ಇಂದು ತಿಪಟೂರಿನಲ್ಲಿ ರಾಜ್ಯ ಮಟ್ಟದ ಶೈಕ್ಷಣಿಕ ಕಾರ್ಯಾಗಾರ; ಶಿಕ್ಷಕರ ಸಂಘದಿಂದ ಸಕಲ ಸಿದ್ಧತೆ - Vistara News

ನೌಕರರ ಕಾರ್ನರ್

ಇಂದು ತಿಪಟೂರಿನಲ್ಲಿ ರಾಜ್ಯ ಮಟ್ಟದ ಶೈಕ್ಷಣಿಕ ಕಾರ್ಯಾಗಾರ; ಶಿಕ್ಷಕರ ಸಂಘದಿಂದ ಸಕಲ ಸಿದ್ಧತೆ

ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘವು ರಾಜ್ಯ ಮಟ್ಟದ ಶೈಕ್ಷಣಿಕ ಕಾರ್ಯಾಗಾರವನ್ನು ತಿಪಟೂರಿನಲ್ಲಿ ಏರ್ಪಡಿಸಿದ್ದು, ರಾಜ್ಯದ ವಿವಿಧ ಶೈಕ್ಷಣಿಕ ಜಿಲ್ಲೆಗಳ ಶಿಕ್ಷಕರು ಈ ಕಾರ್ಯಗಾರದಲ್ಲಿ ಭಾಗವಹಿಸಲಿದ್ದಾರೆ.

VISTARANEWS.COM


on

ಶೈಕ್ಷಣಿಕ ಕಾರ್ಯಾಗಾರ
ಶೈಕ್ಷಣಿಕ ಕಾರ್ಯಾಗಾರ ನಡೆಯಲಿರುವ ವೇದಿಕೆ
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಮಟ್ಟದ ಶೈಕ್ಷಣಿಕ ಕಾರ್ಯಾಗಾರ ತುಮಕೂರು ಜಿಲ್ಲೆ ತಿಪಟೂರಿನ ಸರ್ಕಾರಿ ಬಾಲಕರ ಪ್ರೌಢಶಾಲಾ ಆವರಣದಲ್ಲಿ ನವೆಂಬರ್‌ 30 ರಂದು ನಡೆಯಲಿದೆ. ಸಂಘದ ಅಧ್ಯಕ್ಷ ಶಂಭುಲಿಂಗನ ಗೌಡ ಪಾಟೀಲ ಮತ್ತು ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ ನೇತೃತ್ವದ ತಂಡ ಈ ಕಾರ್ಯಾಗಾರವನ್ನು ಯಶಸ್ವಿಯಾಗಿ ನಡೆಸಲು ಸಕಲ ಸಿದ್ಧತೆ ಮಾಡಿಕೊಂಡಿದೆ.

ಈ ಕಾರ್ಯಾಗಾರದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ಗೌರವಾನ್ವಿತ 61 ಶಿಕ್ಷಕ ಹಾಗೂ ಶಿಕ್ಷಕಿಯರಿಗೆ “ಅಕ್ಷರ ಸಿರಿʼʼ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಅಭಿನಂದನಾ ಸಮಾರಂಭ ಹಾಗೂ ಸಂಘದ ಸರ್ವ ಸದಸ್ಯರ ಸಭೆಯೂ ನಡೆಯಲಿದೆ.

ರಾಜ್ಯದ 35 ಶೈಕ್ಷಣಿಕ ಜಿಲ್ಲೆಗಳ ಶಿಕ್ಷಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಶಿಕ್ಷಕರನ್ನು ಸನ್ಮಾಸಿಸುವ ಕಾರ್ಯಕ್ರಮದ ಸಾನಿಧ್ಯವನ್ನು ತುಮಕೂರು ಜಿಲ್ಲೆಯ ಸಿದ್ದಗಂಗಾ ಮಠದ ಶ್ರೀ ಸಿದ್ದಗಂಗಾ ಸ್ವಾಮೀಜಿ ಹಾಗೂ ಕೆರಗೋಡಿ ರಂಗಾಪುರ ಸುಕ್ಷೇತ್ರಾಧ್ಯಕ್ಷರಾದ ಶ್ರೀ ಗುರುಪರದೇಶಿಕೇಂದ್ರ ಮಹಾಸ್ವಾಮೀಜಿ ವಹಿಸಲಿದ್ದಾರೆ. ಕಾರ್ಯಾಗಾರವನ್ನು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಬಿ.ಸಿ ನಾಗೇಶ್ ಉದ್ಘಾಟಿಸಲಿದ್ದಾರೆ.

ಶೈಕ್ಷಣಿಕ ಕಾರ್ಯಾಗಾರ
ವ್ಯವಸ್ಥೆ ಪರಿಶೀಲಿಸುತ್ತಿರುವ ಸಂಘದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ ಮತ್ತಿತರರು.

ಇಲಾಖೆಯ ಪ್ರಧಾನ ಕಾರ್ಯದರ್ಶಿ ರಿತೀಶ್‌ ಕುಮಾರ್‌ಸಿಂಗ್, ಆಯುಕ್ತರಾದ ಡಾ.ಆರ್.ವಿಶಾಲ್, ಸಮಗ್ರ ಶಿಕ್ಷಣ ರಾಜ್ಯ ಯೋಜನಾ ನಿರ್ದೇಶಕಿ ಕಾವೇರಿ, ಪ್ರಾಥಮಿಕ ಶಿಕ್ಷಣ ನಿರ್ದೇಶಕ ಪ್ರಸನ್ನ ಕುಮಾರ್, ತುಮಕೂರು ಜಿಲ್ಲೆಯ ಉಪನಿರ್ದೇಶಕ ನಂಜಯ್ಯ, ಸ್ಥಳೀಯ ನಗರಸಭೆಯ ಅಧ್ಯಕ್ಷ ರಾಮ್ ಮೋಹನ್, ಅಖಿಲ ಭಾರತ ಶಿಕ್ಷಕರ ಫೆಡರೇಷನ್‌ನ ಕಾರ್ಯದರ್ಶಿ ಬಸವರಾಜು ಗುರಿಕಾರ, ಸಂಘದ ನಿಕಟಪೂರ್ವ ಅಧ್ಯಕ್ಷ ನಾರಾಯಣಸ್ವಾಮಿ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದಾರೆ.

ಕಾರ‍್ಯಕ್ರಮದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಪ್ರಮುಖ 26 ಬೇಡಿಕೆಗಳನ್ನು ಸರ್ಕಾರಕ್ಕೆ ಸಲ್ಲಿಸಲು ಶಿಕ್ಷಕರ ಸಂಘವು ಸಿದ್ಧತೆ ಮಾಡಿಕೊಂಡಿದೆ. ಕಾರ್ಯಾಗಾರದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯ ಕುರಿತು ತಜ್ಞರು ಮಾಹಿತಿ ನೀಡಲಿದ್ದಾರೆ.

