Food Habit | ಹಸಿದ ಹೊಟ್ಟೆಗೆ ಈ ಆಹಾರಗಳು ಬೇಡವೇ ಬೇಡ! - Vistara News

ಆರೋಗ್ಯ

Food Habit | ಹಸಿದ ಹೊಟ್ಟೆಗೆ ಈ ಆಹಾರಗಳು ಬೇಡವೇ ಬೇಡ!

ಹಸಿವಾದಾಗ ಕೈಗೆ ಸಿಕ್ಕಿದ ಆಹಾರ ತಿಂದು, ಹೊಟ್ಟೆ ನಿನ್ನಿಂದ ನಾ ಕೆಟ್ಟೆ ಎನ್ನಬೇಡಿ! ಹಾಗಾದರೆ ಯಾವಾಗ ಯಾವ ಆಹಾರ ತಿನ್ನಬೇಕು? ಈ ಲೇಖನ ಓದಿ.

VISTARANEWS.COM


on

Food Habit
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಹೊಟ್ಟೆ, ನಿನ್ನಿಂದ ನಾ ಕೆಟ್ಟೆ ಎಂದು ಗೋಳಾಡುವ ಸಂದರ್ಭಗಳು ಎಲ್ಲರಿಗೂ ಒಂದಲ್ಲಾ ಒಂದು ಬಾರಿ ಬಂದೇ ಇರುತ್ತದೆ. ತಿಂದ ಆಹಾರ ಅನಿರೀಕ್ಷಿತವಾಗಿ ಹೊಟ್ಟೆಯನ್ನು ಹಾಳು ಮಾಡುವುದಿದೆ. ಕೊನೆಗೆ ಎದುರಾಗುವ ಹೊಟ್ಟೆನೋವು, ವಾಂತಿ, ಡಯರಿಯಾಗಳನ್ನು ನಿಯಂತ್ರಿಸಲು ವೈದ್ಯರ ಮೊರೆ ಹೋಗಬೇಕಾಗುತ್ತದೆ. ʻಕಳೆದ ಬಾರಿ ತಿಂದಾಗ ಏನೂ ಆಗಿರಲಿಲ್ಲ. ಈ ಸಾರಿ ಯಾಕೆ ಹೀಗಾಯ್ತು?ʼ ಎಂದು ಚಿಂತಿಸುವಂತಾಗುತ್ತದೆ. ಅದರಲ್ಲೂ ಹೊಟ್ಟೆ ಹಸಿದಿದ್ದಾಗ ಸಿಕ್ಕಿದ್ದೆಲ್ಲಾ ಮುಕ್ಕಿಬಿಡುವ ಭಾವ ಬರುವುದು ಸಹಜ. ಆದರೆ ಹೆಚ್ಚಿನ ಎಚ್ಚರಿಕೆ ಬೇಕಾಗುವುದೇ ಈ ಹೊತ್ತಿನಲ್ಲಿ. ಹಾಗಾದರೆ ಯಾವೆಲ್ಲಾ ಆಹಾರಗಳನ್ನು ಹಸಿದಾಗ ತಿನ್ನಬಾರದು?

Food Habit

ಹುಳಿ ಹಣ್ಣುಗಳು
ಹುಳಿಯಾದ ದ್ರಾಕ್ಷಿ, ಕಿತ್ತಳೆಯಂಥ ಹಣ್ಣುಗಳು ಹಸಿದ ಹೊಟ್ಟೆಗೆ ಥರವಲ್ಲ. ಇವೆಲ್ಲಾ ಅತ್ಯಂತ ಆರೋಗ್ಯಕರ ಹಣ್ಣುಗಳೇ ಹೌದಾದರೂ, ಹಸಿದಾಗ ಇವುಗಳನ್ನು ತಿಂದರೆ ಅಸಿಡಿಟಿ, ಎದೆಯುರಿಯಂಥ ಸಮಸ್ಯೆಗಳು ಬರಬಹುದು.

Food Habit

ಖಾರ, ಮಸಾಲೆಯುಕ್ತ ಆಹಾರ
ಚೆನ್ನಾಗಿ ಹಸಿದ ಹೊಟ್ಟೆಗೆ ಖಾರ ಸುರಿದರೆ ಅದರ ಸ್ಥಿತಿ ಏನಾಗಬೇಡ! ಅದರಲ್ಲೂ ಬೆಳಗಿನ ತಿಂಡಿಗೆ ಸಿಕ್ಕಾಪಟ್ಟೆ ಮಸಾಲೆಯುಕ್ತ ಆಹಾರ ಖಂಡಿತಾ ಒಳ್ಳೆಯದಲ್ಲ. ದಿನವಿಡೀ ಹುಟ್ಟೆಯುರಿ, ಹುಳಿತೇಗಿನಂಥ ಸಮಸ್ಯೆಗಳು ಕಾಡಬಹುದು. ಬೆಳಗಿನ ಉಪಹಾರದಲ್ಲಿ ಖಾರ ಹಿತಮಿತವಾಗಿರಲಿ.

Food Habit

ಸಿಹಿಯೂ ಸಲ್ಲದು
ಹಸಿದಾಗೊಂದು ಚಾಕೊಲೇಟ್‌ ಬಾರ್‌ ಕೈಗೆ ಸಿಕ್ಕಿದರೆ…ತಿನ್ನದೇ ಇರುವುದಕ್ಕೆ ಎಂಟೆದೆ ಬೇಕು! ಆದರೆ ಹಸಿದಾಗ ಸಿಹಿ ತಿಂಡಿ ತಿನ್ನುವುದರಿಂದ ದೇಹದಲ್ಲಿ ಇನ್ಸುಲಿನ್‌ ಪ್ರಮಾಣದಲ್ಲಿ ತೀಷ್ಣ ಏರಿಕೆಯಾಗುತ್ತದೆ. ಇಂಥ ಅಭ್ಯಾಸದಿಂದ ಯಕೃತ್ತಿಗೆ ಕ್ರಮೇಣ ಹಾನಿಯಾಗಬಹುದು. ಹೊಟ್ಟೆ ತುಂಬಿದ ನಂತರ ಬಾಯಿ ಸಿಹಿ ಮಾಡಿಕೊಳ್ಳಿ, ಅಭ್ಯಂತರವಿಲ್ಲ.

Food Habit

ಸೋಡಾ
ಬೆಳಗಿನ ಖಾಲಿ ಹೊಟ್ಟೆಯಲ್ಲಿ ಸೋಡಾ ಕುಡಿಯುವ ಮಹಾನುಭಾವರೂ ಇದ್ದಾರೆ, ಆತ್ಮಹತ್ಯೆ ಮಾಡಿಕೊಳ್ಳುವವರೂ ಇದ್ದಂತೆ! ಇಡೀ ಜೀರ್ಣಾಂಗದ ಆರೋಗ್ಯವನ್ನು ಹಾಳು ಮಾಡುವುದಕ್ಕೆ ಇಂಥ ಒಂದು ಅಭ್ಯಾಸ ಸಾಕು. ದೇಹದ ಚಯಾಪಚಯ ಕ್ರಿಯೆಯನ್ನು ಅಲ್ಲಾಡಿಸಿಬಿಡುವ ಕೆಲಸವಿದು. ಕಾಫಿ, ಚಹಾಗಳನ್ನೂ ಇದೇ ಸಾಲಿಗೆ ಸೇರಿಸಿ. ಹಸಿದಾಗ ಬೇರೇನೂ ಸಿಗದಿದ್ದರೆ, ಒಂದು ಲೋಟ ಹಾಲು ಸಿಕ್ಕಿದರೂ ಅಮೃತವೇ.

Food Habit

ಹಸಿ ತರಕಾರಿ
ಹುಬ್ಬೇರಿಸಬೇಡಿ, ಎಲ್ಲಾ ಹಸಿ ತರಕಾರಿಗಳೂ ಹಸಿದ ಹೊಟ್ಟೆಗೆ ಸೂಕ್ತವಲ್ಲ. ಸೌತೇಕಾಯಿಯಂಥ ತರಕಾರಿಗಳು ಹಸಿದ ಹೊಟ್ಟೆಯನ್ನು ತಣಿಸಬಹುದು. ಆದರೆ ಕ್ಯಾರೆಟ್‌, ಬೀಟ್ರೂಟ್‌ನಂಥವು ಜೀರ್ಣವಾಗುವುದು ನಿಧಾನವಾಗಬಹುದು.

Food Habit

ಫ್ರೋಜನ್‌ ಆಹಾರ
ಐಸ್‌ ಟೀ, ಕೋಲ್ಡ್‌ ಕಾಫಿ, ಐಸ್‌ಕ್ರೀಂನಂಥವೂ ಹಸಿದ ಹೊಟ್ಟೆಯನ್ನು ಬುಡಮೇಲು ಮಾಡಬಲ್ಲವು. ಕೆಲವೊಮ್ಮೆ ಹುಳಿಯಾದ ಮೊಸರೂ ಸಹ ಹಸಿದ ಹೊಟ್ಟೆಯ ತಾಪತ್ರಯವನ್ನು ಹೆಚ್ಚಿಸುತ್ತದೆ.

