Viral Video: ಪ್ರಧಾನಿ ಮೋದಿಯವರ ಚಿನ್ನದ ಪ್ರತಿಮೆ ನಿರ್ಮಿಸಿದ ಸೂರತ್ ​​​ಆಭರಣ ವ್ಯಾಪಾರಿ; 156 ಗ್ರಾಂ ಬಂಗಾರವನ್ನೇ ಬಳಸಿದ್ದೇಕೆ? - Vistara News

ವೈರಲ್ ನ್ಯೂಸ್

Viral Video: ಪ್ರಧಾನಿ ಮೋದಿಯವರ ಚಿನ್ನದ ಪ್ರತಿಮೆ ನಿರ್ಮಿಸಿದ ಸೂರತ್ ​​​ಆಭರಣ ವ್ಯಾಪಾರಿ; 156 ಗ್ರಾಂ ಬಂಗಾರವನ್ನೇ ಬಳಸಿದ್ದೇಕೆ?

ಬಸಂತ್​ ಬೋಹ್ರಾ ಅವರು ಕೆತ್ತನೆ ಮಾಡಿಸಿದ ಈ ಪ್ರತಿಮೆಯನ್ನು ಕೊಳ್ಳಲು ಸೂರತ್​​ನ ಹಲವು ಬಿಜೆಪಿ ಮುಖಂಡರು ಮುಂದೆ ಬಂದಿದ್ದಾರೆ. ಪ್ರಧಾನಿ ಮೋದಿಯವರ ಅಭಿಮಾನಿಗಳೂ ಕೆಲವರು ಆಸಕ್ತಿ ತೋರಿಸಿದ್ದಾರೆ. ಆದರೆ ಅವರಿಗೆಲ್ಲರಿಗೂ ನಿರಾಸೆಯೇ ಆಗಿದೆ.

VISTARANEWS.COM


on

Modi Gold
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಸೂರತ್​: 2022ರ ಡಿಸೆಂಬರ್​​ನಲ್ಲಿ ನಡೆದಿದ್ದ ಗುಜರಾತ್ ವಿಧಾನಸಭಾ​​ ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಿದ್ದಕ್ಕೆ ಫುಲ್​ ಖುಷಿಯಾದ ಸೂರತ್​​ನ ಆಭರಣ ವ್ಯಾಪಾರಿಯೊಬ್ಬರು, 18 ಕ್ಯಾರೆಟ್​ ಚಿನ್ನದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಪ್ರತಿಮೆಯನ್ನು ಕೆತ್ತನೆ ಮಾಡಿಸಿದ್ದಾರೆ. ನರೇಂದ್ರ ಮೋದಿಯವರ ಚಿನ್ನದ ಪ್ರತಿಮೆಯ ವಿಡಿಯೊ ವೈರಲ್ ಆಗಿದ್ದು, ಇಡೀ ಗುಜರಾತ್​​ನಲ್ಲಿ ಅದೇ ಚರ್ಚೆಯ ವಿಷಯವಾಗಿದೆ.

ಸೂರತ್​ನ ಚಿನ್ನಾಭರಣ ಉದ್ಯಮಿಯಾದ, ರಾಧಿಕಾ ಚೈನ್ಸ್​​ನ ಮಾಲೀಕ ಬಸಂತ್​ ಬೋಹ್ರಾ ಎಂಬುವರು ಈಗ ಪ್ರಧಾನಿ ನರೇಂದ್ರ ಮೋದಿಯವರ ಚಿನ್ನದ ಪ್ರತಿಮೆ ಕೆತ್ತನೆ ಮಾಡಿಸಿ ಸುದ್ದಿಯಾಗಿದ್ದಾರೆ. ಗುಜರಾತ್​​ನ​​ 182 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ 156 ಕ್ಷೇತ್ರಗಳನ್ನು ಗೆಲ್ಲುವ ಮೂಲಕ ಅತಿದೊಡ್ಡ ಮಟ್ಟದ ಗೆಲವು ಸಾಧಿಸಿದೆ. ಹಾಗಾಗಿ ಈ ಪ್ರತಿಮೆಯನ್ನು ಕೂಡ 156 ಗ್ರಾಂಗಳಷ್ಟು ಚಿನ್ನದಲ್ಲಿಯೇ ನಿರ್ಮಿಸಲಾಗಿದ್ದು, ಅದರ ಬೆಲೆ ಸುಮಾರು 11 ಲಕ್ಷ ರೂಪಾಯಿ. ಹಾಗೇ, 4.5 ಇಂಚು ಎತ್ತರ, 3 ಇಂಚು ಅಗಲ ಇದೆ ಎಂದು ಬೋಹ್ರಾ ತಿಳಿಸಿದ್ದಾರೆ.

ಮಾರಾಟಕ್ಕಿಲ್ಲ!
ಬಸಂತ್​ ಬೋಹ್ರಾ ಅವರು ಕೆತ್ತನೆ ಮಾಡಿಸಿದ ಈ ಪ್ರತಿಮೆಯನ್ನು ಕೊಳ್ಳಲು ಸೂರತ್​​ನ ಹಲವು ಬಿಜೆಪಿ ಮುಖಂಡರು ಮುಂದೆ ಬಂದಿದ್ದಾರೆ. ಪ್ರಧಾನಿ ಮೋದಿಯವರ ಅಭಿಮಾನಿಗಳೂ ಕೆಲವರು ಆಸಕ್ತಿ ತೋರಿಸಿದ್ದಾರೆ. ಆದರೆ ಅವರಿಗೆಲ್ಲರಿಗೂ ನಿರಾಸೆಯೇ ಆಗಿದೆ. ‘ನಾನು ಈ ಪ್ರತಿಮೆಯನ್ನು ಮಾರಾಟ ಮಾಡುವುದಿಲ್ಲ. ಅದಕ್ಕೆ ಬೆಲೆಯನ್ನೂ ನಿಗದಿಪಡಿಸುವುದಿಲ್ಲ. ನಾನು ಪ್ರಧಾನಿ ನರೇಂದ್ರ ಮೋದಿಯವರ ದೊಡ್ಡ ಅಭಿಮಾನಿ. ಅವರಿಗೆ ಗೌರವ ಸಲ್ಲಿಸುವ ಸದುದ್ದೇಶದಿಂದ ಈ ಪ್ರತಿಮೆ ಕೆತ್ತನೆ ಮಾಡಿಸಿದ್ದೇನೆ’ ಎಂದು ಬಂಗಾರದ ವ್ಯಾಪಾರಿ ಬಸಂತ್​ ಬೋಹ್ರಾ ತಿಳಿಸಿದ್ದಾರೆ.

