Kiren Rijiju: ಗುಪ್ತಚರ ಇಲಾಖೆಗಳ ಸೂಕ್ಷ್ಮ ಮಾಹಿತಿ ಸುಪ್ರೀಂ ಕೋರ್ಟ್‌ನಿಂದ ಬಹಿರಂಗ, ಸಚಿವ ರಿಜಿಜು ಅಸಮಾಧಾನ - Vistara News

ದೇಶ

Kiren Rijiju: ಗುಪ್ತಚರ ಇಲಾಖೆಗಳ ಸೂಕ್ಷ್ಮ ಮಾಹಿತಿ ಸುಪ್ರೀಂ ಕೋರ್ಟ್‌ನಿಂದ ಬಹಿರಂಗ, ಸಚಿವ ರಿಜಿಜು ಅಸಮಾಧಾನ

Kiren Rijiju: ಕೇಂದ್ರ ಸರ್ಕಾರ ಹಾಗೂ ಸುಪ್ರೀಂ ಕೋರ್ಟ್‌ ನಡುವಿನ ಸಂಘರ್ಷ ಮತ್ತೆ ಭುಗಿಲೆದ್ದಿದೆ. “ಗುಪ್ತಚರ ಸಂಸ್ಥೆಗಳನ್ನು ಸರ್ವೋಚ್ಚ ನ್ಯಾಯಾಲಯದ ಕೊಲಿಜಿಯಂ ಬಹಿರಂಗಪಡಿಸಿರುವುದು ಆತಂಕಕಾರಿ” ಎಂದು ಕೇಂದ್ರ ಸಚಿವ ಕಿರಣ್‌ ರಿಜಿಜು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

VISTARANEWS.COM


on

Law minister Kiren Rijiju's car meets with minor accident in Jammu Kashmir
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ

ನವದೆಹಲಿ: ಸುಪ್ರೀಂ ಕೋರ್ಟ್‌ (Supreme Court) ಹಾಗೂ ಹೈಕೋರ್ಟ್‌ಗಳಿಗೆ ನ್ಯಾಯಮೂರ್ತಿಗಳನ್ನು ನೇಮಿಸಲು ಶಿಫಾರಸು ಮಾಡುವ ಕೊಲಿಜಿಯಂ (Collegium) ವ್ಯವಸ್ಥೆ ವಿಚಾರದಲ್ಲಿ ಕೇಂದ್ರ ಸರ್ಕಾರ ಹಾಗೂ ಸುಪ್ರೀಂ ಕೋರ್ಟ್‌ ಮಧ್ಯೆ ಸಂಘರ್ಷ ಮುಂದುವರಿದಿದೆ. “ಗುಪ್ತಚರ ಸಂಸ್ಥೆಗಳಾದ ರಾ ಹಾಗೂ ಐಬಿ (Intelligence Bureau)ಗಳ ಸೂಕ್ಷ್ಮ ಮಾಹಿತಿಯನ್ನು ಸರ್ವೋಚ್ಚ ನ್ಯಾಯಾಲಯ ಬಹಿರಂಗಗೊಳಿಸಿದೆ” ಎಂದು ಕೇಂದ್ರ ಕಾನೂನು ಸಚಿವ ಕಿರಣ್‌ ರಿಜಿಜು (Kiren Rijiju) ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗೆ ಸರ್ವೋಚ್ಚ ನ್ಯಾಯಾಲಯದ ಕೊಲಿಜಿಯಂ ವ್ಯವಸ್ಥೆಯು ರಾ ಹಾಗೂ ಐಬಿ ವರದಿಗಳ ಕೆಲ ಭಾಗಗಳನ್ನು ಸಾರ್ವಜನಿಕ ವೇದಿಕೆಯಲ್ಲಿ ಬಹಿರಂಗಗೊಳಿಸಿತ್ತು. ಹಾಗಾಗಿ, ಕಿರಣ್‌ ರಿಜಿಜು ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ಗುಪ್ತಚರ ಸಂಸ್ಥೆಗಳ ಅಧಿಕಾರಿಗಳು ಗೌಪ್ಯವಾಗಿ ಕಾರ್ಯನಿರ್ವಹಿಸುತ್ತಾರೆ. ಆದರೆ, ಅವರ ವರದಿಯ ಗೌಪ್ಯ ಮಾಹಿತಿಯನ್ನು ಬಹಿರಂಗಗೊಳಿಸುವುದು ಆತಂಕಕಾರಿಯಾಗಿದೆ. ಇದರ ಕುರಿತು ಸಮಯ ಬಂದಾಗ ಹೆಚ್ಚಿನ ಪ್ರತಿಕ್ರಿಯೆ ನೀಡುತ್ತೇನೆ” ಎಂದು ತಿಳಿಸಿದರು.

