Dattatreya Jayanti 2022 | ಸ್ಮರಣೆ ಮಾತ್ರಕೆ ಒಲಿಯುವ ದೇವರು ಶ್ರೀಗುರು ದತ್ತ - Vistara News

ಪ್ರಮುಖ ಸುದ್ದಿ

Dattatreya Jayanti 2022 | ಸ್ಮರಣೆ ಮಾತ್ರಕೆ ಒಲಿಯುವ ದೇವರು ಶ್ರೀಗುರು ದತ್ತ

ಇಂದು ದತ್ತ ಜಯಂತಿ (Dattatreya Jayanti 2022). ಶ್ರೀ ಗುರು ದತ್ತಾತ್ರೇಯನ ಅವತಾರ ಹೇಗಾಯಿತು? ಪೂಜೆ ಹೇಗೆ ಎಂದು ತಿಳಿಸುವ ವಿಶೇಷ ಲೇಖನ ಇಲ್ಲಿದೆ.

VISTARANEWS.COM


on

Dattatreya Jayanti 2022
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ರಾಜಗುರು ದ್ವಾರಕನಾಥ್‌
ಮಾಲಕಮಂಡಲು ಧರಃ ಕರಪದ್ಮಯುಗ್ಮೆ
ಮಧ್ಯಸ್ಥಪಾಣಿಯುಗಲೇ ಡಮರು ತ್ರಿಶೂಲೇ|
ಯಸ್ಯಸ್ತ ಊಧ್ರ್ವಕರಯೋಃ ಶುಭ ಶಂಖಚಕ್ರೆ
ವಂದೇ ತಮತ್ರಿವರದಂ ಭುಜಷಟ್ಕಯುಕ್ತಂ ||
ಈ ಸ್ತೋತ್ರದಅರ್ಥವೆಂದರೆ ಕೆಳಗಿನವೆರಡು ಕೈಗಳೆಂಬ ಕಮಲಗಳಲ್ಲಿರುದ್ರಾಕ್ಷ ಮಾಲೆ, ಕಮಂಡಲಗಳೂ, ನಡುವಿನವೆರಡು ಕೈಗಳಲ್ಲಿಡಮರು ತ್ರಿಶೂಲಗಳೂ ಮತ್ತು ಯಾವಾತನ ಮೆಲಿನವೆರಡು ಕೈಗಳಲ್ಲಿಶುಭಪ್ರದವಾದ ಶಂಖ – ಚಕ್ರಗಳು ಉಂಟೋ ಅಂತಹ ಆರು ಭುಜಗಳುಳ್ಳ ಅತ್ರಿಋುಷಿಗೆ ವರಪ್ರದನಾದವನನ್ನು ಅಂದರೆ ದತ್ತನನ್ನು ವಂದಿಸುವೆ.

********

ಮಾರ್ಗಶಿರ ಮಾಸದ ಶುಕ್ಲಪಕ್ಷದ ರೋಹಿಣಿ ನಕ್ಷತ್ರವನ್ನು ಹೊಂದಿರುವ ಚತುರ್ದಶಿ ಬಹಳ ಪುಣ್ಯದ ದಿನ. ಏಕೆಂದರೆ ಅಂದು ಶ್ರೀಗುರು ದತ್ತಾತ್ರೇಯರ ಜಯಂತಿ. ಕೆಲವೆಡೆ ಮಾರ್ಗಶಿರ ಮಾಸದ ಶುಕ್ಲಪಕ್ಷದ ಶುದ್ಧ ಪೂರ್ಣಮಿಯಂದು ದತ್ತಜಯಂತಿಯನ್ನು ಆಚರಿಸುವುದೂ ಉಂಟು. ಇಂದು “ಕಾರ್ತಿಕ ದೀಪʼʼದ ದಿನವೂ ಹೌದು. ದಕ್ಷಿಣ ಭಾರತದಲ್ಲಿ ಅದರಲ್ಲಿಯೂ ಮುಖ್ಯವಾಗಿ ತಮಿಳುನಾಡಿನಲ್ಲಿ ಈ ದಿನವನ್ನು ವಿಶೇಷವಾಗಿ ಆಚರಿಸಲಾಗುತ್ತದೆ. ತಮಿಳರ ಪಂಚಾಂಗದ ಪ್ರಕಾರ ಹುಣ್ಣಿಮೆಯ ಈ ದಿನವನ್ನು “ಕಾರ್ತಿಕೈʼʼಎಂದು ಕರೆಯಲಾಗುತ್ತದೆ. ದತ್ತ ಜಯಂತಿ ಮತ್ತು ಸುಬ್ರಹ್ಮಣ್ಯನಿಗೆ ಸೇರಿದ ಈ ವಿಶೇಷ ದಿನ ಇಂದು ಒದಗಿ ಬಂದಿದೆ. ಹೀಗಾಗಿ ಈ ಬಾರಿಯ ದತ್ತ ಜಯಂತಿಗೆ ವಿಶೇಷವಾದ ಮಹತ್ವವಿದೆ.

‘ದತ್ತ’ ಎಂದರೆ ಕೊಡುವವನು ಎಂದರ್ಥ. ಏನು ಕೇಳಿದರೂ ಕೊಡವವನು. ನೀವು ದತ್ತನನ್ನು ಎಲ್ಲಿಬೇಕಾದರೂ ಪ್ರಾರ್ಥಿಸಬಹುದು, ಕುಳಿತಲ್ಲಿ, ನಿಂತಲ್ಲ, ಮಲಗಿದಲ್ಲಿ ಎಲ್ಲಿಗೆ ಬೇಕಾದರೂ ಬಂದು ನಿಮ್ಮ ಇಷ್ಟಾರ್ಥವನ್ನು ಈಡೇರಿಸುತ್ತಾನೆ. ಬೇರೆಲ್ಲಾ ದೇವರಗಳಿಗೆ ನೀವು ಪೂಜೆ, ಅಭಿಷೇಕ, ಸಹಸ್ರನಾಮ, ವ್ರತಕಲ್ಪಾದಿಗಳನ್ನು ಭಕ್ತಿಯಿಂದ ಮಾಡಿ ಪ್ರಾರ್ಥಿಸಬೇಕು. ಆದರೆ ಸ್ಮರಣೆಮಾಡಿದ ಮಾತ್ರಕ್ಕೆ ಸಂತುಷ್ಟನಾಗಿ ಮನೋಕಾರ್ಯವನ್ನು ನೆರವೇರಿಸುವ ಜಗತ್ತಿನ ಏಕೈಕ ದೇವರು ದತ್ತ. ದತ್ತ ತ್ರಿಮೂರ್ತಿಗಳ ಸ್ವರೂಪ, ಸುಗುಣ ರೂಪ, ಅವಧೂತ ಪರಂಪರೆಯ ಸೃಷ್ಟಿ ಕರ್ತ. ನಾರಾಯಣನ ಅವತಾರಗಳಿಗೂ ಕಾರಣಕರ್ತ.

ದತ್ತನ ಅವತಾರ ಹೇಗೆ?
ಚಿತ್ರಕೂಟ ಅರಣ್ಯದಲ್ಲಿ ಸಪ್ತರ್ಷಿಗಳಲ್ಲಿ ಒಬ್ಬರಾದ ಅತ್ರಿಮಹರ್ಷಿಗಳು ತಮ್ಮ ಧರ್ಮಪತ್ನಿ ಅನುಸೂಯಾದೇವಿ ಯೊಂದಿಗೆ ವಾಸವಾಗಿದ್ದರು. ಅನುಸೂಯ ಪರಮ ಪತಿವ್ರತೆ. ಅತ್ಯಂತ ಸುಂದರಿ ಬೇರೆ. ಅತ್ರಿ ಮುನಿಗಳ ತಪೋನುಷ್ಠಾನಗಳು ಮತ್ತು ಅನುಸೂಯಾಳ ಪರಮಪತಿ ವ್ರತವು ಎಲ್ಲಲೋಕವನ್ನು ತಲೂಪಿತ್ತು. ಇಂದ್ರಾದಿ ದೇವತೆಗಳು ಎಲ್ಲಿ ಇವರಿಬ್ಬರು ತಮ್ಮ ಪುಣ್ಯದ ಪ್ರಭಾವದಿಂದ ಸ್ವರ್ಗದ ಅಧಿಪತಿಗಳಾಗುತ್ತಾರೋ ಎಂದು ಹೆದರಿ, ತ್ರಿಮೂರ್ತಿಗಳ ಹತ್ತಿರ ಹೋಗಿ ಈ ಬಗ್ಗೆ ಹೇಳಿದರು. ಅನುಸೂಯಾಳನ್ನು ಅತಿಯಾಗಿ ಪ್ರಶಂಸಿಸಿ ತ್ರಿಮೂರ್ತಿಗಳಿಗೆ ಕೋಪ ಬರುವಂತೆ ಮಾಡಿದರು. ಆಕೆಯ ವ್ರತಭಂಗ ಮಾಡದಿದ್ದರೆ ಮೂರು ಲೋಕವನ್ನೂ ಆಕ್ರಮಣ ಮಾಡಿಕೊಂಡುಬಿಡುತ್ತಾಳೆ ಎಂದು ಹೆದರಿಸಿದರು.

ಹೀಗಾಗಿ ತ್ರಿಮೂರ್ತಿಗಳು ಆಕೆಯ ಪತಿವ್ರತವನ್ನು ಪರೀಕ್ಷಿಸಲು ಕಾರಣಿಕ ವೇಷ ಹಾಕಿಕೊಂಡು ಅನಸೂಯಳಿದ್ದ ಆಶ್ರಮಕ್ಕೆ ಬಂದು ಭಿಕ್ಷೆ ಬೇಡಿದರು. ಈ ಸಂದರ್ಭದಲ್ಲಿ ಅತ್ರಿಮಹರ್ಷಿಗಳು ತಪಸ್ಸಿಗೆಂದು ಹೊರಹೋಗಿದ್ದರು. ‘‘ಸಾದ್ವೀಮಣಿಯೇ, ನಾವು ಮೂವರೂ ಇಚ್ಛಾಭೋಜನ ಮಾಡುವ ಆಸೆಯಿಂದ ಇಲ್ಲಿಗೆ ಬಂದಿದ್ದೇವೆ. ನಿಮಗೆ ನಮಗೆ ಭೋಜನ ವ್ಯವಸ್ಥೆ ಮಾಡಲು ಸಾಧ್ಯವೇ’’ ಎಂದು ಕೇಳಲು ಅನುಸೂಯ ಸಂತೋಷದಿಂದ ಒಪ್ಪಿದಳು.
ಆಗ ಅತಿಥಿಗಳ ವೇಷದಲ್ಲಿದ್ದ ತ್ರಿಮೂರ್ತಿಗಳು ,‘‘ನೀನು ನಗ್ನಳಾಗಿ ಬಂದು ಬಡಿಸಿದರೆ ಮಾತ್ರ ನಾವು ಭೋಜನ ಮಾಡುತ್ತೇವೆ’’ ಎಂದು ಹೇಳಿದರು.

