Rashmika Mandanna | 'ಕೂರ್ಗ್ ವರ್ಷದ ವ್ಯಕ್ತಿ 2022' ಆಗಿ ಹೊರಹೊಮ್ಮಿದ ರಶ್ಮಿಕಾ ಮಂದಣ್ಣ - Vistara News

ಸಿನಿಮಾ

Rashmika Mandanna | ‘ಕೂರ್ಗ್ ವರ್ಷದ ವ್ಯಕ್ತಿ 2022’ ಆಗಿ ಹೊರಹೊಮ್ಮಿದ ರಶ್ಮಿಕಾ ಮಂದಣ್ಣ

ಕರ್ನಾಟಕ ಮೂಲದ ನ್ಯೂಸ್ ಪೋರ್ಟಲ್ ನಡೆಸಿದ ಸಮೀಕ್ಷೆಯಲ್ಲಿ ರಶ್ಮಿಕಾ (Rashmika Mandanna ) ಅವರು ‘ಕೂರ್ಗ್ ವರ್ಷದ ವ್ಯಕ್ತಿ 2022’ಎಂದು ಆಯ್ಕೆಯಾಗಿದ್ದಾರೆ.

VISTARANEWS.COM


on

Rashmika Mandanna
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು : ನ್ಯಾಶನಲ್‌ ಕ್ರಶ್‌ ರಶ್ಮಿಕಾ ಮಂದಣ್ಣ (Rashmika Mandanna) ತೆಲುಗು ಚಿತ್ರರಂಗದ ಅತ್ಯಂತ ಜನಪ್ರಿಯ ಯುವ ತಾರೆಗಳಲ್ಲಿ ಒಬ್ಬರು. ಕರ್ನಾಟಕ ಮೂಲದ ನ್ಯೂಸ್ ಪೋರ್ಟಲ್ ನಡೆಸಿದ ಸಮೀಕ್ಷೆಯಲ್ಲಿ ರಶ್ಮಿಕಾ ಅವರು ‘ಕೂರ್ಗ್ ವರ್ಷದ ವ್ಯಕ್ತಿ 2022’ಎಂದು ಆಯ್ಕೆಯಾಗಿದ್ದಾರೆ.

ರಶ್ಮಿಕಾ ಮಂದಣ್ಣ ಈ ವಿಚಾರವನ್ನು ಟ್ವೀಟ್‌ನಲ್ಲಿ ಹಂಚಿಕೊಂಡಿದ್ದಾರೆ. ʻʻಇದು ನನಗೆ ನಿಜವಾಗಿಯೂ ಸಂತೋಷವನ್ನು ನೀಡುತ್ತಿದೆ. ನನಗೆ ಹೆಮ್ಮೆಯಾಗುತ್ತಿದೆ. ನಿಮ್ಮ ಪ್ರೀತಿಗಾಗಿ ತುಂಬಾ ಧನ್ಯವಾದಗಳುʼʼ ಎಂದು ಬರೆದುಕೊಂಡಿದ್ದಾರೆ. 2016ರಲ್ಲಿ ಕಿರಿಕ್ ಪಾರ್ಟಿ ಮೂಲಕ ಚಿತ್ರರಂಗ ಪ್ರವೇಶಿಸಿದ ವಿರಾಜ ಪೇಟೆಯ ರಶ್ಮಿಕಾ ಮಂದಣ್ಣ, ಕನ್ನಡ, ತೆಲುಗು, ತಮಿಳು, ಹಿಂದಿ ಸೇರಿದಂತೆ ಬಹು ಭಾಷಾ ತಾರೆಯಾಗಿ ಮಿಂಚುತ್ತಿದ್ದಾರೆ. ರಕ್ಷಿತ್ ಶೆಟ್ಟಿ, ಪುನೀತ್ ರಾಜ್ ಕುಮಾರ್, ಅಮಿತಾಭ್ ಬಚ್ಚನ್, ಅಲ್ಲು ಅರ್ಜುನ್, ದಳಪತಿ ವಿಜಯ್ ಅವರಂತಹ ಖ್ಯಾತ ನಟರೊಂದಿಗೆ ತೆರೆ ಹಂಚಿಕೊಂಡಿದ್ದಾರೆ. 

ಇದನ್ನೂ ಓದಿ | Rashmika Mandanna | ಹೊಸ ವರ್ಷಾಚರಣೆಗೆ ಬಿಳಿ ಸೀರೆಯಲ್ಲಿ ಮಿಂಚಿದ ರಶ್ಮಿಕಾ

ದಳಪತಿ ವಿಜಯ್‌ ಜತೆ ರಶ್ಮಿಕಾ ಮಂದಣ್ಣ ʻವಾರಿಸುʼ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಜನವರಿ 12 ರಂದು ಸಿನಿಮಾ ಬಿಡುಗಡೆಯಾಗುತ್ತಿದ್ದು, ಸಿನಿಮಾ ಪ್ರಚಾರದಲ್ಲಿ ನಟಿ ಬ್ಯುಸಿಯಾಗಿದ್ದಾರೆ. ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್‌ ಅಡಿ ದಿಲ್ ರಾಜು ಅವರು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ತೆಲುಗಿನ ಬೃಂದಾವನಂ, ʻಮಹರ್ಷಿʼ ಖ್ಯಾತಿಯ ವಂಶಿ ಪೈಡಿಪಳ್ಳಿ ಅವರು ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ತಮಿಳು ಹಾಗೂ ತೆಲುಗು ಭಾಷೆಯಲ್ಲಿ ಸಿನಿಮಾ ಏಕಕಾಲದಲ್ಲಿ ಬಿಡುಗಡೆಯಾಗಲಿದೆ.

ಇದನ್ನೂ ಓದಿ | Rashmika Mandanna | ಸಮಂತಾ ವಿಚಾರದಲ್ಲಿ ನಾನು ಪೊಸೆಸಿವ್ ಎಂದ ರಶ್ಮಿಕಾ ಮಂದಣ್ಣ!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಟಾಲಿವುಡ್

List of Movies Releasing: ಈ ವಾರ ಬಿಡುಗಡೆಗೆ ಸಜ್ಜಾಗಿವೆ ಈ ಸಾಲು ಸಾಲು ಸಿನಿಮಾಗಳು!