ಹೈಕೋರ್ಟ್‌ ಹಾಗೂ ಸುಪ್ರೀಂ ಕೋರ್ಟ್‌ಗಳಿಗೆ ನ್ಯಾಯಮೂರ್ತಿಗಳ ನೇಮಕ ವಿಚಾರದಲ್ಲಿ ಕೇಂದ್ರ ಸರ್ಕಾರ ಹಾಗೂ ನ್ಯಾಯಾಂಗದ ಮಧ್ಯೆ ಸಂಘರ್ಷ ಏರ್ಪಟ್ಟಿದೆ. ಕೊಲಿಜಿಯಂ ಶಿಪಾರಸು ಮಾಡು ಹೆಸರುಗಳಿಗೆ ಕೇಂದ್ರ ಸರ್ಕಾರ ಅನುಮೋದನೆ ನೀಡುವಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿದೆ ಎಂದು ಸುಪ್ರೀಂ ಕೋರ್ಟ್‌ ಹಲವು ಬಾರಿ ಅಸಮಾಧಾನ ವ್ಯಕ್ತಪಡಿಸಿದೆ. ನಾವು ವಿಳಂಬ ಧೋರಣೆ ಅನುಸರಿಸಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ.

ಇದನ್ನೂ ಓದಿ: Narendra Modi: ಕೇಂದ್ರ, ನ್ಯಾಯಾಂಗ ಸಂಘರ್ಷದ ಬೆನ್ನಲ್ಲೇ ಸಿಜೆಐಗೆ ಮೋದಿ ಶ್ಲಾಘನೆ, ಏನಿದಕ್ಕೆ ಕಾರಣ?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೈಂ

Physical Abuse: ತೀರ್ಥದಲ್ಲಿ ನಿದ್ದೆ ಮಾತ್ರೆ ಬೆರೆಸಿ ಅರ್ಚಕನಿಂದ ನಿರೂಪಕಿ ಮೇಲೆ ಅತ್ಯಾಚಾರ

Physical Abuse: ದೇವಸ್ಥಾನದ ಅರ್ಚಕ ತೀರ್ಥದಲ್ಲಿ ನಿದ್ದೆ ಮಾತ್ರೆ ಬೆರೆಸಿ ಅತ್ಯಾಚಾರ ನಡೆಸಿದ್ದಾಗಿ ಜನಪ್ರಿಯ ಟಿವಿ ನಿರೂಪಕಿಯೊಬ್ಬರು ಆರೋಪಿಸಿದ್ದಾರೆ. ಚೆನ್ನೈಯ ಪ್ರಮುಖ ದೇವಸ್ಥಾನಗಳಲ್ಲಿ ಒಂದಾಗಿರುವ ಕಾಳಿಕಾಂಪಲ್‌ ದೇಗುಲದ ಅರ್ಚಕ ಕಾರ್ತಿಕ್‌ ಮುನಿಸ್ವಾಮಿ ವಿರುದ್ಧ ಇದೀಗ ನಿರೂಪಕಿ ವಿರುಗಂಬಾಕ್ಕಂ ಮಹಿಳಾ ಠಾಣೆಗೆ ದೂರು ದಾಖಲಿಸಿದ್ದಾರೆ.

VISTARANEWS.COM


on

Physical Abuse
Koo

ಚೆನ್ನೈ: ತಮಿಳುನಾಡಿನಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದ್ದು, ದೇವಸ್ಥಾನದ ಅರ್ಚಕ ತೀರ್ಥದಲ್ಲಿ ನಿದ್ದೆ ಮಾತ್ರೆ ಬೆರೆಸಿ ಅತ್ಯಾಚಾರ (Physical Abuse) ನಡೆಸಿದ್ದಾಗಿ ಜನಪ್ರಿಯ ಟಿವಿ ನಿರೂಪಕಿಯೊಬ್ಬರು ಆರೋಪಿಸಿದ್ದಾರೆ. ಚೆನ್ನೈಯ ಪ್ರಮುಖ ದೇವಸ್ಥಾನಗಳಲ್ಲಿ ಒಂದಾಗಿರುವ ಕಾಳಿಕಾಂಪಲ್‌ ದೇಗುಲದ ಅರ್ಚಕ ಕಾರ್ತಿಕ್‌ ಮುನಿಸ್ವಾಮಿ ವಿರುದ್ಧ ಇದೀಗ ನಿರೂಪಕಿ ವಿರುಗಂಬಾಕ್ಕಂ ಮಹಿಳಾ ಠಾಣೆಗೆ ದೂರು ದಾಖಲಿಸಿದ್ದಾರೆ.

ಸಾಲಿಗ್ರಾಮ ಮೂಲದ, ಖಾಸಗಿ ವಾಹಿನಿ ನಿರೂಪಕಿ ಕಾರ್ತಿಕ್‌ ಮುನಿಸ್ವಾಮಿ ವಿರುದ್ಧ ದೂರು ದಾಖಲಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಜತೆಗೆ ಪ್ರಕರಣದ ವಿವರ ನೀಡಿದ್ದಾರೆ.

