Dattatreya Jayanti 2022 | ಸ್ಮರಣೆ ಮಾತ್ರಕೆ ಒಲಿಯುವ ದೇವರು ಶ್ರೀಗುರು ದತ್ತ - Vistara News

ಪ್ರಮುಖ ಸುದ್ದಿ

Dattatreya Jayanti 2022 | ಸ್ಮರಣೆ ಮಾತ್ರಕೆ ಒಲಿಯುವ ದೇವರು ಶ್ರೀಗುರು ದತ್ತ

ಇಂದು ದತ್ತ ಜಯಂತಿ (Dattatreya Jayanti 2022). ಶ್ರೀ ಗುರು ದತ್ತಾತ್ರೇಯನ ಅವತಾರ ಹೇಗಾಯಿತು? ಪೂಜೆ ಹೇಗೆ ಎಂದು ತಿಳಿಸುವ ವಿಶೇಷ ಲೇಖನ ಇಲ್ಲಿದೆ.

VISTARANEWS.COM


on

Dattatreya Jayanti 2022
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ರಾಜಗುರು ದ್ವಾರಕನಾಥ್‌
ಮಾಲಕಮಂಡಲು ಧರಃ ಕರಪದ್ಮಯುಗ್ಮೆ
ಮಧ್ಯಸ್ಥಪಾಣಿಯುಗಲೇ ಡಮರು ತ್ರಿಶೂಲೇ|
ಯಸ್ಯಸ್ತ ಊಧ್ರ್ವಕರಯೋಃ ಶುಭ ಶಂಖಚಕ್ರೆ
ವಂದೇ ತಮತ್ರಿವರದಂ ಭುಜಷಟ್ಕಯುಕ್ತಂ ||
ಈ ಸ್ತೋತ್ರದಅರ್ಥವೆಂದರೆ ಕೆಳಗಿನವೆರಡು ಕೈಗಳೆಂಬ ಕಮಲಗಳಲ್ಲಿರುದ್ರಾಕ್ಷ ಮಾಲೆ, ಕಮಂಡಲಗಳೂ, ನಡುವಿನವೆರಡು ಕೈಗಳಲ್ಲಿಡಮರು ತ್ರಿಶೂಲಗಳೂ ಮತ್ತು ಯಾವಾತನ ಮೆಲಿನವೆರಡು ಕೈಗಳಲ್ಲಿಶುಭಪ್ರದವಾದ ಶಂಖ – ಚಕ್ರಗಳು ಉಂಟೋ ಅಂತಹ ಆರು ಭುಜಗಳುಳ್ಳ ಅತ್ರಿಋುಷಿಗೆ ವರಪ್ರದನಾದವನನ್ನು ಅಂದರೆ ದತ್ತನನ್ನು ವಂದಿಸುವೆ.

********

ಮಾರ್ಗಶಿರ ಮಾಸದ ಶುಕ್ಲಪಕ್ಷದ ರೋಹಿಣಿ ನಕ್ಷತ್ರವನ್ನು ಹೊಂದಿರುವ ಚತುರ್ದಶಿ ಬಹಳ ಪುಣ್ಯದ ದಿನ. ಏಕೆಂದರೆ ಅಂದು ಶ್ರೀಗುರು ದತ್ತಾತ್ರೇಯರ ಜಯಂತಿ. ಕೆಲವೆಡೆ ಮಾರ್ಗಶಿರ ಮಾಸದ ಶುಕ್ಲಪಕ್ಷದ ಶುದ್ಧ ಪೂರ್ಣಮಿಯಂದು ದತ್ತಜಯಂತಿಯನ್ನು ಆಚರಿಸುವುದೂ ಉಂಟು. ಇಂದು “ಕಾರ್ತಿಕ ದೀಪʼʼದ ದಿನವೂ ಹೌದು. ದಕ್ಷಿಣ ಭಾರತದಲ್ಲಿ ಅದರಲ್ಲಿಯೂ ಮುಖ್ಯವಾಗಿ ತಮಿಳುನಾಡಿನಲ್ಲಿ ಈ ದಿನವನ್ನು ವಿಶೇಷವಾಗಿ ಆಚರಿಸಲಾಗುತ್ತದೆ. ತಮಿಳರ ಪಂಚಾಂಗದ ಪ್ರಕಾರ ಹುಣ್ಣಿಮೆಯ ಈ ದಿನವನ್ನು “ಕಾರ್ತಿಕೈʼʼಎಂದು ಕರೆಯಲಾಗುತ್ತದೆ. ದತ್ತ ಜಯಂತಿ ಮತ್ತು ಸುಬ್ರಹ್ಮಣ್ಯನಿಗೆ ಸೇರಿದ ಈ ವಿಶೇಷ ದಿನ ಇಂದು ಒದಗಿ ಬಂದಿದೆ. ಹೀಗಾಗಿ ಈ ಬಾರಿಯ ದತ್ತ ಜಯಂತಿಗೆ ವಿಶೇಷವಾದ ಮಹತ್ವವಿದೆ.

‘ದತ್ತ’ ಎಂದರೆ ಕೊಡುವವನು ಎಂದರ್ಥ. ಏನು ಕೇಳಿದರೂ ಕೊಡವವನು. ನೀವು ದತ್ತನನ್ನು ಎಲ್ಲಿಬೇಕಾದರೂ ಪ್ರಾರ್ಥಿಸಬಹುದು, ಕುಳಿತಲ್ಲಿ, ನಿಂತಲ್ಲ, ಮಲಗಿದಲ್ಲಿ ಎಲ್ಲಿಗೆ ಬೇಕಾದರೂ ಬಂದು ನಿಮ್ಮ ಇಷ್ಟಾರ್ಥವನ್ನು ಈಡೇರಿಸುತ್ತಾನೆ. ಬೇರೆಲ್ಲಾ ದೇವರಗಳಿಗೆ ನೀವು ಪೂಜೆ, ಅಭಿಷೇಕ, ಸಹಸ್ರನಾಮ, ವ್ರತಕಲ್ಪಾದಿಗಳನ್ನು ಭಕ್ತಿಯಿಂದ ಮಾಡಿ ಪ್ರಾರ್ಥಿಸಬೇಕು. ಆದರೆ ಸ್ಮರಣೆಮಾಡಿದ ಮಾತ್ರಕ್ಕೆ ಸಂತುಷ್ಟನಾಗಿ ಮನೋಕಾರ್ಯವನ್ನು ನೆರವೇರಿಸುವ ಜಗತ್ತಿನ ಏಕೈಕ ದೇವರು ದತ್ತ. ದತ್ತ ತ್ರಿಮೂರ್ತಿಗಳ ಸ್ವರೂಪ, ಸುಗುಣ ರೂಪ, ಅವಧೂತ ಪರಂಪರೆಯ ಸೃಷ್ಟಿ ಕರ್ತ. ನಾರಾಯಣನ ಅವತಾರಗಳಿಗೂ ಕಾರಣಕರ್ತ.

ದತ್ತನ ಅವತಾರ ಹೇಗೆ?
ಚಿತ್ರಕೂಟ ಅರಣ್ಯದಲ್ಲಿ ಸಪ್ತರ್ಷಿಗಳಲ್ಲಿ ಒಬ್ಬರಾದ ಅತ್ರಿಮಹರ್ಷಿಗಳು ತಮ್ಮ ಧರ್ಮಪತ್ನಿ ಅನುಸೂಯಾದೇವಿ ಯೊಂದಿಗೆ ವಾಸವಾಗಿದ್ದರು. ಅನುಸೂಯ ಪರಮ ಪತಿವ್ರತೆ. ಅತ್ಯಂತ ಸುಂದರಿ ಬೇರೆ. ಅತ್ರಿ ಮುನಿಗಳ ತಪೋನುಷ್ಠಾನಗಳು ಮತ್ತು ಅನುಸೂಯಾಳ ಪರಮಪತಿ ವ್ರತವು ಎಲ್ಲಲೋಕವನ್ನು ತಲೂಪಿತ್ತು. ಇಂದ್ರಾದಿ ದೇವತೆಗಳು ಎಲ್ಲಿ ಇವರಿಬ್ಬರು ತಮ್ಮ ಪುಣ್ಯದ ಪ್ರಭಾವದಿಂದ ಸ್ವರ್ಗದ ಅಧಿಪತಿಗಳಾಗುತ್ತಾರೋ ಎಂದು ಹೆದರಿ, ತ್ರಿಮೂರ್ತಿಗಳ ಹತ್ತಿರ ಹೋಗಿ ಈ ಬಗ್ಗೆ ಹೇಳಿದರು. ಅನುಸೂಯಾಳನ್ನು ಅತಿಯಾಗಿ ಪ್ರಶಂಸಿಸಿ ತ್ರಿಮೂರ್ತಿಗಳಿಗೆ ಕೋಪ ಬರುವಂತೆ ಮಾಡಿದರು. ಆಕೆಯ ವ್ರತಭಂಗ ಮಾಡದಿದ್ದರೆ ಮೂರು ಲೋಕವನ್ನೂ ಆಕ್ರಮಣ ಮಾಡಿಕೊಂಡುಬಿಡುತ್ತಾಳೆ ಎಂದು ಹೆದರಿಸಿದರು.

