Shubhman Gill | ಗಿಲ್​ ನನ್ನ ಜತೆ ಡೇಟಿಂಗ್ ಮಾಡುತ್ತಿಲ್ಲ ಎಂದು ಸ್ಪಷ್ಟನೆ ನೀಡಿದ ಪಂಜಾಬಿ ನಟಿ ಸೋನಮ್​ ಬಾಜ್ವಾ - Vistara News

ಕ್ರಿಕೆಟ್

Shubhman Gill | ಗಿಲ್​ ನನ್ನ ಜತೆ ಡೇಟಿಂಗ್ ಮಾಡುತ್ತಿಲ್ಲ ಎಂದು ಸ್ಪಷ್ಟನೆ ನೀಡಿದ ಪಂಜಾಬಿ ನಟಿ ಸೋನಮ್​ ಬಾಜ್ವಾ

ದ್ವಿ ಶತಕ ಬಾರಿಸಿದ ಭಾರತ ತಂಡದ ಆರಂಭಿಕ ಬ್ಯಾಟರ್​ ಶುಬ್ಮನ್​ ಗಿಲ್​ ಅವರ ಹೆಸರು ಹಲವು ಹುಡುಗಿಯರ ಜತೆ ತಳುಕು ಹಾಕಿಕೊಳ್ಳುತ್ತಿದೆ.

VISTARANEWS.COM


on

sonam
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವ ದೆಹಲಿ: ಟೀಮ್​ ಇಂಡಿಯಾದ ಆರಂಭಿಕ ಬ್ಯಾಟರ್​ ಶುಭ್​ಮನ್​ ಗಿಲ್​ ನ್ಯೂಜಿಲ್ಯಾಂಡ್​ ವಿರುದ್ಧದ ಏಕ ದಿನ ಸರಣಿಯ ಮೊದಲ ಪಂದ್ಯದಲ್ಲಿ ದ್ವಿಶತಕ ಬಾರಿಸಿದ ಬಳಿಕ ಹೆಚ್ಚು ಸುದ್ದಿಯಾಗಿದ್ದು ಅವರ ಡೇಟಿಂಗ್ ವಿಚಾರಕ್ಕೆ. ಮೊದಲಾಗಿ ಅವರು ಸಚಿನ್​ ತೆಂಡೂಲ್ಕರ್​ ಪುತ್ರಿ ಸಾರಾ ಅಲಿಖಾನ್ ಜತೆ ಡೇಟಿಂಗ್ ಮಾಡುತ್ತಿದ್ದರು ಎಂಬ ರೂಮರ್​ ಹಬ್ಬಿತ್ತು. ಆದರೆ ಈ ಸುದ್ದಿಗೆ ಯಾವುದೇ ತಾಜಾ ಉದಾಹರಣೆಗಳು ಇರಲಿಲ್ಲ.

ಇತ್ತೀಚಿನ ದಿನಗಳಲ್ಲಿ ಶುಭ್​ಮನ್​ ಗಿಲ್​ ಅವರು ಸಾರಾ ಅಲಿಖಾನ್​ ಅವರ ಜತೆಯೂ ಡೇಟಿಂಗ್ ಮಾಡುತ್ತಿದ್ದರು ಎಂಬ ಸುದ್ದಿ ಹರಡಿತ್ತು. ಅದಕ್ಕೆ ಕೆಲವೊಂದು ಫೋಟೊಗಳು ಸಾಕ್ಷಿ ಹೇಳಿದ್ದವು. ಅವರಿಬ್ಬರೂ ರೆಸ್ಟೋರೆಂಟ್​ನಲ್ಲಿ ಜತೆಯಾಗಿ ಕುಳಿತಿರುವುದು, ವಿಮಾನದಲ್ಲಿ ಜತೆಯಾಗಿ ಹಾರಾಟ ನಡೆಸಿದ್ದರು. ಇದೀಗ ಪಂಜಾಬಿ ನಟಿ ಸೋನಮ್ ಬಾಜ್ವಾ ಅವರ ಅವರ ಜತೆಯೂ ಡೇಟಿಂಗ್​ ಮಾಡುತ್ತಿದ್ದರು ಎಂಬುದಾಗಿ ಸುದ್ದಿ ಹರಡಿತ್ತು. ಅದಕ್ಕೆ ಪ್ರತಿಕ್ರಿಯೆ ಕೊಟ್ಟಿರುವ ಸೋನಮ್​ ಬಾಜ್ವಾ​ ಅಂಥದ್ದೇನೂ ಇಲ್ಲ ಎಂಬುದಾಗಿ ಹೇಳಿದ್ದಾರೆ.

ಕ್ಸೇವಿಯರ್ ಅಂಕಲ್ ಎಂಬ ಅಕೌಂಟ್​ನಿಂದ ಶುಬ್ಮನ್​ ಗಿಲ್​ಗೆ ಸೋನಮ್​ ಬಾಜ್ವಾ ಕೈಕುಲುಕುವ ಫೋಟೋ ಹಾಕಿ, ಶುಬ್ಮನ್ ಗಿಲ್​ ಸತತವಾಗಿ ಶತಕಗಳನ್ನು ಬಾರಿಸಲು ಇದುವೇ ಕಾರಣ ಎಂದು ಹೇಳಿದ್ದರು. ಈ ಪೋಸ್ಟ್​ಗೆ ಪ್ರತಿಕ್ರಿಯೆ ಕೊಟ್ಟಿರುವ ಸೋನಮ್​ ಬಾಜ್ವಾ ಇದು ಖಂಡಿತವಾಗಿಯೂ ಸುಳ್ಳು ಎಂದು ಬರೆದುಕೊಂಡಿದ್ದಾರೆ. ಯೆ ಸಾರಾ ಸಾರಾ ಜೂಟ್​ ಹೈ ಎಂದು ಹಿಂದಿಯಲ್ಲಿ ಬರೆದುಕೊಂಡಿದ್ದಾರೆ.

ಅಂದ ಹಾಗೆ ಸೋನಮ್​ ಬಾಜ್ವಾಅವರು ಹಿಂದೆ ಟಿವಿ ಶೋ ಒಂದನ್ನು ನಡೆಸಿಕೊಟ್ಟಿದ್ದರು. ಆ ಕಾರ್ಯಕ್ರಮದಲ್ಲಿ ಕ್ರಿಕೆಟರ್​ ಶುಬ್ಮನ್​ ಗಿಲ್ ಪಾಲ್ಗೊಂಡಿದ್ದರು. ಆ ಚಿತ್ರವನ್ನು ಪೋಸ್ಟ್​ ಮಾಡಲಾಗಿದೆ.

ಇದನ್ನೂ ಓದಿ | Shubman Gill | ಭಾರತ ತಂಡದ ಪರ ದ್ವಿಶತಕ ಬಾರಿಸಿದ ಐದನೇ ಆಟಗಾರ ಶುಬ್ಮನ್​ ಗಿಲ್​, ಉಳಿದವರು ಯಾರು?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರಿಕೆಟ್

IPL 2024 : ಲಕ್ನೊ ವಿರುದ್ಧ 19 ರನ್ ವಿಜಯ, ಗೆಲುವಿನೊಂದಿಗೆ ಐಪಿಎಲ್​ ಅಭಿಯಾನ ಮುಗಿಸಿದ ಡೆಲ್ಲಿ

IPL 2024: ಮೊದಲು ಬ್ಯಾಟ್ ಮಾಡಿದ ಡೆಲ್ಲಿ ತಂಡ ನಿಗದಿತ 20 ಓವರ್​ಗಳಲ್ಲಿ 4 ವಿಕೆಟ್​ಗೆ 204 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್​ ಮಾಡಿದ ಲಕ್ನೊ ತಂಡ ಬ್ಯಾಟಿಂಗ್ ವೈಫಲ್ಯ ಎದುರಿಸಿ ತನ್ನ ಪಾಲಿನ ಓವರ್​ಗಳು ಮುಕ್ತಾಯಗೊಂಡಾಗ 9 ವಿಕೆಟ್ ನಷ್ಟಕ್ಕೆ 189 ರನ್ ಬಾರಿಸಿ ಸೋಲೊಪ್ಪಿಕೊಂಡಿತು.

