Eye health foods | ಕಣ್ಣು ಆರೋಗ್ಯವಾಗಿ ಇರಬೇಕಿದ್ದರೆ ಇವನ್ನೆಲ್ಲ ತಿನ್ನುತ್ತಿರಿ! - Vistara News

ಆರೋಗ್ಯ

Eye health foods | ಕಣ್ಣು ಆರೋಗ್ಯವಾಗಿ ಇರಬೇಕಿದ್ದರೆ ಇವನ್ನೆಲ್ಲ ತಿನ್ನುತ್ತಿರಿ!

ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳುವುದು ನಮ್ಮ ಕೈಯಲ್ಲೇ ಇದೆ. ಕೆಲವು ಪ್ರಕೃತಿದತ್ತ ಆಹಾರಾಭ್ಯಾಸಗಳಿಂದ ನಮ್ಮ ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

VISTARANEWS.COM


on

eye care foods
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಕಣ್ಣಿನಷ್ಟು ದೊಡ್ಡ ಉಡುಗೊರೆ ನಮ್ಮ ಜೀವನದಲ್ಲಿ ಇನ್ನೊಂದಿಲ್ಲ. ಜಗತ್ತನ್ನು ನೋಡಲು ನಮಗಿರುವ ಎರಡು ಕಣ್ಣುಗಳು ಕಾಣಿಕೆಯೇ ಸಿ. ಆದರೆ ಇತ್ತೀಚೆಗಿನ ದಿನಗಳಲ್ಲಿ ಬದಲಾದ ಜೀವನಶೈಲಿ, ಅತಿಯಾದ ಗ್ಯಾಜೆಟ್‌ ಬಳಕೆಗಳಿಂದ ಕಣ್ಣಿನ ಆರೋಗ್ಯ ಎಲ್ಲರಲ್ಲೂ ಕ್ಷೀಣಿಸುತ್ತಿದೆ. ಆದರೆ ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳುವುದು ನಮ್ಮ ಕೈಯಲ್ಲೇ ಇದೆ. ಕೆಲವು ಪ್ರಕೃತಿದತ್ತ ಆಹಾರಾಭ್ಯಾಸಗಳಿಂದ ನಮ್ಮ ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಹಾಗಾಗಿ ಯಾವೆಲ್ಲ ಆಹಾರಗಳು ಕಣ್ಣಿನ ಆರೋಗ್ಯಕ್ಕೆ ಸಹಕಾರಿ ಎಂಬುದನ್ನು ನೋಡೋಣ.

೧. ಕ್ಯಾರೆಟ್‌: ಕ್ಯಾರೆಟ್‌ ಎ ಮಿಟಮಿನ್‌ನ ಸಮೃದ್ಧ ಆಕರ. ಹಾಗಾಗಿ ಕಣ್ಣಿಗೆ ಬಹಳ ಒಳ್ಳೆಯದು. ಕ್ಯಾರೆಟ್‌ ತಿನ್ನುವುದರಿಂದ ರಾತ್ರಿಯ ಮಂದದೃಷ್ಠಿ ತೊಂದರೆಯಿದ್ದವರು ಪರಿಹಾರ ಪಡೆಯಬಹುದು. ಕಣ್ಣಿನ ಇತರ ಹಲವು ತೊಂದರೆಗಳಿಗೂ ಕ್ಯಾರೆಟ್‌ ಮುಖ್ಯವಾದ ನೈಸರ್ಗಿಕ ಉಪಾಯ.ಕ್ಯಾರೆಟ್‌ನ ಹಲವು ಬಗೆಯ ಅಡುಗೆಗಳ ಮೂಲಕ ನಿತ್ಯ ಕ್ಯಾರೆಟ್‌ ಸೇವನೆ ಅಭ್ಯಾಸ ಮಾಡಿಕೊಳ್ಳಬಹುದು. ಕ್ಯಾರೆಟ್‌ ಸೂಪ್‌, ಕ್ಯಾರೆಟ್‌ ಚಟ್ನಿ, ಕ್ಯಾರೆಟ್‌ ಸಬ್ಜಿ, ಸಾಂಬಾರು ಇತ್ಯಾದಿಗಳಲ್ಲೂ ಕ್ಯಾರೆಟ್‌ ನಿತ್ಯ ಬಳಸಬಹುದು. ಅಷ್ಟೇ ಅಲ್ಲದೆ, ಹಸಿ ಕ್ಯಾರೆಟ್ಟನ್ನು ತಿನ್ನುವುದರಿಂದ ಈ ಎಲ್ಲಕ್ಕಿಂತ ಹೆಚ್ಚು ಉಪಯೋಗ ಪಡೆಯಬಹುದು.

carrot

೨. ಮೀನು: ಮೀನು ಕಣ್ಣಿಗೆ ಒಳ್ಳೆಯದು. ಇದರಲ್ಲಿರುವ ಒಮೆಗಾ ೩ ಕಣ್ಣಿನ ಹಲವು ತೊಂದರೆಗಳಿಗೆ ರಾಮಬಾಣ. ಮೀನನ್ನು ತಿನ್ನುವುದರಿಂದ ಕಣ್ಣು ಹಾಗೂ ಮಿದುಳಿನ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಹಾಗಾಗಿ, ಕಣ್ಣಿನ ದೃಷ್ಠಿಯಿಂದ ರೋಗನಿರೋಧಕ ಶಕ್ತಿ ಹೆಚ್ಚು ಮಾಡಿಕೊಳ್ಳಬೇಕಿದ್ದರೆ ಮೀನು ತಿನ್ನಬಹುದು.

೩. ಬಸಳೆ: ಬಸಳೆಯಲ್ಲಿ ವಿಟಮಿನ್‌ ಇ ಹೇರಳವಾಗಿದೆ. ಇದರಲ್ಲಿರುವ ಕೆರಾಟಿನಾಯ್ಡ್‌ಗಳು ಆಂಟಿ ಆಕ್ಸಿಡೆಂಟ್‌ ಹಾಗೂ ಆಂಟಿ ಇನ್‌ಫ್ಲಾಮೇಟರಿ ಗುಣಗಳ್ನು ಹೊಂದಿದೆ. ಹೀಗಾಗಿ ಇದು ನಿಧಾನವಾಗಿ ಮಾಂಸಖಂಡಗಳು ಕರಗುತ್ತಾ ಹೋಗುವುದುದ ಹಾಗೂ ಕಣ್ಣಿನ ಪೊರೆ (ಕ್ಯಾಟರ್ಯಾಕ್ಟ್‌) ಬರದಂತೆ ತಡೆಯುತ್ತದೆ. ಹಣ್ಣಿನ ಸ್ಮೂದಿಗಳು, ದಾಲ್‌ ಮತ್ತಿತರ ಆಹಾರಗಳಲ್ಲಿ ಬಸಳೆ ಸೊಪ್ಪನ್ನು ಸೇರಿಸುವ ಮೂಲಕ ಹೆಚ್ಚು ಬಸಳೆಯನ್ನು ನಿತ್ಯಾಹಾರದಲ್ಲಿ ಬಳಸಬಹುದು.

spinach

೪. ಮೊಟ್ಟೆ: ಮೊಟ್ಟೆಯ ಹಳದಿ ಭಾಗ ಒಳ್ಳೆಯದಲ್ಲ ಎಂದು ಬಿಸಾಕಿ ಬಿಡುವ ಮಂದಿಗೆ ಇದು ಕಿವಿಮಾತು. ಇದರಲ್ಲಿರುವ ಹಲವಾರು ಪೋಷಕಾಂಶಗಳು ಕಣ್ಣಿನ ಆರೋಗ್ಯಕ್ಕೆ ಬಹಳ ಅಗತ್ಯ ಎಂಬುದನ್ನು ನೆನಪಿಡಿ.

