Vehicle Launch | 2022ರಲ್ಲಿ ಭಾರತದ ಮಾರುಕಟ್ಟೆಗೆ ಇಳಿದು ಗಮನ ಸೆಳೆದ ಕಾರುಗಳಿವು - Vistara News

New year 2023

Vehicle Launch | 2022ರಲ್ಲಿ ಭಾರತದ ಮಾರುಕಟ್ಟೆಗೆ ಇಳಿದು ಗಮನ ಸೆಳೆದ ಕಾರುಗಳಿವು

ಕಾರುಗಳಿಗೆ ಬೇಡಿಕೆ ಹೆಚ್ಚುತ್ತಿದ್ದಂತೆ ಗ್ರಾಹಕರ ಗಮನ ಸೆಳೆದ ಐದು ಕಾರುಗಳ ಪಟ್ಟಿ ಇಲ್ಲಿದೆ.

VISTARANEWS.COM


on

car launch
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು : ಕೋವಿಡ್​ 19 ಸಾಂಕ್ರಾಮಿಕ ಕೊನೆಗೊಂಡ ಬಳಿಕ ಭಾರತದ ಕಾರು ಮಾರುಕಟ್ಟೆಯಲ್ಲಿ ಭರ್ಜರಿ ಸಂಚಲನ ಉಂಟಾಗಿದೆ. ಸ್ವಂತ ವಾಹನಗಳ ಬಳಕೆ ಹೆಚ್ಚಾದ ಹಿನ್ನೆಲೆಯಲ್ಲಿ ಕಾರುಗಳನ್ನು ಕೊಳ್ಳುವವರ ಸಂಖ್ಯೆ ಒಂದೇ ಸಮನೆ ಏರಿಕೆ ಕಂಡಿತು. ಮಾರುಕಟ್ಟೆಯಲ್ಲಿ ಚೈತನ್ಯ ಮೂಡಿದ ತಕ್ಷಣ ಕಾರು ತಯಾರಿಕಾ ಕಂಪನಿಗಳೂ ಅದಕ್ಕೆ ಪೂರಕವಾಗಿ ಬಗೆಬಗೆಯ ಕಾರುಗಳನ್ನು ರಸ್ತೆಗೆ ಇಳಿಸಿದವು. ಹೀಗೆ 2022ರಲ್ಲಿ ಭಾರತದಲ್ಲಿ ಬಿಡುಗಡೆಯಾದ ಐದು ಬೆಸ್ಟ್​ ಕಾರುಗಳ ಪಟ್ಟಿಯನ್ನು ಇಲ್ಲಿ ಕೊಡಲಾಗಿದೆ.

ಮಹೀಂದ್ರಾ ಸ್ಕಾರ್ಪಿಯೊ ಎನ್​

ಭಾರತದ ಕಾರು ಮಾರುಕಟ್ಟೆಯಲ್ಲಿ ಕಳೆದ 20 ವರ್ಷಗಳಿಂದ ಒಂದೇ ತೆರನಾಗಿ ಬೇಡಿಕೆ ಉಳಿಸಿಕೊಂಡಿರುವ ಕಾರು ಮಹೀಂದ್ರಾ ಸ್ಕಾರ್ಪಿಯೊ. ಸಿಟಿಯ ಗಲ್ಲಿಯಲ್ಲಿ, ಕೆಟ್ಟ ರಸ್ತೆಗಳಲ್ಲಿ ಹಾಗೂ ಬೆಟ್ಟ ಗುಡ್ಡಗಳ ಪ್ರದೇಶದಲ್ಲೂ ಸ್ಕಾರ್ಪಿಯೊ ಕಾರನ್ನು ನೋಡಿದ್ದೇವೆ. ಈ ಜನಪ್ರಿಯ ಕಾರಿನ ಸುಧಾರಿತ ಆವೃತ್ತಿ ಸ್ಕಾರ್ಪಿಯೊ-ಎನ್​ ಈ ವರ್ಷ ಬಿಡುಗಡೆಗೊಂಡಿದೆ.

ಈ ಹಿಂದಿನ ಸ್ಕಾರ್ಪಿಯೊಗಿಂತ ಭಿನ್ನ ಪ್ಲಾಟ್​ಫಾರ್ಮ್​ನಲ್ಲಿ ಬಿಡುಗಡೆಯಾಗಿರುವ ಸ್ಕಾರ್ಪಿಯೊ ಎನ್​, ರಗಡ್​ ಲುಕ್​ ಅನ್ನು ಹಾಗೆಯೇ ಉಳಿಸಿಕೊಂಡಿದೆ. ಜತೆಗೆ ಇನ್ನೂ ಹೆಚ್ಚು ಐಷಾರಾಮಿ ನೋಟವನ್ನು ನೀಡುತ್ತಾ ಮಾರುಕಟ್ಟೆಗೆ ಪ್ರವೇಶ ಪಡೆದಿದೆ. ಇದರಲ್ಲಿ ಪರ್ಫಾಮೆನ್ಸ್ ಆಧಾರಿತ ಎಂಜಿನ್​ ಆಯ್ಕೆ ನೀಡಲಾಗಿದ್ದು, 200 ಬಿಎಚ್​ಪಿ ಪವರ್​ ನೀಡುವ ಪೆಟ್ರೋಲ್​ ಹಾಗೂ 130 ಮತ್ತು 172 ಬಿಎಚ್​ಪಿ ಪವರ್​ ಕೊಡುವ ಡೀಸೆಲ್​ ಎಂಜಿನ್​ಗಳನ್ನು ನೀಡಲಾಗಿದೆ. ಹೊಸ ಫೀಚರ್​ಗಳಿಂದಲೂ ಈ ಕಾರು ಸಾಕಷ್ಟು ಜನಪ್ರಿಯತೆ ಗಳಿಸಿದೆ.