VISTARANEWS.COM


on

IPL 2024
Koo

ನವ ದೆಹಲಿ: ಸಂಘಟಿತ ಹೋರಾಟದ ಬಲದಿಂದ ಮಿಂಚಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಐಪಿಎಲ್ 17ನೇ (IPL 2024) ಅವೃತ್ತಿಯ ಐಪಿಎಲ್​ನ 64ನೇ ಪಂದ್ಯದಲ್ಲಿ ಲಕ್ನೊ ಸೂಪರ್ ಜೈಂಟ್ಸ್ (Lucknow Super Giants) ವಿರುದ್ಧ 19 ರನ್​ಗಳ ಅಧೀಕಾರಯುತ ಗೆಲುವು ಸಾಧಿಸಿತು. ಇದು ಡೆಲ್ಲಿ ತಂಡಕ್ಕೆ ಹಾಲಿ ಆವೃತ್ತಿಯ ಲೀಗ್​ನ ಕೊನೇ ಪಂದ್ಯ. ಅದೇ ರೀತಿ ಐಪಿಎಲ್​​ನ ಕೊನೇ ಅಭಿಯಾನ ಕೂಡ. 14ರಲ್ಲಿ ಏಳು ಗೆಲುವು ಸಾಧಿಸಿರುವ ಡೆಲ್ಲಿ 14 ಅಂಕಗಳನ್ನು ಸಂಪಾದಿಸಿದೆ. ಆದರೆ, ಇನ್ನೂ ಐದನೇ ಸ್ಥಾನದಲ್ಲಿದೆ. ಈ ತಂಡ ನಾಲ್ಕರೊಳಗೆ ಪ್ರವೇಶ ಪಡೆಯುವ ಯಾವುದೇ ಸಾಧ್ಯತೆಗಳು ಇಲ್ಲದ ಕಾರಣ ಅವರ ಅಭಿಯಾನ ಕೊನೆಗೊಂಡಿದೆ. ಇದೇ ವೇಳೆ ಸತತ ಮೂರು ಸೋಲುಗಳಿಗೆ ಒಳಗಾದ ಲಕ್ನೊ ತಂಡ ನಿರಾಶಾದಾಯಕ ಅಭಿಯಾನ ಮುಂದುವರಿಸಿತು.

ಇಲ್ಲಿನ ಅರುಣ್ ಜೇಟ್ಲಿ ಕ್ರಿಕೆಟ್ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್​ ಗೆದ್ದ ಲಕ್ನೊ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯ ಮೊದಲು ಬ್ಯಾಟ್ ಮಾಡಿದ ಡೆಲ್ಲಿ ತಂಡ ನಿಗದಿತ 20 ಓವರ್​ಗಳಲ್ಲಿ 4 ವಿಕೆಟ್​ಗೆ 204 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್​ ಮಾಡಿದ ಲಕ್ನೊ ತಂಡ ಬ್ಯಾಟಿಂಗ್ ವೈಫಲ್ಯ ಎದುರಿಸಿ ತನ್ನ ಪಾಲಿನ ಓವರ್​ಗಳು ಮುಕ್ತಾಯಗೊಂಡಾಗ 9 ವಿಕೆಟ್ ನಷ್ಟಕ್ಕೆ 189 ರನ್ ಬಾರಿಸಿ ಸೋಲೊಪ್ಪಿಕೊಂಡಿತು.

ಇದನ್ನೂ ಓದಿ: Team India : ದ್ರಾವಿಡ್​ ಬಳಿಕ ಇವರೇ ಆಗ್ತಾರೆ ಭಾರತ ತಂಡದ ಕೋಚ್​​

ಡೆಲ್ಲಿಯ ಪಿಚ್​ನಲ್ಲಿ ಲಕ್ನೊ ತಂಡಕ್ಕೆ ಇದು ದೊಡ್ಡ ಮೊತ್ತವಾಗಿರಲಿಲ್ಲ. ಆದರೆ, ಆ ತಂಡದ ಬ್ಯಾಟರ್​​ಗಳು ಗೆಲುವಿಗಾಗಿ ಹೆಚ್ಚಿನ ಉತ್ಸಾಹ ತೋರಲಿಲ್ಲ. ಇಶಾಂತ್ ಶರ್ಮಾ (34 ರನ್​ಗೆ 3 ವಿಕೆಟ್​​) ಡೆಲ್ಲಿಯ ಬೌಲರ್​ಗಳ ಅಬ್ಬರಕ್ಕೆ ಒಬ್ಬೊಬ್ಬರಾಗಿಯೇ ಪೆವಿಲಿಯನ್ ಹಾದಿ ಹಿಡಿದರು. ಆದಾಗ್ಯೂ ಮಧ್ಯಮ ಕ್ರಮಾಂಕದಲ್ಲಿ ನಿಕೋಸಲ್​ ಪೂರನ್​ (27 ಎಸೆತಕ್ಕೆ 61 ರನ್​) ಹಾಗೂ ಅರ್ಶದ್​ ಖಾನ್​ (33 ಎಸೆತಕ್ಕೆ 58 ರನ್​) ಅವರ ಹೋರಾಟದಿಂದಾಗಿ ಗುರಿಯ ಸನಿಹಕ್ಕೆ ಬಂದು ಮರ್ಯಾದೆ ಉಳಿಸಿಕೊಂಡಿತು. ಕ್ವಿಂಟನ್ ಡಿ ಕಾಕ್​ (12), ಕೆ. ಎಲ್​ ರಾಹುಲ್​ (05), ಮಾರ್ಕ್ ಸ್ಟೊಯ್ನಿಸ್​ (05), ದೀಪಕ್ ಹೂಡ (0) ಆಯುಷ್​ ಬದೋನಿ (06), ಅವರ ಅಸಮರ್ಥತೆ ತಂಡವನ್ನು ಸೋಲಿನ ಸುಳಿಗೆ ತಳ್ಳಿತು.

ಡೆಲ್ಲಿಯ ಭರ್ಜರಿ ಬ್ಯಾಟಿಂಗ್​

ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಫೇಸರ್ ಮೆಗ್​ ಕುರ್ಕ್ ಅವರ ಶೂನ್ಯ ಸಂಪಾದನೆ ಮೂಲಕ ಆಘಾತಕ್ಕೆ ಒಳಗಾಯಿತು. ಆದರೆ ಅಭಿಷೇಕ್ ಪೊರೆಲ್​ 58 ರನ್ ಬಾರಿಸಿ ತಂಡಕ್ಕೆ ನೆರವಾದರು. ಬಳಿಕ ಶಾಯ್​ ಹೋಪ್​ 38 ರನ್ ಬಾರಿಸಿದರೆ ರಿಷಭ್ ಪಂತ್​ 33 ರನ್ ಕೊಡುಗೆ ಕೊಟ್ಟರು. ಕೊನೆಯಲ್ಲಿ ಟ್ರಿಸ್ಟಾನ್ ಸ್ಟಬ್ಸ್​ 25 ಎಸೆತಕ್ಕೆ 57 ರನ್ ಬಾರಿಸಿ ದೊಡ್ಡ ಮೊತ್ತ ಪೇರಿಸಲು ನೆರವಾದರು. ಲಕ್ನೊ ಪರ ನವಿನ್ ಉಲ್ ಹಕ್ 5 ವಿಕೆಟ್​ ಪಡೆದರೂ 52 ರನ್ ಬಿಟ್ಟುಕೊಟ್ಟು ದುಬಾರಿ ಎನಿಸಿದರು.