೫. ಹಾಲಿನ ಉತ್ಪನ್ನಗಳು: ಹಾಲು ಹಾಗೂ ಹಾಲಿನ ಉತ್ಪನ್ನಗಳಲ್ಲಿ ವಿಟಮಿನ್‌ ಎ ಹೇರಳವಾಗಿರುವುದರಿಂದ ಇದು ಕಣ್ಣಿಗೆ ಒಳ್ಳೆಯದು. ವಿಟಮಿನ್‌ ಎ ಕಣ್ಣಿನ ಕಾರ್ನಿಯಾವನ್ನು ರಕ್ಷಣೆ ಮಾಡುವ ಸಾಮರ್ಥ್ಯವನ್ನು ಹೊಂದಿದ್ದು ಇದರಲ್ಲಿರುವ ಝಿಂಕ್‌ ರಾತ್ರಿಯ ಕಣ್ಣಿನ ಸಮಸ್ಯೆಗೆ ಪರಿಹಾರ ಒದಗಿಸುತ್ತದೆ.

೬. ಓಯ್‌ಸ್ಟರ್‌: ಓಯ್‌ಸ್ಟರ್‌ಗಳಲ್ಲಿ ವಿಟಮಿನ್‌ ಎ ಹೇರಳವಾಗಿರುವುದರಿಂದ ಇದು ಕಣ್ಣಿಗೆ ಒಳ್ಳೆಯದು.

ಇದನ್ನೂ ಓದಿ | Eye Care | ದೃಷ್ಟಿ ವರ್ಧನೆಗೆ ಪೂರಕವಾದ ಹಣ್ಣುಗಳು ಯಾವವು ಗೊತ್ತೇ?

೭. ಬ್ರೊಕೋಲಿ: ಬ್ರೊಕೋಲಿ ಎಂಬ ಹಸಿರು ತರಕಾರಿಯಿಂದ ಸಾಕಷ್ಟು ಪ್ರಯೋಜನಗಳಿವೆ. ಇದರಲ್ಲಿ ವಿಟಮಿನ್‌ ಎ, ಇ, ಸಿ ಹಾಗೂ ಲ್ಯುಟೀನ್‌ ಇದ್ದು ಇದು ಕಣ್ಣಿಗೆ ಬಹಳ ಉತ್ತಮ ಆಹಾರ.

orange fruit benefits

೮. ಸಿಟ್ರಸ್‌ ಹಣ್ಣುಗಳು: ವಿಟಮಿನ್‌ ಸಿ ಹೇರಳವಾಗಿರುವ ನಿಂಬೆಹಣ್ಣು, ಮುಸಂಬಿ, ಕಿತ್ತಳೆ, ಕಿವಿಗಳು ಕಣ್ಣಿಗೆ ಹಾನಿಯಾಗದಂತೆ ರಕ್ಷಿಸುತ್ತವೆ. ಕಣ್ಣಿನ ರಕ್ತನಾಳಗಳನ್ನು ಆರೋಗ್ಯವಾಗಿಡುವಲ್ಲಿ ಇವುಗಳ ಪಾತ್ರ ದೊಡ್ಡದು.

೯. ಸಿಹಿಗೆಣಸು: ಸಿಹಿಗೆಣಸು ಕಣ್ಣನ್ನು ಚುರುಕಾಗಿಸುವ ಸಾಮರ್ಥ್ಯ ಪಡೆದಿದೆ. ಇದರಲ್ಲಿರುವ ಆಂಟಿ ಆಕ್ಸಿಡೆಂಟ್‌ಗಳ ಕಣ್ಣಿನಲ್ಲಿರುವ ವಿಷಕಾರಿ ಪದಾರ್ಥಗಳನ್ನು ಹೊರಹಾಕುವಂತೆ ಮಾಡುತ್ತದೆ.

೧೦. ಸೂರ್ಯಕಾಂತಿ ಬೀಜ: ಸೂರ್ಯಕಾಂತಿ ಬೀಜ ಕೇವಲ ಕಣ್ಣಷ್ಟೇ ಅಲದೆ ನಮ್ಮ ದೇಹದ ಆರೋಗ್ಯಕ್ಕೆ ಅತ್ಯಂತ ಒಳ್ಳೆಯ ಬೀಜಗಳಲ್ಲಿ ಒಂದು. ಇದರಲ್ಲಿ ವಿಟಮಿನ್‌ ಇ ಹೇರಳವಾಗಿದ್ದು, ಪ್ರೊಟೀನ್‌ ಹಾಗೂ ಆರೋಗ್ಯಕರ ಕೊಬ್ಬು ಇದೆ. ಕಣ್ಣಿನಲ್ಲಿ ಊತವನ್ನು ಕಡಿಮೆ ಮಾಡುವ ಗುಣವನ್ನು ಇದು ಹೊಂದಿದ್ದು, ವಿಷಕಾರಿ ಕಣಗಳನ್ನು ಹೊಡೆದೋಡಿಸುತ್ತದೆ. ಕೇವಲ ಸೂರ್ಯಕಾಂತಿ ಬೀಜವಲ್ಲದೆ, ಎಲ್ಲ ಬೀಜಗಳೂ ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದೇ.

ಇದನ್ನೂ ಓದಿ | Eye care | ನಮ್ಮ ನಿತ್ಯದ ಅಭ್ಯಾಸಗಳೇ ಕಣ್ಣಿನ ತೊಂದರೆಗೆ ಕಾರಣವಾಗುತ್ತಿದೆಯೇ?!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕೊಡಗು

kodagu News : ಒಮ್ಮಿಂದೊಮ್ಮೆಗೇ ಜೋರಾಯಿತು ನೋವು; ಆಂಬ್ಯುಲೆನ್ಸ್‌ನಲ್ಲೇ ಹೆರಿಗೆ ಮಾಡಿಸಿದ ಸ್ಟಾಫ್‌ ನರ್ಸ್‌

kodagu News : ಕಾಫಿ ತೋಟದಲ್ಲಿ ಕೆಲಸಕ್ಕಿದ್ದ ಅಸ್ಸಾಂ ಮೂಲದ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಕುಟುಂಬಸ್ಥರು ಮಹಿಳೆಯನ್ನು ಜಿಲ್ಲಾಸ್ಪತ್ರೆಗೆ ಆಂಬ್ಯುಲೆನ್ಸ್‌ನಲ್ಲಿ ಕರೆದೊಯ್ಯುವಾಗ ಮತ್ತಷ್ಟು ನೋವು ಕಾಣಿಸಿಕೊಂಡಿತ್ತು. ಮಾರ್ಗ ಮಧ್ಯೆ ಆಂಬ್ಯುಲೆನ್ಸ್‌ನಲ್ಲೇ ಮಗು ಜನಿಸಿದೆ.

VISTARANEWS.COM


on

By

kodagu News Woman gives birth to baby in ambulance
Koo

ಕೊಡಗು: ನೋವಿನಲ್ಲಿ ನರಳುವಾಗ ಉಪಚರಿಸುವ ಎರಡನೇ ದೇವರು ಅಂದರೆ ಶುಶ್ರೂಷಕಿಯರು (Nursing staff). ಆಸ್ಪತ್ರೆಯಲ್ಲಿ ಡಾಕ್ಟರ್‌ಗಳಿಗಿಂತಲೂ ಹೆಚ್ಚು ಆಪ್ತರಾಗುತ್ತಾರೆ. ಆಂಬ್ಯುಲೆನ್ಸ್‌ನಲ್ಲೇ (108 Ambulance) ಹೆರಿಗೆ ನೋವು ಅನುಭವಿಸಿದ ಹೆಣ್ಮಗಳಿಗೆ ಅಲ್ಲೇ ಹೆರಿಗೆ ಮಾಡಿಸುವ ಮೂಲಕ ಕಷ್ಟ ಕಾಲದಲ್ಲಿ ನೆರವಾಗಿ ತಾಯಿ-ಮಗುವನ್ನು ಬದುಕಿಸಿದ್ದಾರೆ. ಕೊಡಗಿನ (kodagu News) ಸೋಮವಾರಪೇಟೆಯಿಂದ ಮಡಿಕೇರಿಯ ಜಿಲ್ಲಾಸ್ಪತ್ರೆಗೆ ಹೆರಿಗೆಗೆಂದು ಆಂಬ್ಯುಲೆನ್ಸ್‌ನಲ್ಲಿ ಕರೆದೊಯ್ಯುವ ಸಂದರ್ಭ ತಾಯಿ ಮಾರ್ಗ ಮಧ್ಯೆ ಮಗುವಿಗೆ ಜನ್ಮ ನೀಡಿದ್ದಾರೆ. ಸೋಮವಾರಪೇಟೆ ಬಳಿಯ ಬಳಗುಂದ ಗ್ರಾಮದ ಕಾಫಿ ತೋಟವೊಂದರಲ್ಲಿ ಕಾರ್ಮಿಕರಾಗಿರುವ ಅಸ್ಸಾಂ ಮೂಲದ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು.

