Gujarat Election Result | 27 ವರ್ಷಗಳ ಬಳಿಕವೂ ಗುಜರಾತ್‌ನಲ್ಲಿ ಸೋಲದ ಬಿಜೆಪಿ, ಈಗ ಮತ್ತಷ್ಟು ಬಲಾಢ್ಯ, ಏನಿದರ ಹಿನ್ನೋಟ? - Vistara News

ದೇಶ

Gujarat Election Result | 27 ವರ್ಷಗಳ ಬಳಿಕವೂ ಗುಜರಾತ್‌ನಲ್ಲಿ ಸೋಲದ ಬಿಜೆಪಿ, ಈಗ ಮತ್ತಷ್ಟು ಬಲಾಢ್ಯ, ಏನಿದರ ಹಿನ್ನೋಟ?

ಗುಜರಾತ್‌ನಲ್ಲಿ 1980ರಲ್ಲಿ 9 ಸ್ಥಾನಗಳನ್ನು ಗೆದ್ದು ರಾಜಕೀಯ ಆರಂಭಿಸಿದ್ದ ಬಿಜೆಪಿ ಈಗ ಅತ್ಯಂತ ಹೆಚ್ಚು ಸ್ಥಾನಗಳನ್ನು ಪಡೆದು (Gujarat Election Result ) ರಾಜ್ಯ ರಾಜಕೀಯದಲ್ಲಿ ಹೊಸ ಇತಿಹಾಸ ಬರೆದಿದೆ. ಗುಜರಾತ್‌ನಲ್ಲಿ ಬಿಜೆಪಿ ಸಾಗಿ ಬಂದ ಹಾದಿಯ ಅವಲೋಕನ ಇಲ್ಲಿದೆ.

VISTARANEWS.COM


on

Gujarat Election Result
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

| ರಾಮಸ್ವಾಮಿ ಹುಲಕೋಡು, ಬೆಂಗಳೂರು

ಇದುವರೆಗೂ ಗುಜರಾತ್‌ ನೇರಾನೇರ ಚುನಾವಣೆ ಕಾದಾಟಕ್ಕೆ ಹೆಸರಾದ ರಾಜ್ಯವಾಗಿತ್ತು. ಆದರೆ ಈ ಬಾರಿಯ ಚುನಾವಣೆ (Gujarat Election Result) ಈ ಇತಿಹಾಸವನ್ನು ಬದಲಾಯಿಸಿದೆ. ಬಿಜೆಪಿ 150ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದು ಅಧಿಕಾರ ಹಿಡಿಯುವ ಮೂಲಕ ಹೊಸ ದಾಖಲೆ ಬರೆದಿದೆ. 1985ರ ಚುನಾವಣೆಯಲ್ಲಿ ಅಧಿಕಾರ ಹಿಡಿದಿದ್ದ ಕಾಂಗ್ರೆಸ್‌ 149 ಸ್ಥಾನ ಗೆದ್ದಿದ್ದೇ ಇದುವರೆಗಿನ ದಾಖಲೆಯಾಗಿತ್ತು. ನರೇಂದ್ರ ಮೋದಿಯವರು ಮುಖ್ಯಮಂತ್ರಿಯಾಗಿ ಜನಪ್ರಿಯತೆಯ ಉತ್ತುಂಗದಲ್ಲಿ ಇದ್ದಾಗಲೇ, ಅಂದರೆ 2012ರಲ್ಲಿ ನಡೆದ ವಿದಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಗೆಲ್ಲಲು ಸಾಧ್ಯವಾಗಿದ್ದು 127 ಸ್ಥಾನಗಳನ್ನು ಮಾತ್ರ. ಈಗ ಈ ಎಲ್ಲ ದಾಖಲೆಗಳು ಛಿದ್ರಗೊಂಡಿವೆ. ಬಿಜೆಪಿಯ ಈ ಗೆಲುವು ರಾಷ್ಟ್ರ ಮಟ್ಟದಲ್ಲಿ ಕೂಡ ಹೊಸ ದಾಖಲೆಯೇ.

ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್‌ ಶಾ ತವರು ರಾಜ್ಯವಾಗಿರುವ ಕಾರಣಕ್ಕೆ ಗುಜರಾತ್‌ನಲ್ಲಿ ನಡೆದ ಚುನಾವಣೆ ಈಗ ದೇಶದ ಗಮನ ಸೆಳೆಯುತ್ತಿದೆ. ಆದರೆ ಮೊದಲಿನಿಂದಲೂ ಈ ರಾಜ್ಯ ಕ್ಷಿಪ್ರ ರಾಜಕೀಯ ಬೆಳವಣಿಗೆಗಳಿಗೆ, ನಾಟಕೀಯ ತಿರುವುಗಳಿಗೆ ಹೆಸರುವಾಸಿ. ಇಲ್ಲಿಯ ರಾಜಕೀಯ ಲೆಕ್ಕಾಚಾರಗಳು, ಜಾತಿ ಸಮೀಕರಣಗಳು ಬೇರೆಲ್ಲಾ ರಾಜ್ಯಗಳಿಗಿಂತಲೂ ಭಿನ್ನ.

ಮೂರನೇ ಪಕ್ಷಕ್ಕಿಲ್ಲ ಅವಕಾಶ!
ಗುಜರಾತ್‌ನ ರಾಜಕೀಯದಲ್ಲಿ ಒಮ್ಮೆ ಹೊರತುಪಡಿಸಿ ಕಾಂಗ್ರೆಸ್‌ ಅಥವಾ ಬಿಜೆಪಿ ಅಧಿಕಾರದಲ್ಲಿವೆ. 1962ರಲ್ಲಿ ನಡೆದ ವಿಧಾನಸಭಾ ಚುನಾವಣೆಯಿಂದ ಹಿಡಿದು 90ರ ದಶಕದವರೆಗೆ ನಿರಂತರವಾಗಿ ಕಾಂಗ್ರೆಸ್ ಅಧಿಕಾರದಲ್ಲಿತ್ತು. ಒಟ್ಟು ಆರು ಚುನಾವಣೆಯಲ್ಲಿ ಕಾಂಗ್ರೆಸ್‌ ಬಹುಮತ ಪಡೆದು ಅಧಿಕಾರ ಹಿಡಿದಿತ್ತು. ಕಾಂಗ್ರೆಸ್‌ನ ಈ ನಿರಂತರ ಗೆಲುವಿನ ಓಟಕ್ಕೆ ತಡೆ ಹಾಕಿದ್ದು ಜನತಾ ಪಕ್ಷ.

1990ರಲ್ಲಿ ನಡೆದ ಚುನಾವಣೆಯಲ್ಲಿ 70 ಸ್ಥಾನಗಳನ್ನು ಗೆದ್ದು ಜನತಾ ಪಕ್ಷ ಅಧಿಕಾರ ಹಿಡಿದಿತ್ತು. ಈ ಚುನಾವಣೆಯಲ್ಲಿ ಬಿಜೆಪಿ 67 ಸ್ಥಾನವನ್ನು ಪಡೆದಿತ್ತು. ಕಾಂಗ್ರೆಸ್ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿತ್ತು. ಮೊದಲಿಗೆ ಜನತಾ ಪಕ್ಷ ಬಿಜೆಪಿಯ ಬೆಂಬಲ ಪಡೆದು ಅಧಿಕಾರ ನಡೆಸಿತು. ಚಿಮನ್‌ ಭಾಯಿ ಪಟೇಲ್‌ ಮುಖ್ಯಮಂತ್ರಿಯಾಗಿದ್ದರು. ಈ ಆಡಳಿತ ಹೆಚ್ಚು ದಿನ ನಡೆಯಲಿಲ್ಲ. ಮರಳಿ ಕಾಂಗ್ರೆಸ್‌ ಅಧಿಕಾರವನ್ನು ವಶಪಡಿಸಿಕೊಂಡಿತ್ತು. ಜನತಾ ಪಕ್ಷ ಮತ್ತು ಕಾಂಗ್ರೆಸ್‌ ನಡುವಿನ ಹೊಂದಾಣಿಕೆ ಬಿಜೆಪಿಯ ಬೆಳವಣಿಗೆಗೆ ಅವಕಾಶ ಮಾಡಿಕೊಟ್ಟಿತು. ಆದರೆ ಕಾಂಗ್ರೆಸ್‌ನ ಅಧಿಕಾರದ ಸರಣಿಗೆ ಬ್ರೇಕ್‌ ಬಿತ್ತು. ನಂತರ ಇಲ್ಲಿ ಬಿಜೆಪಿ ಗೆಲುವಿನ ಓಟ ಆರಂಭವಾಯಿತು. ಇದುವರೆಗೂ ಈ ಎರಡು ಪಕ್ಷಗಳನ್ನು ಹೊರತು ಪಡಿಸಿ, ಮೂರನೇ ಪಕ್ಷ ಹೆಚ್ಚು ಸಮಯ ಅಧಿಕಾರ ನಡೆಸಿಯೇ ಇಲ್ಲ.

ಬಿಜೆಪಿಯದು ಒಂಬತ್ತರಿಂದ ಆರಂಭ
ಗುಜರಾತ್‌ನ ಚುನಾವಣಾ ರಾಜಕೀಯದಲ್ಲಿ ಬಿಜೆಪಿಯ ಗೆಲುವು-ಸೋಲಿನ ಲೆಕ್ಕಾಚಾರಗಳು ಆರಂಭವಾಗಿದ್ದು 1980ರಲ್ಲಿ. ಪಕ್ಷ ಉದಯಿಸುತ್ತಿದ್ದಂತೆಯೇ ನಡೆದ ಈ ರಾಜ್ಯದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಪಕ್ಷ 9 ಸ್ಥಾನಗಳನ್ನು ಗೆದ್ದು, ಮೂರನೇ ಸ್ಥಾನ ಪಡೆದಿತ್ತು. ಮೊದಲ ಚುನಾವಣೆಯಲ್ಲಿಯೇ ಪಕ್ಷ ಶೇ.14.02 ಮತ ಪಡೆದು ದೇಶದ ಗಮನ ಸೆಳೆದಿತ್ತು.

