Bridge Collapse: 9 ವರ್ಷಗಳಿಂದ ನಿರ್ಮಾಣವಾಗುತ್ತಿರುವ ಸೇತುವೆ 3ನೇ ಬಾರಿ ಕುಸಿದು ಬಿತ್ತು; ವಿಡಿಯೊ ನೋಡಿ - Vistara News

ವೈರಲ್ ನ್ಯೂಸ್

Bridge Collapse: 9 ವರ್ಷಗಳಿಂದ ನಿರ್ಮಾಣವಾಗುತ್ತಿರುವ ಸೇತುವೆ 3ನೇ ಬಾರಿ ಕುಸಿದು ಬಿತ್ತು; ವಿಡಿಯೊ ನೋಡಿ

Bridge Collapse: ಬಿಹಾರದಲ್ಲಿ ಸೇತುವೆ ಕುಸಿತದ ಸರಣಿಗೆ ಇನ್ನೊಂದು ಸೇರ್ಪಡೆಯಾಗಿದೆ. ಕಳೆದ 9 ವರ್ಷಗಳಿಂದ ನಿರ್ಮಾಣವಾಗುತ್ತಲೇ ಇರುವ ಸೇತುವೆಯೊಂದು 3ನೇ ಬಾರಿ ಕುಸಿದು ಬಿದ್ದಿದೆ. ಬಿಹಾರದ ಭಾಗಲ್ಪುರದ ಸುಲ್ತಂಗಂಜ್‌-ಅಗುವಾನಿ ಘಾಟ್‌ನಲ್ಲಿ ನಿರ್ಮಾಣವಾಗುತ್ತಿರುವ ಸೇತುವೆ ಶನಿವಾರ (ಆಗಸ್ಟ್‌ 17) ಬೆಳಿಗ್ಗೆ ಕುಸಿದು ಗಂಗಾ ನದಿ ಪಾಲಾಗಿದೆ. ನಿರ್ಮಾಣ ಹಂತದ ಸೇತುವೆಯ 9 ಮತ್ತು 10ನೇ ಕಂಬಗಳ ನಡುವಿನ ಭಾಗ ಕುಸಿದು ಬಿದ್ದಿದೆ. ಖಗರಿಯಾ ಮತ್ತು ಭಾಗಲ್ಪುರ ಜಿಲ್ಲೆಗಳನ್ನು ಸಂಪರ್ಕಿಸಲು ಸೇತುವೆ ನಿರ್ಮಿಸಲಾಗುತ್ತಿದೆ.

VISTARANEWS.COM


on

Bridge Collapse
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಪಟನಾ: ಬಿಹಾರದಲ್ಲಿ ಸೇತುವೆ ಕುಸಿತ (Bridge Collapse)ದ ಸರಣಿಗೆ ಇನ್ನೊಂದು ಸೇರ್ಪಡೆಯಾಗಿದೆ. ಕಳೆದ 9 ವರ್ಷಗಳಿಂದ ನಿರ್ಮಾಣವಾಗುತ್ತಲೇ ಇರುವ ಸೇತುವೆಯೊಂದು 3ನೇ ಬಾರಿ ಕುಸಿದು ಬಿದ್ದಿದೆ. ಸದ್ಯ ಈ ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ (Viral Video).

ಬಿಹಾರದ ಭಾಗಲ್ಪುರದ ಸುಲ್ತಂಗಂಜ್‌-ಅಗುವಾನಿ ಘಾಟ್‌ನಲ್ಲಿ ನಿರ್ಮಾಣವಾಗುತ್ತಿರುವ ಸೇತುವೆ ಶನಿವಾರ (ಆಗಸ್ಟ್‌ 17) ಬೆಳಿಗ್ಗೆ ಕುಸಿದು ಗಂಗಾ ನದಿ ಪಾಲಾಗಿದೆ. ಅದೃಷ್ಟವಶಾತ್‌ ಯಾರಿಗೂ ಗಾಯಗಳಾಗಿಲ್ಲ. ಗಮನಾರ್ಹ ಅಂಶ ಎಂದರೆ ಈ ಸೇತುವೆಯನ್ನೂ ಕಳೆದ 9 ವರ್ಷಗಳಿಂದ ನಿರ್ಮಿಸಲಾಗುತ್ತಿದ್ದು ಇನ್ನೂ ಪೂರ್ಣವಾಗಿಲ್ಲ. ಅಲ್ಲದೆ ಈ ಸೇತುವೆಯ ಕೆಲವೊಂದು ಭಾಗಗಳು ಈ ಹಿಂದೆ ಎರಡು ಬಾರಿ ಕುಸಿದು ಬಿದ್ದಿದ್ದವು.

ನಿರ್ಮಾಣ ಹಂತದ ಸೇತುವೆಯ 9 ಮತ್ತು 10ನೇ ಕಂಬಗಳ ನಡುವಿನ ಭಾಗ ಕುಸಿದು ಬಿದ್ದಿದೆ. ಖಗರಿಯಾ ಮತ್ತು ಭಾಗಲ್ಪುರ ಜಿಲ್ಲೆಗಳನ್ನು ಸಂಪರ್ಕಿಸಲು ಸೇತುವೆ ನಿರ್ಮಿಸಲಾಗುತ್ತಿದೆ. ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಕನಸಿನ ಪ್ರಾಜೆಕ್ಟ್‌ ಇದಾಗಿದ್ದು, ಈ ಪ್ರದೇಶದ ನಿರ್ಣಾಯಕ ಕೊಂಡಿಯಾದ ವಿಕ್ರಮಶಿಲಾ ಸೇತುವೆ ಮೇಲಿನ ಸಂಚಾರ ದಟ್ಟಣೆಯನ್ನು ನಿವಾರಿಸುತ್ತದೆ ಎಂದು ನಿರೀಕ್ಷಿಸಲಾಗಿದೆ. ಎಸ್‌.ಪಿ.ಸಿಂಗ್ಲಾ ಕಂಪೆನಿ ಈ ಸೇತುವೆ ಕಾಮಗಾರಿ ಕೈಗೆತ್ತಿಕೊಂಡಿದ್ದು, ಸದ್ಯ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಸೇತುವೆ ಕುಸಿತದ ಇತಿಹಾಸ

ಈ ಹಿಂದೆ ಇದೇ ಸೇತುವೆ 2022ರ ಏಪ್ರಿಲ್‌ 27ರಂದು ಮೊದಲ ಬಾರಿ ಕುಸಿದು ಬಿದ್ದಿತ್ತು. ಅದಾಗಿ ಸುಮಾರು ಒಂದು ವರ್ಷದ ಬಳಿಕ ಅಂದರೆ 2023ರ ಜೂನ್‌ 4ರಂದು ಎರಡನೇ ಬಾರಿ ಸೇತುವೆ ಕುಸಿದಿತ್ತು. ಈ ವೇಳೆ ಕೆಲಸ ನಿರ್ವಹಿಸುತ್ತಿದ್ದ ಇಬ್ಬರು ನೀರು ಪಾಲಾಗಿದ್ದರು.

