Prerane | ಚಲನೆ ಶಾಶ್ವತವಾದುದಲ್ಲ, ನಿಶ್ಚಲತೆಯು ಚಿರಂತನವಾದುದು - Vistara News

ಧಾರ್ಮಿಕ

Prerane | ಚಲನೆ ಶಾಶ್ವತವಾದುದಲ್ಲ, ನಿಶ್ಚಲತೆಯು ಚಿರಂತನವಾದುದು

“ಪ್ರೇರಣೆʼʼ (Prerane) ಇದು ಧಾರ್ಮಿಕ ಮತ್ತು ಆಧ್ಯಾತ್ಮಿಕ ಚಿಂತನೆಗಳನ್ನು ಬಿತ್ತುವ ಬೆಳಗಿನ ಹೊಳಹು. ಪ್ರತಿ ನಿತ್ಯ ಧಾರ್ಮಿಕ ಚಿಂತಕರು, ಪ್ರವಚನಕಾರರು, ಆಧ್ಯಾತ್ಮ ಚಿಂತಕರು ಇಲ್ಲಿ ಬರೆಯುತ್ತಿದ್ದಾರೆ. ಇಂದು ಸದ್ಗುರು ಜಗ್ಗಿ ವಾಸುದೇವ್‌ ಅವರು ಬದುಕಿನ ಧ್ಯಾನದ ಕುರಿತು ವಿಶ್ಲೇಷಿಸಿದ್ದಾರೆ.

VISTARANEWS.COM


on

Prerane
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಸದ್ಗುರು ಜಗ್ಗಿ ವಾಸುದೇವ್‌
ಈ ವಿಶ್ವದಲ್ಲಿ, ಚಲಿಸುವಂತಹ ಎಲ್ಲವನ್ನೂ ಅಂತಿಮವಾಗಿ ಹೇಗಿದ್ದರೂ ನಿಲುಗಡೆಗೆ ತರಲಾಗುತ್ತದೆ, ಆದರೆ ನಿಶ್ಚಲವಾಗಿ ಇರುವಂತದ್ದು ಸದಾಕಾಲಕ್ಕೂ ಹಾಗೆಯೇ ಇರುತ್ತದೆ. ಅಸ್ತಿತ್ವದಲ್ಲಿನ ಯಾವುದೇ ಚಲನೆ ಶಾಶ್ವತವಾದುದಲ್ಲ. ಕೆಲವು ವಿಷಯಗಳು ದೀರ್ಘಕಾಲದವರೆಗೆ ಸಕ್ರಿಯವಾಗಿರಬಹುದು ಆದರೆ ಎಂದಿಗೂ ಶಾಶ್ವತವಾಗಲ್ಲ. ಚಲಿಸುವಂತದ್ದೆಲ್ಲವೂ ತಮ್ಮ ಚಲನೆಯ ಶಕ್ತಿಯನ್ನು ಎಂದಾದರೂ ಬರಿದುಮಾಡಿಕೊಂಡು ನಿಂತುಹೋಗುತ್ತವೆ, ಆದರೆ ನಿಶ್ಚಲವಾಗಿರುವಂತದ್ದು ಎಂದೆಂದಿಗೂ ಹಾಗೇ ಇರುತ್ತದೆ.

ಎಲ್ಲೆಡೆ ಜನಪ್ರಿಯವಾಗಿರುವ, ಮತ್ತು ನಾವು ಧ್ಯಾನವೆಂದು ಕರೆಯುವ ಪ್ರಕ್ರಿಯೆಯು ಆ ಸ್ಥಿರತೆಯ ಕಡೆ ಸಾಗುವುದಕ್ಕೇ ಆಗಿದೆ. ಧ್ಯಾನವು ನಾವು ಅಸ್ತಿತ್ವದ ಜೀವಾಳದಂತಾಗುವ ಸಲುವಾಗಿದೆ. ನೀವು ಹಾಗಾಗಲು ಶ್ರಮಿಸಬೇಕು ಎಂದಲ್ಲ. ಇದು ನೀವು ಬುದ್ಧಿಯಿಂದ ಭೇದಿಸುವಂತದ್ದಲ್ಲ. ಇದು ನೀವು ಮಾಡುವಂತಹ ವಿಷಯವಲ್ಲ, ಏಕೆಂದರೆ ಏನನ್ನಾದರೂ ಮಾಡುವುದೆಂದರೆ ಅದು ಚಲನೆ. ಧ್ಯಾನವೆಂದರೆ ನೀವು ಮೂಲಕ್ಕೆ ಹಿಂದಿರುಗುವುದು ಎಂದರ್ಥ, ಏಕೆಂದರೆ ಆ ನಿಶ್ಚಲವಾದ ಮೂಲದಿಂದಲೇ ಚಲನೆಯು ಹುಟ್ಟಿಕೊಂಡಿರುವುದು, ಆ ನಿಶ್ಚಲವಾದ ಮೂಲದಿಂದಲೇ ಮೇಲ್ಪದರವು ಚಲನೆಯ ಸ್ಥಿತಿಯಲ್ಲಿರುವುದು.

ಮೇಲ್ನೋಟದಲ್ಲಿ ಹಲವಾರು ಬಗೆಯ ಕ್ರಿಯೆಗಳು, ಅನೇಕ ವಿಧವಾದ ಬಣ್ಣಗಳು, ಹಲವು ರೀತಿಯ ತರಂಗಗಳಿವೆ. ಇವು ನಿಶ್ಚಲತೆಗೆ ವಿರುದ್ಧವಾದವಲ್ಲ. ನೀವು ಜೀವನವೆಂದು ಕರೆಯುವ ಹಾಗೂ ತಿಳಿದಿರುವ ಎಲ್ಲವೂ ಸಹ ಕೇವಲ ಮೇಲ್ಮೈಯ ತರಂಗಗಳಷ್ಟೆ, ಆದರೆ ಒಮ್ಮೆ ನೀವು ನಿಶ್ಚಲತೆಯ ರುಚಿಯನ್ನು ಕಂಡುಕೊಂಡರೆ, ನೀವು ಮೇಲ್ಗಡೆ ಆಡಲು ಬಯಸಿದರೆ ಆಡಬಹುದು; ಇಲ್ಲದಿದ್ದರೆ ನಿಶ್ಚಲತೆಯ ಮಡಿಲಿಗೆ ಮರಳಬಹುದು. ನಿಮಗೆ ಜೀವನದ ತಿರುಳು ತಿಳಿದಿಲ್ಲದಿದ್ದರೆ, ನೀವು ಆ ನಿಶ್ಚಲ ತಿರುಳಿನ ರುಚಿಯನ್ನೆಂದಿಗೂ ಸವಿಯದೇ ಇದ್ದರೆ, ನಿಮ್ಮ ಜೀವನವು ನಿರಂತರವಾಗಿ ಒಂದು ರೀತಿಯ ಅನಿಯಂತ್ರಿತ ಚಲನೆಯಲ್ಲಿರುತ್ತದೆ. ನಿಮ್ಮ ಜೀವನವು ಇದೀಗ ಎಷ್ಟೇ ರೋಮಾಂಚನಕಾರಿ ಎಂದು ನಿಮಗನಿಸಿದರೂ, ಒಂದು ದಿನ ನೀವು ಅದರಿಂದ ಬೇಸತ್ತು ಹೋಗುತ್ತೀರಿ.

Prerane

ನೀವು ಬೇಸತ್ತುಹೋದ ಕಾರಣ ನೀವು ಜೀವನದಿಂದ ದೂರಾಗದೇ ಇರಲಿ ಎಂದು ನಾನು ಆಶಿಸುತ್ತೇನೆ. ಜೀವನದಿಂದ ಮುಕ್ತರಾಗಬೇಕಾಗಿರುವುದು ಜೀವನದ ಪ್ರಕ್ರಿಯೆಯಿಂದ ನೀವು ಮಾಗಿ ಹಣ್ಣಾಗಿದ್ದರೆ. ಒಂದು ಹಣ್ಣು ಚೆನ್ನಾಗಿ ಮಾಗಿದ ನಂತರವೇ ಮರದಿಂದ ಕೆಳಕ್ಕೆ ಬೀಳಬೇಕೇ ಹೊರತು ಬೇಸತ್ತು ಉದುರಿಹೋಗಬಾರದು; ಏಕೆಂದರೆ ಹಣ್ಣು ಪಕ್ವವಾದಾಗ ಅದರ ಜೊತೆ ಸವಿಯೂ ಬರುತ್ತದೆ, ಮತ್ತು ಅದರ ಜೊತೆ ಹೊಸ ಸಾಧ್ಯತೆಯೂ ಸಹ ಬರುತ್ತದೆ. ನೀವು ಜೀವನದಿಂದ ಬೇಸತ್ತು ಬಿದ್ದುಹೋದರೆ, ಅದು ಜೀವನದಿಂದ ಮುಕ್ತವಾಗುವ ಸರಿಯಾದ ಮಾರ್ಗವಲ್ಲ.

