Yuvraj Singh) ಅವರಿಗೆ ಗೋವಾ ಸರ್ಕಾರ ನೋಟಿಸ್‌ ನೀಡಿದ್ದು, ಡಿಸೆಂಬರ್ 8ರಂದು ಬೆಳಿಗ್ಗೆ 11 ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ.

ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಗೋವಾದ ಮೊರ್ಜಿಮ್​ನಲ್ಲಿ ಐಷಾರಾಮಿ ಕಟ್ಟಡ ಹೊಂದಿದ್ದಾರೆ. ಕಾಸಾ ಸಿಂಗ್ ಹೆಸರಿನ ಈ ಐಷಾರಾಮಿ ವಿಲ್ಲಾವನ್ನು ಪ್ರವಾಸಿಗರಿಗೆ ಬಾಡಿಗೆಗೆ ನೀಡುವುದಾಗಿ ಯುವರಾಜ್ ಸಿಂಗ್ ಆನ್‌ಲೈನ್‌ನಲ್ಲಿ ಪ್ರಕಟಣೆ ನೀಡಿದ್ದರು. ಆದರೆ ಗೋವಾ ಕಾನೂನಿನ ಪ್ರಕಾರ ಮನೆಯನ್ನು ಬಾಡಿಗೆ ನೀಡುವುದಕ್ಕೂ ಮೊದಲು ಗೋವಾ ಸರ್ಕಾರದ ಅನುಮತಿಯನ್ನು ತೆಗೆದುಕೊಳ್ಳಬೇಕು. ಟೂರಿಸ್ಟ್ ಟ್ರೇಡ್ ಆಕ್ಟ್-1982ರ ಪ್ರಕಾರ ನೋಂದಣಿ ಮಾಡಬೇಕು. ಆದರೆ ಮನೆಯನ್ನು ನೋಂದಣಿ ಮಾಡದೆ ಪ್ರವಾಸಿಗರಿಗೆ ಬಾಡಿಗೆಗೆ ನೀಡುವುದಾಗಿ ಯುವರಾಜ್ ಆನ್‌ಲೈನ್‌ನಲ್ಲಿ ಜಾಹೀರಾತು ನೀಡಿದ್ದರು.

ಇದೀಗ ಯುವರಾಜ್​ ಸಿಂಗ್​ ಅವರ ಈ ಜಾಹೀರಾತಿಗೆ ಗೋವಾ ಅಧಿಕಾರಿಗಳು ಪ್ರತಿಕ್ರಿಯಿಸಿದ್ದು, ಪ್ರವಾಸೋದ್ಯಮ ಇಲಾಖೆಯ ನಿಯಮಗಳ ಪ್ರಕಾರ ನೋಂದಣಿ ಮಾಡದೆ ಬಾಡಿಗೆಗೆ ಜಾಹೀರಾತು ನೀಡುವುದು ನಿಯಮಗಳಿಗೆ ವಿರುದ್ಧವಾಗಿದೆ ಎಂದು ಗೋವಾ ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳು ಹೇಳಿಕೆ ನೀಡಿ ನೋಟಿಸ್​ ನೀಡಿದ್ದಾರೆ.

“ಈ ನೋಟಿಸ್​ನಲ್ಲಿ ಉಲ್ಲೇಖಿಸಲಾದ ದಿನಾಂಕದೊಳಗೆ ಯಾವುದೇ ಉತ್ತರವನ್ನು ನೀಡದಿದ್ದರೆ, ಮತ್ತು ನೋಟಿಸ್‌ ನಲ್ಲಿ ಉಲ್ಲೇಖಿಸಲಾದ ಆಧಾರಗಳು ಉಲ್ಲಂಘಿಸಿದ್ದು ಕಂಡುಬಂದರೆ ಸೆಕ್ಷನ್ 22ರ ಅಡಿಯಲ್ಲಿ ಶಿಕ್ಷೆಯ ಜತೆಗೆ 1 ಲಕ್ಷದವರೆಗೆ ದಂಡ ವಿಧಿಸಲಾಗುತ್ತದೆ” ಎಂದು ನೋಟಿಸ್​ನಲ್ಲಿ ಹೇಳಲಾಗಿದೆ.

ಇದನ್ನೂ ಓದಿ | IND VS NZ | ಭಾರತ ಮತ್ತು ನ್ಯೂಜಿಲ್ಯಾಂಡ್​ ವಿರುದ್ಧದ ಅಂತಿಮ ಟಿ20 ಪಂದ್ಯ ಟೈನಲ್ಲಿ ಅಂತ್ಯ; ಸರಣಿ ಗೆದ್ದ ಭಾರತ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

Exit Poll 2024 : ಮತಗಟ್ಟೆ ಸಮೀಕ್ಷೆಗಳನ್ನು ನಾವು ನಂಬಲ್ಲ; ಡಿಕೆಶಿ, ಎಂಬಿ ಪಾಟೀಲ್ ಸ್ಪಷ್ಟ ನುಡಿ

Exit Poll 2024: ಚುನಾವಣೋತ್ತರ ಸಮೀಕ್ಷೆ ನಡೆಸುವವರು ಅಲ್ಪಪ್ರಮಾಣದ ಮಾದರಿಗಳನ್ನು ಸಂಗ್ರಹಿಸಿರುತ್ತಾರೆ. ಆಳವಾದ ಸಮೀಕ್ಷೆ ನಡೆಯುವುದಿಲ್ಲ. ಹೀಗಾಗಿ ಈ ಸಮೀಕ್ಷೆಗಳಿಂದ ನಿಖರ ಮಾಹಿತಿ ಬರುವುದಿಲ್ಲ. ಹೀಗಾಗಿ ನನಗೆ ಎಕ್ಸಿಟ್ ಪೋಲ್ ಮೇಲೆ ವಿಶ್ವಾಸವಿಲ್ಲ ಎಂದು ಹೇಳಿದ್ದಾರೆ.

VISTARANEWS.COM


on

Exit Poll 2024
Koo

ಬೆಂಗಳೂರು: ನನಗೆ ಚುನಾವಣೋತ್ತರ ಸಮೀಕ್ಷೆ ಮೇಲೆ ವಿಶ್ವಾಸವಿಲ್ಲ. ಕರ್ನಾಟಕದಲ್ಲಿ ಕಾಂಗ್ರೆಸ್ ಎರಡಂಕಿ ಸ್ಥಾನಗಳನ್ನು ಗೆಲ್ಲಲಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಹೇಳಿದ್ದಾರೆ. ಸದಾಶಿವನಗರ ನಿವಾಸದ ಬಳಿ ಶನಿವಾರ ರಾತ್ರಿ ಮಾಧ್ಯಮಗಳು, ಎಕ್ಸಿಟ್ ಪೋಲ್ ಸಮೀಕ್ಷೆಗಳ ಬಗ್ಗೆ ಕೇಳಿದಾಗ ಶಿವಕುಮಾರ್ ಅವರು ಈ ರೀತಿ ಉತ್ತರಿಸಿದ್ದಾರೆ. ಕರ್ನಾಟಕದಲ್ಲಿ ಕಾಂಗ್ರೆಸ್​ಗೆ ಗರಿಷ್ಠ 8 ಸ್ಥಾನಗಳು ಸಿಗಬಹುದು ಎಂದು ಬಹುತೇಕ ಸಮೀಕ್ಷೆಗಳು ಹೇಳಿರುವ ಹಿನ್ನೆಲೆಯಲ್ಲಿ ಅವರು ಈ ರೀತಿ ಪ್ರತಿಕ್ರಿಯೆ ನೀಡಿದ್ದಾರೆ.