ಹಾಗಾದರೆ ಹಸಿದಾಗ ಏನು ತಿನ್ನಬೇಕು ಎಂದು ಕಣ್ಣು ಕೆಂಪಾಗಿಸಬೇಡಿ. ದಾಳಿಂಬೆ, ಪಪ್ಪಾಯ, ಕಲ್ಲಂಗಡಿಯಂಥ ಮೆಲನ್‌ಗಳು, ಒಣಹಣ್ಣು ಮತ್ತು ಬೀಜಗಳು, ಅನ್ನ, ಚಪಾತಿ- ಇಂಥ ಎಲ್ಲಾ ಆಹಾರಗಳೂ ಹಸಿದ ಹೊಟ್ಟೆಯನ್ನು ತಣಿಸಬಲ್ಲವು.

ಇದನ್ನೂ ಓದಿ| Eye health foods | ಕಣ್ಣು ಆರೋಗ್ಯವಾಗಿ ಇರಬೇಕಿದ್ದರೆ ಇವನ್ನೆಲ್ಲ ತಿನ್ನುತ್ತಿರಿ!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಆರೋಗ್ಯ

Health Tips Kannada: ಸನ್‌ಸ್ಕ್ರೀನ್‌ ಕುರಿತು ನಿಮಗೆಷ್ಟು ಗೊತ್ತು?

ಬಿಸಿಲಿಗೆ ಹೊರಗೆ ಹೋಗುವಾಗ ಸನ್‌ಸ್ಕ್ರೀನ್‌ (Sunscreen) ಹಚ್ಚಿಕೊಳ್ಳುವ ಸಲಹೆ ಸಾಮಾನ್ಯವಾಗಿ ಎಲ್ಲರಿಂದ ಬರುತ್ತದೆ. ಆದರೆ ಸೌಂದರ್ಯ ತಜ್ಞರಿಂದ ಬರುವ ಸಲಹೆಗಳಲ್ಲಿ ಬಹಳಷ್ಟನ್ನು ಪಾಲಿಸಲು ಸಾಧ್ಯವಿಲ್ಲ ಎಂದೇ ಭಾವಿಸುತ್ತೇವೆ. ಆದರೆ ಬಿರುಬೇಸಿಗೆಯಲ್ಲಿ ನಿಯಮಿತವಾಗಿ ಸನ್‌ಸ್ಕ್ರೀನ್‌ ಬಳಕೆ ಮಾಡುವುದರಿಂದ ಚರ್ಮ ಸುಟ್ಟು ಕೆಂಪಾಗುವುದು, ಸುಕ್ಕಾಗುವುದು, ಕಪ್ಪು ಕಲೆಗಳು ಬರುವಂಥ ಬಹಳಷ್ಟು ತೊಂದರೆಗಳನ್ನು ತಪ್ಪಿಸಬಹುದು. ಆದರೆ ಈ ಬಗ್ಗೆ ಹಲವಾರು ತಪ್ಪು ತಿಳಿವಳಿಕೆಗಳು ಚಾಲ್ತಿಯಲ್ಲಿವೆ. ಇವು ಏನು ಎಂಬ ಮಾಹಿತಿ (Health Tips Kannada) ಇಲ್ಲಿದೆ.

VISTARANEWS.COM


on

Health Tips Kannada
Koo

ಸನ್‌ಸ್ಕ್ರೀನ್‌ (Sunscreen) ಕುರಿತಾಗಿ ಬಹಳಷ್ಟು ತಪ್ಪು ಕಲ್ಪನೆಗಳು ಚಾಲ್ತಿಯಲ್ಲಿವೆ. ಸೂರ್ಯನ ಬಿಸಿಲಲ್ಲಿರುವ ಅತಿನೇರಳೆ ಕಿರಣಗಳು ಚರ್ಮಕ್ಕೆ ಹಾನಿ ಮಾಡುವುದನ್ನು ತಡೆಗಟ್ಟುವ ಉದ್ದೇಶ ಇದನ್ನು ಬಳಸುವುದರ ಹಿಂದಿದೆ. ತೀವ್ರ ಬಿಸಿಲಿಗೆ ಹೋಗುವಾಗ ಸನ್‌ಬ್ಲಾಕ್‌ ಜೊತೆಗೆ ಉದ್ದ ತೋಳಿನ ವಸ್ತ್ರಗಳನ್ನು ಧರಿಸುವುದು ಇನ್ನೂ ಒಳ್ಳೆಯದು.
ಬಿಸಿಲಿಗೆ ಹೊರಗೆ ಹೋಗುವಾಗ ಸನ್‌ಸ್ಕ್ರೀನ್‌ ಹಚ್ಚಿಕೊಳ್ಳುವ ಸಲಹೆ ಸಾಮಾನ್ಯವಾಗಿ ಎಲ್ಲರಿಂದ ಬರುತ್ತದೆ. ಆದರೆ ಸೌಂದರ್ಯ ತಜ್ಞರಿಂದ ಬರುವ ಸಲಹೆಗಳಲ್ಲಿ ಬಹಳಷ್ಟನ್ನು ಪಾಲಿಸಲು ಸಾಧ್ಯವಿಲ್ಲ ಎಂದೇ ಭಾವಿಸುತ್ತೇವೆ. ಆದರೆ ಬಿರುಬೇಸಿಗೆಯಲ್ಲಿ ನಿಯಮಿತವಾಗಿ ಸನ್‌ಸ್ಕ್ರೀನ್‌ ಬಳಕೆ ಮಾಡುವುದರಿಂದ ಚರ್ಮ ಸುಟ್ಟು ಕೆಂಪಾಗುವುದು, ಸುಕ್ಕಾಗುವುದು, ಕಪ್ಪು ಕಲೆಗಳು ಬರುವಂಥ ಬಹಳಷ್ಟು ತೊಂದರೆಗಳನ್ನು ತಪ್ಪಿಸಬಹುದು. ಆದರೆ ಈ ಬಗ್ಗೆ ಹಲವಾರು ತಪ್ಪು ತಿಳುವಳಿಕೆಗಳು ಚಾಲ್ತಿಯಲ್ಲಿವೆ. ಏನವು ಎಂಬುದನ್ನು (Health Tips Kannada) ನೋಡೋಣ.

Woman hand apply sunscreen

ಮೋಡವಿರುವಾಗ ಸನ್‌ಸ್ಕ್ರೀನ್‌ ಬೇಡ

ಹಾಗೇನಿಲ್ಲ. ಮೋಡವಿರುವಾಗ ಸೂರ್ಯ ಕಾಣುವುದಿಲ್ಲ ಎನ್ನುವುದು ನಿಜವಾದರೂ, ಮೋಡದಡಿಗಿನ ಬಿಸಿಲು ಸಹ ಸಾಕಷ್ಟು ಸುಡುತ್ತದೆ. ತೀರ ಮಳೆ ಬರುವಾಗಿನ ಸಂದರ್ಭವನ್ನು ಹೊರತು ಪಡಿಸಿ, ಮೋಡ ಇರುವಾಗಲೂ ಚರ್ಮ ಸುಡಬಹುದು. ಹಾಗಾಗಿ ಸನ್‌ಸ್ಕ್ರೀನ್‌ ಕ್ರೀಮ್‌, ಸ್ಪ್ರೇ, ಸ್ಟಿಕ್‌ ಮುಂತಾದ ಯಾವುದನ್ನಾದರೂ ಬಳಸುವುದು ಒಳ್ಳೆಯದು.

Woman Putting Sunblock on Back

ಕಪ್ಪು ಬಣ್ಣದವರಿಗೆ ಸನ್‌ಸ್ಕ್ರೀನ್‌ ಬೇಡ

ಬಿಳಿ ಬಣ್ಣದವರ ಚರ್ಮ ಬಿಸಿಲಿಗೆ ಸುಟ್ಟು ಕೆಂಪಾಗುವುದು ಎದ್ದು ಕಾಣುತ್ತದೆ. ಆನಂತರ ಕಪ್ಪಾಗುವುದು ಸಹಜ. ಇದರರ್ಥ ಚರ್ಮದ ಬಣ್ಣ ಕಪ್ಪಾಗಿದ್ದರೆ ಬಿಸಿಲು ಸುಡುವುದಿಲ್ಲ ಎಂದಲ್ಲ, ಸುಟ್ಟಿದ್ದು ಕಾಣುವುದಿಲ್ಲ ಅಷ್ಟೆ. ಕಪ್ಪು ಚರ್ಮದಲ್ಲಿ ಮೆಲನಿನ್‌ ಇರುವುದು ಸ್ವಲ್ಪ ಹೆಚ್ಚು ಎನ್ನುವುದು ನಿಜ. ಆದರೆ ಅವರಿಗೂ ಸನ್‌ಬ್ಲಾಕ್‌ ಬೇಕು. ಯಾವುದೇ ಬಣ್ಣದವರಿಗಾದರೂ ಬಿಸಿಲಿಗೆ ಚರ್ಮ ಸುಡುವುದರಲ್ಲಿ ವ್ಯತ್ಯಾಸವಿಲ್ಲ.

