Vaikuntha Ekadashi 2023 | ಇಸ್ಕಾನ್‌ನಲ್ಲಿ ಸಂಭ್ರಮದಿಂದ ವೈಕುಂಠ ಏಕಾದಶಿ ಆಚರಣೆ - Vistara News

ಧಾರ್ಮಿಕ

Vaikuntha Ekadashi 2023 | ಇಸ್ಕಾನ್‌ನಲ್ಲಿ ಸಂಭ್ರಮದಿಂದ ವೈಕುಂಠ ಏಕಾದಶಿ ಆಚರಣೆ

ಬೆಂಗಳೂರಿನ ಇಸ್ಕಾನ್‌ ದೇಗುಲದಲ್ಲಿ ವೈಭವದಿಂದ ವೈಕುಂಠ ಏಕಾದಶಿಯನ್ನು (Vaikuntha Ekadashi 2023) ಆಚರಿಸಲಾಗುತ್ತಿದ್ದು, ಸಾವಿರಾರು ಭಕ್ತರು ದೇಗುಲಕ್ಕೆ ಭೇಟಿ ನೀಡುತ್ತಿದ್ದಾರೆ.

VISTARANEWS.COM


on

Vaikuntha Ekadashi 2023
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ನಗರದ ಇಸ್ಕಾನ್‌ ದೇಗುಲಗಳಲ್ಲಿ ವೈಕುಂಠ ಏಕಾದಶಿಯನ್ನು (Vaikuntha Ekadashi 2023) ಅದ್ಧೂರಿಯಾಗಿ ಆಚರಿಸಲಾಗುತ್ತಿದೆ. ಮುಂಜಾನೆಯಿಂದಲೇ ಸಾವಿರಾರು ಸಂಖೈೆಯಲ್ಲಿ ಆಗಮಿಸುತ್ತಿರುವ ಭಕ್ತರು ದೇವರ ದರ್ಶನ ಪಡೆಯುತ್ತಿದ್ದಾರೆ.

ವೈಕುಂಠ ಏಕಾದಶಿಯ ಅಂಗವಾಗಿ ನಗರದ ರಾಜಾಜಿನಗರದಲ್ಲಿರುವ ಶ್ರೀ ರಾಧಾ ಕೃಷ್ಣ ಮಂದಿರ ಮತ್ತು ಕನಕಪುರ ರಸ್ತೆಯಲ್ಲಿರುವ ಶ್ರೀ ರಾಜಾಧಿರಾಜ ಗೋವಿಂದ ಮಂದಿರದಲ್ಲಿ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಬೆಳಗ್ಗೆ 3 ಗಂಟೆಯಿಂದಲೇ ಪೂಜೆ ಪುನಸ್ಕಾರ, ಹೋಮಗಳು ಆರಂಭವಾದವು.

ಸಾವಿರಾರು ಭಕ್ತರು ದೇವರ ದರ್ಶನಕ್ಕೆ ಆಗಮಿಸುತ್ತಿದ್ದು, ರಾತ್ರಿಯವರೆಗೂ ದೇವರ ದರ್ಶನಕ್ಕೆ ಅವಕಾಶವಿರುತ್ತದೆ ಎಂದು ಇಸ್ಕಾನ್‌ ತಿಳಿಸಿದೆ. ದೇವರ ದರ್ಶನಕ್ಕೆ ಬರುವಾಗ ಮತ್ತು ದೇವಸ್ಥಾನದೊಳಗೆ ಪ್ರವೇಶಿಸುವಾಗ ಮಾಸ್ಕ್ ಧರಿಸಿರಬೇಕು ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ಸೂಚಿಸಲಾಗಿದೆ.

ಸ್ವರ್ಣ ರಂಗಿನಿಂದ ಲೇಪಿತವಾದ ಭವ್ಯ ವೈಕುಂಠ ದ್ವಾರವನ್ನು ದೇವಸ್ಥಾನದ ಪ್ರವೇಶ ಸ್ಥಳದಲ್ಲಿ ನಿರ್ಮಿಸಲಾಗಿತ್ತು. 15 ಅಡಿ ಎತ್ತರ ಹಾಗೂ 11 ಅಡಿ ಅಗಲದ ವೈಕುಂಠ ದ್ವಾರ ಆಕರ್ಷಕವಾಗಿದ್ದು, ಇಡೀ ದೇವಾಲಯವನ್ನು ವೈಕುಂಠಕ್ಕೆ ಹೋಲಿಕೆಯಾಗುವಂತೆ ರೂಪಿಸಲಾಗಿತ್ತು. ದೇವಾಲಯವನ್ನು ಬಣ್ಣ ಬಣ್ಣದ ಸುಗಂಧಿತ ಪುಷ್ಪಗಳಿಂದ ಸಿಂಗರಿಸಲಾಗಿತ್ತು.

ವೈಕುಂಠ ದ್ವಾರವು ರಾತ್ರಿ 9 ರವರೆಗೆ ಸಾರ್ವಜನಿಕರಿಗೆ ಮುಕ್ತವಾಗಿರುತ್ತದೆ ಎಂದು ಇಸ್ಕಾನ್‌ ತಿಳಿಸಿದೆ. ಮಂದಿರಕ್ಕೆ ಭೇಟಿ ನೀಡುವ ಭಕ್ತರು, ದಿನವಿಡಿ ಭಗವಂತನ ಒಂದು ಲಕ್ಷ ನಾಮಗಳನ್ನು ಜಪಿಸಲ್ಪಡುವ ಲಕ್ಷಾರ್ಚನೆ ಸೇವೆಯಲ್ಲಿ ಭಾಗವಹಿಸುವ ಅವಕಾಶ ನೀಡಲಾಗಿದೆ. ಈ ಸೇವೆಗಾಗಿ ಸುಂದರ ಶ್ರೀನಿವಾಸ ಗೋವಿಂದನ ಪ್ರತಿಮೆ ಸಜ್ಜುಗೊಳಿಸಲಾಗಿದೆ. ಸಂಜೆ 5ಕ್ಕೆ ವಿಶ್ವಶಾಂತಿಗಾಗಿ ವೆಂಕಟೇಶ್ವರ ಹೋಮವನ್ನು ನೆರವೇರಿಸಲಾಗುತ್ತಿದ್ದು, ಅನೇಕ ಭಕ್ತರು ಹೋಮದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ.

