Viral Video | ಭಯಂಕರ ಚಳಿಯಲ್ಲಿ ಅಂಗಿ ಬಿಚ್ಚಿ ಕುಣಿದ ಕಾಂಗ್ರೆಸ್ ಕಾರ್ಯಕರ್ತರು; ಭಾರತ್ ಜೋಡೋ ಯಾತ್ರೆಯಲ್ಲಿ ಹುಮ್ಮಸ್ಸು - Vistara News

ದೇಶ

Viral Video | ಭಯಂಕರ ಚಳಿಯಲ್ಲಿ ಅಂಗಿ ಬಿಚ್ಚಿ ಕುಣಿದ ಕಾಂಗ್ರೆಸ್ ಕಾರ್ಯಕರ್ತರು; ಭಾರತ್ ಜೋಡೋ ಯಾತ್ರೆಯಲ್ಲಿ ಹುಮ್ಮಸ್ಸು

ಉತ್ತರ ಪ್ರದೇಶದಿಂದ ಹರಿಯಾಣಕ್ಕೆ ಪ್ರವೇಶಿಸಿರುವ ಕಾಂಗ್ರೆಸ್​​ನ ಭಾರತ್ ಜೋಡೋ ಯಾತ್ರೆ ಜನವರಿ 10ರಂದು ಪಂಜಾಬ್ ಪ್ರವೇಶಿಸಲಿದೆ. ಉತ್ತರ ಭಾರತದಲ್ಲಿ ಜೀವ ತೆಗೆಯುವಷ್ಟು ಚಳಿ ಬೀಳುತ್ತಿದ್ದರೂ ಕಾಂಗ್ರೆಸ್ ಕಾರ್ಯಕರ್ತರು ಹುಮ್ಮಸ್ಸಿನಲ್ಲಿ ಹೆಜ್ಜೆ ಹಾಕುತ್ತಿದ್ದಾರೆ.

VISTARANEWS.COM


on

Congress workers dance shirtless Haryana
ಕಾಂಗ್ರೆಸ್ ಕಾರ್ಯಕರ್ತರ ನೃತ್ಯ
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಕರ್ನಾಲ್​: ಕಾಂಗ್ರೆಸ್​ನ ಭಾರತ್​ ಜೋಡೋ ಯಾತ್ರೆ ಈಗ ಹರಿಯಾಣದಲ್ಲಿ ನಡೆಯುತ್ತಿದೆ. ರಾಹುಲ್ ಗಾಂಧಿ ನೇತೃತ್ವದಲ್ಲಿ ಹಲವು ಪ್ರಮುಖ ನಾಯಕರು, ಕಾರ್ಯಕರ್ತರು ಪಾದಯಾತ್ರೆ ನಡೆಸುತ್ತಿದ್ದಾರೆ. ಒಂದೆಡೆ ವಿಪರೀತ ಚಳಿ, ದಟ್ಟವಾದ ಮಂಜು, ಉಸಿರು ಕಟ್ಟಿಸುವಷ್ಟು ಕಟುವಾದ ಶೀತಗಾಳಿ..ಈ ಮಧ್ಯೆ ಕಾಂಗ್ರೆಸ್ಸಿಗರು ಮುಂಜಾನೆಯೇ ಎದ್ದು ಬಿರುಸಿನ ಹೆಜ್ಜೆ ಇಡುತ್ತಿದ್ದಾರೆ.

ಈ ಮಧ್ಯೆ ಗಮನಸೆಳೆದಿದ್ದು ಕಾಂಗ್ರೆಸ್ ಕಾರ್ಯಕರ್ತರ ನೃತ್ಯ. ಹರಿಯಾಣದ ಕರ್ನಾಲ್​ನಲ್ಲಿ ಭಾರತ್ ಜೋಡೋ ಯಾತ್ರೆ ಮಧ್ಯೆ ಕಾರ್ಯಕರ್ತರು ಅಂಗಿಬಿಚ್ಚಿಕೊಂಡು ಕುಣಿದಿದ್ದಾರೆ. ಅಲ್ಲಿ ಕನಿಷ್ಠ 4.5 ಡಿಗ್ರಿಗಳಷ್ಟು ತಾಪಮಾನ ದಾಖಲಾಗಿದ್ದು, ದೇಹದ ರಕ್ತ ಹೆಪ್ಪುಗಟ್ಟುವಷ್ಟು ಶೀತವಿದೆ. ಅದರ ನಡುವೆಯೇ ಕಾಂಗ್ರೆಸ್​ ಕಾರ್ಯಕರ್ತರು ಶರ್ಟ್​​ ಬಿಚ್ಚಿ, ಬಸ್​ ಮೇಲೆ ಹತ್ತಿ ನಿಂತು ಕುಣಿದಿದ್ದಾರೆ. ಕೈಯಲ್ಲಿ ಕಾಂಗ್ರೆಸ್ ಬಾವುಟ ಹಿಡಿದಿದ್ದಾರೆ. ದೊಡ್ಡದಾಗಿ ಕೂಗುತ್ತ ಬಸ್ಕಿ ತೆಗೆಯುತ್ತಿದ್ದಾರೆ. ಅದೆಷ್ಟು ಮಂಜು ಕವಿದಿದೆ ಎಂಬುದನ್ನು ಈ ವಿಡಿಯೊದಲ್ಲಿ ನೋಡಬಹುದು.

