Prerane | ನಿಂದಕರ ಕಡೆಗಣಿಸೋಣ, ನಿಜ ಬದುಕ ಬದುಕೋಣ - Vistara News

ಧಾರ್ಮಿಕ

Prerane | ನಿಂದಕರ ಕಡೆಗಣಿಸೋಣ, ನಿಜ ಬದುಕ ಬದುಕೋಣ

“ಪ್ರೇರಣೆʼʼ (Prerane) ಇದು ಧಾರ್ಮಿಕ ಮತ್ತು ಆಧ್ಯಾತ್ಮಿಕ ಚಿಂತನೆಗಳನ್ನು ಬಿತ್ತುವ ಬೆಳಗಿನ ಹೊಳಹು. ಪ್ರತಿ ನಿತ್ಯ ಧಾರ್ಮಿಕ ಚಿಂತಕರು, ಪ್ರವಚನಕಾರರು, ಆಧ್ಯಾತ್ಮ ಚಿಂತಕರು ಇಲ್ಲಿ ಬರೆಯುತ್ತಿದ್ದಾರೆ. ನಿಂದಕರ ಬಗ್ಗೆ ಬುದ್ಧ ಏನು ಹೇಳಿದ್ದ ಎಂಬ ವಿವರ ಇಲ್ಲಿದೆ.

VISTARANEWS.COM


on

Prerane
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo
Prerane

ಟಿ.ಆರ್‌. ಪ್ರೇಮ, ತುಮಕೂರು
ಎಷ್ಟೋ ಸಲ ನಮ್ಮಷ್ಟಕ್ಕೆ ನಾವಿದ್ದರೂ ಸದಾ ಒಳ್ಳೆಯದನ್ನೇ ಮಾಡುತ್ತಲಿದ್ದರೂ ನಮ್ಮ ಬಗ್ಗೆ ಆಡಿಕೊಳ್ಳುವ ಜನರಿರುತ್ತಾರೆ. ನಮ್ಮ ಬೆಳವಣಿಗೆ ಸಹಿಸಿಕೊಳ್ಳದೆಯೋ ಅಥವಾ ನಮ್ಮ ಬಗೆಗಿನ ತಪ್ಪು ಕಲ್ಪನೆಯಿಂದಲೋ ಜನರು ನಿಂದೆಯ ನುಡಿಗಳನ್ನು ಆಡಿದಾಗ ಸಹಜವಾಗಿಯೇ ಖಿನ್ನರಾಗುತ್ತೇವೆ. ಎಷ್ಟೋ ಸಲ ನಮ್ಮನ್ನು ನೋಯಿಸುವವರಿಗೆ ಪ್ರತಿಯಾಗಿ ಮಾತಿನಿಂದ ಉತ್ತರಿಸಬೇಕೆ ಅಥವಾ ಮಾಡುವ ಕೆಲಸವನ್ನೇ ನಿಲ್ಲಿಸಬೇಕೆ, ಗೊತ್ತಾಗುವುದಿಲ್ಲ.

ಭಗವಾನ್ ಬುದ್ಧ ತಮ್ಮ ಸಿದ್ದಾಂತಗಳ ಜೊತೆಗೆ ಅಪಾರ ಜ್ಞಾನವನ್ನು ಇತರರಿಗೆ ಧಾರೆ ಎರೆಯುವುದರ ಮೂಲಕ “ಲೋಕಗುರು’ ಎನಿಸಿಕೊಂಡವರು. ಅವರ ಬಳಿ ಸಮಸ್ಯೆಗೆ ಪರಿಹಾರ ಕೇಳಿಕೊಂಡು ಸಾವಿರಾರು ಜನರು ಬರುತ್ತಿದ್ದರು. ಹಾಗೆ ಬಂದವರಿಗೆ ಸಮಾಧಾನವಾಗುವ ಹಾಗೆ ಉಪದೇಶಿಸಿಸುವುದು ಅವರ ನಿತ್ಯದ ಕಾಯಕವಾಗಿತ್ತು. ಒಮ್ಮೆ ಅವರ ಬಳಿ ಸಮಸ್ಯೆಗೆ ಪರಿಹಾರ ಕೇಳಿಕೊಂಡು ಬಂದ ವ್ಯಕ್ತಿಯೋರ್ವನಿಗೆ ಬುದ್ಧ ಸೂಚಿಸಿದ ಪರಿಹಾರವು ಸರಿ ಕಾಣಲಿಲ್ಲ. ಆತ ಬುದ್ಧನನ್ನೇ ಪ್ರಶ್ನಿಸಲು ಆರಂಭಿಸಿದ; “ನಿನ್ನಷ್ಟಕ್ಕೆ ನೀನು ದೊಡ್ಡ ಜ್ಞಾನಿ ಎಂದುಕೊಂಡು ಬಿಟ್ಟಿದ್ದೀಯಾ? ಉಪದೇಶದ ಹೆಸರಲ್ಲಿ ಅಮಾಯಕರ ಹಾದಿ ತಪ್ಪಿಸುತ್ತಿದ್ದೀಯಾ?” ಹೀಗೆ ಬಗೆ ಬಗೆಯಾಗಿ ನಿಂದಿಸಲು ಆರಂಭಿಸಿದ.

ಗೌತಮ ಬುದ್ಧ ಕಿಂಚಿತ್ತೂ ವಿಚಲಿತರಾಗದೆ ಆತ ಹೇಳುತ್ತಿರುವುದನ್ನೆಲ್ಲ ಶಾಂತಚಿತ್ತದಿಂದ ಕೇಳಿಸಿಕೊಳ್ಳುತ್ತಿದ್ದರು. ಆ ವ್ಯಕ್ತಿ ತನ್ನ ಮಾತನ್ನು ಮುಂದುವರಿಸಿದ; “ನೀನು ಹೇಳುತ್ತಿರುವುದೆಲ್ಲ ಸುಳ್ಳು, ಇದನ್ನೆಲ್ಲ ನಂಬಿದರೆ ಅಧೋಗತಿಯೇ ಸರಿ” ಎಂದೆಲ್ಲ ಹೇಳುತ್ತ ಬುದ್ಧರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ. ಅಲ್ಲಿದ್ದ ಜನರಿಗೆಲ್ಲ ಗಾಬರಿಯಾಯಿತು. ಈ ವ್ಯಕ್ತಿ ಯಾರು? ಯಾಕೆ ಹೀಗೆ ಹೇಳುತ್ತಿದ್ದಾನೆ, ಏನು ಅನರ್ಥವಾಗುತ್ತಿದೆ, ಒಂದೂ ತೋಚಲಿಲ್ಲ. ಆ ವ್ಯಕ್ತಿ ತನ್ನ ಮಾತುಗಳನ್ನು ಮುಗಿಸುವವರೆಗೂ ಭಗವಾನ್ ಬುದ್ಧ ಅತ್ಯಂತ ಶಾಂತರಾಗಿಯೇ ಇದ್ದರು.

ಸ್ವಲ್ಪ ಹೊತ್ತಾದ ಮೇಲೆ ಆ ವ್ಯಕ್ತಿ ತಾನು ಹೇಳಬೇಕೆಂದುಕೊಂಡಿದ್ದನ್ನೆಲ್ಲ ಹೇಳಿ ಮುಗಿಸಿದ. ಈಗ ಮಾತನಾಡುವ ಸರದಿ ಬುದ್ಧರದಾಗಿತ್ತು. ನೀವ್ಯಾರೊ ನನಗೆ ತಿಳಿಯದು. ನನ್ನ ಜ್ಞಾನ ಹಾಗೂ ಅನುಭವದ ಮಿತಿಯಲ್ಲಿ ನಾನು ಉಪದೇಶಿಸಿದ್ದೇನೆ. ಅದನ್ನು ಸ್ವೀಕರಿಸುವುದು ಬಿಡುವುದು ನಿಮಗೆ ಬಿಟ್ಟಿದ್ದು, ಕೊಟ್ಟಿದ್ದನ್ನೆಲ್ಲ ತೆಗೆದುಕೊಳ್ಳಲೇ ಬೇಕೆಂದೇ ನೂ ಇಲ್ಲ. ಒಂದು ವೇಳೆ ನೀವು ಯಾರಿಗಾದರೂ ಉಡುಗೊರೆ ಕೊಡಲು ಹೋದಾಗ ಸ್ವೀಕರಿಸಬೇಕಿದ್ದ ವ್ಯಕ್ತಿ ಅದನ್ನು ಸ್ವೀಕರಿಸದೇ ಹೋದರೆ ಆ ಉಡುಗೊರೆ ಯಾರ ಬಳಿ ಉಳಿಯುತ್ತದೆ ಹೇಳಿ ಎಂದರು.