ದೇಗುಲಕ್ಕೆ ಭೇಟಿ ನೀಡುವ ಭಕ್ತರಿಗೆ ವಿಶೇಷ ಪ್ರಸಾದ ವಿತರಿಸಲಾಗುತ್ತಿದೆ. ವೈಕುಂಠ ಏಕಾದಶಿಯ ಅಂಗವಾಗಿ ವಿಶೇಷ ಪೂಜೆ, ಸಂಕೀರ್ತನೆ, ಉಪನ್ಯಾಸ, ಹೋಮ, ಮಹಾ ಮಂಗಳಾರತಿ ಕಾರ್ಯಕ್ರಮಗಳು ನಡೆಯುತ್ತಿವೆ. ಕೆಲವು ಕಾರ್ಯಕ್ರಮಗಳನ್ನು ಯೂ-ಟೂಬ್‌ನಲ್ಲಿ ಲೈವ್‌ ಮಾಡಲಾಗುತ್ತಿದೆ.

ಇದನ್ನೂ ಓದಿ | Vaikuntha Ekadashi 2023 | ಮನಸ್ಸಿಗೆ ವಿಕುಂಠಿತವಾದ ಗತಿಯನ್ನುಂಟು ಮಾಡುವುದೇ ವೈಕುಂಠ ಏಕಾದಶಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಧಾರ್ಮಿಕ

Vastu Tips: ಈ ನಕಾರಾತ್ಮಕ ವಸ್ತುಗಳನ್ನು ಮನೆಯಲ್ಲಿ ಇಡಲೇಬೇಡಿ!

ಮನೆಯಲ್ಲಿರುವ ಪ್ರತಿಯೊಂದು ವಸ್ತುವು ಶಕ್ತಿಯನ್ನು ಆಹ್ವಾನಿಸುತ್ತದೆ. ಇದು ನಮ್ಮ ಬದುಕಿನ ಮೇಲೂ ಪ್ರಭಾವ ಬೀರುತ್ತದೆ. ಕೆಲವೊಂದು ವಸ್ತುಗಳು ಸಕಾರಾತ್ಮಕತೆಯನ್ನು ಆಹ್ವಾನಿಸಿದರೆ ಇನ್ನು ಕೆಲವು ನಕಾರಾತ್ಮಕತೆಗೆ ಅಹ್ವಾನ ನೀಡುತ್ತದೆ. ಮನೆಯೊಳಗೇ ನಕಾರಾತ್ಮಕತೆ ತುಂಬಿದರೆ ಕಷ್ಟಗಳ ಸರಮಾಲೆಯೇ ಎದುರಾಗುವುದು ಎನ್ನುತ್ತದೆ ವಾಸ್ತು (Vastu Tips) ನಿಯಮ.

VISTARANEWS.COM


on

By

Vastu Tips
Koo

ಇಷ್ಟವಾಗುವ ಎಲ್ಲ ವಸ್ತುಗಳನ್ನು (object) ನಾವು ತಂದು ಮನೆಯಲ್ಲಿ (home) ಇಟ್ಟುಕೊಳ್ಳುತ್ತೇವೆ. ಆದರೆ ಈ ವಸ್ತುಗಳು ನಮ್ಮ ಜೀವನದ ಮೇಲೆ ಸಕಾರಾತ್ಮಕ (positive energy) ಅಥವಾ ನಕಾರಾತ್ಮಕ (negative energy) ಪ್ರಭಾವವನ್ನು ಬೀರುತ್ತದೆ ಎಂಬುದು ತಿಳಿದಿರಲಿ. ವಾಸ್ತು ಶಾಸ್ತ್ರದ (Vastu Tips) ಪ್ರಕಾರ ಮನೆಯಲ್ಲಿರುವ ಪ್ರತಿಯೊಂದು ವಸ್ತುವು ಶಕ್ತಿಯನ್ನು ಹೊಂದಿರುತ್ತದೆ. ಇದು ನಮ್ಮ ಜೀವನದ ಮೇಲೂ ಪರಿಣಾಮ ಬೀರುತ್ತದೆ.

ರಾಹು- ಕೇತು ಮತ್ತು ಶನಿಯು ಮನೆಯಲ್ಲಿ ಶೇಖರಿಸಿಟ್ಟ ವಸ್ತುಗಳಲ್ಲಿ ವಾಸಿಸುತ್ತಾರೆ ಎಂದು ಭಾವಿಸಲಾಗುತ್ತದೆ. ದೀರ್ಘಕಾಲ ಬಳಸದೇ ಇರುವ ವಸ್ತುಗಳು ಪರಿಣಾಮದಿಂದ ಮನೆಯಲ್ಲಿ ಹೆಚ್ಚು ಘರ್ಷಣೆಗಳು, ಆರ್ಥಿಕ ತೊಂದರೆಗಳು ಉಂಟಾಗುತ್ತವೆ. ಹೀಗಾಗಿ ಮನೆಯಲ್ಲಿ ಸಂಗ್ರಹಿಸಬಾರದ ಮತ್ತು ಮನೆ ಮತ್ತು ಮನೆ ಮಂದಿಯ ಮೇಲೆ ಋಣಾತ್ಮಕ ಪರಿಣಾಮ ಬೀರುವ ಕೆಲವು ವಸ್ತುಗಳಿವೆ. ಅವುಗಳನ್ನು ಯಾವುದೆಂದು ಇಲ್ಲಿ ತಿಳಿದುಕೊಳ್ಳೋಣ.