ಪ್ರಕರಣದ ಹಿನ್ನೆಲೆ

30 ವರ್ಷದ ನಿರೂಪಕಿ ಆಧ್ಯಾತ್ಮಿಕತೆ ಕಡೆಗೆ ಒಲವು ಹೊಂದಿರುವ ವ್ಯಕ್ತಿಯಾಗಿದ್ದು, ಆಗಾಗ ದೇವಸ್ಥಾನಗಳಿಗೆ ಭೇಟಿ ನೀಡುತ್ತಿರುತ್ತಾರೆ. ಅದರಂತೆ ಚೆನ್ನೈಯ ಪರ್ಯಾಸ್‌ನಲ್ಲಿರುವ ಈ ದೇವಿ ದೇವಸ್ಥಾನಕ್ಕೆ ತೆರಳುತ್ತಿದ್ದರು. ಈ ವೇಳೆ ಅರ್ಚಕ ಕಾರ್ತಿಕ್‌ ಮುನಿಸ್ವಾಮಿ ಜತೆಗೆ ಪರಿಚಯವಾಗಿತ್ತು. ಕ್ರಮೇಣ ಇಬ್ಬರೂ ಸ್ನೇಹಿತರಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಇಬ್ಬರ ನಡುವೆ ಗೆಳೆತನ ಗಟ್ಟಿಯಾಗುತ್ತಿದ್ದಂತೆ ಕಾರ್ತಿಕ್‌ ಮುನಿಸ್ವಾಮಿ ದೇವಸ್ಥಾನದಲ್ಲಿ ನಡೆಯುವ ಕಾರ್ಯಕ್ರಮ, ವಿಶೇಷ ಪೂಜೆಗಳ ಬಗ್ಗೆ ನಿರೂಪಕಿಗೆ ಮಾಹಿತಿ ನೀಡುತ್ತಿದ್ದ. ವಾಟ್ಸಾಪ್‌ ಮೂಲಕ ಸಂದೇಶ ಕಳುಹಿಸುತ್ತಿದ್ದ. ಸಂತ್ರಸ್ತೆ ದೇವಸ್ಥಾನಕ್ಕೆ ಭೇಟಿ ನೀಡಿದಾಗಲೆಲ್ಲ ವಿಶೇಷ ದರ್ಶನದ ವ್ಯವಸ್ಥೆ ಮಾಡಿಸುತ್ತಿದ್ದ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಹೀಗೆ ಇವರಿಬ್ಬರ ನಡುವೆ ಆತ್ಮೀಯತೆ ಬೆಳದಿತ್ತು. ಒಂದು ದಿನ ಸಂತ್ರಸ್ತೆ ದೇವಸ್ಥಾನಕ್ಕೆ ಭೇಟಿ ನೀಡಿದಾಗ ಕಾರ್ತಿಕ್‌ ಮುನಿಸ್ವಾಮಿ ಆಕೆಯನ್ನು ತನ್‌ ಬೆನ್ಝ್‌ ಕಾರಿನಲ್ಲಿ ಕರೆದುಕೊಂಡು ಮನೆಗೆ ಡ್ರಾಪ್‌ ಮಾಡಿದ್ದ. ಈ ವೇಳೆ ಆತ ತೀರ್ಥದಲ್ಲಿ ನಿದ್ದೆ ಬರುವ ಮಾತ್ರ ಬೆರೆಸಿ ನೀಡಿದ್ದ. ಬಳಿಕ ಅತ್ಯಾಚಾರ ಎಸಗಿದ್ದ. ನಂತರ ನಿರೂಪಕಿಗೆ ತನ್ನ ಮೇಲೆ ದೌರ್ಜನ್ಯ ನಡೆದಿರುವ ಬಗ್ಗೆ ತಿಳಿದು ಬಂದಿತ್ತು. ಅಲ್ಲದೆ ಆಕೆ ಗರ್ಭಿಣಿಯೂ ಆಗಿದ್ದರು. ಇದನ್ನು ತಿಳಿದ ಕಾರ್ತಿಕ್‌ ಆಕೆಯನ್ನು ಮದುವೆಯಾಗುವುದಾಗಿಯೂ ಭರವಸೆ ನೀಡಿದ್ದ. ನಂತರ ವಡಾಪಳನಿಯಲ್ಲಿರುವ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಗರ್ಭಪಾತ ಮಾಡಿಸಿದ್ದ. ಬಳಿಕ ಅನೇಕ ಬಾರಿ ಲೈಂಗಿಕ ಕ್ರಿಯೆ ನಡೆಸುವಂತೆ ಒತ್ತಾಯಿಸಿದ್ದ ಎಂದು ಮಹಿಳೆ ತನ್ನ ದೂರಿನಲ್ಲಿ ತಿಳಿಸಿದ್ದಾರೆ.

ಆರೋಪಿಯ ಬಂಧನ

ಸಂತ್ರಸ್ತೆಯ ದೂರಿನ ಆಧಾರದ ಮೇಲೆ ಆರೋಪಿ ಕಾರ್ತಿಕ್‌ ಮುನಿಸ್ವಾಮಿಯನ್ನು ವಿರುಗಂಬಾಕ್ಕಂ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಪ್ರಕರಣದ ಬಗ್ಗೆ ಸಮಗ್ರ ತನಿಖೆ ಕೈಗೆತ್ತಿಕೊಂಡಿದ್ದಾರೆ. ವಿಚಾರಣೆ ವೇಳೆ ಪೊಲೀಸರಿಗೆ ಕಾರ್ತಿಕ್‌ ಮುನಿಸ್ವಾಮಿ ಮೊಬೈಲ್‌ನಲ್ಲಿ ಸಂತ್ರಸ್ತೆ ಜತೆಗಿದ್ದ ಖಾಸಗಿ ಫೋಟೊ ಮತ್ತು ವಿಡಿಯೊ ಕೂಡ ಲಭ್ಯವಾಗಿದೆ. ಹೀಗಾಗಿ ಆತನ ವಿರುದ್ಧ 6 ಪ್ರಕರಣ ದಾಖಲಾಗಿದೆ. ಎಂಜಿನಿಯರಿಂಗ್‌ ಪದವಿ ಮುಗಿಸಿರುವ ಸಂತ್ರಸ್ತೆ ಹಲವು ವರ್ಷಗಳಿಂದ ಚೆನ್ನೈಯಲ್ಲಿರುವ ಖಾಸಗಿ ವಾಹಿನಿಯೊಂದರಲ್ಲಿ ನಿರೂಪಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸದ್ಯ ಎಲ್ಲ ಆಯಾಮದಿಂದಲೂ ಪೊಲೀಸರು ತನಿಖೆ ನಡೆಸಲು ಮುಂದಾಗಿದ್ದಾರೆ. ಒಟ್ಟಿನಲ್ಲಿ ಈ ಪ್ರಕರಣ ದೇಶಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಇದನ್ನೂ ಓದಿ: Physical Abuse: ದಲಿತ ಯುವತಿಯ ಮೇಲೆ ಅತ್ಯಾಚಾರ ಎಸಗಿ ಪರಾರಿಯಾದ ಸದ್ದಾಂ ಹುಸೇನ್‌ ಕಾಲಿಗೆ ಗುಂಡೇಟು

