Dengue Vaccine: ಭಾರತದ ಮೊದಲ ಡೆಂಗ್ಯೂ ಲಸಿಕೆ; 3ನೇ ಹಂತದ ಪ್ರಯೋಗ ಪ್ರಾರಂಭ - Vistara News

ಆರೋಗ್ಯ

Dengue Vaccine: ಭಾರತದ ಮೊದಲ ಡೆಂಗ್ಯೂ ಲಸಿಕೆ; 3ನೇ ಹಂತದ ಪ್ರಯೋಗ ಪ್ರಾರಂಭ

ಡೆಂಗ್ಯೂಗೆ ಭಾರತೀಯ ಲಸಿಕೆ (Dengue Vaccine) 3ನೇ ಹಂತದ ಪ್ರಯೋಗದಲ್ಲಿದೆ. ಈ ಹಿಂದೆ ನಡೆಸಿರುವ ಎರಡು ಪ್ರಯೋಗಗಳು ಯಶಸ್ವಿಯಾಗಿದ್ದು, ಐಸಿಎಂಆರ್ ಸಹಯೋಗದೊಂದಿಗೆ 3 ಹಂತದ ಪ್ರಯೋಗವು 18 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಒಟ್ಟು 19 ಪ್ರದೇಶಗಳಲ್ಲಿ 10,335ಕ್ಕೂ ಹೆಚ್ಚು ಆರೋಗ್ಯವಂತ ವಯಸ್ಕರ ಮೇಲೆ ನಡೆಯಲಿದೆ. ಈ ಲಸಿಕೆ ಯಶಸ್ವಿಯಾದರೆ ಡೆಂಗ್ಯೂ ರೋಗದಿಂದ ಉಂಟಾಗುತ್ತಿರುವ ಸಾವು ತಪ್ಪಿಸಬಹುದು.

VISTARANEWS.COM


on

Dengue Vaccine
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಪಂಡಿತ್ ಭಾಗವತ್ ದಯಾಳ್ ಶರ್ಮಾ ಪೋಸ್ಟ್ ಗ್ರಾಜುಯೇಟ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (PGIMS) ರೋಹ್ಟಕ್‌ನಲ್ಲಿ ಭಾರತದ ಮೊದಲ ಸ್ಥಳೀಯ ಡೆಂಗ್ಯೂ ಲಸಿಕೆ (Dengue Vaccine) 3ನೇ ಹಂತದ ಪ್ರಯೋಗವನ್ನು ಪ್ರಾರಂಭಿಸಿದೆ ಎಂದು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ICMR) ಮತ್ತು ಪ್ಯಾನೇಸಿಯಾ ಬಯೋಟೆಕ್ (Panacea Biotec) ಘೋಷಿಸಿದೆ.

ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಅವರು ಈ ಉಪಕ್ರಮವನ್ನು ಶ್ಲಾಘಿಸಿದ್ದು, ಡೆಂಗ್ಯೂ ಚಿಕೆತ್ಸೆಗಾಗಿ ಭಾರತದ ಮೊದಲ ಸ್ಥಳೀಯ ಲಸಿಕೆಯ 3 ಕ್ಲಿನಿಕಲ್ ಪ್ರಯೋಗದ ಪ್ರಾರಂಭವು ಡೆಂಗ್ಯೂ ವಿರುದ್ಧದ ನಮ್ಮ ಹೋರಾಟದಲ್ಲಿ ನಿರ್ಣಾಯಕ ಪ್ರಗತಿಯನ್ನು ಸೂಚಿಸುತ್ತದೆ ಎಂದು ಹೇಳಿದರು.

ಡೆಂಗ್ಯೂ ಲಸಿಕೆ ಅಭಿವೃದ್ಧಿಗೆ ಐಸಿಎಂಆರ್ ಮತ್ತು ಪ್ಯಾನೇಸಿಯಾ ಬಯೋಟೆಕ್ ನಡುವಿನ ಸಹಯೋಗದ ಪ್ರಾಮುಖ್ಯತೆಯನ್ನು ತಿಳಿಸಿದ ಕೇಂದ್ರ ಆರೋಗ್ಯ ಸಚಿವರು, ಈ ಪಾಲುದಾರಿಕೆಯ ಮೂಲಕ ನಾವು ನಮ್ಮ ಜನರ ಆರೋಗ್ಯ ಮತ್ತು ಯೋಗಕ್ಷೇಮವನ್ನು ಖಾತ್ರಿಪಡಿಸುವತ್ತ ಹೆಜ್ಜೆ ಇಡುತ್ತಿದ್ದೇವೆ. ಆರೋಗ್ಯ ಕ್ಷೇತ್ರದಲ್ಲಿ ಆತ್ಮನಿರ್ಭರ ಭಾರತ್‌ನ ನಮ್ಮ ದೃಷ್ಟಿಯನ್ನು ಬಲಪಡಿಸುತ್ತದೆ ಎಂದು ತಿಳಿಸಿದರು.


ಪ್ರಸ್ತುತ ದೇಶವು ಡೆಂಗ್ಯೂಗೆ ಯಾವುದೇ ಆಂಟಿವೈರಲ್ ಚಿಕಿತ್ಸೆ ಅಥವಾ ಪರವಾನಗಿ ಪಡೆದ ಲಸಿಕೆಯನ್ನು ಹೊಂದಿಲ್ಲ. ಪರಿಣಾಮಕಾರಿ ಲಸಿಕೆಯನ್ನು ಅಭಿವೃದ್ಧಿಪಡಿಸುವುದು ಸಂಕೀರ್ಣ ಮತ್ತು ತುರ್ತು ಅಗತ್ಯವಾಗಿದೆ. ಡೆಂಗ್ಯೂ ವೈರಸ್‌ನ ಎಲ್ಲಾ ನಾಲ್ಕು ಸಿರೊಟೈಪ್‌ಗಳಲ್ಲಿ ಹೆಚ್ಚಿನ ಪರಿಣಾಮಕಾರಿತ್ವವನ್ನು ಸಾಧಿಸುವಲ್ಲಿ ಸವಾಲು ಇದೆ. ಇದು ದೇಶದ ಅನೇಕ ಪ್ರದೇಶಗಳಲ್ಲಿ ಹರಡುತ್ತಿದೆ ಎಂದರು.

ಟೆಟ್ರಾವಲೆಂಟ್ ಡೆಂಗ್ಯೂ ಲಸಿಕೆ ಸ್ಟ್ರೈನ್ (TV003/TV005) ಆರಂಭದಲ್ಲಿ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್ (NIH), ಯುಎಸ್ ಎನಿಂದ ಅಭಿವೃದ್ಧಿಪಡಿಸಲಾಯಿತು. ಜಾಗತಿಕವಾಗಿ ಪೂರ್ವಭಾವಿ ಮತ್ತು ಕ್ಲಿನಿಕಲ್ ಪ್ರಯೋಗಗಳಲ್ಲಿ ಭರವಸೆಯ ಫಲಿತಾಂಶಗಳನ್ನು ತೋರಿಸಿದೆ. ಇದರ ಪ್ರಯೋಗ ಆರಂಭಿಸಿದ ಮೂರು ಭಾರತೀಯ ಕಂಪೆನಿಗಳಲ್ಲಿ ಒಂದಾದ Panacea Biotec ಸಂಪೂರ್ಣ ಲಸಿಕೆಯನ್ನು ಅಭಿವೃದ್ಧಿಪಡಿಸುವಲ್ಲಿ ಹೆಚ್ಚು ಪ್ರಗತಿ ಸಾಧಿಸಿದೆ.

ಈ ಕೆಲಸಕ್ಕಾಗಿ ಕಂಪನಿಯು ಪ್ರಕ್ರಿಯೆಯ ಪೇಟೆಂಟ್ ಅನ್ನು ಹೊಂದಿದೆ. 2018-19ರಲ್ಲಿ ಭಾರತೀಯ ಲಸಿಕೆ ಕ್ಲಿನಿಕಲ್ ಪ್ರಯೋಗ ಹಂತ 1 ಮತ್ತು 2 ಪೂರ್ಣಗೊಂಡಿವೆ. ಇದು ಭರವಸೆಯ ಫಲಿತಾಂಶಗಳನ್ನು ನೀಡಿದೆ.
ಐಸಿಎಂಆರ್ ಸಹಯೋಗದೊಂದಿಗೆ ನಡೆಸಲಾದ ಹಂತ 3 ಕ್ಲಿನಿಕಲ್ ಪ್ರಯೋಗವು 18 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 10,335 ಕ್ಕೂ ಹೆಚ್ಚು ಆರೋಗ್ಯವಂತ ವಯಸ್ಕ ಭಾಗವಹಿಸುವವರನ್ನು ಒಳಗೊಂಡ 19 ಪ್ರದೇಶಗಳಲ್ಲಿ ನಡೆಯಲಿದೆ.