ನಿಂತಿರುವ ಗಡಿಯಾರ

ಮನೆಯಲ್ಲಿ ಗಡಿಯಾರವನ್ನು ನಿಶ್ಚಲತೆ ಮತ್ತು ನಿಲ್ಲಿಸಿದ ಸಮಯದ ಪ್ರತಿಯಾಗಿ ಕಾಣಲಾಗುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ನಿಲ್ಲಿಸಿದ ಗಡಿಯಾರವು ಕೆಟ್ಟ ಶಕ್ತಿಯನ್ನು ಆಕರ್ಷಿಸುತ್ತದೆ. ಮನೆಯಲ್ಲಿ ನಿಲ್ಲಿಸಿದ ಗಡಿಯಾರವು ಆರ್ಥಿಕ ನಷ್ಟಕ್ಕೆ ಕಾರಣವಾಗುತ್ತದೆ.

ಇದು ಹಣದ ಹರಿವನ್ನು ನಿಲ್ಲಿಸುತ್ತದೆ. ಹಣಕಾಸಿನ ಸಮಸ್ಯೆಗಳಿಗೆ ಕಾರಣವಾಗುತ್ತದೆ. ನಿಷ್ಕ್ರಿಯ ಗಡಿಯಾರವು ಹೆಚ್ಚು ಉದ್ವೇಗ, ಆತಂಕ ಮತ್ತು ನಿರಾಶಾವಾದದ ಮೂಲವಾಗಿದೆ. ಇಂತಹ ಗಡಿಯಾರ ಮನೆಯಲ್ಲಿದ್ದರೆ ಕೂಡಲೇ ಅದನ್ನು ಹೊರಹಾಕಿ. ಇದು ಮನೆಯಲ್ಲಿ ಇಡುವವರಿಗೆ ದುರದೃಷ್ಟವನ್ನು ತರುತ್ತದೆ ಎನ್ನುತ್ತದೆ ವಾಸ್ತು ಶಾಸ್ತ್ರ.


ತುಕ್ಕು ಹಿಡಿದ ವಸ್ತುಗಳು

ಪುರಾತನ ಕಬ್ಬಿಣದ ವಸ್ತುಗಳು ಮನೆಯೊಳಗೆ ಇದ್ದರೆ ಅವುಗಳು ತುಕ್ಕು ಹಿಡಿಯದಂತೆ ನೋಡಿಕೊಳ್ಳಿ. ತುಕ್ಕು ಲೋಹದ ಕ್ಷೀಣತೆಯ ಪರಿಣಾಮವೆಂದು ಭಾವಿಸಲಾಗುತ್ತದೆ. ಇದರಲ್ಲಿ ಲೋಹವು ಅದರ ಧನಾತ್ಮಕ ಶಕ್ತಿಯನ್ನು ಕಳೆದುಕೊಳ್ಳುವಾಗ ನಕಾರಾತ್ಮಕ ಶಕ್ತಿಯನ್ನು ಹೀರಿಕೊಳ್ಳುತ್ತದೆ. ಅದನ್ನು ಮನೆಯೊಳಗೆ ಬಿಡುವುದರಿಂದ ಕೆಟ್ಟ ಶಕ್ತಿಯನ್ನು ಒಳಗೆ ಆಹ್ವಾನಿಸಿದಂತಾಗುತ್ತದೆ.

ತುಕ್ಕು ಹಿಡಿದ ವಸ್ತುಗಳು ವ್ಯಕ್ತಿಯ ಜೀವನದಲ್ಲಿ ನಿಶ್ಚಲತೆಯನ್ನು ಉಂಟುಮಾಡುತ್ತವೆ. ಇದು ಸಾಧನೆ ಮತ್ತು ಪ್ರಗತಿಗೆ ಅಡ್ಡಿಯಾಗುತ್ತದೆ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ.

ಇದನ್ನೂ ಓದಿ: Vastu Tips: ನೆಮ್ಮದಿಯಿಂದ ನಿದ್ದೆ ಮಾಡಬೇಕೆ? ಈ ವಾಸ್ತು ನಿಯಮ ಪಾಲಿಸಿ

ತುಕ್ಕು ಹಿಡಿದ ವಸ್ತುಗಳನ್ನು ಮನೆಯಲ್ಲಿ ಇಡುವುದರಿಂದ ಆರ್ಥಿಕ ನಷ್ಟವಾಗುತ್ತದೆ. ತುಕ್ಕು ಹಿಡಿದ ಲೋಹಗಳಲ್ಲಿ ಕಂಡುಬರುವ ಅಪಾಯಕಾರಿ ಸಂಯುಕ್ತಗಳು ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಹೀಗಾಗಿ ಅವುಗಳನ್ನು ಮನೆಯಲ್ಲಿ ಸಂಗ್ರಹಿಸಬಾರದು.


ಹಳೆಯ ಹಿತ್ತಾಳೆ ಪಾತ್ರೆಗಳು

ಹಳೆಯ ಹಿತ್ತಾಳೆಯ ಅಡುಗೆ ಪಾತ್ರೆಗಳನ್ನು ಹೆಚ್ಚಾಗಿ ಸಂಗ್ರಹಿಸಿ ಇಡುತ್ತೇವೆ. ಈ ಪಾತ್ರೆಗಳನ್ನು ಕತ್ತಲೆಯಲ್ಲಿಟ್ಟರೆ ಸಮಸ್ಯೆಗಳನ್ನು ಉಂಟು ಮಾಡುತ್ತದೆ ಎಂದು ಹೇಳಲಾಗುತ್ತದೆ. ವ್ಯಕ್ತಿಯ ಜೀವನವು ತೊಂದರೆಗೊಳಗಾಗುತ್ತದೆ. ಹಿತ್ತಾಳೆ ಮತ್ತು ಗುರು ಗ್ರಹವು ಸಂಪರ್ಕ ಹೊಂದಿದೆ. ಜಾತಕದಲ್ಲಿ ಗುರು ಬಲಹೀನರಾಗಿರುವವರು ಹಿತ್ತಾಳೆಯ ಪಾತ್ರೆಗಳನ್ನು ಮನೆಯಲ್ಲಿ ಇಡಬಾರದು ಎನ್ನುತ್ತದೆ ವಾಸ್ತು ಶಾಸ್ತ್ರ.

