Karunada Sambhrama 2022 | ಕರುನಾಡ ಸಂಭ್ರಮಕ್ಕೆ ತೆರೆ: ಚಿರು ಸರ್ಜಾಗೆ ಮರಣೋತ್ತರ 'ಕನ್ನಡ‌ ಕಲಾ ಭೂಷಣ' ಪ್ರಶಸ್ತಿ - Vistara News

ಸಿನಿಮಾ

Karunada Sambhrama 2022 | ಕರುನಾಡ ಸಂಭ್ರಮಕ್ಕೆ ತೆರೆ: ಚಿರು ಸರ್ಜಾಗೆ ಮರಣೋತ್ತರ ‘ಕನ್ನಡ‌ ಕಲಾ ಭೂಷಣ’ ಪ್ರಶಸ್ತಿ

ಗೆಲುವು ಕನ್ನಡ ಗೆಳೆಯರ ಬಳಗ ಸಮಿತಿ ವತಿಯಿಂದ (Karunada Sambhrama 2022) ನಟ ಚಿರಂಜೀವಿ ಸರ್ಜಾ ಅವರಿಗೆ ಮರಣೋತ್ತರವಾಗಿ `ಕನ್ನಡ ಕಲಾ ಭೂಷಣ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.

VISTARANEWS.COM


on

Karunada Sambhrama 2022
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: 2022ರ ಕರುನಾಡ ಸಂಭ್ರಮಕ್ಕೆ (Karunada Sambhrama 2022 ) ಅದ್ಧೂರಿಯಾಗಿ ತೆರೆ ಬಿದ್ದಿದೆ. ಡಿಸೆಂಬರ್ 10.11 ರಂದು ನಡೆದ 12ನೇ ವರ್ಷದ ಕರುನಾಡ ಸಂಭ್ರಮ ಚಂದನವನದ ಸ್ಟಾರ್‌ಗಳ ಸಮಾಗಮ, ಹಾಡು, ಡಾನ್ಸ್‌ಗಳಿಂದ ಸಂಭ್ರಮಗೊಂಡಿತ್ತು. ಎರಡು ದಿನ‌ ಅದ್ಧೂರಿಯಾಗಿ ನಡೆದ ಈ ಕಾರ್ಯಕ್ರಮದಲ್ಲಿ ಗೆಲುವು ಕನ್ನಡ ಗೆಳೆಯರ ಬಳಗ ಸಮಿತಿ ವತಿಯಿಂದ ನಟ ಚಿರಂಜೀವಿ ಸರ್ಜಾ ಅವರಿಗೆ ಮರಣೋತ್ತರವಾಗಿ ‘ಕನ್ನಡ ಕಲಾ ಭೂಷಣ ಪ್ರಶಸ್ತಿ’ ನೀಡಿ ಗೌರವಿಸಲಾಯಿತು.

ನಟ ಚಿರಂಜೀವಿ ಸರ್ಜಾ ಅವರಿಗೆ ಮರಣೋತ್ತರ ‘ಕನ್ನಡ ಕಲಾ ಭೂಷಣ’ ಪ್ರಶಸ್ತಿಯನ್ನು ಗೆಲುವು ಕನ್ನಡ ಗೆಳೆಯರ ಬಳಗ ಸಮಿತಿ ನೀಡಿ ಗೌರವಿಸಿದೆ‌. ಸಹೋದರ ಹಾಗೂ ನಟ ಧ್ರುವ ಸರ್ಜಾ ಪ್ರಶಸ್ತಿಯನ್ನು ಸ್ವೀಕರಿಸಿ ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ. ಈ ವೇಳೆ ಗೆಲುವು ಕನ್ನಡ ಗೆಳೆಯರ ಬಳಗ ಸಮಿತಿ ಅಧ್ಯಕ್ಷ ಕೃಷ್ಣೇಗೌಡ್ರು, ಪ್ರದೀಪ್, ಪ್ರಶಾಂತ್ ಮತ್ತು ತಂಡ ಹಾಜರಿದ್ದರು.

ಇದನ್ನೂ ಓದಿ | Meghana Raj | ರಾಯನ್‌ ರಾಜ್‌ ಸರ್ಜಾಗೆ ಜನುಮದಿನ ಸಂಭ್ರಮ: ಸ್ಪೆಷಲ್‌ ವಿಡಿಯೊ ಹಂಚಿಕೊಂಡ ಮೇಘನಾ ರಾಜ್‌!

Karunada Sambhrama 2022

ವರುಣ್ ಸ್ಟುಡಿಯೋಸ್ ಮತ್ತು ರಾಜ್ ಇವೆಂಟ್ಸ್ ಸಹಯೋಗದಲ್ಲಿ ನಡೆದ ಕರುನಾಡ ಸಂಭ್ರಮ‌ ಯಶಸ್ವಿಯಾಗಿ ತೆರೆ ಕಂಡಿದೆ. ಚಂದನವನದ ಖ್ಯಾತ ತಾರೆಯರು ಭಾಗಿಯಾಗಿ ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಿದ್ದರು. ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್ ‘ಗಿಲ್ಲಕ್ಕೋ ಶಿವ ಗಿಲ್ಲಕ್ಕೋ’ ಹಾಡಿಗೆ ಹೆಜ್ಜೆ ಹಾಕಿ ಕಾರ್ಯಕ್ರಮದ ಎನರ್ಜಿ ಹೆಚ್ಚಿಸಿದ್ದರು. ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ, ಕಾವ್ಯಾ ಶಾ, ವಿಕ್ರಮ್ ರವಿಚಂದ್ರನ್, ನಿಧಿ ಸುಬ್ಬಯ್ಯ, ಸಂಗೀತಾ ಶೃಂಗೇರಿ, ವಿರಾಟ್ ಸೇರಿದಂತೆ ಹಲವು ತಾರೆಯರು ತಮ್ಮ ಡಾನ್ಸ್ ಮೂಲಕ ನೆರೆದಿದ್ದವರನ್ನು ರಂಜಿಸಿದ್ದರು. ಎಸ್. ಪಿ. ಬಿ ಚರಣ್, ಸಿಂಗರ್ ಮನು, ನವೀನ್ ಸಜ್ಜು, ಅನುರಾಧ ಭಟ್, ವಿಜಯ್ ಪ್ರಕಾಶ್ ತಮ್ಮ ಗಾಯನದ ಮೂಲಕ ಕಾರ್ಯಕ್ರಮದ ರಂಗು ಹೆಚ್ಚಿಸಿದ್ದರು.

ಮಾನ್ವಿತಾ ಹರೀಶ್, ಸೃಜನ್ ಲೊಕೇಶ್, ಶ್ರೀನಗರ ಕಿಟ್ಟಿ, ರವಿಶಂಕರ್ ಗೌಡ, ರವಿಶಂಕರ್ ಸೇರಿದಂತೆ ಹಲವು ತಾರೆಯರು ಕರುನಾಡ ಸಂಭ್ರಮ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದರು.

ಇದನ್ನೂ ಓದಿ | Karunada Sambhrama 2022 | ಡಿ. 10,11ರಂದು ಕರುನಾಡ ಸಂಭ್ರಮ : ಚಿರಂಜೀವಿ ಸರ್ಜಾಗೆ ಮರಣೋತ್ತರ ಕನ್ನಡ ಕಲಾಭೂಷಣ ಪ್ರಶಸ್ತಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಬಿಗ್ ಬಾಸ್

Actress Siri: ಬಿಗ್​ಬಾಸ್​ನಲ್ಲಿ ಚಿಗುರಿತಾ ಪ್ರೇಮ? ‘ರಂಗೋಲಿ’ ಖ್ಯಾತಿಯ ಸಿರಿಯ ವರನ್ಯಾರು?

Actress Siri: ಬಿಗ್ ಬಾಸ್ ಸಿರಿ ಮದುವೆಯಾಗಿರುವ ಹುಡುಗ ಮೂಲತಃ ಮಂಡ್ಯದವರು ಸದ್ಯ ಬೆಂಗಳೂರಿನಲ್ಲಿ ನಲೆಸಿದ್ದಾರೆ. ಅವರ ಹೆಸರು ಪ್ರಭಾಕರ್ ಬೋರೇಗೌಡ. ಪ್ರಭಾಕರ್‌ ಬೋರೇಗೌಡ ಮತ್ತು ಸಿರಿ ಒಟ್ಟಿಗೆ ನಟಿಸಿದ್ದಾರೆ ಎನ್ನಲಾಗಿದೆ. ಬಿಗ್ ಬಾಸ್‌ ಮನೆಯಿಂದ ಸಿರಿ ಎಲಿಮಿನೇಟ್‌ ಆದ ಬಳಿಕ ಸಿರಿ ಬಗ್ಗೆ ಪೋಸ್ಟ್‌ ಹಂಚಿಕೊಂಡಿದ್ದಾರೆ.