ಹೀಗಾಗಿ ತ್ರಿಮೂರ್ತಿಗಳು ಆಕೆಯ ಪತಿವ್ರತವನ್ನು ಪರೀಕ್ಷಿಸಲು ಕಾರಣಿಕ ವೇಷ ಹಾಕಿಕೊಂಡು ಅನಸೂಯಳಿದ್ದ ಆಶ್ರಮಕ್ಕೆ ಬಂದು ಭಿಕ್ಷೆ ಬೇಡಿದರು. ಈ ಸಂದರ್ಭದಲ್ಲಿ ಅತ್ರಿಮಹರ್ಷಿಗಳು ತಪಸ್ಸಿಗೆಂದು ಹೊರಹೋಗಿದ್ದರು. ‘‘ಸಾದ್ವೀಮಣಿಯೇ, ನಾವು ಮೂವರೂ ಇಚ್ಛಾಭೋಜನ ಮಾಡುವ ಆಸೆಯಿಂದ ಇಲ್ಲಿಗೆ ಬಂದಿದ್ದೇವೆ. ನಿಮಗೆ ನಮಗೆ ಭೋಜನ ವ್ಯವಸ್ಥೆ ಮಾಡಲು ಸಾಧ್ಯವೇ’’ ಎಂದು ಕೇಳಲು ಅನುಸೂಯ ಸಂತೋಷದಿಂದ ಒಪ್ಪಿದಳು.
ಆಗ ಅತಿಥಿಗಳ ವೇಷದಲ್ಲಿದ್ದ ತ್ರಿಮೂರ್ತಿಗಳು ,‘‘ನೀನು ನಗ್ನಳಾಗಿ ಬಂದು ಬಡಿಸಿದರೆ ಮಾತ್ರ ನಾವು ಭೋಜನ ಮಾಡುತ್ತೇವೆ’’ ಎಂದು ಹೇಳಿದರು.

ಅತಿಥಿಗಳ ಈ ಅನಿರೀಕ್ಷಿತ ಅಪೇಕ್ಷೆ ಕೇಳಿ ಅನುಸೂಯಾದೇವಿಯು ಗೊಂದಲಕ್ಕೆಬಿದ್ದಳು. ಇವರ ಬೇಡಿಕೆಯನ್ನು ನೋಡಿದರೆ ನನ್ನ ಸತ್ವಪರೀಕ್ಷೆಗಾಗಿಯೇ ಬಂದವರ ಹಾಗೆ ಕಾಣಿಸುತ್ತದೆ, ಇವರು ಬಹುಶಃ ಅವತಾರಪುರುಷರೇ ಇರಬೇಕೆಂದುಕೊಂಡು, ನಿಮ್ಮ ಇಚ್ಛೆಯಂತೆಯೇ ಊಟಕ್ಕೆ ಬಡಿಸುತ್ತೇನೆ’’ ಎಂದು ಹೇಳಿ ಪಾಕಶಾಲೆಗೆ ಹೋದಳು. ಭೋಜನಕ್ಕೆ ತಯಾರು ಮಾಡಿದ ಬಗೆಬಗೆಯ ಪದಾರ್ಥಗಳನ್ನು ತೆಗದುಕೊಂಡ ಅನುಸೂಯ ಪತಿ ದೇವರ ಪ್ರಾರ್ಥನೆ ಮಾಡಿ; ‘‘ನನಗೆ ಪರೀಕ್ಷೆಯ ಸಮಯ ಬಂದಿದೆ, ನಿಮ್ಮ ಸಹಕಾರ ವಿರಲಿ’’ಎಂದು ಕೋರಿಕೊಂಡು, ಅನ್ನಪೂರ್ಣೆಶ್ವರಿಯನ್ನು ಪ್ರಾರ್ಥಸಿ, ನಗ್ನಳಾಗಿ ಬಡಿಸಳು ಹೋದಳು.

ಆಗ ಆಕೆಯ ಪತಿವ್ರತದ ಪ್ರಭಾವದಿಂದಾಗಿ ತ್ರಿಮೂರ್ತಿಗಳೂ ಶಿಶುಗಳಾಗಿ ಪರಿವರ್ತನೆಗೊಂಡಿದ್ದರು. ಕೂಡಲೇ ಅನುಸೂಯ ಮಾತೃಭಾವದಿಂದ ಈ ಶಿಶುಗಳನ್ನು ಎತ್ತಿಕೊಂಡು ಎದೆಹಾಲು ಕುಡಿಸಿ, ತೊಟ್ಟಿಲಲ್ಲಿಮಲಗಿಸಿ ಜೋಗುಳ ಹಾಡಿದಳು.

Dattatreya Jayanti 2022
ಶ್ರೀ ಗುರು ದತ್ತ ಪಾದುಕೆ

ಅಷ್ಟರಲ್ಲಿ ಅತ್ರಿಮಹರ್ಷಿಗಳು ಬಂದು ವಿಷಯವನ್ನೆಲ್ಲಾ ತಿಳಿದರು. ಅವರಿಗೆ ಶಿಶು ಗಳಾಗಿರುವುದು ತ್ರಿಮೂರ್ತಿಗಳೇ ಎಂದು ತಿಳಿದು ಹೋಯಿತು. ಇಷ್ಟರಲ್ಲಿತ್ರಿಮೂರ್ತಿಗಳು ಪ್ರತ್ಯಕ್ಷ ರಾಗಿ, ಬೇಕಾದವರ ಕೇಳುವಂತೆ ಸೂಚಿಸಿದರು. ಆಗ ಅನುಸೂಯಾ ದೇವಿಯು ಈ ಮೂವರು ಶಿಶುಗಳನ್ನೂಬಿಟ್ಟು ಹೋಗುವಂತೆ ಕೇಳಿಕೊಳ್ಳುತ್ತಾರೆ. ಆಗ ತ್ರಿಮೂರ್ತಿಗಳು ‘ತಥಾಸ್ತು’ ಎಂದು ಹೇಳಿ ತಮ್ಮ ಅಂಶದಿಂದ ಸೃಷ್ಟಿಯಾದ ಮೂವರು ಶಿಶುಗಳನ್ನು ಅಲ್ಲಿಯೇ ಬಿಟ್ಟು ಹೋಗುತ್ತಾರೆ. ಹೀಗಾಗಿ ದತ್ತರದು ‘ನಯೋನಿ’ ಸೃಷ್ಟಿ.

ಬ್ರಹ್ಮನ ಶಿಶುವಿಗೆ ಚಂದ್ರನೆಂದು, ವಿಷ್ಣುವಿನ ಶಿಶುವಿಗೆ ದತ್ತನೆಂದು, ಮಹೇಶ್ವರನ ಶಿಶುವಿಗೆ ದೂರ್ವಾಸನೆಂದು ನಾಮಕರಣ ಮಾಡಲಾಗುತ್ತದೆ. ಮುಂದೆ ತಾಯಿ ಅನುಸೂಯದೇವಿಯ ಅಪ್ಪಣೆಪಡೆದು ಚಂದ್ರನು ಚಂದ್ರಮಂಡಲಕ್ಕೂ ದೂರ್ವಾಸನು ತಪಸ್ಸಿಗಾಗಿ ಹೊರಟು ಹೋಗುತ್ತಾರೆ. ಆದರೆ ನಾರಾಯಣ ಸ್ವರೂಪಿಯಾದ ದತ್ತಾದೇವರು ತಾಯಿಯ ಬಳಿಯೇ ಉಳಿದುಕೊಂಡು, ಲೋಕರಕ್ಷಕರಾಗುತ್ತಾರೆ.

ಗುರು ಸ್ವರೂಪಿ ದತ್ತ
ದತ್ತರನ್ನು ಗುರು ಸ್ವರೂಪಿ ಎಂದು ಕರೆಯಲಾಗುತ್ತದೆ. ಅವರ ಚರಿತ್ರೆಯನ್ನು ‘ಶ್ರೀಗುರುಚರಿತ್ರೆ’ ಎಂದು ಹೆಸರಿಸಲಾಗಿದೆ. ಇದೊಂದು ಪ್ರಾಸಾಧಿಕ ಗ್ರಂಥವಾಗಿದ್ದು, ಭಾವಿಕ ಜನರಿಗೆ ಕಾಮಧೇನು, ಕಲ್ಪವೃಕ್ಷ ಗಳಂತೆ ಫಲಪ್ರದವಾಗಿದೆ. ಇದರ ಪಾರಾಯಣದಿಂದ ಪುರುಷಾರ್ಥಗಳು, ಅಷ್ಟಸಿದ್ದಿಗಳು ಲಭ್ಯವಾಗುತ್ತವೆ. ಧ್ಯಾನಕಾಂಡ, ಕರ್ಮಕಾಂಡ ಮತ್ತು ಭಕ್ತಿಕಾಂಡ ಎಂದು ಮೂರು ಕಾಂಡಗಳನ್ನು ಒಳಗೊಂಡ ಈ ಚರಿತ್ರೆಯು 53ಅಧ್ಯಾಯಗಳಲ್ಲಿವೆ. ಪ್ರತಿಯೊಂದು ಅಧ್ಯಯಕ್ಕೂ ತನ್ನದೇ ಆದ ಮಹತ್ವವಿರುತ್ತದೆ. ಕಷ್ಟ-ಕಾರ್ಪಣ್ಯ ಕಳೆಯಲು ಸಹಾಯಕವಾಗಿರುತ್ತದೆ.