Continue Reading

ಪ್ರಮುಖ ಸುದ್ದಿ

Team India : ದ್ರಾವಿಡ್​ ಬಳಿಕ ಇವರೇ ಆಗ್ತಾರೆ ಭಾರತ ತಂಡದ ಕೋಚ್​​

Team India: ನ್ಯೂಜಿಲೆಂಡ್​​ನ ಮಾಜಿ ನಾಯಕ ಸ್ಟೀಫನ್ ಫ್ಲೆಮಿಂಗ್ 2009 ರಿಂದ ಸಿಎಸ್​​ಕೆ ಕೋಚ್ ಹುದ್ದೆಯನ್ನು ಅಲಂಕರಿಸಿದ್ದಾರೆ ಮತ್ತು ಅವರ ಮಾರ್ಗದರ್ಶನದಲ್ಲಿ ಫ್ರಾಂಚೈಸಿ ಐದು ಐಪಿಎಲ್ ಟ್ರೋಫಿಗಳನ್ನು ಗೆದ್ದಿದೆ. ರಾಹುಲ್ ದ್ರಾವಿಡ್ ಅವರ ಒಪ್ಪಂದ ಮುಗಿದ ನಂತರ ಸ್ಟೀಫನ್ ಫ್ಲೆಮಿಂಗ್ ಸೂಕ್ತ ಅಭ್ಯರ್ಥಿ ಎಂದು ಕೆಲವು ಉನ್ನತ ಮೂಲಗಳನ್ನು ಉಲ್ಲೇಖಿಸಿ ಇಂಡಿಯನ್ ಎಕ್ಸ್​​ಪ್ರೆಸ್​​ ವರದಿ ಮಾಡಿದೆ.

VISTARANEWS.COM


on

Team India
Koo

ಬೆಂಗಳೂರು: ಭಾರತ ಕ್ರಿಕೆಟ್ ತಂಡದ (Team India ) ಕೋಚ್ ಆಗಿ ರಾಹುಲ್ ದ್ರಾವಿಡ್ (Rahul Dravid) ಅವರ ಅಧಿಕಾರಾವಧಿ ಜೂನ್​​ನಲ್ಲಿ ಕೊನೆಗೊಳ್ಳಲಿದ್ದು, ಅವರ ಸ್ಥಾನವನ್ನು ತುಂಬಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಈಗಾಗಲೇ ಭರ್ಜರಿ ಹುಡುಕಾಟ ಆರಂಭಿಸಿದೆ. ರೋಹಿತ್ ಶರ್ಮಾ (Rohit Sharma) ನೇತೃತ್ವದ ಟೀಮ್ ಇಂಡಿಯಾ ಜೂನ್​ನಲ್ಲಿ ಟಿ 20 ವಿಶ್ವಕಪ್ 2024 ಆಡಲಿದ್ದು, ಪಂದ್ಯಾವಳಿಯ ನಂತರ ಹೊಸ ತರಬೇತುದಾರರನ್ನು ಹೊಂದುವ ಎಲ್ಲಾ ಸಂಭವಗಳಿವೆ. ಈ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಕೋಚ್ ಸ್ಟೀಫನ್ ಫ್ಲೆಮಿಂಗ್ (Stephen Fleming) ಅವರು ರಾಹುಲ್ ದ್ರಾವಿಡ್ ಅವರ ನಂತರ ಭಾರತೀಯ ಕ್ರಿಕೆಟ್ ತಂಡದ ಕೋಚ್ ಆಗಬಹುದು ಎಂದು ಇಂಡಿಯನ್ ಎಕ್ಸ್​ಪ್ರೆಸ್​​ ವರದಿ ಮಾಡಿದೆ.

ನ್ಯೂಜಿಲೆಂಡ್​​ನ ಮಾಜಿ ನಾಯಕ ಸ್ಟೀಫನ್ ಫ್ಲೆಮಿಂಗ್ 2009 ರಿಂದ ಸಿಎಸ್​​ಕೆ ಕೋಚ್ ಹುದ್ದೆಯನ್ನು ಅಲಂಕರಿಸಿದ್ದಾರೆ ಮತ್ತು ಅವರ ಮಾರ್ಗದರ್ಶನದಲ್ಲಿ ಫ್ರಾಂಚೈಸಿ ಐದು ಐಪಿಎಲ್ ಟ್ರೋಫಿಗಳನ್ನು ಗೆದ್ದಿದೆ. ರಾಹುಲ್ ದ್ರಾವಿಡ್ ಅವರ ಒಪ್ಪಂದ ಮುಗಿದ ನಂತರ ಸ್ಟೀಫನ್ ಫ್ಲೆಮಿಂಗ್ ಸೂಕ್ತ ಅಭ್ಯರ್ಥಿ ಎಂದು ಕೆಲವು ಉನ್ನತ ಮೂಲಗಳನ್ನು ಉಲ್ಲೇಖಿಸಿ ಇಂಡಿಯನ್ ಎಕ್ಸ್​​ಪ್ರೆಸ್​​ ವರದಿ ಮಾಡಿದೆ.

ಸ್ಟೀಫನ್ ಫ್ಲೆಮಿಂಗ್​ ಆಯ್ಕೆಯಾಗಿರುತ್ತದೆ. ಭಾರತೀಯ ಕ್ರಿಕೆಟ್ ತಂಡಕ್ಕೆ ತರಬೇತಿ ನೀಡುವ ತರಬೇತುದಾರರು ತೀವ್ರವಾದ ಕೆಲಸದ ಹೊರೆಯನ್ನು ಅನುಭವಿಸಬೇಕಾಗುತ್ತದೆ. ರಾಷ್ಟ್ರೀಯ ತಂಡಗಳ ಪ್ರವಾಸದ ನಡುವೆ ಖಾಸಗಿ ಸಮಯ ಮೀಸಲಿಡುವ ಸವಾಲು ಎದುರಾಗುತ್ತವೆ. ಅವರು ಈ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಸಿದ್ಧರಿದ್ದಾರೆಯೇ ಎಂದು ನೋಡಬೇಕಾಗಿದೆ.

ಮೂರು ವರ್ಷಗಳ ಅವಧಿಗೆ ಕೋಚ್​

ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಮಾತನಾಡಿ, ಬಿಸಿಸಿಐ ಕನಿಷ್ಠ ಮೂರು ವರ್ಷಗಳ ದೀರ್ಘಾವಧಿಯ ಒಪ್ಪಂದದೊಂದಿಗೆ ಹೊಸ ತರಬೇತುದಾರನನ್ನು ಹುಡುಕುತ್ತಿದೆ ಎಂದು ಹೇಳಿದ್ದಾರೆ. ವಿಭಜಿತ ಕೋಚಿಂಗ್ ಕಲ್ಪನೆಗೆ ಮಂಡಳಿಯು ಮುಕ್ತವಾಗಿದ್ದರೂ ಅವರು ವೈಯಕ್ತಿಕವಾಗಿ ಆಟದ ಎಲ್ಲಾ ಮೂರು ಸ್ವರೂಪಗಳಿಗೆ ಒಬ್ಬ ಮುಖ್ಯ ತರಬೇತುದಾರನನ್ನು ಬಯಸುತ್ತಾರೆ.