List of Movies Releasing: ಈ ವಾರ ಜಿ9 ಕಮ್ಯೂನಿಕೇಷನ್ ಮೀಡಿಯಾ & ಎಂಟರ್ಟೈನ್ಮೆಂಟ್ ಲಾಂಛನದಲ್ಲಿ (Kannada New Movie) ನಿರ್ಮಾಣವಾಗುತ್ತಿರುವ, ‘ಕ್ರೇಜಿಸ್ಟಾರ್’ ರವಿಚಂದ್ರನ್ ಮುಖ್ಯಪಾತ್ರದಲ್ಲಿ ನಟಿಸುತ್ತಿರುವ ‘ದಿ ಜಡ್ಜ್‌ಮೆಂಟ್’ ಸಿನಿಮಾ ತೆರೆಗೆ ಬರುತ್ತಿದೆ. ಜೂನ್ 4ಕ್ಕೆ ಲೋಕಸಭೆ ಚುನಾವಣೆ ಫಲಿತಾಂಶ ಸಹ ಹೊರ ಬೀಳಲಿದೆ. ಆ ಬಳಿಕವೇ ಚಿತ್ರರಂಗ ಸಹಜ ಸ್ಥಿತಿಗೆ ಮರಳುವ ಸಾಧ್ಯತೆಯಿದೆ. ದೊಡ್ಡ ಸಿನಿಮಾಗಳು ಅಲ್ಲದೇ ಇದ್ದರೂ ಒಂದಷ್ಟು ಸಿನಿಮಾಗಳು ಈ ವಾರ ಬಿಡುಗಡೆಗೆ ಸಜ್ಜಾಗಿವೆ. ಅವುಗಳು ಯಾವುದೆಲ್ಲ ನೋಡೋಣ!

VISTARANEWS.COM


on

List of Movies Releasing From may 24
Koo

ಬೆಂಗಳೂರು: ಐಪಿಎಲ್‌, ಲೋಕಸಭಾ ಎಲೆಕ್ಷನ್‌ನಿಂದಾಗಿ ಕನ್ನಡ ಸಿನಿಮಾಗಳು (List of Movies Releasing) ಪ್ರೇಕ್ಷಕರ ಮುಂದೆ ಬಂದಿಲ್ಲ. ಜೂನ್ 4ಕ್ಕೆ ಲೋಕಸಭೆ ಚುನಾವಣೆ ಫಲಿತಾಂಶ ಸಹ ಹೊರ ಬೀಳಲಿದೆ. ಆ ಬಳಿಕವೇ ಚಿತ್ರರಂಗ ಸಹಜ ಸ್ಥಿತಿಗೆ ಮರಳುವ ಸಾಧ್ಯತೆಯಿದೆ. ದೊಡ್ಡ ಸಿನಿಮಾಗಳು ಅಲ್ಲದೇ ಇದ್ದರೂ ಒಂದಷ್ಟು ಸಿನಿಮಾಗಳು ಈ ವಾರ ಬಿಡುಗಡೆಗೆ ಸಜ್ಜಾಗಿವೆ. ಅವುಗಳು ಯಾವುದೆಲ್ಲ ನೋಡೋಣ…

‘ದಿ ಜಡ್ಜ್‌ಮೆಂಟ್’

ಜಿ9 ಕಮ್ಯೂನಿಕೇಷನ್ ಮೀಡಿಯಾ & ಎಂಟರ್ಟೈನ್ಮೆಂಟ್ ಲಾಂಛನದಲ್ಲಿ (tKannada New Movie) ನಿರ್ಮಾಣವಾಗುತ್ತಿರುವ, ‘ಕ್ರೇಜಿಸ್ಟಾರ್’ ರವಿಚಂದ್ರನ್ ಮುಖ್ಯಪಾತ್ರದಲ್ಲಿ ನಟಿಸುತ್ತಿರುವ ‘ದಿ ಜಡ್ಜ್‌ಮೆಂಟ್’ ಚಿತ್ರದಲ್ಲಿ ದಿಗಂತ್‌ ಕಾಣಿಸಿಕೊಳ್ಳುತ್ತಿದ್ದಾರೆ. ಗುರುರಾಜ್ ಕುಲಕರ್ಣಿ ನಿರ್ದೇಶನದ ‘ದಿ ಜಡ್ಜ್‌ಮೆಂಟ್’ ಸಿನಿಮಾ ಈ ವಾರ ತೆರೆಗೆ ಬರ್ತಿದೆ.ಅನೂಪ್ ಸೀಳಿನ್ ಸಂಗೀತ ನಿರ್ದೇಶನ, ಕೆಂಪರಾಜು ಬಿ ಎಸ್ ಸಂಕಲನ‌, ಪ್ರಮೋದ್ ಮರವಂತೆ ಈ ಚಿತ್ರದ ಹಾಡುಗಳನ್ನು ರಚಿಸಿದ್ದಾರೆ. ಎಂ ಎಸ್ ರಮೇಶ್ ಸಂಭಾಷಣೆ ಬರೆದಿದ್ದಾರೆ. ಡಾ. ರವಿ ವರ್ಮ ಸಾಹಸ ನಿರ್ದೇಶನ, ರೂಪೇಂದ್ರ ಆಚಾರ್ ಅವರ ಕಲಾ ನಿರ್ದೇಶನ ‘ದ ಜಡ್ಜ್ ಮೆಂಟ್’ ಚಿತ್ರಕ್ಕಿದೆ.

ಇದನ್ನೂ ಓದಿ: Actress Murder: ‘ಭಜರಂಗಿ’ ಸಿನಿಮಾ ನಟಿ ಗಂಡನಿಂದಲೇ ಭೀಕರ ಕೊಲೆ!