ಇದನ್ನೂ ಓದಿ: Bridge Collapse: 9 ವರ್ಷಗಳಿಂದ ನಿರ್ಮಾಣವಾಗುತ್ತಿರುವ ಸೇತುವೆ 3ನೇ ಬಾರಿ ಕುಸಿದು ಬಿತ್ತು; ವಿಡಿಯೊ ನೋಡಿ

ಭಾರತವು ಡೆಂಗ್ಯೂ ರೋಗದ ಅತಿ ಹೆಚ್ಚು ಸಂಭವವಿರುವ ಟಾಪ್ 30 ದೇಶಗಳಲ್ಲಿ ಒಂದಾಗಿದೆ. ಡಬ್ಲ್ಯೂ ಹೆಚ್‌ಒ ವರದಿಯ ಪ್ರಕಾರ ಭಾರತದಲ್ಲಿ ಸುಮಾರು ಶೇ. 75-80ರಷ್ಟು ಸೋಂಕುಗಳು ಲಕ್ಷಣ ರಹಿತವಾಗಿವೆ. ಆದರೂ ಈ ವ್ಯಕ್ತಿಗಳು ಈಡಿಸ್ ಸೊಳ್ಳೆಗಳ ಕಡಿತದ ಮೂಲಕ ಸೋಂಕನ್ನು ಹರಡಬಹುದು. ರೋಗ ಲಕ್ಷಣಗಳು ಪ್ರಾಯೋಗಿಕವಾಗಿ ಸ್ಪಷ್ಟವಾಗಿ ಕಂಡುಬರುವ ಶೇ. 20-25 ಪ್ರಕರಣಗಳಲ್ಲಿ ಮಕ್ಕಳು ಹೆಚ್ಚಾಗಿ ಆಸ್ಪತ್ರೆಗೆ ದಾಖಲಾಗುತ್ತಿದ್ದು, ಮರಣದ ಅಪಾಯವೂ ಹೆಚ್ಚಾಗಿರುತ್ತದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಆರೋಗ್ಯ

5 Seeds for Weight Loss: ಈ 5 ಕಿರು ಬೀಜಗಳು ತೂಕ ಇಳಿಕೆಗೆ ಸಹಕಾರಿ

5 Seeds for Weight Loss: ತೂಕ ಇಳಿಸುವುದಕ್ಕೆ ಉಪವಾಸ ಮಾಡುವುದಲ್ಲ, ತಿನ್ನಬೇಕು! ಆದರೆ ಸರಿಯಾಗಿ ತಿನ್ನಬೇಕು. ದೇಹ ಬಳಲದಂತೆ ಕಾಪಾಡಿಕೊಂಡು, ಅಗತ್ಯ ಸತ್ವಗಳನ್ನು ಮರುಪೂರಣ ಮಾಡುತ್ತಲೇ ಇರುವುದು ತೂಕ ಇಳಿಸುವವರಿಗೆ ದೊಡ್ಡ ಸವಾಲು. ಇದಕ್ಕೆ ನೆರವಾಗುವಂಥ ಕೆಲವು ಕಿರು ಬೀಜಗಳ ಮಹತ್ವವನ್ನು ಇಲ್ಲಿ ವಿವರಿಸಲಾಗಿದೆ.

VISTARANEWS.COM


on

Weight Loss Tips kannada
Koo

ತೂಕ ಇಳಿಸುವ ವಿಷಯ (5 Seeds for Weight Loss) ಬಂದರೆ, ತಿನ್ನುವುದಕ್ಕಿಂತ ತಿನ್ನದೇ ಇರುವುದಕ್ಕೇ ಅಧಿಕ ಮಹತ್ವ ನೀಡುತ್ತೇವೆ ನಾವು. ವಿಷಯವೇನೆಂದರೆ ತೂಕ ಇಳಿಸುವುದಕ್ಕೆ ತಿನ್ನಬೇಕು, ಆದರೆ ಸರಿಯಾಗಿ ತಿನ್ನಬೇಕು. ಬಹಳಷ್ಟು ರೀತಿಯ ಖನಿಜಗಳು ಮತ್ತು ಜೀವಸತ್ವಗಳು ಹಾಗೂ ನಾರು ಇರುವಂಥ ಆಹಾರಗಳ ಜೊತೆಗೆ ಲೀನ್‌ ಪ್ರೊಟೀನ್‌ ತಿನ್ನುವುದು ಮಹತ್ವದ್ದೆನಿಸುತ್ತದೆ. ಇವೆಲ್ಲವನ್ನೂ ಹೊಂದಿರುವಂಥ ಕೆಲವು ಸಂಪೂರ್ಣ ಆಹಾರಗಳ ಪೈಕಿ ಕಿರುಬೀಜಗಳು ಮುಂಚೂಣಿಯ ಸ್ಥಾನ ಪಡೆಯುತ್ತವೆ. ಚಿತ್ರ ಗಾತ್ರದ ಈ ಬೀಜಗಳಲ್ಲಿ ಅಪಾರ ಪ್ರಮಾಣದ ಪೋಷಕಾಂಶಗಳು ಹುದುಗಿವೆ. ಅದರಲ್ಲೂ ತೂಕ ಇಳಿಸುವವರಿಗೆ ಇಂಥ ಬೀಜಗಳು ಅಮೂಲ್ಯ ನೆರವನ್ನು ನೀಡುತ್ತವೆ. ಯಾವ ಬೀಜಗಳವು? ಇವುಗಳಿಂದ ತೂಕ ಇಳಿಸುವುದಕ್ಕೆ ಏನು ಮತ್ತು ಹೇಗೆ ಪ್ರಯೋಜನ?

Sunflower seed Different Types of Seeds with Health Benefits

ಸೂರ್ಯಕಾಂತಿ ಬೀಜ

ಪ್ರೊಟೀನ್‌, ನಾರು ಮತ್ತು ಆರೋಗ್ಯಕರ ಕೊಬ್ಬುಗಳನ್ನು ಹೊಂದಿರುವ ಈ ಬೀಜಗಳಲ್ಲಿ ಖನಿಜಗಳು ಮತ್ತು ಜೀವಸತ್ವಗಳು ಭರಪೂರ ಇವೆ. ಇದರಲ್ಲಿರುವ ನಾರು ಹೆಚ್ಚು ಸಮಯದವರೆಗೆ ಹೊಟ್ಟೆ ತುಂಬಿದ ಅನುಭವ ನೀಡಿ, ಆಗಾಗ ತಿನ್ನಬೇಕು ಎನ್ನುವ ಬಯಕೆಯನ್ನು ತಡೆಯುತ್ತದೆ. ಇದರಲ್ಲಿರುವ ವಿಟಮಿನ್‌ ಇ ಅಂಶವು ದೇಹದ ಚಯಾಪಚಯವನ್ನು ಹೆಚ್ಚಿಸುವಂಥ ಉತ್ಕರ್ಷಣ ನಿರೋಧಕದಂತೆ ಕೆಲಸ ಮಾಡುತ್ತದೆ. ಜೊತೆಗೆ ಈ ಬೀಜಗಳು ತಿನ್ನುವುದಕ್ಕೆ ರುಚಿಯಾಗಿದ್ದು, ಯಾವುದೇ ಬಡಿವಾರವಿಲ್ಲದೇ ಸುಮ್ಮನೆಯೂ ತಿನ್ನಬಹುದು.

