Taliban Rule | ಸಾರ್ವಜನಿಕವಾಗಿ ಕಳ್ಳರ ಕೈ ಕತ್ತರಿಸಿದ ತಾಲಿಬಾನ್ - Vistara News

ಪ್ರಮುಖ ಸುದ್ದಿ

Taliban Rule | ಸಾರ್ವಜನಿಕವಾಗಿ ಕಳ್ಳರ ಕೈ ಕತ್ತರಿಸಿದ ತಾಲಿಬಾನ್

ದರೋಡೆ ಹಾಗೂ ವಿಕೃತಕಾಮದ ಆರೋಪದಲ್ಲಿ ಬಂಧಿತರಾದ ಒಂಬತ್ತು ಮಂದಿಯನ್ನು ಸಾರ್ವಜನಿಕ ಸ್ಟೇಡಿಯಂನಲ್ಲಿ ಅಫಘಾನಿಸ್ತಾನದ ತಾಲಿಬಾನ್‌ ಆಡಳಿತ ಶಿಕ್ಷಿಸಿದೆ. ಇದರಲ್ಲಿ ನಾಲ್ಕು ಮಂದಿಯ ಕೈಗಳನ್ನು ಕತ್ತರಿಸಿ ಹಾಕಲಾಗಿದೆ.

VISTARANEWS.COM


on

Pakistan Taliban
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಕಂದಹಾರ್:‌ ದರೋಡೆ ಹಾಗೂ ವಿಕೃತಕಾಮದ ಆರೋಪದಲ್ಲಿ ಬಂಧಿತರಾದ ಒಂಬತ್ತು ಮಂದಿಯನ್ನು ಸಾರ್ವಜನಿಕ ಸ್ಟೇಡಿಯಂನಲ್ಲಿ ಅಫಘಾನಿಸ್ತಾನದ ತಾಲಿಬಾನ್‌ ಆಡಳಿತ ಶಿಕ್ಷಿಸಿದೆ. ಇದರಲ್ಲಿ ನಾಲ್ಕು ಮಂದಿಯ ಕೈಗಳನ್ನು ಕತ್ತರಿಸಿ ಹಾಕಲಾಗಿದೆ.

ಕಂದಹಾರ್‌ನ ಅಹ್ಮದ್‌ ಶಾಹಿ ಸ್ಟೇಡಿಯಂನಲ್ಲಿ ಶಿಕ್ಷೆ ಜಾರಿ ಮಾಡಲಾಗಿದೆ ಎಂದು ಸುಪ್ರೀಂ ಕೋರ್ಟ್‌ ಹೇಳಿಕೆ ತಿಳಿಸಿದೆ. ನಾಲ್ಕು ಮಂದಿಯ ಕೈ ಕತ್ತರಿಸಲಾಗಿದ್ದು, ಉಳಿದವರನ್ನು ಮೂರ್ಛೆ ಹೋಗುವವರೆಗೂ ಥಳಿಸಲಾಗಿದೆ. ಬಾರುಕೋಲಿನಲ್ಲಿ 35-39 ಏಟು ನೀಡಲಾಗಿದೆ.

ʼʼಆರೋಪಿಗಳನ್ನು ತಾಲಿಬಾನ್‌ ಆಡಳಿತದಡಿಯಲ್ಲಿ ಯಾವುದೇ ವಿಚಾರಣೆಯಿಲ್ಲದೆ ದಂಡಿಸಲಾಗುತ್ತಿದೆ. ಜನರಿಗೆ ಹೊಡೆತ ಸಾಮಾನ್ಯವಾಗಿದ್ದು, ಕೈಕಾಲು ಕತ್ತರಿಸಲಾಗುತ್ತಿದೆ. ಸಾಯಿಸಲಾಗುತ್ತಿದೆ. ಮಾನವ ಹಕ್ಕುಗಳ ಉಲ್ಲಂಘನೆ ವ್ಯಾಪಕವಾಗಿದೆʼʼ ಎಂದು ಅಫಘಾನಿಸ್ತಾನದ ಮಾಜಿ ರಾಜನೀತಿ ಸಲಹೆಗಾರ್ತಿ ಶಬ್ನಮ್‌ ನಸ್ರಿಮಿ ಆರೋಪಿಸಿದ್ದಾರೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಟೀಕೆಗಳು ವ್ಯಕ್ತವಾಗಿದ್ದರೂ, ಸಾರ್ವಜನಿಕ ಥಳಿಸುವಿಕೆ, ಶಿಕ್ಷೆ ತಾಲಿಬಾನ್‌ ಆಡಳಿತದಲ್ಲಿ ಮುಂದುವರಿದಿದೆ. ವಿಶ್ವಸಂಸ್ಥೆ ಕೂಡ ಇದನ್ನು ಖಂಡಿಸಿದೆ. ʼʼ2022ರ ನವೆಂಬರ್‌ 18ರಿಂದ ಈಚೆಗೆ ಸುಮಾರು 100 ಮಂದಿಯನ್ನು ಸಾರ್ವಜನಿಕವಾಗಿ ಚಾಟಿಯೇಟಿಗೆ ಒಳಪಡಿಸಲಾಗಿದೆ. ಇದರಲ್ಲಿ ಮಹಿಳೆಯರು ಹಾಗೂ ಮಕ್ಕಳೂ ಇದ್ದಾರೆ. ಕಳ್ಳತನ ಸೇರಿದಂತೆ ಹಲವು ಆರೋಪಗಳಡಿ ಇವರಿಗೆ 20ರಿಂದ 100 ಚಾಟಿಯೇಟು ನೀಡಲಾಗಿದೆ. ಅನೈತಿಕ ಸಂಬಂಧ, ಸಾಮಾಜಿಕ ಕಟ್ಟಳೆಗಳ ಉಲ್ಲಂಘನೆ ಹೆಸರಿನಲ್ಲಿ ಹೆಚ್ಚಿನ ಶಿಕ್ಷೆ ನೀಡಲಾಗುತ್ತಿದೆ. ವಿವಾಹದಾಚೆಗಿನ ಸಂಬಂಧ ವ್ಯಾಪಕವಾಗಿದ್ದರೂ, ಶಿಕ್ಷೆ ಮಹಿಳೆಯರಿಗೆ ಮಾತ್ರ ನೀಡಲಾಗುತ್ತಿದೆʼʼ ಎಂದು ವಿಶ್ವಸಂಸ್ಥೆ ಹೇಳಿದೆ.

2022ರ ಡಿಸೆಂಬರ್‌ 7ರಂದು ಫರಾ ನಗರದಲ್ಲಿ ಒಬ್ಬಾತನನ್ನು ಸಾರ್ವಜನಿಕವಾಗಿ ಸಾಯಿಸಲಾಗಿತ್ತು. ಇದು ತಾಲಿಬಾನ್‌ ಆಡಳಿತಕ್ಕೇರಿದ ನಂತರದ ಮೊದಲ ಸಾರ್ವಜನಿಕ ತಲೆದಂಡವಾಗಿದೆ.