ವಿಟಮಿನ್‌ ಡಿ ಕೊರತೆ

ಸದಾ ಕಾಲ ಸನ್‌ಸ್ಕ್ರೀನ್‌ ಹಚ್ಚಿಕೊಂಡೇ ಇದ್ದರೆ ವಿಟಮಿನ್‌ ಡಿ ಕೊರತೆಯಾಗಬಹುದು ಎಂಬುದು ಹಲವರ ವಾದ. ಆದರೆ ಹಾಗೇನಿಲ್ಲ. 365 ದಿನವೂ ಸನ್‌ಸ್ಕ್ರೀನ್‌ ಹಚ್ಚಿಕೊಂಡಿದ್ದರೆ, ವಿಟಮಿನ್‌ ಡಿ ಉತ್ಪಾದನೆಗೆ ಕೊಂಚ ಹಿನ್ನಡೆ ಆಗುವ ಸಾಧ್ಯತೆ ಇಲ್ಲದಿಲ್ಲ. ಆದರೆ ಸಾಧಾರಣವಾಗಿ ಯಾರೂ ಆ ಪ್ರಮಾಣದಲ್ಲಿ ಸನ್‌ಸ್ಕ್ರೀನ್‌ ಹಚ್ಚಿಕೊಳ್ಳುವುದಿಲ್ಲ.

ಮೇಕಪ್‌ನಲ್ಲಿ ಇರುವಷ್ಟು ಎಸ್‌ಪಿಎಫ್‌ ಸಾಕಾಗುತ್ತದೆ

ಇಲ್ಲ, ಸಾಕಾಗುವುದಿಲ್ಲ. ಬಹಳಷ್ಟು ಬಾರಿ ಮೇಕಪ್‌ಗಳಲ್ಲಿ 30 ಎಸ್‌ಪಿಎಫ್‌ ಸನ್‌ಬ್ಲಾಕ್‌ ಸೇರಿಕೊಂಡಿರುವುದು ಹೌದು. ಆದರೆ ಸನ್‌ಸ್ಕೀನ್‌ನಷ್ಟು ಧಾರಾಳವಾಗಿ ಮೇಕಪ್‌ ಬಳಕೆಯಾಗುವುದಿಲ್ಲ. ಹಾಗಾಗಿ ಇದರಲ್ಲಿರುವ ಸನ್‌ಬ್ಲಾಕ್‌ ನಂಬಿಕೊಳ್ಳುವ ಬದಲು, ಪ್ರತ್ಯೇಕ್ ಸನ್‌ಸ್ಕ್ರೀನ್‌ ಉಪಯೋಗಿಸುವುದು ಉತ್ತಮ.

Woman Applying Sunscreen on Face

ಹೆಚ್ಚು ಎಸ್‌ಪಿಎಫ್‌ ಎಂದರೆ ಹೆಚ್ಚು ರಕ್ಷಣೆ

ಹಾಗಲ್ಲ, ಹೆಚ್ಚಿನ ಎಸ್‌ಪಿಎಫ್‌ ಇದ್ದರೆ ರಕ್ಷಣೆಯ ಪ್ರಮಾಣ ಹೆಚ್ಚು ಎಂದೇನಿಲ್ಲ. ಬದಲಿಗೆ, ಸಮಯ ದೀರ್ಘ ಎಂದಾಗಬಹುದು. ಉದಾ, 30 ಎಸ್‌ಪಿಎಫ್‌ ಇದ್ದರೆ ಎಷ್ಟು ಅತಿನೇರಳೆ ಕಿರಣಗಳನ್ನು ತಡೆಯುತ್ತದೋ 60 ಎಸ್‌ಪಿಎಫ್‌ ಇದ್ದರೆ ಅದರ ದುಪ್ಪಟ್ಟು ಅತಿನೇರಳೆ ಕಿರಣಗಳನ್ನು ತಡೆಯುತ್ತದೆ ಎಂದು ಅರ್ಥವಲ್ಲ. ಇದು ಎಷ್ಟು ದೀರ್ಘ ಕಾಲ ಯುವಿ ಕಿರಣಗಳನ್ನು ತಡೆಯುತ್ತದೆ ಎಂಬುದನ್ನು ಸೂಚಿಸುತ್ತದೆ ಹೊರತು, ಎಷ್ಟು ಶೇಕಡಾ ತಡೆಯುತ್ತದೆ ಎಂದಲ್ಲ.

ವಾಟರ್‌ಪ್ರೂಫ್‌ ಇರುತ್ತದೆ

ಬಹಳಷ್ಟು ಕಂಪೆನಿಗಳು ಹಾಗೆಂದು ಹೇಳಿಕೊಳ್ಳುತ್ತವೆ. ಆದರೆ ವೃತ್ತಿಪರ ಈಜುಗಾರರು ಬಳಸುವಂಥ ಕೆಲವು ವಾಟರ್‌ ರೆಸಿಸ್ಟೆಂಟ್‌ ಸನ್‌ಬ್ಲಾಕ್‌ಗಳ ಹೊರತಾಗಿ, ಸಂಪೂರ್ಣ ವಾಟರ್‌ಪ್ರೂಫ್‌ ಇರುವುದು ಬಹಳ ಕಡಿಮೆ. ಹಾಗಾಗಿ ನೀರು, ಬೆವರು ಮುಂತಾದವುಗಳಿಂದ ಒದ್ದೆಯಾದಾಗ, ಒರೆಸಿದರೆ ಮತ್ತೆ ಸನ್‌ಸ್ಕ್ರೀನ್‌ ಬೇಕಾಗುತ್ತದೆ.

ಇದನ್ನೂ ಓದಿ: Hair Conditioner: ರಾಸಾಯನಿಕ ಹೇರ್‌ ಕಂಡೀಷನರ್‌ ಬಿಡಿ; ಈ 5 ನೈಸರ್ಗಿಕ ಹೇರ್ ಕಂಡೀಷನರ್ ಬಳಸಿ

ಎಲ್ಲರಿಗೂ ಒಂದೇ ಥರದ್ದು ಸಾಕು

ಇದೂ ತಪ್ಪು. ಒಂದೊಂದು ರೀತಿಯ ಚರ್ಮದವರಿಗೆ ಒಂದೊಂದು ರೀತಿಯ ಸನ್‌ ಬ್ಲಾಕ್‌ ಬೇಕಾಗಬಹುದು. ಎಣ್ಣೆ ಚರ್ಮದವರಿಗೆ ಜೆಲ್‌ ಸ್ವರೂಪದ ಸನ್‌ ಬ್ಲಾಕ್‌ಗಳು ಹೆಚ್ಚು ಉಪಯುಕ್ತ. ಇದರಿಂದ ಚರ್ಮದ ಸೂಕ್ಷ್ಮ ರಂಧ್ರಗಳು ಮುಚ್ಚಿಕೊಳ್ಳುವುದಿಲ್ಲ. ಒಣ ಚರ್ಮದವರಿಗೆ ಮಾಯಿಶ್ಚರೈಸರ್‌ ಜೊತೆಗಿರುವ ಸನ್‌ಸ್ಕ್ರೀನ್‌ ಅನುಕೂಲಕರ. ಸೂಕ್ಷ್ಮ ಚರ್ಮದವರು ಬೇಬಿ ಸನ್‌ಬ್ಲಾಕ್‌ ಉಪಯೋಗಿಸುವುದು ಕ್ಷೇಮ.

Continue Reading

ಆರೋಗ್ಯ

Sweat Problem: ದುರ್ಗಂಧದ ಬೆವರಿನ ಸಮಸ್ಯೆಗೆ ಇಲ್ಲಿವೆ ನೈಸರ್ಗಿಕ ಪರಿಹಾರಗಳು!

ಬೆವರಿ ನೀರಾಗಿ ಹರಿದು, ಒದ್ದೆಯಾಗಿ ನೆನೆಯುವುದಷ್ಟೇ ಅಲ್ಲ, ಅಕ್ಕಪಕ್ಕದವರೆಲ್ಲರ ಬೆವರ ಗಂಧವೂ ನಮ್ಮ ಮೂಗಿನ ಹೊಳ್ಳೆಯೊಳಕ್ಕೆ ದಾಳಿ ಮಾಡಿ ಅಲ್ಲಿರುವುದೇ ಕಷ್ಟಸಾಧ್ಯವಾಗುವ ಪರಿಸ್ಥಿತಿ ನಿರ್ಮಾಣ ಮಾಡುತ್ತದೆ. ಬೆವರುವುದು ಸಾಮಾನ್ಯ ಲಕ್ಷಣವೇ ಆದರೂ, ಬೆವರಿನ ದುರ್ಗಂಧ ಖಂಡಿತವಾಗಿಯೂ ಮುಜುಗರ ತರಿಸುವಂಥದ್ದೇ ಆಗಿದೆ. ಇದಕ್ಕೆ (sweat problem) ಏನು ಪರಿಹಾರ?