ಹಾಗಾಗಿ ಧ್ಯಾನವು ಒಂದು ಆಯ್ಕೆಯಲ್ಲ, ಮತ್ತದು ಒಬ್ಬರ ಜೀವನದಲ್ಲಿ ಮಾಡಬಹುದಾದ ರಂಜನೀಯ ವಿಷಯವಲ್ಲ. ನಿಮಗೆ ನಿಶ್ಚಲವಾಗಿರುವುದು ಹೇಗೆ ಎಂದು ತಿಳಿದಿಲ್ಲದಿದ್ದರೆ, ನೀವು ಕೇವಲ ಅಸ್ವಸ್ಥರಾಗಿರಬಹುದು ಅಷ್ಟೆ. ಬೇರೆ ದಾರಿಯೇ ಇಲ್ಲ. ನಿಮ್ಮ ಅನಾರೋಗ್ಯಕ್ಕೆ ವಿವಿಧ ಹೆಸರುಗಳನ್ನು ನೀವು ಇಟ್ಟುಕೊಂಡಿರಬಹುದು. ನಿಮಗಿದು ಗೊತ್ತೇ? 17 ನೇ ಶತಮಾನದಲ್ಲಿ ಕ್ಷಯರೋಗವನ್ನು ಹೊಂದುವುದು ಇಂಗ್ಲೆಂಡ್‌ನಲ್ಲಿ ಫ್ಯಾಷನ್ ಆಗಿತ್ತು? ನಿಜವಾಗಿಯೂ! ಅದೇ ರೀತಿ, ಇಂದು ಇತರ ಅನೇಕ ಕಾಯಿಲೆಗಳನ್ನು ಹೊಂದಿರುವುದು ಫ್ಯಾಷನ್ ಆಗಿಹೋಗಿದೆ. ಅದು ಎಷ್ಟೇ ನೋವು ಮತ್ತು ಯಾತನೆಯನ್ನು ಕೊಟ್ಟರೂ ಅದು ಫ್ಯಾಷನ್ ಆಗಿಬಿಟ್ಟಿದೆ. ಹಾಗೆಂದ ಮಾತ್ರಕ್ಕೆ ಕಾಯಿಲೆಗಳು ಒಳ್ಳೆಯದು ಎಂದು ಹೇಳಲಾಗುವುದಿಲ್ಲ. ಆದ್ದರಿಂದ ನಿಮಗಿರುವ ಆಯ್ಕೆಗಳು ಇಷ್ಟೆ – ಒಂದೋ ನೀವು ನಿಶ್ಚಲವಾಗಿರುವುದನ್ನು ಕಲಿಯುವುದು ಅಥವಾ ನೀವು ಒಂದಲ್ಲಾ ಒಂದು ರೀತಿಯ ಅನಾರೋಗ್ಯದಿಂದಿರುವುದು.

ಮನುಷ್ಯರಿಗೆ ನಿಶ್ಚಲವಾಗಿರುವುದು ಹೇಗೆಂದು ತಿಳಿದಿಲ್ಲದ ಕಾರಣ ಅವರು ರೋಗಗ್ರಸ್ಥರಾಗಿದ್ದಾರೆ. ಅವರಿಗೆ ನಿಶ್ಚಲವಾಗಿರುವುದು ಹೇಗೆಂದು ತಿಳಿದಿದ್ದರೆ, ದೇಹವು ಕೊಳೆಯುತ್ತಿದ್ದರೂ ಸಹ ಅವರು ಅಸ್ವಸ್ಥನಾಗಿರುವುದಿಲ್ಲ. ಆದ್ದರಿಂದ ನಿಶ್ಚಲವಾಗಿರುವುದು ನೀವು ಮಾಡಬಹುದಾದ ಒಂದು ಮೋಹಕವಾದ ಆಯ್ಕೆಯಲ್ಲ. ಅದು ಜೀವನದ ಮೂಲಭೂತ ಅಗತ್ಯತೆ.

PRERANE

ನಾವು ಜೀವನ ಮತ್ತು ಜೀವನದ ಪ್ರಕ್ರಿಯೆಯನ್ನು ಹತ್ತಿರದಿಂದ ಗಮನಿಸಿದರೆ, ಅದರೊಳಗೆ ಆಳವಾಗಿ ಇಳಿಯುವುದು ಒಂದು ನೈಸರ್ಗಿಕವಾದ ಪ್ರಕ್ರಿಯೆಯಾಗುತ್ತದೆ, ಮತ್ತು ಅದರ ಮೂಲವನ್ನು ಸ್ಪರ್ಶಿಸುವುದೇ ಯಶಸ್ಸು. ನಿಮಗೆ ವೈಫಲ್ಯವೇ ಜೀವನದ ಆದರ್ಶವಾಗಿದ್ದರೆ, ವೈಫಲ್ಯವು ಫ್ಯಾಷನ್ ಆಗಿದ್ದರೆ, ನೀವು ಜೀವನವನ್ನು ನಡೆಸದೇ ಇರುವುದೇ ಉತ್ತಮ. ಹಾಗಿದ್ದಾಗ ಅದನ್ನು ಮುನ್ನೆಡೆಸುವುದು ಯೋಗ್ಯವಾಗಿರುವುದಿಲ್ಲ; ಏಕೆಂದರೆ ಎಲ್ಲವೂ ಕೂಡ, ಒಂದು ಸಣ್ಣ ಇರುವೆಯೂ ಕೂಡ, ತನ್ನ ಜೀವನದಲ್ಲಿ ಅದರದ್ದೇ ಆದ ತಿಳುವಳಿಕೆಯ ಪ್ರಕಾರ ಯಶಸ್ವಿಯಾಗಲು ಪ್ರಯತ್ನಿಸುತ್ತಿದೆ. ಇಲ್ಲಿ ಸೋಲನ್ನು ಹುಡುಕುತ್ತಿರುವ ಯಾವುದೇ ಮನುಷ್ಯನಿಲ್ಲ. ತಾನು ಏನಾಗಿರುವನೋ ಅದೆಲ್ಲದಕ್ಕೂ ಸಂಪೂರ್ಣ ಅಭಿವ್ಯಕ್ತಿಯನ್ನು ಕಂಡುಕೊಂಡಾಗ ಮಾತ್ರವೇ ಒಬ್ಬ ಮನುಷ್ಯ ಯಶಸ್ವಿಯಾಗುತ್ತಾನೆ ಮತ್ತು ಅವನು ಧ್ಯಾನಸ್ಥನಾಗದೆಯೇ ಅದೆಂದಿಗೂ ಸಂಭವಿಸುವುದಿಲ್ಲ.

ನಾನು ಧ್ಯಾನಸ್ಥನಾಗುವುದು ಎಂದು ಹೇಳಿದಾಗ ಅದು ಅವಶ್ಯವಾಗಿ ಒಂದು ಸಂಘಟಿತವಾದ, ಸೂಚನೆಗಳಿಂದ ಕೂಡಿದ ಧ್ಯಾನ ಪ್ರಕ್ರಿಯೆಯೇ ಆಗಿರಬೇಕು ಎಂದು ಹೇಳುತ್ತಿಲ್ಲ. ಇಲ್ಲಿ ಮುಖ್ಯವಾದ ವಿಷಯವೆಂದರೆ, ನೀವು ಧ್ಯಾನಸ್ಥರಾಗಬೇಕು ಎನ್ನುವುದು. ಇಲ್ಲದೇ ಹೋದರೆ ನೀವು ನಿಮ್ಮ ಅಸ್ತಿತ್ವದ ಸ್ವರೂಪವನ್ನೆಂದಿಗೂ ತಿಳಿಯುವುದಿಲ್ಲ. ನೀವು ಯಾರೆಂಬುದರ ಸ್ವರೂಪವೇ ನಿಮಗೆ ತಿಳಿಯದಿದ್ದರೆ, ಅದಕ್ಕೆ ಸಂಪೂರ್ಣ ಅಭಿವ್ಯಕ್ತಿಯನ್ನು ಕಂಡುಕೊಳ್ಳುವ ಪ್ರಶ್ನೆಯೇ ಉದ್ಭವಿಸುವುದಿಲ್ಲ.