ನಮ್ಮ ಚಿನ್ನಾಭರಣ ತಯಾರಿಕಾ ಮಳಿಗೆಯಲ್ಲೇ ಸುಮಾರು 20 ಕುಶಲಕರ್ಮಿಗಳು ಸೇರಿ ಈ ಪ್ರತಿಮೆ ಕೆತ್ತನೆ ಮಾಡಿದ್ದಾರೆ. ಈ ಕೆಲಸಕ್ಕೆ ಸುಮಾರು 3 ತಿಂಗಳು ಬೇಕಾಯಿತು. ಅಂತಿಮವಾಗಿ ಫಲಿತಾಂಶ ತೃಪ್ತಿದಾಯಕವಾಗಿದೆ. ತುಂಬ ಚೆನ್ನಾಗಿ ಈ ಪ್ರತಿಮೆ ಮೂಡಿ ಬಂದಿದೆ ಎಂದು ಹೇಳಿದ ಬೋಹ್ರಾ, ಮಾರಾಟ ಮಾಡುವುದಿಲ್ಲ ಎಂಬುದನ್ನು ಒತ್ತಿ ಹೇಳಿದ್ದಾರೆ.

ಇದನ್ನೂ ಓದಿ: Narendra Modi Bust | ಬಂಗಾರದಲ್ಲಿ ನರೇಂದ್ರ ಮೋದಿ ಪುತ್ಥಳಿ ಕೆತ್ತಿಸಿದ ಗುಜರಾತ್‌ ಉದ್ಯಮಿ, ಏನಿದಕ್ಕೆ ಕಾರಣ?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಧಾರ್ಮಿಕ

Ballari News: ಬಾಯಿಯೊಳಗೆ ತ್ರಿಶೂಲ; ಬೆನ್ನಿಗೆ ಕೊಕ್ಕೆ ಕಟ್ಟಿಕೊಂಡು ಕಾರು, ರಿಕ್ಷಾ ಎಳೆದ ಭಕ್ತರು!

Ballari News: ಕಂಪ್ಲಿ ಕೋಟೆಯ ಮೀನುಗಾರರ ಕಾಲೋನಿಯಲ್ಲಿ ಮೀನುಗಾರ ಸಮುದಾಯದ ಆರಾಧ್ಯ ದೈವ ಶ್ರೀ ಕಾಳಮ್ಮ ದೇವಿಯ ಪೂಜಾ ಮಹೋತ್ಸವವು ಮಂಗಳವಾರ ಅದ್ಧೂರಿಯಾಗಿ ಜರುಗಿತು. ಹರಕೆ ತೀರಿಸುವ ಭಕ್ತರ ಆಚರಣೆಗಳು ಗಮನ ಸೆಳೆದವು.

VISTARANEWS.COM


on

Kalamma Devi Pooja Mahotsava in Kampli
Koo

ಕಂಪ್ಲಿ: ಕಂಪ್ಲಿ ಕೋಟೆಯ ಮೀನುಗಾರರ ಕಾಲೋನಿಯಲ್ಲಿ ಮೀನುಗಾರ ಸಮುದಾಯದ ಆರಾಧ್ಯ ದೈವ ಶ್ರೀ ಕಾಳಮ್ಮ ದೇವಿಯ ಪೂಜಾ ಮಹೋತ್ಸವವು ಮಂಗಳವಾರ ಅದ್ಧೂರಿಯಾಗಿ (Ballari News) ಜರುಗಿತು.

ಸೋಮವಾರ ಸಂಜೆ ಗಂಗೆಸ್ಥಳ ಮತ್ತು ಅಗ್ನಿ ಕುಂಭೋತ್ಸವ ಸೇರಿದಂತೆ ವಿವಿಧ ರೀತಿಯ ಧಾರ್ಮಿಕ ಕಾರ್ಯಕ್ರಮಗಳು ಶ್ರದ್ಧಾಭಕ್ತಿಯಿಂದ ಜರುಗಿದವು. ಮೆರವಣಿಗೆಯಲ್ಲಿ ಮೂವರು ಭಕ್ತಾದಿಗಳು ಬಾಯಿಗೆ 12 ಅಡಿ ಉದ್ದದ ತ್ರಿಶೂಲ ಅಸ್ತ್ರವನ್ನು ಹಾಕಿಸಿಕೊಂಡು ಕಲ್ಲುಗುಂಡು, ಇಬ್ಬರು ಭಕ್ತಾದಿಗಳು ಆಟೋರಿಕ್ಷಾ, ಇಬ್ಬರು ಭಕ್ತರು ಕಾರುಗಳನ್ನು ತಮ್ಮ ಬೆನ್ನುಗಳಿಗೆ ಹಾಕಿದ್ದ ಕಬ್ಬಿಣದ ಕೊಕ್ಕೆಗಳಿಂದ ಎಳೆದು ತಮ್ಮ ಹರಕೆ ತೀರಿಸಿದರು. ಟ್ರ್ಯಾಕ್ಟರ್‌ಗೆ ಹಾಕಲಾಗಿದ್ದ ಬೊಂಬುಗಳಿಗೆ ತಮ್ಮ ಬೆನ್ನಿಗೆ ಹಾಕಲಾಗಿದ್ದ ಕೊಕ್ಕೆಯಿಂದ ಜೋತು ಬೀಳುವ ಮೂಲಕ ಭಕ್ತಿ ಸಮರ್ಪಿಸಿದರು.

ಇದನ್ನೂ ಓದಿ: Job Alert: ನೈವೇಲಿ ಲಿಗ್ನೈಟ್ ಕಾರ್ಪೋರೇಷನ್‌ನಲ್ಲಿದೆ ಉದ್ಯೋಗಾವಕಾಶ; ಪದವಿ ಪಡೆದವರು ಅರ್ಜಿ ಸಲ್ಲಿಸಿ

ಮೆರವಣಿಗೆಯು ಶ್ರೀ ಕಾಳಮ್ಮ ದೇವಸ್ಥಾನದಿಂದ ಶ್ರೀ ಸುಂಕಲಮ್ಮ ದೇವಸ್ಥಾನದ ವರೆಗೂ ಜರುಗಿತು. ಭಕ್ತಾದಿಗಳು ರಸ್ತೆಯುದ್ದಕ್ಕೂ ತಮ್ಮ ಬೆನ್ನಿಗೆ ಹಾಕಲಾಗಿದ್ದ ಕೊಕ್ಕೆಯಿಂದ ತಮ್ಮ ಹರಕೆಯಂತೆ ಸುಡು ಬಿಸಿಲ ಮಧ್ಯೆಯು ಗುಂಡು, ಆಟೋ, ಕಾರುಗಳನ್ನು ಎಳೆದೊಯ್ದು ಭಕ್ತಿ ಸಮರ್ಪಿಸಿದರು.

ಪಟ್ಟಣದ ಸೇರಿದಂತೆ ತಾಲೂಕಿನ ವಿವಿಧೆಡೆಗಳಿಂದ ಆಗಮಿಸಿದ್ದಂತಹ ಭಕ್ತರು ವಿಶೇಷ ಆಚರಣೆಯನ್ನು ನೋಡಿ ಕಣ್ ತುಂಬಿಕೊಳ್ಳುವ ಮೂಲಕ ಆಶ್ಚರ್ಯ ಚಕಿತರಾದರು. ಕಾರ್ಯಕ್ರಮದ ಪೌರೋಹಿತ್ಯವನ್ನು ಮಾರೆಪ್ಪ ಪೂಜಾರಿ ವಹಿಸಿದ್ದರು.