2014ರ ಫೆಬ್ರವರಿ 23ರಂದು 3.16 ಕಿ.ಮೀ ಉದ್ದದ ಈ ಸೇತುವೆಗೆ ಶಂಕುಸ್ಥಾಪನೆ ನೆರವೇರಿಸಲಾಗಿತ್ತು. ಕಾಮಗಾರಿಯನ್ನು 2015ರ ಮಾರ್ಚ್ 9ರಂದು ಆರಂಭಿಸಲಾಗಿತ್ತು. ಬಿಹಾರ ಸರ್ಕಾರವು ಈ ಯೋಜನೆಗೆ 1,710 ಕೋಟಿ ರೂ.ಗಳನ್ನು ನಿಗದಿಪಡಿಸಿದೆ. ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಇದೂ ಒಂದು. ಅದಾಗ್ಯೂ ನಿರ್ಮಾಣ ಆರಂಭವಾಗಿ ಸುಮಾರು 9 ವರ್ಷಗಳ ನಂತರವೂ ಸೇತುವೆ ಅಪೂರ್ಣವಾಗಿ ಉಳಿದಿದೆ.

17 ದಿನದಲ್ಲಿ 10 ಸೇತುವೆ ಕುಸಿತ

ಕಳೆದ ಕೆಲವು ದಿನಗಳಿಂದ ಬಿಹಾರದಲ್ಲಿ ಸೇತುವೆಗಳು ಕುಸಿದು ಬೀಳುತ್ತಿದ್ದು, ದೇಶಾದ್ಯಂತ ಚರ್ಚೆ ಹುಟ್ಟು ಹಾಕಿದೆ. ಕಳೆದ ತಿಂಗಳು 17 ದಿನಗಳಲ್ಲಿ 10 ಸೇತುವೆಗಳು ಕುಸಿದು ಬಿದ್ದಿದ್ದವು. ಸಣ್ಣ ಮಳೆಯಾದರೂ ಸೇತುವೆಗಳು ಕುಸಿಯುವುದು, ನಿರ್ಮಾಣ ಹಂತದಲ್ಲಿರುವಾಗಲೇ ಸೇತುವೆಗಳು ಧರೆಗುರುಳುವ ಪ್ರಕರಣಗಳು ಜಾಸ್ತಿಯಾಗಿರುವುದು ಜನಾಕ್ರೋಶಕ್ಕೆ ಕಾರಣವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಂತೂ ಜನ ಬಿಹಾರ ಸರ್ಕಾರದ (Bihar Government) ವಿರುದ್ಧ ಮುಗಿಬಿದ್ದಿದ್ದಾರೆ. ಬ್ರಹ್ಮಾಂಡ ಭ್ರಷ್ಟಾಚಾರದ ಆರೋಪಗಳು ಕೇಳಿಬಂದಿವೆ.

ಬಿಹಾರ ರಾಜ್ಯದಲ್ಲಿ ಒಂದರ ಹಿಂದೆ ಒಂದರಂತೆ ಸೇತುವೆಗಳು ಕುಸಿಯುತ್ತಿರುವುದಕ್ಕೆ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್‌ ಆಕ್ರೋಶ ವ್ಯಕ್ತಪಡಿಸಿದ್ದರು. “ಬಿಹಾರದಲ್ಲಿ ಸೇತುವೆ ಕುಸಿತದ ಪ್ರಕರಣಗಳು ಸುದ್ದಿಯಾಗುತ್ತಲೇ ಇವೆ. ನಿತೀಶ್‌ ಕುಮಾರ್‌ ನೇತೃತ್ವದ ಸರ್ಕಾರವು ಸೇತುವೆ ನಿರ್ಮಾಣದಲ್ಲಿ ನಿರ್ಲಕ್ಷ್ಯ ವಹಿಸುತ್ತಿದೆ ಹಾಗೂ ಭ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡುತ್ತಿದೆ. ಜನರ ದುಡ್ಡು ಹೀಗೆ ನೀರು ಪಾಲಾಗುತ್ತಿದ್ದರೂ ಮುಖ್ಯಮಂತ್ರಿಯು ಗಾಢ ನಿದ್ದೆಯಲ್ಲಿದ್ದಾರೆ” ಎಂದು ಟೀಕಿಸಿದ್ದರು.

ಇದನ್ನೂ ಓದಿ: Bridge Collapse: ಬಿಹಾರದಲ್ಲಿ ಮತ್ತೆರಡು ಸೇತುವೆ ಕುಸಿತ; 15 ದಿನಗಳಲ್ಲಿ ಇದು 7ನೇ ಪ್ರಕರಣ!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

Bajrang Punia: ತ್ರಿವರ್ಣ ಧ್ವಜದ ಪೋಸ್ಟರ್​ ಮೇಲೆ ಕಾಲಿಟ್ಟ ಬಜರಂಗ್ ಪೂನಿಯಾ; ವಿಡಿಯೊ ವೈರಲ್

Bajrang Punia: ವಿನೇಶ್​ ಫೋಗಟ್(Vinesh Phogat)​ ಸೆಮಿಫೈನಲ್​ ಪ್ರವೇಶಿಸಿದ್ದ ವೇಳೆ ಬಜರಂಗ್‌ ಪೂನಿಯ ಟ್ವಿಟರ್​ ಎಕ್ಸ್​ನಲ್ಲಿ ಪೋಸ್ಟ್ ಮಾಡುವ ಮೂಲಕ ವಿನೇಶ್ ಸಾಧನೆಯನ್ನು ಕೊಂಡಾಡಿ ಕೇಂದ್ರ ಸರ್ಕಾರಕ್ಕೆ ಪರೋಕ್ಷವಾಗಿ ಟಾಂಗ್​ ಕೊಟ್ಟಿದ್ದರು.

VISTARANEWS.COM


on

Bajrang Punia
Koo

ನವದೆಹಲಿ: ಪ್ಯಾರಿಸ್​ನಿಂದ ಇಂದು ನವದೆಹಲಿಗೆ ಆಗಮಿಸಿದ್ದ ಕುಸ್ತಿಪಟು ವಿನೇಶ್​ ಫೋಗಟ್(Vinesh Phogat)​ ಅವರಿಗೆ ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭರ್ಜರಿ ಸ್ವಾಗತ ಕೋರಲಾಗಿತ್ತು. ಇದೇ ವೇಳೆ ಕುಸ್ತಿಪಟು ಬಜರಂಗ್​ ಪೂನಿಯ(Bajrang Punia) ಮಾಧ್ಯಮದವರನ್ನು ಸಂಬಾಳಿಸುವ ಫಜೀತಿಯಲ್ಲಿ ತ್ರಿವರ್ಣ ಧ್ವಜದ ಪೋಸ್ಟರ್ ಮೇಲೆ ಕಾಲಿಟ್ಟಿ ಇದೀಗ ವಿವಾದವೊಂದನ್ನು ಮೈಮೇಲೆ ಎಳೆದುಕೊಂಡಿದ್ದಾರೆ.

