SPB ಬದುಕಿನ ಹಾಡು-ಪಾಡು ಇದು, ಜನುಮದಿನಕ್ಕೆ ಪುಸ್ತಕದ ನೆನಪಿನ ಕಾಣಿಕೆ - Vistara News

ಕಲೆ/ಸಾಹಿತ್ಯ

SPB ಬದುಕಿನ ಹಾಡು-ಪಾಡು ಇದು, ಜನುಮದಿನಕ್ಕೆ ಪುಸ್ತಕದ ನೆನಪಿನ ಕಾಣಿಕೆ

ಮಧುರ ಕಂಠದ ಗಾಯಕ, ಕೋಟ್ಯಂತರ ಅಭಿಮಾನಿಗಳನ್ನು ಹೊಂದಿರುವ SPB ಅವರ 76ನೇ ಜನ್ಮ ದಿನವನ್ನು ಪುಸ್ತಕ ಬಿಡುಗಡೆ ಮತ್ತು ನೆನಪುಗಳ ಅನಾವರಣದೊಂದಿಗೆ ಆಚರಿಸಲಾಯಿತು. ಅವರ ಹಾಡುಗಳ ಹಬ್ಬವೂ ಜತೆಗಿತ್ತು.

VISTARANEWS.COM


on

ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಹದಿನೇಳು ಭಾಷೆಗಳಲ್ಲಿ ಗಾನ ಮಾಧುರ್ಯ ಮೆರೆದ, ನಾಯಕ ಯಾರೇ ಇರಲಿ ಅವರ ಧ್ವನಿಗೆ ತಕ್ಕಂತೆ ತಮ್ಮ ಧ್ವನಿಯನ್ನು ಸಿಂಕ್‌ ಮಾಡಿ ಹಾಡುವ ಕಲೆಯನ್ನು ಕರಗತ ಮಾಡಿಕೊಂಡಿದ್ದ, ಕೋಟ್ಯಂತರ ಹೃದಯಗಳಲ್ಲಿ ಚಿರಸ್ಥಾಯಿಯಾಗಿರುವ ಮಧುರ ಗಾಯಕ ಎಸ್‌.ಪಿ ಬಾಲಸುಬ್ರಹ್ಮಣ್ಯಂ (SPB) ಅವರು ಬದುಕಿದ್ದಿದ್ದರೆ ಜೂನ್‌ ನಾಲ್ಕಕ್ಕೆ 76 ವರ್ಷ ತುಂಬುತ್ತಿತ್ತು. ಅವರು ನೆನಪಿನ ಲೋಕ ಸೇರಿ ಒಂದುವರೆ ವರ್ಷ ಕಳೆದರೂ ಜನರ ನೆನಪಿನಲ್ಲಿ ಇನ್ನೂ ಶಾಶ್ವತವಾಗಿಯೇ ಇದ್ದಾರೆ.

ನನ್ನ ಹಾಡು ನನ್ನದು

ಅವರ ಜನ್ಮ ದಿನದಂದು ಅವರನ್ನು ನೆನಪಿಸಿಕೊಳ್ಳುವ, ನೆನಪಿಗಾಗಿ ಪುಸ್ತಕವೊಂದನ್ನು ಕಾಣಿಕೆಯಾಗಿ ಅರ್ಪಿಸುವ ಅಪರೂಪದ ಕಾರ್ಯಕ್ರಮವೊಂದು ಶನಿವಾರ ಬೆಂಗಳೂರಿನ ಇಂಡಿಯನ್‌ ಇನ್ಸ್‌ಟಿಟ್ಯೂಟ್‌ ಆಫ್‌ ವರ್ಲ್ಡ್‌ ಕಲ್ಚರ್‌ನ ವಾಡಿಯಾ ಸಂಭಾಗಣದಲ್ಲಿ ನಡೆಯಿತು, ಪತ್ರಕರ್ತ ಕಟ್ಟೆ ಗುರುರಾಜ್‌ ಅವರು ಸಂಪಾದಿಸಿರುವ ಅತ್ಯಂತ ವಿಶಿಷ್ಟ ಕೃತಿ ʻನನ್ನ ಹಾಡು ನನ್ನದುʼ ಲೋಕಾರ್ಪಣೆ ಕಾರ್ಯಕ್ರಮವದು. ಇದು ಎಸ್‌ಪಿ ಬಾಲಸುಬ್ರಹ್ಮಣ್ಯಂ ಅವರ ಬದುಕಿನ ಘಟನೆಗಳನ್ನು ಆಧರಿಸಿದ ಚೊಚ್ಚಲ ಕೃತಿ ಎಂಬ ಹೆಗ್ಗಳಿಕೆಯನ್ನು ಪಡೆದಿದೆ. ಯಾರೂ ಕಂಡು, ಕೇಳರಿಯದ ಹಲವು ಮಾಹಿತಿಗಳ ಖಜಾನೆಯಾಗಿರುವ ಈ ಪುಸ್ತಕ ಎಸ್‌ಪಿಬಿ ಅವರ ಸಜ್ಜನಿಕೆ, ಸರಳತೆಗಳ ಮಹಾಮುಖವನ್ನು ಪರಿಚಯಿಸುತ್ತದೆ. ಅವರ ಗೌರವ ಇನ್ನಷ್ಟು ಎತ್ತರಕ್ಕೆ ಏರುವಂತೆ ಮಾಡುತ್ತದೆ.

ಸಮಾರಂಭದಲ್ಲಿ ಭಾಗವಹಿಸಿದ್ದ ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ, ಪತ್ರಕರ್ತ, ಸಾಹಿತಿ ಜೋಗಿ, ಲಹರಿ ಮ್ಯೂಸಿಕ್‌ ಸಂಸ್ಥೆಯ ವೇಲು, ಎಸ್‌ಪಿಬಿ ಅವರ ಆಪ್ತ ಗೋಪಿ ಅವರೆಲ್ಲರೂ ಪುಸ್ತಕದ ಶಕ್ತಿ ಮತ್ತು ಬಾಲು ಅವರ ಪ್ರೀತಿಯನ್ನು ಕೊಂಡಾಡಿದರು.

ಇಲ್ಲಿರುವುದು ಸ್ಟ್ರೇಟ್‌ ಮಾತ್ರ
ಲಹರಿ ವೇಲು ಅವರು ಎಸ್‌ಪಿಬಿ ಅವರನ್ನು ಹಿಮಾಲಯ ಪರ್ವತಕ್ಕೆ ಹೋಲಿಸಿದರು. ಸಂಗೀತ ಮತ್ತು ಸಾಹಿತ್ಯ ಕ್ಷೇತ್ರಕ್ಕೆ ಜಾತಿ, ಮತ ಯಾವುದೂ ಇಲ್ಲ. ಕಲೆಯ ಸಾರಸ್ವತ ಲೋಕದಲ್ಲಿ ಲೆಫ್ಟ್‌ ಯಾವುದು? ರೈಟ್‌ ಯಾವುದು? ಮುಖ್ಯವಲ್ಲ. ಇಲ್ಲಿ ಕೇವಲ ಸ್ಟ್ರೇಟ್‌ ಮಾತ್ರ ಇರಬೇಕು. ಎಸ್‌ಪಿಬಿ ಕೂಡಾ ಹಾಗೇ ಬದುಕಿದರು ಎಂದು ಹೇಳಿದರು. ಎಸ್‌ಪಿಬಿ ಆಪ್ತ ಮತ್ತು ಗಾಯಕರಾದ ಗೋಪಿ ಒಡನಾಟದ ಮಧುರ ಕ್ಷಣಗಳನ್ನು ಮೆಲುಕು ಹಾಕಿದರು.