ಮೂರನೇ ಕೃಷ್ಣಪ್ಪ

ವಿಭಿನ್ನ ಕಥಾನಕದ ಮೂಲಕವೇ ಪ್ರೇಕ್ಷಕರನ್ನು ಮುಖಾಮುಖಿಯಾಗಲು ಹೊರಟಿರುವ ಸಿನಿಮಾ ʻಮೂರನೇ ಕೃಷ್ಣಪ್ಪʼ. ಲೂಸ್ ಮಾದ ಯೋಗಿ (Kannada New Movie) ಸಂಭಾಷಣೆಯಿಂದ ಶುರುವಾಗುವ ಟ್ರೈಲರ್‌ನಲ್ಲಿ ಕೋಲಾರ‌ ಕನ್ನಡ‌ , ರಂಗಾಯಣ ರಘು, ಸಂಪತ್ ಮೈತ್ರಿಯಾಯಂತಹ ಅದ್ಭುತ ಕಲಾವಿದರ ಅಭಿನಯ ಗಮನ ಸೆಳೆಯುತ್ತದೆ. ಹಳ್ಳಿ ಸೊಗಡನ್ನು ಸೊಗಸಾಗಿ ಕಟ್ಟಿಕೊಡಲಾಗಿದೆ. ಟ್ರೇಲರ್ ಪ್ರಾಮಿಸಿಂಗ್ ಆಗಿದ್ದು, ಸಿನಿಪ್ರಿಯರಿಗೆ ಮನರಂಜನೆ ಗ್ಯಾರಂಟಿ ಎಂಬ ಸಂದೇಶ ರವಾನಿಸಿದೆ. ರೆಡ್ ಡ್ರ್ಯಾಗನ್ ಫಿಲಂಸ್ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದೆ. ‘ಮೂರನೇ ಕೃಷ್ಣಪ್ಪ’ ಸಿನಿಮಾಗೆ ಮೋಹನ್ ರೆಡ್ಡಿ ಜಿ, ರವಿಶಂಕರ್ ಹಣ ಹೂಡಿದ್ದಾರೆ. ಆನೇಕಲ್ ಭಾಗದ ಭಾಷೆಯ ಸೊಬಗನ್ನು ಇಟ್ಟುಕೊಂಡು ಈ ಸಿನಿಮಾದ ಕಥೆಯನ್ನು ಹೆಣೆಯಲಾಗಿದೆ. ಸಂಪತ್ ಮೈತ್ರೀಯಾ ನಾಯಕನಾಗಿ ನಟಿಸುತ್ತಿದ್ದರೆ, ಪ್ರಮುಖ ಪಾತ್ರದಲ್ಲಿ ರಂಗಾಯಣ ರಘು ಕಾಣಿಸಿಕೊಂಡಿದ್ದಾರೆ. ಶ್ರೀಪ್ರಿಯಾ ನಾಯಕಿಯಾಗಿದ್ದಾರೆ. ಮೇ 24ಕ್ಕೆ ಮೂರನೇ ಕೃಷ್ಣಪ್ಪನ ಕಥೆ ತೆರೆಗೆ ಬರಲಿದೆ.

3ದೇವಿ

3ದೇವಿ ಅಶ್ವಿನ್ ಮ್ಯಾಥ್ಯೂ ನಿರ್ದೇಶನದ 3ದೇವಿ ಸಿನಿಮಾ ಕೂಡ ಈ ವಾರವೇ ಪ್ರೇಕ್ಷಕರ ಮುಂದೆ ಬರಲಿದೆ. ಮೊಗ್ಗಿನ ಮನಸ್ಸಿನ ಶುಭಾ ಪೂಂಜಾ (Shubha Poonja) ದೇವಿ ರೂಪದಲ್ಲಿಯೇ ಅಭಿನಯಿಸಿದ್ದಾರೆ. ಸಂಧ್ಯಾ ಮತ್ತು ಜ್ಯೋತ್ಸ್ನಾ ತಾರಾಗಣದಲ್ಲಿದ್ದಾರೆ.

ಎವಿಡೆನ್ಸ್

ಸಿ. ಪಿ ಪ್ರವೀಣ್ ನಿರ್ದೇಶನದ ‘ಎವಿಡೆನ್ಸ್’ ಚಿತ್ರ ಇದೇ ಶುಕ್ರವಾರ ತೆರೆ ಕಾಣುತ್ತಿದೆ. ʼಮಂಗಳಗೌರಿ ಮದುವೆ’ ಸೇರಿ ಅನೇಕ ಧಾರಾವಾಹಿಗಳಲ್ಲಿ ಬಣ್ಣ ಹಚ್ಚಿರುವ, ಅದರಲ್ಲಿಯೂ ದೇವಿ ಪಾತ್ರದಲ್ಲಿ ಹೆಚ್ಚು ಕಾಣಿಸಿಕೊಂಡಿರುವ ನಟಿ ಮಾನಸಾ ಜೋಶಿ ಅವರು ಈ ಬಾರಿ ‘ಎವಿಡೆನ್ಸ್’ ಎನ್ನುವ ಸಿನಿಮಾದಲ್ಲಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಈ 3 ಚಿತ್ರಗಳ ಜೊತೆಗೆ ‘ಸೆಲ್ಯೂಟ್’ ಎನ್ನುವ ಮತ್ತೊಂದು ಕನ್ನಡ ಸಿನಿಮಾ ತೆರೆಗೆ ಬರಲಿದೆ.

ಟರ್ಬೋ

ಮಮ್ಮುಟ್ಟಿ (Mammootty) ಅವರು ಈ ಹಿಂದೆ ಘೋಷಿಸಿದ ಮೂರು ಸಿನಿಮಾಗಳ ಬಿಡುಗಡೆಗಳಲ್ಲಿ ʻಟರ್ಬೋʼ (Turbo Trailer Out) ಕೂಡ ಒಂದು. ರಾಜ್ ಬಿ ಶೆಟ್ಟಿ (Raj B Shetty) ಮತ್ತು ತೆಲುಗು ನಟ ಸುನೀಲ್ ಕೂಡ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಇಲ್ಲಿ ರಾಜ್‌ ಬಿ ಶೆಟ್ಟಿ ಅವರದ್ದು ಸಣ್ಣ ಪಾತ್ರ ಏನಲ್ಲ. ಮಮ್ಮುಟಿಗೆ ಪೈಪೋಟಿ ಕೊಡುವಂತಿದೆ. ಟರ್ಬೊ’ ಸಿನಿಮಾ ನಿರ್ದೇಶಕ ವೈಶಾಖ್ ಜತೆ ಇದು ಮೂರನೇ ಬಾರಿ ಮಮ್ಮುಟ್ಟಿ ಜತೆ ಕೈ ಜೋಡಿಸುತ್ತಿದ್ದಾರೆ. ಪೊಕ್ಕಿರಿ ರಾಜ ಮತ್ತು ಮಧುರ ರಾಜ ಸಿನಿಮಾಗಳ ಬಳಿಕ ಮಮ್ಮುಟ್ಟಿಯವರ ಮೂರನೇ ಚಿತ್ರವಾಗಿದೆ.