ಮಾರುತಿ ಸುಜುಕಿ ಗ್ರಾಂಡ್​ ವಿಟಾರ

ಭಾರತದ ಎಲ್ಲ ಕಾರು ಕಂಪನಿಗಳು ಮಿಡ್​ ಸೈಜ್​ ಎಸ್​ಯುವಿ ಕಾರುಗಳನ್ನು ಮಾರುಕಟ್ಟೆಗೆ ಬಿಟ್ಟ ಹೊರತಾಗಿಯೂ ಜನಪ್ರಿಯ ಬ್ರಾಂಡ್​ ಮಾರುತಿ ಆ ಕಡೆಗೆ ಗಮನ ಹರಿಸಿರಲಿಲ್ಲ. ಅದರ ಕೊರತೆ ಅವರ ಮಾರಾಟದ ಮೇಲೆ ಪರಿಣಾಮ ಬೀರಿದ ಹಿನ್ನೆಲೆಯಲ್ಲಿ ಗ್ರಾಂಡ್​ ವಿಟಾರವನ್ನು ರಸ್ತೆಗಿಳಿಸಿದೆ. ಇದರಲ್ಲಿ ಆಲ್​ ವೀಲ್​ ಡ್ರೈವ್​ (ಎಡಬ್ಲ್ಯುಡಿ) ಆಯ್ಕೆಯೂ ಇರುವುದರಿಂದ ಗ್ರಾಹಕರನ್ನು ಬೇಗನೆ ಸೆಳೆಯಿತು. ಇದು ಟೊಯೋಟಾ ಹೈರೈಡರ್​ನ ಪ್ಲಾಟ್​ಫಾರ್ಮ್​ ಅನ್ನು ಹಂಚಿಕೊಂಡಿದೆ. ಇದರಲ್ಲಿ ಹೈಬ್ರಿಡ್ ಎಂಜಿನ್​ ಆಯ್ಕೆಯನ್ನೂ ನೀಡಲಾಗಿದ್ದು, ಗಮನಾರ್ಹ ಮೈಲೇಜ್​ ನೀಡುತ್ತದೆ. ಆಲ್​ವೀಲ್​ ಡ್ರೈವ್​ ಹಾಗೂ ಇದರ ಮೈಲೇಜ್​ ಸುಲಭದಲ್ಲಿ ಗಮನ ಸೆಳೆಯುತ್ತಿದೆ.

ಮಹೀಂದ್ರಾ ಎಕ್ಸ್​ಯುವಿ 300 ಟರ್ಬೊಸ್ಪೋರ್ಟ್ಸ್​

ಪವರ್​ಫುಲ್​ ಕಾರುಗಳಿಗೆ ಬೇಡಿಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮಹೀಂದ್ರಾ ಕಂಪನಿಯು ತನ್ನ ಎಕ್ಸ್​ಯುವಿ 300 ಕಾರಿನಲ್ಲಿ ಟರ್ಬೊಚಾರ್ಜರ್​ ಅನ್ನು ಬಳಸಿ ಇನ್ನಷ್ಟು ಶಕ್ತಿಶಾಲಿಯನ್ನಾಗಿ ಮಾಡಿತು. ಹೀಗಾಗಿ ಪ್ರತಿಸ್ಪರ್ಧಿ ಕಂಪನಿಗಳ 4 ಮೀಟರ್​ ಎಸ್​ಯುವಿ ಕಾರುಗಳಿಗಿಂತ ಹೆಚ್ಚು ಪವರ್​ಪುಲ್​ ಆಗಿದೆ. ಉಳಿದ ಕಾರುಗಳೆಲ್ಲವೂ 110 ಬಿಎಚ್​ಪಿ ಆಸುಪಾಸಿನಲ್ಲಿ ಇರುವಾಗ ಹೊಸ ಟರ್ಬೊಚಾರ್ಜರ್​ ಹೊಂದಿರುವ ಎಕ್ಸ್​ಯುವಿ 129 ಬಿಎಚ್​ಪಿ ಪವರ್​ ಬಿಡುಗಡೆ ಮಾಡುತ್ತಿದೆ.

ಕಾರಿನಲ್ಲಿ ಹಿಂದಿನ 1.2 ಲೀಟರ್​ ಎಂಜಿನ್​ ಅನ್ನು ಬಳಸಿದ್ದರೂ, ಟರ್ಬೊಚಾರ್ಜರ್​ ಇನ್ನಷ್ಟು ಪವರ್​ ಉತ್ಪಾದನೆ ಮಾಡಲು ಅನುಕೂಲ ಮಾಡಿಕೊಟ್ಟಿದೆ. ಇದರಿಂದಾಗಿ ಈ ಸೆಗ್ಮೆಂಟ್​ನ ಅತ್ಯಂತ ಪವರ್​ಫುಲ್​ ಕಾರು ಎನಿಸಿಕೊಂಡಿದೆ.

ಕಿಯಾ ಇವಿ6

ದಕ್ಷಿಣ ಕೊರಿಯಾದ ಬ್ರಾಂಡ್​ ಕಿಯಾ ಭಾರತದಲ್ಲಿ ಮೊದಲು ಬಿಡುಗಡೆ ಮಾಡಿರುವ ಕಾರು ಸೆಲ್ಟೋಸ್​. ಅದು ಕನಿಷ್ಠ ಅವಧಿಯಲ್ಲಿ ಗರಿಷ್ಠ ಜನಪ್ರಿಯತೆ ಪಡೆದುಕೊಂಡಿತು. ಅದರ ಬಳಿಕ ಸೋನೆಟ್​ ಹಾಗೂ ಕರೆನ್ಸ್​ ಬಂತು. ಎರಡೂ ಜನಮನದಲ್ಲಿ ಛಾಪು ಮೂಡಿಸಿದೆ. ಇವೆಲ್ಲದರ ನಡುವೆ ಕಿಯಾ ಭಾರತದಲ್ಲಿ ಬ್ಯಾಟರಿ ಚಾಲಿತ ಕಾರು ಕಿಯಾ ಇವಿ6 ಬಿಡುಗಡೆ ಮಾಡಿದೆ. ಇದರಲ್ಲಿ 77.4 ಕಿಲೋ ವ್ಯಾಟ್​ನ ಬ್ಯಾಟರಿ ಪ್ಯಾಕ್​ ಇದ್ದು, ಒಂದು ಬಾರಿ ಚಾರ್ಜ್​ ಮಾಡಿದರೆ 528 ಕಿಲೋ ಮೀಟರ್​ ಚಲಿಸುತ್ತದೆ. ಇದು ಸೊನ್ನೆಯಿಂದ 100 ಕಿ. ಮೀ ವೇಗ ಪಡೆಯಲು ಕೇವಲ 5.2 ಸೆಕೆಂಡುಗಳನ್ನು ಮಾತ್ರ ತೆಗೆದುಕೊಳ್ಳುತ್ತದೆ. ಮೊದಲ ಬಾರಿಗೆ 100 ಇವಿ 6 ಕಾರನ್ನು ಕಿಯಾ ತಯಾರಿಸಿತ್ತು. ಬಿಡುಗಡೆಯಾದ ದಿನವೇ ಅದು ಸೋಲ್ಡ್​ ಔಟ್​ ಆಯಿತು. ಈಗ ಇನ್ನಷ್ಟು ಕಾರುಗಳನ್ನು ತಯಾರಿಸಲು ಮುಂದಾಗಿದೆ.