ಚುನಾವಣೋತ್ತರ ಸಮೀಕ್ಷೆ ನಡೆಸುವವರು ಅಲ್ಪಪ್ರಮಾಣದ ಮಾದರಿಗಳನ್ನು ಸಂಗ್ರಹಿಸಿರುತ್ತಾರೆ. ಆಳವಾದ ಸಮೀಕ್ಷೆ ನಡೆಯುವುದಿಲ್ಲ. ಹೀಗಾಗಿ ಈ ಸಮೀಕ್ಷೆಗಳಿಂದ ನಿಖರ ಮಾಹಿತಿ ಬರುವುದಿಲ್ಲ. ಹೀಗಾಗಿ ನನಗೆ ಎಕ್ಸಿಟ್ ಪೋಲ್ ಮೇಲೆ ವಿಶ್ವಾಸವಿಲ್ಲ ಎಂದು ಹೇಳಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ 3-4 ಸ್ಥಾನ ಪಡೆಯಲಿದೆ ಎಂದು ಎಕ್ಸಿಟ್ ಪೋಲ್ ಮಾಹಿತಿ ತೋರಿಸುತಿದ್ದಾರೆ. ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಎರಡಂಕಿ ಸ್ಥಾನಗಳನ್ನು ಗೆಲ್ಲಲಿದೆ. ದೇಶದ ಅಧಿಕಾರವನ್ನು ಇಂಡಿಯಾ ಮೈತ್ರಿಕೂಟ ಪಡೆಯಲಿದೆ.

ಇದನ್ನೂ ಓದಿ: Exit Poll 2024 : ತಮಿಳುನಾಡು, ಕೇರಳದಲ್ಲೂ ಅರಳಲಿದೆ ಕಮಲ; ಮೋದಿಗಿದು ಐತಿಹಾಸಿಕ ಸಾಧನೆ

ಸಚಿವ ಎಂ ಬಿ ಪಾಟೀಲ್ ಹೇಳಿಕೆ ನೀಡಿ ನಾವ್ಯಾರು ಎಕ್ಸಿಟ್ ಪೋಲ್ ನಂಬುವುದಿಲ್ಲ ಎಂದು ಹೇಳಿದ್ದಾರೆ. ಇದು ಗ್ರೌಂಡ್ ರಿಯಾಲಿಟಿಯಿಂದ ದೂರ ಇದೆ ಎಂದೇ ನಂಬುತ್ತೇವೆ ಎಂದು ನುಡಿದಿದ್ದಾರೆ. ಸಮೀಕ್ಷೆಗಳಲ್ಲಿ ಕೇವಲ ಐದಾರು ಸೀಟುಗಳನ್ನು ಮಾತ್ರ ಕೊಟ್ಟಿದ್ದಾರೆ. ಆದರೆ, ಜೂ 4ರಂದು ವಾಸ್ತವ ಗೊತ್ತಾಗಲಿದೆ. ಫಲಿತಾಂಶದಲ್ಲಿ ಕಾಂಗ್ರೆಸ್​ ಡಬಲ್​ ಡಿಜಿಟ್ ದಾಟಲಿದೆ ಎಂದು ಹೇಳಿದ್ದಾರೆ.

ಕರ್ನಾಟಕದ ಸಮೀಕ್ಷೆ ಹೇಗಿದೆ?

ಬೆಂಗಳೂರು: ಲೋಕ ಸಭಾ ಚುನಾವಣೆಯಲ್ಲಿ ಈ ಬಾರಿ ಕರ್ನಾಟಕದಲ್ಲಿ ಫಲಿತಾಂಶ ಬಿಜೆಪಿಗೆ 2019ರ ಚುನಾವಣೆಯಷ್ಟು ಪೂರಕವಾಗಿಲ್ಲ (Exit Poll 2024 ) ಎಂದು ಚುನಾವಣೋತ್ತರ ಸಮೀಕ್ಷೆಗಳು ಅಂದಾಜಿಸಿವೆ. ಈ ಬಾರಿ ಕರ್ನಾಟಕದಲ್ಲಿ 18 ಸೀಟುಗಳು ಬಿಜೆಪಿಗೆ ದೊರೆಯಲಿದ್ದು, 8 ಸ್ಥಾನಗಳು ಕಾಂಗ್ರೆಸ್​ಗೆ ದೊರೆಯಲಿವೆ ಎಂದು ಪೋಲ್​​ ಸ್ಟಾಟ್ ಹೇಳಿದೆ. ಜೆಡಿಎಸ್​​ ರೀತಿ ಸ್ಪರ್ಧಿಸಿರುವ ಒಟ್ಟು 3ರಲ್ಲಿ ಎರಡು ಸ್ಥಾನಗಳನ್ನು ಜೆಡಿಎಸ್​ ಗೆಲ್ಲಲಿದೆ ಎಂದು ಸಮೀಕ್ಷೆಗಳು ಹೇಳಿವೆ. ದೇಶಾದ್ಯಂತ ಬಿಜಪಿಗೆ ಹಿಂದಿಗಿಂತ ಹೆಚ್ಚು ಸೀಟುಗಳು ಸಿಗಲಿವೆ ಎಂಬ ಟ್ರೆಂಡ್ ಇರುವ ಹೊರತಾಗಿಯೂ ಕರ್ನಾಟಕದಲ್ಲಿ ಸ್ವಲ್ಪ ಮಟ್ಟಿಗೆ ಬಿಜೆಪಿಗೆ ಹಿನ್ನಡೆಯಾಗಿದೆ. 2019ರಲ್ಲಿ ಕರ್ನಾಟಕದ 28 ಕ್ಷೇತ್ರಗಳಲ್ಲಿ ಬಿಜೆಪಿ 25 ಸ್ಥಾನಗಳನ್ನು ಗೆದ್ದಿದ್ದರೆ ಕಾಂಗ್ರೆಸ್ ಹಾಗೂ ಜೆಡಿಎಸ್​ ತಲಾ ಒಂದು ಸ್ಥಾನವನ್ನು ಹಂಚಿಕೊಂಡಿತ್ತು. ಪಕ್ಷೇತರರಾದ ಸುಮಲತಾ ಅವರು ಮಂಡ್ಯ ಕ್ಷೇತ್ರದಲ್ಲಿ ಗೆದ್ದಿದ್ದರು.

ವಿಸ್ತಾರ ನ್ಯೂಸ್​- COPS ನಡೆಸಿರುವ ಸಮೀಕ್ಷೆಯಲ್ಲಿ ಬಿಜೆಪಿಗೆ 18ರಿಂದ-22 ಸ್ಥಾನಗಳು ದೊರಕಿದೆ, ಕಾಂಗ್ರೆಸ್​ಗೆ 08ರಿಂದ 10 ಸ್ಥಾನಗಳು ಲಭಿಸಲಿವೆ. ಜೆಡಿಎಸ್​ಗೆ 2ರಿಂದ 3 ಸ್ಥಾನ ಸಿಗುವುದು ಎಂದು ಹೇಳಲಾಗಿದೆ. ಆಕ್ಸಿಸ್ ಮೈ ಇಂಡಿಯಾ ಸಮೀಕ್ಷೆ ಪ್ರಕಾರ ಕರ್ನಾಟಕದಲ್ಲಿ ಬಿಜೆಪಿ 20ರಿಂದ 22, ಕಾಂಗ್ರೆಸ್ 3ರಿಂದ 5 ಮತ್ತು ಜೆಡಿಎಸ್ 3 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ . ಇಂಡಿಯಾ ಟುಡೆ ಪ್ರಕಾರ ಕರ್ನಾಟದಲ್ಲಿ ಬಿಜೆಪಿಗೆ 23ರಿಂದ 25 ಹಾಗೂ ಕಾಂಗ್ರೆಸ್​ಗೆ 04ರಿಂದ 05 ಹಾಗೂ ಜೆಡಿಎಸ್​ಗೆ 1ರಿಂದ 3ಸ್ಥಾನ ಸಿಗಲಿದೆ ಎಂದು ಅಂದಾಜಿಸಿದೆ.