VISTARANEWS.COM


on

Actress Siri marriage to actor prabhakar
Koo

ಬೆಂಗಳೂರು: ‘ರಂಗೋಲಿ’, ‘ಮನೆಯೊಂದು ಮೂರು ಬಾಗಿಲು’, ‘ಬದುಕು’ ಮುಂತಾದ ಧಾರಾವಾಹಿಗಳನ್ನು ಪ್ರೇಕ್ಷಕರು ಮನಗೆದ್ದ ಸಿರಿ ಬಿಗ್ ಬಾಸ್ (BBK Season 10) ಈಗ ಮದುವೆಯಾಗಿದ್ದಾರೆ. ಇನ್ನೂ (Actress Siri) ಯಾಕೆ ಮದುವೆ ಆಗಿಲ್ಲ? ಎಂಬ ಪ್ರಶ್ನೆಗಳನ ನಡುವೆ ಅವರು ಸದ್ದಿಲ್ಲದೇ, ಸಿಂಪಲ್‌ ಆಗಿ ಹಸೆ ಮಣೆ ಏರಿದ್ದಾರೆ. ಮೂಲಗಳ ಪ್ರಕಾರ ಸಿರಿ ಮದುವೆಯಾದ ಹುಡುಗನ ಹೆಸರು ಪ್ರಭಾಕರ್. ಮಂಡ್ಯ ಮೂಲದವರಾದ ಇವರು ಬೆಂಗಳೂರಿನಲ್ಲಿ ವಾಸಿಸುತ್ತಿದ್ದಾರೆ. ಇವರಿಬ್ಬರೂ ಚಿಕ್ಕಬಳ್ಳಾಪುರದ ನಂದಿ ಗ್ರಾಮದಲ್ಲಿ ಮದುವೆ ಮಾಡಿಕೊಂಡಿದ್ದಾರೆ.

ಬಿಗ್ ಬಾಸ್ ಸಿರಿ ಮದುವೆಯಾಗಿರುವ ಹುಡುಗ ಮೂಲತಃ ಮಂಡ್ಯದವರು ಸದ್ಯ ಬೆಂಗಳೂರಿನಲ್ಲಿ ನಲೆಸಿದ್ದಾರೆ. ಅವರ ಹೆಸರು ಪ್ರಭಾಕರ್ ಬೋರೇಗೌಡ. ಪ್ರಭಾಕರ್‌ ಬೋರೇಗೌಡ ಮತ್ತು ಸಿರಿ ಒಟ್ಟಿಗೆ ನಟಿಸಿದ್ದಾರೆ ಎನ್ನಲಾಗಿದೆ. ಬಿಗ್ ಬಾಸ್‌ ಮನೆಯಿಂದ ಸಿರಿ ಎಲಿಮಿನೇಟ್‌ ಆದ ಬಳಿಕ ಸಿರಿ ಈ ಬಗ್ಗೆ ಪೋಸ್ಟ್‌ ಹಂಚಿಕೊಂಡಿದ್ದಾರೆ. ‘ನಿಮ್ಮಲ್ಲರ ಸಪೋರ್ಟ್‌ಗೆ ವಂದನೆಗಳು’ ಎಂದು ಪ್ರಭಾಕರ್ ಬರೆದುಕೊಂಡಿದ್ದರು.

ಇವರಿಬ್ಬರ ಪರಿಚಯ ಆಗಿದ್ದು ಹೇಗೆ? ಲವ್ ಮ್ಯಾರೇಜ್ ಆಗಿರಬಹುದಾ? ಬಿಗ್ ಬಾಸ್‌ ನಂತರ ಅರಳಿದ ಪ್ರೀತಿನಾ ಎಂದು ಜನರು ಕಮೆಂಟ್‌ ಮೂಲಕ ಪ್ರಶ್ನೆ ಇಡುತ್ತಿದ್ದಾರೆ.

ಇದನ್ನೂ ಓದಿ: Actress Siri: ಸಿಂಪಲ್‌ ಆಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟ `ಬಿಗ್‌ ಬಾಸ್‌ ಕನ್ನಡ 10′ ಸ್ಪರ್ಧಿ, ನಟಿ ಸಿರಿ!

ಸಿರಿ ಅವರಿಗೆ ಮೈತುಂಬ ಅರಿಷಿಣ ಹಚ್ಚಿರುವ ವಿಡಿಯೊ ವೈರಲ್ ಆಗಿದೆ. ಇದು ಸಿನಿಮಾ ಅಥವಾ ಧಾರಾವಾಹಿ ಶೂಟಿಂಗ್ ಇರಬಹುದು ಎಂದು ಎಲ್ಲರೂ ಭಾವಿಸಿದ್ದರು. ಆದರೆ ಸಿರಿ ಅವರು ರಿಯಲ್ ಲೈಫ್‌ನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಆದರೆ ಹುಡುಗ ಯಾರು ಎಂಬುದು ಇನ್ನೂ ರಿವೀಲ್‌ ಆಗಿಲ್ಲ. ಹಾಗೇ ಸಿರಿ ಕೂಡ ಎಲ್ಲಿಯೂ ಪೋಸ್ಟ್‌ ಶೇರ್‌ ಮಾಡಿಕೊಂಡಿಲ್ಲ. ಸಿರಿ ಅವರಿಗೆ ಈಗ 40 ವರ್ಷ ವಯಸ್ಸು ಎನ್ನಲಾಗಿದೆ. ಕೆಲವು ದಿನಗಳ ಹಿಂದೆ ಕಲರ್ಸ್‌ ಕನ್ನಡದ ʻರಾಮಾಚಾರಿʼ ಧಾರಾವಾಹಿಯಲ್ಲಿ ನಟಿ ಬಣ್ಣ ಹಚ್ಚಿದ್ದರು. ಈಗ ಪರಭಾಷೆಯ ಕಿರುತೆರೆಯಲ್ಲಿಯೂ ಮಿಂಚುತ್ತಿದ್ದಾರೆ. ಕೆಲ ಸಿನಿಮಾಗಳಲ್ಲಿ ಕೂಡ ಸಿರಿ ಅವರು ನಟಿಸಿದ್ದಾರೆ. 30 ವರ್ಷಗಳ ಕಾಲ ಕನ್ನಡ ಕಿರುತೆರೆಯಲ್ಲಿ ಸಿರಿವಂತೆಯಾಗಿ ಮೆರೆದ ಸಿರಿ ಯಾಕೆ ಮದುವೆಯಾಗಲಿಲ್ಲ ಎಂದು ನೆಟ್ಟಿಗರು ನಟಿಗೆ ಹಲವು ಬಾರಿ ಪ್ರಶ್ನೆ ಮಾಡಿದ್ದೂ ಇದೆ.

ಬಿಗ್‌ ಬಾಸ್‌ ವೇದಿಕೆಯಲ್ಲಿ ಈ ಬಗ್ಗೆ ಸಿರಿ ಮಾತನಾಡಿದ್ದು ಇದೆ. ಮದುವೆ ಬಗ್ಗೆ ಸಿರಿ ಮಾತನಾಡಿ ʻʻನಟನೆಯಲ್ಲಿ ಇರುವುದರಿಂದ ನನ್ನನ್ನು ಅರ್ಥ ಮಾಡಿಕೊಳ್ಳುವ ಹುಡುಗ ಬೇಕು. ಈಗ ನನ್ನ ಮನೆಗೆ ಅಳಿಯ ಎನ್ನುವುದಕ್ಕಿಂತ ಮಗನಾಗಿ ಬರಬೇಕು. ತಂದೆ ಹೋದ ಮೇಲೆ ನಾವು ಹೆಣ್ಣು ಮಕ್ಕಳೇ ಇರುವುದು. ಮದುವೆ ನನಗೆ ನಿಜವಾಗಲೂ ಬೇಕಾ ಎಂದು ಕೆಲವೊಮ್ಮೆ ಅನ್ನಿಸಿದಾಗ ನನಗೇನು ಮದುವೆ ಅವಶ್ಯ ಇದೆ ಎಂದು ಎನಿಸಲಿಲ್ಲʼʼ ಎಂದಿದ್ದರು. ಮದುವೆ ಬಗ್ಗೆ ಸಿರಿ ಮಾತನಾಡಿ ʻʻನಟನೆಯಲ್ಲಿ ಇರುವುದರಿಂದ ನನ್ನನ್ನು ಅರ್ಥ ಮಾಡಿಕೊಳ್ಳುವ ಹುಡುಗ ಬೇಕು. ಈಗ ನನ್ನ ಮನೆಗೆ ಅಳಿಯ ಎನ್ನುವುದಕ್ಕಿಂತ ಮಗನಾಗಿ ಬರಬೇಕು. ತಂದೆ ಹೋದ ಮೇಲೆ ನಾವು ಹೆಣ್ಣು ಮಕ್ಕಳೇ ಇರುವುದು. ಮದುವೆ ನನಗೆ ನಿಜವಾಗಲೂ ಬೇಕಾ ಎಂದು ಕೆಲವೊಮ್ಮೆ ಅನ್ನಿಸಿದಾಗ ನನಗೇನು ಮದುವೆ ಅವಶ್ಯ ಇದೆ ಎಂದು ಎನಿಸಲಿಲ್ಲʼʼ ಎಂದಿದ್ದರು.

