Makar Sankranti 2023 | ಕರುನಾಡಿನ ಸುಗ್ಗಿಯ ಹಬ್ಬ ಮಕರ ಸಂಕ್ರಾಂತಿ - Vistara News

ಧಾರ್ಮಿಕ

Makar Sankranti 2023 | ಕರುನಾಡಿನ ಸುಗ್ಗಿಯ ಹಬ್ಬ ಮಕರ ಸಂಕ್ರಾಂತಿ

ಸಂಕ್ರಾಂತಿ ಹಬ್ಬ ಬಂದಿದೆ (Makar Sankranti 2023). ನಮ್ಮ ರಾಜ್ಯದಲ್ಲಿ ಈ ಹಬ್ಬವನ್ನು ಸುಗ್ಗಿ ಹಬ್ಬವಾಗಿಯೂ ಆಚರಿಸಲಾಗುತ್ತದೆ. ಈ ಹಬ್ಬದ ಮಹತ್ವ, ವಿವಿಧ ರಾಜ್ಯಗಳಲ್ಲಿ ಆಚರಣೆ ಹೇಗೆ ಎಂಬ ಮಾಹಿತಿ ಇಲ್ಲಿದೆ.

VISTARANEWS.COM


on

Makar Sankranti 2023
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo
Vivekananda Jayanti 2023

ಡಾ. ಡಿ.ಸಿ. ರಾಮಚಂದ್ರ
ಹಿಂದೂಗಳ ಪವಿತ್ರ ಹಬ್ಬ ಮಕರ ಸಂಕ್ರಾಂತಿ (Makar Sankranti 2023). ಸೂರ್ಯನು ತನ್ನ ಪಥವನ್ನು ಬದಲಿಸುವ ಈ ದಿನವನ್ನು ದೇಶದಾದ್ಯಂತ ವಿವಿಧ ಹೆಸರುಗಳಿಂದ ಆಚರಿಸುತ್ತಾರೆ. ಈ ಹಬ್ಬವು ಸೂರ್ಯದೇವನ ಹಬ್ಬವೆಂದು ಪರಿಗಣಿಸಲಾಗಿದ್ದು, ಈ ಹಬ್ಬವನ್ನು ಪ್ರತಿವರ್ಷ ಜನವರಿ14 ಅಥವಾ 15 ರಂದು ಆಚರಣೆ ಮಾಡಲಾಗುತ್ತದೆ.

ಮಕರ ಸಂಕ್ರಾಂತಿ ಹಬ್ಬ ಒಂದು ಭೌಗೋಳಿಕ ಹಿನ್ನೆಲೆಯನ್ನು ಹೊಂದಿದೆ. ಸೂರ್ಯನು ತನ್ನ ಸ್ಥಾನವನ್ನು ಬದಲಾಯಿಸುವ ಮತ್ತು ಉತ್ತರ ಗೋಳಾರ್ಧದ ಕಡೆಗೆ ಚಲಿಸಲು ಪ್ರಾರಂಭಿಸುವ ದಿನವನ್ನು ಗುರುತಿಸುತ್ತದೆ. ಈ ದಿನಾಂಕದಿಂದ ಜನರು ಹೆಚ್ಚು ಹಗಲುಗಳು ಮತ್ತು ಕಡಿಮೆ ರಾತ್ರಿಗಳನ್ನು ಕಾಣಬಹುದು.

ದೇಶದ ವಿವಿಧ ಭಾಗಗಳಲ್ಲಿ ಹಬ್ಬವನ್ನು ವಿಭಿನ್ನರೀತಿಯಲ್ಲಿ ಆಚರಿಸಲಾಗುತ್ತದೆ. ಮಹಾರಾಷ್ಟ್ರದಲ್ಲಿ ಜನರು ಸಿಹಿ ತಿಂಡಿಗಳನ್ನು ತಯಾರಿಸುತ್ತಾರೆ ಮತ್ತು ಅದನ್ನು ತಮ್ಮ ಸ್ನೇಹಿತರಿಗೆ ಹಂಚುತ್ತಾರೆ, ಈ ಮೂಲಕ ತಮ್ಮ ಸ್ನೇಹಿತರಿಗೆ ಸಿಹಿ ತಿನ್ನಲು ಮತ್ತು ಸಿಹಿಯಾಗಿ ಮಾತನಾಡಲು ಹೇಳುತ್ತಾರೆ. ಅಂದರೆ ಅವರು ಮಕರ ಸಂಕ್ರಾಂತಿಯನ್ನು ಸೌಹಾರ್ದದ ಹಬ್ಬವೆಂದು ಪರಿಗಣಿಸುತ್ತಾರೆ.

ಗುಜರಾತ್‌ನಲ್ಲಿ ಮಕರ ಸಂಕ್ರಾಂತಿಯನ್ನು ಗಾಳಿಪಟಗಳನ್ನು ಹಾರಿಸುವ ಮೂಲಕ ಆಚರಿಸಲಾಗುತ್ತದೆ. ವಾಸ್ತವವಾಗಿ ಇದು ಗಾಳಿಪಟ ಹಾರಿಸುವ ಹಬ್ಬ. ವಿವಿಧ ಗಾಳಿಪಟಗಳ ನಡುವಿನ ಕಾದಾಟವನ್ನು ವೀಕ್ಷಿಸಲುಜನರು ಛಾವಣಿಯ ಮೇಲೆ ಸೇರುತ್ತಾರೆ. ಒಂದು ಗಾಳಿಪಟ ಇನ್ನೊಂದನ್ನು ಕತ್ತರಿಸಿದಾಗ, ಅಲ್ಲಿನ ಜನರಿಂದ ದೊಡ್ಡ ಸಂತೋಷ ಮತ್ತು ಚಪ್ಪಾಳೆ ಮೊಳಗುತ್ತದೆ. ಈ ದಿನವು ಆಕಾಶದಲ್ಲಿ ಎಲ್ಲಾ ಬಣ್ಣಗಳು ಗಾಳಿಪಟಗಳಿಂದ ತುಂಬಿರುತ್ತದೆ. ಮುಖ್ಯವಾಗಿ ಮಕ್ಕಳು ಕೂಡ ಗಾಳಿಪಟಗಳನ್ನು ಹಾರಿಸುವ ಮೂಲಕ ಮತ್ತು ತಿಳಿ ಹಾಗೂ ಬೆಲ್ಲದಿಂದ ಮಾಡಿದ ಭಕ್ಷ್ಯಗಳನ್ನು ತಿನ್ನುವ ಮೂಲಕ ಈ ಸಂದರ್ಭವನ್ನು ಆನಂದಿಸುತ್ತಾರೆ. ಈ ಹಬ್ಬಕ್ಕೆ ಧಾರ್ಮಿಕ ಮಹತ್ವವೂ ಇದೆ. ಜನರು ಹೊಸ ಬಟ್ಟೆ ಧರಿಸಿ, ಬಡವರಿಗೆ ದಾನ ಮಾಡಿ ಜೊತೆಗೆ ಸಿಹಿ ಹಂಚಿತಿನ್ನುತ್ತಾರೆ. ಈ ದಿನದಂದು ಯುವಕರು ಮತ್ತು ಹಿರಿಯರು ಸಮಾನವಾಗಿ ಕುಳಿತು ಸಂಭ್ರಮಿಸುವ ಸುಸಂದರ್ಭವಾಗಿದೆ.

ಇದು ಋತುವಿನ ಅತ್ಯಂತ ಮಂಗಳಕರ ಸಂದರ್ಭವೆಂದು ಪರಿಗಣಿಸಲಾಗಿದೆ. ಈ ದಿನದಂದು ನದಿಗಳಲ್ಲಿ ಪವಿತ್ರ ಸ್ನಾನ ಮತ್ತು ಸೂರ್ಯ ದೇವರಿಗೆ ಕೃತಜ್ಞತಾ ಪ್ರಾರ್ಥನೆಗಳೊಂದಿಗೆ ಆಚರಿಸಲಾಗುತ್ತದೆ. ಮಕರ ಸಂಕ್ರಾಂತಿಯಂದು ವಾರಣಾಸಿ ಅಥವಾ ಪ್ರಯಾಗ್‌ರಾಜ್‌ನಲ್ಲಿ ಪವಿತ್ರವಾದ ಗಂಗಾ ನದಿಯಲ್ಲಿ ಪವಿತ್ರ ಸ್ನಾನ ಮಾಡುವುದರಿಂದ ನಮ್ಮ ಎಲ್ಲಾ ಪಾಪಗಳನ್ನು ತೊಳೆದುಕೊಳ್ಳುತ್ತೇವೆ ಎಂಬ ನಂಬಿಕೆಯಿದೆ.