Continue Reading

Lok Sabha Election 2024

Narendra Modi: ಅಪ್ರಾಮಾಣಿಕನಾಗಿದ್ದರೆ ನನ್ನನ್ನು ಗಲ್ಲಿಗೇರಿಸಿ: ವಿಪಕ್ಷಕ್ಕೆ ಪ್ರಧಾನಿ ಮೋದಿ ತಿರುಗೇಟು

Narendra Modi: ಪ್ರಧಾನ ಮಂತ್ರಿ ನರೇಂದ್ರ ಮೋದಿ ತಮ್ಮ ವಿರುದ್ಧ ಕೇಳಿ ಬಂದಿರುವ ಆರೋಪಕ್ಕೆ ತಿರುಗೇಟು ಕೊಟ್ಟಿದ್ದಾರೆ. ”ನಾನು ಅಪ್ರಮಾಣಿಕವಾಗಿ ನಡೆದುಕೊಂಡಿದ್ದರೆ ಗಲ್ಲು ಶಿಕ್ಷೆ ಎದುರಿಸಲೂ ಸಿದ್ಧʼʼ ಎಂದು ಭಾವುಕರಾಗಿ ಹೇಳಿದ್ದಾರೆ. ತಮ್ಮ ಸರ್ಕಾರವು ಕೆಲವು ಆಯ್ದ ಕೈಗಾರಿಕೋದ್ಯಮಿಗಳ ಪರವಾಗಿದೆ ಎಂಬ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರ ಆರೋಪಕ್ಕೆ ಪ್ರತಿಕ್ರಿಯಿಸಿದ ಮೋದಿ ಅವರು, ʼʼದೇಶದ ಸಂಪತ್ತಿನ ಸೃಷ್ಟಿಕರ್ತರ ಪರವಾಗಿ ನಾನು ದೃಢವಾಗಿ ನಿಲ್ಲುತ್ತೇನೆ ಮತ್ತು ಯಾರಿಗಾದರೂ ಅಪ್ರಾಮಾಣಿಕ ರೀತಿಯಲ್ಲಿ ಲಾಭ ಮಾಡಿಕೊಟ್ಟರೆ ಶಿಕ್ಷೆಯನ್ನು ಎದುರಿಸಲು ಸಿದ್ಧʼʼ ಎಂದು ತಿಳಿಸಿದ್ದಾರೆ.

VISTARANEWS.COM


on

Narendra Modi
Koo

ನವದೆಹಲಿ: ಲೋಕಸಭಾ ಚುನಾವಣೆ (Lok Sabha Election 2024)ಯ ಕಾವು ಜೋರಾಗಿದೆ. ಈಗಾಗಲೇ ದೇಶದಲ್ಲಿ 4 ಹಂತಗಳ ಮತದಾನ ಪೂರ್ಣಗೊಂಡಿದೆ. ನಾಯಕರು ಪರಸ್ಪರ ಆರೋಪ-ಪ್ರತ್ಯಾರೋಪದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಮಧ್ಯೆ ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ತಮ್ಮ ವಿರುದ್ಧ ಕೇಳಿ ಬಂದಿರುವ ಆರೋಪಕ್ಕೆ ತಿರುಗೇಟು ಕೊಟ್ಟಿದ್ದಾರೆ. ”ನಾನು ಅಪ್ರಮಾಣಿಕವಾಗಿ ನಡೆದುಕೊಂಡಿದ್ದರೆ ಗಲ್ಲು ಶಿಕ್ಷೆ ಎದುರಿಸಲೂ ಸಿದ್ಧʼʼ ಎಂದು ಭಾವುಕರಾಗಿ ಹೇಳಿದ್ದಾರೆ.