ನಂತರ 1985ರಲ್ಲಿ ನಡೆದ ಚುನಾವಣೆಯಲ್ಲಿ 11 ಸ್ಥಾನ ಪಡೆದಿತ್ತು. ಈ ಚುನಾವಣೆಯಲ್ಲಿ ಹೇಳಿಕೊಳ್ಳುವಂತಹ ಬೆಳವಣಿಗೆ ದಾಖಲಿಸಲು ಪಕ್ಷಕ್ಕೆ ಸಾಧ್ಯವಾಗಿರಲಿಲ್ಲ. ಮತ ಪ್ರಮಾಣ ಶೇ. 14.96ರಷ್ಟೇ ಇತ್ತು. ಆದರೆ ಮುಂದೆ ಎಲ್ಲವೂ ಬದಲಾಗುತ್ತಾ ಬಂದಿತು.

1990ರಲ್ಲಿ ನಡೆದ ಚುನಾವಣೆಯಲ್ಲಿ ಪಕ್ಷ ಪಡೆದ ಮತ ಪ್ರಮಾಣ ದುಪ್ಪಟ್ಟಾಯಿತು. ಶೇ. 26.69 ಮತ ಪಡೆದ ಪಕ್ಷ 67 ಸ್ಥಾನ ಪಡೆದು ಎರಡನೇ ಸ್ಥಾನ ಪಡೆದುಕೊಂಡಿತ್ತು. ಕಾಂಗ್ರೆಸ್‌ ಅನ್ನು ಅಧಿಕಾರದಿಂದ ದೂರವಿಡಲು ಜನತಾ ಪಕ್ಷವನ್ನು ಬೆಂಬಲಿಸಿದ್ದ ಬಿಜೆಪಿ ಕೇವಲ ಎಂಟು ತಿಂಗಳಿನಲ್ಲಿ ಬೆಂಬಲವನ್ನು ಹಿಂದಕ್ಕೆ ಪಡೆಯಬೇಕಾಯಿತು. ವಿರೋಧ ಪಕ್ಷದ ಸ್ಥಾನದಲ್ಲಿ ಕುಳಿತು ಪಕ್ಷದ ಸಂಘಟನೆಯತ್ತ ಗಮನ ನೀಡಿತು.

ರಾಮಮಂದಿನ ನಿರ್ಮಾಣ ಚಳವಳಿಯಿಂದಾಗಿ ಪಕ್ಷಕ್ಕೆ ರಾಜ್ಯದಲ್ಲಿ ನಿರೀಕ್ಷೆಗೂ ಮೀರಿ ಬೆಂಬಲ ದೊರೆಯಿತು. 1995ರ ಚುನಾವಣೆಯಲ್ಲಿ ಕೇಶುಭಾಯ್‌ ಪಟೇಲ್‌ ನೇತೃತ್ವದಲ್ಲಿ ಚುನಾವಣೆ ಎದುರಿಸಿದ ಬಿಜೆಪಿ ಶೇ.42.51 ಮತ ಪಡೆದು, 121 ಸ್ಥಾನಗಳಲ್ಲಿ ಗೆದ್ದಿತ್ತು. 1990ರ ಚುನಾವಣೆಗಿಂತ 54 ಸ್ಥಾನ ಹೆಚ್ಚು ಗೆದ್ದಿತ್ತು. ಬಿಜೆಪಿಯ ಮೊದಲ ಮುಖ್ಯಮಂತ್ರಿಯಾಗಿ ಕೇಶುಭಾಯ್‌ ಪಟೇಲ್‌ ಅಧಿಕಾರ ವಹಿಸಿಕೊಂಡರು. ಬಿಜೆಪಿಯಲ್ಲಿ ಭಿನ್ನಮತ ಭುಗಿಲೆದ್ದ ಪರಿಣಾಮವಾಗಿ ನಾಲ್ಕು ಮುಖ್ಯಮಂತ್ರಿಗಳು ಬಂದು ಹೋದರು. ಆದರೆ ಪಕ್ಷ ಅಧಿಕಾರ ಕಳೆದುಕೊಳ್ಳಲಿಲ್ಲ. ಅಂದಿನಿಂದ ಆರಂಭವಾಗಿರುವ ಬಿಜೆಪಿಯ ಗೆಲುವಿನ ಚೈತ್ರ ಯಾತ್ರೆ ಈಗಲೂ ಮುಂದುವರಿದಿದೆ.

ಮೋದಿ ಯುಗದಲ್ಲಿ ಅರಳಿದ ಕಮಲ
ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿಯೇ ಗುಜರಾತ್‌ ರಾಜಕಾರಣಕ್ಕೆ ಕಾಲಿಟ್ಟಿದ್ದ ನರೇಂದ್ರ ಮೋದಿ ಲೋಕ ಸಂಘರ್ಷ ಸಮಿತಿಯ ಮೂಲಕ ಸಂಘಟನೆ ಆರಂಭಿಸಿದ್ದರು. 1987ರಲ್ಲಿ ಅಧಿಕೃತವಾಗಿ ರಾಜಕೀಯ ಚಟುವಟಿಕೆ ಆರಂಭಿಸಿದ ಅವರು, ಬಿಜೆಪಿ ಸಂಘಟನಾ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದರು.1990ರಲ್ಲಿ ರಾಮಮಂದಿರ ಚಳವಳಿಯ ಭಾಗವಾದ ಅವರು 1995ರಲ್ಲಿ ಗುಜರಾತ್‌ ಚುನಾವಣೆ ಎದುರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅವರ ತಂತ್ರಗಾರಿಕೆಯಿಂದಾಗಿಯೇ ಪಕ್ಷ ಅಧಿಕಾರಕ್ಕೆ ಬಂದಿತ್ತು.

Gujarat Election Result

1998ರಲ್ಲಿ ನಡೆದ ಚುನಾವಣೆಯಲ್ಲಿಯೂ ಪ್ರಮುಖ ಪಾತ್ರ ವಹಿಸಿದ್ದರು. ಅಭ್ಯರ್ಥಿಗಳ ಆಯ್ಕೆಯಿಂದ ಹಿಡಿದು, ಭಿನ್ನಮತೀಯ ಚಟುವಟಿಕೆಗಳನ್ನು ನಿಯಂತ್ರಿಸುವಲ್ಲಿ ಅವರು ಶ್ರಮಿಸಿದರು. ಈ ಚುನಾವಣೆಯಲ್ಲಿಯೂ ಪಕ್ಷ ಶೇ.44.81 ಮತ ಪಡೆದು, 117 ಸ್ಥಾನಗಳಲ್ಲಿ ಗೆದ್ದಿತ್ತು. ಮುಖ್ಯಮಂತ್ರಿಯಾಗಿ ಮತ್ತೆ ಕೇಶುಭಾಯ್‌ ಪಟೇಲ್‌ ಅಧಿಕಾರ ವಹಿಸಿಕೊಂಡಿದ್ದರು. ಆದರೆ 2001ರಲ್ಲಿ ಮುಖ್ಯಮಂತ್ರಿ ಕೇಶುಭಾಯ್‌ ಪಟೇಲ್‌ ಅವರ ಆರೋಗ್ಯ ಹದಗೆಟ್ಟಿತ್ತು. ಸರ್ಕಾರದ ಆಡಳಿತ ಹಳಿ ತಪ್ಪಿ, ಉಪ ಚುನಾವಣೆಯಲ್ಲಿ ಪಕ್ಷ ಸೋಲನುಭವಿಸುವಂತಾಗಿತ್ತು. ಭೂಕಂಪದಿಂದಾಗಿ ರಾಜ್ಯ ನಲುಗಿತ್ತು.

ಈ ಸಂಕಷ್ಟದ ಸಂದರ್ಭದಲ್ಲಿ ನರೇಂದ್ರ ಮೋದಿ ಗುಜರಾತ್‌ನ ಮುಖ್ಯಮಂತ್ರಿಯಾಗಿ 2001ರ ಅಕ್ಟೋಬರ್‌7ರಂದು ನೇಮಕಗೊಂಡರು. ಆಡಳಿತಕ್ಕೆ ಹೊಸ ರೂಪ ನೀಡಲಾರಂಭಿಸಿದ ಮೋದಿ ಮತ್ತೆಂದು ಹಿಂತಿರುಗಿ ನೋಡಲೇ ಇಲ್ಲ. ಗುಜರಾತ್‌ನ ರಾಜಕೀಯದಲ್ಲಿ ಮಹತ್ತರ ಪರಿಣಾಮ ಬೀರಿದ ಗೋದ್ರಾ ಕೋಮುಗಲಭೆಯ ನಂತರ ನಡೆದ ಚುನಾವಣೆಯಲ್ಲಿ ಅಂದರೆ 2002ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಶೇ. 49.85 ಮತ ಪಡೆದು 127 ಸ್ಥಾನ ಗೆದ್ದಿತ್ತು. ಉತ್ತಮ ಆಡಳಿತ ಮತ್ತು ಅಭಿವೃದ್ಧಿಯಿಂದಾಗಿಯೇ ಮುಂದೆ ಬಿಜೆಪಿ ಸತತವಾಗಿ ಗೆಲ್ಲುತ್ತಾ ಬಂದಿದೆ.

2007ರ ಚುನಾವಣೆಯಲ್ಲಿ ಪಕ್ಷ 117 ಸ್ಥಾನಗಳಲ್ಲಿ ಗೆದ್ದಿದ್ದರೆ, 2012ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಶೇ. 47.85 ರಷ್ಟು ಮತ ಪಡೆದು,115 ಸ್ಥಾನಗಳಲ್ಲಿ ಗೆದ್ದಿತ್ತು. ಮುಂದೆ 2014ರಲ್ಲಿ ನರೇಂದ್ರ ಮೋದಿ ದೇಶದ ಪ್ರಧಾನಿಯಾಗಿ ಆಯ್ಕೆಯಾದರು. ಆದರೂ ಅವರು ಗುಜರಾತ್‌ ರಾಜಕಾರಣದ ಮೇಲಿನ ತಮ್ಮ ಬಿಗಿ ಹಿಡಿತವನ್ನು ಬಿಡಲಿಲ್ಲ. 2017ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ 99 ಸ್ಥಾನಗಳಿಗೆ ತೃಪ್ತಿಪಟ್ಟುಕೊಳ್ಳಬೇಕಾಗಿತ್ತು. ಆದರೆ ಈ ಬಾರಿ ಪ್ರಧಾನಿ ನರೇಂದ್ರ ಮೋದಿ ತಮ್ಮ ತವರು ರಾಜ್ಯದಲ್ಲಿ ಪಕ್ಷವನ್ನು ಮತ್ತಷ್ಟು ಬಲಿಷ್ಠವಾಗಿ ಕಟ್ಟಿ ದಾಖಲೆಯ ಗೆಲುವು ಸಾಧ್ಯವಾಗಿಸಿದ್ದಾರೆ.