ಊಟಕ್ಕೆ ತಿಪಟೂರಿನ ಮೆಂತೆ ಬಾತು
ರಾಜ್ಯ ಮಟ್ಟದ ಕಾರ್ಯಾಗಾರಕ್ಕೆ ಆಗಮಿಸುವ ಶಿಕ್ಷಕರಿಗೆ ವಿಶೇಷ ಭೋಜನ ವ್ಯವಸ್ಥೆಯನ್ನು ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘವು ಮಾಡಿದೆ. ತಿಪಟೂರಿನ ಪ್ರಸಿದ್ಧ ಮೆಂತೆಬಾತು ಮೆನು ಕಾರ್ಡ್‌ನಲ್ಲಿ ಅಗ್ರ ಸ್ಥಾನ ಪಡೆದಿದೆ. ಇದಲ್ಲದೆ ಕಾಯಿ ಒಬ್ಬಟ್ಟು (ಹೋಳಿಗೆ), ರಾಗಿ ಮುದ್ದೆ, ಹುರುಳಿಕಾಳು, ಸಾಂಬಾರು, ಹಪ್ಪಳ, ಕೋಸಂಬರಿ, ಸಬ್ಬಕ್ಕಿ ಪಾಯಸ, ಅನ್ನ, ರಸಂ, ಚಟ್ನಿ, ಹಪ್ಪಳ, ಮಜ್ಜಿಗೆ ಬಾಳೆಹಣ್ಣು ಇರಲಿದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ ತಿಳಿಸಿದ್ದಾರೆ.

ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತುಮಕೂರು ಜಿಲ್ಲಾ ಅದ್ಯಕ್ಷ ಪರಶಿವ ಮೂರ್ತಿ, ತಾಲ್ಲೂಕು ಅಧ್ಯಕ್ಷ ಜಯರಾಂ ಜಿ.ಆರ್, ಪ್ರಧಾನ ಕಾರ್ಯದರ್ಶಿ ಪಟ್ಟಾಭಿರಾಮು ಗುಬ್ಬಿ, ಪ್ರಧಾನ ಕಾರ್ಯದರ್ಶಿ ಪ್ರಕಾಶ್ , ಸಹಕಾರ್ಯದರ್ಶಿ ನಾಗರಾಜು, ಸೋಮಶೇಖರ್‌, ತಿಮ್ಮೆಗೌಡ, ಗೌರವಾಧ್ಯಕ್ಷ ಓಂಕಾರ ಮೂರ್ತಿ, ಚಿಕ್ಕಣ್ಣ, ಬಸವರಾಜು, ಕೆಂಪೇಗೌಡ ಮತ್ತಿತರರು ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲು ಹಗಲಿರುಳು ಶ್ರಮಿಸುತ್ತಿದ್ದಾರೆ.

ಇದನ್ನೂ ಓದಿ | ಸೇವಾ ನಿರತ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಬಡ್ತಿ; ಸದ್ಯವೇ ಸರ್ಕಾರದಿಂದ ಗುಡ್‌ ನ್ಯೂಸ್‌?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕರ್ನಾಟಕ

GPF Interest: ಸರ್ಕಾರಿ ನೌಕರರೇ ಗಮನಿಸಿ; 5 ಲಕ್ಷ ಮೀರಿದ ಜಿಪಿಎಫ್‌ಗೆ ಬಡ್ಡಿ ಪಾವತಿಸಲು ಸರ್ಕಾರ ಆದೇಶ

GPF Interest: ಸಾಮಾನ್ಯ ಭವಿಷ್ಯ ನಿಧಿಯು (General Provident Fund) ರಾಜ್ಯ ಮತ್ತು ಕೇಂದ್ರ ಸರ್ಕಾರದ ಭವಿಷ್ಯ ನಿಧಿ ಯೋಜನೆಯಾಗಿದ್ದು, ಕೇವಲ ಸರ್ಕಾರಿ ನೌಕರರಿಗೆ (ಗ್ರೂಪ್‌ ಡಿ ಹೊರತುಪಡಿಸಿ) ಇದನ್ನು ಒದಗಿಸಲಾಗುತ್ತದೆ.

VISTARANEWS.COM


on

GPF Interest
Koo

ಬೆಂಗಳೂರು: ಕರ್ನಾಟಕ ರಾಜ್ಯ ಸರ್ಕಾರದ ಸಾಮಾನ್ಯ ಭವಿಷ್ಯ ನಿಧಿ (General Provident Fund) ಚಂದಾದಾರರ ಪ್ರಕರಣಗಳಲ್ಲಿ 2023-24 ನೇ ಆರ್ಥಿಕ ವರ್ಷದಲ್ಲಿ 5 ಲಕ್ಷ ರೂ.ಗಳಿಗೂ ಮೀರಿ ಜಿಪಿಎಫ್ ವಂತಿಗೆ ಕಟಾವಣೆಯಾಗಿರುವ ಮೊತ್ತಕ್ಕೆ ಬಡ್ಡಿಯನ್ನು (GPF Interest) ಪಾವತಿಸಲು ರಾಜ್ಯ ಸರ್ಕಾರ ಆದೇಶ ನೀಡಿದೆ.

ಈ ಬಗ್ಗೆ ಆರ್ಥಿಕ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ನೇತ್ರಪ್ರಭಾ ಎಂ.ಧಾಯಪುಲೆ ಅವರು ಆದೇಶ ಹೊರಡಿಸಿದ್ದು, 2023-24 ನೇ ಸಾಲಿಗೆ ಅನ್ವಯಿಸುವಂತೆ ಕರ್ನಾಟಕ ರಾಜ್ಯದ ಜಿಪಿಎಫ್ ಚಂದಾದಾರರ ಖಾತೆಗಳಿಗೆ 5 ಲಕ್ಷ ರೂ. ಮೀರಿ ಜಮಾವಣೆ ಮಾಡಿರುವ ಮೊತ್ತಕ್ಕೆ ಆದಾಯ ತೆರಿಗೆ ಅನ್ವಯಿಕೆಗೊಳಪಟ್ಟು ಬಡ್ಡಿಯನ್ನು ಪಾವತಿಸಲು ಸರ್ಕಾರದ ಮಂಜೂರಾತಿಯನ್ನು ನೀಡಲಾಗಿದೆ. ಅದರಂತೆ ಖಜಾನೆಗಳಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯದ ಎಲ್ಲಾ ಖಜಾನೆಗಳ ಪ್ರಭಾರಾಧಿಕಾರಿಗಳಿಗೆ ತಿಳಿಸಿದ್ದಾರೆ.