ಬಿಗ್‌ಬಾಸ್‌ ಮನೆಗೆ ಇವರ ವ್ಯಕ್ತಿತ್ವ ಹೊಂದುವುದಿಲ್ಲ’, ‘ಯಾವುದರಲ್ಲಿಯೂ ಅಷ್ಟಾಗಿ ತೊಡಗಿಕೊಳ್ಳುವುದಿಲ್ಲ’ ‘ಟಾಸ್ಕ್‌ಗಳಲ್ಲಿ ಪರ್ಫಾರ್ಮ್‌ ಮಾಡಿಲ್ಲ’ ಇಂಥ ಮಾತುಗಳನ್ನೆಲ್ಲ ಮನೆಯ ಸದಸ್ಯರಿಂದ ಕೇಳುತ್ತಲೇ ಬಿಗ್‌ಬಾಸ್‌ ಸೀಸನ್‌ನ ಮುಕ್ಕಾಲು ದಾರಿಯನ್ನು ಕ್ರಮಿಸಿ ಸೈ ಎನಿಸಿಕೊಂಡಿದ್ದರು ಸಿರಿ.

Continue Reading

Latest

OTT Release: ಈ ವಾರ ಒಟಿಟಿಯಲ್ಲಿ ನೋಡಬಹುದಾದ ಸಿನಿಮಾ, ವೆಬ್‌ ಸಿರೀಸ್‌ಗಳಿವು

OTT Release: ಈ ವಾರ ಕೂಡ ಒಟಿಟಿಯಲ್ಲಿ ಹಲವಾರು ಹಿಟ್ ಶೋಗಳು ರಿಲೀಸ್ ಆಗಲಿವೆ. ಹೌಸ್ ಆಫ್ ದಿ ಡ್ರ್ಯಾಗನ್, ಬ್ರಿಡ್ಜರ್ಟನ್, ದಿ ಬಾಯ್ಸ್, ಪ್ರಿಸ್ಯುಮಡ್ ಇನ್ನೊಸೆಂಟ್ ಹಾಗೂ ವಿದ್ಯಾಬಾಲನ್ ಹಾಗೂ ಪ್ರತೀಕ್ ಗಾಂಧಿ ಅಭಿನಯಿಸಿದ ಗಲ್ಲಾ ಪೆಟ್ಟಿಗೆಯಲ್ಲಿ ಕಳಪೆ ಪ್ರದರ್ಶನ ಕಂಡ ಬಾಲಿವುಡ್ ಚಲನಚಿತ್ರ ದೋ ಔರ್ ದೋ ಪ್ಯಾರ್ ಕೂಡ ಈ ಬಾರಿ ಒಟಿಟಿಯಲ್ಲಿ ರಿಲೀಸ್ ಆಗಲಿವೆ. ಒಟ್ಟಾರೆ ಈ ವಾರ ಸಿನಿ ಪ್ರಿಯರಿಗೆ ಹಬ್ಬದೂಟವನ್ನು ಉಣಬಡಿಸಲಿದೆ.

VISTARANEWS.COM


on

OTT Release
Koo

ಮುಂಬೈ : ಪ್ರತಿವಾರ ಒಟಿಟಿಯಲ್ಲಿ ಸಾಕಷ್ಟು ಸೂಪರ ಹಿಟ್ ಶೋಗಳು ರಿಲೀಸ್ ಆಗುತ್ತಿರುತ್ತವೆ. ಈ ಮೂಲಕ ಒಟಿಟಿ ಜನರಿಗೆ ಸಾಕಷ್ಟು ಮನರಂಜನೆಯನ್ನು ನೀಡುತ್ತಿದೆ. ಹಾಗಾಗಿ ಈ ವಾರವೂ ಕೂಡ ಒಟಿಟಿ(OTT Release)ಯಲ್ಲಿ ಹಲವಾರು ಹಿಟ್ ಶೋಗಳು ರಿಲೀಸ್ ಆಗಲಿವೆ. ಗಲ್ಲಾ ಪೆಟ್ಟಿಗೆಯಲ್ಲಿ ಕಳಪೆ ಪ್ರದರ್ಶನ ಕಂಡ ಕೆಲವು ಬಾಲಿವುಡ್ ಚಲನಚಿತ್ರಗಳೂ ಈ ಬಾರಿ ಒಟಿಟಿಯಲ್ಲಿ ರಿಲೀಸ್ ಆಗಲಿದೆ. ಅವುಗಳ ವಿವರ ಇಲ್ಲಿದೆ.

ಹೌಸ್ ಆಫ್ ದಿ ಡ್ರ್ಯಾಗನ್ (ಸೀಸನ್ 2)

ಎಚ್‌ಬಿಓನ ಸೀರಿಸ್ ʼಹೌಸ್ ಆಫ್ ದಿ ಡ್ರ್ಯಾಗನ್ʼ ಸೀಸನ್ 2 ಜೂನ್ 16ರಂದು ಹೊಸ ಸಂಘರ್ಷ, ಸೇಡು ತೀರಿಸಿಕೊಳ್ಳುವ ಹೊಸ ಕಥಾವಸ್ತುಗಳೊಂದಿಗೆ ಮತ್ತೆ ಪ್ರೇಕ್ಷಕರ ಮುಂದೆ ಬಂದಿದೆ. ಜಾರ್ಜ್ ಆರ್ ಆರ್ ಮಾರ್ಟಿನ್ ಅವರ ʼಫೈರ್ ಆ್ಯಂಡ್ ಬ್ಲಡ್ʼ ಆಧರಿಸಿದ ಈ ಸರಣಿಯು ರಾಜ ಕುಟುಂಬದ ಕಥೆಯನ್ನು ಒಳಗೊಂಡಿದೆ. ರಾಜ ಕುಟುಂಬ ಅಧಿಕಾರದ ಸಂಘರ್ಷ, ಒಳಸಂಚು, ಕೌಟುಂಬಿಕ ಶತ್ರುತ್ವವನ್ನು ಇದರಲ್ಲಿ ಕಾಣಬಹುದು.
ಇದು ಜೂನ್ 16ರಂದು ಜಿಯೋ ಸಿನಿಮಾದಲ್ಲಿ ಬೆಳಗ್ಗೆ 6.30ರಿಂದ ಲಭ್ಯವಾಗಲಿದೆ.

ಬ್ರಿಡ್ಜರ್ಟನ್(ಸೀಸನ್ 3, ಭಾಗ 2)

ಇದರಲ್ಲಿ ಕಾಲಿನ್ ಮತ್ತು ಪೆನೆಲೋಪ್ ಅವರ ಪ್ರಣಯವನ್ನು ಪ್ರೇಕ್ಷಕರು ಕಣ್ತುಂಬಿಸಿಕೊಳ್ಳಬಹುದು. ಇದು ರೀಜೆನ್ಸಿ ಯುಗದ ಪ್ರಣಯ ಸರಣಿಯು ಜೂಲಿಯಾ ಕ್ವಿನ್ ಅವರ ಪುಸ್ತಕಗಳನ್ನು ಆಧರಿಸಿದೆ. ಪ್ರತಿಯೊಂದು ದೃಶ್ಯ ಬ್ರಿಡ್ಜರ್ಟನ್ ಕುಟುಂಬದ ಒಡಹುಟ್ಟಿದವರ ಮೇಲೆ ಕೇಂದ್ರೀಕರಿಸುತ್ತದೆ. ಮೂರನೇ ಸೀಸನ್‌ನಲ್ಲಿ ಪೆನೆಲೋಪ್ ಲೇಡಿ ವಿಸ್ಲ್ ಡೌನ್‌ನ ರಹಸ್ಯ ಗುರುತಿನಿಂದಾಗಿ ತನ್ನ ಜೀವನದ ಪ್ರೀತಿಯನ್ನು ಕಳೆದುಕೊಳ್ಳುವ ಅಪಾಯವನ್ನು ಎದುರಿಸುತ್ತಾಳೆ. ಅವಳ ಸತ್ಯ ಬಯಲಾಗುವುದೋ? ಅಥವಾ ಅವಳು ಸುಖವಾಗಿ ಬದುಕುವಳೋ? ಎಂಬುದನ್ನು ನೋಡಬೇಕು. ಇದು ನೆಟ್ ಫ್ಲಿಕ್ಸ್ ನಲ್ಲಿ ಸ್ಟ್ರೀಮಿಂಗ್‌ನಲ್ಲಿ ನೋಡಬಹುದು.