ದೇವರಿಗೆ ಬಡವ-ಶ್ರೀಮಂತನೆಂಬ ಭೇದವಿಲ್ಲ, ಆ ಜಾತಿ- ಈ ಜಾತಿ ಶ್ರೇಷ್ಠವೆಂಬುದಿಲ್ಲ, ಎಲ್ಲರ ಕಷ್ಟವನ್ನೂ ದೂರ ಮಾಡುತ್ತಾನೆ ಎಂಬುದುದನ್ನು ಗುರುಚರಿತ್ರೆಯಲ್ಲಿ ಕಥೆಗಳ ಮೂಲಕ ನಿರೂಪಿಸಲಾಗಿದೆ. ಇದರ ಪಾರಾಯಣಕ್ಕಿಂತ ದೊಡ್ಡ ಪೂಜೆ ಇಲ್ಲ. ಇದನ್ನು ಶ್ರದ್ಧಾ ಭಕ್ತಿಯಿಂದ ಪಾರಾಯಣ ಮಾಡಿದರೆ ಏನನ್ನು ಬೇಕಾದರೂ ಗಳಿಸಬಹುದು. ಇದಕ್ಕೆ ನಾನೇ ಸಾಕ್ಷಿ. ವಿವಿಧ ರೀತಿಯ ಸಂಕಷ್ಟಗಳು, ಶತ್ರುಭೀತಿ ನಮ್ಮನ್ನೆಲ್ಲಾ ಕಾಡುತ್ತಿರುವ ಈ ಹೊತ್ತಲ್ಲಿ ಇದರ ಪಾರಾಯಣ ನಮ್ಮನ್ನು ಕಾಪಾಡುವುದರಲ್ಲಿ ಅನುಮಾನವಿಲ್ಲ. ದೈವಭಕ್ತರು ಮನೆ ಮನೆಗಳಲ್ಲಿ ಇದರ ಪಾರಾಯಣ ಮಾಡಿದರೆ ದೇಶ ಎಲ್ಲಾ ರೀತಿಯಲ್ಲಿಯೂ ಸುರಕ್ಷಿತವಾಗಿರುತ್ತದೆ. ಸಾಗರವನ್ನು ದಾಟಲು ನೌಕೆ ಬೇಕು ಅಂತೆಯೇ ಭವ ಸಾಗರವ ದಾಟಲು ಇರುವ ನೌಕೆ ಶ್ರೀಗುರು ಚರಿತ್ರೆ ಎಂಬುದನ್ನು ನಾವ್ಯಾರೂ ಮರೆಯಬಾರದು.

ಗುರು ಸ್ವರೂಪಿಯಾಗಿರುವ ಶ್ರೀದತ್ತರು ಬೋಧಿಸಿದ ತತ್ವಗಳು ಇಂದಿಗೂ ಪ್ರಸ್ತುತವಾಗಿವೆ. ಶ್ರೀದತ್ತರೇ ಗುರುವು, ತತ್ತ್ವಸ್ವರೂಪನು, ಮಾರ್ಗವು, ಧ್ಯೇಯವು, ದಾರಿ-ಗುರಿಗಳೆರಡೂ ಆಗಿರುವ ತತ್ತ್ವಾರ್ಥಿ ಎನ್ನುತ್ತದೆ ಶಾಂಡಿಲ್ಯೋಪನಿಷತ್ತು. ದತ್ತರು ರಚಿಸಿದ ಕೃತಿಯೇ ‘ಅವಧೂತಗೀತೆ’.

ಅವತಾರ ಪುರುಷ ದತ್ತ
ದತ್ತರ ಮುಂದಿನ ಅವತಾರವೇ ಶ್ರೀಪಾದ ಶ್ರೀವಲ್ಲಭ ಮತ್ತು ಶ್ರೀನರಸಿಂಹ ಸರಸ್ವತಿ ಯತಿಗಳು. ದತ್ತನು ಒಟ್ಟು 24 ಅವತಾರವೆತ್ತಿದ್ದಾರೆ. ಸಾಕ್ಷಾತ್‌ ಶ್ರೀ ದತ್ತಾತ್ರೇಯರು ಆಂಧ್ರದ ಪೂರ್ವ ಗೋದಾವರಿ ಜಿಲ್ಲೆಯಲ್ಲಿನ ಶ್ರೀ ಕ್ಷೇತ್ರ ಪೀಠಾಪುರದಲ್ಲಿಶ್ರೀವಲ್ಲಭ ಎಂಬ ಹೆಸರಿನಲ್ಲಿ ಜನಿಸಿದರು. ನಂತರ ಮಹಾರಾಷ್ಟ್ರದ ಕರಂಜಿಪುರದಲ್ಲಿ ಬಾಲಕ ನೋರ್ವನಿಗೆ ವಿದ್ಯದಾನ ಮಾಡಿ (ಮುಂದೆ ಈ ಬಾಲಕನೇ ಶ್ರೀ ನರಸಿಂಹ ಸರಸ್ವತಿ ಯತಿಗಳು ಎಂದು ಜಗತ್ಪ್ರಸಿದ್ಧರಾಗುತ್ತಾರೆ) ಕೃಷ್ಣಾನದಿಯಲ್ಲಿ ಅದೃಶ್ಯರಾಗುತ್ತಾರೆ. ನರಸಿಂಹ ಸರಸ್ವತಿ ಯತಿಗಳು ನಮ್ಮ ರಾಜ್ಯದ ಗಾಣಗಾಪುರಕ್ಕೆ ಬಂದು ನೆಲೆಸಿದ್ದರು. ಅವರ ತಪ್ಪಸ್ಸಿನ ನೆಲ ಗಾಣಗಾಪುರ. ಅವರ ಪೂಜ್ಯ ನಿರ್ಗುಣ ಪಾದುಕೆ ಇಲ್ಲಿದೆ. ದತ್ತಭಕರ ನೆಚ್ಚಿನಕ್ಷೇತ್ರವಾಗಿ ಗಾಣಗಾಪುರ ವಿಖ್ಯಾತಿ ಪಡೆದಿದೆ. ಶ್ರೀ ನರಸಿಂಹ ಸರಸ್ವತಿ ಯತಿಗಳು ಕೂಡ ಮಂದೆ ಶ್ರೀಶೈಲದಲ್ಲಿ ಅದೃಶ್ಯರಾಗುತ್ತಾರೆ.

ಇಲ್ಲಿ ಆಶ್ಚರ್ಯದ, ಪವಾಡದ ಸಂಗತಿಯೊಂದನ್ನು ಹೇಳಬೇಕು. ದತ್ತ ಅವತಾರ ಎನಿಸಿಕೊಂಡಿರುವ ಎಲ್ಲ ಅವಧೂತರ ಸಮಾಧಿಗಳು ನಮಗೆ ಕಾಣಸಿಗುತ್ತವೆ. ಆದರೆ ಶ್ರೀಪಾದ ಶ್ರೀವಲ್ಲಭ ಮತ್ತು ಶ್ರೀ ನರಸಿಂಹ ಸರಸ್ವತಿ ಯತಿಗಳ ಸಮಾಧಿ ಎಲ್ಲೂ ಇಲ್ಲ!. ಹೀಗಾಗಿ ಅವರು ಈಗಲೂ ಭಕ್ತರನ್ನು ಕಾಯುತ್ತಿದ್ದಾರೆ ಎಂದೇ ನಾವು ನಂಬಿದ್ದೇವೆ. ಕಲಿಯುಗದಲ್ಲಿ ಜನರು ಅನ್ಯಮಾರ್ಗಗಳನ್ನು ತುಳಿದು ತಮ್ಮ ಮೌಲ್ಯಗಳನ್ನು ಕಳೆದುಕೊಂಡು ದುಖಿಃಸಬಾರದೆಂದು ಶ್ರೀಮನ್ನಾರಾಯಣನೇ ಈ ಯುಗದಲ್ಲಿದತ್ತಾತ್ರೇಯ ಸ್ವರೂಪದಲ್ಲಿ ನೆಲೆಸಿದ್ದಾರೆ.

ಪ್ರಧಾನಿ ಮೋದಿ ಗಾಣಗಾಪುರಕ್ಕೆ ಭೇಟಿ ನೀಡಲಿ
ದತ್ತಾವತಾರಿ ಶ್ರೀ ನರಸಿಂಹ ಸರಸ್ವತಿ ಯತಿಗಳು ನಮ್ಮ ರಾಜ್ಯದ ಗಾಣಗಾಪುರಕ್ಕೆ ಬಂದು ನೆಲೆಸಿದ್ದರು. ಅವರ ಪೂಜ್ಯ ನಿರ್ಗುಣ ಪಾದುಕೆ ಇಲ್ಲಿದೆ. ಹೀಗಾಗಿಯೇ ಗಾಣಗಾಪುರ ತ್ರಿಮೂರ್ತಿ ಸ್ವರೂಪಿ ದತ್ತ ದೇವರು ನೆಲೆಸಿರುವ ಪುಣ್ಯ ಭೂಮಿ. ತ್ರೀಮೂರ್ತಿಗಳು ಒಂದೆಡೆ ಪೂಜಿಸಲ್ಪಡುವ ಅಪರೂಪದ ಕ್ಷೇತ್ರ ಇದು. ನಾವಿಂದು ಭಾರತ ವಿಶ್ವಗುರುವಾಗಬೇಕೆನ್ನುತ್ತೇವೆ. ವಿಶ್ವ ಗುರುವಾಗಲು ನಮಗೆ ಖಂಡಿತವಾಗಿಯೂ ಗುರುಗಳ ಆಶೀರ್ವಾದ ಬೇಕೇ ಬೇಕು. ದೇಶದ ಚುಕ್ಕಾಣಿ ಹಿಡಿದಿರುವ ಮಾನ್ಯ ಪ್ರಧಾನಿ ನರೇಂದ್ರ ಮೋದಿಯವರು ಶ್ರೀ ಕ್ಷೇತ್ರಕ್ಕೆ ಭೇಟಿ ನೀಡಿ, ಗುರುವಿನ ಆಶೀರ್ವಾದ ಪಡೆದುಕೊಂಡಲ್ಲಿ, ಅವರು ಅಂದುಕೊಂಡಿರುವ ಕೆಲಸವನ್ನು ಮಾಡಲು ಸಾಧ್ಯವಾಗುತ್ತದೆ. ಭಾರತ ವಿಶ್ವಗುರುವಾಗಲೂ ಗುರುವಿನ ಜತೆಗೆ ತ್ರೀಮೂರ್ತಿಗಳ ಆಶೀರ್ವಾದ ದೊರೆತಂತಾಗುತ್ತದೆ.