ಅತಿಥಿಗಳ ಈ ಅನಿರೀಕ್ಷಿತ ಅಪೇಕ್ಷೆ ಕೇಳಿ ಅನುಸೂಯಾದೇವಿಯು ಗೊಂದಲಕ್ಕೆಬಿದ್ದಳು. ಇವರ ಬೇಡಿಕೆಯನ್ನು ನೋಡಿದರೆ ನನ್ನ ಸತ್ವಪರೀಕ್ಷೆಗಾಗಿಯೇ ಬಂದವರ ಹಾಗೆ ಕಾಣಿಸುತ್ತದೆ, ಇವರು ಬಹುಶಃ ಅವತಾರಪುರುಷರೇ ಇರಬೇಕೆಂದುಕೊಂಡು, ನಿಮ್ಮ ಇಚ್ಛೆಯಂತೆಯೇ ಊಟಕ್ಕೆ ಬಡಿಸುತ್ತೇನೆ’’ ಎಂದು ಹೇಳಿ ಪಾಕಶಾಲೆಗೆ ಹೋದಳು. ಭೋಜನಕ್ಕೆ ತಯಾರು ಮಾಡಿದ ಬಗೆಬಗೆಯ ಪದಾರ್ಥಗಳನ್ನು ತೆಗದುಕೊಂಡ ಅನುಸೂಯ ಪತಿ ದೇವರ ಪ್ರಾರ್ಥನೆ ಮಾಡಿ; ‘‘ನನಗೆ ಪರೀಕ್ಷೆಯ ಸಮಯ ಬಂದಿದೆ, ನಿಮ್ಮ ಸಹಕಾರ ವಿರಲಿ’’ಎಂದು ಕೋರಿಕೊಂಡು, ಅನ್ನಪೂರ್ಣೆಶ್ವರಿಯನ್ನು ಪ್ರಾರ್ಥಸಿ, ನಗ್ನಳಾಗಿ ಬಡಿಸಳು ಹೋದಳು.

ಆಗ ಆಕೆಯ ಪತಿವ್ರತದ ಪ್ರಭಾವದಿಂದಾಗಿ ತ್ರಿಮೂರ್ತಿಗಳೂ ಶಿಶುಗಳಾಗಿ ಪರಿವರ್ತನೆಗೊಂಡಿದ್ದರು. ಕೂಡಲೇ ಅನುಸೂಯ ಮಾತೃಭಾವದಿಂದ ಈ ಶಿಶುಗಳನ್ನು ಎತ್ತಿಕೊಂಡು ಎದೆಹಾಲು ಕುಡಿಸಿ, ತೊಟ್ಟಿಲಲ್ಲಿಮಲಗಿಸಿ ಜೋಗುಳ ಹಾಡಿದಳು.

Dattatreya Jayanti 2022
ಶ್ರೀ ಗುರು ದತ್ತ ಪಾದುಕೆ

ಅಷ್ಟರಲ್ಲಿ ಅತ್ರಿಮಹರ್ಷಿಗಳು ಬಂದು ವಿಷಯವನ್ನೆಲ್ಲಾ ತಿಳಿದರು. ಅವರಿಗೆ ಶಿಶು ಗಳಾಗಿರುವುದು ತ್ರಿಮೂರ್ತಿಗಳೇ ಎಂದು ತಿಳಿದು ಹೋಯಿತು. ಇಷ್ಟರಲ್ಲಿತ್ರಿಮೂರ್ತಿಗಳು ಪ್ರತ್ಯಕ್ಷ ರಾಗಿ, ಬೇಕಾದವರ ಕೇಳುವಂತೆ ಸೂಚಿಸಿದರು. ಆಗ ಅನುಸೂಯಾ ದೇವಿಯು ಈ ಮೂವರು ಶಿಶುಗಳನ್ನೂಬಿಟ್ಟು ಹೋಗುವಂತೆ ಕೇಳಿಕೊಳ್ಳುತ್ತಾರೆ. ಆಗ ತ್ರಿಮೂರ್ತಿಗಳು ‘ತಥಾಸ್ತು’ ಎಂದು ಹೇಳಿ ತಮ್ಮ ಅಂಶದಿಂದ ಸೃಷ್ಟಿಯಾದ ಮೂವರು ಶಿಶುಗಳನ್ನು ಅಲ್ಲಿಯೇ ಬಿಟ್ಟು ಹೋಗುತ್ತಾರೆ. ಹೀಗಾಗಿ ದತ್ತರದು ‘ನಯೋನಿ’ ಸೃಷ್ಟಿ.

ಬ್ರಹ್ಮನ ಶಿಶುವಿಗೆ ಚಂದ್ರನೆಂದು, ವಿಷ್ಣುವಿನ ಶಿಶುವಿಗೆ ದತ್ತನೆಂದು, ಮಹೇಶ್ವರನ ಶಿಶುವಿಗೆ ದೂರ್ವಾಸನೆಂದು ನಾಮಕರಣ ಮಾಡಲಾಗುತ್ತದೆ. ಮುಂದೆ ತಾಯಿ ಅನುಸೂಯದೇವಿಯ ಅಪ್ಪಣೆಪಡೆದು ಚಂದ್ರನು ಚಂದ್ರಮಂಡಲಕ್ಕೂ ದೂರ್ವಾಸನು ತಪಸ್ಸಿಗಾಗಿ ಹೊರಟು ಹೋಗುತ್ತಾರೆ. ಆದರೆ ನಾರಾಯಣ ಸ್ವರೂಪಿಯಾದ ದತ್ತಾದೇವರು ತಾಯಿಯ ಬಳಿಯೇ ಉಳಿದುಕೊಂಡು, ಲೋಕರಕ್ಷಕರಾಗುತ್ತಾರೆ.

ಗುರು ಸ್ವರೂಪಿ ದತ್ತ
ದತ್ತರನ್ನು ಗುರು ಸ್ವರೂಪಿ ಎಂದು ಕರೆಯಲಾಗುತ್ತದೆ. ಅವರ ಚರಿತ್ರೆಯನ್ನು ‘ಶ್ರೀಗುರುಚರಿತ್ರೆ’ ಎಂದು ಹೆಸರಿಸಲಾಗಿದೆ. ಇದೊಂದು ಪ್ರಾಸಾಧಿಕ ಗ್ರಂಥವಾಗಿದ್ದು, ಭಾವಿಕ ಜನರಿಗೆ ಕಾಮಧೇನು, ಕಲ್ಪವೃಕ್ಷ ಗಳಂತೆ ಫಲಪ್ರದವಾಗಿದೆ. ಇದರ ಪಾರಾಯಣದಿಂದ ಪುರುಷಾರ್ಥಗಳು, ಅಷ್ಟಸಿದ್ದಿಗಳು ಲಭ್ಯವಾಗುತ್ತವೆ. ಧ್ಯಾನಕಾಂಡ, ಕರ್ಮಕಾಂಡ ಮತ್ತು ಭಕ್ತಿಕಾಂಡ ಎಂದು ಮೂರು ಕಾಂಡಗಳನ್ನು ಒಳಗೊಂಡ ಈ ಚರಿತ್ರೆಯು 53ಅಧ್ಯಾಯಗಳಲ್ಲಿವೆ. ಪ್ರತಿಯೊಂದು ಅಧ್ಯಯಕ್ಕೂ ತನ್ನದೇ ಆದ ಮಹತ್ವವಿರುತ್ತದೆ. ಕಷ್ಟ-ಕಾರ್ಪಣ್ಯ ಕಳೆಯಲು ಸಹಾಯಕವಾಗಿರುತ್ತದೆ.

ದೇವರಿಗೆ ಬಡವ-ಶ್ರೀಮಂತನೆಂಬ ಭೇದವಿಲ್ಲ, ಆ ಜಾತಿ- ಈ ಜಾತಿ ಶ್ರೇಷ್ಠವೆಂಬುದಿಲ್ಲ, ಎಲ್ಲರ ಕಷ್ಟವನ್ನೂ ದೂರ ಮಾಡುತ್ತಾನೆ ಎಂಬುದುದನ್ನು ಗುರುಚರಿತ್ರೆಯಲ್ಲಿ ಕಥೆಗಳ ಮೂಲಕ ನಿರೂಪಿಸಲಾಗಿದೆ. ಇದರ ಪಾರಾಯಣಕ್ಕಿಂತ ದೊಡ್ಡ ಪೂಜೆ ಇಲ್ಲ. ಇದನ್ನು ಶ್ರದ್ಧಾ ಭಕ್ತಿಯಿಂದ ಪಾರಾಯಣ ಮಾಡಿದರೆ ಏನನ್ನು ಬೇಕಾದರೂ ಗಳಿಸಬಹುದು. ಇದಕ್ಕೆ ನಾನೇ ಸಾಕ್ಷಿ. ವಿವಿಧ ರೀತಿಯ ಸಂಕಷ್ಟಗಳು, ಶತ್ರುಭೀತಿ ನಮ್ಮನ್ನೆಲ್ಲಾ ಕಾಡುತ್ತಿರುವ ಈ ಹೊತ್ತಲ್ಲಿ ಇದರ ಪಾರಾಯಣ ನಮ್ಮನ್ನು ಕಾಪಾಡುವುದರಲ್ಲಿ ಅನುಮಾನವಿಲ್ಲ. ದೈವಭಕ್ತರು ಮನೆ ಮನೆಗಳಲ್ಲಿ ಇದರ ಪಾರಾಯಣ ಮಾಡಿದರೆ ದೇಶ ಎಲ್ಲಾ ರೀತಿಯಲ್ಲಿಯೂ ಸುರಕ್ಷಿತವಾಗಿರುತ್ತದೆ. ಸಾಗರವನ್ನು ದಾಟಲು ನೌಕೆ ಬೇಕು ಅಂತೆಯೇ ಭವ ಸಾಗರವ ದಾಟಲು ಇರುವ ನೌಕೆ ಶ್ರೀಗುರು ಚರಿತ್ರೆ ಎಂಬುದನ್ನು ನಾವ್ಯಾರೂ ಮರೆಯಬಾರದು.