ದೋ ಔರ್ ದೋ ಪ್ಯಾರ್

ಬಾಕ್ಸ್ ಆಫೀಸ್‌ನಲ್ಲಿ ಕಳಪೆ ಪ್ರದರ್ಶನ ಕಂಡ ವಿದ್ಯಾ ಬಾಲನ್ ಅವರ ರೊಮ್ಯಾಂಟಿಕ್ ಕಾಮಿಡಿ ಇದೀಗ ಒಟಿಟಿಯಲ್ಲಿ ಕಾಣಿಸಿಕೊಂಡಿದೆ. ʼದೋ ಔರ್ ದೋ ಪ್ಯಾರ್‌ʼನಲ್ಲಿ ಕಾವ್ಯ ಮತ್ತು ಅನಿಯ ಪಾತ್ರದಲ್ಲಿ ವಿದ್ಯಾ ಬಾಲನ್ ಹಾಗೂ ಪ್ರತೀಕ್ ಗಾಂಧಿ ಅಭಿನಯಿಸಿದ್ದಾರೆ. ಊಟಿ ಪ್ರವಾಸದ ನಂತರ ವಿವಾಹೇತರ ಸಂಬಂಧದಲ್ಲಿ ತೊಡಗಿಕೊಂಡಿದ್ದರೂ ಸಹ ಪರಸ್ಪರ ಪ್ರೀತಿಸುವ ವಿವಾಹಿತ ದಂಪತಿಗಳಂತೆ ಇವರಿಬ್ಬರು ನಟಿಸುತ್ತಾರೆ. ಇದನ್ನು ಡಿಸ್ನಿ ಹಾಟ್ ಸ್ಟಾರ್‌ನಲ್ಲಿ ಸ್ಟ್ರೀಮಿಂಗ್ ನಲ್ಲಿ ನೋಡಬಹುದು.

ದಿ ಬಾಯ್ಸ್ (ಸೀಸನ್ 4)

ವಿಡಂಬನಾತ್ಮಕ ಸೂಪರ್ ಹೀರೋ ಸರಣಿಯ ʼದಿ ಬಾಯ್ಸ್ʼ ಸೀಸನ್ 4ರ ಮೊದಲ ಮೂರು ಸಂಚಿಕೆಗಳನ್ನು ಗುರುವಾರ ಪ್ರೈಮ್ ವಿಡಿಯೊದಲ್ಲಿ ಬಿಡುಗಡೆ ಮಾಡಲಾಗಿದೆ. ಕಾರ್ಲ್ ಅರ್ಬನ್, ಜ್ಯಾಕ್ ಕ್ವೈಡ್, ಆಂಟೋನಿ ಸ್ಟಾರ್, ಜೆನ್ಸಿ ಟಿ ಉಷರ್, ಎರಿನ್ ಮೊರಿಯಾರ್ಟಿ ಮತ್ತು ಚೇಸ್ ಕ್ರಾಫೋರ್ಡ್ ಹಿಂದಿನ ಪಾತ್ರವರ್ಗದವರಾದರೆ ವ್ಯಾಲೋರಿ ಕರಿ ಮತ್ತು ಸುಸಾನ್ ಹೇವಾರ್ಡ್ ಇಬ್ಬರು ಹೊಸ ಸೂಪರ್ ಹೀರೋಗಳಾಗಿದ್ದಾರೆ. ಇದನ್ನು ಪ್ರೈಮ್ ವಿಡಿಯೋದಲ್ಲಿ ಸ್ಟ್ರೀಮಿಂಗ್ ನಲ್ಲಿ ನೋಡಬಹುದು.

ಇದನ್ನೂ ಓದಿ: Yogi Adityanath: ರಸ್ತೆಯಲ್ಲಿ ನಮಾಜ್ ಮಾಡಿದರೆ ಹುಷಾರ್! ಬಕ್ರೀದ್ ಹಿನ್ನೆಲೆಯಲ್ಲಿ ಮುಸ್ಲಿಮರಿಗೆ ಯೋಗಿ ವಾರ್ನಿಂಗ್!

ಪ್ರಿಸ್ಯುಮಡ್ ಇನ್ನೊಸೆಂಟ್ (Presumed Innocent)

ಜೇಕ್ ಗಿಲೆನ್ ಹಾಲ್ ʼಪ್ರಿಸ್ಯುಮಡ್ ಇನ್ನೊಸೆಂಟ್‌ʼನಲ್ಲಿ ಕೊಲೆ ಪ್ರಕರಣದಲ್ಲಿನ ಪ್ರಾಸಿಕ್ಯೂಟರ್ ಆಗಿ ನಟಿಸಿದ್ದಾರೆ. ಇದು ಸ್ಕಾಟ್ ಟುರೊವ್ ಅವರ ಕಾದಂಬರಿ ಆಧರಿಸಿದೆ. ನಿಜ ಜೀವನದಲ್ಲಿ ಜೇಕ್‌ನ ಸಹೋದರಿ ಮ್ಯಾಗಿಯನ್ನು ಮದುವೆಯಾಗಿರುವ ಪೀಟರ್ ಸರ್ಸ್ ಗಾರ್ಡ್, ಗಿಲೆನ್ ಹಾಲ್‌ನ ನ್ಯಾಯಾಲಯದಲ್ಲಿ ಎದುರಾಳಿಯಾಗಿ ನಟಿಸಿದ್ದಾರೆ. ಇದನ್ನು ಆಪಲ್ ಟಿವಿ ಸ್ಟ್ರೀಮಿಂಗ್‌ನಲ್ಲಿ ನೋಡಬಹುದು.

Continue Reading

ಸ್ಯಾಂಡಲ್ ವುಡ್

Actor Darshan: ಹಲವು ವರ್ಷಗಳಿಂದ ದರ್ಶನ್ ಆಪ್ತ ʻಮಲ್ಲಿʼನಾಪತ್ತೆ; ರೇಣುಕಾ ಸ್ವಾಮಿಯ ಗತಿಯೇ ಆಯ್ತಾ?

Actor Darshan: ಇದೀಗ ದರ್ಶನ್ ಆಪ್ತ ಮಲ್ಲಿಕಾರ್ಜುನ್ ಅಲಿಯಾಸ್ ಮಲ್ಲಿ ಅಚಾನಕ್ಕಾಗಿ ಕಾಣೆಯಾದ ಪ್ರಕರಣ ಇದೀಗ ಮುನ್ನೆಲೆಗೆ ಬಂದಿದೆ. 2018ರ ಫೆಬ್ರವರಿ ತಿಂಗಳು 9ನೇ ತಾರೀಕು ತೆರೆಕಂಡ “ಪ್ರೇಮ ಬರಹʼದ ಕಲೆಕ್ಷನ್ ಅಮೌಂಟ್ ಮಲ್ಲಿಕಾರ್ಜುನ್ ಕೊಟ್ಟಿರಲಿಲ್ಲ. 2018 ಫೆಬ್ರವರಿ ತಿಂಗಳ ನಂತರ ಮುಂದಿನ ಆರೇಳು ತಿಂಗಳು ಅರ್ಜುನ್ ಸರ್ಜಾ ಅವರು ಮಲ್ಲಿಕಾರ್ಜುನ್ ಅವರಲ್ಲಿ ವಿತರಣೆಯ ಹಣವನ್ನು ಕೊಡುವಂತೆ ಕೇಳಿಕೊಂಡಿದ್ದಾರೆ. ಇದೇ ಸಮಯದಲ್ಲಿ ಮಲ್ಲಿಕಾರ್ಜುನ್ ನಾಪತ್ತೆ ಆಗಿಬಿಟ್ಟರು.

VISTARANEWS.COM


on

Actor Darshan Assistant Malli missing case
Koo

ಬೆಂಗಳೂರು: ನಟ ದರ್ಶನ್ (Actor Darshan) ಅವರ ಮಾಜಿ ಪಿ.ಎ ಮಲ್ಲಿಕಾರ್ಜುನ್ ವಿರುದ್ಧ ಹಲವು ಆರೋಪಗಳು ಈ ಹಿಂದೆ ಕೇಳಿ ಬಂದಿದ್ದವು. ನಟ ಅರ್ಜುನ್ ಸರ್ಜಾ (Arjun Sarja) ಅವರು ʻಪ್ರೇಮ ಬರಹ’ (Prema Baraha) ಚಿತ್ರದ ವಿತರಣೆ ಹಣದ ವಿಚಾರವಾಗಿ ಮಲ್ಲಿಕಾರ್ಜುನ್ ವಿರುದ್ಧ ಕೇಸ್ ದಾಖಲಿಸಿದ್ದರು. ಮಲ್ಲಿಕಾರ್ಜುನ್ ವಿರುದ್ಧ 1 ಕೋಟಿ ರೂ. ಚೆಕ್ ಬೌನ್ಸ್ ಪ್ರಕರಣ ದಾಖಲಾಗಿದೆ. ಆದರೆ, ಮಲ್ಲಿ ಕಳೆದ 7 ವರ್ಷಗಳಿಂದ ನಾಪತ್ತೆಯಾಗಿದ್ದಾರೆ ಎಂದು ದೂರು ನೀಡಿದ್ದಾರೆ ಅರ್ಜುನ್ ಸರ್ಜಾ. ಇದೀಗ ದರ್ಶನ್ ಆಪ್ತ ಮಲ್ಲಿಕಾರ್ಜುನ್ ಅಲಿಯಾಸ್ ಮಲ್ಲಿ ಅಚಾನಕ್ಕಾಗಿ ಕಾಣೆಯಾದ ಪ್ರಕರಣ ಇದೀಗ ಮುನ್ನೆಲೆಗೆ ಬಂದಿದೆ. ಮಲ್ಲಿ ಎಲ್ಲಿದ್ದಾನೆ? ಬದುಕಿದ್ದಾನೆಯೇ? ಅಥವಾ ರೇಣುಕಾ ಸ್ವಾಮಿ ರೀತಿಯ ಆತನದ್ದೂ ಕೊಲೆ ಆಗಿದೆಯೇ? ಎಂಬ ಪ್ರಶ್ನೆಗಳು ಸಾಮಾಜಿಕ ಜಾಲತಾಣದಲ್ಲಿ ಎದ್ದಿವೆ.