ತಮ್ಮ ಸರ್ಕಾರವು ಕೆಲವು ಆಯ್ದ ಕೈಗಾರಿಕೋದ್ಯಮಿಗಳ ಪರವಾಗಿದೆ ಎಂಬ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರ ಆರೋಪಕ್ಕೆ ಪ್ರತಿಕ್ರಿಯಿಸಿದ ಮೋದಿ ಅವರು, ʼʼದೇಶದ ಸಂಪತ್ತಿನ ಸೃಷ್ಟಿಕರ್ತರ ಪರವಾಗಿ ನಾನು ದೃಢವಾಗಿ ನಿಲ್ಲುತ್ತೇನೆ ಮತ್ತು ಯಾರಿಗಾದರೂ ಅಪ್ರಾಮಾಣಿಕ ರೀತಿಯಲ್ಲಿ ಲಾಭ ಮಾಡಿಕೊಟ್ಟರೆ ಶಿಕ್ಷೆಯನ್ನು ಎದುರಿಸಲು ಸಿದ್ಧʼʼ ಎಂದು ತಿಳಿಸಿದ್ದಾರೆ.

“ಜವಾಹರಲಾಲ್ ನೆಹರೂ ಕೂಡ ಸಂಸತ್ತಿನಲ್ಲಿ ʼಬಿರ್ಲಾ-ಟಾಟಾ ಕಿ ಸರ್ಕಾರ್‌ʼನಂತಹ ನಿಂದನೆಗಳನ್ನು ಎದುರಿಸುತ್ತಿದ್ದರು. ಈ ಕುಟುಂಬದ (ನೆಹರೂ) ಸಮಸ್ಯೆಯೆಂದರೆ ಈಗಲೂ ನಾನು ಅದೇ ನಿಂದನೆಗಳನ್ನು ಎದುರಿಸಬೇಕೆಂದು ಬಯಸುತ್ತದೆʼʼ ಎಂದು ಆರೋಪಿಸಿದ್ದಾರೆ. ʼʼದೇಶದ ಸಂಪತ್ತಿನ ಸೃಷ್ಟಿಕರ್ತರನ್ನು ಗೌರವಿಸಬೇಕು ಎಂದು ಹೇಳಲು ನನಗೆ ನಾಚಿಕೆಯಾಗುವುದಿಲ್ಲ. ಆಗಸ್ಟ್ 15ರ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದ ಅತಿಥಿಗಳ ಪಟ್ಟಿ ತಯಾರಿಸುವಾಗ ನಾನು ಕ್ರೀಡಾಪಟುಗಳು ಮತ್ತು ಸಾಧಕರ ಹೆಸರನ್ನು ಸೇರಿಸುತ್ತೇನೆ. ದೇಶವು ತನ್ನ ಸಾಧಕರನ್ನು ಪೂಜಿಸದಿದ್ದರೆ ಮತ್ತು ಗೌರವಿಸದಿದ್ದರೆ, ವಿಜ್ಞಾನಿ ಮತ್ತು ಪಿಎಚ್‌ಡಿ ಮಾಡುವ ಜನರನ್ನು ನಾವು ಹೇಗೆ ಹೊಂದಲು ಸಾಧ್ಯ? ಎಲ್ಲ ವರ್ಗದ ಸಾಧಕರನ್ನು ಗೌರವಿಸಬೇಕು ಎಂಬುದು ನನ್ನ ಅಭಿಮತ” ಎಂದು ಅವರು ಹೇಳಿದ್ದಾರೆ.

“ನಾನು ಅಪ್ರಾಮಾಣಿಕನಾಗಿದ್ದರೆ ನನ್ನನ್ನು ಗಲ್ಲಿಗೇರಿಸಿ. ನಾನು ತಪ್ಪು ರೀತಿಯಲ್ಲಿ ಯಾರಿಗಾದರೂ ಪ್ರಯೋಜನ ಉಂಟು ಮಾಡಿದ್ದರೆ ನನ್ನನ್ನು ಗಲ್ಲಿಗೇರಿಸಬೇಕು. ಆದರೆ ನನ್ನ ದೇಶದ ಸಂಪತ್ತಿನ ಸೃಷ್ಟಿಕರ್ತರನ್ನು ನಾನು ಗೌರವಿಸುತ್ತೇನೆ” ಎಂದು ಮೋದಿ ಹೇಳಿದ್ದಾರೆ. ಆ ಮೂಲಕ ಅದಾನಿ-ಅಂಬಾನಿಯಂತಹ ಶ್ರೀಮಂತ ಉದ್ಯಮಿಗಳಿಗೆ ನೆರವು ನೀಡಿದ್ದಾರೆ ಎನ್ನುವ ವಿಪಕ್ಷಗಳ ಆರೋಪಕ್ಕೆ ಸೂಕ್ಷ್ಮವಾಗಿ ತಿರುಗೇಟು ನೀಡಿದ್ದಾರೆ.

ಸಂಪತ್ತಿನ ಸೃಷ್ಟಿಕರ್ತರು ಮತ್ತು ಕಾರ್ಮಿಕರ ಬಗ್ಗೆಯೂ ಸಮಾನವಾಗಿ ಚಿಂತಿಸುತ್ತೇನೆ ಎಂದು ಮೋದಿ ಈ ಸಂದರ್ಭದಲ್ಲಿ ಘೋಷಿಸಿದ್ದಾರೆ. “ನನ್ನ ಪ್ರಕಾರ ದೇಶದ ಅಭಿವೃದ್ಧಿಗೆ ಬಂಡವಾಳಶಾಹಿಗಳ ಹಣ, ಆಡಳಿತ ಮಂಡಳಿಯವರ ಯೋಚನೆ ಮತ್ತು ಕಾರ್ಮಿಕರ ಕಠಿಣ ಪರಿಶ್ರಮ ಅಗತ್ಯ” ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: PM Narendra Modi:”ಅಬ್ಬಾ.. ಎಂಥಾ ಮೇಕಪ್!”- ಮತ್ತೆ ಗಮನ ಸೆಳೆದ ಮೋದಿ; ವಿಡಿಯೋ ವೈರಲ್‌

