New year 2023 | ನೂತನ ವರ್ಷದ ಆರಂಭದಲ್ಲೇ ನಡೆಯಲಿದೆ ವಿವಿಧ ಹುದ್ದೆಗಳಿಗೆ ನೇಮಕಾತಿ ಪರೀಕ್ಷೆ - Vistara News

New year 2023

New year 2023 | ನೂತನ ವರ್ಷದ ಆರಂಭದಲ್ಲೇ ನಡೆಯಲಿದೆ ವಿವಿಧ ಹುದ್ದೆಗಳಿಗೆ ನೇಮಕಾತಿ ಪರೀಕ್ಷೆ

ರಾಜ್ಯ ಸರ್ಕಾರಿ ಹುದ್ದೆಯ ನಿರೀಕ್ಷೆಯಲ್ಲಿರುವವರಿಗೆ 2023ರ ಆರಂಭದಲ್ಲಿಯೇ ( New year 2023) ವಿವಿಧ ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಾಗುತ್ತದೆ. ಯಾವ ಪರೀಕ್ಷೆ ಎಂದು ನಡೆಯಲಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ.

VISTARANEWS.COM


on

New year 2023 competitive exams calendar
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಹೊಸ ವರ್ಷ 2023 (New year 2023) ಇನ್ನೇನು ಬರಲಿದೆ. ರಾಜ್ಯ ಸರ್ಕಾರಿ ನೌಕರಿಯ ನಿರೀಕ್ಷೆಯಲ್ಲಿರುವವರಿಗೆ ಈ ನೂತನ ವರ್ಷ ಬಹಳ ಮಹತ್ವದ್ದಾಗಿರಲಿದೆ. ವರ್ಷದ ಆರಂಭದಲ್ಲಿಯೇ ವಿವಿಧ ಹುದ್ದೆಗಳ ನೇಮಕಕ್ಕೆ ಸಂಬಂಧಿಸಿದಂತೆ ಒಂದರ ಹಿಂದೊಂದರಂತೆ ಸ್ಪರ್ಧಾತ್ಮಕ ಪರೀಕ್ಷೆಗಳು ನಡೆಯಲಿವೆ.

ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ), ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಮತ್ತು ರಾಜ್ಯ ಪೊಲೀಸ್‌ ಇಲಾಖೆ ಜನವರಿ ಮತ್ತು ಫೆಬ್ರವರಿ ತಿಂಗಳಿನಲ್ಲಿಯೇ ಹಲವು ಪರೀಕ್ಷೆಗಳನ್ನು ನಡೆಸಲಿವೆ. ಇದಲ್ಲದೆ, ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) ಮತ್ತು ಕೇಂದ್ರ ಸಿಬ್ಬಂದಿ ನೇಮಕಾತಿ ಆಯೋಗ (ಎಸ್‌ಎಸ್‌ಸಿ) ಕೂಡ ನಿರಂತರವಾಗಿ ಪರೀಕ್ಷೆ ನಡೆಸಲಿವೆ.

ಯಾವೆಲ್ಲಾ ಪರೀಕ್ಷೆ ನಡೆಯಲಿದೆ?

ಕೆಪಿಎಸ್‌ಸಿ: ಕರ್ನಾಟಕ ಲೋಕ ಸೇವಾ ಆಯೋಗವು ಗ್ರೂಪ್‌ ಎ, ಬಿ ಮತ್ತು ಸಿ ವೃಂದದ ಹುದ್ದೆಗಳ ನೇಮಕಕ್ಕೆ ಸಂಬಂಧಿಸಿದಂತೆ ಹಲವಾರು ಪರೀಕ್ಷೆ ನಡೆಸಲಿದ್ದು, ಈಗಾಗಲೇ ತಾತ್ಕಾಲಿಕ ವೇಳಾಪಟ್ಟಿ ಪ್ರಕಟಿಸಿದೆ.

KPSC Recruitment 2023

ಪೌರಾಡಳಿತ ನಿರ್ದೇಶನಾಲಯದ ನಗರ ಸ್ಥಳೀಯ ಸಂಸ್ಥೆಗಳಲ್ಲಿನ ವಿವಿಧ ಗ್ರೂಪ್‌ “ಸಿ” ಹುದ್ದೆಗಳಿಗೆ ಮತ್ತು ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆಯಲ್ಲಿನ ಸಹಾಯಕ ನಗರ ಯೋಜಕರ ಹುದ್ದೆಗಳಿಗೆ ಜನವರಿ 21 ಮತ್ತು 22 ರಂದು ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಾಗುತ್ತದೆ.

ವಿವಿಧ ಹುದ್ದೆಗಳ ನೇಮಕಕ್ಕೆ ಸಂಬಂಧಿಸಿದಂತೆ ಫೆಬ್ರವರಿ 25 ರಂದು ಕಡ್ಡಾಯ ಕನ್ನಡ ಭಾಷಾ ಪರೀಕ್ಷೆ ನಡೆಸಲಾಗುತ್ತದೆ. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಲ್ಲಿನ ಸಹಾಯಕ ಅಭಿಯಂತರರ ಹುದ್ದೆಗಳಿಗೆ ಫೆಬ್ರವರಿ 26 ರಂದು, ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯದಲ್ಲಿನ ಸಹಾಯಕ ಸಾಂಖ್ಯಿಕ ಅಧಿಕಾರಿ ಮತ್ತು ಸಂಖ್ಯಿಕ ನಿರೀಕ್ಷಕರ ಹುದ್ದೆಗಳಿಗೆ ಹಾಗೂ ಕಾರ್ಮಿಕ ಇಲಾಖೆಯಲ್ಲಿನ ಕಾರ್ಮಿಕ ನಿರೀಕ್ಷಕರ ಹುದ್ದೆಗಳಿಗೆ ಮಾರ್ಚ್‌ 18 ಮತ್ತು 19 ರಂದು ಪರೀಕ್ಷೆ ನಡೆಯಲಿದೆ. ಈ ಹುದ್ದೆಗಳಿಗೆ ಏಪ್ರಿಲ್‌ 2 ರಂದು ಕಡ್ಡಾಯ ಕನ್ನಡ ಭಾಷಾ ಪರೀಕ್ಷೆ ನಡೆಸಲಾಗುತ್ತದೆ.