ಮಕರ ಸಂಕ್ರಾಂತಿಯನ್ನು ವಿವಿಧ ಪ್ರದೇಶಗಳಲ್ಲಿ ವಿಭಿನ್ನವಾಗಿ ಆಚರಿಸಲಾಗುತ್ತದೆ. ಭಕ್ತರು ಪವಿತ್ರ ನದಿಗಳಲ್ಲಿ ಸ್ನಾನ ಮಾಡುತ್ತಾರೆ ಮತ್ತು ಸೂರ್ಯದೇವರನ್ನು ಪ್ರಾರ್ಥಿಸುತ್ತಾರೆ. ದಕ್ಷಿಣ ಭಾರತದಲ್ಲಿ ಮಕರ ಸಂಕ್ರಾಂತಿಯನ್ನು ಪೊಂಗಲ್‌ ಎಂದು ಕರೆಯಲಾಗುತ್ತದೆ. ಪಂಜಾಬ್‌ನಲ್ಲಿ ಇದನ್ನು ಮಾಘಿ ಎಂದು ಕರೆಯಲಾಗುತ್ತದೆ. ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಇದನ್ನು ಸಂಕ್ರಾಂತಿ ಎಂದು ಕರೆದು ನಾಲ್ಕು ದಿನಗಳ ಕಾಲ ಆಚರಿಸಲಾಗುತ್ತದೆ. ಅಸ್ಸಾಂನಲ್ಲಿ ಇದನ್ನು ಭೋಗಾಲಿ ಬಿಹು ಎಂದು ಆಚರಿಸಲಾಗುತ್ತದೆ. ಇದೊಂದು ಸುಗ್ಗಿಯ ಹಬ್ಬವಾಗಿದೆ. ಬಿಹಾರ ಮತ್ತು ಜಾರ್ಖಂಡ್‌ನಲ್ಲಿ ಇದನ್ನು ಆಚರಿಸಲಾಗುತ್ತದೆ. ಈ ಹಬ್ಬವನ್ನು ಸಂಕ್ರಾಂತಿ ಅಥವಾ ಸಕ್ರತ್‌ ಅಥ ವಾಖಿಚಡಿ ಮತ್ತು ಟೀಲ್ ಬರ್ಫಿ ಎಂದು ಕರೆಯಲಾಗುತ್ತದೆ.

ದೆಹಲಿ ಮತ್ತು ಹರಿಯಾಣದಲ್ಲಿ ಸಹೋದರರು ವಿವಾಹಿತ ಸಹೋದರಿಗೆ ಉಡುಗೊರೆಯನ್ನು ನೀಡುತ್ತಾರೆ. ಗುಜರಾತ್‌ನಲ್ಲಿ ಇದನ್ನು ಉತ್ತರಾಯಣ ಎಂದು ಕರೆಯಲಾಗುತ್ತದೆ. ಇದನ್ನು ಎರಡು ದಿನಗಳ ಕಾಲ ಆಚರಿಸಲಾಗುತ್ತದೆ. ಇದು ಅವರಿಗೆ ಪ್ರಮುಖ ಹಬ್ಬಗಳಲ್ಲಿ ಒಂದಾಗಿದೆ. ಪತಂಗಿ ಎಂದು ಕರೆಯಲ್ಪಡುವ ಈ ಹಬ್ಬದಲ್ಲಿ ಗುಜರಾತಿಯರು ಗಾಳಿಪಟಗಳನ್ನು ಹಾರಿಸುತ್ತಾರೆ. ಹಿಮಾಚಲ ಪ್ರದೇಶದಲ್ಲಿ ಇದನ್ನು ಮಾಘ ಸಾಜಿ ಎಂದು ಕರೆಯಲಾಗುತ್ತದೆ. ಕರ್ನಾಟಕದಲ್ಲಿ ಮಕ್ಕಳು ಹೊಸ ಬಟ್ಟೆಗಳನ್ನು ಧರಿಸುತ್ತಾರೆ ಮತ್ತು ಸಂಕ್ರಾಂತಿ ನೈವೇದ್ಯಗಳೊಂದಿಗೆ ಹತ್ತಿರದ ಆತ್ಮೀಯರನ್ನು ಭೇಟಿ ಮಾಡುತ್ತಾರೆ. ಈ ದಿನ ಅನೇಕ ಮೇಳಗಳನ್ನು ನಡೆಸಲಾಗುತ್ತದೆ.

Makar Sankranti 2023

ಎಳ್ಳು ಬೀರುವುದೇಕೆ?
ಮಕರ ಸಂಕ್ರಾಂತಿಯಿಂದಾಗಿ ಸೂರ್ಯನ ಪ್ರಭಾವವು ಹೆಚ್ಚಾಗುವುದರಿಂದ ಈ ಹವಾ ಬದಲಾವಣೆಯ ಪರಿಣಾಮ ಎಳೆ ಮಕ್ಕಳ ಮೇಲೆ ಕೆಟ್ಟಪರಿಣಾಮ ಬೀರಬಹುದು. ಹಾಗಾಗಿ ಮಕ್ಕಳ ಹೃದಯ ಬಡಿತ ಮತ್ತು ರಕ್ತ ಚಲನೆಯನ್ನು ಜೀವನಾಡಿಯು ಚುರುಕುಗೊಳಿಸುತ್ತದೆ. ಇದನ್ನು ಹತೋಟಿಯಲ್ಲಿಡಲು ಮತ್ತು ಸಂಬಂಧಿಸಿದ ಗ್ರಹಚಾರಗಳು, ಕೆಟ್ಟ ಪರಿಣಾಮಗಳು ಎಲಚಿ ಹಣ್ಣು (ಬೋರೆಹಣ್ಣು) ಹಾಗೂ ಎಳ್ಳಿನ ಸ್ಪರ್ಶದಿಂದ ಕಳೆಯುತ್ತವೆ. ಮಕ್ಕಳ ಬೆಳವಣಿಗೆಗೆ ಬೇಕಾದ ಕೇಂದ್ರಗಳು ವಿಕಾಸಗೊಳ್ಳುತ್ತದೆ. ಆದುದರಿಂದ ಸಂಕ್ರಾಂತಿಯಂದು ಮಕ್ಕಳನ್ನು ಹಸೆಮೇಲೆ ಕೂರಿಸಿ, ಆರತಿ ಮಾಡಿ ಎಳ್ಳು, ಬೆಲ್ಲ, ಎಲಚಿಹಣ್ಣು, ಕಬ್ಬಿನ ಚೂರುಗಳು ಮತ್ತು ನಾಣ್ಯಗಳನ್ನು ಅವರ ತಲೆ ಮೇಲೆ ಅಭಿಷೇಕದ ರೀತಿ ಎರೆಯುತ್ತಾರೆ. ಎಲಚಿ ಹಣ್ಣಿನಲ್ಲಿ ಅನುದ್ವೇಗಪಡಿಸುವಗುಣವಿದೆ, ಇದರಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯ ಸಂರಕ್ಷಣೆಯಾಗುತ್ತದೆ. ಸಂಕ್ರಾಂತಿಯ ಹೆಸರಿನಲ್ಲಿ ಹೀಗೆ ಎಳ್ಳು ಬೀರುವುದರಿಂದ ಇಷ್ಟೆಲ್ಲಾ ಉಪಯೋಗಿವಿದೆ ಎಂಬುದನ್ನು ನಮ್ಮ ಹಿರಿಯರು ಅನಾದಿಕಾಲ ದಿಂದಲೇ ಅರಿತಿದ್ದು, ಈಗಲೂ ಮುಂದುವರೆಸಿ ಕೊಂಡು ಬರುತ್ತಿರುವುದೇ ಸಂಕ್ರಾಂತಿಯ ವಿಶೇಷ.

ಮಕರ ಸಂಕ್ರಾಂತಿಯಂದು ಮಾಘ ಮೇಳವನ್ನು (ಜಾತ್ರೆ) ಭಾರತದಾದ್ಯಂತ ವಿವಿಧಯಾತ್ರಾ ಸ್ಥಳಗಳಲ್ಲಿ ಆಯೋಜಿಸಲಾಗಿದೆ. ಮಕರ ಸಂಕ್ರಾಂತಿಯು ಸೂರ್ಯ ದೇವರಿಗೆ ಕೃತಜ್ಞತೆ ಸಲ್ಲಿಸುವ ಹಬ್ಬ. ಮಕರ ಸಂಕ್ರಾಂತಿಯ ದಿನದಂದು ಸೂರ್ಯನು ತನ್ನ ಮಗನಾದ ಶನಿಯನ್ನು ಭೇಟಿ ಯಾಗುತ್ತಾನೆ. ವೈದಿಕ ಜ್ಯೋತಿಷದ ಪ್ರಕಾರ ಸೂರ್ಯ ಮತ್ತು ಶನಿ ದೇವರಿಗೆ ಆಗಿ ಬರುವುದಿಲ್ಲ. ಆದ್ದರಿಂದ ಮಕರ ಸಂಕ್ರಾಂತಿಯಂದು ಕಹಿ ಭೂತಕಾಲವನ್ನು ಮರೆತು ಹೊಸ ಆರಂಭವನ್ನು ಪ್ರಾರಂಭಿಸಲಾಗುತ್ತದೆ.

ಮಹಾಭಾರತದ ಪ್ರಕಾರ ಭೀಷ್ಮರು ಶರಶಯ್ಯೆಯಲ್ಲಿ ಮಲಗಿದ್ದರು. ಅವರು ಉತ್ತರಾಯಣ ಆರಂಭವಾದ ನಂತರವೇ ಅಂದರೆ ಸಂಕ್ರಾಂತಿಯಂದು ಇಚ್ಛಾಮರಣ ಹೊಂದಿದರು. ಉತ್ತರಾಯಣದಲ್ಲಿ ಮರಣ ಹೊಂದುವವರು ಮೋಕ್ಷ ಪಡೆಯುತ್ತಾರೆಂಬ ನಂಬಿಕೆ ಇದೆ.