ಬಲಿಷ್ಠವಾಗಿಯೇ ಇತ್ತು ಕಾಂಗ್ರೆಸ್‌
ಕ‌ಳೆದ ಎರಡೂವರೆ ದಶಕಗಳಿಂದ ಗುಜರಾತ್‌ನಲ್ಲಿ ಬಿಜೆಪಿ ಅಧಿಕಾರದಲ್ಲಿದ್ದರೂ ಕಾಂಗ್ರೆಸ್‌ ಪಕ್ಷವೇನೂ ದುರ್ಬಲವಾಗಿರಲಿಲ್ಲ. ಇದುವರೆಗೆ ನಡೆದ ಪ್ರತಿ ಚುನಾವಣೆಯಲ್ಲಿ ಬಿಜೆಪಿಗೆ ಪ್ರಬಲ ಪೈಪೋಟಿಯನ್ನೇ ನೀಡುತ್ತಾ ಬಂದಿದೆ. ಬಿಜೆಪಿ ಮೊದಲ ಬಾರಿ ಅಧಿಕಾರಕ್ಕೆ ಬಂದ ಚುನಾವಣೆಯಲ್ಲಿ ಅಂದರೆ 1995ರಲ್ಲಿ ಕಾಂಗ್ರೆಸ್‌ 45 ಸ್ಥಾನಗಳಲ್ಲಿ ಗೆದ್ದಿತ್ತು. ನಂತರ ಪ್ರತಿ ಚುನಾವಣೆಯಲ್ಲಿಯೂ ಗೆದ್ದ ಕ್ಷೇತ್ರಗಳ ಸಂಖ್ಯೆ ಹೆಚ್ಚುತ್ತಲೇ ಬಂದಿತ್ತು. 1998ರಲ್ಲಿ 53, ಗೋಧ್ರಾ ಹತ್ಯಾಕಾಂಡದ ನಂತರ ನಡೆದ ಚುನಾವಣೆಯಲ್ಲಿ ಅಂದರೆ 2002ರಲ್ಲಿ 51, 2007ರಲ್ಲಿ 59, 2012ರಲ್ಲಿ 61, 2017ರಲ್ಲಿ 78 ಸ್ಥಾನಗಳನ್ನು ಪಡೆದಿತ್ತು. 2017ರ ಚುನಾವಣೆಯಲ್ಲಿ ಶೇ.41.44 ರಷ್ಟು ಮತ ಪಡೆದು ಪಕ್ಷದ ಸಾಮರ್ಥ್ಯ ಪ್ರದರ್ಶಿಸಿತ್ತು. ಆದರೆ ಈ ಬಾರಿ ಮಾತ್ರ ಹೀನಾಯ ಸ್ಥಿತಿಗೆ ತುಲುಪಿದೆ. ಬಿಜೆಪಿಯನ್ನು ಸೋಲಿಸಲೆಂದು ಬಂದ ಎಎಪಿ ಕಾಂಗ್ರೆಸ್‌ನ ಕಾಲೆಳೆದು ಕುಳಿತಿದೆ!

ಮುಖ್ಯಮಂತ್ರಿಗಳ ಬದಲಾವಣೆ ರಾಜಕೀಯ!
ಗುಜರಾತ್‌ ರಾಜಕಾರಣದ ವಿಶೇಷವೆಂದರೆ ಇಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡವರು ಐದು ವರ್ಷ ಪೂರ್ಣ ಅಧಿಕಾರ ನಡೆಸಿದ್ದು ಬಹಳ ಕಡಿಮೆ. ಇಲ್ಲಿ ಸುದೀರ್ಘ ಅಧಿಕಾರ ನಡೆಸಿದ್ದು ನರೇಂದ್ರ ಮೋದಿಯೊಬ್ಬರೇ!
ಒಂದು ಅವಧಿಯಲ್ಲಿ ಇಬ್ಬರು, ಮೂವರು ಮುಖ್ಯಮಂತ್ರಿಯಾಗುವುದು ರಾಜ್ಯದ ರಾಜಕೀಯದಲ್ಲಿ ಸಾಮಾನ್ಯವಾಗಿದೆ.
ಕಾಂಗ್ರೆಸ್‌ನ ಹಿತೇಂದ್ರ ಕನ್ನೈಯಲಾಲ್‌ ದೇಸಾಯಿ (1967), ಮಾಧವ್‌ ಸಿಂಘ್‌ ಸೋಲಂಕಿ (1980) ಮತ್ತು ಬಿಜೆಪಿಯ ನರೇಂದ್ರ ಮೋದಿ (2002 ಮತ್ತು 2007ರ ಅವಧಿ) ಪೂರ್ತಿ ಅವಧಿಯ ಅಧಿಕಾರ ನಡೆಸಿದ ಮುಖ್ಯಮಂತ್ರಿಗಳಾಗಿದ್ದಾರೆ.

ಐದು ವರ್ಷಗಳಲ್ಲಿ ನಾಲ್ವರು ಮುಖ್ಯಮಂತ್ರಿಗಳು

1995ರಲ್ಲಿ ಮೊದಲ ಬಾರಿಗೆ ಅಧಿಕಾರ ಹಿಡಿದಿದ್ದ ಬಿಜೆಪಿ ಬಂಡಾಯದ ಕಾರಣದಿಂದಾಗಿ ಐದು ವರ್ಷದಲ್ಲಿ ನಾಲ್ಕು ಮುಖ್ಯಮಂತ್ರಿಗಳನ್ನು ನೀಡಿತ್ತು. 1998ರಲ್ಲಿ ಅಧಿಕಾರಕ್ಕೆ ಬಂದಾಗ ಕೇಶುಭಾಯ್‌ ಪಟೇಲ್‌ ಮತ್ತು ನರೇಂದ್ರ ಮೋದಿ ಮುಖ್ಯಮಂತ್ರಿಯಾಗಿದ್ದರು. ಮುಂದೆ ನರೇಂದ್ರ ಮೋದಿ ಪ್ರಧಾನಿಯಾಗುತ್ತಿದ್ದಂತೆಯೇ ರಾಜ್ಯದಲ್ಲಿ ಮುಖ್ಯಮಂತ್ರಿಗಳ ಬದಲಾವಣೆ ಮತ್ತೆ ಸಾಮಾನ್ಯವೆಂಬತಾಯಿತು. 2012ರಿಂದ 2017ರವರೆಗೆ ಮೂರು ಬಾರಿ ಮುಖ್ಯಮಂತ್ರಿಯನ್ನು ಬದಲಾಯಿಸಲಾಯಿತು. ಪ್ರಧಾನಿಯಾಗಿ ಆಯ್ಕೆಯಾಗುತ್ತಿದ್ದ ಮೋದಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದಂತೆಯೇ ಆನಂದೀ ಬೆನ್‌ ಪಟೇಲ್‌ ಅವರನ್ನು ಮುಖ್ಯಮಂತ್ರಿಯಾಗಿ ನೇಮಿಸಲಾಯಿತು. 75 ವರ್ಷ ತುಂಬಿತೆಂಬ ಕಾರಣಕ್ಕೆ ಅವರನ್ನು ಬದಲಾಯಿಸಿ, ವಿಜಯ್‌ ರೂಪಾನಿ ಅವರನ್ನು ನೇಮಿಸಲಾಯಿತು.

ಕಳೆದ ಚುನಾವಣೆಯಲ್ಲಿ ಪಕ್ಷ ವಿಜಯ್‌ ರೂಪಾನಿ ನೇತೃತ್ವದಲ್ಲಿಯೇ ಎದುರಿಸಿ ಗೆದ್ದಿತು. ಆದರೆ 2021ರಲ್ಲಿ ಪಕ್ಷ ಅವರನ್ನು ಅಧಿಕಾರದಿಂದ ಇಳಿಸಿ, ಈ ಹುದ್ದೆಗೆ ಭೂಪೇಂದ್ರ ಪಟೇಲ್‌ ಅವರನ್ನು ನೇಮಿಸಿತ್ತು. ಈ ಬಾರಿ ಅವರ ನೇತೃತ್ವದಲ್ಲಿಯೇ ಚುನಾವಣೆ ಎದುರಿಸಿದ್ದು, ಗುಜರಾತ್‌ನ ಪಟೇಲ್‌ ಸಮುದಾಯ ಬಿಜೆಪಿಯನ್ನು ಬೆಂಬಲಿಸಿದ್ದರ ಪರಿಣಾಮ ಭರ್ಜರಿ ಗೆಲುವು ಸಾಧ್ಯವಾಗಿದೆ. ಬಿಜೆಪಿ ಹೈಕಮಾಂಡ್‌ ಈ ರೀತಿ ಮುಖ್ಯಮಂತ್ರಿಯನ್ನು ಬದಲಾಯಿಸುವುದರ ಹಿಂದೆ ರಾಜ್ಯದಲ್ಲಿ ಪಕ್ಷವನ್ನು ಬಲಪಡಿಸುವ ತಂತ್ರಗಾರಿಕೆ ಇದೆ. ಅದು ವರ್ಕ್‌ಔಟ್‌ ಕೂಡ ಆಗಿದೆ.