ಜನ್​ಕಿ ಬಾತ್​ ಸಮೀಕ್ಷೆ ಪ್ರಕಾರ ಬಿಜೆಪಿಗೆ 17ರಿಂದ 23 ಹಾಗೂ ಕಾಂಗ್ರೆಸ್​ಗೆ 4ರಿಂದ 8 ಹಾಗೂ ಜೆಡಿಎಸ್​ಗೆ 1ರಿಂದ 2 ಸ್ಥಾನ ಸಿಗಬಹುದು ಅಂದಾಜಿಸಿದೆ. ಜಿ ನ್ಯೂಸ್ ಪ್ರಕಾರ ಬಿಜೆಪಿಗೆ 18ರಿಂದ22, ಕಾಂಗ್ರೆಸ್​ಗೆ 4ರಿಂದ 5 ಹಾಗೂ ಜೆಡಿಎಸ್​​ 01ರಿಂದ 3 ಸೀಟುಗಳು ಸಿಗಲಿವೆ.

ಜನ್​ಕಿ ಬಾತ್​ ಸಮೀಕ್ಷೆ ಪ್ರಕಾರ ಬಿಜೆಪಿಗೆ 17ರಿಂದ 23 ಹಾಗೂ ಕಾಂಗ್ರೆಸ್​ಗೆ 4ರಿಂದ 8 ಹಾಗೂ ಜೆಡಿಎಸ್​ಗೆ 1ರಿಂದ 2 ಸ್ಥಾನ ಸಿಗಬಹುದು ಅಂದಾಜಿಸಿದೆ. ಜಿ ನ್ಯೂಸ್ ಪ್ರಕಾರ ಬಿಜೆಪಿಗೆ 18ರಿಂದ22, ಕಾಂಗ್ರೆಸ್​ಗೆ 4ರಿಂದ 5 ಹಾಗೂ ಜೆಡಿಎಸ್​​ 01ರಿಂದ 3 ಸೀಟುಗಳು ಸಿಗಲಿವೆ.

ಕರ್ನಾಟಕದಲ್ಲಿ ಹೀಗಿದೆ ಚುನಾವಣಾ ಫಲಿತಾಂಶ ಸಮೀಕ್ಷೆ

  • ವಿಸ್ತಾರ-COPS: ಬಿಜೆಪಿ 18-20, ಕಾಂಗ್ರೆಸ್‌ 8-10, ಜೆಡಿಎಸ್‌ 2-3
  • ಜನ್ ಕೀ ಬಾತ್: ಬಿಜೆಪಿ 17-23, ಕಾಂಗ್ರೆಸ್ 4-8, ಜೆಡಿಎಸ್ 1-2
  • ಝೀ ನ್ಯೂಸ್: ಬಿಜೆಪಿ 18-22, ಕಾಂಗ್ರೆಸ್ 4-6, ಜೆಡಿಎಸ್ 1-3
  • CNN ನ್ಯೂಸ್ 18: ಬಿಜೆಪಿ 21-23, ಕಾಂಗ್ರೆಸ್ 3-7, ಜೆಡಿಎಸ್ 2-3
  • ಪೋಲ್‌ಸ್ಟ್ರಾಟ್‌: ಬಿಜೆಪಿ 18, ಕಾಂಗ್ರೆಸ್-08, ಜೆಡಿಎಸ್-02 ಸ್ಥಾನ
  • ಇಂಡಿಯಾ ಟಿವಿ: ಬಿಜೆಪಿ 18-22, ಕಾಂಗ್ರೆಸ್‌ 4-8, ಜೆಡಿಎಸ್‌ 1-3
  • ಸಿ-ವೋಟರ್: ಬಿಜೆಪಿ 21-22, ಕಾಂಗ್ರೆಸ್ 3-5, ಜೆಡಿಎಸ್ 1-3
  • ಇಂಡಿಯಾ ಟುಡೇ: ಬಿಜೆಪಿ 20-22, ಕಾಂಗ್ರೆಸ್ 3-5, ಜೆಡಿಎಸ್ 2-3
  • ಪೋಲ್ ಆಫ್ ಪೋಲ್: ಬಿಜೆಪಿ-20, ಕಾಂಗ್ರೆಸ್-6, ಜೆಡಿಎಸ್-2
  • ಟೈಮ್ಸ್ ನೌ: ಬಿಜೆಪಿ 21-25, ಕಾಂಗ್ರೆಸ್ 3-7, ಜೆಡಿಎಸ್ 1-2
  • ಇಂಡಿಯಾ ನ್ಯೂಝ್: ಬಿಜೆಪಿ-21, ಕಾಂಗ್ರೆಸ್-5, ಜೆಡಿಎಸ್-2
  • ನ್ಯೂಸ್ ನೇಷನ್: ಬಿಜೆಪಿ-16, ಕಾಂಗ್ರೆಸ್-10, ಜೆಡಿಎಸ್-02
  • ನ್ಯೂಸ್ 24-ಟುಡೇಸ್ ಚಾಣಕ್ಯ: ಬಿಜೆಪಿ-ಜೆಡಿಎಸ್ 24, ಕಾಂಗ್ರೆಸ್-4

Continue Reading

ಪ್ರಮುಖ ಸುದ್ದಿ

Exit Poll 2024 : ತಮಿಳುನಾಡು, ಕೇರಳದಲ್ಲೂ ಅರಳಲಿದೆ ಕಮಲ; ಮೋದಿಗಿದು ಐತಿಹಾಸಿಕ ಸಾಧನೆ

Exit Poll 2024: ಶನಿವಾರ ಸಂಜೆ ಏಳನೇ ಹಂತದ ಮತದಾನ ಪ್ರಕ್ರಿಯೆ ಮುಕ್ತಾಯಗೊಂಡ ಬಳಿಕ ಪ್ರಕಟವಾದ ಚುನಾವಣೋತ್ತರ ಸಮೀಕ್ಷೆಗಳ (Exit Poll 2024) ಪ್ರಕಾರ ಕೇರಳದಲ್ಲಿ 2ರಿಂದ 3 ಮತ್ತು ತಮಿಳುನಾಡಿನಲ್ಲಿ 2-4 ಸ್ಥಾನಗಳು ಎನ್​ಡಿಎಗೆ ದೊರಕಲಿವೆ. ಒಂದು ವೇಳೆ ಇದು ಸತ್ಯವಾದರೆ ದಕ್ಷಿಣದ ಎರಡು ರಾಜ್ಯಗಳಲ್ಲಿ ಕಮಲ ಅರಳಿಸಲು ತಾವು ಪಟ್ಟ ಶ್ರಮ ಸಾರ್ಥಕವಾದಂತೆ.

VISTARANEWS.COM


on

Exit Poll 2024
Koo

ಬೆಂಗಳೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿ ತಮ್ಮ ಮೂರನೇ ಅವಧಿಯಲ್ಲಿ ಮತ್ತೊಂದು ಮಹತ್ಸಾಧನೆ ಮಾಡಲಿದ್ದಾರೆ. ಲೋಕ ಸಭಾ ಚುನಾವಣೆಯಲ್ಲಿ (Lok Sabha Election) ಅವರ ನೇತೃತ್ವದ ಬಿಜೆಪಿ/ ಎನ್​ಡಿಎ ದಕ್ಷಿಣ ಭಾರತದ ಎರಡು ಪ್ರಮುಖ ರಾಜ್ಯಗಳಲ್ಲಿ ತನ್ನ ಖಾತೆ ತೆರೆಯಲಿವೆ. ಅವುಗಳೆಂದರೆ ತಮಿಳುನಾಡು ಮತ್ತು ಕೇರಳ. ಶನಿವಾರ ಸಂಜೆ ಏಳನೇ ಹಂತದ ಮತದಾನ ಪ್ರಕ್ರಿಯೆ ಮುಕ್ತಾಯಗೊಂಡ ಬಳಿಕ ಪ್ರಕಟವಾದ ಚುನಾವಣೋತ್ತರ ಸಮೀಕ್ಷೆಗಳ (Exit Poll 2024) ಪ್ರಕಾರ ಕೇರಳದಲ್ಲಿ 2ರಿಂದ 3 ಮತ್ತು ತಮಿಳುನಾಡಿನಲ್ಲಿ 2-4 ಸ್ಥಾನಗಳು ಎನ್​ಡಿಎಗೆ ದೊರಕಲಿವೆ. ಒಂದು ವೇಳೆ ಇದು ಸತ್ಯವಾದರೆ ದಕ್ಷಿಣದ ಎರಡು ರಾಜ್ಯಗಳಲ್ಲಿ ಕಮಲ ಅರಳಿಸಲು ತಾವು ಪಟ್ಟ ಶ್ರಮ ಸಾರ್ಥಕವಾದಂತೆ. ಜತೆಗೆ ಆಂಧ್ರ ಪ್ರದೇಶದಲ್ಲೂ 22 ಸ್ಥಾನಗಳನ್ನು ಗೆಲ್ಲಬಹುದು ಎಂದು ಹೇಳಿದೆ.