ಇದನ್ನೂ ಓದಿ: Koppala News: ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರು ಸಿಗುವಂತೆ ಕ್ರಮ ಕೈಗೊಳ್ಳಲು ಜಿ.ಪಂ ಸಿಇಒ ಸೂಚನೆ

ಈ ಸಂದರ್ಭದಲ್ಲಿ ಮೀನುಗಾರ ಸಹಕಾರ ಸಂಘದ ಅಧ್ಯಕ್ಷ ಚೆನ್ನರಾಜು, ಉಪಾಧ್ಯಕ್ಷ ಷಣ್ಮುಖಪ್ಪ, ಮುಖಂಡರಾದ ಮಾರೆಪ್ಪ ಪೂಜಾರಿ, ಸ್ವಾಮಿ ದೊರೆ, ಎ. ಗಣೇಶ್, ಎಸ್.ಜಿ.ಪೂಜಾರಿ, ಗುರುಮೂರ್ತಿ, ಪಣಿಯಪ್ಪ, ಆರ್. ಕೃಷ್ಣ ಪೂಜಾರಿ, ಎಸ್.ಆರ್. ಸುರೇಶ್ ಸೇರಿದಂತೆ ಸರ್ವ ಸಮುದಾಯಗಳ ಸದ್ಭಕ್ತರು ಪಾಲ್ಗೊಂಡಿದ್ದರು.

Continue Reading

ವೈರಲ್ ನ್ಯೂಸ್

Viral News: ಕೊಲೆಯಾಗಿದ್ದಾರೆ ಎನ್ನಲಾದ ಸಹೋದರಿಯರು ವರ್ಷದ ಬಳಿಕ ಪತ್ತೆ; ಯಾವ ಸಿನಿಮಾಕ್ಕೂ ಕಡಿಮೆ ಇಲ್ಲ ಈ ಘಟನೆ

Viral News: ಕೆಲವೊಮ್ಮೆ ನಿಜ ಜೀವನದಲ್ಲಿ ನಡೆಯುವ ಘಟನೆಗಳು ಯಾವ ಸಿನಿಮಾ ಕಥೆಗಳಿಗಿಂತ ಕಡಿಮೆ ಇರುವುದಿಲ್ಲ. ಜೀವನದಲ್ಲಿ ಘಟಿಸುವ ಕೆಲವು ಸನ್ನಿವೇಶಗಳು ನಾವು ಊಹಿಸದ ರೀತಿಯ ತಿರುವು ಪಡೆದುಕೊಳ್ಳುತ್ತವೆ. ಅದಕ್ಕೆ ಉತ್ತಮ ಉದಾಹರಣೆ ಇಲ್ಲಿದೆ. ಉತ್ತರ ಪ್ರದೇಶದ ಗೋರಖ್‌ಪುರ ಮೂಲದ, ದಿಲ್ಲಿಯಲ್ಲಿ ವಾಸವಾಗಿದ್ದ ಸೀತಾ-ಗೀತಾ ಎನ್ನುವ ಸಹೋದರಿಯರ ಜೀವನದ ಕಥೆ ಇದು. ಪಾಲಕರು ಮತ್ತು ಸಹೋದರನೊಂದಿಗೆ ವಾಸಿಸುತ್ತಿದ್ದ ಸೀತಾ (20) ಮತ್ತು ಗೀತಾ (21) ಇಬ್ಬರೂ 2023ರಲ್ಲಿ ನಾಪತ್ತೆಯಾಗಿದ್ದರು. ಈ ಬಗ್ಗೆ ಅವರ ಸಹೋದರ ಅಜಯ್ ಪ್ರಜಾಪತಿ ದೂರು ನೀಡಿದ್ದ. ತನ್ನ ಸಹೋದರಿಯನ್ನು ಕೊಲೆ ಮಾಡಲಾಗಿದೆ ಎಂದು ಆರೋಪಿಸಿದ್ದ. ಇದೀಗ ಸಹೋದರಿಯರು ಮನೆಗೆ ಮರಳಿದ್ದು ಪ್ರಕರಣ ಸುಖಾಂತ್ಯ ಕಂಡಿದೆ. ಈ ರೋಚಕ ಘಟನೆಯ ವಿವರ ಇಲ್ಲಿದೆ.

VISTARANEWS.COM


on

Viral News
Koo

ಲಕ್ನೋ: ಕೆಲವೊಮ್ಮೆ ನಿಜ ಜೀವನದಲ್ಲಿ ನಡೆಯುವ ಘಟನೆಗಳು ಯಾವ ಸಿನಿಮಾ ಕಥೆಗಳಿಗಿಂತ ಕಡಿಮೆ ಇರುವುದಿಲ್ಲ. ಜೀವನದಲ್ಲಿ ಘಟಿಸುವ ಕೆಲವು ಸನ್ನಿವೇಶಗಳು ನಾವು ಊಹಿಸದ ರೀತಿಯ ತಿರುವು ಪಡೆದುಕೊಳ್ಳುತ್ತವೆ. ಇಲ್ಲೂ ಆಗಿದ್ದು ಇದೇ. ಕೊಲೆಯಾಗಿದ್ದಾರೆ ಎಂದು ಮನೆಯವರು ಭಾವಿಸಿದ್ದ ಸಹೋದರಿಯರು ಒಂದು ವರ್ಷದ ಬಳಿಕ ಪತ್ತೆಯಾಗಿದ್ದಾರೆ. ಅದು ಕೂಡ ಅವರಿಗೆ ಮದುವೆಯಾಗಿ ಮಕ್ಕಳಿವೆ ಎನ್ನುವುದು ವಿಶೇಷ. ಸದ್ಯ ಈ ರೋಚಕ ಘಟನೆ ವೈರಲ್‌ ಆಗಿದೆ (Viral News).

ಉತ್ತರ ಪ್ರದೇಶದ ಗೋರಖ್‌ಪುರ ಮೂಲದ, ದಿಲ್ಲಿಯಲ್ಲಿ ವಾಸವಾಗಿದ್ದ ಸೀತಾ-ಗೀತಾ ಎನ್ನುವ ಸಹೋದರಿಯರ ಜೀವನದ ಕಥೆ ಇದು. ಪಾಲಕರು ಮತ್ತು ಸಹೋದರನೊಂದಿಗೆ ವಾಸಿಸುತ್ತಿದ್ದ ಸೀತಾ (20) ಮತ್ತು ಗೀತಾ (21) ಇಬ್ಬರೂ 2023ರಲ್ಲಿ ನಾಪತ್ತೆಯಾಗಿದ್ದರು. ಈ ಬಗ್ಗೆ ಅವರ ಸಹೋದರ ಅಜಯ್ ಪ್ರಜಾಪತಿ ದೂರು ನೀಡಿದ್ದ. ತನ್ನ ಸಹೋದರಿಯನ್ನು ಕೊಲೆ ಮಾಡಲಾಗಿದೆ ಎಂದು ಆರೋಪಿಸಿದ್ದ. ಇದೀಗ ಸಹೋದರಿಯರು ಮನೆಗೆ ಮರಳಿದ್ದು ಪ್ರಕರಣ ಸುಖಾಂತ್ಯ ಕಂಡಿದೆ.