ಗೋಧ್ರಾ ಹತ್ಯಾಕಾಂಡ ಮತ್ತು ರಾಜಕೀಯ
ಗುಜರಾತ್‌ನಲ್ಲಿ 2002ರಲ್ಲಿ ನಡೆದ ಕೋಮು ಗಲಭೆ ಮತ್ತು ಗೋಧ್ರಾ ಹತ್ಯಾಕಾಂಡ ಬಿಜೆಪಿಗೆ ಪ್ರಬಲ ನೆಲೆಗಟ್ಟನ್ನು ಒದಗಿಸಲು ಕಾರಣವಾದವು. 2002 ಫೆಬ್ರವರಿ 27ರಂದು ನಡೆದ ಗೋಧ್ರಾ ಹತ್ಯಾಕಾಂಡದ ಬೆನ್ನಲ್ಲಿಯೇ ನಡೆದ ಚುನಾವಣೆಯಲ್ಲಿ ಪ್ರಚಾರ ಮಾಡಿದ್ದ ಆಗಿನ ಮುಖ್ಯಮಂತ್ರಿ ನರೇಂದ್ರ ಮೋದಿ, “ನೀವು ನನಗೆ ಮತ ನೀಡಬೇಕೆಂದು ಕೇಳುವುದಿಲ್ಲ. ಆದರೆ ಗೋಧ್ರಾ ಹತ್ಯಾಕಾಂಡವನ್ನು ಮಾತ್ರ ಮರೆಯಿರಿ ಎಂದು ಹೇಳಬೇಡಿ. ಅದನ್ನು ನಾನು ಹೇಗೆ ಮರೆಯಲಿ? ಬೆಂಕಿಯಿಂದ ಭಸ್ಮವಾದ ರೈಲ್ವೆಯ ಬೋಗಿಯೊಳಗಿನಿಂದ ದೈವಭಕ್ತರ ಆರ್ತನಾದ ನನ್ನ ಕಿವಿಗಳಲ್ಲಿ ಈಗಲೂ ಗುಂಯ್‌ಗುಡುತ್ತಿದೆʼ ಎಂದೇ ಭಾಷಣ ಮಾಡುತ್ತಿದ್ದರು.

ಪರಿಣಾಮವಾಗಿ ಈ ಚುನಾವಣೆಯಲ್ಲಿ ಪಕ್ಷ ಶೇ.49.85ರಷ್ಟು ಮತ ಪಡೆದಿತ್ತು. ಮುಂದೆ ಈ ಹತ್ಯಾಕಾಂಡದ ರಾಜಕೀಯದಲ್ಲಿ ಮೋದಿಯವರನ್ನು ಹೆಡೆಮುರಿಕಟ್ಟುವ ಹಲವು ಪ್ರಯತ್ನಗಳು ನಡೆದವಾದರೂ ಅವುಗಳನ್ನು ಮೆಟ್ಟಿ ನಿಲ್ಲುವಲ್ಲಿ ಅವರು ಯಶಸ್ವಿಯಾದರು. ಅಭಿವೃದ್ಧಿಯ ಹೊಸ ರಾಜಕೀಯ ಆರಂಭಿಸಿ, ಗುಜರಾತ್‌ ಅನ್ನು ಮಾದರಿ ರಾಜ್ಯವಾಗಿಸಿದ್ದರು. ಹೀಗಾಗಿ ಗುಜರಾತ್‌ನಲ್ಲಿ ಮೋದಿ ಪ್ರಭಾವ ದಟ್ಟವಾಗಿದೆ. ಈ ಬಾರಿ ಗುಜರಾತ್‌ನಲ್ಲಿ ಬಿಜೆಪಿಯ ಅಭೂತಪೂರ್ವ ದಿಗ್ವಿಜಯ ಹಿಂದೆ ಪ್ರಧಾನಿ ಸ್ಥಾನದಲ್ಲಿರುವ ನರೇಂದ್ರ ಮೋದಿ ಅವರ ಪ್ರಭಾವವೂ ಗಾಢವಾಗಿದೆ.

ಇದನ್ನೂ ಓದಿ |Gujarat Election Result | ಗುಜರಾತ್‌ನಲ್ಲಿ ಸಿಎಂ ಪದಗ್ರಹಣ ಸಮಾರಂಭಕ್ಕೆ ಮುಹೂರ್ತ ಫಿಕ್ಸ್, ಮೋದಿ, ಶಾ ಭಾಗಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

Lok Sabha Election 2024: ಅಮೇಥಿ, ರಾಯ್‌ಬರೇಲಿಗೆ ರಾಹುಲ್‌, ಪ್ರಿಯಾಂಕಾ ಫಿಕ್ಸ್‌? ಖರ್ಗೆ ನಿರ್ಧಾರ ಫೈನಲ್‌

Lok Sabha Election 2024: ಅಮೇಥಿ ಕ್ಷೇತ್ರದಿಂದ ರಾಹುಲ್‌ ಗಾಂಧಿ ಮತ್ತು ರಾಯ್‌ ಬರೇಲಿ ಕ್ಷೇತ್ರದಿಂದ ಪ್ರಿಯಾಂಕಾ ಗಾಂಧಿಯನ್ನು ಕಣಕ್ಕಿಳಿಸುವಂತೆ ಕೇಂದ್ರೀಯ ಕಾಂಗ್ರೆಸ್‌ ಎಲೆಕ್ಷನ್‌ ಸಮಿತಿ(CEC) ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಮನವಿ ಮಾಡಿದೆ.

VISTARANEWS.COM


on

By

Priyanka Gandhi Rahul Gandhi
Koo

ನವದೆಹಲಿ: ಲೋಕಸಭೆ ಚುನಾವಣೆ(Lok Sabha Election 2024) ಯ ಎರಡನೇ ಹಂತದ ಮತದಾನ ಮುಕ್ತಾಯಗೊಂಡರೂ ಅಮೇಥಿ (Amethi) ಮತ್ತು ರಾಯ್‌ಬರೇಲಿ (Raebareli) ಯಲ್ಲಿ ತನ್ನ ಅಭ್ಯರ್ಥಿಯನ್ನು ಘೋಷಿಸದೇ ಕಾಂಗ್ರೆಸ್‌ ಇನ್ನೂ ಗುಟ್ಟಾಗಿಯೇ ಇಟ್ಟಿದೆ. ಈ ಎರಡೂ ಕ್ಷೇತ್ರಗಳಲ್ಲಿ ಗಾಂಧಿ ಕುಟುಂಬದ ಕುಡಿಗಳನ್ನೇ ಕಣಕ್ಕಿಳಿಸಬೇಕೆಂದು ಬಹುತೇಕ ಎಲ್ಲಾ ಕಾಂಗ್ರೆಸ್‌ ಮುಖಂಡರ ಆಶಯವಾಗಿದೆ. ಇದಕ್ಕೆ ಪೂರಕ ಎಂಬಂತೆ ಅಮೇಥಿ ಕ್ಷೇತ್ರದಿಂದ ರಾಹುಲ್‌ ಗಾಂಧಿ(Rahul Gadhi) ಮತ್ತು ರಾಯ್‌ ಬರೇಲಿ ಕ್ಷೇತ್ರದಿಂದ ಪ್ರಿಯಾಂಕಾ ಗಾಂಧಿ(Priyanka Gandhi)ಯನ್ನು ಕಣಕ್ಕಿಳಿಸುವಂತೆ ಕೇಂದ್ರೀಯ ಕಾಂಗ್ರೆಸ್‌ ಎಲೆಕ್ಷನ್‌ ಸಮಿತಿ(CEC) ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ(Mallikarjuna Kharge) ಮತ್ತು ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ(Sona Gandhi)ಗೆ ಮನವಿ ಮಾಡಿದೆ. ಈ ಬಗ್ಗೆ ತಮ್ಮ ಮನವಿಯನ್ನು ಸಲ್ಲಿಸಿರುವ CEC ಸದಸ್ಯರು ಅಂತಿಮ ನಿರ್ಧಾರವನ್ನು ಮಲ್ಲಿಕಾರ್ಜುನ ಖರ್ಗೆಗೆ ಬಿಟ್ಟಿದ್ದಾರೆ.

2019ರವರೆಗೆ ಕಾಂಗ್ರೆಸ್‌ನ ಭದ್ರಕೋಟೆಯಂತಿದ್ದ ಅಮೇಥಿ ಮತ್ತು ರಾಯ್‌ ಬರೇಲಿ ಮೇಲೆ ಇಡೀ ದೇಶದ ಚಿತ್ತವೇ ನೆಟ್ಟಿದೆ. 2019ರಲ್ಲಿ ಬಿಜೆಪಿ ನಾಯಕಿ ಸ್ಮೃತಿ ಇರಾನಿ ರಾಹುಲ್‌ ಗಾಂಧಿಯವರನ್ನು ಸೋಲಿಸುವ ಮೂಲಕ ಕಾಂಗ್ರೆಸ್‌ ಮೊದಲ ಬಾರಿಗೆ ಅಮೇಥಿಯಲ್ಲಿ ಕಳೆದುಕೊಂಡಿತ್ತು. ಇನ್ನು ಸೋನಿಯಾ ಗಾಂಧಿಯವರು ರಾಜ್ಯಸಭೆಗೆ ಆಯ್ಕೆಯಾದ ನಂತರ ಅವರು ರಾಯ್‌ಬರೇಲಿಯನ್ನು ತೊರೆದಿದ್ದರು. ಇದಾದ ಬಳಿಕ ಪ್ರಿಯಾಂಕಾ ಗಾಂಧಿ ವಾಧ್ರಾ ರಾಯ್‌ ಬರೇಲಿ ಕ್ಷೇತ್ರದಿಂದ ಕಣಕ್ಕಿಳಿಯುವ ಮೂಲಕ ರಾಜಕೀಯ ಪ್ರವೇಶ ಮಾಡಲಿದ್ದಾರೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಬಹಳ ಕೇಳಿ ಬಂದಿತ್ತು. ಇದೀಗ ಮತ್ತೆ ಈ ಎರಡು ಕ್ಷೇತ್ರಗಳ ಅಭ್ಯರ್ಥಿಗಳನ್ನು ಕಾಂಗ್ರೆಸ್‌ ಇನ್ನೂ ಗುಟ್ಟಾಗಿ ಇಡುವ ಮೂಲಕ ಭಾರೀ ಕುತೂಹಲ ಮೂಡಿಸಿದೆ.