ಆ ವ್ಯಕ್ತಿ ಗಲಿಬಿಲಿಯಾದ; ಅದು ನನ್ನ ಬಳಿಯೇ ಉಳಿದುಕೊಳ್ಳುತ್ತದೆ ಎಂದ. ಹಾಗೆಯೇ ಈ ಮಾತುಕತೆ ವಿಷಯದಲ್ಲೂ ಆಗುತ್ತದೆ. ನಿಮಗೆ ನನ್ನ ಮಾತು ಹಿಡಿಸಲಿಲ್ಲವೆಂದರೆ ಸ್ವೀಕರಿಸಬೇಡಿ, ಅದು ನನ್ನಲ್ಲೇ ಉಳಿದುಕೊಳ್ಳುತ್ತದೆಯಷ್ಟೆ, ಹಾಗೆಯೇ ನೀವು ಇಷ್ಟು ಹೊತ್ತು ಆಡಿದ ನಿಂದನೆಯ ನುಡಿಗಳನ್ನು ನಾನು ಸ್ವೀಕರಿಸಿಲ್ಲ. ಅದು ನಿಮ್ಮ ಬಳಿಯೇ ಉಳಿದುಕೊಳ್ಳುತ್ತದೆ ಎಂದು ಮುಗುಳ್ನಗುತ್ತಾ ಉತ್ತರಿಸಿ ಬುದ್ಧ ಮೌನಿಯಾದರು. ಆ ವ್ಯಕ್ತಿಗೆ ಬುದ್ಧರು ಮಹಾತ್ಮರೆಂಬ ಅರಿವಾಯಿತು.

ಎಷ್ಟೋ ಸಲ ನಿಂದನೆಯ ನುಡಿಗಳನ್ನು ಕೇಳಿದಾಗ ನಾವು ವಿಚಲಿತರಾಗುತ್ತೇವೆ. ಅದನ್ನೇ ತಲೆಯಲ್ಲಿ ಇಟ್ಟುಕೊಂಡು ಕೊರಗುತ್ತೇವೆ. ಪ್ರತಿಯಾಗಿ ಮಾತನಾಡಲು ಹೋಗಿ ಕೆಟ್ಟವರಾಗುತ್ತೇವೆ. ‘ನಮ್ಮ ನಡೆ ಸರಿಯಿದೆ’ ಎಂಬುದರ ಖಾತ್ರಿ ನಮಗಿದ್ದಾಗ ಯಾರ ನಿಂದನೆಗಳನ್ನೂ ನಾವು ಸ್ವೀಕರಿಸಬೇಕಾಗಿಯೇ ಇಲ್ಲ. ಆಗ ಅದು ಅವರ ಬಳಿಯೇ ಉಳಿದು ಕೊಂಡ ಹಾಗಾಗುತ್ತದೆ. ಆಡಿಕೊಳ್ಳುವವರು ಸ್ವಲ್ಪಕಾಲ ಆಡಿಕೊಂಡು ಸುಮ್ಮನಾಗುತ್ತಾರೆ.

ನಮಗೆ ತೊಂದರೆ ಕೊಟ್ಟವರನ್ನೆಂದೂ ಮರೆಯಬಾರದು, ನಾವು ಗಟ್ಟಿಯಾಗಿ ನಿಲ್ಲಲು ಸಾಧ್ಯವಾಗಿದ್ದೇ ಅವರಿಂದ, ಅವರಿಗೊಂದು ಧನ್ಯವಾದವಿರಲಿ!

ಇದನ್ನೂ ಓದಿ | Prerane | ಸದ್ಗುರುವಿನ ಕೃಪೆಯಿಂದ ದೊರೆಯಲಿದೆ ಮೋಕ್ಷವೆಂಬ ಮಹಾಫಲ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಧಾರ್ಮಿಕ

Bakrid 2024: ತ್ಯಾಗ, ಬಲಿದಾನವನ್ನು ಸ್ಮರಿಸುವ ಈದುಲ್ ಅಝ್ಹಾ

Bakrid 2024: ಹಝ್ರತ್ ಇಬ್ರಾಹಿಂ ಅವರಿಗೆ ಖಲೀಲುಲ್ಲಾಹ್ ಅಲ್ಲಾಹನ ಸ್ನೇಹಿತ ಎಂಬ ಗೌರವ ಪದವಿಯನ್ನು ನೀಡಿ ಗೌರವಿಸುತ್ತಾನೆ. ಪ್ರವಾದಿ ಇಬ್ರಾಹಿಂ ಅವರ ಜೀವನ ಬದುಕು ಇತಿಹಾಸವನ್ನು ನೆನಪಿಸುವುದೇ ಹಜ್ ಬಕ್ರೀದ್‌ ಆಚರಣೆಯ ಉದ್ದೇಶ.

VISTARANEWS.COM


on

bakrid 2024
Koo

:: ಹಾಶಿಂ ಬನ್ನೂರು

ಮುಸ್ಲಿಮರು (Muslim) ಆಚರಿಸುವ ಹಬ್ಬಗಳ ಪೈಕಿ ಈದುಲ್ ಅಝ್ಹಾ (Eid UL Adha- Bakrid 2024) ಹಬ್ಬವು ಒಂದು. ಇದು ಬಹಳ ವಿಶೇಷತೆಯನ್ನು ಹೊಂದಿದೆ. ಜಾಗತಿಕ ವಲಯದಲ್ಲಿ ಸರ್ವ ಮುಸಲ್ಮಾನರು ಎಲ್ಲಾ ಹಬ್ಬಗಳ ಹಾಗೆ ಈ ಹಬ್ಬವನ್ನು ಬಹಳ ವಿಜೃಂಭಣೆಯಿಂದ ಆಚರಿಸುತ್ತಾರೆ. ಇದು ತ್ಯಾಗ ಮತ್ತು ಬಲಿದಾನ ಸಾವಿರಾರು ಹಿಂದಿನ ಐತಿಹಾಸಿಕ ಚಾರಿತ್ರಿಕ ಘಟನೆಯನ್ನು ಸ್ಮರಿಸುವ ಹಬ್ಬ. ಈ ಕುರಿತಾದ ಚರಿತ್ರೆಗಳು ಮತ್ತು ನೈಜ ಘಟನೆಗಳು ಖುರ್ ಆನ್ (Quran) ಹಾಗೂ ಇಸ್ಲಾಮಿನ ಧಾರ್ಮಿಕ ಗ್ರಂಥದಲ್ಲಿ ಪುರಾವೆ ಸಮೇತ ಉಲ್ಲೇಖವಿದೆ.

ಇಸ್ಲಾಮಿಕ್ ಕ್ಯಾಲೆಂಡರ್ ಪ್ರಕಾರ ಅರೇಬಿಕ್ ತಿಂಗಳ ಕೊನೇಯ ತಿಂಗಳ ಝುಲ್ ಹಿಜ್ಜ ಬಹಳ ಪವಿತ್ರ ತಿಂಗಳು. ಆರೋಗ್ಯ, ಸಂಪತ್ತು, ಸೌಕರ್ಯ ಹೊಂದಿ ಜವಾಬ್ದಾರಿ ಮುಕ್ತನಾಗಿರುವ ಮುಸ್ಲಿಂ ವ್ಯಕ್ತಿಯ ಮೇಲೆ ಇಸ್ಲಾಮಿನ ಐದು ಪಂಚ ಕರ್ಮಗಳಲ್ಲಿ ಒಂದಾದ ಹಜ್ ಕಡ್ಡಾಯವಾಗಿದೆ. ಅದರ ನಿರ್ವಹಣೆಗಿರುವ ಸಮಯ ಮತ್ತು ತಿಂಗಳು ಇದೇ ಝುಲ್ ಹಜ್ ಆಗಿರುತ್ತದೆ.

ಆಧ್ಯಾತ್ಮಿಕ ಶುದ್ಧೀಕರಣದೊಂದಿಗೆ ಮೆಕ್ಕಾದಲ್ಲಿರುವ ಪವಿತ್ರ್ ಭವನ ಕಅಬಾಗೆ ತೆರಳಿ ಕಅಬಾ ಭವನಕ್ಕೆ ಪ್ರದಕ್ಷಿಣೆ, ಸಫಾ ಮರ್ವಾ ಬೆಟ್ಟಗಳ ಮಧ್ಯೆ ನಡೆಯುವುದು, ಮಿನಾದಲ್ಲಿ ತಂಗುವುದು, ಅರಫಾ ಮೈದಾನಕ್ಕೆ ತೆರಳುವುದು, ಮುಝ್ದಲಿಫಾದಲ್ಲಿ ಇರುವುದು, ಜಮ್ರಾದಲ್ಲಿ ಕಲ್ಲೆಸೆಯುವುದು, ಮತ್ತೆ ಮಿನಾದಲ್ಲಿ ತಂಗಿ ಬಲಿ ನೀಡುವುದು ಈ ರೀತಿ ಕೆಲವೊಂದು ಕರ್ಮಗಳನ್ನು ಒಳಗೊಂಡ ಮಕ್ಕಾ ಪುಣ್ಯ ಯಾತ್ರೆಗೆ ಹಜ್ ಎಂದು ಕರೆಯುತ್ತೇವೆ. ಹಜ್ ನಂತೆಯೇ ಉಮ್ರಾ ಕೂಡ ಇದೇ ಕರ್ಮಗಳನ್ನು ಒಳಗೊಂಡಿವೆ. ಆದರೆ ಹಜ್ ವರ್ಷಕ್ಕೆ ಒಂದು ಬಾರಿ ಝುಲ್ ಹಿಜ್ಜ ತಿಂಗಳಲ್ಲಿ ಮಾತ್ರ. ಉಮ್ರಾ ವರ್ಷದ ಎಲ್ಲಾ ದಿನವು ಮಾಡಬಹುದಾಗಿದೆ.