ಟಾಟಾ ಟಿಯಾಗೊ ಇವಿ

ಭಾರತದ ಗ್ರಾಹಕರಿಗೆ ಬಜೆಟ್​ ಕಾರುಗಳನ್ನು ನೀಡುವ ಮೂಲಕ ಜನಪ್ರಿಯತೆ ಪಡೆದ ಟಾಟಾ ಮೋಟಾರ್ಸ್​ ಪ್ರಸ್ತುತ ಇವಿ ಮಾರುಕಟ್ಟೆಯಲ್ಲಿನ ಅಗ್ರಗಣ್ಯ. ಕಡಿಮೆ ಬೆಲೆಗೆ ನೆಕ್ಸಾನ್​ ಇವಿಯನ್ನು ನೀಡುವ ಮೂಲಕ ಕ್ರಾಂತಿ ಮಾಡಿತು. ಇದೀಗ ತನ್ನ ಇನ್ನೊಂದು ಬಜೆಟ್​ ಕಾರಾದ ಟಿಯಾಗೊವನ್ನು ಕೂಡ ಇವಿ ಮಾದರಿಯಲ್ಲಿ ಬಿಡುಗಡೆ ಮಾಡಿದೆ. ಅದರ ಬೆಲೆ 8.49 ಲಕ್ಷ ರೂಪಾಯಿಯಿಂದ ಆರಂಭವಾಗುತ್ತದೆ. ಇದರಲ್ಲಿ 19.2 ಹಾಗೂ 24 ಕಿಲೋ ವ್ಯಾಟ್​ನ ಎರಡು ಬ್ಯಾಟರಿ ಆಯ್ಕೆಗಳಿವೆ. ಇದು ಈಗ ಕಡಿಮೆ ಬೆಲೆಗೆ ದೊರೆಯುವ ಉತ್ತಮ ಎಲೆಕ್ಟ್ರಾನಿಕ್​ ಕಾರು. ಈ ಕಾರಿಗೆ ಪ್ರತಿಸ್ಪರ್ಧಿಗಳೇ ಇಲ್ಲ

ಇದನ್ನೂ ಓದಿ | Royal Enfield | ಟ್ಯೂಬ್‌ಲೆಸ್‌ ಸ್ಪೋಕ್ಡ್‌ ರಿಮ್‌ನೊಂದಿಗೆ ಬರಲಿದೆ ಹಿಮಾಲಯನ್‌ 450

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

New year 2023

Bharat Jodo Yatra | ರಾಹುಲ್ ಗಾಂಧಿಯನ್ನು ಹೊಗಳಿದ ರಾಮಮಂದಿರ ಟ್ರಸ್ಟ್​ ಪ್ರಮುಖರು; ಆಶೀರ್ವದಿಸಿ ಪತ್ರ ಬರೆದ ಮುಖ್ಯ ಅರ್ಚಕ

ಉತ್ತರ ಪ್ರದೇಶದಲ್ಲಿ ಭಾರತ್ ಜೋಡೋ ಯಾತ್ರೆ ಮೂರು ದಿನ ಸಂಚರಿಸಲಿದೆ. ಜನವರಿ 6ರಂದು ಹರ್ಯಾಣಕ್ಕೆ ಕಾಲಿಡಲಿದೆ. ಜನವರಿ 20ಕ್ಕೆ ಜಮ್ಮು-ಕಾಶ್ಮೀರಕ್ಕೆ ಪ್ರವೇಶಿಸಿ, ಜನವರಿ 30ರಂದು ಕೊನೆಗೊಳ್ಳಲಿದೆ.

VISTARANEWS.COM


on

Congress Leader Rahul Gandhi to address British Parliament
ರಾಹುಲ್ ಗಾಂಧಿ
Koo

ಅಯೋಧ್ಯೆ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ನಡೆಸುತ್ತಿರುವ ಭಾರತ್ ಜೋಡೋ ಯಾತ್ರೆಯನ್ನು ಅಯೋಧ್ಯಾ ರಾಮಮಂದಿರ ಟ್ರಸ್ಟ್ ನ ಕಾರ್ಯದರ್ಶಿ ಚಂಪತ್ ರಾಯ್ ಶ್ಲಾಘಿಸಿದ್ದಾರೆ. ಇಂಥ ಪಾದಯಾತ್ರೆಗಳನ್ನು ನಡೆಸುವುದರಲ್ಲಿ ತಪ್ಪಿಲ್ಲ ಎಂದಿದ್ದಾರೆ.