Continue Reading

ಧಾರ್ಮಿಕ

Ballari News: ಜೂ.12ರಂದು ಚೇಳ್ಳಗುರ್ಕಿ ಶ್ರೀ ಎರ‍್ರಿತಾತನವರ ಮಹಾರಥೋತ್ಸವ

Ballari News: ಬಳ್ಳಾರಿ ತಾಲೂಕಿನ ಚೇಳ್ಳಗುರ್ಕಿ ಗ್ರಾಮದ ಶ್ರೀ ಎರ‍್ರಿತಾತನವರ ಮಹಾರಥೋತ್ಸವವು ಜೂ.12 ರಂದು ಸಂಜೆ 5 ಗಂಟೆಗೆ ಜರುಗಲಿದೆ. ಜೂ.5 ರಿಂದಲೇ ಜಾತ್ರಾ ಮಹೋತ್ಸವ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗಿವೆ.

VISTARANEWS.COM


on

Chellagurki Shri Yerrithathanavara Maharathotsava On 12th June
Koo

ಬಳ್ಳಾರಿ: ತಾಲೂಕಿನ ಚೇಳ್ಳಗುರ್ಕಿ ಗ್ರಾಮದ ಶ್ರೀ ಎರ‍್ರಿತಾತನವರ ಮಹಾರಥೋತ್ಸವವು ಜೂ.12ರಂದು ಸಂಜೆ 5 ಗಂಟೆಗೆ ಜರುಗಲಿದ್ದು, ಜಾತ್ರಾ ಮಹೋತ್ಸವ ಅಂಗವಾಗಿ ಜೂ.5 ರಿಂದಲೇ ವಿವಿಧ ಧಾರ್ಮಿಕ ಕಾರ್ಯಕ್ರಮಗಳು (Ballari News) ಆರಂಭವಾಗಿವೆ.

ಇದನ್ನೂ ಓದಿ: Health Tips For Monsoon: ಮಳೆಗಾಲಕ್ಕೆ ನಮ್ಮ ಆಹಾರ ಹೇಗಿರಬೇಕು?

ಜಾತ್ರಾ ಮಹೋತ್ಸವದ ಅಂಗವಾಗಿ ಜೂ.5ರಂದು ಬೆಳಿಗ್ಗೆ 6 ಗಂಟೆಯಿಂದಲೇ ನಂದಿ ಧ್ವಜಾರೋಹಣ ಮತ್ತು ಸಪ್ತಭಜನೆ ಕಾರ್ಯಕ್ರಮ ಆರಂಭವಾಗಿದೆ. ಜೂ.6ರಂದು ಸಂಜೆ ಬೆಳ್ಳಿ ರಥೋತ್ಸವ ಕಾರ್ಯಕ್ರಮ ನಡೆಯಿತು. ಮಂಗಳವಾರ ಬಸವ ಉತ್ಸವ ಕಾರ್ಯಕ್ರಮ ನಡೆಯಿತು. ಜೂ.12ರಂದು ಬುಧವಾರ ಬೆಳಿಗ್ಗೆ 6 ಗಂಟೆಗೆ ಸಪ್ತಭಜನೆ ಮುಕ್ತಾಯ ಕಾರ್ಯಕ್ರಮ ನಡೆಯಲಿದೆ.

ಶ್ರೀ ಎರ‍್ರಿಸ್ವಾಮಿ ಜೀವ ಸಮಾಧಿ ಟ್ರಸ್ಟ್ ಕಮಿಟಿಯ ಆವರಣದಲ್ಲಿ ಎರ‍್ರಿತಾತನವರ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಮಳಿಗೆ ಉದ್ಘಾಟನೆ ಕಾರ್ಯಕ್ರಮ ಜೂ.12ರಂದು ಬೆಳಿಗ್ಗೆ 10.30ಕ್ಕೆ ನಡೆಯಲಿದೆ. ಉರವಕೊಂಡ ಗವಿಮಠ ಸಂಸ್ಥಾನದ ಡಾ. ಕರಿಬಸವರಾಜೇಂದ್ರ ಮಹಾಸ್ವಾಮೀಜಿ, ಮಳಿಗೆ ಉದ್ಘಾಟನೆ ಮಾಡಲಿದ್ದಾರೆ.

ಇದನ್ನೂ ಓದಿ: Bengaluru News: ಬೆಂಗಳೂರಿನಲ್ಲಿ ಜೂ. 29ರಂದು ನಿವೃತ್ತ ನ್ಯಾ. ಚಂದ್ರಶೇಖರಯ್ಯಗೆ ಅಭಿನಂದನೆ

ಜೂ.12 ರಂದು ಸಂಜೆ 5 ಗಂಟೆಗೆ ಶ್ರೀ ಎರ‍್ರಿತಾತನವರ ಮಹಾರಥೋತ್ಸವ ನಡೆಯಲಿದೆ. ಅಂದು ರಾತ್ರಿ 7 ಗಂಟೆಗೆ ಕರ್ಪೂರದ ಆರತಿ ಕಾರ್ಯಕ್ರಮ ನಡೆಯಲಿದೆ. ಜೂ.13ರಂದು ಸಂಜೆ 7 ಗಂಟೆಗೆ ಹೂವಿನ ರಥೋತ್ಸವ ಕಾರ್ಯಕ್ರಮ ನಂತರ ಬಾಣೋತ್ಸವ ಕಾರ್ಯಕ್ರಮ ನಡೆಯಲಿದೆ ಎಂದು ಶ್ರೀ ಎರ‍್ರಿಸ್ವಾಮಿ ಜೀವಸಮಾಧಿ ಟ್ರಸ್ಟ್‌ನ ಅಧ್ಯಕ್ಷ ಬಾಳನಗೌಡ ಮತ್ತು ಶ್ರೀ ದಾಸೋಹ ಸೇವಾ ಸಂಘದ ಅಧ್ಯಕ್ಷ ಪಂಪನಗೌಡ ತಿಳಿಸಿದ್ದಾರೆ.