VISTARANEWS.COM


on

Sweat Problem
Koo

ಬಿರುಬೇಸಿಗೆಯಲ್ಲಿ ಯಾರಿಗೆ ಬೆವರುವುದಿಲ್ಲ ಹೇಳಿ! ಅದರಲ್ಲೂ ತುಂಬಿದ ಬಸ್‌, ಕಿಕ್ಕಿರಿದು ನೆರೆದಿರುವ ಜನಸಂದಣಿಯ ನಡುವೆ ಇರುವುದು ಸುಲಭದ ಮಾತಲ್ಲ. ಬೆವರಿ ನೀರಾಗಿ ಹರಿದು, ಒದ್ದೆಯಾಗಿ ನೆನೆಯುವುದಷ್ಟೇ ಅಲ್ಲ, ಅಕ್ಕಪಕ್ಕದವರೆಲ್ಲರ ಬೆವರ ಗಂಧವೂ ನಮ್ಮ ಮೂಗಿನ ಹೊಳ್ಳೆಯೊಳಕ್ಕೆ ದಾಳಿ ಮಾಡಿ ಅಲ್ಲಿರುವುದೇ ಕಷ್ಟಸಾಧ್ಯವಾಗುವ ಪರಿಸ್ಥಿತಿ ನಿರ್ಮಾಣ ಮಾಡುತ್ತದೆ. ಬೆವರುವುದು ಸಾಮಾನ್ಯ ಲಕ್ಷಣವೇ ಆದರೂ, ಬೆವರಿನ ದುರ್ಗಂಧ ಖಂಡಿತವಾಗಿಯೂ ಮುಜುಗರ ತರಿಸುವಂಥದ್ದೇ ಆಗಿದೆ. ಕೆಲವರಿಗೆ ಕಡಿಮೆ ಬೆವರಿದರೆ, ಇನ್ನೂ ಕೆಲವರಿಗೆ ಬೆವರುವುದೇ ಒಂದು ಸಮಸ್ಯೆ. ಇದಕ್ಕೆ ಕಾರಣಗಳು ಅನೇಕ. ಕೆಲವರ ಆಹಾರಭ್ಯಾಸದಿಂದ ಈ ಸಮಸ್ಯೆ ಕಾಡಿದರೆ, ಇನ್ನೂ ಕೆಲವರಿಗೆ ಬೊಜ್ಜು, ಹೃದಯದ ಸಮಸ್ಯೆ, ಥೈರಾಯ್ಡ್‌ ಸಮಸ್ಯೆ, ಒತ್ತಡ, ಮಧುಮೇಹ, ಮೆನೋಪಾಸ್‌ ಹೀಗೆ ನಾನಾ ಆರೋಗ್ಯ ಸಮಸ್ಯೆಗಳಿಂದಲೂ ಹೀಗಾಗುತ್ತದೆ. ಆದರೆ, ಬೆವರಿನ ದುರ್ಗಂಧದಿಂದ ಪಾರಾಗಲು ಅನೇಕರು ಹಲವು ವಿಧಾನಗಳಿಂದ ಪ್ರಯತ್ನಿಸುತ್ತಾರೆ. ಮಾರುಕಟ್ಟೆಯಲ್ಲಿ ಇದಕ್ಕೆ ಬಗೆಬಗೆಯ ಡಿಯೋಡರೆಂಟ್‌ ಹಾಗೂ ಪರಿಮಳ ದ್ರವ್ಯಗಳ ಮೂಲಕ ಉತ್ತರ ಸಿಗುತ್ತದೆಯಾದರೂ, ಅವೆಲ್ಲ ತಾತ್ಕಾಲಿಕ ಉತ್ತರಗಳಾದುವು. ಕೆಲವು ನೈಸರ್ಗಿಕ ವಿಧಾನಗಳಿಂದ ಬೆವರಿನ ದುರ್ಗಂಧಕ್ಕೆ ಮುಕ್ತಿ ಹಾಡಬಹುದು. ಆ ಕೆಲವು ಉಪಾಯಗಳು (sweat problem) ಇಲ್ಲಿವೆ.

Apple cider vinegar for Fungal Infection Home Remedies

ಆಪಲ್‌ ಸೈಡರ್‌ ವಿನೆಗರ್

ಆಪಲ್‌ ಸೈಡರ್‌ ವಿನೆಗರ್‌ನಲ್ಲಿ ಆಸ್ಟ್ರಿಂಜೆಂಟ್‌ ಗುಣಗಳಿರುವುದರಿಂದ ಇದು ನಮ್ಮ ದೇಹದಲ್ಲಿ ಅತಿಯಾಗಿ ಬೆವರುವುದನ್ನು ತಡೆಯುತ್ತದೆ. ಅಷ್ಟೇ ಅಲ್ಲ ದುರ್ಗಂಧವನ್ನೂ ಕಡಿಮೆ ಮಾಡುತ್ತದೆ. ಇದರ ಆಂಟಿ ಪರ್ಸ್ಪಿರೆಂಟ್‌ ಗುಣಗಳು ಚರ್ಮದ ಮೇಲಿರುವ ಬೆವರಿನ ರಂಧ್ರಗಳನ್ನು ಮುಚ್ಚುವಂತೆ ಮಾಡುವುದರಿಂದ ದೇಹದ ಪಿಎಚ್‌ ಮಟ್ಟ ಸಮತೋಲನ ಕಾಯ್ದುಕೊಳ್ಳುತ್ತದೆ. ಒಂದು ಸಣ್ಣ ಬೌಲ್‌ನಲ್ಲಿ ಆಪಲ್‌ ಸೈಡರ್‌ ವಿನೆಗರ್‌ ಅನ್ನು ಸ್ವಲ್ಪ ತೆಗೆದುಕೊಂಡು ಅದಕ್ಕೆ ನೀರು ಸೇರಿಸಿ. ನಂತರ ಒಂದು ಹತ್ತಿಯನ್ನು ಈ ಮಿಶ್ರಣದಲ್ಲಿ ಮುಳುಗಿಸಿ ತೆಗೆದು ಬೆವರು ಹೆಚ್ಚು ಬರುವ ಜಾಗಗಳಲ್ಲಿ ಹಚ್ಚಿಕೊಳ್ಳಿ. ಇದನ್ನು ನಿತ್ಯವೂ ಬಳಸುವುದರಿಂದ ಬೆವರಿನ ಸಮಸ್ಯೆ ಕಡಿಮೆಯಾಗಬಹುದು.

Baking soda for Fungal Infection Home Remedies

ಬೇಕಿಂಗ್‌ ಸೋಡಾ

ಕೇವಲ ಕೇಕ್‌ಗಷ್ಟೇ ಬೇಕಿಂಗ್‌ ಸೋಡಾದ ಪ್ರಯೋಜನ ಎಂದು ನೀವಂದುಕೊಂಡರೆ ತಪ್ಪಾಗುತ್ತದೆ. ಇದಕ್ಕೆ ಕೆಟ್ಟವಾಸನೆಯನ್ನು ಹೀರಿಕೊಳ್ಳುವ ಒಂದು ಅದ್ಭುತ ಗುಣವಿದೆ. ಹಾಗಾಗಿ ಇದು ನೈಸರ್ಗಿಕವಾದ ಡಿಯೋಡರೆಂಟ್.‌ ಇದು ಆಲ್ಕಲೈನ್‌ ಗುಣಗಳನ್ನು ಹೊಂದಿರುವುದರಿಂದ ದೇಹದ ಬೆವರಿನ ಆಮ್ಲೀಯ ಗುಣಗಳನ್ನು ಸಮತೋಲನಗೊಳಿಸಿ ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತದೆ. ಸ್ವಲ್ಪ ಬೇಕಿಂಗ್‌ ಸೋಡಾವನ್ನು ತೆಗೆದುಕೊಂಡು ಅದನ್ನು ಹೆಚ್ಚು ಬೆವರಿನ ಸಮಸ್ಯೆಯಿರುವ ದೇಹದ ಭಾಗಗಳಿಗೆ ಹಚ್ಚಿಕೊಳ್ಳಿ. ರಾತ್ರಿ ಮಲಗುವ ಸಂದರ್ಭ ಇದನ್ನು ಹಚ್ಚಿಕೊಂಡು ಬೆಳಗ್ಗೆ ತೊಳೆಯಿರಿ. ಹೀಗೆ ಕೆಲದಿನಗಳ ಕಾಲ ಮಾಡುತ್ತಾ ಬಂದರೆ, ನಿಮ್ಮ ಬೆವರಿನ ಸಮಸ್ಯೆ ಕಡಿಮೆಯಾಗುವುದು.

ತೆಂಗಿನೆಣ್ಣೆ ಹಾಗೂ ಕರ್ಪೂರ

ಕರ್ಪೂರ ಹಾಗೂ ತೆಂಗಿನೆಣ್ಣೆ ಇವೆರಡು ನಮ್ಮ ದೇಹದ ಬೆವರಿನ ಸಮಸ್ಯೆಗೆ ಅತ್ಯದ್ಭುತ ಪರಿಹಾರವನ್ನು ನೀಡುತ್ತದೆ. ತೆಂಗಿನೆಣ್ಣೆಯಲ್ಲಿ ಲಾರಿಕ್‌ ಆಸಿಡ್‌ ಇರುವುದರಿಂದ ಇದು ಬ್ಯಾಕ್ಟೀರಿಯಾವನ್ನು ನಾಶಪಡಿಸಲು ಸಹಾಯ ಮಾಡುತ್ತದೆ. ಹೀಗಾಗಿ ಬೆವರಿನ ದುರ್ಗಂಧಕ್ಕೆ ಕಾರಣವಾಗುವ ಬ್ಯಾಕ್ಟೀರಿಯಾಗಳು ನಾಶವಾಗುತ್ತದೆ. ಒಂದೆರಡು ಕರ್ಪೂರವನ್ನು ಸ್ವಲ್ಪ ತೆಂಗಿನೆಣ್ಣೆಯಲ್ಲಿ ಬೆರೆಸಿ ಅದನ್ನು ಬೆವರಿನ ಸಮಸ್ಯೆಯ ಭಾಗಗಳಿಗೆ ಹಚ್ಚಬಹುದು. ಈ ಎಣ್ಣೆ ದೇಹದ ಚರ್ಮದ ಮೇಲೆ ಒಂದು ಲಘುವಾದ ಘಮದೊಂದಿಗೆ ಇದ್ದು ಬೆವರಿನ ದುರ್ಗಂಧಕ್ಕೆ ಮುಕ್ತಿ ನೀಡುತ್ತದೆ.