ತಮಿಳುನಾಡಿನಲ್ಲಿ ಲೋಕಸಭಾ ಚುನಾವಣೆಗೆ ಏಪ್ರಿಲ್ 19, 2024ರಂದು ನಡೆದಿತ್ತು. ಇದು ಹಾಲಿ ಚುನಾವಣೆಯ ಮೊದಲ ಹಂತದಲ್ಲಿ ಮತದಾನ. 2019 ರ ಲೋಕಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ನೇತೃತ್ವದ ಡಿಎಂಕೆ 39 ಲೋಕಸಭಾ ಸ್ಥಾನಗಳಲ್ಲಿ 38 ಸ್ಥಾನಗಳನ್ನು ಗೆದ್ದಿತ್ತು. ಈ ಬಾರಿ ಅವು ಆಯ್ದ ಪ್ರದೇಶಗಳಲ್ಲಿ ಎಐಎಡಿಎಂಕೆ ಮತ್ತು ಬಿಜೆಪಿ ನೇತೃತ್ವದ ಎನ್​ಡಿಎಯಿಂದ ಪ್ರತಿರೋಧ ಎದುರಿಸಿದ್ದಾರೆ. ಈ ಬಾರಿ ತಮಿಳುನಾಡಿನಲ್ಲಿ ಬಿಜೆಪಿ ವ್ಯಾಪಕ ಪ್ರಚಾರ ನಡೆಸಿದೆ. ಲೋಕಸಭಾ ಚುನಾವಣೆಗೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ತಮಿಳು ಭಾಷಿಕರ ರಾಜ್ಯಕ್ಕೆ 9 ಬಾರಿ ಭೇಟಿ ನೀಡಿದ್ದರು. ಬಹುತೇಕ ಸಮೀಕ್ಷೆಗಳು ತಮಿಳುನಾಡಿನಲ್ಲಿ ಬಿಜೆಪಿ 1-3 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಯಿದೆ ಎಂದು ಅಂದಾಜಿಸಿದೆ. ಕಾಂಗ್ರೆಸ್ 8-11, ಬಿಜೆಪಿ 36-39 ಮತ್ತು ಇತರರು 0-2 ಸ್ಥಾನಗಳನ್ನು ಪಡೆಯಲಿವೆ. ಬಹು ಕಟ್ಟರ್ ಪ್ರಾಂತೀಯವಾದಿ ಮತದಾರರು ಇರುವ ತಮಿಳುನಾಡಿನಲ್ಲಿ ಖಾತೆ ತೆರೆಯುವುದು ಬಿಜೆಪಿಗೆ ಸುಲಭ ಮಾತಲ್ಲ. ಹೀಗಾಗಿ ಈ ಸಲ ಗೆದ್ದರೆ ಅದೊಂದು ಐತಿಹಾಸಿಕ ಸಾಧನೆಯಾಗಲಿದೆ. ಇದರಲ್ಲಿ ಮಾಜಿ ಐಪಿಎಸ್​ ಅಧಿಕಾರಿ ಅಣ್ಣಾಮಲೈ ಅವರ ಪಾತ್ರ ದೊಡ್ಡದಿದೆ.

ಕೇರಳದಲ್ಲೂ ಖಾತೆ ಓಪನ್​

ಎನ್​ಡಿಎ ಕೇರಳದಲ್ಲಿ ಒಂದರಿಂದ ಮೂರು ಸ್ಥಾನಗಳನ್ನು ಗೆಲ್ಲುವ ಮೂಲಕ ತನ್ನ ಖಾತೆಯನ್ನು ತೆರೆಯಲು ಸಜ್ಜಾಗಿದೆ ಎಂಬುದಾಗಿ ಸಮೀಕ್ಷೆಗಳು ಅಂದಾಜಿಸಿವೆ. ಕೇರಳದ 20 ಲೋಕಸಭಾ ಕ್ಷೇತ್ರಗಳಿಗೆ ಏಪ್ರಿಲ್ 26ರಂದು ಮತದಾನ ನಡೆದಿದ್ದು, 2019ರಲ್ಲಿ ಶೇ.77.84ರಷ್ಟಿದ್ದ ಮತದಾನ ಪ್ರಮಾಣ ಈ ಬಾರಿ ಶೇ.70.35ಕ್ಕೆ ಕುಸಿದಿತ್ತು.

ಇದನ್ನೂ ಓದಿ: Exit Poll 2024: ಮುaಸ್ಲಿಮರ ಶೇ.72ರಷ್ಟು ಮತಗಳು ಕಾಂಗ್ರೆಸ್‌ಗೆ; ಮೋದಿ ವಿರುದ್ಧ ಒಂದಾದ ಅಲ್ಪಸಂಖ್ಯಾತರು

ಕಳೆದ ಲೋಕಸಭಾ ಚುನಾವಣೆಯಲ್ಲಿ ಕೇರಳ ಕಾಂಗ್ರೆಸ್ ಪಕ್ಷದ ಭದ್ರಕೋಟೆಯಾಗಿತ್ತು. 2019 ರ ಚುನಾವಣೆಯಲ್ಲಿ, ಐಎನ್​ಸಿಎ ರಾಜ್ಯದಲ್ಲಿ ಹೆಚ್ಚಿನ ಸ್ಥಾನಗಳನ್ನು ಗಳಿಸಿದರೆ, ಎನ್​​ಡಿಎ ಒಂದೂ ಸ್ಥಾನ ಗೆದ್ದಿರಲಿಲ್ಲ. ಇಲ್ಲಿ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ಮತ್ತು ಸಿಪಿಐ (ಎಂ) ನೇತೃತ್ವದ ಲೆಫ್ಟ್ ಡೆಮಾಕ್ರಟಿಕ್ ಫ್ರಂಟ್ (ಎಲ್ಡಿಎಫ್) ನಡುವೆ ನೇರ ಸ್ಪರ್ಧೆ ಇದೆ. ಸಮೀಕ್ಷೆಗಳ ಪ್ರಕಾ ಯುಡಿಎಫ್​​ಗೆ 17-19 ಸ್ಥಾನಗಳು ಮತ್ತು ಎನ್​ಡಿಎಗೆ 1-3 ಸ್ಥಾನಗಳು ಸಿಗಲಿವೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ದಕ್ಷಿಣದ ರಾಜ್ಯಗಳಲ್ಲಿ ಮತದಾರರನ್ನು ಸೆಳೆಯಲು ಬಲವಾದ ಪ್ರಯತ್ನ ನಡೆಸಿದ್ದರು. ಇಲ್ಲಿ ಮಾಜಿ ಸಚಿವ ರಾಜೀವ್​ ಚಂದ್ರಶೇಖರ್​ ಅವರು ಶಶಿ ತರೂರು ವಿರುದ್ಧ ತಿರುವನಂತಪುರ ಹಾಗೂ ಸುರೇಂದ್ರನ್ ಅವರು ರಾಹುಲ್ ಗಾಂಧಿ ವಿರುದ್ಧ ವಯನಾಡ್​ನಲ್ಲಿ ಸ್ಪರ್ಧಿಸಿದ್ದಾರೆ. ಅದೇ ರೀತಿ ಸಿನಿಮಾ ನಟ ಸುರೇಶ್ ಗೋಪಿ ಕೂಡ ತ್ರಿಶೂರ್​ ಲೋಕ ಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದಾರೆ.

