ಮೊದಲ ಬಾರಿಗೆ 3ಡಿ ಕಿವಿ ಯಶಸ್ವಿ ಕಸಿ, ಚೆನ್ನಾಗಿ ಸೆಟ್ ಆಗುತ್ತೆ ಅಂತ ಮಹಿಳೆಗೆ ಖುಷಿ! - Vistara News

ವಿಜ್ಞಾನ

ಮೊದಲ ಬಾರಿಗೆ 3ಡಿ ಕಿವಿ ಯಶಸ್ವಿ ಕಸಿ, ಚೆನ್ನಾಗಿ ಸೆಟ್ ಆಗುತ್ತೆ ಅಂತ ಮಹಿಳೆಗೆ ಖುಷಿ!

ಮಹಿಳೆಯೊಬ್ಬರ ವಿರೂಪಗೊಂಡ ಕಿವಿಯ ಬದಲಿಗೆ ಆಕೆಯದೇ ಅಂಗಾಂಶ ಬಳಸಿ ಹೊಸ ಕಿವಿಯನ್ನು ವಿಜ್ಞಾನಿಗಳು ಪ್ರಿಂಟ್‌ ಮಾಡಿ ಜೋಡಿಸಿದ್ದಾರೆ. ಏನಿದು ತಂತ್ರಜ್ಞಾನ, ಯಾಕಿದು ವಿಶೇಷ, ಏನಾಗಿತ್ತು ಮಹಿಳೆಗೆ? ಈ ವರದಿ ಓದಿ.

VISTARANEWS.COM


on

ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನ್ಯೂಯಾರ್ಕ್‌: ಕಾಲು, ಕೈ ಮತ್ತಿತರ ಅಂಗಗಳನ್ನು ಕೃತಕವಾಗಿ ನಿರ್ಮಿಸಿಕೊಟ್ಟು ಸಂಕಷ್ಟದಲ್ಲಿರುವವರಿಗೆ ಹೊಸ ಬದುಕು ನೀಡುವುದನ್ನು ಕೇಳಿದ್ದೇವೆ. ಆದರೆ, ಅಮೆರಿಕದ ವಿಜ್ಞಾನಿಗಳು ಮಹಿಳೆಯೊಬ್ಬರ ಕಿವಿಯನ್ನೇ ಮರು ನಿರ್ಮಾಣ ಮಾಡುವ ಮೂಲಕ ಹೊಸ ಸಾಧನೆ ಮಾಡಿದ್ದಾರೆ. ಇದು ಸಾಮಾನ್ಯ ಪ್ಲಾಸ್ಟಿಕ್‌ ಕಿವಿಯೇನೂ ಅಲ್ಲ, ಅಂಗಾಂಶ ಕಸಿ ತಂತ್ರಜ್ಞಾನದ ಮೂಲಕ ಸಜೀವ ಅಂಗಾಂಶಗಳನ್ನೇ ಬಳಸಿ 3ಡಿ ಪ್ರಿಂಟಿಂಗ್‌ ಮೂಲಕ ಈ ಕಿವಿಯನ್ನು ರೂಪಿಸಲಾಗಿದೆ. ಈ ಕಿವಿಯನ್ನು ಕಸಿ ಮಾಡಲಾಗಿದ್ದು, ದೇಹ ಅದಕ್ಕೆ ಚೆನ್ನಾಗಿ ಹೊಂದಿಕೊಂಡಿದೆ. ಇದನ್ನು ಒಂದು ಲೆಕ್ಕಾಚಾರದಲ್ಲಿ ಒರಿಜಿನಲ್‌ ಕೃತಕ ಕಿವಿ ಎನ್ನಬಹುದೇನೋ.. ಯಾಕೆಂದರೆ, ಅವರದೇ ಅಂಗಾಂಶಗಳನ್ನು ಬಳಸಿಕೊಂಡು ಮಾಡಿರುವ ಕೃತಕ ಕಿವಿ ಇದು.

ಹೊಸ ಕಿವಿ ಹುಟ್ಟಿದ್ದು ಹೇಗೆ?
ಮೆಕ್ಸಿಕೊ ಮೂಲದ 20 ವರ್ಷ ವಯಸ್ಸಿನ ಈ ಮಹಿಳೆಗೆ ಹುಟ್ಟುವಾಗಲೇ ಮೈಕ್ರೋಷಿಯ ಸಮಸ್ಯೆಯಿತ್ತು. ಅಂದರೆ, ಹುಟ್ಟುವಾಗಲೇ ಒಂದು ಅಥವಾ ಎರಡೂ ಕಿವಿಗಳ ಹೊರಭಾಗ, ಪೂರ್ಣವಾಗಿ ಅಥವಾ ಭಾಗಶಃ ರಚನೆಯಾಗಿರುವುದಿಲ್ಲ. ಕಳೆದ ಮಾರ್ಚ್‌ನಲ್ಲಿ ಅಮೆರಿಕದಲ್ಲಿ ಈ ಚಿಕಿತ್ಸೆಗೆ ಒಳಗಾಗಿದ್ದ ಮಹಿಳೆ ಉತ್ತಮವಾಗಿ ಸ್ಪಂದಿಸಿದ್ದು, ಕಸಿ ಮಾಡಿರುವ ಕಿವಿಯ ಬೆಳವಣಿಗೆಯೂ ತೃಪ್ತಿದಾಯಕವಾಗಿದೆ ಎಂದು ಈ ಕಸಿ ತಂತ್ರಜ್ಞಾನದ ಹಿಂದಿರುವ 3ಡಿ-ಬಯೋ ಥೆರಪೆಟಿಕ್ಸ್‌ ಸಂಸ್ಥೆ ತಿಳಿಸಿದೆ. ʻಆಕೆಯ ಆರೋಗ್ಯವಾಗಿರುವ ಇನ್ನೊಂದು ಕಿವಿಗೆ ಹೊಂದುವ ರೀತಿಯಲ್ಲಿ ಕಸಿ ಮಾಡಿರುವ ಕಿವಿಯನ್ನು ವಿನ್ಯಾಸಗೊಳಿಸಲಾಗಿದೆʼ ಎಂದಿರುವ ಈ ಸಂಸ್ಥೆ, ಸಂಪೂರ್ಣ ವಿವರಗಳನ್ನು ಬಹಿರಂಗಗೊಳಿಸಿಲ್ಲ.

ಆದರೆ ಮೈಕ್ರೋಟಿಯ ಸಮಸ್ಯೆಯಿಂದ ಬಳಲುತ್ತಿರುವ ಇನ್ನೂ 11 ರೋಗಿಗಳಿಗೆ ಈ ಕುರಿತಾದ ಕ್ಲಿನಿಕಲ್‌ ಟ್ರಯಲ್‌ ಆರಂಭಿಸಲಾಗುವುದು. ಇದರ ವಿವರಗಳನ್ನು ವೈದ್ಯಕೀಯ ನಿಯತಕಾಲಿಕವೊಂದರಲ್ಲಿ ಪ್ರಕಟಿಸಲಾಗುವುದು ಎಂದು ಆ ಸಂಸ್ಥೆ ಹೇಳಿದೆ. ಈ ಕಸಿಯಿಂದ ಅನಿರೀಕ್ಷಿತ ಆರೋಗ್ಯ ಸಮಸ್ಯೆಗಳು ತಲೆದೋರುವ ಆತಂಕ ಇನ್ನೂ ದೂರವಾಗಿಲ್ಲ ಎಂಬುದನ್ನು ಒಪ್ಪಿಕೊಂಡಿರುವ ಸಂಸ್ಥೆ, ರೋಗಿಯದೇ ಕಿವಿಯ ಅಂಗಾಂಶಗಳನ್ನು ಬಳಸಿ ರಚನೆಯಾಗಿರುವ ಈ ಹೊಸ ಕಿವಿಯನ್ನು ದೇಹ ಒಪ್ಪಿಕೊಳ್ಳುತ್ತದೆ ಎಂಬ ವಿಶ್ವಾಸವನ್ನೂ ವ್ಯಕ್ತಪಡಿಸಿದೆ.

ಕಂಪ್ಯೂಟರ್‌ ನಿರ್ದೇಶಿತ 3ಡಿ ಪ್ರಿಂಟರ್‌ ಮೂಲಕ ಅಂಗಗಳ ವಿನ್ಯಾಸಗಳನ್ನು  ಬೇಕಾದ ರೀತಿಯಲ್ಲಿ ಮುದ್ರಿಸಿ, ಅದನ್ನು ಚಿಕಿತ್ಸೆಗಳಿಗೆ ಬಳಸುವ ಈ ತಂತ್ರಜ್ಞಾನ ಕೆಲವು ವರ್ಷಗಳಿಂದ ಚಾಲ್ತಿಯಲ್ಲಿದೆ. ಕೃತಕ ಕಾಲುಗಳನ್ನು ರೋಗಿಗಳಿಗೆ  ಅಳವಡಿಸುವಲ್ಲಿ ಈ ತಂತ್ರಜ್ಞಾನ ಈವರೆಗೆ ಹೆಚ್ಚಾಗಿ ಬಳಕೆಯಾಗುತ್ತಿತ್ತು. ಆದರೆ ಈಗ ಇದೇ ತಂತ್ರಜ್ಞಾನವನ್ನು ಬಳಸಿ, ಸಜೀವ ಅಂಗಾಂಶಗಳನ್ನು ಮುದ್ರಿಸಿ, ಅದನ್ನು ಕಸಿ ಮಾಡಿರುವುದು ವೈದ್ಯಕೀಯ ಕ್ಷೇತ್ರದಲ್ಲಿ ಸಾಧಿಸಿರುವ ಮಹತ್ವದ ಮುನ್ನಡೆಯಾಗಿದೆ. ಮಾನವರ ಸಹಜ ಕಿವಿಯಂತೆಯೇ ಈ ಕಸಿ ನಿರ್ಮಿತ ಹೊಸ ಕಿವಿಯೂ ಕಾರ್ಯನಿರ್ವಹಿಸುವ ನಿರೀಕ್ಷೆಯಿದೆ.