ಅಂತಾರಾಷ್ಟ್ರೀಯ ಕಾನೂನುಗಳ ಪ್ರಕಾರ ಇಂಥ ಸಾರ್ವಜನಿಕ ದಂಡನೆಗಳು ಅಮಾನವೀಯ, ಮಾನವ ಘನತೆಗೆ ವಿರೋಧವಾಗಿವೆ. ಇಲ್ಲಿ ನಡೆಯುತ್ತಿರುವ ವಿಚಾರಣೆಗಳ ಪ್ರಾಮಾಣಿಕತೆಯನ್ನು ಪರಿಶೀಲಿಸಬೇಕು ಎಂಬ ಒತ್ತಾಯ ಅಂತಾರಾಷ್ಟ್ರೀಯ ವಲಯದಿಂದ ವ್ಯಕ್ತವಾಗಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಭವಿಷ್ಯ

Dina Bhavishya :‌ ನಂಬಿಕೆ ಇಟ್ಟು ಕಾರ್ಯದಲ್ಲಿ ಮುನ್ನುಗ್ಗಿ ಯಶಸ್ಸು ಗ್ಯಾರಂಟಿ

Dina Bhavishya: ಶ್ರೀ ಶಕೇ 1946, ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜೇಷ್ಠ ಮಾಸ, ಶುಕ್ಲ ಪಕ್ಷದ ಪಾಡ್ಯ ದಿನವಾದ ಇಂದು ದ್ವಾದಶ ರಾಶಿಗಳ ಭವಿಷ್ಯ ಹೇಗಿದೆ ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

VISTARANEWS.COM


on

By

Dina Bhavishya
Koo

ಚಂದ್ರನು ಮಿಥುನ ರಾಶಿಯಿಂದ ಶುಕ್ರವಾರ ಬೆಳಗ್ಗೆ 08:41ಕ್ಕೆ ಕಟಕ ರಾಶಿಯನ್ನು ಪ್ರವೇಶಿಸುತ್ತಾನೆ. ಇದರಿಂದಾಗಿ ಮೇಷ, ಮಿಥುನ, ಸಿಂಹ, ಕನ್ಯಾ, ಧನಸ್ಸು, ಮಕರ ರಾಶಿಯವರಿಗೆ ಚಂದ್ರನ ಬಲ ದೊರೆಯಲಿದೆ. ಇಂದಿನ ದಿನ ಭವಿಷ್ಯವನ್ನು (Dina Bhavishya) ನೋಡುವುದಾದರೆ, ಮೇಷ ರಾಶಿಯವರು ಕುಟುಂಬದಲ್ಲಿ ಕಲಹಗಳಿಗೆ ಅವಕಾಶ ನೀಡದಂತೆ ಎಚ್ಚರಿಕೆ ಇರಲಿ. ವೃಷಭ ರಾಶಿಯವರು ಈ ಹಿಂದೆ ನಡೆದ ಘಟನೆ ನೆನಪಿಸಿ ಕೊರಗುವುದು ಬೇಡ. ಸಹದ್ಯೋಗಿಗಳಿಂದ ಅಸಹಕಾರ. ಕಟಕ ರಾಶಿಯವರು ಅತಿಯಾದ ಉತ್ಸಾಹದಲ್ಲಿ ಅತಿರೇಕದ ಮಾತುಗಳು ಬೇಡ, ಭಾವನೆಗಳನ್ನು ನಿಯಂತ್ರಿಸಿ. ಹಣಕಾಸು ಪ್ರಗತಿ ಸಾಧಾರಣವಾಗಿರಲಿದೆ. ಕುಟುಂಬ ಸದಸ್ಯರ ಬೆಂಬಲ ಸಿಗಲಿದೆ. ಇದೂ ಸೇರಿದಂತೆ ದ್ವಾದಶ ರಾಶಿಗಳ ಇಂದಿನ ಭವಿಷ್ಯ ಹೇಗಿದೆ? ಪಂಚಾಂಗ ಏನು ಹೇಳುತ್ತದೆ ಎಂಬುದನ್ನು ತಿಳಿಯೋಣ.

ಇಂದಿನ ಪಂಚಾಂಗ (kannada panchanga) (7-06-2024)

ಶ್ರೀ ಶಕೇ 1946, ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜೇಷ್ಠ ಮಾಸ, ಶುಕ್ಲ ಪಕ್ಷ.
ತಿಥಿ: ಪಾಡ್ಯ 16:44 ವಾರ: ಶುಕ್ರವಾರ
ನಕ್ಷತ್ರ: ಮೃಗಶಿರಾ 19:41 ಯೋಗ: ಶೂಲ 20:03
ಕರಣ: ಭವ 16:44 ಅಮೃತ ಕಾಲ: ಬೆಳಗ್ಗೆ 11:07 ರಿಂದ 12:41ರವರಗೆ
ದಿನದ ವಿಶೇಷ: ದಶಹರ ವ್ರತಾರಂಭ

ಸೂರ್ಯೋದಯ : 05:53   ಸೂರ್ಯಾಸ್ತ : 06:45

ರಾಹುಕಾಲ : ಬೆಳಗ್ಗೆ 10:42 ರಿಂದ 12:19
ಗುಳಿಕಕಾಲ: ಬೆಳಗ್ಗೆ 07:29 ರಿಂದ 09:06
ಯಮಗಂಡಕಾಲ: ಮಧ್ಯಾಹ್ನ 03:32 ರಿಂದ 05:08

ದ್ವಾದಶ ರಾಶಿ ಭವಿಷ್ಯ (Dina Bhavishya in Kannada)

Horoscope Today

ಮೇಷ:ಆರೋಗ್ಯ ಮಧ್ಯಮವಾಗಿರಲಿದೆ. ಹಣಕಾಸು ಬಾಕಿ ವ್ಯವಹಾರಗಳು ಪೂರ್ಣವಾಗಲಿದೆ. ಸಂಗಾತಿಯ ಆರೋಗ್ಯದ ಕಡೆಗೆ ಗಮನ ಇರಲಿ. ಆಮಂತ್ರಣ ಸಿಗುವ ಸಾಧ್ಯತೆ ಇದೆ. ಕುಟುಂಬದಲ್ಲಿ ಕಲಹಗಳಿಗೆ ಅವಕಾಶ ನೀಡದಂತೆ ಎಚ್ಚರಿಕೆ ಇರಲಿ. ಉದ್ಯೋಗಿಗಳಿಗೆ ಶುಭ ಫಲ. ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 5

Horoscope Today

ವೃಷಭ: ಆರ್ಥಿಕವಾಗಿ ಬಳಲುವ ಸಾಧ್ಯತೆ ಇದೆ. ಬಿಡುವಿರದ ಕಾರ್ಯಕ್ರಮದ ಹೊರತಾಗಿಯೂ ಆರೋಗ್ಯ ಚೆನ್ನಾಗಿರುತ್ತದೆ. ವಾಹನ ಖರೀದಿ ವಿಚಾರವಾಗಿ ಚರ್ಚಿಸುವಿರಿ. ಈ ಹಿಂದೆ ನಡೆದ ಘಟನೆ ನೆನಪಿಸಿ ಕೊರಗುವುದು ಬೇಡ. ಸಹದ್ಯೋಗಿಗಳಿಂದ ಅಸಹಕಾರ. ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 4

Horoscope Today

ಮಿಥುನ: ಇತರರ ವಿರುದ್ಧ ದ್ವೇಷ ಕಾರುತ್ತಾ ನಿಮ್ಮ ಮಾನಸಿಕ ಒತ್ತಡವನ್ನು ಹೆಚ್ಚು ಮಾಡಿಕೊಳ್ಳುವುದು ಬೇಡ. ನಕರಾತ್ಮಕ ಆಲೋಚನೆಗಳು ನಿಮ್ಮನ್ನು ಘಾಸಿ ಮಾಡಬಹುದು. ಆರೋಗ್ಯದ ಕುರಿತು ಕಾಳಜಿ ಇರಲಿ. ಉದ್ಯೋಗಿಗಳಿಗೆ ಶುಭಫಲ. ಆರ್ಥಿಕ ಪ್ರಗತಿ ಸಾಧಾರಣವಾಗಿರಲಿದೆ. ಕೌಟುಂಬಿಕವಾಗಿ ಶುಭಫಲ. ಅದೃಷ್ಟ ಸಂಖ್ಯೆ: 2