ಭಾರತ್​ ಜೋಡೋ ಯಾತ್ರೆ ಉತ್ತರ ಪ್ರದೇಶದಿಂದ ಹರಿಯಾಣಕ್ಕೆ ಕಾಲಿಟ್ಟಿದೆ. ಈ ಭಾಗದಲ್ಲೆಲ್ಲ ಈಗ ಚಳಿಯ ಅಬ್ಬರ. ಅದರ ಮಧ್ಯೆ ರಾಹುಲ್ ಗಾಂಧಿ ಕೂಡ ಒಂದು ಟಿ ಶರ್ಟ್ ಹಾಕಿಕೊಂಡು ಪಾದಯಾತ್ರೆ ನಡೆಸುತ್ತಿದ್ದಾರೆ. ಈ ಬಗ್ಗೆ ಈಗಾಗಲೇ ಮಾಧ್ಯಮದವರು ರಾಹುಲ್ ಗಾಂಧಿಯನ್ನು ಪ್ರಶ್ನಿಸಿದ್ದರು. ಅದಕ್ಕೆ ಉತ್ತರಿಸಿದ್ದ ರಾಹುಲ್ ಗಾಂಧಿ ‘ಈ ದೇಶದಲ್ಲಿ ರೈತರು, ಕೂಲಿಕಾರ್ಮಿಕರು, ಶ್ರಮಿಕರು ಚಳಿ-ಮಳೆಯಲ್ಲಿ ನಡುಗುತ್ತ, ಬಿಸಿಲಲ್ಲಿ ಬೇಯುತ್ತಿದ್ದಾರೆ. ಹರುಕು ಅಂಗಿ ತೊಟ್ಟು ಕಷ್ಟ ಪಡುತ್ತಿದ್ದಾರೆ. ಅವರ ಬಳಿ ಯಾರೂ ಹೋಗಿ ನಿಮಗೆ ಚಳಿಯಾಗುವುದಿಲ್ಲವೇ? ಎಂದು ಪ್ರಶ್ನೆ ಮಾಡುವುದಿಲ್ಲ. ಅವರನ್ನು ಗಮನಿಸುವುದೂ ಇಲ್ಲ. ಅವರನ್ನೆಲ್ಲ ಪ್ರತಿನಿಧಿಸಲು ನಾನು ಭಾರತ್​ ಜೋಡೋ ಯಾತ್ರೆ ನಡೆಸುತ್ತಿದ್ದೇನೆ. ಹಾಗಾಗಿ ಬರೀ ಟಿ ಶರ್ಟ್​​ನಲ್ಲಿಯೇ ಇದ್ದರೂ ನನಗೆ ಚಳಿಯಾಗುವುದಿಲ್ಲ’ ಎಂದು ಹೇಳಿದ್ದರು. ಇನ್ನು ತನ್ನ ಅಣ್ಣ ಯಾಕೆ ಇಷ್ಟು ಚಳಿಯಲ್ಲೂ ಬರಿ ಟಿ ಶರ್ಟ್ ಧರಿಸಿ ಪಾದಯಾತ್ರೆ ನಡೆಸುತ್ತಿದ್ದಾರೆ ಎಂಬುದಕ್ಕೆ ಉತ್ತರಿಸಿದ್ದ ಪ್ರಿಯಾಂಕಾ ಗಾಂಧಿ ,‘ರಾಹುಲ್ ಗಾಂಧಿಯವರು ಸತ್ಯದ ಹೊದಿಕೆ ಹೊದ್ದಿದ್ದಾರೆ. ಹಾಗಾಗಿ ಒಂದು ಟಿ ಶರ್ಟ್ ಧರಿಸಿ ಪಾದಯಾತ್ರೆ ನಡೆಸುತ್ತಿದ್ದರೂ ಅವರಿಗೆ ಚಳಿಯಾಗುತ್ತಿಲ್ಲ’ ಎಂದಿದ್ದರು.

ಸೆಪ್ಟೆಂಬರ್​​ನಿಂದ ಪ್ರಾರಂಭವಾದ ಭಾರತ್ ಜೋಡೋ ಯಾತ್ರೆ ಜನವರಿ 10ರಂದು ಪಂಜಾಬ್ ಪ್ರವೇಶಿಸಲಿದೆ. ಹರಿಯಾಣದಲ್ಲಿ ರಾಹುಲ್ ಗಾಂಧಿ ಮಾರ್ಗ ಮಧ್ಯೆ ಅನೇಕರನ್ನು ಮಾತನಾಡಿಸುತ್ತ, ಅವರ ಕಷ್ಟ-ಸುಖ ಆಲಿಸುತ್ತ ಮುನ್ನಡೆಯುತ್ತಿದ್ದಾರೆ.

ಇದನ್ನೂ ಓದಿ: Rahul Gandhi | ಭಾರತ್‌ ಜೋಡೋ ಯಾತ್ರೆಗೆ ಜೂನಿಯರ್‌ ರಾಹುಲ್‌ ಗಾಂಧಿ ಬೆಂಬಲ, ಯಾರಿವರು? ಇಲ್ಲಿದೆ ವಿಡಿಯೊ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

IT Raid: ಚಿನ್ನದ ವ್ಯಾಪಾರಿಗಳಿಗೆ ಐಟಿ ಶಾಕ್‌; ಬೆಳ್ಳಂಬೆಳಗ್ಗೆ ರೇಡ್‌, ಕೋಟಿ ಕೋಟಿ ಹಣ ಜಪ್ತಿ!

IT Raid: ಐಟಿ ಅಧಿಕಾರಿಗಳು ಚಿನ್ನದ ಮಳಿಗೆಯಲ್ಲಿ ಶೋಧ ಕಾರ್ಯಾಚರಣೆ ಕೈಗೆತ್ತಿಕೊಂಡಿದ್ದರು. ಶೋಧ ಕಾರ್ಯದ ವೇಳೆ ಬರೋಬ್ಬರಿ 26 ಕೋಟಿ ರೂ. ನಗದು ಮತ್ತು 90 ಕೋಟಿ ರೂ. ಮೊತ್ತದ ವಸ್ತುಗಳು ಪತ್ತೆ ಆಗಿವೆ. ಇನ್ನು ಈ ನಗದು ಮತ್ತು ಸ್ವತ್ತುಗಳನ್ನು ಐಟಿ ಅಧಿಕಾರಿಗಳು ಜಪ್ತಿ ಮಾಡಿದ್ದು, ಕೇಸ್‌ ದಾಖಲಿಸಿಕೊಂಡಿದ್ದಾರೆ.

VISTARANEWS.COM


on

IT Raid
Koo

ಮಹಾರಾಷ್ಟ್ರ: ಬೆಳ್ಳಂಬೆಳಗ್ಗೆ ಆದಾಯ ತೆರಿಗೆ ಇಲಾಖೆ(IT Raid) ಅಧಿಕಾರಿಗಳು ನಾಸಿಕ್ ಮೂಲದ ಚಿನ್ನದ ವ್ಯಾಪಾರಿ(Jewellers)ಗಳಿಗೆ ಬಿಸಿ ಮುಟ್ಟಿದ್ದಾರೆ. ಅಕ್ರಮ ಹಣ ವರ್ಗಾವಣೆ ಮತ್ತು ತೆರಿಗೆ ವಂಚನೆ ಬಗ್ಗೆ ಖಚಿತ ಮಾಹಿತಿ ಮೇರೆಗೆ ಮಹಾರಾಷ್ಟ್ರದ ನಾಸಿಕ್‌ನ ಸುರಾನಾ ಜ್ಯುವೆಲ್ಲರ್ಸ್‌ ಮೇಲೆ ರೇಡ್‌ ಮಾಡಿದ ಅಧಿಕಾರಿಗಳು ಭಾರೀ ಮೊತ್ತದ ಅಕ್ರಮ ಹಣ ಮತ್ತು ಸಂಪತ್ತನ್ನು ವಶಕ್ಕೆ ಪಡೆದಿದ್ದಾರೆ.