ರಕ್ತನಾಳಗಳನ್ನು ಒಳಗೊಳ್ಳದ ಹೊರಕಿವಿಯಂಥ ಅಂಗಗಳ ಮೇಲಿನ ಈ ಪ್ರಯೋಗ ಯಶಸ್ವಿಯಾಗಿದ್ದು ನಿಜ. ಆದರೆ ದೇಹದ ಆಂತರಿಕ ಅಂಗಗಳ ಮೇಲೆ ಇಂಥ ಪ್ರಯೋಗಗಳು ಹೇಗಿರಬಹುದು ಮತ್ತು ಏನಾಗಬಹುದು ಎಂಬ ಆತಂಕ ಮತ್ತು ಕುತೂಹಲ ವೈದ್ಯವಿಜ್ಞಾನ ಕ್ಷೇತ್ರದಲ್ಲಿ ವ್ಯಕ್ತವಾಗಿದೆ. ಇದೇ ತಂತ್ರಜ್ಞಾನ ಮುಂದುವರೆದು, ಮೈಕ್ರೋಟಿಯ ರೋಗಿಗಳಿಗೆ ಮಾತ್ರವಲ್ಲದೆ, ಮೂತ್ರಕೋಶಗಳು, ಯಕೃತ್ತಿನಂತಹ ಪ್ರಮುಖ ಅಂಗಗಳ ಚಿಕಿತ್ಸೆ ಮತ್ತು ಕಸಿಯಲ್ಲಿ ನೆರವಾಗುವುದೋ ಎಂಬ ಕುತೂಹಲ ತಜ್ಞರಲ್ಲಿ ಸಹಜವಾಗಿ ಮೂಡಿದೆ. ಇದಲ್ಲದೆ, ಮಾರಣಾಂತಿಕ ರೋಗಗಳಲ್ಲಿ ಅಂಗಗಳನ್ನು ಕಳೆದುಕೊಂಡ ರೋಗಿಗಳಿಗೂ ಇಂಥ ತಂತ್ರಜ್ಞಾನ ವರವಾಗಬಹುದೇ ಎಂಬ ಜಿಜ್ಞಾಸೆ ವಿಜ್ಞಾನಿಗಳಲ್ಲಿ ಮೂಡಿದೆ.

ಇದನ್ನೂ ಓದಿ | ಎಲಾನ್‌ ಮಸ್ಕ್‌ನ Starlink ಉಪಗ್ರಹಗಳ ಮೇಲೆ ಚೀನಾ ಮಿಲಿಟರಿ ಕಣ್ಣು

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

Toyota Kirloskar Motor: ಟೊಯೊಟಾ ತಾಂತ್ರಿಕ ಶಿಕ್ಷಣ ಕಾರ್ಯಕ್ರಮದಡಿ ವಿದ್ಯಾರ್ಥಿ ವೇತನ

Toyota Kirloskar Motor: ಟೊಯೊಟಾ ಕಿರ್ಲೋಸ್ಕರ್ ಮೋಟಾರ್ (ಟಿಕೆಎಂ) 66ನೇ ಟೊಯೋಟಾ ತಾಂತ್ರಿಕ ಶಿಕ್ಷಣ ಕಾರ್ಯಕ್ರಮ (ಟಿ-ಟಿಇಪಿ) ಮತ್ತು ಟಿ-ಟಿಇಪಿ ಅಡಿಯಲ್ಲಿ “ತಾಂತ್ರಿಕ ಶಿಕ್ಷಣ ಮತ್ತು ಮಾನ್ಯತೆಗಾಗಿ ವಿದ್ಯಾರ್ಥಿವೇತನ ಕಾರ್ಯಕ್ರಮವನ್ನು (ಸ್ಟಾರ್) ಬರೇಲಿಯ ಸರ್ಕಾರಿ ಪಾಲಿಟೆಕ್ನಿಕ್ ಸಂಸ್ಥೆಯಲ್ಲಿ ಪ್ರಾರಂಭಿಸುವುದಾಗಿ ಘೋಷಿಸಿದೆ.

VISTARANEWS.COM


on

Toyota Technical Education Programme started at Bareilly Government Polytechnic by TKM
Koo

ಬೆಂಗಳೂರು: ಟೊಯೊಟಾ ಕಿರ್ಲೋಸ್ಕರ್ ಮೋಟಾರ್ (ಟಿಕೆಎಂ) 66ನೇ ಟೊಯೋಟಾ ತಾಂತ್ರಿಕ ಶಿಕ್ಷಣ ಕಾರ್ಯಕ್ರಮ (ಟಿ-ಟಿಇಪಿ) ಮತ್ತು ಟಿ-ಟಿಇಪಿ ಅಡಿಯಲ್ಲಿ “ತಾಂತ್ರಿಕ ಶಿಕ್ಷಣ ಮತ್ತು ಮಾನ್ಯತೆಗಾಗಿ ವಿದ್ಯಾರ್ಥಿವೇತನ ಕಾರ್ಯಕ್ರಮವನ್ನು (ಸ್ಟಾರ್) ಬರೇಲಿಯ ಸರ್ಕಾರಿ ಪಾಲಿಟೆಕ್ನಿಕ್ ಸಂಸ್ಥೆಯಲ್ಲಿ ಪ್ರಾರಂಭಿಸುವುದಾಗಿ (Toyota Kirloskar Motor) ಘೋಷಿಸಿದೆ.

ಸ್ಥಳೀಯ ಉತ್ಪಾದನಾ ಪರಿಸರ ವ್ಯವಸ್ಥೆಯನ್ನು ಬೆಂಬಲಿಸಲು ಮತ್ತು ಕೌಶಲ್ಯ ಅಭಿವೃದ್ಧಿಯ ಮೂಲಕ ಸಮುದಾಯಗಳನ್ನು ಸಬಲೀಕರಣಗೊಳಿಸಲು, ಟಿಕೆಎಂ ತನ್ನ ಪ್ರಮುಖ ಕಾರ್ಯಕ್ರಮಗಳಾದ ಟೊಯೊಟಾ ತಾಂತ್ರಿಕ ತರಬೇತಿ ಸಂಸ್ಥೆ (ಟಿಟಿಟಿಐ) ಮತ್ತು ಟೊಯೊಟಾ ತಾಂತ್ರಿಕ ಶಿಕ್ಷಣ ಕಾರ್ಯಕ್ರಮ (ಟಿ-ಟಿಇಪಿ) ಯೊಂದಿಗೆ ಮುಂಚೂಣಿಯಲ್ಲಿದೆ. ಒಂದು ದಶಕಕ್ಕೂ ಹೆಚ್ಚು ಕಾಲದಿಂದ, ಈ ಕಾರ್ಯಕ್ರಮಗಳು ಆರ್ಥಿಕವಾಗಿ ಸವಾಲಿನ ಹಿನ್ನೆಲೆಯ ವಿದ್ಯಾರ್ಥಿಗಳಿಗೆ ವಿಶ್ವದರ್ಜೆಯ ತರಬೇತಿಯನ್ನು ಒದಗಿಸುವತ್ತ ಗಮನ ಹರಿಸಿವೆ. ‘ಸ್ಕಿಲ್ ಇಂಡಿಯಾ’ ಅಭಿಯಾನಕ್ಕೆ ಗಮನಾರ್ಹ ಕೊಡುಗೆ ನೀಡಿವೆ.

ಇದನ್ನೂ ಓದಿ: Kannada Short Movie: ಪತ್ರಕರ್ತೆ ಸುನಯನಾ ಸುರೇಶ್ ಈಗ ನಿರ್ದೇಶಕಿ; ‘ಮೌನ ರಾಗ’ ಕಿರುಚಿತ್ರಕ್ಕೆ ನಿರ್ದೇಶನ

ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯವು 2023 ರ ಜುಲೈ 29 ಮತ್ತು 30 ರಂದು ದೆಹಲಿಯ ಪ್ರಗತಿ ಮೈದಾನದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಶಿಕ್ಷಣ ನೀತಿ ಕಾರ್ಯಕ್ರಮದ 3 ನೇ ವಾರ್ಷಿಕೋತ್ಸವದ ಆಚರಣೆಯ ಸಂದರ್ಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೊಂದಿಗೆ ಸಂವಹನ ನಡೆಸುವ ಗೌರವವನ್ನು ಪಡೆದ ಟಿಟಿಟಿಐ ಹಳೆಯ ವಿದ್ಯಾರ್ಥಿ ಮತ್ತು 2022 ರ ವಿಶ್ವ ಕೌಶಲ್ಯ ಸ್ಪರ್ಧೆಯಲ್ಲಿ ಮೆಕಾಟ್ರಾನಿಕ್ಸ್ ಕಂಚಿನ ಪದಕ ವಿಜೇತ ಅಖಿಲೇಶ್ ನರಸಿಂಹ ಮೂರ್ತಿ ಒಂದು ಗಮನಾರ್ಹ ಯಶಸ್ಸನ್ನು ಸಾಧಿಸಿದ್ದಾರೆ.

ಟಿ-ಟಿಇಪಿ ಒಂದು ಸಮಗ್ರ ವರ್ಷ ವಿಡೀ ನಡೆಯುವ ಕಾರ್ಯಕ್ರಮವಾಗಿದೆ. ಇದು ಆನ್-ದಿ-ಜಾಬ್ ಟ್ರೈನಿಂಗ್ (ಒಜೆಟಿ) ಅನ್ನು ಒಳಗೊಂಡಿದೆ ಮತ್ತು ಅಂತಿಮ ವರ್ಷದ ಐಟಿಐ / ಡಿಪ್ಲೊಮಾ ವಿದ್ಯಾರ್ಥಿಗಳಿಗೆ ಅನುಗುಣವಾಗಿದೆ. ಈ ಕಾರ್ಯಕ್ರಮದ ಪ್ರಮುಖ ಲಕ್ಷಣಗಳಲ್ಲಿ ಟೊಯೊಟಾದಿಂದ ಟಿ-ಟಿಇಪಿಯ ಪ್ರಮುಖ ತರಬೇತುದಾರರಿಗೆ ವಿಶೇಷ ತರಬೇತಿ, ಉದ್ಯೋಗಾರ್ಹತೆಯನ್ನು ಹೆಚ್ಚಿಸಲು ಟೊಯೊಟಾ ಡೀಲರ್ ಶಿಪ್‌ಗಳಲ್ಲಿ ಪ್ರಾಯೋಗಿಕ ಕೌಶಲ್ಯ ಅಭಿವೃದ್ಧಿ ಮತ್ತು ಭಾರತೀಯ ವಾಹನ ಉದ್ಯಮದ ಅಗತ್ಯಗಳಿಗೆ ಅನುಗುಣವಾಗಿ ಸುಧಾರಿತ ತಂತ್ರಜ್ಞಾನಗಳ ತಾಂತ್ರಿಕ ಜ್ಞಾನವನ್ನು ನೀಡಲು ವಿನ್ಯಾಸಗೊಳಿಸಲಾದ ಪಠ್ಯಕ್ರಮ ಸೇರಿವೆ. ಕಳೆದ ವರ್ಷ ಆರ್ಥಿಕವಾಗಿ ಸವಾಲಿನ ವಿದ್ಯಾರ್ಥಿಗಳಿಗೆ ತಾಂತ್ರಿಕ ಅಧ್ಯಯನವನ್ನು ಮುಂದುವರಿಸಲು ಸಹಾಯ ಮಾಡಲು ಟಿಕೆಎಂ ಸ್ಟಾರ್ ವಿದ್ಯಾರ್ಥಿವೇತನ ಕಾರ್ಯಕ್ರಮವನ್ನು ಪ್ರಾರಂಭಿಸಿತು. ಇಲ್ಲಿಯವರೆಗೆ, 13 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಟಿ-ಟಿಇಪಿ ಮೂಲಕ ತರಬೇತಿ ಪಡೆದಿದ್ದಾರೆ. 70% ಕ್ಕೂ ಹೆಚ್ಚು ಜನರು ದೇಶಾದ್ಯಂತ ವಿವಿಧ ಆಟೋಮೊಬೈಲ್ ಕಂಪನಿಗಳು ಮತ್ತು ಅವುಗಳ ಡೀಲರ್‌ಶಿಪ್‌ಗಳಲ್ಲಿ ಉದ್ಯೋಗವನ್ನು ಪಡೆದಿದ್ದಾರೆ ಎಂದು ತಿಳಿಸಿದೆ.