ಹೀಗಾಗಿ ಕುಟುಂಬಸ್ಥರು ಅವರನ್ನು ಸೋಮವಾರಪೇಟೆ ಆಸ್ಪತ್ರೆಗೆ ದಾಖಲು ಮಾಡಿದ್ದರು. ಆದರೆ ಹೆಚ್ಚಿನ ಚಿಕಿತ್ಸೆಗಾಗಿ ಸೋಮವಾರಪೇಟೆ ಸರಕಾರಿ ಆಸ್ಪತ್ರೆಯ ಸ್ಟಾಫ್ ನರ್ಸ್ ಹೇಮಂತ್‌ಕುಮಾರ್ ಮತ್ತು ಆಂಬ್ಯುಲೆನ್ಸ್ ಚಾಲಕ ಪ್ರಸನ್ನ ಅವರು, ಮಹಿಳೆಯನ್ನು ಹೆರಿಗೆಗೆಂದು ಮಡಿಕೇರಿಯ ಜಿಲ್ಲಾಸ್ಪತ್ರೆಗೆ ಕರೆದೊಯ್ಯುತ್ತಿದ್ದರು.

ಇದನ್ನೂ ಓದಿ: Silicon City Hospital: ಲಕ್ಷಕ್ಕೆ ಇಬ್ಬರಿಗೆ ಬರುವ ಮೆದುಳಿನ ರಕ್ತನಾಳ ಒಡೆಯುವ ಕಾಯಿಲೆ; ಯಶಸ್ವಿ ಶಸ್ತ್ರಚಿಕಿತ್ಸೆಯಿಂದ ಬಾಲಕಿ ಪಾರು

ಆದರೆ ಆಸ್ಪತ್ರೆಗೆ ಕರೆತರುವ ದಾರಿಯಲ್ಲೇ ಗರಗಂದೂರು ಗ್ರಾಮದ ಬಳಿ ಹೆರಿಗೆ ನೋವು ಒಮ್ಮಿಂದೊಮ್ಮೆಗೇ ಜೋರಾಯಿತು. ಮಹಿಳೆ ನೋವಿನಿಂದ ನರಳಿದರು. ಬೇರೆ ಯಾರೇ ಆಗಿದ್ದರೂ ಆಸ್ಪತ್ರೆ ಇನ್ನೇನು ಹತ್ತಿರದಲ್ಲಿದೆ. ರಿಸ್ಕ್‌ ಬೇಡ ಎನ್ನುತ್ತಿದ್ದರೇನೋ. ಆದರೆ, ಸ್ಟಾಫ್ ನರ್ಸ್ ಹೇಮಂತ್‌ಕುಮಾರ್ ಅವರು ಸುಮ್ಮನೆ ಕೂರಲಿಲ್ಲ.

ಕೂಡಲೇ ಹೆರಿಗೆ ಬೇಕಾಗುವ ರೀತಿಯಲ್ಲಿ ಅಲ್ಲೇ ಒತ್ತಡಗಳನ್ನು ಸೃಷ್ಟಿ ಮಾಡಿದರು. ಜತೆಗಿದ್ದವರ ಸಹಕಾರದಿಂದ ಆಗಲೇ ಹೊರಗೆ ಬರಲು ಕಾಯುತ್ತಿದ್ದ ಮಗುವನ್ನು ಅತ್ಯಂತ ಜತನದಿಂದ ಹೊರತೆಗೆದು ಹೆರಿಗೆ ಮಾಡಿಸಿಯೇ ಬಿಟ್ಟರು. ಆಂಬ್ಯುಲೆನ್ಸ್‌ ವಾಹನವು ಆಸ್ಪತ್ರೆ‌ ತಲುಪುವದಕ್ಕಿಂತ ಮುಂಚೆಯೇ ಅಂಬ್ಯುಲೆನ್ಸ್ ನಲ್ಲಿಯೇ ಹೆರಿಗೆ ಮಾಡಿಸಿದ್ದಾರೆ. ಸದ್ಯ ತಾಯಿ ಮತ್ತು ಮಗು ಆರೋಗ್ಯವಾಗಿದ್ದು, ಮಡಿಕೇರಿಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಆಹಾರ/ಅಡುಗೆ

Milk Products: ಹಾಲು, ಹಾಲಿನ ಉತ್ಪನ್ನ ಸೇವಿಸಿದರೆ ಲಾಭವೋ ನಷ್ಟವೋ?

ನಿತ್ಯವೂ ಹಾಲು ಕುಡಿಯುವುದು, ಹಾಲು ಹಾಕಿದ ಚಹಾ ಕಾಫಿ ಸೇವನೆ, ಮೊಸರು, ಮಜ್ಜಿಗೆ, ತುಪ್ಪಗಳ ಸೇವನೆ, ಹಾಲಿನ ಉತ್ಪನ್ನಗಳಾದ (Milk products) ಪನೀರ್‌, ಖೋವಾ ಮತ್ತಿತರ ವಸ್ತುಗಳನ್ನು ಧಾರಳವಾಗಿ ಬಳಸುತ್ತೇವೆ. ಆದರೆ, ಇತ್ತೀಚೆಗಿನ ದಿನಗಳಲ್ಲಿ ವೀಗನ್‌ ಆಗಿ ಬದಲಾದ ಮಂದಿ ಸೇರಿದಂತೆ ಅನೇಕರು ಈ ಡೈರಿ ಉತ್ಪನ್ನಗಳನ್ನು (Dairy products) ಬಿಡುವ ಟ್ರೆಂಡ್‌ ಹೆಚ್ಚಾಗುತ್ತಿದೆ. ಹಾಲು ಸೇವನೆಯ ಲಾಭ ನಷ್ಟಗಳೇನು?

VISTARANEWS.COM


on

Milk Products
Koo

ನಿತ್ಯಾಹಾರದಲ್ಲಿ ಹಾಲು ಮತ್ತು ಹಾಲಿನ ಉತ್ಪನ್ನಗಳ (Milk products) ಸೇವನೆ ನಮ್ಮ ಭಾರತೀಯ ಆಹಾರ ಪದ್ಧತಿಯಲ್ಲಂತೂ ಬಹಳ ಸಾಮಾನ್ಯ. ನಿತ್ಯವೂ ಹಾಲು ಕುಡಿಯುವುದು, ಹಾಲು ಹಾಕಿದ ಚಹಾ ಕಾಫಿ ಸೇವನೆ, ಮೊಸರು, ಮಜ್ಜಿಗೆ, ತುಪ್ಪಗಳ ಸೇವನೆ, ಹಾಲಿನ ಉತ್ಪನ್ನಗಳಾದ ಪನೀರ್‌, ಖೋವಾ ಮತ್ತಿತರ ವಸ್ತುಗಳನ್ನು ಧಾರಳವಾಗಿ ಬಳಸುತ್ತೇವೆ. ಆದರೆ, ಇತ್ತೀಚೆಗಿನ ದಿನಗಳಲ್ಲಿ ವೀಗನ್‌ ಆಗಿ ಬದಲಾದ ಮಂದಿ ಸೇರಿದಂತೆ ಅನೇಕರು ಈ ಡೈರಿ ಉತ್ಪನ್ನಗಳನ್ನು ಬಿಡುವ ಟ್ರೆಂಡ್‌ ಹೆಚ್ಚಾಗುತ್ತಿದೆ. ಇನ್ನೂ ಕೆಲವರಿಗೆ, ಹಾಲಿನಲ್ಲಿ ಇರುವ ಲ್ಯಾಕ್ಟೋಸ್‌ ಕಾರಣದಿಂದಲೂ ಕೆಲವರು ಹಾಲಿನ ಉತ್ಪನ್ನಗಳನ್ನು ಬಿಡುವುದುಂಟು. ಆದರೆ ಇದರಿಂದ ಲಾಭಗಳೂ ಇವೆ, ನಷ್ಟವೂ ಇವೆ. ಬನ್ನಿ, ಲ್ಯಾಕ್ಟೋಸ್‌ ರಹಿತ ಆಹಾರ ಸೇವನೆಯಿಂದ ಆಗುವ ಲಾಭ ನಷ್ಟಗಳನ್ನು ಗಮನಿಸೋಣ.