ಅಧಿಕೃತ ಮಾಹಿತಿ ಮೇರೆಗೆ ದಾಳಿ ನಡೆಸಿದ ಐಟಿ ಅಧಿಕಾರಿಗಳು ಚಿನ್ನದ ಮಳಿಗೆಯಲ್ಲಿ ಶೋಧ ಕಾರ್ಯಾಚರಣೆ ಕೈಗೆತ್ತಿಕೊಂಡಿದ್ದರು. ಶೋಧ ಕಾರ್ಯದ ವೇಳೆ ಬರೋಬ್ಬರಿ 26 ಕೋಟಿ ರೂ. ನಗದು ಮತ್ತು 90 ಕೋಟಿ ರೂ. ಮೊತ್ತದ ವಸ್ತುಗಳು ಪತ್ತೆ ಆಗಿವೆ. ಇನ್ನು ಈ ನಗದು ಮತ್ತು ಸ್ವತ್ತುಗಳನ್ನು ಐಟಿ ಅಧಿಕಾರಿಗಳು ಜಪ್ತಿ ಮಾಡಿದ್ದು, ಕೇಸ್‌ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ:Fire Accident: ಗುಜರಾತ್‌ ಅಗ್ನಿ ದುರಂತ; ಸಾವಿನ ಸಂಖ್ಯೆ 32ಕ್ಕೆ ಏರಿಕೆ; SIT ತನಿಖೆಗೆ ಆದೇಶ

ಇನ್ನು ಕೆಲವು ವಾರಗಳ ಹಿಂದೆ ಜಾರ್ಖಂಡ್‌ನಲ್ಲೂ ಇಂತಹದ್ದೇ ಒಂದು ರೇಡ್‌ ನಡೆದಿತ್ತು. ಜಾರಿ ನಿರ್ದೇಶನಾಲಯ (Enforcement Directorate)ದ ಅಧಿಕಾರಿಗಳು ಜಾರ್ಖಂಡ್‌ನ ರಾಜಧಾನಿ ರಾಂಚಿಯ ಅನೇಕ ಸ್ಥಳಗಳಲ್ಲಿ ಸರಣಿ ದಾಳಿ ನಡೆಸಿ ಭರ್ಜರಿ ಬೇಟೆಯಾಡಿದ್ದರು. (ED Raid). ಈ ವೇಳೆ ಜಾರ್ಖಂಡ್ ಗ್ರಾಮೀಣಾಭಿವೃದ್ಧಿ ಸಚಿವ, ಕಾಂಗ್ರೆಸ್‌ ಮುಖಂಡ ಅಲಂಗೀರ್ ಆಲಂ (Alamgir Alam) ಅವರ ಆಪ್ತ ಕಾರ್ಯದರ್ಶಿ ಸಂಜೀವ್ ಲಾಲ್ (Sanjiv Lal) ಮನೆಯಲ್ಲಿ ಲೆಕ್ಕವಿಲ್ಲದ 25 ಕೋಟಿ ರೂ.ಗಿಂತ ಅಧಿಕ ಹಣವನ್ನು ವಶಕ್ಕೆ ಪಡೆಯಲಾಗಿತ್ತು.

Continue Reading

ಕ್ರೈಂ

Teenage Boy Arrested: ತನ್ನನ್ನು ಅತ್ಯಾಚಾರ ಮಾಡಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದವನನ್ನು ಕೊಂದ ಬಾಲಕ!

ಮುಜಾಫರ್‌ನಗರದ ಹಳ್ಳಿಯೊಂದರಲ್ಲಿ ತನ್ನ ಮೇಲೆ ಹಲವು ಬಾರಿ ಅತ್ಯಾಚಾರ ಎಸಗಿದ 50 ವರ್ಷದ ವ್ಯಕ್ತಿಯನ್ನು ಕೊಂದ ಆರೋಪದ ಮೇಲೆ 15 ವರ್ಷದ ಬಾಲಕನನ್ನು (Teenage Boy Arrested) ಬಂಧಿಸಲಾಗಿದೆ.

VISTARANEWS.COM


on

By

Teenage boy arrested
Koo

ಉತ್ತರಪ್ರದೇಶ: ಅತ್ಯಾಚಾರಿಯನ್ನು (rapist) ಕೊಂದ ಹದಿಹರೆಯದ ಬಾಲಕನನ್ನು (Teenage Boy Arrested) ಉತ್ತರಪ್ರದೇಶದ (Uttar Pradesh) ಮುಜಾಫರ್‌ನಗರದಲ್ಲಿ (Muzaffarnagar) ಪೊಲೀಸರು ಬಂಧಿಸಿದ್ದು, ಐಪಿಸಿ ಸೆಕ್ಷನ್ 302 (Murder) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ. ಬಾಲಕನನ್ನು ಬಾಲಾಪರಾಧಿ ಕೇಂದ್ರಕ್ಕೆ ಕಳುಹಿಸಲಾಗಿದೆ.

ಮುಜಾಫರ್‌ನಗರದ ಹಳ್ಳಿಯೊಂದರಲ್ಲಿ ತನ್ನ ಮೇಲೆ ಹಲವು ಬಾರಿ ಅತ್ಯಾಚಾರ ಎಸಗಿದ 50 ವರ್ಷದ ವ್ಯಕ್ತಿಯನ್ನು ಕೊಂದ ಆರೋಪದ ಮೇಲೆ 15 ವರ್ಷದ ಬಾಲಕನನ್ನು ಬಂಧಿಸಲಾಗಿದೆ. ಮೇ 20ರಂದು ಬಾಲಕನ ಮನೆಯಲ್ಲಿ ವ್ಯಕ್ತಿಯ ಶವ ಪತ್ತೆಯಾಗಿದ್ದು, ಪೊಲೀಸ್ ತನಿಖೆಯ ಅನಂತರ ಹದಿಹರೆಯದವರನ್ನು ಶನಿವಾರ ಬಂಧಿಸಲಾಯಿತು.