ಘಟನೆಯ ವಿವರ

ಕಳೆದ ವರ್ಷ ಜನವರಿಯಲ್ಲಿ ಸೀತಾ-ಗೀತಾ ಇಬ್ಬರೂ ನಾಪತ್ತೆಯಾಗುವ ಮೂಲಕ ಕಥೆ ಆರಂಭವಾಗುತ್ತದೆ. ಸಹೋದರಿಯರಿಗಾಗಿ ಹುಡುಕಾಟ ನಡೆಸಿದ ಅಜಯ್ ಪ್ರಜಾಪತಿ ಅವರು ಎಲ್ಲೂ ಪತ್ತೆಯಾಗದಿದ್ದಾಗ ಆತಂಕಕ್ಕೆ ಒಳಗಾಗಿದ್ದ. ಹೀಗಾಗಿ ನಾಪತ್ತೆ ದೂರು ದಾಖಲಿಸಿದ್ದ. ಹೀಗಿದ್ದರೂ ತನ್ನ ಹುಡುಕಾಟವನ್ನು ನಿಲ್ಲಿಸಿರಲಿಲ್ಲ. ಈ ಮಧ್ಯೆ ಸಹೋದರಿಯರ ಪೈಕಿ ಒಬ್ಬಾಕೆಯೊಂದಿಗೆ ಗೆಳೆತನ ಬೆಳೆಸಿದ್ದ ಅದೇ ಗ್ರಾಮದ ಜಯಂತ್‌ ಮೌರ್ಯನನ್ನು ಅಜಯ್ ಪ್ರಜಾಪತಿ ಭೇಟಿಯಾಗಿದ್ದ. ತನ್ನ ಸಹೋದರಿಯರು ಎಲ್ಲಿದ್ದಾರೆಂದು ಪ್ರಶ್ನಿಸಿದಾಗ ರೊಚ್ಚಿಗೆದ್ದಿದ್ದ ಜಯಂತ್‌, ʼʼನಿನ್ನ ಸಹೋದರಿಯರಿಗಾದ ಗತಿ ನಿನಗೂ ಬರುತ್ತದೆʼʼ ಎಂದು ಬೆದರಿಕೆ ಹಾಕಿದ್ದ.

ಇದರಿಂದ ತನ್ನ ಸಹೋದರಿಯರ ಬಗ್ಗೆ ಆತಂಕಗೊಂಡ ಅಜಯ್ ಪ್ರಜಾಪತಿ ಪೊಲೀಸ್‌ ಠಾಣೆಗೆ ತೆರಳಿ ಜಯಂತ್‌ ಮೌರ್ಯ ವಿರುದ್ಧ ಕೊಲೆಯ ಕೇಸ್‌ ದಾಖಲಿಸಿದ್ದ. ಆದರೆ ಸಾಕ್ಷಿಯ ಕೊರತೆಯಿಂದ ಪೊಲೀಸರು ಜಯಂತ್‌ ಮತ್ತು ಆತನ ಮನೆಯವರ ವಿರುದ್ಧ ದೂರು ದಾಖಲಿಸಿರಲಿಲ್ಲ. ಹೀಗಾಗಿ ಅಜಯ್ ಕೋರ್ಟ್ ಮೆಟ್ಟಿಲೇರಿದ್ದ. ಇದಾಗಿ ಸುಮಾರು ಒಂದು ವರ್ಷದ ಬಳಿಕ 2024ರ ಜನವರಿ 8ರಂದು ಕೋರ್ಟ್ ಆದೇಶದ ತರುವಾಯ ಗೋರಖ್‌ಪುರದ ಬೆಲ್ಘಾಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.

ತನಿಖೆ ಆರಂಭಿಸಿ ನಾಲ್ಕು ತಿಂಗಳ ನಂತರ ಈ ಸಹೋದರಿಯರು ಜೀವಂತ ಇರುವುದನ್ನು ಪೊಲೀಸರು ಪತ್ತೆ ಹಚ್ಚಿದ್ದರು. ಈ ವೇಳೆ ಸಹೋದರಿಯರ ಕಣ್ಮರೆಯ ಹಿಂದಿನ ನಿಜ ಕಾರಣ ಬಯಲಾಗಿತ್ತು. ಸಹೋದರಿಯರಿಬ್ಬರು ತಮ್ಮ ಪ್ರೇಮಿಗಳನ್ನು ಮದುವೆಯಾಗಲು ಮನೆ ಬಿಟ್ಟು ಓಡಿ ಹೋಗಿದ್ದರು. ತಮ್ಮ ಸಹೋದರ ಕೊಲೆ ಪ್ರಕರಣ ದಾಖಲಿಸಿರುವುದನ್ನು ತಿಳಿದ ಇವರು ಅಮಾಯಕರು ಜೈಲು ಪಾಲಾಗುವುದನ್ನು ತಪ್ಪಿಸಲು ಪೊಲೀಸರನ್ನು ಸಂಪರ್ಕಿಸಿದ್ದರು.

ಇದನ್ನೂ ಓದಿ: ನೆಚ್ಚಿನ ಶ್ವಾನ ಮರಿ ನಾಪತ್ತೆಯಾದ ಕೊರಗಿನಿಂದ ಆತ್ಮಹತ್ಯೆಗೆ ಶರಣಾದ 12 ವರ್ಷದ ಬಾಲಕಿ

ಸೀತಾ ಹರಿಯಾಣದ ವಿಜೇಂದರ್ ಎಂಬಾತನನ್ನು ಮದುವೆಯಾಗಿದ್ದಾಳೆ. ತಮ್ಮಿಬ್ಬರಿಗೂ ಈಗ ಐದು ತಿಂಗಳ ಹೆಣ್ಣು ಮಗು ಇದ್ದು, ಸಂತೋಷದಿಂದ ಜೀವನ ನಡೆಸುತ್ತಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾಳೆ. ಇನ್ನು ಗೀತಾ ಉತ್ತರಾಖಂಡದ ಅಲ್ಮೋರಾದ ನಿವಾಸಿ ಸುರೇಶ್ ರಾಮ್‌ನನ್ನು ಮದುವೆಯಾಗಿದ್ದು, ಈ ದಂಪತಿಗೆ ಆರು ತಿಂಗಳ ಹೆಣ್ಣು ಮಗು ಇದೆ. ಒಟ್ಟಿನಲ್ಲಿ ಕೊಲೆ ಎನ್ನಲಾಗಿದ್ದ ಪ್ರಕರಣ ಶುಭಂಗೊಂಡಿದೆ.

Continue Reading

ವೈರಲ್ ನ್ಯೂಸ್

‍Viral News: ಚಂದದ ಪ್ರೊಫೈಲ್‌ ಫೋಟೋಗೆ ಫಿದಾ ಆಗಿದ್ದವನಿಗೆ ಕಾದಿತ್ತು ಶಾಕ್‌; ಮುಂದೆ ನಡೆದಿದ್ದೇ ಬೇರೆ!