ಲೇಖಕರು ಸದ್ಗುರುಗಳು ಯೋಗಿಗಳು, ದಾರ್ಶನಿಕರು ಹಾಗೂ ಆಧ್ಯಾತ್ಮಿಕ ನಾಯಕರು.

ಇದನ್ನೂ ಓದಿ | Prerane | ನಿಮ್ಮ ಸ್ವಂತಿಕೆ ನಿಮಗಿರಲಿ, ಅದುವೇ ನಿಮಗೆ ದಾರಿಯಾಗಲಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಶಿವಮೊಗ್ಗ

Shivamogga News: ಮನುಷ್ಯ ಜನ್ಮವನ್ನು ಸಾರ್ಥಕಗೊಳಿಸಿಕೊಳ್ಳಲೇಬೇಕು! ಅಮರೇಶ್ವರ ಶ್ರೀ

Shivamogga News: ಸೊರಬ ತಾಲೂಕಿನ ಜಡೆ ಸಮೀಪದ ಬಂಕಸಾಣದ ಗ್ರಾಮದ ವರದಾ ಉತ್ತರವಾಹಿನಿ ಕ್ಷೇತ್ರದ ಸಮಾಧಾನದಲ್ಲಿ ಮಾಸಿಕ ಶಿವಾನುಭವ ಹಾಗೂ ಅರಿವಿನೆಡೆಗೆ ಕಾರ್ಯಕ್ರಮ ನಡೆಯಿತು.

VISTARANEWS.COM


on

Maasika Shivanubhava programme at soraba
Koo

ಸೊರಬ: ಮನುಷ್ಯ ಜನ್ಮ ಬಹು ಅಮೂಲ್ಯವಾದದು. ಈ ಜನ್ಮವನ್ನು ಪಡೆಯುವುದಕ್ಕಾಗಿ ಹಿಂದಿನ ಜನ್ಮದಲ್ಲಿ ಬಹಳ ಕಷ್ಟ ಪಟ್ಟಿದ್ದೇವೆ. ಲಕ್ಷಾಂತರ ಜನ್ಮಗಳಲ್ಲಿ ಕ್ರಿಮಿ, ಕೀಟಾದಿಗಳಾಗಿ, ಜಂತು ಜೀವವಾಗಿ ಜನಿಸಿ ಆ ಜನ್ಮದ ಸುಖ ದುಃಖವನ್ನು ಅನುಭವಿಸಿ, ಆ ಜನ್ಮಗಳಲ್ಲಿ ಮಾಡಿದ ಪುಣ್ಯದ ಫಲವಾಗಿ ಈಗ ಮನುಷ್ಯ ಜನ್ಮ ಸಿಕ್ಕಿದೆ. ಆದ್ದರಿಂದ ಇಂತಹ ಮನುಷ್ಯ ಜನ್ಮವನ್ನು ಸಾರ್ಥಕಪಡಿಸಿಕೊಳ್ಳಬೇಕು ಎಂದು ಜಡೆ ಬಂಕಸಾಣ ಸಮಾಧಾನ ಹಿರೇಮಠದ ಘನಬಸವ ಅಮರೇಶ್ವರ ಶಿವಾಚಾರ್ಯ ಸ್ವಾಮೀಜಿ (Shivamogga News) ಹೇಳಿದರು.

ತಾಲೂಕಿನ ಜಡೆ ಸಮೀಪದ ಬಂಕಸಾಣದ ಗ್ರಾಮದ ವರದಾ ಉತ್ತರವಾಹಿನಿ ಕ್ಷೇತ್ರದ ಸಮಾಧಾನದಲ್ಲಿ ಆಯೋಜಿಸಿದ್ದ ಮಾಸಿಕ ಶಿವಾನುಭವ ಹಾಗೂ ಅರಿವಿನೆಡೆಗೆ ಕಾರ್ಯಕ್ರಮದಲ್ಲಿ ಶ್ರೀಗಳು ಮಾತನಾಡಿದರು.

ನಿಸರ್ಗ ಬಹು ಅಪರೂಪವಾದದು. ಬಚ್ಚಲ ರೊಚ್ಚಿಯ ನೀರು ಹೋಗುವಲ್ಲಿ ಒಂದು ತೆಂಗಿನ ಸಸಿ ನೆಟ್ಟರೆ ಅದು ರುಚಿ ರುಚಿಯಾದ ಎಳೆನೀರನ್ನು ಕೊಡುತ್ತದೆ. ಸ್ವಾದಿಷ್ಟಕರವಾದ ತರಕಾರಿಗಳನ್ನು ನೀಡುತ್ತದೆ. ಇದು ನಿಸರ್ಗದ ನಿಯಮ. ಆದರೆ ಮನುಷ್ಯ ಈ ನಿಸರ್ಗವನ್ನು ಬಳಸಿ, ಅದನ್ನು ವಿರೂಪಗೋಳಿಸುತ್ತಾನೆ. ನಿಸರ್ಗವನ್ನು ಬಳಸಲು ಮನುಷ್ಯನಿಗೆ ಹಕ್ಕಿದೆಯೇ ಹೊರತು ವಿರೂಪಗೊಳಿಸಲು ಅಲ್ಲ. ಎಲ್ಲರೂ ಈ ಬದುಕನ್ನು ಅಂದಗೊಳಿಸಿಕೊಳ್ಳಬೇಕು ಎಂದರು.

ಇದನ್ನೂ ಓದಿ: Gold Rate Today: ಏರಿಕೆಯೂ ಇಲ್ಲ ಇಳಿಕೆಯೂ ಇಲ್ಲ; ಯಥಾಸ್ಥಿತಿ ಕಾಯ್ದುಕೊಂಡ ಚಿನ್ನದ ದರ

ಕಾರ್ಯಕ್ರಮದಲ್ಲಿ ಉಪನ್ಯಾಸಕಿ ಪ್ರಿಯದರ್ಶಿನಿ ಜಂಬೂರುಮಠ ಮಾತನಾಡಿ, ಮನುಷ್ಯನಿಗೆ ಸಂಬಂಧಗಳು ಮುಖ್ಯ. ಸಂಬಂಧಗಳನ್ನು ಉಳಿಸಿಕೊಳ್ಳಬೇಕು. ಮನೆಯಲ್ಲಿ ಮಕ್ಕಳಿಗೆ ಸಂಬಂಧಗಳ ಬಗ್ಗೆ ತಿಳಿ ಹೇಳಬೇಕು ಎಂದರು.

ಸಾಗರದ ವೀರಶೈವ ಸಮಾಜದ ನಿಕಟಪೂರ್ವ ಅಧ್ಯಕ್ಷ ಸಿದ್ಧಲಿಂಗೇಶ್ವರ ಮಾತನಾಡಿದರು.

ಇದನ್ನೂ ಓದಿ: Milk Price: ನಂದಿನಿ ಹಾಲು ದರ ಏರಿಕೆ ಶಾಕ್‌; ಅರ್ಧ ಲೀಟರ್‌ಗೂ ₹2, ಒಂದು ಲೀಟರ್‌ಗೂ ₹2 ಬೆಲೆ ಏರಿಕೆ!

ಕಾರ್ಯಕ್ರಮದಲ್ಲಿ ಮಾತೋಶ್ರೀ ಸುಶೀಲಮ್ಮ ಚನ್ನಬಸವಯ್ಯನವರ ಶ್ರದ್ಧಾಂಜಲಿ ನಡೆಯಿತು. ಈ ಸಂದರ್ಭದಲ್ಲಿ ಶಿವಕುಮಾರ ಸ್ವಾಮಿ, ರೇಣುಕಯ್ಯ ಸ್ವಾಮಿ, ಬಂಗಾರಸ್ವಾಮಿ, ತಾರಕೇಶ್ವರ, ಸಿದ್ಧಲಿಂಗಯ್ಯ, ಸುಪ್ರಸನ್ ಶಾಸ್ತ್ರಿ, ಪಂಚಾಕ್ಷರಿ, ಗಂಗಣ್ಣ, ಹೊಳೆಬಸಯ್ಯನವರು, ಮಹೇಶಯ್ಯ, ಮಧುಮತಿ ವರ್ಷಭೇಂದ್ರ ಗೌಡ, ಹೇಮಲತಾ, ಸುಮಂಗಳಾ, ಶಿವಲೀಲಾ, ಇರಾಜಮ್ಮ ಹಾಗೂ ಇತರರು ಉಪಸ್ಥಿತರಿದ್ದರು. ನಿಶ್ಚಿಂತ ಪ್ರಾರ್ಥಿಸಿದರು. ಸನ್ಮತಿ ನಿರೂಪಿಸಿದರು.