Flax Seeds in a Wooden Spoon

ಅಗಸೆ ಬೀಜ

ಸಸ್ಯಾದಿಗಳಲ್ಲಿ ದೊರೆಯುವ ಒಮೇಗಾ ೩ ಕೊಬ್ಬಿನಾಮ್ಲದ ಮೂಲಗಳ ಪೈಕಿ ಅಗಸೆ ಬೀಜ ಅತ್ಯಂತ ಹೆಚ್ಚಿನದ್ದು. ಆಲ್ಫಲಿನೊಲೆನಿಕ್‌ ಆಮ್ಲವು ಈ ಸಣ್ಣ ಬೀಜಗಳಲ್ಲಿ ಸಾಂದ್ರವಾಗಿದೆ. ಇದಲ್ಲದೆ, ನಾರು, ಪ್ರೊಟೀನ್‌, ಹಲವು ರೀತಿಯ ವಿಟಮಿನ್‌ಗಳು, ಖನಿಜಗಳು ಇದರಲ್ಲಿ ಹೇರಳವಾಗಿವೆ. ಹಾಗಾಗಿ ಈ ಬೀಜದ ಚಟ್ಣಿಪುಡಿಯಿಂದ ತೊಡಗಿ, ಎಣ್ಣೆಯವರೆಗೆ ಹಲವು ರೀತಿಯಲ್ಲಿ ಇದನ್ನು ನಿತ್ಯವೂ ಆಹಾರದಲ್ಲಿ ಉಪಯೋಗಿಸುವುದರಿಂದ ತೂಕ ಇಳಿಕೆಗೆ ಅನುಕೂಲವಾಗುತ್ತದೆ. ಇವುಗಳನ್ನು ಪುಡಿ ಮಾಡಿ ತಿನ್ನಿ, ಒಗ್ಗರಣೆಗೆ ಬಳಸಿ, ಟ್ರೇಲ್‌ ಮಿಕ್ಸ್‌ಗೆ ಉಪಯೋಗಿಸಿ- ಹೇಗಾದರೂ ಸರಿ, ತಿನ್ನಿ.

Chia Seeds Black Foods

ಚಿಯಾ ಬೀಜ

ಈ ಬೀಜಗಳಂತೂ ಅಗಸೆ ಬೀಜಕ್ಕಿಂತಲೂ ಸಣ್ಣವು. ಆದರೆ ಒಮೇಗಾ ೩ ಕೊಬ್ಬಿನಾಮ್ಲದ ವಿಷಯಕ್ಕೆ ಬಂದರೆ ಮಾತ್ರ ಸಣ್ಣವಲ್ಲ. ಇದರಲ್ಲೂ ಆಲ್ಫ ಲಿನೋಲೆನಿಕ್‌ ಆಮ್ಲ ಧಾರಾಳವಾಗಿದೆ. ಇದನ್ನು ಆಹಾರದಲ್ಲಿ ಬಳಸುವುದೂ ಸಹ ಕಷ್ಟವಲ್ಲ. ನಿತ್ಯವೂ ನೀರಿಗೆ ಹಾಕಿ ಕುಡಿದರೂ ಸಾಕಾಗುತ್ತದೆ. ಇದರಿಂದ ಜೀರ್ಣಾಂಗಗಳ ಆರೋಗ್ಯ ವೃದ್ಧಿಸುತ್ತದೆ, ತೂಕ ನಿರ್ವಹಣೆಗೆ ಸಹಾಯವಾಗುತ್ತದೆ, ಹೃದಯದ ಆರೋಗ್ಯ ರಕ್ಷಣೆಗೂ ನೆರವಾಗುತ್ತದೆ. ಇದರಲ್ಲಿರುವ ಪ್ರೊಟೀನ್‌ ಅಂಶವು ತೂಕ ಇಳಿಕೆಗೆ ಪೂರಕವಾಗಿದ್ದು, ಕ್ಯಾಲ್ಶಿಯಂನಂಥ ಖನಿಜಗಳು ಮೂಳೆಗಳ ರಕ್ಷಣೆಗೆ ಬೇಕಾದವು.

Hemp seed Different Types of Seeds with Health Benefits

ಹೆಂಪ್‌ ಬೀಜಗಳು

ಭಾರತದಲ್ಲಿ ಅಷ್ಟಾಗಿ ಪ್ರಚಲಿತವಿಲ್ಲದ ಬೀಜಗಳಿವು. ಆದರೆ ಸತ್ವಗಳ ವಿಷಯದಲ್ಲಿ ಕಡಿಮೆಯಿಲ್ಲ. ಇದರಲ್ಲಿಯೂ ಒಮೇಗಾ 3 ಕೊಬ್ಬಿನಾಮ್ಲ ಸಾಂದ್ರವಾಗಿದೆ. ಜೊತೆಗೆ ಹಲವು ರೀತಿಯ ಖನಿಜಗಳು ದೇಹಕ್ಕೆ ದೊರೆಯುತ್ತವೆ. ಇದರಲ್ಲಿ ಎಲ್ಲಾ ಒಂಬತ್ತು ರೀತಿಯ ಅಮೈನೊ ಆಮ್ಲಗಳು ಲಭ್ಯವಿದ್ದು, ಸಂಪೂರ್ಣ ಪ್ರೊಟೀನ್‌ಗಳ ಸಾಲಿಗೆ ಸೇರುತ್ತವೆ. ಇದರ ತೈಲವೂ ಲಭ್ಯವಿದ್ದು, ಅಡುಗೆಗೆ ಬಳಸಲು ಸಾಧ್ಯವಿದೆ. ಗೋಡಂಬಿಯಂತೆಯೇ ಹೆಂಪ್‌ ಬೀಜಗಳನ್ನು ಸಹ ನಾನಾ ಖಾದ್ಯಗಳಿಗೆ ಉಪಯೋಗಿಸಬಹುದು.

Pumpkin seeds Pumpkin Seeds Benefits

ಕುಂಬಳಕಾಯಿ ಬೀಜ

ಹಲವು ಸಮಸ್ಯೆಗಳಿಗೆ ಸರಳ ಸಮಾಧಾನದಂತೆ ಈ ಪುಟ್ಟ ಬೀಜಗಳು ಕಂಡುಬರುತ್ತವೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದರಿಂದ ಹಿಡಿದು, ಹೃದಯದ ಆರೋಗ್ಯ ಸುಧಾರಿಸುವವರೆಗೆ ಹಲವು ರೀತಿಯಲ್ಲಿ ಕುಂಬಳಬೀಜ ನಮಗೆ ಉಪಕಾರಿಯಾಗಬಲ್ಲದು. ಹಲವು ರೀತಿಯ ಖನಿಜಗಳು ಮತ್ತು ವಿಟಮಿನ್‌ಗಳಿಂದ ಸಮೃದ್ಧವಾಗಿರುವ ಈ ಬೀಜಗಳು, ಕಳ್ಳ ಹಸಿವೆಯನ್ನು ನಿವಾರಿಸುವುದನ್ನು ಸುಮ್ಮನೆ ಬಾಯಾಡುವುದಕ್ಕೆ ಜೊತೆಯಾಗುತ್ತವೆ. ಇದನ್ನು ಗೋಡಂಬಿಯಂತೆ ಹಲವು ಖಾದ್ಯಗಳಿಗೆ ಬಳಸಬಹುದು. ಚಿಟಿಕೆ ಉಪ್ಪಿನೊಂದಿಗೆ ಹುರಿದರೆ, ಚಹಾ ಜೊತೆಗೆ ಬಾಯಿಗೆಸೆದುಕೊಳ್ಳಬಹುದು. ಕುಂಬಳಬೀಜದಲ್ಲಿ ಟ್ರಿಪ್ಟೊಫ್ಯಾನ್‌ ಎಂಬ ಅಮೈನೊ ಆಮ್ಲವಿದೆ. ಇದು ಸೆರೊಟೋನಿನ್‌ ಮತ್ತು ಮೆಲಟೋನಿನ್‌ನಂಥ ಹ್ಯಾಪಿ ಹಾರ್ಮೋನುಗಳ ಉತ್ಪಾದನೆಗೆ ಪ್ರಚೋದನೆ ನೀಡುತ್ತದೆ. ಈ ಹಾರ್ಮೋನುಗಳು ನಮ್ಮ ಮೂಡ್‌ ಮತ್ತು ನಿದ್ದೆಯನ್ನು ನಿಯಂತ್ರಿಸುತ್ತವೆ. ಹಾಗಾಗಿ ಕಣ್ತುಂಬಾ ನಿದ್ದೆ ತರಿಸಿ, ತೂಕ ಇಳಿಸುವುದಕ್ಕೆ ಸೂಕ್ತವಾಗುವಂತೆ ಮಾನಸಿಕ ಒತ್ತಡವನ್ನು ನಿಯಂತ್ರಿಸಲು ನೆರವಾಗುತ್ತವೆ.

Continue Reading

ಆರೋಗ್ಯ

How Much Protein in an Egg: ನಮಗೆ ಏಕೆ ಪ್ರೊಟಿನ್‌ ಬೇಕು? ಒಂದು ಮೊಟ್ಟೆಯಿಂದ ಎಷ್ಟು ಪ್ರೊಟೀನ್‌ ಪಡೆಯಬಹುದು?