ಇದನ್ನೂ ಓದಿ: KL Rahul : ಗಲಾಟೆ ಚಾಪ್ಟರ್ ಕ್ಲೋಸ್​​; ಕೆ. ಎಲ್​ ರಾಹುಲ್​ ಹಿಡಿದ ಕ್ಯಾಚ್​ಗೆ ಮೆಚ್ಚಿ ಚಪ್ಪಾಳೆ ತಟ್ಟಿದ ಗೋಯೆಂಕಾ

ಭಾರತೀಯ ಕ್ರಿಕೆಟ್​​ನಲ್ಲಿ ವಿಭಿನ್ನ ಸ್ವರೂಪಗಳಿಗೆ ವಿಭಿನ್ನ ತರಬೇತುದಾರರ ಪೂರ್ವನಿದರ್ಶನವಿಲ್ಲ. ಇದಲ್ಲದೆ, ನಾವು ಎಲ್ಲಾ ಸ್ವರೂಪದ ಆಟಗಾರರನ್ನು ಹೊಂದಿರುವ ಹಲವಾರು ಆಟಗಾರರನ್ನು ಹೊಂದಿದ್ದೇವೆ. ಅಂತಿಮವಾಗಿ, ಇದು ಕ್ರಿಕೆಟ್ ಸಲಹಾ ಸಮಿತಿಯ (ಸಿಎಸಿ) ನಿರ್ಧಾರವಾಗಿದೆ. ಅವರು ಏನು ನಿರ್ಧರಿಸುತ್ತಾರೋ ಅದನ್ನು ನಾನು ಕಾರ್ಯಗತಗೊಳಿಸಬೇಕಾಗಿದೆ” ಎಂದು ಜಯ್ ಶಾ ಹೇಳಿದ್ದರು.

2014 ರಲ್ಲಿ ಡಂಕನ್ ಫ್ಲೆಚರ್ ನಿರ್ಗಮಿಸಿದ ನಂತರ ಭಾರತಕ್ಕೆ ವಿದೇಶಿ ಕೋಚ್ ನೇಮಿಸಿಲ್ಲ. ವರದಿಗಳ ಪ್ರಕಾರ, ಈ ಹುದ್ದೆಗೆ ವಿದೇಶಿ ಅಭ್ಯರ್ಥಿಯನ್ನು ಪರಿಗಣಿಸಲು ಬಿಸಿಸಿಐಗೆ ಯಾವುದೇ ಸಮಸ್ಯೆ ಇಲ್ಲ.

ಸ್ಟೀಫನ್ ಫ್ಲೆಮಿಂಗ್ ಏಕೆ?

ಸ್ಟೀಫನ್ ಫ್ಲೆಮಿಂಗ್ ಐಪಿಎಲ್​​ನಲ್ಲಿ ದೀರ್ಘಕಾಲ ಸೇವೆ ಸಲ್ಲಿಸಿದ ತರಬೇತುದಾರರಾಗಿದ್ದಾರೆ ಮತ್ತು ಆಟಗಾರರಿಂದ ಅತ್ಯುತ್ತಮವಾದುದನ್ನು ಹೊರತೆಗೆಯುವಲ್ಲಿ ಹೆಸರುವಾಸಿಯಾಗಿದ್ದಾರೆ. ಆಟದ ಬಗ್ಗೆ ಅವರ ತಿಳುವಳಿಕೆ ಮತ್ತು ಔಟ್-ಆಫ್-ಬಾಕ್ಸ್ ವಿಧಾನಗಳು ಆಟಗಾರರಿಗೆ ಆಟವನ್ನು ಹೊಸ ದೃಷ್ಟಿಕೋನದಿಂದ ಸಮೀಪಿಸಲು ಸಹಾಯ ಮಾಡುತ್ತದೆ. ಭಾರತದ ಆಂತರಿಕ ಕ್ರಿಕೆಟ್ ವಲಯವು ಸ್ಟೀಫನ್ ಫ್ಲೆಮಿಂಗ್ ಅವರನ್ನು ಮೆಚ್ಚುತ್ತದೆ. ಅವರು ಭಾರತದ ಭವಿಷ್ಯದ ನಾಯಕರನ್ನು ಬೆಳೆಸಿದ ನಾಯಕತ್ವ ಕಾರ್ಯಕ್ರಮಕ್ಕೆ ಹೆಸರುವಾಸಿಯಾಗಿದ್ದಾರೆ.

Continue Reading

ಕ್ರೀಡೆ

KL Rahul : ಗಲಾಟೆ ಚಾಪ್ಟರ್ ಕ್ಲೋಸ್​​; ಕೆ. ಎಲ್​ ರಾಹುಲ್​ ಹಿಡಿದ ಕ್ಯಾಚ್​ಗೆ ಮೆಚ್ಚಿ ಚಪ್ಪಾಳೆ ತಟ್ಟಿದ ಗೋಯೆಂಕಾ

KL Rahul: 9ನೇ ಓವರ್ ನ 2ನೇ ಎಸೆತದಲ್ಲಿ ರವಿ ಬಿಷ್ಣೋಯ್ ಅವರು ಚೆಂಡನ್ನು ಎಸೆದರು. ಶಾಯ್ ಹೋಪ್ ಅದಕ್ಕೆ ಭರ್ಜರಿಯಾಗಿ ಹೊಡೆದರು. ಕವರ್ ಪ್ರದೇಶದಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಕೆಎಲ್ ರಾಹುಲ್ ಚೆಂಡನ್ನು ಹಿಡಿಯಲು ಯತ್ನಿಸಿದರು. ಅದರೆ, ಅದರು ಕೈಯಿಂದ ಜಾರಿತು. ಬಳಿಕ ಅವರು ನೆಗೆದು ಆ ಚೆಂಡನ್ನು ಹಿಡಿದರು. ಅದ್ಭುತ ಡೈವ್ ಮಾಡಿದ ನಾಯಕನ ಪ್ರಯತ್ನಗಳನ್ನು ಶ್ಲಾಘಿಸಿದ ಸಂಜೀವ್ ಗೋಯೆಂಕಾ ಚಪ್ಪಾಳೆ ತಟ್ಟಿದರು.

VISTARANEWS.COM


on

KL Rahul
Koo

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ 2024ರಲ್ಲಿ (IPL 2024) ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ (ಡಿಸಿ) ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ (LSG) ನಾಯಕ ಕೆಎಲ್ ರಾಹುಲ್ (KL Rahul) ಮೈದಾನದಲ್ಲಿ ಭರ್ಜರಿ ಫೀಲ್ಡಿಂಗ್ ಮಾಡಿದರು. ಈ ವೇಳೆ ಲಕ್ನೊ ಸೂಪರ್ ಜೈಂಟ್ಸ್ ಮಾಲೀಕರಾದ ಸಂಜೀವವ ಗೋಯೆಂಕಾ ಅವರು ಪ್ರೇಕ್ಷಕರ ಗ್ಯಾಲರಿಯಲ್ಲಿ ಕುಳಿತು ಚಪ್ಪಾಳೆ ತಟ್ಟಿದರು. ಈ ಮೂಲಕ ಅವರಿಬ್ಬರ ನಡುವಿನ ಜಗಳ ಅಂತ್ಯಗೊಂಡಿತು.