Health Tips Kannada Stay away from these foods to get rid of acne

ಮೊಡವೆ ನಿವಾರಣೆ

ಹಾಲಿನ ಉತ್ಪನ್ನಗಳನ್ನು ಬಿಡುವುದರಿಂದ ಮೊಡವೆಗಳ ಸಮಸ್ಯೆ ಕಡಿಮೆಯಾಗಬಹುದು. ಕೆಲವು ಮಂದಿಗೆ ಹಾಲಿನ ಉತ್ಪನ್ನ ಸೇವನೆಯಿಂದ ಚರ್ಮ ಎಣ್ಣೆಯುಕ್ತವಾಗುವುದರಿಂದ ಮೊಡವೆಗಳುಂಟಾಗುತ್ತವೆ. ಹೀಗಾಗಿ ಕೆಲವರಿಗೆ ಹಾಲು ಹಾಗೂ ಹಾಲಿನ ಉತ್ಪನ್ನ ಬಿಟ್ಟ ಕೂಡಲೇ, ಚರ್ಮದ ಆರೋಗ್ಯ ಗಣನೀಯವಾಗಿ ಸುಧಾರಿಸುತ್ತದೆ.

Weight Loss

ತೂಕ ಇಳಿಕೆ

ತೂಕ ಇಳಿಸಬೇಕು ಎಂದು ಬಯಸುವ ಮಂದಿಯೂ ಹಾಲಿನ ಉತ್ಪನ್ನಗಳಿಗೆ ಗುಡ್‌ಬೈ ಹೇಳುತ್ತಾರೆ. ಲ್ಯಾಕ್ಟೋಸ್‌ನಲ್ಲಿ ನೈಸರ್ಗಿಕ ಸಕ್ಕರೆ ಇರುವುದರಿಂದ ಇದನ್ನು ಬಿಟ್ಟ ಕೂಡಲೇ, ಸಹಜವಾಗಿಯೇ ತೂಕದಲ್ಲಿ ಇಳಿಕೆಯಾಗುತ್ತದೆ.

Pay attention to the causes of allergy flare-ups There can be many reasons like pollen dust food etc Monsoon Allergies

ಅಲರ್ಜಿ ನಿವಾರಣೆ

ಕೆಲವು ಮಂದಿಗೆ ಲ್ಯಾಕ್ಟೋಸ್‌ನಿಂದ ಅಲರ್ಜಿಗಳುಂಟಾಗುವ ಕಾರಣದಿಂದ ಇದನ್ನು ಬಿಟ್ಟ ಕೂಡಲೇ ಅಲರ್ಜಿ ಸಮಸ್ಯೆ ಪರಿಹಾರವಾಗುತ್ತದೆ.

Dairy products Protein Foods

ಡೇರಿ ಉತ್ಪನ್ನದ ಕತೆ ಏನು?

ಆದರೆ, ಡೇರಿ ಉತ್ಪನ್ನಗಳನ್ನು ಬಿಡುವುದು ಬಹಳ ಕಷ್ಟ. ಕೇವಲ ಹಾಲು ಬಿಡುವುದರಿಂದ ಡೈರಿ ಉತ್ಪನ್ನ ಬಿಟ್ಟಂತಾಗುವುದಿಲ್ಲ. ಬಹಳಷ್ಟು ಆಹಾರಗಳಲ್ಲಿ ಇಂದು ಡೇರಿ ಉತ್ಪನ್ನಗಳನ್ನು ಬಳಸುವುದರಿಂದ ಸಾಕಷ್ಟು ಆಹಾರ ಪದಾರ್ಥಗಳನ್ನು ನಾವು ಬಿಡಬೇಕಾಗುತ್ತದೆ. ಇದು ಬಹಳ ಕಷ್ಟ.

ಪೋಷಕಾಂಶ ಕೊರತೆ

ಹಾಲು ಹಾಗೂ ಹಾಲಿನ ಉತ್ಪನ್ನಗಳಲ್ಲಿ ನಮ್ಮ ದೇಹಕ್ಕೆ ನಿತ್ಯವೂ ಬೇಕಾದ ಸಾಕಷ್ಟು ಪೋಷಕಾಂಶಗಳು ಸಿಗುವುದರಿಂದ ಇದನ್ನು ಬಿಟ್ಟರೆ, ಇದಕ್ಕೆ ಪರ್ಯಾಯವಾಗಿ ಪೋಷಕಾಂಶಗಳನ್ನು ಹುಡುಕಬೇಕಾಗುತ್ತದೆ. ಇಲ್ಲವಾದರೆ ಈ ಪೋಷಕಾಂಶಗಳ ಕೊರತೆಯಾಗಬಹುದು.

ಇದನ್ನೂ ಓದಿ: Moringa Leaves Health Benefits: ನುಗ್ಗೆ ಸೊಪ್ಪು ಏಕೆ ತಿನ್ನಬೇಕು? ಏನಿದೆ ಇದರಲ್ಲಿ ವಿಶೇಷ ಗುಣ?

ಪೋಷಕಾಂಶ ಪೂರೈಕೆ

ಹಾಲಿನ ಉತ್ಪನ್ನಗಳಿಂದ ನಮ್ಮ ದೇಹಕ್ಕೆ ನಿತ್ಯವೂ ಸಿಗುವ ಪ್ರೊಟೀನ್‌, ಕ್ಯಾಲ್ಸಿಯಂ ಸೇರಿದಂತೆ ಪ್ರಮುಖ ಪೋಷಕಾಂಶಗಳನ್ನು ಬೇರೆ ಆಹಾರಗಳಿಂದ ಭರಿಸುವುದು ಬಹಳ ಕಷ್ಟ. ಇದಕ್ಕಾಗಿ ಸಪ್ಲಿಮೆಂಟ್‌ಗಳ ಸೇವನೆಯನ್ನೂ ಮಾಡಬೇಕಾಗಬಹುದು. ಸಪ್ಲಿಇಮೆಂಟ್‌ ಸೇವನೆ ಮಾಡದೇ ಇದ್ದರೆ, ಹಾಳಿಗೆ ಪರ್ಯಾಯ ಮೂಲಗಳನ್ನು ಹುಡುಕಿ ನಿತ್ಯವೂ ಆ ಪೋಷಕಾಂಶಗಳು ಸರಿಯಾದ ಪ್ರಮಾಣದಲ್ಲಿ ಸೇರುವಂತೆ ಮಾಡಬೇಕು. ಈ ಕಾರಣಗಳಿಂದಾಗಿ, ಹಾಲು ಹಾಗೂ ಹಾಲಿನ ಉತ್ಪನ್ನಗಳನ್ನು ಬಿಡುವುದರಿಂದ ಕೆಲವು ಲಾಭಗಳಿದ್ದರೂ, ನಷ್ಟದ ಪ್ರಮಾಣ ಅಧಿಕವಾಗಿರುವುದರಿಂದ ಅದನ್ನು ಬಿಡುವುದು ಆರೋಗ್ಯಕರ ಲಕ್ಷಣವಲ್ಲ ಎನ್ನಲಾಗುತ್ತದೆ. ಇವು ನಮ್ಮ ನಿತ್ಯ ಆಹಾರದ ಪ್ರಮುಖ ಭಾಗವಾಗಿರುವುದರಿಂದ ಇದನ್ನು ಬಿಡುವುದು ಯೋಗ್ಯ ಆಯ್ಕೆಯಲ್ಲ ಎಂದು ತಜ್ಞರು ಹೇಳುತ್ತಾರೆ.