Continue Reading

Latest

Ayodhya Temple: ಕಡಿಮೆಯಾದ ಭಕ್ತರ ದಟ್ಟಣೆ; ಅಯೋಧ್ಯೆಗೆ ಭೇಟಿ ನೀಡಲು ಇದು ಸಕಾಲ

Ayodhya Temple: ಕಳೆದ ಆರು ವಾರಗಳಲ್ಲಿ ಅಯೋಧ್ಯೆ ನಗರಕ್ಕೆ ಬರುವ ವಿಮಾನಗಳು, ರೈಲುಗಳು ಮತ್ತು ಬಸ್ ಸೇವೆ ಗಮನಾರ್ಹವಾಗಿ ಕಡಿಮೆಯಾದಂತೆ ಕಂಡುಬಂದಿದೆ. ಜನವರಿ 22ರಂದು ಪ್ರಾಣ ಪ್ರತಿಷ್ಠಾ ಸಮಾರಂಭ ನಡೆದ ನಂತರ ಅಯೋಧ್ಯೆಗೆ ಬರುವ ಭಕ್ತರ ಸಂಖ್ಯೆ ವಿಪರೀತ ಹೆಚ್ಚಾಗಿತ್ತು. ಜನವರಿಯಿಂದ ಮಾರ್ಚ್ 2024ರವರೆಗೆ ಪ್ರತಿದಿನ ಸುಮಾರು 1.5 ಲಕ್ಷ ಭಕ್ತರು ಭೇಟಿ ನೀಡುತ್ತಿದ್ದರು. ಆದರೆ ಏಪ್ರಿಲ್‌ನಿಂದ ಭಕ್ತರ ಸಂಖ್ಯೆ ಕಡಿಮೆಯಾಗುತ್ತ ಬಂತು. ಏಪ್ರಿಲ್- ಮೇನಲ್ಲಿ ಸುಮಾರು 1 ಲಕ್ಷ ಭಕ್ತರು ಭೇಟಿ ನೀಡಿದ್ದರು.

VISTARANEWS.COM


on

Ram Mandir
Koo

ಅಯೋಧ್ಯೆ ರಾಮಮಂದಿರ (Ayodhya Temple) ಹಿಂದೂಗಳ ಪವಿತ್ರ ಯಾತ್ರಾ ಸ್ಥಳವಾಗಿ ಹೊರಹೊಮ್ಮಿದೆ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗುವುದು ಕೋಟ್ಯಂತರ ಹಿಂದೂಗಳ ಕನಸಾಗಿತ್ತು. ಹಾಗಾಗಿ ರಾಮಮಂದಿರ ಉದ್ಘಾಟನೆಯಾದ ಬೆನ್ನಿಗೇ ಲಕ್ಷಾಂತರ ಸಂಖ್ಯೆಯ ಭಕ್ತಾದಿಗಳು ರಾಮನ ದರ್ಶನಕ್ಕೆ ಬರುತ್ತಿದ್ದರು. ಆದರೆ ಮಂದಿರ ಉದ್ಘಾಟನೆಯಾಗಿ ಈಗಾಗಲೇ ಆರು ತಿಂಗಳು ಕಳೆದಿರುವುದರಿಂದ ಭಕ್ತರ ಸಂಖ್ಯೆ ಸಹಜವಾಗಿಯೇ ಕಡಿಮೆಯಾಗುತ್ತಿದೆ.

ಕಳೆದ ಆರು ವಾರಗಳಲ್ಲಿ ಅಯೋಧ್ಯೆ ನಗರಕ್ಕೆ ಬರುವ ವಿಮಾನಗಳು, ರೈಲುಗಳು ಮತ್ತು ಬಸ್ ಸೇವೆ ಗಮನಾರ್ಹವಾಗಿ ಕಡಿಮೆಯಾಗುತ್ತ ಬಂದಿದೆ. ಕೆಲವು ವಿಶೇಷ ರೈಲುಗಳ ಕಾರ್ಯಾಚರಣೆ ನಿಲ್ಲಿಸಲಾಗಿದೆ. ಇತರ ರಾಜ್ಯಗಳಿಂದ ಅಯೋಧ್ಯೆಗೆ ಬರುವ ವಿಶೇಷ ಬಸ್ಸುಗಳ ಸಂಖ್ಯೆಯಲ್ಲೂ ಕಡಿತವಾಗಿದೆ. ಇದು ಪ್ರಯಾಣಿಕರು ಅಯೋಧ್ಯೆಗೆ ಬರುವ ಪ್ರಮಾಣ ಕಡಿಮೆಯಾಗಿದೆ ಎಂಬುದನ್ನು ಸೂಚಿಸುತ್ತದೆ.

ಈಗಾಗಲೇ ವಿಮಾನಯಾನ ಸಂಸ್ಥೆ ಸ್ಪೈಸ್ ಜೆಟ್ ಕಡಿಮೆ ಬೇಡಿಕೆಯಿಂದಾಗಿ ಹೈದರಾಬಾದ್, ಬೆಂಗಳೂರು ಮತ್ತು ಪಾಟ್ನಾದಿಂದ ಅಯೋಧ್ಯೆಗೆ ನೇರ ವಿಮಾನಯಾನವನ್ನು ನಿಲ್ಲಿಸಿದೆ. ಸೇವೆ ಪ್ರಾರಂಭವಾದ ಕೇವಲ ಎರಡು ತಿಂಗಳ ನಂತರ ಸಂಸ್ಥೆ ಈ ನಿರ್ಧಾರ ತೆಗೆದುಕೊಂಡಿದೆ. ಏಪ್ರಿಲ್ 2024ರಲ್ಲಿ ಸ್ಪೈಸ್ ಜೆಟ್ ಹೈದರಾಬಾದ್‌ನಿಂದ ಅಯೋಧ್ಯೆಗೆ ವಿಮಾನವನ್ನು ಪ್ರಾರಂಭಿಸಿದ್ದು, ವಾರಕ್ಕೆ ಮೂರು ಬಾರಿ ಕಾರ್ಯ ನಿರ್ವಹಿಸುತ್ತಿತ್ತು. ಆದರೆ ಪ್ರಯಾಣಿಕರ ಸಂಖ್ಯೆ ಕಡಿಮೆಯಾದ ಕಾರಣ ವಿಮಾನಯಾನವನ್ನು ನಿಲ್ಲಿಸಲಾಗಿದೆ. ಆದರೆ ಮಳೆಗಾಲ ಮುಗಿದ ನಂತರ ಮತ್ತೆ ಪ್ರಯಾಣಿಕರು ಹೆಚ್ಚಾಗುವ ನಿರೀಕ್ಷೆ ಇದೆ ಎಂಬ ನಿರೀಕ್ಷೆ ಇದೆ. ಅಯೋಧ್ಯೆಗೆ ದಕ್ಷಿಣ ಭಾರತದವರು ಹೆಚ್ಚಾಗಿ ಬರುತ್ತಿದ್ದರು. ಅವರೀಗ ಕೃಷಿ ಕಾರ್ಯಗಳಲ್ಲಿ ಮುಳುಗಿದ್ದಾರೆ. ಹಾಗಾಗಿ ಕೃಷಿ ಚಟುವಟಿಕೆ ಮುಗಿದ ಬಳಿಕ ಭಕ್ತರ ಸಂಖ್ಯೆ ಮತ್ತೆ ಏರುವ ನಿರೀಕ್ಷೆ ಇದೆ.