ಇದನ್ನೂ ಓದಿ: Dina Bhavishya : ಈ ರಾಶಿಯವರು ಯಾರೊಂದಿಗೂ ದಿನದ ಮಟ್ಟಿಗೆ ಹಣಕಾಸಿನ ವ್ಯವಹಾರ ಮಾಡಬೇಡಿ

ಚಲನಚಿತ್ರ ನಿರ್ಮಾಪಕ ಮಿಧುನ್ ಮ್ಯಾನುಯೆಲ್ ಥಾಮಸ್ ಬರೆದ ಚಿತ್ರಕಥೆಯನ್ನು ಈ ಸಿನಿಮಾ ಆಧರಿಸಿದೆ. ಇದು ಆ್ಯಕ್ಷನ್ ಕಾಮಿಡಿ ಎಂದು ಹೇಳಲಾಗುತ್ತದೆ. ಸಿನಿಮಾದಲ್ಲಿ ಮಮ್ಮುಟ್ಟಿಗೆ ನಾಯಕಿಯಾಗಿ ನಟಿ ಜ್ಯೋತಿಕಾ ಕಾಣಿಸಿಕೊಂಡಿದ್ದು, ಒಂದು ದಶಕದ ಬಳಿಕ ಮಲಯಾಳಂ ಚಿತ್ರರಂಗಕ್ಕೆ ಹಿಂತಿರುಗಿದ್ದಾರೆ.ಇದೊಂದು ಆಕ್ಷನ್ ಕಾಮಿಡಿ ಎಂಟರ್‌ಟೈನರ್ ಆಗಿದ್ದು ಮೇ 23ಕ್ಕೆ ತೆರೆಗೆ ಬರಲಿದೆ. ಆಟೋ ಬಿಲ್ಲ ಆಗಿ ತೆಲುಗು ನಟ ಸುನೀಲ್ ಕೂಡ ಕಾಣಿಸಿಕೊಂಡಿದ್ದಾರೆ. ಅಂಜನಾ ಜಯಪ್ರಕಾಶ್, ಕಬೀರ್ ದುಹಾನ್ ಸಿಂಗ್, ಸಿದ್ದಿಕಿ ಸೇರಿದಂತೆ ದೊಡ್ಡ ತಾರಾಗಣ ‘ಟರ್ಬೋ’ ಚಿತ್ರದಲ್ಲಿದೆ. ವಿಷ್ಣು ಶರ್ಮಾ ಛಾಯಾಗ್ರಹಣ, ಕ್ರಿಸ್ಟೋ ಕ್ಸೇವಿಯರ್ ಸಂಗೀತ ಚಿತ್ರಕ್ಕಿದೆ.

Continue Reading

ಸ್ಯಾಂಡಲ್ ವುಡ್

Rishab shetty: ಹರಿಹರಪುರ ಕ್ಷೇತ್ರಕ್ಕೆ ರಿಷಬ್ ಶೆಟ್ಟಿ ಕುಟುಂಬದ ಭೇಟಿ: ನರಸಿಂಹಸ್ವಾಮಿಯ ದರ್ಶನ ಪಡೆದ ಡಿವೈನ್‌ ಸ್ಟಾರ್‌!

Rishab shetty: ರಾಜ್ಯದ ಪ್ರಸಿದ್ಧ ಪ್ರವಾಸಿ ಜಿಲ್ಲೆಗಳಲ್ಲೊಂದಾದ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನಲ್ಲಿರುವ ಹರಿಹರಪುರ ಕ್ಷೇತ್ರಕ್ಕೆ ಪೌರಾಣಿಕ (Rishab shetty) ಮಹತ್ವವಿದೆ.ಇದೀಗ ಹರಿಹರಪುರ ಕ್ಷೇತ್ರಕ್ಕೆ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಅವರು ಪತ್ನಿ ಮಗ, ಮಗಳ ಜತೆ ಕುಟುಂಬ ಸಮೇತರಾಗಿ ಭೇಟಿ ಕೊಟ್ಟಿದ್ದಾರೆ.ತುಂಗಾ ನದಿ ತಟದಲ್ಲಿರುವ ಇತಿಹಾಸ ಪ್ರಸಿದ್ಧ ದೇಗುಲ ಇದಾಗಿದೆ. ಮಠದ ಆವರಣದ ಆಂಜನೇಯನ ಬಳಿ ಅಭಿಮಾನಿಗಳ ಜತೆ ರಿಷಬ್‌ ಫೋಟೊ ಕ್ಲಿಕ್ಕಿಸಿಕೊಂಡರು.

VISTARANEWS.COM


on

Rishab shetty family visit Hariharpur Narasimhaswamy
Koo

ರಾಜ್ಯದ ಪ್ರಸಿದ್ಧ ಪ್ರವಾಸಿ ಜಿಲ್ಲೆಗಳಲ್ಲೊಂದಾದ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನಲ್ಲಿರುವ ಹರಿಹರಪುರ ಕ್ಷೇತ್ರಕ್ಕೆ ಪೌರಾಣಿಕ (Rishab shetty) ಮಹತ್ವವಿದೆ.

ಇದೀಗ ಹರಿಹರಪುರ ಕ್ಷೇತ್ರಕ್ಕೆ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಅವರು ಪತ್ನಿ ಮಗ, ಮಗಳ ಜತೆ ಕುಟುಂಬ ಸಮೇತರಾಗಿ ಭೇಟಿ ಕೊಟ್ಟಿದ್ದಾರೆ.

ರಿಷಬ್ ದಂಪತಿ ಶಾರದಾ ಲಕ್ಷ್ಮಿ ನರಸಿಂಹಸ್ವಾಮಿಯ ದರ್ಶನ ಪಡೆದರು. ಜತೆಗೆ ಹರಿಹರಪುರದ ಶ್ರೀ ಸ್ವಯಂ ಸಚ್ಚಿದಾನಂದ ಶ್ರೀಗಳ ಆಶೀರ್ವಾದ ಪಡೆದರು.

ಇದನ್ನೂ ಓದಿ: Actress Murder: ‘ಭಜರಂಗಿ’ ಸಿನಿಮಾ ನಟಿ ಗಂಡನಿಂದಲೇ ಭೀಕರ ಕೊಲೆ!

ತುಂಗಾ ನದಿ ತಟದಲ್ಲಿರುವ ಇತಿಹಾಸ ಪ್ರಸಿದ್ಧ ದೇಗುಲ ಇದಾಗಿದೆ. ಮಠದ ಆವರಣದ ಆಂಜನೇಯನ ಬಳಿ ಅಭಿಮಾನಿಗಳ ಜತೆ ರಿಷಬ್‌ ಫೋಟೊ ಕ್ಲಿಕ್ಕಿಸಿಕೊಂಡರು.

ಸ್ಕಂದ ಪುರಾಣದಲ್ಲಿ ಉಲ್ಲೇಖಿಸಿರುವಂತೆ ಇಲ್ಲಿ ದಕ್ಷಯಜ್ಞ ನಡೆದಿತ್ತಂತೆ. ಆಗ ಪರಶಿವನು ಯಜ್ಞಕುಂಡದಲ್ಲಿ ಆವಿರ್ಭವಿಸಿ ಸಮಸ್ತ ಭಕ್ತರನ್ನು ಅನುಗ್ರಹಿಸಿದನಂತೆ. ಇಂದಿಗೂ ದಕ್ಷಹರ ಸೋಮೇಶ್ವರನ ದೇವಸ್ಥಾನವು ಹರಿಹರಪುರದಲ್ಲಿದೆ. 