ದಕ್ಷಿಣದ ರಾಜ್ಯಗಳಾದ ತಮಿಳುನಾಡು, ಕೇರಳ, ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣ ಮತ್ತು ಪುದುಚೇರಿ ಒಂದು ಸ್ಥಾನವು 130 ಸಂಸದರನ್ನು ಕೆಳಮನೆಗೆ ಕಳುಹಿಸುತ್ತದೆ. 2019 ರಲ್ಲಿ ಬಿಜೆಪಿ ಈ ಸ್ಥಾನಗಳಲ್ಲಿ ಕೇವಲ 29 ಸ್ಥಾನಗಳನ್ನು ಗಳಿಸಿದೆ. ಅದರಲ್ಲಿ 25 ಕರ್ನಾಟಕದಿಂದ ಬಂದಿತ್ತು. ತೆಲಂಗಾಣದಿಂದ. ಕೇರಳ, ತಮಿಳುನಾಡು, ಆಂಧ್ರಪ್ರದೇಶ ಮತ್ತು ಪುದುಚೇರಿಯಲ್ಲಿ ಪಕ್ಷವು ತನ್ನ ಖಾತೆ ತೆರೆಯಲು ವಿಫಲವಾಗಿತ್ತು. ಈ ಬಾರಿ ಆಂಧ್ರದಲ್ಲಿಯೂ ಖಾತೆ ತೆರೆಯುವ ಸಾಧ್ಯತೆಗಳಿವೆ.

Continue Reading

ಪ್ರಮುಖ ಸುದ್ದಿ

Exit Poll 2024: ಮುಸ್ಲಿಮರ ಶೇ.72ರಷ್ಟು ಮತಗಳು ಕಾಂಗ್ರೆಸ್‌ಗೆ; ಮೋದಿ ವಿರುದ್ಧ ಒಂದಾದ ಅಲ್ಪಸಂಖ್ಯಾತರು

Exit Poll 2024: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಭಾರತೀಯ ಜನತಾ ಪಕ್ಷ (ಬಿಜೆಪಿ) ಸರ್ಕಾರದ ವಿರುದ್ಧ “ವೋಟ್ ಜಿಹಾದ್” ಮಾಡಿ ಎಂದು ಭಾರತದ ಮುಸ್ಲಿಂ ಮತದಾರರಿಗೆ ಸಮಾಜವಾದಿ ಪಕ್ಷದ ನಾಯಕಿ ಮಾರಿಯಾ ಆಲಂ ಕರೆ ಕೊಟ್ಟಿದ್ದರು. ಇಂಥ ಹೇಳಿಕೆಗಳು ಮತ್ತು ಸ್ಥಳೀಯವಾಗಿ ಮುಸ್ಲಿಂ ಸಮುದಾಯದ ಮಂದಿ ಪಠಿಸಿದ ಒಗ್ಗಟ್ಟಿನ ಮಂತ್ರ ಕಾಂಗ್ರೆಸ್​ಗೆ ಅವರ ಮತಗಳು ಪರಿವರ್ತನೆಗೊಳ್ಳುವಂತೆ ಮಾಡಿದೆ.

VISTARANEWS.COM


on

exit poll 2024
Koo

ಬೆಂಗಳೂರು: ಬಿಜೆಪಿಯ ಜತೆ ಸೈದ್ಧಾಂತಿಕ ವಿರೋಧ ಇಟ್ಟುಕೊಂಡಿರುವ ಭಾರತದ ಮುಸ್ಲಿಮರು ಈ ಬಾರಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸುವುದಕ್ಕಾಗಿ ಒಟ್ಟಾಗಿ ‘ಕೈ’ ಜೋಡಿಸಿದ್ದಾರೆ. ಹೇಗಾದರೂ ಮಾಡಿ ಬಿಜೆಪಿ ನೇತೃತ್ವದ ಎನ್​ಡಿಎಯನ್ನು ಅಧಿಕಾರದಿಂದ ದೂರವಿರಿಸಿ ತಮಗೆ ಹೆಚ್ಚು ಅನುಕೂಲಕರ ಎನಿಸಿಕೊಂಡಿರುವ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಬೇಕು ಎಂದು ಪಣತೊಟ್ಟಿರುವುದು ಚುನಾವಣೋತ್ತರ ಸಮೀಕ್ಷೆಯಲ್ಲಿ ಪ್ರಕಟಗೊಂಡಿದೆ. ಸಮೀಕ್ಷೆಯು ಅಂದಾಜಿಸಿದ ಪ್ರಕಾರ ಮುಸ್ಲಿಂ ಸಮುದಾಯದವರು ಚಲಾವಣೆ ಮಾಡಿರುವ ಶೇಕಡಾ 72ರಷ್ಟು ಮತಗಳು ಕೈ ಪಕ್ಷದ ಪಾಲಾಗಿವೆ.

ಉತ್ತರ ಪ್ರದೇಶದ ಫರೂಕಾಬಾದ್​ನ್ಲಲಿ ಏಪ್ರಿಲ್ 29ರಂದು ನಡೆದ ಚುನಾವಣಾ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ್ದ ಹಿರಿಯ ಕಾಂಗ್ರೆಸ್ ನಾಯಕಿ ಮತ್ತು ಮಾಜಿ ಕೇಂದ್ರ ಕಾನೂನು ಸಚಿವ ಸಲ್ಮಾನ್ ಖುರ್ಷಿದ್ ಅವರ ಸೋದರ ಸೊಸೆ ಸಮಾಜವಾದಿ ಪಕ್ಷದ ನಾಯಕಿ ಮಾರಿಯಾ ಆಲಂ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಭಾರತೀಯ ಜನತಾ ಪಕ್ಷ (ಬಿಜೆಪಿ) ಸರ್ಕಾರದ ವಿರುದ್ಧ “ವೋಟ್ ಜಿಹಾದ್” ಮಾಡಿ ಎಂದು ಭಾರತದ ಮುಸ್ಲಿಂ ಮತದಾರರಿಗೆ ಕರೆ ಕೊಟ್ಟಿದ್ದರು. ಇಂಥ ಹೇಳಿಕೆಗಳು ಮತ್ತು ಸ್ಥಳೀಯವಾಗಿ ಮುಸ್ಲಿ ಸಮುದಾಯದ ಮಂದಿ ಪಠಿಸಿದ ಒಗ್ಗಟ್ಟಿನ ಮಂತ್ರ ಕಾಂಗ್ರೆಸ್​ಗೆ ಅವರ ಮತಗಳು ಪರಿವರ್ತನೆಗೊಳ್ಳುವಂತೆ ಮಾಡಿದೆ.