Ayodhya Temple

ಭಾರತೀಯ ರೈಲ್ವೆ ಕೂಡ ಅಯೋಧ್ಯೆಗೆ ವಿಶೇಷ ರೈಲುಗಳ ವ್ಯವಸ್ಥೆಯನ್ನು ಕಡಿಮೆ ಮಾಡಿದೆ. ಇದರ ಹೊರತಾಗಿ ಪ್ರತಿದಿನ 32ರಿಂದ 35 ರೈಲುಗಳು ಅಯೋಧ್ಯಾ ಧಾಮ್ ಮತ್ತು ಅಯೋಧ್ಯಾ ಕ್ಯಾಂಟ್ ನಿಲ್ದಾಣಗಳಿಗೆ ಆಗಮಿಸುತ್ತಲೇ ಇರುತ್ತವೆ. ರೈಲುಗಳು ನಿತ್ಯ ಸುಮಾರು 28,000 ಪ್ರಯಾಣಿಕರನ್ನು ಹೊತ್ತು ಬರುತ್ತವೆ ಎನ್ನಲಾಗಿದೆ. ಮೇ 15ರವರೆಗೆ ಅಯೋಧ್ಯೆಗೆ ಹೋಗಲು ರೈಲುಗಳಿಗೆ ಹೆಚ್ಚಿನ ಬೇಡಿಕೆಯಿದ್ದರೂ ನಂತರ ಕಡಿಮೆಯಾಗಿದೆ. ಆದರೂ ಅಯೋಧ್ಯೆಗೆ ತೆರಳುವ ಎಲ್ಲಾ ರೈಲುಗಳು ತುಂಬಿರುತ್ತವೆ ಎಂದು ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಅದೇರೀತಿ ಇತರ ರಾಜ್ಯಗಳಿಂದ ಅಯೋಧ್ಯೆಗೆ ಬಸ್‌ಗಳ ಸಂಖ್ಯೆಯಲ್ಲೂ ಕಡಿಮೆಯಾಗಿದೆ. ಪ್ರಸ್ತುತ 396 ರಸ್ತೆ ಮಾರ್ಗದಲ್ಲಿ ಬಸ್‌ಗಳು ಅಯೋಧ್ಯೆಗೆ ಆಗಮಿಸುತ್ತಿವೆ. ಸದ್ಯಕ್ಕೆ ಮಧ್ಯಪ್ರದೇಶ, ರಾಜಸ್ಥಾನ, ಹಿಮಾಚಲ ಪ್ರದೇಶ, ಉತ್ತರಾಖಂಡ ಮತ್ತು ದೆಹಲಿಯಿಂದ ತಲಾ ಒಂದು ಬಸ್ ಮಾತ್ರ ಕಾರ್ಯ ನಿರ್ವಹಿಸುತ್ತಿದೆ ಎಂಬುದಾಗಿ ತಿಳಿದುಬಂದಿದೆ.

ಇದನ್ನೂ ಓದಿ: ಮತ್ತೊಂದು ರೀಲ್‌ ಕ್ರೇಜ್‌; ಚಲಿಸುವ ರೈಲಿನಲ್ಲಿ ಯುವತಿಯ ಡೇಂಜರಸ್‌ ಡ್ಯಾನ್ಸ್‌!

ಜನವರಿ 22ರಂದು ಪ್ರಾಣ ಪ್ರತಿಷ್ಠಾ ಸಮಾರಂಭ ನಡೆದ ನಂತರ ಅಯೋಧ್ಯೆಗೆ ಬರುವ ಭಕ್ತರ ಸಂಖ್ಯೆ ವಿಪರೀತ ಹೆಚ್ಚಾಗಿತ್ತು. ಜನವರಿಯಿಂದ ಮಾರ್ಚ್ 2024ರವರೆಗೆ ಪ್ರತಿದಿನ ಸುಮಾರು 1.5 ಲಕ್ಷ ಭಕ್ತರು ಭೇಟಿ ನೀಡುತ್ತಿದ್ದರು. ಆದರೆ ಏಪ್ರಿಲ್‌ನಿಂದ ಭಕ್ತರ ಸಂಖ್ಯೆ ಕಡಿಮೆಯಾಗುತ್ತ ಬಂತು. ಏಪ್ರಿಲ್- ಮೇನಲ್ಲಿ ಸುಮಾರು 1 ಲಕ್ಷ ಭಕ್ತರು ಭೇಟಿ ನೀಡಿದ್ದರು. ಸಾಕಷ್ಟು ಭಕ್ತರು ಜನದಟ್ಟಣೆ ಕಡಿಮೆ ಆಗಲಿ ಎನ್ನುವುದನ್ನೇ ಕಾಯುತ್ತಿದ್ದಾರೆ. ಹಾಗಾಗಿ ಇನ್ನು ಮುಂದೆ ಅಯೋಧ್ಯೆಗೆ ಭಕ್ತರ ಸಂಖ್ಯೆ ಏರಲಿದೆ ಎಂಬ ನಿರೀಕ್ಷೆಯನ್ನು ಸ್ಥಳೀಯ ವ್ಯಾಪಾರಸ್ಥರು ಹೊಂದಿದ್ದಾರೆ.

Continue Reading

Latest

Tirupathi Laddu: ತಿರುಪತಿ ಲಡ್ಡು, ವಿಶೇಷ ದರ್ಶನ ದರದ ಬಗ್ಗೆ ಟಿಟಿಡಿ ಸ್ಪಷ್ಟನೆ

Tirupathi Laddu: ತಿರುಪತಿ ಎಂದಾಕ್ಷಣ ಮೊದಲು ನೆನಪಿಗೆ ಬರುವುದು ಅಲ್ಲಿಯ ರುಚಿಕರವಾದ ಲಡ್ಡು. ವೆಂಕಟೇಶ್ವರ ದೇವರಿಗೆ ಶ್ರೀವಾರಿ ಲಡ್ಡು ಎಂದು ಕರೆಯಲ್ಪಡುವ ಲಡ್ಡನ್ನು ನೈವೇದ್ಯದ ರೂಪದಲ್ಲಿ ಅರ್ಪಿಸಲಾಗುತ್ತದೆ. ಸೋಷಿಯಲ್ ಮೀಡಿಯಾದಲ್ಲಿ ಈ ಲಡ್ಡು ಮತ್ತು ವಿಶೇಷ ದರ್ಶನದ ಬೆಲೆಯನ್ನು ಕಡಿತಗೊಳಿಸಿದೆ ಎಂಬ ವದಂತಿಯನ್ನು ಹಬ್ಬಿಸಿ ಜನರಲ್ಲಿ ಗೊದಲವನ್ನುಂಟುಮಾಡಲಾಗಿತ್ತು. ಲಡ್ಡು ಬೆಲೆಯನ್ನು 50 ರೂ. ಯಿಂದ 25 ರೂ.ಗೆ ಮತ್ತು ವಿಶೇಷ ದರ್ಶನದ ಬೆಲೆಯನ್ನು 300 ರೂ.ನಿಂದ 200ರೂ.ಗೆ ಕಡಿತಗೊಳಿಸಲಾಗಿದೆ ಎಂದು ತಿಳಿಸಲಾಗಿತ್ತು. ಆದರೆ ಈಗ ಈ ಬಗ್ಗೆ ದೇವಸ್ಥಾನದ ಆಡಳಿತ ಮಂಡಳಿ ಸ್ಪಷ್ಟನೆ ನೀಡಿದೆ.

VISTARANEWS.COM


on

Tirupathi Laddu
Koo

ತಿರುಪತಿ : ಸಾಮಾಜಿಕ ಮಾಧ್ಯಮಗಳು (social media) ಜನರಿಗೆ ಪ್ರಸ್ತುತ ವಿಚಾರಗಳ ಬಗ್ಗೆ ಹಲವು ಮಾಹಿತಿಗಳನ್ನು ನೀಡುತ್ತದೆ. ಹೆಚ್ಚಿನ ವಿಚಾರಗಳು ಜನರಿಗೆ ಸಾಮಾಜಿಕ ಮಾಧ್ಯಮದಿಂದಲೇ ತಿಳಿಯುತ್ತಿದೆ. ಅಂದಮಾತ್ರಕ್ಕೆ ಇದರಲ್ಲಿ ಬರುವ ಎಲ್ಲಾ ಮಾಹಿತಿಯೂ ಸತ್ಯವಾಗಿರುವುದಿಲ್ಲ. ಕೆಲವೊಂದು ಊಹಾಪೋಹಗಳು ಇರುತ್ತದೆ. ಹಾಗಾಗಿ ಸಾಮಾಜಿಕ ಮಾಧ್ಯಮದ ಎಲ್ಲಾ ಮಾಹಿತಿಗಳನ್ನು ನಿಜವೆಂದು ನಂಬಬೇಡಿ. ಇದಕ್ಕೆ ತಿರುಪತಿ ಲಡ್ಡು (Tirupathi Laddu) ಹಾಗೂ ವಿಶೇಷ ದರ್ಶನಕ್ಕೆ ಸಂಬಂಧಪಟ್ಟ ಸುದ್ದಿಯೊಂದು ನಿದರ್ಶನವಾಗಿದೆ.

ಇತ್ತೀಚೆಗೆ ಸಾಮಾಜಿಕ ಮಾಧ್ಯಮಗಳು ತಿರುಪತಿಯ ಶ್ರೀವೆಂಕಟೇಶ್ವರ ದೇವಸ್ಥಾನದ ಅಧಿಕೃತ ಉಸ್ತುವಾರಿಗಳಾದ ತಿರುಮಲ ತಿರುಪತಿ ದೇವಸ್ಥಾನಮ್ಸ್ (ಟಿಟಿಡಿ) ತಿರುಮಲ ಲಡ್ಡು ಮತ್ತು ವಿಶೇಷ ದರ್ಶನದ ಬೆಲೆಯನ್ನು ಕಡಿತಗೊಳಿಸಿದೆ ಎಂಬ ವದಂತಿಯನ್ನು ಹಬ್ಬಿಸಿ ಜನರಲ್ಲಿ ಗೊದಲವನ್ನುಂಟು ಮಾಡಿದ್ದವು.