ಅಧ್ಯಯನ ಪೀಠದ ಕನಸು
ʼಎಸ್‌ಪಿಬಿ ಅವರ ಹೆಸರಿನಲ್ಲಿ ಒಂದು ಅಧ್ಯಯನ ಪೀಠ ಸ್ಥಾಪನೆ ಮಾಡಬೇಕೆಂಬ ಕನಸಿದೆ. ಶಿಗ್ಗಾಂವಿಯಲ್ಲಿ ಅವರ ಒಂದು ಪ್ರತಿಮೆ ಸ್ಥಾಪನೆ ಹಾಗೂ ಒಂದು ಥೀಮ್‌ ಪಾರ್ಕ್ ಮಾಡುವ ಯೋಚನೆಯಿದೆʼ ಎಂದರು ಹಂಸಲೇಖ.

ಎಸ್‌ಪಿಬಿ ಬದುಕಿನ ಒಳನೋಟಗಳನ್ನು ಒಳಗೊಂಡಿರುವ ನನ್ನ ಹಾಡು ನನ್ನದು ಕೃತಿಯ ಲೇಖಕ ಗುರುರಾಜ್‌ ಕಟ್ಟೆ, ಸಣ್ಣ ಸಣ್ಣ ಸಂಗತಿಗಳನ್ನು ಆಧರಿಸಿ ಈ ಪುಸ್ತಕವನ್ನು ಬರೆಯಲಾಗಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಜೋಗಿ ಅವರು, ಎಸ್ಪಿಬಿ ಬದುಕು ಮತ್ತು ಪುಸ್ತಕದ ಒಳನೋಟವನ್ನು ತೆರೆದಿಟ್ಟರು. ರಂಜನಿ ಕೀರ್ತಿ ನಿರೂಪಿಸಿದ ಕಾರ್ಯಕ್ರಮದಲ್ಲಿ ಜಮೀಲ್‌ ಸಾವಣ್ಣ ಧನ್ಯವಾದ ಹೇಳಿದರು. ಮಕ್ಕಳು ಎಸ್‌ಪಿಬಿ ಅವರ ಮಧುರ ಗೀತೆಗಳನ್ನು ಹಾಡಿ ರಂಜಿಸಿದರು. ನನ್ನ ಹಾಡು ನನ್ನದು ಪುಸ್ತಕವನ್ನು ಸಾವಣ್ಣ ಪ್ರಕಾಶನ ಪ್ರಕಟಿಸಿದೆ.

ಇದನ್ನೂ ಓದಿ: ರಾಷ್ಟ್ರೋತ್ಥಾನ ಸಾಹಿತ್ಯಕ್ಕೆ ಪುಸ್ತಕ ಪ್ರಾಧಿಕಾರ ಬಹುಮಾನ, ಡಾ.ಆಳ್ವ, ಕಾಪಸೆ, ನಾ. ಸೋಮೇಶ್ವರಗೆ ಪ್ರಶಸ್ತಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಧಾರವಾಡ

Dharwad News: ಧಾರವಾಡದಲ್ಲಿ ಜು.7ರಂದು ಡಾ. ಜಿನದತ್ತ ಅ. ಹಡಗಲಿಗೆ ಅಭಿನಂದನಾ ಸಮಾರಂಭ

Dharwad News: ಧಾರವಾಡದ ವಿದ್ಯಾಗಿರಿಯ ಜೆ.ಎಸ್.ಎಸ್. ಆವರಣದಲ್ಲಿರುವ ಸನ್ನಿಧಿ ಕಲಾಕ್ಷೇತ್ರದಲ್ಲಿ ಇದೇ ಜು.7 ರಂದು ಭಾನುವಾರ ಡಾ. ಜಿನದತ್ತ ಅ. ಹಡಗಲಿ ಅವರ ಅಭಿನಂದನಾ ಸಮಾರಂಭದ ನಿಮಿತ್ತ ಸಾಹಿತ್ಯಾವಲೋಕನ, ಅಭಿನಂದನಾ ಮತ್ತು ‘ಸ್ನೇಹ ಸಿಂಧು’ ಗ್ರಂಥ ಬಿಡುಗಡೆ ಸಮಾರಂಭ ಏರ್ಪಡಿಸಲಾಗಿದೆ.

VISTARANEWS.COM


on

congratulation ceremony for Dr. Jinadatta Hadagali on 7th July in Dharwad
Koo

ಧಾರವಾಡ: ಧಾರವಾಡದ ವಿದ್ಯಾಗಿರಿಯ ಜೆ.ಎಸ್.ಎಸ್. ಆವರಣದಲ್ಲಿರುವ ಸನ್ನಿಧಿ ಕಲಾಕ್ಷೇತ್ರದಲ್ಲಿ ಇದೇ ಜು.7 ರಂದು ಭಾನುವಾರ ಡಾ. ಜಿನದತ್ತ ಅ. ಹಡಗಲಿ ಅವರ ಅಭಿನಂದನಾ ಸಮಾರಂಭದ ನಿಮಿತ್ತ ಸಾಹಿತ್ಯಾವಲೋಕನ, ಅಭಿನಂದನಾ ಮತ್ತು ‘ಸ್ನೇಹ ಸಿಂಧು’ ಗ್ರಂಥ ಬಿಡುಗಡೆ ಸಮಾರಂಭ (Dharwad News) ಏರ್ಪಡಿಸಲಾಗಿದೆ.

ಅಭಿನಂದನಾ ಸಮಾರಂಭವು ಬೆಳಿಗ್ಗೆ 9.30ಕ್ಕೆ ಜನಪದ ಸಂಗೀತದೊಂದಿಗೆ ಆರಂಭವಾಗಲಿದ್ದು ಖ್ಯಾತ ಜಾನಪದ ಕಲಾವಿದ ಹರ್ಲಾಪುರದ ಶಂಭಯ್ಯ ಹಿರೇಮಠ ಮತ್ತು ಸಂಗಡಿಗರ ತಂಡವು ನಡೆಸಿಕೊಡಲಿದೆ. ನಂತರ ಬೆಳಿಗ್ಗೆ 10.30 ರಿಂದ 12.30 ರವರೆಗೆ ಡಾ. ಜಿನದತ್ತ ಅ. ಹಡಗಲಿ ಅವರ ಸಾಹಿತ್ಯ ಕುರಿತು ವಿಚಾರ ಸಂಕಿರಣವು ನಡೆಯಲಿದ್ದು, ಧಾರವಾಡ ಮುರುಘಾಮಠದ ಶ್ರೀ ಮ.ನಿ.ಪ್ರ ಡಾ. ಮಲ್ಲಿಕಾರ್ಜುನ ಮಹಾಸ್ವಾಮೀಜಿ ಉದ್ಘಾಟಿಸುವರು. ಹಿರಿಯ ಸಾಹಿತಿ ಡಾ. ಬಸವರಾಜ ಜಗಜಂಪಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಕರ್ನಾಟಕ ವಿಧ್ಯಾವರ್ಧಕ ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ.

ಇದನ್ನೂ ಓದಿ: Stock Market: 1 ಲಕ್ಷ ಪಾಯಿಂಟ್‌ ಮೈಲಿಗಲ್ಲಿನತ್ತ ಸೆನ್ಸೆಕ್ಸ್‌; ಅಂಕಿ-ಅಂಶ ಹೇಳೋದೇನು?

ಡಾ. ಜಿನದತ್ತ ಅ. ಹಡಗಲಿ ಅವರ ವೈಚಾರಿಕ ಸಾಹಿತ್ಯದ ಕುರಿತು ಸಾಹಿತಿ ಡಾ. ವೈ. ಎಂ. ಯಾಕೊಳ್ಳಿ, ಸಂಪಾದಿತ ಕೃತಿಗಳು ಕುರಿತು ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಡಾ. ಅರ್ಜುನ ಗೊಳಸಂಗಿ, ಬಾನುಲಿ ಬರಹಗಳು ಕುರಿತು ರಂಗ ಚಿಂತಕ ಡಾ. ಶಶಿಧರ ನರೇಂದ್ರ, ʼನನ್ನ ಗುರು ನನ್ನ ಹೆಮ್ಮೆʼ ಕುರಿತು ಧಾರವಾಡದ ನವೀನಶಾಸ್ತ್ರೀ ಪುರಾಣಿಕ ವಿಚಾರಗಳನ್ನು ಮಂಡಿಸಲಿದ್ದಾರೆ.