ಜ್ಯೋತಿಷ ಶಾಸ್ತ್ರದ ಪ್ರಕಾರ ಸೂರ್ಯನು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಪ್ರವೇಶಿಸುವುದನ್ನು ಸಂಕ್ರಾಂತಿ ಎಂದು ಕರೆಯಲಾಗುತ್ತದೆ ಮತ್ತು ಈ ದಿನ ಸೂರ್ಯನು ಧನು ರಾಶಿಯಿಂದ ಮಕರ ರಾಶಿಯನ್ನು ಪ್ರವೇಶಿಸುತ್ತಾನೆ. ಆದ್ದರಿಂದಇದನ್ನು ಮಕರ ಸಂಕ್ರಾಂತಿ ಎನ್ನುತ್ತಾರೆ. ಬೆಳೆಗಳ ಉತ್ತಮ ಫಸಲುಗಳನ್ನು ಪಡೆದ ಸಂತೋಷದಲ್ಲಿ ಮಕರ ಸಂಕ್ರಾಂತಿಯನ್ನು ಆಚರಿಸಲಾಗುತ್ತದೆ.

ಕಿಚ್ಚು ಹಾಯಿಸುವ ಆಚರಣೆ
ಹೇಳಿ ಕೇಳಿ ಸಂಕ್ರಾಂತಿ ಸುಗ್ಗಿ ಹಬ್ಬ. ರೈತಾಪಿಗಳ ಹಿಗ್ಗಿನ ಹಬ್ಬ, ಇಂಥ ಸುಗ್ಗಿಗೆ ಆತ ಆಶ್ರಯಿಸಿರುವ ಜಾನುವಾರುಗಳೇ ಮೂಲ ಕಾರಣ. ಹಾಗಾಗಿ ಹೊಲ-ಗದ್ದೆಗಳಲ್ಲಿ ಬೆಳೆ ಬೆಳೆದು ಫಸಲೆಲ್ಲಾ ಮನೆ ತುಂಬಿ ತುಳುಕುವಾಗ ತನ್ನ ಸಮಕ್ಕೂ ದುಡಿದ ಮೂಕ ಪ್ರಾಣಿಗಳಾದ ಜಾನುವಾರುಗಳನ್ನು ಅಂದು ವಿಶೇಷವಾಗಿ ಬಹಳ ಕಾಳಜಿಯಿಂದ, ಪ್ರೀತಿಯಿಂದ ಕಾಣುವುದು ಸಂಕ್ರಾಂತಿ ಕೊಟ್ಟ ಉಡುಗೊರೆಯಾಗಿದೆ. ಅಂದು ವಿಶೇಷವಾಗಿ ಹಳ್ಳಿಗಾಡುಗಳಲ್ಲಿ ಗೋ ಪೂಜೆಮಾಡಿ ಸಂಭ್ರಮಿಸುತ್ತಾರೆ.

ಅಂದು ಮುಂಜಾನೆಯೇ ಅವುಗಳನ್ನೆಲ್ಲಾ ಕೆರೆಕಟ್ಟೆಗಳಲ್ಲಿ ಚೆನ್ನಾಗಿ ಮೈ ತೊಳೆಯುತ್ತಾರೆ. ನಂತರ ಮೈಗೆಲ್ಲಾ ಅರಿಶಿಣ ಬಳಿಯುತ್ತಾರೆ. ಕೊಂಬುಗಳಿಗೆ ಬಣ್ಣ ಬಳಿದು ವಿವಿಧ ರೀತಿಯಿಂದ ಅಲಂಕಾರ ಮಾಡಿ ಊರಿನಲ್ಲೆಲ್ಲಾ ಮೆರವಣಿಗೆ ಮಾಡುತ್ತಾರೆ. ನಂತರ ಬೀದಿಯಲ್ಲಿ ಭತ್ತದ ಹುಲ್ಲನ್ನು ಹರಡಿ ಅದಕ್ಕೆ ಬೆಂಕಿಹಾಕಿ ಹಸು-ಎತ್ತುಗಳನ್ನು ಅದರ ಮೇಲೆ ಹಾರಿಸುತ್ತಾರೆ. ಇದನ್ನೇ ಕಿಚ್ಚುಹಾಯಿಸುವುದು ಎನ್ನುವುದು. ಹೀಗೆ ಸಂಕ್ರಾಂತಿ ಹಿನ್ನೆಲೆಯಲ್ಲಿ ಹಲವಾರು ಆರೋಗ್ಯಕರ ಆಚರಣೆಗಳಿದ್ದು ವಿಶೇಷವಾಗಿ ರೈತರು ಸಂಭ್ರಮಿಸುತ್ತಾರೆ.

ಇದನ್ನೂ ಓದಿ | Vivekananda Jayanti 2023 | ವಿವೇಕಾನಂದ ಜಯಂತಿ ಅಂಗವಾಗಿ ಜ.13ರಂದು ವಿಸ್ತಾರ ನ್ಯೂಸ್‌ನಿಂದ ವಿವೇಕ ವಂದನೆ ಕಾರ್ಯಕ್ರಮ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

Hindu Population: ಹಿಂದೂಗಳ ಜನಸಂಖ್ಯೆ ಶೇ.7.8 ಕುಸಿತ; ಮುಸ್ಲಿಮರ ಸಂಖ್ಯೆ ಶೇ.43.15 ಏರಿಕೆ!

ಭಾರತದ ಬಹುಸಂಖ್ಯಾತ ಹಿಂದೂಗಳ ಜನಸಂಖ್ಯೆ (Hindu Population) ಕಳೆದ 65 ವರ್ಷಗಳಲ್ಲಿ ಶೇ. 7.8ರಷ್ಟು ಕುಸಿತವಾಗಿದ್ದು, ಅಲ್ಪಸಂಖ್ಯಾತರ ಪ್ರಮಾಣ ಗಣನೀಯವಾಗಿ ಏರಿಕೆಯಾಗಿದೆ. 1950 ಮತ್ತು 2015ರ ನಡುವೆ ಭಾರತದಲ್ಲಿ ಮುಸ್ಲಿಂ ಜನಸಂಖ್ಯೆಯ ಪಾಲು ಶೇ. 43.15ರಷ್ಟು ಹೆಚ್ಚಾಗಿದೆ. ಕ್ರಿಶ್ಚಿಯನ್ನರು ಶೇ.5.38, ಸಿಖ್ಖರು ಶೇ.6.58 ಮತ್ತು ಬೌದ್ಧರ ಜನಸಂಖ್ಯೆ ಪ್ರಮಾಣದಲ್ಲಿ ಸ್ವಲ್ಪ ಹೆಚ್ಚಳವಾಗಿದೆ.

VISTARANEWS.COM


on

By

Hindu population
Koo

ಭಾರತದ ಬಹುಸಂಖ್ಯಾತ ಹಿಂದೂಗಳ ಜನಸಂಖ್ಯೆ (Hindu Population) 1950 ಮತ್ತು 2015ರ ನಡುವೆ ಶೇ. 7.8ರಷ್ಟು ಕುಸಿತವಾಗಿದೆ ಎಂದು ಪ್ರಧಾನಮಂತ್ರಿಯ ( Prime Minister) ಆರ್ಥಿಕ ಸಲಹಾ ಮಂಡಳಿ (Economic Advisory Council) (EAC- PM) ನಡೆಸಿದ ಅಧ್ಯಯನದಿಂದ ತಿಳಿದು ಬಂದಿದೆ.

ಭಾರತದಲ್ಲಿ ಹಿಂದೂ ಜನಸಂಖ್ಯೆಯು ಕುಗ್ಗಿದರೆ, ಮುಸ್ಲಿಂ (muslim), ಕ್ರಿಶ್ಚಿಯನ್ (Christian), ಬೌದ್ಧ (Buddhist) ಮತ್ತು ಸಿಖ್ಖರು (Sikhs) ಸೇರಿದಂತೆ ಅಲ್ಪಸಂಖ್ಯಾತರ ಜನಸಂಖ್ಯೆ ಬಹುತೇಕ ಹೆಚ್ಚಾಗಿದೆ. ಆದರೆ ಜೈನ (jain) ಮತ್ತು ಪಾರ್ಸಿಗಳ (Parsis ) ಸಂಖ್ಯೆ ಕುಸಿತವಾಗಿದೆ.

1950 ಮತ್ತು 2015ರ ನಡುವೆ ಭಾರತದಲ್ಲಿ ಮುಸ್ಲಿಂ ಜನಸಂಖ್ಯೆಯ ಪಾಲು ಶೇ. 43.15ರಷ್ಟು ಹೆಚ್ಚಾಗಿದೆ. ಕ್ರಿಶ್ಚಿಯನ್ನರು ಶೇ.5.38, ಸಿಖ್ಖರು ಶೇ.6.58 ಮತ್ತು ಬೌದ್ಧರ ಜನಸಂಖ್ಯೆ ಪ್ರಮಾಣದಲ್ಲಿ ಸ್ವಲ್ಪ ಹೆಚ್ಚಳವಾಗಿದೆ.

ಪ್ರಧಾನಮಂತ್ರಿಯ ಆರ್ಥಿಕ ಸಲಹಾ ಮಂಡಳಿ ಪ್ರಕಾರ 65 ವರ್ಷಗಳಲ್ಲಿ ಭಾರತದ ಜನಸಂಖ್ಯೆಯಲ್ಲಿ ಹಿಂದೂಗಳ ಪಾಲು 1950ರಲ್ಲಿ ಶೇ. 84ರಿಂದ 2015ರಲ್ಲಿ ಶೇ.78ಕ್ಕೆ ಕುಸಿತವಾಗಿದೆ. ಆದರೆ ಮುಸ್ಲಿಮರ ಸಂಖ್ಯೆ ಇದೇ ಅವಧಿಯಲ್ಲಿ ಶೇ.9.84ರಿಂದ ಶೇ.14.09ಕ್ಕೆ ಏರಿಕೆಯಾಗಿದೆ.