ಸಾಮಾಜಿಕ ಮಾಧ್ಯಮದಲ್ಲಿ ಮಾಡಲಾದ ಪೋಸ್ಟ್ ನಲ್ಲಿ ಲಡ್ಡು ಬೆಲೆಯನ್ನು 50ರೂ. ಯಿಂದ 25 ರೂ.ಗೆ ಮತ್ತು ವಿಶೇಷ ದರ್ಶನದ ಬೆಲೆಯನ್ನು 300 ರೂ.ನಿಂದ 200 ರೂ.ಗೆ ಕಡಿತಗೊಳಿಸಲಾಗಿದೆ ಎಂದು ತಿಳಿಸಲಾಗಿತ್ತು. ಈ ಸುದ್ದಿಯನ್ನು ನಿಜವೆಂದು ನಂಬಿದ ಭಕ್ತಾಧಿಗಳು ಸಂತೋಷದಿಂದ ಟಿಟಿಡಿಗೆ ಕೃತಜ್ಞತೆ ಸಲ್ಲಿದ್ದರು.

ಆದರೆ ಈ ಬಗ್ಗೆ ಟಿಟಿಡಿ ತನ್ನ ವೆಬ್ ಸೈಟ್ ಅಥವಾ ಅಧಿಕೃತ ಪುಟಗಳಲ್ಲಿ ಅಂತಹ ಯಾವುದೇ ಬೆಲೆ ಕಡಿತದ ಬಗ್ಗೆ ಘೋಷಣೆ ಮಾಡಿಲ್ಲ ಮತ್ತು ಸರ್ಕಾರ ಕೂಡ ಯಾವುದೇ ಹೇಳಿಕೆ ನೀಡಿಲ್ಲ. ಹಾಗಾಗಿ ಸಂಶಯಗೊಂಡ ಕೆಲವು ಭಕ್ತರು ಈ ಸುದ್ದಿಯನ್ನು ಪರಿಶೀಲಿಸಲು ಟಿಟಿಡಿ ಅಧಿಕಾರಿಗಳನ್ನು ಸಂಪರ್ಕಿಸಿದ್ದಾರೆ. ಆಗ ಈ ಸುದ್ದಿ ಸುಳ್ಳು ಎಂಬುದಾಗಿ ತಿಳಿದುಬಂದಿದೆ. ಈ ದಾರಿತಪ್ಪಿಸುವಂತಹ ಪೋಸ್ಟ್ ಗಳನ್ನು ನಂಬಬೇಡಿ. ಟಿಕೆಟ್ ದರದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಟಿಟಿಡಿ ಅಧಿಕೃತವಾಗಿ ಹೇಳಿಕೆ ನೀಡಿದೆ. ಆ ಮೂಲಕ ಸಾಮಾಜಿಕ ಮಾಧ್ಯಮದ ಈ ಸುದ್ದಿ ಸುಳ್ಳು ಎಂಬುದು ಭಕ್ತರಿಗೆ ಮನದಟ್ಟಾಗಿದೆ.

ಈ ದೇವಸ್ಥಾನದಲ್ಲಿ ವೆಂಕಟೇಶ್ವರ ದೇವರಿಗೆ ಶ್ರೀವಾರಿ ಲಡ್ಡು ಎಂದು ಕರೆಯಲ್ಪಡುವ ಲಡ್ಡನ್ನು ನೈವೇದ್ಯದ ರೂಪದಲ್ಲಿ ಅರ್ಪಿಸಲಾಗುತ್ತದೆ. ದೇವಸ್ಥಾನದಲ್ಲಿ ಭಕ್ತರಿಗೆ ದೇವರ ದರ್ಶನ ಪಡೆದ ನಂತರ ಈ ಲಡ್ಡನ್ನು ಪ್ರಸಾದದ ರೂಪದಲ್ಲಿ ನೀಡಲಾಗುತ್ತದೆ. ಇದು ತುಂಬಾ ಸಿಹಿ, ರುಚಿ ಮತ್ತು ಪರಿಮಳಯುಕ್ತವಾಗಿದೆ. ಹಾಗಾಗಿ ಈ ಲಡ್ಡುಗಳಿಗೆ ಹೆಚ್ಚಿನ ಬೇಡಿಕೆ ಇರುವ ಕಾರಣ ಅದರ ಬೆಲೆ ಇಳಿಕೆಯ ಸುದ್ದಿ ವೈರಲ್ ಆಗಿದೆ ಎನ್ನಲಾಗಿದೆ.

ಇದನ್ನೂ ಓದಿ: Viral Video: ಮತ್ತೊಂದು ರೀಲ್‌ ಕ್ರೇಜ್‌; ಚಲಿಸುವ ರೈಲಿನಲ್ಲಿ ಯುವತಿಯ ಡೇಂಜರಸ್‌ ಡ್ಯಾನ್ಸ್‌!

ವಿಶ್ವದಾದ್ಯಂತ ಪ್ರಸಿದ್ಧಿಯಾಗಿರುವ 1933ರಲ್ಲಿ ಸ್ಥಾಪನೆಯಾದ ತಿರುಮಲ ವೆಂಕಟೇಶ್ವರ ದೇವಸ್ಥಾನವು ಮೊದಲ ಬಾರಿಗೆ ತನ್ನ ನಿವ್ವಳ ಮೌಲ್ಯವನ್ನು ಘೋಷಿಸಿದೆ. ಇದರ ಪ್ರಕಾರ ಬ್ಯಾಂಕ್‌ಗಳಲ್ಲಿ 10.25 ಟನ್ ಚಿನ್ನದ ಠೇವಣಿ, 2.5 ಟನ್ ಚಿನ್ನಾಭರಣ, ಸುಮಾರು 16,000 ಕೋಟಿ ರೂ. ಬ್ಯಾಂಕ್ ಠೇವಣಿ ಮತ್ತು ಭಾರತದಾದ್ಯಂತ 960 ಆಸ್ತಿಗಳನ್ನು ಒಳಗೊಂಡಂತೆ ಒಟ್ಟು 2.5 ಲಕ್ಷ ಕೋಟಿ ರೂ. ನಿವ್ವಳ ಮೌಲ್ಯವನ್ನು ಹೊಂದಿದೆ ಎನ್ನಲಾಗಿದೆ. ಐಟಿ ಸೇವಾ ಸಂಸ್ಥೆಯಾದ ವಿಪ್ರೋ, ಆಹಾರ ಮತ್ತು ಪಾನೀಯ ಕಂಪನಿ ನೆಸ್ಲೆ ಮತ್ತು ಸರ್ಕಾರಿ ಸ್ವಾಮ್ಯದ ತೈಲ ಒಎನ್ ಜಿಸಿ ಮತ್ತು ಐಒಸಿಗಳ ಮಾರುಕಟ್ಟೆ ಬಂಡವಾಳ ಕೂಡ ಇಷ್ಟು ಪ್ರಮಾಣದಲ್ಲಿಲ್ಲ!

Continue Reading

Latest

Last Rites: ಅಂತ್ಯಕ್ರಿಯೆ ಮುಗಿಸಿ ಬರುವಾಗ ಸ್ಮಶಾನದತ್ತ ಹಿಂತಿರುಗಿ ನೋಡಬಾರದು ಅನ್ನೋದು ಏಕೆ ಗೊತ್ತಾ?

ಅಂತಿಮ ವಿಧಿವಿಧಾನಗಳಲ್ಲಿ (Last Rites) ಅಜ್ಞಾನ ಅಥವಾ ಮಾಹಿತಿಯ ಕೊರತೆಯಿಂದಾಗಿ ಕೆಲವರು ಇಂತಹ ಆಚರಣೆಗಳನ್ನು ಮಾಡುವುದಿಲ್ಲ. ಇನ್ನು ಕೆಲವು ಮಾಡಬಾರದ ಆಚರಣೆಗಳನ್ನು ಮಾಡುತ್ತಾರೆ. ಶವಸಂಸ್ಕಾರ ಮಾಡಿದ ಅನಂತರ ಸ್ಮಶಾನದತ್ತ ಹಿಂತಿರುಗಿ ನೋಡುವುದನ್ನು ತಪ್ಪಿಸುವುದು ಇವುಗಳಲ್ಲಿ ಒಂದು. ಹಿಂತಿರುಗಿ ನೋಡಬಾರದು ಎಂದು ಹಿರಿಯರು ಹೇಳುವುದೇಕೆ? ಇಲ್ಲಿದೆ ಮಾಹಿತಿ.