ದತ್ತನ ಸ್ವರೂಪದ ಮಹತ್ವ
ತ್ರಿಮೂರ್ತಿಗಳ ಅಂಶದಿಂದ ಸೃಷ್ಟಿಯಾದ ಶ್ರೀಗುರುದತ್ತನ ಕೈಯಲ್ಲಿರುವ ಶಂಖ ಮತ್ತು ಚಕ್ರ ಶ್ರೀವಿಷ್ಣುವಿನ ಶಕ್ತಿಯ ಪ್ರತೀಕವಾಗಿದ್ದರೆ, ತ್ರಿಶೂಲ ಮತ್ತು ಡಮರುಗ ಶಿವ ಶಕ್ತಿಯ ಸೂಚಕ ವಾಗಿದೆ. ಕಮಂಡಲ ಮತ್ತು ಜಪಮಾಲೆ ಬ್ರಹ್ಮ ದೇವನ ಪ್ರತಿರೂಪವಾಗಿದೆ. ಇನ್ನು ಜೋಳಿಗೆ ಅಹಂ ನಾಶವಾಗಿರುವುದರ ಸಂಕೇತವಾಗಿದೆ. ಜೋಳಿಗೆ ಹಿಡಿದು ಕೊಂಡು ಮನೆ ಮನೆಗೆ ಅಲೆದಾಡಿ ಭಿಕ್ಷೆ ಬೇಡುವುದರಿಂದ ಅಹಂ ನಾಶವಾಗುತ್ತದೆ ಎಂದು ದತ್ತರು ಈ ಮೂಲಕ ಹೇಳಿದ್ದಾರೆ. ದತ್ತರ ಹಿಂದಿರುವ ಗೋವು ಧರ್ಮದ ಸಂಕೇತವಾಗಿದ್ದರೆ, ನಾಲ್ಕು ನಾಯಿಗಳು ನಾಲ್ಕು ವೇದಗಳನ್ನು ಸಂಕೇತಿಸುತ್ತವೆ. ಔದುಂಬರ ವೃಕ್ಷ ಔಷಧಿಯ ಸಂಕೇತವಾಗಿದೆ, ಕಲ್ಪವೃಕ್ಷ ವಾಗಿದೆ.

ಸ್ವರೂಪವೇ ತಿಳಿಸುವಂತೆ ಭಕ್ತರ ಹಿತ ಕಾಯಲೆಂದೇ ಅವತರಿಸಿರುವ ದೇವರು ಶ್ರೀಗುರು ದತ್ತ. ದತ್ತಾತ್ರೇಯ ದೇವರು ಮತ್ತು ನನ್ನ ಕುಲಗುರುಗಳಾದ ಶೃಂಗೇರಿಯ ಜಗದ್ಗುರು ಶ್ರೀ ಭಾರತೀ ತೀರ್ಥ ಮಹಾಸ್ವಾಮಿಗಳು ಹಾಗೂ ಜಗದ್ಗುರು ಶ್ರೀ ವಿದುಶೇಖರ ಭಾರತಿ ಮಹಾಸ್ವಾಮಿಗಳಲ್ಲಿ,ಸರ್ವರಿಗೂ ಸದ್ಭುದ್ಧಿಯನ್ನು ಕೊಟ್ಟು, ಆರ್ಥಿಕ ವಾಗಿಸದೃಢವಾದ, ಸ್ವಾರ್ಥವಿಲ್ಲದ, ಸತ್ಯ, ಧರ್ಮ, ಮಾರ್ಗಗಳಲ್ಲಿಸಾಗಿ, ಅಖಂಡ ಭಾರತವನ್ನು ಕಟ್ಟುಲು ಎಲ್ಲಪ್ರಜೆಗಳಿಗೆ ಆಯಸ್ಸು, ಅಭಿವೃದ್ಧಿಕೊಡಲೆಂದು ಪ್ರಾರ್ಥಿಸುತ್ತೇನೆ.
||ದಿಗಂಬರಾ ದಿಗಂಬರಾ ಶ್ರೀಪಾದವಲ್ಲಭ ದಿಗಂಬರಾ||

ಇದನ್ನೂ ಓದಿ | Prerane | ಎಣ್ಣೆ, ಬತ್ತಿ ಇಲ್ಲದೆ ಬೆಳಗುವ ದೀವಿಗೆ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

Latest

Video Viral: ಮಹಿಳೆಯನ್ನು ತಿವಿದು ರಸ್ತೆಯುದ್ದಕ್ಕೂ ಎಳೆದೊಯ್ದ ಎಮ್ಮೆ! ವಿಡಿಯೊ ಇದೆ

Video Viral: ಮಹಿಳೆಯೊಬ್ಬಳು ಕಿರಿದಾದ ಓಣಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ, ಎದುರು ಬದಿಯಿಂದ ಓಡಿ ಬರುತ್ತಿರುವ ಎಮ್ಮೆ ಆಕೆಯನ್ನು ತಿವಿದಿದೆ. ಆಗ ಎಮ್ಮೆಯ ಕೊಂಬಿಗೆ ಮಹಿಳೆಯ ಉಡುಪು ಸಿಕ್ಕಿಹಾಕಿಕೊಂಡಿದ್ದ ಪರಿಣಾಮ ಬೀದಿಯಲ್ಲಿ 500 ಮೀಗಳಷ್ಟು ದೂರ ಅದು ಎಳೆದುಕೊಂಡು ಹೋಗಿದೆ. ಕೊನೆಗೆ ಸ್ಥಳೀಯರು ಎಮ್ಮೆಯಿಂದ ಮಹಿಳೆಯನ್ನು ಕಾಪಾಡಿದ್ದಾರೆ. ಹಾಗೇ ಆಕೆಗೆ ಗಂಭೀರ ಗಾಯಗಳಾದ ಹಿನ್ನೆಲೆ ಆಕೆಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

VISTARANEWS.COM


on

Viral Video
Koo

ಚೆನ್ನೈ : ಮಹಿಳೆಯೊಬ್ಬಳನ್ನು ಎಮ್ಮೆಯೊಂದು ರಸ್ತೆಯುದ್ದಕ್ಕೂ 500 ಮೀಗಳಷ್ಟು ದೂರ ತಿವಿದುಕೊಂಡು ಹೋಗಿ ಗಂಭೀರವಾಗಿ ಗಾಯಗೊಳಿಸಿದ ಆಘಾತಕಾರಿ ಘಟನೆ ಚೆನ್ನೈನ ತಿರುವೊಟ್ರಿಯೂರ್‌ನಲ್ಲಿ ನಡೆದಿದೆ. ಈ ಘಟನೆ ಸಿಸಿಟಿಯಲ್ಲಿ ಸೆರೆಯಾಗಿದ್ದು, ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಲಾಗಿದೆ. ಇದೀಗ ಸಿಕ್ಕಾಪಟ್ಟೆ ವೈರಲ್ (Video Viral) ಆಗಿದೆ.

ವಿಡಿಯೊದಲ್ಲಿ ಮಹಿಳೆಯನ್ನು ಎಮ್ಮೆ ಎಳೆದುಕೊಂಡು ಹೋಗುತ್ತಿದ್ದು, ಅನೇಕರು ಮಹಿಳೆಗೆ ಸಹಾಯ ಮಾಡಲು ಅದರ ಹಿಂದೆ ಓಡಿ ಬರುತ್ತಿರುವ ದೃಶ್ಯ ಕಂಡುಬಂದಿದೆ. ಭಾನುವಾರ ಮಧ್ಯಾಹ್ನದ ವೇಳೆ 35 ವರ್ಷದ ಈ ಮಹಿಳೆ ಗ್ರಾಮದ ಕಿರಿದಾದ ಓಣಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ, ಎದುರು ಬದಿಯಿಂದ ಓಡಿ ಬರುತ್ತಿರುವ ಎಮ್ಮೆ ಆಕೆಯನ್ನು ತಿವಿದಿದೆ. ಆಗ ಎಮ್ಮೆಯ ಕೊಂಬಿಗೆ ಮಹಿಳೆಯ ಉಡುಪು ಸಿಕ್ಕಿಹಾಕಿಕೊಂಡಿದ್ದ ಪರಿಣಾಮ ಬೀದಿಯಲ್ಲಿ 500 ಮೀಗಳಷ್ಟು ದೂರ ಅದು ಎಳೆದುಕೊಂಡು ಹೋಗಿದೆ. ಕೊನೆಗೆ ಸ್ಥಳೀಯರು ಎಮ್ಮೆಯಿಂದ ಮಹಿಳೆಯನ್ನು ಕಾಪಾಡಿದ್ದಾರೆ. ಹಾಗೇ ಆಕೆಗೆ ಗಂಭೀರ ಗಾಯಗಳಾದ ಹಿನ್ನೆಲೆ ಆಕೆಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

ಮಹಿಳೆಗೆ ದೇಹದ ಹಲವು ಭಾಗಗಳಲ್ಲಿ ಗಾಯಗಳಾಗಿದ್ದು ಆಕೆ ಚಿಕಿತ್ಸೆ ಪಡೆಯುತ್ತಿದ್ದಾಳೆ ಮತ್ತು ಪ್ರಾಣಾಪಾಯದಿಂದ ಪಾರಾಗಿದ್ದಾಳೆ ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ. ಮಹಿಳೆಯನ್ನು ಎಮ್ಮೆಯಿಂದ ಬಿಡಿಸಿದ ನಂತರ ಆ ಎಮ್ಮೆ ರಸ್ತೆ ಬದಿಯಲ್ಲಿ ನಿಲ್ಲಿಸಿದ ಸಿಕ್ಕ ಸಿಕ್ಕ ವಾಹನಗಳನ್ನು ಕೆಡವಿದೆ. ಹಾಗಾಗಿ ಎಮ್ಮೆಯನ್ನು ಸೆರೆ ಹಿಡಿಯಲು ಗ್ರೇಟರ್ ಚೆನ್ನೈ ಕಾರ್ಪೋರೇಷನ್ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಅದನ್ನು ಹಿಡಿದು, ಪುಲಿಯಂಥೋಪ್‌ನಲ್ಲಿರುವ ಗ್ರೇಟರ್ ಚೆನ್ನೈ ಕಾರ್ಪೋರೇಷನ್‌ ಆಶ್ರಯಕ್ಕೆ ಕರೆದೊಯ್ಯಲಾಯಿತು ಎಂಬುದಾಗಿ ತಿಳಿದುಬಂದಿದೆ.