ಮ್ಯಾನ್ಮಾರ್‌, ನೇಪಾಳದಲ್ಲೂ ಕುಸಿತ

ಭಾರತದಲ್ಲಿ ಬಹುಸಂಖ್ಯಾತ ಹಿಂದೂಗಳ ಜನಸಂಖ್ಯೆಯ ಕುಗ್ಗುವಿಕೆ ಶೇ. 7.8ರಷ್ಟಿದ್ದರೆ, ಮ್ಯಾನ್ಮಾರ್‌ನಲ್ಲಿ ಶೇ. 10ರಷ್ಟು ಕುಸಿತವಾಗಿದೆ. ಇದು ನೆರೆಹೊರೆಯ ರಾಷ್ಟ್ರದಲ್ಲಿ ಎರಡನೇ ಅತ್ಯಂತ ಮಹತ್ವದ ಕುಸಿತವಾಗಿದೆ. ಭಾರತವನ್ನು ಹೊರತುಪಡಿಸಿ, ನೇಪಾಳದ ಬಹುಸಂಖ್ಯಾತ ಸಮುದಾಯವಾದ ಹಿಂದೂಗಳ ಜನಸಂಖ್ಯೆಯ ತನ್ನ ಪಾಲಿನಲ್ಲಿ ಶೇ. 3.6ರಷ್ಟು ಕುಸಿತವನ್ನು ಕಂಡಿದೆ.

167 ದೇಶಗಳ ಮೌಲ್ಯಮಾಪನ

ಮೇ 2024ರಲ್ಲಿ ಬಿಡುಗಡೆಯಾದ ಈ ಅಧ್ಯಯನವು ಪ್ರಪಂಚದಾದ್ಯಂತ 167 ದೇಶಗಳಲ್ಲಿನ ಪ್ರವೃತ್ತಿಯನ್ನು ಮೌಲ್ಯಮಾಪನ ಮಾಡಿದೆ. ಭಾರತದ ಕಾರ್ಯಕ್ಷಮತೆಯು ದೊಡ್ಡ ಜಾಗತಿಕ ಪ್ರವೃತ್ತಿಗಳೊಂದಿಗೆ ಸ್ಥಿರವಾಗಿದೆ ಎನ್ನುತ್ತಾರೆ ಅಧ್ಯಯನಕಾರರು. ಅಲ್ಪಸಂಖ್ಯಾತರು ಭಾರತದಲ್ಲಿ ಕೇವಲ ರಕ್ಷಿಸಲ್ಪಟ್ಟಿಲ್ಲ, ನಿಜವಾಗಿಯೂ ಬೆಳೆಯುತ್ತಿದ್ದಾರೆ ಎಂಬುದನ್ನು ಈ ಅಂಕಿ ಅಂಶಗಳು ತೋರಿಸಿವೆ ಎನ್ನುತ್ತಾರೆ ತಜ್ಞರು.

ಪಾಕಿಸ್ತಾನ, ಬಾಂಗ್ಲಾದೇಶದಲ್ಲಿ ಹೆಚ್ಚಳ

ಭಾರತದ ಜನಸಂಖ್ಯೆಯ ಬೆಳವಣಿಗೆಯ ಕಥೆಯು ಅದರ ನೆರೆಹೊರೆಯ ದೇಶಗಳಿಗಿಂತ ಸಂಪೂರ್ಣವಾಗಿ ಭಿನ್ನವಾಗಿದೆ. 1950 ಮತ್ತು 2015ರ ನಡುವೆ ಭಾರತ ದೇಶದ ಜನಸಂಖ್ಯೆಯಲ್ಲಿ ಭಾರತೀಯ ಬಹುಸಂಖ್ಯಾತ ಸಮುದಾಯವಾದ ಹಿಂದೂಗಳ ಪಾಲು ಶೇ. 7.8ರಷ್ಟು ಕಡಿಮೆಯಾಗಿದೆ. ಆದರೆ ಮುಸ್ಲಿಮರು ಬಹುಸಂಖ್ಯಾತರಾಗಿರುವ ನೆರೆಯ ದೇಶಗಳಲ್ಲಿ ಮುಸ್ಲಿಂ ಸಮುದಾಯದ ಪಾಲು ಹೆಚ್ಚಳಕ್ಕೆ ಸಾಕ್ಷಿಯಾಗಿದೆ. ಮುಸ್ಲಿಮರ ಜನಸಂಖ್ಯೆಯಲ್ಲಿ ಬಾಂಗ್ಲಾದೇಶವು ಶೇ. 18.5ರಷ್ಟು ಏರಿಕೆಯನ್ನು ಕಂಡಿದ್ದು, ಅನಂತರ ಪಾಕಿಸ್ತಾನದಲ್ಲಿ ಶೇ. 3.75 ಮತ್ತು ಅಫ್ಘಾನಿಸ್ತಾನದಲ್ಲಿ 0.29ರಷ್ಟು ಹೆಚ್ಚಳವಾಗಿದೆ.

1971ರಲ್ಲಿ ಬಾಂಗ್ಲಾದೇಶದ ರಚನೆಯ ಹೊರತಾಗಿಯೂ ಪಾಕಿಸ್ತಾನವು ಬಹುಸಂಖ್ಯಾತ ಧಾರ್ಮಿಕ ಪಂಗಡದ (ಹನಾಫಿ ಮುಸ್ಲಿಂ) ಪಾಲನ್ನು ಶೇ. 3.75ರಷ್ಟು ಹೆಚ್ಚಿಸಿಕೊಂಡಿದೆ ಮತ್ತು ಒಟ್ಟು ಮುಸ್ಲಿಂ ಜನಸಂಖ್ಯೆಯ ಪಾಲಿನಲ್ಲಿ ಶೇ.10ರಷ್ಟು ಹೆಚ್ಚಾಗಿದೆ ಎಂಬುದು ಅಧ್ಯಯನದಿಂದ ತಿಳಿದು ಬಂದಿದೆ. ಮ್ಯಾನ್ಮಾರ್‌ನಲ್ಲಿ ಥೇರವಾಡ ಬೌದ್ಧರ ಬಹುಪಾಲು ಜನಸಂಖ್ಯೆಯು 65 ವರ್ಷಗಳಲ್ಲಿ ಶೇ. 10ರಷ್ಟು ಕುಸಿದಿದೆ.

ನೇಪಾಳದಲ್ಲಿ ಬಹುಸಂಖ್ಯಾತ ಹಿಂದೂ ಜನಸಂಖ್ಯೆಯಲ್ಲಿ ಶೇ. 3.6 ಕುಸಿತವನ್ನು ಕಂಡಿದೆ. ಮಾಲ್ಡೀವ್ಸ್‌ನಲ್ಲಿ ಬಹುಪಾಲು ಗುಂಪಿನ (ಶಾಫಿ ಸುನ್ನಿಗಳು) ಪಾಲು ಶೇ.1.47ರಷ್ಟು ಕುಸಿದಿದೆ.

ಬೌದ್ಧ ಜನಸಂಖ್ಯೆಯಲ್ಲಿ ಏರಿಕೆ

ಬಹುಪಾಲು ಬೌದ್ಧ ಜನಸಂಖ್ಯೆಯನ್ನು ಹೊಂದಿರುವ ಭಾರತದ ನೆರೆಯ ದೇಶಗಳಾದ ಭೂತಾನ್ ಮತ್ತು ಶ್ರೀಲಂಕಾ ಕ್ರಮವಾಗಿ ಶೇ. 17.6 ಮತ್ತು ಶೇ. 5.25ರಷ್ಟು ಏರಿಕೆ ಕಂಡಿವೆ.

ಇದನ್ನೂ ಓದಿ: Viral Video: ಅಂಬಾನಿಗಿಂತಲೂ ರಿಚ್‌ ಈತ.. ಗದ್ದೆ ಉಳುಮೆಗೆ 20 ಲಕ್ಷದ ಕಾರೇ ಬೇಕು..!

ಒಟ್ಟು ಜನಸಂಖ್ಯೆಯ ಪಾಲಿನ ಅಲ್ಪಸಂಖ್ಯಾತರ ಅನುಪಾತದಲ್ಲಿನ ಬದಲಾವಣೆಯು ದೇಶದಲ್ಲಿ ಅಲ್ಪಸಂಖ್ಯಾತರ ಸ್ಥಾನಮಾನಕ್ಕೆ ವಿಶ್ವಾಸಾರ್ಹವಾಗಿ ಕಾರ್ಯನಿರ್ವಹಿಸುತ್ತಿರುವುದಕ್ಕೆ ಸಾಕ್ಷಿಯಾಗಿದೆ. ಇದು ಅಲ್ಪಸಂಖ್ಯಾತರನ್ನು ವ್ಯಾಖ್ಯಾನಿಸುವುದು ಸೇರಿದಂತೆ ನೀತಿಗಳ ಮೂಲಕ ಪೋಷಿಸಲು ಕಾರಣವಾಗುತ್ತದೆ. ಜಾಗತಿಕವಾಗಿ ಇದೊಂದು ಅಪರೂಪದ ಘಟನೆ ಎಂದು ಅಧ್ಯಯನ ಹೇಳಿದೆ.