ಕರ್ನಾಟಕ ಸಾಮಾನ್ಯ ಭವಿಷ್ಯ ನಿಧಿ ನಿಯಮಗಳು, 2016ರ ಅಡಿಯಲ್ಲಿ ರಾಜ್ಯ ಸರ್ಕಾರವು ಈ ಭವಿಷ್ಯ ನಿಧಿಯನ್ನು ಸ್ಥಾಪಿಸಿದೆ. ಪ್ರತಿ ನೌಕರರು ಮಾಸಿಕ ವಂತಿಗೆಯನ್ನು ಪಾವತಿಸುವ ಮೂಲಕ ಈ ನಿಧಿಯ ಚಂದಾದಾರಾಗಬಹುದು. ತಾವು ಹೊಂದಿರುವ ಹುದ್ದೆಯ ಗರಿಷ್ಠ ಮೂಲ ವೇತನಕ್ಕೆ ಒಳಪ್ಟಟ ಕನಿಷ್ಠ ಪ್ರಮಾಣಕ್ಕಿಂತ ಹೆಚ್ಚಿನ ವಂತಿಗೆಯನ್ನು ಆಯ್ಕೆಮಾಡಿಕೊಳ್ಳಬಹುದು.

ಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕರರ ಸಾಮಾನ್ಯ ಭವಿಷ್ಯ ನಿಧಿಯ ಬಡ್ಡಿದರವನ್ನು ಮೂರು ತಿಂಗಳಿಗೊಮ್ಮೆ ಪರಿಷ್ಕರಿಸಲಾಗುತ್ತದೆ. 01-04-2006 ಕ್ಕಿಂತ ಮೊದಲು ರಾಜ್ಯದ ಸೇವೆಗೆ ಸೇರಿದ ರಾಜ್ಯ ಸರ್ಕಾರಿ ನೌಕರರು ಈ ಭವಿಷ್ಯ ನಿಧಿಯ ವಂತಿಕೆದಾರರಾಗಿರುತ್ತಾರೆ. 2024ರ ಜನವರಿ 1ರಿಂದ ಮಾರ್ಚ್‌ 31ರವರೆಗೆ ಶೇ.7.1 ಬಡ್ಡಿ ದರ ನಿಗದಿಯಾಗಿತ್ತು.

ಸಾಮಾನ್ಯ ಭವಿಷ್ಯ ನಿಧಿಯು ರಾಜ್ಯ ಮತ್ತು ಕೇಂದ್ರ ಸರ್ಕಾರದ ಭವಿಷ್ಯ ನಿಧಿ ಯೋಜನೆಯಾಗಿದ್ದು, ಕೇವಲ ಸರ್ಕಾರಿ ನೌಕರರಿಗೆ (ಗ್ರೂಪ್‌ ಡಿ ಹೊರತುಪಡಿಸಿ) ಇದನ್ನು ಒದಗಿಸಲಾಗುತ್ತದೆ. ಪ್ರತಿ ತಿಂಗಳು ನೌಕರರು ಇಂತಿಷ್ಟು ಎಂದು ತಮ್ಮ ವೇತನದಲ್ಲಿ ಹಣವನ್ನು ಇದಕ್ಕೆ ತೆಗೆದಿರಿಸುತ್ತಾರೆ. ಹೀಗೆ ಸಂಗ್ರಹವಾದ ಮೊತ್ತವನ್ನು ಅಗತ್ಯವಿರುವಾಗ ನೌಕರರು ಮನೆ ಅಥವಾ ನಿವೇಶನ ಕೊಳ್ಳುವ ಸಂದರ್ಭದಲ್ಲಿ, ಮನೆ ಕಟ್ಟುವಾಗ, ಮದುವೆಯಾಗುವ, ಕಾರು ಕೊಳ್ಳುವಾಗ ಅಥವಾ ಮಕ್ಕಳ ಶೈಕ್ಷಣಿಕ ಉದ್ದೇಶಗಳಿಗಾಗಿ ಈ ಹಣವನ್ನು ಹಿಂದಕ್ಕೆ ಪಡೆಯಲು ಅವಕಾಶ ನೀಡಲಾಗಿರುತ್ತದೆ. ಪಡೆದುಕೊಳ್ಳಬಹುದು, ಇಲ್ಲವೇ, ನಿವೃತ್ತಿ ಸಂದರ್ಭದಲ್ಲಿ ಒಟ್ಟಾಗಿ ಪಡೆದುಕೊಳ್ಳಬಹುದಾಗಿದೆ. ಮಹಾಲೇಖಪಾಲಕರ ಕಚೇರಿಯು ಈ ನಿಧಿಯನ್ನು ನಿರ್ವಹಿಸುತ್ತದೆ.

ಇದನ್ನೂ ಓದಿ | EPF Account Rules: ಕ್ಲೈಮ್ ಇತ್ಯರ್ಥ ಇನ್ನು ಸುಲಭ; ಇಪಿಎಫ್‌ಒ ಮಾಡಿದೆ ಹಲವು ಹೊಸ ಬದಲಾವಣೆ

ಇತ್ತೀಚೆಗೆ ಕೇಂದ್ರ ಸರ್ಕಾರವು ಈ ನಿಧಿಗೆ ಸಂಬಂಧಿಸಿದ ನಿಯಮಗಳಲ್ಲಿ ಬದಲಾವಣೆ ಮಾಡಿದ್ದು, ಈಗ ಜಿಪಿಎಫ್‌ ಅನ್ನು ಕಾರು, ಸ್ಕೂಟರ್‌ನಂಥ ಗ್ರಾಹಕೋತ್ಪನ್ನಗಳ ಖರೀದಿ ಸಲುವಾಗಿಯೂ ಬಳಸಬಹುದಾಗಿದೆ. ಈ ಹೊಸ ನಿಯಮದ ಪ್ರಕಾರ ಜಿಪಿಎಫ್‌ನಿಂದ ಹಣ ತೆಗೆಯುವ ಸಂದರ್ಭದಲ್ಲಿ ಅದನ್ನು ಮಂಜೂರು ಮಾಡುವ ಮತ್ತು ಕೈಗೆ ನೀಡುವ ಅವಧಿಯನ್ನು 15 ದಿನಗಳಿಗೆ ಸೀಮಿತಗೊಳಿಸಲಾಗಿದೆ. ಅನಾರೋಗ್ಯದಂಥ ತುರ್ತು ಸಂದರ್ಭಗಳಲ್ಲಿ 7 ದಿನದೊಳಗೆ ಹಣವನ್ನು ಪಡೆಯಬಹುದಾಗಿದೆ.