ಶ್ರೀ ಕಾಲಕಾಲೇಶ್ವರ ಎಂಟರ್​ಪ್ರೈಸಸ್ ಕಂಪನಿ ಒಡೆಯರಾಗಿದ್ದ ಮಲ್ಲಿಕಾರ್ಜುನ್, ಗಾಂಧಿನಗರದಲ್ಲಿ ಹಲವರಿಗೆ 11 ಕೋಟಿ ರೂ. ಮೋಸ ಮಾಡಿರುವುದಾಗಿ ತಿಳಿದು ಬಂದಿತ್ತು. ಮಾತ್ರವಲ್ಲ ನಟ ದರ್ಶನ್‌ಗೆ 2 ಕೋಟಿ ರೂ. ಮೋಸ ಮಾಡಿ ನಾಪತ್ತೆಯಾಗಿದ್ದಾರೆ ಎಂಬ ದೂರಿತ್ತು. ಮಲ್ಲಿಕಾರ್ಜುನ್ ವಿಚಾರವಾಗಿ ಅರ್ಜುನ್ ಸರ್ಜಾ ಅವರು ಮತ್ತು ಅವರ ಪರ ವಕೀಲರು ನ್ಯಾಯಾಲಯದ ಮೊರೆ ಹೋಗಿದ್ದರು. ಮಲ್ಲಿಕಾರ್ಜುನ್‌ ಹಾಜರಾಗದೇ ಇದ್ದರೆ ವಾರಂಟ್ ಜಾರಿ ಮಾಡಬಹುದು ಎಂದು ಕೋರ್ಟ್‌ ಆದೇಶ ನೀಡಿತ್ತು.

ಪ್ರೇಮ ಬರಹ ಸಿನಿಮಾ ಪ್ರಕರಣ

ಅರ್ಜುನ್ ಸರ್ಜಾ (Arjun Sarja) ನಿರ್ದೇಶನ ಮತ್ತು ನಿರ್ಮಾಣದ ಚಿತ್ರ ʻಪ್ರೇಮ ಬರಹʼ ಚಿತ್ರವನ್ನು ಮಲ್ಲಿಕಾರ್ಜುನ್ (ಮಲ್ಲಿ) ರಾಜ್ಯಾದ್ಯಂತ ವಿತರಣೆ ಮಾಡಿದ್ದರು. 2018 ಫೆಬ್ರವರಿ 9ನೇ ತಾರೀಖು ರಾಜ್ಯಾದ್ಯಂತ ʻಪ್ರೇಮ ಬರಹʼ ಸಿನಿಮಾ ರಿಲೀಸ್ ಆಗಿತ್ತು. ಚಂದನ್ ಕುಮಾರ್ ಹಾಗೂ ಅರ್ಜುನ್ ಸರ್ಜಾ ಅವರ ಮೊದಲ ಪುತ್ರಿ ಐಶ್ವರ್ಯ ಅರ್ಜುನ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದರು. ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮತ್ತು ದಿವಂಗತ ಚಿರು ಸರ್ಜಾ ಹಾಡೊಂದರಲ್ಲಿ ಕಾಣಿಸಿಕೊಂಡಿದ್ದರು. 2018ರ ಶುರುವಿನಲ್ಲಿ ಎಲ್ಲವೂ ಚೆನ್ನಾಗಿಯೇ ಇತ್ತು. ಆದರೆ ಪ್ರೇಮ ಬರಹ ಸಿನಿಮಾದ ವಿತರಣೆಯ ಹಣದ ವಿಚಾರದಲ್ಲಿ ದರ್ಶನ್ ಮಾಜಿ ಪಿ.ಎ ಮಲ್ಲಿಕಾರ್ಜುನ್ ಮತ್ತು ನಟ-ನಿರ್ಮಾಪಕ-ನಿರ್ದೇಶಕ ಅರ್ಜುನ್ ಸರ್ಜಾರಲ್ಲಿ ವೈ ಮನಸ್ಸು ಶುರುವಾಯ್ತು. ಅರ್ಜುನ್ ಸರ್ಜಾ ಮತ್ತು ಮಲ್ಲಿಕಾರ್ಜುನ್ ನಡುವೆ ʻಪ್ರೇಮ ಬರಹʼ ಸಿನಿಮಾದ ವಿತರಣೆಯ ವಿಚಾರವಾಗಿ ಬರೋಬ್ಬರಿ 1 ಕೋಟಿ ರೂ. ಕೊಡುವ ಒಪ್ಪಂದ ಆಗಿತ್ತು. ಈ ವಿಚಾರವಾಗಿ ಸ್ವತಃ ಮಲ್ಲಿಕಾರ್ಜುನ್ ಅವರೇ ಅವರದ್ದೇ ಆದ ಶ್ರೀ ಕಾಲಕಾಲೇಶ್ವರ ಎಂಟರ್​ಪ್ರೈಸಸ್ ಬುಕ್​ಲೆಟ್‌​ನಲ್ಲಿ ವಿತರಣೆಯ ಹಣದ ವಿಚಾರವನ್ನು ಬರೆದುಕೊಟ್ಟಿದ್ದರು.

ಇದನ್ನೂ ಓದಿ: Actor Darshan: ಚಿನ್ನುಮರಿ ತಂಟೆಗೆ ಹೋದ್ರೆ ಒದೆ, ಪವಿತ್ರಾ ಗೌಡ ತಂಟೆಗೆ ಬಂದ್ರೆ ಕೊಲೆ; ಟ್ರೋಲ್ ಆಗುತ್ತಿದೆ ​ ದರ್ಶನ್​ ಕೊಲೆ ಕೇಸ್​​

ಪ್ರೇಮ ಬರಹದ ಕಲೆಕ್ಷನ್ ಅಮೌಂಟ್ ಕೊಡಲೇ ಇಲ್ಲ

2018ರ ಫೆಬ್ರವರಿ ತಿಂಗಳು 9ನೇ ತಾರೀಕು ತೆರೆಕಂಡ “ಪ್ರೇಮ ಬರಹʼದ ಕಲೆಕ್ಷನ್ ಅಮೌಂಟ್ ಮಲ್ಲಿಕಾರ್ಜುನ್ ಕೊಟ್ಟಿರಲಿಲ್ಲ. 2018 ಫೆಬ್ರವರಿ ತಿಂಗಳ ನಂತರ ಮುಂದಿನ ಆರೇಳು ತಿಂಗಳು ಅರ್ಜುನ್ ಸರ್ಜಾ ಅವರು ಮಲ್ಲಿಕಾರ್ಜುನ್ ಅವರಲ್ಲಿ ವಿತರಣೆಯ ಹಣವನ್ನು ಕೊಡುವಂತೆ ಕೇಳಿಕೊಂಡಿದ್ದಾರೆ. ಇದೇ ಸಮಯದಲ್ಲಿ ಮಲ್ಲಿಕಾರ್ಜುನ್ ನಾಪತ್ತೆ ಆಗಿಬಿಟ್ಟರು. ಒಟ್ಟು ಸುಮಾರು 11 ಕೋಟಿ ರೂ. ಮೋಸ ಮಾಡಿ ಓಡಿಹೋಗಿದ್ದಾರೆ ಎಂದು ಆಗ ಗಾಂಧಿನಗರದಲ್ಲಿ ಮಾತುಗಳು ಕೇಳಿಬರುತ್ತಿತ್ತು. ಈ ವಿಚಾರವನ್ನ ನಟ ದರ್ಶನ್ ಅವರಲ್ಲಿ ಕೇಳಿದಾಗ ‘‘ನನಗೆ 2 ಕೋಟಿ ಕೊಡಬೇಕಿತ್ತು ಮಲ್ಲಿ‘. ನನ್ನ ಹೆಸರಿನಲ್ಲಿ ಅನೇಕರಿಗೆ ಮೋಸ ಮಾಡಿದ್ದಾನೆ ಎನ್ನುವ ವಿಚಾರ ಕೇಳಿದ್ದೇನೆ. ಆತ ಎಲ್ಲಿಗೆ ಹೋಗಿದ್ದಾನೆ ಎಂದು ನನಗೆ ಗೊತ್ತಿಲ್ಲ ಎಂದಿದ್ದರುʼʼ ದರ್ಶನ್.