ಇದನ್ನೂ ಓದಿ: Viral Video: 7 ಅಜ್ಜಂದಿರ ಜೊತೆ ಸಂಸಾರ ನಡೆಸುತ್ತಿರುವ ಯುವತಿ; ಆಕೆಯ ಪ್ಲ್ಯಾನ್ ಇಂಟರೆಸ್ಟಿಂಗ್!

ಈ ವರ್ಷದ ಕಾರ್ಪೋರೇಷನ್ ಬಜೆಟ್ ಮಂಡನೆಯ ವೇಳೆ ಮೇಯರ್ ಆರ್. ಪ್ರಿಯಾ ಅವರು ನಗರದಾದ್ಯಂತ ಹಸುಗಳಿಗೆ ಪರವಾನಗಿ ಮತ್ತು ದಕ್ಷಿಣ ಚೆನ್ನೈನಲ್ಲಿ ಹೆಚ್ಚುವರಿ ಆಶ್ರಯಗಳ ಸ್ಥಾಪನೆಯ ಯೋಜನೆ ಜಾರಿಗೊಳಿಸಿದ್ದರು. ಆದರೆ ಲೋಕಸಭಾ ಚುನಾವಣೆಯ ಕಾರಣದಿಂದ ಈ ಎರಡೂ ಯೋಜನೆಗಳಿಗೆ ಕೆಲಸ ಪ್ರಾರಂಭಿಸಲು ಸಾಧ್ಯವಾಗಿಲ್ಲ ಎಂಬುದಾಗಿ ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.

Continue Reading

Latest

Viral Video: ಗಂಭೀರ ಸ್ಥಿತಿಯಲ್ಲಿರುವ ಅಪ್ಪನ ಆಸೆ ಈಡೇರಿಕೆ; ಆಸ್ಪತ್ರೆಯ ಐಸಿಯುನಲ್ಲೇ ಮಗಳ ಮದುವೆ!

Viral Video: ಹೆಣ್ಣುಮಕ್ಕಳ ಮದುವೆಯನ್ನು ಕಣ್ತುಂಬಿಸಿಕೊಳ್ಳಬೇಕು ಎಂಬ ಆಸೆ ಎಲ್ಲಾ ತಂದೆಯರಿಗಿರುತ್ತದೆ. ಆದರೆ ಆ ಸಂದರ್ಭದಲ್ಲಿ ಆರೋಗ್ಯ ಕೈ ಕೊಟ್ಟರೆ ಆ ತಂದೆಯ ಪರಿಸ್ಥಿತಿ ಹೇಗಿರಬೇಡ? ಇಂತಹದ್ದೇ ಒಂದು ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.ಇನ್ನೇನು ಕೆಲವೇ ದಿನಗಳಲ್ಲಿ ಹೆಣ್ಣುಮಕ್ಕಳ ಮದುವೆ ಇದೆಯೆನ್ನುವಾಗ ತಂದೆಯೊಬ್ಬರಿಗೆ ಆರೋಗ್ಯ ಸಮಸ್ಯೆ ಎದುರಾಗಿ ಐಸಿಯುಗೆ ದಾಖಲಾದರು. ಮಕ್ಕಳ ಮದುವೆಯ ವೇಳೆ ಅವರನ್ನು ಡಿಸ್ಚಾರ್ಜ್ ಮಾಡಲು ವೈದ್ಯರು ನಿರಾಕರಿಸಿದರು. ಹಾಗಾಗಿ ಅವರ ಮಕ್ಕಳ ಮದುವೆ ನೋಡಬೇಕೆಂಬ ಬಯಕೆಯನ್ನು ಈಡೇರಿಸಲು ಆಸ್ಪತ್ರೆಯ ವೈದ್ಯರ ಬೆಂಬಲದೊಂದಿಗೆ ಅವರಿದ್ದ ಐಸಿಯುನಲ್ಲಿಯೇ ಅವರ ಮಕ್ಕಳಿಗೆ ಮದುವೆ ಮಾಡಲಾಗಿದೆ.

VISTARANEWS.COM


on

Viral Video
Koo

ಲಕ್ನೋ : ಆಸ್ಪತ್ರೆಗೆ ಎಲ್ಲರೂ ಅನಾರೋಗ್ಯಕ್ಕೆ ಚಿಕಿತ್ಸೆಗೆಂದು ಹೋಗುತ್ತಾರೆ. ಆದರೆ ಉತ್ತರ ಪ್ರದೇಶದ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆಗೆಂದು ಬಂದ ರೋಗಿಯ ಹೆಣ್ಣು ಮಕ್ಕಳಿಗೆ ಐಸಿಯುನಲ್ಲಿ ಮದುವೆ ಮಾಡಲಾಗಿದೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು ಸಿಕ್ಕಾಪಟ್ಟೆ ವೈರಲ್(Viral Video) ಆಗಿದೆ.

ಉತ್ತರ ಪ್ರದೇಶದ ಲಕ್ನೋದ ಎರಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಲಕ್ನೋ ನಿವಾಸಿಯಾದ ಮೊಹಮ್ಮದ್ ಇಕ್ಬಾಲ್ (51) ಅವರು ದಾಖಲಾಗಿದ್ದರು. ಆದರೆ ಇನ್ನೂ ಕೆಲವೇ ದಿನಗಳಲ್ಲಿ ಅವರ ಹೆಣ್ಣುಮಕ್ಕಳ ಮದುವೆ ಇತ್ತು. ಇಕ್ಬಾಲ್ ಅವರು ತೀವ್ರ ಎದೆ ನೋವಿನಿಂದ ನರಳುತ್ತಿರುವ ಹಿನ್ನೆಲೆಯಲ್ಲಿ ಅವರನ್ನು ಐಸಿಯುಗೆ ದಾಖಲಿಸಲಾಗಿತ್ತು. ಆದರೆ ಮಕ್ಕಳ ಮದುವೆಯ ವೇಳೆ ಅವರನ್ನು ಡಿಸ್ಚಾರ್ಜ್ ಮಾಡಲು ವೈದ್ಯರು ನಿರಾಕರಿಸಿದರು. ಹಾಗಾಗಿ ಅವರ ಮಕ್ಕಳ ಮದುವೆ ನೋಡಬೇಕೆಂಬ ಬಯಕೆಯನ್ನು ಈಡೇರಿಸಲು ಆಸ್ಪತ್ರೆಯ ವೈದ್ಯರ ಬೆಂಬಲದೊಂದಿಗೆ ಅವರಿದ್ದ ಐಸಿಯುನಲ್ಲಿಯೇ ಅವರ ಮಕ್ಕಳಿಗೆ ಮದುವೆ ಮಾಡಲಾಯಿತು!

ಇಕ್ಬಾಲ್ ಸಂಬಂಧಿಕರು ಆತ ಇಲ್ಲದೇ ಮಕ್ಕಳ ಮದುವೆಗೆ ಸಿದ್ಧತೆ ನಡೆಸುತ್ತಿದ್ದರು. ಆದರೆ ಇಕ್ಬಾಲ್ ಮದುವೆಗೆ ಬರಲು ಸಾಧ್ಯವಾಗದ ಕಾರಣ ಆಸ್ಪತ್ರೆಯಲ್ಲಿಯೇ ಸರಳವಾಗಿ ಮದುವೆಯಾಗಲು ಅವಕಾಶ ನೀಡುವಂತೆ ವೈದ್ಯರ ಬಳಿ ಮನವಿ ಮಾಡಿದ್ದರು. ಸಾಕಷ್ಟು ಚರ್ಚೆಯ ಬಳಿಕ ವೈದ್ಯರು ಮದುವೆಗೆ ಅನುಮತಿ ನೀಡಿದ ಕಾರಣ ಅವರ ಮಕ್ಕಳ ಮದುವೆ ಅವರ ಕಣ್ಣುಮುಂದೆಯೇ ನಡೆದಿದೆ. ಇಕ್ಬಾಲ್ ಮೊದಲ ಮಗಳು ಐಸಿಯುನಲ್ಲಿ ಗುರುವಾರ ಮದುವೆಯಾದರೆ, ಅವರ ಎರಡನೇ ಮಗಳು ಮರುದಿನ ಮದುವೆಯಾಗಿದ್ದಾರೆ ಎಂಬುದಾಗಿ ತಿಳಿದುಬಂದಿದೆ.
ಇದಕ್ಕೆ ಸಂಬಂಧಿಸಿದ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಹಾಗೇ ಈ ಅದ್ಭುತ ಕ್ಷಣವನ್ನು ಆಸ್ಪತ್ರೆಯಲ್ಲಿ ನಡೆಸುವ ಮುನ್ನ ಆಸ್ಪತ್ರೆಯ ಸಿಬ್ಬಂದಿ ಮತ್ತು ಆಡಳಿತ ವರ್ಗ, ಇತರರ ರೋಗಗಳಿಗೆ ಸಮಸ್ಯೆಯಾಗುವುದನ್ನು ತಡೆಯಲು ವಿಶೇಷ ವ್ಯವಸ್ಥೆಯನ್ನು ಮಾಡಿದ್ದಾರೆ. ಮತ್ತು ಮಾನವೀಯತೆಯಿಂದ ಈ ಮದುವೆಗೆ ಐದು ಜನರಿಗೆ ಭಾಗವಹಿಸಲು ಅವಕಾಶ ನೀಡಿದ್ದರು ಎಂಬುದಾಗಿ ತಿಳಿದುಬಂದಿದೆ. ವರದಿ ಪ್ರಕಾರ ಇಕ್ಬಾಲ್ ಮಕ್ಕಳ ಮದುವೆ ಜೂನ್ 22ರಂದು ಮುಂಬೈನಲ್ಲಿ ನಿಗದಿಯಾಗಿತ್ತು.