Continue Reading

ಬಾಲಿವುಡ್

AR Rahman: ಪ್ರಶಸ್ತಿಗಳೆಲ್ಲ ಚಿನ್ನವೆಂದು ಭಾವಿಸಿ ಎಆರ್ ರೆಹಮಾನ್ ತಾಯಿ ಮಾಡಿದ್ದೇನು?

AR Rahman: ರೆಹಮಾನ್ ಆರು ರಾಷ್ಟ್ರೀಯ ಪ್ರಶಸ್ತಿಗಳನ್ನು ಮತ್ತು 32 ಕ್ಕೂ ಹೆಚ್ಚು ಫಿಲ್ಮ್‌ಫೇರ್ ಪ್ರಶಸ್ತಿಗಳನ್ನು ಹೊಂದಿದ್ದಾರೆ. ಅದೇ ಭಾರತೀಯ ಪ್ರಶಸ್ತಿಗಳನ್ನು ತಮ್ಮ ತವರು ಚೆನ್ನೈನಲ್ಲಿರುವ ವಿಶೇಷ ಕೋಣೆಯಲ್ಲಿ ಇಟ್ಟಿರುವುದಾಗಿ ಬಹಿರಂಗಪಡಿಸಿದರು. ಈ ಬಗ್ಗೆ ಮಾತನಾಡಿ ʻʻಕೆಲವು ಪ್ರಶಸ್ತಿಗಳು ನನ್ನ ಬಳಿ ಇದುವೆರೆಗೆ ಬಂದಿಲ್ಲ. ಕೆಲವು ನಿರ್ದೇಶಕರು ಅವುಗಳನ್ನು ಸ್ಮರಣಿಕೆಗಳಂತೆ ಇಟ್ಟುಕೊಂಡಿದ್ದಾರೆʼʼಎಂದರು.

VISTARANEWS.COM


on

AR Rahman says his mother thought his Oscar statuettes were made of gold
Koo

ಬೆಂಗಳೂರು: ಸಂಗೀತ ನಿರ್ದೇಶಕ, ಗಾಯಕ ಎಆರ್ ರೆಹಮಾನ್ (AR Rahman) ಅವರಿಗೆ 2ಆಸ್ಕರ್, 2 ಗ್ರ್ಯಾಮಿ, 1 BAFTA, 1 ಗೋಲ್ಡನ್ ಗ್ಲೋಬ್, 6 ರಾಷ್ಟ್ರ ಪ್ರಶಸ್ತಿ, 32 ಫಿಲ್ಮ್​ಫೇರ್ ಅವಾರ್ಡ್​ಗಳು ಬಂದಿವೆ. ಹಲವು ಅಂತಾರಾಷ್ಟ್ರೀಯ ಪ್ರಶಸ್ತಿಗಳು ಸಿಕ್ಕಿವೆ. ಆದರೆ ಈ ಪ್ರಶಸ್ತಿಗಳನ್ನೆಲ್ಲ ಎಲ್ಲಿ ಇಟ್ಟಿದ್ದಾರೆ ಎಂಬ ಪ್ರಶ್ನೆ ಅವರಿಗೆ ಎದುರಾಗಿದೆ. ಆಗ ರೆಹಮಾನ್ ಅವರು ಉತ್ತರ ನೀಡಿ ʻʻನನ್ನ ತಾಯಿ ಕರೀಮಾ ಬೇಗಂ (Kareema Begum) ದುಬೈ ಮನೆಯಲ್ಲಿ ಸಂಗ್ರಹಿಟ್ಟಿದರು. ಪ್ರಶಸ್ತಿಗಳು ಚಿನ್ನದಿಂದ ಮಾಡಲ್ಪಟ್ಟಿವೆ ಎಂದು ಅವರು ಭಾವಿಸಿ ಟವೆಲ್‌ನಲ್ಲಿ ಸುತ್ತಿ ಇಟ್ಟಿದ್ದರುʼಎಂದು ಹೇಳಿದ್ದಾರೆ.

ಈ ಬಗ್ಗೆ ರೆಹಮಾನ್ ಮಾತನಾಡಿ ʻʻನಾನು ದುಬೈನಲ್ಲಿ ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಇಟ್ಟುಕೊಂಡಿದ್ದೇನೆ. ಏಕೆಂದರೆ ಅವೆಲ್ಲವೂ ಟವೆಲ್‌ನಲ್ಲಿ ಸುತ್ತಿಡಲಾಗಿತ್ತು. ನನ್ನ ತಾಯಿ ಅದನ್ನು ಟವೆಲ್‌ನಲ್ಲಿ ಸುತ್ತಿಟ್ಟಿದ್ದರು. ಪ್ರಶಸ್ತಿಗಳನ್ನು ಚಿನ್ನದಿಂದ ಮಾಡಿದ್ದಾರೆ ಅಂದುಕೊಂಡಿದ್ದರು. ಅವರು ತೀರಿ ಹೋದ ನಂತರ ಆ ಅವಾರ್ಡ್​ಗಳನ್ನು ನಾನು ದುಬೈ ಫಿರ್ದೌಸ್ ಸ್ಟುಡಿಯೋಗೆ ನೀಡಿದ್ದೇನೆ. ಇದೊಂದು ಒಳ್ಳೆಯ ಶೋಕೇಸ್’ ಎಂದಿದ್ದಾರೆ ರೆಹಮಾನ್. 2008ರ ಚಲನಚಿತ್ರ ಸ್ಲಮ್‌ಡಾಗ್ ಮಿಲಿಯನೇರ್‌ಗಾಗಿ ʻಗೋಲ್ಡನ್ ಗ್ಲೋಬ್ʼ ಅನ್ನು ಗೆದಿದ್ದರು.