Continue Reading

ಬೆಂಗಳೂರು

Silicon City Hospital: ಲಕ್ಷಕ್ಕೆ ಇಬ್ಬರಿಗೆ ಬರುವ ಮೆದುಳಿನ ರಕ್ತನಾಳ ಒಡೆಯುವ ಕಾಯಿಲೆ; ಯಶಸ್ವಿ ಶಸ್ತ್ರಚಿಕಿತ್ಸೆಯಿಂದ ಬಾಲಕಿ ಪಾರು

Silicon City Hospital: ಲಕ್ಷದಲ್ಲಿ ಇಬ್ಬರಲ್ಲಿ ಕಾಣಿಸಿಕೊಳ್ಳುವ ಕಾಯಿಲೆಯಿಂದ ಬಳಲುತ್ತಿದ್ದ ಬಾಲಕಿಗೆ ಸಿಲಿಕಾನ್‌ ಸಿಟಿ ಆಸ್ಪತ್ರೆ ವೈದ್ಯರು ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿ, ಸಾವಿನ ದವಡೆಯಿಂದ ಪಾರು ಮಾಡಿದ್ದಾರೆ. ಬಾಲಕಿ ಉಳಿಸಲು ಆಗಲ್ಲ ಎಂದು ಕೈಚೆಲ್ಲಿದ್ದ ದೊಡ್ಡ ಆಸ್ಪತ್ರೆಗಳಿಗೂ ಅಚ್ಚರಿ ಮೂಡಿಸುವುದರೊಂದಿಗೆ ಮೆಚ್ಚುಗೆಯನ್ನು ಪಡೆದಿದ್ದಾರೆ.

VISTARANEWS.COM


on

By

Silicon City Hospital doctors successful surgery on girl suffering from Arterio Venus malpermation
Koo

ಬೆಂಗಳೂರು: ಮೆದುಳಿನ ರಕ್ತನಾಳ ಒಡೆದು ರಕ್ತ ಸೋರುವ ಕಾಯಿಲೆಯಿಂದ ಬಳಲುತ್ತಿದ್ದ ಬಾಲಕಿಯ ಪ್ರಾಣವನ್ನು ಸಿಲಿಕಾನ್‌ ಸಿಟಿ ಆಸ್ಪತ್ರೆ ವೈದ್ಯರು (Silicon City Hospital) ಉಳಿಸಿದ್ದಾರೆ. ಒಂದು ಲಕ್ಷದಲ್ಲಿ ಇಬ್ಬರಿಗೆ ಮಾತ್ರ ಬರುವ ಈ ಅಪರೂಪದ ಕಾಯಿಲೆಯು ಬಾಲಕಿಗೆ ಕೊನೆ ಹಂತದಲ್ಲಿತ್ತು. ಇದನ್ನೇ ಸವಾಲಾಗಿ ಸ್ವೀಕರಿಸಿದ ವೈದ್ಯರು ಯಶಸ್ವಿ ಶಸ್ತ್ರಚಿಕಿತ್ಸೆ ಮೂಲಕ ಬಾಲಕಿ ಜೀವ ಉಳಿಸಿದ್ದಾರೆ.

ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ನೆರನಹಳ್ಳಿ ಗ್ರಾಮದ ನೆರನಹಳ್ಳಿಯ ಬಾಬು ಮತ್ತು ಲಾವಣ್ಯ ದಂಪತಿ ಮಗಳು ಸ್ನೇಹಾ ಅಪಾಯದಿಂದ ಪಾರಾದವಳು . ಕಳೆದ ಮೇ 3ರಂದು ಚೆನ್ನಾಗಿದ್ದ ಸ್ನೇಹಾ ಇದ್ದಕ್ಕಿದ್ದಂತೆ ವಾಂತಿ ಮಾಡಿಕೊಂಡು ಒದ್ದಾಡಿದ್ದಳು. ಮಗಳ ಪರಿಸ್ಥಿತಿ ಕಂಡು ಭಯಗೊಂಡ ಪೋಷಕರು ಮುಳಬಾಗಿಲಿನ ಖಾಸಗಿ‌ ಆಸ್ಪತ್ರೆಗೆ ತೋರಿಸಿದ್ದರು. ಆದರೆ ಅಲ್ಲಿನ ವೈದ್ಯರು ನಿಮ್ಮ ಮಗಳಿಗೆ ನರರೋಗಕ್ಕೆ ಸಂಬಂಧಿಸಿದ ಕಾಯಿಲೆ ಇದೆ ಎಂದಿದ್ದರು.

ತಡ ಮಾಡದೆ ಅಲ್ಲಿಂದ ಬೆಂಗಳೂರಿಗೆ ಮಗಳು ಸ್ನೇಹಾಳನ್ನು ಕರೆತಂದು ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪರೀಕ್ಷೆ ವೇಳೆ ತಲೆ ಮೆದುಳಿನ ರಕ್ತನಾಳ ಒಡೆದು ರಕ್ತ ಸೋರುವ ಈ ಕಾಯಿಲೆ ಇದೆ ಎಂದು ಗೊತ್ತಾಗಿತ್ತು. ಸ್ನೇಹಾಳಿಗೆ ಬಂದ ಈ ಕಾಯಿಲೆ ಅದಾಗಲೇ ಯಾರಿಗೂ ತಿಳಿಯದಂತೆ ಕೊನೆ ಹಂತ ತಲುಪಿತ್ತು. ಹೀಗಾಗಿ ನಿಮ್ಹಾನ್ಸ್‌ ವೈದ್ಯರು ನಿಮ್ಮ ಮಗಳನ್ನು ಬದುಕಿಸುವುದು ಕಷ್ಟ ವಾಪಸ್‌ ಕರೆದುಕೊಂಡು ಹೋಗಿ ಎಂದು ಕೈ ಚೆಲ್ಲಿದ್ದರು.

ಇದರಿಂದ ಮತ್ತಷ್ಟು ಗಾಬರಿಗೊಂಡ ಬಾಬು, ಲಾವಣ್ಯ ದಂಪತಿಗೆ ಆ್ಯಂಬುಲೆನ್ಸ್ ಚಾಲಕ ಸಮಾಧಾನಪಡಿಸಿದ್ದಾರೆ. ಬಳಿಕ ಹೊಸಕೋಟೆಯಲ್ಲಿರುವ ಸಿಲಿಕಾನ್ ಸಿಟಿ ಆಸ್ಪತ್ರೆಗೆ ಹೋಗುವಂತೆ ಹೇಳಿದ್ದಾರೆ. ನುರಿತ ವೈದ್ಯರು ಇರುವ ನಿಮ್ಹಾನ್ಸ್‌ ಆಸ್ಪತ್ರೆಯಲ್ಲೆ ಮಗುವನ್ನು ಬದುಕಿಸುವುದು ಕಷ್ಟ ಎಂದಿರುವಾಗ ಬೇರೊಂದು ಆಸ್ಪತ್ರೆಗೆ ಹೋಗಿ ಏನು ಪ್ರಯೋಜನ ಎಂದು ಸ್ನೇಹಿತರು, ಸಂಬಂಧಿಕರು ಹೇಳಿದ್ದಾರೆ. ಆದರೆ ಮಗಳು ಉಳಿಯುತ್ತಾಳೆ ಎಂದಾಗ ಬಾಬು, ಲಾವಣ್ಯ ದಂಪತಿ ಕ್ಷಣವೂ ಯೋಚಿಸದೇ ಸಿಲಿಕಾನ್‌ ಸಿಟಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.

Silicon City Hospital doctors

ಇದನ್ನೂ ಓದಿ: Money Guide: ಎಫ್‌ಡಿಯಲ್ಲಿ ಹೂಡಿಕೆ ಮಾಡುವ ಮುನ್ನ ವಿವಿಧ ಬ್ಯಾಂಕ್‌ಗಳ ಬಡ್ಡಿದರ ಪರಿಶೀಲಿಸಿ

ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ನಗರದ ಸಿಲಿಕಾನ್ ಸಿಟಿ ಆಸ್ಪತ್ರೆ ವೈದ್ಯರಾದ ಡಾ.ಸುಪ್ರಿತ್ ಮತ್ತು ಡಾ.ಮನೋಹರ್‌ರವರ ನರರೋಗ ತಜ್ಞರ ತಂಡ, ಅಚ್ಚರಿ ಪಡುವ ರೀತಿ ಶಸ್ತ್ರಚಿಕಿತ್ಸೆ ಮಾಡಿ ಯಶಸ್ವಿಯಾಗಿ ಮಗುವಿನ ಜೀವ ಉಳಿಸಿದ್ದಾರೆ.