ಇದನ್ನೂ ಓದಿ: Viral Video: 7 ಅಜ್ಜಂದಿರ ಜೊತೆ ಸಂಸಾರ ನಡೆಸುತ್ತಿರುವ ಯುವತಿ; ಆಕೆಯ ಪ್ಲ್ಯಾನ್ ಇಂಟರೆಸ್ಟಿಂಗ್!

“ನಮ್ಮ ತಂದೆ ನಮ್ಮ ಜಗತ್ತು. ಮತ್ತು ಅವರ ಆಶೀರ್ವಾದವಿಲ್ಲದೆ ಮದುವೆಯಾಗಲು ನಮಗೆ ಇಷ್ಟವಿಲ್ಲ. ಇದಕ್ಕೆ ಅವಕಾಶ ಮಾಡಿಕೊಟ್ಟ ಆಸ್ಪತ್ರೆಯ ಆಡಳಿತ ವರ್ಗಕ್ಕೆ ನಾವು ಕೃತಜ್ಞತೆ ಸಲ್ಲಿಸುತ್ತೇವೆ. ನಮ್ಮ ತಂದೆ ವೆಂಟಿಲೇಟರ್ ಸಹಾಯದಿಂದ ಪ್ರಜ್ಞೆಯಲ್ಲಿದ್ದರು. ನಮ್ಮ ಮದುವೆ ನೋಡಿ ಅವರ ಕಣ್ಣು ತೃಪ್ತಿಯಿಂದ ತುಂಬಿದವು” ಎಂದು ಇಕ್ಬಾಲ್ ಮಕ್ಕಳು ಹೇಳಿದ್ದಾರೆ.

Continue Reading

ಪ್ರಮುಖ ಸುದ್ದಿ

ಸೆಕ್ಸ್‌ ವರ್ಕರ್‌ಗೆ ಮಾಡಿದ ಮೆಸೇಜ್‌ ಗೊತ್ತಾಗಿ ಪತ್ನಿ ವಿಚ್ಛೇದನ; ಆ್ಯಪಲ್‌ ಕಂಪನಿ ವಿರುದ್ಧ ಕೇಸ್‌ ಜಡಿದ ಪತಿ!

ಲಂಡನ್‌ ಉದ್ಯಮಿಯೊಬ್ಬ ಆ್ಯಪಲ್‌ ಕಂಪನಿ ವಿರುದ್ಧ ಮೊಕದ್ದಮೆ ಹೂಡಿದ್ದಾನೆ. ಉದ್ಯಮಿಯ ಮನೆಯಲ್ಲಿರುವ ಸದಸ್ಯರ ಬಳಕೆಗಾಗಿ ಐಮ್ಯಾಕ್‌ ಇದೆ. ಐಮ್ಯಾಕ್‌ನಲ್ಲಿ ಐಮೆಸೇಜ್‌ ಮೂಲಕ ಹಲವು ಸೆಕ್ಸ್‌ ವರ್ಕರ್‌ಗಳ ಜತೆ ರೊಮ್ಯಾಂಟಿಕ್‌ ಆಗಿ ಚಾಟ್‌ (Sexting) ಮಾಡಿದ್ದಾನೆ. ಈ ಮೆಸೇಜ್‌ಗಳನ್ನು ಡಿಲೀಟ್‌ ಮಾಡಿದರೂ ಪತ್ನಿಗೆ ಕಾಣಿಸಿವೆ. ಇದರಿಂದಾಗಿ ಕಂಪನಿ ವಿರುದ್ಧವೇ ಉದ್ಯಮಿಯು ಮೊಕದ್ದಮೆ ಹೂಡಿದ್ದಾನೆ.

VISTARANEWS.COM


on

Sex Worker
Koo

ಲಂಡನ್:‌ ಸುರಕ್ಷತೆಯ ದೃಷ್ಟಿಯಿಂದ ಆ್ಯಪಲ್‌ ಕಂಪನಿಯ ಉತ್ಪನ್ನಗಳನ್ನು ಜನ ಹೆಚ್ಚಿನ ದುಡ್ಡು ಕೊಟ್ಟು ಖರೀದಿಸುತ್ತಾರೆ. ಐಫೋನ್‌ ಹಾಗೂ ಐಮ್ಯಾಕ್‌ಗಳನ್ನು ಇದೇ ಕಾರಣಕ್ಕಾಗಿ ಖರೀದಿಸುತ್ತಾರೆ. ಆದರೆ, ಲಂಡನ್‌ನಲ್ಲಿ ವ್ಯಕ್ತಿಯೊಬ್ಬ ಸುರಕ್ಷತೆಗೆ ಧಕ್ಕೆ ಬಂದ ಹಿನ್ನೆಲೆಯಲ್ಲಿ ಆ್ಯಪಲ್‌ ಕಂಪನಿ (Apple Company) ವಿರುದ್ಧವೇ ಮೊಕದ್ದಮೆ ಹೂಡಿದ್ದಾನೆ. ವ್ಯಕ್ತಿಯೊಬ್ಬ ಐಮ್ಯಾಕ್‌ನಲ್ಲಿ ಲೈಂಗಿಕ ಕಾರ್ಯಕರ್ತೆ (Sex Worker) ಜತೆ ಚಾಟ್‌ ಮಾಡಿದ್ದು, ಆ ಮೆಸೇಜ್‌ಗಳನ್ನು ಬಳಿಕ ಡಿಲೀಟ್‌ ಮಾಡಿದ್ದಾನೆ. ಆದರೆ, ಪರ್ಮನೆಂಟ್‌ ಆದ ಮೆಸೇಜ್‌ಗಳು ಹೆಂಡತಿಗೆ ಕಾಣಿಸಿದ ಕಾರಣ ವ್ಯಕ್ತಿಯು ಆ್ಯಪಲ್‌ ಕಂಪನಿ ವಿರುದ್ಧ ಕೇಸ್‌ ಹಾಕಿದ್ದಾನೆ ಎಂದು ತಿಳಿದುಬಂದಿದೆ.

ಹೌದು, ಲಂಡನ್‌ ಉದ್ಯಮಿಯೊಬ್ಬ ಆ್ಯಪಲ್‌ ಕಂಪನಿ ವಿರುದ್ಧ ಮೊಕದ್ದಮೆ ಹೂಡಿದ್ದಾನೆ. ಉದ್ಯಮಿಯ ಮನೆಯಲ್ಲಿರುವ ಸದಸ್ಯರ ಬಳಕೆಗಾಗಿ ಐಮ್ಯಾಕ್‌ ಇದೆ. ಐಮ್ಯಾಕ್‌ನಲ್ಲಿ ಐಮೆಸೇಜ್‌ ಮೂಲಕ ಹಲವು ಸೆಕ್ಸ್‌ ವರ್ಕರ್‌ಗಳ ಜತೆ ರೊಮ್ಯಾಂಟಿಕ್‌ ಆಗಿ ಚಾಟ್‌ (Sexting) ಮಾಡಿದ್ದಾನೆ. ಐಮ್ಯಾಕ್‌ನಲ್ಲಿ ಕಳುಹಿಸಿದ ಮೆಸೇಜ್‌ಗಳನ್ನು ಆತ ತನ್ನ ಐಫೋನ್‌ನಲ್ಲಿ ಡಿಲೀಟ್‌ ಮಾಡಿದ್ದಾನೆ. ಪರ್ಮನೆಂಟ್‌ ಆಗಿ ಮೆಸೇಜ್‌ಗಳನ್ನು ಡಿಲೀಟ್‌ ಮಾಡಿದ್ದಾನೆ. ಆದರೂ, ಈ ಮೆಸೇಜ್‌ಗಳನ್ನು ಪತ್ನಿಯು ಪತ್ತೆಹಚ್ಚಿದ್ದಾರೆ. ಇದು ಉದ್ಯಮಿಯ ಪಿತ್ತ ನೆತ್ತಿಗೇರುವಂತೆ ಮಾಡಿದೆ.

Hiring to Apple

ವಿಚ್ಛೇದನಕ್ಕೆ ಅರ್ಜಿ ಹಾಕಿದ ಪತ್ನಿ

ಪತಿಯು ರೆಡ್‌ಲೈಟ್‌ ಏರಿಯಾದ ಲಲನೆಯರ ಜತೆ ‘ಸರಸ’ದ ಮೆಸೇಜ್‌ಗಳನ್ನು ಮಾಡಿರುವುದು ಪತ್ತೆ ಹಚ್ಚಿದ ಪತ್ನಿಯು ಈಗ ವಿಚ್ಛೇದನ ಅರ್ಜಿ ಹಾಕಿದ್ದಾರೆ. ಅಷ್ಟೇ ಅಲ್ಲ, ಸುಮಾರು 52 ಕೋಟಿ ರೂ. (50 ಲಕ್ಷ ಪೌಂಡ್ಸ್)‌ ಜೀವನಾಂಶ ಕೊಡಬೇಕು ಎಂದು ಕೋರ್ಟ್‌ ಮೊರೆಹೋಗಿದ್ದಾರೆ. ಇದು ಈಗ ಹೆಸರು ಹೇಳಲು ಇಚ್ಛಿಸದ ಉದ್ಯಮಿಗೆ ಪೇಚಾಟ ತಂದಿದೆ. ಹೆಂಡತಿ ಇದ್ದರೂ ಬೇರೆ ಹೆಣ್ಣುಮಕ್ಕಳ ಜತೆ ಚಾಟ್‌ ಮಾಡಿದ್ದರಿಂದ ಕುಟುಂಬಸ್ಥರು ಹಾಗೂ ಗೆಳೆಯರ ಎದುರು ಅವಮಾನ ಆಗಿದೆ. ಇದರ ಮಧ್ಯೆಯೇ ಪತ್ನಿಯು ವಿಚ್ಛೇದನಕ್ಕೆ ಅರ್ಜಿ ಹಾಕಿರುವುದು ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಆ್ಯಪಲ್‌ ವಿರುದ್ಧ ಕೇಸ್‌ ಏಕೆ?