Continue Reading

ಪ್ರಮುಖ ಸುದ್ದಿ

CM Siddaramaiah: 370 ನಿವೃತ್ತ ಅಧಿಕಾರಿಗಳಿಗೆ ಬಾಗಿಲು ತೋರಿಸಿದ ಸರಕಾರ

CM Siddaramaiah: ಸದ್ಯ 20 ಇಲಾಖೆಗಳ ಮುಖ್ಯಸ್ಥರಿಗೆ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್ ಈ ಬಗ್ಗೆ ಪತ್ರ ಬರೆದಿದ್ದಾರೆ. ವಿವಿಧ ಹುದ್ದೆಗಳಿಗೆ ನೇಮಕವಾಗಿದ್ದ ನಿವೃತ್ತ ಅಧಿಕಾರಿಗಳಿಗೆ ಶಾಕ್ ಆಗುವಂತೆ, ಸರಿಸುಮಾರು 370ಕ್ಕೂ ಹೆಚ್ಚು ನಿವೃತ್ತ ನೌಕರರಿಗೆ ಸರ್ಕಾರದಿಂದ ಖೊಕ್ ಸಿಗುತ್ತಿದೆ.

VISTARANEWS.COM


on

CM Siddaramaiah and Vidhanasoudha
Koo

ಬೆಂಗಳೂರು: ಗುತ್ತಿಗೆ ಆಧಾರದಲ್ಲಿ ಸೇವೆ ಸಲ್ಲಿಸುತ್ತಿರುವ ನಿವೃತ್ತ ಅಧಿಕಾರಿಗಳನ್ನು (retired employees) ಸೇವೆಯಿಂದ ಕೈ ಬಿಡುವಂತೆ ವಿವಿಧ ಇಲಾಖಾ ಮುಖ್ಯಸ್ಥರಿಗೆ ಮುಖ್ಯಮಂತ್ರಿಗಳ (CM Siddaramaiah) ಮುಖ್ಯ ಕಾರ್ಯದರ್ಶಿ (Chief Secretary) ಪತ್ರ ಬರೆದಿದ್ದಾರೆ. ಸರಕಾರದ (Karnataka Govt) ಮೇಲಿನ ಹಣದ ಹೊರೆ (Fiscal deficit) ತಪ್ಪಿಸಲು ಈ ನಡೆ ಕೈಗೊಳ್ಳಲಾಗಿದೆ.

ಆರ್ಥಿಕ ಶಿಸ್ತು ಜಾರಿ‌ ಮಾಡಲು ನಾನಾ ಕಸರತ್ತು ನಡೆಸುತ್ತಿರುವ ಸಿಎಂ ಸಿದ್ದರಾಮಯ್ಯ, ಈ ಹಿಂದೆಯೂ ಒಮ್ಮೆ ಈ ಕೆಲಸ ಮಾಡಲು ಸೂಚಿಸಿದ್ದರು. ಸದ್ಯ 20 ಇಲಾಖೆಗಳ ಮುಖ್ಯಸ್ಥರಿಗೆ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್ ಈ ಬಗ್ಗೆ ಪತ್ರ ಬರೆದಿದ್ದಾರೆ. ವಿವಿಧ ಹುದ್ದೆಗಳಿಗೆ ನೇಮಕವಾಗಿದ್ದ ನಿವೃತ್ತ ಅಧಿಕಾರಿಗಳಿಗೆ ಶಾಕ್ ಆಗುವಂತೆ, ಸರಿಸುಮಾರು 370ಕ್ಕೂ ಹೆಚ್ಚು ನಿವೃತ್ತ ನೌಕರರಿಗೆ ಸರ್ಕಾರದಿಂದ ಖೊಕ್ ಸಿಗುತ್ತಿದೆ.

ಆರ್ಥಿಕ ಹೊರೆ ತಪ್ಪಿಸಲು ಸಿಎಂ ಸಿದ್ದರಾಮಯ್ಯ ಈ ಬಗ್ಗೆ ಜನವರಿ 9ರಂದು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದರು. ಹೊರಗುತ್ತಿಗೆಯಲ್ಲಿ ನೇಮಕವಾದ ನಿವೃತ್ತ ಅಧಿಕಾರಿಗಳನ್ನು ಸೇವೆಯಿಂದ ಬಿಡುಗಡೆ ಮಾಡಿ; ಆ ಹುದ್ದೆಯಲ್ಲಿ ಸೇವೆಯಲ್ಲಿರುವ ಅಧಿಕಾರಿಗಳನ್ನು ನಿಯೋಜನೆ ಮಾಡಿ ಎಂದು ಸೂಚನೆ ನೀಡಿದ್ದರು. ಸಿಎಂ ಸೂಚನೆ ಮೇರೆಗೆ ಜನವರಿ 23 ಮತ್ತು ಫೆಬ್ರವರಿ 22ರಂದು ಇಲಾಖೆಗಳಿಗೆ ಸಿಎಸ್ ಅವರಿಂದ ಟಿಪ್ಪಣಿ ರವಾನೆ ಆಗಿತ್ತು.

ಆದರೂ ನಿವೃತ್ತ ನೌಕರರನ್ನು ಕೈ ಬಿಡುವ ಪ್ರಕ್ರಿಯೆ ಯಾವುದೇ ಮುನ್ನಡೆ ಕಂಡಿರಲಿಲ್ಲ. ಹೀಗಾಗಿ ಮತ್ತೊಮ್ಮೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದು, ಸಿಎಂ ಸೂಚನೆ ಮೇರೆಗೆ ವಿವಿಧ ಇಲಾಖೆಗಳಿಗೆ ಸಿಎಸ್ ಪತ್ರ ಬರೆದಿದ್ದಾರೆ. ಹೊರಗುತ್ತಿಗೆ ಆಧಾರದಲ್ಲಿ ನಿರ್ವಹಿಸಲಾಗುತ್ತಿರುವ ಈ ಕಾರ್ಯಗಳ ಹೆಚ್ಚಿನ ಹೊಣೆ ಈಗಿನ ಇಲಾಖಾ ಅಧಿಕಾರಿಗಳ ಮೇಲೆ ಬೀಳಲಿದೆ.

ಈ ಹಿಂದಿನ ಸಿಎಂ ಟಿಪ್ಪಣಿಯಲ್ಲೇನಿದೆ?

“ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಹಿತ ಹಲವು ಇಲಾಖೆ- ಸಚಿವಾಲಯಗಳಲ್ಲಿ ಅನಗತ್ಯವಾಗಿ ಹುದ್ದೆಗಳನ್ನು ಸೃಷ್ಟಿಸಿ, ಸರ್ಕಾರಿ ಸೇವೆಯಿಂದ ನಿವೃತ್ತಿ ಹೊಂದಿದ ಅಧಿಕಾರಿ, ನೌಕರರನ್ನು ಸಮಾಲೋಚಕ, ವಿಶೇಷ ಸಂಪನ್ಮೂಲ ವ್ಯಕ್ತಿಗಳೆಂದು ಹಾಗೂ ಕೆಲವು ಗ್ರೂಪ್-ಎ ವೃಂದದ ಹುದ್ದೆಗಳಿಗೂ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಂಡಿರುವುದು ಗಮನಕ್ಕೆ ಬಂದಿದೆ. ಈ ನಿವೃತ್ತ ನೌಕರರಿಗೆ ವೇತನ, ವಾಹನ ಸೌಲಭ್ಯ ಇನ್ನಿತರ ಸೌಲಭ್ಯ ನೀಡಲಾಗುತ್ತಿದೆ. ಇದರಿಂದ ಬೊಕ್ಕಸಕ್ಕೆ ಹೆಚ್ಚುವರಿ ಹೊರೆಯಾಗುವುದಲ್ಲದೆ, ಕಾರ್ಯಕ್ಷಮತೆಯ ಗುಣಮಟ್ಟ ಹಾಗೂ ಉತ್ತರದಾಯಿತ್ವದ ಕೊರತೆಯೂ ಎದ್ದು ಕಾಣುತ್ತಿದೆ. ಆದ್ದರಿಂದ, ಸದರಿ ಹುದ್ದೆಗಳಿಗೆ ಹಾಲಿ ಸರ್ಕಾರಿ ಸೇವೆಯಲ್ಲಿರುವ ಅಧಿಕಾರಿ, ನೌಕರರನ್ನು ನಿಯೋಜಿಸಲು ಸೂಚಿಸಲಾಗಿದೆ.”

“ಹಾಗೆಯೇ, ವಿವಿಧ ಇಲಾಖೆಗಳಲ್ಲಿ ಗುತ್ತಿಗೆ, ಹೊರಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ನಿವೃತ್ತ ನೌಕರರನ್ನು ಕೂಡಲೇ ಸೇವೆಯಿಂದ ಬಿಡುಗಡೆಗೊಳಿಸಲು ಅಗತ್ಯ ಕ್ರಮ ವಹಿಸುವಂತೆ ಸೂಚಿಸಲಾಗಿದೆ. ಈ ಹಿನ್ನೆಲೆಯಲ್ಲಿ ಸೂಚನೆ ಆಧರಿಸಿ ಅಗತ್ಯ ಕ್ರಮ ಕೈಗೊಂಡು ವರದಿಯನ್ನು ತಮ್ಮ ಕಚೇರಿಗೆ ಸಲ್ಲಿಸುವಂತೆ” ಸಿಎಎಸ್ ನಿರ್ದೇಶನ ನೀಡಿದ್ದಾರೆ.

ನಿವೃತ್ತ ಅಧಿಕಾರಿಗಳನ್ನು ಹೀಗೆ ನೇಮಕ ಮಾಡಿಕೊಳ್ಳುವುದನ್ನು ವಿರೋಧಿಸಿ ಸಚಿವಾಲಯ ನೌಕರರ ಸಂಘವೂ ಹೋರಾಟ ಮಾಡಿತ್ತು. ಸಂಘದ ಹಿಂದಿನ ಅಧ್ಯಕ್ಷ ಪಿ. ಗುರುಸ್ವಾಮಿ, ಎನ್‌ಪಿಎಸ್ ನೌಕರರ ಸಂಘದ ಅಧ್ಯಕ್ಷ ಶಾಂತಾರಾಂ ಹಾಗೂ ಇತರ ಮುಖಂಡರು ಸಾಕಷ್ಟು ಬಾರಿ ಮುಖ್ಯ ಕಾರ್ಯದರ್ಶಿ ಹಾಗೂ ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದರು.

ಇದನ್ನೂ ಓದಿ: NCERT Textbooks: ರಾಜಕೀಯ ಶಾಸ್ತ್ರದ ಪಠ್ಯದಿಂದ ‘ಬಾಬ್ರಿ ಮಸೀದಿ’ ಅಧ್ಯಾಯ ತೆಗೆದ ಎನ್‌ಸಿಇಆರ್‌ಟಿ!

Continue Reading

ಕರ್ನಾಟಕ

Course Fee Hike: ತಾಂತ್ರಿಕ ಶಿಕ್ಷಣ ಕೋರ್ಸ್‌ಗಳ ಪ್ರವೇಶ ಶುಲ್ಕ ಶೇ.10ರಷ್ಟು ಹೆಚ್ಚಳ

Course Fee Hike: ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಅವರ ನೇತೃತ್ವದಲ್ಲಿ ಶುಕ್ರವಾರ ನಡೆಸಿದ ಸಭೆಯಲ್ಲಿ ತಾಂತ್ರಿಕ ಶಿಕ್ಷಣ ಕೋರ್ಸ್‌ಗಳ ಪ್ರವೇಶ ಶುಲ್ಕ ಹೆಚ್ಚಳದ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದೆ.

VISTARANEWS.COM


on

Koo

ಬೆಂಗಳೂರು: ವೃತ್ತಿಪರ ಕೋರ್ಸ್‌ ವ್ಯಾಸಾಂಗ ಮಾಡ ಬಯಸುವ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರ ಬಿಗ್ ಶಾಕ್ ನೀಡಿದೆ. ತಾಂತ್ರಿಕ ಶಿಕ್ಷಣ ಕೋರ್ಸ್‌ಗಳ ಪ್ರವೇಶ ಶುಲ್ಕ ಶೇ.10ರಷ್ಟು ಹೆಚ್ಚಳ ಮಾಡಲು ಸರ್ಕಾರ ನಿರ್ಧಾರ ಮಾಡಿದ್ದು, ಇದರಿಂದ ಖಾಸಗಿ, ಅನುದಾನ ರಹಿತ ತಾಂತ್ರಿಕ ಶಿಕ್ಷಣ ಸಂಸ್ಥೆಗಳಲ್ಲಿ 2024-25ನೇ ಸಾಲಿನ ಎಂಜಿನಿಯರಿಂಗ್‌, ಆರ್ಕಿಟೆಕ್ಚರ್‌ ಕೋರ್ಸ್‌ಗಳ ಶುಲ್ಕ ಶೇ.10ರಷ್ಟು ಹೆಚ್ಚಳವಾಗಲಿದೆ.

ಪ್ರವೇಶ ಶುಲ್ಕದ ಬಗ್ಗೆ ಉನ್ನತ ಶಿಕ್ಷಣ ಇಲಾಖೆ ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ಖಾಸಗಿ ಅನುದಾನರಹಿತ ತಾಂತ್ರಿಕ ಶಿಕ್ಷಣ ಸಂಸ್ಥೆಗಳಲ್ಲಿ 2024-25ನೇ ಸಾಲಿನ ಎಂಜಿನಿಯರಿಂಗ್‌, ಆರ್ಕಿಟೆಕ್ಚರ್ ಕಾಲೇಜುಗಳಲ್ಲಿ ವೃತ್ತಿಪರ ಕೋರ್ಸುಗಳ ಶುಲ್ಕವನ್ನು ಶೇ.10 ರಷ್ಟು ಹೆಚ್ಚಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ತಿಳಿಸಿದೆ.

ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಅವರು ಖಾಸಗಿ ಅನುದಾನಿತ, ಅನುದಾನರಹಿತ ವೃತ್ತಿಪರ ಶಿಕ್ಷಣ ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಒಕ್ಕೂಟದ ಪದಾಧಿಕಾರಿಗಳೊಂದಿಗೆ ಶುಕ್ರವಾರ ನಡೆಸಿದ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ.

ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟವು ಶೇ.15ರಷ್ಟು ಹೆಚ್ಚಳ ಮಾಡಬೇಕು ಎಂಬ ಬೇಡಿಕೆಯನ್ನು ಸರ್ಕಾರದ ಮುಂದಿಟ್ಟಿದ್ದರು. ಸುದೀರ್ಘವಾಗಿ ನಡೆದ ಮಾತುಕತೆಯಲ್ಲಿ ಅಂತಿಮವಾಗಿ ಕಳೆದ ವರ್ಷ ನಿಗದಿಪಡಿಸಿದ್ದ ಶುಲ್ಕಕ್ಕೆ ಶೇ. 10ರಷ್ಟು ಹೆಚ್ಚಳ ಮಾಡುವ ನಿರ್ಧಾರಕ್ಕೆ ಒಮ್ಮತ ಬರಲಾಯಿತು. ಈ ಸಂಬಂಧ ಸರ್ಕಾರದ ಅಧಿಕೃತ ಆದೇಶ ಶೀಘ್ರ ಹೊರಬೀಳಲಿದೆ ಎಂದು ತಿಳಿಸಲಾಗಿದೆ.

ಇದನ್ನೂ ಓದಿ | NEET UG 2024: ನೀಟ್ ಯುಜಿ ವಿವಾದದ ಬಗ್ಗೆ ಸಿಬಿಐ ತನಿಖೆಗೆ ಮನವಿ; ಕೇಂದ್ರ, ಎನ್‌ಟಿಎಗೆ ಸುಪ್ರೀಂ ಕೋರ್ಟ್‌ ನೋಟಿಸ್

ಸಭೆಯಲ್ಲಿ ಉನ್ನತ ಶಿಕ್ಷಣ ಪ್ರಧಾನ ಕಾರ್ಯದರ್ಶಿಗಳು ಶ್ರೀಕರ್, ತಾಂತ್ರಿಕ ಶಿಕ್ಷಣ ಇಲಾಖೆಯ ಆಯುಕ್ತರಾದ ಜಗದೀಶ್, ಕೆಇಎ, ಕಾರ್ಯ ನಿರ್ವಾಹಕ ನಿರ್ದೇಶಕ ಪ್ರಸನ್ನಕುಮಾರ್, ಹಾಗೂ ಖಾಸಗಿ ತಾಂತ್ರಿಕ ಶಿಕ್ಷಣ ಸಂಸ್ಥೆಯ ಒಕ್ಕೂಟದ ಅಧ್ಯಕ್ಷರಾದ ರಾಧಾಕೃಷ್ಣ, ಪ್ರಧಾನ ಕಾರ್ಯದರ್ಶಿ, ಶ್ಯಾಮ್, ಕರ್ನಾಟಕ ರಾಜ್ಯ ಮತೀಯ ಅಲ್ಪಸಂಖ್ಯಾತ ತಾಂತ್ರಿಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ.ಶಫಿಅಹಮ್ಮದ್, ಎಂ.ಎಸ್.ರಾಮಯ್ಯ ತಾಂತ್ರಿಕ ಶಿಕ್ಷಣ ಸಂಸ್ಥೆಯ ಮುಖ್ಯಸ್ತರಾದ ಎಂ.ಆ‌ರ್.ಜಯರಾಮ್ ಮತ್ತು ಪದಾಧಿಕಾರಿಗಳು ಹಾಜರಿದ್ದರು.

Continue Reading

ಪ್ರಮುಖ ಸುದ್ದಿ

7th pay commission : ಸಂಪುಟದಲ್ಲಿ ಚರ್ಚೆಯಾಗದ 7ನೇ ವೇತನ ಆಯೋಗ ಶಿಫಾರಸು; ಸರ್ಕಾರಿ ನೌಕರರ ಸಂಘಗಳ ಆಕ್ರೋಶ

7th pay commission: ಈ ಕುರಿತು ಪತ್ರಿಕಾ ಹೇಳಿಕೆಯನ್ನು ಪ್ರಕಟಿಸಿರುವ ಸಂಘದ ಅಧ್ಯಕ್ಷರಾದ ರಮೇಶ್​ ಸಂಗಾ, 7ನೇ ವೇತನ ಆಯೋಗ ಜಾರಿ ಕುರಿತು ಸರ್ಕಾರ ಉದಾಸೀನ ಧೋರಣೆ ತಳೆಯುತ್ತಿರುವುದು ಸ್ಪಷ್ಟ. ಇದೇ ನಿಲುವು ಮುಂದುವರಿದರೆ ನೌಕರರ ಸಂಘವು ಪ್ರತಿ ಭಟನೆಯನ್ನು ಆಯೋಜಿಸುವುದು ಖಚಿತ ಎಂದು ಎಚ್ಚರಿಕೆ ನೀಡಿದ್ದಾರೆ.

VISTARANEWS.COM


on

7th Pay Commission
Koo

ಬೆಂಗಳೂರು: ಸಿಎಂ ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟ ಸಭೆಯಲ್ಲಿ 7ನೇ ವೇತನ ಆಯೋಗದ (7th pay commission ) ಶಿಫಾರಸು ಜಾರಿಗೊಳಿಸುವ ಕುರಿತು ಯಾವುದೇ ನಿರ್ಣಯ ಕೈಗೊಳ್ಳದಿರುವುದು ಸರ್ಕಾರಿ ನೌಕರರ ಸಂಘಗಳ ಆಕ್ರೋಶಕ್ಕೆ ಕಾರಣವಾಗಿದೆ. ಸಂಪುಟ ಸಭೆಯಲ್ಲಿ ಈ ಕುರಿತು ಯಾವುದೇ ನಿರ್ಣಯ ಕೈಗೊಳ್ಳದಿರುವುದು ರಾಜ್ಯ ಸರ್ಕಾರದ ಸಮಸ್ತ ಸರ್ಕಾರಿ ನೌಕರರಿಗೆ ಬೇಸರವನ್ನುಂಟು ಮಾಡಿದೆ ಎಂಬುದಾಗಿ ಸಚಿವಾಲಯದ ನೌಕರರ ಸಂಘ ಹೇಳಿದೆ. ಆಯೋಗದ ಶಿಫಾರಸಿನ ಜಾರಿ ಕುರಿತು ನಿರೀಕ್ಷೆಯಲ್ಲಿದ್ದ ನಮಗೆ ನಿರಾಸೆಯಾಗಿದೆ ಎಂದು ಅದು ಹೇಳಿದೆ.