How Much Protein in an Egg: ರುಚಿ, ಲಭ್ಯತೆ, ಪೋಷಕಾಂಶಗಳು ಮತ್ತು ಅನುಕೂಲದ ಜೊತೆಗೆ ಮೊಟ್ಟೆ ತಿನ್ನುವುದಕ್ಕೆ ಇರುವಂಥ ಇನ್ನೊಂದು ಮುಖ್ಯ ಕಾರಣವೆಂದರೆ, ಇದು ತಯಾರಿಕೆಗೆ ಅತ್ಯಂತ ಸುಲಭ. ಹಾಗಾದರೆ ಒಂದು ಮೊಟ್ಟೆಯಲ್ಲಿ ಎಷ್ಟು ಪ್ರೊಟೀನ್‌ ದೊರೆಯುತ್ತದೆ? ಈ ಕುರಿತ ಮಾಹಿತಿ ಇಲ್ಲಿದೆ.

VISTARANEWS.COM


on

Super Food For Kids
Koo

ಕೆಲವು ಆಹಾರಗಳು ವಿಶ್ವದೆಲ್ಲೆಡೆ ಮಾನ್ಯತೆ ಪಡೆದಿರುತ್ತವೆ. ಇದಕ್ಕೆ ಕಾರಣಗಳು ಹಲವಾರು ಇರಬಹುದು. ಅವುಗಳ ರುಚಿ, ಲಭ್ಯತೆ, ಪೋಷಕಾಂಶಗಳು, ಹಲವಾರು ವಸ್ತುಗಳೊಂದಿಗೆ ಅದು ಹೊಂದಿಕೊಳ್ಳುವ ರೀತಿ- ಇಂಥವೆಲ್ಲ ಅದರ ಬಳಕೆಯನ್ನು ಹೆಚ್ಚಿಸುತ್ತವೆ. ಉದಾಹರಣೆಗೆ, ಮೊಟ್ಟೆ ಪ್ರಿಯರನ್ನೇ ಗಮನಿಸಿ. ಇವರು ವಿಶ್ವದೆಲ್ಲೆಡೆ ಇದ್ದಾರೆ. ಬೆಳಗಿನ ತಿಂಡಿಯಿಂದ ಹಿಡಿದು, ಸುಮ್ಮನೆ ಬಾಯಾಡಲು, ಬ್ರಂಚ್‌ಗೆ, ಮಧ್ಯಾಹ್ನದೂಟ, ರಾತ್ರಿಯ ಲಘು ಊಟಕ್ಕೆ, ಭರ್ಜರಿಯಾದ ಡೆಸೆರ್ಟ್‌ಗೆ- ಹೀಗೆ ಎಂಥಾ ಅಡುಗೆಗೇ ಆದರೂ ಹೊಂದಿಕೊಳ್ಳುವಂಥದ್ದು ಇದು. ರುಚಿ, ಲಭ್ಯತೆ ಮತ್ತು ಅನುಕೂಲದ ಜೊತೆಗೆ ಮೊಟ್ಟೆ ತಿನ್ನುವುದಕ್ಕೆ ಇರುವಂಥ ಮುಖ್ಯ ಕಾರಣಗಳಲ್ಲಿ ಇನ್ನೊಂದೆಂದರೆ, ಅದರಲ್ಲಿರುವ ಪೋಷಕಾಂಶಗಳು. ಸಣ್ಣ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಯಾರೇ ತಿಂದರೂ ಜೀರ್ಣವಾಗುವಂಥ ಈ ತಿನಿಸು, ತಯಾರಿಕೆಗೂ ಸುಲಭವೇ. ಹಾಗಾದರೆ ಒಂದು ಮೊಟ್ಟೆಯಲ್ಲಿ ಎಷ್ಟು ಪ್ರೊಟೀನ್‌ ದೊರೆಯುತ್ತದೆ? ಇದನ್ನು ಹಸಿಯಾಗಿ ಉಪಯೋಗಿಸಿದರೆ (How Much Protein in an Egg) ಹೆಚ್ಚು ಲಾಭವೋ ಅಥವಾ ಬೇಯಿಸಿದ್ದು ಅನುಕೂಲವೋ?

the egg Perishable Foods

ಪ್ರೊಟೀನ್‌ ಏಕೆ ಬೇಕು?

ಕೇವಲ ಮೊಟ್ಟೆಯಲ್ಲಿರುವ ಪ್ರೊಟೀನ್‌ ಎಂದಲ್ಲ, ಸಾಮಾನ್ಯವಾಗಿ ಕೇಳುವುದಾದರೆ ಪ್ರೊಟೀನ್‌ ನಮಗೇಕೆ ಬೇಕು? ದೇಹ ನಡೆಸುವಂಥ ಪ್ರತಿಯೊಂದು ಸಂಕೀರ್ಣ ಜೈವಿಕ ಚಟುವಟಿಕೆಗಳಿಗೆ ನಮಗೆ ಪ್ರೊಟೀನ್‌ ಅಗತ್ಯ. ಸ್ನಾಯುಗಳನ್ನು ಬೆಳೆಸುವುದರಿಂದ ಹಿಡಿದು, ಕೋಶಗಳ ಬೆಳವಣಿಗೆ, ದುರಸ್ತಿ, ಪ್ರತಿರೋಧಕ ಶಕ್ತಿಯ ವೃದ್ಧಿಗೂ ನಮಗೆ ಪ್ರೊಟೀನ್‌ ಅಗತ್ಯವಿದೆ. ಹಲವು ರೀತಿಯ ರಾಸಾಯನಿಕ ಚಟುವಟಿಕೆಗಳು ನಡೆಯುವುದಕ್ಕೆ ನಮಗಿದು ಅಗತ್ಯ. ಹೃದಯವನ್ನು ಕ್ಷೇಮವಾಗಿರಿಸಿ, ಮೂಳೆಗಳನ್ನು ಬಲಗೊಳಿಸಿ, ತೂಕ ಇಳಿಸುವುದಕ್ಕೂ ಪ್ರೊಟೀನ್‌ ಇಲ್ಲದೆ ನಡೆಯುವುದಿಲ್ಲ. ಹಾಗಾಗಿ ಮೊಟ್ಟೆ ಪ್ರಿಯರು ನೀವಾಗಿದ್ದರೆ, ಒಂದು ಮೊಟ್ಟೆಯಲ್ಲಿ ಎಷ್ಟು ಪ್ರೊಟೀನ್‌ ದೊರೆಯುತ್ತದೆ, ಇದನ್ನು ಯಾವ ಸ್ವರೂಪದಲ್ಲಿ ಸೇವಿಸಿದರೆ ಹೆಚ್ಚು ಅನುಕೂಲ ಎಂಬುದನ್ನು ತಿಳಿಯುವುದು ಮುಖ್ಯವಾಗುತ್ತದೆ.

ಒಂದೇ ಒಂದು ಮೊಟ್ಟೆ…

ಇಲ್ಲ, ಒಂದರಿಂದ ಹೊಟ್ಟೆ ತುಂಬುವುದಿಲ್ಲ! ಆದರೆ ಉತ್ತಮ ಪ್ರಮಾಣದ ಪೋಷಕ ಸತ್ವಗಳು ದೇಹಕ್ಕೆ ದೊರೆಯುವುದರಲ್ಲಿ ಅನುಮಾನವಿಲ್ಲ. ಅದರಲ್ಲೂ, ಮೊಟ್ಟೆಯಲ್ಲಿರುವ ಪ್ರೊಟೀನ್‌ ಅಂಶವು ಸುಲಭವಾಗಿ ಜೀರ್ಣವಾಗಿ ದೇಹಕ್ಕೆ ದಕ್ಕುವಂಥದ್ದು. ಹಾಗಾಗಿ ಸಾಧಾರಣವಾಗಿ ಎಲ್ಲ ವಯೋಮಾನದವರಿಗೂ ಇದು ಹೊಂದುವಂಥದ್ದು. ಸಣ್ಣದು, ಮಧ್ಯಮ ಗಾತ್ರದ್ದು, ದೊಡ್ಡದು, ಅತಿ ದೊಡ್ಡದು- ಹೀಗೆ ಹಲವು ರೀತಿಯ ಮೊಟ್ಟೆಗಳು ಲಭ್ಯವಿರುವಾಗ ಯಾವುದರಲ್ಲಿ ಎಷ್ಟು ಪ್ರೊಟೀನ್‌ ದೊರೆಯುತ್ತದೆ ಎಂಬುದನ್ನು ತಿಳಿದುಕೊಳ್ಳುವುದು ಹೇಗೆ?