Continue Reading

ಫ್ಯಾಷನ್

Akshaya Tritiya Jewellery: ಅಕ್ಷಯ ತೃತೀಯಕ್ಕೆ ಬಂದಿವೆ ವೈವಿಧ್ಯಮಯ ಫ್ಯಾಷನ್‌ ಜ್ಯುವೆಲರಿಗಳು!

ಅಕ್ಷಯ ತೃತೀಯ ಆಗಮಿಸುತ್ತಿದೆ. ಈ ಹಿನ್ನೆಲೆಯಲ್ಲಿ, ಈ ಜನರೇಷನ್‌ನವರು ಇಷ್ಟಪಡುವಂತಹ ಊಹೆಗೂ ಮೀರಿದ ನಾನಾ ವೆರೈಟಿ ಡಿಸೈನ್‌ನ ಬಂಗಾರದ ಫ್ಯಾಷನ್‌ ಜ್ಯುವೆಲರಿಗಳು (Akshaya Tritiya Jewellery) ಎಂಟ್ರಿ ನೀಡಿವೆ. ಯಾವ್ಯಾವ ಬಗೆಯವು ಈ ಸೀಸನ್‌ಗೆ ಕಾಲಿಟ್ಟಿವೆ? ಎಂಬುದರ ಬಗ್ಗೆ ಜ್ಯುವೆಲ್‌ ಡಿಸೈನರ್‌ಗಳು ಇಲ್ಲಿ ತಿಳಿಸಿದ್ದಾರೆ.

VISTARANEWS.COM


on

Akshaya Tritiya Jewellery
ಚಿತ್ರಕೃಪೆ: ಪಿಕ್ಸೆಲ್‌
Koo

ಶೀಲಾ ಸಿ. ಶೆಟ್ಟಿ, ಬೆಂಗಳೂರು
ಅಕ್ಷಯ ತೃತೀಯ ಹಿನ್ನೆಲೆಯಲ್ಲಿ ಈ ಜನರೇಷನ್‌ನವರು ಇಷ್ಟಪಡುವಂತಹ ನಾನಾ ವೆರೈಟಿ ಡಿಸೈನ್‌ನ ಫ್ಯಾಷನ್‌ ಜ್ಯುವೆಲರಿಗಳು ಎಂಟ್ರಿ ನೀಡಿವೆ. ಚಿಕ್ಕ ಮಕ್ಕಳಿಂದ ಹಿಡಿದು ಯುವತಿಯರು, ಉದ್ಯೋಗಸ್ಥ ಮಹಿಳೆಯರು ಹಾಗೂ ಗೃಹಿಣಿಯರು ಕೂಡ ಇಷ್ಟಪಡುವಂತಹ ಸಿಂಪಲ್‌ ಫ್ಯಾಷನ್‌ ಜ್ಯುವೆಲರಿಗಳು (Akshaya Tritiya Jewellery), ಕಾರ್ಪೋರೇಟ್‌ ಕ್ಷೇತ್ರದ ಮಹಿಳೆಯರು ಧರಿಸುವಂತಹ ಬಿಗ್‌ ಹಾಗೂ ಹ್ಯಾಂಗಿಂಗ್‌ ಫ್ಯಾಷನ್‌ ಜ್ಯುವೆಲರಿಗಳು ಕಾಲಿಟ್ಟಿವೆ.

Akshaya Tritiya Jewellery

ವೈವಿಧ್ಯಮಯ ಜ್ಯುವೆಲರಿಗಳು

ಈ ಬಾರಿ ಕಳೆದ ಬಾರಿಗಿಂತ ಅತಿ ಹೆಚ್ಚು ಫ್ಯಾಷನ್‌ ಜ್ಯುವೆಲರಿಗಳು ಕಾಲಿಟ್ಟಿವೆ. ಮೊದಲೆಲ್ಲ ಕೇವಲ ದೊಡ್ಡ ಬ್ರಾಂಡ್‌ಗಳಲ್ಲಿ ಮಾತ್ರ ದೊರಕುತ್ತಿದ್ದ ಬಂಗಾರದ ಫ್ಯಾಷನ್‌ ಜ್ಯುವೆಲರಿಗಳು ಇದೀಗ ಸಾಮಾನ್ಯ ಬ್ರಾಂಡ್‌ಗಳಲ್ಲೂ ಬಂದಿರುವುದು ವಿಶೇಷ. ಇನ್ನು, ಕಡಿಮೆ ಗ್ರಾಮ್‌ಗಳಲ್ಲೂ ದೊರಕುತ್ತಿರುವುದು ಗ್ರಾಹಕರನ್ನು ಆಕರ್ಷಿಸಲು ಪ್ರಮುಖ ಕಾರಣ. ಇದರಿಂದಾಗಿ ಸಾಮಾನ್ಯ ಜನರು ಕೂಡ ಫ್ಯಾಷನ್‌ ಜ್ಯುವೆಲರಿಗಳತ್ತ ವಾಲಿದ್ದಾರೆ. ಪರಿಣಾಮ, ಫ್ಯಾಷನ್‌ ಜ್ಯುವೆಲರಿಗಳು ಸಖತ್‌ ಬೇಡಿಕೆ ಹೆಚ್ಚಿಸಿಕೊಂಡಿವೆ ಎನ್ನುತ್ತಾರೆ ಜ್ಯುವೆಲ್‌ ಮಾರಾಟಗಾರರು.

Akshaya Tritiya Jewellery

ಫ್ಯಾಷನ್‌ ಜ್ಯುವೆಲರಿಗಳ ಲೋಕ

ಪುಟ್ಟ ಚಿಕ್ಕ ಸ್ಟಡ್ಸ್‌ನಂತಹ ಫ್ಲೋರಲ್‌, ಟ್ರಾಪಿಕಲ್‌, ನಕ್ಷತ್ರ, ರಂಗೋಲಿ ಡಿಸೈನ್‌ನಂತಹ ಫ್ಯಾಷನ್‌ ಜ್ಯುವೆಲರಿಗಳು, ಜಿಯಾಮೆಟ್ರಿಕಲ್‌ ಡಿಸೈನ್‌ನ ಹ್ಯಾಂಗಿಂಗ್‌ ಫ್ಯಾಷನ್‌ ಜ್ಯುವೆಲರಿಗಳು, ಬಿಗ್‌ ಹರಳಿನೊಂದಿಗೆ ಮಿಕ್ಸ್‌ ಮ್ಯಾಚ್‌ ಮಾಡಿರುವಂತಹ ಡಿಸೈನ್‌ನ ಫ್ಯಾಷನ್‌ ಜ್ಯುವೆಲರಿಗಳು, ಇಮ್ಯಾಜೀನ್‌ಗೂ ಸಿಗದ ವೆರೈಟಿ ಡಿಸೈನ್‌ಗಳು, ಇನ್ನು, ಉಡುಪಿಗೆ ಮ್ಯಾಚ್‌ ಆಗುವಂತಹ ಫ್ಯಾಷನ್‌ ಜ್ಯುವೆಲರಿಗಳು ಸೇರಿದಂತೆ ನಾನಾ ಬಗೆಯವು ಟ್ರೆಂಡ್‌ನಲ್ಲಿವೆ. ಜ್ಯುವೆಲರಿ ಶಾಪ್‌ಗಳು ಕೂಡ ಫ್ಯಾಷೆನಬಲ್‌ ಜ್ಯುವೆಲರಿಗಳನ್ನು ಗ್ರಾಹಕರ ಮನೋಭಿಲಾಷೆಗೆ ತಕ್ಕಂತೆ ಆರ್ಡರ್‌ ತೆಗೆದುಕೊಂಡು ನೀಡುತ್ತಿವೆ. ಆ ಸೌಲಭ್ಯವನ್ನು ನೀಡಿವೆ. ಅಷ್ಟು ಮಾತ್ರವಲ್ಲದೇ, ಕಾಲೇಜು ಹುಡುಗಿಯರಿಗೆ ಪ್ರಿಯವಾಗುವಂತಹ ಇಂದು ಮಾರುಕಟ್ಟೆಯಲ್ಲಿ ಪ್ರಚಲಿತದಲ್ಲಿರುವ ಫ್ಯಾಷನ್‌ ಜ್ಯುವೆಲರಿಗಳನ್ನು ಬಿಡುಗಡೆಗೊಳಿಸಿವೆ.