Viral News: ದೀಪೇಂದ್ರ ಸಿಂಗ್‌ ಎಂಬ ಯುವಕನಿಗೆ ಇನ್‌ಸ್ಟಾಗ್ರಾಂನಲ್ಲಿ ಮಹಿಳೆಯೊಬ್ಬಳು ಪರಿಚಯ ಆಗಿದ್ದಳು. ಆಕೆ ಪ್ರೊಫೈಲ್‌ ಪಿಕ್ಚರ್‌ಗೆ ಮನಸೋತಿದ್ದ. ಬಹಳ ಖುಷಿಯಿಂದ ಪ್ರೇಯಸಿಯನ್ನು ಭೇಟಿಯಾಗಲು ಬಂದಿದ್ದ ದೀಪೇಂದ್ರ ಸಿಂಗ್‌ಗೆ ಶಾಕ್‌ ಕಾದಿತ್ತು. ಪ್ರೊಫೈಲ್‌ ಪೋಟೋಗೂ ಅಲ್ಲಿ ಬಂದಿದ್ದಾಕೆಗೂ ಅಜಗಜಾಂತರ ವ್ಯತ್ಯಾಸ ಇತ್ತು. ಅಲ್ಲದೇ ಆಕೆ 45ವರ್ಷದ ಮಹಿಳೆ ಆಗಿದ್ದಳು.

VISTARANEWS.COM


on

Viral News
Koo

ಉತ್ತರಪ್ರದೇಶ: ಸೋಶಿಯಲ್‌ ಮೀಡಿಯಾ(Social Media)ದಲ್ಲಿ ಪ್ರೊಫೈಲ್‌ ಫೋಟೋ(Fake profile) ನೋಡಿ ಯಾಮಾರೋದು ಹೊಸ ವಿಚಾರವೇನಲ್ಲ. ಚಂದ ಫೋಟೋ ನೋಡಿ ಅದನ್ನೇ ನಿಜ ಎಂದು ಭಾವಿಸಿ ಚಾಟಿಂಗ್‌ ಮಾಡಿ ಬಳಿಕ ಹಣ ಕಳೆದುಕೊಂಡವರು ಅದೆಷ್ಟೋ ಜನರಿದ್ದಾರೆ. ಆಗಾಗ ಇಂತಹ ಘಟನೆ(Viral News)ಗಳು ಬೆಳಕಿಗೆ ಬರುತ್ತಿರುತ್ತವೆ. ಇದೀಗ ಅಂತಹದೇ ಮತ್ತೊಂದು ಘಟನೆ ಉತ್ತರಪ್ರದೇಶ(Uttar pradesh)ದ ಕಾನ್ಪುರದಲ್ಲಿ ನಡೆದಿದೆ. 20ವರ್ಷದ ಯುವಕನೋರ್ವ ಸೋಶಿಯಲ್‌ ಮೀಡಿಯಾದಲ್ಲಿ ಪರಿಚಯ ಆಗಿದ್ದ ಮಹಿಳೆಯನ್ನು ನಂಬಿ ಮೋಸ ಹೋಗಿದ್ದಾನೆ. ಪ್ರೊಫೈಲ್‌ ಫೋಟೋ ಕಂಡು ಪ್ರೀತಿಯಲ್ಲಿ ಬಿದ್ದಿದ್ದ ಆ ಯುವಕನಿಗೆ ನೇರವಾಗಿ ಆಕೆಯನ್ನು ನೋಡಿ ಶಾಕ್‌ ಆಗಿದೆ ಇದರಿಂದ ಕೋಪಗೊಂಡ ಆತನ ಆಕೆಯನ್ನು ಚೆನ್ನಾಗಿ ಥಳಿಸಿದ್ದಾನೆ.

ಘಟನೆ ವಿವರ

20 ವರ್ಷದ ದೀಪೇಂದ್ರ ಸಿಂಗ್‌ ಎಂಬ ಯುವಕನಿಗೆ ಇನ್‌ಸ್ಟಾಗ್ರಾಂನಲ್ಲಿ ಮಹಿಳೆಯೊಬ್ಬಳು ಪರಿಚಯ ಆಗಿದ್ದಳು. ಆಕೆ ಪ್ರೊಫೈಲ್‌ ಪಿಕ್ಚರ್‌ಗೆ ಮನಸೋತಿದ್ದ. ಹಲವು ದಿನಗಳಿಂದ ಆಕೆಯ ಜೊತೆ ಚಾಟಿಂಗ್‌ ಮಾಡುತ್ತಿದ್ದ ಆತ ಪ್ರೇಮ ನಿವೇದನೆಯನ್ನೂ ಮಾಡಿದ್ದ. ಮುಂದೆ ಮದುವೆ ಆಗಬೇಕೆಂದೂ ಇಬ್ಬರೂ ನಿರ್ಧರಿಸಿದ್ದರು. ಇಷ್ಟೆಲ್ಲಾ ಬರೀ ಚಾಟಿಂಗ್‌ನಲ್ಲೇ ನಡೆದಿತ್ತು. ಹೀಗೆ ನಡೆಯುತ್ತಿದ್ದಾಗ ಮುಖಾಮುಖಿ ಭೇಟಿಯಾಗುವಂತೆ ದೀಪೇಂದ್ರ ಸಿಂಗ್‌ ಆಕೆಯನ್ನು ಕೇಳಿದ್ದಾಳೆ. ಅದಕ್ಕೆ ಒಪ್ಪಿದ ಆಕೆ ದೀಪೇಂದ್ರ ಸಿಂಗ್‌ನನ್ನು ಭೇಟಿ ಆಗಲು ಬಂದಿದ್ದಳು. ಆದರೆ ಇವರಿಬ್ಬರ ಈ ಇನ್‌ಸ್ಟಾಗ್ರಾಂ ಪ್ರೇಮ ಕತೆಯಲ್ಲಿ ಒಂದು ಟ್ವಿಸ್ಟ್‌ ಇತ್ತು. ಬಹಳ ಖುಷಿಯಿಂದ ಪ್ರೇಯಸಿಯನ್ನು ಭೇಟಿಯಾಗಲು ಬಂದಿದ್ದ ದೀಪೇಂದ್ರ ಸಿಂಗ್‌ಗೆ ಶಾಕ್‌ ಕಾದಿತ್ತು. ಪ್ರೊಫೈಲ್‌ ಪೋಟೋಗೂ ಅಲ್ಲಿ ಬಂದಿದ್ದಾಕೆಗೂ ಅಜಗಜಾಂತರ ವ್ಯತ್ಯಾಸ ಇತ್ತು. ಅಲ್ಲದೇ ಆಕೆ 45ವರ್ಷದ ಮಹಿಳೆ ಆಗಿದ್ದಳು.