Horoscope Today

ಕಟಕ: ಅತಿಯಾದ ಉತ್ಸಾಹದಲ್ಲಿ ಅತಿರೇಕದ ಮಾತುಗಳು ಬೇಡ, ಭಾವನೆಗಳನ್ನು ನಿಯಂತ್ರಿಸಿ. ಹಣಕಾಸು ಪ್ರಗತಿ ಸಾಧಾರಣವಾಗಿರಲಿದೆ. ಕುಟುಂಬ ಸದಸ್ಯರ ಬೆಂಬಲ ಸಿಗಲಿದೆ. ಆರೋಗ್ಯದ ಕುರಿತು ಕಾಳಜಿ ಇರಲಿ. ಗೊತ್ತಿಲ್ಲದಂತೆ ಸಮಯ ವ್ಯರ್ಥವಾಗುವ ಸಾಧ್ಯತೆ ಇದೆ. ಉದ್ಯೋಗಿಗಳಿಗೆ ಶುಭಫಲ. ಕೌಟುಂಬಿಕವಾಗಿ ಮಿಶ್ರಫಲ. ಅದೃಷ್ಟ ಸಂಖ್ಯೆ: 6

Horoscope Today

ಸಿಂಹ: ಆರ್ಥಿಕ ಸಮಸ್ಯೆಯಿಂದಾಗಿ ಒತ್ತಡ ಹೆಚ್ಚಾಗಲಿದೆ. ಹಿರಿಯರ ಮಾರ್ಗದರ್ಶನ ಸಿಗಲಿದೆ. ಪ್ರಭಾವಿ ವ್ಯಕ್ತಿಗಳ ಬೆಂಬಲ, ಸ್ನೇಹ ಸಿಗಲಿದೆ. ವಿವಾಹ ಅಪೇಕ್ಷಿತರಿಗೆ ಕಂಕಣಭಾಗ್ಯ ಕೂಡಿ ಬರುವುದು. ವ್ಯಾಪಾರ-ವ್ಯವಹಾರದಲ್ಲಿ ಸಾಧಾರಣ ಪ್ರಗತಿ ಇರಲಿದೆ. ಆರೋಗ್ಯ ಪರಿಪೂರ್ಣವಾಗಿರಲಿದೆ. ಕೌಟುಂಬಿಕವಾಗಿ ಶುಭಫಲ. ಅದೃಷ್ಟ ಸಂಖ್ಯೆ: 4

Horoscope Today

ಕನ್ಯಾ: ಸಕಾರಾತ್ಮಕ ಆಲೋಚನೆಗಳಿಂದ ಕೆಲಸ ಕಾರ್ಯಗಳಲ್ಲಿ ಯಶಸ್ಸು ಸಿಗಲಿದೆ. ಅನಿವಾರ್ಯ ಕಾರಣಗಳಿಂದ ಖರ್ಚು ಹೆಚ್ಚಾಗಲಿದೆ. ಮನೆಯ ಸದಸ್ಯರ ವರ್ತನೆ ನಿಮ್ಮನ್ನು ಮಾನಸಿಕವಾಗಿ ತೊಂದರೆಗಳಾಗುವಂತೆ ಮಾಡುವ ಸಾಧ್ಯತೆ ಇದೆ. ಪ್ರಯಾಣ ಮಾಡಬೇಕಾಗಿ ಬಹುದು. ಉದ್ಯೋಗಿಗಳಿಗೆ ಶುಭಫಲ. ಕೌಟುಂಬಿಕವಾಗಿ ಸಾಧಾರಣ ಫಲ. ಅದೃಷ್ಟ ಸಂಖ್ಯೆ: 3

ಭವಿಷ್ಯ ಮತ್ತು ಜ್ಯೋತಿಷ್ಯಕ್ಕೆ ಸಂಬಂಧಿಸಿದ ಲೇಖನ/ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ

Horoscope Today

ತುಲಾ: ಆರ್ಥಿಕವಾಗಿ ಬಳಲುವ ಸಾಧ್ಯತೆ ಇದೆ. ಕೆಲಸ ಕಾರ್ಯಗಳು ನಿಧಾನವಾಗಿರಲಿದೆ. ತಾಳ್ಮೆಯಿಂದ ವರ್ತಿಸಿ. ನೆರೆಹೊರೆಯವರೊಂದಿಗೆ ವಿನಾಕಾರಣ ಜಗಳ ಬೇಡ. ಉದ್ಯೋಗಿಗಳಿಗೆ ಶುಭಫಲ. ಆರೋಗ್ಯ ಪರಿಪೂರ್ಣವಾಗಿರಲಿದೆ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 5

Horoscope Today

ವೃಶ್ಚಿಕ:ಪ್ರಯತ್ನದಲ್ಲಿ ನಂಬಿಕೆ ಇಟ್ಟು ಕಾರ್ಯದಲ್ಲಿ ಮುನ್ನುಗ್ಗಿ ಯಶಸ್ಸು ಸಿಗಲಿದೆ. ಆರ್ಥಿಕವಾಗಿ ಲಾಭ ಇರಲಿದೆ. ಸಮಾರಂಭಗಳಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಜನಪ್ರಿಯತೆ ಹೆಚ್ಚಾಗಲಿದೆ. ಪ್ರವಾಸದ ಕುರಿತು ಚರ್ಚೆ ಮಾಡುವಿರಿ. ಕುಟುಂಬದವರ ಸಹಕಾರ ಸಿಗಲಿದೆ. ಆರೋಗ್ಯದ ಕಡೆಗೆ ಗಮನ ಇರಲಿ. ಉದ್ಯೋಗಿಗಳಿಗೆ ಹೊಸ ಭರವಸೆ ಮೂಡಲಿದೆ. ಕೌಟುಂಬಿಕವಾಗಿ ಶುಭಫಲ. ಅದೃಷ್ಟ ಸಂಖ್ಯೆ: 7

Horoscope Today

ಧನಸ್ಸು: ಅತಿಯಾದ ಚಿಂತೆ, ಒತ್ತಡ ನಿಮ್ಮ ಆರೋಗ್ಯದ ಮೇಲೆ ದೈಹಿಕವಾಗಿ ಹಾಗೂ ಮಾನಸಿಕವಾಗಿ ಪರಿಣಾಮವನ್ನು ಬೀರಬಹುದು. ಆದಷ್ಟು ವಿಶ್ರಾಂತಿ ಪಡೆಯಿರಿ, ತಾಳ್ಮೆ ಇರಲಿ. ಆರ್ಥಿಕ ಪ್ರಗತಿ ಸಾಧಾರಣವಾಗಿರಲಿದೆ. ಉದ್ಯೋಗಿಗಳಿಗೆ ಶುಭಫಲ. ಕುಟುಂಬದ ಆಪ್ತರಿಂದ ಸಮಾಧಾನದ ಮಾತುಗಳು. ಕೌಟುಂಬಿಕವಾಗಿ ಶುಭಫಲ. ಅದೃಷ್ಟ ಸಂಖ್ಯೆ: 4