Continue Reading

ದಕ್ಷಿಣ ಕನ್ನಡ

Black Magic : 25 ಕುರಿ-ಮೇಕೆಗಳ ರುಂಡ ಕತ್ತರಿಸಿ ವ್ಯಕ್ತಿಗಳ ಫೋಟೊ ಇಟ್ಟು ಭಯಾನಕ ವಾಮಾಚಾರ!

Black Magic : ಬೆಳ್ತಂಗಡಿ ಸಮೀಪದಲ್ಲಿ ಭಯಂಕರವಾಗಿ ವಾಮಾಚಾರ ಪ್ರಯೋಗ ಮಾಡಲಾಗಿದೆ. ಬರೋಬ್ಬರಿ 25 ಆಡುಗಳ ರುಂಡ ಕತ್ತರಿಸಿ ಬಳಿಕ ಮೊಳೆ ಹೊಡೆದು ವ್ಯಕ್ತಿಗಳ ಫೋಟೋ ಹಾಕಿದ್ದಾರೆ.

VISTARANEWS.COM


on

By

black magic
Koo

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೆಚ್ಚಿ ಬೀಳಿಸುವ ವಾಮಾಚಾರ ಪ್ರಕರಣವೊಂದು (Black Magic ) ನಡೆದಿದೆ. 25 ಸತ್ತ ಆಡಿನ ತಲೆಯೊಂದಿಗೆ ವ್ಯಕ್ತಿಗಳ ಭಾವ ಚಿತ್ರ ಬಳಸಿ ಕೃಷಿ ತೋಟದ ಗೇಟ್ ಮುಂಭಾಗ ವಾಮಾಚಾರ ನಡೆಸಲಾಗಿದೆ.

ದಕ್ಷಿಣ ಕನ್ನಡದ ಬೆಳ್ತಂಗಡಿಯ ಗರ್ಡಾಡಿಯ ಬೋಳಿಯಾರ್‌ನಲ್ಲಿ ವಾಮಾಚಾರ ನಡೆಸಲಾಗಿದೆ. ಜಾಗದ ತಕರಾರು ಹಿನ್ನೆಲೆಯಲ್ಲಿ ವಾಮಾಚಾರ ನಡೆದಿರುವ ಆರೋಪ ಕೇಳಿ ಬಂದಿದೆ. ಕೃಷಿ ತೋಟ ಮುಂಭಾಗ ಸತ್ತ ಆಡಿನ ತಲೆಗಳು ಹಾಗು ವ್ಯಕ್ತಿಗಳ ಭಾವಚಿತ್ರ ಪತ್ತೆಯಾಗಿದೆ.

ಆಡಿನ ತಲೆಗೆ ಹಲವು ಜನರ ಭಾವಚಿತ್ರವನ್ನು ಮೊಳೆ ಹೊಡೆದು ಮಾಟ ಮಂತ್ರ ಮಾಡಲಾಗಿದೆ. ಸಮಾಜದ ಕೆಲ ಗಣ್ಯ ವ್ಯಕ್ತಿಗಳ ಫೋಟೋ ಕೂಡ ಬಳಕೆ ಮಾಡಲಾಗಿದೆ. ಜಾಗದ ಮಾಲೀಕರಾದ ಗೋಪು ಕುಮಾರ್ ಹಾಗು ಸುಮೇಶ್ ವಿರುದ್ಧ ವಾಮಾಚಾರ ನಡೆದಿದೆ. ಮಂಗಳೂರಿನ ರಾಜೇಶ್ ಪ್ರಭು ಎಂಬಾತನೇ ಇದನ್ನಲ್ಲೆ ಮಾಡಿಸಿದ್ದಾನೆ ಎನ್ನಲಾಗಿದೆ.

ಇದನ್ನೂ ಓದಿ: Saptami Gowda : ಯುವ ಪತ್ನಿ ಶ್ರೀದೇವಿ ವಿರುದ್ಧ ಮಾನಹಾನಿ ಕೇಸ್; ಕಾನೂನು ಹೋರಾಟಕ್ಕೆ ಮುಂದಾದ ನಟಿ ಸಪ್ತಮಿ ಗೌಡ!

ರಾಜೇಶ್ ಪ್ರಭು ಹಾಗು ಗೋಪು ಕುಮಾರ್ ನಡುವೆ ಜಾಗದ ತಕರಾರು ಇತ್ತು. ರಾಜೇಶ್ ಪ್ರಭು ವಿರುದ್ಧ ಕಾನೂನು ಹೋರಾಟಕ್ಕೆ ಗೋಪು ಕುಮಾರ್ ಹಾಗು ಸಂಗಡಿಗರು ಮುಂದಾಗಿದ್ದರು. ಇದೆ ಕಾರಣಕ್ಕೆ ಗೋಪು ಕುಮಾರ್ ಸಹಿತ ಬೆಂಬಲಿಸಿದವರ ವಿರುದ್ಧವು ವಾಮಾಚಾರ ಪ್ರಯೋಗ ಮಾಡಲಾಗಿದೆ.