ಮಧ್ಯಾಹ್ನ 12.30ಕ್ಕೆ ಗುರುವಂದನಾ ಕಾರ್ಯಕ್ರಮ ನಡೆಯಲಿದ್ದು ಡಾ. ಹಡಗಲಿ ಅವರ ಗುರುಗಳಾದ ಎಚ್.ಸಿ. ರಟಗೇರಿ, ಪ್ರೊ. ಬಿ.ವಿ. ಗುಂಜೆಟ್ಟಿ, ಪ್ರೊ ವಿ.ಆರ್. ಸಂಗೊಂದಿಮಠ, ಡಾ. ವಿ.ಎಸ್. ಆರಾಧ್ಯಮಠ, ಪ್ರೊ. ವೀಣಾ ಶಾಂತೇಶ್ವರ, ಡಾ.ಉಷಾ ಮೂರ್ತಿ, ಡಾ.ವೀರಣ್ಣ ರಾಜೂರ, ಡಾ. ಬಿ.ವಿ. ಶಿರೂರ, ಡಾ. ಸೋಮಶೇಖರ ಇಮ್ರಾಪುರ, ಡಾ. ಶಾಂತಾದೇವಿ ಸಣ್ಣೆಲ್ಲಪ್ಪನವರ, ಡಾ. ಎಸ್.ವಿ. ಅಯ್ಯನಗೌಡರ, ಡಾ. ಬಿ.ವಿ. ಯಕ್ಕುಂಡಿಮಠ, ಡಾ. ಎ. ಮುರಿಗೆಪ್ಪ, ಪ್ರೊ. ರಾಜಶೇಖರ ಜಾಡರ ಅವರಿಗೆ ಹಡಗಲಿ ಅವರ ಕುಟುಂಬದಿಂದ ಸನ್ಮಾನ ಜರುಗಲಿದೆ.

ಬಳಿಕ ಮಧ್ಯಾಹ್ನ 2 ಗಂಟೆಗೆ ಸಂಗೀತ ಸುಧೆ ಎಂಬ ಕಾರ್ಯಕ್ರಮ ನಡೆಯಲಿದ್ದು, ಖ್ಯಾತ ಹಿಂದೂಸ್ತಾನಿ ಗಾಯಕಿ ವಿದೂಷಿ ಶ್ರೀಮತಿ ಸುಜಾತಾ ಗುರವ, ಗಾಯಕ ಬಸವರಾಜ ಕೆಂಧೂಳಿ, ಖ್ಯಾತ ಹಿಂದೂಸ್ತಾನಿ ಗಾಯಕ ಉಸ್ತಾದ ಹುಮಾಯೂನ ಹರ್ಲಾಪುರ, ಜೀ ಟಿವಿ ಸರಿಗಮಪ ವಿಜೇತ ಗಾಯಕ ಮೆಹಬೂಬಸಾಬ ಹರ್ಲಾಪುರ ಅವರಿಂದ ಸಂಗೀತ ಕಾರ್ಯಕ್ರಮವು ನಡೆಯಲಿದೆ. ನಂತರ ಡಾ. ಜಿನದತ್ತ ಹಡಗಲಿಯವರ ಜೀವನಾಧರಿತ ‘ಬದುಕಿನ ಹೆಜ್ಜೆಗಳು’ ಸಾಕ್ಷ್ಯಚಿತ್ರ ಪ್ರದರ್ಶನ ಜರುಗಲಿದೆ.

ಇದನ್ನೂ ಓದಿ: NEET PG 2024: ನೀಟ್-ಪಿಜಿ ಪರೀಕ್ಷೆಯ ದಿನಾಂಕ ಪ್ರಕಟ; ಆ. 11ರಂದು ನಡೆಯಲಿದೆ ಟೆಸ್ಟ್‌

ನಂತರ ಮಧ್ಯಾಹ್ನ 3 ಗಂಟೆಗೆ ಅಭಿನಂದನಾ ಸಮಾರಂಭವು ಜರುಗಲಿದ್ದು, ಅಥಣಿಯ ಮೋಟಗಿಮಠದ ಶ್ರೀ ಪ್ರಭುಚನ್ನಬಸವ ಮಹಾಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸುವರು. ಜನತಾ ಶಿಕ್ಷಣ ಸಮಿತಿಯ ಕಾರ್ಯದರ್ಶಿ ಡಾ. ಅಜಿತ ಪ್ರಸಾದ ಅಧ್ಯಕ್ಷತೆ ವಹಿಸಲಿದ್ದಾರೆ.

ಹು-ಧಾ. ಪಶ್ಚಿಮ ಶಾಸಕ ಅರವಿಂದ ಬೆಲ್ಲದ, ‘ಸ್ನೇಹಸಿಂಧು’ ಅಭಿನಂದನಾ ಗ್ರಂಥವನ್ನು ಬಿಡುಗಡೆ ಮಾಡಲಿದ್ದಾರೆ. ಹಿರಿಯ ಸಾಹಿತಿ ಡಾ.ವೀರಣ್ಣ ರಾಜೂರ ‘ಸ್ನೇಹಸಿಂಧು’ ಕೃತಿಯ ಪರಿಚಯ ಮಾಡಲಿದ್ದು, ಹುಬ್ಬಳ್ಳಿಯ ಸ.ಪ್ರ.ದ. ಕಾಲೇಜು ಪ್ರಾಧ್ಯಾಪಕ ಡಾ. ವೈ. ಎಂ. ಭಜಂತ್ರಿ ಅಭಿನಂದನಾ ನುಡಿಗಳನ್ನಾಡಲಿದ್ದಾರೆ.

ಇದನ್ನೂ ಓದಿ: Retirement Planning: ನಿವೃತ್ತಿ ಬಳಿಕ 1 ಲಕ್ಷ ರೂ. ಪಿಂಚಣಿ ಗಳಿಸೋದು ಹೇಗೆ? ಸುಲಭ ಯೋಜನೆಯ ಮಾಹಿತಿ ಇಲ್ಲಿದೆ

ಇದೇ ಸಂದರ್ಭದಲ್ಲಿ ಸುಜಾತಾ ಹಡಗಲಿ ಅವರ ಭಾವತರಂಗ ಕವನ ಸಂಕಲನವನ್ನು ವಿಜಯಪುರ ಮಹಿಳಾ ವಿವಿಯ ಪ್ರಾಧ್ಯಾಪಕ ಡಾ. ಓಂಕಾರ ಕಾಕಡೆ ಬಿಡುಗಡೆ ಮಾಡಲಿದ್ದಾರೆ. ಕಾರ್ಯಕ್ರಮದಲ್ಲಿ ಜಿಲ್ಲಾ ಕಸಾಪ ಅಧ್ಯಕ್ಷ ಡಾ.ಲಿಂಗರಾಜ ಅಂಗಡಿ, ಕವಿಸಂ ನ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಉಪಸ್ಥಿತರಿರುತ್ತಾರೆ ಎಂದು ತಿಳಿಸಿದೆ.