ಇದನ್ನೂ ಓದಿ: World Blood Donors Day: ವಿಶ್ವ ರಕ್ತದಾನಿಗಳ ದಿನ; ಜಾಗೃತಿ ಜಾಥಾಕ್ಕೆ ದಿನೇಶ್ ಗುಂಡೂರಾವ್‌ ಚಾಲನೆ

ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಉತ್ತರ ಪ್ರದೇಶ ಸರ್ಕಾರದ ವಿಧಾನ ಪರಿಷತ್ ಸದಸ್ಯ ಡಿ.ಸಿ. ವರ್ಮಾ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಉದ್ಯೋಗ ಮಾರುಕಟ್ಟೆಯಲ್ಲಿ ಅಭಿವೃದ್ಧಿ ಹೊಂದಲು ಅಗತ್ಯವಾದ ಕೌಶಲ್ಯಗಳೊಂದಿಗೆ ನಮ್ಮ ಯುವಕರನ್ನು ಸಬಲೀಕರಣಗೊಳಿಸುವ ಟಿಕೆಎಂನ ಬದ್ಧತೆಯನ್ನು ನಾವು ಶ್ಲಾಘಿಸುತ್ತೇವೆ. ಟೊಯೊಟಾ ತಾಂತ್ರಿಕ ಶಿಕ್ಷಣ ಕಾರ್ಯಕ್ರಮ (ಟಿ-ಟಿಇಪಿ) ನಂತಹ ಉಪಕ್ರಮಗಳು ಉದ್ಯೋಗಾರ್ಹತೆಯನ್ನು ಹೆಚ್ಚಿಸುವ ಮತ್ತು ಈ ಪ್ರದೇಶದಲ್ಲಿ ಆರ್ಥಿಕ ಬೆಳವಣಿಗೆಯನ್ನು ಹೆಚ್ಚಿಸುವ ನಮ್ಮ ಧ್ಯೇಯದೊಂದಿಗೆ ಸಂಪೂರ್ಣವಾಗಿ ಹೊಂದಿಕೆಯಾಗಿವೆ. ವಿಶೇಷವಾಗಿ ಗ್ರಾಮೀಣ ಮತ್ತು ಆರ್ಥಿಕವಾಗಿ ಸವಾಲಿನ ಹಿನ್ನೆಲೆಯ ವಿದ್ಯಾರ್ಥಿಗಳಿಗೆ ಪ್ರಯೋಜನವನ್ನು ನೀಡುತ್ತದೆ. ಟಿ-ಟಿಇಪಿ ಮತ್ತು ಸ್ಟಾರ್ ವಿದ್ಯಾರ್ಥಿವೇತನ ಬೆಂಬಲವು ವಿದ್ಯಾರ್ಥಿಗಳಿಗೆ ಟೊಯೊಟಾದ ಮೌಲ್ಯಗಳು, ಉತ್ತಮ ಅಭ್ಯಾಸಗಳು ಮತ್ತು ಸುಧಾರಿತ ತಂತ್ರಜ್ಞಾನಗಳ ಬಗ್ಗೆ ಅಮೂಲ್ಯವಾದ ಒಳನೋಟಗಳನ್ನು ನೀಡುತ್ತದೆ.

ಆ ಮೂಲಕ ಅವರ ಒಟ್ಟಾರೆ ಕೌಶಲ್ಯ ಅಭಿವೃದ್ಧಿಗೆ ಕೊಡುಗೆ ನೀಡುತ್ತದೆ. ಹೆಚ್ಚುವರಿಯಾಗಿ ಟೊಯೊಟಾದಂತಹ ಉದ್ಯಮ ಪಾಲುದಾರರ ಸಹಯೋಗದ ಪ್ರಯತ್ನಗಳು ಉತ್ತರ ಪ್ರದೇಶದ ವಿದ್ಯಾರ್ಥಿಗಳಲ್ಲಿ ವಿಶ್ವದರ್ಜೆಯ ಕಾರ್ಯಪಡೆಯ ಲಭ್ಯತೆಯನ್ನು ಹೆಚ್ಚಿಸುತ್ತದೆ, ಅವರ ವೃತ್ತಿಜೀವನದ ಆಕಾಂಕ್ಷೆಗಳನ್ನು ಸಾಧಿಸಲು ಸಹಾಯ ಮಾಡುತ್ತದೆ. ವಾಹನ ಕ್ಷೇತ್ರದ ಬೆಳವಣಿಗೆಗೆ ಕೊಡುಗೆ ನೀಡುತ್ತದೆ ಎಂದು ತಿಳಿಸಿದ್ದಾರೆ.

ಈ ವೇಳೆ ಕಾರ್ಪೊರೇಟ್ ವ್ಯವಹಾರ ಮತ್ತು ಆಡಳಿತದ ಕಂಟ್ರಿ ಹೆಡ್ ಮತ್ತು ಕಾರ್ಯನಿರ್ವಾಹಕ ಉಪಾಧ್ಯಕ್ಷ ವಿಕ್ರಮ್ ಗುಲಾಟಿ ಮಾತನಾಡಿ, ಟಿಕೆಎಂನಲ್ಲಿ ಯುವ ಪ್ರತಿಭೆಗಳಿಗೆ ಸುಧಾರಿತ ತಾಂತ್ರಿಕ ಕೌಶಲ್ಯ ಮತ್ತು ಜ್ಞಾನವನ್ನು ಪಡೆಯಲು ಅವಕಾಶಗಳನ್ನು ಸೃಷ್ಟಿಸುವಲ್ಲಿ ತಾಂತ್ರಿಕ ತರಬೇತಿಯ ಪರಿವರ್ತಕ ಶಕ್ತಿಯನ್ನು ನಾವು ಗುರುತಿಸುತ್ತೇವೆ. ನಮ್ಮ ಟಿ-ಟಿಇಪಿ ಸೌಕರ್ಯ ಮತ್ತು ಸ್ಟಾರ್ ಕಾರ್ಯಕ್ರಮವು ಆಟೋಮೋಟಿವ್ ಉದ್ಯಮಕ್ಕೆ ನುರಿತ ಕಾರ್ಯಪಡೆಯನ್ನು ಬೆಳೆಸುವ ನಮ್ಮ ಬದ್ಧತೆಗೆ ಉದಾಹರಣೆಯಾಗಿದೆ. ಅದೇ ಸಮಯದಲ್ಲಿ ವಿಶಾಲವಾದ ‘ಸ್ಕಿಲ್ ಇಂಡಿಯಾ’ ಮಿಷನ್ ಅನ್ನು ಬೆಂಬಲಿಸುತ್ತದೆ, ಅಂತಿಮವಾಗಿ ನಮ್ಮ ಸಮುದಾಯಗಳಲ್ಲಿ ಸಕಾರಾತ್ಮಕ ಬದಲಾವಣೆಗೆ ಕಾರಣವಾಗುತ್ತದೆ.

ಟಿ-ಟಿಇಪಿ ಉಪಕ್ರಮದ ಭಾಗವಾಗಿರುವ ಸ್ಟಾರ್ ಕಾರ್ಯಕ್ರಮವು ಅರ್ಹ ವಿದ್ಯಾರ್ಥಿಗಳನ್ನು, ವಿಶೇಷವಾಗಿ ಆರ್ಥಿಕವಾಗಿ ಸವಾಲಿನ ಹಿನ್ನೆಲೆಯಿಂದ ಬಂದವರನ್ನು ವಿದ್ಯಾರ್ಥಿವೇತನವನ್ನು ಒದಗಿಸುವ ಮೂಲಕ ಮತ್ತು ಆಟೋಮೋಟಿವ್ ಕ್ಷೇತ್ರದಲ್ಲಿ ಯಶಸ್ವಿ ವೃತ್ತಿಜೀವನಕ್ಕಾಗಿ ಅಗತ್ಯ ಕೌಶಲ್ಯಗಳು ಮತ್ತು ಜ್ಞಾನದೊಂದಿಗೆ ಸಜ್ಜುಗೊಳಿಸುವ ಮೂಲಕ ಸಬಲೀಕರಣಗೊಳಿಸಲು ವಿನ್ಯಾಸಗೊಳಿಸಲಾಗಿದೆ. ಪ್ರತಿಭೆಗಳನ್ನು ಪೋಷಿಸಲು, ವಿದ್ಯಾರ್ಥಿಗಳು ತಮ್ಮ ಪೂರ್ಣ ಸಾಮರ್ಥ್ಯವನ್ನು ತಲುಪಲು ಮತ್ತು ವಾಹನ ಉದ್ಯಮ ಮತ್ತು ನಮ್ಮ ರಾಷ್ಟ್ರದ ಬೆಳವಣಿಗೆಗೆ ಕೊಡುಗೆ ನೀಡಲು ನಾವು ಸಮರ್ಪಿತರಾಗಿದ್ದೇವೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: RBI Penalty: ಸೆಂಟ್ರಲ್‌ ಬ್ಯಾಂಕ್‌ ಆಫ್‌ ಇಂಡಿಯಾಗೆ 1.45 ಕೋಟಿ ರೂ. ದಂಡ ವಿಧಿಸಿದ ಆರ್‌ಬಿಐ; ಕಾರಣ ಏನು?

ಕಾರ್ಯಕ್ರಮದಲಲ್ಲಿ ಬರೇಲಿಯ ಸರ್ಕಾರಿ ಪಾಲಿಟೆಕ್ನಿಕ್ ಪ್ರಾಂಶುಪಾಲ ನರೇಂದ್ರ ಕುಮಾರ್, ವಾಣಿಜ್ಯ ಟೊಯೊಟಾದ ನಿರ್ದೇಶಕ ಶಿವಂ ಗುಪ್ತಾ ಮಾತನಾಡಿದರು.