Silicon City Hospital doctors

ವೈದ್ಯ ಲೋಕದಲ್ಲಿ ಅಚ್ಚರಿ ಎನಿಸುವ ಅನೇಕ‌ ಕಾಯಿಲೆಗಳಿವೆ. ಒಂದು ಕಡೆ ವೈದ್ಯರಿಗೆ ಕೆಲವು‌‌ ಕಾಯಿಲೆ ಸವಾಲಾದರೆ, ಕೆಲವು ಕಾಯಿಲೆಯ ಸಕ್ಸಸ್ ರೇಟ್ ವೈದ್ಯರನ್ನು ಮತ್ತಷ್ಟು ಒಳ್ಳೆಯ ಕೆಲಸ ಮಾಡಲು ಪ್ರೇರೇಪಿಸುತ್ತದೆ. ಹೊಸಕೋಟೆ ಸಿಲಿಕಾನ್ ಸಿಟಿ ವೈದ್ಯರ ಸೇವೆಯೇ ಸಾಕ್ಷಿಯಾಗಿದೆ.

ಲಕ್ಷದಲ್ಲಿ ಇಬ್ಬರಿಗೆ ಕಾಣಿಸಿಕೊಳ್ಳುವ “ಅರ್ಟೆರಿಯೊ ವೀನಸ್ ಮಾಲ್ಪರ್ಮೇಷನ್- Alterio Venous Malformation (ಮೆದುಳು ನರಗಳಲ್ಲಿ ಗುಳ್ಳೆಗಳಾಗಿ‌ ಒಡೆದು ಹೋಗಿ ರಕ್ತ ಸೋರುವ ಕಾಯಿಲೆ) ಎಂಬ ಕಾಯಿಲೆಗೆ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಕಡು ಬಡವರಾದ ಅಂಗವಿಕಲರಾದ ಬಾಬು ಲಾವಣ್ಯ ದಂಪತಿ‌ ಇನ್ನೇನು ನಮ್ಮ ಒಬ್ಬಳೆ ಮಗಳು ನಮ್ಮಿಂದ ದೂರ ಆಗುತ್ತೆ ಎಂಬ ಆತಂಕವನ್ನು ಸಿಲಿಕಾನ್ ಸಿಟಿ ಆಸ್ಪತ್ರೆ ವೈದ್ಯರು ದೂರ ಮಾಡಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಆರೋಗ್ಯ

Vertigo Problem: ನಿಮಗೆ ಇದ್ದಕ್ಕಿದ್ದಂತೆ ತಲೆ ಸುತ್ತುತ್ತಿದೆಯೆ? ಈ ವಿಷಯ ತಿಳಿದುಕೊಂಡಿರಿ

ಭಾರತದಲ್ಲಿ ಸುಮಾರು 90 ಲಕ್ಷಕ್ಕಿಂತ ಹೆಚ್ಚು ಮಂದಿ ವರ್ಟಿಗೊದ ಸಮಸ್ಯೆಯಿಂದ (Vertigo Problem) ನರಳುತ್ತಿದ್ದಾರೆ. 60 ವರ್ಷದ ಮೇಲ್ಪಟ್ಟವರಲ್ಲಿ ಇದು ಕಂಡುಬರುವುದು ಹೆಚ್ಚಾದರೂ, ಕಡಿಮೆ ವಯೋಮಾನದವರನ್ನೂ ಬಾಧಿಸಬಹುದು. ಇದೇನು ಕಾಯಿಲೆಯಲ್ಲ, ವರ್ಟಿಗೊ ಎಂದು ಕರೆಯಲಾಗುವ ಇದು ಹೆಚ್ಚಾಗಿ ಒಳಗಿವಿಯ ತೊಂದರೆಯಿಂದ ಬರುವಂಥದ್ದು. ಆದರೆ ವರ್ಟಿಗೊ ಬರುವುದಕ್ಕೆ ಇದೊಂದೇ ಕಾರಣವಲ್ಲ, ಹಲವಾರಿವೆ. ಈ ಕುರಿತ ಮಾಹಿತಿ ಇಲ್ಲಿದೆ.

VISTARANEWS.COM


on

Vertigo Problem
Koo

ಇದ್ದಕ್ಕಿದ್ದಂತೆ ತಲೆ ಸುತ್ತು ಬಂದು, ಸುತ್ತಲಿನ ಲೋಕವೆಲ್ಲ ಬುಗರಿಯಂತೆ ತಿರುಗುವ ಹಾಗೆ ಭಾಸವಾಗಬಹುದು. ದೇಹದ ಸಮತೋಲನವೇ ತಪ್ಪಿದಂತಾಗಿ ವ್ಯಕ್ತಿ ಬೀಳಬಹುದು. ಜಗತ್ತಿನಲ್ಲಿ ಹತ್ತರಲ್ಲಿ ಒಬ್ಬರಿಗೆ ಬರಬಹುದಾದ ಇದೇನು ಕಾಯಿಲೆಯಲ್ಲ, ವರ್ಟಿಗೊ (Vertigo Problem) ಎಂದು ಕರೆಯಲಾಗುವ ಇದು ಹೆಚ್ಚಾಗಿ ಒಳಗಿವಿಯ ತೊಂದರೆಯಿಂದ ಬರುವಂಥದ್ದು. ಆದರೆ ವರ್ಟಿಗೊ ಬರುವುದಕ್ಕೆ ಇದೊಂದೇ ಕಾರಣವಲ್ಲ, ಹಲವಾರಿವೆ. ಸಿಕ್ಕಾಪಟ್ಟೆ ತಲೆಸುತ್ತುವ ಕಾರಣದಿಂದಲೇ ವ್ಯಕ್ತಿಯ ಜೀವನವನ್ನು ಕಷ್ಟಕ್ಕೆ ದೂಡುವ ಈ ಸಮಸ್ಯೆಯ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ. ಭಾರತದಲ್ಲಿ ಸುಮಾರು 90 ಲಕ್ಷಕ್ಕಿಂತ ಹೆಚ್ಚು ಮಂದಿ ವರ್ಟಿಗೊದ ಸಮಸ್ಯೆಯಿಂದ ನರಳುತ್ತಿದ್ದಾರೆ. 60 ವರ್ಷದ ಮೇಲ್ಪಟ್ಟವರಲ್ಲಿ ಇದು ಕಂಡುಬರುವುದು ಹೆಚ್ಚಾದರೂ, ಕಡಿಮೆ ವಯೋಮಾನದವರನ್ನೂ ಬಾಧಿಸಬಹುದು. ಪುರುಷರಿಗಿಂತ ಮಹಿಳೆಯರಿಗೆ ಇದು ಹೆಚ್ಚು ತೊಂದರೆ ಕೊಡುತ್ತದೆ ಎನ್ನುತ್ತವೆ ಅಧ್ಯಯನಗಳು. ಮನೆಗೆಲಸ, ಶಾಪಿಂಗ್‌, ಕಚೇರಿ ಕೆಲಸ, ವಾಹನ ಚಾಲನೆ ಮುಂತಾದ ನಿತ್ಯದ ಕ್ರಿಯೆಗಳಿಗೂ ಇದರಿಂದ ಅಡ್ಡಿಯಾಗಬಹುದು. ಸೂಕ್ತ ಚಿಕಿತ್ಸೆ ನಡೆಯದಿದ್ದರೆ, ಸಾಮಾಜಿಕ ಬದುಕು ಮತ್ತು ಆರ್ಥಿಕ ಅನುಕೂಲಗಳ ಮೇಲೂ ದುಷ್ಪರಿಣಾಮ ಬೀರಬಹುದು.

stressed sad young woman with vertigo

ಏನಾಗುತ್ತದೆ?

ವರ್ಟಿಗೊ ಸಮಸ್ಯೆ ಇದ್ದರೆ ಏನಾಗುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳೋಣ. ಕೂತಲ್ಲಿಂದ ಎದ್ದ ತಕ್ಷಣ ತಲೆ ಸುತ್ತುವುದು, ಸುತ್ತಲಿನ ಜಾಗವೆಲ್ಲ ತಿರುಗಿದ ಅನುಭವ, ತಲೆನೋವು, ಕೆಲವೊಮ್ಮೆ ಪ್ರಜ್ಞೆ ತಪ್ಪುವುದು, ದೇಹದ ಸಮತೋಲನ ತಪ್ಪಿ ಬೀಳಬಹುದು, ಬಿದ್ದಿದ್ದು ತೀವ್ರವಾದರೆ ಗಾಯವಾಗಬಹುದು ಅಥವಾ ಮೂಳೆ ಮುರಿಯಬಹುದು, ಕಿವಿಯಲ್ಲಿ ಜುಂಯ್‌ ಸದ್ದು, ಹೊಟ್ಟೆ ತೊಳೆಸಿದಂತಾಗುವುದು, ಅತಿಯಾಗಿ ಬೆವರುವುದು- ಇತ್ಯಾದಿ ಲಕ್ಷಣಗಳನ್ನು ವರ್ಟಿಗೊ ಬಾಧಿತರು ಅನುಭವಿಸಬಹುದು.