ವಿನೇಶ್ ಅವರನ್ನು ಒಲಿಂಪಿಯನ್‌ಗಳಾದ ಸಾಕ್ಷಿ ಮಲಿಕ್, ಬಜರಂಗ್ ಪೂನಿಯಾ ಸೇರಿದಂತೆ ಅಪಾರ ಸಂಖ್ಯೆಯ ಅಭಿಮಾನಿಗಳು ಆತ್ಮೀಯವಾಗಿ ಸ್ವಾಗತಿಸಿದರು. ಇದೇ ವೇಳೆ ನೆರದಿದ್ದ ಪತ್ರಕರ್ತರು ವಿನೇಶ್​ ಅವರ ಬೈಟ್ಸ್​ಗಳಿಗೆ ಮೈಕ್​ ಹಿಡಿದು ಕಾರಿಗೆ ಸುತ್ತುವರಿದಿದ್ದರು. ಇವರನ್ನು ಸಂಬಾಳಿಸುವ ಭರದಲ್ಲಿ ಕಾರ್‌ನ ಬಾನೆಟ್‌ ಮೇಲೆ ಹಾಕಲಾಗಿದ್ದ ತ್ರಿವರ್ಣ ಧ್ವಜದ ಪೋಸ್ಟರ್ ಇರುವ ಬ್ಯಾನರ್‌ ಮೇಲೆ ಬಜರಂಗ್ ಪೂನಿಯಾ ನಿಂತಿದ್ದರು. ಸದ್ಯ ಈ ಫೋಟೊ ಮತ್ತು ವಿಡಿಯೊ ವೈರಲ್​ ಆಗಿದ್ದು, ರಾಷ್ಟ್ರ ಧ್ವಜದ ಮೇಲೆ ಕಾಲಿಡಬಾರದು ಎಂಬ ಕಿಂಚಿತ್ತು ಬುದ್ಧಿ ಕೂಡ ನಿಮಗಿಲ್ಲವೇ ಎಂದು ನೆಟ್ಟಿಗರು ಬಜರಂಗ್​ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ವಿನೇಶ್​ ಫೋಗಟ್(Vinesh Phogat)​ ಸೆಮಿಫೈನಲ್​ ಪ್ರವೇಶಿಸಿದ್ದ ವೇಳೆ ಬಜರಂಗ್‌ ಪೂನಿಯ ಟ್ವಿಟರ್​ ಎಕ್ಸ್​ನಲ್ಲಿ ಪೋಸ್ಟ್ ಮಾಡುವ ಮೂಲಕ ವಿನೇಶ್ ಸಾಧನೆಯನ್ನು ಕೊಂಡಾಡಿ ಕೇಂದ್ರ ಸರ್ಕಾರಕ್ಕೆ ಪರೋಕ್ಷವಾಗಿ ಟಾಂಗ್​ ಕೊಟ್ಟಿದ್ದರು.

“ಜಗತನ್ನೇ ಗೆಲ್ಲಲು ಹೊರಟಿರುವ ವಿನೇಶಾ ಫೋಗಟ್ ಹಿಂದೊಮ್ಮೆ ತನ್ನದೇ ದೇಶದಲ್ಲಿ ಸೋಲು ಎದುರಿಸಿದ್ದಳು. ಲೈಗಿಂಕ ಕಿರುಕುಳದ ವಿರುದ್ಧ ನ್ಯಾಯಕ್ಕಾಗಿ ಹೋರಾಡಿದ್ದ ಈಕೆಯ ಮೇಲೆ ತನ್ನದೇ ದೇಶದಲ್ಲಿ ಲಾಠಿಯಿಂದ ಹೊಡೆದು ದಮನಿಸಲಾಗಿತ್ತು. ಬೀದಿಯಲ್ಲಿ ಎಳೆದಾಡಿ ತುಳಿದು ಅವಾಮಾನಿಸಲಾಗಿತ್ತು. ಇಂದು ಈ ಹುಡುಗಿಯ ಸಾಧನೆಯ ಮುಂದೆ ದೇಶದ ವ್ಯವಸ್ಥೆ ಸೋಲು ಕಂಡಿದೆ” ಎಂದು ಬರೆದುಕೊಂಡಿದ್ದರು.

ಡಬ್ಲ್ಯೂಎಫ್‌ಐ ವಿವಾದಕ್ಕೆ ಸಂಬಂಧಿಸಿದಂತೆ ಬಜರಂಗ್‌ ಪೂನಿಯಾ ಅವರು ಪದ್ಮಶ್ರೀ ಪ್ರಶಸ್ತಿಯನ್ನು ಕರ್ತವ್ಯ ಪಥದಲ್ಲಿ ಪದ್ಮಶ್ರೀ ಬಿಟ್ಟು ಹೋಗಿದ್ದರು. ಬಿಡುವಿಲ್ಲದ ವೇಳಾಪಟ್ಟಿಯಿಂದಾಗಿ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಲು ಸಾಧ್ಯವಾಗಲಿಲ್ಲ, ಆದರೆ ಪದಕವನ್ನು ಮನೆಗೆ ಕೊಂಡೊಯ್ಯುವುದಿಲ್ಲ. ಹೀಗಾಗಿ ಅಲ್ಲಿಯೇ ಬಿಟ್ಟು ಬಂದಿದ್ದೇನೆ ಎಂದು ಹೇಳಿದ್ದರು. ಭಾರತೀಯ ಕುಸ್ತಿ ಒಕ್ಕೂಟದ ಮಾಜಿ ಅಧ್ಯಕ್ಷ ಬ್ರಿಜ್​ಭೂಷಣ್​ ಸಿಂಗ್ ವಿರುದ್ಧ ನಡೆಸಿದ್ದ ಪ್ರತಿಭಟನೆ ರೂವಾರಿಗಳಲ್ಲಿ ಬಜರಂಗ್​ ಕೂಡ ಒಬ್ಬರಾಗಿದ್ದರು.