ಜಲ ಸಂಪನ್ಮೂಲ ಇಲಾಖೆಯಲ್ಲಿನ ಕಿರಿಯ ಎಂಜಿನಿಯರ್‌ (ಸಿವಿಲ್‌ ಮತ್ತು ಮೆಕ್ಯಾನಿಕಲ್‌) ಹಾಗೂ ರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯದಲ್ಲಿನ ಡಾಟಾ ಎಂಟ್ರಿ ಆಪರೇಟರ್‌ ಹುದ್ದೆಗಳಿಗೆ ಏಪ್ರಿಲ್‌ 29 ಮತ್ತು 30 ರಂದು ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಾಗುತ್ತದೆ.

ಕೆಪಿಎಸ್‌ಸಿ ನಡೆಸುವ ಪರೀಕ್ಷೆಗಳ ತಾತ್ಕಾಲಿಕ ವೇಳಾಪಟ್ಟಿ ನೋಡಲು ಇಲ್ಲಿ ಕ್ಲಿಕ್‌ ಮಾಡಿ.

ಕೆಇಎ: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ರಾಜ್ಯ ಬೀಜ ನಿಗಮ ನಿಯಮಿತ (KSSCL)ದಲ್ಲಿನ ಸಹಾಯಕ ವ್ಯವಸ್ಥಾಪಕರ ಹಾಗೂ ಹಿರಿಯ/ ಕಿರಿಯ/ ಬೀಜ ಸಹಾಯಕರು ಹುದ್ದೆಗಳ ನೇಮಕಕ್ಕೆ ಸಂಬಂಧಿಸಿದಂತೆ ಜನವರಿ 29, ಫೆಬ್ರವರಿ2, 3, 4 ಮತ್ತು 12 ರಂದು ಪರೀಕ್ಷೆ ನಡೆಸಲಿದೆ.

New year 2023

ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯಲ್ಲಿನ ಪಶು ವೈದ್ಯಕೀಯ ಪರಿವೀಕ್ಷಕರ ಹುದ್ದೆಗಳಿಗೆ ಜನವರಿ 29 ಮತ್ತು ಫೆಬ್ರವರಿ 12 ರಂದು ನಡೆಸಲಾಗುತ್ತದೆ. ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಯಮಿತದಲ್ಲಿ ಖಾಲಿ ಇರುವ ಅಸಿಸ್ಟೆಂಟ್‌ ಎಂಜಿನಿಯರ್‌, ಜೂನಿಯರ್‌ ಎಂಜಿನಿಯರ್‌ ಎಸ್‌ಡಿಎ ಮತ್ತು ಎಫ್‌ಡಿಎ ಹುದ್ದೆಗಳಿಗೆ ಜನವರಿ 29 ಫೆಬ್ರವರಿ 5, 6,7 ಹಾಗೂ 12 ರಂದು ಲಿಖಿತ ಪರೀಕ್ಷೆ ನಡೆಸಲಾಗುತ್ತದೆ.

ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯಲ್ಲಿನ ದ್ವಿತೀಯ ದರ್ಜೆ ಸಹಾಯಕರ (SDA) ಹುದ್ದೆಗಳ ನೇಮಕಕ್ಕೆ ಜನವರಿ30 ಹಾಗೂ ಫೆಬ್ರವರಿ1 ಮತ್ತು 12 ರಂದು ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಾಗುತ್ತದೆ. ಫೆಬ್ರವರಿ 12 ರಂದು ಬಹುತೇಕವಾಗಿ ಎಲ್ಲ ಹುದ್ದೆಗಳಿಗೂ ಕಡ್ಡಾಯ ಕನ್ನಡ ಭಾಷಾ ಪರೀಕ್ಷೆ ನಡೆಸಲಾಗುತ್ತದೆ.

ಕೆಇಎ ನಡೆಸುವ ಪರೀಕ್ಷೆಗಳ ವೇಳಾಪಟ್ಟಿ ನೋಡಲು ಇಲ್ಲಿ ಕ್ಲಿಕ್‌ ಮಾಡಿ

ಪೊಲೀಸ್‌ ಇಲಾಖೆ : ಕರ್ನಾಟಕ ಪೊಲೀಸ್ ಇಲಾಖೆಯು ಸಶಸ್ತ್ರ ಮೀಸಲು ಪೊಲೀಸ್‌ ಸಬ್‌-ಇನ್ಸ್‌ಪೆಕ್ಟರ್‌ (ಆರ್‌ಎಸ್‌ಐ, ಸಿಎಆರ್‌/ಡಿಎಆರ್‌) (ಪುರುಷ) ಹುದ್ದೆಗಳ ನೇಮಕಕ್ಕೆ ಸಂಬಂಧಿಸಿದಂತೆ (KSP Recruitment 2022) ಜನವರಿ 8 ರಂದು ಲಿಖಿತ ಪರೀಕ್ಷೆ ನಡೆಸಲಿದೆ.

New year 2023

ಈ ಪರೀಕ್ಷೆ ನಡೆದ ನಂತರ ಕೆಎಸ್‌ಐಎಸ್‌ಎಫ್‌ ಸಬ್‌ ಇನ್ಸ್‌ಪೆಕ್ಟರ್‌ 63 ಹುದ್ದೆಗಳ ನೇಮಕಕ್ಕೆ ಸಂಬಂಧಿಸಿದಂತೆ ಲಿಖಿತ ಪರೀಕ್ಷೆ ನಡೆಸಲಾಗುವುದು ಎಂದು ಪೊಲೀಸ್‌ ಮಹಾ ನಿರ್ದೇಶಕ (ಡಿಜಿಪಿ) ಪ್ರವೀಣ್‌ ಸೂದ್‌ ಟ್ವೀಟ್‌ ಮಾಡಿ ತಿಳಿಸಿದ್ದಾರೆ. ಅಕ್ರಮದ ಕಾರಣದಿಂದಾಗಿ ರದ್ದುಗೊಂಡಿರುವ 545 ಪೊಲೀಸ್‌ ಸಬ್‌ಇನ್ಸ್‌ಪೆಕ್ಟರ್‌ ಹುದ್ದೆಗಳ ನೇಮಕಕ್ಕೂ ನಂತರ ಮರು ಲಿಖಿತ ಪರೀಕ್ಷೆ ನಡೆಸಲಾಗುತ್ತದೆ.