Continue Reading

ಕರ್ನಾಟಕ

Bengaluru News: ಬೆಂಗಳೂರಿನಲ್ಲಿ ಜು. 6,7ರಂದು ʼನಟನ ತರಂಗಿಣಿʼ 20ನೇ ವರ್ಷೋತ್ಸವ

Bengaluru News: ಬೆಂಗಳೂರಿನ ಕುಮಾರಸ್ವಾಮಿ ಬಡಾವಣೆಯ ನಟನ ತರಂಗಿಣಿ ಸ್ಕೂಲ್ ಆಫ್ ಮ್ಯೂಸಿಕ್ ಆ್ಯಂಡ್ ಡಾನ್ಸ್ ಸಂಸ್ಥೆಯ 20ನೇ ವರ್ಷದ ಸಂಭ್ರಮೋತ್ಸವದ ಅಂಗವಾಗಿ ಜುಲೈ 6 ಮತ್ತು 7 ರಂದು ‘ನಾದ ನೃತ್ಯಾನುಭವʼ ವಿಶೇಷ ಗಾಯನ, ವಾದನ ಮತ್ತು ನೃತ್ಯ ಕಾರ್ಯಕ್ರಮ ಆಯೋಜಿಸಿದೆ.

VISTARANEWS.COM


on

natana Tarangini 20th anniversary celebration on July 6 and 7 in Bengaluru
Koo

ಬೆಂಗಳೂರು: ನಗರದ ಕುಮಾರಸ್ವಾಮಿ ಬಡಾವಣೆಯ ನಟನ ತರಂಗಿಣಿ ಸ್ಕೂಲ್ ಆಫ್ ಮ್ಯೂಸಿಕ್ ಆ್ಯಂಡ್ ಡಾನ್ಸ್ ಸಂಸ್ಥೆಯ 20ನೇ ವರ್ಷದ ಸಂಭ್ರಮೋತ್ಸವದ ಅಂಗವಾಗಿ ಜುಲೈ 6 ಮತ್ತು 7 ರಂದು ‘ನಾದ ನೃತ್ಯಾನುಭವʼ ವಿಶೇಷ ಗಾಯನ, ವಾದನ ಮತ್ತು ನೃತ್ಯ ಕಾರ್ಯಕ್ರಮ (Bengaluru News) ಆಯೋಜಿಸಿದೆ.

ಬೆಂಗಳೂರಿನ ಜಯನಗರ 8ನೇ ಬಡಾವಣೆಯ ಶ್ರೀ ಜಯರಾಮ ಸೇವಾ ಮಂಡಳಿ ಸಭಾಂಗಣದಲ್ಲಿ ಎರಡು ದಿನಗಳ ಕಾಲ ನಡೆಯಲಿರುವ ಕಾರ್ಯಕ್ರಮದಲ್ಲಿ ನಟನ ತರಂಗಿಣಿ ಅಕಾಡೆಮಿಯ 5ನೇ ವಾರ್ಷಿಕೋತ್ಸವವೂ ಸಂಗಮಗೊಂಡಿದೆ. ಜು. 6ರ ಶನಿವಾರ ಮಧ್ಯಾಹ್ನ 2.30ಕ್ಕೆ ನಟನ ತರಂಗಣಿ ವಿದ್ಯಾರ್ಥಿಗಳಿಂದ ಗಾಯನ ಮತ್ತು ವಾದ್ಯ ಸಂಗೀತ ಕಾರ್ಯಕ್ರಮದ ಮೂಲಕ ವಾರ್ಷಿಕೋತ್ಸವ ಆರಂಭವಾಗಲಿದೆ.

ಇದನ್ನೂ ಓದಿ: Kalki 2898 AD: “ಕಲ್ಕಿ 2898 ಎಡಿ” ಸಿನಿಮಾ ನೋಡಲು ಜಪಾನ್‌ನಿಂದ ಹೈದರಾಬಾದ್‌ಗೆ ಬಂದ ಫ್ಯಾನ್ಸ್‌!

ಸಂಜೆ 5ಕ್ಕೆ ನಡೆಯುವ ಸಭಾ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಉಡುಪಿಯ ರಂಜನಿ ಮೆಮೋರಿಯಲ್ ಟ್ರಸ್ಟ್ ಅಧ್ಯಕ್ಷ ಪ್ರೊ. ಅರವಿಂದ ಹೆಬ್ಬಾರ್, ಶಿವಮೊಗ್ಗದ ಸಂಗೀತ ಕಾರ್ಯಕ್ರಮಗಳ ಸಂಘಟಕ ಸುಬ್ರಹ್ಮಣ್ಯ ಶಾಸ್ತ್ರಿ, ಚೆನ್ನೈನ ದಾಸಪ್ರಕಾಶ್ ಕುಟುಂಬದ ಕೆ. ಗಂಗಾ ಪ್ರಸಾದ್, ಪುತ್ತೂರಿನ ಕರ್ನಾಟಕ ಬ್ಯಾಂಕ್ ಮುಖ್ಯ ವ್ಯವಸ್ಥಾಪಕ ಶ್ರೀಹರಿ ಭಾಗವಹಿಸಲಿದ್ದಾರೆ.

ಶ್ರೀನಿವಾಸ್‌ಗೆ ನಾದಶ್ರೀ ಪ್ರಶಸ್ತಿ ಪ್ರದಾನ

ಬೆಂಗಳೂರಿನ ಮೃದಂಗ ಮತ್ತು ತಬಲಾ ತಯಾರಕ ವಿದ್ವಾನ್ ಶ್ರೀನಿವಾಸ ಅನಂತ ರಾಮಯ್ಯ ಅವರಿಗೆ ‘ನಾದ ಶ್ರೀʼ ಪ್ರಶಸ್ತಿ ನೀಡಿ, ಸನ್ಮಾನಿಸಲಾಗುವುದು. ಸಂಜೆ 5:30ಕ್ಕೆ ನಟನ ತರಂಗಣಿ ಸಂಸ್ಥೆಯ ವಿದ್ಯಾರ್ಥಿಗಳಿಂದ ವಿಶೇಷ ನೃತ್ಯ ಪ್ರದರ್ಶನವಿದೆ. ಮೃದಂಗ ಪಕ್ಕವಾದ್ಯದಲ್ಲಿ ವಿದ್ವಾನ್ ಕೆ.ಕೆ. ಭಾನುಪ್ರಕಾಶ್ ಸಹಕಾರ ನೀಡಲಿದ್ದಾರೆ. ಸಂಜೆ 7.30 ಕ್ಕೆ ವಿಶೇಷ ನೃತ್ಯ ಪ್ರಸ್ತುತಿಯಲ್ಲಿ ಚೆನ್ನೈನ ಖ್ಯಾತ ಕಲಾವಿದೆ ವಿದುಷಿ ದಿವ್ಯಾ ವೇಣುಗೋಪಾಲ್ ಭರತನಾಟ್ಯ ಜರುಗಲಿದೆ.

ವಿದ್ಯಾರ್ಥಿಗಳಿಂದ ವಾದ್ಯ ವೈಭವ

ಜುಲೈ 7 ರ ಮಧ್ಯಾಹ್ನ 2 ಗಂಟೆಗೆ ನಟನ ತರಂಗಿಣಿ ಸಂಸ್ಥೆ ವಿದ್ಯಾರ್ಥಿಗಳಿಂದ ಗಾಯನ ಮತ್ತು ವಾದ್ಯ ನೆರವೇರಲಿದೆ. ಸಂಜೆ 6ಕ್ಕೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಹಿರಿಯ ಜ್ಯೋತಿಷ್ಯ ಶಾಸ್ತ್ರಜ್ಞ, ಬೇಕಲ್ ಗೋಕುಲಂ ಗೋಶಾಲೆ ಸಂಸ್ಥಾಪಕ ವಿಷ್ಣು ಪ್ರಸಾದ ಹೆಬ್ಬಾರ್ ಮತ್ತು ನಾಗರತ್ನಾ ಹೆಬ್ಬಾರ್, ಬೆಂಗಳೂರಿನ ರಾಮಸೇವಾ ಮಂಡಳಿ ಕಾರ್ಯನಿರ್ವಾಹಕ ಅಭಿಜಿತ್ ವಾದಿರಾಜ್, ಉಡುಪಿಯ ಹಿರಿಯ ಸಂಗೀತ ತಜ್ಞ, ಸಂಯೋಜಕ, ರಂಜನಿ ಮೆಮೋರಿಯಲ್ ಟ್ರಸ್ಟ್ ಅಧ್ಯಕ್ಷ ಅರವಿಂದ ಹೆಬ್ಬಾರ್ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ನಟನ ತರಂಗಿಣಿ ಸಂಸ್ಥಾಪಕ ಅಧ್ಯಕ್ಷೆ ಡಾ. ವೈ.ಜಿ. ಪರಿಮಳಾ, ಕಾರ್ಯದರ್ಶಿಗಳಾದ ವಿದ್ವಾನ್ ನಿಕ್ಷಿತ್ ಪುತ್ತೂರು ಮತ್ತು ವಿದುಷಿ ವೈ. ಜಿ. ಶ್ರೀ ಲತಾ ಉಪಸ್ಥಿತರಿರಲಿದ್ದಾರೆ.