ಧರ್ಮ ಪ್ರಚಾರ

ಇಸ್ಲಾಂ ದರ್ಮದ ಪ್ರಚಾರಕರಾಗಿ ಆಯುಕ್ತರಾಗಿದ್ದ ಒಂದು ಲಕ್ಷಕ್ಕಿಂತಲೂ ಅಧಿಕ ಪ್ರವಾದಿಗಳ ಪೈಕಿ ಅಲ್ಲಾಹನ ಇಷ್ಟ ದಾಸರಾಗಿ ವಿಶೇಷ ಸ್ಥಾನಮಾನ ಪಡೆದ ಮಹಾನರಾಗಿದ್ದರು ಹಜ್ರತ್ ಇಬ್ರಾಹಿಮ್ ಅಲೈಹಿಸ್ಸಲಾಮ್, ಅವರು ಪ್ರವಾದಿಯಾದ ಬಳಿಕ, ಧರ್ಮ ಪ್ರಚಾರಕ್ಕಿಳಿಯುತ್ತಾರೆ. ಈ ವೇಳೆ ದೇವರು ಇಬ್ರಾಹಿಮ್ ಅವರನ್ನು ಹಲವಾರು ಪರೀಕ್ಷೆಗಳಿಗೆ ಒಳಪಡಿಸುತ್ತಾನೆ. ಏಕದೇವ ವಿಶ್ವಾಸದ ಅನುಷ್ಠಾನಕ್ಕಾಗಿ ಸ್ವಂತ ಹೆತ್ತವರು, ಕುಟುಂಬ, ಮನೆ, ಆಸ್ತಿ, ಊರು ಎಲ್ಲವನ್ನೂ ತ್ಯಾಗ ಮಾಡಿ ದೇಶಾಂತರ ಹೊರಟು, ಸಂತಾನ ಭಾಗ್ಯ ಇಲ್ಲದೆ ಕೊರಗುತ್ತಿದ್ದ ಪ್ರವಾದಿ ಇಬ್ರಾಹಿಂ ಮತ್ತು ಹಾಜರ ಬೀವಿ ಅವರಿಗೆ ಪವಾಡದಂತೆ ವೃದ್ಧಾಪ್ಯದಲ್ಲಿ ಲಭಿಸಿದ ಗಂಡು ಮಗು ಇಸ್ಮಾಯಿಲ್ ಸ್ವಂತ ಮಗನನ್ನೂ ದೇವರ ಆದೇಶದಂತೆ ಬಲಿ ಕೊಡಲು ಮುಂದಾಗುತ್ತಾರೆ. ನಿರ್ಜಲ, ನಿರ್ಜನ ಮರುಭೂಮಿಯಲ್ಲಿ ಪುಟ್ಟ ಮಗುವನ್ನು ಮಡದಿಯನ್ನು ಏಕಾಂಗಿಯಾಗಿ ಬಿಟ್ಟು ಬಿಡುತ್ತಾರೆ.

ಅಲ್ಲಾಹನ ಎಲ್ಲಾ ಆಜ್ಞೆಗಳನ್ನು ಈಡೇರಿಸಿ ಪರೀಕ್ಷೆಗಳನ್ನು ಎದುರಿಸಿ ದೇವ ಪ್ರೀತಿಗೆ ಪಾತ್ರರಾಗಿ ಪ್ರವಾದಿ ಇಬ್ರಾಹಿಂ ಮತ್ತು ಮಡದಿ ಹಾಜರ ಮಗ ಇಸ್ಮಾಯಿಲ್ ತ್ಯಾಗ ಮತ್ತು ಅಛಲ ವಿಶ್ವಾಸ ಸ್ನೇಹ ನಂಬಿಕೆಯ ಬದುಕನ್ನು ರೂಪಿಸಿಕೊಳ್ಳುತ್ತಾರೆ. ಪ್ರವಾದಿ ಇಬ್ರಾಹಿಂ ಅವರ ನಂತರ ತಮ್ಮ ಮಗ ಇಸ್ಮಾಯಿಲ್ ಪ್ರವಾದಿ ಪಟ್ಟವನ್ನು ಸ್ವೀಕರಿಸುತ್ತಾರೆ. ಹಝ್ರತ್ ಇಬ್ರಾಹಿಂ ಅವರಿಗೆ ಖಲೀಲುಲ್ಲಾಹ್ ಅಲ್ಲಾಹನ ಸ್ನೇಹಿತ ಎಂಬ ಗೌರವ ಪದವಿಯನ್ನು ನೀಡಿ ಗೌರವಿಸುತ್ತಾನೆ. ಪ್ರವಾದಿ ಇಬ್ರಾಹಿಂ ಅವರ ಜೀವನ ಬದುಕು ಇತಿಹಾಸವನ್ನು ನೆನಪಿಸುವುದೇ ಹಜ್ ಬಕ್ರೀದ್‌ ಆಚರಣೆಯ ಉದ್ದೇಶ.

ಇದನ್ನೂ ಓದಿ:Govt Holidays : 2024ರಲ್ಲಿ ಸರ್ಕಾರಿ ನೌಕರರಿಗೆ ಭರ್ಜರಿ ರಜೆ; ಇಲ್ಲಿದೆ ಸರ್ಕಾರಿ ರಜೆಗಳ ಪಟ್ಟಿ

Continue Reading

ಧಾರ್ಮಿಕ

Temple Bell: ದೇವಾಲಯದಿಂದ ಹಿಂತಿರುಗುವಾಗ ಗಂಟೆ ಬಾರಿಸಲೇಬಾರದು ಯಾಕೆ ಗೊತ್ತೇ?

ದೇವರ ಆರಾಧನೆಗೆ ಪ್ರತಿಯೊಂದು ಧರ್ಮದಲ್ಲೂ ಹಲವಾರು ನಿಯಮಗಳಿವೆ. ಅಂತಹ ಒಂದು ನಿಯಮ ಹಿಂದೂ ಧರ್ಮದಲ್ಲಿ ಇರುವುದು ದೇವಾಲಯದಿಂದ ಹಿಂದಿರುಗುವಾಗ ಗಂಟೆ ಬಾರಿಸಬಾರದು ಎಂಬುದಾಗಿದೆ. ಇದು ಯಾಕೆ, ಗಂಟೆ ಬಾರಿಸುವುದರಿಂದ ಏನು ಪ್ರಯೋಜನ, ಗಂಟೆಯನ್ನು (Temple Bell) ಯಾವಾಗ ಬಾರಿಸಬೇಕು ಎನ್ನುವ ಸಂಪೂರ್ಣ ಮಾಹಿತಿ ಇಲ್ಲಿದೆ.

VISTARANEWS.COM


on

By

Temple Bell
Koo

ಹಿಂದೂ ಧರ್ಮದಲ್ಲಿ (hindu dharma) ಪ್ರತಿಯೊಂದು ಆರಾಧನೆಗೂ (worship) ನಿಯಮ ಮತ್ತು ನಿಬಂಧನೆಗಳಿವೆ. ಅದರಲ್ಲೂ ಪೂಜೆಯ (puje) ವೇಳೆ, ದೇವಾಲಯದ (temple) ಒಳಗೆ ಕಟ್ಟುನಿಟ್ಟಾಗಿ ಈ ನಿಯಮಗಳನ್ನು ಪಾಲಿಸುವುದರಿಂದ ನಾವು ಸಾಕಷ್ಟು ಪ್ರಯೋಜನವನ್ನು ಪಡೆಯಬಹುದು. ಈ ನಿಯಮಗಳಲ್ಲಿ ಒಂದು ಪೂಜೆಗಾಗಿ ದೇವಾಲಯವನ್ನು ಪ್ರವೇಶಿಸುವಾಗ ಗಂಟೆ (Temple Bell) ಬಾರಿಸುವುದು.