ರೆಹಮಾನ್ ಆರು ರಾಷ್ಟ್ರೀಯ ಪ್ರಶಸ್ತಿಗಳನ್ನು ಮತ್ತು 32 ಕ್ಕೂ ಹೆಚ್ಚು ಫಿಲ್ಮ್‌ಫೇರ್ ಪ್ರಶಸ್ತಿಗಳನ್ನು ಹೊಂದಿದ್ದಾರೆ. ಅದೇ ಭಾರತೀಯ ಪ್ರಶಸ್ತಿಗಳನ್ನು ತಮ್ಮ ತವರು ಚೆನ್ನೈನಲ್ಲಿರುವ ವಿಶೇಷ ಕೋಣೆಯಲ್ಲಿ ಇಟ್ಟಿರುವುದಾಗಿ ಬಹಿರಂಗಪಡಿಸಿದರು. ಈ ಬಗ್ಗೆ ಮಾತನಾಡಿ ʻʻಕೆಲವು ಪ್ರಶಸ್ತಿಗಳು ನನ್ನ ಬಳಿ ಇದುವೆರೆಗೆ ಬಂದಿಲ್ಲ. ಕೆಲವು ನಿರ್ದೇಶಕರು ಅವುಗಳನ್ನು ಸ್ಮರಣಿಕೆಗಳಂತೆ ಇಟ್ಟುಕೊಂಡಿದ್ದಾರೆʼʼಎಂದರು.

ಇದನ್ನೂ ಓದಿ: AR Rahman: ಪುಟಾಣಿ ಹುಡುಗಿಯ ಮಾತು ಕೇಳಿ ಎಆರ್ ರೆಹಮಾನ್ ಫಿದಾ; ಕೀಬೋರ್ಡ್ ಕೊಡುತ್ತೇನೆ ಎಂದ ಗಾಯಕ!

ಈ ಹಿಂದೆ ಮಾಧ್ಯಮವೊಂದರ ಸಂದರ್ಶನದಲ್ಲಿ ತಮ್ಮ ಕಷ್ಟದ ದಿನಗಳನ್ನು ನೆನೆದು ಭಾವುಕರಾದರು. ʻನಾನು ಸ್ಟುಡಿಯೊವನ್ನು ನಿರ್ಮಿಸಿದಾಗ, ಆಂಪ್ಲಿಫೈಯರ್ ಅಥವಾ ಈಕ್ವಲೈಸರ್ ಖರೀದಿಸಲು ನನ್ನ ಬಳಿ ಹಣವಿರಲಿಲ್ಲ. ಶೆಲ್ಫ್ ಮತ್ತು ಕಾರ್ಪೆಟ್ನೊಂದಿಗೆ ಕೇವಲ ಎಸಿ ಇತ್ತು. ಏನನ್ನೂ ಖರೀದಿಸಲು ಹಣವಿಲ್ಲದೆ ಕುಳಿತಿದ್ದೆ. ಆಗ ನನ್ನ ತಾಯಿ ಆಭರಣಗಳನ್ನು ಒತ್ತೆ ಇಡಲು ನೀಡಿದಳು. ಬಳಿಕ ಮೊದಲ ರೆಕಾರ್ಡರ್ ತಂದೆʼʼ ಎಂದು ಅವರು ಹೇಳಿದರು. ಕರೀಮಾ ಬೇಗಂ 2020ರಲ್ಲಿ ನಿಧನರಾಗಿದ್ದಾರೆ.

Continue Reading

ಸಿನಿಮಾ

Cannes 2024: ಕಾನ್‌ ಫಿಲ್ಮ್ಸ್‌ ಫೆಸ್ಟಿವಲ್‌ನಲ್ಲಿ ಕನ್ನಡದ ಕಿರು ಚಿತ್ರ ಪ್ರದರ್ಶನ

Cannes 2024: ಪ್ರತಿದಿನ ಬೆಳಗ್ಗೆ ಸೂರ್ಯೋದಯಕ್ಕೆ ಕಾರಣವೆಂದು ಎಲ್ಲರೂ ನಂಬಿದ್ದ ಹುಂಜದ ಜತೆ ವೃದ್ಧ ಮಹಿಳೆ ಓಡಿಹೋದ ಬಳಿಕ ಹಳ್ಳಿಯೊಂದು ಕತ್ತಲೆಯಲ್ಲಿ ಮುಳುಗಿ ಹೋಗುವ ಜನಪದ ಕಥೆ ಇದಾಗಿದೆ. ಮೈಸೂರು ಮೂಲದ ನಾಯಕ್ ಸದ್ಯ ಕಾನ್‌ ಫಿಲ್ಸ್‌ ಫೆಸ್ಟಿವಲ್‌ನಲ್ಲಿ ಛಾಯಾಗ್ರಾಹಕ ಸೂರಜ್ ಠಾಕೂರ್, ಸೌಂಡ್ ಡಿಸೈನರ್ ಅಭಿಷೇಕ್ ಕದಮ್ ಮತ್ತು ನಿರ್ಮಾಣ ವಿನ್ಯಾಸಕ ಪ್ರಣವ್ ಖೋಟ್ ಜತೆ ಇದ್ದಾರೆ. ಈ ತಂಡ ಸ್ವಂತ ಖರ್ಚಿನಲ್ಲಿ ಕಾನ್‌ ಫಿಲ್ಮ್ಸ್‌ ಫೆಸ್ಟಿವಲ್‌ಗೆ ತೆರಳಿದೆ ಎಂದು ವರದಿಯಾಗಿದೆ.

VISTARANEWS.COM


on

Cannes 2024 Chidananda S Naik bows in Cannes with Kannada folk tale
Koo

ಬೆಂಗಳೂರು: ಫಿಲ್ಮ್ ಆ್ಯಂಡ್ ಟೆಲಿವಿಷನ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ವಿದ್ಯಾರ್ಥಿ ಚಿದಾನಂದ ಎಸ್ ನಾಯಕ್   ನಿರ್ದೇಶನದ ಕಿರು ಚಿತ್ರ “ಸೂರ್ಯಕಾಂತಿ ಹೂವಿಗೆ ಮೊದಲು ಗೊತ್ತಾಗಿದ್ದು” (Sunflowers Were the First Ones to Know) ಮಂಗಳವಾರ (ಮೇ 21) ಮಧ್ಯಾಹ್ನ 77ನೇ ಕಾನ್‌ ಫಿಲ್ಮ್ಸ್‌ ಫೆಸ್ಟಿವಲ್‌ನಲ್ಲಿ (Cannes 2024) ಪ್ರದರ್ಶನಗೊಂಡಿತು. ಬಂಜಾರ ಸಮುದಾಯದ ಜನಪ್ರಿಯ ಜನಪದ ಕಥೆ ʻಅಜ್ಜಿ ಹುಂಜ ಕದ್ದ ಕಥೆʼಯನ್ನು ಆಧರಿಸಿ ಈ ಶಾರ್ಟ್‌ ಮೂವಿ ತಯಾರಿಸಲಾಗಿದೆ.