ಮಹಿಳೆಗೆ ಥಳಿಸಿ, ಎಸ್ಕೇಪ್

ಎದುರಿಗೆ ನಿಂತಿದ್ದ ಮಹಿಳೆಯನ್ನು ಕಂಡು ಕೋಪಗೊಂಡಿದ್ದ ದೀಪೇಂದ್ರ ಸಿಂಗ್‌ ಆಕೆಯನ್ನು ಮುಖಾಮೂತಿ ನೋಡದೇ ಚಚ್ಚಿದ್ದಾನೆ. ನೆಲಕ್ಕೆ ಹಾಕಿ ಆಕೆಯ ತಲೆಗೆ ಒದ್ದು ಮನಸೋ ಇಚ್ಛೆ ಹಲ್ಲೆ ನಡೆಸಿದ್ದಾನೆ. ಬಳಿಕ ಆಕೆಯ ಮೊಬೈಲ್‌ ಅನ್ನೂ ಕಸಿದು ಅಲ್ಲಿಂದ ಎಸ್ಕೇಪ್‌ ಆಗಿದ್ದಾನೆ. ಅಲ್ಲಿಂದ ಹೇಗೋ ಪೊಲೀಸ್‌ ಠಾಣೆಗೆ ಬಂದ ಮಹಿಳೆ ದೀಪೇಂದ್ರ ಸಿಂಗ್‌ ವಿರುದ್ಧ ದೂರು ದಾಖಲಿಸಿದ್ದಾಳೆ. ದೂರಿನಾಧಾರದಲ್ಲಿ ತನಿಖೆ ಆರಂಭಿಸಿದ್ದ ಪೊಲೀಸರು ದೀಪೇಂದ್ರ ಸಿಂಗ್‌ನನ್ನು ಅರೆಸ್ಟ್‌ ಮಾಡಿದ್ದಾರೆ.

ಇದನ್ನೂ ಓದಿ: Columbia University: ಕೊಲಂಬಿಯಾ ವಿವಿ ಪ್ರವೇಶಿಸಿದ ನ್ಯೂಯಾರ್ಕ್‌ ಪೊಲೀಸರು; ಪ್ಯಾಲೆಸ್ತೀನ್‌ ಪರ ಪ್ರತಿಭಟನಾಕಾರರ ಬಂಧನ

ಕೆಲವು ತಿಂಗಳುಗಳ ಹಿಂದೆ ಬೆಂಗಳೂರಿನಲ್ಲೂ ಇಂತಹದ್ದೇ ಪ್ರಕರಣವಂದು ಬೆಳಕಿಗೆ ಬಂದಿತ್ತು. ಲೊಕ್ಯಾಂಟೋ ಆ್ಯಪ್ (Locanto App) ಬಳಸುವವರನ್ನೇ ಟಾರ್ಗೆಟ್‌ ಮಾಡಿ ಸುಲಿಗೆ ಮಾಡುತ್ತಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ನದೀಂ ಪಾಷ ಹಾಗೂ ನಾಗೇಶ್ ಎಂಬ ಖದೀಮರು ಹುಡುಗಿ ಹೆಸರಲ್ಲಿ ಲೊಕ್ಯಾಂಟೋ ಆ್ಯಪ್‌ನಲ್ಲಿ ಚೆಂದದ ಫೋಟೊ ಹಾಕಿ ಫೇಕ್‌ ಪ್ರೊಫೈಲ್ ಕ್ರಿಯೇಟ್‌ ಮಾಡುತ್ತಿದ್ದರು. ಬಳಿಕ ಆ ಅಕೌಂಟ್‌ನಿಂದ‌ ತಾವೇ ಮೊದಲು ಮೆಸೇಜ್ ಮಾಡುತ್ತಿದ್ದರು. ಸಲುಗೆಯಿಂದ ಮಾತಾಡುತ್ತಾ ನಂಬಿಕೆಯನ್ನು ಗಿಟ್ಟಿಸಿಕೊಂಡು ಮರುಳು ಮಾಡುತ್ತಿದ್ದರು.

Continue Reading

ವೈರಲ್ ನ್ಯೂಸ್

Viral Video: ಕತ್ತಿಯಿಂದ ಐವರ ಮೇಲೆ ಡೆಡ್ಲಿ ಅಟ್ಯಾಕ್‌; ದಾಳಿಕೋರನ ಅರೆಸ್ಟ್‌ ವಿಡಿಯೋ ಫುಲ್‌ ವೈರಲ್‌

Viral Video: ತಲ್ರೋ ಗಾರ್ಡನ್‌ ಬಳಿ ವಾಹನವೊಂದು ಏಕಾಏಕಿ ಕಟ್ಟಡಕ್ಕೆ ಗುದ್ದಿತ್ತು. ಅದರಲ್ಲಿದ್ದ ದುಷ್ಕರ್ಮಿ ಕೆಳಗಿಳಿದು ಕೈಯಲ್ಲಿ ಕತ್ತಿ ಹಿಡಿದುಕೊಂದು ಓಡಾಡುತ್ತಿದ್ದ. ಬಳಿಕ ಇದ್ದಕ್ಕಿದ್ದಂತೆ ಸಿಕ್ಕ ಸಿಕ್ಕವರ ಮೇಲೆ ಕತ್ತಿಯಿಂದ ದಾಳಿ ನಡೆಸಲು ಆರಂಭಿಸಿದ್ದ. ಎದುರಿಗೆ ಸಿಕ್ಕಿದ್ದ 14 ವರ್ಷದ ಬಾಲಕ ಸೇರಿದಂತೆ ಒಟ್ಟು ಐವರ ಮೇಲೆ ಕತ್ತಿಯಿಂದ ಚುಚ್ಚಿದ್ದ. ಗಂಭೀರವಾಗಿ ಗಾಯಗೊಂಡಿದ್ದ ಬಾಲಕ ಸ್ಥಳದಲ್ಲೇ ಅಸುನೀಗಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದರು

VISTARANEWS.COM


on

Viral video
Koo

ಲಂಡನ್‌: ಹಾಡಹಗಲೇ ದುಷ್ಕರ್ಮಿಯೋರ್ವ ಕತ್ತಿಯಿಂದ ದಾಳಿ(Stabbed) ನಡೆಸಿದ್ದು, ಘಟನೆಯಲ್ಲಿ 14 ವರ್ಷದ ಬಾಲಕ ದಾರುಣವಾಗಿ ಮೃತಪಟ್ಟಿದ್ದಾನೆ. ಘಟನೆಯಲ್ಲಿ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಲಂಡನ್‌(London)ನ ಹೈನಾಲ್ಟ್‌ನಲ್ಲಿ ಈ ಘಟನೆ ನಡೆದಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌(Viral Video) ಆಗಿದೆ. ತಕ್ಷಣ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಆತನನ್ನು ಹೆಡೆಮುರಿ ಕಟ್ಟಿದ್ದಾರೆ. 36 ವರ್ಷದ ಆರೋಪಿ ಏಕಾಏಕಿ ಚಾಕು ದಾಳಿ ನಡೆಸಿ ಎಸ್ಕೇಪ್‌ ಆಗೋಕೆ ಯತ್ನಿಸುತ್ತಿರುವಾಗಲೇ ಆತನನ್ನು ಪೊಲೀಸರು ಅರೆಸ್ಟ್‌ ಮಾಡಿದ್ದಾರೆ.