ಭಾರತ್ ಜೋಡೋ ಯಾತ್ರೆ ಮಂಗಳವಾರ ಉತ್ತರ ಪ್ರದೇಶವನ್ನು ಪ್ರವೇಶಿಸಿದೆ. ಸಹಚರರೊಂದಿಗೆ ಉತ್ತರ ಪ್ರದೇಶಕ್ಕೆ ಕಾಲಿಟ್ಟ ರಾಹುಲ್ ಗಾಂಧಿಯವರಿಗೆ ಅಯೋಧ್ಯಾ ರಾಮ ಜನ್ಮಭೂಮಿ ದೇಗುಲದ ಮುಖ್ಯ ಅರ್ಚಕ ಸತ್ಯೇಂದ್ರ ದಾಸ್ ಅವರು ಆಶೀರ್ವಾದಪೂರ್ವಕ ಪತ್ರವನ್ನು ಬರೆದು ತಲುಪಿಸಿದ್ದಾರೆ. ಅದರ ಬೆನ್ನಲ್ಲೇ ಚಂಪತ್ ರಾಯ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.

‘ಇಡೀ ದೇಶವನ್ನು ಕಾಲ್ನಡಿಗೆಯಲ್ಲಿ ಸುತ್ತುತ್ತಿರುವ ರಾಹುಲ್ ಗಾಂಧಿ ಅವರನ್ನು ನಾನು ಶ್ಲಾಘಿಸುತ್ತೇನೆ. ನಾನೊಬ್ಬ ಆರ್ ಎಸ್ ಎಸ್ ಕಾರ್ಯಕರ್ತ. ಆರ್ ಎಸ್ ಎಸ್ ಯಾವತ್ತೂ ಭಾರತ್ ಜೋಡೋ ಯಾತ್ರೆಯನ್ನು ವಿರೋಧಿಸಿಲ್ಲ. ರಾಹುಲ್ ಗಾಂಧಿ ನಡೆಸುತ್ತಿರುವ ಪಾದಯಾತ್ರೆಯಲ್ಲಿ ನನಗೆ ತಪ್ಪೇನೂ ಕಾಣುತ್ತಿಲ್ಲ. ಇಷ್ಟು ಕೆಟ್ಟ ಚಳಿ ಮಧ್ಯೆ ರಾಹುಲ್ ಗಾಂಧಿ ಯಾತ್ರೆ ನಡೆಸುತ್ತಿದ್ದಾರೆ. ಅವರಂತೆ ಪ್ರತಿಯೊಬ್ಬರೂ ದೇಶಕ್ಕಾಗಿ ಯಾತ್ರೆ ಮಾಡಬೇಕು ಎಂದು ಹೇಳಿದ್ದಾರೆ.

ಹಾಗೇ, ರಾಮಮಂದಿರ ಟ್ರಸ್ಟ್ ನ ಹಿರಿಯ ಟ್ರಸ್ಟಿ ಗೋವಿಂದ ದೇವ ಗಿರಿ ಅವರೂ ರಾಹುಲ್ ಗಾಂಧಿಯವರನ್ನು ಹರಿಸಿದ್ದಾರೆ. ಈ ದೇಶ ಒಗ್ಗಟ್ಟಾಗಿರಬೇಕು, ಸಾಮರಸ್ಯದಿಂದ ಇರಬೇಕು ಮತ್ತು ಇನ್ನಷ್ಟು ಬಲಶಾಲಿಯಾಗಬೇಕು ಎಂದು ಯಾತ್ರೆ ಮಾಡುತ್ತಿರುವ ರಾಹುಲ್ ಗಾಂಧಿಗೆ ಶ್ರೀರಾಮ ಆಶೀರ್ವಾದಿಸಲಿ ಎಂದಿದ್ದಾರೆ. ಹಾಗೇ, ಭಾರತ್ ಜೋಡೋ ಎಂಬ ಹೆಸರೇ ಚೆನ್ನಾಗಿದೆ. ಭಾರತ ಒಂದಾಗಬೇಕು ಎಂದೂ ಹೇಳಿದ್ದಾರೆ.

ಮುಖ್ಯ ಅರ್ಚಕ ಬರೆದ ಪತ್ರದಲ್ಲಿ ಏನಿದೆ?
ಮಂಗಳವಾರ ಭಾರತ್​ ಜೋಡೋ ಯಾತ್ರೆ ಉತ್ತರ ಪ್ರದೇಶಕ್ಕೆ ಕಾಲಿಟ್ಟ ಬೆನ್ನಲ್ಲೇ ಅಯೋಧ್ಯಾ ರಾಮ ದೇಗುಲದ ಮುಖ್ಯ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್​ ಅವರಿಗೆ ಆಶೀರ್ವಾದ ಪೂರ್ವಕ ಪತ್ರ ಬರೆದಿದ್ದರು. ‘ನೀವು ಸರ್ವಜನ ಹಿತ ಮತ್ತು ಸುಖಕ್ಕಾಗಿ ಒಂದೊಳ್ಳೆ ಕೆಲಸವನ್ನು ಮಾಡುತ್ತಿದ್ದೀರಿ. ನಿಮಗೆ ಶ್ರೀರಾಮ ಒಳ್ಳೆಯದು ಮಾಡಲಿ’ ಎಂದು ರಾಹುಲ್​ ಗಾಂಧಿಯವರಿಗೆ ಹಾರೈಸಿದ್ದರು. ‘ಯಾತ್ರೆಗೆ ಶುಭವಾಗಲಿ, ನಿಮ್ಮ ಆರೋಗ್ಯ ಚೆನ್ನಾಗಿರಲಿ’ ಎಂದೂ ಹೇಳಿದ್ದರು.

ಇದನ್ನೂ ಓದಿ: ಭಾರತ್​ ಜೋಡೋ ಯಾತ್ರೆ ದೆಹಲಿಗೆ ಕಾಲಿಟ್ಟಾಗಿನಿಂದಲೂ ರಾಹುಲ್​ ಗಾಂಧಿ ಭದ್ರತೆಯಲ್ಲಿ ವೈಫಲ್ಯ; ಅಮಿತ್​ ಶಾಗೆ ಕಾಂಗ್ರೆಸ್​ ಪತ್ರ

Continue Reading

New year 2023

BMTC Income | ಆರ್ಥಿಕವಾಗಿ ಕುಗ್ಗಿದ್ದ ಬಿಎಂಟಿಸಿಗೆ ವರ್ಷಾರಂಭದಲ್ಲಿ ಹರ್ಷ!