Continue Reading

ಕರ್ನಾಟಕ

Bengaluru News: ಬೆಂಕಿ ನಂದಿಸುವ ‘ವಿಶಿಷ್ಟ ಡ್ರೋನ್‌’; ಎಂಜಿನಿಯರಿಂಗ್‌ ವಿದ್ಯಾರ್ಥಿಗಳ ಆವಿಷ್ಕಾರ!

Bengaluru News: ಬೆಂಗಳೂರಿನ ಗೋಪಾಲನ್ ಕಾಲೇಜ್ ಆಫ್ ಎಂಜಿನಿಯರಿಂಗ್ ಮತ್ತು ಮ್ಯಾನೇಜ್‌ಮೆಂಟ್ ಆಯೋಜಿಸಿದ್ದ 2 ದಿನಗಳ ಗ್ರೋಯಿಂಗ್ ಎಲೆಕ್ಟ್ರಾನಿಕ್ಸ್ ಟೆಕ್ನಾಲಜಿ ಓರಿಯೆಂಟೆಡ್ ಕಾಂಗ್ರೆಗೇಷನ್ ಸ್ಟೇಜ್ (GETOCS 4.0) ದಲ್ಲಿ ವಿದ್ಯಾರ್ಥಿಗಳು ಬೆಂಕಿ ನಂದಿಸುವ ಬಾಲ್‌ಗಳನ್ನು ಹೊಂದಿದ ಡ್ರೋನ್‌ಗಳನ್ನು ಬಳಸಿ ಅದ್ಭುತ ಮಾದರಿಯನ್ನು ಪ್ರದರ್ಶಿಸಿದರು.

VISTARANEWS.COM


on

engineering students have invented a unique fire extinguisher drone at bengaluru
Koo

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ವಿಶ್ವದೆಲ್ಲೆಡೆ ಅಗ್ನಿ ಅವಘಡಗಳು ಸಂಭವಿಸುತ್ತಲೇ ಇವೆ. ತಕ್ಷಣವೇ ಪರಿಹಾರ ಕಾರ್ಯ ಕೈಗೊಳ್ಳಲಾಗದ ಅದೆಷ್ಟೋ ಸಂದರ್ಭಗಳಲ್ಲಿ ಪ್ರಾಣ ನಷ್ಟ ಕೂಡ ಸಂಭವಿಸುತ್ತಿವೆ. ಹಲವು ಸಂದರ್ಭಗಳಲ್ಲಿ ಬೆಂಕಿ ನಂದಿಸುವ ಸ್ಥಳಕ್ಕೆ ಅಗ್ನಿಶಾಮಕ ವಾಹನಗಳು ತಲುಪುವುದು ಕಷ್ಟವಾಗುತ್ತದೆ. ಹಾಗೆಯೇ ಅತೀ ಎತ್ತರದ ಕಟ್ಟಡಗಳಿಗೆ ಅಂಟಿಕೊಂಡ ಬೆಂಕಿಯನ್ನು ನಂದಿಸುವುದು ಸವಾಲಾಗಿಯೇ ಪರಿಣಮಿಸುತ್ತದೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಗೋಪಾಲನ್‌ ಕಾಲೇಜ್‌ ಆಫ್‌ ಎಂಜಿನಿಯರಿಂಗ್‌‌ ಮತ್ತು ಮ್ಯಾನೇಜ್‌ಮೆಂಟ್ ವಿದ್ಯಾರ್ಥಿಗಳು ವಿಶಿಷ್ಟ ಡ್ರೋನ್‌ ಆವಿಷ್ಕರಿಸಿದ್ದು, ಆ ಮೂಲಕ ಯಶಸ್ವಿಯಾಗಿ ಬೆಂಕಿ (Bengaluru News) ನಂದಿಸಬಹುದಾಗಿದೆ.

ನಗರದಲ್ಲಿ ಗೋಪಾಲನ್ ಕಾಲೇಜ್ ಆಫ್ ಎಂಜಿನಿಯರಿಂಗ್ ಮತ್ತು ಮ್ಯಾನೇಜ್‌ಮೆಂಟ್ ಆಯೋಜಿಸಿದ್ದ ಎರಡು ದಿನಗಳ ಗ್ರೋಯಿಂಗ್ ಎಲೆಕ್ಟ್ರಾನಿಕ್ಸ್ ಟೆಕ್ನಾಲಜಿ ಓರಿಯೆಂಟೆಡ್ ಕಾಂಗ್ರೆಗೇಷನ್ ಸ್ಟೇಜ್ (GETOCS 4.0) ದಲ್ಲಿ ವಿದ್ಯಾರ್ಥಿಗಳು ಬೆಂಕಿ ನಂದಿಸುವ ಬಾಲ್‌ಗಳನ್ನು ಹೊಂದಿದ ಡ್ರೋನ್‌ಗಳನ್ನು ಬಳಸಿ ಅದ್ಭುತ ಮಾದರಿಯನ್ನು ಪ್ರದರ್ಶಿಸಿದರು.

ಈ ವಿನೂತನ ಮಾದರಿಯು ತೀವ್ರವಾದ ಬೆಂಕಿಯನ್ನು ತ್ವರಿತವಾಗಿ ನಂದಿಸುವಲ್ಲಿ ಸಫಲವಾಗುತ್ತದೆ. ಇದರಿಂದಾಗಿ ಜೀವಗಳನ್ನು ರಕ್ಷಿಸುವುದರ ಜತೆಗೆ ಕಟ್ಟಡಗಳಿಗೆ ಆಗುವ ಹಾನಿಯನ್ನು ಕೂಡಾ ತಡೆಯುತ್ತದೆ ಮತ್ತು ಪರಿಸರವನ್ನು ರಕ್ಷಿಸುತ್ತದೆ. ಈ ಡ್ರೋನ್‌ಗಳ ಕ್ಷಿಪ್ರ ನಿಯೋಜನೆಯಿಂದ ಹತ್ತಿರದ ಪ್ರದೇಶಗಳಿಗೆ ಬೆಂಕಿ ಹರಡುವುದನ್ನು ತಪ್ಪಿಸಬಹುದಾಗಿದೆ. ಕಾರ್ಯಕ್ರಮದಲ್ಲಿ ಪ್ರದರ್ಶಿಸಲಾದ ಮಾದರಿಯನ್ನು ಮತ್ತಷ್ಟು ಅಭಿವೃದ್ಧಿಪಡಿಸುವ ಮೂಲಕ ವಿಶಾಲ ಪ್ರದೇಶವನ್ನು ಕವರ್‌ ಮಾಡಬಹುದಾಗಿದೆ. ಪ್ರದರ್ಶಿಸಲಾದ ಈ ಮಾದರಿಯನ್ನು ನೋಡಿದ ತಜ್ಞರು, ನಾವು ನೋಡಿದ ಅತ್ಯುತ್ತಮ ಪ್ರಾತ್ಯಕ್ಷಿಕೆ ಇದಾಗಿದೆ ಎಂದು ವಿದ್ಯಾರ್ಥಿಗಳ ಈ ಅನ್ವೇಷಣೆಯನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು.

ಇದನ್ನೂ ಓದಿ: Bengaluru News: ಬೆಂಗಳೂರಿನಲ್ಲಿ ಜೂ.15ರಂದು ʼನಾರಿ ಸಮ್ಮಾನ್‌ʼ ಪ್ರಶಸ್ತಿ ಪ್ರದಾನ

ಎಲ್‌ಆರ್‌ಡಿಇ, ಡಿಆರ್‌ಡಿಒ ನಿವೃತ್ತ ಹೆಚ್ಚುವರಿ ನಿರ್ದೇಶಕ ಪ್ರೊ. ಹರ್ಜಿಂದರ್ ಸಿಂಗ್ ಭಾಟಿಯಾ ಅವರು ಉತ್ಸವವನ್ನು ಉದ್ಘಾಟಿಸಿ ಮಾತನಾಡಿ, ಶೈಕ್ಷಣಿಕ ಅನ್ವೇಷಣೆಗಳ ಹೊರತಾಗಿ, ಎಲೆಕ್ಟ್ರಾನಿಕ್ಸ್ ಹಾರ್ಡ್‌ವೇರ್ ಯೋಜನೆಗಳು ಪ್ರಸ್ತುತ ಸಮಾಜದ ಅಗತ್ಯ ಮತ್ತು ಸವಾಲುಗಳನ್ನು ಪ್ರತಿನಿಧಿಸುವಂತಾಗಬೇಕು. ಇವುಗಳು ಕಡಿಮೆ ವೆಚ್ಚದ ವೈದ್ಯಕೀಯ ಸಾಧನಗಳನ್ನು ಅಭಿವೃದ್ಧಿಪಡಿಸುವುದಾಗಲಿ, ಪರಿಸರ ಮೇಲ್ವಿಚಾರಣಾ ವ್ಯವಸ್ಥೆಗಳನ್ನು ಹೆಚ್ಚಿಸುವುದಾಗಲಿ ಅಥವಾ ಗ್ರಾಹಕ ಬಳಕೆಯ ವಿನೂತನ ಎಲೆಕ್ಟ್ರಾನಿಕ್ಸ್ ಉಪಕರಣ ಅನ್ವೇಷಿಸುವುದಾಗಿರಲಿ, ಈ ಯೋಜನೆಗಳು ನಮ್ಮ ಸುತ್ತಲಿನ ಜನರ ಜೀವನದ ಮೇಲೆ ಅರ್ಥಪೂರ್ಣ ಪರಿಣಾಮವನ್ನು ಬೀರುವ ಸಾಮರ್ಥ್ಯವನ್ನು ಹೊಂದಿರಬೇಕು.

ಎಲೆಕ್ಟ್ರಾನಿಕ್ಸ್ ಮತ್ತು ಟೆಲಿಕಮ್ಯುನಿಕೇಶನ್ ಎಂಜಿನಿಯರ್‌ ಸಂಸ್ಥೆಯಲ್ಲಿ (IETE) ಸದಸ್ಯತ್ವ ಪಡೆಯುವುದರಿಂದ, ISRO, DRDO, LRDE ಮತ್ತು ಇತರ ಸಂಸ್ಥೆಗಳ ವಿವಿಧ ಉಚಿತ ಕೋರ್ಸ್‌ಗಳ ಪ್ರಯೋಜನ ಪಡೆಯಬಹುದಾಗಿದೆ. ಮುಂಬರುವ ವರ್ಷಗಳಲ್ಲಿ ಎಲೆಕ್ಟ್ರಾನಿಕ್ಸ್ ಕ್ಷೇತ್ರದಲ್ಲಿ ಅದ್ಭುತ ಭವಿಷ್ಯ ಅಡಗಿದೆ ಎಂಬುದನ್ನು ಒತ್ತಿ ಹೇಳುತ್ತೇನೆ ಎಂದು ತಿಳಿಸಿದರು.