ಮುಸ್ಲಿಂ ವಿರೋಧಿ ಆರೋಪಕ್ಕೂ ತಿರುಗೇಟು

ಕೆಲವು ದಿನಗಳ ಹಿಂದಯಷ್ಟೇ ಮೋದಿ ಅವರು ಮುಸ್ಲಿಂ ವಿರೋಧಿ ಎಂಬ ಪ್ರತಿಪಕ್ಷಗಳ ಆರೋಪಕ್ಕೆ ಟಾಂಗ್‌ ಕೊಟ್ಟಿದ್ದರು. ʼʼಹಿಂದು ಮುಸ್ಲಿಂ ಅಂತ ತಾರತಮ್ಯ ಮಾಡಿದ ದಿನ ನಾನು ರಾಜಕೀಯ ಬದುಕಿಗೆ ಅನರ್ಹನಾಗುತ್ತೇನೆ. ನಾನು ನನ್ನ ಜೀವನದಲ್ಲಿ ಎಂದಿಗೂ ಹಿಂದು-ಮುಸ್ಲಿಂ ಎಂದು ಭೇದ ಮಾಡೋದಿಲ್ಲ ಎಂಬುದು ನನ್ನ ಬದುಕಿನ ಧ್ಯೇಯʼʼ ಎಂದು ಸ್ಪಷ್ಟವಾಗಿ ಹೇಳಿದ್ದರು. ʼʼಹಿಂದು ಮುಸ್ಲಿಂ ಅಂತ ಹೇಳಿಕೊಂಡು ರಾಜಕೀಯ ಮಾಡಿದರೆ ನಾನು ಸಾರ್ವಜನಿಕ ಜೀವಕ್ಕೆ ಅರ್ಹನಾದ ವ್ಯಕ್ತಿಯಾಗುವುದಿಲ್ಲ. ನಾನು ಎಲ್ಲರನ್ನೂ ಸಮಾನವಾಗಿ ಕಾಣುತ್ತೇನೆʼʼ ಎಂದರು. 

Continue Reading

ದೇಶ

Lok Sabha Election 2024: ಬಿಜೆಪಿ 400+ ಸೀಟು ಗೆಲ್ಲುತ್ತಾ? ಸಟ್ಟಾ ಬಜಾರ್ ಲೇಟೆಸ್ಟ್ ಲೆಕ್ಕಾಚಾರ ಹೀಗಿದೆ

Lok Sabha Election 2024:ಈಗಾಗಲೇ ಮೊದಲ ನಾಲ್ಕು ಹಂತಗಳಲ್ಲಿ ಒಟ್ಟು 379 ಕ್ಷೇತ್ರಗಳಲ್ಲಿ ಅಂದರೆ ಶೇ.70ರಷ್ಟು ಕ್ಷೇತ್ರಗಳಲ್ಲಿ ಚುನಾವಣೆ ಪೂರ್ಣಗೊಂಡಿದೆ. ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಮತದಾನದ ಪ್ರಮಾಣದಲ್ಲೂ ಸ್ವಲ್ಪ ಇಳಿಕೆ ಆಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು ತಾನು ಈ ಹಿಂದೆ ನೀಡಿದ್ದ ವರದಿಯನ್ನು ಮರು ಪರಿಷ್ಕರಣೆ ಮಾಡಿರುವ ಪಲೋಡಿ ಸಟ್ಟಾ ಬಜಾರ್‌, ಬಿಜೆಪಿ 2019ರ ಚುನಾವಣೆಗಿಂತಲೂ ಕಡಿಮೆ ಅಂದರೆ 303 ಸ್ಥಾನಗಳಿಗಿಂತಲೂ ಕಡಿಮೆ ಸ್ಥಾನಗಳನ್ನು ಗಳಿಸಲಿದೆ ಎಂದು ತನ್ನ ವರದಿಯಲ್ಲಿ ತಿಳಿಸಿದೆ.

VISTARANEWS.COM


on

Lok Sabha Election 2024
Koo

ನವದೆಹಲಿ: ಲೋಕಸಭಾ ಚುನಾವಣೆಯ(Lok Sabha Election 2024) ನಾಲ್ಕನೇ ಹಂತದ ಮತದಾನ ಪೂರ್ಣಗೊಂಡಿದ್ದು, ಈಗಿನಿಂದಲೇ ಸೋಲು ಗೆಲವಿನ ಲೆಕ್ಕಾಚಾರ ಒಂದೆಡೆಯಾದರೆ ಬಿಜೆಪಿ(BJP)ಯ 400 ಸ್ಥಾನಗಳ ಟಾರ್ಗೆಟ್‌ ಬಗೆಗಿನ ಚರ್ಚೆ ಮತ್ತೊಂದೆಡೆ. ಇದರ ನಡುವೆ ನಿಖರ ಚುನಾವಣಾ ಫಲಿತಾಂಶ(Election Result)ದ ಬಗ್ಗೆ ನಿಖರವಾದ ಸಮೀಕ್ಷೆ ವರದಿಗೆ ಖ್ಯಾತಿ ಪಡೆದಿರುವ ಪಲೋಡಿ ಸಟ್ಟಾ ಬಜಾರ್‌(Phalodi Satta Bazar) ಫಲಿತಾಂಶದ ಬಗ್ಗೆ ವರದಿಯೊಂದನ್ನು ನೀಡಿದೆ. ಈ ಬಾರಿ 400ಕ್ಕೂ ಅಧಿಕ ಸೀಟ್‌ ಪಡೆಯುವ ನಿರೀಕ್ಷೆಯಲ್ಲಿರುವ ಬಿಜೆಪಿಗೆ ಈ ವರದಿ ಶಾಕ್‌ ನೀಡಿದೆ. ಈ ವರದಿ ಬಿಜೆಪಿಯ ಎಲ್ಲಾ ಲೆಕ್ಕಾಚಾರಗಳನ್ನು ತಲೆಕೆಳಗಾಗಿಸಿದೆ.