Akshaya Tritiya Jewellery

ಫ್ಯಾಷನ್‌ ಜ್ಯುವೆಲರಿಗಳನ್ನು ಖರೀದಿಸುವವರು ಗಮನದಲ್ಲಿಟ್ಟುಕೊಳ್ಳಬೇಕಾದ ಸಂಗತಿಗಳಿವು

  • ಆದಷ್ಟೂ ಲೈಟ್‌ವೈಟ್‌ನವನ್ನು ಆಯ್ಕೆ ಮಾಡಿ.
  • ಟ್ರೆಂಡಿ ಡಿಸೈನ್‌ನವನ್ನು ಸೆಲೆಕ್ಟ್‌ ಮಾಡಿ ಖರೀದಿಸಿ.
  • ಮಕ್ಕಳಿಗಾದಲ್ಲಿ ಸಿಂಪಲ್‌ ಸ್ಟಡ್ಸ್‌ ಡಿಸೈನ್‌ನವನ್ನು ಕೊಳ್ಳಿ.
  • ಕಾಲೇಜು ಯುವತಿಯರಾದಲ್ಲಿ ಬಹುತೇಕ ಔಟ್‌ಫಿಟ್‌ಗಳಿಗೆ ಮ್ಯಾಚ್‌ ಆಗುವಂತದ್ದನ್ನು ನೋಡಿ.
  • ಉದ್ಯೋಗಸ್ಥ ಮಹಿಳೆಯರು ಅಗಲವಾದ ಡಿಸೈನ್‌ನವನ್ನು ಆಯ್ಕೆ ಮಾಡಬಹುದು.
  • ಹೆವಿ ಭಾರವಿರುವಂಥದ್ದನ್ನು ಅವಾಯ್ಡ್‌ ಮಾಡಿ.
  • ಬೀಡ್ಸ್‌ ಇರುವಂತವು ರೀಸೇಲ್‌ ಮಾಡುವಾಗ ಉತ್ತಮ ಬೆಲೆ ದೊರಕುವುದಿಲ್ಲ ಎಂಬುದು ನೆನಪಿರಲಿ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Akshaya Tritiya 2024: ಅಕ್ಷಯ ತೃತೀಯದಂದು ಬಂಗಾರ ಖರೀದಿಸುವವರಿಗೆ ಇಲ್ಲಿದೆ ಉಪಯುಕ್ತ ಟಿಪ್ಸ್‌

Continue Reading

ಧಾರ್ಮಿಕ

Akshaya Tritiya 2024: ಅಕ್ಷಯ ತೃತೀಯ ಅಂದರೆ ಚಿನ್ನ ಖರೀದಿಯೊಂದೇ ಅಲ್ಲ! ಹೀಗೆ ಮಾಡಿಯೂ ಸಮೃದ್ಧಿ ಹೊಂದಬಹುದು!

‘ಅಕ್ಷಯ’ ಎಂಬ ಹೆಸರಿನ ಅರ್ಥ ಶಾಶ್ವತ ಮತ್ತು ‘ತೃತೀಯ’ ಎಂದರೆ ಮೂರನೇ ಚಂದ್ರನ ದಿನವನ್ನು ಸೂಚಿಸುತ್ತದೆ. ಅಕ್ಷಯ ತೃತೀಯದಂದು ವಿಷ್ಣು ದೇವರು ಆರನೇ ಅವತಾರವಾದ ಪರಶುರಾಮನ ರೂಪದಲ್ಲಿ ಅವತರಿಸಿದನೆಂದು ನಂಬಲಾಗಿದೆ. ಈ ದಿನದಂದು ಗಂಗಾ ದೇವಿಯು ಸ್ವರ್ಗದಿಂದ ಭೂಮಿಗೆ ಇಳಿದಳು ಎಂದೂ ಹೇಳಲಾಗುತ್ತದೆ. ಅಕ್ಷಯ ತೃತೀಯ ದಿನ ಆಚರಿಬಹುದಾದ ಹಲವು ಸಂಪ್ರದಾಯಗಳಿವೆ. ಈ ಬಗ್ಗೆ ಅರಿತುಕೊಂಡು ನೀವು, ಕುಟುಂಬದೊಂದಿಗೆ ಅಕ್ಷಯ ತೃತಿಯವನ್ನು (Akshaya Tritiya 2024) ಆಚರಿಸಿ.

VISTARANEWS.COM


on

By

Akshaya Tritiya 2024
Koo

ಪವಿತ್ರ ಯುಗ ಮತ್ತು ಸತ್ಯ ಯುಗದ ಆರಂಭವನ್ನು ಸೂಚಿಸುವ ಅಕ್ಷಯ ತೃತೀಯ (Akshaya Tritiya 2024) ವೈಶಾಖ ಮಾಸದ ಮೂರನೇ ಚಂದ್ರನ ದಿನ ಅಕ್ಷಯ ತೃತೀಯವನ್ನು ಆಚರಿಸಲಾಗುತ್ತದೆ. ಈ ದಿನವು ಹಿಂದೂ (hindu) ಸಂಸ್ಕೃತಿಯಲ್ಲಿ (culture) ಬಹಳ ಮಹತ್ವವನ್ನು ಹೊಂದಿದೆ. ಹೀಗಾಗಿ ಈ ದಿನ ಹೊಸ ಉದ್ಯಮಗಳನ್ನು ಪ್ರಾರಂಭಿಸಲು, ಹೂಡಿಕೆ ಮಾಡಲು, ಚಿನ್ನ (gold) ಅಥವಾ ಆಸ್ತಿಯನ್ನು (property) ಖರೀದಿಸಲು, ಮದುವೆ ಅಥವಾ ಇತರ ಶುಭ ಸಂದರ್ಭಗಳಿಗೆ ಉತ್ತಮ ಸಮಯ ಎಂದೇ ಪರಿಗಣಿಸಲಾಗಿದೆ.

‘ಅಕ್ಷಯ’ ಎಂಬ ಹೆಸರಿನ ಅರ್ಥ ಶಾಶ್ವತ ಮತ್ತು ‘ತೃತೀಯ’ ಎಂದರೆ ಮೂರನೇ ಚಂದ್ರನ ದಿನವನ್ನು ಸೂಚಿಸುತ್ತದೆ. ಹಿಂದೂ ಪುರಾಣಗಳ ಪ್ರಕಾರ ಅಕ್ಷಯ ತೃತೀಯದಂದು ವಿಷ್ಣು ದೇವರು ಆರನೇ ಅವತಾರವಾದ ಪರಶುರಾಮನ ರೂಪದಲ್ಲಿ ಅವತರಿಸಿದನೆಂದು ನಂಬಲಾಗಿದೆ. ಈ ದಿನದಂದು ಗಂಗಾ ದೇವಿಯು ಸ್ವರ್ಗದಿಂದ ಭೂಮಿಗೆ ಇಳಿದಳು ಎಂದೂ ಹೇಳಲಾಗುತ್ತದೆ.

ಅಕ್ಷಯ ತೃತಿಯವನ್ನು ಪವಿತ್ರ ನದಿಗಳಲ್ಲಿ ವಿಶೇಷವಾಗಿ ಗಂಗಾದಲ್ಲಿ ಸ್ನಾನ ಮಾಡಲು ಮತ್ತು ಸಮೃದ್ಧಿ ಹಾಗೂ ಯೋಗಕ್ಷೇಮಕ್ಕಾಗಿ ಆಶೀರ್ವಾದವನ್ನು ಪಡೆಯಲು ಮಂಗಳಕರ ದಿನವೆಂದು ಪರಿಗಣಿಸಲಾಗಿದೆ. ಅಕ್ಷಯ ತೃತೀಯ 2024 ಅನ್ನು ಮೇ 10 ರಂದು ಶುಕ್ರವಾರ ಆಚರಿಸಲಾಗುತ್ತಿದೆ.

ಅಕ್ಷಯ ತೃತೀಯವನ್ನು ಸರಿಯಾದ ರೀತಿಯಲ್ಲಿ ಆಚರಿಸಲು ಅನುಸರಿಸಬೇಕಾದ ಕೆಲವು ಪ್ರಮುಖ ಆಚರಣೆಗಳಿವೆ. ಅವುಗಳ ಪರಿಚಯ ಇಲ್ಲಿದೆ.


ಚಿನ್ನ ಖರೀದಿಸಿ

ಅಕ್ಷಯ ತೃತೀಯದಲ್ಲಿ ಹೆಚ್ಚಿನ ಜನರು ಅನುಸರಿಸುವ ಪ್ರಮುಖ ಸಂಪ್ರದಾಯವೆಂದರೆ ಚಿನ್ನ ಖರೀದಿ. ಈ ದಿನದಂದು ಚಿನ್ನವನ್ನು ಖರೀದಿಸುವುದು ಸಮೃದ್ಧಿ ಮತ್ತು ಅದೃಷ್ಟವನ್ನು ಸ್ವಾಗತಿಸುತ್ತದೆ ಎಂಬ ನಂಬಿಕೆ ಇದೆ. ಜನರು ಈ ದಿನದಂದು ಚಿನ್ನದ ಆಭರಣಗಳು, ನಾಣ್ಯಗಳಲ್ಲಿ ಹೂಡಿಕೆ ಮಾಡುತ್ತಾರೆ.


ಚಾರಿಟಿ

ಅಕ್ಷಯ ತೃತೀಯದ ಪ್ರಮುಖ ಅಂಶವೆಂದರೆ ದಾನ. ಈ ದಿನದಂದು ಅಗತ್ಯವಿರುವವರಿಗೆ ದಾನ ನೀಡುವುದು ಆಶೀರ್ವಾದ ಮತ್ತು ಸಮೃದ್ಧಿಯನ್ನು ತರುತ್ತದೆ ಎಂದು ನಂಬಲಾಗಿದೆ. ಅನೇಕ ಜನರು ಆಹಾರ, ಬಟ್ಟೆ, ಹಣ ಅಥವಾ ಇತರ ರೀತಿಯ ದಾನವನ್ನು ಹಿಂದುಳಿದವರಿಗೆ ದಾನ ಮಾಡುತ್ತಾರೆ. ಈ ಅಭ್ಯಾಸವು ನಿರ್ಗತಿಕರಿಗೆ ಸಹಾಯ ಮಾಡುವುದಲ್ಲದೆ ಸಹಾನುಭೂತಿ ಮತ್ತು ಸಹಾನುಭೂತಿಯ ಭಾವವನ್ನು ಬೆಳೆಸುತ್ತದೆ.