ವ್ಯಕ್ತಿಯ ಕುಟುಂಬದವರು ಪೊಲೀಸರಿಗೆ ದೂರು ನೀಡಿದ ಅನಂತರ ಬಾಲಕನ ವಿರುದ್ಧ ಐಪಿಸಿ ಸೆಕ್ಷನ್ 302 (ಕೊಲೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಬಾಲಕನನ್ನು ಬಾಲಾಪರಾಧಿ ಕೇಂದ್ರಕ್ಕೆ ಕಳುಹಿಸಲಾಗಿದೆ.

ಎಸ್ಪಿ (ಗ್ರಾಮೀಣ) ಆದಿತ್ಯ ಬನ್ಸಾಲ್ ಅವರು, ವಾರಗಳ ಹಿಂದೆ ಮೃತರು ಅಪ್ರಾಪ್ತ ವಯಸ್ಕನನ್ನು ಅಶ್ಲೀಲ ವಿಡಿಯೋ ಕ್ಲಿಪ್ ಅನ್ನು ರೆಕಾರ್ಡ್ ಮಾಡಿದ್ದರು. ಬಾಲಕನಿಗೆ ಬ್ಲ್ಯಾಕ್‌ಮೇಲ್ ಮಾಡಲಾಗುತ್ತಿದೆ ಮತ್ತು ಪದೇ ಪದೇ ಲೈಂಗಿಕ ಕಿರುಕುಳ ನೀಡಲಾಗುತ್ತಿತ್ತು.

ಸೋಮವಾರ ವಿಡಿಯೋವನ್ನು ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡುವುದಾಗಿ ಬೆದರಿಕೆ ಹಾಕಿದ ಅನಂತರ, ವ್ಯಕ್ತಿ ತನ್ನ ಮನೆಗೆ ಬರುವಂತೆ ಬಾಲಕನಿಗೆ ಒತ್ತಾಯಿಸಿದ್ದನು. ಆತ ಕಿರುಕುಳ ನೀಡುತ್ತಿದ್ದುದರಿಂದ ಹುಡುಗ ತನ್ನ ಪಕ್ಕದಲ್ಲಿದ್ದ ಹರಿತವಾದ ವಸ್ತುವನ್ನು ಎತ್ತಿಕೊಂಡು ಹೋಗಿ ವ್ಯಕ್ತಿಯ ತಲೆ ಮತ್ತು ಗಂಟಲಿನ ಮೇಲೆ ಹಲ್ಲೆ ನಡೆಸಿದ್ದ. ಗಂಭೀರ ಗಾಯಗೊಂಡಿದ್ದ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿರುವುದಾಗಿ ಆತನ ಕುಟುಂಬಸ್ಥರು ದೂರಿನಲ್ಲಿ ತಿಳಿಸಿದ್ದಾರೆ.

ಪ್ರೀತಿಗೆ ವಿರೋಧ; ಯುವಕ ಆತ್ಮಹತ್ಯೆ

ಪ್ರೀತಿಸಿದ ಯುವತಿಯ ಕುಟುಂಬಸ್ಥರು ಮದುವೆಗೆ ವಿರೋಧ ವ್ಯಕ್ತಪಡಿಸಿದ ಕಾರಣ ಮನನೊಂದ ಪ್ರಿಯಕರ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹುಲಸೂರ ಪಟ್ಟಣದಲ್ಲಿ ಈ ಘಟನೆ ನಡೆದಿದೆ.

ಅಜಯ್ ಮನೋಹರ ಸೂರ್ಯವಂಶಿ (22) ಮೃತ ವ್ಯಕ್ತಿ. ಕೆಲವು ವರ್ಷಗಳಿಂದ ಈತ ಯುವತಿಯೊಬ್ಬಳನ್ನು ಪ್ರೀತಿಸುತಿದ್ದ, ಆದರೆ ತನ್ನ ತಂಗಿಯನ್ನು ಮರೆತು ಬಿಡುವಂತೆ ಆಕೆಯ ಅಣ್ಣ ಯುವಕನಿಗೆ ಧಮ್ಕಿ ಹಾಕಿದ್ದ. ಹೀಗಾಗಿ ಆತನ ಭಯಕ್ಕೆ ಹೆದರಿ ತನ್ನ ಮಗ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಮೃತನ ತಾಯಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಈ ಕುರಿತು ಹೊಲಸೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ಇದನ್ನೂ ಓದಿ: Physical Abuse: ವಾಯಿಸ್‌ ಚೇಂಜಿಂಗ್‌ ಆಪ್‌ ಸಹಾಯದಿಂದ ಯುವತಿಯರಿಗೆ ಬಲೆ; ಮಹಿಳೆಯಂತೆ ಮಾತನಾಡಿ ವಿದ್ಯಾರ್ಥಿನಿಯರ ಮೇಲೆ ಅತ್ಯಾಚಾರ

ಹಿಟ್‌ ಆ್ಯಂಡ್‌ ರನ್‌: ಪಾದಚಾರಿ ಸಾವು

ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಅರೇಪುರ ಗೇಟ್ ಬಳಿ ಹಿಟ್‌ ಆ್ಯಂಡ್‌ ರನ್‌ಗೆ ಪಾದಚಾರಿಯೊಬ್ಬರು ಮೃತಪಟ್ಟ ಘಟನೆ ನಡೆದಿದೆ.

ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಪಾದಚಾರಿಗೆ ಹಿಂಬದಿಯಿಂದ ಬಂದ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ರಸ್ತೆಯ ಮಧ್ಯೆ ಹಾರಿ ಬಿದ್ದ ವ್ಯಕ್ತಿ ಮೇಲೆ ಮತ್ತೊಂದು ವಾಹನ ಹರಿದಿದೆ ಎನ್ನಲಾಗಿದೆ.