ಹೊಸ ವರ್ಷ ಹಿನ್ನೆಲೆಯಲ್ಲಿ ಹೆಚ್ಚುವರಿ ಬಸ್‌ಗಳ ಕಾರ್ಯಾಚರಣೆ ನಡೆಸಿದ್ದ ಬಿಎಂಟಿಸಿಗೆ ಮೊದಲ ದಿನವೇ ಭರ್ಜರಿ (BMTC Income) ಆದಾಯ ಗಳಿಸಿದೆ. ನಷ್ಟದ ಸುಳಿಯಲಿ ಸಿಲುಕಿ ನರಳಾಡುತ್ತಿದ್ದ ಬಿಎಂಟಿಸಿಗೆ ಕೊಂಚ ಹರ್ಷ ತಂದಿದೆ.

VISTARANEWS.COM


on

By

Demand for implementation of 6th Pay Commission Transport employees call for protest from March 1
ಸಾಂದರ್ಭಿಕ ಚಿತ್ರ
Koo

ಬೆಂಗಳೂರು: ಆರ್ಥಿಕ ಸಂಕಷ್ಟದಿಂದ ಕಂಗೆಟ್ಟಿದ್ದ ಬಿಎಂಟಿಸಿ ನಿಗಮಕ್ಕೆ ಈ ಹೊಸ ವರ್ಷ ಕೊಂಚ ಹರ್ಷ ತಂದಿದೆ. ವರ್ಷದ ಮೊದಲ ದಿನ ಬಿಎಂಟಿಸಿಗೆ ಬಂಪರ್ ಆದಾಯ (BMTC Income) ಗಳಿಸಿದೆ. ಹೊಸ ವರ್ಷಕ್ಕೆಂದು ಸುಮಾರು 87 ಹೆಚ್ಚುವರಿ ಬಸ್‌ಗಳನ್ನು ಕಾರ್ಯಾಚರಣೆ ನಡೆಸಿತ್ತು. ಮೊದಲೇ ಆರ್ಥಿಕವಾಗಿ ಕುಗ್ಗಿದ್ದ ಬಿಎಂಟಿಸಿಗೆ ವರ್ಷದ ಮೊದಲ ದಿನವೇ ಬಂದ ಆದಾಯದ ಕಿಕ್ ಹೆಚ್ಚಿಸಿದೆ.

ಒಂದೇ ದಿನ ಬಿಎಂಟಿಸಿ ಹೆಚ್ಚುವರಿ ಬಸ್ ಕಾರ್ಯಾಚರಣೆಯಿಂದ ₹1,99,983 ಹೆಚ್ಚಿನ ಆದಾಯ ಬಂದಿದೆ. ಸಾರ್ವಜನಿಕರ ಅನುಕೂಲಕ್ಕಾಗಿ ಡಿ.31 ಹಾಗೂ ಜ.1ರ ಮಧ್ಯರಾತ್ರಿವರೆಗೂ ಹೆಚ್ಚುವರಿ ಬಸ್‌ಗಳನ್ನು ರಸ್ತೆಗಿಳಿಸಿತ್ತು. ಹೆಚ್ಚುವರಿ ಬಸ್‌ಗಳು ಸುಮಾರು 4443.9 ಕಿ.ಮೀ ನಷ್ಟು ಸಂಚಾರ ಮಾಡಿವೆ. ವರ್ಷದ ಮೊದಲ ದಿನ ಹೆಚ್ಚುವರಿ ಕಾರ್ಯಾಚರಣೆ ಮಾಡಿದ ಬಸ್‌ಗಳಲ್ಲಿ ಸುಮಾರು 13,332 ಮಂದಿ ಪ್ರಯಾಣಿಸಿರುವುದಾಗಿ ನಿಗಮದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸಿಬ್ಬಂದಿ ಮುಷ್ಕರ-ಕೋವಿಡ್‌ನಿಂದ ಕುಗ್ಗಿದ್ದ ಬಿಎಂಟಿಸಿ
ಮೊದಲೇ ಮುಳುಗುವ ಹಡುಗು ಆಗಿದ್ದ ಬಿಎಂಟಿಸಿ ನಿಗಮಕ್ಕೆ ನೌಕರರ ಸಾಲು ಸಾಲು ಮುಷ್ಕರ ಹಾಗೂ ಸಾಂಕ್ರಾಮಿಕ ಕೊರೊನಾ ಹೊಡೆತದಿಂದಾಗಿ ಬಸ್‌ ಓಡಾಟ ಇಲ್ಲದೆ ನಷ್ಟನ ಸುಳಿಯಲ್ಲಿ ಸಿಲುಕಿತು. ಜತೆಗೆ ತೈಲ ಬೆಲೆ ಏರಿಕೆಯಿಂದಾಗಿ ಬಸ್‌ ಓಡಿಸಿದರೂ ಕಷ್ಟ, ಸುಮ್ಮನೆ ನಿಲ್ಲಿಸಿದರೂ ನಷ್ಟ ಎಂಬ ಪರಿಸ್ಥಿತಿ ಉದ್ಭವಿಸಿತ್ತು. ಸಿಬ್ಬಂದಿಯ ಸಂಬಳವನ್ನು ನೀಡಲು ಆಗದೆ ನಿಗಮವು ಸರ್ಕಾರದ ಸಹಾಯಹಸ್ತ ಚಾಚಿತ್ತು. ಹಾಗೆ ನೌಕರರ ಪಿಎಫ್‌ ಹಣವನ್ನು ಬಳಸಿಕೊಳ್ಳುತ್ತಿದೆ ಎಂಬ ಆರೋಪವನ್ನು ಹೊತ್ತಿತ್ತು. ಇವೆಲ್ಲದರ ನಡುವೆ ಇದೀಗ ನಿಧಾನವಾಗಿ ಆರ್ಥಿಕ ಚೇತರಿಕೆಯನ್ನು ಕಂಡುಕೊಳ್ಳುತ್ತಿದೆ.