ಅಮೇಥಿಯಲ್ಲಿ ಸ್ಪರ್ಧಿಸುವ ಬಗ್ಗೆ ಸ್ವತಃ ರಾಹುಲ್‌ ಗಾಂಧಿಯೇ ಒಲವು ತೋರಿದ್ದು, ಪಕ್ಷ ಬಯಸಿದ್ದಲ್ಲಿ ಅಮೇಥಿಯಿಂದ ಸ್ಪರ್ಧಿಸುವುದಾಗಿ ಹೇಳಿದ್ದರು. ಈಗಾಗಲೇ ಕೇರಳದ ವಯನಾಡಿನಲ್ಲಿ ಕಣಕ್ಕಿಳಿದಿರುವ ರಾಹುಲ್‌ ಗಾಂಧಿ ಈ ಬಾರಿಯೂ ಎರಡನೇ ಕ್ಷೇತ್ರದಲ್ಲಿ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಮತ್ತೊಂದೆಡೆ ಈ ಬಗ್ಗೆ ಮಲ್ಲಿಕಾರ್ಜುನ ಖರ್ಗೆ ಪ್ರತಿಕ್ರಿಯಿಸಿದ್ದು, ಎರಡೂ ಕೇತ್ರಗಳ ಅಭ್ಯರ್ಥಿ ಘೋಷಣೆಗೆ ಇನ್ನೂ ಸಮಯ ಇದೆ. ಜನರಿಂದ ಯಾವ ಅಭ್ಯರ್ಥಿಯ ಹೆಸರು ಕೇಳಿ ಬರುತ್ತದೋ ಅಂಥವರಿಗೆ ಸೀಟ್‌ ಕೊಡಲಾಗುತ್ತದೆ. ಶೀಘ್ರದಲ್ಲೇ ಅಭ್ಯರ್ಥಿ ಘೋಷಣೆ ಆಗಲಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ:School Teacher: ಕಾರಿನ ಮೇಲೆ ಕಲ್ಲು ಎತ್ತಿ ಹಾಕಿ ಶಿಕ್ಷಕಿ ಪುಂಡಾಟ; ನೆರೆಮನೆಯವರ ಮೇಲೂ ಹಲ್ಲೆ

ಕಾಂಗ್ರೆಸ್‌ ಮುಖಂಡರ ಕ್ಷೇತ್ರ ಬದಲಾವಣೆ ಬಗ್ಗೆ ಬಿಜೆಪಿ ಆಗಾಗ ವ್ಯಂಗ್ಯ ಆಡುತ್ತಿದೆ. ಈ ಬಗ್ಗೆ ಟಾಂಗ್‌ ಕೊಟ್ಟ ಖರ್ಗೆ, ನಮ್ಮನ್ನು ಹಾಸ್ಯ ಮಾಡುವ ಬಿಜೆಪಿಗರು ಮೊದಲು ಅಟಲ್‌ ಬಿಹಾರಿ ವಾಜಪೇಯಿ ಮತ್ತು ಎಲ್‌.ಕೆ.ಆಡ್ವಾಣಿ ಅದೆಷ್ಟು ಬಾರಿ ಕ್ಷೇತ್ರ ಬದಲಾಯಿಸಿ ಚುನಾವಣೆ ಸ್ಪರ್ಧಿಸಿದ್ದಾರೆ ಎಂಬುದನ್ನು ಲೆಕ್ಕ ಹಾಕಲಿ. ವಯನಾಡಿನ ಜನರು ತಮ್ಮ ಕ್ಷೇತ್ರದಲ್ಲೇ ರಾಹುಲ್‌ ಗಾಂಧಿ ಸ್ಪರ್ಧಿಸಬೇಕೆಂದು ಬಯಸಿದ್ದರು. ಹೀಗಾಗಿ ಅವರು ಅಲ್ಲಿಗೆ ಹೋಗಿದ್ದಾರೆ. ನಾಯಕನಾದವನು ಜನರ ಆಶಯಕ್ಕೆ ಅನುಗುಣವಾಗಿ ನಡೆಯಬೇಕು ಎಂದು ತಿರುಗೇಟು ಕೊಟ್ಟರು.

Continue Reading

ಪ್ರಮುಖ ಸುದ್ದಿ

Gold Rate : ಏರುಗತಿಯಲ್ಲಿದೆ ಬಂಗಾರದ ಬೆಲೆ; ಇನ್ನೂ ಏರುವ ಮೊದಲು ಖರೀದಿ ಸೂಕ್ತ

Gold Rate: ಭಾನುವಾರ ನೀವು ಬೆಂಗಳೂರಿನಲ್ಲಿ ಒಂದು ಗ್ರಾಂ 22 ಕ್ಯಾರಟ್‌ ಚಿನ್ನವನ್ನು ₹6,685ಕ್ಕೆ ಖರೀದಿಸಬಹುದು. ಎಂಟು ಗ್ರಾಂ ಬೆಲೆ ₹53,480 ಇದೆ. 10 ಗ್ರಾಂ ಮತ್ತು 100 ಗ್ರಾಂನ 22 ಕ್ಯಾರಟ್‌ ಚಿನ್ನವನ್ನು ಅನುಕ್ರಮವಾಗಿ ₹66,850 ಮತ್ತು ₹6,68,500 ದರದಲ್ಲಿ ಖರೀದಿಸಬಹುದು. ಒಂದು ಗ್ರಾಂ 24 ಕ್ಯಾರಟ್‌ ಚಿನ್ನದ ಬೆಲೆ ₹7,293 ಆಗಿದ್ದರೆ, ಎಂಟು ಗ್ರಾಂ ಬೆಲೆ ₹58,344 ಆಗಿದೆ. 10 ಗ್ರಾಂ ಮತ್ತು 100 ಗ್ರಾಂ 24 ಕ್ಯಾರಟ್‌ ಚಿನ್ನವನ್ನು ಖರೀದಿಸಲು ಕ್ರಮವಾಗಿ ₹72, 930 ಮತ್ತು ₹7,20,300 ವೆಚ್ಚವಾಗಲಿದೆ.

VISTARANEWS.COM


on

Gold Rate
Koo

ಬೆಂಗಳೂರು: ಬಂಗಾರದ ಬೆಲೆ (Gold Rate) ದಿನದಿಂದ ದಿನಕ್ಕೆ ಏರುತ್ತಲೇ ಸಾಗುತ್ತಿದೆ. ಭಾನುವಾರವೂ ಶನಿವಾರದ ದರವೇ ಮುಂದುವರಿದಿದೆ. ರಾಜ್ಯದಲ್ಲಿ ಶನಿವಾರ 22 ಕ್ಯಾರಟ್‌ ಮತ್ತು 24 ಕ್ಯಾರಟ್‌ ಬಂಗಾರದ ಧಾರಣೆ (Gold Rate Today) ಗ್ರಾಮ್​ಗೆ ಕ್ರ ಮವಾಗಿ ₹20 ಹಾಗೂ ₹22 ಏರಿಕೆಯಾಗಿತ್ತು. ಅದೇ ಬೆಲೆ ಭಾನುವಾರವೂ ಮುಂದುವರಿದಿದೆ.

ಭಾನುವಾರ ನೀವು ಬೆಂಗಳೂರಿನಲ್ಲಿ ಒಂದು ಗ್ರಾಂ 22 ಕ್ಯಾರಟ್‌ ಚಿನ್ನವನ್ನು ₹6,685ಕ್ಕೆ ಖರೀದಿಸಬಹುದು. ಎಂಟು ಗ್ರಾಂ ಬೆಲೆ ₹53,480 ಇದೆ. 10 ಗ್ರಾಂ ಮತ್ತು 100 ಗ್ರಾಂನ 22 ಕ್ಯಾರಟ್‌ ಚಿನ್ನವನ್ನು ಅನುಕ್ರಮವಾಗಿ ₹66,850 ಮತ್ತು ₹6,68,500 ದರದಲ್ಲಿ ಖರೀದಿಸಬಹುದು. ಒಂದು ಗ್ರಾಂ 24 ಕ್ಯಾರಟ್‌ ಚಿನ್ನದ ಬೆಲೆ ₹7,293 ಆಗಿದ್ದರೆ, ಎಂಟು ಗ್ರಾಂ ಬೆಲೆ ₹58,344 ಆಗಿದೆ. 10 ಗ್ರಾಂ ಮತ್ತು 100 ಗ್ರಾಂ 24 ಕ್ಯಾರಟ್‌ ಚಿನ್ನವನ್ನು ಖರೀದಿಸಲು ಕ್ರಮವಾಗಿ ₹72, 930 ಮತ್ತು ₹7,20,300 ವೆಚ್ಚವಾಗಲಿದೆ.

ಒಂದು ಗ್ರಾಂ ಬೆಳ್ಳಿಯ ಬೆಲೆ (Silver rate today) ₹83.50, ಎಂಟು ಗ್ರಾಂ ₹840 ರಷ್ಟಿದೆ. 100 ಗ್ರಾಂಗೆ ಗ್ರಾಹಕರು ₹8,400 ಮತ್ತು 1 ಕಿಲೋಗ್ರಾಂಗೆ ₹84,00 ಪಾವತಿಸಬೇಕಿದೆ. ಇಲ್ಲಿ ನೀಡಲಾದ ದರಗಳು GST, TCS ಮತ್ತು ಇತರ ಲೆವಿಗಳನ್ನು ಒಳಗೊಂಡಿಲ್ಲ.

ನಗರ22 ಕ್ಯಾರಟ್24 ಕ್ಯಾರಟ್
ದಿಲ್ಲಿ67,00073,080
ಮುಂಬಯಿ66,85072,930
ಬೆಂಗಳೂರು66,850₹72,930
ಚೆನ್ನೈ67,70072,760

ಮೊದಲ ಬಾರಿಗೆ ಚಿನ್ನದ ಆಭರಣವನ್ನು ಖರೀದಿಸುವಾಗ ಏನು ತಿಳಿದಿರಬೇಕು?

ನೀವು ಚಿನ್ನಕ್ಕಾಗಿ ಹಣವನ್ನು ಖರ್ಚು ಮಾಡಲು ಮುಂದಾಗುವ ಮೊದಲು ಅದರ ಬಗ್ಗೆ ಜ್ಞಾನವನ್ನು ಹೊಂದಿರುವುದು ಉತ್ತಮ. ಚಿನ್ನದಂತಹ ಅಮೂಲ್ಯ ವಸ್ತು ಹಾಗೂ ಹೂಡಿಕೆಗೆ ಸಂಬಂಧಿಸಿದ ವಸ್ತುವನ್ನು ಖರೀದಿಸುವ ಮೊದಲು ನೀವು ಪರಿಶೀಲಿಸಬೇಕಾದ ವಿಷಯಗಳು ಇಲ್ಲಿವೆ.