ಇದನ್ನೂ ಓದಿ| UGC NET 2023 | ಫೆಬ್ರವರಿ 21 ರಿಂದ ನೆಟ್‌ ಎಕ್ಸಾಮ್‌; ಅರ್ಜಿ ಆಹ್ವಾನಿಸಿದ ಎನ್‌ಟಿಎ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

New year 2023

Bharat Jodo Yatra | ರಾಹುಲ್ ಗಾಂಧಿಯನ್ನು ಹೊಗಳಿದ ರಾಮಮಂದಿರ ಟ್ರಸ್ಟ್​ ಪ್ರಮುಖರು; ಆಶೀರ್ವದಿಸಿ ಪತ್ರ ಬರೆದ ಮುಖ್ಯ ಅರ್ಚಕ

ಉತ್ತರ ಪ್ರದೇಶದಲ್ಲಿ ಭಾರತ್ ಜೋಡೋ ಯಾತ್ರೆ ಮೂರು ದಿನ ಸಂಚರಿಸಲಿದೆ. ಜನವರಿ 6ರಂದು ಹರ್ಯಾಣಕ್ಕೆ ಕಾಲಿಡಲಿದೆ. ಜನವರಿ 20ಕ್ಕೆ ಜಮ್ಮು-ಕಾಶ್ಮೀರಕ್ಕೆ ಪ್ರವೇಶಿಸಿ, ಜನವರಿ 30ರಂದು ಕೊನೆಗೊಳ್ಳಲಿದೆ.

VISTARANEWS.COM


on

Congress Leader Rahul Gandhi to address British Parliament
ರಾಹುಲ್ ಗಾಂಧಿ
Koo

ಅಯೋಧ್ಯೆ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ನಡೆಸುತ್ತಿರುವ ಭಾರತ್ ಜೋಡೋ ಯಾತ್ರೆಯನ್ನು ಅಯೋಧ್ಯಾ ರಾಮಮಂದಿರ ಟ್ರಸ್ಟ್ ನ ಕಾರ್ಯದರ್ಶಿ ಚಂಪತ್ ರಾಯ್ ಶ್ಲಾಘಿಸಿದ್ದಾರೆ. ಇಂಥ ಪಾದಯಾತ್ರೆಗಳನ್ನು ನಡೆಸುವುದರಲ್ಲಿ ತಪ್ಪಿಲ್ಲ ಎಂದಿದ್ದಾರೆ.

ಭಾರತ್ ಜೋಡೋ ಯಾತ್ರೆ ಮಂಗಳವಾರ ಉತ್ತರ ಪ್ರದೇಶವನ್ನು ಪ್ರವೇಶಿಸಿದೆ. ಸಹಚರರೊಂದಿಗೆ ಉತ್ತರ ಪ್ರದೇಶಕ್ಕೆ ಕಾಲಿಟ್ಟ ರಾಹುಲ್ ಗಾಂಧಿಯವರಿಗೆ ಅಯೋಧ್ಯಾ ರಾಮ ಜನ್ಮಭೂಮಿ ದೇಗುಲದ ಮುಖ್ಯ ಅರ್ಚಕ ಸತ್ಯೇಂದ್ರ ದಾಸ್ ಅವರು ಆಶೀರ್ವಾದಪೂರ್ವಕ ಪತ್ರವನ್ನು ಬರೆದು ತಲುಪಿಸಿದ್ದಾರೆ. ಅದರ ಬೆನ್ನಲ್ಲೇ ಚಂಪತ್ ರಾಯ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.

‘ಇಡೀ ದೇಶವನ್ನು ಕಾಲ್ನಡಿಗೆಯಲ್ಲಿ ಸುತ್ತುತ್ತಿರುವ ರಾಹುಲ್ ಗಾಂಧಿ ಅವರನ್ನು ನಾನು ಶ್ಲಾಘಿಸುತ್ತೇನೆ. ನಾನೊಬ್ಬ ಆರ್ ಎಸ್ ಎಸ್ ಕಾರ್ಯಕರ್ತ. ಆರ್ ಎಸ್ ಎಸ್ ಯಾವತ್ತೂ ಭಾರತ್ ಜೋಡೋ ಯಾತ್ರೆಯನ್ನು ವಿರೋಧಿಸಿಲ್ಲ. ರಾಹುಲ್ ಗಾಂಧಿ ನಡೆಸುತ್ತಿರುವ ಪಾದಯಾತ್ರೆಯಲ್ಲಿ ನನಗೆ ತಪ್ಪೇನೂ ಕಾಣುತ್ತಿಲ್ಲ. ಇಷ್ಟು ಕೆಟ್ಟ ಚಳಿ ಮಧ್ಯೆ ರಾಹುಲ್ ಗಾಂಧಿ ಯಾತ್ರೆ ನಡೆಸುತ್ತಿದ್ದಾರೆ. ಅವರಂತೆ ಪ್ರತಿಯೊಬ್ಬರೂ ದೇಶಕ್ಕಾಗಿ ಯಾತ್ರೆ ಮಾಡಬೇಕು ಎಂದು ಹೇಳಿದ್ದಾರೆ.

