Shubman Gill | ಭಾರತ ತಂಡದ ಪರ ದ್ವಿಶತಕ ಬಾರಿಸಿದ ಐದನೇ ಆಟಗಾರ ಶುಬ್ಮನ್​ ಗಿಲ್​, ಉಳಿದವರು ಯಾರು? - Vistara News

ಕ್ರಿಕೆಟ್

Shubman Gill | ಭಾರತ ತಂಡದ ಪರ ದ್ವಿಶತಕ ಬಾರಿಸಿದ ಐದನೇ ಆಟಗಾರ ಶುಬ್ಮನ್​ ಗಿಲ್​, ಉಳಿದವರು ಯಾರು?

ಸಚಿನ್​ ತೆಂಡೂಲ್ಕರ್​ ಅವರು ಭಾರತ ತಂಡದ ಪರ ದ್ವಿ ಶತಕ ಬಾರಿಸಿ ಮೊದಲ ಆಟಗಾರರಾಗಿದ್ದು, ಶುಬ್ಮನ್​ ಗಿಲ್​ ಐದನೇ ಶತಕ ಬಾರಿಸಿದ್ದಾರೆ.

VISTARANEWS.COM


on

Shubman gill
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಹೈದರಾಬಾದ್​: ಟೀಮ್​ ಇಂಡಿಯಾದ ಆರಂಭಿಕ ಬ್ಯಾಟರ್​ ಶುಬ್ಮನ್ ಗಿಲ್ ಪ್ರವಾಸ ನ್ಯೂಜಿಲ್ಯಾಂಡ್​ ವಿರುದ್ಧದ ಏಕ ದಿನ ಸರಣಿಯ ಮೊದಲ ಪಂದ್ಯದಲ್ಲಿ ಅಮೋಘ ದ್ವಿಶತಕ ಬಾರಿಸಿದ್ದಾರೆ. ಏಕ ಕ್ರಿಕೆಟ್​ನಲ್ಲಿ ಅವರದ್ದು ಚೊಚ್ಚಲ ದ್ವಿಶತಕ. ಈ ಸಾಧನೆಯೊಂದಿಗೆ ಅವರು ಭಾರತ ತಂಡದ ಪರ ದ್ವಿ ಶತಕ ಬಾರಿಸಿದ ಐದನೇ ಆಟಗಾರ ಎಂಬ ಸಾಧನೆ ಮಾಡಿದ್ದಾರೆ.

ಭಾರತ ತಂಡದ ಪರ ಏಕ ದಿನ ಕ್ರಿಕೆಟ್​ನಲ್ಲಿ ಮೊದಲ ಶತಕ ಬಾರಿಸಿದವರು ದಿಗ್ಗಜ ಸಚಿನ್​ ತೆಂಡೂಲ್ಕರ್​ ಅವರು. 2010ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಅಜೇಯ 200 ರನ್​ ಬಾರಿಸಿದ್ದಾರೆ. 20111ರಲ್ಲಿ ಸ್ಫೋಟಕ ಬ್ಯಾಟರ್​ ವೀರೇಂದ್ರ ಸೆಹ್ವಾಗ್ ಅವರು ದ್ವಿತಕ ಬಾರಿಸಿದರು. ಅವರು ವೆಸ್ಟ್​ ಇಂಡೀಸ್ ವಿರುದ್ಧ ಈ ಸಾಧನೆ ಮಾಡಿದ್ದಾರೆ. ಮೂರನೆಯವರು ಭಾರತ ತಂಡದ ಹಾಲಿ ನಾಯಕ ರೋಹಿತ್​ ಶರ್ಮ. ಅವರ ಖಾತೆಯಲ್ಲಿ ಒಟ್ಟು ಮೂರು ದ್ವಿ ಶತಕಗಳಿವೆ. 2014ರಲ್ಲಿ ಅವರು ಲಂಕ ತಂಡದ ವಿರುದ್ಧ 266 ರನ್​ ಬಾರಿಸಿದ್ದಾರೆ. ಅದಕ್ಕಿಂತ ಮೊದಲು 2013ರಲ್ಲಿ ಆಸ್ಟ್ರೇಲಿಯಾ ವಿರುದ್ಧ 209 ರನ್​ ಬಾರಿಸಿದ್ದರೆ, 2017ರಲ್ಲಿ ಶ್ರೀಲಂಕಾ ವಿರುದ್ಧವೇ ಅಜೇಯ 208 ರನ್​ ಬಾರಿಸಿದ್ದರು.

ನಾಲ್ಕನೇ ಸ್ಥಾನ ಪಡೆದವರು ವಿಕೆಟ್​ಕೀಪರ್​ ಬ್ಯಾಟ್ಸ್​ಮನ್ ಇಶಾನ್​ ಕಿಶನ್​. ಕಳೆದ ತಿಂಗಳು ಭಾರತ ತಂಡ ಬಾಂಗ್ಲಾದೇಶ ಪ್ರವೇಶ ಹೋಗಿದ್ದ ವೇಳೆ 131 ಎಸೆತಗಳಲ್ಲಿ 210 ರನ್​ ಬಾರಿಸಿದ್ದರು. ಇವರು ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಅತಿ ವೇಗದ ದ್ವಿಶತಕ ಬಾರಿಸಿದ ಆಟಗಾರ ಎಂಬ ಖ್ಯಾತಿಯನ್ನೂ ಪಡೆದುಕೊಂಡಿದ್ದಾರೆ. ಶುಬ್ಮನ್​ ಗಿಲ್​ ಐದನೇ ಸ್ಥಾನದಲ್ಲಿದ್ದಾರೆ. ಶುಬ್ಮನ್​ ಗಿಲ್​ 145 ಎಸೆತಗಳಲ್ಲಿ ದ್ವಿ ಶತಕ ಬಾರಿಸಿದ್ದಾರೆ. ಕೊನೆಯಲ್ಲಿ ಸತತ ಮೂರು ಸಿಕ್ಸರ್​ ಬಾರಿಸುವ ಮೂಲಕ ದ್ವಿ ಶತಕದ ಗಡಿ ದಾಟಿದ್ದಾರೆ.

ಇದನ್ನೂ ಓದಿ | Ishan Kishan | ಅತಿ ವೇಗದಲ್ಲಿ ದ್ವಿಶತಕ ಬಾರಿಸಿ ದಾಖಲೆ ಬರೆದ ಇಶಾನ್‌ ಕಿಶನ್‌ ಯಾರು? ಸಾಧನೆಗಳೇನು?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

IPL 2024 Points Table: ಲಕ್ನೋ, ಮುಂಬೈ ಸೋಲಿನ ಬಳಿಕ ಅಂಕಪಟ್ಟಿ ಹೇಗಿದೆ?

IPL 2024 Points Table: 17ನೇ ಆವೃತ್ತಿಯ ಐಪಿಎಲ್​ನಲ್ಲಿ ರಾಜಸ್ಥಾನ್​ ರಾಯಲ್ಸ್​ ತಂಡ 16 ಅಂಕ ಗಳಿಸಿ ಪ್ಲೇ ಆಫ್​ ಟಿಕೆಟ್ ಬಹುತೇಕ​ ಖಚಿತಪಡಿಸಿಕೊಂಡಿದೆ.

VISTARANEWS.COM


on

IPL 2024 Points Table
Koo

ಬೆಂಗಳೂರು: ಶನಿವಾರ ನಡೆದ ಐಪಿಎಲ್​ನ ಡಬಲ್​ ಹೆಡರ್​ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್​(Delhi Capitals) ಮತ್ತು ರಾಜಸ್ಥಾನ್(Rajasthan Royals)​ ರಾಯಲ್ಸ್​ ತಂಡಗಳು ಗೆಲುವು ಸಾಧಿಸಿದರೆ. ಲಕ್ನೋ ಸೂಪರ್​ ಜೈಂಟ್ಸ್(Lucknow Super Giants )​ ಮತ್ತು ಮುಂಬೈ ಇಂಡಿಯನ್ಸ್(Mumbai Indians)​​ ಸೋಲು ಕಂಡಿತು. ಈ ಸೋಲು ಮತ್ತು ಗೆಲುವಿನಿಂದ ಅಂಕಪಟ್ಟಿಯಲ್ಲಿ(IPL 2024 Points Table) ಮಹತ್ವದ ಬದಲಾವಣೆ ಸಂಭವಿಸಿದೆ.

ಅಂಕಪಟ್ಟಿ

ತಂಡಪಂದ್ಯಗೆಲುವುಸೋಲುಅಂಕ
ರಾಜಸ್ಥಾನ್​ ರಾಯಲ್ಸ್​98116 (+0.694)
ಕೆಕೆಆರ್​​85310 (+0.972)
ಹೈದರಾಬಾದ್​​85310 (+0.577)
ಲಕ್ನೋ95410 (+0.059)
ಡೆಲ್ಲಿ105510 (0.276)
ಚೆನ್ನೈ8448 (+0.415)
ಗುಜರಾತ್​9458 (-0.974)
ಪಂಜಾಬ್9366 (-0.187)
ಮುಂಬೈ9366 (-0.261)
ಆರ್​ಸಿಬಿ9274 (-0.721)

ರಾಜಸ್ಥಾನ್​ಗೆ 7 ವಿಕೆಟ್​ ಗೆಲುವು


ಇಲ್ಲಿನ ಶ್ರೀ ಅಟಲ್​ಬಿಹಾರಿ ವಾಜಪೇಯಿ ಏಕನಾ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್​​ ನಡೆಸಿದ ಲಕ್ನೊ ತಂಡ ನಿಗದಿತ 20 ಓವರ್​ಗಳಲ್ಲಿ 5 ವಿಕೆಟ್​ಗೆ 196 ರನ್ ಬಾರಿಸಿತು. ಗುರಿ ಬೆನ್ನಟ್ಟಿದ ರಾಜಸ್ಥಾನ್​ 6 ಎಸೆತಗಳು ಬಾಕಿ ಇರುವಂತೆಯೇ 3 ವಿಕೆಟ್​ಗೆ 199 ರನ್ ಬಾರಿಸಿ ಭರ್ಜರಿಗೆ ಗೆಲುವು ತನ್ನದಾಗಿಸಿಕೊಂಡಿತು. ದೊಡ್ಡ ಗುರಿಯನ್ನು ಬೆನ್ನಟ್ಟಲು ಆರಂಭಿಸಿದ ರಾಜಸ್ಥಾನ್ ತಂಡ ರನ್ ಗಳಿಸುತ್ತಲೇ ಸಾಗಿತು. ಯಶಸ್ವಿ ಜೈಸ್ವಾಲ್​ 24 ರನ್ ಬಾರಿಸಿದರೆ ಜೋಸ್​ ಬಟ್ಲರ್​​ 34 ರನ್​ಗಳ ಕೊಡುಗೆ ಕೊಟ್ಟರು. ಆ ಬಳಿಕ ಬಂದ ಸಂಜು ಸ್ಯಾಮ್ಸನ್ ವಿಕೆಟ್​ ಉರುಳದಂತೆ ನೋಡಿಕೊಂಡ ಜತೆಗೆ 33 ಎಸೆತಗಳಲ್ಲಿ 71 ರನ್ ಬಾರಿಸಿದರು. ಆದರೆ, ನಾಲ್ಕನೇ ಕ್ರಮಾಂಕದಲ್ಲಿ ಆಡಿದ ರಿಯಾನ್ ಪರಾಗ್​ 14 ರನ್​ಗೆ ಸೀಮಿತಗೊಂಡರು. ಆದರೆ ಐದನೇ ಕ್ರಮಾಂಕದಲ್ಲಿ ಆಡಿದ ಧ್ರುವ್ ಜುರೆಲ್​ ಅಮೋಘ ಇನಿಂಗ್ಸ್ ಆಡಿದರು. ಅವರು 34 ಎಸೆತಕ್ಕೆ 52 ರನ್​ ಕೊಡುಗೆ ಕೊಟ್ಟರು. ಇದು ಹಾಲಿ ಅವೃತ್ತಿಯಲ್ಲಿ ಅವರ ಮೊದಲ ಅರ್ಧ ಶತಕವಾಗಿದೆ.

ಇದನ್ನೂ ಓದಿ IPL 2024 : ಲಕ್ನೊ ವಿರುದ್ಧ ರಾಜಸ್ಥಾನ್​ಗೆ 7 ವಿಕೆಟ್​ ಭರ್ಜರಿ ಜಯ, ಪ್ಲೇಆಫ್​ ಹೊಸ್ತಿಲಲ್ಲಿ ಸಂಜು ಬಳಗ

ಡೆಲ್ಲಿಗೆ 10 ರನ್​ ಗೆಲುವು


ದಿನದ ಮೊದಲ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ 10 ರನ್​ ಗೆಲುವು ಸಾಧಿಸಿತು. ಇಲ್ಲಿನ ಅರುಣ್​ ಜೇಟ್ಲಿ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಮುಂಬಯಿ ಇಂಡಿಯನ್ಸ್ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ ಮೊದಲು ಬ್ಯಾಟ್​ ಮಾಡಿದ ಆತಿಥೇಯ ಡೆಲ್ಲಿ ಕ್ಯಾಪಿಟಲ್ಸ್ ಬಳಗ ನಿಗದಿತ 20 ಓವರ್​​ಗಳಲ್ಲಿ 4 ವಿಕೆಟ್​ಗೆ 257 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್​ ಮಾಡಿದ ಮುಂಬಯಿ ತನ್ನೆಲ್ಲ ಓವರ್​ಗಳು ಮುಕ್ತಾಯಗೊಂಡಾಗ 9 ವಿಕೆಟ್​ ನಷ್ಟಕ್ಕೆ 247 ರನ್​ ಬಾರಿಸಿ ಸೋಲೊಪ್ಪಿಕೊಂಡಿತು.

Continue Reading

ಪ್ರಮುಖ ಸುದ್ದಿ

IPL 2024 : ಲಕ್ನೊ ವಿರುದ್ಧ ರಾಜಸ್ಥಾನ್​ಗೆ 7 ವಿಕೆಟ್​ ಭರ್ಜರಿ ಜಯ, ಪ್ಲೇಆಫ್​ ಹೊಸ್ತಿಲಲ್ಲಿ ಸಂಜು ಬಳಗ

VISTARANEWS.COM


on

IPL 2024
Koo

ಲಖನೌ: ಸಂಜು ಸ್ಯಾಮ್ಸನ್ ಬಾರಿಸಿದ ಅಜೇಯ 71 ರನ್​ (ಅರ್ಧ ಶತಕ) ಹಾಗೂ ಧ್ರುವ್ ಜುರೆಲ್​ ಬಾರಿಸಿದ ಅಜೇಯ 52 ರನ್​ (ಅರ್ಧ ಶತಕ) ನೆರವಿನಿಂದ ಮಿಂಚಿದ ರಾಜಸ್ಥಾನ್ ರಾಯಲ್ಸ್ ತಂಡ ಐಪಿಎಲ್​ನ 44ನೇ ಪಂದ್ಯದಲ್ಲಿ (IPL 2024) ಲಕ್ನೊ ಸೂಪರ್​ ಜೈಂಟ್ಸ್ ವಿರುದ್ಧ 7 ವಿಕೆಟ್​ ಭರ್ಜರಿ ವಿಜಯ ದಾಖಲಿಸಿದೆ. ಈ ಮೂಲಕ ರಾಜಸ್ಥಾನ್ ತಂಡ ಹಾಲಿ ಆವೃತ್ತಿಯಲ್ಲಿ 8ನೇ ವಿಜಯವನ್ನು ತನ್ನದಾಗಿಸಿಕೊಂಡಿದೆ. ಒಟ್ಟು 16 ಅಂಕಗಳನ್ನು ಪಡೆದಿರುವ ರಾಜಸ್ಥಾನ್ ಬಳಗ ಬಹುತೇಕ ಪ್ಲೇ ಆಫ್ ಹಂತಕ್ಕೇರಿದೆ. ಆದರೆ, ಅದಿನ್ನೂ ಅಧಿಕೃತಗೊಂಡಿಲ್ಲ. ಅತ್ತ ಲಕ್ನೊ ತಂಡ ಸತತ ಎರಡು ಗೆಲುವಿನ ಬಳಿಕ ಸೋಲಿಗೆ ಸಿಲುಕಿದೆ. ಇದು ಆ ತಂಡಕ್ಕೆ ಒಟ್ಟು 9 ಪಂದ್ಯಗಳಲ್ಲಿ 4ನೇ ಸೋಲು. ಆದಾಗ್ಯೂ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿ ಉಳಿದಿದೆ.

ಇಲ್ಲಿನ ಶ್ರೀ ಅಟಲ್​ಬಿಹಾರಿ ವಾಜಪೇಯಿ ಏಕನಾ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ಪಂದ್ಯ ನಡೆಯಿತು. ಟಾಸ್ ಗೆದ್ದ ರಾಜಸ್ಥಾನ್ ಆಯ್ಕೆ ಮಾಡಿಕೊಂಡರೆ ಮೊದಲು ಬ್ಯಾಟ್​ ಮಾಡಿದ ಲಕ್ನೊ ಬಳಗ ನಿಗದಿತ 20 ಓವರ್​ಗಳಲ್ಲಿ 5 ವಿಕೆಟ್​ಗೆ 196 ರನ್ ಬಾರಿಸಿತು. ಪ್ರತಿಯಾಗಿ ಆಡಿದ ಉದ್ಘಾಟನಾ ಆವೃತ್ತಿಯ ಚಾಂಪಿಯನ್ ತಂಡ ಇನ್ನೂ 6 ಎಸೆತಗಳು ಬಾಕಿ ಇರುವಂತೆಯೇ 3 ವಿಕೆಟ್​ಗೆ 199 ರನ್ ಬಾರಿಸಿ ಭರ್ಜರಿಗೆ ಗೆಲವು ತನ್ನದಾಗಿಸಿಕೊಂಡಿತು.

ಇದನ್ನೂ ಓದಿ: KL Rahul : ಐಪಿಎಲ್​ನಲ್ಲಿ ಆರಂಭಿಕನಾಗಿ 4000 ರನ್ ಪೂರೈಸಿದ ಕೆಎಲ್ ರಾಹುಲ್; ಈ ಪಟ್ಟಿಯಲ್ಲಿ ಯಾರೆಲ್ಲ ಇದ್ದಾರೆ?

ಸಂಜು ಉತ್ತಮ ಬ್ಯಾಟಿಂಗ್​

ದೊಡ್ಡ ಗುರಿಯನ್ನು ಬೆನ್ನಟ್ಟಲು ಆರಂಭಿಸಿದ ರಾಜಸ್ಥಾನ್ ತಂಡ ರನ್ ಗಳಿಸುತ್ತಲೇ ಸಾಗಿತು. ಯಶಸ್ವಿ ಜೈಸ್ವಾಲ್​ 24 ರನ್ ಬಾರಿಸಿದರೆ ಜೋಸ್​ ಬಟ್ಲರ್​​ 34 ರನ್​ಗಳ ಕೊಡುಗೆ ಕೊಟ್ಟರು. ಆ ಬಳಿಕ ಬಂದ ಸಂಜು ಸ್ಯಾಮ್ಸನ್ ವಿಕೆಟ್​ ಉರುಳದಂತೆ ನೋಡಿಕೊಂಡ ಜತೆಗೆ 33 ಎಸೆತಗಳಲ್ಲಿ 71 ರನ್ ಬಾರಿಸಿದರು. ಆದರೆ, ನಾಲ್ಕನೇ ಕ್ರಮಾಂಕದಲ್ಲಿ ಆಡಿದ ರಿಯಾನ್ ಪರಾಗ್​ 14 ರನ್​ಗೆ ಸೀಮಿತಗೊಂಡರು. ಆದರೆ ಐದನೇ ಕ್ರಮಾಂಕದಲ್ಲಿ ಆಡಿದ ಧ್ರುವ್ ಜುರೆಲ್​ ಅಮೋಘ ಇನಿಂಗ್ಸ್ ಆಡಿದರು. ಅವರು 34 ಎಸೆತಕ್ಕೆ 52 ರನ್​ ಕೊಡುಗೆ ಕೊಟ್ಟರು. ಇದು ಹಾಲಿ ಅವೃತ್ತಿಯಲ್ಲಿ ಅವರ ಮೊದಲ ಅರ್ಧ ಶತಕವಾಗಿದೆ.

ಕಳಪೆ ಆರಂಭ

ಹಿಂದಿನ ಗೆಲುವಿನ ಉತ್ಸಾಹದೊಂದಿಗೆ ಬ್ಯಾಟಿಂಗ್ ಆರಂಭಿಸಿದ ಲಕ್ನೊ ತಂಡಕ್ಕೆ ಕ್ವಿಂಟನ್ ಡಿ ಕಾಕ್​ 8 ರನ್​ಗೆ ಔಟಾಗುವ ಮೂಲಕ ಹಿನ್ನಡೆ ಉಂಟಾಯಿತು. ಕೆ. ಎಲ್ ರಾಹುಲ್ 76 ರನ್​ ಬಾರಿಸುವ ಮೂಲಕ ತಂಡವನ್ನು ಕಾಪಾಡಿದರು. ಆದರೆ, ಹಿಂದಿನ ಪಂದ್ಯದ ಹೀರೊ ಮಾರ್ಕಸ್​ ಸ್ಟೊಯ್ನಿಸ್​ ಶೂನ್ಯಕ್ಕೆ ಔಟಾಗಿ ಹಿನ್ನಡೆ ಉಂಟು ಮಾಡಿದರು. ದೀಪಕ್ ಹೂಡ 50 ರನ್​ ಬಾರಿಸಿದರು. ಕೊನೆಯ ಬ್ಯಾಟರ್​ಗಳ ಸಣ್ಣ ಪುಟ್ಟ ರನ್​ಗಳ ಕೊಡುಗೆಗಳೊಂದಿಗೆ ಸ್ಪರ್ಧಾತ್ಮ ಮೊತ್ತ ಪೇರಿಸಿತು.

Continue Reading

ಕ್ರಿಕೆಟ್

KL Rahul : ಐಪಿಎಲ್​ನಲ್ಲಿ ಆರಂಭಿಕನಾಗಿ 4000 ರನ್ ಪೂರೈಸಿದ ಕೆಎಲ್ ರಾಹುಲ್; ಈ ಪಟ್ಟಿಯಲ್ಲಿ ಯಾರೆಲ್ಲ ಇದ್ದಾರೆ?

KL Rahul: ರಾಹುಲ್ ಪ್ರಸ್ತುತ ನಡೆಯುತ್ತಿರುವ ಐಪಿಎಲ್ ಋತುವಿನಲ್ಲಿ ಎಲ್ಎಸ್​​ಜಿ ತಂಡವನ್ನು ಉತ್ತಮವಾಗಿ ಮುನ್ನಡೆಸಿದ್ದಾರೆ. ಏಕೆಂದರೆ ಅವರು ತಮ್ಮ ಫ್ರಾಂಚೈಸಿಗಾಗಿ ಅತಿ ಹೆಚ್ಚು ರನ್ ಗಳಿಸಿದವರು. ಕರ್ನಾಟಕದ ಬ್ಯಾಟರ್​ ಎಂಟು ಪಂದ್ಯಗಳಲ್ಲಿ 39.62 ಸರಾಸರಿಯಲ್ಲಿ 317* ರನ್ ಗಳಿಸಿದ್ದಾರೆ.

VISTARANEWS.COM


on

KL Rahul
Koo

ಲಕ್ನೋ: ಇಂಡಿಯನ್ ಪ್ರೀಮಿಯರ್ ಲೀಗ್ 2024ರ (IPL 2024) ಶನಿವಾರ ರಾಜಸ್ಥಾನ್ ರಾಯಲ್ಸ್ (Rajasthan Royals) ವಿರುದ್ಧದ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ (LSG) ನಾಯಕ ಸ್ಥಿರ ಪ್ರದರ್ಶನ ಮುಂದವರಿಸಿದ್ದಾರೆ. ಅವರು ಆವೇಶ್​ ಖಾನ್ ಎಸೆತಕ್ಕೆ ಟ್ರೆಂಟ್ ಬೌಲ್ಟ್​ ಹಿಡಿದ ಕ್ಯಾಚ್​ಗೆ ಬಲಿಯಾಗುವ ಮೊದಲು ಪಂದ್ಯಾವಳಿಯಲ್ಲಿ ಆರಂಭಿಕನಾಗಿ 4000 ರನ್​ಗಳ ದಾಖಲೆ ಪೂರೈಸಿದ್ದಾರೆ. ಅವರು ಪಂದ್ಯದಲ್ಲಿ 76 ರನ್ ಗಳಿಸಿದ್ದಾರೆ.

ಲಕ್ನೊ ತಂಡ ಆರಂಭಿಕ ಆಟಗಾರ ಕ್ವಿಂಟನ್ ಡಿ ಕಾಕ್ ಮತ್ತು ಅಗ್ರ ಕ್ರಮಾಂಕದ ಬ್ಯಾಟರ್​ ಮಾರ್ಕಸ್ ಸ್ಟೊಯಿನಿಸ್ ಅವರನ್ನು ಬೇಗನೆ ಕಳೆದುಕೊಂಡರೂ ಎಲ್ಎಸ್ಜಿ ಪಂದ್ಯದಲ್ಲಿ ತನ್ನ ಹಿಡಿತವನ್ನು ಉಳಿಸಿಕೊಂಡಿತು. ರಾಹುಲ್​ 31 ಎಸೆತಗಳಲ್ಲಿ ಅರ್ಧಶತಕ ತಲುಪಿದರು. ಈ ವೇಳೆ ಅವರು ಐಪಿಎಲ್​ನಲ್ಲಿ ಆರಂಭಿಕನಾಗಿ 4000 ರನ್ ಪೂರೈಸಿದ ಐದನೇ ಬ್ಯಾಟ್ಸ್ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಈ ಸಾಧನೆಯನ್ನು ಸಾಧಿಸಲು ಅವರು 94 ಇನ್ನಿಂಗ್ಸ್ ಗಳನ್ನು ತೆಗೆದುಕೊಂಡರು.

ಶಿಖರ್ ಧವನ್ (6362), ಡೇವಿಡ್ ವಾರ್ನರ್ (5909), ಕ್ರಿಸ್ ಗೇಲ್ (4480) ಮತ್ತು ವಿರಾಟ್ ಕೊಹ್ಲಿ (4041) ಎಲೈಟ್ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

ಕಾಕತಾಳೀಯವೆಂಬಂತೆ ರಾಹುಲ್ ಪ್ರಸ್ತುತ ನಡೆಯುತ್ತಿರುವ ಐಪಿಎಲ್ ಋತುವಿನಲ್ಲಿ ಎಲ್ಎಸ್​​ಜಿ ತಂಡವನ್ನು ಉತ್ತಮವಾಗಿ ಮುನ್ನಡೆಸಿದ್ದಾರೆ. ಏಕೆಂದರೆ ಅವರು ತಮ್ಮ ಫ್ರಾಂಚೈಸಿಗಾಗಿ ಅತಿ ಹೆಚ್ಚು ರನ್ ಗಳಿಸಿದವರು. ಕರ್ನಾಟಕದ ಬ್ಯಾಟರ್​ ಎಂಟು ಪಂದ್ಯಗಳಲ್ಲಿ 39.62 ಸರಾಸರಿಯಲ್ಲಿ 317* ರನ್ ಗಳಿಸಿದ್ದಾರೆ. ಪ್ರಸಕ್ತ ಋತುವಿನಲ್ಲಿ ಅವರು 137.82 ರ ಯೋಗ್ಯ ಸ್ಟ್ರೈಕ್ ರೇಟ್ ಹೊಂದಿದ್ದಾರೆ.

ಒಟ್ಟಾರೆಯಾಗಿ, ರಾಹುಲ್ 127 ಐಪಿಎಲ್ ಪಂದ್ಯಗಳನ್ನು ಆಡಿದ್ದಾರೆ, 46.57 ಸರಾಸರಿಯಲ್ಲಿ 4517* ರನ್ ಗಳಿಸಿದ್ದಾರೆ. ಲಾಭದಾಯಕ ಪಂದ್ಯಾವಳಿಯಲ್ಲಿ ಅವರು ನಾಲ್ಕು ಶತಕಗಳು ಮತ್ತು 36 ಅರ್ಧಶತಕಗಳನ್ನು ಹೊಂದಿದ್ದಾರೆ.

ಅಭ್ಯಾಸದ ಮಧ್ಯೆ ಮೊಬೈಲ್​ನಲ್ಲೇ ಡೆಲ್ಲಿ ವರ್ಸಸ್​​ ಮುಂಬೈ ಮ್ಯಾಚ್ ನೋಡಿದ ಕೊಹ್ಲಿ

ಅಹಮದಾಬಾದ್: ಐಪಿಎಲ್ 2024ರ (IPL 2024) 43 ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡ ಸೋಲಿಸಿದೆ. ಈ ಪಂದ್ಯ ಸಿಕ್ಕಾಪಟ್ಟೆ ಕುತೂಹಲಕಾರಿಯಾಗಿತ್ತು. ಅಂತೆಯೇ ಅರ್​ಸಿಬಿಯ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ((Virat Kohli) ) ಏಪ್ರಿಲ್ 27ರಂದು ತಂಡದ ಹೋಟೆಲ್​ನಲ್ಲಿ ಇರುವಾಗಲೇ ಪಂದ್ಯವನ್ನು ವೀಕ್ಷಿಸಿದ್ದಾರೆ. ಈ ವಿಡಿಯೊ ವೈರಲ್ ಆಗಿದೆ.

ಗುಜರಾತ್ ಜೈಂಟ್ಸ್ ವಿರುದ್ಧದ ಆರ್​ಸಿಬಿ ಪಂದ್ಯದ ಹಿನ್ನೆಲೆಯಲ್ಲಿ ಕೊಹ್ಲಿ ಸತತವಾಗಿ ಅಭ್ಯಾಸ ನಡೆಸುತ್ತಿದ್ದಾರೆ. ಅದರ ನಡುವೆಯೂ ಅವರು ಮೊಬೈಲ್​ನಲ್ಲಿ ಮ್ಯಾಚ್ ನೋಡಿ ಖುಷಿ ಪಟ್ಟಿದ್ದಾರೆ. ಆರ್​ಸಿಬಿಯ ತರಬೇತಿ ಅವಧಿಗೆ ಮುಂಚಿತವಾಗಿ ಕ್ರಿಕೆಟಿಗ ಊಟ ಮಾಡುತ್ತಿದ್ದಾಗಲೂ ಆಟವನ್ನು ವೀಕ್ಷಿಸುತ್ತಿದ್ದರು. ಹೋಟೆಲ್​​ನಲ್ಲಿ ಹಾದು ಹೋಗಿರುವ ವ್ಯಕ್ತಿಯೊಬ್ಬರು ಅದನ್ನು ರೆಕಾರ್ಡ್ ಮಾಡಿದ್ದಾರೆ. ಏಪ್ರಿಲ್ 25 ರಂದು ಹೈದರಾಬಾದ್​ನಲ್ಲಿ ನಡೆದ ಸನ್​ರೈಸರ್ಸ್​ ಹೈದರಾಬಾದ್ (ಎಸ್​ಆರ್​​ಎಚ್​​) ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮ್ಯಾಚ್ ವಿನ್ನಿಂಗ್ ಅರ್ಧಶತಕ ಬಾರಿಸಿದ್ದರು.

ಅಹಮದಾಬಾದ್​ನಲ್ಲಿ ಕೊಹ್ಲಿಗೆ ಭರ್ಜರಿ ಸ್ವಾಗತ

ಬೆಂಗಳೂರು: ಮುಂಬರುವ ಐಪಿಎಲ್ 2024 ರಲ್ಲಿ (IPL 2024) ಆತಿಥೇಯ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯಕ್ಕಾಗಿ ವಿರಾಟ್ ಕೊಹ್ಲಿ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ತಂಡದ ಇತರ ಆಟಗಾರರು ಅಹಮದಾಬಾದ್​ಗೆ ಆಗಮಿಸಿದ್ದಾರೆ. ಬಹುನಿರೀಕ್ಷಿತ ಮುಖಾಮುಖಿಗೆ ಒಂದು ದಿನ ಮೊದಲು ಬಂದ ಆರ್​ಸಿಬಿ ಪಡೆಗಳಿಗೆ ತಂಡದ ಹೋಟೆಟ್​ನಲ್ಲಿ ಭವ್ಯ ಸ್ವಾಗತ ದೊರೆಯಿತು.

Continue Reading

ಪ್ರಮುಖ ಸುದ್ದಿ

Virat Kohli : ಅಭ್ಯಾಸದ ಮಧ್ಯೆ ಮೊಬೈಲ್​ನಲ್ಲೇ ಡೆಲ್ಲಿ ವರ್ಸಸ್​​ ಮುಂಬೈ ಮ್ಯಾಚ್ ನೋಡಿದ ಕೊಹ್ಲಿ

Virat kohli: ಗುಜರಾತ್ ಜೈಂಟ್ಸ್ ವಿರುದ್ಧದ ಆರ್​ಸಿಬಿ ಪಂದ್ಯದ ಹಿನ್ನೆಲೆಯಲ್ಲಿ ಕೊಹ್ಲಿ ಸತತವಾಗಿ ಅಭ್ಯಾಸ ನಡೆಸುತ್ತಿದ್ದಾರೆ. ಅದರ ನಡುವೆಯೂ ಅವರು ಮೊಬೈಲ್​ನಲ್ಲಿ ಮ್ಯಾಚ್ ನೋಡಿ ಖುಷಿ ಪಟ್ಟಿದ್ದಾರೆ. ಆರ್​ಸಿಬಿಯ ತರಬೇತಿ ಅವಧಿಗೆ ಮುಂಚಿತವಾಗಿ ಕ್ರಿಕೆಟಿಗ ಊಟ ಮಾಡುತ್ತಿದ್ದಾಗಲೂ ಆಟವನ್ನು ವೀಕ್ಷಿಸುತ್ತಿದ್ದರು. ಹೋಟೆಲ್​​ನಲ್ಲಿ ಹಾದು ಹೋಗಿರುವ ವ್ಯಕ್ತಿಯೊಬ್ಬರು ಅದನ್ನು ರೆಕಾರ್ಡ್ ಮಾಡಿದ್ದಾರೆ.

VISTARANEWS.COM


on

virat kohli
Koo

ಅಹಮದಾಬಾದ್: ಐಪಿಎಲ್ 2024ರ (IPL 2024) 43 ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡ ಸೋಲಿಸಿದೆ. ಈ ಪಂದ್ಯ ಸಿಕ್ಕಾಪಟ್ಟೆ ಕುತೂಹಲಕಾರಿಯಾಗಿತ್ತು. ಅಂತೆಯೇ ಅರ್​ಸಿಬಿಯ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ((Virat Kohli) ) ಏಪ್ರಿಲ್ 27ರಂದು ತಂಡದ ಹೋಟೆಲ್​ನಲ್ಲಿ ಇರುವಾಗಲೇ ಪಂದ್ಯವನ್ನು ವೀಕ್ಷಿಸಿದ್ದಾರೆ. ಈ ವಿಡಿಯೊ ವೈರಲ್ ಆಗಿದೆ.

ಗುಜರಾತ್ ಜೈಂಟ್ಸ್ ವಿರುದ್ಧದ ಆರ್​ಸಿಬಿ ಪಂದ್ಯದ ಹಿನ್ನೆಲೆಯಲ್ಲಿ ಕೊಹ್ಲಿ ಸತತವಾಗಿ ಅಭ್ಯಾಸ ನಡೆಸುತ್ತಿದ್ದಾರೆ. ಅದರ ನಡುವೆಯೂ ಅವರು ಮೊಬೈಲ್​ನಲ್ಲಿ ಮ್ಯಾಚ್ ನೋಡಿ ಖುಷಿ ಪಟ್ಟಿದ್ದಾರೆ. ಆರ್​ಸಿಬಿಯ ತರಬೇತಿ ಅವಧಿಗೆ ಮುಂಚಿತವಾಗಿ ಕ್ರಿಕೆಟಿಗ ಊಟ ಮಾಡುತ್ತಿದ್ದಾಗಲೂ ಆಟವನ್ನು ವೀಕ್ಷಿಸುತ್ತಿದ್ದರು. ಹೋಟೆಲ್​​ನಲ್ಲಿ ಹಾದು ಹೋಗಿರುವ ವ್ಯಕ್ತಿಯೊಬ್ಬರು ಅದನ್ನು ರೆಕಾರ್ಡ್ ಮಾಡಿದ್ದಾರೆ. ಏಪ್ರಿಲ್ 25 ರಂದು ಹೈದರಾಬಾದ್​ನಲ್ಲಿ ನಡೆದ ಸನ್​ರೈಸರ್ಸ್​ ಹೈದರಾಬಾದ್ (ಎಸ್​ಆರ್​​ಎಚ್​​) ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮ್ಯಾಚ್ ವಿನ್ನಿಂಗ್ ಅರ್ಧಶತಕ ಬಾರಿಸಿದ್ದರು.

ಅಹಮದಾಬಾದ್​ನಲ್ಲಿ ಕೊಹ್ಲಿಗೆ ಭರ್ಜರಿ ಸ್ವಾಗತ

ಬೆಂಗಳೂರು: ಮುಂಬರುವ ಐಪಿಎಲ್ 2024 ರಲ್ಲಿ (IPL 2024) ಆತಿಥೇಯ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯಕ್ಕಾಗಿ ವಿರಾಟ್ ಕೊಹ್ಲಿ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ತಂಡದ ಇತರ ಆಟಗಾರರು ಅಹಮದಾಬಾದ್​ಗೆ ಆಗಮಿಸಿದ್ದಾರೆ. ಬಹುನಿರೀಕ್ಷಿತ ಮುಖಾಮುಖಿಗೆ ಒಂದು ದಿನ ಮೊದಲು ಬಂದ ಆರ್​ಸಿಬಿ ಪಡೆಗಳಿಗೆ ತಂಡದ ಹೋಟೆಟ್​ನಲ್ಲಿ ಭವ್ಯ ಸ್ವಾಗತ ದೊರೆಯಿತು.


ಹೋಟೆಲ್​ನಲ್ಲಿ ಸಿಕ್ಕಿರುತ ಆತ್ಮೀಯ ಸ್ವಾಗತವನ್ನು ಸ್ವೀಕರಿಸಿದವರಲ್ಲಿ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಕೂಡ ಸೇರಿದ್ದಾರೆ. ಅದರ ತುಣುಕುಗಳು ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ.

ಇದನ್ನೂ ಓದಿ: IPL 2024 : ದೊಡ್ಡ ಮೊತ್ತದ ಪಂದ್ಯದಲ್ಲಿ ಮುಂಬೈ ವಿರುದ್ಧ ಡೆಲ್ಲಿಗೆ 10 ರನ್ ಜಯ

ವಿರಾಟ್ ಕೊಹ್ಲಿ ಏಪ್ರಿಲ್ 28 ರಂದು ಅಹಮದಾಬಾದ್​ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಆತಿಥೇಯ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದೊಂದಿಗೆ ಆರ್​ಸಿಬಿ ಫ್ರಾಂಚೈಸಿಗಾಗಿ ತಮ್ಮ ಪಾತ್ರವನ್ನು ಪುನರಾವರ್ತಿಸಲಿದ್ದಾರೆ. ಸ್ಪರ್ಧೆಗೆ ಒಂದು ದಿನ ಮುಂಚಿತವಾಗಿ ಅವರು ಮತ್ತು ಅವರ ಉಳಿದ ಆಟಗಾರರ ಜತೆ ಹೋಟೆಲ್​ಗೆ ಆಗಮಿಸಿದರು. ಈ ಮೂಲಕ ಅವರು ಅಹಮದಾಬಾದ್​ನಲ್ಲಿ ತಮ್ಮ ಇರುವಿಕೆಯನ್ನು ಗುರುತಿಸಿಕೊಂಡರು.

ಐಪಿಎಲ್ 2024 ರ ಸ್ಟಾರ್ ಆಕರ್ಷಣೆಗಳಲ್ಲಿ ಒಬ್ಬರಾದ ಕೊಹ್ಲಿ ಏಪ್ರಿಲ್ 27 ರಂದು ತಂಡದ ಹೋಟೆಲ್​ಗೆ ಹೋಗುವ ವೇಳೆ ಭವ್ಯ ಸ್ವಾಗತ ಪಡೆದರು.

ಆರೆಂಜ್ ಕ್ಯಾಪ್ ವೀರ ಕೊಹ್ಲಿ

ವಿರಾಟ್ ಕೊಹ್ಲಿ ಪ್ರಸ್ತುತ ಐಪಿಎಲ್ 2024 ರ ಋತುವಿನಲ್ಲಿ ‘ಆರೆಂಜ್ ಕ್ಯಾಪ್’ ಹೊಂದಿದ್ದಾರೆ. ಕ್ರಿಕೆಟಿಗ ಈಗಾಗಲೇ ಕೇವಲ ಒಂಬತ್ತು ಇನಿಂಂಗ್ಸ್​​​ಗಳಲ್ಲಿ 61 ಕ್ಕೂ ಹೆಚ್ಚು ಸರಾಸರಿಯಲ್ಲಿ 430 ರನ್ ಗಳಿಸಿದ್ದಾರೆ/ ಎರಡನೇ ಸ್ಥಾನದಲ್ಲಿರುವ ಸುನಿಲ್ ನರೈನ್ ಅವರನ್ನು 73 ರನ್​ಗಳಿಂದ ಮುನ್ನಡೆ ಪಡೆದುಕೊಂಡಿದ್ದಾರೆ.
ಕೊಹ್ಲಿ ಇತ್ತೀಚೆಗೆ ಹೈದರಾಬಾದ್​ನಲ್ಲಿ ನಡೆದ ಎಸ್ಆರ್​​ಎಚ್​ ತಂಡದ ವಿರುದ್ಧದ ಪಂದ್ಯದಲ್ಲಿ ಅರ್ಧಶತಕ ಬಾರಿಸಿದ್ದರು. ಈ ಗೆಲುವು ಒಂದು ತಿಂಗಳಲ್ಲಿ ಆರ್​ಸಿಬಿಯ ಮೊದಲ ಗೆಲುವು ಮತ್ತು ಋತುವಿನ ಒಟ್ಟಾರೆ ಎರಡನೇ ಗೆಲುವು.

ಒಂಬತ್ತು ಲೀಗ್ ಪಂದ್ಯಗಳಲ್ಲಿ ಕೇವಲ ಎರಡು ಗೆಲುವುಗಳನ್ನು ಗಳಿಸಿರುವ ಫಾಫ್ ಡು ಪ್ಲೆಸಿಸ್ ನೇತೃತ್ವದ ಆರ್ಸಿಬಿ ಗುಂಪು ಐಪಿಎಲ್ 2024 ಪಾಯಿಂಟ್ಸ್ ಟೇಬಲ್ನಲ್ಲಿ ಕೊನೆಯ ಸ್ಥಾನದಲ್ಲಿದೆ. ಏಣಿಯನ್ನು ಏರುವ ಪ್ರಯತ್ನದಲ್ಲಿ ಅವರು ಪಂದ್ಯಾವಳಿಯ ಈ ಹಂತದಲ್ಲಿ ಗುಜರಾತ್ ಟೈಟಾನ್ಸ್ ಅನ್ನು ಸೋಲಿಸಬೇಕಾಗಿದೆ.

Continue Reading
Advertisement
IPL 2024 Points Table
ಕ್ರೀಡೆ12 mins ago

IPL 2024 Points Table: ಲಕ್ನೋ, ಮುಂಬೈ ಸೋಲಿನ ಬಳಿಕ ಅಂಕಪಟ್ಟಿ ಹೇಗಿದೆ?

PM Narendra Modi proposing arecanut millets and fisheries
Lok Sabha Election 202421 mins ago

PM Narendra Modi: ಅಡಿಕೆ, ಸಿರಿಧಾನ್ಯ, ಮೀನುಗಾರಿಕೆ ಪ್ರಸ್ತಾಪಿಸಿ ಕೃಷಿಕರ ಮನ ಗೆದ್ದ ಮೋದಿ

PM Narendra Modi in Sirsi
Lok Sabha Election 202439 mins ago

PM Narendra Modi: ಕಾಂಗ್ರೆಸ್ ರಾಮ ವಿರೋಧಿ; ಮನೆಗೆ ಹೋಗಿ ಕರೆದರೂ ಮಂದಿರ ಉದ್ಘಾಟನೆಗೆ ಬರಲಿಲ್ಲ: ಮೋದಿ ಟೀಕೆ

ವೈರಲ್ ನ್ಯೂಸ್1 hour ago

Viral Video: ಹೆಂಡತಿಯನ್ನ ಥಳಿಸಿ ಫ್ಲೈ ಓವರ್‌ನಿಂದ ತಳ್ಳೋಕೆ ಯತ್ನಿಸಿದ ಪಾಪಿ ಗಂಡ; ಆಮೇಲೆ ಆಗಿದ್ದೇನು?

Lok sabaha election
ದೇಶ1 hour ago

Lok Sabha Election: ಮತದಾನ ಪ್ರಮಾಣ ಕುಸಿತ; ಬಿಜೆಪಿಗೆ ಆತಂಕ!

PM Narendra Modi Live in Sirsi campaign meeting here
Lok Sabha Election 20241 hour ago

PM Narendra Modi Live : ಪ್ರಧಾನಿ ಮೋದಿಯ ಶಿರಸಿ ಪ್ರಚಾರ ಸಭೆಯ ನೇರ ಪ್ರಸಾರವನ್ನು ಇಲ್ಲಿ ವೀಕ್ಷಿಸಿ…

Samantha Ruth Prabhu shocking secrets
ಟಾಲಿವುಡ್2 hours ago

Samantha Ruth Prabhu: ಸಮಂತಾಗೆ ಜನುಮ ದಿನದ ಸಂಭ್ರಮ! ಈ ನಟಿಯ ಸೀಕ್ರೆಟ್‌ ಸಂಗತಿಗಳಿವು!

PM Narendra Modi Cm Siddaramaiah many questions to PM Modi Challenge for answer
Lok Sabha Election 20242 hours ago

PM Narendra Modi: ಪ್ರಧಾನಿ ಮೋದಿಗೆ ಸಿಎಂ ಸಿದ್ದರಾಮಯ್ಯ ಕೇಳಿದ 10 ಪ್ರಶ್ನೆ; ಉತ್ತರಕ್ಕಾಗಿ ಸವಾಲು!

Priyanka Gandhi Rahul Gandhi
ದೇಶ2 hours ago

Lok Sabha Election 2024: ಅಮೇಥಿ, ರಾಯ್‌ಬರೇಲಿಗೆ ರಾಹುಲ್‌, ಪ್ರಿಯಾಂಕಾ ಫಿಕ್ಸ್‌? ಖರ್ಗೆ ನಿರ್ಧಾರ ಫೈನಲ್‌

Ranbir Kapoor stunned as photographer abuses in front of him
ಬಾಲಿವುಡ್2 hours ago

Ranbir Kapoor: ರಣಬೀರ್​ ಕಪೂರ್‌ಗೆ​ ಅಶ್ಲೀಲವಾಗಿ ಬೈಯ್ದ್ರಾ ಫೋಟೋಗ್ರಾಫರ್‌? ವಿಡಿಯೊದಲ್ಲಿ ಏನಿದೆ?

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

PM Narendra Modi in Sirsi
Lok Sabha Election 202439 mins ago

PM Narendra Modi: ಕಾಂಗ್ರೆಸ್ ರಾಮ ವಿರೋಧಿ; ಮನೆಗೆ ಹೋಗಿ ಕರೆದರೂ ಮಂದಿರ ಉದ್ಘಾಟನೆಗೆ ಬರಲಿಲ್ಲ: ಮೋದಿ ಟೀಕೆ

If Congress comes to power all your assets will belong to Government says PM Narendra Modi
Lok Sabha Election 20242 hours ago

Narendra Modi: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನೀವು ಕಷ್ಟಪಟ್ಟು ಸಂಪಾದಿಸಿದ ಆಸ್ತಿಯೆಲ್ಲ ಅನ್ಯರ ಪಾಲು: ಮೋದಿ ಎಚ್ಚರಿಕೆ

Congress ties with Aurangzeb supporters and Girls killed under his rule says Narendra Modi
Lok Sabha Election 20243 hours ago

Narendra Modi: ಔರಂಗಜೇಬ್ ಬೆಂಬಲಿಗರ ಜತೆ ಕಾಂಗ್ರೆಸ್ ದೋಸ್ತಿ; ಇವರ ಆಡಳಿತದಲ್ಲಿ ಹೆಣ್ಣು ಮಕ್ಕಳ ಹತ್ಯೆ: ಮೋದಿ ವಾಗ್ದಾಳಿ

Modi in Karnataka stay in Belagavi tomorrow and Huge gatherings at five places
ಪ್ರಮುಖ ಸುದ್ದಿ6 hours ago

Narendra Modi Live : ಪ್ರಧಾನಿ ಮೋದಿಯ ಬೆಳಗಾವಿ ಪ್ರಚಾರ ಸಭೆಯ ನೇರ ಪ್ರಸಾರವನ್ನು ಇಲ್ಲಿ ವೀಕ್ಷಿಸಿ…

Dina Bhavishya
ಭವಿಷ್ಯ10 hours ago

Dina Bhavishya : ಈ ರಾಶಿಯವರಿಗೆ ದಿನದ ಮಟ್ಟಿಗೆ ಖರ್ಚು ಹೆಚ್ಚು

Lok sabha election 2024
Lok Sabha Election 202422 hours ago

Lok Sabha Election 2024 : ಮೊಬೈಲ್ ನಿಷೇಧದ ನಡುವೆಯೂ ವೋಟ್‌ ಹಾಕಿದ ವಿಡಿಯೊ ಮಾಡಿದ ಪುಂಡರು

road Accident in kolar evm
ಕೋಲಾರ1 day ago

Road Accident : ಇವಿಎಂ ಸಾಗಿಸುವಾಗ ವಾಹನದ ಟೈರ್‌ ಸ್ಫೋಟ; ರೋಡ್‌ನಲ್ಲೇ ರಿಪೇರಿ, ಮೊಕ್ಕಾಂ ಹೂಡಿದ ಪೊಲೀಸರು

Dina Bhavishya
ಭವಿಷ್ಯ1 day ago

Dina Bhavishya : ಈ ದಿನ ನಿಮ್ಮ ಪ್ರೀತಿಯ ಕನಸು ನನಸಾಗುವ ಸುದಿನ

Lok Sabha Election 2024 congress booth agent allegation for Fake voting in Hassan Lok Sabha constituency
ಹಾಸನ2 days ago

Lok Sabha Election 2024: ಹಾಸನ ಲೋಕಸಭಾ ಕ್ಷೇತ್ರದಲ್ಲಿ ನಕಲಿ ಮತದಾನ! ಏನಿದು ಕಾಂಗ್ರೆಸ್‌ ಬೂತ್‌ ಏಜೆಂಟ್‌ ಆರೋಪ?

Lok Sabha Election 2024 Woman suffers cardiac arrest at polling booth Doctor who came to cast his vote saved life
Lok Sabha Election 20242 days ago

Lok Sabha Election 2024: ಮತಗಟ್ಟೆಯಲ್ಲಿ ಮಹಿಳೆಗೆ ಹೃದಯ ಸ್ತಂಭನ; ಮತ ಹಾಕಲು ಬಂದಿದ್ದ ವೈದ್ಯನಿಂದ ಪ್ರಾಣ ರಕ್ಷಣೆ

ಟ್ರೆಂಡಿಂಗ್‌