ಮುಲತಃ ಉತ್ತರ ಕರ್ನಾಟಕದ ಗದಗ ಜಿಲ್ಲೆಯವರಾಗಿದ್ದ ಮಲ್ಲಿಕಾರ್ಜುನ್ ಏಳು ವರ್ಷದಿಂದ ಯಾರಿಗೂ ಸಿಕ್ಕಿಲ್ಲ. 2018ರಲ್ಲಿ ಮಲ್ಲಿಕಾರ್ಜುನ್ ನಾಪತ್ತೆಯಾದಾಗ ಅರ್ಜುನ್ ಸರ್ಜಾ ಟೀಮ್ ಅವರ ಊರಿನ ಕಡೆ ಹೊರಟಿತ್ತು. ಮಲ್ಲಿ ಅವರ ಪತ್ನಿ ಕೊಪ್ಪಳ ಮೂಲದವರು. ಆಗ ಅವರ ಮನೆಗೆ ಹುಡುಕಿಕೊಂಡು ಹೋದಾಗ ಮಲ್ಲಿಕಾರ್ಜುನ್ ಪತ್ನಿ ತೇಜಸ್ವಿನಿ ”ನಮ್ಮ ಮನೆಗೂ ನನ್ನ ಗಂಡ ಬಂದಿಲ್ಲ. ಇದೊಂದು ಪತ್ರ ಬರೆದು ಹೊರಟು ಹೋಗಿದ್ದಾರೆʼʼ ಎಂದು ಹೇಳಿದ್ದರು.

ಪತ್ರದಲ್ಲಿ ಏನಿದೆ?

ಪ್ರೀತಿಯ ತೇಜಸ್ವಿನಿಗೆ, ಮೊದಲನೆದಾಗಿ ದಯವಿಟ್ಟು ನನ್ನನ್ನು ಕ್ಷಮಿಸು. ನಾನು ನನ್ನ ವೈಯಕ್ತಿಕ ವ್ಯವಹಾರಕ್ಕಾಗಿ ತುಂಬಾ ಸಾಲ ಮಾಡಿಕೊಂಡು ಅದನ್ನು ತೀರಿಸಲಾಗದ ಪರಿಸ್ಥಿತಿಗೆ ಬಂದು ತಲುಪಿದ್ದೇನೆ. ನನ್ನ ಈ ಕೆಲಸದಿಂದ ನಾನು ಯಾರಿಗೂ ಮುಖ ತೋರಿಸಲಾಗದ ಪರಿಸ್ಥಿತಿಯಲ್ಲಿದ್ದೇನೆ. ಆದ ಕಾರಣ ನಾನು ಎಲ್ಲೋ ಕಷ್ಟಪಟ್ಟು ದುಡಿದು ವಾಪಸ್ಸು ಬಂದು ಸಾಲ ತೀರಿಸಿ, ನನಗಂಟಿರುವ ಕಳಂಕ ಹೋಗಲಾಡಿಸಿ ಮತ್ತೆ ಧೈರ್ಯವಾಗಿ ತಲೆಯತ್ತಿ ಎಲ್ಲರ ಮುಂದೆ ಜೀವನ ನಡೆಸಬೇಕೆಂದುಕೊಂಡಿದ್ದೇನೆ. ಅಲ್ಲಿಯವರಿಗೆ ನಿಮ್ಮ ಎದುರಿಗೆ ಬರುವ ಶಕ್ತಿ ನನಗಿಲ್ಲ. ನನ್ನನ್ನು ಯಾವುದೇ ಕಾರಣಕ್ಕೂ ಹುಡುಕುವ ಪ್ರಯತ್ನ ಮಾಡಬೇಡಿ. ನನ್ನ ಸಮಸ್ಯೆಯಿಂದ ನಿನ್ನನ್ನು, ಮಗನನ್ನು ಹಾಗೂ ಮನೆಯವರನ್ನೂ ಬಿಟ್ಟು ಹೋಗುವ ಪರಿಸ್ಥಿತಿ ಬಂದೊದಗಿದೆ. ದಯವಿಟ್ಟು ನನ್ನನ್ನು ಕ್ಷಮಿಸುʼʼ ಎಂದು ಬರೆದಿದ್ದರು.

ಇದೀಗ ರೇಣುಕಾ ಸ್ವಾಮಿ ಪ್ರಕರಣ ಹೊರಬಂದ ಬಳಿಕ ಮಲ್ಲಿ ಕುರಿತು ಸಹ ಪ್ರಶ್ನೆಗಳು ಎದ್ದಿವೆ. ಮಲ್ಲಿ ಎಲ್ಲಿದ್ದಾನೆ? ಬದುಕಿದ್ದಾನೆಯೇ? ಅಥವಾ ರೇಣುಕಾ ಸ್ವಾಮಿ ರೀತಿಯ ಆತನದ್ದೂ ಕೊಲೆ ಆಗಿವೆಯೇ? ಎಂಬ ಪ್ರಶ್ನೆಗಳು ಸಾಮಾಜಿಕ ಜಾಲತಾಣದಲ್ಲಿ ಎದ್ದಿವೆ.2018ರ ಬಳಿಕ ಮಲ್ಲಿ ಅಚಾನಕ್ಕಾಗಿ ಕಾಣೆಯಾದರು. ಅಂದಿನಿಂದ ಈ ವರೆಗೆ ಮಲ್ಲಿ ಎಲ್ಲಿದ್ದಾರೆಂಬುದು ಯಾರಿಗೂ ಗೊತ್ತಿಲ್ಲ.

Continue Reading

ಸ್ಯಾಂಡಲ್ ವುಡ್

Duniya Vijay: ಗಂಡ ಕೈಬಿಟ್ರೂ, ನಂಬಿದ ದೇವರು ಕೈ ಬಿಡಲಿಲ್ಲ: ದುನಿಯಾ ವಿಜಯ್ ಪತ್ನಿ ನಾಗರತ್ನ

Duniya Vijay: ಕ್ರೌರ್ಯದ ಆಧಾರದ ಮೇಲೆ ನಟ ದುನಿಯಾ ವಿಜಯ್ ಅವರು ಪತ್ನಿ ನಾಗರತ್ನ ವಿರುದ್ಧ ಅರ್ಜಿ ಸಲ್ಲಿಸಿದ್ದರು. ಇದನ್ನು ಸಾಬೀತುಪಡಿಸಲು ವಿಫಲವಾದ ಕಾರಣ ಅರ್ಜಿ ವಜಾ ಆಗಿದೆ. ಬೆಂಗಳೂರಿನ ಶಾಂತಿನಗರ ಕೌಟುಂಬಿಕ ನ್ಯಾಯಾಲಯ ಆದೇಶ ನೀಡಿದೆ.ದೀಗ ನಟ ದುನಿಯಾ ವಿಜಯ್ ಪತ್ನಿ ನಾಗರತ್ನ ʻಹೋರಾಟದಲ್ಲಿ ನಿಮ್ಮೆಲ್ಲರ ಆಶೀರ್ವಾದದಿಂದ ನನಗೆ ಜಯ ಸಿಕ್ಕಿದೆ, ನಾನು ನಂಬಿದ ದೇವರು ನನ್ನ ಕೈ ಬಿಡಲಿಲ್ಲʼಎಂದು ಪೋಸ್ಟ್‌ ಹಂಚಿಕೊಂಡಿದ್ದಾರೆ.

VISTARANEWS.COM


on

Duniya Vijay wife Nagarathna Facebook Post After Court Order
Koo

ಬೆಂಗಳೂರು: ನಟ ದುನಿಯಾ ವಿಜಯ್ (Duniya Vijay) ಅವರು ಪತ್ನಿ ನಾಗರತ್ನ ಅವರಿಂದ ವಿಚ್ಛೇದನ ಬೇಕು ಎಂದು ಅರ್ಜಿ ಸಲ್ಲಿಸಿದ್ದರು. 2018ರಲ್ಲಿಯೇ ಅರ್ಜಿ ಸಲ್ಲಿಸಲಾಗಿದ್ದು, ಈಗ ವಜಾ ಆಗಿದೆ. ದುನಿಯಾ ವಿಜಯ್ ಮೊದಲ ಪತ್ನಿ ನಾಗರತ್ನ ಅವರಿಂದ ವಿಜಯ್‌ ದೂರವಾಗಿದ್ದಾರೆ. ಇದೀಗ ನಟ ದುನಿಯಾ ವಿಜಯ್ ಪತ್ನಿ ನಾಗರತ್ನ ʻಹೋರಾಟದಲ್ಲಿ ನಿಮ್ಮೆಲ್ಲರ ಆಶೀರ್ವಾದದಿಂದ ನನಗೆ ಜಯ ಸಿಕ್ಕಿದೆ, ನಾನು ನಂಬಿದ ದೇವರು ನನ್ನ ಕೈ ಬಿಡಲಿಲ್ಲʼಎಂದು ಪೋಸ್ಟ್‌ ಹಂಚಿಕೊಂಡಿದ್ದಾರೆ.