ಸುಬ್ರಹ್ಮಣ್ಯ ಶಾಸ್ತ್ರಿಗೆ ಕಲಾಶ್ರಯ ಪ್ರಶಸ್ತಿ

ಶಿವಮೊಗ್ಗದ ಹಿರಿಯ ಸಂಗೀತ ಸಂಘಟಕ, ಕಲಾ ಪ್ರೇಮಿ ಸುಬ್ರಹ್ಮಣ್ಯ ಶಾಸ್ತ್ರಿ ಅವರಿಗೆ ಇದೇ ವೇದಿಕೆಯಲ್ಲಿ ‘ಕಲಾಶ್ರಯʼ ಪ್ರಶಸ್ತಿ ನೀಡಿ ಸನ್ಮಾನಿಸಲಾಗುವುದು. ನಂತರ ನಡೆಯಲಿರುವ ದ್ವಂದ್ವ ಗಾಯನದಲ್ಲಿ ಲತಾಂಗಿ ಸಹೋದರಿಯರು ಎಂದೇ ಖ್ಯಾತರಾದ ಅರ್ಚನಾ ಮತ್ತು ಸಮನ್ವಿ ಕರ್ನಾಟಕ ಶಾಸ್ತ್ರೀಯ ಸಂಗೀತ ಸುಧೆ ಹರಿಸಲಿದ್ದಾರೆ. ಪಕ್ಕವಾದ್ಯದಲ್ಲಿ ವಿದುಷಿ ಸಿ.ವಿ. ಶ್ರುತಿ (ಪಿಟೀಲು), ವಿದ್ವಾನ್ ಆನೂರು ಅನಂತ ಕೃಷ್ಣ ಶರ್ಮ(ಮೃದಂಗ), ವಿದುಷಿ ಸುಕನ್ಯಾ ರಾಮಗೋಪಾಲ್ (ಘಟಂ) ಮತ್ತು ವಿದ್ವಾನ್ ಪಯ್ಯನೂರ್ ಗೋವಿಂದ ಪ್ರಸಾದ್ (ಮೋರ್ಸಿಂಗ್) ಸಾಥ್ ನೀಡಲಿರುವುದು ವಿಶೇಷ. ಕಲಾರಸಿಕರು ಭಾಗವಹಿಸುವಂತೆ ಸಂಗೀತ ಮತ್ತು ನೃತ್ಯ ‘ಉಭಯ ಕಲಾ ವಿದುಷಿʼ ವೈ.ಜಿ. ಶ್ರೀಲತಾ ಕೋರಿದ್ದಾದ್ದಾರೆ.

ಇದನ್ನೂ ಓದಿ: Edu Guide: ವಿದ್ಯಾರ್ಥಿಗಳಿಗೆ ಗುಡ್‌ನ್ಯೂಸ್‌: IDFC FIRST ಬ್ಯಾಂಕ್‌ನಿಂದ 2 ಲಕ್ಷ ರೂ. ಸ್ಕಾಲರ್‌ಶಿಪ್‌; ಹೀಗೆ ಅಪ್ಲೈ ಮಾಡಿ

ಸಂಗೀತ ಶಿಕ್ಷಣ ವ್ಯಕ್ತಿತ್ವಕ್ಕೆ ಸಂಸ್ಕಾರ ರೂಢಿಸಿ ಬದುಕನ್ನು ಎತ್ತರಕ್ಕೆ ಕೊಂಡೊಯ್ಯುತ್ತದೆ. ಮನಸ್ಸಿನ ಕಲಾತ್ಮಕ ಭಾಗವನ್ನು ವ್ಯಕ್ತಪಡಿಸಲು ಅನುವು ಮಾಡಿಕೊಡುತ್ತದೆ. ವ್ಯಕ್ತಿಯ ಭಾವನಾತ್ಮಕ, ಬೌದ್ಧಿಕ ಮತ್ತು ಆಧ್ಯಾತ್ಮಿಕ ಯೋಗಕ್ಷೇಮದ ನಡುವೆ ಸಮತೋಲನವನ್ನು ತರುತ್ತದೆ. ಸಂಗೀತ ಕಲಿಕೆ ಒಂದು ಸೌಹಾರ್ದ ಮತ್ತು ಸುಂದರ ಸಮಾಜದ ಬೆಳವಣಿಗೆಗೆ ಅತ್ಯಗತ್ಯ. ನಾನು ನಟನ ತರಂಗಿಣಿ-ಕಲಾ ಶಾಲೆಯನ್ನು ಪ್ರಾರಂಭಿಸಲು ಇದೇ ಸ್ಫೂರ್ತಿ. 20 ವರ್ಷದಿಂದ ಭಗವಂತನ ಸೇವೆ ಎಂದೇ ಭಾವಿಸಿ ಸಾವಿರಾರು ಮಕ್ಕಳಿಗೆ ಬೋಧನೆ ಮಾಡಿದ್ದೇನೆ. ಈ ಕೈಂಕರ್ಯ ನನಗೆ ಧನ್ಯತೆ ನೀಡಿದೆ.

-ವಿದುಷಿ ವೈ.ಜಿ. ಪರಿಮಳ, ನಟನ ತರಂಗಿಣಿ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷೆ.

Continue Reading

ಕರ್ನಾಟಕ

Sirsi News: ವಿಶ್ವಶಾಂತಿಗೆ ಯಕ್ಷ ನೃತ್ಯ ಕೊಡುಗೆ; ವಿಶ್ವದಾಖಲೆ ಪಟ್ಟಿಗೆ ತುಳಸಿ ಹೆಗಡೆ ಸೇರ್ಪಡೆ

Sirsi News: ಲಂಡನ್ ಮೂಲದ ಪ್ರತಿಷ್ಠಿತ ವರ್ಲ್ಡ್ ರೆಕಾರ್ಡ್ ಸಂಸ್ಥೆಯು ಶಿರಸಿಯ ಯಕ್ಷಗಾನ ತುಳಸಿ ಹೆಗಡೆ ಹೆಸರನ್ನು ತನ್ನ ವಿಶ್ವದಾಖಲೆಯ ಪಟ್ಟಿಯಲ್ಲಿ ಸೇರ್ಪಡೆಗೊಳಿಸಿಕೊಂಡಿದೆ. ಯಕ್ಷಗಾನ ಕಲಾ ಪ್ರಕಾರದ ಮೂಲಕ ವಿಶ್ವಶಾಂತಿಗೆ ಈವರೆಗೆ 9 ಕಲಾ ಕುಸುಮದ ಮೂಲಕ ನೀಡುತ್ತಿರುವ ಕೊಡುಗೆಗಳನ್ನು ಗಮನಿಸಿ ಮಕ್ಕಳ ವಿಭಾಗದ ತನ್ನ ದಾಖಲಾತಿಯಲ್ಲಿ ಸೇರಿಸಿಕೊಂಡಿದೆ.