ಪ್ರತಿದಿನ ಬೆಳಗ್ಗೆ ಸೂರ್ಯೋದಯಕ್ಕೆ ಕಾರಣವೆಂದು ಎಲ್ಲರೂ ನಂಬಿದ್ದ, ಹುಂಜದ ಜತೆ ವೃದ್ಧ ಮಹಿಳೆ ಓಡಿಹೋದ ಬಳಿಕ ಹಳ್ಳಿಯೊಂದು ಕತ್ತಲೆಯಲ್ಲಿ ಮುಳುಗಿ ಹೋಗುವ ಜನಪದ ಕಥೆ ಇದಾಗಿದೆ. ಮೈಸೂರು ಮೂಲದ ನಾಯಕ್ ಸದ್ಯ ಕಾನ್‌ ಫಿಲ್ಸ್‌ ಫೆಸ್ಟಿವಲ್‌ನಲ್ಲಿ ಛಾಯಾಗ್ರಾಹಕ ಸೂರಜ್ ಠಾಕೂರ್, ಸೌಂಡ್ ಡಿಸೈನರ್ ಅಭಿಷೇಕ್ ಕದಮ್ ಮತ್ತು ನಿರ್ಮಾಣ ವಿನ್ಯಾಸಕ ಪ್ರಣವ್ ಖೋಟ್ ಜತೆ ಇದ್ದಾರೆ. ಈ ತಂಡ ಸ್ವಂತ ಖರ್ಚಿನಲ್ಲಿ ಕಾನ್‌ ಫಿಲ್ಮ್ಸ್‌ ಫೆಸ್ಟಿವಲ್‌ಗೆ ತೆರಳಿದೆ ಎಂದು ವರದಿಯಾಗಿದೆ.

ಚಿದಾನಂದ ಎಸ್ ನಾಯಕ್ ಎಂಬಿಬಿಎಸ್ ಪದವಿ ಪಡೆದಿದ್ದಾರೆ. ಸ್ವಲ್ಪ ಕಾಲ ವೈದ್ಯಕೀಯ ಅಭ್ಯಾಸ ಮಾಡಿದ ನಂತರ ಸಿನಿಮಾ ಮೇಕಿಂಗ್‌ನತ್ತ ಆಸಕ್ತಿ ತೋರಿಸಿದರು. ಈ ಬಗ್ಗೆ ಚಿದಾನಂದ್‌ ಮಾತನಾಡಿ ʻʻನಾನು ಸಿನಿಮಾ ಕಡೆ ಆಸಕ್ತಿ ತೋರಿದಾಗ ನನ್ನ ಬಗ್ಗೆ ನನ್ನ ಪೋಷಕರು ತುಂಬಾ ಅಸಮಾಧಾನಗೊಂಡಿದ್ದರು. ಆದರೆ ಈಗ, ಐದು ವರ್ಷಗಳ ನಂತರ, ನಾನು ಅವರ ಬೆಂಬಲದೊಂದಿಗೆ ಇಲ್ಲಿದ್ದೇನೆ ”ಎಂದು ಅವರು ಹೇಳುತ್ತಾರೆ.

ಇದನ್ನೂ ಓದಿ: Actress Murder: ‘ಭಜರಂಗಿ’ ಸಿನಿಮಾ ನಟಿ ಗಂಡನಿಂದಲೇ ಭೀಕರ ಕೊಲೆ!

ಈ ಚಿತ್ರ ಪುಣೆಯಲ್ಲಿ ಚಿತ್ರೀಕರಣಗೊಂಡಿದೆ. ಪ್ರತಿದಿನ ಬೆಳಗ್ಗೆ ಸೂರ್ಯೋದಯಕ್ಕೆ ಕಾರಣವೆಂದು ಎಲ್ಲರೂ ನಂಬಿದ್ದ ಹುಂಜದ ಜತೆ ವೃದ್ಧ ಮಹಿಳೆ ಓಡಿಹೋದ ಬಳಿಕ ಹಳ್ಳಿಯೊಂದು ಕತ್ತಲೆಯಲ್ಲಿ ಮುಳುಗಿ ಹೋಗುವ ಜನಪದ ಕಥೆ ಇದಾಗಿದೆ. “ಚಿತ್ರದಲ್ಲಿ ರಾತ್ರಿ ಒಂದು ಪಾತ್ರ” ಎಂದು ಚಿದಾನಂದ ಹೇಳುತ್ತಾರೆ.

“ನಾನು ಕರ್ನಾಟಕದ ಬಂಜಾರ ಸಮುದಾಯಕ್ಕೆ ಸೇರಿದವನು. ಸಮುದಾಯದಿಂದ ಗಡೀಪಾರು ಮಾಡಲ್ಪಟ್ಟ ವೃದ್ಧ ಮಹಿಳೆಯ ಕಥೆಯನ್ನು ಸಿನಿಮಾ ಮಾಡಿದ್ದೇವೆʼʼಎಂದರು.

ಬಂಜಾರ ಸಾಹಿತ್ಯದ ಕುರಿತಾದ ಅವರ ಸಂಶೋಧನೆಯ ಆಧಾರದ ಮೇಲೆ, ಚಿದಾನಂದ್‌ ಅವರು 12 ನಿಮಿಷಗಳ ಸಾಕ್ಷ್ಯಚಿತ್ರ “ಭೂಲೆ ಚುಕೆ ಟುಲೆಸ್” ಕೂಡ ಮಾಡಿದ್ದರು. ಕಳೆದ ವರ್ಷ ಕೇರಳದ ಅಂತಾರಾಷ್ಟ್ರೀಯ ಸಾಕ್ಷ್ಯಚಿತ್ರ ಮತ್ತು ಕಿರುಚಿತ್ರೋತ್ಸವದಲ್ಲಿ ಈ ಚಿತ್ರ ಪ್ರಥಮ ಪ್ರದರ್ಶನ ಕಂಡಿತ್ತು.

ಈ ವರ್ಷ ಜಗತ್ತಿನ ವಿವಿಧ ಫಿಲ್ಮ್‌ ಇನ್‌ಸ್ಟಿಟ್ಯೂಟ್‌ಗಳು ಸಲ್ಲಿಸಿದ 2,263 ಶಾರ್ಟ್‌ ಮೂವಿಗಳಲ್ಲಿ 18 ಕಿರುಚಿತ್ರಗಳು ಲಾ ಸಿನೆಫ್‌ಗೆ ಆಯ್ಕೆಯಾದವು. ಅವುಗಳಲ್ಲಿ ಸನ್‌ಫ್ಲವರ್‌ ಮೊದಲನೆಯದು. ಈ ಕಿರುಚಿತ್ರದಲ್ಲಿ ಕನ್ನಡದ ಜನಪ್ರಿಯ ನಟ ಎಂ.ಎಸ್.ಜಹಾಂಗೀರ್ ಕೂಡ ನಟಿಸಿದ್ದಾರೆ. ಕಿರುಚಿತ್ರದಲ್ಲಿ ಅಜ್ಜನ ಪಾತ್ರಕ್ಕೆ ಅವರು ಯಾವುದೇ ಶುಲ್ಕ ಪಡೆದಿಲ್ಲ ಎಂದು ಅವರು ಹೇಳಿರುವುದಾಗಿ ವರದಿಯಾಗಿದೆ.