Black and green tea

ಬ್ಲ್ಯಾಕ್‌ ಟೀ

ಬ್ಲ್ಯಾಕ್‌ ಟೀಯಲ್ಲಿ ಆಂಟಿ ಪರ್ಸ್ಪಿರೆಂಟ್‌ ಗುಣಗಳಿರುವುದರಿಂದ ಇದೂ ಕೂಡಾ ಆಪಲ್‌ ಸೈಡರ್‌ ವಿನೆಗರ್‌ನಂತೆಯೇ ವರ್ತಿಸುತ್ತದೆ. ದೇಹದ ಬೆವರುಗ್ರಂಥಿಗಳ ಮೇಲೆ ಒಂದು ಪದರದಂತೆ ನಿಂತು ಬೆವರಿನ ಸಮಸ್ಯೆ ಕಡಿಮೆ ಮಾಡುತ್ತದೆ. ಬ್ಯ್ಲಾಕ್‌ ಟೀಯನ್ನು ಹೆಚ್ಚು ಬೆವರಿನ ಜಾಗಗಳಲ್ಲಿ ಹಚ್ಚುವ ಮೂಲಕ ಇದರ ಪ್ರಯೋಜನ ಪಡೆಯಬಹುದು.

Aloe vera leaf and aloevera gel on wood table

ಆಲೊವೆರಾ ಜೆಲ್

ಆಲೋವೆರಾ ಜೆಲ್‌ ತನ್ನ ಕೂಲಿಂಗ್‌ ಗುಣಗಳ ಮೂಲಕ ಚರ್ಮದ ಎಲ್ಲ ಬಗೆಯ ಸಮಸ್ಯೆಗಳಿಗೂ ಉತ್ತರ ನೀಡುತ್ತದೆ. ಬೆವರಿನ ಸಮಸ್ಯೆಯಿರುವ ಮಂದಿಯೂ ಆಲೊವೆರಾ ಜೆಲ್‌ ಅನ್ನು ಅತಿಯಾಗಿ ಬೆವರುವ ಜಾಗಗಳಲ್ಲಿ ಹಚ್ಚುವ ಮೂಲಕ ಪ್ರಯೋಜನ ಪಡೆಯಬಹುದು.

ಇದನ್ನೂ ಓದಿ: Eye Care Tips: ಕಣ್ಣಿನ ಸುಸ್ತಿಗೆ ನೀವು ಇಷ್ಟಾದರೂ ಮಾಡಿ, ಕಣ್ಣಿಗೆ ಅಗತ್ಯ ವಿಶ್ರಾಂತಿ ನೀಡಿ!

Continue Reading

ಆರೋಗ್ಯ

Eye Care Tips: ಕಣ್ಣಿನ ಸುಸ್ತಿಗೆ ನೀವು ಇಷ್ಟಾದರೂ ಮಾಡಿ, ಕಣ್ಣಿಗೆ ಅಗತ್ಯ ವಿಶ್ರಾಂತಿ ನೀಡಿ!

ಕಣ್ಣು ನಮ್ಮ ದೇಹದ ಅತ್ಯಂತ ಮುಖ್ಯವಾದ ಅಂಗಗಳಲ್ಲಿ ಒಂದು. ಕಣ್ಣಿನ ಸೌಂದರ್ಯ ಹಾಗೂ ಆರೋಗ್ಯವೂ ಕೂಡ ನಮ್ಮ ಕೈಯಲ್ಲೇ ಇದೆ. ಕಣ್ಣನ್ನು ಆರೋಗ್ಯವಾಗಿ ಇಟ್ಟುಕೊಳ್ಳುವಲ್ಲಿ, ಕಣ್ಣಿಗೆ ಸೂಕ್ತ ವಿಶ್ರಾಂತಿ ನೀಡುವಲ್ಲಿ ನಾವು ಅತ್ಯಂತ ನಿರ್ಲಕ್ಷ್ಯ ಮಾಡುತ್ತೇವೆ. ಕಣ್ಣಿಗೆ ಬೇಕಾದ ವಿಶ್ರಾಂತಿ ನೀಡದೆ, ಅದಕ್ಕೆ ನಿರಂತರ ಕೆಲಸ ನೀಡುತ್ತೇವೆ. ದುಡಿದು ಸುಸ್ತಾದ ದೇಹಕ್ಕೆ ಕಣ್ಣಿನಿಂದ ಮಾಡಬಹುದಾದ ಕೆಲಸವನ್ನೇ ಮಾಡು ವಿಶ್ರಾಂತಿ ಎನ್ನುತ್ತೇವೆ. ಆದರೆ ಕಣ್ಣಿಗೆ, ಮಿದುಳಿಗೆ ವಿಶ್ರಾಂತಿ ಸಿಕ್ಕಿರುವುದಿಲ್ಲ. ಅದಕ್ಕಾಗಿಯೇ ಕಣ್ಣಿನ ಕಾಳಜಿಯನ್ನು ನಾವು ಆಗಾಗ ಮಾಡಬೇಕು. ಈ ಕುರಿತು ಇಲ್ಲಿದೆ (Eye Care Tips) ಆರೋಗ್ಯ ಮಾಹಿತಿ.

VISTARANEWS.COM


on

Eye Care Tips
Koo

ಸೌಂದರ್ಯವು ನೋಡುಗರ ಕಣ್ಣಿನಲ್ಲಿದೆ ನಿಜ. ಆದರೆ ಕಣ್ಣುಗಳಿಗೇ ಬಹಳ ಸುಸ್ತಾದರೆ ಯಾವ ಸೌಂದರ್ಯವೂ ಕಣ್ಣಿಗೆ ಕಾಣದು. ಯಾಕೆಂದರೆ ಕಣ್ಣು ನಮ್ಮ ದೇಹದ ಅತ್ಯಂತ ಮುಖ್ಯವಾದ ಅಂಗಗಳಲ್ಲಿ ಒಂದು. ಕಣ್ಣಿನ ಸೌಂದರ್ಯ ಹಾಗೂ ಆರೋಗ್ಯವೂ ಕೂಡಾ ನಮ್ಮ ಕೈಯಲ್ಲೇ ಇದೆ. ಕಣ್ಣನ್ನು ಆರೋಗ್ಯವಾಗಿ ಇಟ್ಟುಕೊಳ್ಳುವಲ್ಲಿ, ಕಣ್ಣಿಗೆ ಸೂಕ್ತ ವಿಶ್ರಾಂತಿ ನೀಡುವಲ್ಲಿ ನಾವು ಅತ್ಯಂತ ನಿರ್ಲಕ್ಷ್ಯ ಮಾಡುತ್ತೇವೆ. ಕಣ್ಣಿಗೆ ಬೇಕಾದ ವಿಶ್ರಾಂತಿ ನೀಡದೆ, ಅದಕ್ಕೆ ನಿರಂತರ ಕೆಲಸ ನೀಡುತ್ತೇವೆ. ದುಡಿದು ಸುಸ್ತಾದ ದೇಹಕ್ಕೆ ಕಣ್ಣಿನಿಂದ ಮಾಡಬಹುದಾದ ಕೆಲಸವನ್ನೇ ಮಾಡು ವಿಶ್ರಾಂತಿ ಎನ್ನುತ್ತೇವೆ. ಆದರೆ, ಕಣ್ಣಿಗೆ, ಮಿದುಳಿಗೆ ವಿಶ್ರಾಂತಿ ಸಿಕ್ಕಿರುವುದಿಲ್ಲ. ಅದಕ್ಕಾಗಿಯೇ ಕಣ್ಣಿನ ಕಾಳಜಿಯನ್ನು ನಾವು ಆಗಾಗ ಮಾಡಬೇಕು. ಅದರಲ್ಲೂ ಬೇಸಿಗೆಯಲ್ಲಿ ಈ ಬಗ್ಗೆ ತುಸು ಹೆಚ್ಚೇ ಗಮನ ನೀಡಬೇಕು. ಬನ್ನಿ, ಕಣ್ಣಿನ ಆರೈಕೆಯನ್ನು ನೀವು ಹೇಗೆಲ್ಲ ಮಾಡಬಹುದು (Eye Care Tips) ಎಂಬ ಸಲಹೆಗಳು ಇಲ್ಲಿವೆ.