22 ಸೆಕೆಂಡ್ಸ್‌ ವಿಡಿಯೋದಲ್ಲಿ ಕೃತ್ಯದ ಬಳಿಕ ಓಡಿ ಹೋಗಲು ಯತ್ನಿಸುತ್ತಿದ್ದ ಹಳದಿ ಬಣ್ಣದ ಜ್ಯಾಕೆಟ್‌ ತೊಟ್ಟಿದ್ದ ದುಷ್ಕರ್ಮಿ ಬಳಿ ಮಹಿಳಾ ಪೊಲೀಸ್‌ ಸಿಬ್ಬಂದಿ ಪಿಸ್ತೂಲ್‌ ಹಿಡಿದು ಬರುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ಕೆಲವು ನಿಮಿಷಗಳ ಬಳಿ ಆರು ಜನ ಪೊಲೀಸರು ಆತನನ್ನು ಹಿಡಿಯುವಲ್ಲಿ ಯಶಸ್ವಿ ಆಗಿದ್ದಾರೆ. ಕೃತ್ಯಕ್ಕೂ ಮುನ್ನ ಆತನ ವಾಹನ ಕಟ್ಟಡವೊಂದಕ್ಕೆ ಡಿಕ್ಕಿ ಹೊಡೆದು, ಆತನಿಗೆ ಸ್ವಲ್ಪ ಮಟ್ಟ ಗಾಯಗಳಾಗಿವೆ. ಹೀಗಾಗಿ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಘಟನೆ ವಿವರ:

ತಲ್ರೋ ಗಾರ್ಡನ್‌ ಬಳಿ ವಾಹನವೊಂದು ಏಕಾಏಕಿ ಕಟ್ಟಡಕ್ಕೆ ಗುದ್ದಿತ್ತು. ಅದರಲ್ಲಿದ್ದ ದುಷ್ಕರ್ಮಿ ಕೆಳಗಿಳಿದು ಕೈಯಲ್ಲಿ ಕತ್ತಿ ಹಿಡಿದುಕೊಂದು ಓಡಾಡುತ್ತಿದ್ದ. ಬಳಿಕ ಇದ್ದಕ್ಕಿದ್ದಂತೆ ಸಿಕ್ಕ ಸಿಕ್ಕವರ ಮೇಲೆ ಕತ್ತಿಯಿಂದ ದಾಳಿ ನಡೆಸಲು ಆರಂಭಿಸಿದ್ದ. ಎದುರಿಗೆ ಸಿಕ್ಕಿದ್ದ 14 ವರ್ಷದ ಬಾಲಕ ಸೇರಿದಂತೆ ಒಟ್ಟು ಐವರ ಮೇಲೆ ಕತ್ತಿಯಿಂದ ಚುಚ್ಚಿದ್ದ. ಗಂಭೀರವಾಗಿ ಗಾಯಗೊಂಡಿದ್ದ ಬಾಲಕ ಸ್ಥಳದಲ್ಲೇ ಅಸುನೀಗಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದರು. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಸ್ಥಿರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ದೃಶ್ಯ ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಅದನ್ನು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಇನ್ನು ಆರೋಪಿ ಯಾವುದಾದರೂ ಉಗ್ರ ಸಂಘಟನೆ ಜೊತೆ ನಂಟು ಹೊಂದಿದ್ದಾನೆಯೇ ಎಂಬ ಬಗ್ಗೆಯೂ ಪೊಲೀಸರು ತನಿಖೆ ನಡೆಸಿದ್ದು, ಆ ಅನುಮಾನ ಸುಳ್ಳಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: Godrej Group: ಶತಮಾನದ ಇತಿಹಾಸ ಹೊಂದಿರುವ ಗೋದ್ರೇಜ್‌ ಗ್ರೂಪ್‌ ಇಬ್ಬಾಗ; ಎರಡು ಕುಟುಂಬಗಳಲ್ಲಿ ಆಡಳಿತ ವಿಭಜನೆ

ಕಿಂಗ್‌ ಚಾರ್ಲ್ಸ್‌, ರಿಷಿ ಸುನಕ್‌ ಖಂಡನೆ

ಇನ್ನು ಘಟನೆಗೆ ಬ್ರಿಟನ್‌ ರಾಜ ಚಾರ್ಲ್ಸ್‌, ಪ್ರಧಾನಿ ರಿಷಿ ಸುನಕ್‌ ಖಂಡನೆ ವ್ಯಕ್ತಪಡಿಸಿದ್ದಾರೆ. ದುರ್ಘಟನೆಯಲ್ಲಿ ಮೃತಪಟ್ಟ ಬಾಲಕ ಕುಟುಂಬಕ್ಕೆ ಸಾಂತ್ವನ ಹೇಳಿರುವ ಚಾರ್ಲ್ಸ್‌, ಮೃತ ಬಾಲಕನ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸುತ್ತೇನೆ. ಈ ಸಂದರ್ಭದಲ್ಲಿ ದಿಟ್ಟತನ ತೋರಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುವ ಪೊಲೀಸರನ್ನು ಶ್ಲಾಘಿಸುತ್ತೇನೆ ಎಂದು ಹೇಳಿದ್ದಾರೆ. ಇನ್ನು ಇದೊಂದು ಆಘಾತಕಾರಿ ಘಟನೆ ಎಂದು ಕರೆದಿರುವ ರಿಷಿ ಸುನಕ್‌, ಇಂಥಹ ಘಟನೆಗಳು ದೇಶದಲ್ಲಿ ನಡೆಯಬಾರದು. ಮೃತ ಹಾಗೂ ಗಾಯಾಳುಗಳ ಕುಟುಂಬಕ್ಕೆ ದೇವರು ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಪೊಲೀಸರನ್ನೂ ನಾನು ಪ್ರಶಂಸಿಸುತ್ತೇನೆ ಎಂದರು.

Continue Reading
Advertisement
Hassan Pen Drive case Siddaramaiah writes to PM Modi seeking cancellation of Prajwal Revanna diplomatic passport
ಹಾಸನ3 mins ago

Hassan Pen Drive Case: ಪ್ರಜ್ವಲ್‌ ರೇವಣ್ಣರ ಡಿಪ್ಲೊಮ್ಯಾಟಿಕ್‌ ಪಾಸ್‌ಪೋರ್ಟ್‌ ರದ್ದು ಕೋರಿ ಪ್ರಧಾನಿ ಮೋದಿಗೆ ಸಿದ್ದರಾಮಯ್ಯ ಪತ್ರ!

Prajwal Revanna related post By Rashmi Goutham
ಕ್ರೈಂ3 mins ago

Prajwal Revanna: ಮಹಿಳೆ ಹಸಿದಾಗ ಬಾಯಿಗೆ ಆಹಾರ ಹಾಕಿ…ʻಅದಲ್ಲʼ! ನಟಿಯ ಪೋಸ್ಟ್‌ ವೈರಲ್‌!