ಅಪಘಾತದಿಂದ ಗಂಭೀರ ಗಾಯಗೊಂಡಿದ್ದ ವ್ಯಕ್ತಿಯನ್ನು ಸ್ಥಳೀಯರು ಕೂಡಲೇ ಆಂಬ್ಯುಲೆನ್ಸ್‌ನಲ್ಲಿ ಕರೆದೊಯ್ಯುವಾಗ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ. ಮೃತಪಟ್ಟ ವ್ಯಕ್ತಿಯ ಗುರುತು ಪತ್ತೆಯಾಗದ ಹಿನ್ನೆಲೆಯಲ್ಲಿ ಪೊಲೀಸರು ಸ್ಥಳೀಯ ಠಾಣೆಗಳಿಗೆ ಮಾಹಿತಿ ರವಾನಿಸಿದ್ದಾರೆ. ಬೇಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Continue Reading

ದೇಶ

Cyclone Remal: ರೆಮಲ್‌ ಚಂಡ ಮಾರುತದ ಅಬ್ಬರ ಶುರು; ಬಾಂಗ್ಲಾದೇಶ, ಪ.ಬಂಗಾಳ ಸೇರಿದಂತೆ ಹಲವಡೆ ಭಾರೀ ಮಳೆ, ಭೂಕುಸಿತ ಸಾಧ್ಯತೆ

Cyclone Remal:ಹವಾಮಾನ ಇಲಾಖೆಯು ಕೆಪುಪಾರಾ (ಬಾಂಗ್ಲಾದೇಶ) ದಿಂದ ಸುಮಾರು 800 ಕಿಮೀ ದಕ್ಷಿಣ-ನೈಋತ್ಯ ಮತ್ತು ಕ್ಯಾನಿಂಗ್ (ಪಶ್ಚಿಮ ಬಂಗಾಳ) ನಿಂದ 810 ಕಿಮೀ ದೂರದಲ್ಲಿ ಅಂದರೆ ಮಧ್ಯ ಬಂಗಾಳ ಕೊಲ್ಲಿಯಲ್ಲಿ ಮೇ 24 ರಂದು ಪಶ್ಚಿಮ ಮಧ್ಯ ಮತ್ತು ಪಕ್ಕದ ದಕ್ಷಿಣ ಬಂಗಾಳ ಕೊಲ್ಲಿಯಲ್ಲಿ ರೆಮಲ್ ಚಂಡಮಾರುತವನ್ನು ಗುರುತಿಸಿದೆ.
ರೆಮಲ್ ಚಂಡಮಾರುತವು ಪ್ರಸ್ತುತ ಉತ್ತರಕ್ಕೆ ಚಲಿಸುತ್ತಿದೆ. ಈ ಚಂಡಮಾರುತವು ಮೇ 26 ರ ಮಧ್ಯರಾತ್ರಿಯ ಹೊತ್ತಿಗೆ ಸಾಗರ್ ದ್ವೀಪ ಮತ್ತು ಖೇಪುಪಾರ ನಡುವೆ ಬಾಂಗ್ಲಾದೇಶ ಮತ್ತು ಪಕ್ಕದ ಪಶ್ಚಿಮ ಬಂಗಾಳದ

VISTARANEWS.COM


on

Cyclone Remal
Koo

ಕೋಲ್ಕತ್ತಾ: ಇಂದು ಸಂಜೆ 5:30ರ ವೇಳೆಗೆ ರೆಮಲ್‌ ಚಂಡಮಾರುತ ಪಶ್ಚಿಮ ಬಂಗಾಳ(West Bengal) ಮತ್ತು ಬಾಂಗ್ಲಾದೇಶ(Bangladesh)ದ ಕರಾವಳಿಗೆ ಅಪ್ಪಳಿಸಲಿದೆ. ಈ ಬಗ್ಗೆ ಹವಾಮಾನ ಇಲಾಖೆ(IMD) ಮುನ್ಸೂಚನೆ ನೀಡಿದ್ದು, ಬಾಂಗ್ಲಾದೇಶದ ಖೇಪುಪಾರಾದಲ್ಲಿ 290 ಕಿ.ಮೀ ಮತ್ತು ಸಾಗರ್‌ ದ್ವೀಪದ 270 ಕಿ.ಮೀ ವ್ಯಾಪ್ತಿಯಲ್ಲಿ ರೆಮಲ್‌ ಚಂಡಮಾರುತ(Cyclone Remal) ಬೀಸಲಿದೆ. ಈ ಚಂಡಮಾರುತದಿಂದಾಗಿ ಗಂಟೆಗೆ 102 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸಬಹುದು. ಪರಿಣಾಮವಾಗಿ ಭಾನುವಾರ(ಮೇ 26) ಮತ್ತು ಸೋಮವಾರ (ಮೇ 27)ರಂದು ಪಶ್ಚಿಮ ಬಂಗಾಳ ಮತ್ತು ಉತ್ತರ ಒಡಿಶಾ, ಮಿಜೋರಾಂ, ತ್ರಿಪುರಾ ಮತ್ತು ದಕ್ಷಿಣ ಮಣಿಪುರದ ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗು ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಹವಾಮಾನ ಇಲಾಖೆಯು ಕೆಪುಪಾರಾ (ಬಾಂಗ್ಲಾದೇಶ) ದಿಂದ ಸುಮಾರು 800 ಕಿಮೀ ದಕ್ಷಿಣ-ನೈಋತ್ಯ ಮತ್ತು ಕ್ಯಾನಿಂಗ್ (ಪಶ್ಚಿಮ ಬಂಗಾಳ) ನಿಂದ 810 ಕಿಮೀ ದೂರದಲ್ಲಿ ಅಂದರೆ ಮಧ್ಯ ಬಂಗಾಳ ಕೊಲ್ಲಿಯಲ್ಲಿ ಮೇ 24 ರಂದು ಪಶ್ಚಿಮ ಮಧ್ಯ ಮತ್ತು ಪಕ್ಕದ ದಕ್ಷಿಣ ಬಂಗಾಳ ಕೊಲ್ಲಿಯಲ್ಲಿ ರೆಮಲ್ ಚಂಡಮಾರುತವನ್ನು ಗುರುತಿಸಿದೆ.
ರೆಮಲ್ ಚಂಡಮಾರುತವು ಪ್ರಸ್ತುತ ಉತ್ತರಕ್ಕೆ ಚಲಿಸುತ್ತಿದೆ. ಈ ಚಂಡಮಾರುತವು ಮೇ 26 ರ ಮಧ್ಯರಾತ್ರಿಯ ಹೊತ್ತಿಗೆ ಸಾಗರ್ ದ್ವೀಪ ಮತ್ತು ಖೇಪುಪಾರ ನಡುವೆ ಬಾಂಗ್ಲಾದೇಶ ಮತ್ತು ಪಕ್ಕದ ಪಶ್ಚಿಮ ಬಂಗಾಳದ ಕರಾವಳಿಯನ್ನು ದಾಟುವ ಸಾಧ್ಯತೆಯಿದೆ.