Eyes Treatment with Cloth Mask

ತಣ್ಣೀರ ಸಿಂಚನ

ದುಡಿದು ಸುಸ್ತಾಗಿ ಬಂದಾಗ, ಬೆಳಗ್ಗೆ ಎದ್ದ ಕೂಡಲೇ ಅಥವಾ ಕೆಲಸದ ನಡುವೆ ಕಣ್ಣಿಗೆ ಸುಸ್ತೆನಿಸಿದಾಗ ಆಗಾಗ ಕಣ್ಣಿಗೆ ತಣ್ಣೀರ ಸಿಂಚನ ಮಾಡಿ. ನಳ್ಳಿಯ ನೀರು ತಿರುಗಿಸಿ ಕಣ್ಣಿಗೆ ಚಿಮುಕಿಸಿ. ಹಾಯೆನಿಸುತ್ತದೆ. ಅಥವಾ, ಒಂದು ಕೋಲ್ಡ್‌ ಪ್ಯಾಡನ್ನು ಫ್ರಿಜ್‌ನಲ್ಲಿಟ್ಟುಕೊಂಡಿರಿ. ಅದನ್ನು ತೆಗೆದು ಕಣ್ಣಿನ ಮೇಲೆ ಇಟ್ಟುಕೊಳ್ಳಬಹುದು. ಕೊಂಚ ಕ್ಷಣಗಳ ಈ ನಡೆ ಕೂಡಾ ಕಣ್ಣಿಗೆ ಅಗಾಧ ಚೈತನ್ಯ ತಂದುಕೊಡುತ್ತದೆ.

Aloe vera leaf and aloevera gel on wood table

ಆಲೊವೆರಾ ಜೆಲ್

ಇನ್ನೊಂದು ಬಹಳ ಅದ್ಭುತ ಟಿಪ್ಸ್‌ ಎಂದರೆ, ಕಣ್ಣಿಗೆ ಅಲೊವೆರಾ ಜೆಲ್‌ ಹಚ್ಚುವುದು. ಅಂದರೆ ಕಣ್ಣಿನ ಸುತ್ತಮುತ್ತ ಅಲೊವೆರಾ ಜೆಲ್‌ ಅನ್ನು ನಿತ್ಯವೂ ಹಚ್ಚಿಕೊಳ್ಳುವುದು ಅಭ್ಯಾಸ ಮಾಡಿಕೊಳ್ಳಿ. ಆಲೊವೆರಾದಲ್ಲಿ ತಂಪುಕಾರಕ ಗುಣಗಳಿದ್ದು ಇದು ಕಣ್ಣಿನ ಸುತ್ತಲ ಚರ್ಮದ ಮೇಲೆ ಪದರದಂತೆ ಕಾಯ್ದುಕೊಂಡು ಕಣ್ಣಿನ ಮೇಲೆ ಬೀಳುವ ಸೂರ್ಯನ ಹಾನಿಕಾರಕ ಕಿರಣಗಳಿಂದ ರಕ್ಷಿಸುತ್ತದೆ. ಇದರ ಜೊತೆಗೆ ಆಲೊವೆರಾ ರಸವನ್ನು ಫ್ರೀಜರ್‌ನಲ್ಲಿಟ್ಟು ಅದನ್ನು ಕ್ಯೂಬ್‌ನಂತೆ ಮಾಡಿ ಅದನ್ನು ಸುಸ್ತಾದ ಕಣ್ಣಿನ ಮೇಲೆ ಇಟ್ಟುಕೊಂಡು ಕೊಂಚ ಕಾಲ ಇಟ್ಟುಕೊಂಡು ವಿಶ್ರಾಂತಿ ತೆಗೆದುಕೊಳ್ಳುವುದರಿಂದ ಕಣ್ಣಿಗೆ ಹಾಯೆನಿಸುತ್ತದೆ. ಬಹಳ ಪ್ರಯೋಜನ ಸಿಗುತ್ತದೆ.

Cucumber

ಸೌತೆಕಾಯಿ

ಎಲ್ಲರಿಗೂ ತಿಳಿದಿರುವ ಅತ್ಯಂತ ಫಲಪ್ರದ ಉಪಾಯವೆಂದರೆ ಸೌತೆಕಾಯಿ. ಸೌತೆಕಾಯಿಯಲ್ಲಿರುವ ತಂಫೂಖಾರಕ ಗುಣಗಳು ಕಣ್ಣಿಗೆ ಬಹಳ ಒಳ್ಳೆಯದು. ಇದರಲ್ಲಿ ಹೆಚ್ಚು ನೀರಿನಂಶವೂ ಇರುವುದರಿಂದ ಕಣ್ಣ ಮೇಲೆ ಇಟ್ಟುಕೊಂಡರೆ ತಂಪೆನಿಸುತ್ತದೆ. ಫ್ರಿಡ್ಜ್‌ನಲ್ಲಿಟ್ಟು ತೆಗದೂ ಇದನ್ನು ಸಣ್ಣ ತುಂಡುಗಳನ್ನಾಗಿ ಕತ್ತರಿಸಿ ಕಣ್ಣುಗಳ ಮೇಲಿಡಬಹುದು. ಕಣ್ಣಿನ ಮೇಲಿಟ್ಟು ೧೦ರಿಂದ ೧೫ ನಿಮಿಷ ವಿಶ್ರಾಂತಿ ಪಡೆದು ಎದ್ದರೆ, ರಿಲ್ಯಾಕ್ಸ್‌ ಆಗುತ್ತದೆ. ಕಣ್ಣಿನಲ್ಲಿ ಹೊಸ ಚೈತನ್ಯ ಮೂಡುತ್ತದೆ. ದಣಿದ ಕಣ್ಣುಗಳಿಗೆ ಇದು ದಿವ್ಯೌಷಧ.

Green tea

ಚಹಾ

ಮನೆಯಲ್ಲಿ ಗ್ರೀನ್‌ ಟೀ ಕುಡಿಯುವ ಅಭ್ಯಾಸವಿದ್ದರೆ, ಟೀ ಬ್ಯಾಗ್‌ಗಳನ್ನು ಬಳಸುವ ಅಭ್ಯಾಸವಿದ್ದರೆ ಬ್ಯಾಗುಗಳನ್ನು ಎಸೆಯಬೇಡಿ. ಅದನ್ನು ಬಳಸಿದ ಮೇಲೆ ಅದನ್ನು ಫ್ರಿಡ್ಜ್‌ನಲ್ಲಿಟ್ಟಿರಿ. ಸ್ವಲ್ಪ ನೀರಿನಲ್ಲಿ ಅದ್ದಿ ನಂತರ ಅದನ್ನು ಕಣ್ಣ ಮೇಲೆ ಇಟ್ಟುಕೊಂಡು ಹತ್ತು ನಿಮಿಷ ವಿಶ್ರಾಂತಿ ಪಡೆದರೆ ಕಣ್ಣಿನ ಸುಸ್ತೆಲ್ಲ ಮಾಯ.

rose water

ರೋಸ್‌ ವಾಟರ್

ಏನು ಮಾಡಲು ಸಮಯ ಸಿಗದಿದ್ದರೂ ಇದನ್ನು ಮಾಡಲು ಹೆಚ್ಚು ಸಮಯದ ಅವಶ್ಯಕತೆ ಇಲ್ಲ. ರೋಸ್‌ ವಾಟರ್‌ ಅಥವಾ ಗುಲಾಬಿ ಜಲದ ನಾಲ್ಕೈದು ಬಿಂದುಗಳನ್ನು ಹತ್ತಿಯಲ್ಲಿ ಹಾಕಿ ಅದರಿಂದ ಕಣ್ಣ ಸುತ್ತ ಹಚ್ಚಿಕೊಳ್ಳಿ. ಕೆಲಸದ ನಡುವೆ ಬ್ಯಾಗ್‌ನಲ್ಲೊಂದು ರೋಸ್‌ ವಾಟರ್‌ ಬಾಟಲ್‌ ಇಟ್ಟುಕೊಂಡಿದ್ದರೆ ಅಗತ್ಯ ಬಿದ್ದಾಗ ಕಚೇರಿಯಲ್ಲೂ ಲ್ಯಾಪ್‌ಟಾಪ್‌ ಪರದೆಯನ್ನೇ ನೋಡಿ ಸುಸ್ತಾದಾಗ ಹೀಗೆ ಮಾಡಿಕೊಳ್ಳಬಹುದು.

Continue Reading

ಪ್ರಮುಖ ಸುದ್ದಿ

Corona Virus: ಸಿಂಗಾಪುರದಲ್ಲಿ ಕೋವಿಡ್‌-19 ಹೊಸ ಅಲೆ, ರಾಜ್ಯದಲ್ಲಿ ಅಲರ್ಟ್‌, ಇಂದು ಆರೋಗ್ಯ ಇಲಾಖೆ ಸಭೆ

Corona Virus: ಸಿಂಗಾಪುರದಲ್ಲಿ ಒಂದೇ ವಾರದಲ್ಲಿ 25 ಸಾವಿರ ಕೋವಿಡ್ ಕೇಸ್ ಖಚಿತವಾಗಿದ್ದು, ಇದರಿಂದ ಸಿಲಿಕಾನ್ ಸಿಟಿ ಬೆಂಗಳೂರು ಅಲರ್ಟ್‌ ಆಗಿದೆ. ಇದರ ಜೊತೆಗೆ ಮಹಾರಾಷ್ಟ್ರದಲ್ಲಿಯೂ ಕೋವಿಡ್ ಒಮಿಕ್ರಾನ್ ರೂಪಾಂತರಿ ವೈರಸ್‌ನ 91 ಕೇಸ್‌ ಪತ್ತೆಯಾಗಿವೆ. ಹೀಗಾಗಿ, ಮುನ್ನೆಚ್ಚರಿಕೆ ವಹಿಸಲು ಇಂದು ಕೇಂದ್ರ ಆರೋಗ್ಯ ಇಲಾಖೆಯ ಜೊತೆಗೆ ರಾಜ್ಯ ಆರೋಗ್ಯ ಇಲಾಖೆ ಸಭೆ ನಡೆಯುತ್ತಿದೆ.