ಪಂದ್ಯದಲ್ಲಿ ಡೆಲ್ಲಿ ತಂಡ ಜೇಕ್ ಫ್ರೇಸರ್-ಮೆಗ್​ಕುರ್ಕ್​ ಅವರನ್ನು ಬೇಗನೆ ಕಳೆದುಕೊಂಡರೂ ನಂತರದಲ್ಲಿ ಅಭಿಷೇಕ್ ಪೊರೆಲ್ ಮತ್ತು ಶಾಯ್ ಹೋಪ್ ಜೋಡಿ ಲಕ್ನೋ ಸೂಪರ್ ಜೈಂಟ್ಸ್ ಬೌಲರ್​ಗಳ ಮೇಳೆ ಅಬ್ಬರಿಸಿದರು. ವಿಶೇಷವಾಗಿ ಶಾಯ್ ಹೋಪ್ ದೃಢವಾಗಿ ಕಾಣುತ್ತಿದ್ದರು. ಅವರು ದೊಡ್ಡ ಇನ್ನಿಂಗ್ಸ್ ಗೆ ಸಜ್ಜಾಗುತ್ತಿದ್ದರು. ಲಕ್ನೋ ಸೂಪರ್ ಜೈಂಟ್ಸ್ ನಾಯಕ ಕೆ.ಎಲ್.ರಾಹುಲ್ ಅವರು ಅವರ ವಿಕೆಟ್ ಪಡೆಯಲು ವಿಶೇಷ ಯೋಜನೆ ರೂಪಿಸಿದರು. ಅಲ್ಲದೇ ತಾವೇ ಉತ್ತಮ ಕ್ಯಾಚ್​ ಹಿಡಿಯುವ ಮೂಲಕ ಅವರನ್ನು ಪೆವಿಲಿಯನ್​ಗೆ ಅಟ್ಟಿದರು.

9ನೇ ಓವರ್ ನ 2ನೇ ಎಸೆತದಲ್ಲಿ ರವಿ ಬಿಷ್ಣೋಯ್ ಅವರು ಚೆಂಡನ್ನು ಎಸೆದರು. ಶಾಯ್ ಹೋಪ್ ಅದಕ್ಕೆ ಭರ್ಜರಿಯಾಗಿ ಹೊಡೆದರು. ಕವರ್ ಪ್ರದೇಶದಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಕೆಎಲ್ ರಾಹುಲ್ ಚೆಂಡನ್ನು ಹಿಡಿಯಲು ಯತ್ನಿಸಿದರು. ಅದರೆ, ಅದರು ಕೈಯಿಂದ ಜಾರಿತು. ಬಳಿಕ ಅವರು ನೆಗೆದು ಆ ಚೆಂಡನ್ನು ಹಿಡಿದರು. ಅದ್ಭುತ ಡೈವ್ ಮಾಡಿದ ನಾಯಕನ ಪ್ರಯತ್ನಗಳನ್ನು ಶ್ಲಾಘಿಸಿದ ಸಂಜೀವ್ ಗೋಯೆಂಕಾ ಚಪ್ಪಾಳೆ ತಟ್ಟಿದರು.

ರಾಹುಲ್ ಆರ್​ಸಿಬಿಗೆ ಬರಲ್ಲ

ಲಕ್ನೋ: ಸನ್​ರೈಸರ್ಸ್​ ಹೈದರಾಬಾದ್(Sunrisers Hyderabad)​​ ವಿರುದ್ಧ ಲಕ್ನೋ ಸೂಪರ್​ ಜೈಂಟ್ಸ್(Lucknow Super Giants)​ 10 ವಿಕೆಟ್​ಗಳ ಹೀನಾಯ ಸೋಲು ಕಂಡ ಬೇಸರದಲ್ಲಿ ಸಿಟ್ಟಿಗೆದ್ದ ಫ್ರಾಂಚೈಸಿ ಮಾಲಿಕ ಸಂಜೀವ್ ಗೋಯೆಂಕಾ(Sanjiv Goenka) ಮೈದಾನದಲ್ಲೇ ನಾಯಕ ಕೆ.ಎಲ್​ ರಾಹುಲ್(KL Rahul)​ ಜತೆ ಜಗಳವಾಡಿದ್ದರು. ಈ ಘಟನೆ ಬಳಿಕ ಅನೇಕ ಮಾಜಿ ಆಟಗಾರರು ಗೋಯೆಂಕಾ ವರ್ತನೆಗೆ ಆಕ್ರೋಶ ವ್ಯಕ್ತಪಡಿಸಿದ್ದರು. ಘಟನೆಗೆ ಸಂಬಂಧಿಸಿ ರಾಹುಲ್​ ಲಕ್ನೋ ತಂಡ ತೊರೆಯಲಿದ್ದಾರೆ, ಆರ್​ಸಿಬಿ ಸೇರಲಿದ್ದಾರೆ, ತಂಡದ ಆಟಗಾರರೊಂದಿಗೆ ಪ್ರಯಾಣಿಸದೆ ಪ್ರತ್ಯೇಕವಾಗಿ ಪ್ರಯಾಣಿಸಿದ್ದಾರೆ ಹೀಗೆ ಹಲವು ವಿಚಾರಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡಿತ್ತು. ಇದೀಗ ಈ ಎಲ್ಲ ಊಹಾಪೋಹಕ್ಕೆ ತೆರೆ ಬಿದ್ದಂತೆ ಕಾಣುತ್ತಿದೆ.

ಸಂಜೀವ್ ಗೋಯೆಂಕಾ ಅವರು ರಾಹುಲ್​ ಅವರನ್ನು ಮನೆಗೆ ಡಿನ್ನರ್​ಗೆ ಕರೆದು ತಬ್ಬಿಕೊಂಡಿರುವ ಫೋಟೊ ಒಂದು ವೈರಲ್​ ಆಗಿದೆ. ಈ ಮೂಲಕ ನಮ್ಮ ಮಧ್ಯೆ ಯಾವುದೇ ಮುನಿಸು ಇಲ್ಲ ಎನ್ನುವ ಸಂದೇಶ ನೀಡಿದಂತಿದೆ. ಸದ್ಯ ವೈರಲ್​ ಆಗುತ್ತಿರುವ ಫೋಟೊದಲ್ಲಿ ರಾಹುಲ್​ ಅವರನ್ನು ಗೋಯೆಂಕಾ ತಬ್ಬಿಕೊಂಡಿರಿವಂತೆ ಕಾಣುತ್ತಿದೆ. ರಾಹುಲ್​ ಕೂಡ ನಗುಮುಗದಿಂದಲೇ ಕಾಣಿಸಿಕೊಂಡಿದ್ದಾರೆ. ಆದರೆ, ಗೋಯೆಂಕಾ ಅವರ ಮುಖ ಮಾತ್ರ ಸ್ಪಷ್ಟವಾಗಿ ಗೋಚರಿಸಿಲ್ಲ. ರಾಹುಲ್​ ಪತ್ನಿ ಅಥಿಯಾ ಶೆಟ್ಟಿ ಕೂಡ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಸ್ಟೋರಿ ಹಾಕಿದ್ದು “ಚಂಡಮಾರುತದ ನಂತರ ಶಾಂತ” ಎಂದು ಬರೆದುಕೊಂಡಿದ್ದಾರೆ. ಹೀಗಾಗಿ ರಾಹುಲ್​ ಮತ್ತು ಗೋಯೆಂಕಾ ನಡುವಿನ ಮುನಿಸು ಶಮನವಾದಂತೆ ಕಾಣುತ್ತಿದೆ.