ಹಾಗೇ, ರಾಮಮಂದಿರ ಟ್ರಸ್ಟ್ ನ ಹಿರಿಯ ಟ್ರಸ್ಟಿ ಗೋವಿಂದ ದೇವ ಗಿರಿ ಅವರೂ ರಾಹುಲ್ ಗಾಂಧಿಯವರನ್ನು ಹರಿಸಿದ್ದಾರೆ. ಈ ದೇಶ ಒಗ್ಗಟ್ಟಾಗಿರಬೇಕು, ಸಾಮರಸ್ಯದಿಂದ ಇರಬೇಕು ಮತ್ತು ಇನ್ನಷ್ಟು ಬಲಶಾಲಿಯಾಗಬೇಕು ಎಂದು ಯಾತ್ರೆ ಮಾಡುತ್ತಿರುವ ರಾಹುಲ್ ಗಾಂಧಿಗೆ ಶ್ರೀರಾಮ ಆಶೀರ್ವಾದಿಸಲಿ ಎಂದಿದ್ದಾರೆ. ಹಾಗೇ, ಭಾರತ್ ಜೋಡೋ ಎಂಬ ಹೆಸರೇ ಚೆನ್ನಾಗಿದೆ. ಭಾರತ ಒಂದಾಗಬೇಕು ಎಂದೂ ಹೇಳಿದ್ದಾರೆ.

ಮುಖ್ಯ ಅರ್ಚಕ ಬರೆದ ಪತ್ರದಲ್ಲಿ ಏನಿದೆ?
ಮಂಗಳವಾರ ಭಾರತ್​ ಜೋಡೋ ಯಾತ್ರೆ ಉತ್ತರ ಪ್ರದೇಶಕ್ಕೆ ಕಾಲಿಟ್ಟ ಬೆನ್ನಲ್ಲೇ ಅಯೋಧ್ಯಾ ರಾಮ ದೇಗುಲದ ಮುಖ್ಯ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್​ ಅವರಿಗೆ ಆಶೀರ್ವಾದ ಪೂರ್ವಕ ಪತ್ರ ಬರೆದಿದ್ದರು. ‘ನೀವು ಸರ್ವಜನ ಹಿತ ಮತ್ತು ಸುಖಕ್ಕಾಗಿ ಒಂದೊಳ್ಳೆ ಕೆಲಸವನ್ನು ಮಾಡುತ್ತಿದ್ದೀರಿ. ನಿಮಗೆ ಶ್ರೀರಾಮ ಒಳ್ಳೆಯದು ಮಾಡಲಿ’ ಎಂದು ರಾಹುಲ್​ ಗಾಂಧಿಯವರಿಗೆ ಹಾರೈಸಿದ್ದರು. ‘ಯಾತ್ರೆಗೆ ಶುಭವಾಗಲಿ, ನಿಮ್ಮ ಆರೋಗ್ಯ ಚೆನ್ನಾಗಿರಲಿ’ ಎಂದೂ ಹೇಳಿದ್ದರು.

ಇದನ್ನೂ ಓದಿ: ಭಾರತ್​ ಜೋಡೋ ಯಾತ್ರೆ ದೆಹಲಿಗೆ ಕಾಲಿಟ್ಟಾಗಿನಿಂದಲೂ ರಾಹುಲ್​ ಗಾಂಧಿ ಭದ್ರತೆಯಲ್ಲಿ ವೈಫಲ್ಯ; ಅಮಿತ್​ ಶಾಗೆ ಕಾಂಗ್ರೆಸ್​ ಪತ್ರ

Continue Reading

New year 2023

BMTC Income | ಆರ್ಥಿಕವಾಗಿ ಕುಗ್ಗಿದ್ದ ಬಿಎಂಟಿಸಿಗೆ ವರ್ಷಾರಂಭದಲ್ಲಿ ಹರ್ಷ!

ಹೊಸ ವರ್ಷ ಹಿನ್ನೆಲೆಯಲ್ಲಿ ಹೆಚ್ಚುವರಿ ಬಸ್‌ಗಳ ಕಾರ್ಯಾಚರಣೆ ನಡೆಸಿದ್ದ ಬಿಎಂಟಿಸಿಗೆ ಮೊದಲ ದಿನವೇ ಭರ್ಜರಿ (BMTC Income) ಆದಾಯ ಗಳಿಸಿದೆ. ನಷ್ಟದ ಸುಳಿಯಲಿ ಸಿಲುಕಿ ನರಳಾಡುತ್ತಿದ್ದ ಬಿಎಂಟಿಸಿಗೆ ಕೊಂಚ ಹರ್ಷ ತಂದಿದೆ.

VISTARANEWS.COM


on

By

Demand for implementation of 6th Pay Commission Transport employees call for protest from March 1
ಸಾಂದರ್ಭಿಕ ಚಿತ್ರ
Koo

ಬೆಂಗಳೂರು: ಆರ್ಥಿಕ ಸಂಕಷ್ಟದಿಂದ ಕಂಗೆಟ್ಟಿದ್ದ ಬಿಎಂಟಿಸಿ ನಿಗಮಕ್ಕೆ ಈ ಹೊಸ ವರ್ಷ ಕೊಂಚ ಹರ್ಷ ತಂದಿದೆ. ವರ್ಷದ ಮೊದಲ ದಿನ ಬಿಎಂಟಿಸಿಗೆ ಬಂಪರ್ ಆದಾಯ (BMTC Income) ಗಳಿಸಿದೆ. ಹೊಸ ವರ್ಷಕ್ಕೆಂದು ಸುಮಾರು 87 ಹೆಚ್ಚುವರಿ ಬಸ್‌ಗಳನ್ನು ಕಾರ್ಯಾಚರಣೆ ನಡೆಸಿತ್ತು. ಮೊದಲೇ ಆರ್ಥಿಕವಾಗಿ ಕುಗ್ಗಿದ್ದ ಬಿಎಂಟಿಸಿಗೆ ವರ್ಷದ ಮೊದಲ ದಿನವೇ ಬಂದ ಆದಾಯದ ಕಿಕ್ ಹೆಚ್ಚಿಸಿದೆ.