ಪ್ರತಿ ಹಿಂದೂ ದೇವಾಲಯದಲ್ಲೂ ಗಂಟೆ ಇರುತ್ತದೆ. ಜನರು ದೇವಸ್ಥಾನಕ್ಕೆ ಹೋದಾಗ ಮತ್ತು ಅಲ್ಲಿಂದ ಹಿಂತಿರುಗಿದಾಗ ಅವರು ಗಂಟೆಯನ್ನು ಬಾರಿಸುತ್ತಾರೆ. ಆದರೆ ದೇವಸ್ಥಾನದಿಂದ ಹಿಂತಿರುಗುವಾಗ ಗಂಟೆ ಬಾರಿಸಬಾರದು ಎಂಬುದು ನಿಮಗೆ ತಿಳಿದಿದೆಯೇ?

ದೇವಸ್ಥಾನದಿಂದ ಹಿಂದಿರುಗುವಾಗ ಗಂಟೆ ಏಕೆ ಬಾರಿಸಬಾರದು ಎಂಬುದು ಹೆಚ್ಚಿನವರಿಗೆ ಗೊತ್ತಿಲ್ಲ. ಈ ನಿಯಮದ ಹಿಂದೆ ಬಹು ಮಹತ್ವದ ಕಾರಣವಿದೆ.


ದೇವಸ್ಥಾನಗಳಲ್ಲಿ ಗಂಟೆ ಏಕೆ ಬಾರಿಸುತ್ತೇವೆ?

ಶಬ್ದವು ಶಕ್ತಿಗೆ ಸಂಬಂಧಿಸಿದೆ. ನಾವು ದೇವಸ್ಥಾನದ ಗಂಟೆಯನ್ನು ಬಾರಿಸಿದಾಗ ಗಂಟೆ ಬಾರಿಸುವ ವ್ಯಕ್ತಿಗೆ ಧನಾತ್ಮಕ ಶಕ್ತಿಯು ಹರಡುತ್ತದೆ ಮತ್ತು ಸುತ್ತಮುತ್ತಲಿನ ಜನರ ಮೇಲೆ ಅದು ಪರಿಣಾಮ ಬೀರುತ್ತದೆ ಎಂದು ನಂಬಲಾಗುತ್ತದೆ.
ಶಾಸ್ತ್ರ, ಸ್ಕಂದ ಪುರಾಣದಲ್ಲಿ ನಾವು ದೇವಾಲಯದ ಗಂಟೆಯನ್ನು ಬಾರಿಸಿದಾಗ ಅದು ‘ಓಂ’ ಶಬ್ದವನ್ನು ಹೋಲುತ್ತದೆ ಎಂದು ಉಲ್ಲೇಖಿಸಲಾಗಿದೆ. ‘ಓಂ’ ಶಬ್ದವು ಶುದ್ಧ, ಪವಿತ್ರ ಮತ್ತು ಧನಾತ್ಮಕ ಶಕ್ತಿಯೊಂದಿಗೆ ಸಂಬಂಧಿಸಿದೆ ಎಂದು ಪರಿಗಣಿಸಲಾಗುತ್ತದೆ. ಆದ್ದರಿಂದ ದೇವಾಲಯವನ್ನು ಪ್ರವೇಶಿಸುವಾಗ ಗಂಟೆಯನ್ನು ಬಾರಿಸುವ ಸಂಪ್ರದಾಯವಿದೆ.

ಮರಳುವಾಗ ಗಂಟೆ ಬಾರಿಸುವುದಿಲ್ಲ ಏಕೆ?

ದೇವಸ್ಥಾನದಿಂದ ಹೊರಬರುವಾಗ ಅನೇಕ ಜನರು ಗಂಟೆ ಬಾರಿಸುವುದನ್ನು ನೋಡಿರಬಹುದು. ಆದರೆ ಇದು ತಪ್ಪು ಎಂದು ಪರಿಗಣಿಸಲಾಗುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ದೇವಸ್ಥಾನದಿಂದ ಹೊರಡುವಾಗ ಗಂಟೆಯನ್ನು ಬಾರಿಸಬಾರದು. ಯಾಕೆಂದರೆ ಹೀಗೆ ಮಾಡುವುದರಿಂದ ದೇವಾಲಯದ ಧನಾತ್ಮಕ ಶಕ್ತಿಯನ್ನು ದೇವಾಲಯದಲ್ಲಿಯೇ ಬಿಟ್ಟು ಬಂದಂತೆ ಆಗುತ್ತದೆ. ನಾವು ದೇವಾಲಯದಿಂದ ಬರಿಗೈಯಲ್ಲಿ ಮರಳುತ್ತೇವೆ. ಹಾಗಾಗಿ ದೇವಸ್ಥಾನದಿಂದ ಹೊರಡುವಾಗ ಗಂಟೆ ಬಾರಿಸಬಾರದು.


ಗಂಟೆ ಏಕೆ ಬಾರಿಸಬೇಕು?

ಸನಾತನ ಧರ್ಮದಲ್ಲಿ ಪ್ರಾಚೀನ ಕಾಲದಿಂದಲೂ ಪೂಜೆಗೆ ಪ್ರಾಮುಖ್ಯತೆ ನೀಡಲಾಗಿದೆ. ಹಿಂದೂ ಧಾರ್ಮಿಕ ನಂಬಿಕೆಗಳ ಪ್ರಕಾರ ನಾವು ದೇವಾಲಯವನ್ನು ಪ್ರವೇಶಿಸುವಾಗ ಗಂಟೆಯನ್ನು ಬಾರಿಸಿದರೆ ಗಂಟೆಯ ಶಬ್ದವು ನಮ್ಮ ದೇಹದಲ್ಲಿನ ಎಲ್ಲಾ ನಕಾರಾತ್ಮಕ ಶಕ್ತಿಯನ್ನು ನಾಶಪಡಿಸುತ್ತದೆ. ಜನರಿಗೆ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ ಎಂದು ನಂಬಲಾಗಿದೆ. ದೇವರಿಗೆ ಗಂಟೆಯ ಸದ್ದು ಇಷ್ಟವಾಗುತ್ತದೆ ಮತ್ತು ಗಂಟೆ ಬಾರಿಸುವ ಮೂಲಕ ಭಕ್ತರು ದೇವರ ಉಪಸ್ಥಿತಿಯ ಅನುಭವ ಪಡೆಯಬಹುದು.

ಗಂಟೆ ಬಾರಿಸುವುದು ದೇವಾಲಯವನ್ನು ಪ್ರವೇಶಿಸಲು ಮತ್ತು ದೇವತೆಗಳ ಗಮನವನ್ನು ಸೆಳೆಯಲು ದೇವರ ಅನುಮತಿ ತಮ್ಮ ಕಡೆಗೆ ಸೆಳೆಯುವುದಾಗಿದೆ. ಗಂಟೆ ಬಾರಿಸುವ ಮೂಲಕ ಭಕ್ತನು ತನ್ನ ಆಗಮನವನ್ನು ದೇವರಿಗೆ ತಿಳಿಸುತ್ತಾನೆ ಎಂದು ಹೇಳಲಾಗುತ್ತದೆ.

ಗಂಟೆಯ ಶಬ್ದವು ದೈವತ್ವವನ್ನು ಸ್ವಾಗತಿಸುವ ಮತ್ತು ದುಷ್ಟತನವನ್ನು ಹೋಗಲಾಡಿಸುವ ಮಂಗಳಕರವೆಂದು ಪರಿಗಣಿಸಲಾಗಿದೆ. ಗಂಟೆಯ ಶಬ್ದವು ಮನಸ್ಸನ್ನು ನಡೆಯುತ್ತಿರುವ ಆಲೋಚನೆಗಳಿಂದ ದೂರವಿಡುತ್ತದೆ. ಹೀಗಾಗಿ ಮನಸ್ಸು ಹೆಚ್ಚು ಗ್ರಹಿಸುವಂತೆ ಮಾಡುತ್ತದೆ.

ಇದನ್ನೂ ಓದಿ: Importance Of Tilaka: ಹಣೆಯ ಮೇಲೆ ತಿಲಕ ಇಟ್ಟರೆ ಏನೇನು ಪ್ರಯೋಜನ? ಇದಕ್ಕಿದೆ ವೈಜ್ಞಾನಿಕ ಕಾರಣ!

ಗಂಟೆಯ ಶಬ್ದವು ದೇಹ ಮತ್ತು ಸುತ್ತಮುತ್ತಲಿನ ಪರಿಸರದಲ್ಲಿ ಇರುವ ಎಲ್ಲಾ ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳನ್ನು ನಾಶಪಡಿಸುತ್ತದೆ ಎಂದು ವೈಜ್ಞಾನಿಕವಾಗಿ ಹೇಳಲಾಗುತ್ತದೆ, ಇದರಿಂದಾಗಿ ದೇವಾಲಯ ಮತ್ತು ಅದರ ಸುತ್ತಮುತ್ತಲಿನ ಪರಿಸರವನ್ನು ಶುದ್ಧವಾಗಿರುತ್ತದೆ.

ಗಂಟೆಯನ್ನು ಯಾವಾಗ ಬಾರಿಸಬೇಕು?