ಇಲ್ಲಿದೆ ಲೆಕ್ಕಾಚಾರ

ಸಣ್ಣ ಗಾತ್ರದ, ಅಂದರೆ 38 ಗ್ರಾಂ ತೂಕದ ಮೊಟ್ಟೆಯಲ್ಲಿ 4.9 ಗ್ರಾಂಗಳಷ್ಟು ಪ್ರೊಟೀನ್‌ ದೊರೆಯುತ್ತದೆ. 44 ಗ್ರಾಂ ತೂಕ ಮೊಟ್ಟೆಯಲ್ಲಿ ಸುಮಾರು 5.5 ಗ್ರಾಂ ಪ್ರೊಟೀನ್‌, 50 ಗ್ರಾಂ ತೂಕದ ಮೊಟ್ಟೆಯಲ್ಲಿ 6.3 ಗ್ರಾಂ ಸುಮಾರಿಗೆ ಪ್ರೊಟೀನ್‌, 56 ಗ್ರಾಂ ತೂಕದ ದೊಡ್ಡ ಮೊಟ್ಟೆಯಲ್ಲಿ ಅಂದಾಜು 7 ಗ್ರಾಂ ಪ್ರೊಟೀನ್‌, 63 ಗ್ರಾಂ ತೂಕದ ಅತಿ ದೊಡ್ಡ ಮೊಟ್ಟೆಗಳಲ್ಲಿ ಅಜಮಾಸು 7.9 ಗ್ರಾಂಗಳಷ್ಟು ಪ್ರೊಟೀನ್‌ ದೊರೆಯುತ್ತದೆ. ಇದನ್ನು ನೋಡಿದಾಗ, ತಿನ್ನುವ ಮೊಟ್ಟೆಯ ತೂಕದ ಅಂದಾಜಿಗೆ ಎಷ್ಟು ಪ್ರೊಟೀನ್‌ ನಮಗೆ ದೊರೆಯುತ್ತದೆ ಎಂಬುದನ್ನು ಲೆಕ್ಕ ಹಾಕುವುದು ಕಷ್ಟವಾಗುವುದಿಲ್ಲ.

ಬಿಳಿ-ಹಳದಿ

ಮೊಟ್ಟೆಯೊಳಗಿನ ಎರಡು ಪ್ರಮುಖ ಭಾಗಗಳಿವು. ಮೊಟ್ಟೆಯಲ್ಲಿರುವ ಸೂಕ್ಷ್ಮ ಪೋಷಕಾಂಶಗಳು ಮತ್ತು ಕೊಬ್ಬಿನಂಶ ದೊರೆಯುವುದು ಹಳದಿ ಭಾಗದಲ್ಲಾದರೆ, ಬಿಳಿ ಭಾಗವು ಪ್ರೊಟೀನ್‌ ಗುಢಾಣದಂತಿದೆ. ಕೆಲವು ಅಧ್ಯಯನಗಳ ಪ್ರಕಾರ, ಮೊಟ್ಟೆಯ ಬಿಳಿ ಭಾಗದಲ್ಲಿ ಹತ್ತಿಪ್ಪತ್ತು ರೀತಿಯವಲ್ಲ, ನೂರಾರು ಬಗೆಯ ಪ್ರೊಟೀನ್‌ಗಳು ಅಡಕವಾಗಿವೆ. ಅದರಲ್ಲೂ ದೇಹಕ್ಕೆ ಬೇಕಾದ ಎಲ್ಲಾ 9 ಅಮೈನೊ ಆಮ್ಲಗಳು ಇದರಲ್ಲಿರುವುದರಿಂದ, ಇದರ ಪೌಷ್ಟಿಕಾಂಶದ ಮಹತ್ವ ಹೆಚ್ಚಿನದ್ದು.

ಇದನ್ನು ಓದಿ: Health Tips Kannada: ಈ 5 ಅಭ್ಯಾಸಗಳು ನಿಮ್ಮ ಹಾರ್ಮೋನಿನ ಏರುಪೇರಿಗೆ ಕಾರಣವಾಗಿರಬಹುದು!

ಬೇಯಿಸಿದ್ದೊ ಅಲ್ಲವೋ

ಯಾವುದರಲ್ಲಿ ಹೆಚ್ಚು ಪ್ರೊಟೀನ್‌ ಇರುತ್ತದೆ- ಹಸಿ ಮೊಟ್ಟೆಯಲ್ಲೊ, ಬೇಯಿಸಿದ್ದರಲ್ಲೋ? ಇವೆರಡರಲ್ಲಿ ಹೆಚ್ಚಿನ ವ್ಯತ್ಯಾಸವಿಲ್ಲ. ಹಸಿಯಾಗಿದ್ದಾಗ ಇರುವಷ್ಟೇ ಪ್ರೊಟೀನ್‌ ಬೇಯಿಸಿದ ಮೊಟ್ಟೆಯಿಂದಲೂ ದೊರೆಯುತ್ತದೆ; ಅದೇನು ಕಡಿಮೆಯಾಗುವುದಿಲ್ಲ. ಹಾಗಾಗಿ ಮೊಟ್ಟೆಯನ್ನು ಬೇಯಿಸಿ ತಿನ್ನುವುದು ಸೂಕ್ತ.

Continue Reading

ಆರೋಗ್ಯ

Benefits Of Apples: ದಿನಕ್ಕೊಂದು ಸೇಬು ತಿನ್ನಲು ಇಲ್ಲಿವೆ 10 ಕಾರಣ!

ನೋಡಲು ಆಕರ್ಷಕ, ತಿನ್ನಲು ರುಚಿಯಾಗಿರುವ ಈ ಹಣ್ಣು ಮಕ್ಕಳಿಂದ ಹಿಡಿದು ವೃದ್ಧರವರೆಗೂ ಎಲ್ಲರೂ ಮೆಚ್ಚಿಕೊಂಡು ತಿನ್ನುತ್ತಾರೆ. ಸೇಬಿನಲ್ಲಿರುವ ಹಲವಾರು ಪೋಷಕಾಂಶಗಳು ದೇಹಕ್ಕೆ ತುಂಬಾ ಒಳ್ಳೆಯದು. ಇದರಿಂದ ಆರೋಗ್ಯವನ್ನು ಉತ್ತಮ ರೀತಿಯಲ್ಲಿ ಕಾಪಾಡಿಕೊಳ್ಳಬಹುದು. ಸೇಬು ತಿನ್ನುವುದರಿಂದ (Benefits Of Apples) ಏನೆಲ್ಲಾ ಪ್ರಯೋಜನವಿದೆ ಗೊತ್ತೇ?

VISTARANEWS.COM


on

By

Benefits Of Apples
Koo

ದಿನಕ್ಕೊಂದು ಸೇಬು (apple) ತಿನ್ನಿ, ವೈದ್ಯರನ್ನು ದೂರವಿಡಿ ಎನ್ನುವ ಮಾತಿದೆ. ಆದರೆ ಇದು ಎಷ್ಟು ಪರಿಣಾಮಕಾರಿಯೂ ಗೊತ್ತಿಲ್ಲ. ಆದರೆ ಸೇಬು ತಿನ್ನುವುದು (Benefits Of Apples) ಆರೋಗ್ಯಕ್ಕೆ (health) ಸಾಕಷ್ಟು ಪ್ರಯೋಜನವನ್ನು ಕೊಡುತ್ತದೆ. ವಿವಿಧ ರೀತಿಯ ವಿಟಮಿನ್, ಖನಿಜಾಂಶ ಮತ್ತು ಆಂಟಿಆಕ್ಸಿಡೆಂಟ್ ಗಳಾಗಿರುವಂತಹ ವಿಟಮಿನ್ ಸಿ, ವಿಟಮಿನ್ ಕೆ ಮತ್ತು ಪೊಟಾಶಿಯಂ ಅನ್ನು ಹೊಂದಿರುವ ಸೇಬು ಹಣ್ಣು ಸೇವಿಸುವುದರಿಂದ ಹಲವಾರು ಆರೋಗ್ಯಕರ ಪ್ರಯೋಜನಗಳನ್ನು ಪಡೆಯಬಹುದು.