ಇದನ್ನೂ ಓದಿ Bajrang Punia: ‘ದೇಶದಲ್ಲಿ’ ಸೋತು ಒಲಿಂಪಿಕ್ಸ್​ನಲ್ಲಿ ಗೆಲುವಿನ ಹೆಜ್ಜೆಯಿಟ್ಟ​ ವಿನೇಶ್​​; ಬಜರಂಗ್‌ ಪೂನಿಯ ಟಾಂಗ್​

ನಿಗದಿತ ತೂಕಗಿಂತ ಹೆಚ್ಚಿನ ಭಾರ ಇದ್ದ ಕಾರಣ ಪ್ಯಾರಿಸ್​ ಒಲಿಂಪಿಕ್ಸ್(Paris Olympics)​ ಚಿನ್ನದ ಪದಕದ ಸ್ಪರ್ಧೆಯಿಂದ ಅನರ್ಹಗೊಂಡ ಕುಸ್ತಿಪಟು ವಿನೇಶ್‌ ಪೋಗಟ್‌(Vinesh Phogat) ಶನಿವಾರ ಭಾರತಕ್ಕೆ ಆಗಮಿಸಿದ್ದಾರೆ. ದೆಹಲಿಯ ವಿಮಾನ ನಿಲ್ದಾಣದಲ್ಲಿ ಅವರನ್ನು ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು. ಪದಕ ಗೆಲ್ಲಲಾಗದ ನೋವಿನಲ್ಲಿದ್ದ ವಿನೇಶ್ ಅಭಿಮಾನಿಗಳನ್ನು ಕಂಡ ತಕ್ಷಣ ಜೋರಾಗಿ ಅಳುತ್ತಾ ಕೈ ಮುಗಿದು ಧನ್ಯವಾದ ತಿಳಿಸಿದರು. ಕುಟುಂಬದ ಸದಸ್ಯರು, ಮಾಜಿ ಒಲಿಂಪಿನ್,​ ಕಂಚಿನ ಪದಕ ವಿಜೇತೆ ಸಾಕ್ಷಿ ಮಲಿಕ್​, ಬಜರಂಗ್​ ಪೂನಿಯಾ ಸೇರಿ ಹಲವು ಕುಸ್ತಿಪಟುಗಳು ಈ ವೇಳೆ ​ಜತೆಗಿದ್ದರು.

Continue Reading

Latest

Viral Video: ಅಣೆಕಟ್ಟಿನ ಅಂಚಿನಲ್ಲಿ ನಿಂತು ಸ್ಟಂಟ್ ಮಾಡಿದ; ನೀರಿನಲ್ಲಿ ಮುಳುಗಿ ಜೀವ ಕಳೆದುಕೊಂಡ!

Viral Video: ಮಹಾರಾಷ್ಟ್ರದ ನಾಗ್ಪುರದಲ್ಲಿ ಅಣೆಕಟ್ಟಿನ ಅಂಚಿನಲ್ಲಿ ನಿಂತು ಸ್ಟಂಟ್ ಮಾಡಲು ಪ್ರಯತ್ನಿಸಿದ ಯುವಕನೊಬ್ಬ ನೀರಿಗೆ ಬಿದ್ದು ದುರಂತವಾಗಿ ಮುಳುಗಿ ಸಾವನಪ್ಪಿದ ಆಘಾತಕಾರಿ ಘಟನೆ ನಡೆದಿದೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಸಖತ್ ವೈರಲ್ ಆಗಿದೆ. ಈ ಕುರಿತ ವರದಿ ಮತ್ತು ವಿಡಿಯೊ ಇಲ್ಲಿದೆ.

VISTARANEWS.COM


on

Viral Video
Koo


ಯುವಕರಿಗೆ ಸ್ಟಂಟ್ ಮಾಡುವ ಹುಚ್ಚು ಹೆಚ್ಚಾಗಿರುತ್ತದೆ. ಈ ರೀತಿ ಸ್ಟಂಟ್ ಮಾಡಲು ಹೋಗಿ ಅನೇಕರು ಅಪಾಯಕ್ಕೆ ಸಿಲುಕಿದ್ದಾರೆ. ಹಾಗೇ ಇನ್ನೂ ಅನೇಕರು ಸಾವನಪ್ಪಿದ್ದಾರೆ. ಇಷ್ಟಾದರೂ ಯುವ ಜನರು ಸ್ಟಂಟ್ ಮಾಡುವ ಹುಚ್ಚು ಬಿಡುತ್ತಿಲ್ಲ. ಈ ಸ್ಟಂಟ್ ಹುಚ್ಚಿನಿಂದ ಇತ್ತೀಚೆಗೆ ಮಹಾರಾಷ್ಟ್ರದ ನಾಗ್ಪುರದಲ್ಲಿ ಅಣೆಕಟ್ಟಿನ ಅಂಚಿನಲ್ಲಿ ನಿಂತು ಸ್ಟಂಟ್ ಮಾಡಲು ಪ್ರಯತ್ನಿಸಿದ ಯುವಕನೊಬ್ಬ ನೀರಿಗೆ ಬಿದ್ದು ದುರಂತವಾಗಿ ಮುಳುಗಿ ಸಾವನಪ್ಪಿದ ಆಘಾತಕಾರಿ ಘಟನೆ ನಡೆದಿದ್ದು, ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಸಖತ್ ವೈರಲ್ (Viral Video)ಆಗಿದೆ.

ವರದಿಗಳ ಪ್ರಕಾರ, ನಾಗ್ಪುರ ಜಿಲ್ಲೆಯ ಉಮ್ರೆಡ್ ಸಿಟಿ ಬಳಿಯ ಮಕರ್ಧೋಕಡ ಅಣೆಕಟ್ಟಿನಲ್ಲಿ ಸ್ವಾತಂತ್ರ್ಯ ದಿನಾಚರಣೆ ಸಂಜೆ (ಆಗಸ್ಟ್ 15) ಈ ಘಟನೆ ನಡೆದಿದೆ. 78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ, ಮಕರಧೋಕಡ ಅಣೆಕಟ್ಟಿನಲ್ಲಿ ಅನೇಕ ಪ್ರವಾಸಿಗರು ಬಂದಿದ್ದರು. ಅದರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಯುವಕರಿದ್ದರು. ಅವರಲ್ಲಿ ಒಬ್ಬ ಯುವಕ ಡ್ಯಾಮ್ ಮೇಲೆ ಹತ್ತಲು ಪ್ರಯತ್ನಿಸಿದ್ದಾನೆ. ಆದರೆ ಯುವಕ ಸಾಹಸ ಮಾಡಲು ಹೋಗಿ ದುರದೃಷ್ಟಕರವಾಗಿ ಸಾವಿಗೀಡಾಗಿದ್ದಾನೆ.