VISTARANEWS.COM


on

corona virus wave in singapore
Koo

ಬೆಂಗಳೂರು: ಸಿಂಗಾಪುರದಲ್ಲಿ (Singapore) ಹೊಸ ಕೋವಿಡ್‌- 19 (Covid 19 wave) ಅಲೆ ಪತ್ತೆಯಾಗಿದೆ. ಒಂದೇ ವಾರದಲ್ಲಿ ಕೊರೊನಾ ವೈರಸ್‌ (Corona Virus) ಕೇಸುಗಳ ಸಂಖ್ಯೆ ದ್ವಿಗುಣಗೊಂಡಿದ್ದು, ಮತ್ತೆ ಮಾಸ್ಕ್‌ (Mask) ಧರಿಸಲು ಸಲಹೆ ನೀಡಲಾಗಿದೆ. ರಾಜ್ಯದಲ್ಲೂ ಆರೋಗ್ಯ ಇಲಾಖೆ (Health department) ಅಲರ್ಟ್‌ ಆಗಿದ್ದು, ಪರಿಸ್ಥಿತಿಯನ್ನು ಗಮನಿಸುತ್ತಿದೆ.

ಸಿಂಗಾಪುರದಲ್ಲಿ ಒಂದೇ ವಾರದಲ್ಲಿ 25 ಸಾವಿರ ಕೋವಿಡ್ ಕೇಸ್ ಖಚಿತವಾಗಿದ್ದು, ಇದರಿಂದ ಸಿಲಿಕಾನ್ ಸಿಟಿ ಬೆಂಗಳೂರು ಅಲರ್ಟ್‌ ಆಗಿದೆ. ಇದರ ಜೊತೆಗೆ ಮಹಾರಾಷ್ಟ್ರದಲ್ಲಿಯೂ ಕೋವಿಡ್ ಒಮಿಕ್ರಾನ್ ರೂಪಾಂತರಿ ವೈರಸ್‌ನ 91 ಕೇಸ್‌ ಪತ್ತೆಯಾಗಿವೆ. ಹೀಗಾಗಿ, ಮುನ್ನೆಚ್ಚರಿಕೆ ವಹಿಸಲು ಇಂದು ಕೇಂದ್ರ ಆರೋಗ್ಯ ಇಲಾಖೆಯ ಜೊತೆಗೆ ರಾಜ್ಯ ಆರೋಗ್ಯ ಇಲಾಖೆ ಸಭೆ ನಡೆಯುತ್ತಿದೆ.

ಸಿಂಗಾಪುರದಿಂದ ಬೆಂಗಳೂರು ಹಾಗೂ ಮುಂಬಯಿಗೆ ಆಗಮಿಸುವ ವಿಮಾನಯಾನಿಗಳ ಸಂಖ್ಯೆ ಹೆಚ್ಚು ಇದ್ದು, ಈ ಹಿನ್ನೆಲೆಯಲ್ಲಿ ಮುಂದಿನ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಚರ್ಚೆ ನಡೆಯಲಿದೆ. ಆಯ್ದ ಯಾನಿಗಳ ಆರೋಗ್ಯ ತಪಾಸಣೆ, ಮಾಸ್ಕ್‌ ಧಾರಣೆ ಸೇರಿದಂತೆ ಹಲವು ಕ್ರಮಗಳ ಬಗೆಗೆ ಚರ್ಚಿಸಲಾಗುತ್ತಿದೆ.

ಸಿಂಗಾಪುರದಲ್ಲಿ ಏನಾಗಿದೆ?

ಸಿಂಗಾಪುರದ ಆರೋಗ್ಯ ಸಚಿವ ಓಂಗ್ ಯೆ ಕುಂಗ್, ಸಾರ್ವಜನಿಕ ತಾಣಗಳಲ್ಲಿ ಮುಖವಾಡಗಳನ್ನು ಧರಿಸುವಂತೆ ಸಲಹೆ ನೀಡಿದ್ದಾರೆ. ಸಾಮಾಜಿಕ ನಿರ್ಬಂಧಗಳ ಕುರಿತು ಮಾತನಾಡಿದ ಸಚಿವ ಓಂಗ್, ಸದ್ಯಕ್ಕೆ ಯಾವುದೇ ರೀತಿಯ ಸಾಮಾಜಿಕ ನಿರ್ಬಂಧಗಳ ಯೋಚನೆಯಿಲ್ಲ ಎಂದಿದ್ದಾರೆ. ಏಕೆಂದರೆ ಸಿಂಗಾಪುರದಲ್ಲಿ ಕೋವಿಡ್ -19 ಅನ್ನು ಸ್ಥಳೀಯ ಕಾಯಿಲೆ ಎಂದು ಪರಿಗಣಿಸಲಾಗುತ್ತದೆ.

ಕೋವಿಡ್‌ನ ಹೊಸ ಅಲೆಯ ಪಥವನ್ನು ಸರ್ಕಾರವು ನಿಕಟವಾಗಿ ಗಮನಿಸುತ್ತಿದೆ ಎಂದು ಸಿಂಗಾಪುರದ ಆರೋಗ್ಯ ಸಚಿವಾಲಯ ಹೇಳಿದೆ. ಸಚಿವಾಲಯದ ಪ್ರಕಾರ, ಕೋವಿಡ್ -19 ಪ್ರಕರಣಗಳ ಅಂದಾಜು ಸಂಖ್ಯೆಯು ಹಿಂದಿನ ವಾರದಲ್ಲಿದ್ದ 13,700ರಿಂದ 25,900ಕ್ಕೆ ದ್ವಿಗುಣಗೊಂಡಿದೆ. ಅದೇ ಅವಧಿಯಲ್ಲಿ ಸರಾಸರಿ ದೈನಂದಿನ ಕೋವಿಡ್ -19 ಆಸ್ಪತ್ರೆಗೆ ದಾಖಲು ಕೇಸ್‌ಗಳು 181ರಿಂದ ಸರಿಸುಮಾರು 250ಕ್ಕೆ ಏರಿದೆ ಎಂದು ಸಚಿವಾಲಯ ವರದಿ ಮಾಡಿದೆ.

ಆಸ್ಪತ್ರೆಯ ಹಾಸಿಗೆ ಸಾಮರ್ಥ್ಯವನ್ನು ಸಂರಕ್ಷಿಸಲು, ಸಾರ್ವಜನಿಕ ಆಸ್ಪತ್ರೆಗಳಿಗೆ ತುರ್ತು-ಅಲ್ಲದ ಶಸ್ತ್ರಚಿಕಿತ್ಸೆಗಳನ್ನು ಕಡಿಮೆ ಮಾಡಲು ಮತ್ತು ಸೂಕ್ತವಾದ ರೋಗಿಗಳನ್ನು ಆರೈಕೆ ಸೌಲಭ್ಯಗಳಿಗೆ ವರ್ಗಾಯಿಸಲು ಸೂಚನೆ ನೀಡಲಾಗಿದೆ. “ನಾವು ಅಲೆಯ ಆರಂಭಿಕ ಭಾಗದಲ್ಲಿದ್ದೇವೆ. ಪ್ರಮಾಣ ಸ್ಥಿರವಾಗಿ ಏರುತ್ತಿದೆ” ಎಂದು ಆರೋಗ್ಯ ಸಚಿವ ಓಂಗ್ ಯೆ ಕುಂಗ್ ಹೇಳಿದ್ದಾರೆ.

ಕೋವಾಕ್ಸಿನ್‌ ಲಸಿಕೆ ಪಡೆದವರಿಗೂ ಬಿಗ್‌ ಶಾಕ್‌! ಆಘಾತಕಾರಿ ವರದಿ ಔಟ್‌

ನವದೆಹಲಿ: ಕೊರೋನಾ ವೈರಸ್‌(Corona Virus) ಎದುರಿಸಲು ತೆಗೆದುಕೊಂಡಿರುವ ಕೋವಿಶೀಲ್ಡ್‌(Covishield Vaccine) ಲಸಿಕೆ ಅಡ್ಡಪರಿಣಾಮ(Side Effects) ಹೊಂದಿದೆ ಎಂಬುದು ಬಯಲಾದ ಬೆನ್ನಲ್ಲಿ ಕೋವಾಕ್ಸಿನ್‌ (Covaxin) ತೆಗೆದುಕೊಂಡಿರುವ ಜನ ತಮಗೇನು ಅಪಾಯವಿಲ್ಲ ಎಂದು ನಿರಾಳವಾಗಿದ್ದರು. ಆದರೆ ಇದೀಗ ವರದಿಯೊಂದು ಹೊರಬಿದ್ದಿದ್ದು, ಕೋವಾಕ್ಸಿನ್‌ ಪಡೆದಿರುವ ಜನರಿಗೆ ಬಿಗ್‌ ಶಾಕ್‌ ಕೊಟ್ಟಿದೆ. ಕೋವಾಕ್ಸಿನ್‌ ಲಸಿಕೆಯೂ ಅಡ್ಡಪರಿಣಾಮ ಹೊಂದಿದೆ ಎಂಬುದು ಅಧ್ಯಯನದಲ್ಲಿ ಬಯಲಾಗಿದೆ.