ಈಗಾಗಲೇ ಮೊದಲ ನಾಲ್ಕು ಹಂತಗಳಲ್ಲಿ ಒಟ್ಟು 379 ಕ್ಷೇತ್ರಗಳಲ್ಲಿ ಅಂದರೆ ಶೇ.70ರಷ್ಟು ಕ್ಷೇತ್ರಗಳಲ್ಲಿ ಚುನಾವಣೆ ಪೂರ್ಣಗೊಂಡಿದೆ. ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಮತದಾನದ ಪ್ರಮಾಣದಲ್ಲೂ ಸ್ವಲ್ಪ ಇಳಿಕೆ ಆಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು ತಾನು ಈ ಹಿಂದೆ ನೀಡಿದ್ದ ವರದಿಯನ್ನು ಮರು ಪರಿಷ್ಕರಣೆ ಮಾಡಿರುವ ಪಲೋಡಿ ಸಟ್ಟಾ ಬಜಾರ್‌, ಬಿಜೆಪಿ 2019ರ ಚುನಾವಣೆಗಿಂತಲೂ ಕಡಿಮೆ ಅಂದರೆ 303 ಸ್ಥಾನಗಳಿಗಿಂತಲೂ ಕಡಿಮೆ ಸ್ಥಾನಗಳನ್ನು ಗಳಿಸಲಿದೆ ಎಂದು ತನ್ನ ವರದಿಯಲ್ಲಿ ತಿಳಿಸಿದೆ.

ನಾಲ್ಕನೇ ಹಂತದ ಮತದಾನ ನಡೆಯುವ ಮುನ್ನ ಪಲೋಡಿ ಸಟ್ಟಾ ಬಜಾರ್‌ ಫಲಿತಾಂಶದ ಸಮೀಕ್ಷೆ ವರದಿಯೊಂದನ್ನು ನೀಡಿತ್ತು. ಅದರಲ್ಲಿ ಈ ಬಾರಿ ಬಿಜೆಪಿ 307-310 ಸ್ಥಾನಗಳನ್ನು ಗಳಿಸಲಿದೆ ಎಂಬುದು ತಿಳಿದುಬಂದಿತ್ತು. ಆದರೆ ಈಗ ಹೊಸದಾಗಿ ಒಂದು ವರದಿ ನೀಡಿದ್ದು, ಈ ಬಾರಿ ಬಿಜೆಪಿ ಕೇವಲ 296-300 ಸ್ಥಾನಗಳನ್ನು ಹಾಗೂ ಎನ್‌ಡಿಎ 329 to 332 ಸ್ಥಾನಗಳನ್ನು ಪಡೆಯಲಿದೆ ಎಂದು ಹೇಳಿದೆ. ಇನ್ನು ಕಾಂಗ್ರೆಸ್‌ 58 ರಿಂದ 62 ಸ್ಥಾನಗಳನ್ನು ಗೆಲ್ಲಲಿದೆ ಎಂದು ವರದಿಯಲ್ಲಿ ತಿಳಿದುಬಂದಿದೆ. ಇನ್ನುಳಿದ 164 ಕ್ಷೇತ್ರಗಳಲ್ಲಿ ಮೇ 20, ಮೇ 25 ಮತ್ತು ಜೂ. 1 ರಂದು ಮತದಾನ ನಡೆಯಲಿದೆ.

ರಾಜ್ಯಗಳಲ್ಲಿ ಗೆಲುವಿನ ಲೆಕ್ಕಾಚಾರ ಹೇಗಿದೆ?

ಪಲೋಡಿ ಸಟ್ಟಾ ಬಜಾರ್‌ ನೀಡಿರುವ ವರದಿ ಪ್ರಕಾರ, ಗುಜರಾತ್‌ನ ಎಲ್ಲಾ 26 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವ ಸಾಧಿಸಿದರೆ, ಮಧ್ಯಪ್ರದೇಶದ 29 ಕ್ಷೇತ್ರಗಳಲ್ಲಿ 27-28 ಸ್ಥಾನಗಳನ್ನು ಗಿಟ್ಟಿಸಿಕೊಳ್ಳುವುದು ಖಚಿತವಾಗಿದೆ. ರಾಜಸ್ಥಾನದಲ್ಲಿ 25 ಸ್ಥಾನಗಳಲ್ಲಿ ಈ ಬಾರಿ 18-20 ಸ್ಥಾನಗಳನ್ನು ಮಾತ್ರ ಬಿಜೆಪಿ ಗೆಲ್ಲಬಹುದಾಗಿದೆ. ಒಡಿಶಾದ 21 ಸ್ಥಾನಗಳಲ್ಲಿ, ಬಿಜೆಪಿ 11-12 ಸ್ಥಾನಗಳನ್ನು ಗೆಲ್ಲಲಿದೆ ಎಂದು ಅಂದಾಜಿಸಲಾಗಿದೆ .