ಇದನ್ನೂ ಓದಿ: IPL 2024 : ನಾಯಕರಾಗಿ ನೀವೇನು ಮಾಡಿದ್ರಿ? ಪಾಂಡ್ಯನನ್ನು ಟೀಕಿಸಿದ್ದ ವಿಲಿಯರ್ಸ್​ಗೆ ತಿರುಗೇಟು ಕೊಟ್ಟ ಗಂಭೀರ್​

ಕಳೆದ ಹೈದರಾಬಾದ್​ ವಿರುದ್ಧದ ಪಂದ್ಯದಲ್ಲಿ ಬ್ಯಾಟಿಂಗ್​ ಮಾತ್ರವಲ್ಲದೆ, ಬೌಲಿಂಗ್​ನಲ್ಲಿಯೂ ಲಕ್ನೋ ಅತ್ಯಂತ ಕಳಪೆ ಪ್ರದರ್ಶನ ತೋರಿತ್ತು. ಕನಿಷ್ಠ 1 ವಿಕೆಟ್​ ಕೂಡ ಕೀಳಲಾಗದ ಘೋರ ವೈಫಲ್ಯ ಕಂಡಿತ್ತು. ಈ ಹೀನಾಯ ಸೋಲಿನಿಂದ ಸಿಟ್ಟಿಗೆದ್ದ ಸಂಜೀವ್ ಗೋಯೆಂಕಾ ನಾಯಕ ರಾಹುಲ್ ಅವರೊಂದಿಗೆ ಕೋಪದಲ್ಲಿ ಮಾತನಾಡುತ್ತಿರುವಂತೆ ಕಂಡುಬಂದಿತ್ತು. ಇವರಿಬ್ಬರ ನಡುವಣ ಮಾತುಕತೆ ಏನು ಎಂಬುದು ಸ್ಪಷ್ಟವಾಗಿ ಕೇಳಿಸಿಲ್ಲವಾಗಿದ್ದರೂ, ಈ ದೃಶ್ಯ ನೋಡುವಾಗ ಇದು ಅಸಮಾಧಾನದ ನುಡಿ ಎಂದು ತಿಳಿದು ಬಂದಿತ್ತು.

ಗೋಯೆಂಕಾ ಮಾತಿಗೆ ರಾಹುಲ್ ಪ್ರತಿಕ್ರಿಯೆ ನೀಡಲು ಮುಂದಾದರೂ ಕೂಡ ಇದನ್ನು ಗೋಯೆಂಕಾ ಒಪ್ಪಿಕೊಳ್ಳದೆ ಏನೋ ಬೈಯುತ್ತಿರುವಂತೆ ದೃಶ್ಯದಲ್ಲಿ ಕಂಡುಬಂದಿತ್ತು. ಈ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುಗಿತ್ತು. ಈ ಘಟನೆಯಿಂದ ರಾಹುಲ್​ ನೊಂದಿದ್ದಾರೆ ಎನ್ನಲಾಗಿತ್ತು. ಪಂದ್ಯದಲ್ಲಿ ಟಾಸ್​ ಗೆದ್ದು ಆಮೆ ಗತಿಯ ಬ್ಯಾಟಿಂಗ್​ ನಡೆಸಿದ ಲಕ್ನೋ ಸೂಪರ್​ ಜೈಂಟ್ಸ್​ ನಿಗದಿತ 20 ಓವರ್​ಗಳಲ್ಲಿ 4 ವಿಕೆಟ್​ಗೆ 165 ರನ್​ ಬಾರಿಸಿತು. ಈ ಮೊತ್ತವನ್ನು ಬೆನ್ನಟ್ಟಿದ ಹೈದರಾಬಾದ್​ ಯಾವುದೇ ವಿಕೆಟ್​ ನಷ್ಟವಿಲ್ಲದೆ ಕೇವಲ 9.4 ಓವರ್​ಗಳಲ್ಲಿ 167 ರನ್​ ಬಾರಿಸಿ ಭರ್ಜರಿ 10 ವಿಕೆಟ್​ ಅಂತರದ ಗೆಲುವು ಸಾಧಿಸಿತು. ಲಕ್ನೋ ಬೌಲರ್​ಗಳನ್ನು ನಿರ್ದಾಕ್ಷಿಣ್ಯವಾಗಿ ಮನಬಂದಂತೆ ದಂಡಿಸಿದ ಹೆಡ್ ಮತ್ತು ಅಭಿಷೇಕ್​​ ಸ್ಟೇಡಿಯಂನ ಮೂಲೆ ಮೂಲೆಗೂ ಚೆಂಡನ್ನು ಬಾರಿಸಿದ್ದರು.

Continue Reading

ಪ್ರಮುಖ ಸುದ್ದಿ

IPL 2024 : ನಾಯಕರಾಗಿ ನೀವೇನು ಮಾಡಿದ್ರಿ? ಪಾಂಡ್ಯನನ್ನು ಟೀಕಿಸಿದ್ದ ವಿಲಿಯರ್ಸ್​ಗೆ ತಿರುಗೇಟು ಕೊಟ್ಟ ಗಂಭೀರ್​

IPL 2024: ಕೋಲ್ಕತಾ ನೈಟ್ ರೈಡರ್ಸ್ ತಂಡದ ಮೆಂಟರ್ ಗೌತಮ್ ಗಂಭೀರ್ ಅವರು ಇದೀಗ ಆಲ್​ರೌಂಡರ್​ ಪಾಂಡ್ಯ ಬೆಂಬಲಕ್ಕೆ ನಿಂತಿದ್ದಾರೆ. ಅವರು ಎಬಿ ಡಿವಿಲಿಯರ್ಸ್ ಮತ್ತು ಪೀಟರ್ಸನ್ ವಿರುದ್ಧ ವಾಗ್ದಾಳಿ ನಡೆಸಿದ್ದು, ಅವರಿಬ್ಬರ ಹೇಳಿಕೆಗಳು ಸರಿಯಲ್ಲ ಎಂದು ಹೇಳಿದ್ದಾರೆ. ಆ ರೀತಿ ಹೇಳುವುದಕ್ಕೆ ನಾಯಕರಾಗಿ ಅವರಿಬ್ಬರ ಟ್ರ್ಯಾಕ್ ರೆಕಾರ್ಡ್ ಎಷ್ಟಿದೆ ಎಂಬುದನ್ನು ಪ್ರಶ್ನಿಸಿದ್ದಾರೆ.

VISTARANEWS.COM


on

IPL 2024
Koo

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ 2024 ರಲ್ಲಿ (IPL 2024) ಮುಂಬೈ ಇಂಡಿಯನ್ಸ್ ತಂಡದ ನಾಯಕನಾಗಿ ಹಾರ್ದಿಕ್ ಪಾಂಡ್ಯ (Hardik Pandya) ವಿಫಲಗೊಂಡಿದ್ದಾರೆ. ಪ್ಲೇ ಆಫ್ ರೇಸ್ ನಿಂದ ಹೊರಗುಳಿದ ಮೊದಲ ತಂಡ ಎಂಬ ಕುಖ್ಯಾತಿಗೆ ಮುಂಬಯಿ ತಂಡ ಪಾತ್ರವಾಗಿದೆ. ಹಾರ್ದಿಕ್ ಪಾಂಡ್ಯ ನಾಯಕನಾ ಬಳಿಕದಿಂದ ಅವರು ಸಾಕಷ್ಟು ಅವಮಾನಗಳನ್ನು ಎದುರಿಸಿದ್ದಾರೆ. ಅಭಿಮಾನಿಗಳ ಕೀಟಲೆಗಳ ಜತೆಗೆ ಅನೇಕ ಹಿರಿಯ ಆಟಗಾರರ ಮೂದಲಿಕೆಗಳನ್ನೂ ಕೇಳುವಂತಾಗಿದೆ. ಇಂಗ್ಲೆಂಡ್​ನ ಮಾಜಿ ಆಟಗಾರ ಕೆವಿನ್ ಪೀಟರ್ಸನ್ ಮತ್ತು ದಕ್ಷಿಣ ಆಫ್ರಿಕಾದ ಎಬಿ ಡಿವಿಲಿಯರ್ಸ್ ಹಾರ್ದಿಕ್ ನಾಯಕತ್ವದ ಶೈಲಿಯನ್ನು ಸತತವಾಗಿ ಪ್ರಶ್ನಿಸಿದ್ದರು. ತಮ್ಮ ತಂಡದ ವೈಫಲ್ಯಕ್ಕೆ ಹಾರ್ದಿಕ್ ಕಾರಣ ಎಂದು ಇಬ್ಬರೂ ಷರಾ ಬರೆದಿದ್ದರು.

ಕೋಲ್ಕತಾ ನೈಟ್ ರೈಡರ್ಸ್ ತಂಡದ ಮೆಂಟರ್ ಗೌತಮ್ ಗಂಭೀರ್ ಅವರು ಇದೀಗ ಆಲ್​ರೌಂಡರ್​ ಪಾಂಡ್ಯ ಬೆಂಬಲಕ್ಕೆ ನಿಂತಿದ್ದಾರೆ. ಅವರು ಎಬಿ ಡಿವಿಲಿಯರ್ಸ್ ಮತ್ತು ಪೀಟರ್ಸನ್ ವಿರುದ್ಧ ವಾಗ್ದಾಳಿ ನಡೆಸಿದ್ದು, ಅವರಿಬ್ಬರ ಹೇಳಿಕೆಗಳು ಸರಿಯಲ್ಲ ಎಂದು ಹೇಳಿದ್ದಾರೆ. ಆ ರೀತಿ ಹೇಳುವುದಕ್ಕೆ ನಾಯಕರಾಗಿ ಅವರಿಬ್ಬರ ಟ್ರ್ಯಾಕ್ ರೆಕಾರ್ಡ್ ಎಷ್ಟಿದೆ ಎಂಬುದನ್ನು ಪ್ರಶ್ನಿಸಿದ್ದಾರೆ.

ಈ ಇಬ್ಬರು ನಾಯಕರಾಗಿದ್ದ ವೇಳೆ ಅವರು ಉತ್ತಮ ಪ್ರದರ್ಶನ ನೀಡಿರಲಿಲ್ಲ. ಕೆವಿನ್ ಪೀಟರ್ಸನ್ ಮತ್ತು ಎಬಿ ಡಿವಿಲಿಯರ್ಸ್ ನಾಯಕರಾಗಿ ಗಮನಾರ್ಹವಾಗಿ ಏನನ್ನೂ ಸಾಧಿಸಿಲ್ಲ. ನೀವು ಅವರ ದಾಖಲೆಗಳನ್ನು ಮೊದಲು ನೋಡಿಕೊಳ್ಳಿ. ಅದು ಚೆನ್ನಾಗಿದ್ದರೆ ಉಳಿದವರ ದಾಖಲೆಗಳನ್ನು ವಿಮರ್ಶೆ ಮಾಡುವುದು ಸೂಕ್ತ ಎಂದು ಗಂಭೀರ್ ಟೀಕಿಸಿದ್ದಾರೆ.

ಇದನ್ನೂ ಓದಿ: Team India New Head Coach: ಭಾರತ ತಂಡಕ್ಕೆ ಆಸೀಸ್ ಮಾಜಿ​ ಆಟಗಾರ ಕೋಚ್​ ಆಗುವುದು ನಿಶ್ಚಿತ

ಐಪಿಎಲ್​​ನಲ್ಲಿ ಎಬಿ ಡಿವಿಲಿಯರ್ಸ್ ಎಂದಿಗೂ ನಾಯಕತ್ವ ವಹಿಸಿಲ್ಲ. ಎಬಿಡಿ ಸಾಧನೆ ಎಂದರೆ ಸ್ವಂತ ಸ್ಕೋರ್​ಗಳು. ಅದನ್ನು ಹೊರತುಪಡಿಸಿ ಅವರು ಏನನ್ನೂ ಸಾಧಿಸಿದ್ದಾರೆ ಎಂದು ನಾನು ಭಾವಿಸುವುದಿಲ್ಲ ಎಂದು ಗಂಭೀರ್​ ಹೇಳಿದ್ದಾರೆ.

ಹಾರ್ದಿಕ್ ಪಾಂಡ್ಯ ಐಪಿಎಲ್ ವಿಜೇತ ನಾಯಕ. ಆದ್ದರಿಂದ ನೀವು ಕಿತ್ತಳೆಯನ್ನು ಕಿತ್ತಳೆಗೆ ಹೋಲಿಸಬೇಕು ಮತ್ತು ಕಿತ್ತಳೆಯನ್ನು ಸೇಬುಗಳಿಗೆ ಹೋಲಿಸಬಾರದು ಎಂದು ಗೌತಮ್ ಗಂಭೀರ್ ಹೇಳಿಕೆ ನೀಡಿದ್ದಾರೆ.

Continue Reading
Advertisement
SSLC Result
ಪ್ರಮುಖ ಸುದ್ದಿ5 mins ago

ವಿಸ್ತಾರ ಸಂಪಾದಕೀಯ: ರಾಜ್ಯ ಪ್ರಾಥಮಿಕ- ಪ್ರೌಢಶಾಲಾ ಶಿಕ್ಷಣದ ಪರಿಸ್ಥಿತಿ ಸರಿಹೋಗುವುದೆಂದು?