ರೆಮಲ್ ಚಂಡಮಾರುತದ ಹಿನ್ನೆಲೆಯಲ್ಲಿ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಹವಾಮಾನ ಇಲಾಖೆ ಸೂಚನೆ ಎಚ್ಚರಿಕೆ ನೀಡಿದೆ. ಇದಲ್ಲದೇ ಈಗಾಗಲೇ ಸಮುದ್ರದಲ್ಲಿ ಬೀಡುಬಿಟ್ಟಿರುವ ಮೀನುಗಾರರು ಮೇ 26ರೊಳಗೆ ಕರಾವಳಿಗೆ ಮರಳುವಂತೆ ಸೂಚಿಸಲಾಗಿದೆ. ಭಾರತೀಯ ಕೋಸ್ಟ್ ಗಾರ್ಡ್ (ICG) ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡಿದ್ದು, ಒಂಬತ್ತು ವಿಪತ್ತು ಪರಿಹಾರ ತಂಡಗಳನ್ನು ನಿಯೋಜಿಸಲಾಗಿದೆ. ಪೂರ್ವ ಕರಾವಳಿಯಲ್ಲಿ 10 ಹಡಗುಗಳು ಮತ್ತು 2 ವಿಮಾನಗಳನ್ನು ನಿಯೋಜಿಸಲಾಗಿದೆ, ಇದರಿಂದಾಗಿ ಅವರು ಸಮುದ್ರದಲ್ಲಿ ಇರುವ ಅಥವಾ ಹೋಗುವ ಮೀನುಗಾರರ ಮೇಲೆ ನಿಗಾ ಇಡಬಹುದು.

ರೆಮಲ್‌ ಚಂಡಮಾರುತದಿಂದಾಗಿ ಪಶ್ಚಿಮ ಬಂಗಾಳದಲ್ಲಿ ಇಂದು ಮಧ್ಯಾಹ್ನದ ನಂತರ ಭಾರೀ ಮಳೆಯಾಗಲಿದ್ದು, ಭೂಕುಸಿತ ಸಂಭವಿಸುವ ಸಾಧ್ಯತೆ ದಟ್ಟವಾಗಿದೆ. ರಾಜ್ಯಾದ್ಯಂತ 20 ಸೆಂ.ಮೀ ಮಳೆಯಾಗು ಸಂಭವ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಇದನ್ನೂ ಓದಿ: DP Manu: ಫೆಡರೇಷನ್ ಕಪ್‌ನಲ್ಲಿ ನೀರಜ್​ ಚೋಪ್ರಾಗೆ ಬೆವರಿಳಿಯುವಂತೆ ಮಾಡಿದ ಕನ್ನಡಿಗ ಮನು; ಇವರ ಹಿನ್ನೆಲೆ, ಸಾಧನೆ ಏನೇನು?

Continue Reading

ದೇಶ

Physical Abuse: ವಾಯಿಸ್‌ ಚೇಂಜಿಂಗ್‌ ಆಪ್‌ ಸಹಾಯದಿಂದ ಯುವತಿಯರಿಗೆ ಬಲೆ; ಮಹಿಳೆಯಂತೆ ಮಾತನಾಡಿ ವಿದ್ಯಾರ್ಥಿನಿಯರ ಮೇಲೆ ಅತ್ಯಾಚಾರ

Physical Abuse: ವಾಯಿಸ್‌ ಚೇಂಜಿಂಗ್‌ ಆಪ್‌ ಬಳಸಿಕೊಂಡು ತನ್ನನ್ನು ತಾನು ಉಪನ್ಯಾಸಕಳೆಂದು ಹೇಳಿಕೊಂಡು ವಿದ್ಯಾರ್ಥಿನಿಯರಿಗೆ ಕರೆ ಮಾಡುತ್ತಿದ್ದ. ಮಹಿಳೆಯರ ಧ್ವನಿಯಲ್ಲಿ ವಿದ್ಯಾರ್ಥಿನಿಯರೊಂದಿಗೆ ಮಾತನಾಡಿ, ಸ್ಕಾಲರ್‌ಶಿಪ್‌ ಪಡೆಯಲು ಅಹಾಯ ಮಾಡುವುದಾಗಿ ವಿದ್ಯಾರ್ಥಿನಿಯರನ್ನು ನಂಬಿಸುತ್ತಾನೆ. ಯಾರೂ ಇಲ್ಲದ ಸ್ಥಳಕ್ಕೆ ಬರುವಂತೆ ವಿದ್ಯಾರ್ಥಿನಿಯರಿಗೆ ಸೂಚಿಸುವ ಈತ ಅಲ್ಲಿ ಯುವಕನೋರ್ವ ನಿಮ್ಮನ್ನು ತನ್ನ ಬಳಿಕ ಕರೆದೊಯ್ಯಲು ಬರುತ್ತಾನೆ ಎಂದು ಹೇಳುತ್ತಾನೆ. ಆತನ ಮಾತನ್ನು ನಂಬಿದ ಬಾಲಕಿಯರು ಹಾಗೆಯೇ ಮಾಡುತ್ತಾರೆ. ಅವರನ್ನು ಕಾಡಿಗೆ ಎಳೆದೊಯ್ದು ಅವರ ಮೇಲೆ ಅತ್ಯಾಚಾರ ಎಸಗುತ್ತಿದ್ದ ಎಂದು ದೂರಿನಲ್ಲಿ ಸಂತ್ರಸ್ತ ಯುವತಿ ಹೇಳಿದ್ದಾಳೆ.