Horoscope Today

ಮಕರ: ಅನಿವಾರ್ಯ ಪ್ರಸಂಗಗಳು ನಿಮ್ಮನ್ನು ಒತ್ತಡಕ್ಕೆ ಒಳಗಾಗುವಂತೆ ಮಾಡಬಹುದು. ಸಭೆ ಸಮಾರಂಭಗಳಲ್ಲಿ ಭಾಗವಹಿಸುವ ಸಾಧ್ಯತೆ ಇದೆ. ಆರೋಗ್ಯ ಪರಿಪೂರ್ಣವಾಗಿರಲಿದೆ. ಆರ್ಥಿಕವಾಗಿ ಪ್ರಗತಿ ಇರಲಿದ್ದು, ಹೂಡಿಕೆಯ ಕುರಿತು ಆಲೋಚನೆ ಮಾಡುವಿರಿ. ಹೊಸ ಸ್ನೇಹಿತರ ಪರಿಚಯವಾಗಲಿದೆ. ಉದ್ಯೋಗದ ಕುರಿತು ಆಲೋಚನೆ ಮಾಡುವಿರಿ. ಕೌಟುಂಬಿಕವಾಗಿ ಶುಭಫಲ. ಅದೃಷ್ಟ ಸಂಖ್ಯೆ: 4

Horoscope Today

ಕುಂಭ: ವಾಹನ ಚಾಲನೆ ಮಾಡುವಾಗ ಜಾಗರೂಕತೆಯಿಂದ ಚಾಲನೆ ಮಾಡಿ, ಅಪಘಾತವಾಗುವ ಸಾಧ್ಯತೆ ಇದೆ. ಅವಸರದಲ್ಲಿ ಕೆಲಸ ಮಾಡುವುದು ಬೇಡ. ಹೂಡಿಕೆ, ವ್ಯಾಪಾರ ವ್ಯವಹಾರಗಳಲ್ಲಿ ಪ್ರಗತಿ ಇರಲಿದೆ. ದಿಢೀರ್ ಪ್ರಯಾಣ ಬೆಳೆಸಬೇಕಾಗಬಹುದು. ಆರೋಗ್ಯದ ಕುರಿತು ಕಾಳಜಿ ಇರಲಿ. ಉದ್ಯೋಗಿಗಳಿಗೆ ಸಾಧಾರಣ ಫಲ. ಕೌಟುಂಬಿಕವಾಗಿ ಕನಿಷ್ಠ ಫಲ ಇರಲಿದೆ. ಅದೃಷ್ಟ ಸಂಖ್ಯೆ: 2

Horoscope Today

ಮೀನ: ದಿನದ ಮಟ್ಟಿಗೆ ಅನಿವಾರ್ಯ ಕಾರಣಗಳಿಂದ ಖರ್ಚು ಇರಲಿದೆ. ಆರೋಗ್ಯ ಮಧ್ಯಮವಾಗಿರಲಿದೆ. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗುವ ಸಾಧ್ಯತೆ ಇದೆ. ಮಾತಿನ ಭರದಲ್ಲಿ ಅತಿರೇಕದ ಮಾತುಗಳು ಬೇಡ, ತಾಳ್ಮೆಯಿಂದ ವರ್ತಿಸಿ. ಆರೋಗ್ಯ ಪರಿಪೂರ್ಣವಾಗಿರಲಿದೆ. ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 8

Horoscope Today

ವಿದ್ವಾನ್ ಶ್ರೀ ನವೀನಶಾಸ್ತ್ರಿ ರಾ. ಪುರಾಣಿಕ
ಖ್ಯಾತ ಜ್ಯೋತಿಷಿ ಹಾಗೂ ಉಪನ್ಯಾಸಕರು

M: 9481854580 | pnaveenshastri@gmail.com

Continue Reading

ಕ್ರೀಡೆ

T20 World Cup : ಕ್ರಿಕೆಟ್​ ಕೂಸು ಅಮೆರಿಕ ತಂಡದ ವಿರುದ್ಧ ಸೋತ ಪಾಕಿಸ್ತಾನ

T20 World Cup: ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ ಬ್ಯಾಟಿಂಗ್ ವೈಫಲ್ಯ ಎದುರಿಸಿ ನಿಗದಿತ 20 ಓವರ್​ಗಳಲ್ಲಿ 7 ವಿಕೆಟ್​ ಕಳೆದುಕೊಂಡು 159 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಅಮೆರಿಕದ ತನ್ನ ಪಾಲಿನ ಓವರ್​ಗಳು ಮುಕ್ತಾಯಗೊಂಡಾಗ 3 ವಿಕೆಟ್​ ನಷ್ಟಕ್ಕೆ 159 ರನ್​ ಬಾರಿಸಿತು. ಕೊನೇ ಓವರ್​ನಲ್ಲಿ ಅಮೆರಿಕಕ್ಕೆ 15 ರನ್​ ಗೆಲುವಿಗೆ ಬೇಕಾಗಿತ್ತು. ಆದರೆ, 14 ರನ್ ಬಾರಿಸಿದ ಕಾರಣ ಸೂಪರ್​ ಓವರ್​ ಅನಿವಾರ್ಯವಾಯಿತು.

VISTARANEWS.COM


on

T 20 Wordl Cup
Koo

ಡಲ್ಲಾಸ್​: ಬಾಬರ್ ಅಜಂ ನೇತೃತ್ವದ ಪಾಕಿಸ್ತಾನ ತಂಡ ಟಿ20 ವಿಶ್ವ ಕಪ್​ನ (T20 World Cup) ತನ್ನ ಮೊದಲ ಪಂದ್ಯದಲ್ಲಿ ಹೀನಾಯ ಪ್ರದರ್ಶನ ನೀಡಿದ್ದು, ಕ್ರಿಕೆಟ್​ ಕ್ಷೇತ್ರದಲ್ಲಿ ಕಣ್ಣರಳಿಸುತ್ತಿರುವ ಅಮೆರಿಕ ವಿರುದ್ಧವೇ ಸೋತಿದೆ. ಎ ಗುಂಪಿನ ಈ ಪಂದ್ಯದಲ್ಲಿ ನಿಗದಿತ ಅವಧಿಯಲ್ಲಿನ ಪಂದ್ಯ ಟೈ ಆದ ಕಾರಣ ಸೂಪರ್​ ಓವರ್​ ಮೊರೆ ಹೋಗಲಾಯಿತು. ಅಂತಿಮವಾಗಿ ಪಾಕಿಸ್ತಾನವನ್ನು ಕಟ್ಟಿ ಹಾಕಿದ ಅಮೆರಿಕದ ತಂಡ ಜಯದ ಕೇಕೆ ಹಾಕಿತು. ಇದು ಅಮೆರಿಕ ತಂಡಕ್ಕೆ ಹಾಲಿ ವಿಶ್ವ ಕಪ್​ನಲ್ಲಿ ಸತತ ಎರಡನೇ ವಿಜಯವಾಗಿದ್ದು ಗುಂಪಿನಲ್ಲಿ ಅಗ್ರಸ್ಥಾನ ಪಡೆದುಕೊಂಡಿದೆ.

ಡಲ್ಲಾಸ್​ನ ಗ್ರ್ಯಾಂಡ್ ಪ್ರೈರಿ ಸ್ಟೇಡಿಯಂನಲ್ಲಿ ಟಾಸ್​ ಗೆದ್ದ ಅಮೆರಿಕ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ ಬ್ಯಾಟಿಂಗ್ ವೈಫಲ್ಯ ಎದುರಿಸಿ ನಿಗದಿತ 20 ಓವರ್​ಗಳಲ್ಲಿ 7 ವಿಕೆಟ್​ ಕಳೆದುಕೊಂಡು 159 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಅಮೆರಿಕದ ತನ್ನ ಪಾಲಿನ ಓವರ್​ಗಳು ಮುಕ್ತಾಯಗೊಂಡಾಗ 3 ವಿಕೆಟ್​ ನಷ್ಟಕ್ಕೆ 159 ರನ್​ ಬಾರಿಸಿತು. ಕೊನೇ ಓವರ್​ನಲ್ಲಿ ಅಮೆರಿಕಕ್ಕೆ 15 ರನ್​ ಗೆಲುವಿಗೆ ಬೇಕಾಗಿತ್ತು. ಆದರೆ, 14 ರನ್ ಬಾರಿಸಿದ ಕಾರಣ ಸೂಪರ್​ ಓವರ್​ ಅನಿವಾರ್ಯವಾಯಿತು.