VISTARANEWS.COM


on

Yakshagana artist Tulsi Hegade added to the world record list
Koo

ಶಿರಸಿ: ಅತ್ಯಂತ ಕಿರಿಯ ವಯಸ್ಸಿನಲ್ಲೇ ʼವಿಶ್ವಶಾಂತಿಗೆ ಯಕ್ಷ ನೃತ್ಯʼ ಮೂಲಕ ಕೊಡುಗೆ ನೀಡುತ್ತಿರುವ ಯಕ್ಷಗಾನ ಕಲಾವಿದೆ ತುಳಸಿ ಹೆಗಡೆ ಹೆಸರು ಇದೀಗ ಜಾಗತಿಕ ಮಟ್ಟದಲ್ಲೂ (Sirsi News) ದಾಖಲಾಗಿದೆ.

ಲಂಡನ್ ಮೂಲದ ಪ್ರತಿಷ್ಠಿತ ವರ್ಲ್ಡ್ ರೆಕಾರ್ಡ್ ಸಂಸ್ಥೆಯು ತುಳಸಿ ಹೆಗಡೆ ಹೆಸರನ್ನು ತನ್ನ ವಿಶ್ವದಾಖಲೆಯ ಪಟ್ಟಿಯಲ್ಲಿ ಸೇರ್ಪಡೆಗೊಳಿಸಿಕೊಂಡಿದೆ. ಯಕ್ಷಗಾನ ಕಲಾ ಪ್ರಕಾರದ ಮೂಲಕ ವಿಶ್ವಶಾಂತಿಗೆ ಈವರೆಗೆ 9 ಕಲಾ ಕುಸುಮದ ಮೂಲಕ ನೀಡುತ್ತಿರುವ ಕೊಡುಗೆಗಳನ್ನು ಗಮನಿಸಿ ಮಕ್ಕಳ ವಿಭಾಗದ ತನ್ನ ದಾಖಲಾತಿಯಲ್ಲಿ ಸೇರಿಸಿಕೊಂಡಿದೆ.

ಬೆರಳ ತುದಿಯಲ್ಲಿ ನರ್ತನ ಮಾಡುವ ವಿದೇಶವೊಂದರ ನೃತ್ಯ ಕಲಾ ಪ್ರಕಾರ ಹೊರತುಪಡಿಸಿದರೆ ಈವರೆಗೆ ಪ್ರಪಂಚದ ಯಾವುದೇ ಕಲಾ ಪ್ರಕಾರ ಈ ದಾಖಲಾತಿ ಪಟ್ಟಿಗೆ ಸೇರ್ಪಡೆ ಆಗಿರಲಿಲ್ಲ ಎಂದು ಈ ಸಂಸ್ಥೆ ತಿಳಿಸಿದೆ. ಈ ದಾಖಲೆಗೆ ತುಳಸಿ ಹೆಗಡೆ ಹೆಸರು ಸೇರ್ಪಡೆಯಿಂದ ಯಕ್ಷ ರೂಪಕದ ಮೂಲಕ ಯಕ್ಷಗಾನದ ಹೆಸರೂ ಇದೇ ಪ್ರಥಮ ಬಾರಿಗೆ ಸೇರಿದಂತಾಗಿದೆ.

ಇದನ್ನೂ ಓದಿ: Bengaluru News: ಬೆಂಗಳೂರಿನ ವಿದ್ಯಾರ್ಥಿನಿಗೆ ಐಐಟಿ ಬಾಂಬೆಯ ಪ್ರತಿಷ್ಠಿತ ಪ್ರಶಸ್ತಿ

ಶಿರಸಿ ಮಾರಿಕಾಂಬಾ ಸರ್ಕಾರಿ ಪ್ರೌಢಶಾಲೆಯಲ್ಲಿ 10ನೇ ತರಗತಿ ಓದುತ್ತಿರುವ ತುಳಸಿ ಹೆಗಡೆ ತನ್ನ 3ನೇ ವಯಸ್ಸಿನಿಂದಲೇ ಯಕ್ಷಗಾನ ಕ್ಷೇತ್ರಕ್ಕೆ ಬಾಲ ಹೆಜ್ಜೆ ಇಟ್ಟವಳು. ಐದೂವರೆ ವರ್ಷದಿಂದ ವಿಶ್ವ ಶಾಂತಿ ರೂಪಕಗಳನ್ನು ಪ್ರಸ್ತುತಗೊಳಿಸುತ್ತಿದ್ದಾಳೆ. ಪೌರಾಣಿಕ ಆಖ್ಯಾನಗಳ 9 ರೂಪಕಗಳನ್ನು ಪ್ರಸ್ತುತಗೊಳಿಸುವ ತುಳಸಿ, ರಾಜ್ಯ, ಹೊರ ರಾಜ್ಯಗಳಲ್ಲಿ 850ಕ್ಕೂ ಅಧಿಕ ಪ್ರದರ್ಶನ ನೀಡಿ ಗಮನ ಸೆಳೆದಿದ್ದಾಳೆ. ಜತೆಗೆ ಹಿರಿಯ ಕಲಾವಿದರ ಜತೆ ಬೇರೆ ಬೇರೆ ಯಕ್ಷಗಾನ ಆಖ್ಯಾನಗಳಲ್ಲೂ ಪಾತ್ರ ಮಾಡುತ್ತಿದ್ದಾಳೆ.

ಇದನ್ನೂ ಓದಿ: Kannada New Movie: ಗೋಪಿನಾಥ ಬೆಟ್ಟದಲ್ಲಿ ನಡೆದ ಧರ್ಮ ಕೀರ್ತಿರಾಜ್ ಅಭಿನಯದ ʼಪ್ರೊಡಕ್ಷನ್ ನಂ 1ʼ ಚಿತ್ರದ ಮುಹೂರ್ತ

ಈಗಾಗಲೇ ತುಳಸಿ ಹೆಗಡೆ ಹೆಸರು ಇಂಡಿಯಾ ಬುಕ್ ಆಪ್ ರೆಕಾರ್ಡ್‌ನಲ್ಲಿಯೂ ದಾಖಲಾಗಿದ್ದು, ಕರ್ನಾಟಕ ಬಾಲ ವಿಕಾಸ ಅಕಾಡೆಮಿ ನೀಡುವ ರಾಜ್ಯ ಮಟ್ಟದ ಬಾಲ ಗೌರವ ಪ್ರಶಸ್ತಿ, ಟೈಮ್ಸ್ ಆಫ್ ಇಂಡಿಯಾದ ದೇಶ ಮಟ್ಟದ 21 ವರ್ಷದೊಳಗಿನ ಅನ್ ಸ್ಟಾಪೇಬಲ್ 21 ಅವಾರ್ಡ್ ಸೇರಿದಂತೆ ಅನೇಕ ಪ್ರಶಸ್ತಿ, ಪುರಸ್ಕಾರಗಳು ಅರಸಿ ಬಂದಿವೆ. ತುಳಸಿ ಹೆಗಡೆ ತನ್ನ ಪ್ರತಿಭೆಯಿಂದಲೇ ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿಗೂ ಅವಕಾಶ ಸಿಕ್ಕಿತ್ತು.

Continue Reading

ಕರ್ನಾಟಕ

Bengaluru News: ಕಲಾ ರಸಿಕರ ಮನಸೂರೆಗೊಳಿಸಿದ ‘ಶ್ರದ್ಧಾ ನೃತ್ಯಾರ್ಣವʼ ವಿಶೇಷ ನೃತ್ಯೋತ್ಸವ

Bengaluru News: ಬೆಂಗಳೂರಿನ ಶ್ರದ್ಧಾ ನೃತ್ಯ ಸಂಸ್ಥೆಯ 14ನೇ ವಾರ್ಷಿಕೋತ್ಸವದ ಅಂಗವಾಗಿ ನಗರದ ಮಲ್ಲೇಶ್ವರದ ವಯ್ಯಲಿಕಾವಲ್‌ನ ಚೌಡಯ್ಯ ಸ್ಮಾರಕ ಭವನದಲ್ಲಿ ಹಮ್ಮಿಕೊಂಡಿದ್ದ ‘ಶ್ರದ್ಧಾ ನೃತ್ಯಾರ್ಣವʼವಿಶೇಷ ನೃತ್ಯೋತ್ಸವವು ಕಲಾ ರಸಿಕರ ಮನಸೂರೆಗೊಳಿಸಿತು.