ಸ್ಥಳದಲ್ಲಿ 25 ಆಡಿನ ತಲೆಗಳು, ಮೊಟ್ಟೆ, ಮರದ ಪ್ರತಿಕೃತಿ, ಭಾವಚಿತ್ರ, ಹೂವು ಪತ್ತೆಯಾಗಿದೆ. ತೋಟದ ಬಳಿ ಆಗಮಿಸುವ ಸಾರ್ವಜನಿಕರಲ್ಲಿ ಆತಂಕ ಹೆಚ್ಚಾಗಿದೆ. ಕೃತ್ಯ ನಡೆಸಿದವರ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಧಾರ್ಮಿಕ

Vastu Tips: ಮನೆಯಲ್ಲಿ ಧನಾತ್ಮಕ ಶಕ್ತಿ ಹೆಚ್ಚಿಸಿಕೊಳ್ಳಲು ಈ ವಾಸ್ತು ಸಲಹೆ ಪಾಲಿಸಿ

ಮನೆಯಲ್ಲಿ ಸುಖ, ಶಾಂತಿ, ನೆಮ್ಮದಿ ಇರಬೇಕಾದರೆ ಧನಾತ್ಮಕ ಶಕ್ತಿಯನ್ನು ವೃದ್ಧಿಸಬೇಕು. ಮನೆಯಲ್ಲಿರುವ ಪ್ರತಿಯೊಂದು ವಸ್ತು ಒಂದಲ್ಲ ಒಂದು ರೀತಿಯ ಶಕ್ತಿಯನ್ನು ಆಹ್ವಾನಿಸುತ್ತದೆ. ಇದರಲ್ಲಿ ಋಣಾತ್ಮಕ ಶಕ್ತಿ ಹೆಚ್ಚಾಗಿರಬಹುದು. ಇದನ್ನು ತಡೆಯಲು ವಾಸ್ತು ಶಾಸ್ತ್ರದಲ್ಲಿ (Vastu Tips) ಹೇಳುವ ಕೆಲವೊಂದು ನಿಯಮಗಳನ್ನು ಅನುಸರಿಸುವ ಮೂಲಕ ಮನೆಯನ್ನು ಆರೋಗ್ಯಕರ ವಾಸಸ್ಥಳವನ್ನಾಗಿ ಮಾಡಬಹುದು.

VISTARANEWS.COM


on

By

Vastu Tips
Koo

ವಾಸ್ತು ಪ್ರಕಾರ (Vastu Tips) ಶಾಂತ ಮತ್ತು ಆರೋಗ್ಯಕರವಾಗಿರಬೇಕು ವಾಸಸ್ಥಳವನ್ನು ನಿರ್ಮಿಸಲು ಬಯಸಿದರೆ ಮನೆಯಿಂದ (home) ನಕಾರಾತ್ಮಕತೆಯನ್ನು (Negativity) ದೂರ ಮಾಡಬೇಕು. ಇದಕ್ಕಾಗಿ ಅಸ್ತವ್ಯಸ್ತತೆ, ಬಗೆಹರಿಯದ ವಿವಾದ ಮತ್ತು ನಕಾರಾತ್ಮಕ ಭಾವನೆಗಳನ್ನು ಹುಟ್ಟುಹಾಕುವ ನಿರ್ದಿಷ್ಟ ಅಲಂಕಾರಗಳು ಕೂಡ ಕಾರಣವಾಗಿರುತ್ತದೆ. ಯಾಕೆಂದರೆ ಕೆಲವೊಂದು ವಸ್ತುಗಳು ಮನೆಯೊಳಗೇ ನಕಾರಾತ್ಮಕ ಶಕ್ತಿಯ ಮೂಲಗಳಾಗಿರಬಹುದು.

ಮನೆಯೊಳಗಿನ ಮತ್ತು ಮನೆಯ ಹೊರಗಿನ ವಾತಾವರಣ, ವಸ್ತುಗಳು ಮನೆಯವರ ಮಾನಸಿಕ ಆರೋಗ್ಯವನ್ನು (mental health) ಸುಧಾರಿಸುವ, ಒತ್ತಡವನ್ನು ಕಡಿಮೆ ಮಾಡುವ ಮತ್ತು ಸಾಮಾನ್ಯ ಯೋಗಕ್ಷೇಮವನ್ನು ಹೆಚ್ಚಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಇದಕ್ಕೆ ಪೂರಕ ವಾತಾವರಣವನ್ನು ಸೃಷ್ಟಿಸಿದಾಗ ಮನೆ ವಿಶ್ರಾಂತಿ, ಪುನಶ್ಚೇತನ ಮತ್ತು ಅಭಿವೃದ್ಧಿ ಹೊಂದುವ ಸ್ವರ್ಗವಾಗಬಹುದು. ಇದರಿಂದ ಎಲ್ಲಾ ಕೆಟ್ಟ ಶಕ್ತಿಗಳನ್ನು ಮನೆಯಿಂದ ದೂರ ಮಾಡಬಹುದು. ಇದಕ್ಕಾಗಿ ಕೆಲವು ಸರಳ ವಿಧಾನ ಇಲ್ಲಿದೆ.


ಸಾಕಷ್ಟು ಗಾಳಿ, ಸೂರ್ಯನ ಬೆಳಕು

ನೈಸರ್ಗಿಕ ಬೆಳಕನ್ನು ಮನೆಯೊಳಗೆ ಪ್ರವೇಶಿಸಲು ಅನುಮತಿಸುವುದು ಎಲ್ಲಾ ಮಾಲಿನ್ಯಕಾರಕಗಳು ಮತ್ತು ಕೆಟ್ಟ ಶಕ್ತಿಯನ್ನು ಮನೆಯಿಂದ ದೂರ ಮಾಡುತ್ತದೆ. ಇದಕ್ಕಾಗಿ ಬೆಳಗ್ಗೆ, ಸಂಜೆಯ ವೇಳೆ ಮನೆಯ ಒಳಗೆ ಗಾಳಿ, ಬೆಳಕು ಬರಲು ಪರದೆಗಳನ್ನು ತೆರೆಯಿರಿ. ಇದು ನಮ್ಮಲ್ಲಿ ಉದ್ವೇಗ ಮತ್ತು ಆಕ್ರಮಣಶೀಲತೆಯನ್ನು ಕಡಿಮೆ ಮಾಡುತ್ತದೆ.