ನಾಗರತ್ನ ಪೋಸ್ಟ್‌ನಲ್ಲಿ ಹೀಗೆ ಬರೆದುಕೊಂಡಿದ್ದಾರೆ. ʻʻಸಮಸ್ತ ನಾಡಿನ ಜನತೆಗೆ ನನ್ನ ನಮಸ್ಕಾರ. ಈ ದಿನ ತುಂಬಾ ಖುಷಿ ಕೊಟ್ಟ ದಿನವಾಗಿದೆ. ನನ್ನ ಪತಿ ವಿಜಯ್ ಅವರು ತಮಗೆ ವಿಚ್ಛೇದನ ಬೇಕೆಂದು ಸ್ವಲ್ಪ ವರ್ಷಗಳ ಹಿಂದೆ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿರುತ್ತಾರೆ. ಆ ಹೋರಾಟದಲ್ಲಿ ನಿಮ್ಮೆಲ್ಲರ ಆಶೀರ್ವಾದದಿಂದ ನನಗೆ ಜಯ ಸಿಕ್ಕಿದೆ. ನಾನು ನಂಬಿದ ದೇವರು ನನ್ನ ಕೈ ಬಿಡಲಿಲ್ಲ. ಇದು ನನ್ನ ಜಯ ಎನ್ನುವುದಕ್ಕಿಂತ ನನ್ನ ಪತಿ ಅಧಿಕೃತವಾಗಿ ಇನ್ನೊಂದು ಮದುವೆಯಾಗಲು ಅವಕಾಶ ಸಿಕ್ಕಿಲ್ಲ ಅನ್ನೋದು ನಿಜ. ಏಕೆಂದರೆ ನನಗೆ, ನನ್ನ ಅಪ್ಪ ಅಮ್ಮ ಮದುವೆ ಮಾಡಿಕೊಟ್ಟಾಗ ಹೇಳಿದ್ದು ಕಲಿಸಿದ್ದು ಒಂದೇ. ಗಂಡನೇ ದೇವರು, ಅತ್ತೆ ಮಾವನೇ ನಿಮ್ಮವರು, ಗಂಡನ ಮನೆಯೇ ನಿನ್ನ ಮನೆ, ಎಷ್ಟೇ ಕಷ್ಟಗಳು, ಏನೇ ಸಮಸ್ಯೆ ಬಂದರೂ ಅದೇ ಮನೆಯಲ್ಲೇ ಇರ್ಬೇಕು. ಅವರೇ ನಿನಗೆ ಎಲ್ಲಾ ಎಂದಿದ್ದರು. ನಾನೂ ಅದನ್ನೇ ಪಾಲಿಸಿಕೊಂಡು ಬಂದವಳು. ಅದನ್ನೇ ಪಾಲಿಸಿಕೊಂಡು ಹೋಗುವಳು. ನನಗೆ ನನ್ನ ಗಂಡ ಮಕ್ಕಳು ಇಷ್ಟೇ ಸರ್ವಸ್ವ. ನನ್ನ ಜೀವ ಇರುವವರೆಗೂ ಅವರ ಜತೆಯಲ್ಲೇ ಇದ್ದು ಸಾಯುತ್ತೇನೆ. ನಮ್ಮ ಕಾನೂನಿನ ಪ್ರಕಾರ ವಿಚ್ಛೇದನ ಆದ ನಂತರನೇ ಇನ್ನೊಂದು ಮದುವೆಗೆ ಅವಕಾಶ ಇರುವುದು ಎಂಬ ಸತ್ಯ ನಿಮಗೂ ಗೊತ್ತು. ನನ್ನ ಪತಿ ಇನ್ನೊಂದು ಮದುವೆಯಾಗಿಲ್ಲ ಎಂದು ಅವರೇ ನಮಗೆ ಹೇಳಿರುತ್ತಾರೆ. ಈ ಕೇಸಿನಲ್ಲಿ ನಮ್ಮ ವಕೀಲರಾದ ಬಿಎನ್ ನಾಗರಾಜ್ ಸರ್ ಅವರ ಶ್ರಮ ಅಪಾರವಾದುದು. ದಯವಿಟ್ಟು ಬೇರೆ ವದಂತಿಗಳಿಗೆ ಕಿವಿಕೊಡದೆ, ನಿಮ್ಮ ಆಶೀರ್ವಾದ ಸದಾ ನಮ್ಮ ಕುಟುಂಬದ ಮೇಲೆ ಇರಲಿ ಎಂದು ಸಮಸ್ತ ನಾಡಿನ ಜನತೆಗೆ ಈ ಮೂಲಕ ಕೇಳಿಕೊಳ್ಳುತ್ತೇನೆ. ದಯವಿಟ್ಟು ಮಾದ್ಯಮ ಮಿತ್ರರಿಗೆ ಕೇಳಿಕೊಳ್ಳುವುದೇನೆಂದರೆ ಕೀರ್ತಿ ಪಟ್ಟಡಿ ಅವರನ್ನು ಎರಡನೇ ಹೆಂಡತಿ ಎಂದು ದಯವಿಟ್ಟು ಪ್ರಸಾರ ಮಾಡಬೇಡಿ. ನಮ್ಮ ಸಂಸಾರ ಚೆನ್ನಾಗಿರಲಿ ಎಂದು ಹಾರೈಸಿʼʼಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Duniya Vijay: ವಿಚ್ಛೇದನ ಕೋರಿ ದುನಿಯಾ ವಿಜಯ್ ಸಲ್ಲಿಸಿದ್ದ ಅರ್ಜಿ ವಜಾ

ಈಗಾಗಲೇ ದುನಿಯಾ ವಿಜಯ್ ಪರ ವಕೀಲೆ ರಾಜ ರಾಜೇಶ್ವರಿ ಮಾಧ್ಯಮದ ಮುಂದೆ ಈ ಬಗ್ಗೆ ಮಾತನಾಡಿ ʻʻಅರ್ಜಿ ವಜಾ ಆಗಿದೆ. ವಿಜಯ್ ಅವರನ್ನು ಸಂಪರ್ಕ ಮಾಡಿ ಮುಂದೆ ಏನು ಮಾಡಬೇಕು ಎಂದು ಹೇಳುತ್ತೇವೆ. ವಿಜಯ್ ಅವರು ಶೂಟಿಂಗ್‌ನಲ್ಲಿ ಇದ್ದಾರೆ. ವಿಜಯ್ ಅವರಿಗೆ ಈ ಬಗ್ಗೆ ಇನ್ನೂ ಹೇಳಿಲ್ಲ. ಮಕ್ಕಳ ಫ್ಯೂಚರ್ ದೃಷ್ಟಿಯಿಂದ ಮಾತಾಡಿ ಹೇಳುತ್ತೇವೆ. ಇದು ಇಲ್ಲಿಗೆ ಮುಗಿದಿಲ್ಲ. ಹೈಕೋರ್ಟ್‌ಗೆ ಹೋಗಬೇಕಾ ಎನ್ನುವುದರ ಬಗ್ಗೆ ವಿಜಯ್ ಅವರ ಜತೆ ಚರ್ಚೆ ಮಾಡಿ ಹೇಳುತ್ತೇವೆʼʼಎಂದಿದ್ದರು.

ಕ್ರೌರ್ಯದ ಆಧಾರದ ಮೇಲೆ ನಟ ದುನಿಯಾ ವಿಜಯ್ ಅವರು ಪತ್ನಿ ನಾಗರತ್ನ ವಿರುದ್ಧ ಅರ್ಜಿ ಸಲ್ಲಿಸಿದ್ದರು. ಇದನ್ನು ಸಾಬೀತುಪಡಿಸಲು ವಿಫಲವಾದ ಕಾರಣ ಅರ್ಜಿ ವಜಾ ಆಗಿದೆ. ಬೆಂಗಳೂರಿನ ಶಾಂತಿನಗರ ಕೌಟುಂಬಿಕ ನ್ಯಾಯಾಲಯ ಆದೇಶ ನೀಡಿದೆ.

2019ರಲ್ಲಿ ಮಹಿಳಾ ಆಯೋಗದ ಮುಂದೆ ದುನಿಯಾ ವಿಜಯ್‌ ಅವರು ‘ನಾಗರತ್ನ ಜತೆ ಬಾಳಲು ನನ್ನಿಂದ ಸಾಧ್ಯವಿಲ್ಲ’ ಎಂದು ವಿಜಯ್ ಹೇಳಿದ್ದರಂತೆ. ಜತೆಗೆ ಮಕ್ಕಳ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತೇನೆ. ನಾಗರತ್ನಗೆ ಜೀವನಾಂಶ ನೀಡಿದ್ದೇನೆ ಎಂದಿದ್ದರು. ಆದರೆ ನಾಗರತ್ನ ಮಾತ್ರ ಪ್ರತಿ ಸಲವೂ ಕೋರ್ಟ್‌ಗೆ ಬಂದಾಗ ಗಂಡ ಬೇಕು ಎಂದು ಹೇಳುತ್ತಿದ್ದರಂತೆ.