ಇತ್ತೀಚೆಗೆ ಕೋವಿಶೀಲ್ಡ್ ಅನ್ನು ಅಭಿವೃದ್ಧಿಪಡಿಸಿದ ಬ್ರಿಟಿಷ್ ಕಂಪನಿಯಾದ ಅಸ್ಟ್ರಾಜೆನೆಕಾ ಇತ್ತೀಚೆಗೆ ಅಲ್ಲಿನ ನ್ಯಾಯಾಲಯದಲ್ಲಿ ಅದರ ಲಸಿಕೆ ಕೆಲವು ಜನರಲ್ಲಿ ಗಂಭೀರ ಕಾಯಿಲೆಗೆ ಕಾರಣವಾಗಬಹುದು ಎಂದು ಒಪ್ಪಿಕೊಂಡಿತ್ತು. ಇದೀಗ ಅದೇ ರೀತಿ ನಮ್ಮ ದೇಶದಲ್ಲಿ ಭಾರತ್ ಬಯೋಟೆಕ್ ಕಂಪನಿ ಅಭಿವೃದ್ಧಿಪಡಿಸಿರುವ ‘ಕೋವಾಕ್ಸಿನ್’ ಲಸಿಕೆಯ ಅಡ್ಡ ಪರಿಣಾಮಗಳ ಬಗ್ಗೆ ವರದಿ ಬಂದಿದೆ. ಈ ಲಸಿಕೆಯನ್ನು ಪಡೆದ ಸುಮಾರು ಒಂದು ವರ್ಷದ ನಂತರ, ಅದರ ಅಡ್ಡಪರಿಣಾಮಗಳು ಸಾಕಷ್ಟು ಜನರಲ್ಲಿ ಕಂಡುಬಂದಿದೆ ಎಂದು ಹೇಳಲಾಗಿದೆ.

BHU ಅಧ್ಯಯನ ವರದಿಯಲ್ಲಿ ಬಹಿರಂಗ

ಬನಾರಸ್‌ ಹಿಂದೂ ವಿಶ್ವವಿದ್ಯಾಲಯ ನಡೆಸಿದ ಅಧ್ಯಯನದಲ್ಲಿ ಈ ಅಂಶ ಬೆಳಕಿಗೆ ಬಂದಿದ್ದು, ಈ ವರದಿಯ ಪ್ರಕಾರ, ಕೊವಾಕ್ಸಿನ್‌ ತೆಗೆದುಕೊಂಡಿರುವ ಹದಿ ಹರೆಯದವರು ಮತು ಯುವಕರಲ್ಲಿ ಈ ಅಡ್ಡ ಪರಿಣಾಮ ಹೆಚ್ಚಾಗಿ ಕಂಡು ಬಂದಿದೆ. ಈ ಸಂಶೋಧನೆಗಾಗಿ ಒಟ್ಟು 1024 ಜನರನ್ನು ಅಧ್ಯಯನಕ್ಕೆ ಒಳಪಡಿಸಲಾಗಿತ್ತು. ಅವರಲ್ಲಿ 635 ಹದಿಹರೆಯದವರು ಮತ್ತು 391 ಯುವಕರು ಇದ್ದರು. 304 ಹದಿಹರೆಯದವರು ಅಥವಾ ಸುಮಾರು 48 ಪ್ರತಿಶತದಷ್ಟು ಜನರು ಶ್ವಾಸನಾಳದ ಸೋಂಕುಗೆ ತುತ್ತಾಗಿರುವುದು ಅಧ್ಯಯನದಲ್ಲಿ ಬಯಲಾಗಿದೆ.

ಇದನ್ನೂ ಓದಿ: CoWIN Certificates: ಕೋವಿಡ್‌ ಲಸಿಕೆ ಪ್ರಮಾಣಪತ್ರದಲ್ಲಿ ಮೋದಿ ಫೋಟೋ ಔಟ್‌; ಕೇಂದ್ರ ಹೇಳೋದೇನು?

Continue Reading
Advertisement
Hampi Monument falls
ಪ್ರಮುಖ ಸುದ್ದಿ4 mins ago

Hampi Monument: ಹಂಪಿಯಲ್ಲಿ ಭಾರಿ ಮಳೆಗೆ ಕುಸಿದು ಬಿದ್ದ ವಿಜಯನಗರ ಅರಸರ ಕಾಲದ ಕಲ್ಲು ಮಂಟಪ

Lok Sabha Election 2024
ದೇಶ31 mins ago

Lok Sabha Election 2024: ವಿವಿಪ್ಯಾಟ್‌ ಯಂತ್ರವನ್ನೇ ನೆಲಕ್ಕೆಸೆದು ಪುಡಿ ಪುಡಿ ಮಾಡಿದ ಶಾಸಕ; ವಿಡಿಯೋ ವೈರಲ್‌

rajamarga column mangalore flight crash 1
ಅಂಕಣ33 mins ago

ರಾಜಮಾರ್ಗ ಅಂಕಣ: ಅಳಿಸಲಾಗದ ನೋವು ಬಿಟ್ಟು ಹೋದ ಮಂಗಳೂರು ವಿಮಾನ ದುರಂತ!

food poisoning savadatthi
ಬೆಳಗಾವಿ55 mins ago

Food Poisoning: ಜಾತ್ರೆಯಲ್ಲಿ ಪ್ರಸಾದ ಸೇವಿಸಿ 46 ಜನ ಅಸ್ವಸ್ಥ, ಐವರು ಗಂಭೀರ

nanna desha nanna dani column ambedkar jinnah
ಅಂಕಣ1 hour ago

ನನ್ನ ದೇಶ ನನ್ನ ದನಿ ಅಂಕಣ: ಅಂಬೇಡ್ಕರ್, ಮುಸ್ಲಿಂ ಲೀಗ್ ಒತ್ತಾಯಿಸಿದರೂ ಜನಸಂಖ್ಯಾ ವಿನಿಮಯ ಆಗಲಿಲ್ಲ!

Health Tips Kannada
ಆರೋಗ್ಯ2 hours ago

Health Tips Kannada: ಸನ್‌ಸ್ಕ್ರೀನ್‌ ಕುರಿತು ನಿಮಗೆಷ್ಟು ಗೊತ್ತು?

Karnataka Weather Forecast
ಮಳೆ2 hours ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Sweat Problem
ಆರೋಗ್ಯ3 hours ago

Sweat Problem: ದುರ್ಗಂಧದ ಬೆವರಿನ ಸಮಸ್ಯೆಗೆ ಇಲ್ಲಿವೆ ನೈಸರ್ಗಿಕ ಪರಿಹಾರಗಳು!

Dina Bhavishya
ಭವಿಷ್ಯ3 hours ago

Dina Bhavishya : ಈ ರಾಶಿಯವರು ಯಾರೊಂದಿಗೂ ದಿನದ ಮಟ್ಟಿಗೆ ಹಣಕಾಸಿನ ವ್ಯವಹಾರ ಮಾಡಬೇಡಿ

Mobile
ದೇಶ8 hours ago

ಪರೀಕ್ಷೆಗೆ ಓದುವುದು ಬಿಟ್ಟು ಮೊಬೈಲ್‌ನಲ್ಲೇ ತಲ್ಲೀನ; 22 ವರ್ಷದ ಮಗಳನ್ನೇ ಕೊಂದ ತಾಯಿ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Weather Forecast
ಮಳೆ2 hours ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ14 hours ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು19 hours ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

Contaminated Water
ಮೈಸೂರು21 hours ago

Contaminated Water : ಡಿ ಸಾಲುಂಡಿಯಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ ಯುವಕ ಸಾವು

Karnataka Rain
ಮಳೆ2 days ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

Karnataka Rain
ಮಳೆ3 days ago

Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

Karnataka rain
ಮಳೆ3 days ago

Karnataka Rain : ವಿಜಯನಗರದಲ್ಲಿ ಸಿಡಿಲಿಗೆ ಜಾನುವಾರು ಬಲಿ; ಬೆಂಗಳೂರು ಸೇರಿ ಹಲವೆಡೆ ಭಾರಿ ಮಳೆ

Karnataka Rain
ಮಳೆ3 days ago

Karnataka Rain: ಧಾರಾಕಾರ ಮಳೆಗೆ ಕಾಂಪೌಂಡ್ ಕುಸಿದು 4 ಬೈಕ್‌ಗಳು ಜಖಂ; ಮದುವೆ ಮಂಟಪಕ್ಕೆ ನುಗ್ಗಿದ ನೀರು‌

Prajwal Revanna Case JDS calls CD Shivakumar pen drive gang
ರಾಜಕೀಯ4 days ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

Karnataka weather Forecast
ಮಳೆ5 days ago

Karnataka Weather : ಮೈಸೂರು, ಮಂಡ್ಯ ಸೇರಿ ಈ 7 ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಂಭವ

ಟ್ರೆಂಡಿಂಗ್‌