VISTARANEWS.COM


on

physical abuse
Koo

ಭೋಪಾಲ್‌: ಆತ ಅಕ್ಷರಶಃ ಒಂದು ಅಕ್ಷರ ಓದಲೂ ಬರೆಲು ಬಾರದ ಅನಕ್ಷರಸ್ಥ. ಆದರೆ ತಾನು ನಡೆಸುತ್ತಿದ್ದ ಹೀನಕೃತ್ಯಕ್ಕೆ ಆಧುನಿಕ ತಂತ್ರಜ್ಞಾನವನ್ನು ಹೇಗೆ ಬಳಸಿಕೊಂಡಿದ್ದ ಎಂದರೆ ಒಂದು ಕ್ಷಣಕ್ಕೆ ಎಂಥವರಾದರೂ ಆತನ ಮಾತಿಗೆ ತಲೆದೂಗಲೇ ಬೇಕು. ಆಧುನಿಕ ತಂತ್ರಜ್ಞಾನ ಇಂತಹ ಕ್ರಿಮಿನಲ್‌ಗಳಿಗೆ ಹೇಗೆ ಸಹಾಯ ಆಗ್ತಿದೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ವಾಯಿಸ್‌ ಚೇಜಿಂಗ್‌ ಆಪ್‌(Voice Changing App) ಬಳಸಿಕೊಂಡು ವಿದ್ಯಾರ್ಥಿನಿಯರಿಗೆ ಬಲೆ ಬೀಸಿ ಅವರ ಮೇಲೆ ಅತ್ಯಾಚಾರ(Physical Abuse) ಎಸಗುತ್ತಿದ್ದ ಕಿಡಿಗೇಡಿ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ಮಧ್ಯಪ್ರದೇಶದ ಸಿಧಿಯಲ್ಲಿ ಈ ಘಟನೆ ನಡೆದಿದ್ದು, ಬೃಜೇಶ್‌ ಕುಶ್ವಾಹ್‌ ಎಂಬಾತ ಬಂಧಿತ ಆರೋಪಿ. ಈತ ವಾಯಿಸ್‌ ಚೇಂಜಿಂಗ್‌ ಆಪ್‌ ಬಳಸಿಕೊಂಡು ತನ್ನನ್ನು ತಾನು ಉಪನ್ಯಾಸಕಳೆಂದು ಹೇಳಿಕೊಂಡು ವಿದ್ಯಾರ್ಥಿನಿಯರಿಗೆ ಕರೆ ಮಾಡುತ್ತಿದ್ದ. ಮಹಿಳೆಯರ ಧ್ವನಿಯಲ್ಲಿ ವಿದ್ಯಾರ್ಥಿನಿಯರೊಂದಿಗೆ ಮಾತನಾಡಿ, ಸ್ಕಾಲರ್‌ಶಿಪ್‌ ಪಡೆಯಲು ಅಹಾಯ ಮಾಡುವುದಾಗಿ ವಿದ್ಯಾರ್ಥಿನಿಯರನ್ನು ನಂಬಿಸುತ್ತಾನೆ. ಯಾರೂ ಇಲ್ಲದ ಸ್ಥಳಕ್ಕೆ ಬರುವಂತೆ ವಿದ್ಯಾರ್ಥಿನಿಯರಿಗೆ ಸೂಚಿಸುವ ಈತ ಅಲ್ಲಿ ಯುವಕನೋರ್ವ ನಿಮ್ಮನ್ನು ತನ್ನ ಬಳಿಕ ಕರೆದೊಯ್ಯಲು ಬರುತ್ತಾನೆ ಎಂದು ಹೇಳುತ್ತಾನೆ. ಆತನ ಮಾತನ್ನು ನಂಬಿದ ಬಾಲಕಿಯರು ಹಾಗೆಯೇ ಮಾಡುತ್ತಾರೆ. ಅವರನ್ನು ಕಾಡಿಗೆ ಎಳೆದೊಯ್ದು ಅವರ ಮೇಲೆ ಅತ್ಯಾಚಾರ ಎಸಗುತ್ತಿದ್ದ ಎಂದು ದೂರಿನಲ್ಲಿ ಸಂತ್ರಸ್ತ ಯುವತಿ ಹೇಳಿದ್ದಾಳೆ.

ಇನ್ನು ಕುಶ್ವರಾನ ಜಾಲಕ್ಕೆ ಇದುವರೆಗೆ 7 ಜನ ಆದಿವಾಸು ಕಾಲೇಜು ವಿದ್ಯಾರ್ಥಿನಿಯರು ಬಲಿಯಾಗಿದ್ದಾರೆ ಎನ್ನಲಾಗಿದೆ.

ಆರೋಪಿ ಕುಶ್ವಾಹ ಹೆಲ್ಮೆಟ್ ಧರಿಸುತ್ತಿದ್ದ. ಅಲ್ಲದೇ ಕೈಗಳಿಗೆ ಗ್ಲೌಸ್ ಧರಿಸುತ್ತಿದ್ದ. ಇದರಿಂದಾಗಿ ಸಂತ್ರಸ್ತೆಯರಿಗೆ ಆತನ ಗುರುತು ಪತ್ತೆಹಚ್ಚಲು ಸಾಧ್ಯವಾಗುತ್ತಿರಲಿಲ್ಲ. ಆದರೆ ದಾಖಲಾದ ದೂರುಗಳಲ್ಲಿ ಆತ ಗ್ಲೌಸ್ ಧರಿಸುತ್ತಿದ್ದ ಎಂಬ ವಿಷಯದಿಂದ, ಆತ ಸಿಕ್ಕಿಬಿದ್ದಿದ್ದಾನೆ. ಆರೋಪಿ ಈ ಹಿಂದೆ ಮಹಾರಾಷ್ಟ್ರದ ಗಿರಣಿಯೊಂದರಲ್ಲಿ ಕೆಲಸ ಮಾಡುವಾಗ ಕೈ ಸುಟ್ಟುಕೊಂಡಿದ್ದ. ಇದೇ ಕಾರಣಕ್ಕೆ ಗ್ಲೌಸ್ ಧರಿಸುತ್ತಿದ್ದ ಎಂದು ತಿಳಿದು ಬಂದಿದೆ.ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್ ಅವರು ಆರೋಪಿಗಳಿಂದ ಇನ್ನೂ ಹೆಚ್ಚಿನ ದೌರ್ಜನ್ಯಗಳಾಗಿವೆಯೇ ಎಂದು ತನಿಖೆ ನಡೆಸಲು 9 ಪೊಲೀಸ್ ಅಧಿಕಾರಿಗಳ ವಿಶೇಷ ತನಿಖಾ ತಂಡವನ್ನು ರಚಿಸಿದ್ದಾರೆ.