ಒಂದೇ ದಿನ ಬಿಎಂಟಿಸಿ ಹೆಚ್ಚುವರಿ ಬಸ್ ಕಾರ್ಯಾಚರಣೆಯಿಂದ ₹1,99,983 ಹೆಚ್ಚಿನ ಆದಾಯ ಬಂದಿದೆ. ಸಾರ್ವಜನಿಕರ ಅನುಕೂಲಕ್ಕಾಗಿ ಡಿ.31 ಹಾಗೂ ಜ.1ರ ಮಧ್ಯರಾತ್ರಿವರೆಗೂ ಹೆಚ್ಚುವರಿ ಬಸ್‌ಗಳನ್ನು ರಸ್ತೆಗಿಳಿಸಿತ್ತು. ಹೆಚ್ಚುವರಿ ಬಸ್‌ಗಳು ಸುಮಾರು 4443.9 ಕಿ.ಮೀ ನಷ್ಟು ಸಂಚಾರ ಮಾಡಿವೆ. ವರ್ಷದ ಮೊದಲ ದಿನ ಹೆಚ್ಚುವರಿ ಕಾರ್ಯಾಚರಣೆ ಮಾಡಿದ ಬಸ್‌ಗಳಲ್ಲಿ ಸುಮಾರು 13,332 ಮಂದಿ ಪ್ರಯಾಣಿಸಿರುವುದಾಗಿ ನಿಗಮದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸಿಬ್ಬಂದಿ ಮುಷ್ಕರ-ಕೋವಿಡ್‌ನಿಂದ ಕುಗ್ಗಿದ್ದ ಬಿಎಂಟಿಸಿ
ಮೊದಲೇ ಮುಳುಗುವ ಹಡುಗು ಆಗಿದ್ದ ಬಿಎಂಟಿಸಿ ನಿಗಮಕ್ಕೆ ನೌಕರರ ಸಾಲು ಸಾಲು ಮುಷ್ಕರ ಹಾಗೂ ಸಾಂಕ್ರಾಮಿಕ ಕೊರೊನಾ ಹೊಡೆತದಿಂದಾಗಿ ಬಸ್‌ ಓಡಾಟ ಇಲ್ಲದೆ ನಷ್ಟನ ಸುಳಿಯಲ್ಲಿ ಸಿಲುಕಿತು. ಜತೆಗೆ ತೈಲ ಬೆಲೆ ಏರಿಕೆಯಿಂದಾಗಿ ಬಸ್‌ ಓಡಿಸಿದರೂ ಕಷ್ಟ, ಸುಮ್ಮನೆ ನಿಲ್ಲಿಸಿದರೂ ನಷ್ಟ ಎಂಬ ಪರಿಸ್ಥಿತಿ ಉದ್ಭವಿಸಿತ್ತು. ಸಿಬ್ಬಂದಿಯ ಸಂಬಳವನ್ನು ನೀಡಲು ಆಗದೆ ನಿಗಮವು ಸರ್ಕಾರದ ಸಹಾಯಹಸ್ತ ಚಾಚಿತ್ತು. ಹಾಗೆ ನೌಕರರ ಪಿಎಫ್‌ ಹಣವನ್ನು ಬಳಸಿಕೊಳ್ಳುತ್ತಿದೆ ಎಂಬ ಆರೋಪವನ್ನು ಹೊತ್ತಿತ್ತು. ಇವೆಲ್ಲದರ ನಡುವೆ ಇದೀಗ ನಿಧಾನವಾಗಿ ಆರ್ಥಿಕ ಚೇತರಿಕೆಯನ್ನು ಕಂಡುಕೊಳ್ಳುತ್ತಿದೆ.

ಇದನ್ನೂ ಓದಿ | Siddheshwar Swamiji | ಸಿದ್ದೇಶ್ವರ ಶ್ರೀಗಳ ಮಣ್ಣಿನ ಮೂರ್ತಿ; ಕಲಾವಿದನಿಂದ ವಿಶೇಷ ಗೌರವ

Continue Reading

New year 2023

Swiggy Order | ಹೊಸ ವರ್ಷದ ಪಾರ್ಟಿಗೆ ಸ್ವಿಗ್ಗಿಯಲ್ಲಿ 3.5 ಲಕ್ಷ ಬಿರ್ಯಾನಿ, 1.76 ಲಕ್ಷ ಚಿಪ್ಸ್‌ ಪ್ಯಾಕೆಟ್‌ ಆರ್ಡರ್!

ಹೊಸ ವರ್ಷದ ಪಾರ್ಟಿ ಹಿನ್ನೆಲೆಯಲ್ಲಿ ಆನ್‌ಲೈನ್‌ನಲ್ಲಿ ಆಹಾರ, ಚಿಪ್ಸ್‌ ಪ್ಯಾಕೆಟ್‌ಗಳನ್ನು ಆರ್ಡರ್‌ (Swiggy Order) ಮಾಡುವವರ ಸಂಖ್ಯೆ ಹೆಚ್ಚಾಗಿದೆ ಎಂದು ಸ್ವಿಗ್ಗಿ ತಿಳಿಸಿದೆ.

VISTARANEWS.COM


on

Swiggy Order On New Years Eve
Koo

ನವದೆಹಲಿ: ಹೊಸ ವರ್ಷದ ಹಿನ್ನೆಲೆಯಲ್ಲಿ ಶನಿವಾರವೇ ದೇಶಾದ್ಯಂತ ಸಂಭ್ರಮ ಮನೆಮಾಡಿತ್ತು. ಪಾರ್ಟಿ ಆಯೋಜನೆ, ಪಾರ್ಟಿ ಸಿದ್ಧತೆ, ಕೇಕ್‌ ಕತ್ತರಿಸುವುದು ಸೇರಿ ಹಲವು ರೀತಿಯಲ್ಲಿ ಜನ ಸಂಭ್ರಮಾಚರಣೆ ಮಾಡಿದರು. ಅದರಲ್ಲೂ, ಪಾರ್ಟಿಗಾಗಿ ಆನ್‌ಲೈನ್‌ ಮೂಲಕ ಕೋಟ್ಯಂತರ ಜನ ಫುಡ್‌ ಆರ್ಡರ್‌ (Swiggy Order) ಮಾಡಿದ್ದು, ಇಲ್ಲೂ ಬಿರ್ಯಾನಿಯೇ ಅಗ್ರ ಸ್ಥಾನ ಪಡೆದಿದೆ. ಮದ್ಯಪಾನದ ಪಾರ್ಟಿಗಾಗಿ ಲಕ್ಷಾಂತರ ಚಿಪ್ಸ್‌ ಪ್ಯಾಕೆಟ್‌ಗಳನ್ನೂ ಸ್ವಿಗ್ಗಿಯಲ್ಲಿ ಆರ್ಡರ್‌ ಮಾಡಲಾಗಿದೆ.