ಈ ಕುರಿತು ಪತ್ರಿಕಾ ಹೇಳಿಕೆಯನ್ನು ಪ್ರಕಟಿಸಿರುವ ಸಂಘದ ಅಧ್ಯಕ್ಷರಾದ ರಮೇಶ್​ ಸಂಗಾ, 7ನೇ ವೇತನ ಆಯೋಗ ಜಾರಿ ಕುರಿತು ಸರ್ಕಾರ ಉದಾಸೀನ ಧೋರಣೆ ತಳೆಯುತ್ತಿರುವುದು ಸ್ಪಷ್ಟ. ಇದೇ ನಿಲುವು ಮುಂದುವರಿದರೆ ನೌಕರರ ಸಂಘವು ಪ್ರತಿ ಭಟನೆಯನ್ನು ಆಯೋಜಿಸುವುದು ಖಚಿತ ಎಂದು ಎಚ್ಚರಿಕೆ ನೀಡಿದ್ದಾರೆ.

ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಜಾರಿಯಾಗುವ ಮುನ್ನ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ 7ನೇ ವೇತನ ಆಯೋಗದ ಶಿಫಾರಸ್ಸನ್ನು ಜಾರಿ ಮಾಡುವಂತೆ ಸಚಿವಾಲಯದ ನೌಕರರ ಸಂಘದ ವತಿಯಿಂದ ಮನವಿ ಸಲ್ಲಿದ್ದೆವು. ಈ ವೇಳೆ ಅವರು ಚುನಾವಣೆ ಮುಗಿದ ಬಳಿಕ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದರು. ಆದರೆ, ಚುನಾವಣೆ ಮುಗಿದ ಬಳಿಕ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ಯಾವುದೇ ನಿರ್ಧಾರ ಕೈಗೊಂಡಿಲ್ಲ. ಈ ಸಂಪುಟ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳುವ ನಂಬಿಕೆ ಇರಿಸಿಕೊಂಡಿದ್ದೆವು. ಅದು ಹುಸಿಯಾಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಸರ್ಕಾರಿ ನೌಕರರಿಗೆ ನಿರಾಸೆ; ಸಚಿವ ಸಂಪುಟ ಸಭೆಯಲ್ಲಿ 7ನೇ ವೇತನ ಆಯೋಗದ ಬಗ್ಗೆ ಯಾವುದೇ ನಿರ್ಣಯ ಇಲ್ಲ!

ಈಗಾಗಲೇ ವೇತನ ಆಯೋಗವು ಶಿಫಾರಸು ಮಾಡಿರುವ ಶೇ. 27.5 ಫಿಟ್ಮೆಂಟಿಗೆ, ಶೇಕಡಾ 2.5ರಷ್ಟು ಸೇರ್ಪಡೆಗೊಳಿಸಿ ಒಟ್ಟು ಶೇಕಡಾ 30ರಷ್ಟು ಫಿಟ್ಮೆಂಟ್​ನೊಂದಿಗೆ ವೇತನ ಹೆಚ್ಚಳ ಮಾಡುವುದು ನಮ್ಮ ಬೇಡಿಕೆ ಎಂಬುದಾಗಿ ಸಂಗಾ ಅವರು ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಂಪುಟ ಸಭೆಯಲ್ಲಿ ನೌಕರರಿಗೆ ನಿರಾಸೆ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರ ನೇತೃತ್ವದಲ್ಲಿ ಗುರುವಾರ (ಜೂನ್‌ 13) ರಾಜ್ಯ ಸಚಿವ ಸಂಪುಟ ಸಭೆ ನಡೆದಿದ್ದು, ಸರ್ಕಾರಿ ನೌಕರರಿಗೆ ಮತ್ತೆ ನಿರಾಸೆಯಾಗಿದೆ. ರಾಜ್ಯದಲ್ಲಿ ಏಳನೇ ವೇತನ ಆಯೋಗದ (7th Pay Commission) ಜಾರಿ ಕುರಿತು ಸಚಿವ ಸಂಪುಟ ಸಭೆಯಲ್ಲಿ (Karnataka Cabinet Meeting) ಯಾವುದೇ ನಿರ್ಣಯ ತೆಗೆದುಕೊಂಡಿಲ್ಲ. ಇದರಿಂದಾಗಿ, ಏಳನೇ ವೇತನ ಆಯೋಗದ ಜಾರಿ ಕುರಿತು ಭಾರಿ ನಿರೀಕ್ಷೆಯಲ್ಲಿದ್ದ ನೌಕರರಿಗೆ ಇದರಿಂದ ನಿರಾಸೆಯಾದಂತಾಗಿದೆ.

ಸಿದ್ದರಾಮಯ್ಯ ಅವರ ನೇತೃತ್ವದ ಸಚಿವ ಸಂಪುಟ ಸಭೆಯಲ್ಲಿ ಹಲವು ತೀರ್ಮಾನಗಳನ್ನು ತೆಗೆದುಕೊಳ್ಳಲಾಗಿದೆ. ಸಂಪುಟ ಸಭೆಯ ಬಳಿಕ ಕಾನೂನು, ನ್ಯಾಯ, ಮಾನವಹಕ್ಕುಗಳು, ಸಂಸದೀಯ ವ್ಯವಹಾರ ಮತ್ತು ಶಾಸನರಚನೆ ಹಾಗೂ ಪ್ರವಾಸೋದ್ಯಮ ಸಚಿವ ಎಚ್‌.ಕೆ. ಪಾಟೀಲ ಅವರು ಸುದ್ದಿಗೋಷ್ಠಿ ನಡೆಸಿ, ಸಂಪುಟ ಸಭೆಯಲ್ಲಿ ತೆಗೆದುಕೊಂಡ ಪ್ರಮುಖ ತೀರ್ಮಾನಗಳ ಕುರಿತು ಮಾಹಿತಿ ನೀಡಿದ್ದರು.

Continue Reading
Advertisement
Actor Chikkanna
ಕರ್ನಾಟಕ30 mins ago

Actor Chikkanna: ದರ್ಶನ್‌ ಊಟಕ್ಕೆ ಕರೆದಿದ್ರು, ಹೋಗಿದ್ದೆ; ಪೊಲೀಸ್‌ ವಿಚಾರಣೆ ಬಳಿಕ ಚಿಕ್ಕಣ್ಣ ಫಸ್ಟ್‌ ರಿಯಾಕ್ಷನ್!

Kalki 2898 AD Movie Bhairava Anthem Released
ಕರ್ನಾಟಕ1 hour ago

Kalki 2898 AD: ʼಕಲ್ಕಿ 2898 ADʼ ಚಿತ್ರದ ಭೈರವ ಆಂಥಮ್‌ ರಿಲೀಸ್‌!