VISTARANEWS.COM


on

Shraddha Nrityarnava special dance festival in Bengaluru
Koo

ಬೆಂಗಳೂರು: ನಗರದ ಶ್ರದ್ಧಾ ನೃತ್ಯ ಸಂಸ್ಥೆಯ 14ನೇ ವಾರ್ಷಿಕೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ‘ಶ್ರದ್ಧಾ ನೃತ್ಯಾರ್ಣವ’ ವಿಶೇಷ ನೃತ್ಯೋತ್ಸವ ಕಲಾ ರಸಿಕರ (Bengaluru News) ಮನಸೂರೆಗೊಂಡಿತು.

ನಗರದ ಮಲ್ಲೇಶ್ವರದ ವಯ್ಯಲಿಕಾವಲ್‌ನ ಚೌಡಯ್ಯ ಸ್ಮಾರಕ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಂಸ್ಥೆಯ ಉತ್ಸಾಹಿ ಕಲಾವಿದರಿಂದ ನೃತ್ಯ ಸಮರ್ಪಣೆಯಾಗಿದ್ದು ವಿಶೇಷ. ಇದುವೇ ‘ನೃತ್ಯಾರ್ಣವʼದ ವಿಶೇಷ.

ದೇಶದ ಸುವಿಖ್ಯಾತ ರಚನೆಕಾರರ ಕೃತಿಗಳನ್ನು ಮೊದಲ ಹಂತದಲ್ಲಿ ನೃತ್ಯಾರ್ಣವಕ್ಕೆ ಸಮರ್ಥವಾಗಿ ಬಳಸಿಕೊಂಡು ಅದಕ್ಕೆ ತಕ್ಕಂತೆ ಚೇತೋಹಾರಿಯಾಗಿ ಯುವತಿಯರು ಹೆಜ್ಜೆ ಹಾಕಿದ್ದು ಗಮನ ಸೆಳೆಯಿತು.

ಇದನ್ನೂ ಓದಿ: Foreign Investment: ರಾಜ್ಯದಲ್ಲಿ ವಾಹನ ಬಿಡಿಭಾಗ ತಯಾರಿಕೆ; ಬಂಡವಾಳ ಹೂಡಿಕೆಗೆ ದ.ಕೊರಿಯಾ ಒಲವು

ಉತುಕ್ಕಾಡು ವೆಂಕಟಸುಬ್ಬಯ್ಯ ಅವರ ಆನಂದ ನರ್ತನ ಗಣಪತಿ, ತುಳಸೀ ದಾಸರ ಶ್ರೀ ರಾಮಚಂದ್ರ ಕೃಪಾಳು ಭಜಮನ, ಪದ್ಮಚರಣರ ಪ್ರದೋಷ ಸಮಯದಿ ಪರಶಿವ ತಾಂಡವ, ಪುರಂದರ ದಾಸರ ಭಾಗ್ಯದ ಲಕ್ಷ್ಮಿ ಬಾರಮ್ಮ – ಕೃತಿಗಳಿಗೆ ಸಂಸ್ಥೆಯ ಕಿರಿಯ ಕಲಾವಿದರು ನರ್ತಿಸಿ, ಪ್ರೇಕ್ಷಕರಿಂದ ಮೆಚ್ಚುಗೆ ಪಡೆಯಿತು.

ಕಲಾಭಿವ್ಯಕ್ತಿಗೆ ಹೊಸ ಆಯಾಮ

ಕಾರ್ಯಕ್ರಮದಲ್ಲಿ ‘ಅಮೃತ ಮಂಥನ’ ನೃತ್ಯ ರೂಪಕ ಕಲಾಭಿವ್ಯಕ್ತಿಗೆ ಹೊಸ ಆಯಾಮವನ್ನೇ ನೀಡಿತು. ಸಂಸ್ಥೆ ನಿರ್ದೇಶಕಿ ಶಮಾ ಕೃಷ್ಣ ಹಾಗು ಹಿರಿಯ ಕಲಾವಿದರಿಂದ ಅಮೃತ ಮಂಥನ ಎಂಬುವ ರಸಪೂರ್ಣ ನೃತ್ಯ ನಾಟಕದ ಪ್ರಸ್ತುತಿ ವಿಶೇಷವಾಗಿ ಮೂಡಿಬಂತು. ಇದಕ್ಕೆ ಶತಾವಧಾನಿ ಡಾ. ಆರ್. ಗಣೇಶ್‌ರ ಸಾಹಿತ್ಯ, ಕಲಾವಿದ ಪ್ರವೀಣ್ ಡಿ. ರಾವ್ ಸಂಗೀತ ಮತ್ತು ವಿದುಷಿ ಶಮಾ ಕೃಷ್ಣ ಅವರ ನೃತ್ಯ ಸಂಯೋಜನೆ ಸಮರ್ಥವಾದ ನ್ಯಾಯ ಒದಗಿಸಿದ್ದು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.

ʼಅಮೃತ ಮಂಥನ’ ಕ್ಕೆ ಖ್ಯಾತ ಸಂಶೋಧಕಿ ಪ್ರೊ. ಕರುಣಾ ವಿಜಯೇಂದ್ರ, ಖ್ಯಾತ ನೃತ್ಯ ಪಟುಗಳಾದ ಶೇಷಾದ್ರಿ ಅಯ್ಯಂಗಾರ್ ಮತ್ತು ನವ್ಯಾ ನಟರಾಜ ಅವರು ಕಲಾ ರಸದೌತಣಕ್ಕೆ ಸಾಕ್ಷಿಯಾಗಿದ್ದು ಬಹು ವಿಶೇಷ.

ಇದನ್ನೂ ಓದಿ: Gold Rate Today: ಮತ್ತೆ ಮೇಲ್ಮುಖವಾಗಿ ಸಾಗಿದ ಚಿನ್ನದ ದರ; ಇಂದಿನ ಬೆಲೆ ಚೆಕ್‌ ಮಾಡಿ

ಹಿರಿಯ ಭರತನಾಟ್ಯ ಕಲಾವಿದೆ ವಿದುಷಿ ಶಮಾ ಕೃಷ್ಣ ಮಾತನಾಡಿ, ನನ್ನ ಕನಸು, ಕಲ್ಪನೆಗಳನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಹಿರಿಯ ಮತ್ತು ಕಿರಿಯ ಶಿಷ್ಯರು ಸೂಕ್ತವಾಗಿ ಸ್ಪಂದಿಸಿದ್ದಾರೆ. ನೃತ್ಯ ರೂಪಕ ಪ್ರಸ್ತುತಿ ಸಂದರ್ಭ ಕಲಾವಿದರ ಪ್ರತಿ ಹೆಜ್ಜೆಯಲ್ಲೂ ಹೊಸತನ ಮೂಡಿದೆ. ಮುಂಬರುವ ವರ್ಷಗಳಲ್ಲಿ ಮತ್ತಷ್ಟು ಹೊಸ ಪ್ರಯೋಗಕ್ಕೆ ಅಣಿಯಾಗಲು ‘ನೃತ್ಯಾರ್ಣವ’ ಹೊಸ ಚೈತನ್ಯ ನೀಡಿದೆ ಎಂದು ತಿಳಿಸಿದ್ದಾರೆ.