GETOCS 4.0, ಗೋಪಾಲನ್ ಕಾಲೇಜ್ ಆಫ್ ಎಂಜಿನಿಯರಿಂಗ್‌ನ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ (EC) ವಿಭಾಗವು ನಡೆಸಿದ ಕಾರ್ಯಕ್ರಮವಾಗಿದ್ದು, ದಾಖಲಾತಿಗಳ ಪ್ರಸ್ತುತಿ, ರೊಬೊಟಿಕ್ ಸ್ಪರ್ಧೆಗಳು, ಸರ್ಕ್ಯೂಟ್ ಡೀಬಗ್ ಮಾಡುವುದು, ಪ್ರಾಜೆಕ್ಟ್ ಪ್ರದರ್ಶನಗಳು, ತಾಂತ್ರಿಕ ರಸಪ್ರಶ್ನೆ ಮತ್ತು ಚರ್ಚೆಗಳಂತಹ ವಿವಿಧ ಚಟುವಟಿಕೆಗಳ ಮೂಲಕ ಭಾಗವಹಿಸುವವರು ತಮ್ಮ ಕೌಶಲ್ಯಗಳನ್ನು ಪ್ರದರ್ಶಿಸಲು ಅವಕಾಶವನ್ನು ಒದಗಿಸಿತ್ತು.

ಇದನ್ನೂ ಓದಿ: World Blood Donors Day: ವಿಶ್ವ ರಕ್ತದಾನಿಗಳ ದಿನ; ಜಾಗೃತಿ ಜಾಥಾಕ್ಕೆ ದಿನೇಶ್ ಗುಂಡೂರಾವ್‌ ಚಾಲನೆ

ಗುರುವಾರ ಮುಕ್ತಾಯಗೊಂಡ ಈ ವಾರ್ಷಿಕ ಎರಡು ದಿನಗಳ ಕಾರ್ಯಕ್ರಮವು ಯಾವುದೇ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ವೇದಿಕೆಯನ್ನು ಒದಗಿಸಿ ಕೊಟ್ಟಿತ್ತು. GETOCS 4.0ನ ಪ್ರಾಥಮಿಕ ಕಾರ್ಯಸೂಚಿಯು ವಿದ್ಯಾರ್ಥಿಗಳ ಬೆಳವಣಿಗೆ ಮತ್ತು ಕೌಶಲ್ಯ ಅಭಿವೃದ್ಧಿಯನ್ನು ಉತ್ತೇಜಿಸುವುದು, ಸಾಮಾಜಿಕ ಆರೋಗ್ಯವನ್ನು ಹೆಚ್ಚಿಸುವುದು ಮತ್ತು ಹೆಚ್ಚಿನ ಸಂಶೋಧನೆ-ಆಧಾರಿತ ಯೋಜನೆಗಳನ್ನು ಉತ್ತೇಜಿಸುವ ಉದ್ದೇಶ ಹೊಂದಿದೆ.

ಗೋಪಾಲನ್ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಡಾ. ಸಿ. ಪ್ರಭಾಕರ್ ಮಾತನಾಡಿ, ನಮ್ಮ ವಿದ್ಯಾರ್ಥಿಗಳು ಕೈಗಾರಿಕೆಗಳಿಗೆ ಪ್ರಯೋಜನಕಾರಿಯಾದ ನವೀನ ಯೋಜನೆಗಳನ್ನು ಅಭಿವೃದ್ಧಿಪಡಿಸಿದ್ದಾರೆ. ನಾವು ಗುಣಮಟ್ಟದ ಯೋಜನೆಗಳತ್ತ ಗಮನಹರಿಸುತ್ತಿದ್ದೇವೆ ಮತ್ತು ರಾಷ್ಟ್ರಕ್ಕೆ ನೆರವಾಗುವಂತಹ ಯೋಜನೆಗಳಿಗೆ ಆರ್ಥಿಕ ಸಹಾಯ ಮಾಡುತ್ತಿದ್ದೇವೆ. ಹೆಚ್ಚುವರಿಯಾಗಿ, ನಾವು 30 ಲಕ್ಷ ರೂ.ದೊಂದಿಗೆ ಗೋಪಾಲನ್ ಕಾಲೇಜ್ ಆಫ್ ಎಂಜಿನಿಯರಿಂಗ್‌ನಲ್ಲಿ ಇಂಟೆಲ್ ಪ್ರಯೋಗಾಲಯವನ್ನು ಸ್ಥಾಪಿಸುತ್ತಿದ್ದೇವೆ. ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಸಾಧನೆಗಳ ಜತೆಗೆ ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳುವುದು ಕೂಡಾ ನಿರ್ಣಾಯಕವಾಗಿದೆ ಎಂದು ಅವರು ಹೇಳಿದರು.

ಗೋಪಾಲನ್ ಇನ್‌ಸ್ಟಿಟ್ಯೂಷನ್ಸ್ ಸಿಇಒ ಡಾ. ಭಾಸ್ಕರ್ ರೆಡ್ಡಿ ಸಿ.ಎಂ. ಮಾತನಾಡಿ, ” GETOCS.4.0 ಕಾರ್ಯಕ್ರಮವನ್ನು ಇಸಿಇ ವಿಭಾಗವು ಆಯೋಜಿಸಿದ್ದಕ್ಕಾಗಿ ನಾನು ಅಭಿನಂದಿಸುತ್ತೇನೆ. ಈ ರೀತಿಯ ಕಾರ್ಯಕ್ರಮವು ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ಎಂಜಿನಿಯರಿಂಗ್ ಕ್ಷೇತ್ರದಲ್ಲಿ ವಿದ್ಯಾರ್ಥಿಗಳ ಜ್ಞಾನವನ್ನು ಒರೆಗೆ ಹಚ್ಚುತ್ತದೆ ಎಂದರು.

ಗೋಪಾಲನ್ ಕಾಲೇಜ್ ಆಫ್ ಎಂಜಿನಿಯರಿಂಗ್‌‌ ಮತ್ತು ಮ್ಯಾನೇಜ್‌ ಮೆಂಟ್‌ನ ಪ್ರಾಂಶುಪಾಲ ಡಾ. ಅರುಣ್ ವಿಕಾಸ್ ಸಿಂಗ್ ಮಾತನಾಡಿ, ಪ್ರತಿಷ್ಠಿತ ಕಂಪನಿಗಳಲ್ಲಿ ವಿದ್ಯಾರ್ಥಿಗಳ ಉದ್ಯೋಗಾವಕಾಶವನ್ನು ಹೆಚ್ಚಿಸಲು ನಿಯಮಿತ ಶೈಕ್ಷಣಿಕ ತರಗತಿಗಳ ಜತೆಗೆ ಹೆಚ್ಚುವರಿ ಕೌಶಲ್ಯಗಳನ್ನು ಪಡೆದುಕೊಳ್ಳುವ ಪ್ರಾಮುಖ್ಯತೆಯನ್ನು ಮನವರಿಕೆ ಮಾಡಿಕೊಟ್ಟರು. ನಾವು ವಿದ್ಯಾರ್ಥಿಗಳಿಗೆ ಉದ್ಯಮಶೀಲತೆಯ ಕೌಶಲ್ಯದ ಬಗ್ಗೆ ತರಬೇತಿ ನೀಡುತ್ತೇವೆ, ಇದರಿಂದ ಅವರು ಉದ್ಯೋಗಿಗಳಾಗದೆ ಉದ್ಯೋಗದಾತರಾಗಬಹುದು ಎಂದು ಹೇಳಿದರು.

ಇದನ್ನೂ ಓದಿ: Tata Motors: ಪಂಚ್. ಇವಿ, ನೆಕ್ಸಾನ್.ಇವಿಗೆ ಭಾರತ್-ಎನ್‌ಸಿಎಪಿಯಿಂದ 5 ಸ್ಟಾರ್ ರೇಟಿಂಗ್

ಕಾರ್ಯಕ್ರಮದಲ್ಲಿ ಗೋಪಾಲನ್ ಆರ್ಗ್ಯಾನಿಕ್ಸ್ ನ ನಿರ್ದೇಶಕಿ ಸುನೀತಾ ಪ್ರಭಾಕರ್‌, ಎಸ್. ಅನಂತ ಪದ್ಮನಾಭಂ, ಇಸಿಇ ವಿಭಾಗದ ಮುಖ್ಯಸ್ಥ ಡಾ. ಕೃಷ್ಣ ಕುಮಾರ್, ಕಾರ್ಯಕ್ರಮ ಸಂಘಟನಾ ಸಮಿತಿಯ ಮುಖ್ಯಸ್ಥ ಡಾ. ಕೆ.ಸುರೇಶ್, ಉಜಿರೆಯ ಧರ್ಮಸ್ಥಳ ಎಂಜಿನಿಯರಿಂಗ್ ಕಾಲೇಜಿನ ಮಾಜಿ ಪ್ರಾಂಶುಪಾಲ ಡಾ. ಮಧುಸೂದನ್, ಬಿಎಂಎಸ್ ಪ್ರಾಧ್ಯಾಪಕ ಡಾ. ಪುರುಷೋತ್ತಮ್, ಏರೋನಾಟಿಕ್ಸ್ ವಿಭಾಗದ ಮುಖ್ಯಸ್ಥ ಡಾ.ಕೆ. ನಟರಾಜನ್, ಗೋಪಾಲನ್ ಕಾಲೇಜ್ ಆಫ್ ಎಂಜಿನಿಯರಿಂಗ್‌ ಮತ್ತು ಮ್ಯಾನೇಜ್ಮೆಂಟ್‌ನ ಪ್ರಧಾನ ವಿಜ್ಞಾನಿ ಮತ್ತು ಇಸಿಇ ವಿಭಾಗದ ಹಿರಿಯ ಪ್ರಾಧ್ಯಾಪಕ ಡಾ. ಸುರೇಶ್ ಹಾಗೂ ಇತರರು ಉಪಸ್ಥಿತರಿದ್ದರು.