ಬೆಳಗ್ಗೆ ಮತ್ತು ಸಂಜೆ ದೇವಾಲಯದ ಗಂಟೆಯನ್ನು ಬಾರಿಸಬೇಕು ಎಂದು ಶಾಸ್ತ್ರಗಳಲ್ಲಿ ಬರೆಯಲಾಗಿದೆ. ಇದರಿಂದ ನಕಾರಾತ್ಮಕ ಶಕ್ತಿ ದೂರವಾಗುತ್ತದೆ. ಆದ್ದರಿಂದ ಪೂಜೆಯನ್ನು ಪ್ರಾರಂಭಿಸುವ ಮೊದಲು ನಿಯಮಿತವಾಗಿ ಮನೆಯಲ್ಲೂ ಗಂಟೆ ಬಾರಿಸುವುದು ಒಳ್ಳೆಯದು.

Continue Reading

ಬಾಗಲಕೋಟೆ

Bhandara Fair : ಲೋಕಾಪುರದ ಭಂಡಾರ ಜಾತ್ರೆಗೆ ಅದ್ಧೂರಿ ಚಾಲನೆ; ಭಂಡಾರದಲ್ಲಿ ಮಿಂದೆದ್ದ ಭಕ್ತ ಸಮೂಹ

Bhandara Fair : 27 ಗ್ರಾಮಗಳ ಸಮ್ಮುಖದಲ್ಲಿ ನಡೆಯುವ ವಿಶಿಷ್ಟ ಭಂಡಾರ ಜಾತ್ರೆಗೆ ಅದ್ಧೂರಿ ಚಾಲನೆ ನೀಡಲಾಗಿದ್ದು, ಭಕ್ತ ಸಮೂಹವು ಭಂಡಾರದಲ್ಲಿ ಮಿಂದೆದ್ದಿದ್ದಾರೆ.

VISTARANEWS.COM


on

By

Bhandara Fair
Koo

ಬಾಗಲಕೋಟೆ: ಐತಿಹಾಸಿಕ ಲೋಕಾಪುರದ ಭಂಡಾರ ಜಾತ್ರೆಗೆ (Bhandara Fair) ಶನಿವಾರ ಅದ್ಧೂರಿ ಚಾಲನೆ ನೀಡಲಾಗಿದೆ. ಲಕ್ಷಾಂತರ ಭಕ್ತರ ಸಮೂಹವು ಭಂಡಾರದಲ್ಲಿ ಮಿಂದೆದ್ದರು. ಮುಧೋಳ ನಗರದಲ್ಲಿ ಪ್ರತಿ 7 ವರ್ಷಕ್ಕೊಮ್ಮೆ ಲೋಕಾಪುರ ದುರ್ಗಾದೇವಿ ಜಾತ್ರೆ ನಡೆಯಲಿದೆ.

ಭಂಡಾರ ಜಾತ್ರೆಯಲ್ಲಿ ಗ್ರಾಮ ದೇವತೆಗಳಾದ ದ್ಯಾಮವ್ವ, ದುರ್ಗವ್ವ ದೇವಿ ಜಾತ್ರೆ ಇದಾಗಿದ್ದು, ಸುಮಾರು 27 ಗ್ರಾಮಸ್ಥರ ಸಮ್ಮುಖದಲ್ಲಿ ನಡೆಯುವ ವಿಶಿಷ್ಟ ದೇವಿ ಜಾತ್ರೆ ಆಗಿದೆ. 5 ದಿನಗಳ ಕಾಲ ನಡೆಯುವ ಜಾತ್ರೆಯಲ್ಲಿ ಲಕ್ಷಾಂತರ ಭಕ್ತರು ಭಾಗಿಯಾಗಲಿದ್ದಾರೆ.

ಇನ್ನೂ ಆದಿ ಶಕ್ತಿ ದುರ್ಗಾದೇವಿ ರಥೋತ್ಸವಕ್ಕೆ 50 ಟನ್ ಭಂಡಾರವನ್ನು ಭಕ್ತರು ತೂರಲಿದ್ದಾರೆ. ಪಟ್ಟಣದ ರಥ ಬೀದಿ ಸೇರಿ ಪ್ರಮುಖ ಮಾರ್ಗಗಳಲ್ಲಿ ರಥೋತ್ಸವ ಸಂಚಾರಿಸಿದೆ. ಇನ್ನೂ ಯುವಕರು ಡೊಳ್ಳು ಕುಣಿತ, ಡಿಜೆ ಸದ್ದಿಗೆ ಭಂಡಾರ ಬಳಿದು ಹೆಜ್ಜೆ ಹಾಕಿದರು. ಕುಂಬ ಹೊತ್ತ ಸಾವಿರಾರು ಮಹಿಳೆರ ಮುಂಭಾಗ ದೇವಿಯ ಪಲ್ಲಕ್ಕಿ ಮೆರವಣಿಗೆ ನಡೆದಿದೆ.

ಟನ್ ಗಟ್ಟಲೆ ಭಂಡಾರ ಎರೆಚಿ ಜನರು ಸಂಭ್ರಮಿಸಿದರು. ದುರ್ಗವ್ವ ದೇವಿ ಓಣಿಯ ದೇವಸ್ಥಾನದಿಂದ ಭಂಡಾರ ಜಾತ್ರೆಯ ಮೆರವಣಿಗೆ ನಡೆಯಿತು. ದೇವಿಗೆ ಭಕ್ತರು ಉಡಿ ತುಂಬಿ ಪ್ರಾರ್ಥಿಸಿ ರಸ್ತೆ ಉದ್ದಕ್ಕೂ ಭಂಡಾರ ಎರಚುತ್ತಾ ದೇವಿಗೆ ಘೋಷಣೆ ಕೂಗುತ್ತಾ ಜಾತ್ರೆಯನ್ನು ಆಚರಿಸಿದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಧಾರ್ಮಿಕ

Importance Of Tilaka: ಹಣೆಯ ಮೇಲೆ ತಿಲಕ ಇಟ್ಟರೆ ಏನೇನು ಪ್ರಯೋಜನ? ಇದಕ್ಕಿದೆ ವೈಜ್ಞಾನಿಕ ಕಾರಣ!

ಕೇವಲ ಶಾಸ್ತ್ರಕ್ಕಾಗಿ, ನಂಬಿಕೆಗಾಗಿ ಹಣೆಗೆ ಇಡುವ ತಿಲಕ ಇಡುವುದರಿಂದ ಹಲವು ಪ್ರಯೋಜನಗಳೂ ಇವೆ ಎಂಬುದು ಹೆಚ್ಚಿನವರಿಗೆ ತಿಳಿದಿರಲಿಕ್ಕಿಲ್ಲ. ಧಾರ್ಮಿಕ ಪ್ರಾಮುಖ್ಯತೆ (Importance Of Tilaka) ಹೊಂದಿರುವ ತಿಲಕಕ್ಕೆ ಸಂಬಂಧಿಸಿ ಸರಳ ಮತ್ತು ಪರಿಣಾಮಕಾರಿ ಕ್ರಮಗಳನ್ನು ಅಳವಡಿಸಿಕೊಂಡರೆ, ದುರದೃಷ್ಟವನ್ನು ಅದೃಷ್ಟವಾಗಿ ಪರಿವರ್ತಿಸಬಹುದು. ಈ ಕುರಿತ ಮಾಹಿತಿ ಇಲ್ಲಿದೆ.

VISTARANEWS.COM


on

By

Importance Of Tilaka
Koo

ಹಿಂದೂ (hindu) ಧರ್ಮದಲ್ಲಿ (Religious) ಹಣೆಗೆ ಸಾಂಕೇತಿಕವಾಗಿಯಾದರೂ ತಿಲಕವಿಟ್ಟು ಮನೆಯಿಂದ ಹೊರಡುವವರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ತಿಲಕ (Importance Of Tilaka) ಶುಭ ಸಂಕೇತ. ಪ್ರತಿಯೊಂದು ಕೆಲಸದಲ್ಲೂ (work) ಯಶಸ್ಸು ಸಿಗಲಿ ಎನ್ನುವ ಭಾವನೆಯ ಪ್ರತೀಕ. ತಿಲಕ ಇಡುವುದಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಈ ಒಂದು ಸಂಪ್ರದಾಯ ಸಂಪೂರ್ಣ ಗುರುತನ್ನು ಹೇಳುತ್ತದೆ.