ಇದನ್ನೂ ಓದಿ | Siddheshwar Swamiji | ಸಿದ್ದೇಶ್ವರ ಶ್ರೀಗಳ ಮಣ್ಣಿನ ಮೂರ್ತಿ; ಕಲಾವಿದನಿಂದ ವಿಶೇಷ ಗೌರವ

Continue Reading

New year 2023

Swiggy Order | ಹೊಸ ವರ್ಷದ ಪಾರ್ಟಿಗೆ ಸ್ವಿಗ್ಗಿಯಲ್ಲಿ 3.5 ಲಕ್ಷ ಬಿರ್ಯಾನಿ, 1.76 ಲಕ್ಷ ಚಿಪ್ಸ್‌ ಪ್ಯಾಕೆಟ್‌ ಆರ್ಡರ್!

ಹೊಸ ವರ್ಷದ ಪಾರ್ಟಿ ಹಿನ್ನೆಲೆಯಲ್ಲಿ ಆನ್‌ಲೈನ್‌ನಲ್ಲಿ ಆಹಾರ, ಚಿಪ್ಸ್‌ ಪ್ಯಾಕೆಟ್‌ಗಳನ್ನು ಆರ್ಡರ್‌ (Swiggy Order) ಮಾಡುವವರ ಸಂಖ್ಯೆ ಹೆಚ್ಚಾಗಿದೆ ಎಂದು ಸ್ವಿಗ್ಗಿ ತಿಳಿಸಿದೆ.

VISTARANEWS.COM


on

Swiggy Order On New Years Eve
Koo

ನವದೆಹಲಿ: ಹೊಸ ವರ್ಷದ ಹಿನ್ನೆಲೆಯಲ್ಲಿ ಶನಿವಾರವೇ ದೇಶಾದ್ಯಂತ ಸಂಭ್ರಮ ಮನೆಮಾಡಿತ್ತು. ಪಾರ್ಟಿ ಆಯೋಜನೆ, ಪಾರ್ಟಿ ಸಿದ್ಧತೆ, ಕೇಕ್‌ ಕತ್ತರಿಸುವುದು ಸೇರಿ ಹಲವು ರೀತಿಯಲ್ಲಿ ಜನ ಸಂಭ್ರಮಾಚರಣೆ ಮಾಡಿದರು. ಅದರಲ್ಲೂ, ಪಾರ್ಟಿಗಾಗಿ ಆನ್‌ಲೈನ್‌ ಮೂಲಕ ಕೋಟ್ಯಂತರ ಜನ ಫುಡ್‌ ಆರ್ಡರ್‌ (Swiggy Order) ಮಾಡಿದ್ದು, ಇಲ್ಲೂ ಬಿರ್ಯಾನಿಯೇ ಅಗ್ರ ಸ್ಥಾನ ಪಡೆದಿದೆ. ಮದ್ಯಪಾನದ ಪಾರ್ಟಿಗಾಗಿ ಲಕ್ಷಾಂತರ ಚಿಪ್ಸ್‌ ಪ್ಯಾಕೆಟ್‌ಗಳನ್ನೂ ಸ್ವಿಗ್ಗಿಯಲ್ಲಿ ಆರ್ಡರ್‌ ಮಾಡಲಾಗಿದೆ.

ಹೌದು, ಹೊಸ ವರ್ಷದ ಹಿಂದಿನ ದಿನವಾದ ಶನಿವಾರ ರಾತ್ರಿ 10.45ರ ವೇಳೆಗೆ ಸ್ವಿಗ್ಗಿಯಲ್ಲಿ 3.5 ಲಕ್ಷಕ್ಕೂ ಅಧಿಕ ಬಿರ್ಯಾನಿಗಳನ್ನು ಆರ್ಡರ್‌ ಮಾಡಲಾಗಿದೆ. ಹಾಗೆಯೇ, ನಂತರದ ಬೇಡಿಕೆಗೆ ಪಿಜ್ಜಾಗೆ ಇದ್ದು, 61 ಸಾವಿರ ಪಿಜ್ಜಾ ಆರ್ಡರ್‌ ಮಾಡಲಾಗಿದೆ ಎಂದು ಸ್ವಿಗ್ಗಿ ಕಂಪನಿ ತಿಳಿಸಿದೆ.

ಸ್ವಿಗ್ಗಿ ಈ ಕುರಿತು ಸಮೀಕ್ಷೆಯನ್ನೂ ನಡೆಸಿದ್ದು, ಶೇ.75.4ರಷ್ಟು ಜನ ಹೈದರಾಬಾದ್‌ ಬಿರ್ಯಾನಿ, ಶೇ.14.2ರಷ್ಟು ಮಂದಿ ಲಖನೌವಿ ಬಿರ್ಯಾನಿ ಹಾಗೂ ಶೇ.10.4ರಷ್ಟು ಜನ ಕೋಲ್ಕೊತಾ ಬಿರ್ಯಾನಿ ಆರ್ಡರ್‌ ಮಾಡಿದ್ದಾರೆ ಎಂದು ಮಾಹಿತಿ ನೀಡಿದೆ. ಹಾಗೆಯೇ, ಸ್ವಿಗ್ಗಿಯ ಇನ್‌ಸ್ಟಾಮಾರ್ಟ್‌ನಲ್ಲಿ ಸಂಜೆ 7 ಗಂಟೆ ವೇಳೆಗೆ 1.76 ಚಿಪ್ಸ್‌ ಪ್ಯಾಕೆಟ್‌, 2,757 ಪ್ಯಾಕೆಟ್‌ ಡ್ಯುರೆಕ್ಸ್‌ ಕಾಂಡೋಮ್‌ಗಳನ್ನು ಆರ್ಡರ್‌ ಮಾಡಲಾಗಿದೆ ಎಂದು ಕಂಪನಿ ತಿಳಿಸಿದೆ.