ನೋಡಲು ಆಕರ್ಷಕ, ತಿನ್ನಲು ರುಚಿಯಾಗಿರುವ ಈ ಹಣ್ಣು ಮಕ್ಕಳಿಂದ ಹಿಡಿದು ವೃದ್ಧರವರೆಗೂ ಎಲ್ಲರೂ ಮೆಚ್ಚಿಕೊಂಡು ತಿನ್ನುತ್ತಾರೆ. ಸೇಬಿನಲ್ಲಿರುವ ಹಲವಾರು ಪೋಷಕಾಂಶಗಳು ದೇಹಕ್ಕೆ ತುಂಬಾ ಒಳ್ಳೆಯದು. ಇದರಿಂದ ಆರೋಗ್ಯವನ್ನು ಉತ್ತಮ ರೀತಿಯಲ್ಲಿ ಕಾಪಾಡಿಕೊಳ್ಳಬಹುದು. ಸೇಬು ತಿನ್ನುವುದರಿಂದ ಏನೆಲ್ಲಾ ಪ್ರಯೋಜನವಿದೆ ಗೊತ್ತೇ?


ಸಮೃದ್ಧವಾಗಿರುವ ಪೌಷ್ಟಿಕಾಂಶ

ಸೇಬಿನಲ್ಲಿ ಫೈಬರ್, ವಿಟಮಿನ್ ಸಿ, ಪೊಟ್ಯಾಸಿಯಮ್ ಮತ್ತು ವಿವಿಧ ಉತ್ಕರ್ಷಣ ನಿರೋಧಕಗಳು ಸೇರಿದಂತೆ ಅಗತ್ಯವಾದ ಹಲವಾರು ಪೋಷಕಾಂಶಗಳನ್ನು ಒಳಗೊಂಡಿದೆ. ಈ ಪೋಷಕಾಂಶಗಳು ಆರೋಗ್ಯ ಮತ್ತು ಯೋಗಕ್ಷೇಮಕ್ಕೆ ಉತ್ತಮ ಕೊಡುಗೆಯನ್ನು ನೀಡುತ್ತದೆ.

ಹೃದಯದ ಆರೋಗ್ಯಕ್ಕಾಗಿ

ಸೇಬಿನಲ್ಲಿರುವ ಫೈಬರ್, ವಿಶೇಷವಾಗಿ ಪೆಕ್ಟಿನ್ ಎಂದು ಕರೆಯಲ್ಪಡುವ ಕರಗುವ ಫೈಬರ್, ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಸೇಬುಗಳು ಫ್ಲೇವನಾಯ್ಡ್‌ ಮತ್ತು ಪಾಲಿಫಿನಾಲ್‌ಗಳಂತಹ ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತವೆ. ಇದು ಉರಿಯೂತವನ್ನು ಕಡಿಮೆ ಮಾಡುತ್ತದೆ ಮತ್ತು ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ.

ಜೀರ್ಣಕ್ರಿಯೆಗೆ ಸಹಕಾರಿ

ಸೇಬಿನಲ್ಲಿ ಫೈಬರ್‌ ಹೆಚ್ಚಿನ ಪ್ರಮಾಣದಲ್ಲಿರುತ್ತವೆ. ಇದು ಆರೋಗ್ಯಕರ ಜೀರ್ಣಕ್ರಿಯೆಯನ್ನು ಉತ್ತೇಜಿಸುತ್ತದೆ. ಮಲಬದ್ಧತೆಯನ್ನು ತಡೆಯುತ್ತದೆ ಮತ್ತು ಆರೋಗ್ಯಕರ ಕರುಳಿನ ಸೂಕ್ಷ್ಮಜೀವಿಯನ್ನು ಬೆಂಬಲಿಸುತ್ತದೆ. ಫೈಬರ್ ಕರುಳಿನ ಚಲನೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

ತೂಕ ನಿರ್ವಹಣೆಗೆ ಸೂಕ್ತ

ಸೇಬಿನಲ್ಲಿರುವ ಫೈಬರ್ ಮತ್ತು ನೀರಿನ ಅಂಶವು ಪೂರ್ಣತೆಯ ಭಾವನೆಗೆ ಕೊಡುಗೆ ನೀಡುತ್ತದೆ, ಇದು ಹಸಿವನ್ನು ನಿಯಂತ್ರಿಸಲು ಮತ್ತು ತೂಕ ನಿರ್ವಹಣೆಯನ್ನು ಬೆಂಬಲಿಸಲು ಸಹಾಯ ಮಾಡುತ್ತದೆ.


ಪ್ರತಿರಕ್ಷಣಾ ವ್ಯವಸ್ಥೆ ಹೆಚ್ಚಳ

ಸೇಬಿನಲ್ಲಿರುವ ವಿಟಮಿನ್ ಸಿ ಬಿಳಿ ರಕ್ತ ಕಣಗಳ ಉತ್ಪಾದನೆಯನ್ನು ಬೆಂಬಲಿಸುವ ಮೂಲಕ ಪ್ರತಿರಕ್ಷಣಾ ವ್ಯವಸ್ಥೆಯನ್ನು ಹೆಚ್ಚಿಸುತ್ತದೆ ಮತ್ತು ಸೋಂಕುಗಳ ವಿರುದ್ಧ ಹೋರಾಡುವ ದೇಹದ ಸಾಮರ್ಥ್ಯವನ್ನು ಸುಧಾರಿಸುತ್ತದೆ.

ಆರೋಗ್ಯಕರ ಚರ್ಮಕ್ಕಾಗಿ

ಸೇಬಿನಲ್ಲಿರುವ ಉತ್ಕರ್ಷಣ ನಿರೋಧಕಗಳು ಮತ್ತು ವಿಟಮಿನ್ ಸಿ ಚರ್ಮವನ್ನು ಹಾನಿಯಿಂದ ರಕ್ಷಿಸಲು ಸಹಾಯ ಮಾಡುತ್ತದೆ. ಕಾಲಜನ್ ಉತ್ಪಾದನೆಯನ್ನು ಬೆಂಬಲಿಸುತ್ತದೆ ಮತ್ತು ಆರೋಗ್ಯಕರ ಮೈಬಣ್ಣಕ್ಕೆ ಕೊಡುಗೆ ನೀಡುತ್ತದೆ.

ಮೂಳೆ ಆರೋಗ್ಯಕ್ಕೆ ಪ್ರಯೋಜನ

ಸೇಬುಗಳು ಕ್ಯಾಲ್ಸಿಯಂ ಮತ್ತು ಪೊಟ್ಯಾಸಿಯಮ್‌ನಂತಹ ವಿವಿಧ ಖನಿಜಗಳನ್ನು ಹೊಂದಿರುತ್ತವೆ. ಇದು ಬಲವಾದ ಮತ್ತು ಆರೋಗ್ಯಕರ ಮೂಳೆಗಳನ್ನು ಕಾಪಾಡಿಕೊಳ್ಳಲು ಮುಖ್ಯವಾಗಿದೆ.


ದೀರ್ಘಕಾಲದ ಕಾಯಿಲೆಗಳ ಅಪಾಯ ಕಡಿಮೆ

ನಿಯಮಿತ ಸೇಬಿನ ಸೇವನೆಯು ಟೈಪ್ 2 ಮಧುಮೇಹ ಮತ್ತು ಕೆಲವು ಕ್ಯಾನ್ಸರ್‌ಗಳಂತಹ ದೀರ್ಘಕಾಲದ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ.

ಮೆದುಳಿನ ಆರೋಗ್ಯಕ್ಕೆ ಸಹಕಾರಿ

ಸೇಬುಗಳಲ್ಲಿನ ಉತ್ಕರ್ಷಣ ನಿರೋಧಕಗಳು ಮೆದುಳನ್ನು ಆಕ್ಸಿಡೇಟಿವ್ ಒತ್ತಡದಿಂದ ರಕ್ಷಿಸಲು ಮತ್ತು ಅರಿವಿನ ಕಾರ್ಯವನ್ನು ಬೆಂಬಲಿಸಲು ಸಹಾಯ ಮಾಡುತ್ತದೆ. ಇದು ನ್ಯೂರೋ ಡಿಜೆನೆರೆಟಿವ್ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ.

ಇದನ್ನೂ ಓದಿ: Benefits Of Onion Hair Oil: ಕೂದಲು ಬಿಳಿಯಾಗುತ್ತಿದೆಯೆ? ಈರುಳ್ಳಿ ತೈಲವನ್ನು ಈ ರೀತಿ ಬಳಸಿ

ದೇಹವನ್ನು ಹೈಡ್ರೇಟ್ ಇರಿಸುತ್ತದೆ

ಸೇಬುಗಳು ಹೆಚ್ಚಿನ ನೀರಿನ ಅಂಶವನ್ನು ಹೊಂದಿರುತ್ತವೆ. ಇದು ದೇಹವನ್ನು ಹೈಡ್ರೀಕರಿಸಲು ಸಹಾಯ ಮಾಡುತ್ತದೆ ಮತ್ತು ಒಟ್ಟಾರೆ ದೈಹಿಕ ಕಾರ್ಯಗಳನ್ನು ಬೆಂಬಲಿಸುತ್ತದೆ.