ಕೇವಲ ಶಾಸ್ತ್ರಕ್ಕಾಗಿ, ನಂಬಿಕೆಗಾಗಿ ಹಣೆಗೆ ಇಡುವ ತಿಲಕ ಇಡುವುದರಿಂದ ಹಲವು ಪ್ರಯೋಜನಗಳೂ (benifits) ಇವೆ ಎಂಬುದು ಹೆಚ್ಚಿನವರಿಗೆ ತಿಳಿದಿರಲಿಕ್ಕಿಲ್ಲ. ಧಾರ್ಮಿಕ ಪ್ರಾಮುಖ್ಯತೆ (religious importance) ಹೊಂದಿರುವ ತಿಲಕಕ್ಕೆ ಸಂಬಂಧಿಸಿ ಸರಳ ಮತ್ತು ಪರಿಣಾಮಕಾರಿ ಕ್ರಮಗಳನ್ನು ಅಳವಡಿಸಿಕೊಂಡರೆ, ದುರದೃಷ್ಟವನ್ನು ಅದೃಷ್ಟವಾಗಿ ಪರಿವರ್ತಿಸಬಹುದು ಎನ್ನಲಾಗುತ್ತದೆ.

ನಮ್ಮ ದೇಹದಲ್ಲಿ ಏಳು ಸೂಕ್ಷ್ಮ ಶಕ್ತಿ ಕೇಂದ್ರಗಳಿವೆ. ಅವುಗಳು ಅಪಾರವಾದ ಶಕ್ತಿ ನಿಕ್ಷೇಪಗಳನ್ನು ಹೊಂದಿವೆ. ಇವುಗಳನ್ನು ಚಕ್ರ (chakra) ಎಂದು ಕರೆಯಲಾಗುತ್ತದೆ. ಮೆದುಳಿನ ಮಧ್ಯದಲ್ಲಿ ಆತ್ಮೀಯ ಚಕ್ರವಿದೆ. ಈ ಚಕ್ರದ ಮೇಲೆ ನಮ್ಮ ದೇಹದ ಮೂರು ನರಗಳಾದ ಅಡ, ಪಿಂಗಲ, ಶುಷನೂತ ಈ ಮೂರು ಸಂಧಿಸುತ್ತವೆ. ಆದ್ದರಿಂದಲೇ ಇದನ್ನು ನಮ್ಮ ದೇಹದಲ್ಲಿ ಪ್ರಮುಖ ಸ್ಥಳವೆಂದು ಪರಿಗಣಿಸಲಾಗಿದೆ. ಅದಕ್ಕಾಗಿಯೇ ಹಣೆಯ ಮಧ್ಯದಲ್ಲಿ ತಿಲಕವನ್ನು ಇಡಲಾಗುತ್ತದೆ. ಇದು ನಮ್ಮ ಮೆದುಳನ್ನು ಶಾಂತವಾಗಿರಿಸುತ್ತದೆ.


ಭಾರತೀಯ ಸಂಸ್ಕೃತಿಯ ಪ್ರಕಾರ ಹಣೆಯ ಮೇಲೆ ತಿಲಕವನ್ನು ಇಡುವುದಕ್ಕೆ ವೈದಿಕ ಮತ್ತು ವೈಜ್ಞಾನಿಕ ಆಧಾರಗಳಿವೆ. ವೈದಿಕ ಆಧಾರದ ಮೇಲೆ, ತಿಲಕವನ್ನು ಅನ್ವಯಿಸುವುದು ಗೌರವದ ಸಂಕೇತವಾಗಿದೆ.

ದೇವಸ್ಥಾನದಲ್ಲಿ ಆರತಿ, ಪೂಜೆ ಇತ್ಯಾದಿ ಸಮಯದಲ್ಲೂ ತಿಲಕವನ್ನು ಇಡಲಾಗುತ್ತದೆ. ಭಾರತೀಯ ಸಂಸ್ಕೃತಿಯಲ್ಲಿ ತಿಲಕ ಇಡದೇ ಮಾಡುವ ಯಾವುದೇ ಕೆಲಸ ಅಪೂರ್ಣವೆಂದು ಪರಿಗಣಿಸಲಾಗುತ್ತದೆ. ತಿಲಕವನ್ನು ಅನ್ವಯಿಸುವ ವೈಜ್ಞಾನಿಕ ಕಾರಣವೆಂದರೆ ತಿಲಕವನ್ನು ಅನ್ವಯಿಸುವುದರಿಂದ ಮೆದುಳಿನ ಮೇಲಿನ ಹೊರೆ ಕಡಿಮೆಯಾಗುತ್ತದೆ ಮತ್ತು ಮನಸ್ಸು ಶಾಂತವಾಗುತ್ತದೆ. ಮೆದುಳಿನಲ್ಲಿ ಯಾವುದೇ ನೋವು ಇರುವುದಿಲ್ಲ ಮತ್ತು ನೆನಪಿನ ಶಕ್ತಿ ಹೆಚ್ಚುತ್ತದೆ.

ತಿಲಕದ ಧಾರ್ಮಿಕ ಮಹತ್ವ

ಸನಾತನ ಸಂಪ್ರದಾಯದಲ್ಲಿ ಪೂಜೆಯ ಸಮಯದಲ್ಲಿ ಬಳಸುವ ತಿಲಕವು ಧಾರ್ಮಿಕ- ಆಧ್ಯಾತ್ಮಿಕ ಮಹತ್ವವನ್ನು ಹೊಂದಿದೆ. ಪ್ರತಿಯೊಬ್ಬ ವ್ಯಕ್ತಿಯ ಹಣೆಯ ಮೇಲಿನ ತಿಲಕವನ್ನು ನೋಡುವ ಮೂಲಕ ನೀವು ಅವರ ಸಂಪೂರ್ಣ ಧಾರ್ಮಿಕ ಸಂಪ್ರದಾಯವನ್ನು ತಿಳಿಯಬಹುದು. ಶೈವರು, ವೈಷ್ಣವರು ವಿವಿಧ ರೀತಿಯ ತಿಲಕವನ್ನು ಅನ್ವಯಿಸುತ್ತಾರೆ.

ಈ ತಿಲಕವನ್ನು ಧಾರ್ಮಿಕ ಪೂಜೆಗೆ ಮಾತ್ರವಲ್ಲ, ಒಂಬತ್ತು ಗ್ರಹಗಳ ಮಂಗಳಕರವಾಗಿಯೂ ಬಳಸಲಾಗುತ್ತದೆ.
ದೇವಾಲಯದಲ್ಲಿ ಪೂಜೆಯ ಅನಂತರ ತಿಲಕವನ್ನು ಅನ್ವಯಿಸುವುದರಿಂದ ದೇವರ ಆಶೀರ್ವಾದ ಸಿಗುತ್ತದೆ ಎಂದು ನಂಬಲಾಗುತ್ತದೆ. ಮಾನವನ ಹಣೆಯ ಮಧ್ಯದಲ್ಲಿ ವಿಷ್ಣುವೇ ನೆಲೆಸಿದ್ದಾನೆ ಎಂದು ಹೇಳಲಾಗುತ್ತದೆ. ಆದ್ದರಿಂದ, ಈ ಸ್ಥಳದಲ್ಲಿ ತಿಲಕವನ್ನು ಅನ್ವಯಿಸಲಾಗುತ್ತದೆ.

ಹಣೆಯ ಮಧ್ಯ ಭಾಗದಲ್ಲಿ ತಿಲಕವನ್ನು ಹಚ್ಚುವುದರಿಂದ ಇತರರು ನಿಮ್ಮ ಕಡೆಗೆ ಆಕರ್ಷಿತರಾಗುತ್ತಾರೆ. ಯಾಕೆಂದರೆ ನಾವು ಇನ್ನೊಬ್ಬ ವ್ಯಕ್ತಿಯನ್ನು ನೋಡಿದಾಗ ನಮ್ಮ ಮೊದಲ ದೃಷ್ಟಿ ಅವನ ಮುಖದ ಮೇಲೆ ಹೋಗುತ್ತದೆ. ಹಣೆಯ ಮಧ್ಯಭಾಗವನ್ನು ‘ಆಗ್ಯ ಚಕ್ರ’ ಎನ್ನುತ್ತಾರೆ. ಈ ಚಕ್ರವನ್ನು ಗುರು ಚಕ್ರ ಎಂದೂ ಕರೆಯುತ್ತಾರೆ. ಯಾಕೆಂದರೆ ಇದನ್ನು ಗುರುವಿನ ಪ್ರತಿನಿಧಿ ಎಂದು ಪರಿಗಣಿಸಲಾಗಿದೆ. ದೇಹದ ಈ ಭಾಗಕ್ಕೆ ತಿಲಕವನ್ನು ಹಚ್ಚಿದಾಗ ಇಲ್ಲಿರುವ ಪೀನಲ್ ಗ್ರಂಥಿಯು ಶಕ್ತಿಯುತವಾಗುತ್ತದೆ ಮತ್ತು ಮೆದುಳಿನ ಒಳಗಿನಿಂದ ಒಂದು ರೀತಿಯ ಬೆಳಕು ಉಂಟಾಗುತ್ತದೆ. ಅದು ನಮ್ಮ ಮನಸ್ಸನ್ನು ಶಾಂತಗೊಳಿಸುತ್ತದೆ ಮತ್ತು ನಮ್ಮೊಳಗೆ ಏಕಾಗ್ರತೆಯನ್ನು ತರುತ್ತದೆ.