ಇದನ್ನೂ ಓದಿ | New Year 2023 | ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸಂಭ್ರಮದ ಹೊಸ ವರ್ಷಾಚರಣೆ

Continue Reading

New year 2023

Ras Al Khaimah | 673 ಡ್ರೋನ್‌, 4.7 ಕಿ.ಮೀವರೆಗೆ ಆಗಸದಲ್ಲಿ ಪಟಾಕಿ, ಬೆಳಕಿನ ಚಿತ್ತಾರ, 2 ಗಿನ್ನೆಸ್‌ ದಾಖಲೆ ಬರೆದ ರಸ್‌ ಅಲ್‌ ಖೈಮಾ

ಹೊಸ ವರ್ಷಾಚರಣೆಗೆ ಹೇಳಿ ಮಾಡಿಸಿದಂತಿರುವ ರಸ್‌ ಅಲ್‌ ಖೈಮಾ (Ras Al Khaimah) ನಗರವು ಈ ಬಾರಿಯೂ ಅದ್ಧೂರಿ ಆಚರಣೆ ಮೂಲಕ ಎರಡು ಗಿನ್ನೆಸ್‌ ದಾಖಲೆ ಬರೆದಿದೆ.

VISTARANEWS.COM


on

Ras Al Khaimah New Year Celebration
Koo

ಅಬುಧಾಬಿ: ಭಾರತ ಸೇರಿ ಜಗತ್ತಿನಾದ್ಯಂತ ಸಂಭ್ರಮ-ಸಡಗರದಿಂದ ಹೊಸ ವರ್ಷ ಆಚರಣೆ ಮಾಡಲಾಗಿದೆ. ಪಟಾಕಿ ಸಿಡಿಸಿ, ಹಾಡಿ, ಕುಣಿದು, ನಲಿದು ಹೊಸ ಸಂವತ್ಸರವನ್ನು ಸ್ವಾಗತಿಸಲಾಗಿದೆ. ಹೀಗೆ, ಅದ್ಧೂರಿಯಾಗಿ ಹೊಸ ವರ್ಷಾವನ್ನು ಸ್ವಾಗತಿಸುವ ಮೂಲಕ ಯುಎಇಯ ರಸ್‌ ಅಲ್‌ ಖೈಮಾ (Ras Al Khaimah) ನಗರವು ಎರಡು ಗಿನ್ನೆಸ್‌ ದಾಖಲೆ ಬರೆದಿದೆ. ಹೊಸ ವರ್ಷಾಚರಣೆಗೆ ತಾನೇ ಅಧಿಪತಿ ಎಂಬುದನ್ನು ಮತ್ತೆ ಸಾಬೀತುಪಡಿಸಿದೆ.

ಹೌದು, ರಸ್‌ ಅಲ್‌ ಖೈಮಾದಲ್ಲಿ ಶನಿವಾರ ರಾತ್ರಿ 673 ಡ್ರೋನ್‌ಗಳನ್ನು ಬಳಸಿ ಸುಮಾರು 4.7 ಕಿ.ಮೀ ವ್ಯಾಪ್ತಿಯಲ್ಲಿ ಪಟಾಕಿ ಸಿಡಿಸಿ, ಬೆಳಕಿನ ಚಿತ್ತಾರ ಮೂಡಿಸಿ, ಕೊನೆಗೆ ಆಗಸದಲ್ಲಿಯೇ ‘ಹ್ಯಾಪಿ ನ್ಯೂ ಇಯರ್‌ 2023’ (Happy New Year 2023) ಎಂಬ ಅಕ್ಷರಗಳು ಮೂಡುವ ಮೂಲಕ ಶುಭಕೋರಲಾಗಿದೆ. ಹಾಗಾಗಿ, ರಸ್‌ ಅಲ್‌ ಖೈಮಾದಲ್ಲಿ ಪಟಾಕಿ ಹಾಗೂ ದೀಪಗಳ ಚಿತ್ತಾರ ಮೂಡಿಸಿದ್ದು ಎರಡು ಗಿನ್ನೆಸ್‌ ದಾಖಲೆ ಬರೆದಿದೆ. ಸುಮಾರು 1,100 ಮೀಟರ್‌ ಎತ್ತರದಲ್ಲಿ ಪಟಾಕಿ ಸಿಡಿಸಿ, ವಿದ್ಯುತ್‌ ದೀಪಗಳನ್ನು ಬೆಳಗಲಾಗಿದೆ. ಹೀಗೆ, ಆಗಸದಲ್ಲಿ ಬೆಳಕಿನ ರಂಗಿನಾಟವಿರುವ 12 ನಿಮಿಷದ ವಿಡಿಯೊವನ್ನು ರಸ್‌ ಅಲ್‌ ಖೈಮಾದ ಆಡಳಿತವು ಶೇರ್‌ ಮಾಡಿದೆ.

ಇದಕ್ಕೂ ಮೊದಲು ಸುಮಾರು 458 ಡ್ರೋನ್‌ಗಳನ್ನು ಬಳಸಿ, ಪಟಾಕಿ ಸಿಡಿಸಿ, ಬೆಳಕಿನ ಚಿತ್ತಾರ ಮೂಡಿಸಿದ್ದು ಗಿನ್ನೆಸ್‌ ದಾಖಲೆ ಆಗಿತ್ತು. ಈಗ ಈ ದಾಖಲೆಯನ್ನು ರಸ್‌ ಅಲ್‌ ಖೈಮಾ ಮುರಿದಿದೆ. ಹೊಸ ವರ್ಷಾಚರಣೆಗೆ ರಸ್‌ ಅಲ್‌ ಖೈಮಾ ಖ್ಯಾತಿ ಗಳಿಸಿದ್ದು, ಈ ಬಾರಿ 30 ಸಾವಿರಕ್ಕೂ ಅಧಿಕ ಜನ ಹೊಸ ವರ್ಷ ಆಚರಿಸಲು ನಗರಕ್ಕೆ ಆಗಮಿಸಿದ್ದರು ಎಂಬುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ | New Year 2023 | ಜಗತ್ತಿನಾದ್ಯಂತ ಹೊಸ ವರ್ಷವನ್ನು ಸಂಭ್ರಮದಿಂದ ಸ್ವಾಗತಿಸಿದ್ದು ಹೇಗೆ? ಇಲ್ಲಿವೆ ಫೋಟೊಗಳು

Continue Reading
Advertisement
lok sabha election 2024 jaishankar rahul sonia murmu
ಪ್ರಮುಖ ಸುದ್ದಿ14 mins ago

Lok Sabha Election: ಮತ ಚಲಾಯಿಸಿದ ರಾಷ್ಟ್ರಪತಿ ಮುರ್ಮು, ಸೋನಿಯಾ, ರಾಹುಲ್;‌ ಮತಕ್ಕಾಗಿ ಸರ್ಟಿಫಿಕೇಟ್ ಪಡೆದ ಜೈಶಂಕರ್‌!