Diabetic Chutney
ಲೈಫ್‌ಸ್ಟೈಲ್7 mins ago

Diabetic Chutney: ಡಯಬಿಟಿಕ್‌ ಚಟ್ನಿ ನಿಮಗೆ ಗೊತ್ತೆ? ಇದು ಮಧುಮೇಹಿಗಳಿಗೆ ಉಪಯುಕ್ತ

Bathroom Cleaning Tips
ಲೈಫ್‌ಸ್ಟೈಲ್11 mins ago

Bathroom Cleaning Tips: ಬಾತ್‌ರೂಮ್‌ ಕನ್ನಡಿ ಕೊಳಕಾಗಿದೆಯೇ? ಚಿಂತೆ ಬಿಡಿ, ಈ ಟಿಪ್ಸ್ ಬಳಸಿ

Kalamma Devi Pooja Mahotsava in Kampli
ಧಾರ್ಮಿಕ15 mins ago

Ballari News: ಬಾಯಿಯೊಳಗೆ ತ್ರಿಶೂಲ; ಬೆನ್ನಿಗೆ ಕೊಕ್ಕೆ ಕಟ್ಟಿಕೊಂಡು ಕಾರು, ರಿಕ್ಷಾ ಎಳೆದ ಭಕ್ತರು!

Union Minister Pralhad Joshi election campaign in Sattur
ಕರ್ನಾಟಕ27 mins ago

Lok Sabha Election: 60 ವರ್ಷ ದೇಶವಾಳಿದ ನಕಲಿ ಗಾಂಧಿ ಕಂಪನಿಯಲ್ಲಿ ಪ್ರಧಾನಿ ಅಭ್ಯರ್ಥಿಗೆ ಬರ: ಜೋಶಿ ಲೇವಡಿ

IPL 2024
ಕ್ರೀಡೆ30 mins ago

IPL 2024: ನಾಯಕ ಹಾರ್ದಿಕ್​ ಪಾಂಡ್ಯ ಸೇರಿ ಮುಂಬೈ ತಂಡದ ಆಟಗಾರರಿಗೆ ಬಿತ್ತು ಭಾರೀ ದಂಡ

Salman Khan
ಸಿನಿಮಾ38 mins ago

Salman Khan: ಸಲ್ಮಾನ್‌ ಖಾನ್‌ ಮನೆ ಮೇಲೆ ಫೈರಿಂಗ್‌ ಕೇಸ್‌; ಪೊಲೀಸ್‌ ಕಸ್ಟಡಿಯಲ್ಲಿದ್ದ ಆರೋಪಿ ಆತ್ಮಹತ್ಯೆ

Hassan Pen Drive Case HDK behind Prajwal Pen Drive release DK Brothers allegations
ಹಾಸನ40 mins ago

Hassan Pen Drive Case: ಪ್ರಜ್ವಲ್‌ ಪೆನ್‌ಡ್ರೈವ್‌ ರಿಲೀಸ್‌ ಹಿಂದೆ ಎಚ್‌ಡಿಕೆ? ಡಿಕೆ ಬ್ರದರ್ಸ್‌ ಹೇಳಿದ ಸ್ಫೋಟಕ ಮಾಹಿತಿ ಏನು?

SMART Missile
ಪ್ರಮುಖ ಸುದ್ದಿ42 mins ago

SMART Missile: ನೌಕೆಗಳನ್ನು ಧ್ವಂಸ ಮಾಡುವ ಸ್ಮಾರ್ಟ್‌ ಕ್ಷಿಪಣಿ ಪರೀಕ್ಷೆ ಯಶಸ್ವಿ; ರಕ್ಷಣಾ ಕ್ಷೇತ್ರಕ್ಕೆ ಆನೆ ಬಲ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

dina bhavishya read your daily horoscope predictions for April 30 2024
ಭವಿಷ್ಯ1 day ago

Dina Bhavishya: ಈ ರಾಶಿಗಳ ಉದ್ಯೋಗಿಗಳಿಗೆ ಇಂದು ಒತ್ತಡ ಹೆಚ್ಚಲಿದೆ!

PM Narendra modi in Bagalakote and Attack on Congress
Lok Sabha Election 20242 days ago

PM Narendra Modi: ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್‌ ಷಡ್ಯಂತ್ರ: ಮೋದಿ ವಾಗ್ದಾಳಿ

PM Narendra modi in Bagalakote for Election Campaign and here is Live telecast
Lok Sabha Election 20242 days ago

PM Narendra Modi Live: ಇಂದು ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಲೈವ್‌ಗಾಗಿ ಇಲ್ಲಿ ವೀಕ್ಷಿಸಿ

dina bhavishya read your daily horoscope predictions for April 29 2024
ಭವಿಷ್ಯ2 days ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

Narendra Modi
Lok Sabha Election 20243 days ago

PM Narendra Modi: ಇವಿಎಂ ದೂರುವ ಕಾಂಗ್ರೆಸ್‌ಗೆ ಸೋಲಿನ ಭೀತಿ; ಕರ್ನಾಟಕದಲ್ಲಿ 1 ಸೀಟನ್ನೂ ಗೆಲ್ಲಲ್ಲವೆಂದ ಮೋದಿ!

PM Narendra Modi in Sirsi
Lok Sabha Election 20243 days ago

PM Narendra Modi: ಕಾಂಗ್ರೆಸ್ ರಾಮ ವಿರೋಧಿ; ಮನೆಗೆ ಹೋಗಿ ಕರೆದರೂ ಮಂದಿರ ಉದ್ಘಾಟನೆಗೆ ಬರಲಿಲ್ಲ: ಮೋದಿ ಟೀಕೆ

If Congress comes to power all your assets will belong to Government says PM Narendra Modi
Lok Sabha Election 20243 days ago

Narendra Modi: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನೀವು ಕಷ್ಟಪಟ್ಟು ಸಂಪಾದಿಸಿದ ಆಸ್ತಿಯೆಲ್ಲ ಅನ್ಯರ ಪಾಲು: ಮೋದಿ ಎಚ್ಚರಿಕೆ

Congress ties with Aurangzeb supporters and Girls killed under his rule says Narendra Modi
Lok Sabha Election 20243 days ago

Narendra Modi: ಔರಂಗಜೇಬ್ ಬೆಂಬಲಿಗರ ಜತೆ ಕಾಂಗ್ರೆಸ್ ದೋಸ್ತಿ; ಇವರ ಆಡಳಿತದಲ್ಲಿ ಹೆಣ್ಣು ಮಕ್ಕಳ ಹತ್ಯೆ: ಮೋದಿ ವಾಗ್ದಾಳಿ

Modi in Karnataka stay in Belagavi tomorrow and Huge gatherings at five places
Latest3 days ago

Narendra Modi Live : ಪ್ರಧಾನಿ ಮೋದಿಯ ಬೆಳಗಾವಿ ಪ್ರಚಾರ ಸಭೆಯ ನೇರ ಪ್ರಸಾರವನ್ನು ಇಲ್ಲಿ ವೀಕ್ಷಿಸಿ…

Dina Bhavishya
ಭವಿಷ್ಯ3 days ago

Dina Bhavishya : ಈ ರಾಶಿಯವರಿಗೆ ದಿನದ ಮಟ್ಟಿಗೆ ಖರ್ಚು ಹೆಚ್ಚು

ಟ್ರೆಂಡಿಂಗ್‌