ಅಲ್ಪಸಂಖ್ಯಾತರು, ವಿಶೇಷವಾಗಿ ಮುಸ್ಲಿಮರು ದೇಶದ ಸಂಪನ್ಮೂಲಗಳ ಮೇಲೆ ಮೊದಲ ಹಕ್ಕನ್ನು ಹೊಂದಿದ್ದಾರೆ ಎಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ 2006ರ ಹೇಳಿಕೆಯನ್ನು ಉಲ್ಲೇಖಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ಮಾತನಾಡಿದ್ದನ್ನು ಈ ವೇಳೆ ಸ್ಮರಿಸಬಹುದು. ಕಾಂಗ್ರೆಸ್ ತನ್ನ ಅಲ್ಪಸಂಖ್ಯಾತ ತುಷ್ಟೀಕರಣ ಮತ್ತು ವೋಟ್ ಬ್ಯಾಂಕ್ ರಾಜಕೀಯ ಮಾಡುತ್ತಿದ್ದು, ಒಬಿಸಿಗಳು, ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳ ಮೀಸಲನ್ನು ಕಸಿದು ಮುಸ್ಲಿಮರಿಗೆ ನೀಡಲಿದೆ ಎಂದು ಪ್ರಧಾನಿ ಆರೋಪಿಸಿದ್ದರು. ಮೋದಿ ಅವರಿಗೆ ಮುಸ್ಲಿಮರು ಕಾಂಗ್ರೆಸ್​ಗಾಗಿ ಒಟ್ಟಾಗಿದ್ದಾರೆ ಎಂಬ ಸುಳಿವು ಸಿಕ್ಕಿತ್ತು. ಅದಕ್ಕಾಗಿಯೇ ಅವರು ಹಿಂದೂ ಮತಗಳ ಧ್ರುವೀಕರಣಕ್ಕೆ ತಂತ್ರ ಹೆಣೆದಿದ್ದರು.

ಇದನ್ನೂ ಓದಿ: Exit Poll 2024 : ಕರ್ನಾಟಕದಲ್ಲಿ ಬಿಜೆಪಿಗೆ ನಷ್ಟ, ಕಾಂಗ್ರೆಸ್​ಗೆ ಲಾಭ ; ಜೆಡಿಎಸ್​ಗೆ +1

ಮುಸ್ಲಿಮರು ಏಕೆ ಚುನಾವಣೆಯಲ್ಲಿ ಮುಖ್ಯವಾಗಿದ್ದರು?

ಭಾರತವು ವಿಶ್ವದಲ್ಲಿ ಮೂರನೇ ಅತಿ ಹೆಚ್ಚು ಮುಸ್ಲಿಮರನ್ನು ಹೊಂದಿದ ರಾಷ್ಟ್ರ. ಇದು ದೇಶವೊಂದರ ಅತಿದೊಡ್ಡ ಅಲ್ಪಸಂಖ್ಯಾತ ಸಮುದಾಯ. ಮುಸ್ಲಿಮರು ಭಾರತದ ಜನಸಂಖ್ಯೆಯ ಶೇಕಡಾ 14ರಷ್ಟಿದ್ದಾರೆ. ಭಾರತದ 543 ಲೋಕಸಭಾ ಕ್ಷೇತ್ರಗಳ ಪೈಕಿ 86ರಲ್ಲಿ ಮುಸ್ಲಿಮರ ಜನಸಂಖ್ಯೆ ಕನಿಷ್ಠ ಶೇ.20ರಷ್ಟಿದೆ. ಇದರಲ್ಲಿ 16 ಸ್ಥಾನಗಳಲ್ಲಿ, ಜನಸಂಖ್ಯೆಯಲ್ಲಿ ಆ ಪಾಲು ಶೇಕಡಾ 50ಕ್ಕಿಂತ ಹೆಚ್ಚಾಗಿದೆ. ಈ 86 ಸ್ಥಾನಗಳು 12 ರಾಜ್ಯಗಳು ಮತ್ತು ಮೂರು ಕೇಂದ್ರಾಡಳಿತ ಪ್ರದೇಶಗಳಲ್ಲಿ (ಯುಟಿ) ಇವೆ. ಇದರಲ್ಲಿ 71 ಸ್ಥಾನಗಳು ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಕೇರಳ, ಬಿಹಾರ, ಅಸ್ಸಾಂ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ಹರಡಿದೆ.

Continue Reading

ತಂತ್ರಜ್ಞಾನ

Air Conditioner Safety: ಎಸಿ ಏಕೆ ಬ್ಲಾಸ್ಟ್ ಆಗುತ್ತದೆ? ಅಪಾಯ ತಡೆಯುವುದು ಹೇಗೆ?

ಹವಾನಿಯಂತ್ರಣ ಘಟಕದಲ್ಲಿ ಉಂಟಾಗುವ ಸ್ಫೋಟ ಅಥವಾ ಬೆಂಕಿಯನ್ನು “ಎಸಿ ಬ್ಲಾಸ್ಟ್” ಎಂದು ಕರೆಯಲಾಗುತ್ತದೆ. ಹವಾನಿಯಂತ್ರಣಗಳು (Air Conditioner Safety) ಏಕೆ ಸ್ಫೋಟಗೊಳ್ಳುತ್ತವೆ ಮತ್ತು ಅದು ಸಂಭವಿಸದಂತೆ ಹೇಗೆ ತಡೆಯಬಹುದು ಎಂಬುದರ ಕುರಿತು ಮಾಹಿತಿ ಇಲ್ಲಿದೆ.

VISTARANEWS.COM


on

By

Air Conditioner Safety
Koo

ಹವಾ ನಿಯಂತ್ರಣಗಳು (air conditioner) ಈಗ ಎಲ್ಲ ಕಡೆ ಇದ್ದೇ ಇರುತ್ತವೆ. ಬೇಸಿಗೆಯ ಬಿಸಿಲಿನಿಂದ ರಕ್ಷಿಸಿಕೊಳ್ಳಲು ಮನೆ (home), ಕಚೇರಿಯಲ್ಲಿ (office) ಅಳವಡಿಸುವ ಈ ಹವಾ ನಿಯಂತ್ರಕಗಳು (Air Conditioner Safety) ಕೆಲವೊಮ್ಮೆ ಅಪಾಯವನ್ನು ಉಂಟು ಮಾಡುತ್ತದೆ. ಎಸಿ ಯಲ್ಲಿ ಸ್ಫೋಟ ಉಂಟಾಗುವುದು ಅಪರೂಪವೇನಲ್ಲ.

ಇತ್ತೀಚೆಗೆ ಕರ್ನಾಟಕದ (karnataka) ಚಿನ್ನದ ಮಳಿಗೆಯೊಂದರಲ್ಲಿ ಏರ್ ಕಂಡಿಷನರ್ ಸ್ಫೋಟಗೊಂಡಿತು. ಮೂವರು ಗಂಭೀರವಾಗಿ ಗಾಯಗೊಂಡಿದ್ದರು. ಅದೇ ರೀತಿ ನೋಯ್ಡಾದ (noida) ರೆಸಿಡೆನ್ಶಿಯಲ್ ಸೊಸೈಟಿಯ ಫ್ಲ್ಯಾಟ್‌ ನಲ್ಲೂ ಇದೀಗ ಈ ಘಟನೆ ನಡೆದಿರುವ ವರದಿಯಾಗಿದೆ. ಇದರ ಪರಿಣಾಮವಾಗಿ ಬೃಹತ್ ಬೆಂಕಿ ಬಹುಮಹಡಿ ಅಪಾರ್ಟ್ಮೆಂಟ್ ಕಟ್ಟಡದಲ್ಲಿನ ಇತರ ಫ್ಲಾಟ್‌ಗಳಿಗೆ ಹರಡಿತ್ತು.

ಹವಾನಿಯಂತ್ರಣ ಘಟಕದಲ್ಲಿ ಉಂಟಾಗುವ ಸ್ಫೋಟ ಅಥವಾ ಬೆಂಕಿಯನ್ನು “ಎಸಿ ಬ್ಲಾಸ್ಟ್” ಎಂದು ಕರೆಯಲಾಗುತ್ತದೆ. ಘಟನೆಗಳು ವಿವಿಧ ಕಾರಣಗಳಿಂದ ಸಂಭವಿಸಬಹುದು, ಸಾಮಾನ್ಯವಾಗಿ ಯಾಂತ್ರಿಕ ಅಥವಾ ವಿದ್ಯುತ್ ಅಸಮರ್ಪಕ ಕಾರ್ಯಗಳು. ಹವಾನಿಯಂತ್ರಣಗಳು ಏಕೆ ಸ್ಫೋಟಗೊಳ್ಳುತ್ತವೆ ಮತ್ತು ಅದು ಸಂಭವಿಸದಂತೆ ಹೇಗೆ ತಡೆಯಬಹುದು ಎಂಬುದರ ಕುರಿತು ಮಾಹಿತಿ ಇಲ್ಲಿದೆ.