ನಿಮ್ಮ ಆಹಾರದಲ್ಲಿ ಸೇಬುಗಳನ್ನು ಸೇರಿಸಿಕೊಳ್ಳುವುದು ಹಲವಾರು ಆರೋಗ್ಯ ಪ್ರಯೋಜನಗಳನ್ನು ಒದಗಿಸುತ್ತದೆ ಮತ್ತು ಒಟ್ಟಾರೆ ಯೋಗಕ್ಷೇಮಕ್ಕೆ ಕೊಡುಗೆ ನೀಡುತ್ತದೆ.

Continue Reading

ಆರೋಗ್ಯ

Health Tips Kannada: ಈ 5 ಅಭ್ಯಾಸಗಳು ನಿಮ್ಮ ಹಾರ್ಮೋನಿನ ಏರುಪೇರಿಗೆ ಕಾರಣವಾಗಿರಬಹುದು!

Health Tips Kannada: ಹಾರ್ಮೋನಿನ ಏರುಪೇರು ಕೇವಲ ನಿಮ್ಮ ಭಾವನೆ, ಮಾನಸಿಕತೆಯ ಮೇಲೆ ಮಾತ್ರವಲ್ಲ, ಒಟ್ಟು ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಹಾಗಾಗಿ, ಹಾರ್ಮೋನಿನ ಸಮಸ್ಯೆ ಕಂಡಾಗಲೆಲ್ಲ ಅದರ ಮೂಲವನ್ನು ಕಂಡು ಹಿಡಿಯುವುದು ಅತ್ಯಾವಶ್ಯಕ. ನಮ್ಮ ದಿನನಿತ್ಯದ ಸಣ್ಣ ಪುಟ್ಟ ಅಭ್ಯಾಸಗಳೂ ಕೂಡಾ ಆರೋಗ್ಯದ ಮೇಳೆ ದೊಡ್ಡ ಪರಿಣಾಮವನ್ನೇ ಬೀರಿರಬಹುದು. ಈ ಕುರಿತು ಎಚ್ಚರಿಸುವ ಲೇಖನ ಇಲ್ಲಿದೆ.

VISTARANEWS.COM


on

Health Tips Kannada
Koo

ಇಂದಿನ ಧಾವಂತದ (Health Tips Kannada) ಬದುಕಿನಲ್ಲಿ ಜೀವನಶೈಲಿಯ ಸಮಸ್ಯೆಗಳಿಂದಾಗಿ ಆರೋಗ್ಯ ಹದಗೆಡುತ್ತಿರುವುದು ಸಾಮಾನ್ಯವಾಗಿಬಿಟ್ಟಿದೆ. ಇದರಿಂದಾಗಿ ಬೊಜ್ಜು, ಒತ್ತಡ, ಉದ್ವೇಗ ಸೇರಿದಂತೆ ನಾನಾ ಸಮಸ್ಯೆಗಳು ಸಾಮಾನ್ಯ. ಹಾರ್ಮೋನಿನ ಏರುಪೇರು ಕೂಡಾ ಈಗ ಅತ್ಯಂತ ಹೆಚ್ಚಾಗುತ್ತಿರುವ ಆರೋಗ್ಯ ಸಮಸ್ಯೆಗಳಲ್ಲಿ ಒಂದಾಗಿದೆ. ಹಾರ್ಮೋನಿನ ಏರುಪೇರು ಕೇವಲ ನಿಮ್ಮ ಭಾವನೆ, ಮಾನಸಿಕತೆಯ ಮೇಲೆ ಮಾತ್ರವಲ್ಲ, ಒಟ್ಟು ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಹಾಗಾಗಿ, ಹಾರ್ಮೋನಿನ ಸಮಸ್ಯೆ ಕಂಡಾಗಲೆಲ್ಲ ಅದರ ಮೂಲವನ್ನು ಕಂಡು ಹಿಡಿಯುವುದು ಅತ್ಯಾವಶ್ಯಕ. ನಮ್ಮ ದಿನನಿತ್ಯದ ಸಣ್ಣ ಪುಟ್ಟ ಅಭ್ಯಾಸಗಳೂ ಕೂಡಾ ಆರೋಗ್ಯದ ಮೇಳೆ ದೊಡ್ಡ ಪರಿಣಾಮವನ್ನೇ ಬೀರಿರಬಹುದು. ಆದರೆ ಅದರ ಅರಿವು ನಮಗಾಗುವುದಿಲ್ಲ ಅಷ್ಟೇ. ಹಾಗಾಗಿ, ಯಾವ ಅಭ್ಯಾಸವನ್ನು ಬದಲಾಯಿಸುವ ಅಗತ್ಯವಿದೆ ಎಂಬುದನ್ನು ನಾವು ಪ್ರಾಮಾಣಿಕವಾಗಿ ಕಂಡುಕೊಳ್ಳಬೇಕು. ಆರೋಗ್ಯಯುತ ಜೀವನದೆದುರು ನಮ್ಮ ಯಾವ ಐಶ್ವರ್ಯವೂ ದೊಡ್ಡದಲ್ಲ. ಬನ್ನಿ, ಹಾರ್ಮೋನಿನ ಏರುಪೇರಿಗೆ ನಮ್ಮ ಯಾವ ಬಗೆಯ ಜೀವನಕ್ರಮ ಕಾರಣವಿರಬಹುದು ಎಂಬುದನ್ನು ನೋಡೋಣ.

Sweet Pongal

ಊಟದ ನಂತರ ಸಿಹಿ ತಿನ್ನುವುದು

ಹೌದು. ವಿಷಯ ಸಿಂಪಲ್‌ ಆಗಿ ಕಾಣಬಹುದು. ನಮ್ಮಲ್ಲಿ ಹಲವರಿಗೆ ಊಟದ ನಂತರ ಸಿಹಿ ತಿನ್ನಬೇಕೆಂಬ ಬಯಕೆಯಾಗುವುದು ಉಂಟು. ಏನಾದರೊಂದು ಸಿಹಿಯನ್ನು ಊಟದ ನಂತರ ತಿಂದರೆ ಸಮಾಧಾನದ ಖುಷಿ ಸಿಗುವುದುಂಟು. ಆದರೆ, ಇದು ದೇಹದಲ್ಲಿರುವ ಸಕ್ಕರೆಯ ಮಟ್ಟವನ್ನು ಏರುಪೇರು ಮಾಡಬಹುದು. ಇನ್ಸುಲಿನ್‌ ಏರುಪೇರಿನಿಂದಾಗಿ ಹಾರ್ಮೋನೂ ಏರುಪೇರಾಗುವುದು ಸಹಜ.

Mobile Overuse

ಮಲಗುವ ಮೊದಲು ಫೋನ್‌ ನೋಡುವ ಅಭ್ಯಾಸ

ಮಲಗುವ ಮೊದಲು ಫೋನ್‌ ಹಿಡಿದು ಗಂಟೆಗಟ್ಟಲೆ ಸಾಮಾಜಿಕ ಜಾಲತಾಣ, ಸಿನಿಮಾ ವೀಕ್ಷಣೆ ಇತ್ಯಾದಿ ರಿಲ್ಯಾಕ್ಸಿಂಗ್‌ ಅಭ್ಯಾಸ ಹಲವರಿಗಿದೆ. ಆದರೆ, ಇವು ನಮ್ಮ ಮಿದುಳನ್ನು ಖಂಡಿತ ರಿಲ್ಯಾಕ್ಸ್‌ ಮಾಡದು. ಇದರಲ್ಲಿರುವ ಹಾನಿಕಾರಕ ಕಿರಣಗಳು ನಮ್ಮ ಮಿದುಳನ್ನು ಅಲರ್ಟ್‌ ಆಗಿರುವಂತೆ ಮಾಡಿ, ನಿದ್ದೆಯನ್ನು ಓಡಿಸುತ್ತದೆ. ಜೊತೆಗೆ ಇದು ಮೆಲಟೋನಿನ್‌ ಹಾರ್ಮೋನಿನ ಉತ್ಪಾದನೆಯನ್ನು ಮೊಟಕುಗಳಿಸುತ್ತದೆ. ಪರಿಣಾಮವಾಗಿ ನಮ್ಮ ನಿದ್ದೆ ಹಾಳಾಗುತ್ತದೆ. ಸರಿಯಾದ ಹೊತ್ತಿನಲ್ಲಿ ನಿದ್ದೆ ಮಾಡದೆ, ಇಡೀ ದಿನ ಸುಸ್ತಾದ ಅನುಭವ ನೀಡುತ್ತದೆ.