Continue Reading

ವಿಜ್ಞಾನ

Aliens: ಏಲಿಯನ್‌ಗಳು ಅನ್ಯಗ್ರಹ ಜೀವಿಗಳಲ್ಲ; ಈ ಭೂಮಿಯ ರಹಸ್ಯ ನಿವಾಸಿಗಳು! ಹಾರ್ವರ್ಡ್ ವಿಜ್ಞಾನಿಗಳ ಸಂಶೋಧನೆ

Aliens: ಅನ್ಯಗ್ರಹದ ಜೀವಿಗಳು ಎಂದು ಕರೆಯಲ್ಪಡುವ ಏಲಿಯನ್ ಗಳು ನಿರಂತರ ಮಾನವನ ಆಕರ್ಷಣೆಯನ್ನು ಸೆಳೆಯುತ್ತಿದೆ. ಆದರೆ ಈ ನಿಟ್ಟಿನಲ್ಲಿ ಇದೀಗ ಹಾರ್ವರ್ಡ್ ವಿಶ್ವವಿದ್ಯಾನಿಲಯದ ವಿಜ್ಞಾನಿಗಳು ನೀಡಿರುವ ಮಾಹಿತಿ (New Invention) ಎಲ್ಲರನ್ನೂ ಬೆಚ್ಚಿ ಬಿಳಿಸಲಿದೆ. ಈವರೆಗೆ ನಾವು ಅನ್ಯಗ್ರಹದ ಜೀವಿಗಳೆಂದು ಭಾವಿಸಿರುವ ಏಲಿಯನ್ ಗಳು ಭೂಮಿಯ ಒಂದು ಭಾಗವಾಗಿರಬಹುದು ಎಂದು ಅವರು ಹೇಳಿದ್ದಾರೆ.

VISTARANEWS.COM


on

By

Aliens
Koo

ಏಲಿಯನ್‌ಗಳು (Aliens) ಬೇರೆ ಗ್ರಹದಿಂದ ಬಂದದ್ದಲ್ಲ. ಅವು ಭೂಮಿಯ (earth) ಮೇಲೆಯೇ ಸಹಸ್ರಾರು ವರ್ಷಗಳಿಂದ ಇವೆ. ಸಾಗರ ಮತ್ತು ಆಳವಾದ ಭೂಗತ ಪ್ರದೇಶಗಳಂತಹ (oceans and deep underground) ಅನ್ವೇಷಿಸಲಾಗದ ಪ್ರದೇಶಗಳಲ್ಲಿ (New Invention) ಅವುಗಳು ಯಾರ ಕಣ್ಣಿಗೂ ಕಾಣದಂತೆ ಮರೆಯಾಗಿ ವಾಸಿಸುತ್ತವೆ ಎಂದು ಹಾರ್ವರ್ಡ್ ವಿಜ್ಞಾನಿಗಳು (Harvard scientists) ಹೇಳಿದ್ದಾರೆ.

ಹಾರ್ವರ್ಡ್ ವಿಶ್ವವಿದ್ಯಾನಿಲಯದ ಹ್ಯೂಮನ್ ಫ್ಲೋರಿಶಿಂಗ್ ಪ್ರೋಗ್ರಾಂನ ಹೊಸ ಪ್ರಬಂಧವು “ಕ್ರಿಪ್ಟೋಟೆರೆಸ್ಟ್ರಿಯಲ್” ಜೀವಿಗಳ ಕ್ಷೇತ್ರದ ಮೇಲೆ ಬೆಳಕು ಚೆಲ್ಲಿದೆ. ಇದರಲ್ಲಿ ಏಲಿಯನ್‌ಗಳನ್ನು ಅನ್ಯಗ್ರಹ ಜೀವಿಗಳೆಂದು ನಾವು ಭಾವಿಸಿದ್ದೇವೆ. ಆದರೆ ಅವು ದೂರದ ಗ್ರಹಗಳಿಂದ ಅಲ್ಲ. ಭೂಮಿಯ ಮೇಲೆ ಸಹಸ್ರಾರು ವರ್ಷಗಳಿಂದ ವಾಸಿಸುತ್ತಿವೆ. ಯಾರ ಕಣ್ಣಿಗೆ ಕಾಣದಂತೆ ಮರೆಯಾಗಿವೆ ಎಂದು ಇದೀಗ ಹಾರ್ವರ್ಡ್ ವಿಜ್ಞಾನಿಗಳು ಹೇಳಿರುವುದು ಅನ್ಯಗ್ರಹದಲ್ಲಿ ಜೀವಿಗಳು ಅಸ್ತಿತ್ವದಲ್ಲಿವೆ, ಬ್ರಹ್ಮಾಂಡದ ಇತರ ಭಾಗಗಳಿಂದ ಭೂಮಿಗೆ ಬರುತ್ತವೆ ಎನ್ನುವ ನಂಬಿಕೆಗೆ ಸವಾಲು ಮಾಡಿದಂತಿದೆ. ಹೀಗಾಗಿ ಈ ನಿಟ್ಟಿನಲ್ಲಿ ಸಂಶೋಧನೆಗಳಿಗೆ ಪ್ರೇರೇಪಣೆ ನೀಡಿದಂತಾಗಿದೆ.

ಭೂಮಿಯಲ್ಲಿ ಇನ್ನೂ ವಿಶಾಲವಾದ, ಅನ್ವೇಷಿಸದ ಪ್ರದೇಶಗಳು ಇವೆ. ಭೂಮಿಯ ಶೇ. 80ರಷ್ಟು ಸಾಗರಗಳು ನಕ್ಷೆಯಲ್ಲಿ ಇಲ್ಲ. ಅಂತಹ ಪ್ರದೇಶಗಳಲ್ಲಿ ಇಂತಹ ಜೀವಿಗಳು ವಾಸಿಸಲು ಸಾಕಷ್ಟು ಜಾಗವನ್ನು ಒದಗಿಸುತ್ತದೆ ಎಂದು ಅವರು ಹೇಳಿದ್ದು, ಇವರು ದೂರದ ಗ್ರಹದಿಂದ ಭೂಮಿಗೆ ಬರುವವರಲ್ಲ. ನಮ್ಮದೇ ಪ್ರಪಂಚದಲ್ಲಿರುವ ದೀರ್ಘಾವಧಿಯ ನಿವಾಸಿಗಳು ಎಂದಿದ್ದಾರೆ.


ಮುಳುಗಿರುವ ರಹಸ್ಯ

ಸಂಶೋಧಕರು ಇದಕ್ಕಾಗಿ ಪ್ರಾಚೀನ ನಾಗರಿಕತೆಗಳ ಬಗ್ಗೆ ವಿವರಿಸುತ್ತಾರೆ. ಪ್ರಾಚೀನ ನಾಗರಿಕತೆಯ ಅನೇಕ ಅವಶೇಷಗಳು ಸಮುದ್ರದ ಕೆಳಗೆ ಅಡಗಿವೆ. ಇದಕ್ಕೆ ಒಂದು ಉದಾಹರಣೆಯೆಂದರೆ ಜಪಾನ್‌ನ ಯೋನಾಗುನಿ ಜಿಮಾದ ಕರಾವಳಿಯಲ್ಲಿ ಬೃಹತ್ ಮುಳುಗಿರುವ ಕಲ್ಲಿನ ರಚನೆ. ಇದನ್ನು 5,000 ವರ್ಷಗಳಷ್ಟು ಹಳೆಯದಾದ ಪಿರಮಿಡ್‌ನ ಅವಶೇಷ ಎಂದು ಕೆಲವರು ನಂಬುತ್ತಾರೆ. ಇದನ್ನು ಸಾಮಾನ್ಯವಾಗಿ ಜಪಾನೀಸ್ ಅಟ್ಲಾಂಟಿಸ್ ಎಂದು ಕರೆಯಲಾಗುತ್ತದೆ. ಈ ರಚನೆಯು ಅಜ್ಞಾತ, ಮುಂದುವರಿದ ನಾಗರಿಕತೆಗಳು ಅಸ್ತಿತ್ವದಲ್ಲಿದ್ದಿರಬಹುದು ಮತ್ತು ಇನ್ನೂ ಅಸ್ತಿತ್ವದಲ್ಲಿರಬಹುದು ಎಂಬ ವಾದವನ್ನು ಉತ್ತೇಜಿಸುತ್ತದೆ.

ಭೂಗತ ಅಭಯಾರಣ್ಯಗಳು

ಅಧ್ಯಯನದ ಪ್ರಕಾರ ಅನ್ಯಲೋಕದ ಜೀವಿಗಳು ಆಳವಾದ ಭೂಗತ, ಜ್ವಾಲಾಮುಖಿಗಳ ಕೆಳಗೆ ಅಥವಾ ಸಮುದ್ರದ ಕತ್ತಲೆಯಲ್ಲಿ ಅನ್ವೇಷಿಸದ ಕಂದಕಗಳಲ್ಲಿ ನೆಲೆಗೊಂಡಿರಬಹುದು ಎನ್ನಲಾಗಿದೆ. ಆದರೆ ಈ ಕುರಿತು ಇನ್ನೂ ಹೆಚ್ಚಿನ ಅಧ್ಯಯನ ನಡೆಯಬೇಕಿದೆ. ಇದು ಈಗ ಪ್ರಪಂಚದಾದ್ಯಂತದ ಬಾಹ್ಯಾಕಾಶ ಸಂಸ್ಥೆಗಳ ಆಸಕ್ತಿಯನ್ನು ಹೆಚ್ಚಿಸಿವೆ.

ಇದನ್ನೂ ಓದಿ: Headless Chicken: ತಲೆ ಕತ್ತರಿಸಿದರೂ ಈ ಕೋಳಿ 18 ತಿಂಗಳು ಬದುಕಿತ್ತು! ಸಾಯುವ ಮೊದಲು ಮಾಲೀಕನನ್ನು ಶ್ರೀಮಂತಗೊಳಿಸಿತು!

ತಜ್ಞರಿಂದ ಎಚ್ಚರಿಕೆ

ಅನ್ಯಗ್ರಹದ ಜೀವಿಗಳನ್ನು ಹುಡುಕುವ ವಿಚಾರದಲ್ಲಿ ಸಂಶೋಧಕರು ಎಚ್ಚರಿಕೆಯನ್ನೂ ನೀಡಿದ್ದಾರೆ. ಇದು ಮಾನವರ ಮೇಲೆ ಅನಿರೀಕ್ಷಿತ ದಾಳಿಗೆ ಕಾರಣವಾಗಬಹುದು ಎಂದು ಹೇಳಿದ್ದಾರೆ. ಈ ಜೀವಿಗಳು ಅತ್ಯಾಧುನಿಕ ತಂತ್ರಜ್ಞಾನವನ್ನು ಹೊಂದಿರುವುದಾಗಿ ಹೇಳಲಾಗುತ್ತದೆ. ಹೀಗಾಗಿ ಗೌಪ್ಯವಾಗಿರುವ ರಹಸ್ಯಗಳನ್ನು ಎಚ್ಚರಿಕೆಯಿಂದ ಮತ್ತು ಗೌರವಾನ್ವಿತ ವಿಧಾನದಿಂದ ಅಧ್ಯಯನ ನಡೆಸುವುದು ಒಳ್ಳೆಯದು ಎಂದು ಹೇಳಿದ್ದಾರೆ. ಈ ಅಧ್ಯಯನವು ಚಿಂತನೆಯ ಹೊಸ ಮಾರ್ಗಗಳನ್ನು ತೆರೆದಿದೆ. ನಮ್ಮ ಗ್ರಹದ ವಿಶಾಲ ಪ್ರದೇಶಗಳನ್ನು ಇದು ಗುರುತಿಸಿದೆ. ಮಾತ್ರವಲ್ಲದೇ ರಹಸ್ಯವಾಗಿ ಮುಚ್ಚಿ ಹೋಗಿರುವ ಅನೇಕ ವಿಚಾರಗಳನ್ನು ಅನ್ವೇಷಿಸಲು ಪ್ರೇರಣೆ ನೀಡಿದೆ.