ಎಸಿ ಏಕೆ ಸ್ಫೋಟಗೊಳ್ಳುತ್ತವೆ?

ಹವಾನಿಯಂತ್ರಣ ಸ್ಫೋಟಗಳು ಸಾಮಾನ್ಯವಾಗಿ ಆಂತರಿಕ ಸಮಸ್ಯೆಗಳಿಂದ ಉಂಟಾಗುತ್ತದೆ. ಮೊಂಟಾನಾ ಮೂಲದ ಎಸಿ ರಿಪೇರಿ ಕಂಪನಿಯಾದ ಪ್ರೀಮಿಯರ್ ಸಿಸ್ಟಮ್ಸ್ ಪ್ರಕಾರ, ಎಸಿ ಘಟಕದೊಳಗೆ ನಿರ್ಮಿಸಲಾದ ಒತ್ತಡವು ಸ್ಫೋಟಗೊಳ್ಳಲು ಕಾರಣವಾಗುತ್ತದೆ. ಅಲ್ಲದೇ ಇನ್ನು ಕೆಲವು ಕಾರಣಗಳಿವೆ.

ವಿದ್ಯುತ್ ಸಮಸ್ಯೆಗಳು

ದೋಷಯುಕ್ತ ತಂತಿಗಳು ಮತ್ತು ಕನೆಕ್ಟರ್‌ಗಳು ಬೆಂಕಿಯ ಅಪಾಯವನ್ನು ಉಂಟುಮಾಡಿ ಎಸಿ ಸ್ಪೋಟಕ್ಕೆ ಕಾರಣವಾಗುತ್ತದೆ.

ಶೈತ್ಯೀಕರಣದ ಸೋರಿಕೆಗಳು

ಎಸಿಯಲ್ಲಿ ನೀರಿನ ಸೋರಿಕೆಯು ತಂಪಾಗಿಸುವ ಪ್ರಕ್ರಿಯೆಯನ್ನು ಅಡ್ಡಿಪಡಿಸುತ್ತದೆ. ಇದರಿಂದಾಗಿ ಘಟಕವು ಹೆಚ್ಚು ಕೆಲಸ ಮಾಡುತ್ತದೆ ಮತ್ತು ಸಂಭಾವ್ಯವಾಗಿ ಬೆಂಕಿ ಹೊತ್ತಿಕೊಳ್ಳುತ್ತದೆ. ಇದು ಸ್ಫೋಟಕ್ಕೆ ಕಾರಣವಾಗುತ್ತದೆ.

ಕಡಿಮೆ ಲೂಬ್ರಿಕಂಟ್ ಮಟ್ಟಗಳು

ಸಾಕಷ್ಟು ನಯಗೊಳಿಸುವಿಕೆಯು ಘರ್ಷಣೆ ಮತ್ತು ಶಾಖದ ರಚನೆ ಬೆಂಕಿ ಮತ್ತು ಸ್ಫೋಟಗಳಿಗೆ ಕಾರಣವಾಗುತ್ತದೆ.

ಕೊಳೆಯುಕ್ತ ಕಾಯಿಲ್‌ಗಳು

ಕಂಡೆನ್ಸರ್ ಕಾಯಿಲ್‌ಗಳ ಮೇಲೆ ಸಂಗ್ರಹವಾಗುವ ಕೊಳೆ ತಂಪಾಗಿಸುವ ಪ್ರಕ್ರಿಯೆಗೆ ಅಡ್ಡಿಯಾಗಬಹುದು. ಇದು ಹೆಚ್ಚುವರಿ ಶಾಖದ ರಚನೆ ಮತ್ತು ಘಟಕದೊಳಗೆ ಒತ್ತಡಕ್ಕೆ ಕಾರಣವಾಗಿ ಸ್ಫೋಟ ಉಂಟಾಗುವುದು.


ಎಸಿ ಸ್ಫೋಟ ತಡೆಯುವುದು ಹೇಗೆ?

ಏರ್ ಕಂಡಿಷನರ್ ಸ್ಫೋಟಗಳನ್ನು ತಡೆಗಟ್ಟಲು ಕೆಲವೊಂದು ಮುನ್ನೆಚ್ಚರಿಕೆಗಳನ್ನು ವಹಿಸಬೇಕು ಎನ್ನುತ್ತದೆ ಪ್ರೀಮಿಯರ್ ಸಿಸ್ಟಮ್ಸ್.
1. ಸಿಡಿಲು, ಮಳೆ, ಗಾಳಿಯಂತಹ ತೀವ್ರವಾದ ಹವಾಮಾನ ಪರಿಸ್ಥಿತಿಗಳಲ್ಲಿ ಎಸಿ ಅನ್ನು ಅನ್‌ಪ್ಲಗ್ ಮಾಡುವ ಮೂಲಕ ವಿದ್ಯುತ್ ತೊಂದರೆಯಾಗುವುದರಿಂದ ತಪ್ಪಿಸಿ.
2. ಮಿತಿಮೀರಿದ ಎಸಿ ಬಳಕೆಯನ್ನು ತಪ್ಪಿಸಲು ನಿಯಮಿತವಾಗಿ ಮಧ್ಯಂತರದಲ್ಲಿ ಎಸಿ ಯನ್ನು ಸ್ವಿಚ್ ಆಫ್ ಮಾಡಿ. ಎಸಿಯಲ್ಲಿನ ತೊಡಕುಗಳನ್ನು ನಿವಾರಿಸಲು ಕಡಿಮೆ ಶೈತ್ಯೀಕರಣದ ಮಟ್ಟವನ್ನು ಸರಿಯಾದ ಶೀತಕದೊಂದಿಗೆ ಬದಲಾಯಿಸಿ.
3. ಘಟಕವು ಸರಿಯಾಗಿ ಕಾರ್ಯ ನಿರ್ವಹಿಸುತ್ತಿದೆ ಎಂಬುದನ್ನು ತಿಳಿಯಲು ದಿನನಿತ್ಯದ ನಿರ್ವಹಣೆ ಮತ್ತು ತಪಾಸಣೆಗಳನ್ನು ನಡೆಸಿ.
4. ಸರ್ಜ್ ಪ್ರೂಫ್ ಎಕ್ಸ್‌ಟೆನ್ಶನ್ ಕಾರ್ಡ್‌ಗಳೊಂದಿಗೆ ಎಸಿಯನ್ನು ಸುರಕ್ಷಿತವಾಗಿರಿಸಿ.

ಎಸಿಯಲ್ಲಿ ದೋಷವಿದೆ ಎಂಬುದನ್ನು ಪತ್ತೆ ಹಚ್ಚುವುದು ಹೇಗೆ?

ಎಸಿ ಯುನಿಟ್ ದೋಷಪೂರಿತವಾಗಿದೆಯೇ ಎಂದು ತಿಳಿಯಲು ಸೂಕ್ಶ್ಮವಾಗಿ ಅವುಗಳನ್ನು ಪರಿಶೀಲಿಸಿ. ಅದರ ಕಂಪ್ರೆಸರ್ ನಿರಂತರವಾಗಿ ಚಾಲನೆಯಲ್ಲಿದ್ದರೆ ಅದನ್ನು ಯಾವಾಗಲೂ ಪರೀಕ್ಷಿಸಿ. ಅಲ್ಲದೇ ಅದರೊಳಗೆ ಅಸಾಮಾನ್ಯ ಶಬ್ದಗಳು ಬರುತ್ತಿದ್ದರೆ, ಶಾಖ ವರ್ಗಾವಣೆಯಲ್ಲಿ ವ್ಯತ್ಯಾಸದಿಂದ ಎಸಿಯಲ್ಲಿ ದೋಷವಿರುವುದನ್ನು ಕಂಡುಕೊಳ್ಳಬಹುದು.