Continue Reading
Advertisement
List of Movies Releasing From may 24
ಟಾಲಿವುಡ್14 mins ago

List of Movies Releasing: ಈ ವಾರ ಬಿಡುಗಡೆಗೆ ಸಜ್ಜಾಗಿವೆ ಈ ಸಾಲು ಸಾಲು ಸಿನಿಮಾಗಳು!

Prashant Kishor
ದೇಶ28 mins ago

Prashant Kishor: 3ನೇ ಅವಧಿಯ ಮೋದಿ ಸರ್ಕಾರದಿಂದ ಈ 4 ಕ್ರಾಂತಿಕಾರಕ ಬದಲಾವಣೆ; ಪ್ರಶಾಂತ್‌ ಕಿಶೋರ್‌ ಭವಿಷ್ಯ

Viral Video
ವೈರಲ್ ನ್ಯೂಸ್39 mins ago

Viral Video: ರಸ್ತೆ ಜಗಳದಿಂದ ತಪ್ಪಿಸಿಕೊಳ್ಳುವುದು ಹೇಗೆ? ಬೆಂಗಳೂರು ಪೊಲೀಸರ ವಿಡಿಯೊ ಪಾಠ ಇಲ್ಲಿದೆ!

Diabetes Management Tips
Latest42 mins ago

Diabetes Management Tips: ಈ ಏಳು ಪಾನೀಯಗಳನ್ನು ಸೇವಿಸಿ, ಮಧುಮೇಹ ನಿಯಂತ್ರಿಸಿ

gold rate today beauty
ಚಿನ್ನದ ದರ42 mins ago

Gold Rate Today: ಬಂಗಾರದ ಬೆಲೆಯಲ್ಲಿ ಯಥಾಸ್ಥಿತಿ; ಇಂದಿನ ದರಗಳನ್ನು ಇಲ್ಲಿಯೇ ನೋಡಿ

Viral News
ವೈರಲ್ ನ್ಯೂಸ್45 mins ago

Viral News: ಸಿಂಹದ ಹಿಂಡನ್ನೇ ಹಿಮ್ಮೆಟ್ಟಿಸಿದ ಕಾಡುಕೋಣಗಳು; ರೋಮಾಂಚನಕಾರಿ ವಿಡಿಯೊ ನೀವೂ ನೋಡಿ

Rishab shetty family visit Hariharpur Narasimhaswamy
ಸ್ಯಾಂಡಲ್ ವುಡ್1 hour ago

Rishab shetty: ಹರಿಹರಪುರ ಕ್ಷೇತ್ರಕ್ಕೆ ರಿಷಬ್ ಶೆಟ್ಟಿ ಕುಟುಂಬದ ಭೇಟಿ: ನರಸಿಂಹಸ್ವಾಮಿಯ ದರ್ಶನ ಪಡೆದ ಡಿವೈನ್‌ ಸ್ಟಾರ್‌!

nisha cp yogeshwara
ವೈರಲ್ ನ್ಯೂಸ್1 hour ago

CP Yogeshwara: “ಹೊಡೀತಾರೆ, ಭಿಕ್ಷೆ ಬೇಡು ಅನ್ತಾರೆ….ʼʼ ಯೋಗೇಶ್ವರ್‌ ವಿರುದ್ಧ ಕಣ್ಣೀರು ಹಾಕುತ್ತಾ ರೆಬೆಲ್‌ ಆದ ಮಗಳು

Nandini Milk No incentives for milk producers Ashok slams govt for sponsoring foreign cricket team
ರಾಜಕೀಯ1 hour ago

Nandini Milk: ಹಾಲು ಉತ್ಪಾದಿಸಿದ ರೈತರಿಗಿಲ್ಲ ಹಣ; ವಿದೇಶಿ ಕ್ರಿಕೆಟ್‌ ಟೀಂಗೆ ಪ್ರಾಯೋಜಕತ್ವ: ಸರ್ಕಾರದ ವಿರುದ್ಧ ಅಶೋಕ್‌ ಗರಂ

Viral video
ವೈರಲ್ ನ್ಯೂಸ್1 hour ago

Viral Video:‌ ಅಬ್ಬಾ..ಇದೆಂಥಾ ಹುಚ್ಚಾಟ; ಸ್ವಲ್ಪ ಮಿಸ್‌ ಆದ್ರೂ ಸಾವು ಗ್ಯಾರಂಟಿ-ಶಾಕಿಂಗ್‌ ವಿಡಿಯೋ ವೈರಲ್

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Weather Forecast
ಮಳೆ7 hours ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ20 hours ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು1 day ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

Contaminated Water
ಮೈಸೂರು1 day ago

Contaminated Water : ಡಿ ಸಾಲುಂಡಿಯಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ ಯುವಕ ಸಾವು

Karnataka Rain
ಮಳೆ2 days ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

Karnataka Rain
ಮಳೆ3 days ago

Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

Karnataka rain
ಮಳೆ3 days ago

Karnataka Rain : ವಿಜಯನಗರದಲ್ಲಿ ಸಿಡಿಲಿಗೆ ಜಾನುವಾರು ಬಲಿ; ಬೆಂಗಳೂರು ಸೇರಿ ಹಲವೆಡೆ ಭಾರಿ ಮಳೆ

Karnataka Rain
ಮಳೆ3 days ago

Karnataka Rain: ಧಾರಾಕಾರ ಮಳೆಗೆ ಕಾಂಪೌಂಡ್ ಕುಸಿದು 4 ಬೈಕ್‌ಗಳು ಜಖಂ; ಮದುವೆ ಮಂಟಪಕ್ಕೆ ನುಗ್ಗಿದ ನೀರು‌

Prajwal Revanna Case JDS calls CD Shivakumar pen drive gang
ರಾಜಕೀಯ5 days ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

Karnataka weather Forecast
ಮಳೆ5 days ago

Karnataka Weather : ಮೈಸೂರು, ಮಂಡ್ಯ ಸೇರಿ ಈ 7 ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಂಭವ

ಟ್ರೆಂಡಿಂಗ್‌