ಅನುಭವಿ ಬೌಲರ್​ ಮೊಹಮ್ಮದ್ ಅಮೀರ್​ ದಾಳಿಯನ್ನು ಎದುರಿಸಿದ ಅಮೆರಿಕ ತಂಡ ಒಂದು ಓವರ್​ನಲ್ಲಿ 19 ರನ್ ಬಾರಿಸಿತು. ಇದನ್ನು ಬೆನ್ನಟ್ಟಲು ಹೊರಟ ಪಾಕಿಸ್ತಾನ 1 ವಿಕೆಟ್ ನಷ್ಟ ಮಾಡಿಕೊಂಡು ಕೇವಲ 13 ರನ್ ಬಾರಿಸಿ ಐದು ರನ್​ಗಳ ಪರಾಜಯಕ್ಕೆ ಗುರಿಯಾಯಿತು.

ಪಾಕಿಸ್ತಾ ತಂಡಕ್ಕೆ ಇದು ಹಾಲಿ ವಿಶ್ವ ಕಪ್​ನಲ್ಲಿ ಮೊದಲ ಪಂದ್ಯವಾಗಿತ್ತು. ಅದರಲ್ಲೇ ಸೋಲುವ ಮೂಲಕ ಹೀನಾಯ ಅರಂಭ ಮಾಡಿತು. ಅದೂ ಅಮೆರಿಕದ ವಿರುದ್ಧ ಸೋಲುವ ಮೂಲಕ ಇದ್ದ ಮರ್ಯಾದೆಯನ್ನೂ ಕಳೆದುಕೊಂಡಿತು.

ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ಪವರ್ ಪ್ಲೇನಲ್ಲಿ 30 ರನ್ ಗಳಿಸಿ ಮೊಹಮ್ಮದ್ ರಿಜ್ವಾನ್, ಫಖರ್ ಜಮಾನ್ ಮತ್ತು ಉಸ್ಮಾನ್ ಖಾನ್ ಅವರ ವಿಕೆಟ್ ಗಳನ್ನು ಕಳೆದುಕೊಂಡಿತು. ಮತ್ತೊಂದೆಡೆ ನಾಯಕ ಬಾಬರ್ ಅಝಾಮ್ ಒತ್ತಡದಲ್ಲಿ ಉತ್ತಮ ಆರಂಭ ನೀಡಿದರು. ಬಾಬರ್ ಮತ್ತು ಶದಾಬ್ ಖಾನ್ ನಾಲ್ಕನೇ ವಿಕೆಟ್​ಗೆ 8 ಓವರ್​ಗಳಲ್ಲಿ 72 ರನ್​ಗಳ ಜೊತೆಯಾಟ ನೀಡಿದರು.

ಇದನ್ನೂ ಓದಿ:Sunil Chhetri : ಕಣ್ಣೀರು ಹಾಕುತ್ತಲೇ ಕೊನೇ ಅಂತಾರಾಷ್ಟ್ರೀಯ ಪಂದ್ಯವಾಡಿ ವಿದಾಯ ಹೇಳಿದ ಸುನಿಲ್​ ಛೆಟ್ರಿ

ಶದಾಬ್ 25 ಎಸೆತಗಳಲ್ಲಿ 4 ಮತ್ತು 3 ಸಿಕ್ಸರ್​ಗಳೊಂದಿಗೆ 40 ರನ್ ಗಳಿಸಿದರು. ಬಾಬರ್ 23 ಎಸೆತಗಳಲ್ಲಿ 44 ರನ್ ಸಿಡಿಸಿ ಔಟಾದರು. ನಂತರ ಫಾರ್ಮ್​ನಲ್ಲಿ ಇಲ್ಲದ ಅಜಂ ಖಾನ್ ಗೋಲ್ಡನ್ ಡಕ್ಗೆ ಕಳುಹಿಸಿದರು.

ಅಮೆರಿಕ ಪರ ಮಿಂಚಿದ ಮೊನಾಂಕ್​

ಗುರಿ ಬೆನ್ನಟ್ಟಿದ ಅಮೆರಿಕ ಪರ 38 ಎಸೆತಗಳಲ್ಲಿ 50 ರನ್ ಗಳಿಸಿದ ಮೊನಾಂಕ್ ಮಿಂಚಿದರು. ಕೊನೆಯ ಓವರ್​ನಲ್ಲಿ 12 ರನ್​ಗಳ ಅಗತ್ಯವಿದ್ದಾಗ ಮಿಂಚಿದ ಜೋನ್ಸ್ 11 ರನ್ ಗಳಿಸಿದರು. ಅವರು 26 ಎಸೆತಗಳಲ್ಲಿ 36 ರನ್ ಗಳಿಸಿ ಔಟಾಗದೆ ಉಳಿದರು.

Continue Reading

ಪ್ರಮುಖ ಸುದ್ದಿ

Stock Market Crash : ವಿದೇಶಿ ಹೂಡಿಕೆಗಳು ಬರದಂತೆ ರಾಹುಲ್ ಗಾಂಧಿ ಪಿತೂರಿ ಮಾಡುತ್ತಿದ್ದಾರೆ; ಬಿಜೆಪಿಯಿಂದ ತಿರುಗೇಟು

Stock Market Crash : ಇಂದು, ಭಾರತದ ಷೇರು ಮಾರುಕಟ್ಟೆ ವಿಶ್ವದ ಅಗ್ರ 5 ಆರ್ಥಿಕತೆಗಳ ಮಾರುಕಟ್ಟೆಯನ್ನು ಪ್ರವೇಶಿಸಿದೆ. ಮೋದಿ ಸರ್ಕಾರದ ಅಡಿಯಲ್ಲಿ ಮಾರುಕಟ್ಟೆಯಲ್ಲಿ ಪಟ್ಟಿ ಮಾಡಲಾದ ಪಿಎಸ್​ಯುಗಳ ಮಾರುಕಟ್ಟೆ ಮೊತ್ತ 4 ಪಟ್ಟು ಹೆಚ್ಚಾಗಿದೆ. ಆದರೆ ರಾಹುಲ್ ಅದನ್ನು ನಾಶ ಮಾಡಲು ಯತ್ನಿಸುತ್ತಿದ್ದಾರೆ ಎಂದು ಗೋಯಲ್ ಹೇಳಿದರು.