ಹೌದು, ಹೊಸ ವರ್ಷದ ಹಿಂದಿನ ದಿನವಾದ ಶನಿವಾರ ರಾತ್ರಿ 10.45ರ ವೇಳೆಗೆ ಸ್ವಿಗ್ಗಿಯಲ್ಲಿ 3.5 ಲಕ್ಷಕ್ಕೂ ಅಧಿಕ ಬಿರ್ಯಾನಿಗಳನ್ನು ಆರ್ಡರ್‌ ಮಾಡಲಾಗಿದೆ. ಹಾಗೆಯೇ, ನಂತರದ ಬೇಡಿಕೆಗೆ ಪಿಜ್ಜಾಗೆ ಇದ್ದು, 61 ಸಾವಿರ ಪಿಜ್ಜಾ ಆರ್ಡರ್‌ ಮಾಡಲಾಗಿದೆ ಎಂದು ಸ್ವಿಗ್ಗಿ ಕಂಪನಿ ತಿಳಿಸಿದೆ.

ಸ್ವಿಗ್ಗಿ ಈ ಕುರಿತು ಸಮೀಕ್ಷೆಯನ್ನೂ ನಡೆಸಿದ್ದು, ಶೇ.75.4ರಷ್ಟು ಜನ ಹೈದರಾಬಾದ್‌ ಬಿರ್ಯಾನಿ, ಶೇ.14.2ರಷ್ಟು ಮಂದಿ ಲಖನೌವಿ ಬಿರ್ಯಾನಿ ಹಾಗೂ ಶೇ.10.4ರಷ್ಟು ಜನ ಕೋಲ್ಕೊತಾ ಬಿರ್ಯಾನಿ ಆರ್ಡರ್‌ ಮಾಡಿದ್ದಾರೆ ಎಂದು ಮಾಹಿತಿ ನೀಡಿದೆ. ಹಾಗೆಯೇ, ಸ್ವಿಗ್ಗಿಯ ಇನ್‌ಸ್ಟಾಮಾರ್ಟ್‌ನಲ್ಲಿ ಸಂಜೆ 7 ಗಂಟೆ ವೇಳೆಗೆ 1.76 ಚಿಪ್ಸ್‌ ಪ್ಯಾಕೆಟ್‌, 2,757 ಪ್ಯಾಕೆಟ್‌ ಡ್ಯುರೆಕ್ಸ್‌ ಕಾಂಡೋಮ್‌ಗಳನ್ನು ಆರ್ಡರ್‌ ಮಾಡಲಾಗಿದೆ ಎಂದು ಕಂಪನಿ ತಿಳಿಸಿದೆ.

ಇದನ್ನೂ ಓದಿ | New Year 2023 | ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸಂಭ್ರಮದ ಹೊಸ ವರ್ಷಾಚರಣೆ

Continue Reading

New year 2023

Ras Al Khaimah | 673 ಡ್ರೋನ್‌, 4.7 ಕಿ.ಮೀವರೆಗೆ ಆಗಸದಲ್ಲಿ ಪಟಾಕಿ, ಬೆಳಕಿನ ಚಿತ್ತಾರ, 2 ಗಿನ್ನೆಸ್‌ ದಾಖಲೆ ಬರೆದ ರಸ್‌ ಅಲ್‌ ಖೈಮಾ

ಹೊಸ ವರ್ಷಾಚರಣೆಗೆ ಹೇಳಿ ಮಾಡಿಸಿದಂತಿರುವ ರಸ್‌ ಅಲ್‌ ಖೈಮಾ (Ras Al Khaimah) ನಗರವು ಈ ಬಾರಿಯೂ ಅದ್ಧೂರಿ ಆಚರಣೆ ಮೂಲಕ ಎರಡು ಗಿನ್ನೆಸ್‌ ದಾಖಲೆ ಬರೆದಿದೆ.

VISTARANEWS.COM


on

Ras Al Khaimah New Year Celebration
Koo

ಅಬುಧಾಬಿ: ಭಾರತ ಸೇರಿ ಜಗತ್ತಿನಾದ್ಯಂತ ಸಂಭ್ರಮ-ಸಡಗರದಿಂದ ಹೊಸ ವರ್ಷ ಆಚರಣೆ ಮಾಡಲಾಗಿದೆ. ಪಟಾಕಿ ಸಿಡಿಸಿ, ಹಾಡಿ, ಕುಣಿದು, ನಲಿದು ಹೊಸ ಸಂವತ್ಸರವನ್ನು ಸ್ವಾಗತಿಸಲಾಗಿದೆ. ಹೀಗೆ, ಅದ್ಧೂರಿಯಾಗಿ ಹೊಸ ವರ್ಷಾವನ್ನು ಸ್ವಾಗತಿಸುವ ಮೂಲಕ ಯುಎಇಯ ರಸ್‌ ಅಲ್‌ ಖೈಮಾ (Ras Al Khaimah) ನಗರವು ಎರಡು ಗಿನ್ನೆಸ್‌ ದಾಖಲೆ ಬರೆದಿದೆ. ಹೊಸ ವರ್ಷಾಚರಣೆಗೆ ತಾನೇ ಅಧಿಪತಿ ಎಂಬುದನ್ನು ಮತ್ತೆ ಸಾಬೀತುಪಡಿಸಿದೆ.