ಪಂಜಾಬ್‌ನಲ್ಲಿ ಪಕ್ಷವು ಯಾವುದೇ ಪ್ರಮುಖ ಬದಲಾವಣೆಯನ್ನು ಕಾಣುವ ಸಾಧ್ಯತೆಯಿಲ್ಲ, ರಾಜ್ಯದಲ್ಲಿ 2-3 ಸ್ಥಾನಗಳನ್ನು ಗೆಲ್ಲುವ ನಿರೀಕ್ಷಿ ಇದೆ. 2019ರ ಚುನಾವಣೆಯಲ್ಲಿ ಬಿಜೆಪಿ 2 ಸ್ಥಾನಗಳನ್ನು ಗೆದ್ದಿತ್ತು. ಕಳೆದ ಬಾರಿ 1೦ಸ್ಥಾನಗಳನ್ನು ಗೆದ್ದುಕೊಂಡಿದ್ದ ನೆರೆಯ ಹರಿಯಾಣದಲ್ಲಿ, ಪಕ್ಷಕ್ಕೆ 5-6 ಸ್ಥಾನಗಳು ಮಾತ್ರ ದೊರೆಯಲಿದೆ. ತೆಲಂಗಾಣದಲ್ಲಿ ಬಿಜೆಪಿಗೆ 5-6 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆ ಇದೆ. ಹಿಮಾಚಲ ಪ್ರದೇಶದಲ್ಲಿ ಪಕ್ಷವು ತನ್ನ ಪ್ರಾಬಲ್ಯವನ್ನು ಉಳಿಸಿಕೊಳ್ಳುವ ಸಾಧ್ಯತೆಯಿದೆ, ಕ್ಲೀನ್ ಸ್ವೀಪ್ ಆಗುವ ಸಾಧ್ಯತೆ ಇದೆ. ಪಕ್ಷ ಉತ್ತರಾಖಂಡದಲ್ಲಿ 5 ಸ್ಥಾನ ಬಿಜೆಪಿ ಬಿಜೆಪಿ ಪಾಲಾಗಾಲಿದೆ.

ಇದನ್ನೂ ಓದಿ: Karnataka Weather : ಮೈಸೂರು, ಮಂಡ್ಯ ಸೇರಿ ಈ 7 ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಂಭವ

ಛತ್ತೀಸ್‌ಗಢದ 11 ಸ್ಥಾನಗಳಲ್ಲಿ ಪಕ್ಷವು 10-11 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ. 2019ರ ಚುನಾವಣೆಯಲ್ಲಿ 9 ಸ್ಥಾನಗಳನ್ನು ಗೆದ್ದಿತ್ತು. ಪಕ್ಷವು ದೆಹಲಿಯಲ್ಲಿ 6-7 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ – ಅದು 2019 ರಲ್ಲಿಯೂ ಎಲ್ಲಾ 7 ಸ್ಥಾನಗಳನ್ನು ಗೆದ್ದಿತ್ತು. ಸಟ್ಟಾ ಬಜಾರ್ ಪ್ರಕಾರ ತಮಿಳುನಾಡಿನಲ್ಲಿ ಪಕ್ಷವು 3-4 ಸ್ಥಾನಗಳೊಂದಿಗೆ ಕೆಲವು ಸ್ಥಾನಗಳನ್ನು ಗಳಿಸುವ ನಿರೀಕ್ಷೆಯಿದೆ. ಫಲೋಡಿ ಸತ್ತಾ ಬಜಾರ್ ಪ್ರಕಾರ, ಬಿಜೆಪಿಯು ಪಶ್ಚಿಮ ಬಂಗಾಳದಲ್ಲಿ ತನ್ನ ಸಂಖ್ಯೆಯನ್ನು ಸುಧಾರಿಸುವ ಸಾಧ್ಯತೆಯಿದೆ, ಅದರ ಅಂದಾಜಿನ ಪ್ರಕಾರ 42 ಸ್ಥಾನಗಳಲ್ಲಿ 21-22 ಸ್ಥಾನಗಳನ್ನು ಗೆಲ್ಲಬಹುದೆಂದು ಸೂಚಿಸುತ್ತದೆ.

Continue Reading

ದೇಶ

ವೈದ್ಯರ ಸಲಹೆಯಂತೆ 5 ದಿನದ ಹಸುಳೆಯನ್ನು ಬಿಸಿಲಿನಲ್ಲಿ ಮಲಗಿಸಿದರು; ಬೆಂದು ಕರಟಿಹೋಯ್ತು ಕಂದಮ್ಮನ ಜೀವ

Medical Negligence: 5 ದಿನಗಳ ಹೆಣ್ಣು ಮಗುವೊಂದು ವೈದ್ಯರ ನಿರ್ಲಕ್ಷ್ಯಕ್ಕೆ ