Viral Video | ವೆಡ್ನಸ್‌ಡೇ ಹಾಡಿಗೆ ಬಾಲಕಿಯ ನೃತ್ಯ; ಇದು ನಿಜಕ್ಕೂ ಸೂಪರ್‌ ಆಗಿದೆ ಎನ್ನುತ್ತಿದ್ದಾರೆ ನೆಟ್ಟಿಗರು - Vistara News

ವೈರಲ್ ನ್ಯೂಸ್

Viral Video | ವೆಡ್ನಸ್‌ಡೇ ಹಾಡಿಗೆ ಬಾಲಕಿಯ ನೃತ್ಯ; ಇದು ನಿಜಕ್ಕೂ ಸೂಪರ್‌ ಆಗಿದೆ ಎನ್ನುತ್ತಿದ್ದಾರೆ ನೆಟ್ಟಿಗರು

ನೆಟ್‌ಫ್ಲಿಕ್ಸ್‌ನ ʼವೆಡ್ನಸ್‌ಡೇʼ ಸೀರಿಸ್‌ನ ಹಾಡಿಗೆ 8 ವರ್ಷದ ಬಾಲಕಿಯೊಬ್ಬಳು ನೃತ್ಯ ಮಾಡಿದ್ದಾಳೆ. ಆ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ವೈರಲ್‌ (Viral Video) ಆಗಿದೆ.

VISTARANEWS.COM


on

ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ನೀವು ವೆಬ್‌ ಸೀರಿಸ್‌ ಪ್ರಿಯರಾಗಿದ್ದರೆ ನೆಟ್‌ಫ್ಲಿಕ್ಸ್‌ನಲ್ಲಿರುವ ʼವೆಡ್ನಸ್‌ಡೇʼ ಸೀರಿಸ್‌ ಅನ್ನು ನೋಡಿರಬಹುದು. ಹಾರರ್‌ ಥೀಮ್‌ನಲ್ಲಿರುವ ಈ ಸೀರಿಸ್‌ ಅನೇಕರಿಗೆ ಇಷ್ಟವಾಗಿರುವ ಸೀರಿಸ್‌. ಇದರಲ್ಲಿ ವೆಡ್ನಸ್‌ ಡೇ ಹೆಸರಿನ ನಾಯಕಿ ಮಾಡಿರುವ ನೃತ್ಯ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್‌ ಆಗಿದೆ. ಅನೇಕರು ಈ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಇದೀಗ 8 ವರ್ಷದ ಬಾಲಕಿಯೊಬ್ಬಳು ಈ ಹಾಡಿಗೆ ಹೆಜ್ಜೆ ಹಾಕಿದ್ದು, ಅದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ (Viral Video) ಆಗಿದೆ.

ಇದನ್ನೂ ಓದಿ: Viral News | 12 ವರ್ಷದ ಹಿಂದೆ ಚಿಕಿತ್ಸೆ ನೀಡಿ ಬದುಕಿಸಿದ ವೈದ್ಯನನ್ನು ಗುರುತಿಸಿದ ಆನೆ: ಪ್ರಾಣಿಗಳೇ ಗುಣದಲಿ ಮೇಲು!
ಗೇಬ್ರಿಯಾಲಾ ಕೇಯ್ಲಿ ಹೆಸರಿನ ಬಾಲಕಿ ವೆಡ್ನಸ್‌ಡೇ ಹಾಡಿಗೆ ಹೆಜ್ಜೆ ಹಾಕಿದ್ದಾಳೆ. ಮನೆಯ ಟಿವಿಯಲ್ಲಿ ಅದೇ ಹಾಡನ್ನು ಹಾಕಿಕೊಂಡು, ಅದರ ಮುಂಭಾಗದಲ್ಲೇ ತಾನೂ ಕೂಡ ವೆಬ್ ಸೀರಿಸ್‌ನ ನಾಯಕಿಯಂತೆಯೇ ಹೆಜ್ಜೆ ಹಾಕಿದ್ದಾಳೆ. ನಾಯಕಿಯಂತೆಯೇ ಮುಖಭಾವಗಳನ್ನೂ ಕೊಟ್ಟಿದ್ದಾಳೆ. ಈ ವಿಡಿಯೊವನ್ನು ಗುರುವಾರ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಳ್ಳಲಾಗಿದೆ.


ವಿಡಿಯೊ ಎರಡೇ ದಿನಗಳಲ್ಲಿ ಲಕ್ಷಾಂತರ ವೀಕ್ಷಣೆ ಪಡೆದುಕೊಂಡಿದ್ದು, 25 ಲಕ್ಷಕ್ಕೂ ಅಧಿಕ ಮಂದಿಗೆ ವಿಡಿಯೊವನ್ನು ಲೈಕ್‌ ಮಾಡಿದ್ದಾರೆ. “ಸೀರಿಸ್‌ನ ನಾಯಕಿಯನ್ನು ನೋಡಿದಂತೆಯೇ ಆಗುತ್ತಿದೆ”, “ಈ ಹಾಡಿಗೆ ನೃತ್ಯ ಮಾಡಿರುವವರಲ್ಲಿ ಈ ಬಾಲಕಿಯೇ ಬೆಸ್ಟ್‌”, “ಮುದ್ದಾಗಿರುವ ಬಾಲಕಿ ಅತ್ಯಂತ ಸುಂದರವಾಗಿ ನೃತ್ಯ ಮಾಡಿದ್ದಾಳೆ” ಹೀಗೆ ನಾನಾ ರೀತಿಯ ಕಾಮೆಂಟ್‌ಗಳು ವಿಡಿಯೊಗೆ ಬಂದಿವೆ.

ಇದನ್ನೂ ಓದಿ: Viral Video | ಯೋಗಿ ಆದಿತ್ಯನಾಥ್‌ಗೆ ಲವ್‌ ಅಟ್‌ ಫಸ್ಟ್‌ ಸೈಟ್‌! ವೈರಲ್‌ ಆಗ್ತಿದೆ ವಿಡಿಯೊ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ವೈರಲ್ ನ್ಯೂಸ್

‍Viral News: ಚಂದದ ಪ್ರೊಫೈಲ್‌ ಫೋಟೋಗೆ ಫಿದಾ ಆಗಿದ್ದವನಿಗೆ ಕಾದಿತ್ತು ಶಾಕ್‌; ಮುಂದೆ ನಡೆದಿದ್ದೇ ಬೇರೆ!

Viral News: ದೀಪೇಂದ್ರ ಸಿಂಗ್‌ ಎಂಬ ಯುವಕನಿಗೆ ಇನ್‌ಸ್ಟಾಗ್ರಾಂನಲ್ಲಿ ಮಹಿಳೆಯೊಬ್ಬಳು ಪರಿಚಯ ಆಗಿದ್ದಳು. ಆಕೆ ಪ್ರೊಫೈಲ್‌ ಪಿಕ್ಚರ್‌ಗೆ ಮನಸೋತಿದ್ದ. ಬಹಳ ಖುಷಿಯಿಂದ ಪ್ರೇಯಸಿಯನ್ನು ಭೇಟಿಯಾಗಲು ಬಂದಿದ್ದ ದೀಪೇಂದ್ರ ಸಿಂಗ್‌ಗೆ ಶಾಕ್‌ ಕಾದಿತ್ತು. ಪ್ರೊಫೈಲ್‌ ಪೋಟೋಗೂ ಅಲ್ಲಿ ಬಂದಿದ್ದಾಕೆಗೂ ಅಜಗಜಾಂತರ ವ್ಯತ್ಯಾಸ ಇತ್ತು. ಅಲ್ಲದೇ ಆಕೆ 45ವರ್ಷದ ಮಹಿಳೆ ಆಗಿದ್ದಳು.

VISTARANEWS.COM


on

Viral News
Koo

ಉತ್ತರಪ್ರದೇಶ: ಸೋಶಿಯಲ್‌ ಮೀಡಿಯಾ(Social Media)ದಲ್ಲಿ ಪ್ರೊಫೈಲ್‌ ಫೋಟೋ(Fake profile) ನೋಡಿ ಯಾಮಾರೋದು ಹೊಸ ವಿಚಾರವೇನಲ್ಲ. ಚಂದ ಫೋಟೋ ನೋಡಿ ಅದನ್ನೇ ನಿಜ ಎಂದು ಭಾವಿಸಿ ಚಾಟಿಂಗ್‌ ಮಾಡಿ ಬಳಿಕ ಹಣ ಕಳೆದುಕೊಂಡವರು ಅದೆಷ್ಟೋ ಜನರಿದ್ದಾರೆ. ಆಗಾಗ ಇಂತಹ ಘಟನೆ(Viral News)ಗಳು ಬೆಳಕಿಗೆ ಬರುತ್ತಿರುತ್ತವೆ. ಇದೀಗ ಅಂತಹದೇ ಮತ್ತೊಂದು ಘಟನೆ ಉತ್ತರಪ್ರದೇಶ(Uttar pradesh)ದ ಕಾನ್ಪುರದಲ್ಲಿ ನಡೆದಿದೆ. 20ವರ್ಷದ ಯುವಕನೋರ್ವ ಸೋಶಿಯಲ್‌ ಮೀಡಿಯಾದಲ್ಲಿ ಪರಿಚಯ ಆಗಿದ್ದ ಮಹಿಳೆಯನ್ನು ನಂಬಿ ಮೋಸ ಹೋಗಿದ್ದಾನೆ. ಪ್ರೊಫೈಲ್‌ ಫೋಟೋ ಕಂಡು ಪ್ರೀತಿಯಲ್ಲಿ ಬಿದ್ದಿದ್ದ ಆ ಯುವಕನಿಗೆ ನೇರವಾಗಿ ಆಕೆಯನ್ನು ನೋಡಿ ಶಾಕ್‌ ಆಗಿದೆ ಇದರಿಂದ ಕೋಪಗೊಂಡ ಆತನ ಆಕೆಯನ್ನು ಚೆನ್ನಾಗಿ ಥಳಿಸಿದ್ದಾನೆ.

ಘಟನೆ ವಿವರ

20 ವರ್ಷದ ದೀಪೇಂದ್ರ ಸಿಂಗ್‌ ಎಂಬ ಯುವಕನಿಗೆ ಇನ್‌ಸ್ಟಾಗ್ರಾಂನಲ್ಲಿ ಮಹಿಳೆಯೊಬ್ಬಳು ಪರಿಚಯ ಆಗಿದ್ದಳು. ಆಕೆ ಪ್ರೊಫೈಲ್‌ ಪಿಕ್ಚರ್‌ಗೆ ಮನಸೋತಿದ್ದ. ಹಲವು ದಿನಗಳಿಂದ ಆಕೆಯ ಜೊತೆ ಚಾಟಿಂಗ್‌ ಮಾಡುತ್ತಿದ್ದ ಆತ ಪ್ರೇಮ ನಿವೇದನೆಯನ್ನೂ ಮಾಡಿದ್ದ. ಮುಂದೆ ಮದುವೆ ಆಗಬೇಕೆಂದೂ ಇಬ್ಬರೂ ನಿರ್ಧರಿಸಿದ್ದರು. ಇಷ್ಟೆಲ್ಲಾ ಬರೀ ಚಾಟಿಂಗ್‌ನಲ್ಲೇ ನಡೆದಿತ್ತು. ಹೀಗೆ ನಡೆಯುತ್ತಿದ್ದಾಗ ಮುಖಾಮುಖಿ ಭೇಟಿಯಾಗುವಂತೆ ದೀಪೇಂದ್ರ ಸಿಂಗ್‌ ಆಕೆಯನ್ನು ಕೇಳಿದ್ದಾಳೆ. ಅದಕ್ಕೆ ಒಪ್ಪಿದ ಆಕೆ ದೀಪೇಂದ್ರ ಸಿಂಗ್‌ನನ್ನು ಭೇಟಿ ಆಗಲು ಬಂದಿದ್ದಳು. ಆದರೆ ಇವರಿಬ್ಬರ ಈ ಇನ್‌ಸ್ಟಾಗ್ರಾಂ ಪ್ರೇಮ ಕತೆಯಲ್ಲಿ ಒಂದು ಟ್ವಿಸ್ಟ್‌ ಇತ್ತು. ಬಹಳ ಖುಷಿಯಿಂದ ಪ್ರೇಯಸಿಯನ್ನು ಭೇಟಿಯಾಗಲು ಬಂದಿದ್ದ ದೀಪೇಂದ್ರ ಸಿಂಗ್‌ಗೆ ಶಾಕ್‌ ಕಾದಿತ್ತು. ಪ್ರೊಫೈಲ್‌ ಪೋಟೋಗೂ ಅಲ್ಲಿ ಬಂದಿದ್ದಾಕೆಗೂ ಅಜಗಜಾಂತರ ವ್ಯತ್ಯಾಸ ಇತ್ತು. ಅಲ್ಲದೇ ಆಕೆ 45ವರ್ಷದ ಮಹಿಳೆ ಆಗಿದ್ದಳು.

ಮಹಿಳೆಗೆ ಥಳಿಸಿ, ಎಸ್ಕೇಪ್

ಎದುರಿಗೆ ನಿಂತಿದ್ದ ಮಹಿಳೆಯನ್ನು ಕಂಡು ಕೋಪಗೊಂಡಿದ್ದ ದೀಪೇಂದ್ರ ಸಿಂಗ್‌ ಆಕೆಯನ್ನು ಮುಖಾಮೂತಿ ನೋಡದೇ ಚಚ್ಚಿದ್ದಾನೆ. ನೆಲಕ್ಕೆ ಹಾಕಿ ಆಕೆಯ ತಲೆಗೆ ಒದ್ದು ಮನಸೋ ಇಚ್ಛೆ ಹಲ್ಲೆ ನಡೆಸಿದ್ದಾನೆ. ಬಳಿಕ ಆಕೆಯ ಮೊಬೈಲ್‌ ಅನ್ನೂ ಕಸಿದು ಅಲ್ಲಿಂದ ಎಸ್ಕೇಪ್‌ ಆಗಿದ್ದಾನೆ. ಅಲ್ಲಿಂದ ಹೇಗೋ ಪೊಲೀಸ್‌ ಠಾಣೆಗೆ ಬಂದ ಮಹಿಳೆ ದೀಪೇಂದ್ರ ಸಿಂಗ್‌ ವಿರುದ್ಧ ದೂರು ದಾಖಲಿಸಿದ್ದಾಳೆ. ದೂರಿನಾಧಾರದಲ್ಲಿ ತನಿಖೆ ಆರಂಭಿಸಿದ್ದ ಪೊಲೀಸರು ದೀಪೇಂದ್ರ ಸಿಂಗ್‌ನನ್ನು ಅರೆಸ್ಟ್‌ ಮಾಡಿದ್ದಾರೆ.

ಇದನ್ನೂ ಓದಿ: Columbia University: ಕೊಲಂಬಿಯಾ ವಿವಿ ಪ್ರವೇಶಿಸಿದ ನ್ಯೂಯಾರ್ಕ್‌ ಪೊಲೀಸರು; ಪ್ಯಾಲೆಸ್ತೀನ್‌ ಪರ ಪ್ರತಿಭಟನಾಕಾರರ ಬಂಧನ

ಕೆಲವು ತಿಂಗಳುಗಳ ಹಿಂದೆ ಬೆಂಗಳೂರಿನಲ್ಲೂ ಇಂತಹದ್ದೇ ಪ್ರಕರಣವಂದು ಬೆಳಕಿಗೆ ಬಂದಿತ್ತು. ಲೊಕ್ಯಾಂಟೋ ಆ್ಯಪ್ (Locanto App) ಬಳಸುವವರನ್ನೇ ಟಾರ್ಗೆಟ್‌ ಮಾಡಿ ಸುಲಿಗೆ ಮಾಡುತ್ತಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ನದೀಂ ಪಾಷ ಹಾಗೂ ನಾಗೇಶ್ ಎಂಬ ಖದೀಮರು ಹುಡುಗಿ ಹೆಸರಲ್ಲಿ ಲೊಕ್ಯಾಂಟೋ ಆ್ಯಪ್‌ನಲ್ಲಿ ಚೆಂದದ ಫೋಟೊ ಹಾಕಿ ಫೇಕ್‌ ಪ್ರೊಫೈಲ್ ಕ್ರಿಯೇಟ್‌ ಮಾಡುತ್ತಿದ್ದರು. ಬಳಿಕ ಆ ಅಕೌಂಟ್‌ನಿಂದ‌ ತಾವೇ ಮೊದಲು ಮೆಸೇಜ್ ಮಾಡುತ್ತಿದ್ದರು. ಸಲುಗೆಯಿಂದ ಮಾತಾಡುತ್ತಾ ನಂಬಿಕೆಯನ್ನು ಗಿಟ್ಟಿಸಿಕೊಂಡು ಮರುಳು ಮಾಡುತ್ತಿದ್ದರು.

Continue Reading

ವೈರಲ್ ನ್ಯೂಸ್

Viral Video: ಕತ್ತಿಯಿಂದ ಐವರ ಮೇಲೆ ಡೆಡ್ಲಿ ಅಟ್ಯಾಕ್‌; ದಾಳಿಕೋರನ ಅರೆಸ್ಟ್‌ ವಿಡಿಯೋ ಫುಲ್‌ ವೈರಲ್‌

Viral Video: ತಲ್ರೋ ಗಾರ್ಡನ್‌ ಬಳಿ ವಾಹನವೊಂದು ಏಕಾಏಕಿ ಕಟ್ಟಡಕ್ಕೆ ಗುದ್ದಿತ್ತು. ಅದರಲ್ಲಿದ್ದ ದುಷ್ಕರ್ಮಿ ಕೆಳಗಿಳಿದು ಕೈಯಲ್ಲಿ ಕತ್ತಿ ಹಿಡಿದುಕೊಂದು ಓಡಾಡುತ್ತಿದ್ದ. ಬಳಿಕ ಇದ್ದಕ್ಕಿದ್ದಂತೆ ಸಿಕ್ಕ ಸಿಕ್ಕವರ ಮೇಲೆ ಕತ್ತಿಯಿಂದ ದಾಳಿ ನಡೆಸಲು ಆರಂಭಿಸಿದ್ದ. ಎದುರಿಗೆ ಸಿಕ್ಕಿದ್ದ 14 ವರ್ಷದ ಬಾಲಕ ಸೇರಿದಂತೆ ಒಟ್ಟು ಐವರ ಮೇಲೆ ಕತ್ತಿಯಿಂದ ಚುಚ್ಚಿದ್ದ. ಗಂಭೀರವಾಗಿ ಗಾಯಗೊಂಡಿದ್ದ ಬಾಲಕ ಸ್ಥಳದಲ್ಲೇ ಅಸುನೀಗಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದರು

VISTARANEWS.COM


on

Viral video
Koo

ಲಂಡನ್‌: ಹಾಡಹಗಲೇ ದುಷ್ಕರ್ಮಿಯೋರ್ವ ಕತ್ತಿಯಿಂದ ದಾಳಿ(Stabbed) ನಡೆಸಿದ್ದು, ಘಟನೆಯಲ್ಲಿ 14 ವರ್ಷದ ಬಾಲಕ ದಾರುಣವಾಗಿ ಮೃತಪಟ್ಟಿದ್ದಾನೆ. ಘಟನೆಯಲ್ಲಿ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಲಂಡನ್‌(London)ನ ಹೈನಾಲ್ಟ್‌ನಲ್ಲಿ ಈ ಘಟನೆ ನಡೆದಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌(Viral Video) ಆಗಿದೆ. ತಕ್ಷಣ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಆತನನ್ನು ಹೆಡೆಮುರಿ ಕಟ್ಟಿದ್ದಾರೆ. 36 ವರ್ಷದ ಆರೋಪಿ ಏಕಾಏಕಿ ಚಾಕು ದಾಳಿ ನಡೆಸಿ ಎಸ್ಕೇಪ್‌ ಆಗೋಕೆ ಯತ್ನಿಸುತ್ತಿರುವಾಗಲೇ ಆತನನ್ನು ಪೊಲೀಸರು ಅರೆಸ್ಟ್‌ ಮಾಡಿದ್ದಾರೆ.

22 ಸೆಕೆಂಡ್ಸ್‌ ವಿಡಿಯೋದಲ್ಲಿ ಕೃತ್ಯದ ಬಳಿಕ ಓಡಿ ಹೋಗಲು ಯತ್ನಿಸುತ್ತಿದ್ದ ಹಳದಿ ಬಣ್ಣದ ಜ್ಯಾಕೆಟ್‌ ತೊಟ್ಟಿದ್ದ ದುಷ್ಕರ್ಮಿ ಬಳಿ ಮಹಿಳಾ ಪೊಲೀಸ್‌ ಸಿಬ್ಬಂದಿ ಪಿಸ್ತೂಲ್‌ ಹಿಡಿದು ಬರುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ಕೆಲವು ನಿಮಿಷಗಳ ಬಳಿ ಆರು ಜನ ಪೊಲೀಸರು ಆತನನ್ನು ಹಿಡಿಯುವಲ್ಲಿ ಯಶಸ್ವಿ ಆಗಿದ್ದಾರೆ. ಕೃತ್ಯಕ್ಕೂ ಮುನ್ನ ಆತನ ವಾಹನ ಕಟ್ಟಡವೊಂದಕ್ಕೆ ಡಿಕ್ಕಿ ಹೊಡೆದು, ಆತನಿಗೆ ಸ್ವಲ್ಪ ಮಟ್ಟ ಗಾಯಗಳಾಗಿವೆ. ಹೀಗಾಗಿ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಘಟನೆ ವಿವರ:

ತಲ್ರೋ ಗಾರ್ಡನ್‌ ಬಳಿ ವಾಹನವೊಂದು ಏಕಾಏಕಿ ಕಟ್ಟಡಕ್ಕೆ ಗುದ್ದಿತ್ತು. ಅದರಲ್ಲಿದ್ದ ದುಷ್ಕರ್ಮಿ ಕೆಳಗಿಳಿದು ಕೈಯಲ್ಲಿ ಕತ್ತಿ ಹಿಡಿದುಕೊಂದು ಓಡಾಡುತ್ತಿದ್ದ. ಬಳಿಕ ಇದ್ದಕ್ಕಿದ್ದಂತೆ ಸಿಕ್ಕ ಸಿಕ್ಕವರ ಮೇಲೆ ಕತ್ತಿಯಿಂದ ದಾಳಿ ನಡೆಸಲು ಆರಂಭಿಸಿದ್ದ. ಎದುರಿಗೆ ಸಿಕ್ಕಿದ್ದ 14 ವರ್ಷದ ಬಾಲಕ ಸೇರಿದಂತೆ ಒಟ್ಟು ಐವರ ಮೇಲೆ ಕತ್ತಿಯಿಂದ ಚುಚ್ಚಿದ್ದ. ಗಂಭೀರವಾಗಿ ಗಾಯಗೊಂಡಿದ್ದ ಬಾಲಕ ಸ್ಥಳದಲ್ಲೇ ಅಸುನೀಗಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದರು. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಸ್ಥಿರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ದೃಶ್ಯ ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಅದನ್ನು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಇನ್ನು ಆರೋಪಿ ಯಾವುದಾದರೂ ಉಗ್ರ ಸಂಘಟನೆ ಜೊತೆ ನಂಟು ಹೊಂದಿದ್ದಾನೆಯೇ ಎಂಬ ಬಗ್ಗೆಯೂ ಪೊಲೀಸರು ತನಿಖೆ ನಡೆಸಿದ್ದು, ಆ ಅನುಮಾನ ಸುಳ್ಳಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: Godrej Group: ಶತಮಾನದ ಇತಿಹಾಸ ಹೊಂದಿರುವ ಗೋದ್ರೇಜ್‌ ಗ್ರೂಪ್‌ ಇಬ್ಬಾಗ; ಎರಡು ಕುಟುಂಬಗಳಲ್ಲಿ ಆಡಳಿತ ವಿಭಜನೆ

ಕಿಂಗ್‌ ಚಾರ್ಲ್ಸ್‌, ರಿಷಿ ಸುನಕ್‌ ಖಂಡನೆ

ಇನ್ನು ಘಟನೆಗೆ ಬ್ರಿಟನ್‌ ರಾಜ ಚಾರ್ಲ್ಸ್‌, ಪ್ರಧಾನಿ ರಿಷಿ ಸುನಕ್‌ ಖಂಡನೆ ವ್ಯಕ್ತಪಡಿಸಿದ್ದಾರೆ. ದುರ್ಘಟನೆಯಲ್ಲಿ ಮೃತಪಟ್ಟ ಬಾಲಕ ಕುಟುಂಬಕ್ಕೆ ಸಾಂತ್ವನ ಹೇಳಿರುವ ಚಾರ್ಲ್ಸ್‌, ಮೃತ ಬಾಲಕನ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸುತ್ತೇನೆ. ಈ ಸಂದರ್ಭದಲ್ಲಿ ದಿಟ್ಟತನ ತೋರಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುವ ಪೊಲೀಸರನ್ನು ಶ್ಲಾಘಿಸುತ್ತೇನೆ ಎಂದು ಹೇಳಿದ್ದಾರೆ. ಇನ್ನು ಇದೊಂದು ಆಘಾತಕಾರಿ ಘಟನೆ ಎಂದು ಕರೆದಿರುವ ರಿಷಿ ಸುನಕ್‌, ಇಂಥಹ ಘಟನೆಗಳು ದೇಶದಲ್ಲಿ ನಡೆಯಬಾರದು. ಮೃತ ಹಾಗೂ ಗಾಯಾಳುಗಳ ಕುಟುಂಬಕ್ಕೆ ದೇವರು ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಪೊಲೀಸರನ್ನೂ ನಾನು ಪ್ರಶಂಸಿಸುತ್ತೇನೆ ಎಂದರು.

Continue Reading

ವೈರಲ್ ನ್ಯೂಸ್

Viral News: ಸೆಕೆಯಿಂದ ಬಳಲುತ್ತಿರುವ ವಿದ್ಯಾರ್ಥಿಗಳನ್ನು ಕಾಪಾಡಲು ಶಿಕ್ಷಕರ ಸೂಪರ್‌ ಐಡಿಯಾ; ಇಲ್ಲಿದೆ ವಿಡಿಯೊ

Viral News: ಸದ್ಯ ದೇಶಾದ್ಯಂತ ಉಷ್ಣಾಂಶ ವಿಪರೀತ ಮಟ್ಟಕ್ಕೆ ಏರಿಕೆಯಾಗಿದ್ದು, ಮನುಷ್ಯರು ಸೇರಿದಂತೆ ಸಕಲ ಜೀವ ರಾಶಿಯನ್ನು ಬಾಧಿಸಿದೆ. ಈ ಮಧ್ಯೆ ಉತ್ತರ ಪ್ರದೇಶದ ಕನೌಜ್‌ನ ಶಾಲೆಗೆ ಮಕ್ಕಳು ಬರಲು ಹಿಂದೇಟು ಹಾಕುತ್ತಿದ್ದರು. ಇದಕ್ಕೆ ಶಾಲೆಯ ಶಿಕ್ಷಕರು ಪರಿಹಾರ ಕಂಡುಕೊಂಡಿದ್ದಾರೆ. ಈ ಕ್ರಮದಿಂದಾಗಿ ಇದೀಗ ಶಾಲೆಯ ಹಾಜರಾತಿ ಹೆಚ್ಚಿದೆ. ಹಾಗಾದರೆ ಶಿಕ್ಷಕರು ಕಂಡುಕೊಂಡ ಉಪಾಯವೇನು ಎನ್ನುವ ವಿವರ ಇಲ್ಲಿದೆ.

VISTARANEWS.COM


on

Viral Video
Koo

ಲಕ್ನೋ: ʼʼಉಫ್‌! ಏನು ಸೆಕೆʼʼ ಸದ್ಯ ಎಲ್ಲೆಂದರಲ್ಲಿ ಈ ಮಾತು ಕಿವಿಗೆ ಬೀಳುತ್ತಿದೆ. ದೇಶಾದ್ಯಂತ ತಾಪಮಾನ ತೀವ್ರವಾಗಿ ಏರಿಕೆ ಕಂಡಿದೆ. ಈ ಎಲ್‌ ನಿನೊ ಪರಿಣಾಮದಿಂದ ದೇಶಾದ್ಯಂತ ಜನರು ಪರಿತಪಿಸುತ್ತಿದ್ದಾರೆ. ಉಷ್ಣಾಂಶ 40 ಡಿಗ್ರಿ ಸೆಲ್ಸಿಯಸ್ ದಾಟಿ ಮುಂದೆ ಸಾಗುತ್ತಿದೆ. ಜತೆಗೆ ಉಷ್ಣ ಅಲೆ (Heatwave)ಯು ಜನ-ಜೀವನವನ್ನು ಬಾಧಿಸಿದೆ. ಮನುಷ್ಯರು ಸೇರಿದಂತೆ ಸಕಲ ಜೀವ ರಾಶಿಯನ್ನು ಈ ಬೇಸಿಗೆ ಹೈರಾಣಾಗಿಸಿದೆ. ಮನೆಯಿಂದ ಹೊರಗೆ ಓಡಾಡದಂತಹ ಸ್ಥಿತಿ ನಿರ್ಮಾಣವಾಗಿದೆ. ಕೆಲವೆಡೆ ಮಧ್ಯಾಹ್ನ ಅಘೋಷಿತ ಬಂದ್‌ ಎನಿಸುವಂತೆ ರಸ್ತೆಗಳೆಲ್ಲ ಖಾಲಿ ಹೊಡೆಯುತ್ತವೆ. ಈ ಮಧ್ಯೆ ವಿದ್ಯಾರ್ಥಿಗಳನ್ನು ಉರಿ ಸೆಕೆಯಿಂದ ಪಾರು ಮಾಡಲು ಶಾಲೆಯೊಂದು ವಿನೂತನ ಪ್ರಯೋಗಕ್ಕೆ ಮುಂದಾಗಿದೆ. ಉತ್ತರ ಪ್ರದೇಶದ ಶಾಲೆಯ ಈ ವಿಡಿಯೊ ಸದ್ಯ ಸೋಷಿಯಲ್‌ ಮಿಡಿಯಾದಲ್ಲಿ ವೈರಲ್‌ ಆಗಿದೆ (Viral News).

ಶಿಕ್ಷಕರ ಐಡಿಯಾ ನೋಡಿ

ಉತ್ತರ ಪ್ರದೇಶದ ಕನೌಜ್‌ನ ಶಾಲೆಯ ತರಗತಿಯೊಂದನ್ನು ಈಜುಕೊಳವನ್ನಾಗಿ ಪರಿವರ್ತಿಸಿ ತೀವ್ರ ಶಾಖದಿಂದ ಮಕ್ಕಳನ್ನು ಪಾರು ಮಾಡಲಾಗಿದೆ. ಸುಮಾರು ಎರಡು ಅಡಿ ನೀರು ತುಂಬಿದ ಕ್ಲಾಸ್‌ ರೂಮ್‌ನಲ್ಲಿ ವಿದ್ಯಾರ್ಥಿಗಳು ಖುಷಿಯಿಂದ ಈಜಾಡುತ್ತಿರುವ, ಆಡುತ್ತಿರುವ ದೃಶ್ಯ ಇದೀಗ ನೆಟ್ಟಿಗರ ಗಮನ ಸೆಳೆದಿದೆ.

ಕಾರಣ ಏನು?

ದೇಶದ ಇತರ ಭಾಗಗಳಂತೆ ಉತ್ತರ ಪ್ರದೇಶದಲ್ಲಿಯೂ ವಿಪರೀತ ಉಷ್ಣತೆ ದಾಖಲಾಗುತ್ತಿದೆ. ಹೀಗಾಗಿ ಮಕ್ಕಳು ಶಾಲೆಗಳಿಗೆ ಬರಲೂ ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ಶಾಲೆಯಲ್ಲಿ ಕಡಿಮೆ ಹಾಜರಾತಿ ಕಂಡು ಬಂದಿತ್ತು. ಇದನ್ನು ಗಮನಿಸಿದ ಕನ್ನೌಜ್ ಜಿಲ್ಲೆಯ ಮಹಾಸೌನಾಪುರ್‌ನ ಪ್ರಾಥಮಿಕ ಶಾಲೆಯ ಶಿಕ್ಷಕರು ಈ ಸಮಸ್ಯೆಯ ಪರಿಹಾರಕ್ಕೆ ಕಂಡುಕೊಂಡ ಮಾರ್ಗವೇ ಈ ಈಜುಕೊಳದ ಉಪಾಯ. ಸದ್ಯ ವಿದ್ಯಾರ್ಥಿಗಳು ಖುಷಿಯಿಂದಲೇ ಶಾಲೆಯತ್ತ ಹೆಜ್ಜೆ ಹಾಕುತ್ತಿದ್ದಾರೆ.

ಪ್ರಾಂಶುಪಾಲರು ಹೇಳೋದೇನು?

ʼʼಕೆಲವು ದಿನಗಳಿಂದ ವಾತಾವರಣದ ಉಷ್ಣಾಂಶ 38ರಿಂದ 40 ಡಿಗ್ರಿ ಸೆಲ್ಶಿಯಸ್‌ಗೆ ತಲುಪುತ್ತಿದೆ. ಹೀಗಾಗಿ ನಿರಂತರವಾಗಿ ಮಕ್ಕಳು ಶಾಲೆಗೆ ಗೈರಾಗುತ್ತಿದ್ದರು. ಇದನ್ನು ತಪ್ಪಿಸಲು ಈ ಉಪಾಯ ಕೈಗೊಂಡಿದ್ದೇವೆʼʼ ಎಂದು ಶಾಲೆಯ ಪ್ರಾಂಶುಪಾಲ ವೈಭವ್‌ ರಾಜಪೂತ್‌ ತಿಳಿಸಿದ್ದಾರೆ. ಇದೀಗ ಕ್ಲಾಸ್‌ ರೂಮಿಗೆ ನೀರನ್ನು ತುಂಬಿಸಿರುವುದರಿಂದ ಮಕ್ಕಳು ಶಾಲೆಗೆ ಉತ್ಸಾಹದಿಂದ ಬರುತ್ತಿದ್ದಾರೆ. ಇದೀಗ ಮಕ್ಕಳು ನೀರಿನಲ್ಲಿ ಆಟವಾಡುತ್ತಾ ಕಲಿಯುತ್ತಿದ್ದಾರೆʼʼ ಎಂದು ಅವರು ವಿವರಿಸಿದ್ದಾರೆ. ಅವರ ಈ ಐಡಿಯಾಕ್ಕೆ ಗ್ರಾಮಸ್ಥರು ಭೇಷ್‌ ಎಂದಿದ್ದಾರೆ. ನೆಟ್ಟಿಗರು ಸಂತಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Viral Video: ಆರಾಮಾಗಿ ಆಟವಾಡ್ತಿದ್ದ ಬಾಲಕಿ ಮೇಲೆ ಜರ್ಮನ್‌ ಶೆಫರ್ಡ್‌ ಡೆಡ್ಲಿ ಅಟ್ಯಾಕ್‌!

ಹವಾಮಾನ ಇಲಾಖೆಯ ಮುನ್ನೆಚ್ಚರಿಕೆ

ಈ ಮಧ್ಯೆ ಹವಾಮಾನ ಇಲಾಖೆ ಹೆಚ್ಚುತ್ತಿರುವ ತಾಪಮಾನದ ಬಗ್ಗೆ ಎಚ್ಚರಿಕೆ ನೀಡಿದೆ. ಸೋಮವಾರ ದೇಶದ ಕೆಲವೆಡೆ ಉಷ್ಣಾಂಶ 45 ಡಿಗ್ರಿ ಸೆಲ್ಸಿಯಸ್‌ಗೆ ತಲುಪಿತ್ತು. ಮುಂದಿನ ಐದು ದಿನಗಳಲ್ಲಿ ಇದೇ ರೀತಿಯ ಬಿಸಿಯ ವಾತಾವರಣ ಮುಂದುವರಿಯಲಿದೆ ಎಂದು ಎಚ್ಚರಿಸಿದೆ. ಆಂಧ್ರಪ್ರದೇಶ, ಬಿಹಾರ, ಪಶ್ಚಿಮ ಬಂಗಾಳ ಮತ್ತು ಒಡಿಶಾ ಮುಂತಾದೆಡೆಗೆ ರೆಡ್‌ ಅಲರ್ಟ್‌ ಘೋಷಿಸಲಾಗಿದೆ. ತೆಲಂಗಾಣ, ಕರ್ನಾಟಕ, ಕೇರಳ ಮತ್ತು ಸಿಕ್ಕಿಂಗೆ ಆರಂಜ್‌ ಅಲರ್ಟ್‌ ಸೂಚಿಸಲಾಗಿದೆ.

Continue Reading

ವೈರಲ್ ನ್ಯೂಸ್

Divorce Celebration: ಗಂಡನ ಬಿಟ್ಟು ಬಂದ ಮಗಳನ್ನು ಅದ್ಧೂರಿ ಮೆರವಣಿಗೆಯಲ್ಲಿ ಕರೆ ತಂದ ಅಪ್ಪ!

Divorce Celebration: ಕಾನ್ಪುರದ ನಿವೃತ್ತ ಸರ್ಕಾರಿ ಅಧಿಕಾರಿಯೊಬ್ಬರು ತಮ್ಮ ಮಗಳ ವಿಚ್ಚೇದನವನ್ನು ಬ್ಯಾಂಡ್ ಬಾಜಾದೊಂದಿಗೆ ಆಚರಿಸಿ ಸಂಭ್ರಮಿಸಿದ್ದಾರೆ.
ವಿಚ್ಛೇದನದ ಬಳಿಕ ಮಗಳಿಗೆ ಯಾವುದೇ ಕಳಂಕ ಬಾರದೇ ಇರಲಿ ಎಂದು ತಂದೆಯೊಬ್ಬರು ವಿಭಿನ್ನ ಹೆಜ್ಜೆಯನ್ನು ಇಟ್ಟಿದ್ದಾರೆ.

VISTARANEWS.COM


on

By

Divorce Celebration
Koo

ಕಾನ್ಪುರ: ಮಗಳ ಮದುವೆ (daughter wedding) ಮಾಡಿ ಗಂಡನ ಮನೆಗೆ ಕಳುಹಿಸುವಾಗ ಬ್ಯಾಂಡ್ ಬಾಜಾದೊಂದಿಗೆ (band baja) ಕಳುಹಿಸುವುದು ಸಂಪ್ರದಾಯ. ಆದರೆ ಇಲ್ಲೊಬ್ಬರು ಮಗಳ ವಿಚ್ಛೇದನದ ಬಳಿಕ ಬ್ಯಾಂಡ್ ಬಾಜಾದೊಂದಿಗೆ (Divorce Celebration) ಮಗಳನ್ನು ಮರಳಿ ಮನೆಗೆ ಕರೆ ತಂದು ಸಂಭ್ರಮಿಸಿದ್ದಾರೆ. ಈ ಘಟನೆ ಕಾನ್ಪುರದಲ್ಲಿ (Kanpur) ಭಾರಿ ಸದ್ದು ಮಾಡಿದೆ.

ಕಾನ್ಪುರದ ನಿವೃತ್ತ ಸರ್ಕಾರಿ ಅಧಿಕಾರಿಯೊಬ್ಬರು ತಮ್ಮ ಮಗಳ ವಿಚ್ಚೇದನವನ್ನು ಬ್ಯಾಂಡ್ ಬಾಜಾದೊಂದಿಗೆ ಆಚರಿಸಿ ಸಂಭ್ರಮಿಸಿದ್ದಾರೆ. ವಿಚ್ಛೇದನದ ಬಳಿಕ ಮಗಳು ಸಾಕಷ್ಟು ನೋವು ಅನುಭವಿಸಬೇಕಾಗುತ್ತದೆ. ಸಮಾಜದ ಚುಚ್ಚು ಮಾತುಗಳನ್ನು ಕೇಳಬೇಕಾಗುತ್ತದೆ. ಮಗಳಿಗೆ ಯಾವುದೇ ಸಾಮಾಜಿಕ ಕಳಂಕ ಬಾರದೇ ಇರಲಿ ಎಂದು ತಂದೆಯೊಬ್ಬರು ಸ್ಫೂರ್ತಿದಾಯಕ ಹೆಜ್ಜೆಯನ್ನು ಇಟ್ಟಿದ್ದಾರೆ.

ಇದನ್ನೂ ಓದಿ: Divorce Case : ಶುಭ ಸುದ್ದಿ! ಕಾರಣ ಸರಿಯಾಗಿದ್ದರೆ ಕೂಲಿಂಗ್‌ ಪೀರಿಯೆಡ್‌ ಇಲ್ಲದೆಯೇ ತಕ್ಷಣ ಡೈವೋರ್ಸ್ ಸಿಗುತ್ತೆ!

ಮಗಳು ಮದುವೆಯಾಗಿ ಹೊಸ ಜೀವನ ಪ್ರಾರಂಭಿಸುವಾಗ ಬ್ಯಾಂಡ್ ಬಾಜಾದೊಂದಿಗೆ ಗಂಡನ ಮನೆಗೆ ಕಳುಹಿಸಿಕೊಡುತ್ತೇವೆ. ಅದೇ ರೀತಿ ವಿಚ್ಛೇದನದ ಬಳಿಕ ಆಕೆ ಹೊಸ ಜೀವನವನ್ನು ಆರಂಭಿಸುವ ಸಮಯ. ನಾವು ಅವಳನ್ನು ಕೆಲವು ವರ್ಷಗಳ ಹಿಂದೆ ಕಳುಹಿಸಿದ್ದೇವೆ. ಈಗ ಮರಳಿ ಕರೆ ತಂದಿದ್ದೇವೆ. ಅವಳು ಹೊಸದಾಗಿ ಜೀವನ ಪ್ರಾರಂಭಿಸುವ ಸಮಯ ಬಂದಿದೆ ಎಂದು ಬಿಎಸ್ ಎನ್ ಎಲ್ ನ ನಿವೃತ್ತ ಅಧಿಕಾರಿ ಅನಿಲ್ ಕುಮಾರ್ ಹೇಳಿದರು.


ನವದೆಹಲಿಯ ಪಾಲಂ ವಿಮಾನ ನಿಲ್ದಾಣದಲ್ಲಿ ಎಂಜಿನಿಯರ್ ಆಗಿರುವ ಅನಿಲ್ ಅವರ ಪುತ್ರಿ ಉರ್ವಿ (36) ಅವರಿಗೆ 2016ರಲ್ಲಿ ಕಂಪ್ಯೂಟರ್ ಎಂಜಿನಿಯರ್ ಒಬ್ಬನೊಂದಿಗೆ ವಿವಾಹ ಮಾಡಿಕೊಡಲಾಗಿತ್ತು. ಉರ್ವಿ ದಂಪತಿ ದೆಹಲಿಯಲ್ಲಿ ವಾಸಿಸುತ್ತಿದ್ದರು. ಅವರಿಗೆ ಒಬ್ಬ ಮಗಳು ಇದ್ದಾಳೆ. ಆದರೆ ಉರ್ವಿಯ ಅತ್ತೆಯಂದಿರು ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿದ್ದರು. ಹೀಗಾಗಿ ಫೆ. 28ರಂದು ಅವರು ವಿವಾಹ ವಿಚ್ಛೇದನ ಪಡೆದಿದ್ದಾರೆ. ಎಂಟು ವರ್ಷಗಳ ಚಿತ್ರಹಿಂಸೆ, ಹೊಡೆತ ಮತ್ತು ನಿಂದೆಗಳನ್ನು ಸಹಿಸಿಕೊಂಡಿದ್ದೇನೆ. ಆದರೆ ಕೊನೆಗೆ ಮದುವೆ ಮುರಿಯುವ ನಿರ್ಧಾರ ಮಾಡಿದೆ ಎಂದು ಉರ್ವಿ ಹೇಳಿದರು.

ವಿಚ್ಛೇದನಕ್ಕೂ ಸಂಭ್ರಮ

ಮದುವೆ ಎನ್ನುವುದು ಸ್ವರ್ಗದಲ್ಲಿ ನಿಶ್ಚಯವಾಗಿರುತ್ತದೆ ಎನ್ನುವ ನಂಬಿಕೆ ಇತ್ತು. ಆದರೆ ಈಗ ವಿಚ್ಛೇದನಗಳು ಹೆಚ್ಚಾಗುತ್ತಿದೆ. ಸಣ್ಣಪುಟ್ಟ ಜಗಳಗಳು ಕೋರ್ಟ್ ಮೆಟ್ಟಿಲೇರಿ ವಿಚ್ಛೇದನ ಪಡೆಯುತ್ತಿದ್ದಾರೆ.

ವಿಚ್ಛೇದನ ಎನ್ನುವುದು ಕೇವಲ ಒಂದು ಹೆಣ್ಣನ್ನು ಮಾತ್ರವಲ್ಲ ಆಕೆಯ ಸಂಪೂರ್ಣ ಕುಟುಂಬವನ್ನೇ ಜರ್ಜರಿತರನ್ನಾಗಿ ಮಾಡುತ್ತದೆ. ತಮ್ಮ ನೋವು ತಮಗೆ ಆದರೂ ಸಮಾಜದ ಚುಚ್ಚು ಮಾತುಗಳು ಅವರನ್ನು ಮತ್ತಷ್ಟು ಕುಗ್ಗುವಂತೆ ಮಾಡುತ್ತದೆ. ವಿಚ್ಛೇದನ ಎನ್ನುವುದು ಹೆಣ್ಣಿಗೆ ಶಾಪವಲ್ಲ ಎಂಬುದನ್ನು ತೋರ್ಪಡಿಸಲು ಇತ್ತೀಚಿನ ದಿನಗಳಲ್ಲಿ ವಿಚ್ಛೇದನ ಸಂಭ್ರಮಿಸುವವರು ಹೆಚ್ಚಾಗಿದ್ದಾರೆ. ವಿದೇಶದಲ್ಲಿದ್ದ ಈ ಸಂಸ್ಕೃತಿ ಈಗ ನಮ್ಮಲ್ಲೂ ಬೇರೂರುತ್ತಿದೆ.

ದೊಡ್ಡದೊಡ್ಡ ಸೆಲೆಬ್ರಿಟಿಗಳು ತಮ್ಮ ವಿಚ್ಛೇದನವನ್ನು ಸಂಭ್ರಮಿಸುತ್ತಾರೆ. ಇತ್ತೀಚಿಗೆ ಫ್ಯಾಶನ್ ಡಿಸೈನರ್ ಶಾಲಿನಿ ಕೆಂಪು ಬಣ್ಣದ ಬಟ್ಟೆ ಧರಿಸಿ ಫೋಟೋಶೂಟ್ ಮಾಡಿಕೊಂಡು ವಿಚ್ಛೇದನವನ್ನು ಸಂಭ್ರಮಿಸಿದ್ದರು.

ಇಂತಹ ಸಂಸ್ಕೃತಿಯನ್ನು ಇದೀಗ ಪೋಷಕರೇ ಮುಂದೆ ನಿಂತು ಆಚರಿಸುತ್ತಿರುವುದು ನೊಂದ ಹೆಣ್ಣಿಗೆ ಶಕ್ತಿ ತುಂಬಿದಂತಾಗುವುದು.

Continue Reading
Advertisement
E-Pass Mandatory
ಪ್ರವಾಸ27 mins ago

E-Pass Mandatory: ಊಟಿ, ಕೊಡೈಕೆನಾಲ್‌ ಪ್ರವಾಸ ಹೊರಟಿದ್ದೀರಾ? ಹಾಗಿದ್ದರೆ ಗಮನಿಸಿ

Davanagere lok sabha constituency bjp candidate gayatri siddeshwar election campaign in mayakonda
ದಾವಣಗೆರೆ31 mins ago

Lok Sabha Election 2024: ಮಾಯಕೊಂಡ ಕ್ಷೇತ್ರದ ವಿವಿಧೆಡೆ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್ ಮತಯಾಚನೆ

Hassan Pen Drive case Prajwal and Revanna arrested if they fail to appear before SIT
ಕ್ರೈಂ40 mins ago

Hassan Pen Drive Case: ಎಸ್‌ಐಟಿ ಎದುರು 24 ಗಂಟೆಯೊಳಗೆ ಹಾಜರಾಗದೇ ಇದ್ದರೆ ಪ್ರಜ್ವಲ್‌, ರೇವಣ್ಣ ಅರೆಸ್ಟ್?

Medical Negligence
ಕೊಪ್ಪಳ42 mins ago

Medical Negligence : ಸಕಾಲಕ್ಕೆ ಸಿಗದ ಚಿಕಿತ್ಸೆ; ಹೆರಿಗೆಗೂ ಮೊದಲೇ ತಾಯಿ-ಮಗು ಸಾವು

Maria alam Khan
ರಾಜಕೀಯ46 mins ago

Maria Alam Khan: “ಜಿಹಾದ್‌ಗಾಗಿ ಮತ ನೀಡಿ..”ಮಾಜಿ ಕೇಂದ್ರ ಸಚಿವರ ಸೊಸೆಯಿಂದ ಭಾರೀ ಎಡವಟ್ಟು

GST Collection
ದೇಶ48 mins ago

GST Collection: ಸಾರ್ವಕಾಲಿಕ ದಾಖಲೆ ನಿರ್ಮಿಸಿದ ಜಿಎಸ್‌ಟಿ ಸಂಗ್ರಹ; ಏಪ್ರಿಲ್‌ನ ಕಲೆಕ್ಷನ್‌ ಎಷ್ಟು?

Covishield vaccine india
ಪ್ರಮುಖ ಸುದ್ದಿ51 mins ago

Covishield Vaccine: ಭಾರತದಲ್ಲಿ ಕೋವಿಶೀಲ್ಡ್‌ ಅಡ್ಡ ಪರಿಣಾಮದ ಅಪಾಯವಿಲ್ಲ: ಯಾಕೆ ಗೊತ್ತೆ?

Rupali Ganguly Of Anupamaa Fame Joins BJP
ಕಿರುತೆರೆ59 mins ago

Rupali Ganguly: ನಾನು ಮೋದಿಯ ʻಡೈ ಹಾರ್ಡ್‌ ಫ್ಯಾನ್‌ʼ ಎಂದು ಬಿಜೆಪಿ ಸೇರಿದ ಖ್ಯಾತ ಕಿರುತೆರೆ ನಟಿ!

Movie Release
ಒಟಿಟಿ1 hour ago

Movie Release: ಈ ವಾರ ಒಟಿಟಿಯಲ್ಲಿ ನೀವು ನೋಡಬಹುದಾದ ಸಿನಿಮಾ, ವೆಬ್‌ ಸಿರೀಸ್‌ಗಳಿವು; ಟ್ರೈಲರ್‌ಗಳನ್ನು ಇಲ್ಲಿ ನೋಡಿ

Hassan Pen Drive Case POCSO case registered against Prajwal Revanna
ಕ್ರೈಂ2 hours ago

Hassan Pen Drive Case: ಪ್ರಜ್ವಲ್‌ ರೇವಣ್ಣ ವಿರುದ್ಧ ದಾಖಲಾಗುತ್ತಾ ಪೋಕ್ಸೋ ಕೇಸ್‌; ಬಾಲಕಿ ಉಲ್ಟಾ ಹೊಡೆದರೆ?

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

dina bhavishya read your daily horoscope predictions for April 30 2024
ಭವಿಷ್ಯ1 day ago

Dina Bhavishya: ಈ ರಾಶಿಗಳ ಉದ್ಯೋಗಿಗಳಿಗೆ ಇಂದು ಒತ್ತಡ ಹೆಚ್ಚಲಿದೆ!

PM Narendra modi in Bagalakote and Attack on Congress
Lok Sabha Election 20242 days ago

PM Narendra Modi: ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್‌ ಷಡ್ಯಂತ್ರ: ಮೋದಿ ವಾಗ್ದಾಳಿ

PM Narendra modi in Bagalakote for Election Campaign and here is Live telecast
Lok Sabha Election 20242 days ago

PM Narendra Modi Live: ಇಂದು ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಲೈವ್‌ಗಾಗಿ ಇಲ್ಲಿ ವೀಕ್ಷಿಸಿ

dina bhavishya read your daily horoscope predictions for April 29 2024
ಭವಿಷ್ಯ2 days ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

Narendra Modi
Lok Sabha Election 20243 days ago

PM Narendra Modi: ಇವಿಎಂ ದೂರುವ ಕಾಂಗ್ರೆಸ್‌ಗೆ ಸೋಲಿನ ಭೀತಿ; ಕರ್ನಾಟಕದಲ್ಲಿ 1 ಸೀಟನ್ನೂ ಗೆಲ್ಲಲ್ಲವೆಂದ ಮೋದಿ!

PM Narendra Modi in Sirsi
Lok Sabha Election 20243 days ago

PM Narendra Modi: ಕಾಂಗ್ರೆಸ್ ರಾಮ ವಿರೋಧಿ; ಮನೆಗೆ ಹೋಗಿ ಕರೆದರೂ ಮಂದಿರ ಉದ್ಘಾಟನೆಗೆ ಬರಲಿಲ್ಲ: ಮೋದಿ ಟೀಕೆ

If Congress comes to power all your assets will belong to Government says PM Narendra Modi
Lok Sabha Election 20243 days ago

Narendra Modi: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನೀವು ಕಷ್ಟಪಟ್ಟು ಸಂಪಾದಿಸಿದ ಆಸ್ತಿಯೆಲ್ಲ ಅನ್ಯರ ಪಾಲು: ಮೋದಿ ಎಚ್ಚರಿಕೆ

Congress ties with Aurangzeb supporters and Girls killed under his rule says Narendra Modi
Lok Sabha Election 20243 days ago

Narendra Modi: ಔರಂಗಜೇಬ್ ಬೆಂಬಲಿಗರ ಜತೆ ಕಾಂಗ್ರೆಸ್ ದೋಸ್ತಿ; ಇವರ ಆಡಳಿತದಲ್ಲಿ ಹೆಣ್ಣು ಮಕ್ಕಳ ಹತ್ಯೆ: ಮೋದಿ ವಾಗ್ದಾಳಿ

Modi in Karnataka stay in Belagavi tomorrow and Huge gatherings at five places
Latest3 days ago

Narendra Modi Live : ಪ್ರಧಾನಿ ಮೋದಿಯ ಬೆಳಗಾವಿ ಪ್ರಚಾರ ಸಭೆಯ ನೇರ ಪ್ರಸಾರವನ್ನು ಇಲ್ಲಿ ವೀಕ್ಷಿಸಿ…

Dina Bhavishya
ಭವಿಷ್ಯ3 days ago

Dina Bhavishya : ಈ ರಾಶಿಯವರಿಗೆ ದಿನದ ಮಟ್ಟಿಗೆ ಖರ್ಚು ಹೆಚ್ಚು

ಟ್ರೆಂಡಿಂಗ್‌