ಇದನ್ನು ಅಲ್ಲಿಗೆ ಬಂದಿದ್ದ ಪ್ರವಾಸಿಗರೊಬ್ಬರು ವಿಡಿಯೊ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಇದು ಈಗ ವೈರಲ್ ಆಗಿದೆ. ಈ ವೈರಲ್ ವಿಡಿಯೊ 27 ಸೆಕೆಂಡುಗಳ ಕಾಲವಿದ್ದು, ಇದರಲ್ಲಿ ವ್ಯಕ್ತಿಯೊಬ್ಬರು ಅಣೆಕಟ್ಟಿನ ಗೋಡೆಯ ಮೇಲೆ ನಿಂತಿದ್ದಾನೆ. ಆಗ ಇಬ್ಬರು ಯುವಕರು ಅವನನ್ನು ರಕ್ಷಿಸಲು ಪ್ರಯತ್ನಿಸಿದರು, ಒಬ್ಬರು ಅವನನ್ನು ಕೆಳಗಿಳಿಸಲು ಸಹಾಯ ಮಾಡಲು ಕೈ ಚಾಚಿದರು. ಆದಾಗ್ಯೂ, ಅವನು ಅವರ ಸಹಾಯವನ್ನು ನಿರಾಕರಿಸಿದ. ನಂತರ ಸಹಾಯಕ್ಕೆ ಬಂದ ಯುವಕರು ಕೆಳಗೆ ಜಾರಿ ಬಿದ್ದಿದ್ದಾರೆ. ಆಮೇಲೆ ಆ ವ್ಯಕ್ತಿ ಇದ್ದಕ್ಕಿದ್ದಂತೆ ಸಮತೋಲನವನ್ನು ಕಳೆದುಕೊಂಡು ಅಣೆಕಟ್ಟಿನ ಇನ್ನೊಂದು ಬದಿಯಲ್ಲಿ, ನದಿಗೆ ಬಿದ್ದು ಮುಳುಗಿ ಸಾವಿಗೀಡಾಗಿದ್ದಾನೆ. ಘಟನಾ ಸ್ಥಳದಲ್ಲಿ ನೂರಾರು ಜನರಿದ್ದರೂ, ಯುವಕನನ್ನು ರಕ್ಷಿಸಲು ಯಾರಿಂದಲೂ ಸಾಧ್ಯವಾಗಲಿಲ್ಲ.

ಇದನ್ನೂ ಓದಿ:ಚಂದ್ರ ಮತ್ತು ದೆಹಲಿ; ಇವುಗಳಲ್ಲಿ ಯಾವುದು ದೂರದಲ್ಲಿದೆ? ಈ ಹುಡುಗನ ಉತ್ತರವನ್ನೊಮ್ಮೆ ಕೇಳಿ ಬಿಡಿ!

ಕೆಲವು ಸಮಯದ ಹಿಂದೆ ಮಹಾರಾಷ್ಟ್ರದ ಸತಾರಾದಲ್ಲಿ ಮಹಿಳೆಯೊಬ್ಬರು ಬೆಟ್ಟದ ಮೇಲೆ ಸೆಲ್ಫಿ ತೆಗೆದುಕೊಳ್ಳಲು ಪ್ರಯತ್ನಿಸಿದಾಗ ಕಾಲು ಜಾರಿ 100 ಅಡಿ ಆಳದ ಕಮರಿಗೆ ಬಿದ್ದದ್ದಳು. ಆಶ್ಚರ್ಯಕರ ಸಂಗತಿಯೆಂದರೆ, ಮಹಿಳೆಯನ್ನು ಸ್ಥಳೀಯರು ರಕ್ಷಿಸಿದ್ದರಿಂದ ಸಾವಿನಿಂದ ಪಾರಾಗಿದ್ದಾರೆ ಮತ್ತು ಅದರ ವಿಡಿಯೊ ವೈರಲ್ ಆಗಿತ್ತು. ಮಹಾರಾಷ್ಟ್ರದ ಸತಾರಾದ ಉಂಗರ್ ರಸ್ತೆಯ ಬೋರ್ನ್ ಘಾಟ್ ನಲ್ಲಿ ಈ ಘಟನೆ ನಡೆದಿತ್ತು.

Continue Reading

Latest

Viral Video: ಅಟಲ್ ಸೇತು ಮೇಲಿಂದ ಸಮುದ್ರಕ್ಕೆ ಹಾರಲೆತ್ನಿಸಿದ ಮಹಿಳೆಯನ್ನು ರಕ್ಷಿಸಿದ್ದು ಹೇಗೆ? ವಿಡಿಯೊ ನೋಡಿ

Viral Video: ಮುಂಬೈನ ಈಶಾನ್ಯ ಉಪನಗರವಾದ ಮುಲುಂಡ್ ನಿವಾಸಿಯಾದ ರೀಮಾ ಮುಖೇಶ್ ಪಟೇಲ್ ಎಂಬುವವರು ಅಟಲ್ ಸೇತುವಿನ ಸುರಕ್ಷತಾ ತಡೆಗೋಡೆಯ ಮೇಲೆ ಕುಳಿತು ಸಮುದ್ರಕ್ಕೆ ಹಾರಿ ಜೀವಕಳೆದುಕೊಳ್ಳಲು ಪ್ರಯತ್ನಿಸಿದ್ದರು. ಆಗ ಅವರ ಕಾರಿನ ಡ್ರೈವರ್ ಸಮಯಕ್ಕೆ ಸರಿಯಾಗಿ ಅವರ ಕೈ ಹಿಡಿದುಕೊಂಡಿದ್ದಾನೆ. ನಂತರ ಗಸ್ತು ವಾಹನವು ಸ್ಥಳಕ್ಕೆ ಸರಿಯಾಗಿ ಬಂದು ಡ್ರೈವರ್‌ಗೆ ಅವಳನ್ನು ಹಿಡಿದು ಮೇಲೆಳೆಯಲು ಸಹಾಯ ಮಾಡಿದ್ದಾರೆ. ಈ ಕುರಿತ ವಿಡಿಯೊ ಇಲ್ಲಿದೆ.

VISTARANEWS.COM


on

Viral Video
Koo


ಮುಂಬೈ: ಮುಂಬೈನ ಅಟಲ್ ಸೇತು ಎಂದೂ ಕರೆಯಲ್ಪಡುವ ಮುಂಬೈ ಟ್ರಾನ್ಸ್ ಹಾರ್ಬರ್ ಲಿಂಕ್‍ನಿಂದ ಜಿಗಿಯಲು ಪ್ರಯತ್ನಿಸಿದ ಮಹಿಳೆಯನ್ನು ಕ್ಯಾಬ್ ಚಾಲಕ ಮತ್ತು ಪೊಲೀಸ್ ಸಿಬ್ಬಂದಿ ಶುಕ್ರವಾರ ಸಂಜೆ ರಕ್ಷಿಸಿದ್ದಾರೆ. ಈ ದೃಶ್ಯ ಅಲ್ಲಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಚಾಲಕ ಮತ್ತು ಪೊಲೀಸರು ಮಹಿಳೆಯನ್ನು ಸುರಕ್ಷಿತವಾಗಿ ಎಳೆದೊಯ್ಯುತ್ತಿರುವುದು ವಿಡಿಯೊದಲ್ಲಿ ಕಂಡುಬಂದಿದೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ (Viral Video)ಆಗಿದೆ.