VISTARANEWS.COM


on

Stock Market Crash
Koo

ನವದೆಹಲಿ: ಷೇರು ಮಾರುಕಟ್ಟೆ ಜೂ. 4ಕ್ಕೆ ಪತನಗೊಂಡಿರುವುದು (Stock Market Crash) ಒಂದು ಹಗರಣ. ಮೋದಿ ಹಾಗೂ ಅಮಿತ್​ ಶಾ ಇದನ್ನು ನಡೆಸಿದ್ದಾರೆ ಎಂಬುದಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗುರುವಾರ ಮಾಡಿದ ಆರೋಪಕ್ಕೆ ಬಿಜೆಪಿ ತಿರುಗೇಟು ನೀಡಿದೆ. ಲೋಕಸಭಾ ಚುನಾವಣೆಯಲ್ಲಿನ ಸೋಲಿನಿಂದ ರಾಹುಲ್ ಗಾಂಧಿ ಇನ್ನೂ ಹೊರಬಂದಿಲ್ಲ. ಈಗ, ಅವರು ಮಾರುಕಟ್ಟೆ ಹೂಡಿಕೆದಾರರನ್ನು ದಾರಿತಪ್ಪಿಸಲು ಪಿತೂರಿ ನಡೆಸುತ್ತಿದ್ದಾರೆ. ಇಂದು, ಭಾರತವು ಐದನೇ ಅತಿದೊಡ್ಡ ಆರ್ಥಿಕತೆಯಾಗಿದೆ. ಅದನ್ನು ತಡೆಯಲು ರಾಹುಲ್ ಯತ್ನಿಸುತ್ತಿದ್ದಾರೆ ಎಂದು ಎಂದು ಬಿಜೆಪಿ ಮುಖಂಡ ಪಿಯೂಷ್ ಗೋಯಲ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

ಮೋದಿ ಸರ್ಕಾರದ ಕಳೆದ 10 ವರ್ಷಗಳಲ್ಲಿ ಮೊದಲ ಬಾರಿಗೆ ನಮ್ಮ ಮಾರುಕಟ್ಟೆ ಸಾಮರ್ಥ್ಯ 5 ಟ್ರಿಲಿಯನ್ ಡಾಲರ್ ದಾಟಿದೆ. ಇಂದು, ಭಾರತದ ಷೇರು ಮಾರುಕಟ್ಟೆ ವಿಶ್ವದ ಅಗ್ರ 5 ಆರ್ಥಿಕತೆಗಳ ಮಾರುಕಟ್ಟೆಯನ್ನು ಪ್ರವೇಶಿಸಿದೆ. ಮೋದಿ ಸರ್ಕಾರದ ಅಡಿಯಲ್ಲಿ ಮಾರುಕಟ್ಟೆಯಲ್ಲಿ ಪಟ್ಟಿ ಮಾಡಲಾದ ಪಿಎಸ್​ಯುಗಳ ಮಾರುಕಟ್ಟೆ ಮೊತ್ತ 4 ಪಟ್ಟು ಹೆಚ್ಚಾಗಿದೆ. ಆದರೆ ರಾಹುಲ್ ಅದನ್ನು ನಾಶ ಮಾಡಲು ಯತ್ನಿಸುತ್ತಿದ್ದಾರೆ ಎಂದು ಗೋಯಲ್ ಹೇಳಿದರು.

ಷೇರು ಮಾರುಕಟ್ಟೆ ಹಗರಣ ನಡೆದಿದ್ದು, ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ನೇರವಾಗಿ ಭಾಗಿಯಾಗಿದ್ದಾರೆ ಎಂದು ರಾಹುಲ್ ಗಾಂಧಿ ಆರೋಪಿಸಿದ ನಂತರ ಬಿಜೆಪಿ ಈ ಪ್ರತಿಕ್ರಿಯೆ ನೀಡಿದೆ.

ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವ ಐದು ಕೋಟಿ ಕುಟುಂಬಗಳಿಗೆ ಪ್ರಧಾನಿ ಮತ್ತು ಕೇಂದ್ರ ಗೃಹ ಸಚಿವರು ನಿರ್ದಿಷ್ಟ ಹೂಡಿಕೆ ಸಲಹೆ ಏಕೆ ನೀಡಿದರು? ಹೂಡಿಕೆ ಸಲಹೆ ನೀಡುವುದು ಅವರ ಕೆಲಸವೇ? ಷೇರುಗಳನ್ನು ತಿರುಚಿದ್ದಕ್ಕಾಗಿ ಸೆಬಿ ತನಿಖೆಯಲ್ಲಿರುವ ಒಂದೇ ವ್ಯವಹಾರ ಗುಂಪಿನ ಒಡೆತನದ ಒಂದೇ ಮಾಧ್ಯಮಕ್ಕೆ ಎರಡೂ ಸಂದರ್ಶನಗಳನ್ನು ಏಕೆ ನೀಡಲಾಯಿತು ಎಂದು ರಾಹುಲ್ ಗಾಂಧಿ ಸಂಜೆ ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನಿಸಿದರು.

ಕಾಂಗ್ರೆಸ್ ವಿರುದ್ಧ ವಾಗ್ದಾಳಿ ಮುಂದುವರಿಸಿದ ಗೋಯಲ್, 10 ವರ್ಷಗಳ ಹಿಂದೆ ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ, ಆ ಸಮಯದಲ್ಲಿ ಭಾರತದ ಮಾರುಕಟ್ಟೆ ಕ್ಯಾಪ್ 67 ಲಕ್ಷ ಕೋಟಿ ರೂ. ಇಂದು ಮಾರುಕಟ್ಟೆ ಕ್ಯಾಪ್ 415 ಲಕ್ಷ ಕೋಟಿ ರೂ.ಗೆ ಏರಿದೆ.

ಇದನ್ನೂ ಓದಿ: Unemployment Rate : ಭಾರತದಲ್ಲಿ ನಿರುದ್ಯೋಗ ಸಮಸ್ಯೆ ಒಂದೇ ವರ್ಷದಲ್ಲಿ ಶೇಕಡಾ 4 ಇಳಿಕೆ; ವರದಿ

“ಜೂನ್ 4 ರಂದು ಬಿಜೆಪಿ ದಾಖಲೆಯ ಸಂಖ್ಯೆಯನ್ನು ತಲುಪುತ್ತಿದ್ದಂತೆ, ಷೇರು ಮಾರುಕಟ್ಟೆಯೂ ಹೊಸ ದಾಖಲೆಯ ಗರಿಷ್ಠ ಮಟ್ಟವನ್ನು ತಲುಪುತ್ತದೆ ಎಂದು ನಾನು ವಿಶ್ವಾಸದಿಂದ ಹೇಳಬಲ್ಲೆ” ಎಂದು ಪ್ರಧಾನಿ ಮೋದಿ ಮೇ 23 ರಂದು ಹೇಳಿದ್ದರು.

ಕೇಂದ್ರ ಗೃಹ ಸಚಿವ ಶಾ, ಈ ಹಿಂದೆಯೂ ಮಾರುಕಟ್ಟೆ ಕುಸಿದಿದೆ. ಆದ್ದರಿಂದ ಇದನ್ನು ನೇರವಾಗಿ ಚುನಾವಣೆಗೆ ಲಿಂಕ್ ಮಾಡಬಾರದು. ಕೆಲವು ವದಂತಿಗಳು ಪತನ ಹೆಚ್ಚಿಸಿರಬಹುದು. ನನ್ನ ಅಭಿಪ್ರಾಯದಲ್ಲಿ, ಜೂನ್ 4 ರೊಳಗೆ ಖರೀದಿಸಿ. ಮಾರುಕಟ್ಟೆಯು ಉತ್ತುಂಗಕ್ಕೇರಲಿದೆ.” ಎಂದು ಹೇಳಿದ್ದರು.