ಸಂಜೆ ನಾಲ್ಕರ ನಂತರ ಕೆಫೀನ್

ಸಂಜೆ ಚಹಾ/ಕಾಫಿ ಕುಡಿಯದಿದ್ದರೆ ಅನೇಕರಿಗೆ ಏನೋ ಕಳೆದುಕೊಂಡ ಭಾವ. ಹೌದು. ಆದರೆ, ಸಂಜೆ ನಾಲ್ಕು ಗಂಟೆ ಕಳೆದ ಮೇಲೆ ಕೆಫೀನ್‌ಯುಕ್ತ ಚಹಾ, ಕಾಫಿಯಂತಹ ಪೇಯಗಳು ಒಳ್ಳೆಯದಲ್ಲ. ಇವು ನೇರವಾಗಿ ಕಾರ್ಟಿಸಾಲ್‌ ಮೇಲೆ ಪರಿಣಾಮ ಬೀರುತ್ತದೆ. ಒತ್ತಡವನ್ನು ನಿಭಾಯಿಸಲು ಕಾರ್ಟಿಸಾಲ್‌ ಹಾರ್ಮೋನ್‌ ಬೇಕೇ ಬೇಕು. ಇದು ಏರುಪೇರಾದರೆ, ಒತ್ತಡವೂ ಹೆಚ್ಚುತ್ತದೆ. ಹಾಗಾಗಿ, ಕಾಫಿ, ಚಹಾ ಹಾಗೂ ಇತರ ಕಾರ್ಬೋನೇಟೆಡ್‌ ಪೇಯಗಳನ್ನು ಮಲಗುವ ೧೦ ಗಂಟೆಗಳಿಗೂ ಮೊದಲೇ ಕುಡಿಯಿರಿ.

ಇದನ್ನೂ ಓದಿ: How safe are apples to eat: ನೀವು ತಿನ್ನುವ ಸೇಬು ಎಷ್ಟು ಸುರಕ್ಷಿತ? ಸೇಬು ಬಾಯಿಗಿಡುವ ಮುನ್ನ ಯೋಚಿಸಿ!

ಕಾರ್ಬೋಹೈಡ್ರೇಟ್‌ ಅನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸುವುದು

ಕಾರ್ಬೋಹೈಡ್ರೇಟ್‌ ಅಧಿಕವಾಗಿಉವ ಆಹಾರಗಳನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸುವ ಅಭ್ಯಾಸವಿದ್ದರೆ ಅದನ್ನು ಬಿಡಿ. ಕಾರ್ಬೋಹೈಡ್ರೇಟ್‌ ಖಾಲಿ ಹೊಟ್ಟೆಯಲ್ಲಿ ಸೇರಿದಾಗ, ನೇರವಾಗಿ ಇನ್ಸುಲಿನ್‌ ಮೇಲೆ ಪರಿಣಾಮ ಬೀರುತ್ತದೆ. ಇದು ಮಧುಮೇಹಕ್ಕೂ ಕಾರಣವಾಗಬಹುದು.

ಕಡಿಮೆ ತರಕಾರಿ ಸೇವನೆ

ಕೆಲವರಿಗೆ ತರಕಾರಿಗಳು ಎಂದರೆ ಅಸಡ್ಡೆ. ತರಕಾರಿಗಳನ್ನು ಕಡಿಮೆ ತರಕಾರಿಗಳ ಸೇವನೆ ಹಾಗೂ ಹೆಚ್ಚು ಕೊಬ್ಬಿನ ಅಹಾರಗಳನ್ನು ಸೇವನೆ ಮಾಡುವುದರಿಂದ ದೇಹದಲ್ಲಿ ಇಸ್ಟ್ರೋಜನ್‌ ಹಾರ್ಮೋನಿನ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಹಾರ್ಮೋನಿನ ಅಸಮತೋಲನವಾಗುತ್ತದೆ. ತರಕಾರಿಗಳನ್ನು ಹೆಚ್ಚು ಸೇವಿಸುವುದು ಆರೋಗ್ಯದ ದೃಷ್ಠಿಯಲ್ಲಿ ಅತ್ಯಂತ ಅವಶ್ಯಕ.

Continue Reading
Advertisement
TJ Abraham
ಪ್ರಮುಖ ಸುದ್ದಿ11 mins ago

TJ Abraham : ಎಸ್ಎಂ ಕೃಷ್ಣರಿಂದ ಹಿಡಿದು ಸಿದ್ದರಾಮಯ್ಯವರೆಗೆ; ಕರ್ನಾಟಕ ರಾಜಕೀಯದ ದೊಡ್ಡ ಹುಲಿಗಳನ್ನೇ ಬೋನಿಗೆ ಬೀಳಿಸಿದ ಟಿ ಜೆ ಅಬ್ರಾಹಂ

Positive Pay System
ವಾಣಿಜ್ಯ26 mins ago

Positive Pay System: ಏನಿದು ಪಾಸಿಟಿವ್‌ ಪೇ ಸಿಸ್ಟಮ್‌? ಚೆಕ್ ಪಾವತಿ ಸುರಕ್ಷಿತಗೊಳಿಸುವುದು ಹೇಗೆ?

Dog attack
ವೈರಲ್ ನ್ಯೂಸ್35 mins ago

Dog Attack: 17 ಮಂದಿ ಮೇಲೆ ಬೀದಿ ನಾಯಿ ದಾಳಿ; ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆ

Kannada New Movie
ಬೆಂಗಳೂರು39 mins ago

Kannada New Movie: ಮಂಸೋರೆ ನಿರ್ದೇಶನದ ʼದೂರ ತೀರ ಯಾನʼ ಟೈಟಲ್ ಟೀಸರ್ ರಿಲೀಸ್‌

pralhad Joshi
ಬೆಂಗಳೂರು2 hours ago

Pralhad Joshi: ಸಿಎಂ ಮೇಲೆ ರಾಜ್ಯಪಾಲರ ಕ್ರಮ ಸರಿಯಾಗಿಯೇ ಇದೆ; ಪ್ರಲ್ಹಾದ್‌ ಜೋಶಿ ಸಮರ್ಥನೆ

CM Siddaramaiah
ಪ್ರಮುಖ ಸುದ್ದಿ2 hours ago

CM Siddaramaiah : ತಮ್ಮ ಮೇಲೆ ತನಿಖೆಗೆ ಆದೇಶಿಸಿದ ರಾಜ್ಯಪಾಲರ ವಿರುದ್ಧ ಸಿಡಿದೆದ್ದ ಸಿಎಂ

Viral Video
Latest2 hours ago

Viral Video: ಮೊಬೈಲ್‌ನಲ್ಲಿ ಅಶ್ಲೀಲ ವಿಡಿಯೊ ನೋಡುತ್ತ ದೇವಾಲಯದೊಳಗೇ ಹಸ್ತಮೈಥುನ!

Weight Loss Tips kannada
ಆರೋಗ್ಯ2 hours ago

5 Seeds for Weight Loss: ಈ 5 ಕಿರು ಬೀಜಗಳು ತೂಕ ಇಳಿಕೆಗೆ ಸಹಕಾರಿ

tungabhadra dam gate
ಪ್ರಮುಖ ಸುದ್ದಿ2 hours ago

Tungabhadra Dam: ಮುರಿದುಹೋದ 19ನೇ ಗೇಟ್‌ಗೆ ಸ್ಟಾಪ್‌ ಲಾಗ್‌ ಅಳವಡಿಕೆ ಯಶಸ್ವಿ, ಪೋಲಾಗುತ್ತಿದ್ದ ನೀರು ಬಂದ್!

CM Siddaramaiah
ಪ್ರಮುಖ ಸುದ್ದಿ2 hours ago

CM Siddaramaiah : ಸಿಎಂ ಸಿದ್ದರಾಮಯ್ಯಗೆ ಉರುಳಾಗಿರುವ ಮುಡಾ ಹಗರಣ ಏನು? ಇಲ್ಲಿದೆ ಎಲ್ಲ ಮಾಹಿತಿ

Sharmitha Gowda in bikini
ಕಿರುತೆರೆ11 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ11 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ9 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

karnataka Weather Forecast
ಮಳೆ1 week ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ1 week ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ1 week ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು2 weeks ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 weeks ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ2 weeks ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ2 weeks ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ2 weeks ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ2 weeks ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ2 weeks ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

ಟ್ರೆಂಡಿಂಗ್‌