ಇದನ್ನೂ ಓದಿ: Moringa Leaves Health Benefits: ನುಗ್ಗೆ ಸೊಪ್ಪು ಏಕೆ ತಿನ್ನಬೇಕು? ಏನಿದೆ ಇದರಲ್ಲಿ ವಿಶೇಷ ಗುಣ?

ಚಿಕಿತ್ಸೆ ಇಲ್ಲವೇ?

ಖಂಡಿತವಾಗಿಯೂ ಇದೆ. ಒಳಗಿವಿ ಅಥವಾ ಕೇಂದ್ರ ನರಮಂಡಲದ ತೊಂದರೆಯಿಂದಾಗಿ ಉಂಟಾಗುವ ಸಮಸ್ಯೆಯಿದು. ಮುಖ್ಯವಾಗಿ ಯಾವ ಕಾರಣಕ್ಕೆ ಈ ಸಮಸ್ಯೆ ಕಾಣಿಸಿಕೊಂಡಿದೆ ಎಂಬುದನ್ನು ವೈದ್ಯರು ನಿರ್ಣಯಿಸಿದರೆ ಇದಕ್ಕೆ ಚಿಕಿತ್ಸೆ ನೀಡಬಹುದು. ಕೆಲವು ಔಷಧಗಳು, ಆಹಾರದಲ್ಲಿನ ಮತ್ತು ಜೀವನಶೈಲಿಯಲ್ಲಿನ ಬದಲಾವಣೆಯಿಂದ ರೋಗಿಯ ಬದುಕಿನ ತೊಂದರೆಯನ್ನು ತಪ್ಪಿಸಿ, ಸಮಸ್ಯೆಯನ್ನು ನಿಯಂತ್ರಿಸಲು ಸಾಧ್ಯವಿದೆ.

Vertigo BPPV Vestibular Disorders

ಪರಿಹಾರವೇನು?

ವೈದ್ಯರು ಹೇಳಿದ ಔಷಧಿಗಳನ್ನು ಮತ್ತು ಸೂಚನೆಗಳನ್ನು ಪಾಲಿಸುವುದು ಕಡ್ಡಾಯ. ಜೊತೆಗೆ, ದೇಹಕ್ಕೆ ನೀರು ಕಡಿಮೆಯಾಗದಂತೆ ಎಚ್ಚರ ವಹಿಸಿ. ಇದರಿಂದ ತಲೆಸುತ್ತು ತೀವ್ರಗೊಳ್ಳುತ್ತದೆ. ಆಹಾರದಲ್ಲಿ ಕೆಲವು ಬದಲಾವಣೆಗಳು ನೆರವಾಗುತ್ತವೆ. ಉದಾ, ಉಪ್ಪು, ಮಸಾಲೆ, ಕೆಫೇನ್‌, ಖಾರದ ತಿನಿಸುಗಳು ಮತ್ತು ಆಲ್ಕೊಹಾಲ್ ಸೇವನೆಯನ್ನು ಕಡಿಮೆ ಮಾಡುವುದು ಸಹಾಯಕ. ದೈನಂದಿನ ವ್ಯಾಯಾಮದ ಬಗ್ಗೆ ವೈದ್ಯರಲ್ಲಿ ಮಾತಾಡಿ. ಕುತ್ತಿಗೆಯ ಕೆಲವು ವ್ಯಾಯಾಮಗಳು ಈ ನಿಟ್ಟಿನಲ್ಲಿ ನೆರವಾಗಬಹುದು. ದೇಹದ ಸಮತೋಲನವನ್ನು ಹೆಚ್ಚಿಸುವ ವ್ಯಾಯಾಮಗಳು ಹೆಚ್ಚಿನ ನೆರವು ನೀಡುತ್ತವೆ. ಕೆಲವು ರೀತಿಯ ವರ್ಟಿಗೊಗೆ ಫಿಸಿಯೊ ಥೆರಪಿ ನೆರವಾಗಬಹುದು. ಈ ಬಗ್ಗೆ ವೈದ್ಯಕೀಯ ಸಲಹೆ ಬೇಕಾಗುತ್ತದೆ. ಮಾನಸಿಕ ಒತ್ತಡವನ್ನು ಕಡಿಮೆ ಮಾಡಲೇಬೇಕು. ಇದಕ್ಕಾಗಿ ಧ್ಯಾನ, ಪ್ರಾಣಾಯಾಮಗಳು ಉಪಯುಕ್ತ. ರಕ್ತದೊತ್ತಡ ಇದ್ದರೆ, ಅದನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳುವುದು ಅಗತ್ಯ. ಮಧುಮೇಹವೂ ಇದ್ದರೆ ಅದನ್ನೂ ನಿಯಂತ್ರಿಸಬೇಕಾಗುತ್ತದೆ. ಇಲ್ಲದಿದ್ದರೆ ವರ್ಟಿಗೊ ಸಮಸ್ಯೆಯೂ ಹೆಚ್ಚಬಹುದು. ನಿತ್ಯವೂ ಎಂಟು ತಾಸು ನಿದ್ದೆ ಮಾಡುವ ಗುರಿಯನ್ನು ಇರಿಸಿಕೊಳ್ಳಿ. ನಿದ್ದೆಗೆಟ್ಟರೆ ವರ್ಟಿಗೊ ನಿಯಂತ್ರಣ ಕಷ್ಟ. ಮಲಗುವಾಗ ಅತಿ ಎತ್ತರದ ತಲೆದಿಂಬು ಬೇಡ. ಇದು ಸಮಸ್ಯೆಯನ್ನು ಹೆಚ್ಚಿಸಬಹುದು. ಕುತ್ತಿಗೆಗೆ ಹಿತ ಎನಿಸುವಷ್ಟೇ ಎತ್ತರದ ದಿಂಬು ಸಾಕು. ಪ್ರಖರ ಬೆಳಕು, ಶಬ್ದ, ಧಿಡೀರ್‌ ಚಲನೆಗಳು ಇದ್ದಕ್ಕಿದ್ದಂತೆ ತಲೆ ಸುತ್ತು ತರಿಸುತ್ತವೆ. ಇವುಗಳಿಗೆ ಅವಕಾಶ ಕೊಡಬೇಡಿ. ಮೈಗ್ರೇನ್‌ ಸಮಸ್ಯೆಯೂ ವರ್ಟಿಗೊಗೆ ದಾರಿ ಮಾಡಬಹುದು. ಮೆಟ್ಟಿಲು ಹತ್ತಿಳಿಯುವಾಗ ರೇಲಿಂಗ್‌ ಹಿಡಿಯುವುದು ಸುರಕ್ಷಿತ. ಈ ಸಮಸ್ಯೆಯಿಂದ ಬಳಲುವವರು ಬಹಳಷ್ಟು ಜನರಿದ್ದಾರೆ, ನೀವೊಬ್ಬರೇ ಅಲ್ಲ. ಸೂಕ್ತ ಚಿಕಿತ್ಸೆಯಿಂದ ಸಾಮಾನ್ಯ ಬದುಕು ಸಾಗಿಸಲು ಖಂಡಿತ ಸಾಧ್ಯವಿದೆ.

Continue Reading
Advertisement
Viral Video
ವೈರಲ್ ನ್ಯೂಸ್4 mins ago

Viral Video: 25 ವರ್ಷಗಳ ಹಿಂದೆ ಬಿಬಿಸಿ ನ್ಯೂಸ್ ಥೀಮ್ ಟ್ಯೂನ್ ಹುಟ್ಟಿಕೊಂಡಿದ್ದು ಹೇಗೆ ಗೊತ್ತೇ?