Continue Reading

ಆರೋಗ್ಯ

New Cancer Drug: ಕ್ಯಾನ್ಸರ್‌ ಚಿಕಿತ್ಸೆಯಲ್ಲಿ ಕ್ರಾಂತಿ; ಹೊಸ ಔಷಧ ಪ್ರಯೋಗ ಶೇ. 100 ಯಶಸ್ವಿ!

ಕ್ಯಾನ್ಸರ್ ಗೆ ಹೊಸ ಔಷಧವೊಂದನ್ನು (New Cancer Drug) ಕಂಡುಹಿಡಿಯಲಾಗಿದ್ದು, ಇದು ಶೇಕಡ ನೂರರಷ್ಟು ಪರಿಣಾಮಕಾರಿಯಾಗಿದೆ. ಜೆಂಪರ್ಲಿ ದೋಸ್ಟರಲಿಮ್ಬ್-ಜಿಎಕ್ಸ್ಎಲ್ ವೈ ಹೆಸರಿನ ಕ್ಯಾನ್ಸರ್ ಔಷಧ ಗುದನಾಳದ ಕ್ಯಾನ್ಸರ್ ಹೊಂದಿದ್ದ 42 ರೋಗಿಗಳಿಗೆ ಪರೀಕ್ಷಿಸಲಾಗಿದ್ದು, ಎಲ್ಲರ ಕ್ಯಾನ್ಸರ್ ಗೆಡ್ಡೆಗಳನ್ನು ಅದು ಯಶಸ್ವಿಯಾಗಿ ತೆಗೆದುಹಾಕಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಇದು ಕ್ಯಾನ್ಸರ್ ಚಿಕಿತ್ಸೆಯಲ್ಲಿ ಒಂದು ಅಭೂತಪೂರ್ವ ಯಶಸ್ಸು ಎಂದೇ ಹೇಳಬಹುದು.

VISTARANEWS.COM


on

By

New Cancer Drug
Koo

ಕ್ಯಾನ್ಸರ್‌ಗೆ (cancer) ಹೊಸ ಔಷಧವೊಂದನ್ನು (New Cancer Drug) ಕಂಡುಹಿಡಿಯಲಾಗಿದ್ದು, ಇದು ಶೇಕಡ ನೂರರಷ್ಟು ಪರಿಣಾಮಕಾರಿ ಎಂದು ವಿಜ್ಞಾನಿಗಳು (Scientists) ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಜೆಂಪರ್ಲಿ ದೋಸ್ಟರಲಿಮ್ಬ್-ಜಿಎಕ್ಸ್ಎಲ್ ವೈ (Jemperli-dostarlimab-gxly) ಎಂಬ ಹೆಸರಿನ ಕ್ಯಾನ್ಸರ್ ಗುಣಪಡಿಸುವ ಔಷಧ ಗುದನಾಳದ ಕ್ಯಾನ್ಸರ್ (colorectal cancers) ಹೊಂದಿದ್ದ 42 ರೋಗಿಗಳಿಗೆ ಪರೀಕ್ಷಿಸಲಾಗಿದ್ದು, ಎಲ್ಲರ ಕ್ಯಾನ್ಸರ್ ಗಡ್ಡೆಗಳನ್ನು ಅದು ಯಶಸ್ವಿಯಾಗಿ ತೆಗೆದುಹಾಕಿದೆ ಎಂದು ಹೇಳಿದ್ದಾರೆ. ಎರಡನೇ ಹಂತದಲ್ಲಿ ಈ ಔಷಧ ಪ್ರಯೋಗ ಯಶಸ್ವಿಯಾಗಿದ್ದು, ಔಷಧವು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಗುದನಾಳದ ಕ್ಯಾನ್ಸರ್ ಅನ್ನು ಕೊಲೊರೆಕ್ಟಲ್ ಕ್ಯಾನ್ಸರ್ ಎಂದು ಕರೆಯಲಾಗುತ್ತದೆ. ಎರಡನೇ ಹಂತದ ಔಷಧ ಪ್ರಯೋಗದ ಬಳಿಕ ಮೊದಲ 24 ರೋಗಿಗಳಲ್ಲಿ ಉತ್ತಮ ಚೇತರಿಕೆ ಕಂಡು ಬಂದಿದೆ. ಸುಮಾರು ಎರಡು ವರ್ಷದ ಬಳಿಕ ಅವರಲ್ಲಿ ಯಾವುದೇ ಕ್ಯಾನ್ಸರ್ ಲಕ್ಷಣಗಳು ಕಂಡು ಬಂದಿಲ್ಲ.

ಮೆಮೋರಿಯಲ್ ಸ್ಲೋನ್ ಕೆಟರಿಂಗ್ ಕ್ಯಾನ್ಸರ್ ಸೆಂಟರ್‌ನ ಆಂಕೊಲಾಜಿಸ್ಟ್ ಡಾ. ಆಂಡ್ರಿಯಾ ಸೆರ್ಸೆಕ್ ಅವರ ಪ್ರಕಾರ Dostarlimab-gxly ಕ್ಯಾನ್ಸರ್ ಔಷಧವು ಪರಿಣಾಮಕಾರಿಯಾಗಿ ಚಿಕಿತ್ಸೆ ನೀಡುವಲ್ಲಿ ಉತ್ತಮ ಸಾಮರ್ಥ್ಯವನ್ನು ಪ್ರದರ್ಶಿಸಿದೆ. ಕ್ಯಾನ್ಸರ್ ರೋಗಿಗಳಿಗೆ ಕಿಮೊಥೆರಪಿ ಮತ್ತು ವಿಕಿರಣದ ಅಗತ್ಯ ಮೊದಲ ಹಂತದಲ್ಲಿ ನೀಡಲಾಗುತ್ತದೆ. ಇದು ಚಿಕಿತ್ಸಾ ಆಯ್ಕೆಯ ಭರವಸೆಯನ್ನು ನೀಡುತ್ತದೆ, ಇವೆರಡೂ ಜೀವನದ ಗುಣಮಟ್ಟದ ಮೇಲೆ ತೀವ್ರ ಪರಿಣಾಮ ಬೀರುತ್ತದೆ.

ಅಡ್ಡ ಪರಿಣಾಮ ಕಡಿಮೆ

ಕ್ಯಾನ್ಸರ್ ಶಸ್ತ್ರಚಿಕಿತ್ಸೆಗೆ ಒಳಗಾಗುವವರಿಗೆ ಸಾಮಾನ್ಯವಾಗಿ ಕರುಳು, ಮೂತ್ರ, ಲೈಂಗಿಕ ಕ್ರಿಯೆಯಲ್ಲಿ ತೊಂದರೆ, ಎರಡನೇ ಬಾರಿ ಮತ್ತೆ ಕ್ಯಾನ್ಸರ್ ಬರುವ ಅಪಾಯ ಮತ್ತು ಬಂಜೆತನವನ್ನು ಉಂಟು ಮಾಡುತ್ತದೆ. ಇದು ಜೀವನದ ಮೇಲೆ ತೀವ್ರ ಪರಿಣಾಮವನ್ನು ಬೀರುತ್ತದೆ. ಕ್ಯಾನ್ಸರ್ ಕೋಶಗಳ ಮೇಲೆ ದಾಳಿ ಮಾಡಲು ಪ್ರತಿರಕ್ಷಣಾ ವ್ಯವಸ್ಥೆಯನ್ನು ಉತ್ತೇಜಿಸಲು ಇಮ್ಯುನೊಥೆರಪಿಯನ್ನು ಬಳಸಿಕೊಂಡು ಈ ಔಷಧವು ಕಾರ್ಯನಿರ್ವಹಿಸುತ್ತದೆ. ಇದು ಸಾಂಪ್ರದಾಯಿಕ ಕಿಮೊಥೆರಪಿಗಿಂತ ಭಿನ್ನವಾಗಿದೆ. ಈ ಔಷಧವು ಅತ್ಯಂತ ಕಡಿಮೆ ಅಡ್ಡಪರಿಣಾಮಗಳನ್ನು ತೋರಿಸಿದೆ.

ಕ್ಯಾನ್ಸರ್ ಚಿಕಿತ್ಸೆಯಲ್ಲಿ ಕ್ರಾಂತಿ

ಕ್ಯಾನ್ಸರ್ ಚಿಕಿತ್ಸೆಯಲ್ಲಿ ಇದೊಂದು ಕ್ರಾಂತಿಯನ್ನು ಉಂಟು ಮಾಡಿದೆ. ಜೆಂಪರ್ಲಿ ದೋಸ್ಟರಲಿಮ್ಬ್-ಜಿಎಕ್ಸ್ಎಲ್ ವೈ ಔಷಧದ ಪರಿಣಾಮಗಳ ಕುರಿತು ತಿಳಿದುಕೊಳ್ಳಲು ವಿವಿಧ ಕೊಲೊರೆಕ್ಟಲ್ ಕ್ಯಾನ್ಸರ್ ಮೇಲೆ ಪ್ರಯೋಗಗಳನ್ನು ಮುಂದುವರಿಸಲಾಗುತ್ತದೆ.

ಎರಡನೇ ಹಂತದ ಯಶಸ್ವಿ ಪ್ರಯೋಗದ ಬಳಿಕ ಜೆಂಪರ್ಲಿ ದೋಸ್ಟರಲಿಮ್ಬ್-ಜಿಎಕ್ಸ್ಎಲ್ ವೈ ಅನ್ನು ಚಿಕಾಗೋದ 2024 ರ ಅಮೆರಿಕನ್ ಸೊಸೈಟಿ ಆಫ್ ಕ್ಲಿನಿಕಲ್ ಆಂಕೊಲಾಜಿ (ASCO) ವಾರ್ಷಿಕ ಸಭೆಯಲ್ಲಿ ಪ್ರಸ್ತುತಪಡಿಸಲಾಯಿತು.