ಗುರು ಸ್ವರೂಪಿಯಾಗಿರುವ ಶ್ರೀದತ್ತರು ಬೋಧಿಸಿದ ತತ್ವಗಳು ಇಂದಿಗೂ ಪ್ರಸ್ತುತವಾಗಿವೆ. ಶ್ರೀದತ್ತರೇ ಗುರುವು, ತತ್ತ್ವಸ್ವರೂಪನು, ಮಾರ್ಗವು, ಧ್ಯೇಯವು, ದಾರಿ-ಗುರಿಗಳೆರಡೂ ಆಗಿರುವ ತತ್ತ್ವಾರ್ಥಿ ಎನ್ನುತ್ತದೆ ಶಾಂಡಿಲ್ಯೋಪನಿಷತ್ತು. ದತ್ತರು ರಚಿಸಿದ ಕೃತಿಯೇ ‘ಅವಧೂತಗೀತೆ’.

ಅವತಾರ ಪುರುಷ ದತ್ತ
ದತ್ತರ ಮುಂದಿನ ಅವತಾರವೇ ಶ್ರೀಪಾದ ಶ್ರೀವಲ್ಲಭ ಮತ್ತು ಶ್ರೀನರಸಿಂಹ ಸರಸ್ವತಿ ಯತಿಗಳು. ದತ್ತನು ಒಟ್ಟು 24 ಅವತಾರವೆತ್ತಿದ್ದಾರೆ. ಸಾಕ್ಷಾತ್‌ ಶ್ರೀ ದತ್ತಾತ್ರೇಯರು ಆಂಧ್ರದ ಪೂರ್ವ ಗೋದಾವರಿ ಜಿಲ್ಲೆಯಲ್ಲಿನ ಶ್ರೀ ಕ್ಷೇತ್ರ ಪೀಠಾಪುರದಲ್ಲಿಶ್ರೀವಲ್ಲಭ ಎಂಬ ಹೆಸರಿನಲ್ಲಿ ಜನಿಸಿದರು. ನಂತರ ಮಹಾರಾಷ್ಟ್ರದ ಕರಂಜಿಪುರದಲ್ಲಿ ಬಾಲಕ ನೋರ್ವನಿಗೆ ವಿದ್ಯದಾನ ಮಾಡಿ (ಮುಂದೆ ಈ ಬಾಲಕನೇ ಶ್ರೀ ನರಸಿಂಹ ಸರಸ್ವತಿ ಯತಿಗಳು ಎಂದು ಜಗತ್ಪ್ರಸಿದ್ಧರಾಗುತ್ತಾರೆ) ಕೃಷ್ಣಾನದಿಯಲ್ಲಿ ಅದೃಶ್ಯರಾಗುತ್ತಾರೆ. ನರಸಿಂಹ ಸರಸ್ವತಿ ಯತಿಗಳು ನಮ್ಮ ರಾಜ್ಯದ ಗಾಣಗಾಪುರಕ್ಕೆ ಬಂದು ನೆಲೆಸಿದ್ದರು. ಅವರ ತಪ್ಪಸ್ಸಿನ ನೆಲ ಗಾಣಗಾಪುರ. ಅವರ ಪೂಜ್ಯ ನಿರ್ಗುಣ ಪಾದುಕೆ ಇಲ್ಲಿದೆ. ದತ್ತಭಕರ ನೆಚ್ಚಿನಕ್ಷೇತ್ರವಾಗಿ ಗಾಣಗಾಪುರ ವಿಖ್ಯಾತಿ ಪಡೆದಿದೆ. ಶ್ರೀ ನರಸಿಂಹ ಸರಸ್ವತಿ ಯತಿಗಳು ಕೂಡ ಮಂದೆ ಶ್ರೀಶೈಲದಲ್ಲಿ ಅದೃಶ್ಯರಾಗುತ್ತಾರೆ.

ಇಲ್ಲಿ ಆಶ್ಚರ್ಯದ, ಪವಾಡದ ಸಂಗತಿಯೊಂದನ್ನು ಹೇಳಬೇಕು. ದತ್ತ ಅವತಾರ ಎನಿಸಿಕೊಂಡಿರುವ ಎಲ್ಲ ಅವಧೂತರ ಸಮಾಧಿಗಳು ನಮಗೆ ಕಾಣಸಿಗುತ್ತವೆ. ಆದರೆ ಶ್ರೀಪಾದ ಶ್ರೀವಲ್ಲಭ ಮತ್ತು ಶ್ರೀ ನರಸಿಂಹ ಸರಸ್ವತಿ ಯತಿಗಳ ಸಮಾಧಿ ಎಲ್ಲೂ ಇಲ್ಲ!. ಹೀಗಾಗಿ ಅವರು ಈಗಲೂ ಭಕ್ತರನ್ನು ಕಾಯುತ್ತಿದ್ದಾರೆ ಎಂದೇ ನಾವು ನಂಬಿದ್ದೇವೆ. ಕಲಿಯುಗದಲ್ಲಿ ಜನರು ಅನ್ಯಮಾರ್ಗಗಳನ್ನು ತುಳಿದು ತಮ್ಮ ಮೌಲ್ಯಗಳನ್ನು ಕಳೆದುಕೊಂಡು ದುಖಿಃಸಬಾರದೆಂದು ಶ್ರೀಮನ್ನಾರಾಯಣನೇ ಈ ಯುಗದಲ್ಲಿದತ್ತಾತ್ರೇಯ ಸ್ವರೂಪದಲ್ಲಿ ನೆಲೆಸಿದ್ದಾರೆ.

ಪ್ರಧಾನಿ ಮೋದಿ ಗಾಣಗಾಪುರಕ್ಕೆ ಭೇಟಿ ನೀಡಲಿ
ದತ್ತಾವತಾರಿ ಶ್ರೀ ನರಸಿಂಹ ಸರಸ್ವತಿ ಯತಿಗಳು ನಮ್ಮ ರಾಜ್ಯದ ಗಾಣಗಾಪುರಕ್ಕೆ ಬಂದು ನೆಲೆಸಿದ್ದರು. ಅವರ ಪೂಜ್ಯ ನಿರ್ಗುಣ ಪಾದುಕೆ ಇಲ್ಲಿದೆ. ಹೀಗಾಗಿಯೇ ಗಾಣಗಾಪುರ ತ್ರಿಮೂರ್ತಿ ಸ್ವರೂಪಿ ದತ್ತ ದೇವರು ನೆಲೆಸಿರುವ ಪುಣ್ಯ ಭೂಮಿ. ತ್ರೀಮೂರ್ತಿಗಳು ಒಂದೆಡೆ ಪೂಜಿಸಲ್ಪಡುವ ಅಪರೂಪದ ಕ್ಷೇತ್ರ ಇದು. ನಾವಿಂದು ಭಾರತ ವಿಶ್ವಗುರುವಾಗಬೇಕೆನ್ನುತ್ತೇವೆ. ವಿಶ್ವ ಗುರುವಾಗಲು ನಮಗೆ ಖಂಡಿತವಾಗಿಯೂ ಗುರುಗಳ ಆಶೀರ್ವಾದ ಬೇಕೇ ಬೇಕು. ದೇಶದ ಚುಕ್ಕಾಣಿ ಹಿಡಿದಿರುವ ಮಾನ್ಯ ಪ್ರಧಾನಿ ನರೇಂದ್ರ ಮೋದಿಯವರು ಶ್ರೀ ಕ್ಷೇತ್ರಕ್ಕೆ ಭೇಟಿ ನೀಡಿ, ಗುರುವಿನ ಆಶೀರ್ವಾದ ಪಡೆದುಕೊಂಡಲ್ಲಿ, ಅವರು ಅಂದುಕೊಂಡಿರುವ ಕೆಲಸವನ್ನು ಮಾಡಲು ಸಾಧ್ಯವಾಗುತ್ತದೆ. ಭಾರತ ವಿಶ್ವಗುರುವಾಗಲೂ ಗುರುವಿನ ಜತೆಗೆ ತ್ರೀಮೂರ್ತಿಗಳ ಆಶೀರ್ವಾದ ದೊರೆತಂತಾಗುತ್ತದೆ.

ದತ್ತನ ಸ್ವರೂಪದ ಮಹತ್ವ
ತ್ರಿಮೂರ್ತಿಗಳ ಅಂಶದಿಂದ ಸೃಷ್ಟಿಯಾದ ಶ್ರೀಗುರುದತ್ತನ ಕೈಯಲ್ಲಿರುವ ಶಂಖ ಮತ್ತು ಚಕ್ರ ಶ್ರೀವಿಷ್ಣುವಿನ ಶಕ್ತಿಯ ಪ್ರತೀಕವಾಗಿದ್ದರೆ, ತ್ರಿಶೂಲ ಮತ್ತು ಡಮರುಗ ಶಿವ ಶಕ್ತಿಯ ಸೂಚಕ ವಾಗಿದೆ. ಕಮಂಡಲ ಮತ್ತು ಜಪಮಾಲೆ ಬ್ರಹ್ಮ ದೇವನ ಪ್ರತಿರೂಪವಾಗಿದೆ. ಇನ್ನು ಜೋಳಿಗೆ ಅಹಂ ನಾಶವಾಗಿರುವುದರ ಸಂಕೇತವಾಗಿದೆ. ಜೋಳಿಗೆ ಹಿಡಿದು ಕೊಂಡು ಮನೆ ಮನೆಗೆ ಅಲೆದಾಡಿ ಭಿಕ್ಷೆ ಬೇಡುವುದರಿಂದ ಅಹಂ ನಾಶವಾಗುತ್ತದೆ ಎಂದು ದತ್ತರು ಈ ಮೂಲಕ ಹೇಳಿದ್ದಾರೆ. ದತ್ತರ ಹಿಂದಿರುವ ಗೋವು ಧರ್ಮದ ಸಂಕೇತವಾಗಿದ್ದರೆ, ನಾಲ್ಕು ನಾಯಿಗಳು ನಾಲ್ಕು ವೇದಗಳನ್ನು ಸಂಕೇತಿಸುತ್ತವೆ. ಔದುಂಬರ ವೃಕ್ಷ ಔಷಧಿಯ ಸಂಕೇತವಾಗಿದೆ, ಕಲ್ಪವೃಕ್ಷ ವಾಗಿದೆ.

ಸ್ವರೂಪವೇ ತಿಳಿಸುವಂತೆ ಭಕ್ತರ ಹಿತ ಕಾಯಲೆಂದೇ ಅವತರಿಸಿರುವ ದೇವರು ಶ್ರೀಗುರು ದತ್ತ. ದತ್ತಾತ್ರೇಯ ದೇವರು ಮತ್ತು ನನ್ನ ಕುಲಗುರುಗಳಾದ ಶೃಂಗೇರಿಯ ಜಗದ್ಗುರು ಶ್ರೀ ಭಾರತೀ ತೀರ್ಥ ಮಹಾಸ್ವಾಮಿಗಳು ಹಾಗೂ ಜಗದ್ಗುರು ಶ್ರೀ ವಿದುಶೇಖರ ಭಾರತಿ ಮಹಾಸ್ವಾಮಿಗಳಲ್ಲಿ,ಸರ್ವರಿಗೂ ಸದ್ಭುದ್ಧಿಯನ್ನು ಕೊಟ್ಟು, ಆರ್ಥಿಕ ವಾಗಿಸದೃಢವಾದ, ಸ್ವಾರ್ಥವಿಲ್ಲದ, ಸತ್ಯ, ಧರ್ಮ, ಮಾರ್ಗಗಳಲ್ಲಿಸಾಗಿ, ಅಖಂಡ ಭಾರತವನ್ನು ಕಟ್ಟುಲು ಎಲ್ಲಪ್ರಜೆಗಳಿಗೆ ಆಯಸ್ಸು, ಅಭಿವೃದ್ಧಿಕೊಡಲೆಂದು ಪ್ರಾರ್ಥಿಸುತ್ತೇನೆ.
||ದಿಗಂಬರಾ ದಿಗಂಬರಾ ಶ್ರೀಪಾದವಲ್ಲಭ ದಿಗಂಬರಾ||

ಇದನ್ನೂ ಓದಿ | Prerane | ಎಣ್ಣೆ, ಬತ್ತಿ ಇಲ್ಲದೆ ಬೆಳಗುವ ದೀವಿಗೆ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕರ್ನಾಟಕ

Snake: ಸ್ಟ್ಯಾಂಡ್‌ನಲ್ಲಿಟ್ಟಿದ್ದ ಚಪ್ಪಲಿಯೊಳಗೆ ಕೂತಿದ್ದ ಬುಸ್‌ ಬುಸ್‌ ನಾಗಪ್ಪ; ಸ್ವಲ್ಪ ಹುಷಾರಾಗಿರ‍್ರಪ್ಪ! Video ಇಲ್ಲಿದೆ

Snake: ಬಾಣಸವಾಡಿಯ ಒಎಂಬಿಆರ್‌ ಲೇಔಟ್‌ನ ಮನೆಯೊಂದರಲ್ಲಿ ಚಪ್ಪಲಿಯಲ್ಲಿ ಹಾವು ಕಾಣಿಸಿದ ಕೂಡಲೇ ಮನೆಯ ಸದಸ್ಯರು ದಿಗಿಲುಗೊಂಡಿದ್ದಾರೆ. ಇದಾದ ಕೂಡಲೇ ಬಿಬಿಎಂಪಿ ಉರಗ ರಕ್ಷಣೆ ತಂಡಕ್ಕೆ ಮಾಹಿತಿ ನೀಡಿದ್ದಾರೆ. ಬಿಬಿಎಂಪಿ ಉರಗ ರಕ್ಷಣೆ ಸಿಬ್ಬಂದಿಯು ಕೂಡಲೇ ಅವರ ಮನೆಗೆ ತೆರಳಿ ಹಾವನ್ನು ಹೊರಗೆ ತೆಗೆದು, ಕೊಂಡೊಯ್ದಿದ್ದಾರೆ. ಭಾನುವಾರ ರಾತ್ರಿ 8 ಗಂಟೆ ಸುಮಾರಿಗೆ ಹಾವನ್ನು ತೆಗೆದುಕೊಂಡು ಹೋಗಿದ್ದಾರೆ.

VISTARANEWS.COM


on

Snake
Koo

ಬೆಂಗಳೂರು: ಮಳೆ ಜಾಸ್ತಿಯಾಗಿದೆ ಎಂದು ಚಪ್ಪಲಿಗಳನ್ನು ಸ್ಟ್ಯಾಂಡ್‌ನಲ್ಲಿಟ್ಟು ನಿತ್ಯವೂ ಶೂಗಳನ್ನು ಧರಿಸುತ್ತೇವೆ. ಯಾವಾಗಲೋ ಒಂದು ದಿನ ಚಪ್ಪಲಿ ಹಾಕುವ ಉಮೇದಿ ಬರುತ್ತದೆ. ಆಗ ನಾವು ಚಪ್ಪಲಿ ಸ್ಟ್ಯಾಂಡ್‌ ಎದುರು ಹೋಗಿ, ಸ್ಟೈಲಾಗಿ ಚಪ್ಪಲಿ ಹಾಕಿಕೊಂಡು ಹೋಗುತ್ತೇವೆ. ಹೀಗೆ, ಸ್ಟೈಲ್‌ ಮಾಡುವ ಮೊದಲು ಇನ್ನುಮುಂದೆ ಹುಷಾರಾಗಿದೆ. ಬೆಂಗಳೂರಿನಲ್ಲಿ (Bengaluru) ಸ್ಟ್ಯಾಂಡ್‌ನಲ್ಲಿ ಇಟ್ಟಿದ್ದ ಚಪ್ಪಲಿಯೊಳಗೂ ನಾಗರ ಹಾವಿನ ಮರಿ (Snake) ಪತ್ತೆಯಾದ ಕಾರಣದಿಂದಾಗಿ ಇನ್ನುಮುಂದೆ ಎಚ್ಚರಿಕೆಯಿಂದ ಇರುವುದು ಅನಿವಾರ್ಯವಾಗಿದೆ.

ಹೌದು, ಬೆಂಗಳೂರಿನ ಬಾಣಸವಾಡಿಯ ಒಎಂಬಿಆರ್‌ ಲೇಔಟ್‌ನಲ್ಲಿರುವ ಮನೆಯೊಂದರಲ್ಲಿ ಚಪ್ಪಲಿಯ ಪುಟ್ಟ ಜಾಗದಲ್ಲಿ ನಾಗರಹಾವಿನ ಮರಿಯೊಂದು ಪತ್ತೆಯಾಗಿದೆ. ಕೆಲ ದಿನಗಳ ಹಿಂದೆ ಚಪ್ಪಲಿಗಳನ್ನು ಸ್ಟ್ಯಾಂಡ್‌ನಲ್ಲಿ ಬಿಟ್ಟಿದ್ದು, ಭಾನುವಾರ ಚಪ್ಪಲಿ ಹೊರತೆಗೆದಾಗ ಅದರೊಳಗೆ ಮರಿ ನಾಗರಹಾವು ಬೆಚ್ಚಗೆ ಕುಳಿತಿದ್ದನ್ನು ನೋಡಿ ಮನೆಯವರು ಬೆಚ್ಚಿ ಬಿದ್ದಿದ್ದಾರೆ. ಚಪ್ಪಲಿಯೊಳಗೆ ನಾಗರ ಹಾವಿನ ಮರಿ ಪತ್ತೆಯಾದ ವಿಡಿಯೊ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್‌ ಆಗಿದೆ.

ವಿಡಿಯೊ ಇಲ್ಲಿದೆ

ಚಪ್ಪಲಿಯಲ್ಲಿ ಹಾವು ಕಾಣಿಸಿದ ಕೂಡಲೇ ಮನೆಯ ಸದಸ್ಯರು ದಿಗಿಲುಗೊಂಡಿದ್ದಾರೆ. ಇದಾದ ಕೂಡಲೇ ಬಿಬಿಎಂಪಿ ಉರಗ ರಕ್ಷಣೆ ತಂಡಕ್ಕೆ ಮಾಹಿತಿ ನೀಡಿದ್ದಾರೆ. ಬಿಬಿಎಂಪಿ ಉರಗ ರಕ್ಷಣೆ ಸಿಬ್ಬಂದಿಯು ಕೂಡಲೇ ಅವರ ಮನೆಗೆ ತೆರಳಿ ಹಾವನ್ನು ಹೊರಗೆ ತೆಗೆದು, ಕೊಂಡೊಯ್ದಿದ್ದಾರೆ. ಭಾನುವಾರ ರಾತ್ರಿ 8 ಗಂಟೆ ಸುಮಾರಿಗೆ ಹಾವನ್ನು ತೆಗೆದುಕೊಂಡು ಹೋಗಿದ್ದಾರೆ. ಮಳೆಗಾಲ ಶುರುವಾಗುತ್ತಿರುವ ಹಿನ್ನೆಲೆಯಲ್ಲಿ ಶೂ ಹಾಗೂ ಚಪ್ಪಲಿಗಳನ್ನು ಧರಿಸುವಾಗ ಒಮ್ಮೆ ಪರಿಶೀಲಿಸಬೇಕು ಎಂಬುದಾಗಿ ಸಿಬ್ಬಂದಿಯು ಎಚ್ಚರಿಕೆ ನೀಡಿದ್ದಾರೆ.

ಕೆಲ ತಿಂಗಳ ಹಿಂದೆ ಹಾವು ಕಚ್ಚಿ 7 ವರ್ಷದ ಬಾಲಕಿ (Snake Bite) ಮೃತಪಟ್ಟಿರುವ ಘಟನೆ ಬೆಂಗಳೂರು ಗ್ರಾಮಾಂತರದ ದೊಡ್ಡಬಳ್ಳಾಪುರ ತಾಲೂಕಿನ ‌ಕೋಳೂರು ಗ್ರಾಮದಲ್ಲಿ ಘಟನೆ ನಡೆದಿತ್ತು. ಟಿ ಹೊಸಹಳ್ಳಿ ಗ್ರಾಮದ ರಾಮಾಂಜಿ ಎನ್ನುವವರ ಮಗಳು ಅನುಷಾ (7) ಮೃತರು. ವಿನೋದಮ್ಮ ಮತ್ತು ರಾಮಾಂಜಿನಪ್ಪ ದಂಪತಿ ಕೋಳೂರು ಗ್ರಾಮದ ತೋಟದ ಮನೆಯೊಂದರಲ್ಲಿ ಕೂಲಿ ಕೆಲಸ ಮಾಡಿಕೊಂಡು ವಾಸವಿದ್ದರು. ಸಂಜೆ ಅನುಷಾಳ ತಂದೆ-ತಾಯಿ‌ ತೋಟದ ಕೆಲಸದಲ್ಲಿ ನಿರಂತರಾಗಿದ್ದರು. ಈ ವೇಳೆ ಮನೆ ಹೊರಗೆ ಆಟ ಆಡುತ್ತಿದ್ದಾಗ ಬಾಲಕಿ ಅನುಷಾಗೆ ಹಾವು ಕಚ್ಚಿತ್ತು.

ಇದನ್ನೂ ಓದಿ: Constables: ಬಿಯರ್‌ ಸೇವಿಸಿ ಇಬ್ಬರು ಕಾನ್‌ಸ್ಟೆಬಲ್‌ಗಳ ಸಾವು; ಮದ್ಯ ಪ್ರಿಯರೇ ಇನ್ನಾದರೂ ಎಚ್ಚರ!

Continue Reading

ದೇಶ

Varanasi: ಮೋದಿ ಕುರಿತು ವಾರಾಣಸಿಯಲ್ಲಿರುವ ಕನ್ನಡಿಗರು ಏನಂತಾರೆ? ಇಲ್ಲಿದೆ ‘ವಿಸ್ತಾರ ನ್ಯೂಸ್’ ಗ್ರೌಂಡ್‌ ರಿಪೋರ್ಟ್!

Varanasi: ವಾರಾಣಸಿಯಲ್ಲಿ ನರೇಂದ್ರ ಮೋದಿ ಅವರ ವಿರುದ್ಧ ಈ ಬಾರಿ ಕಾಂಗ್ರೆಸ್‌ ಅಜಯ್‌ ರಾಯ್‌ ಅವರನ್ನು ಕಣಕ್ಕಿಳಿಸಿದೆ. ಅಖಿಲ ಭಾರತ ಹಿಂದು ಮಹಾಸಭಾ (ABHM) ಪಕ್ಷದಿಂದ ಮಂಗಳಮುಖಿಯಾಗಿರುವ ಕಿನ್ನಾರ್‌ ಮಹಾಮಂಡಲೇಶ್ವರ್‌ ಹೇಮಾಂಗಿ ಸಖಿ ಅವರು ಕೂಡ ಸ್ಪರ್ಧಿಸುತ್ತಿದ್ದಾರೆ. ಬಿಎಸ್‌ಪಿಯು ಅಥರ್‌ ಜಮಾಲ್‌ ಲರಿ ಅವರಿಗೆ ಟಿಕೆಟ್‌ ನೀಡಿದೆ. ಸ್ಪರ್ಧೆ ತೀವ್ರವಾದರೂ ಜನ ಮಾತ್ರ ಮೋದಿ ಅವರಿಗೇ ಬೆಂಬಲ ಎನ್ನುತ್ತಿದ್ದಾರೆ. ಅದರಲ್ಲೂ, ಕನ್ನಡಿಗರು ಏನೆಂದರು ಎಂಬ ಕುರಿತು ವಿಸ್ತಾರ ನ್ಯೂಸ್‌ ಗ್ರೌಂಡ್‌ ರಿಪೋರ್ಟ್‌ ಇಲ್ಲಿದೆ.

VISTARANEWS.COM


on

Varanasi
Koo

ಪ್ರತ್ಯಕ್ಷದರ್ಶಿ ವರದಿ: ವಿಕ್ರಮ್

ವಾರಾಣಸಿ: ಲೋಕಸಭೆ ಚುನಾವಣೆಯು (Lok Sabha Election 2024) ಕೊನೆಯ ಹಂತ ತಲುಪಿದೆ. ಜೂನ್‌ 1ರಂದು ಏಳನೇ ಹಂತದ ಮತದಾನದ ಮೂಲಕ ಸಾರ್ವತ್ರಿಕ ಚುನಾವಣೆಗೆ ತೆರೆ ಬೀಳಲಿದೆ. ಇನ್ನು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಸತತ ಮೂರನೇ ಬಾರಿಗೆ ಉತ್ತರ ಪ್ರದೇಶದ ವಾರಾಣಸಿಯಿಂದ (Varanasi) ಸ್ಪರ್ಧಿಸಿದ್ದು, ಸುಮಾರು 7 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಅದರಲ್ಲೂ, ವಾರಾಣಸಿಯಲ್ಲಿ ನೆಲೆಸಿರುವ ಕನ್ನಡಿಗರಂತೂ ಮೋದಿ ಗೆಲುವು ನಿಶ್ಚಿತ ಎಂದು ಹೇಳುತ್ತಿದ್ದಾರೆ. ಹಾಗಾದರೆ, ಮೋದಿ ಕುರಿತು ವಾರಾಣಸಿಯಲ್ಲಿರುವ ಕನ್ನಡಿಗರು ಹೇಳಿದ್ದೇನು? ಇಲ್ಲಿದೆ ‌‘ವಿಸ್ತಾರ ನ್ಯೂಸ್‌’ ಗ್ರೌಂಡ್‌ ರಿಪೋರ್ಟ್.‌

“ನಾವು ಬೆಂಗಳೂರಿನಿಂದ ಕಾಶಿಗೆ ಬಂದು ನೆಲೆಸಿದ್ದೇವೆ. 2012ರ ಕೊನೆಯಲ್ಲಿ ನಾವು ಇಲ್ಲಿಗೆ ಬಂದೆವು. ನಾವು ಇಲ್ಲಿಗೆ ಬಂದಾಗ ಸಮಾಜವಾದಿ ಪಕ್ಷ ಅಧಿಕಾರದಲ್ಲಿತ್ತು. ನಾವು ಎರಡೂ ಸರ್ಕಾರಗಳನ್ನು ನೋಡಿದ ಕಾರಣ ನಮಗೆ ನಿಜವಾದ ವ್ಯತ್ಯಾಸ ಗೊತ್ತು. ಮೊದಲಿಗೆ ಇಲ್ಲಿ ವಿದ್ಯುತ್‌ ವೋಲ್ಟೇಜ್‌ ಇರಲಿಲ್ಲ. ಈಗ ರಸ್ತೆಗಳನ್ನು ಅಭಿವೃದ್ಧಿಗೊಳಿಸಲಾಗಿದೆ. ಗಂಗೆಯು ಶುದ್ಧಗೊಂಡಿದ್ದಾಳೆ. ಇಲ್ಲಿ ಗಲಭೆಗಳು ಸಂಪೂರ್ಣವಾಗಿ ನಿಂತಹೋಗಿವೆ. ಒಂದೇ ಒಂದು ಗಲಾಟೆ ನಡೆಯುವುದಿಲ್ಲ. ಕಳೆದ 10 ವರ್ಷಗಳಲ್ಲಿ ಅಪಾರ ಅಭಿವೃದ್ಧಿಯಾಗಿದೆ” ಎಂಬುದಾಗಿ ಕನ್ನಡಿಗರೊಬ್ಬರು ಮಾಹಿತಿ ನೀಡಿದ್ದಾರೆ.

“ಸಮಾಜದಲ್ಲಿ ಧರ್ಮ ಇದ್ದಾಗಲೇ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ. ಇದೇ ಕಾರಣಕ್ಕಾಗಿಯೇ, ನರೇಂದ್ರ ಮೋದಿ ಅವರು ಯಾವುದೇ ಗಲಾಟೆ, ಗದ್ದಲ ಇಲ್ಲದೆ, 150 ಎಕರೆ ಜಾಗವನ್ನು ಪಡೆದುಕೊಂಡು, ಕಾಶಿ ವಿಶ್ವನಾಥ ಕಾರಿಡಾರ್‌ ನಿರ್ಮಿಸಿದ್ದಾರೆ. ಹಾಗಾಗಿ, ಮೋದಿ ಅವರು ಲಕ್ಷಾಂತರ ಮತಗಳಿಂದ ಗೆಲುವು ಸಾಧಿಸುವುದು ನಿಶ್ಚಿತ” ಎಂಬುದಾಗಿ ಹೇಳಿದ್ದಾರೆ. ಇನ್ನೊಬ್ಬ ಕನ್ನಡಿಗ ಮಾತನಾಡಿ, “ನಾನು ಮೊದಲ ಬಾರಿಗೆ ಮತ ಚಲಾವಣೆ ಮಾಡುತ್ತಿದ್ದೇನೆ. ನನ್ನ ಮೊದಲ ವೋಟು ಮೋದಿ ಅವರಿಗೆ” ಎಂದು ಯುವಕ ಹೇಳಿದ್ದಾರೆ.

ಮೈಸೂರಿನವರಾದ, 1984ರಲ್ಲಿಯೇ ವಾರಾಣಸಿಗೆ ತೆರಳಿದ, ಸ್ವಾಮೀಜಿ ಆಗಿರುವ ಮತ್ತೊಬ್ಬ ಕನ್ನಡಿಗ ವಿಸ್ತಾರ ನ್ಯೂಸ್‌ ಜತೆ ಮಾತನಾಡಿದ್ದಾರೆ. “ಕಳೆದ 40 ವರ್ಷಗಳಿಂದ ಕಾಶಿಯಲ್ಲಿಯೇ ನೆಲೆಸಿದ್ದೇನೆ. ಮೊದಲು ಸ್ವಚ್ಛತೆ, ಅಭಿವೃದ್ಧಿಯಾಗಿರಲಿಲ್ಲ. ಕಾಶಿಗೆ ಶೇ.90ರಷ್ಟು ಜನ ಬರುವುದು ದಕ್ಷಿಣ ಭಾರತದಿಂದಲೇ. ಈಗ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗಿದೆ. ಘಾಟ್‌ಗಳನ್ನು ಸ್ವಚ್ಛಗೊಳಿಸಿ, ಭಕ್ತರಿಗೆ ಅನುಕೂಲ ಮಾಡಲಾಗಿದೆ. ಮೋದಿ ಅವರಿರದಿದ್ದರೆ ವಾರಾಣಸಿ ನಾಶವಾಗುತ್ತಿತ್ತು” ಎಂದಿದ್ದಾರೆ. ಕನ್ನಡಿಗರು ಮಾತ್ರವಲ್ಲ, ಕಾಶಿಯ ಬಹುತೇಕ ನಾಗರಿಕರು ಕೂಡ ಮೋದಿ ಅವರ ಆಡಳಿತವನ್ನು ಮೆಚ್ಚಿದ್ದಾರೆ.

ಮೋದಿ ವಿರುದ್ಧ ಕಣಕ್ಕಿಳಿದ ನಾಯಕರಿವರು

ನರೇಂದ್ರ ಮೋದಿ ಅವರು 2014ರಿಂದಲೂ ವಾರಾಣಸಿ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಇವರ ವಿರುದ್ಧ ಈ ಬಾರಿ ಕಾಂಗ್ರೆಸ್‌ ಅಜಯ್‌ ರಾಯ್‌ ಅವರನ್ನು ಕಣಕ್ಕಿಳಿಸಿದೆ. ಅಖಿಲ ಭಾರತ ಹಿಂದು ಮಹಾಸಭಾ (ABHM) ಪಕ್ಷದಿಂದ ಮಂಗಳಮುಖಿಯಾಗಿರುವ ಕಿನ್ನಾರ್‌ ಮಹಾಮಂಡಲೇಶ್ವರ್‌ ಹೇಮಾಂಗಿ ಸಖಿ ಅವರು ಕೂಡ ಸ್ಪರ್ಧಿಸುತ್ತಿದ್ದಾರೆ. ಬಿಎಸ್‌ಪಿಯು ಅಥರ್‌ ಜಮಾಲ್‌ ಲರಿ ಅವರಿಗೆ ಟಿಕೆಟ್‌ ನೀಡಿದೆ. ಕ್ಷೇತ್ರದಲ್ಲಿ ಜೂನ್‌ 1ರಂದು ಮತದಾನ ನಡೆಯಲಿದೆ. ವಾರಾಣಸಿ ಲೋಕಸಭೆ ಕ್ಷೇತ್ರದಲ್ಲಿ 19.62 ಲಕ್ಷ ಮತದಾರರಿದ್ದಾರೆ. ಇವರಲ್ಲಿ 10.65 ಲಕ್ಷ ಪುರುಷರಿದ್ದರೆ, 8.97 ಲಕ್ಷ ಮಹಿಳೆಯರಿದ್ದಾರೆ. 135 ಮಂಗಳಮುಖಿಯರೂ ಮತದಾನ ಮಾಡಲಿದ್ದಾರೆ.

ಇದನ್ನೂ ಓದಿ: Phalodi Satta Bazar: ಮೋದಿಗೆ 330 ಸೀಟು ಖಚಿತ ಎಂದ ಸಟ್ಟಾ ಬಜಾರ್‌ ಸಮೀಕ್ಷೆ; ರಾಜ್ಯವಾರು ವರದಿ ಇಲ್ಲಿದೆ

Continue Reading

ಕ್ರೀಡೆ

Virat Kohli : ಐಪಿಎಲ್​ 2024ರ ಆರೆಂಜ್ ಕ್ಯಾಪ್ ಗೆದ್ದು ಹೊಸ ದಾಖಲೆ ಬರೆದ ವಿರಾಟ್​ ಕೊಹ್ಲಿ

VISTARANEWS.COM


on

Virat kohli
Koo

ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್​ನ 17 ಆವೃತ್ತಿಯಾದರೂ ಪ್ರಶಸ್ತಿ ಗೆಲ್ಲದೇ ಇರಬಹುದು. ಅದರೆ, ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ (Virat Kohli) ಹೊಸ ಹೊಸ ಐಪಿಎಲ್ ದಾಖಲೆಗಳನ್ನು ಬರೆಯುತ್ತಲೇ ಇರುತ್ತಾರೆ. ಇದೀಗ ಅವರು 2024ರ ಐಪಿಎಲ್​ನಲ್ಲಿ ಅತಿ ಹೆಚ್ಚು ರನ್ ಬಾರಿಸಿ ಆರೆಂಜ್ ಕ್ಯಾಪ್ ಗೆದ್ದಿದ್ದಾರೆ. ಈ ಮೂಲಕ ಟೂರ್ನಿಯ ಇತಿಹಾಸದಲ್ಲಿ ಒಂದಕ್ಕಿಂತ ಹೆಚ್ಚು ಬಾರಿ ಆರೆಂಜ್ ಕ್ಯಾಪ್ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಕೊಹ್ಲಿ ಈ ಬಾರಿ 15 ಪಂದ್ಯಗಳಲ್ಲಿ 741 ರನ್ ಗಳಿಸುವ ಮೂಲಕ ಈ ಋತುವನ್ನು ಕೊನೆಗೊಳಿಸಿದ್ದಾರೆ.

ಆಸೀಸ್ ಎಡಗೈ ಬ್ಯಾಟರ್​ ಡೇವಿಡ್ ವಾರ್ನರ್ (3) ಮತ್ತು ವಿಂಡೀಶ್ ದೈತ್ಯ ಕ್ರಿಸ್ ಗೇಲ್ (2) ಬಳಿಕ ಐಪಿಎಲ್ ಟೂರ್ನಿಯಲ್ಲಿ ಒಂದಕ್ಕಿಂತ ಹೆಚ್ಚು ಬಾರಿ ಆರೆಂಜ್ ಕ್ಯಾಪ್ ಗೆದ್ದ ಮೂರನೇ ಆಟಗಾರ ಎಂಬ ಹೆಗ್ಗಳಿಕೆಯನ್ನು ವಿರಾಟ್ ಕೊಹ್ಲಿ ತಮ್ಮದಾಗಿಸಿಕೊಂಡಿದ್ದಾರೆ. ಕೊಹ್ಲಿ ಬ್ಯಾಟ್ನೊಂದಿಗೆ ಅದ್ಭುತ ಫಾರ್ಮ್​ನಲ್ಲಿದ್ದಾರೆ. ಈ ಋತುವಿನಲ್ಲಿ ಒಂದು ಶತಕ ಮತ್ತು ಐದು ಅರ್ಧಶತಕಗಳನ್ನು ಗಳಿಸಿದ್ದಾರೆ. 5 ಬಾರಿಯ ಚಾಂಪಿಯನ್ ಸಿಎಸ್​ಕೆ ತಂಡವನ್ನು ಮಣಿಸಿದ ಆರ್​ಸಿಬಿ ಪ್ಲೇ ಆಫ್ ಹಂತವನ್ನು ತಲುಪಿತು. ರಾಜಸ್ಥಾನ್ ವಿರುದ್ಧ ಎಲಿಮಿನೇಟರ್​ನಲ್ಲಿ ಸೋತು ನಿರಾಸೆ ಎದುರಿಸಿತು.

ವಿರಾಟ್ ಕೊಹ್ಲಿ 2016 ರಲ್ಲಿ ಮೊದಲ ಬಾರಿಗೆ 973 ರನ್​ಗಳೊಂದಿಗೆ ಆರೆಂಜ್ ಕ್ಯಾಪ್ ಗೆದ್ದಿದ್ದರು, ಇದು ಇನ್ನೂ ಐಪಿಎಲ್ ದಾಖಲೆಯಾಗಿ ಉಳಿದಿದೆ. ಸಿಎಸ್​ಕೆಯ ಋತುರಾಜ್ ಗಾಯಕ್ವಾಡ್ 583 ರನ್​ಗಳೊಂದಿಗೆ ಹಾಲಿ ಆವೃತ್ತಿಯಲ್ಲಿ ಎರಡನೇ ಸ್ಥಾನ ಪಡೆದರೆ, ರಾಜಸ್ಥಾನದ ರಿಯಾನ್ ಪರಾಗ್ 16 ಪಂದ್ಯಗಳಲ್ಲಿ 573 ರನ್ ಗಳಿಸಿ ಮೂರನೇ ಸ್ಥಾನದಲ್ಲಿದ್ದಾರೆ.

2024ರ ಬ್ಯಾಟಿಂಗ್ ಸಾಧಕರು

  • ವಿರಾಟ್ ಕೊಹ್ಲಿ – 15 ಪಂದ್ಯಗಳಲ್ಲಿ 741 ರನ್
  • ಋತುರಾಜ್ ಗಾಯಕ್ವಾಡ್ – 14 ಪಂದ್ಯಗಳಲ್ಲಿ 583
  • ರಿಯಾನ್ ಪರಾಗ್ – 16 ಪಂದ್ಯಗಳಲ್ಲಿ 573 ರನ್
  • ಟ್ರಾವಿಸ್ ಹೆಡ್ – 15 ಪಂದ್ಯಗಳಲ್ಲಿ 567 ರನ್
  • ಸಂಜು ಸ್ಯಾಮ್ಸನ್ – 16 ಪಂದ್ಯಗಳಲ್ಲಿ 531

ಆರೆಂಜ್ ಕ್ಯಾಪ್ ವಿಜೇತರ ಪಟ್ಟಿ

ವರ್ಷ- 2008
ಆಟಗಾರ: ಶಾನ್ ಮಾರ್ಷ್ (ಕಿಂಗ್ಸ್ ಇಲೆವೆನ್ ಪಂಜಾಬ್)
ಪಂದ್ಯಗಳು: 11
ರನ್: 616

ವರ್ಷ-2009
ಆಟಗಾರ: ಮ್ಯಾಥ್ಯೂ ಹೇಡನ್ (ಸಿಎಸ್ಕೆ)
ಪಂದ್ಯಗಳು: 12
ರನ್: 572

ವರ್ಷ- 2010
ಆಟಗಾರ: ಸಚಿನ್ ತೆಂಡೂಲ್ಕರ್ (ಎಂಐ)
ಪಂದ್ಯಗಳು: 15
ರನ್: 618

ವರ್ಷ-2011
ಆಟಗಾರ: ಕ್ರಿಸ್ ಗೇಲ್ (ಆರ್​​ಸಿಬಿ)
ಪಂದ್ಯಗಳು: 12
ರನ್: 608

ವರ್ಷ-2012
ಆಟಗಾರ: ಕ್ರಿಸ್ ಗೇಲ್ (ಆರ್​​ಸಿಬ)
ಪಂದ್ಯಗಳು: 15
ರನ್: 733

ವರ್ಷ-2013
ಆಟಗಾರ: ಮೈಕಲ್ ಹಸ್ಸಿ (ಸಿಎಸ್​ಕೆ)
ಪಂದ್ಯಗಳು: 16
ರನ್: 733

ವರ್ಷ-2014
ಆಟಗಾರ: ರಾಬಿನ್ ಉತ್ತಪ್ಪ (ಕೆಕೆಆರ್)
ಪಂದ್ಯಗಳು: 16
ರನ್: 660

ವರ್ಷ- 2015
ಆಟಗಾರ: ಡೇವಿಡ್ ವಾರ್ನರ್ (ಎಸ್ಆರ್ಎಚ್)
ಪಂದ್ಯಗಳು: 14
ರನ್: 562


ವರ್ಷ- 2016
ಆಟಗಾರ: ವಿರಾಟ್ ಕೊಹ್ಲಿ (ಆರ್​ಸಿಬಿ)
ಪಂದ್ಯಗಳು: 16
ರನ್: 973

ವರ್ಷ- 2017
ಆಟಗಾರ: ಡೇವಿಡ್ ವಾರ್ನರ್ (ಎಸ್ಆರ್ಎಚ್)
ಪಂದ್ಯಗಳು: 14
ರನ್: 641

ವರ್ಷ-2018
ಆಟಗಾರ: ಕೇನ್ ವಿಲಿಯಮ್ಸನ್ (ಎಸ್ಆರ್​ಎಚ್​​)
ಪಂದ್ಯಗಳು: 17
ರನ್: 735

ವರ್ಷ- 2019
ಆಟಗಾರ: ಡೇವಿಡ್ ವಾರ್ನರ್ (ಎಸ್ಆರ್ಎಚ್)
ಪಂದ್ಯಗಳು: 12
ರನ್: 692

ವರ್ಷ- 2020
ಆಟಗಾರ: ಕೆಎಲ್ ರಾಹುಲ್ (ಕಿಂಗ್ಸ್ ಇಲೆವೆನ್ ಪಂಜಾಬ್)
ಪಂದ್ಯಗಳು: 14
ರನ್: 670

ವರ್ಷ- 2021
ಆಟಗಾರ: ಋತುರಾಜ್ ಗಾಯಕ್ವಾಡ್ (ಸಿಎಸ್​ಕೆ)
ಪಂದ್ಯಗಳು: 16
ರನ್: 635

ವರ್ಷ- 2022
ಆಟಗಾರ: ಜೋಸ್ ಬಟ್ಲರ್ (ಆರ್​ಆರ್​)
ಪಂದ್ಯಗಳು: 17
ರನ್: 863

ವರ್ಷ-2023
ಆಟಗಾರ: ಶುಬ್ಮನ್ ಗಿಲ್ (ಗುಜರಾತ್ ಟೈಟಾನ್ಸ್​)
ಪಂದ್ಯಗಳು: 17
ರನ್: 890

ವರ್ಷ-2024
ಆಟಗಾರ: ವಿರಾಟ್ ಕೊಹ್ಲಿ (ಆರ್​ಸಿಬಿ)
ಪಂದ್ಯಗಳು: 17
ರನ್: 741

ಇದನ್ನೂ ಓದಿ: IPL 2024 Final : 3ನೇ ಬಾರಿ ಐಪಿಎಲ್ ಚಾಂಪಿಯನ್ ಪಟ್ಟಕ್ಕೇರಿದ ಕೆಕೆಆರ್​​; ಹೈದರಾಬಾದ್​ಗೆ ನಿರಾಸೆ

ಐಪಿಎಲ್ 2024 ರಲ್ಲಿ ವಿರಾಟ್ ಕೊಹ್ಲಿ ತಮ್ಮ ಸ್ಟ್ರೈಕ್ ರೇಟ್ ಕುರಿತ ಟೀಕಾಕಾರರನ್ನು ಮೌನಗೊಳಿಸಿದ್ದರು. ಟಿ 20 ವಿಶ್ವಕಪ್​ಗೆ ಮುಂಚಿತವಾಗಿ ಅದ್ಭುತ ಬ್ಯಾಟಿಂಗ್ ಮಾಡಿದರು. ಅವರು 154.69 ಸರಾಸರಿಯಲ್ಲಿ ರನ್ ಗಳಿಸಿದರು. ಜೂನ್ 1 ರಿಂದ ಯುಎಸ್ಎ ಮತ್ತು ವೆಸ್ಟ್ ಇಂಡೀಸ್​ನಲ್ಲಿ ಪ್ರಾರಂಭವಾಗುವ ಟಿ 20 ವಿಶ್ವಕಪ್​ನಲ್ಲಿ ವಿರಾಟ್ ಕೊಹ್ಲಿ ತಮ್ಮ ಐಪಿಎಲ್ ಫಾರ್ಮ್ ಅನ್ನು ಮುಂದುವರಿಸಬೇಕೆಂದು ಭಾರತ ಬಯಸುತ್ತದೆ

Continue Reading

ಪ್ರಮುಖ ಸುದ್ದಿ

IPL 2024 Final : 3ನೇ ಬಾರಿ ಐಪಿಎಲ್ ಚಾಂಪಿಯನ್ ಪಟ್ಟಕ್ಕೇರಿದ ಕೆಕೆಆರ್​​; ಹೈದರಾಬಾದ್​ಗೆ ನಿರಾಸೆ

IPL 2024 Final : ಟಾಸ್​ ಗೆದ್ದು ಮೊದಲು ಬ್ಯಾಟ್ ಮಾಡಿದ ಎಸ್​ಆರ್​ಎಚ್ ತಂಡ 18.3 ಓವರ್​ಗಳಲ್ಲಿ 114 ರನ್​ಗಳಿಗೆ ಆಲ್​ಔಟ್ ಆಯಿತು. ಪ್ರತಿಯಾಗಿ ಬ್ಯಾಟ್​ ಮಾಡಿದ ಕೆಕೆಆರ್ ತಂಡ 10.3 ಓವರ್​ಗಳಲ್ಲಿ 2 ವಿಕೆಟ್​ ನಷ್ಟಕ್ಕೆ. 114 ರನ್ ಬಾರಿಸಿ ಸುಲಭ ಗೆಲವು ತನ್ನದಾಗಿಸಿಕೊಂಡಿತು. ಕೆಕೆಆರ್ ಪರ ವೆಂಕಟೇಶ್ ಅಯ್ಯರ್​ (52) ರನ್​ ಬಾರಿಸಿ ಗೆಲವಿಗೆ ಕೊಡುಗೆ ಕೊಟ್ಟರು.

VISTARANEWS.COM


on

IPL 2024 Final
Koo

ಚೆನ್ನೈ: ಟೂರ್ನಿಯುದ್ದಕ್ಕೂ ಸಮರ್ಥ ಪ್ರದರ್ಶನ ನೀಡುವ ಮೂಲಕ ಮಿಂಚಿದ್ದ ಗೌತಮ್ ಗಂಭೀರ್​ ಕೋಚಿಂಗ್​ನೊಂದಿಗೆ ಪಳಗಿದ ಕೋಲ್ಕೊತಾ ನೈಟ್​ ರೈಡರ್ಸ್ ತಂಡ ಐಪಿಎಲ್​ 2024ರ ಆವೃತ್ತಿಯ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಫೈನಲ್​ ಪಂದ್ಯದಲ್ಲಿ (IPL 2024 Final) ಎದುರಾಳಿ ಸನ್​ರೈಸರ್ಸ್​ ಹೈದರಾಬಾದ್ ವಿರುದ್ಧ 8 ವಿಕೆಟ್​ಗಳ ಗೆಲುವು ಸಾಧಿಸಿ ಟ್ರೋಫಿ ತನ್ನದಾಗಿಸಿಕೊಂಡಿತು. ಇದು ಕೋಲ್ಕೊತಾ ಮೂಲದ ತಂಡಕ್ಕೆ 3ನೇ ಟ್ರೋಫಿಯಾಗಿದೆ. ಈ ಹಿಂದೆ 2012 ಹಾಗೂ 2104ರಲ್ಲಿ ಗೌತಮ್ ಗಂಭೀರ್ ಅವರ ನಾಯಕತ್ವದಲ್ಲಿ ಈ ತಂಡ ಚಾಂಪಿಯನ್ ಆಗಿತ್ತು. ಇದೀಗ ಅವರದ್ದೇ ಕೋಚಿಂಗ್​ನಲ್ಲಿ ತಂಡ ಟ್ರೋಫಿ ಗೆದ್ದಿರುವುದು ವಿಶೇಷ ಎನಿಸಿದೆ. ಇದೇ ವೇಳೆ 2009ರಲ್ಲಿ (ಡೆಕ್ಕನ್ ಚಾರ್ಜರ್ಸ್ ತಂಡ) ಮತ್ತು 2016ರಲ್ಲಿ ಟ್ರೋಫಿ ಗೆದ್ದಿದ್ದ ಹೈದರಾಬಾದ್​ ಮೂಲದ ತಂಡಕ್ಕೆ ನಿರಾಸೆ ಎದುರಾಯಿತು. ಕೆಕೆಆರ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್​ ತಂಡಗಳ ಬಳಿಕ (ಐದು ಬಾರಿ ಚಾಂಪಿಯನ್ ಪಟ್ಟ) ಐಪಿಎಲ್​ನ ಅತ್ಯಂತ ಯಶಸ್ವಿ ತಂಡ ಎನಿಸಿಕೊಂಡಿದೆ ಕೆಕೆಆರ್​​.

ಪಂದ್ಯದ ಆರಂಭದಿಂದಲೂ ಕೊಂಚವೂ ಪ್ರತಿರೋಧ ತೋರದ ಪ್ಯಾಟ್​ ಕಮಿನ್ಸ್​ ಬಳಗ ಟೂರ್ನಿಯಲ್ಲೇ ಅತ್ಯಂತ ಕಳಪೆ ಪ್ರದರ್ಶನ ನೀಡಿತು. ಆರ್​ಸಿಬಿ ವಿರುದ್ಧದ ಲೀಗ್​ ಪಂದ್ಯದಲ್ಲಿ 287 ರನ್ ಬಾರಿಸಿದ್ದ ಎಸ್​ಆರ್​ಎಚ್​ ತಂಡ ಈ ಫೈನಲ್​ ಎಂಬ ಹೆಸರಿಗೆ ಕಿಮ್ಮತ್ತು ನೀಡದೇ 113 ರನ್​ಗಳಿಗೆ ಆಲ್​ಔಟ್​ ಆಯಿತು. ಇದು ಕೂಡ ಐಪಿಎಲ್​ ಫೈನಲ್​ ಇತಿಹಾಸದಲ್ಲಿ ತಂಡವೊಂದು ಬಾರಿಸಿದ ಕನಿಷ್ಠ ಮೊತ್ತದ ಕಳಪೆ ದಾಖಲೆಯಾಗಿದೆ. ಇದೇ ವೇಳೆ ಕೆಕೆಆರ್​ ತಂಡ ಮುಲಾಜಿಲ್ಲದೆ ಅದ್ಭುತ ಪ್ರದರ್ಶನ ನೀಡಿದು. ಬೌಲಿಂಗ್​ ವೇಳೆ ಬೌಲರ್​ಗಳು ಮಾರಕ ದಾಳಿ ಸಂಘಟಿಸಿದರೆ ಬ್ಯಾಟಿಂಗ್​ನಲ್ಲಿ ಸಣ್ಣ ಮೊತ್ತವನ್ನು ಕ್ಯಾರೇ ಎನ್ನಗೆ ಗೆಲುವು ಸಾಧಿಸಿತು.

ಟಾಸ್​ ಗೆದ್ದು ಮೊದಲು ಬ್ಯಾಟ್ ಮಾಡಿದ ಎಸ್​ಆರ್​ಎಚ್ ತಂಡ 18.3 ಓವರ್​ಗಳಲ್ಲಿ 114 ರನ್​ಗಳಿಗೆ ಆಲ್​ಔಟ್ ಆಯಿತು. ಪ್ರತಿಯಾಗಿ ಬ್ಯಾಟ್​ ಮಾಡಿದ ಕೆಕೆಆರ್ ತಂಡ 10.3 ಓವರ್​ಗಳಲ್ಲಿ 2 ವಿಕೆಟ್​ ನಷ್ಟಕ್ಕೆ. 114 ರನ್ ಬಾರಿಸಿ ಸುಲಭ ಗೆಲವು ತನ್ನದಾಗಿಸಿಕೊಂಡಿತು. ಕೆಕೆಆರ್ ಪರ ವೆಂಕಟೇಶ್ ಅಯ್ಯರ್​ (52) ರನ್​ ಬಾರಿಸಿ ಗೆಲುವಿಗೆ ಕೊಡುಗೆ ಕೊಟ್ಟರು.ಆರಂಭಿಕ ಬ್ಯಾಟರ್​ ರಹ್ಮನುಲ್ಲಾ ಗುರ್ಬಜ್​ 39 ರನ್ ಬಾರಿಸಿದರು. ಎಸ್​ಆರ್​ಎಚ್ ತಂಡ ನೀಡಿದ್ದ ಸಾಧಾರಣ ಮೊತ್ತ ಕೆಕೆಆರ್​ ತಂಡಕ್ಕೆ ಸವಾಲಾಗಲೇ ಇಲ್ಲ. ಅಲ್ಲದೆ ಎಸ್​ಆರ್​ಎಚ್ ತಂಡದ ಪ್ರದರ್ಶನ ಫೈನಲ್​ ಪಂದ್ಯಕ್ಕೂ ಸರಿ ಕಿಮ್ಮತ್ತು ಕೊಡಲಿಲ್ಲ.

ಪಂದ್ಯದಲ್ಲಿ ಏನಾಯಿತು?

ಟಾಸ್​ ಗೆದ್ದು ಮೊದಲು ಬ್ಯಾಟಿಂಗ್ ಮಾಡಿ ದೊಡ್ಡ ಸ್ಕೋರ್ ಬಾರಿಸಬೇಕೆನ್ನುವ ಎಸ್​ಆರ್​ಎಚ್​ ತಂಡದ ಆಸೆ ಕಮರಿ ಹೋಯಿತು. ಮಿಚೆಲ್ ಸ್ಟಾರ್ಕ್ ಅವರ ಮೊದಲ ಓವರ್​ನಲ್ಲಿಯೇ ಅಭಿಷೇಕ್​ ಶರ್ಮಾ 2 ರನ್ ಬಾರಿಸಿ ಔಟಾದರು. ಟ್ರಾವಿಸ್​ ಹೆಡ್​ ಮತ್ತೊಂದು ಬಾರಿ ವಿಫಲಗೊಂಡು ಶೂನ್ಯಕ್ಕೆ ಔಟಾದರು. ಅವರು ವೈಭವ್​ ಎಸೆತಕ್ಕೆ ವಿಕೆಟ್​ ಒಪ್ಪಿಸಿದರು. ಬಳಿಕಬಂದ ರಾಹುಲ್ ತ್ರಿಪಾಠಿ ಸ್ಟಾರ್ಕ್ ಎಸೆತಕ್ಕೆ ಕ್ಯಾಚ್​ ನೀಡಿ ಔಟಾಗುವ ಮೊದಲು 9 ರನ್ ಬಾರಿಸಿದ್ದರು. 21 ರನ್​ಗೆ 3 ವಿಕೆಟ್​ ಕಳೆದುಕೊಂಡ ಎಸ್​ಆರ್​ಎಚ್​ ಸಮಸ್ಯೆಗೆ ಸಿಲುಕಿತು. ಬಳಿಕ ಬಂದ ಮಾರ್ಕ್ರಮ್​ 20 ರನ್ ಬಾರಿಸಿದರೆ ಕ್ಲಾಸೆನ್​ 16 ರನ್​ಗೆ ಸೀಮಿತಗೊಂಡರು.

ಇದನ್ನೂ ಓದಿ: Hardik Pandya : ಡೈವೋರ್ಸ್​ ಗಾಸಿಪ್​ ನಡುವೆ ಹಾರ್ದಿಕ್ ಪಾಂಡ್ಯ ನಾಪತ್ತೆ!

ಸತತವಾಗಿ ವಿಕೆಟ್​ ಕಳೆದುಕೊಂಡ ಕಾರಣ ಎಸ್​ಆರ್​ಎಚ್​ ತಂಡಕ್ಕೆ ಚೇತರಿಸಿಕೊಳ್ಳುವುದಕ್ಕೆ ಅವಕಾಶವೇ ಸಿಗಲಿಲ್ಲ. ಶಹಬಾಜ್​ ಅಹಮದ್ 8 ರನ್​ಗೆ ಸೀಮಿತಗೊಂಡರೆ ಇಂಪ್ಯಾಕ್ಟ್​ ಪ್ಲೇಯರ್​ ಸಮದ್​ 4 ರನ್​ಗೆ ಔಟಾದರು. ಅಂತಿಮವಾಗಿ ನಾಯಕ ಪ್ಯಾಟ್​ ಕಮಿನ್ಸ್​ 19 ಎಸೆತಕ್ಕೆ 24 ರನ್ ಬಾರಿಸಿ ತಂಡದ ಮೊತ್ತ 100ರ ಗಡಿ ದಾಟಲು ನೆರವಾದರು.

Continue Reading
Advertisement
Snake
ಕರ್ನಾಟಕ3 hours ago

Snake: ಸ್ಟ್ಯಾಂಡ್‌ನಲ್ಲಿಟ್ಟಿದ್ದ ಚಪ್ಪಲಿಯೊಳಗೆ ಕೂತಿದ್ದ ಬುಸ್‌ ಬುಸ್‌ ನಾಗಪ್ಪ; ಸ್ವಲ್ಪ ಹುಷಾರಾಗಿರ‍್ರಪ್ಪ! Video ಇಲ್ಲಿದೆ

Varanasi
ದೇಶ5 hours ago

Varanasi: ಮೋದಿ ಕುರಿತು ವಾರಾಣಸಿಯಲ್ಲಿರುವ ಕನ್ನಡಿಗರು ಏನಂತಾರೆ? ಇಲ್ಲಿದೆ ‘ವಿಸ್ತಾರ ನ್ಯೂಸ್’ ಗ್ರೌಂಡ್‌ ರಿಪೋರ್ಟ್!

Virat kohli
ಕ್ರೀಡೆ5 hours ago

Virat Kohli : ಐಪಿಎಲ್​ 2024ರ ಆರೆಂಜ್ ಕ್ಯಾಪ್ ಗೆದ್ದು ಹೊಸ ದಾಖಲೆ ಬರೆದ ವಿರಾಟ್​ ಕೊಹ್ಲಿ

IPL 2024 Final
ಪ್ರಮುಖ ಸುದ್ದಿ5 hours ago

IPL 2024 Final : 3ನೇ ಬಾರಿ ಐಪಿಎಲ್ ಚಾಂಪಿಯನ್ ಪಟ್ಟಕ್ಕೇರಿದ ಕೆಕೆಆರ್​​; ಹೈದರಾಬಾದ್​ಗೆ ನಿರಾಸೆ

The Kapil Sharma Show
ದೇಶ5 hours ago

Physical Abuse: ಕಪಿಲ್‌ ಶರ್ಮಾ ಶೋನಲ್ಲಿ ಪಾತ್ರ ಕೊಡುವುದಾಗಿ ನಂಬಿಸಿ ಮಹಿಳೆ ಮೇಲೆ ಅತ್ಯಾಚಾರ

IPL 2024
ಕ್ರೀಡೆ5 hours ago

IPL 2024 Final : ಐಪಿಎಲ್ ಫೈನಲ್​​ನಲ್ಲಿ ಕಡಿಮೆ ಸ್ಕೋರ್​ನ ಕಳಪೆ ದಾಖಲೆ ಬರೆದ ಸನ್​ರೈಸರ್ಸ್​ ಹೈದರಾಬಾದ್​​

Hardik Pandya
ಕ್ರೀಡೆ6 hours ago

Hardik Pandya : ಡೈವೋರ್ಸ್​ ಗಾಸಿಪ್​ ನಡುವೆ ಹಾರ್ದಿಕ್ ಪಾಂಡ್ಯ ನಾಪತ್ತೆ!

Rain News
ಕರ್ನಾಟಕ7 hours ago

Rain News: ಮಳೆ ಅವಾಂತರ; ಮನೆಯ ಶೀಟ್‌ ಮೇಲಿದ್ದ ಕಲ್ಲು ಬಿದ್ದು ಬಾಲಕಿ ಸಾವು

Phalody Satta Bazar
ದೇಶ7 hours ago

Phalodi Satta Bazar: ಮೋದಿಗೆ 330 ಸೀಟು ಖಚಿತ ಎಂದ ಸಟ್ಟಾ ಬಜಾರ್‌ ಸಮೀಕ್ಷೆ; ರಾಜ್ಯವಾರು ವರದಿ ಇಲ್ಲಿದೆ

Shivamogga News
ಕರ್ನಾಟಕ7 hours ago

Shivamogga News: ಹೆದ್ದಾರಿಯಲ್ಲೇ ಲಾಂಗ್‌ ಹಿಡಿದು ಹುಚ್ಚಾಟ ಮೆರೆದ ಯುವಕ; ಥಳಿಸಿ ಪೊಲೀಸರಿಗೆ ಒಪ್ಪಿಸಿದ ಸ್ಥಳೀಯರು

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ10 hours ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು11 hours ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ1 day ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ4 days ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ5 days ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ5 days ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು6 days ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

Contaminated Water
ಮೈಸೂರು6 days ago

Contaminated Water : ಡಿ ಸಾಲುಂಡಿಯಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ ಯುವಕ ಸಾವು

Karnataka Rain
ಮಳೆ7 days ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

Karnataka Rain
ಮಳೆ1 week ago

Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

ಟ್ರೆಂಡಿಂಗ್‌