Konark Tourist Destination
ಪ್ರವಾಸ16 mins ago

Konark Tourist Destination: ರಜೆಯಲ್ಲಿ ಕೋನಾರ್ಕ್‌ಗೆ ಹೋದಾಗ ಈ ಅದ್ಭುತ ಸ್ಥಳಗಳಿಗೆ ಭೇಟಿ ನೀಡಲು ಮರೆಯಬೇಡಿ

Karthi next film Suriya to produce Meiyazhagan
ಕಾಲಿವುಡ್24 mins ago

Karthi next film: ಇಂದು ನಟ ಕಾರ್ತಿ ಬರ್ತ್‌ಡೇ: ತಮ್ಮನ ಚಿತ್ರಕ್ಕೆ ಅಣ್ಣ ಸೂರ್ಯ ಬಂಡವಾಳ!

IPL 2024
ಕ್ರೀಡೆ25 mins ago

IPL 2024: ಐಪಿಎಲ್​ ಟ್ರೋಫಿಯಲ್ಲಿರುವ ಸಂಸ್ಕೃತ ಶ್ಲೋಕದ ಮೂಲ ಸಾರವೇನು?

Best Tourist Places In Tamilnadu
ಪ್ರವಾಸ43 mins ago

Best Tourist Places In Tamilnadu: ಈ ಸುಂದರ ದೇವಾಲಯಗಳ ದರ್ಶನಕ್ಕಾದರೂ ತಮಿಳುನಾಡಿಗೆ ಹೋಗಲೇಬೇಕು!

rave party culprit with jagan mohan reddy
ಪ್ರಮುಖ ಸುದ್ದಿ50 mins ago

Rave Party: ರೇವ್‌ ಪಾರ್ಟಿ ಆರೋಪಿಗೆ ಆಂಧ್ರ ಸಿಎಂ ಜಗನ್‌ ಜೊತೆ ಸ್ನೇಹ!

IPL 2024 Prize money
ಕ್ರೀಡೆ1 hour ago

IPL 2024 Prize money: ಐಪಿಎಲ್​ ವಿನ್ನರ್​ಗೆ ಸಿಗುವ ಬಹುಮಾನ ಮೊತ್ತವೆಷ್ಟು? 4ನೇ ಸ್ಥಾನಿ ಆರ್​ಸಿಬಿಗೆ ಸಿಕ್ಕ ಹಣವೆಷ್ಟು?

South Indian Monsoon Destinations
ಪ್ರವಾಸ1 hour ago

South Indian Monsoon Destinations: ದಕ್ಷಿಣ ಭಾರತದ ಈ 6 ಸ್ಥಳಗಳಲ್ಲಿ ಮಳೆಗಾಲದಲ್ಲಿ ಚಾರಣ ಮಾಡಲೇಬೇಕು!

Kiccha Sudeep Max cinema Pre climax Photo leak
ಸ್ಯಾಂಡಲ್ ವುಡ್1 hour ago

Kiccha Sudeep: ʻಮ್ಯಾಕ್ಸ್ʼ ಪ್ರಿ- ಕ್ಲೈಮ್ಯಾಕ್ಸ್ ಫೋಟೊ ಲೀಕ್‌? ಬೆಂಕಿ ಬಿರುಗಾಳಿ ಅಂದ್ರು ಫ್ಯಾನ್ಸ್‌!

lok sabha election 2024 jaishankar mufti
Lok Sabha Election 20242 hours ago

Lok Sabha Election: 58 ಕ್ಷೇತ್ರಗಳಲ್ಲಿ 6ನೇ ಹಂತದ ಮತದಾನ ಆರಂಭ; ಜೈಶಂಕರ್‌ ಮತಗಟ್ಟೆ ಗೊಂದಲ, ಮುಫ್ತಿ ಪ್ರತಿಭಟನೆ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

dina bhavishya read your daily horoscope predictions for May 23 2024
ಭವಿಷ್ಯ2 days ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ3 days ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ4 days ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು4 days ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

Contaminated Water
ಮೈಸೂರು4 days ago

Contaminated Water : ಡಿ ಸಾಲುಂಡಿಯಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ ಯುವಕ ಸಾವು

Karnataka Rain
ಮಳೆ5 days ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

Karnataka Rain
ಮಳೆ6 days ago

Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

Karnataka rain
ಮಳೆ6 days ago

Karnataka Rain : ವಿಜಯನಗರದಲ್ಲಿ ಸಿಡಿಲಿಗೆ ಜಾನುವಾರು ಬಲಿ; ಬೆಂಗಳೂರು ಸೇರಿ ಹಲವೆಡೆ ಭಾರಿ ಮಳೆ

Karnataka Rain
ಮಳೆ6 days ago

Karnataka Rain: ಧಾರಾಕಾರ ಮಳೆಗೆ ಕಾಂಪೌಂಡ್ ಕುಸಿದು 4 ಬೈಕ್‌ಗಳು ಜಖಂ; ಮದುವೆ ಮಂಟಪಕ್ಕೆ ನುಗ್ಗಿದ ನೀರು‌

Prajwal Revanna Case JDS calls CD Shivakumar pen drive gang
ರಾಜಕೀಯ1 week ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

ಟ್ರೆಂಡಿಂಗ್‌