ಮಹಿಳೆಯನ್ನು 56 ವರ್ಷದ ರೀಮಾ ಮುಖೇಶ್ ಪಟೇಲ್ ಎಂದು ಗುರುತಿಸಲಾಗಿದ್ದು, ಮುಂಬೈನ ಈಶಾನ್ಯ ಉಪನಗರವಾದ ಮುಲುಂಡ್ ನಿವಾಸಿ ಎಂಬುದಾಗಿ ತಿಳಿದುಬಂದಿದೆ. ವಿಡಿಯೊದಲ್ಲಿ, ಆಕೆ ಅಟಲ್ ಸೇತುವಿನ ಸುರಕ್ಷತಾ ತಡೆಗೋಡೆಯ ಮೇಲೆ ಕುಳಿತಿದ್ದಳು. ನಂತರ ಅವಳು ನದಿ ಹಾರಲು ಪ್ರಯತ್ನಿಸುತ್ತಾಳೆ. ಆಗ ಆಕೆಯ ಕಾರಿನ ಡ್ರೈವರ್ ಸಮಯಕ್ಕೆ ಸರಿಯಾಗಿ ಅವಳ ಕೈ ಹಿಡಿದುಕೊಂಡಿದ್ದಾನೆ. ನಂತರ ಗಸ್ತು ವಾಹನವು ಸ್ಥಳಕ್ಕೆ ಸರಿಯಾಗಿ ಬಂದು ಡ್ರೈವರ್‌ಗೆ ಅವಳನ್ನು ಹಿಡಿದು ಮೇಲೆಳೆಯಲು ಸಹಾಯ ಮಾಡಿದ್ದಾರೆ. ಒಂದು ನಿಮಿಷಕ್ಕೂ ಹೆಚ್ಚು ಕಾಲ ಡ್ರೈವರ್ ಹಾಗೂ ಪೊಲೀಸರು ಸಾಹಸ ಮಾಡಿ ಆಕೆಯನ್ನು ಮೇಲಕ್ಕೆ ಎಳೆದು ರಕ್ಷಿಸಿದ್ದಾರೆ.

“ಎಂಟಿಎಚ್ಎಲ್ ಅಟಲ್ ಸೇತುವಿನಲ್ಲಿ ಆತ್ಮಹತ್ಯೆಗೆ ಯತ್ನಿಸುತ್ತಿದ್ದ ಮಹಿಳೆಯನ್ನು ರಕ್ಷಿಸಲು ಕರ್ತವ್ಯದಲ್ಲಿದ್ದ ಅಧಿಕಾರಿಗಳಾದ ಲಲಿತ್ ಶಿರ್ಸಾತ್, ಕಿರಣ್ ಮಹ್ತ್ರೆ, ಯಶ್ ಸೋನಾವಾನೆ ಮತ್ತು ಮಯೂರ್ ಪಾಟೀಲ್ ಅವರು ತಕ್ಷಣ ಪ್ರತಿಕ್ರಿಯಿಸಿ ಹಳಿಯ ಮೇಲೆ ಹಾರಿ ಆಕೆಯನ್ನು ರಕ್ಷಿಸಿದ್ದಾರೆ” ಎಂದು ಮುಂಬೈ ಪೊಲೀಸ್ ಆಯುಕ್ತ ವಿವೇಕ್ ಫನ್ಸಾಲ್ಕರ್ ಪೋಸ್ಟ್ ಮಾಡಿದ್ದಾರೆ. ಅಲ್ಲದೇ ಜೀವನವು ನಮಗೆ ಸಿಕ್ಕ ಉಡುಗೊರೆ ಅದನ್ನು ಗೌರವಿಸಿ ಮತ್ತು ಯಾವುದೇ ಸಂದಿಗ್ಧ ಪರಿಸ್ಥಿತಿಯಲ್ಲೂ ಅದನ್ನು ಕಳೆದುಕೊಳ್ಳಲು ಪ್ರಯತ್ನಿಸಬೇಡಿ. ನಿಮ್ಮ ಪ್ರೀತಿಪಾತ್ರರಿಂದ ದೂರವಾಗಬೇಡಿ ಎಂದು ಮುಂಬೈ ಪೊಲೀಸ್ ಆಯುಕ್ತರು ಪೋಸ್ಟ್ ಮಾಡಿ ನಾಗರಿಕರಲ್ಲಿ ವಿನಂತಿ ಮಾಡಿದ್ದಾರೆ.

ಇದನ್ನೂ ಓದಿ: ಅಪಹರಣಕಾರನಿಂದ ಪುಟ್ಟ ಮಗುವನ್ನು ರಕ್ಷಿಸಿದ ಸಾಕು ನಾಯಿ! ನಾಯಿಯ ಸಾಹಸದ ವಿಡಿಯೊ ನೋಡಿ

ಕಳೆದ ತಿಂಗಳು 38 ವರ್ಷದ ವ್ಯಕ್ತಿಯೊಬ್ಬರು ಸೇತುವೆಯಿಂದ ಜಿಗಿದು ಸಾವನ್ನಪ್ಪಿದ್ದರು. ಡೊಂಬಿವ್ಲಿ ನಿವಾಸಿಯಾಗಿದ್ದ ಎಂಜಿನಿಯರ್ ಕೆ.ಶ್ರೀನಿವಾಸ್ ಅವರು ಮುಂಬೈ ಟ್ರಾನ್ಸ್ ಹಾರ್ಬರ್ ಲಿಂಕ್‍ನ ನವಾ ಶೇವಾ ಎಂಡ್‍ನಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ತಮ್ಮ ಕಾರನ್ನು ಪಾರ್ಕಿಂಗ್ ಮಾಡುತ್ತಿರುವುದನ್ನು ಸೇತುವೆಯ ಸಿಸಿಟಿವಿ ದೃಶ್ಯಾವಳಿಗಳು ತೋರಿಸಿವೆ ಎನ್ನಲಾಗಿದೆ.

Continue Reading

ಕ್ರೀಡೆ

Viral News: ಮಾವ ಎಮ್ಮೆ ಬದಲು ಆ ಗಿಫ್ಟ್​ ಕೊಡುತ್ತಿದ್ದರೆ ಸಂತಸವಾಗುತ್ತಿತ್ತು ಎಂದ ಒಲಿಂಪಿಕ್ಸ್ ಚಿನ್ನ​ ವಿಜೇತ ಅರ್ಷದ್​ ನದೀಮ್

Viral News: ಯುನೈಟೈಡ್ ನೇಷನ್ ಪಟ್ಟಿಯಲ್ಲಿ ಮೋಸ್ಟ್ ವಾಟೆಂಡ್​ ಉಗ್ರ ಎಂದು ಗುರುತಿಸಲ್ಪಟ್ಟ ಲಷ್ಕರ್ ಇ ತೊಯ್ಬಾದ ಹರೀಸ್ ಧಾರ್ ಜತೆ ಅರ್ಷದ್ ನದೀಮ್ ಕಾಣಿಸಿಕೊಂಡದ್ದು ಜಾಗತಿಕ ಮಟ್ಟದಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು

VISTARANEWS.COM


on

Viral News
Koo

ಕರಾಚಿ: ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ದಾಖಲೆಯೊಂದಿಗೆ ಚಿನ್ನದ ಪದಕ ಗೆದ್ದ ಪಾಕಿಸ್ತಾನದ ಜಾವೆಲಿನ್​ ಎಸೆತಗಾರ ಅರ್ಷದ್​ ನದೀಮ್​ಗೆ(Arshad Nadeem) ಅವರ ಮಾವ(ಪತ್ನಿಯ ತಂದೆ) ಉಡುಗೊರೆಯಾಗಿ ಎಮ್ಮೆಯೊಂದನ್ನು ನೀಡಿದ್ದರು. ಇದೀಗ ಮಾವ ನೀಡಿದ ಈ ಉಡುಗೊರೆಯ ಬಗ್ಗೆ ಅರ್ಷದ್ ಹಾಸ್ಯ ಚಟಾಕಿ ಹಾರಿಸಿದ್ದಾರೆ. ಈ ವಿಡಿಯೊ ವೈರಲ್(Viral News) ಆಗಿದೆ.

ಪಾಕಿಸ್ತಾನಿ ಮಾಧ್ಯಮ ಸಂದರ್ಶನದಲ್ಲಿ ಪಾಲ್ಗೊಂಡಿದ್ದ ವೇಳೆ ನದೀಮ್​ಗೆ ಸಂದರ್ಶಕ, ಮಾವ ಎಮ್ಮೆಯನ್ನು ಉಡುಗೊರೆಯಾಗಿ ನೀಡಿದ್ದ ಬಗ್ಗೆ ಪ್ರಶ್ನೆಯೊಂದನ್ನು ಕೇಳಿದ್ದಾರೆ. ಈ ವೇಳೆ ನಗುತ್ತಲೇ ಉತ್ತರಿಸಿದ ನದೀಮ್​ ಮಾವ ಎಮ್ಮೆಯನ್ನು ನೀಡುವ ಬದಲು 6 ರಿಂದ 6 ಎಕ್ರೆ ಜಮೀನ್​ ನೀಡುತ್ತಿದ್ದರೆ ಉತ್ತಮವಾಗಿರುತ್ತಿತ್ತು. ನನ್ನ ಮಾವ ತುಂಬಾ ಶ್ರೀಮಂತ ಹಾಗಾಗಿ ಎಮ್ಮೆ ನೀಡಿದ್ದಾರೆ ಎಂದು ಹೇಳಿ ಹಾಸ್ಯ ಚಟಾಕಿ ಹಾರಿಸಿದ್ದಾರೆ. ನದೀಮ್​ ಪ್ರತಿಕ್ರಿಯೆ ಕೇಳಿ ಸಂದರ್ಶಕ ಕೂಡ ಜೋರಾಗಿ ನಕ್ಕಿದ್ದಾನೆ. ನದೀಮ್​ ಮಾವನ ಬಗ್ಗೆ ಹಾಸ್ಯ ಮಾಡುವ ವೇಳೆ ಪತ್ನಿಯೂ ಜತೆಗಿದ್ದರು.

ಒಲಿಂಪಿಕ್ಸ್​ ಸಾಧನೆಗಾಗಿ ಅರ್ಷದ್​ಗೆ ಅವರ ಪತ್ನಿಯ ತಂದೆ(ಮಾವ) ಮಹಮ್ಮದ್​ ನವಾಜ್​ ಅವರು ಎಮ್ಮೆಯನ್ನು ಅಳಿಯನಿಗೆ ಉಡುಗೊರೆಯಾಗಿ ನೀಡಿದ್ದರು. ಈ ಬಗ್ಗೆ ಮಾತನಾಡಿದ್ದ ಮಹಮ್ಮದ್​ ನವಾಜ್​, “ನಮ್ಮ ಗ್ರಾಮದಲ್ಲಿ ಎಮ್ಮೆಯನ್ನು ಉಡುಗೊರೆಯಾಗಿ ನೀಡುವುದು ಶ್ರೇಷ್ಠ ಗೌರವವಾಗಿದೆ” ಎಂದು ಹೇಳಿದ್ದರು.

ಚಿನ್ನ ಗೆದ್ದ ನದೀಮ್​ಗೆ ಪಾಕಿಸ್ತಾನ ಪ್ರಾಂತ್ಯದ ಪಂಜಾಬ್ ಮುಖ್ಯಮಂತ್ರಿ ಮರ್ಯಮ್ ನವಾಜ್ 10 ಕೋಟಿ ರೂ., ಸಿಂಧ್ ಸರ್ಕಾರ ಐದು ಕೋಟಿ ರೂ., ವಿಶ್ವ ಅಥ್ಲೀಟ್ ಫೆಡರೇಶನ್ ಒಂದು ಕೋಟಿ 40 ಲಕ್ಷ ಬಹುಮಾನ ಘೋಷಿಸಿದ್ದು, ಸಿಂಧ್ ಗವರ್ನರ್ ಕಮ್ರಾನ್ ತೆಸ್ಸೋರಿ, ಕ್ರಿಕೆಟಿಗ ಅಹ್ಮದ್ ಶೆಹಜಾದ್ ಮತ್ತು ಓರ್ಷ ಗಾಯಕ 30 ಲಕ್ಷಗಳನ್ನು ನೀಡಿದ್ದಾರೆ.

ಇದನ್ನೂ ಓದಿ Arshad Nadeem : ಲಷ್ಕರ್ ಉಗ್ರನ ಜತೆ ಕಾಣಿಸಿಕೊಂಡ ಪಾಕಿಸ್ತಾನದ ಒಲಿಂಪಿಕ್ಸ್​ ಚಿನ್ನದ ಪದಕ ವಿಜೇತ ಅರ್ಷದ್​ ನದೀಮ್​!

ಪಾಕಿಸ್ತಾನದ ಪಂಜಾಬ್‌ನಲ್ಲಿರುವ ಮಿಯಾನ್‌ ಚಾನುವಿನಲ್ಲಿನ ಬಡ ಪಂಜಾಬಿ ಕುಟುಂಬದಲ್ಲಿ ಜನಿಸಿದ ಅರ್ಷದ್‌ ನದೀಮ್‌, ಇಂದು ಜಾಗತಿಕ ಮಟ್ಟದಲ್ಲಿ ಸಾಧನೆ ಮಾಡಬೇಕಾದರೆ ಅವರು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ತಂದೆ ಮುಹಮ್ಮದ್‌ ಅಶ್ರಫ್‌ ಗಾರೆ ಮೇಸ್ತ್ರಿ ಆಗಿದ್ದ ಕಾರಣ, ಕುಟುಂಬಕ್ಕೆ ನೆರವಾಗುವ ನಿಟ್ಟಿನಲ್ಲಿ ಅರ್ಷದ್‌ ನದೀಮ್‌ ಕೂಡ ತಂದೆಯ ಜತೆ ಗಾರೆ ಕೆಲಸವನ್ನು ಮಾಡಿದ್ದರು. ಇದರೆ ಜತೆಗೆ ಕ್ರೀಡೆಯಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು.