ಪ್ರಯೋಜನಗಳು ಏನೇನು?

ತಿಲಕದಿಂದ ಅನೇಕ ಪ್ರಯೋಜನಗಳಿವೆ. ಹಣೆಯ ಮೇಲೆ ತಿಲಕವನ್ನು ಹಚ್ಚುವುದರಿಂದ ವ್ಯಕ್ತಿಯ ವ್ಯಕ್ತಿತ್ವವು ಪ್ರಭಾವಶಾಲಿಯಾಗುತ್ತದೆ. ಅದು ವ್ಯಕ್ತಿಯ ಮುಖದ ಮೇಲೆ ಹೊಳಪನ್ನು ಹೆಚ್ಚಿಸುತ್ತದೆ. ತಿಲಕದಿಂದ ವ್ಯಕ್ತಿಯ ಪಾಪಗಳು ನಾಶವಾಗುತ್ತವೆ ಎಂದು ನಂಬಲಾಗಿದೆ. ಅಷ್ಟೇ ಅಲ್ಲ, ಹಣೆಯ ಮೇಲೆ ಹಚ್ಚಿದ ತಿಲಕವು ಅನೇಕ ರೀತಿಯ ಗ್ರಹಗಳನ್ನು ಶಾಂತಗೊಳಿಸುತ್ತದೆ. ಇದರಿಂದಾಗಿ ಅನೇಕ ಬಾರಿ ತೊಂದರೆಗಳಿಂದ ನಮಗೆ ರಕ್ಷಣೆ ದೊರೆಯುತ್ತದೆ ಎನ್ನುತ್ತಾರೆ ಜ್ಯೋತಿಷಿಗಳು.


ವೈಜ್ಞಾನಿಕ ಪ್ರಾಮುಖ್ಯತೆ

ವಿಜ್ಞಾನಿಗಳ ಪ್ರಕಾರ ಹಣೆಯ ಮೇಲೆ ತಿಲಕವನ್ನು ಹಚ್ಚುವುದರಿಂದ ನಮ್ಮಲ್ಲಿ ಧನಾತ್ಮಕ ಚಿಂತನೆ ಉಂಟಾಗುತ್ತದೆ. ಸಿರೊಟೋನಿನ್ ಮತ್ತು ಬೀಟಾ ಎಂಡಾರ್ಫಿನ್ ಸ್ರವಿಸುವಿಕೆಯು ಸಮತೋಲಿತ ರೀತಿಯಲ್ಲಿ ಸಂಭವಿಸುತ್ತದೆ. ಇದರಿಂದಾಗಿ ನಮ್ಮ ಮನಸ್ಸಿನಲ್ಲಿ ದುಃಖ ದೂರವಾಗುತ್ತದೆ. ದೇಹದಲ್ಲಿ ಉತ್ಸಾಹ ತುಂಬುತ್ತದೆ. ಇದರಿಂದಾಗಿ ನಮ್ಮ ಮನಸ್ಸು ಸಕಾರಾತ್ಮಕ ಕೆಲಸದಲ್ಲಿ ಹೆಚ್ಚು ತೊಡಗಿಸಿಕೊಳ್ಳುತ್ತದೆ. ಅಷ್ಟೇ ಅಲ್ಲ ತಿಲಕವನ್ನು ಹಚ್ಚುವುದರಿಂದ ತಲೆನೋವಿನ ಸಮಸ್ಯೆಯೂ ಕಡಿಮೆಯಾಗುತ್ತದೆ. ನಮ್ಮಲ್ಲಿ ಉತ್ಸಾಹ ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ.

ಹಣೆಯ ಮೇಲೆ ತಿಲಕವು ಮನಸ್ಸನ್ನು ಸ್ಥಿರ ಮತ್ತು ಶಾಂತವಾಗಿಸುತ್ತದೆ. ಮೆದುಳು ಸಂಬಂಧಿತ ಕಾಯಿಲೆಗಳಾದ ಒತ್ತಡಗಳನ್ನು ದೂರ ಮಾಡುತ್ತದೆ. ಮೆದುಳು ನಮ್ಮ ಎರಡು ಹುಬ್ಬುಗಳ ನಡುವಿನ ಸುಷುಮ್ನಾ, ಇಡಾ ಮತ್ತು ಪಿಂಗಲ ನರಗಳ ಕೇಂದ್ರವಾಗಿದೆ. ಇದನ್ನು ದೈವಿಕ ಕಣ್ಣು ಅಥವಾ ಮೂರನೇ ಕಣ್ಣಿನಂತೆ ಪರಿಗಣಿಸಲಾಗಿದೆ. ಈ ಸ್ಥಳದಲ್ಲಿ ತಿಲಕವನ್ನು ಅನ್ವಯಿಸುವುದರಿಂದ ಅಜ್ಞಾಚಕ್ರವು ಜಾಗೃತಗೊಳ್ಳುತ್ತದೆ ಮತ್ತು ವ್ಯಕ್ತಿಯ ಶಕ್ತಿಯು ಹೆಚ್ಚಾಗುತ್ತದೆ. ಹಣೆಯ ಮೇಲೆ ನಿಯಮಿತವಾಗಿ ತಿಲಕವನ್ನು ಅನ್ವಯಿಸುವುದರಿಂದ ತಂಪು, ತಾಜಾತನ ಮತ್ತು ಶಾಂತಿಯ ಭಾವನೆಯನ್ನು ನೀಡುತ್ತದೆ. ಬುದ್ಧಿ ಚುರುಕಾಗುತ್ತದೆ.

ತಿಲಕ ಮತ್ತು ಅಕ್ಷತೆ

ತಿಲಕ ಮತ್ತು ಅಕ್ಷತೆ ಶುಭ ಸಂಕೇತವಾಗಿದೆ. ಹಣೆಗೆ ತಿಲಕ ಹಚ್ಚಿದ ಬಳಿಕ ಅಕ್ಕಿಯನ್ನು ತಲೆ ಮೇಲೆ ಹಾಕಲಾಗುತ್ತ್ತದೆ. ಈ ಅಕ್ಕಿಯನ್ನು ಅಕ್ಷತ್ ಎಂದೂ ಕರೆಯುತ್ತಾರೆ ಮತ್ತು ಅದು ಎಂದಿಗೂ ನಾಶವಾಗುವುದಿಲ್ಲ ಎಂದರ್ಥ. ಅದಕ್ಕಾಗಿಯೇ ಯಾವುದೇ ಕೆಲಸದ ಯಶಸ್ಸಿಗೆ ಅಕ್ಕಿಯನ್ನು ಬಳಸಲಾಗುತ್ತದೆ. ಅದಕ್ಕಾಗಿಯೇ ಅಕ್ಕಿಯನ್ನು ತಿಲಕದ ಅನಂತರ ಬಳಸಲಾಗುತ್ತದೆ. ಅಲ್ಲದೇ ಹಿಂದೂ ಧರ್ಮದಲ್ಲಿ ಅಕ್ಕಿಯನ್ನು ಸಮೃದ್ಧಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ.

ಇದನ್ನೂ ಓದಿ: Dina Bhavishya: ಉದ್ಯೋಗದ ಸ್ಥಳದಲ್ಲಿ ನಿಮ್ಮ ವಿರುದ್ಧ ಪಿತೂರಿ ಮಾಡುವುವರ ಬಗ್ಗೆ ಎಚ್ಚರಿಕೆ ಇರಲಿ

ತಿಲಕವನ್ನು ಎಲ್ಲಿ ಇಡುವುದು?

ಸಾಮಾನ್ಯವಾಗಿ ಯಾವುದೇ ವ್ಯಕ್ತಿಯ ಹಣೆಯ ಮೇಲೆ ತಿಲಕವನ್ನು ಅನ್ವಯಿಸಲಾಗುತ್ತದೆ ಎಂದು ನಮಗೆ ತಿಳಿದಿದೆ. ಆದರೆ ಅದು ಹಾಗಲ್ಲ. ಪೂಜೆಯಲ್ಲಿ ಬಳಸುವ ತಿಲಕವನ್ನು ತಲೆ, ಹಣೆ, ಕುತ್ತಿಗೆ, ಹೃದಯ, ಎರಡೂ ತೋಳುಗಳು, ಹೊಕ್ಕುಳ, ಬೆನ್ನು, ಎರಡೂ ಕಂಕುಳಗಳು ಸೇರಿದಂತೆ ದೇಹದ ಒಟ್ಟು 12 ಸ್ಥಳಗಳಲ್ಲಿ ಅನ್ವಯಿಸಲಾಗುತ್ತದೆ. ಆದರೆ ನಿತ್ಯ ಬಳಸುವ ತಿಲಕವನ್ನು ಹಣೆಯ ಮೇಲೆ ಮಾತ್ರ ಅನ್ವಯಿಸಬೇಕು. ಹಣೆಯ ಬಿಂದುವಿನ ಮೇಲೆ ಅಂದರೆ ಎರಡು ಹುಬ್ಬುಗಳ ನಡುವೆ ಅನ್ವಯಿಸಬಹುದು.