ಕುಶ್ವಾಹಾ ಸೇರಿ ಆತನ ಮೂವರು ಸಹಚರರನ್ನು ಬಂಧಿಸಲಾಗಿದೆ. ಸಿಧಿ ಜಿಲ್ಲಾಡಳಿತ ಬುಲ್ಡೋಜರ್ ಬಳಸಿ ಆರೋಪಿಗಳ ಮನೆಯನ್ನು ಧ್ವಂಸಗೊಳಿಸಿದೆ. ಇನ್ನು ಮೊಬೈಲ್‌ ಆಪ್‌ಗಳ ಬಗ್ಗೆ ಎಚ್ಚರವಹಿಸುವಂತೆ ಪೊಲೀಸರು ಜನರಿಗೆ ಮನವಿ ಮಾಡಿದ್ದಾರೆ.

ಇದನ್ನೋ ಓದಿ: Fire Accident: ಗುಜರಾತ್‌ ಅಗ್ನಿ ದುರಂತ; ಸಾವಿನ ಸಂಖ್ಯೆ 32ಕ್ಕೆ ಏರಿಕೆ; SIT ತನಿಖೆಗೆ ಆದೇಶ

Continue Reading
Advertisement
IT Raid
ದೇಶ4 mins ago

IT Raid: ಚಿನ್ನದ ವ್ಯಾಪಾರಿಗಳಿಗೆ ಐಟಿ ಶಾಕ್‌; ಬೆಳ್ಳಂಬೆಳಗ್ಗೆ ರೇಡ್‌, ಕೋಟಿ ಕೋಟಿ ಹಣ ಜಪ್ತಿ!

Udupi Gang War
ಕರ್ನಾಟಕ11 mins ago

Udupi Gang War: ಉಡುಪಿ ಗ್ಯಾಂಗ್ ವಾರ್ ಪ್ರಕರಣ; ಮತ್ತೆ ಮೂವರು ಆರೋಪಿಗಳ ಬಂಧನ

T20 World Cup 2024
ಕ್ರೀಡೆ21 mins ago

T20 World Cup 2024: ನ್ಯೂಯಾರ್ಕ್​ಗೆ ಪ್ರಯಾಣಿಸಿದ ಮೊದಲ ಬ್ಯಾಚ್​; ವಿರಾಟ್​ ಕೊಹ್ಲಿ ಗೈರು, ಅಭ್ಯಾಸ ಪಂದ್ಯಕ್ಕೂ ಅನುಮಾನ

Road Accident in Bengaluru
ಕ್ರೈಂ23 mins ago

Road Accident : ಕಾರು ಡ್ರೈವಿಂಗ್‌ ಕಲಿಯುವಾಗ ಬ್ರೇಕ್‌ ಬದಲು ಎಕ್ಸಿಲೇಟರ್‌ ತುಳಿದಳು; ಡೆಡ್ಲಿ ಆಕ್ಸಿಡೆಂಟ್‌ಗೆ ಬಾಲಕಿ ಬಲಿ

Teenage boy arrested
ಕ್ರೈಂ37 mins ago

Teenage Boy Arrested: ತನ್ನನ್ನು ಅತ್ಯಾಚಾರ ಮಾಡಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದವನನ್ನು ಕೊಂದ ಬಾಲಕ!

Janhvi Kapoor on paparazzi culture
ಬಾಲಿವುಡ್44 mins ago

Janhvi Kapoor: ಪಾಪರಾಜಿಗಳ ಅಸಲಿ ಮುಖ ರಿವೀಲ್‌ ಮಾಡಿದ ಜಾನ್ವಿ ಕಪೂರ್!

Gold Rate Today
ಕರ್ನಾಟಕ49 mins ago

Gold Rate Today: ಇಂದೂ ಯಥಾಸ್ಥಿತಿ ಕಾಯ್ದುಕೊಂಡ ಚಿನ್ನ, ಬೆಳ್ಳಿ ದರ

Tiger attack
ಮೈಸೂರು1 hour ago

Tiger Attack : ಮೈಸೂರಲ್ಲಿ ಹುಲಿ ದಾಳಿ; ಮಹಿಳೆಯನ್ನು ಹೊತ್ತೊಯ್ದು ಕೊಂದ ವ್ಯಾಘ್ರ

IPL 2024 Final
ಕ್ರೀಡೆ1 hour ago

IPL 2024 Final: ಐಪಿಎಲ್​ ವಿನ್ನರ್​ & ರನ್ನರ್​ಗೆ ಸಿಗುವ ಮೊತ್ತವೆಷ್ಟು? ಈ ಬಾರಿ ಆರೆಂಜ್​ ಕ್ಯಾಪ್​, ಪರ್ಪಲ್​ ಕ್ಯಾಪ್​ ಯಾರಿಗೆ ಸಿಗಲಿದೆ?

Cyclone Remal
ದೇಶ1 hour ago

Cyclone Remal: ರೆಮಲ್‌ ಚಂಡ ಮಾರುತದ ಅಬ್ಬರ ಶುರು; ಬಾಂಗ್ಲಾದೇಶ, ಪ.ಬಂಗಾಳ ಸೇರಿದಂತೆ ಹಲವಡೆ ಭಾರೀ ಮಳೆ, ಭೂಕುಸಿತ ಸಾಧ್ಯತೆ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ21 hours ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ3 days ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ4 days ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ5 days ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು5 days ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

Contaminated Water
ಮೈಸೂರು5 days ago

Contaminated Water : ಡಿ ಸಾಲುಂಡಿಯಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ ಯುವಕ ಸಾವು

Karnataka Rain
ಮಳೆ6 days ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

Karnataka Rain
ಮಳೆ7 days ago

Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

Karnataka rain
ಮಳೆ7 days ago

Karnataka Rain : ವಿಜಯನಗರದಲ್ಲಿ ಸಿಡಿಲಿಗೆ ಜಾನುವಾರು ಬಲಿ; ಬೆಂಗಳೂರು ಸೇರಿ ಹಲವೆಡೆ ಭಾರಿ ಮಳೆ

Karnataka Rain
ಮಳೆ7 days ago

Karnataka Rain: ಧಾರಾಕಾರ ಮಳೆಗೆ ಕಾಂಪೌಂಡ್ ಕುಸಿದು 4 ಬೈಕ್‌ಗಳು ಜಖಂ; ಮದುವೆ ಮಂಟಪಕ್ಕೆ ನುಗ್ಗಿದ ನೀರು‌

ಟ್ರೆಂಡಿಂಗ್‌