Continue Reading
Advertisement
Cheating Case
ಪ್ರಮುಖ ಸುದ್ದಿ37 mins ago

Cheating case : ಭಕ್ತರ 40 ಲಕ್ಷ ರೂ. ಗುಳುಂ ಮಾಡಲು ದರೋಡೆ ಕತೆ ಕಟ್ಟಿದ ಸ್ವಾಮೀಜಿ!

Snake
ವೈರಲ್ ನ್ಯೂಸ್42 mins ago

ತನಗೆ ಒಮ್ಮೆ ಕಚ್ಚಿದ ಹಾವಿಗೆ ಮೂರು ಬಾರಿ ಕಚ್ಚಿ ಸೇಡು ತೀರಿಸಿಕೊಂಡ ವ್ಯಕ್ತಿ; ಕೊನೆಗೆ ಬದುಕುಳಿದಿದ್ದು ಯಾರು?

Mohammed Siraj
ಪ್ರಮುಖ ಸುದ್ದಿ1 hour ago

Mohammed Siraj : ವೇಗದ ಬೌಲರ್​ ಮೊಹಮ್ಮದ್​ ಸಿರಾಜ್​ಗೆ ಹೈದರಾಬಾದ್​​ನಲ್ಲಿ ಭರ್ಜರಿ ಸ್ವಾಗತ, ಇಲ್ಲಿದೆ ವಿಡಿಯೊ

Akshata Murty
ವಿದೇಶ1 hour ago

Akshata Murty: ರಿಷಿ ಸುನಕ್‌ ವಿದಾಯದ ಭಾಷಣದ ವೇಳೆ ಅಕ್ಷತಾ ಮೂರ್ತಿ ಧರಿಸಿದ್ದ ಡ್ರೆಸ್ ಬೆಲೆ 42 ಸಾವಿರ ರೂ.!

Hardik Pandya
ಪ್ರಮುಖ ಸುದ್ದಿ2 hours ago

Hardik Pandya : ವಿಶ್ವ ಕಪ್​ ಗೆದ್ದ ಹಾರ್ದಿಕ್​ ಪಾಂಡ್ಯಗೆ ಮುತ್ತು ಕೊಟ್ಟು ಅಭಿನಂದಿಸಿದ ಇಶಾನ್ ಕಿಶನ್​

Weather News
ಉತ್ತರ ಕನ್ನಡ2 hours ago

Weather News: ಭಾರಿ ಮಳೆ; ಕರಾವಳಿಯಾದ್ಯಂತ ಶಾಲೆ-ಕಾಲೇಜುಗಳಿಗೆ ನಾಳೆ ರಜೆ ಘೋಷಣೆ

Mahindra Marazzo
ಪ್ರಮುಖ ಸುದ್ದಿ3 hours ago

Mahindra Marazzo : ಈ 7 ಸೀಟರ್​ ಕಾರಿನ ಉತ್ಪಾದನೆ ನಿಲ್ಲಿಸಿದ ಮಹೀಂದ್ರಾ

BSP President
ದೇಶ3 hours ago

BSP President: ತಮಿಳುನಾಡಿನಲ್ಲಿ ಬಿಎಸ್‌ಪಿ ರಾಜ್ಯಾಧ್ಯಕ್ಷ ಆರ್ಮ್‌ಸ್ಟ್ರಾಂಗ್‌ ಹತ್ಯೆ; ರಾಜಕೀಯ ವೈಷಮ್ಯ ಕಾರಣ?

Dengue Fever
ಕರ್ನಾಟಕ3 hours ago

Dengue Fever: ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ 155 ಡೆಂಗ್ಯೂ ಕೇಸ್‌ಗಳು ಪತ್ತೆ!

Rohit Sharma
ಪ್ರಮುಖ ಸುದ್ದಿ3 hours ago

T20 World Cup : ಮಹಾರಾಷ್ಟ್ರದ ಆಟಗಾರರಿಗೆ 11 ಕೋಟಿ ರೂಪಾಯಿ ಬಹುಮಾನ ಘೋಷಿಸಿದ ಮಹಾ ಸಿಎಂ ಶಿಂಧೆ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Weather Forecast
ಮಳೆ7 hours ago

Karnataka Weather: ಧಾರಾಕಾರ ಮಳೆಗೆ ಜನರ ಒದ್ದಾಟ- ಸೇತುವೆಗಳು ಮುಳುಗಿ ಪರದಾಟ; ಶಾಲಾ-ಕಾಲೇಜುಗಳಿಗೆ ರಜೆ

Lovers Fighting
ಚಿಕ್ಕಬಳ್ಳಾಪುರ8 hours ago

Lovers Fighting: ಪ್ರೀತಿಸಿ ಕೈಕೊಟ್ಟವನಿಗೆ ನಡುರಸ್ತೆಯಲ್ಲೇ ಚಳಿ ಬಿಡಿಸಿದ ಗರ್ಭಿಣಿ

Medical negligence
ದಾವಣಗೆರೆ9 hours ago

Medical negligence: ಸಿಸೇರಿಯನ್ ಮಾಡುವಾಗ ಶಿಶುವಿನ ಮರ್ಮಾಂಗವನ್ನೇ ಕತ್ತರಿಸಿ ಸಾಯಿಸಿದ ವೈದ್ಯ!

karnataka rain
ಮಳೆ11 hours ago

Karnataka Rain: ಮಳೆಗೆ ಮನೆಗಳಿಗೆ ನುಗ್ಗುತ್ತಿವೆ ಹಾವುಗಳು! ಕುಸಿದು ಬಿತ್ತು ಮನೆಗಳು

Elephant attack in Hassan and Chikmagalur
ಹಾಸನ12 hours ago

Elephant Attack : ಕಾಫಿ ತೋಟದ‌ ಕೆಲಸಗಾರನನ್ನು ಸೊಂಡಿಲಿನಿಂದ ಎತ್ತಿ ಬಿಸಾಡಿದ ಒಂಟಿ ಸಲಗ

Physical Abuse
ಬೆಂಗಳೂರು13 hours ago

Physical Abuse : ಇವಳೇನು ಶಿಕ್ಷಕಿಯೋ ಕಾಮುಕಿಯೋ; ಬಾಲಕಿಯ ಖಾಸಗಿ ಅಂಗಾಂಗ ಮುಟ್ಟಿ ವಿಕೃತಿ

Self Harming in bengaluru
ಬೆಂಗಳೂರು14 hours ago

Self Harming : ವರದಕ್ಷಿಣೆ ಟಾರ್ಚರ್‌; ಫ್ಯಾನಿಗೆ ನೇಣು ಬಿಗಿದುಕೊಂಡು ಟೆಕ್ಕಿ ಸೂಸೈಡ್‌

karnataka Weather Forecast Rain
ಮಳೆ18 hours ago

Karnataka Weather : ಕರಾವಳಿ, ಮಲೆನಾಡಿನಲ್ಲಿ ಮಳೆ ಅಬ್ಬರ; ಇಲ್ಲೆಲ್ಲ ಕಾದಿದೆ ಗಂಡಾಂತರ

karnataka Weather Forecast
ಮಳೆ1 day ago

Karnataka Weather : ಭಾರಿ ಮಳೆಗೆ ಗುಡ್ಡ ಕುಸಿತ; ಮಣ್ಣಿನ ಅಡಿ ಸಿಲುಕಿದ ಮಹಿಳೆ ಉಸಿರುಗಟ್ಟಿ ಸಾವು

karnataka Rain
ಮಳೆ1 day ago

Karnataka Rain : ಮಳೆಗೆ ಜಾರಿ ಮುಖಾಮುಖಿ ಡಿಕ್ಕಿಯಾದ ಲಾರಿಗಳು; ಕಾರಿನ ಮೇಲೆ ಬಿದ್ದ ಬೃಹತ್‌ ಮರ

ಟ್ರೆಂಡಿಂಗ್‌