Kangana Ranaut
ಪ್ರಮುಖ ಸುದ್ದಿ14 mins ago

Kangana Ranaut : ಬಿಜೆಪಿ ಅಭ್ಯರ್ಥಿ ಕಂಗನಾ ರನೌತ್​ ಬಳಿ ಇರುವ ಆಸ್ತಿ ಎಷ್ಟು? ಇಲ್ಲಿದೆ ಎಲ್ಲ ಮಾಹಿತಿ

heavy wind and rain damaged tree and electricity poles In Jholada Gudde village
ಶಿವಮೊಗ್ಗ17 mins ago

Karnataka Weather: ಭಾರೀ ಗಾಳಿ ಮಳೆಗೆ ಧರೆಗುರುಳಿದ ಬೃಹತ್‌ ಮರ, ವಿದ್ಯುತ್‌ ಕಂಬ

ಪ್ರಮುಖ ಸುದ್ದಿ21 mins ago

SSLC Result 2024: ಎಸ್‌ಎಸ್‌ಎಲ್‌ಸಿ ಸಾಧಕರನ್ನು ಸನ್ಮಾನಿಸಿ, ಪ್ರೋತ್ಸಾಹ ಧನ ಘೋಷಿಸಿದ ಸಿಎಂ, ಡಿಸಿಎಂ

IPL 2024
ಕ್ರಿಕೆಟ್25 mins ago

IPL 2024 : ಲಕ್ನೊ ವಿರುದ್ಧ 19 ರನ್ ವಿಜಯ, ಗೆಲುವಿನೊಂದಿಗೆ ಐಪಿಎಲ್​ ಅಭಿಯಾನ ಮುಗಿಸಿದ ಡೆಲ್ಲಿ

Team India
ಪ್ರಮುಖ ಸುದ್ದಿ1 hour ago

Team India : ದ್ರಾವಿಡ್​ ಬಳಿಕ ಇವರೇ ಆಗ್ತಾರೆ ಭಾರತ ತಂಡದ ಕೋಚ್​​

Victoria Hospital
ಕರ್ನಾಟಕ1 hour ago

Victoria Hospital: ವಿಕ್ಟೋರಿಯಾ ಆಸ್ಪತ್ರೆಯಿಂದ ವಜಾಗೊಂಡಿದ್ದ 55 ಸಿಬ್ಬಂದಿ ಮರು ನೇಮಕ

KL Rahul
ಕ್ರೀಡೆ2 hours ago

KL Rahul : ಗಲಾಟೆ ಚಾಪ್ಟರ್ ಕ್ಲೋಸ್​​; ಕೆ. ಎಲ್​ ರಾಹುಲ್​ ಹಿಡಿದ ಕ್ಯಾಚ್​ಗೆ ಮೆಚ್ಚಿ ಚಪ್ಪಾಳೆ ತಟ್ಟಿದ ಗೋಯೆಂಕಾ

Prajwal Revanna Case
ಕರ್ನಾಟಕ3 hours ago

Prajwal Revanna Case: ಪ್ರಜ್ವಲ್‌ ರೇವಣ್ಣ ನಾಳೆಯೇ ಜರ್ಮನಿಯಿಂದ ಭಾರತಕ್ಕೆ?; ವಿಸ್ತಾರ ನ್ಯೂಸ್‌ಗೆ ಮಹತ್ವದ ದಾಖಲೆ ಲಭ್ಯ

Bank Loan Fraud
ಪ್ರಮುಖ ಸುದ್ದಿ3 hours ago

Bank Loan Fraud : 34,000 ಕೋಟಿ ರೂ. ಬ್ಯಾಂಕ್​​ ವಂಚನೆ, ಡಿಎಚ್​​ಎಫ್ಎಲ್​​​ ಮಾಜಿ ನಿರ್ದೇಶಕನ ಬಂಧನ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Prajwal Revanna Case
ಕರ್ನಾಟಕ3 hours ago

Prajwal Revanna Case: ಪ್ರಜ್ವಲ್‌ ರೇವಣ್ಣ ನಾಳೆಯೇ ಜರ್ಮನಿಯಿಂದ ಭಾರತಕ್ಕೆ?; ವಿಸ್ತಾರ ನ್ಯೂಸ್‌ಗೆ ಮಹತ್ವದ ದಾಖಲೆ ಲಭ್ಯ

HD Revanna Released first reaction after release will be acquitted of all charges
ರಾಜಕೀಯ5 hours ago

HD Revanna Released: ರಿಲೀಸ್‌ ಬಳಿಕ ರೇವಣ್ಣ ಫಸ್ಟ್‌ ರಿಯಾಕ್ಷನ್;‌ ನ್ಯಾಯಾಂಗದ ಮೇಲೆ ನಂಬಿಕೆ ಇದೆ; ಆರೋಪ ಮುಕ್ತನಾಗುವೆ

CM Siddaramaiah says Our government is stable for 5 years BJP will disintegrate
Lok Sabha Election 20247 hours ago

CM Siddaramaiah: ನಮ್ಮ ಸರ್ಕಾರ 5 ವರ್ಷ ಸುಭದ್ರ; ಚುನಾವಣೆ ಬಳಿಕ ಬಿಜೆಪಿ ಛಿದ್ರ ಎಂದ ಸಿಎಂ ಸಿದ್ದರಾಮಯ್ಯ!

I dont want to go to other states for Lok Sabha Election 2024 campaign for Congress says CM Siddaramaiah
Lok Sabha Election 202411 hours ago

CM Siddaramaiah: ಕಾಂಗ್ರೆಸ್‌ ಪರ ಬೇರೆ ರಾಜ್ಯಗಳಿಗೆ ಪ್ರಚಾರಕ್ಕೆ ಹೋಗಲು ನನಗೆ ಇಷ್ಟವಿಲ್ಲ: ಸಿಎಂ ಸಿದ್ದರಾಮಯ್ಯ!

HD Revanna Bail I am not happy that Revanna has been released says HD Kumaraswamy
ರಾಜಕೀಯ11 hours ago

HD Revanna Bail: ರೇವಣ್ಣ ಬಿಡುಗಡೆಯಾಗಿದ್ದಕ್ಕೆ ನಾನಂತೂ ಖುಷಿ ಪಡಲ್ಲ ಎಂದ ಎಚ್‌ಡಿಕೆ!

karnataka Rain Effected
ಬೆಂಗಳೂರು12 hours ago

Karnataka Rain: ಮಿಡ್‌ನೈಟ್‌ ಮಳೆ ಅವಾಂತರ; ಮರಗಳು, ವಿದ್ಯುತ್‌ ಕಂಬಗಳು ಧರೆಗೆ, ಕುಸಿದು ಬಿದ್ದ ಮನೆ

Dina Bhavishya
ಭವಿಷ್ಯ19 hours ago

Dina Bhavishya : ಉದ್ಯೋಗದ ಸ್ಥಳದಲ್ಲಿ ನಿಮ್ಮ ವಿರುದ್ಧ ಪಿತೂರಿ ಮಾಡ್ಬಹುದು ಎಚ್ಚರ!

HD Revanna Bail Revanna will not leave the country condition imposed by the court
ಕ್ರೈಂ1 day ago

HD Revanna Bail: ರೇವಣ್ಣ ದೇಶ ಬಿಡಂಗಿಲ್ಲ, ಕೆ.ಆರ್‌. ನಗರಕ್ಕೆ ಎಂಟ್ರಿ ಕೊಡಂಗಿಲ್ಲ! ಕೋರ್ಟ್‌ ವಿಧಿಸಿದ ಷರತ್ತು ಏನು?

HD Revanna Bail
ಕ್ರೈಂ1 day ago

HD Revanna Bail: ಎಚ್‌.ಡಿ ರೇವಣ್ಣಗೆ ಕೊನೆಗೂ ಜಾಮೀನು; ಎಸ್‌ಐಟಿಗೆ ಮುಖಭಂಗ!

Prajwal Revanna Case Revanna bail plea to be heard Judge reprimands SIT cops for their behaviour
ಕ್ರೈಂ1 day ago

Prajwal Revanna Case: ರೇವಣ್ಣ ಜಾಮೀನು ಅರ್ಜಿ ವಿಚಾರಣೆ; ಎಸ್‌ಐಟಿ ಪೊಲೀಸರ ವರ್ತನೆಗೆ ಜಡ್ಜ್‌ ಗರಂ!

ಟ್ರೆಂಡಿಂಗ್‌