ಕಳೆದ ವರ್ಷ ಎಂಡೊಮೆಟ್ರಿಯಲ್ ಕ್ಯಾನ್ಸರ್ ಗೆ ಕಿಮೊಥೆರಪಿ ಜೊತೆಗೆ ಪೂರಕ ಚಿಕಿತ್ಸೆಯಾಗಿ ಔಷಧೀಯ ಕಂಪೆನಿಯಾದ ಎಫ್ ಡಿಎಯಿಂದ ಔಷಧವನ್ನು ಅನುಮೋದಿಸಲಾಗಿದೆ. ಇದೀಗ ಔಷಧೀಯ ಕಂಪೆನಿ ಜಿಎಸ್ ಕೆ ಇತರ ರೀತಿಯ ಕೊಲೊರೆಕ್ಟಲ್ ಕ್ಯಾನ್ಸರ್‌ಗಳ ಅಧ್ಯಯನವನ್ನು ನಡೆಸುತ್ತಿದೆ.

ಔಷಧ ಪ್ರಯೋಗದ ಕುರಿತು ಪ್ರತಿಕ್ರಿಯಿಸಿರುವ ಜಿಎಸ್‌ಕೆ ಹಿರಿಯ ಉಪಾಧ್ಯಕ್ಷ ಅಬ್ದುಲ್ಲಾ ಹೆಶಮ್, 42 ರೋಗಿಗಳಲ್ಲಿ ಔಷಧ ಬೀರಿರುವ ಪರಿಣಾಮ ಅತ್ಯದ್ಭುತವಾಗಿದೆ. ಈ ಫಲಿತಾಂಶಗಳು ನಮ್ಮನ್ನು ಕ್ಯಾನ್ಸರ್ ಚಿಕಿತ್ಸೆಯಲ್ಲಿ ಒಂದು ಹೆಜ್ಜೆ ಹತ್ತಿರಕ್ಕೆ ತಂದಿದೆ ಎಂದು ತಿಳಿಸಿದ್ದಾರೆ.

ಈ ಚಿಕಿತ್ಸೆಯ ಉದ್ದೇಶ ಮತ್ತು ವಿಧಾನಗಳ ಬಗ್ಗೆ ರೋಗಿಗಳು ಅರ್ಥ ಮಾಡಿಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಸ್ಥಳೀಯವಾಗಿ ಪ್ರಯೋಗಗಳನ್ನು ಮುಂದುವರಿಸಲಾಗಿದೆ. ಕೆಲವು ಕೊಲೊರೆಕ್ಟಲ್ ಕ್ಯಾನ್ಸರ್‌ಗಳಲ್ಲಿ dostarlimabgxly ಮೌಲ್ಯಮಾಪನ ಮಾಡಲು ನಾವು ಎದುರು ನೋಡುತ್ತಿದ್ದೇವೆ ಎಂದು ಅವರು ತಿಳಿಸಿದ್ದಾರೆ.

ಈ ಔಷಧದಿಂದ ಯಾವುದೇ ಅಡ್ಡ ಪರಿಣಾಮಗಳು ಇಲ್ಲ ಎಂದು ಜಿಎಸ್ ಕೆ ಹೇಳಿಕೆಯಲ್ಲಿ ಉಲ್ಲೇಖಿಸಿದೆ.

Continue Reading
Advertisement
T20 World Cup 2024
ಕ್ರಿಕೆಟ್1 hour ago

T20 World Cup 2024: ಟಿ-20 ವಿಶ್ವಕಪ್‌ನಿಂದ ಪಾಕಿಸ್ತಾನ ಔಟ್;‌ ಸೂಪರ್‌ 8ಕ್ಕೆ ಲಗ್ಗೆ ಇಟ್ಟ ಅಮೆರಿಕ

Toyota Technical Education Programme started at Bareilly Government Polytechnic by TKM
ದೇಶ2 hours ago

Toyota Kirloskar Motor: ಟೊಯೊಟಾ ತಾಂತ್ರಿಕ ಶಿಕ್ಷಣ ಕಾರ್ಯಕ್ರಮದಡಿ ವಿದ್ಯಾರ್ಥಿ ವೇತನ

Truck Driver
ದೇಶ3 hours ago

ಆರು ವರ್ಷದ ಬಾಲಕಿಯನ್ನು ಅಪಹರಿಸಿ, ಅತ್ಯಾಚಾರಗೈದು ಕೊಂದ ಟ್ರಕ್‌ ಡ್ರೈವರ್;‌ ಭೀಕರ ವಿಡಿಯೊ ಇಲ್ಲಿದೆ

Do not split BBMP says Karave State President TA Narayana Gowda
ಕರ್ನಾಟಕ4 hours ago

BBMP: ಬಿಬಿಎಂಪಿ ವಿಭಜನೆ ಬೇಡ; ಇದು ಕನ್ನಡಿಗರಿಗೆ ಮಾರಕ: ನಾರಾಯಣ ಗೌಡ

ಕರ್ನಾಟಕ4 hours ago

Congress Guarantee: ಗ್ಯಾರಂಟಿ ಯೋಜನೆ ನಿಲ್ಲಲ್ಲ ನಿಲ್ಲಲ್ಲ ನಿಲ್ಲಲ್ಲ ಎಂದ ಸಿದ್ದರಾಮಯ್ಯ

Arundhati Roy
ದೇಶ4 hours ago

Arundhati Roy: ‘ಕಾಶ್ಮೀರ ಭಾರತದ್ದಲ್ಲ’ ಎಂದಿದ್ದ ಅರುಂಧತಿ ರಾಯ್‌ ವಿರುದ್ಧ ಉಗ್ರರ ನಿಗ್ರಹ ಕಾಯ್ದೆ ಅಡಿ ಕ್ರಮ!

Sunny Leone
ಸಿನಿಮಾ5 hours ago

Sunny Leone: ಸನ್ನಿ ಲಿಯೋನ್ ಬೇಕೇಬೇಕೆಂದು ವಿದ್ಯಾರ್ಥಿಗಳ ಪಟ್ಟು; ಕೇರಳ ವಿವಿಗೆ ಇಕ್ಕಟ್ಟು!

ಕರ್ನಾಟಕ5 hours ago

Course Fee Hike: ತಾಂತ್ರಿಕ ಶಿಕ್ಷಣ ಕೋರ್ಸ್‌ಗಳ ಪ್ರವೇಶ ಶುಲ್ಕ ಶೇ.10ರಷ್ಟು ಹೆಚ್ಚಳ

engineering students have invented a unique fire extinguisher drone at bengaluru
ಕರ್ನಾಟಕ5 hours ago

Bengaluru News: ಬೆಂಕಿ ನಂದಿಸುವ ‘ವಿಶಿಷ್ಟ ಡ್ರೋನ್‌’; ಎಂಜಿನಿಯರಿಂಗ್‌ ವಿದ್ಯಾರ್ಥಿಗಳ ಆವಿಷ್ಕಾರ!

RBI Penalty
ದೇಶ5 hours ago

RBI Penalty: ಸೆಂಟ್ರಲ್‌ ಬ್ಯಾಂಕ್‌ ಆಫ್‌ ಇಂಡಿಯಾಗೆ 1.45 ಕೋಟಿ ರೂ. ದಂಡ ವಿಧಿಸಿದ ಆರ್‌ಬಿಐ; ಕಾರಣ ಏನು?

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Weather Forecast
ಮಳೆ7 hours ago

Karnataka Weather : ಕರಾವಳಿ, ಉತ್ತರ ಒಳನಾಡಿನಲ್ಲಿ ವರುಣಾರ್ಭಟ; ನಾಳೆಯು ಹಲವೆಡೆ ಸಿಕ್ಕಾಪಟ್ಟೆ ಮಳೆ

Actor Darshan
ಬೆಂಗಳೂರು8 hours ago

Actor Darshan : ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್ ಮಾಡಿ ಕರೆತರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ!

actor Darshan
ಬೆಂಗಳೂರು9 hours ago

Actor Darshan : ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಮತ್ತಿಬ್ಬರು ಸರೆಂಡರ್‌; ಆರೋಪಿಗಳ ಸಂಖ್ಯೆ 16ಕ್ಕೆ ಏರಿಕೆ

Actor Darshan
ಸಿನಿಮಾ9 hours ago

Actor Darshan : ರೇಣುಕಾಸ್ವಾಮಿ ‌ಮೃತದೇಹ ಬಿಸಾಡಿ ಬಳಿಕ ಸಾಕ್ಷ್ಯಇದ್ದ 2 ಮೊಬೈಲ್‌ಗಳನ್ನು ಮೋರಿಗೆ ಎಸೆದ್ರಾ ಆರೋಪಿಗಳು?

karnataka weather Forecast
ಮಳೆ3 days ago

Karnataka Weather : ಭಾರಿ ಮಳೆಗೆ ಗುಡ್ಡದಿಂದ ಉರುಳಿ ಬಿದ್ದ ಬಂಡೆಗಲ್ಲು; ಬೆಂಗಳೂರಲ್ಲೂ ಸಂಜೆ ವರ್ಷಧಾರೆ

actor Darshan
ಚಿತ್ರದುರ್ಗ3 days ago

Actor Darshan: ರೇಣುಕಾ ಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್‌ ಅರೆಸ್ಟ್‌; ಪ್ರಕರಣವನ್ನು ಸಿಬಿಐಗೆ ವಹಿಸಲು ಒತ್ತಾಯ

Actor Darshan gets a series of questions from the police
ಸಿನಿಮಾ3 days ago

Actor Darshan : ಪವಿತ್ರಗೌಡ ಬಗ್ಗೆ ಪೋಸ್ಟ್‌ ಮಾಡಿದ್ರೆ ನಿಮಗ್ಯಾಕೆ ಕೋಪ? ದರ್ಶನ್‌ಗೆ ಪೊಲೀಸರ ಪ್ರಶ್ನೆಗಳ ಸುರಿಮಳೆ

Actor Darshan
ಸಿನಿಮಾ3 days ago

Actor Darshan : ದರ್ಶನ್‌ ಜೈಲಿಗೆ ಹೋಗುತ್ತಿರುವುದು ಇದೇ ಮೊದಲಲ್ಲ; ನಟನ ಮೇಲಿವೆ ಹತ್ತಾರು ಕೇಸ್‌ಗಳು!

Saptami Gowda
ಸಿನಿಮಾ4 days ago

Saptami Gowda : ಯುವ ಪತ್ನಿ ಶ್ರೀದೇವಿ ವಿರುದ್ಧ ಮಾನಹಾನಿ ಕೇಸ್; ಕಾನೂನು ಹೋರಾಟಕ್ಕೆ ಮುಂದಾದ ನಟಿ ಸಪ್ತಮಿ ಗೌಡ!

Karnataka weather Forecast
ಮಳೆ4 days ago

Karnataka Weather : ಭಾರಿ ಮಳೆಗೆ ಮನೆ ಗೋಡೆ ಕುಸಿದು ಎಮ್ಮೆಗಳು ಸಾವು; ಆಕಳಿನ ಜೀವ ತೆಗೆದ ವಿದ್ಯುತ್‌ ತಂತಿ

ಟ್ರೆಂಡಿಂಗ್‌