ಐಮ್ಯಾಕ್‌ನಲ್ಲಿ ಮಾಡಿದ ಮೆಸೇಜ್‌ಗಳನ್ನು ಐಫೋನ್‌ನಲ್ಲಿ ಡಿಲೀಟ್‌ ಮಾಡಿದ್ದರಿಂದ ಉದ್ಯಮಿಯ ಪತ್ನಿಗೆ ಐಮ್ಯಾಕ್‌ನಲ್ಲಿ ಮಾಡಿದ ಮೆಸೇಜ್‌ಗಳು ಸಿಕ್ಕಿವೆ. ಹಾಗಾಗಿ, “ಲಿಂಕ್‌ ಆದ ಡಿವೈಸ್‌ಗಳ ಮೂಲಕ ಕಳುಹಿಸಿದ ಮೆಸೇಜ್‌ಗಳನ್ನು ಎಲ್ಲ ಕಡೆಯೂ ಡಿಲೀಟ್‌ ಮಾಡಬೇಕು ಎಂಬುದರ ಕುರಿತು ಆ್ಯಪಲ್‌ ಕಂಪನಿಯು ಗ್ರಾಹಕರಿಗೆ ಮಾಹಿತಿ ನೀಡಿಲ್ಲ. ಇದರಿಂದ ನಾನೀಗ ನನ್ನ ಪತ್ನಿ, ಅಪಾರ ಪ್ರಮಾಣದ ಹಣ ಕಳೆದುಕೊಳ್ಳುವಂತಾಗಿದೆ” ಎಂದು ಉದ್ಯಮಿಯು ಕೋರ್ಟ್‌ ಮೊರೆ ಹೋಗಿದ್ದಾನೆ.

ಇದನ್ನೂ ಓದಿ: Murder Case : ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನಿಗೆ ಚಟ್ಟ ಕಟ್ಟಿದಳು ಹೆಂಡತಿ

Continue Reading

ಪ್ರಮುಖ ಸುದ್ದಿ

DK Shivakumar: ಇವಿಎಂ ಸತ್ಯಾಸತ್ಯತೆ ಪ್ರಪಂಚಕ್ಕೇ ಅರ್ಥವಾಗಿದೆ; ಮಸ್ಕ್ ಅನುಮಾನ ಸಮರ್ಥಿಸಿಕೊಂಡ ಡಿಕೆಶಿ

DK Shivakumar: ಇವಿಎಂಗಳ ಮೇಲೆ ಎಲಾನ್ ಮಸ್ಕ್ ಅನುಮಾನ ವ್ಯಕ್ತಪಡಿಸಿದ ಹಿನ್ನೆಲೆ ಸಾಮಾಜಿಕ ಜಾಲತಾಣದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಚುನಾವಣೆಯ ನಂತರ ದೇಶದ ಕೆಲವೆಡೆ ನಡೆಯುತ್ತಿರುವ ಘಟನೆಗಳಿಗೂ ಮಸ್ಕ್‌ ಅವರ ಹೇಳಿಕೆಗೂ ತಾಳೆಯಾಗುತ್ತಿದೆ. ಇವಿಎಂಗಳ ಸತ್ಯಾಸತ್ಯತೆ ಬಗ್ಗೆ ಈಗ ಪ್ರಪಂಚಕ್ಕೇ ಅರ್ಥವಾಗಿದೆ ಎಂದು ಡಿಕೆಶಿ ಹೇಳಿದ್ದಾರೆ.

VISTARANEWS.COM


on

DK Shivakumar
Koo

ಬೆಂಗಳೂರು: ಕೃತಕ ಬುದ್ಧಿಮತ್ತೆ (AI) ಬಳಸಿ ಇವಿಎಂಗಳನ್ನು (EVMs) ಹ್ಯಾಕ್‌ ಮಾಡಬಹುದು ಎಂದು ಟೆಸ್ಲಾ ಸಿಇಒ ಎಲಾನ್‌ ಮಸ್ಕ್‌ ಹೇಳಿಕೆ ನೀಡಿದ ಬಳಿಕ ಕಾಂಗ್ರೆಸ್‌ ನಾಯಕ ರಾಹುಲ್‌ ಕೂಡ ಇವಿಎಂಗಳ (Electronic Voting Machine) ಮೇಲೆ ಅನುಮಾನ ವ್ಯಕ್ತಪಡಿಸಿದ್ದರು. ಇದೀಗ ಎಲಾನ್‌ ಮಸ್ಕ್‌ ಅವರು ಹೇಳಿರೋದನ್ನು ಡಿಸಿಎಂ ಡಿ.ಕೆ. ಶಿವಕುಮಾರ್‌ (DK Shivakumar) ಅವರು ಕೂಡ ಸಮರ್ಥಿಸಿಕೊಂಡಿರುವುದು ಕಂಡುಬಂದಿದೆ.

ಇವಿಎಂಗಳ ಮೇಲೆ ಎಲಾನ್ ಮಸ್ಕ್ ಅನುಮಾನ ವ್ಯಕ್ತಪಡಿಸಿದ ಹಿನ್ನೆಲೆ ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿರುವ ಅವರು, ʼಮಸುಕಾʼಗಿದ್ದ ಅನುಮಾನ ಈಗ ತೀಕ್ಷ್ಣವಾಗಿದೆ! ತಂತ್ರಜ್ಞಾನ ನಿಪುಣ ಎಂದು ಇಡೀ ಪ್ರಪಂಚವೇ ಒಪ್ಪಿಕೊಂಡಿರುವ ಎಲಾನ್‌ ಮಸ್ಕ್‌ ಅವರೇ ಇವಿಎಂಗಳ ಮೇಲೆ ವ್ಯಕ್ತಪಡಿಸಿರುವ ಅನುಮಾನವು ಭಾರತದಲ್ಲಿ ನಡೆದ ಮತದಾನ ಪ್ರಕ್ರಿಯೆಗಳ ಬಗ್ಗೆ ಆತಂಕ ಮೂಡಿಸಿದೆ.

ಚುನಾವಣೆಯ ನಂತರ ದೇಶದ ಕೆಲವೆಡೆ ನಡೆಯುತ್ತಿರುವ ಘಟನೆಗಳಿಗೂ ಮಸ್ಕ್‌ ಅವರ ಹೇಳಿಕೆಗೂ ತಾಳೆಯಾಗುತ್ತಿದೆ. ಚುನಾವಣೆ ವ್ಯವಸ್ಥೆಯೇ ಪಾರದರ್ಶಕವಾಗಿರದಿದ್ದರೆ ಜನಾದೇಶ ಯಾರ ಕಡೆ ಇದೆ ಎಂದು ತಿಳಿಯುವುದಾದರೂ ಹೇಗೆ? ಇವಿಎಂಗಳ ಸತ್ಯಾಸತ್ಯತೆ ಬಗ್ಗೆ ಈಗ ಪ್ರಪಂಚಕ್ಕೇ ಅರ್ಥವಾಗಿದೆ. ಭಾರತಕ್ಕೂ ಆ ಕಾಲ ಸನ್ನಿಹಿತವಾಗಿದೆ ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

ಇದನ್ನೂ ಓದಿ | Petrol Diesel Price Hike: ಬಡವರ ಮೇಲೆ ತೆರಿಗೆ ಹಾಕಿ ಬೇರೆ ರಾಜ್ಯಗಳಿಗೆ ಹೋಲಿಸುವುದು ದ್ರೋಹ: ಬೊಮ್ಮಾಯಿ ಆಕ್ರೋಶ

ಎಲಾನ್‌ ಮಸ್ಕ್‌ ಏನು ಹೇಳಿದ್ದರು?

ಅಮೆರಿಕದ ಚುನಾವಣೆಯಲ್ಲಿ ಬಳಸುವ ಇವಿಎಂಗಳ ಬಗ್ಗೆ ಎಲಾನ್‌ ಮಸ್ಕ್‌ ಅವರು ಅನುಮಾನ ವ್ಯಕ್ತಪಡಿಸಿದ್ದರು. “ಅಮೆರಿಕದಲ್ಲಿ ನಾವು ಎಲೆಕ್ಟ್ರಾನಿಕ್‌ ವೋಟಿಂಗ್‌ ಮಷೀನ್‌ಗಳ ಬಳಕೆಯನ್ನು ನಿಲ್ಲಿಸಬೇಕು. ಹ್ಯಾಕರ್‌ಗಳು ಅಥವಾ ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ ತಂತ್ರಜ್ಞಾನವನ್ನು ಬಳಕೆ ಮಾಡುವ ಮೂಲಕ ಇವಿಎಂಗಳನ್ನು ಹ್ಯಾಕ್‌ ಮಾಡುವ ಸಾಧ್ಯತೆ ಇದೆ. ಇದು ಸಣ್ಣ ಸಂಗತಿಯಾದರೂ, ದೊಡ್ಡ ಸಮಸ್ಯೆಯಾಗಿದೆ” ಎಂದು ಎಲಾನ್‌ ಮಸ್ಕ್‌ ಎಕ್ಸ್‌ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದರು. ಇದು ಅಮೆರಿಕದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಇದನ್ನೂ ಓದಿ | Rahul Gandhi: ಕಾಂಗ್ರೆಸ್‌ ಹೆಚ್ಚು ಕ್ಷೇತ್ರ ಗೆದ್ದರೂ ಇವಿಎಂ ಬಗ್ಗೆ ಅನುಮಾನ ವ್ಯಕ್ತಪಡಿಸಿದ ರಾಹುಲ್‌ ಗಾಂಧಿ !

“ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ ಬಳಸಿ ಇವಿಎಂಗಳನ್ನು ಹ್ಯಾಕ್‌ ಮಾಡಬಹುದು” ಎಂದು ಟೆಸ್ಲಾ ಸಿಇಒ ಎಲಾನ್‌ ಮಸ್ಕ್‌ ಹೇಳಿದ ಬೆನ್ನಲ್ಲೇ ರಾಹುಲ್‌ ಗಾಂಧಿ ಅವರು ಕೂಡ ಇವಿಎಂ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. “ಭಾರತದಲ್ಲಿ ಇವಿಎಂಗಳು ಎಂದರೆ ಬ್ಲ್ಯಾಕ್‌ ಬಾಕ್ಸ್‌ (ಯಾರಿಗೂ ಗೊತ್ತಾಗದ, ಒಬ್ಬರಿಗೆ ಮಾತ್ರ ಆಕ್ಸೆಸ್‌ ಇರುವ ಎಲೆಕ್ಟ್ರಾನಿಕ್‌ ಡಿವೈಸ್)‌ ಇದ್ದಂತೆ. ಅವುಗಳನ್ನು ಯಾರೂ ಪರಿಶೀಲನೆ ಮಾಡಲು, ತಪಾಸಣೆ ಮಾಡಲು ಸಾಧ್ಯವಿಲ್ಲ. ಭಾರತದ ಚುನಾವಣೆ ಪಾರದರ್ಶಕತೆ ಕುರಿತು ಗಂಭೀರವಾದ ಆತಂಕಗಳು ವ್ಯಕ್ತವಾಗುತ್ತಿವೆ. ಸಂಸ್ಥೆಗಳು ವಿಶ್ವಾಸ ಕಳೆದುಕೊಂಡರೆ ಪ್ರಜಾಪ್ರಭುತ್ವ ವ್ಯವಸ್ಥೆಯೇ ಒಂದು ನಾಟಕೀಯ ಸ್ವರೂಪ ಪಡೆಯುತ್ತದೆ” ಎಂದು ಹೇಳಿದ್ದರು. ಇದೀಗ ಡಿಸಿಎಂ ಡಿಕೆಶಿ ಅವರು ಕೂಡ ವಿದ್ಯುನ್ಮಾನ ಮತಯಂತ್ರಗಳ ಕಾರ್ಯದಕ್ಷತೆ ಬಗ್ಗೆ ಅನುಮಾನ ಹೊರಹಾಕಿದ್ದಾರೆ.

Continue Reading
Advertisement
Viral Video
Latest4 mins ago

Video Viral: ಮಹಿಳೆಯನ್ನು ತಿವಿದು ರಸ್ತೆಯುದ್ದಕ್ಕೂ ಎಳೆದೊಯ್ದ ಎಮ್ಮೆ! ವಿಡಿಯೊ ಇದೆ

Viral Video
Latest7 mins ago

Viral Video: ಗಂಭೀರ ಸ್ಥಿತಿಯಲ್ಲಿರುವ ಅಪ್ಪನ ಆಸೆ ಈಡೇರಿಕೆ; ಆಸ್ಪತ್ರೆಯ ಐಸಿಯುನಲ್ಲೇ ಮಗಳ ಮದುವೆ!

Sex Worker
ಪ್ರಮುಖ ಸುದ್ದಿ37 mins ago

ಸೆಕ್ಸ್‌ ವರ್ಕರ್‌ಗೆ ಮಾಡಿದ ಮೆಸೇಜ್‌ ಗೊತ್ತಾಗಿ ಪತ್ನಿ ವಿಚ್ಛೇದನ; ಆ್ಯಪಲ್‌ ಕಂಪನಿ ವಿರುದ್ಧ ಕೇಸ್‌ ಜಡಿದ ಪತಿ!

NEETPG 2024
ಶಿಕ್ಷಣ57 mins ago

NEETPG 2024 : ಜೂ.23ಕ್ಕೆ ನೀಟ್‌ ಪಿಜಿ ಪರೀಕ್ಷೆ; ನಾಳೆಯಿಂದಲೇ ಪ್ರವೇಶ ಪತ್ರ ಬಿಡುಗಡೆ

DK Shivakumar
ಪ್ರಮುಖ ಸುದ್ದಿ1 hour ago

DK Shivakumar: ಇವಿಎಂ ಸತ್ಯಾಸತ್ಯತೆ ಪ್ರಪಂಚಕ್ಕೇ ಅರ್ಥವಾಗಿದೆ; ಮಸ್ಕ್ ಅನುಮಾನ ಸಮರ್ಥಿಸಿಕೊಂಡ ಡಿಕೆಶಿ

Viral Video
Latest2 hours ago

Viral Video: 7 ಅಜ್ಜಂದಿರ ಜೊತೆ ಸಂಸಾರ ನಡೆಸುತ್ತಿರುವ ಯುವತಿ; ಆಕೆಯ ಪ್ಲ್ಯಾನ್ ಇಂಟರೆಸ್ಟಿಂಗ್!

Malaika Vasupal experimented with a halter neck blouse for a traditional saree
ಫ್ಯಾಷನ್2 hours ago

Malaika Vasupal: ಟ್ರೆಡಿಷನಲ್‌ ಸೀರೆಗೆ ಹಾಲ್ಟರ್‌ ನೆಕ್‌ ಬ್ಲೌಸ್‌ ಪ್ರಯೋಗಿಸಿದ ನಟಿ ಮಲೈಕಾ ವಸುಪಾಲ್‌

Air India Food
ದೇಶ2 hours ago

Air India Food:‌ ಪ್ರಯಾಣಿಕರೇ ಎಚ್ಚರ; ವಿಮಾನದ ಊಟದಲ್ಲಿ ಸಿಕ್ತು ಮೆಟಲ್‌ ಬ್ಲೇಡ್!

Viral news
ವೈರಲ್ ನ್ಯೂಸ್2 hours ago

Viral News: ಕಾಯಿಲೆ ಗುರುತು ಹಿಡಿಯಲು ಖ್ಯಾತ ವೈದ್ಯರ ತಿಣುಕಾಟ; ಹತ್ತೇ ಸೆಕೆಂಡ್ ನಲ್ಲಿ ಪತ್ತೆಹಚ್ಚಿದ ಕೆಲಸದ ಮಹಿಳೆ!

T20 World Cup Super 8
ಕ್ರೀಡೆ2 hours ago

T20 World Cup Super 8 Stage: ಸೂಪರ್​-8 ಪಂದ್ಯಕ್ಕೂ ಮಳೆ ಭೀತಿ; ಭಾರತ-ಆಸೀಸ್​ ಪಂದ್ಯ ಅನುಮಾನ!

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Actor Darshan
ಮೈಸೂರು6 hours ago

Actor Darshan : ಕೊಲೆ ಕೇಸ್‌ ಬೆನ್ನಲ್ಲೇ ನಟ ದರ್ಶನ್‌ ಸೇರಿ ಪತ್ನಿ ವಿಜಯಲಕ್ಷ್ಮಿಗೆ ಬಾರ್ ಹೆಡೆಡ್ ಗೂಸ್ ಸಂಕಷ್ಟ!

Bakrid 2024
ಬೆಂಗಳೂರು6 hours ago

Bakrid 2024 : ಮತ್ತೊಂದು ಧರ್ಮವನ್ನೂ ಪ್ರೀತಿಸಿ; ಬಕ್ರೀದ್‌ ಪ್ರಾರ್ಥನೆಯಲ್ಲಿ ಸಿಎಂ ಸಿದ್ದರಾಮಯ್ಯ ಕರೆ

Renukaswamy murder case The location of the accused is complete
ಸಿನಿಮಾ1 day ago

Renuka Swamy murder : ಭೀಕರವಾಗಿ ಕೊಂದರೂ ಆರೋಪಿಗಳಿಗೆ ಕಾಡುತ್ತಿಲ್ವಾ ಪಾಪಪ್ರಜ್ಞೆ? ನಗುತ್ತಲೇ ಹೊರಬಂದ ಪವಿತ್ರಾ ಗೌಡ, ಪವನ್‌

Renuka swamy murder
ಚಿತ್ರದುರ್ಗ1 day ago

Renuka swamy Murder : ರೇಣುಕಾಸ್ವಾಮಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಾಳೆಹೊನ್ನೂರು ಶ್ರೀಗಳು

Vijayanagara News
ವಿಜಯನಗರ1 day ago

Vijayanagara News : ಕೆಲಸಕ್ಕೆ ಚಕ್ಕರ್, ಸಂಬಳಕ್ಕೆ ಹಾಜರ್! ಹಾರಕನಾಳು ಗ್ರಾಪಂ ಪಿಡಿಓಗಾಗಿ ಗ್ರಾಮಸ್ಥರ ಹುಡುಕಾಟ

Actor Darshan
ಯಾದಗಿರಿ2 days ago

Actor Darshan : ಬಾಸ್‌ ಅಂತ ಯಾಕ್‌ ಬಕೆಟ್‌ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!

Karnataka Weather Forecast
ಮಳೆ3 days ago

Karnataka Weather : ಕರಾವಳಿ, ಉತ್ತರ ಒಳನಾಡಿನಲ್ಲಿ ವರುಣಾರ್ಭಟ; ನಾಳೆಯು ಹಲವೆಡೆ ಸಿಕ್ಕಾಪಟ್ಟೆ ಮಳೆ

Actor Darshan
ಬೆಂಗಳೂರು3 days ago

Actor Darshan : ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್ ಮಾಡಿ ಕರೆತರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ!

actor Darshan
ಬೆಂಗಳೂರು3 days ago

Actor Darshan : ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಮತ್ತಿಬ್ಬರು ಸರೆಂಡರ್‌; ಆರೋಪಿಗಳ ಸಂಖ್ಯೆ 16ಕ್ಕೆ ಏರಿಕೆ

Actor Darshan
ಸಿನಿಮಾ3 days ago

Actor Darshan : ರೇಣುಕಾಸ್ವಾಮಿ ‌ಮೃತದೇಹ ಬಿಸಾಡಿ ಬಳಿಕ ಸಾಕ್ಷ್ಯಇದ್ದ 2 ಮೊಬೈಲ್‌ಗಳನ್ನು ಮೋರಿಗೆ ಎಸೆದ್ರಾ ಆರೋಪಿಗಳು?

ಟ್ರೆಂಡಿಂಗ್‌