ಇದನ್ನೂ ಓದಿ: Water Aerator : ಸ್ವಿಗ್ಗಿಯಲ್ಲಿ ಆರ್ಡರ್ ಮಾಡಿದ್ರೆ 10 ನಿಮಿಷದಲ್ಲಿ ಮನೆ ತಲುಪುತ್ತದೆ ವಾಟರ್ ಏರಿಯೇಟರ್​

ಎಸಿ ನಿರ್ವಹಣೆಗೆ ಟಿಪ್ಸ್

  1. 1. ಯೂನಿಟ್‌ನಲ್ಲಿನ ಒತ್ತಡವನ್ನು ಕಡಿಮೆ ಮಾಡಲು ಏರ್ ಫಿಲ್ಟರ್ ಅನ್ನು ಸ್ವಚ್ಛವಾಗಿಡಿ.
    2. ಎಸಿಯ ಕಿಟಕಿ ಘಟಕಗಳು ಸ್ವಲ್ಪ ಹೊರಕ್ಕೆ ಓರೆಯಾಗಿವೆ ಎಂಬುದನ್ನು ಖಚಿತಪಡಿಸಿಕೊಳ್ಳಿ.
    3. ಎಸಿ ಅನ್ನು ನೇರವಾಗಿ ಅದರ ಸರ್ಕ್ಯೂಟ್‌ಗೆ ಸಂಪರ್ಕಗೊಳಿಸಿ.
    4.ಎಸಿ ಯುನಿಟ್‌ಗೆ ಎಂದಾದರೂ ಬೆಂಕಿ ಬಿದ್ದಿದ್ದರೆ ಅದನ್ನು ಅನ್‌ಪ್ಲಗ್ ಮಾಡಿ ಮತ್ತು ನಿಯಮಿತವಾಗಿ ವೈರಿಂಗ್ ಅನ್ನು ಪರೀಕ್ಷಿಸಿ.
    5. ಹಳೆಯ ಘಟಕಗಳನ್ನು ಮರುಪೂರಣ ಮಾಡುವಾಗ ಸರಿಯಾದ ಅನಿಲವನ್ನು ಬಳಸಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳಿ.
    6. ಸರಿಯಾದ ವೈರಿಂಗ್ ಹೊಂದಿಸುವ ಮೂಲಕ, ವೋಲ್ಟೇಜ್ ಸುರಕ್ಷತೆಗಳನ್ನು ಸೇರಿಸುವ ಮೂಲಕ ಮತ್ತು ಎಸಿ ಅನ್ನು ನಿಯಮಿತವಾಗಿ ನಿರ್ವಹಿಸುವ ಮೂಲಕ ಸಂಭಾವ್ಯ ಬೆಂಕಿಯ ಅಪಾಯ ಉಂಟಾಗುವುದನ್ನು ತಡೆಯಬಹುದು.
Continue Reading
Advertisement
Exit Poll 2024
ದೇಶ7 mins ago

Exit Poll 2024 : ಮತಗಟ್ಟೆ ಸಮೀಕ್ಷೆಗಳನ್ನು ನಾವು ನಂಬಲ್ಲ; ಡಿಕೆಶಿ, ಎಂಬಿ ಪಾಟೀಲ್ ಸ್ಪಷ್ಟ ನುಡಿ

Prajwal Revanna Case
ಕರ್ನಾಟಕ24 mins ago

Prajwal Revanna Case: ಕಡೆಗೂ ವಿಚಾರಣೆಗೆ ಹಾಜರಾಗದ ಭವಾನಿ ರೇವಣ್ಣ; 7 ಗಂಟೆ ಕಾದು ಎಸ್‌ಐಟಿ ತಂಡ ವಾಪಸ್

Exit Poll 2024
ಪ್ರಮುಖ ಸುದ್ದಿ32 mins ago

Exit Poll 2024 : ತಮಿಳುನಾಡು, ಕೇರಳದಲ್ಲೂ ಅರಳಲಿದೆ ಕಮಲ; ಮೋದಿಗಿದು ಐತಿಹಾಸಿಕ ಸಾಧನೆ

Exit Poll 2024
ದೇಶ51 mins ago

Exit Poll 2024: ಗುಜರಾತ್‌ನಲ್ಲಿ ಬಿಜೆಪಿ ಕ್ಲೀನ್‌ಸ್ವೀಪ್‌, ಉತ್ತರ ಪ್ರದೇಶದಲ್ಲಿ ಮೇಲುಗೈ; ರಾಜ್ಯವಾರು ಎಕ್ಸಿಟ್‌ ಪೋಲ್‌ ವರದಿ ಇಲ್ಲಿದೆ

exit poll 2024
ಪ್ರಮುಖ ಸುದ್ದಿ1 hour ago

Exit Poll 2024: ಮುಸ್ಲಿಮರ ಶೇ.72ರಷ್ಟು ಮತಗಳು ಕಾಂಗ್ರೆಸ್‌ಗೆ; ಮೋದಿ ವಿರುದ್ಧ ಒಂದಾದ ಅಲ್ಪಸಂಖ್ಯಾತರು

Union Minister Pralhad Joshi showed humanity by taking the injured to the hospital in his convoy vehicle
ಕರ್ನಾಟಕ1 hour ago

Pralhad Joshi: ಗಾಯಾಳುಗಳನ್ನು ಬೆಂಗಾವಲು ವಾಹನದಲ್ಲೇ ಆಸ್ಪತ್ರೆಗೆ ಸೇರಿಸಿದ ಪ್ರಲ್ಹಾದ್‌ ಜೋಶಿ

Air Conditioner Safety
ತಂತ್ರಜ್ಞಾನ1 hour ago

Air Conditioner Safety: ಎಸಿ ಏಕೆ ಬ್ಲಾಸ್ಟ್ ಆಗುತ್ತದೆ? ಅಪಾಯ ತಡೆಯುವುದು ಹೇಗೆ?

Valmiki Corporation Scam
ಕರ್ನಾಟಕ2 hours ago

Valmiki Corporation Scam: ವಾಲ್ಮೀಕಿ ನಿಗಮದ ಇಬ್ಬರು ಅಧಿಕಾರಿಗಳಿಗೆ 6 ದಿನ ಎಸ್‌ಐಟಿ ಕಸ್ಟಡಿ

Ballari DC Prashanth Kumar Mishra visit to Vote counting centre Review of final preparations
ಬಳ್ಳಾರಿ2 hours ago

Lok Sabha Election 2024: ಬಳ್ಳಾರಿಯ ಮತ ಎಣಿಕೆ ಕೇಂದ್ರಕ್ಕೆ ಡಿಸಿ ಭೇಟಿ: ಅಂತಿಮ ಸಿದ್ಧತೆ ಪರಿಶೀಲನೆ

Exit poll 2024
ಪ್ರಮುಖ ಸುದ್ದಿ2 hours ago

Exit Poll 2024 : ಕರ್ನಾಟಕದಲ್ಲಿ ಬಿಜೆಪಿಗೆ ನಷ್ಟ, ಕಾಂಗ್ರೆಸ್​ಗೆ ಲಾಭ ; ಜೆಡಿಎಸ್​ಗೆ +1

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Liquor ban
ಬೆಂಗಳೂರು4 hours ago

Liquor Ban : ಮುಂದಿನ ಏಳು ದಿನಗಳಲ್ಲಿ ನಾಲ್ಕೂವರೆ ದಿನ ಬಾರ್ ಕ್ಲೋಸ್; ಎಣ್ಣೆ ಸಿಗೋದು ಯಾವ ದಿನ?

Assault Case in Shivamogga
ಕ್ರೈಂ2 days ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ4 days ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು4 days ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ5 days ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ6 days ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು6 days ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ1 week ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ1 week ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ2 weeks ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

ಟ್ರೆಂಡಿಂಗ್‌