Union Minister HD Kumaraswamy visit Shira
ತುಮಕೂರು1 hour ago

Shira News: ಶಿರಾಕ್ಕೆ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಭೇಟಿ

Maharashtra government appoints Marathi teachers to Kannada schools; Ashoka Chandragi wrote a letter to CM Siddaramaiah
ಬೆಳಗಾವಿ1 hour ago

Belagavi News: ಕನ್ನಡ ಶಾಲೆಗಳಿಗೆ ಮರಾಠಿ ಶಿಕ್ಷಕರು! ಮುಖ್ಯಮಂತ್ರಿಗಳೇ ಗಮನ ಹರಿಸಿ

District administration failed to prevent illegal activities in the district MLA Janardhana Reddy alleges
ಕರ್ನಾಟಕ1 hour ago

Koppala News: ಜಿಲ್ಲೆಯಲ್ಲಿ ಕಾನೂನುಬಾಹಿರ ಚಟುವಟಿಕೆ ತಡೆಯುವಲ್ಲಿ ಜಿಲ್ಲಾಡಳಿತ ವಿಫಲ; ಶಾಸಕ ಜನಾರ್ದನ ರೆಡ್ಡಿ ಆರೋಪ

Pushpa 2
ಸಿನಿಮಾ1 hour ago

Pushpa 2: ಪುಷ್ಪ 2 ಸಿನಿಮಾ ಬಿಡುಗಡೆ 5 ತಿಂಗಳು ಮುಂದೂಡಿಕೆ; ಇಲ್ಲಿದೆ ಹೊಸ ಡೇಟ್

HD Kumaraswamy
ಕರ್ನಾಟಕ2 hours ago

HD Kumaraswamy: ಕೊಬ್ಬರಿಗೆ 16-18 ಸಾವಿರ ಬೆಂಬಲ ಬೆಲೆ ಕೊಡಿಸುವೆ: ರೈತರಿಗೆ ಎಚ್‌ಡಿಕೆ ಭರವಸೆ

Narendra Modi
ದೇಶ2 hours ago

ಪೋಪ್‌-ಮೋದಿ ಭೇಟಿಯನ್ನು ಲೇವಡಿ ಮಾಡಲು ಹೋದ ಕಾಂಗ್ರೆಸ್‌ಗೆ ಮುಖಭಂಗ; ಕ್ರೈಸ್ತರ ಕ್ಷಮೆ ಕೇಳಿದ್ದೇಕೆ?

Health Tips Kannada
Latest2 hours ago

Health Tips Kannada: ನೆನಪಿಡಿ, ನಾಲಿಗೆ ಬಯಸುವ ಆಹಾರಗಳನ್ನೆಲ್ಲ ನಿಮ್ಮ ಮಿದುಳು ಬಯಸದು!

Petrol Diesel Price Hike
ಕರ್ನಾಟಕ2 hours ago

Petrol Diesel Price Hike: ಕೇಂದ್ರ ಸರ್ಕಾರ ಹಣ ಕೊಟ್ಟಿದ್ರೆ ತೆರಿಗೆ ಹೆಚ್ಚಿಸುವ ಅಗತ್ಯವೇ ಇರ್ತಿರಲಿಲ್ಲ: ಸಿಎಂ ಸಿದ್ದರಾಮಯ್ಯ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Actor Darshan
ಮೈಸೂರು9 hours ago

Actor Darshan : ಕೊಲೆ ಕೇಸ್‌ ಬೆನ್ನಲ್ಲೇ ನಟ ದರ್ಶನ್‌ ಸೇರಿ ಪತ್ನಿ ವಿಜಯಲಕ್ಷ್ಮಿಗೆ ಬಾರ್ ಹೆಡೆಡ್ ಗೂಸ್ ಸಂಕಷ್ಟ!

Bakrid 2024
ಬೆಂಗಳೂರು10 hours ago

Bakrid 2024 : ಮತ್ತೊಂದು ಧರ್ಮವನ್ನೂ ಪ್ರೀತಿಸಿ; ಬಕ್ರೀದ್‌ ಪ್ರಾರ್ಥನೆಯಲ್ಲಿ ಸಿಎಂ ಸಿದ್ದರಾಮಯ್ಯ ಕರೆ

Renukaswamy murder case The location of the accused is complete
ಸಿನಿಮಾ1 day ago

Renuka Swamy murder : ಭೀಕರವಾಗಿ ಕೊಂದರೂ ಆರೋಪಿಗಳಿಗೆ ಕಾಡುತ್ತಿಲ್ವಾ ಪಾಪಪ್ರಜ್ಞೆ? ನಗುತ್ತಲೇ ಹೊರಬಂದ ಪವಿತ್ರಾ ಗೌಡ, ಪವನ್‌

Renuka swamy murder
ಚಿತ್ರದುರ್ಗ1 day ago

Renuka swamy Murder : ರೇಣುಕಾಸ್ವಾಮಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಾಳೆಹೊನ್ನೂರು ಶ್ರೀಗಳು

Vijayanagara News
ವಿಜಯನಗರ1 day ago

Vijayanagara News : ಕೆಲಸಕ್ಕೆ ಚಕ್ಕರ್, ಸಂಬಳಕ್ಕೆ ಹಾಜರ್! ಹಾರಕನಾಳು ಗ್ರಾಪಂ ಪಿಡಿಓಗಾಗಿ ಗ್ರಾಮಸ್ಥರ ಹುಡುಕಾಟ

Actor Darshan
ಯಾದಗಿರಿ2 days ago

Actor Darshan : ಬಾಸ್‌ ಅಂತ ಯಾಕ್‌ ಬಕೆಟ್‌ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!

Karnataka Weather Forecast
ಮಳೆ3 days ago

Karnataka Weather : ಕರಾವಳಿ, ಉತ್ತರ ಒಳನಾಡಿನಲ್ಲಿ ವರುಣಾರ್ಭಟ; ನಾಳೆಯು ಹಲವೆಡೆ ಸಿಕ್ಕಾಪಟ್ಟೆ ಮಳೆ

Actor Darshan
ಬೆಂಗಳೂರು3 days ago

Actor Darshan : ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್ ಮಾಡಿ ಕರೆತರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ!

actor Darshan
ಬೆಂಗಳೂರು3 days ago

Actor Darshan : ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಮತ್ತಿಬ್ಬರು ಸರೆಂಡರ್‌; ಆರೋಪಿಗಳ ಸಂಖ್ಯೆ 16ಕ್ಕೆ ಏರಿಕೆ

Actor Darshan
ಸಿನಿಮಾ3 days ago

Actor Darshan : ರೇಣುಕಾಸ್ವಾಮಿ ‌ಮೃತದೇಹ ಬಿಸಾಡಿ ಬಳಿಕ ಸಾಕ್ಷ್ಯಇದ್ದ 2 ಮೊಬೈಲ್‌ಗಳನ್ನು ಮೋರಿಗೆ ಎಸೆದ್ರಾ ಆರೋಪಿಗಳು?

ಟ್ರೆಂಡಿಂಗ್‌