ಸಮುದ್ರದ ಉಪ್ಪು

ಸಮುದ್ರದ ಉಪ್ಪನ್ನು ಬಳಸುವುದರಿಂದ ಋಣಾತ್ಮಕ ಶಕ್ತಿಯು ಮನೆಗೆ ಪ್ರವೇಶಿಸುವುದಿಲ್ಲ ಏಕೆಂದರೆ ಉಪ್ಪು ಅದನ್ನು ಒಳಭಾಗದಿಂದ ಹೀರಿಕೊಳ್ಳುತ್ತದೆ. ಪ್ರವೇಶದ್ವಾರಗಳಲ್ಲಿ ನಕಾರಾತ್ಮಕತೆಯನ್ನು ತಡೆಯಲು, ವಿಶ್ರಾಂತಿ ಕೊಠಡಿಗಳಲ್ಲಿ ಮತ್ತು ಮಾಪ್ ಮಹಡಿಗಳಲ್ಲಿ ವಾಸ್ತು ದೋಷಗಳನ್ನು ತಗ್ಗಿಸಲು ಇದನ್ನು ಬಳಸಬಹುದು.


ಶಬ್ದಗಳು

ಟಿಬೆಟಿಯನ್ ಹಾಡುವ ಬೌಲ್‌ಗಳು, ಪೋರ್ಟಬಲ್ ಬೆಲ್ ಮತ್ತು ಮಂತ್ರಗಳನ್ನು ಪಠಿಸುವ ಅಥವಾ ಆಲಿಸುವ ಮೂಲಕ ಮನೆಯಿಂದ ನಕಾರಾತ್ಮಕ ಶಕ್ತಿಯನ್ನು ತೊಡೆದು ಹಾಕಬಹುದು. ಈ ತಂತ್ರಗಳು ಶಕ್ತಿಯ ಧನಾತ್ಮಕ ಹರಿವನ್ನು ಉತ್ತೇಜಿಸುತ್ತವೆ.

ನವಿಲು ಗರಿಗಳು

ವಾಸ್ತು ಶಾಸ್ತ್ರವು ನವಿಲು ಗರಿಗಳು ಮಂಗಳಕರವೆಂದು ಹೇಳುತ್ತದೆ. ಇದು ನಕಾರಾತ್ಮಕ ಶಕ್ತಿಯನ್ನು ಹೀರಿಕೊಳ್ಳುತ್ತದೆ. ವಾಸ್ತು ದೋಷಗಳನ್ನು ತೆಗೆದುಹಾಕುತ್ತದೆ ಎಂದು ಭಾವಿಸಲಾಗಿದೆ. ಮನೆಯೊಳಗೇ ಇದನ್ನು ಇಡುವುದರಿಂದ ದುಷ್ಟ ಶಕ್ತಿಗಳನ್ನು ಮನೆಯಿಂದ ದೂರ ಮಾಡಬಹುದು.

ಇದನ್ನೂ ಓದಿ: Vastu Tips: ಸಣ್ಣ ವಾಸ್ತು ದೋಷವೇ ಕುಟುಂಬದಲ್ಲಿ ದೊಡ್ಡ ಸಮಸ್ಯೆಗೆ ಕಾರಣವಾಗಬಹುದು!


ಋಷಿ ಎಲೆಗಳನ್ನು ಉರಿಸುವುದು

ಋಷಿ ಎಲೆ ಒಂದು ಪೊದೆ ಸಸ್ಯವಾಗಿದೆ. ಇದು ಮನೆಯಲ್ಲಿನ ಕೆಟ್ಟ ಶಕ್ತಿಯನ್ನು ದೂರ ಮಾಡುತ್ತದೆ. ಲ್ಯಾವೆಂಡರ್ ಮತ್ತು ಶ್ರೀಗಂಧದಂತಹ ಚಿಕಿತ್ಸಕ ಗುಣಗಳನ್ನು ಹೊಂದಿರುವ ಋಷಿ ಎಲೆಗಳನ್ನು ಸುಡುವುದು ಮತ್ತು ಕರ್ಪೂರದ ದೀಪಗಳನ್ನುಇಡುವುದರಿಂದ ಮನೆಯಲ್ಲಿ ಧನಾತ್ಮಕ ಶಕ್ತಿ ಹೆಚ್ಚಾಗುತ್ತದೆ.

Continue Reading
Advertisement
IPL 2025
ಕ್ರೀಡೆ3 mins ago

IPL 2025: ಐಪಿಎಲ್​ ತಂಡಗಳ ಬ್ರಾಂಡ್​ ಮೌಲ್ಯ ಏರಿಕೆ; ಕಪ್​ ಗೆಲ್ಲದಿದ್ದರೂ ಆರ್​ಸಿಬಿ ಪ್ರಾಬಲ್ಯ

Rave Party
ಕರ್ನಾಟಕ4 mins ago

Rave Party: ರೇವ್ ಪಾರ್ಟಿ ಪ್ರಕರಣದಲ್ಲಿ ತೆಲುಗು ನಟಿ ಹೇಮಾಗೆ ಜಾಮೀನು

Actor Darshan
ಪ್ರಮುಖ ಸುದ್ದಿ44 mins ago

Actor Darshan: ಯಾರೇ ಆದ್ರೂ ನ್ಯಾಯ ಎತ್ತಿ ಹಿಡಿಯಬೇಕು; ದರ್ಶನ್ ವಿರುದ್ಧ ನಟಿ ರಮ್ಯಾ ಮತ್ತೊಂದು ಟ್ವೀಟ್‌!