ಮರಗಳನ್ನು ನೆಡುವುದು

ಇದು ಪ್ರಕೃತಿಗೆ ಮರಳಿ ನೀಡುವ ಮತ್ತು ಗ್ರಹಕ್ಕೆ ಹಸಿರು ಭವಿಷ್ಯವನ್ನು ಖಾತ್ರಿಪಡಿಸುವ ಒಂದು ಮಾರ್ಗವಾಗಿದೆ. ಇತ್ತೀಚಿನ ವರ್ಷಗಳಲ್ಲಿ, ಜನರು ಪರಿಸರ ಸುಸ್ಥಿರತೆಯ ಬಗ್ಗೆ ಹೆಚ್ಚು ಮಾತನಾಡುತ್ತಿದ್ದಾರೆ. ಅಕ್ಷಯ ತೃತೀಯವು ಹೆಚ್ಚು ಮರಗಳನ್ನು ನೆಡಲು ಮತ್ತು ಹಸಿರು ವಾತಾವರಣವನ್ನು ನಿರ್ಮಿಸಲು ಉತ್ತಮ ಅವಕಾಶವಾಗಿದೆ. ಮರಗಳನ್ನು ನೆಡುವ ಮೂಲಕ ನಾವು ಜಾಗತಿಕ ತಾಪಮಾನ ಮತ್ತು ಹವಾಮಾನ ಬದಲಾವಣೆಯನ್ನು ತಡೆಯಬಹುದು.

ಇದನ್ನೂ ಓದಿ: Akshaya Tritiya 2024: ಅಕ್ಷಯ ತೃತೀಯದಂದು ಏನು ಮಾಡಬೇಕು, ಏನು ಮಾಡಬಾರದು?

ಉಪವಾಸ

ಅಕ್ಷಯ ತೃತೀಯಕ್ಕೆ ಸಂಬಂಧಿಸಿದ ಇತರ ಪ್ರಮುಖ ಆಚರಣೆಗಳು ಉಪವಾಸ, ದೇವಾಲಯಗಳಿಗೆ ಭೇಟಿ ನೀಡುವುದು ಮತ್ತು ಪೂಜೆಗಳು ಮತ್ತು ಪ್ರಾರ್ಥನೆಗಳನ್ನು ಮಾಡುತ್ತೇವೆ. ಸ್ವೀಕರಿಸಿದ ಎಲ್ಲಾ ಆಶೀರ್ವಾದಗಳಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸಲು ಮತ್ತು ನಿರಂತರ ಮಾರ್ಗದರ್ಶನ ಮತ್ತು ರಕ್ಷಣೆಯನ್ನು ಪಡೆಯಲು ಈ ದಿನ ಸೂಕ್ತವಾಗಿದೆ. ಅನೇಕ ಜನರು ಇಡೀ ದಿನ ಉಪವಾಸ ಮಾಡುತ್ತಾರೆ ಮತ್ತು ಮನೆಯಲ್ಲಿ ಪೂಜೆಗಳನ್ನು ನಡೆಸುತ್ತಾರೆ. ಹೀಗೆ ಮಾಡುವ ಮೂಲಕವೂ ಜೀವನದಲ್ಲಿ ಸಮೃದ್ಧಿ, ನೆಮ್ಮದಿ ಹೊಂದಬಹುದು.

Continue Reading

ತುಮಕೂರು

Tumkur News: ಜೂ. 9ಕ್ಕೆ ಸಿದ್ದರಬೆಟ್ಟದ ಬಾಳೆಹೊನ್ನೂರು ಖಾಸಾ ಶಾಖಾ ಮಠದ ವಾರ್ಷಿಕೋತ್ಸವ

Tumkur News: ಕೊರಟಗೆರೆ ತಾಲೂಕಿನ ಶ್ರೀ ಕ್ಷೇತ್ರ ಸಿದ್ದರಬೆಟ್ಟದ ಬಾಳೆಹೊನ್ನೂರು ಖಾಸಾ ಶಾಖಾ ಮಠದ 18ನೇ ವಾರ್ಷಿಕೋತ್ಸವ ಹಾಗೂ ಶ್ರೀ ಜಗದ್ಗುರು ರೇಣುಕಾಚಾರ್ಯರ ಮತ್ತು ಜಗಜ್ಯೋತಿ ಶ್ರೀ ಬಸವೇಶ್ವರರ ಜಯಂತ್ಯೋತ್ಸವ, ಉಚಿತ ಸಾಮೂಹಿಕ ವಿವಾಹ, ಜನಜಾಗೃತಿ ಧರ್ಮ ಸಮಾವೇಶವನ್ನು ಜೂ.9 ರಂದು ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ಮಠದ ಶ್ರೀವೀರಭದ್ರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದ್ದಾರೆ.

VISTARANEWS.COM


on

Shrikhshetra Siddrabetta Balehonnur Khasa Shakha Math 18th year Anniversary on June 9 says sri veerabhadra shivacharya swamiji
Koo

ಕೊರಟಗೆರೆ: ಶ್ರೀ ಕ್ಷೇತ್ರ ಸಿದ್ದರಬೆಟ್ಟದ ಬಾಳೆಹೊನ್ನೂರು ಖಾಸಾ ಶಾಖಾ ಮಠದ 18ನೇ ವಾರ್ಷಿಕೋತ್ಸವವನ್ನು ಜೂ.9ರಂದು ಆಯೋಜನೆ ಮಾಡಲಾಗಿದೆ ಎಂದು ಸಿದ್ದರಬೆಟ್ಟದ ಶ್ರೀಮಠದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ (Tumkur News) ತಿಳಿಸಿದರು.

ತಾಲೂಕಿನ ಶ್ರೀ ಕ್ಷೇತ್ರ ಸಿದ್ದರಬೆಟ್ಟದ ಬಾಳೆಹೊನ್ನೂರು ಖಾಸಾ ಶಾಖಾ ಮಠದಲ್ಲಿ 18ನೇ ವಾರ್ಷಿಕೋತ್ಸವದ ಪೂರ್ವಭಾವಿ ಸಭೆಯಲ್ಲಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ಪ್ರತಿ ವರ್ಷದಂತೆ ಈ ವರ್ಷವೂ ಸಹ ಮಠದ ಸದ್ಭಕ್ತರ ಸಹಕಾರದಿಂದ ಶ್ರೀ ಮಠದ 18ನೇ ವಾರ್ಷಿಕೋತ್ಸವವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಶ್ರೀ ಮಠದಲ್ಲಿ ಸಾವಿರಾರು ವಿದ್ಯಾರ್ಥಿಗಳು ಶಿಕ್ಷಣ ಪಡೆದು ದೇಶ ಸೇರಿದಂತೆ ರಾಜ್ಯದ ಮೂಲೆ ಮೂಲೆಯಲ್ಲಿ ಉನ್ನತ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ: Akshaya Tritiya 2024: ಅಕ್ಷಯ ತೃತೀಯದಂದು ಬಂಗಾರ ಖರೀದಿಸುವವರಿಗೆ ಇಲ್ಲಿದೆ ಉಪಯುಕ್ತ ಟಿಪ್ಸ್‌

ಇನ್ಪೋಸಿಸ್ ಫೌಂಡೇಶನ್‌ ಮುಖ್ಯಸ್ಥೆ ಡಾ. ಸುಧಾಮೂರ್ತಿ ಅವರ ಸಲಹೆಯಂತೆ ಕಳೆದ 17 ವರ್ಷಗಳಿಂದಲೂ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ನಡೆಸಿಕೊಂಡು ಬಂದಿದ್ದು, ಸುಮಾರು 800ಕ್ಕೂ ಹೆಚ್ಚು ವಿವಾಹಗಳು ನಡೆದಿದೆ. ಇದರಿಂದ ಸಾಕಷ್ಟು ಬಡ ಕುಟುಂಬಗಳಿಗೆ ಅನುಕೂಲವಾಗಿದೆ ಎಂದರು.

ಶ್ರೀಮದ್ ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕಾ ಡಾ.ವೀರಸೋಮೇಶ್ವರ ರಾಜದೇಶಿಕೇಂದ್ರ ಭಗವತ್ಪಾದರ ದಿವ್ಯ ಸಾನಿಧ್ಯದಲ್ಲಿ ಮತ್ತು ಸಿದ್ದರಬೆಟ್ಟದ ಶ್ರೀಮಠದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ನೇತೃತ್ವದಲ್ಲಿ 18ನೇ ವಾರ್ಷಿಕೋತ್ಸವ, ಶ್ರೀ ಜಗದ್ಗುರು ರೇಣುಕಾಚಾರ್ಯರ ಮತ್ತು ಜಗಜ್ಯೋತಿ ಶ್ರೀ ಬಸವೇಶ್ವರರ ಜಯಂತ್ಯೋತ್ಸವ, ಉಚಿತ ಸಾಮೂಹಿಕ ವಿವಾಹ, ಜನಜಾಗೃತಿ ಧರ್ಮ ಸಮಾವೇಶ ನಡೆಯಲಿದೆ ಎಂದು ಹೇಳಿದರು.

ಇದನ್ನೂ ಓದಿ: Karnataka Weather : ಹಾಸನ, ಚಿಕ್ಕಮಗಳೂರಲ್ಲಿ ಆಲಿಕಲ್ಲು ಸಹಿತ ಭಾರಿ ಮಳೆ; ನಾಳೆ ಬಿರುಗಾಳಿ ಎಚ್ಚರಿಕೆ

ಈ ಸಂದರ್ಭದಲ್ಲಿ ತುಮಕೂರು ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ಮೋಹನ್‌ ಕುಮಾರ್, ತಾಲೂಕು ಉಪಾಧ್ಯಕ್ಷ ಶಿವಕುಮಾರ್, ಕಾರ್ಯದರ್ಶಿ ನಾಗರಾಜು, ಮಹಿಳಾ ಘಟಕದ ಅಧ್ಯಕ್ಷೆ ಗೀತಾ ನಾಗರಾಜು, ಬಿಜೆಪಿ ಮಂಡಲದ ತಾಲೂಕು ಅಧ್ಯಕ್ಷ ದರ್ಶನ್, ಪರ್ವತಯ್ಯ ಸೇರಿದಂತೆ ಮಠದ ಭಕ್ತರು ಹಾಜರಿದ್ದರು.