VISTARANEWS.COM


on

By

Last Rites
Koo

ಪ್ರತಿಯೊಂದು ಧರ್ಮದಲ್ಲೂ ವಿವಿಧ ಆಚರಣೆಗಳಿವೆ (rituals). ಅದರಲ್ಲೂ ಮುಖ್ಯವಾಗಿ ಸನಾತನ ಧರ್ಮದಲ್ಲಿ (sanatana dharma) ಸಾಕಷ್ಟು ವಿಶೇಷ ಮತ್ತು ಅರ್ಥಪೂರ್ಣವಾದ ಆಚರಣೆಗಳಿವೆ. ಕೆಲವೊಂದು ಆಚರಣೆಗಳ ಬಗ್ಗೆ ನಮಗೆ ಗೊತ್ತಿದ್ದರೂ ಮರಣಾನಂತರದ (post-death ceremony) ಕೆಲವು ಆಚರಣೆಗಳ ನಾವು ತಿಳಿದಿರುವುದಿಲ್ಲ. ಈ ಆಚರಣೆಗಳನ್ನು (Last Rites) ಪಾಲಿಸುವುದು ಬಹುಮುಖ್ಯ.

ಮರಣಾನಂತರದ ಆಚರಣೆಗಳಲ್ಲಿ 16 ಪ್ರಮುಖ ಆಚರಣೆಗಳಿವೆ. ಇದರಲ್ಲಿ ಅನೇಕ ನಿಯಮಗಳಿವೆ. ಅದನ್ನು ಪ್ರತಿಯೊಬ್ಬರೂ ಪಾಲಿಸುವುದು ಮುಖ್ಯವಾಗಿದೆ.

ಅಂತಿಮ ವಿಧಿವಿಧಾನಗಳಲ್ಲಿ ಅಜ್ಞಾನ ಅಥವಾ ಮಾಹಿತಿಯ ಕೊರತೆಯಿಂದಾಗಿ ಕೆಲವರು ಇಂತಹ ಆಚರಣೆಗಳನ್ನು ಮಾಡುವುದಿಲ್ಲ. ಇನ್ನು ಕೆಲವು ಮಾಡಬಾರದ ಆಚರಣೆಗಳನ್ನು ಮಾಡುತ್ತಾರೆ. ಶವಸಂಸ್ಕಾರ ಮಾಡಿದ ಅನಂತರ ಸ್ಮಶಾನದತ್ತ ಹಿಂತಿರುಗಿ ನೋಡುವುದನ್ನು ತಪ್ಪಿಸುವುದು ಇವುಗಳಲ್ಲಿ ಒಂದು.

ಗರುಡ ಪುರಾಣದ ಪ್ರಕಾರ ಒಬ್ಬ ವ್ಯಕ್ತಿಯು ಸತ್ತಾಗ ಆತನ ಆತ್ಮವು ದೇಹವನ್ನು ತೊರೆಯುತ್ತದೆ. ಅಂತಿಮ ವಿಧಿಗಳನ್ನು ನಡೆಸಿದ ಬಳಿಕ ದೇಹವು ಬೂದಿಯಾಗುತ್ತದೆ. ಆದರೆ ಆತ್ಮವು ಅಲ್ಲೇ ಇರುತ್ತದೆ. ಆತ್ಮವನ್ನು ಶಾಶ್ವತ ಮತ್ತು ಅವಿನಾಶಿ ಎಂದು ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಹೇಳಿದ್ದಾನೆ. ಯಾವುದೇ ಕತ್ತಿ, ಬೆಂಕಿ ಅಥವಾ ನೀರು ಆತ್ಮವನ್ನು ನಾಶಮಾಡುವುದಿಲ್ಲ.

ಸ್ಮಶಾನ ಕಾರ್ಯದ ಬಳಿಕ ವ್ಯಕ್ತಿಯ ಆತ್ಮವು ಬೇರೆ ಲೋಕಕ್ಕೆ ಪ್ರಯಾಣ ಬೆಳೆಸುತ್ತದೆ ಎಂದು ಹೇಳಲಾಗುತ್ತದೆ. ಆದರೆ ಸತ್ತವರ ಕುಟುಂಬದ ಸದಸ್ಯರು ಅಂತ್ಯಕ್ರಿಯೆಯ ಅನಂತರ ಅಂತ್ಯಕ್ರಿಯೆ ನಡೆದ ಸ್ಥಳಕ್ಕೆ ಹಿಂತಿರುಗಿ ನೋಡಿದಾಗ ಕುಟುಂಬಕ್ಕೆ ಆತ್ಮದ ಬಾಂಧವ್ಯವು ಅದನ್ನು ಇನ್ನೊಂದು ಲೋಕಕ್ಕೆ ಹಾದುಹೋಗದಂತೆ ತಡೆಯುತ್ತದೆ.

ಗರುಡ ಪುರಾಣದಲ್ಲಿ ಉಲ್ಲೇಖಿಸಿದಂತೆ ಮರಣದ ಅನಂತರ ಸತ್ತ ವ್ಯಕ್ತಿಯ ಆತ್ಮವು ಸ್ಮಶಾನದಲ್ಲಿ ನಡೆಯುವ ಅವನ ಕೊನೆಯ ಚಟುವಟಿಕೆಗಳನ್ನು ವೀಕ್ಷಿಸುತ್ತದೆ. ಮೃತನ ಕುಟುಂಬದ ಸದಸ್ಯರು ಸ್ಮಶಾನದಲ್ಲಿ ಇರುವುದರಿಂದ ಸತ್ತ ವ್ಯಕ್ತಿಯ ಅಂತ್ಯಕ್ರಿಯೆಯ ಕಡೆಗೆ ಹಿಂತಿರುಗಿ ನೋಡಿದರೆ ಮೃತನ ಆತ್ಮವು ಆ ವ್ಯಕ್ತಿಯೊಂದಿಗೆ ಬರುತ್ತದೆ ಮತ್ತು ಆ ಬಂಧವನ್ನು ಮುರಿಯಲಾಗುವುದಿಲ್ಲ.

ಹೀಗಾಗಿ ಅಂತಿಮ ವಿಧಿಗಳನ್ನು ನಡೆಸಿದ ಅನಂತರ ತಿರುಗಬಾರದು ಎಂದು ಹೇಳಲಾಗುತ್ತದೆ. ಯಾಕೆಂದರೆ ಅಂತಹ ಸಂದರ್ಭದಲ್ಲಿ ಆತ್ಮವು ಮರಣಾನಂತರದ ಜೀವನಕ್ಕೆ ಪರಿವರ್ತನೆ ಕಷ್ಟವಾಗುತ್ತದೆ.

ಇದನ್ನೂ ಓದಿ: Vastu Tips: ಗಂಗಾ ಜಲ ಮನೆಯಲ್ಲಿಟ್ಟರೆ ಸಾಲದು; ಅದನ್ನು ಎಲ್ಲಿ ಇಡಬೇಕು, ಹೇಗೆ ಇಡಬೇಕು?

ಮೃತರ ಆತ್ಮಕ್ಕೆ ಶಾಂತಿ ಸಿಗಲೆಂದು 13 ದಿನಗಳ ಕಾಲ ಹಲವು ವಿಧಿವಿಧಾನಗಳನ್ನು ನಡೆಸಲಾಗುತ್ತದೆ. ಇದರ ಹೊರತಾಗಿ ಅಂತ್ಯಕ್ರಿಯೆಯಿಂದ ಹಿಂದಿರುಗಿದ ಅನಂತರ ಅನುಸರಿಸಬೇಕಾದ ಕೆಲವು ನಿಯಮಗಳಿವೆ.