Chaya Singh
ಕರ್ನಾಟಕ11 mins ago

Chaya Singh: ನಟಿ ಛಾಯಾ ಸಿಂಗ್ ಮನೆಯಲ್ಲಿ ಕಳ್ಳತನ; ಚಿನ್ನಾಭರಣ ಕದ್ದಿದ್ದ ಮನೆಕೆಲಸದಾಕೆ ಬಂಧನ

former MLC Arun Shahapur latest Statement
ಬೆಂಗಳೂರು12 mins ago

Bengaluru News: ಕಾಂಗ್ರೆಸ್ ಆಡಳಿತದಲ್ಲಿ ಶೈಕ್ಷಣಿಕ ದುರಾಡಳಿತ; ಅರುಣ್ ಶಹಾಪುರ ಆರೋಪ

HD Revanna Released first reaction after release will be acquitted of all charges
ರಾಜಕೀಯ26 mins ago

HD Revanna Released: ರಿಲೀಸ್‌ ಬಳಿಕ ರೇವಣ್ಣ ಫಸ್ಟ್‌ ರಿಯಾಕ್ಷನ್;‌ ನ್ಯಾಯಾಂಗದ ಮೇಲೆ ನಂಬಿಕೆ ಇದೆ; ಆರೋಪ ಮುಕ್ತನಾಗುವೆ

Income Tax office
ಪ್ರಮುಖ ಸುದ್ದಿ27 mins ago

Income Tax Office : ಆದಾಯ ತೆರಿಗೆ ಕಚೇರಿಯಲ್ಲಿ ಬೆಂಕಿ ಅವಘಡ; ಒಂದು ಸಾವು; ಇಲ್ಲಿದೆ ವಿಡಿಯೊ

Billboard Collapse
ಪ್ರಮುಖ ಸುದ್ದಿ48 mins ago

Billboard Collapse : 14 ಸಾವಿಗೆ ಕಾರಣವಾದ ಹೋರ್ಡಿಂಗ್ ಕಂಪನಿ ಮಾಲೀಕನ ಮೇಲಿದೆ ಅತ್ಯಾಚಾರ ಸೇರಿದಂತೆ 20ಕ್ಕೂ ಹೆಚ್ಚು ಕೇಸ್​ಗಳು

Stabbing Case
ಕರ್ನಾಟಕ50 mins ago

Stabbing Case: ಕುಡಿದ ಅಮಲಿನಲ್ಲಿ ಭುಜ ತಗುಲಿದ್ದಕ್ಕೆ ಕಿರಿಕ್; ವ್ಯಕ್ತಿಗೆ ಚೂರಿಯಿಂದ ಮನಸೋ ಇಚ್ಛೆ ಇರಿದ ಯುವಕರು

Ooty Tour
ಪ್ರವಾಸ53 mins ago

Ooty Tour: ಪ್ರತಿ ಸೀಸನ್‌ನಲ್ಲೂ ಭಿನ್ನ ಅನುಭವ! ನಿಮ್ಮ ಊಟಿ ಪ್ರವಾಸ ಯಾವಾಗ?

WhatsApp Update
ತಂತ್ರಜ್ಞಾನ1 hour ago

WhatsApp Update: ಅಪ್‌ಡೇಟ್ ಆಗಲಿದೆ ವಾಟ್ಸ್‌ಆಪ್ ಚಾನೆಲ್; ಹೊಸ ಆಪ್ಶನ್‌ ಏನೇನು?

Spoken Language
Latest1 hour ago

Spoken Language: ವಿಶ್ವದಲ್ಲಿ ಅತೀ ಹೆಚ್ಚು ಮಾತನಾಡುವ ಭಾಷೆಗಳಲ್ಲಿ ಹಿಂದಿ ಯಾವ ಸ್ಥಾನದಲ್ಲಿದೆ ಗೊತ್ತೆ?

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

HD Revanna Released first reaction after release will be acquitted of all charges
ರಾಜಕೀಯ26 mins ago

HD Revanna Released: ರಿಲೀಸ್‌ ಬಳಿಕ ರೇವಣ್ಣ ಫಸ್ಟ್‌ ರಿಯಾಕ್ಷನ್;‌ ನ್ಯಾಯಾಂಗದ ಮೇಲೆ ನಂಬಿಕೆ ಇದೆ; ಆರೋಪ ಮುಕ್ತನಾಗುವೆ

CM Siddaramaiah says Our government is stable for 5 years BJP will disintegrate
Lok Sabha Election 20243 hours ago

CM Siddaramaiah: ನಮ್ಮ ಸರ್ಕಾರ 5 ವರ್ಷ ಸುಭದ್ರ; ಚುನಾವಣೆ ಬಳಿಕ ಬಿಜೆಪಿ ಛಿದ್ರ ಎಂದ ಸಿಎಂ ಸಿದ್ದರಾಮಯ್ಯ!

I dont want to go to other states for Lok Sabha Election 2024 campaign for Congress says CM Siddaramaiah
Lok Sabha Election 20246 hours ago

CM Siddaramaiah: ಕಾಂಗ್ರೆಸ್‌ ಪರ ಬೇರೆ ರಾಜ್ಯಗಳಿಗೆ ಪ್ರಚಾರಕ್ಕೆ ಹೋಗಲು ನನಗೆ ಇಷ್ಟವಿಲ್ಲ: ಸಿಎಂ ಸಿದ್ದರಾಮಯ್ಯ!

HD Revanna Bail I am not happy that Revanna has been released says HD Kumaraswamy
ರಾಜಕೀಯ7 hours ago

HD Revanna Bail: ರೇವಣ್ಣ ಬಿಡುಗಡೆಯಾಗಿದ್ದಕ್ಕೆ ನಾನಂತೂ ಖುಷಿ ಪಡಲ್ಲ ಎಂದ ಎಚ್‌ಡಿಕೆ!

karnataka Rain Effected
ಬೆಂಗಳೂರು8 hours ago

Karnataka Rain: ಮಿಡ್‌ನೈಟ್‌ ಮಳೆ ಅವಾಂತರ; ಮರಗಳು, ವಿದ್ಯುತ್‌ ಕಂಬಗಳು ಧರೆಗೆ, ಕುಸಿದು ಬಿದ್ದ ಮನೆ

Dina Bhavishya
ಭವಿಷ್ಯ15 hours ago

Dina Bhavishya : ಉದ್ಯೋಗದ ಸ್ಥಳದಲ್ಲಿ ನಿಮ್ಮ ವಿರುದ್ಧ ಪಿತೂರಿ ಮಾಡ್ಬಹುದು ಎಚ್ಚರ!

HD Revanna Bail Revanna will not leave the country condition imposed by the court
ಕ್ರೈಂ1 day ago

HD Revanna Bail: ರೇವಣ್ಣ ದೇಶ ಬಿಡಂಗಿಲ್ಲ, ಕೆ.ಆರ್‌. ನಗರಕ್ಕೆ ಎಂಟ್ರಿ ಕೊಡಂಗಿಲ್ಲ! ಕೋರ್ಟ್‌ ವಿಧಿಸಿದ ಷರತ್ತು ಏನು?

HD Revanna Bail
ಕ್ರೈಂ1 day ago

HD Revanna Bail: ಎಚ್‌.ಡಿ ರೇವಣ್ಣಗೆ ಕೊನೆಗೂ ಜಾಮೀನು; ಎಸ್‌ಐಟಿಗೆ ಮುಖಭಂಗ!

Prajwal Revanna Case Revanna bail plea to be heard Judge reprimands SIT cops for their behaviour
ಕ್ರೈಂ1 day ago

Prajwal Revanna Case: ರೇವಣ್ಣ ಜಾಮೀನು ಅರ್ಜಿ ವಿಚಾರಣೆ; ಎಸ್‌ಐಟಿ ಪೊಲೀಸರ ವರ್ತನೆಗೆ ಜಡ್ಜ್‌ ಗರಂ!

Karnataka Weather Forecast
ಮಳೆ1 day ago

Karnataka Weather : ನಾಳೆ ಮುಕ್ಕಾಲು ಕರ್ನಾಟಕದಲ್ಲಿ ಬಿರುಗಾಳಿ ಜತೆಗೆ ವಿಪರೀತ ಮಳೆ

ಟ್ರೆಂಡಿಂಗ್‌