Continue Reading
Advertisement
Pune
ದೇಶ3 hours ago

ಹಾಸ್ಟೆಲ್‌ ಬಾತ್‌ರೂಮ್‌ನಲ್ಲಿ ತೆಗೆದ ನೂರಾರು ಯುವತಿಯರ ಬೆತ್ತಲೆ ವಿಡಿಯೊಗಳನ್ನು ಬಾಯ್‌ಫ್ರೆಂಡ್‌ಗೆ ಕಳುಹಿಸಿದ ಯುವತಿ!

ಉತ್ತರ ಕನ್ನಡ3 hours ago

Bheemanna Naik: ಶಿರಸಿ ಶಾಸಕ ಭೀಮಣ್ಣ ನಾಯ್ಕ್‌ ಮೇಲೆ ಜೇನು ದಾಳಿ; ಆಸ್ಪತ್ರೆಗೆ ದಾಖಲು

Kulgam
ದೇಶ3 hours ago

Kulgam: ಕಾಶ್ಮೀರದಲ್ಲಿ ಸೇನೆ ಭರ್ಜರಿ ಬೇಟೆ; ಮತ್ತೊಬ್ಬ ಉಗ್ರನ ಎನ್‌ಕೌಂಟರ್‌, 2 ದಿನದಲ್ಲಿ 3ನೇ ಬಲಿ

ವಿಸ್ತಾರ ಗ್ರಾಮದನಿ Vistara Gramadaani
ಕರ್ನಾಟಕ4 hours ago

ವಿಸ್ತಾರ ಗ್ರಾಮ ದನಿ: ಗ್ರಾಮೀಣ ಪ್ರದೇಶದಲ್ಲೇ ಹೆಚ್ಚು ಮತದಾನ, SSLC ಫಲಿತಾಂಶದಂತೆ!

LSG vs SRH
ಕ್ರೀಡೆ4 hours ago

LSG vs SRH: ಹೆಡ್, ಅಭಿಷೇಕ್ ಬ್ಯಾಟಿಂಗ್​ ಸುಂಟರಗಾಳಿಗೆ ತತ್ತರಿಸಿದ ಲಕ್ನೋ; 10 ವಿಕೆಟ್​ ಹೀನಾಯ ಸೋಲು

Hindu Girl
ದೇಶ4 hours ago

Hindu Girl: ಹಿಂದು ಬಾಲಕಿಯ ಅತ್ಯಾಚಾರಗೈದು, ಇಸ್ಲಾಂ ಪಾಲಿಸುವಂತೆ ಒತ್ತಾಯ; ಇಬ್ರಾಹಿಂ ವಿರುದ್ಧ ಕೇಸ್

Monty Panesar
ಕ್ರಿಕೆಟ್5 hours ago

Monty Panesar: ರಾಜಕೀಯಕ್ಕೆ ಎಂಟ್ರಿ ಕೊಟ್ಟು ಒಂದೇ ವಾರದಲ್ಲಿ ಗುಡ್​ ಬೈ ಹೇಳಿದ ಇಂಗ್ಲೆಂಡ್​ ಸ್ಪಿನ್ನರ್

Murder Case
ಕರ್ನಾಟಕ5 hours ago

Murder Case: ಶಿವಮೊಗ್ಗದಲ್ಲಿ ಗ್ಯಾಂಗ್ ವಾರ್; ಹಾಡಹಗಲೇ ಇಬ್ಬರು ರೌಡಿಶೀಟರ್‌ಗಳ ಭೀಕರ ಹತ್ಯೆ

Virat Kohli
ಕ್ರೀಡೆ5 hours ago

Virat Kohli: ಪಂಜಾಬಿ ಮಾತನಾಡಿದ ವಿರಾಟ್​ ಕೊಹ್ಲಿ; ವಿಡಿಯೊ ವೈರಲ್​

Poonch Terrorists
ದೇಶ5 hours ago

Poonch Terrorists: ಪೂಂಚ್‌ನಲ್ಲಿ ಸೇನೆ ಮೇಲೆ ದಾಳಿ ಮಾಡಿದ 3 ಉಗ್ರರ ಫೋಟೊ ರಿಲೀಸ್; ಹತ್ಯೆಗೆ ಪ್ಲಾನ್!

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ22 hours ago

Dina Bhavishya : ಅಮಾವಾಸ್ಯೆ ದಿನ ಈ ರಾಶಿಯವರಿಗೆ ಅದೃಷ್ಟ; ಹಣ ಗಳಿಕೆಗೆ ಪುಷ್ಟಿ

Prajwal Revanna Case HD Revanna has severe chest pain Admission in Victoria
ರಾಜಕೀಯ1 day ago

Prajwal Revanna Case: ಎಚ್.ಡಿ. ರೇವಣ್ಣಗೆ ಹೆಚ್ಚಾದ ಎದೆ ನೋವು; ಸಲೈನ್‌ ಹಾಕಿ ಕಳಿಸಿದ ವೈದ್ಯರು

Karnataka Weather Forecast
ಮಳೆ1 day ago

Karnataka Weather : ಹಾಸನ, ಚಿಕ್ಕಮಗಳೂರಲ್ಲಿ ಆಲಿಕಲ್ಲು ಸಹಿತ ಭಾರಿ ಮಳೆ; ನಾಳೆ ಬಿರುಗಾಳಿ ಎಚ್ಚರಿಕೆ

Prajwal Revanna Case Government work against Revanna HD Kumaraswamy gives details of the case
ರಾಜಕೀಯ1 day ago

Prajwal Revanna Case: ರೇವಣ್ಣರಿಗೆ ಖೆಡ್ಡಾ ತೋಡಿದ್ದು ಸರ್ಕಾರ; ಎಲ್ಲೆಲ್ಲಿ ಏನೇನು ಮಾಡಲಾಯಿತೆಂಬ ಇಂಚಿಂಚು ಡಿಟೇಲ್ಸ್‌ ಕೊಟ್ಟ ಎಚ್‌ಡಿಕೆ!

Prajwal Revanna Case 2nd accused in KR Nagar victim abduction case sent to SIT custody Trouble for Revanna
ಕ್ರೈಂ2 days ago

Prajwal Revanna Case: ಕೆ.ಆರ್.‌ ನಗರ ಸಂತ್ರಸ್ತೆ ಕಿಡ್ನ್ಯಾಪ್‌ ಕೇಸ್‌ನ 2ನೇ ಆರೋಪಿ SIT ಕಸ್ಟಡಿಗೆ; ರೇವಣ್ಣಗೆ ಸಂಕಷ್ಟ?

karnataka weather forecast
ಮಳೆ2 days ago

Karnataka Weather : ಬೆಂಗಳೂರು ಸೇರಿ ಹಲವೆಡೆ ಮತ್ತೆ ಅಬ್ಬರಿಸುತ್ತಿರುವ ಮಳೆ; ಇನ್ನೊಂದು ವಾರ ಅಲರ್ಟ್‌

Prajwal Revanna Case DK Shivakumar behind Prajwal video leak Devaraje Gowda demands CBI probe
ಕ್ರೈಂ2 days ago

Prajwal Revanna Case: ಪ್ರಜ್ವಲ್‌ ವಿಡಿಯೊ ಲೀಕ್‌ ಹಿಂದೆ ಇರೋದು ಡಿಕೆಶಿ; ದಾಖಲೆ ತೋರಿಸಿ, ಸಿಬಿಐಗೆ ಕೇಸ್‌ ವಹಿಸಲು ದೇವರಾಜೇಗೌಡ ಆಗ್ರಹ

Dina bhavishya
ಭವಿಷ್ಯ3 days ago

Dina Bhavishya : ಈ ರಾಶಿಯವರಿಗೆ ಇಂದು ಹುಡುಕಿಕೊಂಡು ಬರಲಿವೆ ಹೊಸ ಅವಕಾಶಗಳು

Prajwal Revanna Case HD Revanna sent to judicial custody Shift to Parappana Agrahara
ಕ್ರೈಂ3 days ago

Prajwal Revanna Case: ಎಸ್‌ಐಟಿ ಕಸ್ಟಡಿಗೆ ಮಾಜಿ ಸಚಿವ ಎಚ್‌.ಡಿ. ರೇವಣ್ಣ; ಮತ್ತೆ ತೀವ್ರ ವಿಚಾರಣೆ

Prajwal Revanna Case No evidence against me its a conspiracy says HD Revanna
ಕರ್ನಾಟಕ3 days ago

Prajwal Revanna Case: ನನ್ನ ವಿರುದ್ಧ ಯಾವುದೇ ಸಾಕ್ಷಿಗಳಿಲ್ಲ, ಇದೊಂದು ಷಡ್ಯಂತ್ರ: ಎಚ್‌.ಡಿ. ರೇವಣ್ಣ ಫಸ್ಟ್‌ ರಿಯಾಕ್ಷನ್‌!

ಟ್ರೆಂಡಿಂಗ್‌