Continue Reading

ಪ್ರಮುಖ ಸುದ್ದಿ

Sunil Chhetri : ಕಣ್ಣೀರು ಹಾಕುತ್ತಲೇ ಕೊನೇ ಅಂತಾರಾಷ್ಟ್ರೀಯ ಪಂದ್ಯವಾಡಿ ವಿದಾಯ ಹೇಳಿದ ಸುನಿಲ್​ ಛೆಟ್ರಿ

Sunil Chhetri :ಕುವೈತ್ ವಿರುದ್ಧದ ಡ್ರಾದ ನಂತರ ಎರಡೂ ತಂಡದ ಆಟಗಾರರು ಅವರಿಗೆ ಗಾರ್ಡ್​ ಆಫ್​ ಹಾನರ್​ ಸಲ್ಲಿಸಿದರು. ಈ ವೇಳೆ ಛೆಟ್ರಿ ಆನಂದ ಭಾಷ್ಪ ಸುರಿಸಿದರು. ಭಾರತೀಯ ಅಭಿಮಾನಿಗಳಿಂದ ಭಾರಿ ಹರ್ಷೋದ್ಗಾರ ಗೌರವ ಸಲ್ಲಿಸಿದರು. ಆಟಗಾರರು ಅವರಿಗೆ ಅಭಿನಂದನೆ ಸಲ್ಲಿಸಿದರು.

VISTARANEWS.COM


on

sunil chhetri
Koo

ಕೋಲ್ಕತ್ತಾ: ಇಲ್ಲಿನ ಸಾಲ್ಟ್ ಲೇಕ್ ಸ್ಟೇಡಿಯಂನಲ್ಲಿ 58,000 ಕ್ಕೂ ಹೆಚ್ಚು ಅಭಿಮಾನಿಗಳ ಸಮ್ಮುಖದಲ್ಲಿ ಭಾರತ ಫುಟ್ಬಾಲ್ ತಾರೆ ಸುನಿಲ್ ಛೆಟ್ರಿ (Sunil Chhetri) ಅಂತಾರಾಷ್ಟ್ರೀಯ ಫುಟ್ಬಾಲ್​ಗೆ ವಿದಾಯ ಹೇಳಿದರು. ಕತಾರ್ ವಿರುದ್ಧದ ಪಂದ್ಯದ ಫಲಿತಾಂಶವು ಡ್ರಾದಲ್ಲಿ ಕೊನೆಗೊಂಡ ಕಾರಣ ಫಿಫಾ ವಿಶ್ವಕಪ್ ಅರ್ಹತಾ ಪಂದ್ಯಗಳಲ್ಲಿ ಭಾರತದ ಪ್ರಗತಿ ಹಾದಿಗೆ ಅಡಚಣೆ ಉಂಟಾಯಿತು. ಇದು ಭಾರತದ ಫುಟ್ಬಾಲ್ ಪಾಲಿಗೆ ಬೇಸರದ ವಿಷಯ. ಆದಾಗ್ಯೂ ಅಭಿಮಾನಿಗಳು ಕೆಲವು ಕ್ಷಣಗಳವರೆಗೆ ನಿರಾಶೆ ಬದಿಗಿಟ್ಟರು. ಛೆಟ್ರಿಗೆ ಪ್ರೇಕ್ಷಕರು ಗಾರ್ಡ್​ ಆಫ್​ ಹಾನರ್ ಸಲ್ಲಿಸಿದರು.

ಕುವೈತ್ ವಿರುದ್ಧದ ಡ್ರಾದ ನಂತರ ಎರಡೂ ತಂಡದ ಆಟಗಾರರು ಅವರಿಗೆ ಗಾರ್ಡ್​ ಆಫ್​ ಹಾನರ್​ ಸಲ್ಲಿಸಿದರು. ಈ ವೇಳೆ ಛೆಟ್ರಿ ಆನಂದ ಭಾಷ್ಪ ಸುರಿಸಿದರು. ಭಾರತೀಯ ಅಭಿಮಾನಿಗಳಿಂದ ಭಾರಿ ಹರ್ಷೋದ್ಗಾರ ಗೌರವ ಸಲ್ಲಿಸಿದರು. ಆಟಗಾರರು ಅವರಿಗೆ ಅಭಿನಂದನೆ ಸಲ್ಲಿಸಿದರು.

ಈ ಪಂದ್ಯದಲ್ಲಿ, 39 ವರ್ಷದ ಆಟಗಾರ ಅತ್ಯಂತ ಉತ್ಸಾಹದಲ್ಲಿದ್ದಂತೆ ಕಂಡರು. ತಮ್ಮ ಯುವ ಸಹ ಆಟಗಾರರನ್ನು ಮೀರಿಸಿ ಓಡಾಡುತ್ತಿದ್ದರು. ತಮ್ಮ 151 ನೇ ಪ್ರದರ್ಶನದಲ್ಲಿ 94 ಗೋಲುಗಳ ದಾಖಲೆಯ ಸಂಖ್ಯೆಯನ್ನು ಸೇರಿಸುವ ಭರವಸೆಯಲ್ಲಿದ್ದರು. ಆದಾಗ್ಯೂ, ಭಾರತದ ದಾಖಲೆಯ ಗೋಲ್ ಸ್ಕೋರರ್​ಗೆ ಪರಿಪೂರ್ಣ ವಿದಾಯ ಸಿಗಲಿಲ್ಲ, ಕುವೈತ್ ಆಟದಲ್ಲಿ ಪ್ರಾಬಲ್ಯ ಸಾಧಿಸಿತು.

ಛೆಟ್ರಿ 94ಗೋಲ್​ಗಳ ಸರದಾರ

39 ವರ್ಷದ ಛೆಟ್ರಿ, 94 ಗೋಲುಗಳನ್ನು ಗಳಿಸುವ ಮೂಲಕ ಕ್ರೀಡೆಯ ಇತಿಹಾಸದಲ್ಲಿ ನಾಲ್ಕನೇ ಅತಿ ಹೆಚ್ಚು ಗೋಲ್ ಸ್ಕೋರರ್ ಆಗಿ ತಮ್ಮ 19 ವರ್ಷಗಳ ಅಂತರರಾಷ್ಟ್ರೀಯ ಫುಟ್ಬಾಲ್ ವೃತ್ತಿಜೀವನವನ್ನು ಕೊನೆಗೊಳಿಸಿದರು. ಪೋರ್ಚುಗಲ್​ನ ಕ್ರಿಸ್ಟಿಯಾನೊ ರೊನಾಲ್ಡೊ (128 ಗೋಲುಗಳು), ಇರಾನ್​ನ ಅಲಿ ಡೇಯ್ (108 ಗೋಲುಗಳು) ಮತ್ತು ಅರ್ಜೆಂಟೀನಾದ ಲಿಯೋನೆಲ್ ಮೆಸ್ಸಿ (106 ಗೋಲುಗಳು) ಅವರಿಗಿಂತ ಮೊದಲಿನ ಸ್ಥಾನಗಳಲ್ಲಿ ಇದ್ದಾರೆ.

ಪೋಷಕರು ಭಾಗಿ

ಛೆಟ್ರಿ ಅವರ ಅಂತಾರಾಷ್ಟ್ರೀಯ ಫುಟ್ಬಾಲ್​​ಗೆ ವಿದಾಯ ಹೇಳಿರುವುದು ಹೃದಯಸ್ಪರ್ಶಿ ಕ್ಷಣವಾಗಿತ್ತು. ಏಕೆಂದರೆ ಭಾವನಾತ್ಮಕ ಬೀಳ್ಕೊಡುಗೆಯಲ್ಲಿ ಅವರ ಹೆತ್ತವರಾದ ಖಾರ್ಗಾ ಮತ್ತು ಸುಶೀಲಾ, ಅವರ ಪತ್ನಿ ಸೋನಮ್ ಭಟ್ಟಾಚಾರ್ಯ ಮತ್ತು ಹಲವಾರು ಅಧಿಕಾರಿಗಳು ಮತ್ತು ಮಾಜಿ ಆಟಗಾರರು ಹಾಜರಿದ್ದರು, ಇದು ಅವರು ಭಾರತೀಯ ಫುಟ್ಬಾಲ್ ಮೇಲೆ ಬೀರಿದ ಆಳ ಪ್ರಭಾವಕ್ಕೆ ಸಾಕ್ಷಿಯಾಗಿದೆ.

ಒಂದು ವೇಳೆ ಭಾರತ ಕತಾರ್ ತಂಡವನ್ನು ಸೋಲಿಸಲು ವಿಫಲವಾದರೆ, ಪ್ರಸ್ತುತ ನಾಲ್ಕು ಅಂಕಗಳನ್ನು ಹೊಂದಿರುವ ಕುವೈತ್ ಜೂನ್ 11 ರಂದು ಅಫ್ಘಾನಿಸ್ತಾನವನ್ನು ಸೋಲಿಸಿದರೆ ವಿಶ್ವಕಪ್ ಅರ್ಹತಾ ಸುತ್ತಿನ ಮೂರನೇ ಸುತ್ತಿಗೆ ಪ್ರವೇಶಿಸಬಹುದು.

Continue Reading
Advertisement
Parliament Security Breach
ದೇಶ19 mins ago

Parliament Security Breach: ನಕಲಿ ಆಧಾರ್‌ ಕಾರ್ಡ್‌ ಬಳಸಿ ಸಂಸತ್‌ಗೆ ಎಂಟ್ರಿ ಕೊಡೋಕೆ ಯತ್ನ; ತಪ್ಪಿದ ಭಾರೀ ಅವಘಡ

road accident gauribidanuru
ಕ್ರೈಂ22 mins ago

Road Accident: ಭೀಕರ ಕಾರು ಅಪಘಾತ, 3 ಸಾವು, ಮರದಲ್ಲಿ ನೇತಾಡಿದ ಪ್ರಯಾಣಿಕನ ಶವ

Bigg Boss OTT 3 Know when and where to stream the show
ಬಿಗ್ ಬಾಸ್31 mins ago

Bigg Boss OTT 3: ಬಿಗ್​ ಬಾಸ್​ ಒಟಿಟಿ ಪ್ರಸಾರಕ್ಕೆ ಮುಹೂರ್ತ ಫಿಕ್ಸ್​: ಹೊಸ ನಿರೂಪಕನಾಗಿ ಅನಿಲ್​ ಕಪೂರ್​ ಎಂಟ್ರಿ!

Election Results 2024
Lok Sabha Election 202447 mins ago

Election Results 2024: ಸಂಸದರಾಗಿ ಆಯ್ಕೆಯಾದ ಉತ್ತರ ಪ್ರದೇಶದ ಎಂಟು ಶಾಸಕರು; ಶೀಘ್ರ ಉಪಚುನಾವಣೆ

self harming attempt
ಕ್ರೈಂ48 mins ago

Self Harming Attempt: ಮತ್ತೊಬ್ಬ ಅಧಿಕಾರಿ ಆತ್ಮಹತ್ಯೆ ಯತ್ನ; ಅಕ್ಷರ ದಾಸೋಹದಲ್ಲಿ ಮೇಲಧಿಕಾರಿಗಳ ಕಿರುಕುಳ?

Lok Sabha Election 2024
ರಾಜಕೀಯ51 mins ago

Lok Sabha Election 2024: ಈ ಬಾರಿ ಆಯ್ಕೆಯಾದ 105 ಸಂಸದರು ಪಿಯುಸಿ ದಾಟಿಲ್ಲ!

Lok Sabha Election 2024
ರಾಜಕೀಯ59 mins ago

Lok Sabha Election 2024: ಈ ಬಾರಿ 24 ಮುಸ್ಲಿಂ ಸಂಸದರ ಆಯ್ಕೆ; ಕಾಂಗ್ರೆಸ್‌, ಎಸ್‌ಪಿಯಿಂದಲೇ ಹೆಚ್ಚು

Viral Video
ವೈರಲ್ ನ್ಯೂಸ್60 mins ago

Viral Video: ಪುಷ್ಪ 2 ಚಿತ್ರದ ಹಾಡಿಗೆ ಹೆಜ್ಜೆ ಹಾಕಿದ ಅಜ್ಜಿ; ವಾವ್ಹ್‌ ಕ್ಯೂಟ್ ಎಂದ ನೆಟ್ಟಿಗರು

Manipur violence
ದೇಶ1 hour ago

Manipur Violence: ಮಣಿಪುರ ಹಿಂಸಾಚಾರ; ಮೋಸ್ಟ್‌ ವಾಂಟೆಡ್‌ ಗಲಭೆಕೋರ ಅರೆಸ್ಟ್‌

love sex dhoka koppala
ಕ್ರೈಂ1 hour ago

Love Sex Dhoka: ಪ್ರೀತಿಸುವ ನಾಟಕವಾಡಿ ವಿಡಿಯೋ ಮಾಡಿ ಬ್ಲ್ಯಾಕ್‌ಮೇಲ್‌; ಯುವಕನ ಬಂಧನಕ್ಕಾಗಿ ಪೊಲೀಸ್‌ ಠಾಣೆ ಮುಂದೆ ಯುವತಿ ಧರಣಿ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ20 hours ago

Karnataka Rain : ಭಾರಿ ಮಳೆಗೆ ಮರ ಬಿದ್ದು ಮೇಕೆಗಳು ಸಾವು; ಸಿಡಿಲಿಗೆ ಎಲೆಕ್ಟ್ರಿಕ್‌ ಅಂಗಡಿ ಸುಟ್ಟು ಭಸ್ಮ

Lok Sabha Election Result 2024 Live
ದೇಶ3 days ago

Lok Sabha Election Result 2024 Live: ಲೋಕಸಭೆ ಚುನಾವಣೆ ಫಲಿತಾಂಶದ ಲೈವ್‌ ಇಲ್ಲಿ ವೀಕ್ಷಿಸಿ

Karnataka Rain
ಮಳೆ4 days ago

Karnataka Rain : 133 ವರ್ಷದ ರೆಕಾರ್ಡ್ ಬ್ರೇಕ್ ಮಾಡಿದ ʻಬೆಂಗಳೂರು ಮಳೆʼ

Snake Rescue Snakes spotted in heavy rain
ಮಳೆ4 days ago

Snake Rescue: ಮಳೆ ನೀರಿನಲ್ಲಿ ಹರಿದು ಬಂದು ಬೈಕ್‌ನಲ್ಲಿ ಸೇರಿಕೊಂಡ ಹಾವು; ಮನೆಗಳಲ್ಲೂ ಪ್ರತ್ಯಕ್ಷ

Karnataka Rain
ಮಳೆ5 days ago

Karnataka Rain : ವೀಕೆಂಡ್‌ ಮೋಜಿಗೆ ವರುಣ ಅಡ್ಡಿ; ಭಾನುವಾರ ಸಂಜೆಗೆ ಮಳೆ ಕಾಟ

Liquor ban
ಬೆಂಗಳೂರು6 days ago

Liquor Ban : ಮುಂದಿನ ಏಳು ದಿನಗಳಲ್ಲಿ ನಾಲ್ಕೂವರೆ ದಿನ ಬಾರ್ ಕ್ಲೋಸ್; ಎಣ್ಣೆ ಸಿಗೋದು ಯಾವ ದಿನ?

Assault Case in Shivamogga
ಕ್ರೈಂ1 week ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ1 week ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು1 week ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ2 weeks ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

ಟ್ರೆಂಡಿಂಗ್‌