ಸುಮಾರು ಎರಡೂವರೆ ವರ್ಷದ ಹಿಂದೆ ಮನಸ್ತಾಪ

ಎಲ್ಲರಿಗೂ ತಿಳಿದಿರುವಂತೆ ದುನಿಯಾ ವಿಜಯ್ ಮತ್ತು ನಾಗರತ್ನ ಅವರ ಮಧ್ಯೆ ಸುಮಾರು ಎರಡೂವರೆ ವರ್ಷದ ಹಿಂದೆ ಮನಸ್ತಾಪ ಉಂಟಾಗಿ, ಪ್ರಕರಣ ಕೋರ್ಟ್ ಮೆಟ್ಟಿಲೇರಿತ್ತು. ಇಬ್ಬರು ವಿಚ್ಛೇದನಕ್ಕೆ ಮುಂದಾಗಿದ್ದರು. ಆದರೆ , ಅಂತಿಮ ಕ್ಷಣದಲ್ಲಿ ಇಬ್ಬರು ಒಪ್ಪಂದ ಮಾಡಿಕೊಂಡು ಮತ್ತೆ ಒಟ್ಟಿಗೆ ಜೀವನ ನಡೆಸಲು ನಿರ್ಧರಿಸಿದ್ದರು.

Continue Reading
Advertisement
Aliens
ವಿಜ್ಞಾನ4 mins ago

Aliens: ಏಲಿಯನ್‌ಗಳು ಅನ್ಯಗ್ರಹ ಜೀವಿಗಳಲ್ಲ; ಈ ಭೂಮಿಯ ರಹಸ್ಯ ನಿವಾಸಿಗಳು! ಹಾರ್ವರ್ಡ್ ವಿಜ್ಞಾನಿಗಳ ಸಂಶೋಧನೆ

Actress Siri marriage to actor prabhakar
ಬಿಗ್ ಬಾಸ್4 mins ago

Actress Siri: ಬಿಗ್​ಬಾಸ್​ನಲ್ಲಿ ಚಿಗುರಿತಾ ಪ್ರೇಮ? ‘ರಂಗೋಲಿ’ ಖ್ಯಾತಿಯ ಸಿರಿಯ ವರನ್ಯಾರು?

Yusuf Pathan
ಕ್ರೀಡೆ18 mins ago

Yusuf Pathan: ಜಮೀನು ಒತ್ತುವರಿ ಆರೋಪ; ನೂತನ ಸಂಸದ ಯೂಸುಫ್ ಪಠಾಣ್​ಗೆ ನೋಟಿಸ್

Pradeep Eshwar
ಪ್ರಮುಖ ಸುದ್ದಿ20 mins ago

Pradeep Eshwar: ಸುಧಾಕರ್‌, ನಾವೆಲ್ಲ ಒಂದೇ; ನಮಗೋಸ್ಕರ ನೀವ್ಯಾಕೆ ಸುಮ್ನೆ ಹೊಡೆದಾಡ್ತೀರಾ ಎಂದ ಪ್ರದೀಪ್‌ ಈಶ್ವರ್!

OTT Release
Latest23 mins ago

OTT Release: ಈ ವಾರ ಒಟಿಟಿಯಲ್ಲಿ ನೋಡಬಹುದಾದ ಸಿನಿಮಾ, ವೆಬ್‌ ಸಿರೀಸ್‌ಗಳಿವು

Actor Darshan Assistant Malli missing case
ಸ್ಯಾಂಡಲ್ ವುಡ್29 mins ago

Actor Darshan: ಹಲವು ವರ್ಷಗಳಿಂದ ದರ್ಶನ್ ಆಪ್ತ ʻಮಲ್ಲಿʼನಾಪತ್ತೆ; ರೇಣುಕಾ ಸ್ವಾಮಿಯ ಗತಿಯೇ ಆಯ್ತಾ?

V Somanna
ಪ್ರಮುಖ ಸುದ್ದಿ40 mins ago

V Somanna : ತಮ್ಮನ್ನು ಕಡೆಗಣಿಸಿದ ಜಿಲ್ಲಾಧಿಕಾರಿ, ಸಿಇಒಗೆ ಕೇಂದ್ರ ಸಚಿವ ಸೋಮಣ್ಣ ತರಾಟೆ

Self Harming
ಉತ್ತರ ಕನ್ನಡ43 mins ago

Self Harming : ಪಿಎಸ್‌ಐ ಕಿರುಕುಳ; ಕುಡಿದ ಅಮಲಿನಲ್ಲಿ ಠಾಣೆ ಎದುರೇ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿಕೊಂಡ

Shakib Al Hasan
ಕ್ರೀಡೆ1 hour ago

Shakib Al Hasan: ನಿವೃತ್ತಿಯಾಗಿ ಎಂದು ಲೇವಡಿ ಮಾಡಿದ ಸೆಹವಾಗ್​ಗೆ ತಕ್ಕ ತಿರುಗೇಟು ನೀಡಿದ ಬಾಂಗ್ಲಾ ನಾಯಕ

Farmer Death
ಮೈಸೂರು1 hour ago

Farmer Death : ಸಾಲದ ಶೂಲಕ್ಕೆ ಮನನೊಂದ ರೈತ; ಕೆರೆಗೆ ಹಾರಿ ಆತ್ಮಹತ್ಯೆ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka weather Forecast
ಮಳೆ3 days ago

Karnataka Weather : ಭಾರಿ ಮಳೆಗೆ ಗುಡ್ಡದಿಂದ ಉರುಳಿ ಬಿದ್ದ ಬಂಡೆಗಲ್ಲು; ಬೆಂಗಳೂರಲ್ಲೂ ಸಂಜೆ ವರ್ಷಧಾರೆ

actor Darshan
ಚಿತ್ರದುರ್ಗ3 days ago

Actor Darshan: ರೇಣುಕಾ ಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್‌ ಅರೆಸ್ಟ್‌; ಪ್ರಕರಣವನ್ನು ಸಿಬಿಐಗೆ ವಹಿಸಲು ಒತ್ತಾಯ

Actor Darshan gets a series of questions from the police
ಸಿನಿಮಾ3 days ago

Actor Darshan : ಪವಿತ್ರಗೌಡ ಬಗ್ಗೆ ಪೋಸ್ಟ್‌ ಮಾಡಿದ್ರೆ ನಿಮಗ್ಯಾಕೆ ಕೋಪ? ದರ್ಶನ್‌ಗೆ ಪೊಲೀಸರ ಪ್ರಶ್ನೆಗಳ ಸುರಿಮಳೆ

Actor Darshan
ಸಿನಿಮಾ3 days ago

Actor Darshan : ದರ್ಶನ್‌ ಜೈಲಿಗೆ ಹೋಗುತ್ತಿರುವುದು ಇದೇ ಮೊದಲಲ್ಲ; ನಟನ ಮೇಲಿವೆ ಹತ್ತಾರು ಕೇಸ್‌ಗಳು!

Saptami Gowda
ಸಿನಿಮಾ3 days ago

Saptami Gowda : ಯುವ ಪತ್ನಿ ಶ್ರೀದೇವಿ ವಿರುದ್ಧ ಮಾನಹಾನಿ ಕೇಸ್; ಕಾನೂನು ಹೋರಾಟಕ್ಕೆ ಮುಂದಾದ ನಟಿ ಸಪ್ತಮಿ ಗೌಡ!

Karnataka weather Forecast
ಮಳೆ4 days ago

Karnataka Weather : ಭಾರಿ ಮಳೆಗೆ ಮನೆ ಗೋಡೆ ಕುಸಿದು ಎಮ್ಮೆಗಳು ಸಾವು; ಆಕಳಿನ ಜೀವ ತೆಗೆದ ವಿದ್ಯುತ್‌ ತಂತಿ

Karnataka weather Forecast
ಮಳೆ7 days ago

Karnataka weather : ಮಳೆಯಲ್ಲೆ ತಪಸ್ಸಿಗೆ ಕುಳಿತ ವೃದ್ಧ; ಇನ್ನೊಂದು ವಾರ ನಾನ್‌ ಸ್ಟಾಪ್‌ ವರುಣನ ಅಬ್ಬರ

Sigandur launch
ಶಿವಮೊಗ್ಗ7 days ago

Sigandur launch: ಸಿಗಂದೂರು ಲಾಂಚ್‌ನಲ್ಲಿ ಭಾರಿ ವಾಹನಗಳಿಗೆ ನಿರ್ಬಂಧ

Karnataka Rain
ಮಳೆ1 week ago

Karnataka Rain : ಭಾರಿ ಮಳೆಗೆ ಮರ ಬಿದ್ದು ಮೇಕೆಗಳು ಸಾವು; ಸಿಡಿಲಿಗೆ ಎಲೆಕ್ಟ್ರಿಕ್‌ ಅಂಗಡಿ ಸುಟ್ಟು ಭಸ್ಮ

Lok Sabha Election Result 2024 Live
ದೇಶ1 week ago

Lok Sabha Election Result 2024 Live: ಲೋಕಸಭೆ ಚುನಾವಣೆ ಫಲಿತಾಂಶದ ಲೈವ್‌ ಇಲ್ಲಿ ವೀಕ್ಷಿಸಿ

ಟ್ರೆಂಡಿಂಗ್‌