ಹೌದು, ರಸ್‌ ಅಲ್‌ ಖೈಮಾದಲ್ಲಿ ಶನಿವಾರ ರಾತ್ರಿ 673 ಡ್ರೋನ್‌ಗಳನ್ನು ಬಳಸಿ ಸುಮಾರು 4.7 ಕಿ.ಮೀ ವ್ಯಾಪ್ತಿಯಲ್ಲಿ ಪಟಾಕಿ ಸಿಡಿಸಿ, ಬೆಳಕಿನ ಚಿತ್ತಾರ ಮೂಡಿಸಿ, ಕೊನೆಗೆ ಆಗಸದಲ್ಲಿಯೇ ‘ಹ್ಯಾಪಿ ನ್ಯೂ ಇಯರ್‌ 2023’ (Happy New Year 2023) ಎಂಬ ಅಕ್ಷರಗಳು ಮೂಡುವ ಮೂಲಕ ಶುಭಕೋರಲಾಗಿದೆ. ಹಾಗಾಗಿ, ರಸ್‌ ಅಲ್‌ ಖೈಮಾದಲ್ಲಿ ಪಟಾಕಿ ಹಾಗೂ ದೀಪಗಳ ಚಿತ್ತಾರ ಮೂಡಿಸಿದ್ದು ಎರಡು ಗಿನ್ನೆಸ್‌ ದಾಖಲೆ ಬರೆದಿದೆ. ಸುಮಾರು 1,100 ಮೀಟರ್‌ ಎತ್ತರದಲ್ಲಿ ಪಟಾಕಿ ಸಿಡಿಸಿ, ವಿದ್ಯುತ್‌ ದೀಪಗಳನ್ನು ಬೆಳಗಲಾಗಿದೆ. ಹೀಗೆ, ಆಗಸದಲ್ಲಿ ಬೆಳಕಿನ ರಂಗಿನಾಟವಿರುವ 12 ನಿಮಿಷದ ವಿಡಿಯೊವನ್ನು ರಸ್‌ ಅಲ್‌ ಖೈಮಾದ ಆಡಳಿತವು ಶೇರ್‌ ಮಾಡಿದೆ.

ಇದಕ್ಕೂ ಮೊದಲು ಸುಮಾರು 458 ಡ್ರೋನ್‌ಗಳನ್ನು ಬಳಸಿ, ಪಟಾಕಿ ಸಿಡಿಸಿ, ಬೆಳಕಿನ ಚಿತ್ತಾರ ಮೂಡಿಸಿದ್ದು ಗಿನ್ನೆಸ್‌ ದಾಖಲೆ ಆಗಿತ್ತು. ಈಗ ಈ ದಾಖಲೆಯನ್ನು ರಸ್‌ ಅಲ್‌ ಖೈಮಾ ಮುರಿದಿದೆ. ಹೊಸ ವರ್ಷಾಚರಣೆಗೆ ರಸ್‌ ಅಲ್‌ ಖೈಮಾ ಖ್ಯಾತಿ ಗಳಿಸಿದ್ದು, ಈ ಬಾರಿ 30 ಸಾವಿರಕ್ಕೂ ಅಧಿಕ ಜನ ಹೊಸ ವರ್ಷ ಆಚರಿಸಲು ನಗರಕ್ಕೆ ಆಗಮಿಸಿದ್ದರು ಎಂಬುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ | New Year 2023 | ಜಗತ್ತಿನಾದ್ಯಂತ ಹೊಸ ವರ್ಷವನ್ನು ಸಂಭ್ರಮದಿಂದ ಸ್ವಾಗತಿಸಿದ್ದು ಹೇಗೆ? ಇಲ್ಲಿವೆ ಫೋಟೊಗಳು

Continue Reading
Advertisement
Kangana Ranaut
Lok Sabha Election 20246 mins ago

Kangana Ranaut: ಬಾಲಿವುಡ್‌ ʼಕ್ವೀನ್‌ʼ ಕಂಗನಾ ಹೆಸರಿನಲ್ಲಿದೆ 50 ಎಲ್ಐಸಿ ಪಾಲಿಸಿ; ಏಜೆಂಟ್‌ ಅತ್ಯಂತ ಲಕ್ಕಿ ಎಂದ ನೆಟ್ಟಿಗರು

anjali murder case hubli
ಕ್ರೈಂ13 mins ago

Anjali Murder Case: ಅಂಜಲಿ ಹಂತಕನಿಗೆ ಸ್ನೇಹಿತನೇ ಪ್ರೇರಣೆ? ಅವನೂ ಕೊಲೆ ಆರೋಪಿ!

Viral Video
ವೈರಲ್ ನ್ಯೂಸ್17 mins ago

Viral Video: 160 ಕಿ.ಮೀ. ವೇಗದಲ್ಲಿ ಡ್ರೈವಿಂಗ್‌..ಇನ್‌ಸ್ಟಾಗ್ರಾಂನಲ್ಲಿ ಲೈವ್‌..ಡೆಡ್ಲಿ ಆಕ್ಸಿಡೆಂಟ್‌! ವೈರಲಾಯ್ತು ಶಾಕಿಂಗ್‌ ವಿಡಿಯೋ

Slovakian PM Robert Fico critical after assassination attempt
ಪ್ರಮುಖ ಸುದ್ದಿ37 mins ago

Robert Fico: ಸ್ಲೊವಾಕಿಯಾ ಪ್ರಧಾನ ಮಂತ್ರಿಗೆ ಗುಂಡೇಟು, ಅಮೆರಿಕ ವಿರೋಧಿ ನಾಯಕ ಗಂಭೀರ

Health Tips in Kannada lady finger okra benefits
ಆರೋಗ್ಯ58 mins ago

Health Tips in Kannada: ಬೆಂಡೆಕಾಯಿ ನೀರನ್ನು ಕುಡಿಯೋದರಿಂದ ಏನೆಲ್ಲ ಲಾಭಗಳಿವೆ ತಿಳಿದುಕೊಳ್ಳಿ

ಕರ್ನಾಟಕ1 hour ago

Karnataka Weather: ಇಂದು ಕಲಬುರಗಿ, ವಿಜಯಪುರ ಸೇರಿ ವಿವಿಧೆಡೆ ಗುಡುಗು, ಮಿಂಚು ಸಹಿತ ಭಾರಿ ಮಳೆ ಮುನ್ಸೂಚನೆ

stay awake till late night what is the problem For health
ಆರೋಗ್ಯ2 hours ago

Health Tips in Kannada: ತಡರಾತ್ರಿಯವರೆಗೆ ಎಚ್ಚರದಿಂದ ಇದ್ದರೆ ಆಗುವ ಸಮಸ್ಯೆಗಳೇನು ಗೊತ್ತೇ?

dina bhavishya read your daily horoscope predictions for May 16 2024
ಭವಿಷ್ಯ3 hours ago

Dina Bhavishya : ಇಂದು 12 ರಾಶಿಯವರ ಫಲ ಏನಿದೆ? ಯಾರಿಗೆ ಶುಭ ತರುತ್ತೆ? ಹೂಡಿಕೆಯಲ್ಲಿ ಯಾರಿಗೆ ಲಾಭ?