ಯುನೈಟೈಡ್ ನೇಷನ್ ಪಟ್ಟಿಯಲ್ಲಿ ಮೋಸ್ಟ್ ವಾಟೆಂಡ್​ ಉಗ್ರ ಎಂದು ಗುರುತಿಸಲ್ಪಟ್ಟ ಲಷ್ಕರ್ ಇ ತೊಯ್ಬಾದ ಹರೀಸ್ ಧಾರ್ ಜತೆ ಅರ್ಷದ್ ನದೀಮ್ ಕಾಣಿಸಿಕೊಂಡದ್ದು ಜಾಗತಿಕ ಮಟ್ಟದಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು. ಪ್ಯಾರಿಸ್​​ನಿಂದ ಲಾಹೋರ್ ವಿಮಾನ ನಿಲ್ದಾಣಕ್ಕೆ ಬಂದಿಳಿದ ನದೀಮ್ ಅವರಿಗೆ ಭವ್ಯ ಸ್ವಾಗತ ದೊರಕಿತ್ತು. ಅಲ್ಲಿನ ಸರ್ಕಾರವು ಅವರಿಗೆ ವಿಜಯ ಮೆರವಣಿಗೆಯನ್ನು ಸಹ ಆಯೋಜಿಸಿತ್ತು. ಇದಲ್ಲದೆ, ನದೀಮ್ ಅವರು ಪಾಕಿಸ್ತಾನದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾಯನ್ನೂ ಪಡೆದಿದ್ದರು. ಇದರ ಬೆನ್ನಲ್ಲೇ ಲಷ್ಕರ್​ ನಾಯಕನೊಂದಿಗೆ ಕಾಣಿಸಿಕೊಂಡಿರುವುದು ವಿವಾದಕ್ಕೆ ಕಾರಣವಾಗಿತ್ತು.

Continue Reading
Advertisement
Saif Ali Khan introduced as kushti expert Bhaira
ಕಾಲಿವುಡ್2 mins ago

Devara Movie: ʻಭೈರʼ ಪಾತ್ರದಲ್ಲಿ ಅಬ್ಬರಿಸಿದ ಸೈಫ್ ಅಲಿ ಖಾನ್ ; ʻದೇವರʼ ಹೊಸ ಟೀಸರ್‌ ಔಟ್‌!

Kolkata Doctor Murder Case
ದೇಶ3 mins ago

Kolkata Doctor Murder Case: ಕರ್ತವ್ಯಕ್ಕೆ ಹಾಜರಾಗಲು ಪ್ರತಿಭಟನಾನಿರತ ವೈದ್ಯರಲ್ಲಿ ಕೇಂದ್ರದ ಮನವಿ

CM Siddaramaiah Ashok
ಪ್ರಮುಖ ಸುದ್ದಿ15 mins ago

CM Siddaramaiah: ರಾಜ್ಯಪಾಲರ ಆದೇಶ ಬಿಜೆಪಿ ಪಾದಯಾತ್ರೆಗೆ ದೊರೆತ ಯಶಸ್ಸು, ಮುಡಾ ತನಿಖೆ ಸಿಬಿಐಗೆ ಕೊಡಲಿ: ಆರ್‌. ಅಶೋಕ್

sexual abuse
ಕ್ರೈಂ20 mins ago

sexual abuse: ಪ್ರತಿ ಗಂಟೆಗೆ ನಡೆಯುವ 4 ಅತ್ಯಾಚಾರದಲ್ಲಿ 3 ಪ್ರಕರಣಗಳ ಆರೋಪಿಗಳು ಪರಿಚಿತರೇ! ಆಘಾತಕಾರಿ ಅಂಕಿಅಂಶ

Bajrang Punia
ಕ್ರೀಡೆ37 mins ago

Bajrang Punia: ತ್ರಿವರ್ಣ ಧ್ವಜದ ಪೋಸ್ಟರ್​ ಮೇಲೆ ಕಾಲಿಟ್ಟ ಬಜರಂಗ್ ಪೂನಿಯಾ; ವಿಡಿಯೊ ವೈರಲ್

DK Shivakumar and CM Siddaramaiah
ಪ್ರಮುಖ ಸುದ್ದಿ38 mins ago

CM Siddaramaiah: ಸಿದ್ದರಾಮಯ್ಯ ಸಿಎಂ ಆಗಿ ಮುಂದುವರೀತಾರಾ? ಡಿಕೆ ಶಿವಕುಮಾರ್ ಏನಂದ್ರು?

cm siddaramaiah 1
ಪ್ರಮುಖ ಸುದ್ದಿ42 mins ago

CM Siddaramaiah: ಸರ್ಕಾರಿ ನೌಕರರ ಹಿತಾಸಕ್ತಿ ಕಾಯಲು ನಾನು ಸದಾ ಸಿದ್ಧ: ಸಿಎಂ ಸಿದ್ದರಾಮಯ್ಯ

Bengaluru Power Cut
ಬೆಂಗಳೂರು46 mins ago

Bengaluru Power Cut: ಗಮನಿಸಿ… ಬೆಂಗಳೂರಿನ ಈ ಪ್ರದೇಶಗಳಲ್ಲಿ ಆ.18ರಂದು ಕರೆಂಟ್‌ ಇರಲ್ಲ

Viral Video
Latest48 mins ago

Viral Video: 12 ವರ್ಷದ ಬಾಲಕಿಯನ್ನು ಬಲವಂತವಾಗಿ ಮದುವೆಯಾದ 62ರ ಮುದುಕ! ಹೃದಯ ಕರಗಿಸುತ್ತದೆ ಈ ವಿಡಿಯೊ

Amrutha Prem gave sweet news on Varamahalakshmi festival!
ಸ್ಯಾಂಡಲ್ ವುಡ್55 mins ago

Amrutha Prem: ವರಮಹಾಲಕ್ಷ್ಮೀ ಹಬ್ಬದಂದೇ ಸಿಹಿ ಸುದ್ದಿ ಕೊಟ್ಟ ಅಮೃತಾ ಪ್ರೇಮ್!

Sharmitha Gowda in bikini
ಕಿರುತೆರೆ11 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ11 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ9 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

karnataka Weather Forecast
ಮಳೆ1 week ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ1 week ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ1 week ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು2 weeks ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 weeks ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ2 weeks ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ2 weeks ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ2 weeks ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ2 weeks ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ2 weeks ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

ಟ್ರೆಂಡಿಂಗ್‌