1) ಮೊದಲನೆಯದು ಶುದ್ಧತೆ. ಬೆಂಗಳೂರಿನಲ್ಲಿ ಸಾಮಾನ್ಯವಾಗಿ ಮಾರಾಟವಾಗುವ ಆಭರಣಗಳು 22 ಕ್ಯಾರೆಟ್ ಚಿನ್ನದ ಆಭರಣ. ಬೆಂಗಳೂರಿನಲ್ಲಿ ಆ ದಿನದ ಚಿನ್ನದ ದರ ಎಷ್ಟಿದೆ ಎಂಬುದನ್ನು ಮೊದಲು ಗಮನದಲ್ಲಿಟ್ಟುಕೊಳ್ಳಬೇಕು. ಬೆಂಗಳೂರಿನಲ್ಲಿ ಚಿನ್ನದ ದರಗಳು ಪ್ರತಿದಿನ ಬದಲಾಗುತ್ತಿರುತ್ತವೆ. ನಿಖರವಾದ ಮಾಹಿತಿ ನೀಡುವ ವೆಬ್‌ಸೈಟ್ ಅನ್ನು ಅವಲಂಬಿಸುವುದು ಉತ್ತಮ.

2) ನೀವು ಖರೀದಿಸುವ ಆಭರಣಗಳ ಮೇಲಿರುವ ಬಿಐಎಸ್ ಹಾಲ್ಮಾರ್ಕ್ ಅನ್ನು ಪರಿಶೀಲಿಸುವುದು ಬಹಳ ಮುಖ್ಯ. ಚಿನ್ನಾಭರಣ ಖರೀದಿಸುವಾಗ BIS ಹಾಲ್‌ಮಾರ್ಕ್ ಅನ್ನು ಪಡೆಯಲಾಗಿದೆ ಎಂದು ಖಚಿತಪಡಿಸಿಕೊಳ್ಳಬೇಕು. ಭಾರತ ಸರ್ಕಾರವು ಚಿನ್ನವು ಅದರ ಮೇಲೆ ನಮೂದಿಸಲಾದ ಕ್ಯಾರಟ್‌ಗಳಷ್ಟೇ ಶುದ್ಧವಾಗಿದೆ ಎಂದು ಆ ಮೂಲಕ ಪ್ರಮಾಣೀಕರಿಸುತ್ತದೆ.

3) ಚಿನ್ನಾಭರಣಕ್ಕೆ ಮೇಕಿಂಗ್ ಚಾರ್ಜ್ ಮತ್ತು ವೇಸ್ಟೇಜ್ ಚಾರ್ಜ್ ಎಂದು ಇರುತ್ತದೆ. ಇದನ್ನು ಪ್ರತಿ ಆಭರಣ ವ್ಯಾಪಾರಿಯೂ ವಿಧಿಸುತ್ತಾರೆ. ನೀವು ಆಭರಣ ವ್ಯಾಪಾರಿಯನ್ನು ಈ ಬಗ್ಗೆ ಕೇಳಿ ಪರಿಶೀಲಿಸುವುದು ಉತ್ತಮ. ಎಲ್ಲಾ ಆಭರಣಗಳಿಗೆ ಮೇಕಿಂಗ್ ಅಥವಾ ವೇಸ್ಟೇಜ್ ಶುಲ್ಕಗಳು ಒಂದೇ ಆಗಿರುತ್ತವೆ ಎಂಬುದನ್ನು ಗಮನಿಸಿ. ಎಷ್ಟು ಶುಲ್ಕ ವಿಧಿಸಲಾಗಿದೆ ಎಂಬುದನ್ನು ದಯವಿಟ್ಟು ಖಚಿತಪಡಿಸಿಕೊಳ್ಳಿ.

4) ನೀವು ದುಬಾರಿ ವಹಿವಾಟು ಮಾಡುತ್ತಿರುವುದರಿಂದ ಚಿನ್ನಾಭರಣದ ಅಸಲಿತನ ಖಚಿತಪಡಿಸಿಕೊಳ್ಳುವುದು ಉತ್ತಮ. ಯಾಕೆಂದರೆ ನೀವು ಖರೀದಿಸುತ್ತಿರುವುದು ಬಹುಕಾಲ ಉಳಿಯುವ, ಹೂಡಿಕೆ ಎಂದು ಪರಿಗಣಿಸಬಹುದಾದ ವಸ್ತು. ಎಲ್ಲೇ ಆಗಲಿ ಚಿನ್ನ ಖರೀದಿಸುವ ಮುನ್ನ ಗುಣಮಟ್ಟದ ಬಗ್ಗೆ ಗಮನ ಹರಿಸಬೇಕು. ಕೆಲವು ದಶಕಗಳ ಹಿಂದೆ, ಚಿನ್ನವನ್ನು ಖರೀದಿಸುವಾಗ ಸುಲಭವಾಗಿ ಮೋಸ ಹೋಗಬಹುದಾಗಿತ್ತು. ಆದರೆ ಇಂದು ಹೆಚ್ಚಿನ ಚಿನ್ನವು ಹಾಲ್ಮಾರ್ಕ್ ಆಗಿದೆ. ಪ್ರತಿಷ್ಠಿತ ಅಂಗಡಿಗಳಲ್ಲಿ ಈ ಬಗ್ಗೆ ಹೆಚ್ಚಿನ ಎಚ್ಚರ ಇರುತ್ತದೆ.

Continue Reading

ದೇಶ

School Teacher: ಕಾರಿನ ಮೇಲೆ ಕಲ್ಲು ಎತ್ತಿ ಹಾಕಿ ಶಿಕ್ಷಕಿ ಪುಂಡಾಟ; ನೆರೆಮನೆಯವರ ಮೇಲೂ ಹಲ್ಲೆ

School teacher: ಸರ್ಕಾರಿ ಶಾಲೆ ಶಿಕ್ಷಕಿಯೊಬ್ಬಳು ನೆರೆಮನೆಯವರ ಕಾರಿನ ಮೇಲೆ ಕಲ್ಲು ಎತ್ತಿ ಹಾಕಿ ಕಿಟಕಿ ಗ್ಲಾಸ್‌ ಒಡೆದಿರುವ ಘಟನೆ ಉತ್ತರಪ್ರದೇಶದ ಬುಲಂದ್‌ಶಹರ್‌ನಲ್ಲಿ ನಡೆದಿದೆ. ಈ ಭೀಕರ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

VISTARANEWS.COM


on

By

Koo

ಉತ್ತರಪ್ರದೇಶ: ಸರ್ಕಾರಿ ಶಾಲೆ ಶಿಕ್ಷಕಿಯೊಬ್ಬಳು(School teacher) ನೆರೆಮನೆಯವರ ಕಾರಿನ ಮೇಲೆ ಕಲ್ಲು ಎತ್ತಿ ಹಾಕಿ ಕಿಟಕಿ ಗ್ಲಾಸ್‌ ಒಡೆದಿರುವ ಘಟನೆ ಉತ್ತರಪ್ರದೇಶದ ಬುಲಂದ್‌ಶಹರ್‌ನಲ್ಲಿ ನಡೆದಿದೆ. ಈ ಭೀಕರ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್‌(Viral Video) ಆಗಿದೆ. ಪಾರುಲ್‌ ಶರ್ಮಾ (Parul Sharma) ಎಂಬ ಶಿಕ್ಷಕಿ ಬೆಳಗ್ಗೆ 3 ಗಂಟೆ ಸುಮಾರಿಗೆ ಪ್ರಿಯಾ ಗೋಯಲ್‌ ಎಂಬಾಕೆಯ ಮನೆಯ ಕಾಂಪೌಂಡ್‌ ಒಳಗೆ ನುಗ್ಗಿ ತಾನು ತಂದಿದ್ದ ಬ್ಯಾಗ್‌ನಿಂದ ಇಟ್ಟಿಗೆ, ಕಲ್ಲುಗಳಿಂದ ಕಾರಿನ ವಿಂಡೋ ಗ್ಲಾಸ್‌ (Window glass) ಜಖಂಗೊಳಿಸಿದ್ದಾಳೆ. ಆಕ್ರೋಶದಿಂದ ಕಾರಿನ ಮೇಲೆ ಕಲ್ಲು ಎತ್ತಿ ಹಾಕುತ್ತಿರುವುದನ್ನು ವೈರಲ್‌ ಆಗಿರುವ ವಿಡಿಯೋದಲ್ಲಿ ಕಾಣಬಹುದಾಗಿದೆ. ಆಕೆ ಪಾರ್ಕಿಂಗ್‌ನಲ್ಲಿ ನಿಲ್ಲಿಸಲಾಗಿದ್ದ ಎಲ್ಲಾ ವಾಹನಗಳ ವಿಂಡೋ ಗ್ಲಾಸ್‌ಗಳನ್ನು ಪುಡಿಗಟ್ಟಿದ್ದಾಳೆ.

ಆಕೆಯ ಕೃತ್ಯ ಎಸಗುತ್ತಿದ್ದ ವೇಳೆ ಸದ್ದು ಕೇಳಿ ಎಚ್ಚರಗೊಂಡ ಪ್ರಿಯಾ ಗೋಯಲ್‌ ಹಾಗೂ ಆಕೆಯ ಕುಟುಂಬಸ್ಥರು ಪಾರುಲ್‌ಳನ್ನು ತಡೆಯಲು ಮುಂದಾಗಿದ್ದಾರೆ. ಆದರೂ ಅದನ್ನೂ ಲೆಕ್ಕಿಸದ ಪಾರುಲ್‌ ಪದೇ ಪದೇ ಕಲ್ಲಿನಿಂದ ಕಾರಿನ ಗ್ಲಾಸ್‌ ಪುಡಿ ಪುಡಿ ಮಾಡುತ್ತಿರುವುದು ವಿಡಿಯೋದಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ. ಮತ್ತೊಂದು ವಿಡಿಯೋ ಕ್ಲಿಪಿಂಗ್‌ನಲ್ಲಿ ಆಕೆಗೆ ತಾಯಿಯೂ ಜೊತೆಗಿರುವುದನ್ನು ಕಾಣಬಹುದಾಗಿದೆ. ಅಷ್ಟೇ ಅಲ್ಲದೇ ಪಾರುಲ್‌ ಮನೆಯ ಬಾಗಿಲು ಒಡೆಯಲು ಕೂಡ ಯತ್ನಿಸಿದ್ದಾಳೆ.