Tamilisai Soundararajan
ದೇಶ45 mins ago

Tamilisai Soundararajan: ವೇದಿಕೆ ಮೇಲೆಯೇ ತಮಿಳ್‌ಸಾಯಿಗೆ ಅಮಿತ್‌ ಶಾ ಭರ್ಜರಿ ಕ್ಲಾಸ್;‌ ವಿಡಿಯೊ ನೋಡಿ

karnataka weather Forecast
ಮಳೆ1 hour ago

Karnataka Weather : ಕರಾವಳಿ ಸೇರಿ 11 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌; ಮಳೆ ಜತೆಗೆ ರಭಸವಾಗಿ ಬೀಸಲಿದೆ ಗಾಳಿ

TK Chathunni
ಕ್ರೀಡೆ1 hour ago

TK Chathunni: ಭಾರತ ಫುಟ್‌ಬಾಲ್‌ ತಂಡದ ಮಾಜಿ ಆಟಗಾರ, ಕೋಚ್​ ಟಿ.ಕೆ. ಚತುನ್ನಿ ನಿಧನ

Ready Saree Fashion Tips
ಫ್ಯಾಷನ್2 hours ago

Ready Saree Fashion Tips: ರೆಡಿ ಸೀರೆ ಪ್ರಿಯರು ಮರೆಯದೇ ಗಮನದಲ್ಲಿಟ್ಟುಕೊಳ್ಳಬೇಕಾದ 5 ಸಂಗತಿಗಳು

Virat Kohli
ಕ್ರೀಡೆ2 hours ago

Virat Kohli: ಅಮೆರಿಕ ವಿರುದ್ಧವಾದರೂ ವಿಶ್ವ ದಾಖಲೆ ನಿರ್ಮಿಸಲಿದ್ದಾರಾ ಕಿಂಗ್​ ಕೊಹ್ಲಿ?

Chandrababu Naidu
ದೇಶ2 hours ago

Chandrababu Naidu: ವಯಸ್ಸಲ್ಲಿ ಕಿರಿಯರಾದ ಮೋದಿ ಪಾದ ಮುಟ್ಟಲು ಮುಂದಾದ ಚಂದ್ರಬಾಬು ನಾಯ್ಡು; Video ಇದೆ

Benefits Of Eating Guava
ಆರೋಗ್ಯ2 hours ago

Benefits Of Eating Guava: ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬೇಕೆ? ಸೀಬೆಕಾಯಿ ತಿನ್ನಿ!

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka weather Forecast
ಮಳೆ1 day ago

Karnataka Weather : ಭಾರಿ ಮಳೆಗೆ ಗುಡ್ಡದಿಂದ ಉರುಳಿ ಬಿದ್ದ ಬಂಡೆಗಲ್ಲು; ಬೆಂಗಳೂರಲ್ಲೂ ಸಂಜೆ ವರ್ಷಧಾರೆ

actor Darshan
ಚಿತ್ರದುರ್ಗ1 day ago

Actor Darshan: ರೇಣುಕಾ ಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್‌ ಅರೆಸ್ಟ್‌; ಪ್ರಕರಣವನ್ನು ಸಿಬಿಐಗೆ ವಹಿಸಲು ಒತ್ತಾಯ

Actor Darshan gets a series of questions from the police
ಸಿನಿಮಾ1 day ago

Actor Darshan : ಪವಿತ್ರಗೌಡ ಬಗ್ಗೆ ಪೋಸ್ಟ್‌ ಮಾಡಿದ್ರೆ ನಿಮಗ್ಯಾಕೆ ಕೋಪ? ದರ್ಶನ್‌ಗೆ ಪೊಲೀಸರ ಪ್ರಶ್ನೆಗಳ ಸುರಿಮಳೆ

Actor Darshan
ಸಿನಿಮಾ1 day ago

Actor Darshan : ದರ್ಶನ್‌ ಜೈಲಿಗೆ ಹೋಗುತ್ತಿರುವುದು ಇದೇ ಮೊದಲಲ್ಲ; ನಟನ ಮೇಲಿವೆ ಹತ್ತಾರು ಕೇಸ್‌ಗಳು!

Saptami Gowda
ಸಿನಿಮಾ1 day ago

Saptami Gowda : ಯುವ ಪತ್ನಿ ಶ್ರೀದೇವಿ ವಿರುದ್ಧ ಮಾನಹಾನಿ ಕೇಸ್; ಕಾನೂನು ಹೋರಾಟಕ್ಕೆ ಮುಂದಾದ ನಟಿ ಸಪ್ತಮಿ ಗೌಡ!

Karnataka weather Forecast
ಮಳೆ2 days ago

Karnataka Weather : ಭಾರಿ ಮಳೆಗೆ ಮನೆ ಗೋಡೆ ಕುಸಿದು ಎಮ್ಮೆಗಳು ಸಾವು; ಆಕಳಿನ ಜೀವ ತೆಗೆದ ವಿದ್ಯುತ್‌ ತಂತಿ

Karnataka weather Forecast
ಮಳೆ5 days ago

Karnataka weather : ಮಳೆಯಲ್ಲೆ ತಪಸ್ಸಿಗೆ ಕುಳಿತ ವೃದ್ಧ; ಇನ್ನೊಂದು ವಾರ ನಾನ್‌ ಸ್ಟಾಪ್‌ ವರುಣನ ಅಬ್ಬರ

Sigandur launch
ಶಿವಮೊಗ್ಗ5 days ago

Sigandur launch: ಸಿಗಂದೂರು ಲಾಂಚ್‌ನಲ್ಲಿ ಭಾರಿ ವಾಹನಗಳಿಗೆ ನಿರ್ಬಂಧ

Karnataka Rain
ಮಳೆ6 days ago

Karnataka Rain : ಭಾರಿ ಮಳೆಗೆ ಮರ ಬಿದ್ದು ಮೇಕೆಗಳು ಸಾವು; ಸಿಡಿಲಿಗೆ ಎಲೆಕ್ಟ್ರಿಕ್‌ ಅಂಗಡಿ ಸುಟ್ಟು ಭಸ್ಮ

Lok Sabha Election Result 2024 Live
ದೇಶ1 week ago

Lok Sabha Election Result 2024 Live: ಲೋಕಸಭೆ ಚುನಾವಣೆ ಫಲಿತಾಂಶದ ಲೈವ್‌ ಇಲ್ಲಿ ವೀಕ್ಷಿಸಿ

ಟ್ರೆಂಡಿಂಗ್‌