Mamata Banerjee
ಪ್ರಮುಖ ಸುದ್ದಿ8 hours ago

ಚುನಾವಣೆ ಫಲಿತಾಂಶಕ್ಕೆ ಮೊದಲೇ ಇಂಡಿಯಾ ಒಕ್ಕೂಟಕ್ಕೆ ದೀದಿ ಶಾಕ್; ಬಾಹ್ಯ ಬೆಂಬಲವಷ್ಟೇ ಎಂದು ಘೋಷಣೆ!

Bengaluru News
ಕರ್ನಾಟಕ8 hours ago

Bengaluru News: ಹಸುಗೂಸನ್ನು ರಸ್ತೆ ಬದಿ ಎಸೆದು ಹೋದ ಅನಾಮಿಕರು!

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Prajwal Revanna Case
ಕರ್ನಾಟಕ1 day ago

Prajwal Revanna Case: ಪ್ರಜ್ವಲ್‌ ರೇವಣ್ಣ ಇಂದೇ ಜರ್ಮನಿಯಿಂದ ಭಾರತಕ್ಕೆ? ಎಸ್‌ಐಟಿ ಅಲರ್ಟ್‌

Dina Bhavishya
ಭವಿಷ್ಯ1 day ago

Dina Bhavishya : ಭೂ ವ್ಯವಹಾರಕ್ಕೆ ಇದು ಸೂಕ್ತ ಸಮಯ; ವ್ಯಾಪಾರದಲ್ಲಿ ಡಬಲ್‌ ಲಾಭ

HD Revanna Released first reaction after release will be acquitted of all charges
ರಾಜಕೀಯ2 days ago

HD Revanna Released: ರಿಲೀಸ್‌ ಬಳಿಕ ರೇವಣ್ಣ ಫಸ್ಟ್‌ ರಿಯಾಕ್ಷನ್;‌ ನ್ಯಾಯಾಂಗದ ಮೇಲೆ ನಂಬಿಕೆ ಇದೆ; ಆರೋಪ ಮುಕ್ತನಾಗುವೆ

CM Siddaramaiah says Our government is stable for 5 years BJP will disintegrate
Lok Sabha Election 20242 days ago

CM Siddaramaiah: ನಮ್ಮ ಸರ್ಕಾರ 5 ವರ್ಷ ಸುಭದ್ರ; ಚುನಾವಣೆ ಬಳಿಕ ಬಿಜೆಪಿ ಛಿದ್ರ ಎಂದ ಸಿಎಂ ಸಿದ್ದರಾಮಯ್ಯ!

I dont want to go to other states for Lok Sabha Election 2024 campaign for Congress says CM Siddaramaiah
Lok Sabha Election 20242 days ago

CM Siddaramaiah: ಕಾಂಗ್ರೆಸ್‌ ಪರ ಬೇರೆ ರಾಜ್ಯಗಳಿಗೆ ಪ್ರಚಾರಕ್ಕೆ ಹೋಗಲು ನನಗೆ ಇಷ್ಟವಿಲ್ಲ: ಸಿಎಂ ಸಿದ್ದರಾಮಯ್ಯ!

HD Revanna Bail I am not happy that Revanna has been released says HD Kumaraswamy
ರಾಜಕೀಯ2 days ago

HD Revanna Bail: ರೇವಣ್ಣ ಬಿಡುಗಡೆಯಾಗಿದ್ದಕ್ಕೆ ನಾನಂತೂ ಖುಷಿ ಪಡಲ್ಲ ಎಂದ ಎಚ್‌ಡಿಕೆ!

karnataka Rain Effected
ಬೆಂಗಳೂರು2 days ago

Karnataka Rain: ಮಿಡ್‌ನೈಟ್‌ ಮಳೆ ಅವಾಂತರ; ಮರಗಳು, ವಿದ್ಯುತ್‌ ಕಂಬಗಳು ಧರೆಗೆ, ಕುಸಿದು ಬಿದ್ದ ಮನೆ

Dina Bhavishya
ಭವಿಷ್ಯ2 days ago

Dina Bhavishya : ಉದ್ಯೋಗದ ಸ್ಥಳದಲ್ಲಿ ನಿಮ್ಮ ವಿರುದ್ಧ ಪಿತೂರಿ ಮಾಡ್ಬಹುದು ಎಚ್ಚರ!

HD Revanna Bail Revanna will not leave the country condition imposed by the court
ಕ್ರೈಂ3 days ago

HD Revanna Bail: ರೇವಣ್ಣ ದೇಶ ಬಿಡಂಗಿಲ್ಲ, ಕೆ.ಆರ್‌. ನಗರಕ್ಕೆ ಎಂಟ್ರಿ ಕೊಡಂಗಿಲ್ಲ! ಕೋರ್ಟ್‌ ವಿಧಿಸಿದ ಷರತ್ತು ಏನು?

HD Revanna Bail
ಕ್ರೈಂ3 days ago

HD Revanna Bail: ಎಚ್‌.ಡಿ ರೇವಣ್ಣಗೆ ಕೊನೆಗೂ ಜಾಮೀನು; ಎಸ್‌ಐಟಿಗೆ ಮುಖಭಂಗ!

ಟ್ರೆಂಡಿಂಗ್‌