ತಿಲಕವನ್ನು ಹೇಗೆ ಅನ್ವಯಿಸಬೇಕು?

ನಂಬಿಕೆಗೆ ಸಂಬಂಧಿಸಿದ ಈ ತಿಲಕವನ್ನು ಅನ್ವಯಿಸಲು ಕೆಲವು ನಿಯಮಗಳನ್ನು ಮಾಡಲಾಗಿದೆ. ಅವುಗಳೆಂದರೆ ತಿಲಕವನ್ನು ಸ್ನಾನ ಮಾಡಿ ಶುದ್ಧ ವಸ್ತ್ರ ಧರಿಸಿದ ಬಳಿಕವೇ ಅನ್ವಯಿಸಬೇಕು.

Continue Reading
Advertisement
Shah Rukh Khan Took ₹1 As Signing Amount For 'Nayak'
ಬಾಲಿವುಡ್8 mins ago

Shah Rukh Khan: ʻನಾಯಕ್‌ʼ ಸಿನಿಮಾಗೆ ಶಾರುಖ್‌ ಹೀರೊ ಆಗಬೇಕಿತ್ತು! 1 ರೂ. ಅಡ್ವಾನ್ಸ್ ಪಡೆದಿದ್ದರು!

Encounter In Bandipora
ದೇಶ29 mins ago

Encounter In Bandipora: ಬಂಡಿಪೋರಾದಲ್ಲಿ ಎನ್‌ಕೌಂಟರ್‌; ಓರ್ವ ಉಗ್ರನನ್ನು ಹೊಡೆದುರುಳಿಸಿದ ಭದ್ರತಾ ಪಡೆ

BAN vs NEP
ಕ್ರೀಡೆ31 mins ago

BAN vs NEP: ಸ್ವಿಮ್ಮಿಂಗ್ ಪೂಲ್​ಗೆ ಜಿಗಿದು ಸಂಭ್ರಮಿಸಿದ ನೇಪಾಳ ಅಭಿಮಾನಿ; ವಿಡಿಯೊ ವೈರಲ್​

BS Yediyurappa pocso case
ಪ್ರಮುಖ ಸುದ್ದಿ47 mins ago

BS Yediyurappa: ಇಂದು ಸಿಐಡಿ ಮುಂದೆ ಹಾಜರಾಗಲಿರುವ ಮಾಜಿ ಸಿಎಂ ಬಿ.ಎಸ್‌ ಯಡಿಯೂರಪ್ಪ

Kiccha Sudeep Replies To Darshan Ban Matter Entertainment
ಸ್ಯಾಂಡಲ್ ವುಡ್55 mins ago

Kiccha Sudeep: ಜಗ್ಗೇಶ್‌ಗೆ ಹೇಗೆ ಮಾತನಾಡಬೇಕು, ಹೇಗೆ ಎಸ್ಕೇಪ್ ಆಗಬೇಕು ಅನ್ನೋದು ಗೊತ್ತು ಎಂದ ಕಿಚ್ಚ!

T20 World Cup 2024
ಕ್ರೀಡೆ58 mins ago

T20 World Cup 2024: ಸೂಪರ್​-8 ಹಂತದ ವೇಳಾಪಟ್ಟಿ ಪ್ರಕಟ; 8 ತಂಡಗಳ ಮಾಹಿತಿ ಹೀಗಿದೆ

Nikhil Gupta
ವಿದೇಶ1 hour ago

Nikhil Gupta: ಗುರುಪತ್ವಂತ್‌ ಸಿಂಗ್‌ ಪನ್ನುನ್‌ ಹತ್ಯೆಗೆ ಸಂಚು ಆರೋಪ; ಜೆಕ್‌ ಗಣರಾಜ್ಯದಿಂದ ನಿಖಿಲ್‌ ಗುಪ್ತಾ ಅಮೆರಿಕಕ್ಕೆ ಹಸ್ತಾಂತರ

BAN vs NEP
ಕ್ರೀಡೆ2 hours ago

BAN vs NEP: ಸೂಪರ್​-8 ಪ್ರವೇಶಿಸಿದ ಬಾಂಗ್ಲಾದೇಶ; ನೇಪಾಳ ವಿರುದ್ಧ 21 ರನ್​ ಗೆಲುವು

Actor Darshan of many acquaintance unknown of darshan
ಸ್ಯಾಂಡಲ್ ವುಡ್2 hours ago

Actor Darshan: ಬಂಧಿತರಲ್ಲಿ ಹಲವರಿಗೆ ದರ್ಶನ್ ನೇರ ಪರಿಚಯವೇ ಇಲ್ವಂತೆ; ʻದಚ್ಚುʼ ಅರೆಸ್ಟ್ ಆದ ಬಳಿಕವೇ ಮುಖಾಮುಖಿ!

Lok Sabha Election Result
Lok Sabha Election 20242 hours ago

Rajat Sharma: ಕಾಂಗ್ರೆಸ್ ನಾಯಕರ ವಿರುದ್ಧ ಖ್ಯಾತ ಪತ್ರಕರ್ತ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದೇಕೆ?

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Renukaswamy murder case The location of the accused is complete
ಸಿನಿಮಾ17 hours ago

Renuka Swamy murder : ಭೀಕರವಾಗಿ ಕೊಂದರೂ ಆರೋಪಿಗಳಿಗೆ ಕಾಡುತ್ತಿಲ್ವಾ ಪಾಪಪ್ರಜ್ಞೆ? ನಗುತ್ತಲೇ ಹೊರಬಂದ ಪವಿತ್ರಾ ಗೌಡ, ಪವನ್‌

Renuka swamy murder
ಚಿತ್ರದುರ್ಗ18 hours ago

Renuka swamy Murder : ರೇಣುಕಾಸ್ವಾಮಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಾಳೆಹೊನ್ನೂರು ಶ್ರೀಗಳು

Vijayanagara News
ವಿಜಯನಗರ23 hours ago

Vijayanagara News : ಕೆಲಸಕ್ಕೆ ಚಕ್ಕರ್, ಸಂಬಳಕ್ಕೆ ಹಾಜರ್! ಹಾರಕನಾಳು ಗ್ರಾಪಂ ಪಿಡಿಓಗಾಗಿ ಗ್ರಾಮಸ್ಥರ ಹುಡುಕಾಟ

Actor Darshan
ಯಾದಗಿರಿ2 days ago

Actor Darshan : ಬಾಸ್‌ ಅಂತ ಯಾಕ್‌ ಬಕೆಟ್‌ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!

Karnataka Weather Forecast
ಮಳೆ3 days ago

Karnataka Weather : ಕರಾವಳಿ, ಉತ್ತರ ಒಳನಾಡಿನಲ್ಲಿ ವರುಣಾರ್ಭಟ; ನಾಳೆಯು ಹಲವೆಡೆ ಸಿಕ್ಕಾಪಟ್ಟೆ ಮಳೆ

Actor Darshan
ಬೆಂಗಳೂರು3 days ago

Actor Darshan : ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್ ಮಾಡಿ ಕರೆತರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ!

actor Darshan
ಬೆಂಗಳೂರು3 days ago

Actor Darshan : ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಮತ್ತಿಬ್ಬರು ಸರೆಂಡರ್‌; ಆರೋಪಿಗಳ ಸಂಖ್ಯೆ 16ಕ್ಕೆ ಏರಿಕೆ

Actor Darshan
ಸಿನಿಮಾ3 days ago

Actor Darshan : ರೇಣುಕಾಸ್ವಾಮಿ ‌ಮೃತದೇಹ ಬಿಸಾಡಿ ಬಳಿಕ ಸಾಕ್ಷ್ಯಇದ್ದ 2 ಮೊಬೈಲ್‌ಗಳನ್ನು ಮೋರಿಗೆ ಎಸೆದ್ರಾ ಆರೋಪಿಗಳು?

karnataka weather Forecast
ಮಳೆ6 days ago

Karnataka Weather : ಭಾರಿ ಮಳೆಗೆ ಗುಡ್ಡದಿಂದ ಉರುಳಿ ಬಿದ್ದ ಬಂಡೆಗಲ್ಲು; ಬೆಂಗಳೂರಲ್ಲೂ ಸಂಜೆ ವರ್ಷಧಾರೆ

actor Darshan
ಚಿತ್ರದುರ್ಗ6 days ago

Actor Darshan: ರೇಣುಕಾ ಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್‌ ಅರೆಸ್ಟ್‌; ಪ್ರಕರಣವನ್ನು ಸಿಬಿಐಗೆ ವಹಿಸಲು ಒತ್ತಾಯ

ಟ್ರೆಂಡಿಂಗ್‌