ಇದನ್ನೂ ಓದಿ: Lok Sabha election 2024: ದಿಲ್ಲಿಯಲ್ಲಿ ಆಪ್‌-ಕಾಂಗ್ರೆಸ್‌ ಮೈತ್ರಿಯಲ್ಲಿ ಒಡಕು; ರಾಜ್ಯಾಧ್ಯಕ್ಷ ರಾಜೀನಾಮೆ

ಇದೀಗ ಪಾರುಲ್‌ ಕೃತ್ಯದ ವಿರುದ್ಧ ಪ್ರಿಯಾ ಗೋಯಲ್‌ ಪೊಲೀಸರಿಗೆ ದೂರು ನೀಡಿದ್ದು, ಕಾರಿನ ಗ್ಲಾಸ್‌ ಪುಡಿ ಮಾಡಿರುವ ಪಾರುಲ್‌ ಮನೆಯ ಗೇಟ್‌ ಲಾಕ್‌ ಒಡೆದು ತಮ್ಮ ಮೂರು ವರ್ಷದ ಮಗು ಸೇರಿದಂತೆ ಇತರೆ ಕುಟುಂಬಸ್ಥರ ಮೇಲೆ ದಾಳಿ ನಡೆಸಿದ್ದಾಳೆ. ಘಟನೆಯಲ್ಲಿ ಮಗು ಗಾಯಗೊಂಡಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ಘಟನೆಗೆ ಸೂಕ್ತ ಕಾರಣ ಏನೆಂಬುದರ ಬಗ್ಗೆ ತನಿಖೆ ನಡೆಸುತ್ತಿದೆ. ಮೇಲ್ನೋಟಕ್ಕೆ ಎರಡೂ ಕುಟುಂಬಗಳು ಹಲವು ದಿನಗಳಿಂದ ವೈಷಮ್ಯ ಹೊಂದಿದ್ದು, ಅದರ ಪರಿಣಾಮವಾಗಿಯೇ ಈ ಕೃತ್ಯ ನಡೆಸಿರುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಹಿರಿಯ ಪೊಲೀಸ್‌ ಅಧಿಕಾರಿ ಶಂಕರ್‌ ಪ್ರಸಾದ್‌ ಮಾಹಿತಿ ಪ್ರಕಾರ ಸದ್ಯ ಬುಲಂದ್‌ಶೆಹರ್‌ನಲ್ಲಿ ಈ ವಿಡಿಯೋ ಬಹಳ ವೈರಲ್‌ ಆಗುತ್ತಿದ್ದು, ಪಾರುಲ್‌ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆಕೆ ವಿರುದ್ಧ ಅತಿಕ್ರಮಣ, ಆಸ್ತಿ-ಪಾಸ್ತಿ ನಾಶ ಮತ್ತು ಹಲ್ಲೆ ಪ್ರಕರಣ ದಾಖಲಿಸಲಾಗಿದೆ.

ಇತ್ತೀಚೆಗೆ ಲಕ್ನೋದ ಶಾಲೆಯಲ್ಲಿ ಮುಖ್ಯ ಶಿಕ್ಷಕಿಯೊಬ್ಬರು ಶಾಲೆಯಲ್ಲೇ ಫೇಶಿಯಲ್‌ ಮಾಡಿಕೊಳ್ಳುತ್ತಿದ್ದ ವಿಡಿಯೋ ಭಾರೀ ವೈರಲ್‌ ಆಗಿತ್ತು. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್‌ ಆಗ್ತಿದ್ದಂತೆ ವಿದ್ಯಾರ್ಥಿಗಳು ಪೋಷಕರು, ಜನಸಾಮಾನ್ಯರಿಂದ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ವಿದ್ಯಾರ್ಥಿಗಳಿಗೆ ಊಟ ತಯಾರಿಸುವ ಕೋಣೆಯಲ್ಲಿ ಫೇಶಿಯಲ್ ಮಾಡಿಕೊಳ್ಳುತ್ತಿರುವುದನ್ನು ಕಂಡು ಸಹಾಯಕ ಶಿಕ್ಷಕಿ ವಿಡಿಯೊ ಮಾಡಿದ್ದರು. ಇದರಿಂದ ಕೋಪಗೊಂಡ ಮುಖ್ಯ ಶಿಕ್ಷಕಿ ಅವರನ್ನು ಹಿಗ್ಗಾಮುಗ್ಗಾ  ಥಳಿಸಿ, ಆಕೆಯ ಕೈಯನ್ನು ಕಚ್ಚಿ ಗಾಯಗೊಳಿಸಿದ್ದರು.

Continue Reading

ವೈರಲ್ ನ್ಯೂಸ್

Viral Video: ವಧುವಿಗೆ ಹೂಮಾಲೆ ಹಾಕಲು ವರ ಮಾಡಿರುವ ಕಿತಾಪತಿ ಏನು ನೋಡಿ!

Viral Video: ಮದುವೆ ಸಮಾರಂಭಗಳಲ್ಲಿ ಒಂದಲ್ಲ ಒಂದು ಎಡವಟ್ಟು ನಡೆದೇ ನಡೆಯುತ್ತೆ. ಇದರಲ್ಲಿ ಕೆಲವು ಗಂಭೀರ ರೂಪ ತಾಳಿದರೆ, ಇನ್ನು ಕೆಲವು ಎಲ್ಲರ ನಗೆಪಾಟಲಿಗೆ ಗುರಿಯಾಗುತ್ತದೆ. ಇಲ್ಲಿ ಸಿಕ್ಕಿರುವ ವಿಡಿಯೋವೊಂದು ಎಲ್ಲರೂ ನಗುವಂತೆ ಮಾಡಿದೆ.

VISTARANEWS.COM


on

By

Viral Video
Koo

ಮದುವೆ (wedding) ಮಂಟಪ ಸುಂದರವಾಗಿ ಅಲಂಕಾರಗೊಂಡಿತ್ತು. ವಧು ವರರು ಇಬ್ಬರೂ ವೇದಿಕೆಯಲ್ಲಿ ನಿಂತು ಒಂದೊಂದೇ ಶಾಸ್ತ್ರಗಳನ್ನು ಮಾಡುತ್ತಿದ್ದರು. ಇನ್ನೇನು ಹೂವಿನ ಮಾಲೆ (flower garland) ವಿನಿಮಯ ಮಾಡಿಕೊಳ್ಳಬೇಕಿತ್ತು. ವರನು (groom) ವಧುವಿಗೆ (bride) ಹೂವಿನ ಮಾಲೆ ಹಾಕಲು ಅವರಿಗೆ ಕುಳಿತು ಕೊಳ್ಳಲು ಇಟ್ಟಿದ್ದ ಸಿಂಹಾಸನದಿಂದ ಜಿಗಿದಿದ್ದಾನೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral Video) ಆಗಿದ್ದು, ಎಲ್ಲರೂ ನಗುವಂತೆ ಮಾಡಿದೆ.

ಹಿಂದೂ ಸಂಪ್ರದಾಯದ ಮದುವೆಯಲ್ಲಿ ಹೂವಿನ ಮಾಲೆಯನ್ನು ಬದಲಾಯಿಸಿಕೊಳ್ಳುವ ಶಾಸ್ತ್ರವಿದೆ. ಈ ಸಂದರ್ಭದಲ್ಲಿ ವಧು ವರರು ಇಬ್ಬರಿಗೂ ಸಾಕಷ್ಟು ಸವಾಲುಗಳನ್ನು ಹತ್ತಿರದ ಸಂಬಂಧಿ, ಸ್ನೇಹಿತರು ತಂದೊಡ್ಡುತ್ತಾರೆ. ಅಂತೆಯೇ ಇಲ್ಲಿ ವಧು ಮತ್ತು ವರರು ಹೂವಿನ ಹಾರಗಳನ್ನು ವಿನಿಮಯ ಮಾಡಿಕೊಳ್ಳುವಾಗ ವಧುವಿನ ಕುಟುಂಬದವರು ವಧುವನ್ನು ಎತ್ತಿ ಹಿಡಿದು ವರನ ಮುಂದೆ ಸವಾಲು ಹಾಕಿದರು.

ಹಲವು ಬಾರಿ ವರ ಮಾಲೆ ಹಾಕಲು ಪ್ರಯತ್ನಿಸುತ್ತಾನೆ. ಆದರೆ ವಿಫಲನಾಗುತ್ತಾನೆ. ಕೊನೆಗೂ ವರನು ತನ್ನ ವಧುವನ್ನು ಗೆಲ್ಲುವ ಮಾರ್ಗವನ್ನು ಕಂಡುಕೊಂಡಿದ್ದಾನೆ. ಇದರ ವಿಡಿಯೋ ಎಕ್ಸ್ ನಲ್ಲಿ ಭಾರೀ ವೈರಲ್ ಆಗಿದ್ದು, ಇದಕ್ಕೆ ಸಾಕಷ್ಟು ಮಂದಿ ನೆಟ್ಟಿಗರು ಕಾಮೆಂಟ್ ಕೂಡ ಮಾಡಿದ್ದಾರೆ.

ಇದನ್ನೂ ಓದಿ: Viral News: ಸೈಕಲ್‌ ಸವಾರನಿಗೆ ಡಿಕ್ಕಿ ಹೊಡೆದು 2 ಕಿ.ಮೀ. ಎಳೆದೊಯ್ದ ಪಿಕ್‌ಅಪ್‌; ಶಾಕಿಂಗ್‌ ವಿಡಿಯೊ ಇಲ್ಲಿದೆ

ಏನಿದೆ ವಿಡಿಯೋದಲ್ಲಿ?

ಈ ವಿಡಿಯೋದಲ್ಲಿ ಸೆರೆಯಾಗಿರುವಂತೆ ವಧು ಈಗಾಗಲೇ ತನ್ನ ಗಂಡನ ಕುತ್ತಿಗೆಗೆ ಹೂವಿನ ಹಾರವನ್ನು ಹಾಕಿದ್ದಳು. ಈಗ ವರನ ಸರದಿ. ವಧುವಿನ ಸಂಬಂಧಿಗಳು ಅವಳನ್ನು ಎತ್ತಿ ಹಿಡಿದು ವರನಿಗೆ ಹೂಮಾಲೆ ಹಾಕುವ ಸವಾಲು ಹಾಕುತ್ತಾರೆ.


ವರನು ಮದುವೆಯ ಸಿಂಹಾಸನದ ಮೇಲೇರಿ ಜಿಗಿದ ಯಶಸ್ವಿಯಾಗಿ ವಧುವಿನ ಕುತ್ತಿಗೆಗೆ ಹಾರವನ್ನು ಹಾಕಿದನು. ವಧುವಿನ ಜೊತೆಗೆ ಸಂಬಂಧಿಕರು ತಮ್ಮ ಸಮತೋಲನವನ್ನು ಕಳೆದುಕೊಳ್ಳುತ್ತಾರೆ. ಪರಿಣಾಮವಾಗಿ ಎಲ್ಲರೂ ವೇದಿಕೆಯ ಮೇಲೆ ಬಿದ್ದರು. ಕೊನೆಯಲ್ಲಿ, ವರನು ಹೆಮ್ಮೆಯಿಂದ ನಿಂತಿರುವಾಗ ವಧು ನಕ್ಕಳು.

ಸರಿತಾ ಸರವಾಗ್ ಎಂಬವರು ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಇದಕ್ಕೆ ಸಾಕಷ್ಟು ನೆಟ್ಟಿಗರು ಕಾಮೆಂಟ್ ಕೂಡ ಮಾಡಿದ್ದು, ಸಾಕಷ್ಟು ಮಂದಿ ತಾವು ನೋಡಿರುವ, ಅನುಭವದ ಸಂಗತಿಗಳನ್ನು ಹಂಚಿಕೊಂಡಿದ್ದಾರೆ.

ಕಳೆದ ವರ್ಷ ಇದೇ ರೀತಿಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಹೂವಿನ ಮಾಲೆ ಹಾಕುವಾಗ ವರನ ತಂಡದ ವ್ಯಕ್ತಿಯೊಬ್ಬರು ಅವನನ್ನು ಮೇಲೆತ್ತುತ್ತಾನೆ. ಆಗ ಆತ ವಧುವಿನ ಮೇಲೆ ಬೀಳುವುದರಲ್ಲಿದ್ದ. ಆದರೆ ವಧುವಿನ ಸಮಯಪ್ರಜ್ಞೆಯಿಂದ ಘಟನೆಯು ದುರಂತ ತಿರುವು ಪಡೆಯುವುದು ತಪ್ಪಿತ್ತು.

Continue Reading
Advertisement
Priyanka Gandhi Rahul Gandhi
ದೇಶ12 mins ago

Lok Sabha Election 2024: ಅಮೇಥಿ, ರಾಯ್‌ಬರೇಲಿಗೆ ರಾಹುಲ್‌, ಪ್ರಿಯಾಂಕಾ ಫಿಕ್ಸ್‌? ಖರ್ಗೆ ನಿರ್ಧಾರ ಫೈನಲ್‌

Ranbir Kapoor stunned as photographer abuses in front of him
ಬಾಲಿವುಡ್19 mins ago

Ranbir Kapoor: ರಣಬೀರ್​ ಕಪೂರ್‌ಗೆ​ ಅಶ್ಲೀಲವಾಗಿ ಬೈಯ್ದ್ರಾ ಫೋಟೋಗ್ರಾಫರ್‌? ವಿಡಿಯೊದಲ್ಲಿ ಏನಿದೆ?

pralhad Joshi
ಪ್ರಮುಖ ಸುದ್ದಿ19 mins ago

Pralhad Joshi : ಬರ ಪರಿಹಾರ ವಿಚಾರದಲ್ಲಿ ಕಾಂಗ್ರೆಸ್​ನಿಂದ ನಾಟಕ; ಪ್ರಲ್ಹಾದ್ ಜೋಶಿ ಲೇವಡಿ

If Congress comes to power all your assets will belong to Government says PM Narendra Modi
Lok Sabha Election 202421 mins ago

Narendra Modi: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನೀವು ಕಷ್ಟಪಟ್ಟು ಸಂಪಾದಿಸಿದ ಆಸ್ತಿಯೆಲ್ಲ ಅನ್ಯರ ಪಾಲು: ಮೋದಿ ಎಚ್ಚರಿಕೆ

Congress ties with Aurangzeb supporters and Girls killed under his rule says Narendra Modi
Lok Sabha Election 202450 mins ago

Narendra Modi: ಔರಂಗಜೇಬ್ ಬೆಂಬಲಿಗರ ಜತೆ ಕಾಂಗ್ರೆಸ್ ದೋಸ್ತಿ; ಇವರ ಆಡಳಿತದಲ್ಲಿ ಹೆಣ್ಣು ಮಕ್ಕಳ ಹತ್ಯೆ: ಮೋದಿ ವಾಗ್ದಾಳಿ

Gold Rate
ಪ್ರಮುಖ ಸುದ್ದಿ1 hour ago

Gold Rate : ಏರುಗತಿಯಲ್ಲಿದೆ ಬಂಗಾರದ ಬೆಲೆ; ಇನ್ನೂ ಏರುವ ಮೊದಲು ಖರೀದಿ ಸೂಕ್ತ

ದೇಶ1 hour ago

School Teacher: ಕಾರಿನ ಮೇಲೆ ಕಲ್ಲು ಎತ್ತಿ ಹಾಕಿ ಶಿಕ್ಷಕಿ ಪುಂಡಾಟ; ನೆರೆಮನೆಯವರ ಮೇಲೂ ಹಲ್ಲೆ

Varalaxmi Sarathkumar negative comments on fiance
ಕಾಲಿವುಡ್1 hour ago

Varalaxmi Sarathkumar: ನನ್ನ ತಂದೆ ಎರಡು ಮದುವೆಯಾದರು, ಹಾಗೇ ನಾನೂ ಕೂಡ ಎಂದ ನಟ ಶರತ್‌ಕುಮಾರ್ ಪುತ್ರಿ!

Viral Video
ವೈರಲ್ ನ್ಯೂಸ್1 hour ago

Viral Video: ವಧುವಿಗೆ ಹೂಮಾಲೆ ಹಾಕಲು ವರ ಮಾಡಿರುವ ಕಿತಾಪತಿ ಏನು ನೋಡಿ!

Outdoor Exercise
ಆರೋಗ್ಯ1 hour ago

Outdoor Exercise: ಹೊರಾಂಗಣ ವ್ಯಾಯಾಮ ಖಿನ್ನತೆಯನ್ನು ದೂರ ಮಾಡುವುದೇ?

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

If Congress comes to power all your assets will belong to Government says PM Narendra Modi
Lok Sabha Election 202421 mins ago

Narendra Modi: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನೀವು ಕಷ್ಟಪಟ್ಟು ಸಂಪಾದಿಸಿದ ಆಸ್ತಿಯೆಲ್ಲ ಅನ್ಯರ ಪಾಲು: ಮೋದಿ ಎಚ್ಚರಿಕೆ

Congress ties with Aurangzeb supporters and Girls killed under his rule says Narendra Modi
Lok Sabha Election 202450 mins ago

Narendra Modi: ಔರಂಗಜೇಬ್ ಬೆಂಬಲಿಗರ ಜತೆ ಕಾಂಗ್ರೆಸ್ ದೋಸ್ತಿ; ಇವರ ಆಡಳಿತದಲ್ಲಿ ಹೆಣ್ಣು ಮಕ್ಕಳ ಹತ್ಯೆ: ಮೋದಿ ವಾಗ್ದಾಳಿ

Modi in Karnataka stay in Belagavi tomorrow and Huge gatherings at five places
ಪ್ರಮುಖ ಸುದ್ದಿ4 hours ago

Narendra Modi Live : ಪ್ರಧಾನಿ ಮೋದಿಯ ಬೆಳಗಾವಿ ಪ್ರಚಾರ ಸಭೆಯ ನೇರ ಪ್ರಸಾರವನ್ನು ಇಲ್ಲಿ ವೀಕ್ಷಿಸಿ…

Dina Bhavishya
ಭವಿಷ್ಯ8 hours ago

Dina Bhavishya : ಈ ರಾಶಿಯವರಿಗೆ ದಿನದ ಮಟ್ಟಿಗೆ ಖರ್ಚು ಹೆಚ್ಚು

Lok sabha election 2024
Lok Sabha Election 202420 hours ago

Lok Sabha Election 2024 : ಮೊಬೈಲ್ ನಿಷೇಧದ ನಡುವೆಯೂ ವೋಟ್‌ ಹಾಕಿದ ವಿಡಿಯೊ ಮಾಡಿದ ಪುಂಡರು

road Accident in kolar evm
ಕೋಲಾರ1 day ago

Road Accident : ಇವಿಎಂ ಸಾಗಿಸುವಾಗ ವಾಹನದ ಟೈರ್‌ ಸ್ಫೋಟ; ರೋಡ್‌ನಲ್ಲೇ ರಿಪೇರಿ, ಮೊಕ್ಕಾಂ ಹೂಡಿದ ಪೊಲೀಸರು

Dina Bhavishya
ಭವಿಷ್ಯ1 day ago

Dina Bhavishya : ಈ ದಿನ ನಿಮ್ಮ ಪ್ರೀತಿಯ ಕನಸು ನನಸಾಗುವ ಸುದಿನ

Lok Sabha Election 2024 congress booth agent allegation for Fake voting in Hassan Lok Sabha constituency
ಹಾಸನ2 days ago

Lok Sabha Election 2024: ಹಾಸನ ಲೋಕಸಭಾ ಕ್ಷೇತ್ರದಲ್ಲಿ ನಕಲಿ ಮತದಾನ! ಏನಿದು ಕಾಂಗ್ರೆಸ್‌ ಬೂತ್‌ ಏಜೆಂಟ್‌ ಆರೋಪ?

Lok Sabha Election 2024 Woman suffers cardiac arrest at polling booth Doctor who came to cast his vote saved life
Lok Sabha Election 20242 days ago

Lok Sabha Election 2024: ಮತಗಟ್ಟೆಯಲ್ಲಿ ಮಹಿಳೆಗೆ ಹೃದಯ ಸ್ತಂಭನ; ಮತ ಹಾಕಲು ಬಂದಿದ್ದ ವೈದ್ಯನಿಂದ ಪ್ರಾಣ ರಕ್ಷಣೆ

Lok Sabha Election 2024 Youth Congress protest
Lok Sabha Election 20242 days ago

Lok Sabha Election 2024 : ಮತಗಟ್ಟೆ ಬಳಿ ಚೆಂಬು, ಗ್ಯಾಸ್ ಸಿಲಿಂಡರ್ ಪ್ರದರ್ಶಿಸಿದ ಯೂತ್‌ ಕಾಂಗ್ರೆಸ್‌

ಟ್ರೆಂಡಿಂಗ್‌