ತಕ್ಷಣ ಸ್ನಾನ ಮಾಡಿ ಮತ್ತು ವ್ಯಕ್ತಿಯ ಬಟ್ಟೆಗಳನ್ನು ತೊಳೆಯಬೇಕು. ನಕಾರಾತ್ಮಕ ಶಕ್ತಿಗಳನ್ನು ತೊಡೆದುಹಾಕಲು ಗಂಗಾಜಲವನ್ನು ಇಡೀ ಮನೆಯಲ್ಲಿ ಸಿಂಪಡಿಸಬೇಕು. ವ್ಯಕ್ತಿ ಸತ್ತ ಮನೆಯಲ್ಲಿ ಮೃತರ ಆತ್ಮಕ್ಕೆ ಶಾಂತಿಗಾಗಿ 12 ದಿನಗಳ ಕಾಲ ದೀಪವನ್ನು ಬೆಳಗಿಸಬೇಕು. ಪಿತೃ ಪಕ್ಷದಲ್ಲಿ ಪಿಂಡದಾನ ಮಾಡಬೇಕು‌ ಎಂಬೆಲ್ಲ ಉಲ್ಲೇಖ ಗರುಡ ಪುರಾಣದಲ್ಲಿದೆ.

Continue Reading
Advertisement
CM Siddaramaiah
ಕರ್ನಾಟಕ40 seconds ago

CM Siddaramaiah: ರಾಹುಲ್ ಗಾಂಧಿ ವಿಪಕ್ಷ ನಾಯಕರಾಗಿರೋದು ದೇಶದ ಹಿತದೃಷ್ಟಿಯಿಂದ ಒಳ್ಳೆಯದು ಎಂದ ಸಿಎಂ

Jayam Ravi's wife Aarti Ravi removes all her Instagram photos
ಕಾಲಿವುಡ್4 mins ago

Jayam Ravi: ಜಯಂ ರವಿ ದಾಂಪತ್ಯದಲ್ಲಿ ಬಿರುಕು? ಡಿವೋರ್ಸ್‌ ಹಾದಿಯಲ್ಲಿ ಮತ್ತೊಂದು ಸ್ಟಾರ್‌ ಜೋಡಿ!

Gold Rate Today
ಚಿನ್ನದ ದರ29 mins ago

Gold Rate Today: ಆಭರಣ ಪ್ರಿಯರಿಗೆ ಗುಡ್‌ನ್ಯೂಸ್‌; ಚಿನ್ನದ ದರ ಇಳಿಕೆ

ಕ್ರೀಡೆ33 mins ago

IND vs ENG Semi Final: ಆಂಗ್ಲರನ್ನು ಸದೆಬಡಿದು ಫೈನಲ್​ ಪ್ರವೇಶಿಸಲಿ ಭಾರತ

Rashmika Mandanna Ayushmann Khurrana Team Up For Horror Comedy
ಟಾಲಿವುಡ್39 mins ago

Rashmika Mandanna: ರಶ್ಮಿಕಾ ಇದೀಗ ಟಾಲಿವುಡ್‌ಗೆ ಬೈ ಬೈ; ಬಾಲಿವುಡ್‌ನಲ್ಲಿಯೇ ಬಿಡಾರ!

Self Harming
ಕರ್ನಾಟಕ45 mins ago

Self Harming: ಕೆಲಸದಿಂದ ತೆಗೆದು ಕಿರುಕುಳ; ಡೆತ್ ನೋಟ್ ಬರೆದಿಟ್ಟು ಯುವಕ ಆತ್ಮಹತ್ಯೆ

jewellery robbery case
ಕ್ರೈಂ45 mins ago

Robbery Case: 30 ಸೆಕೆಂಡ್‌ನಲ್ಲಿ ಇಡೀ ಜ್ಯುವೆಲ್ಲರಿ ದರೋಡೆ, ಸಿಸಿಟಿವಿಯಲ್ಲಿ ಕೃತ್ಯ ಸೆರೆ

Parineethi Chopra
Latest57 mins ago

Parineethi Chopra: ಏಳುಮಲ್ಲಿಗೆ ತೂಕದ ಚೆಲುವೆ ಪರಿಣಿತಿ ಚೋಪ್ರಾ ಸಿಕ್ಕಾಪಟ್ಟೆ ದಪ್ಪಗಾಗಿದ್ದು ಯಾಕೆ?

Asaduddin Owais
ದೇಶ59 mins ago

Asaduddin Owais: ಪ್ರಮಾಣ ವಚನ ಸ್ವೀಕರಿಸಿ ‘ಜೈ ಪ್ಯಾಲೆಸ್ತೀನ್​’ ಘೋಷಣೆ ಕೂಗಿದ ಓವೈಸಿ ಸದಸ್ಯತ್ವ ರದ್ದು? ಕಾನೂನು ಏನು ಹೇಳುತ್ತದೆ?

Actor Darshan support by anchor hemalatha
ಸ್ಯಾಂಡಲ್ ವುಡ್1 hour ago

‌Actor Darshan: ರೇಣುಕಾಸ್ವಾಮಿಯನ್ನ ಹೀರೊ ಮಾಡೋದು ನಿಲ್ಲಿಸಿ, ದರ್ಶನ್‌ನ ಬಿಟ್ಟುಕೊಡಲ್ಲ ಎಂದ ಖ್ಯಾತ ನಿರೂಪಕಿ!

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Weather Forecast
ಮಳೆ2 days ago

Karnataka Weather : ಕರಾವಳಿಯಲ್ಲಿ ಮುಂದುವರಿದ ವರುಣಾರ್ಭಟ; ಸಾಂಪ್ರದಾಯಿಕ ಮೀನುಗಾರಿಕೆಗೂ ಬ್ರೇಕ್

karnataka weather Forecast
ಮಳೆ5 days ago

Karnataka Weather : ರಭಸವಾಗಿ ಹರಿಯುವ ನೀರಲ್ಲಿ ಸಿಲುಕಿದ ಬೊಲೆರೋ; ಬಿರುಗಾಳಿ ಸಹಿತ ಮಳೆ ಎಚ್ಚರಿಕೆ

International Yoga Day 2024
ಕರ್ನಾಟಕ5 days ago

International Yoga Day 2024: ಎಲ್ಲೆಲ್ಲೂ ಯೋಗಾಯೋಗ‌ಕ್ಕೆ ಮಂಡಿಯೂರಿದ ಜನತೆ

Karnataka Weather Forecast
ಮಳೆ6 days ago

Karnataka Weather : ಬಾಗಲಕೋಟೆ, ಬೆಂಗಳೂರು ಸೇರಿ ಚಿಕ್ಕಮಗಳೂರಲ್ಲಿ ಸುರಿದ ಗಾಳಿ ಸಹಿತ ಮಳೆ

Actor Darshan
ಮೈಸೂರು1 week ago

Actor Darshan : ಕೊಲೆ ಕೇಸ್‌ ಬೆನ್ನಲ್ಲೇ ನಟ ದರ್ಶನ್‌ ಸೇರಿ ಪತ್ನಿ ವಿಜಯಲಕ್ಷ್ಮಿಗೆ ಬಾರ್ ಹೆಡೆಡ್ ಗೂಸ್ ಸಂಕಷ್ಟ!

Bakrid 2024
ಬೆಂಗಳೂರು1 week ago

Bakrid 2024 : ಮತ್ತೊಂದು ಧರ್ಮವನ್ನೂ ಪ್ರೀತಿಸಿ; ಬಕ್ರೀದ್‌ ಪ್ರಾರ್ಥನೆಯಲ್ಲಿ ಸಿಎಂ ಸಿದ್ದರಾಮಯ್ಯ ಕರೆ

Renukaswamy murder case The location of the accused is complete
ಸಿನಿಮಾ1 week ago

Renuka Swamy murder : ಭೀಕರವಾಗಿ ಕೊಂದರೂ ಆರೋಪಿಗಳಿಗೆ ಕಾಡುತ್ತಿಲ್ವಾ ಪಾಪಪ್ರಜ್ಞೆ? ನಗುತ್ತಲೇ ಹೊರಬಂದ ಪವಿತ್ರಾ ಗೌಡ, ಪವನ್‌

Renuka swamy murder
ಚಿತ್ರದುರ್ಗ1 week ago

Renuka swamy Murder : ರೇಣುಕಾಸ್ವಾಮಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಾಳೆಹೊನ್ನೂರು ಶ್ರೀಗಳು

Vijayanagara News
ವಿಜಯನಗರ1 week ago

Vijayanagara News : ಕೆಲಸಕ್ಕೆ ಚಕ್ಕರ್, ಸಂಬಳಕ್ಕೆ ಹಾಜರ್! ಹಾರಕನಾಳು ಗ್ರಾಪಂ ಪಿಡಿಓಗಾಗಿ ಗ್ರಾಮಸ್ಥರ ಹುಡುಕಾಟ

Actor Darshan
ಯಾದಗಿರಿ2 weeks ago

Actor Darshan : ಬಾಸ್‌ ಅಂತ ಯಾಕ್‌ ಬಕೆಟ್‌ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!

ಟ್ರೆಂಡಿಂಗ್‌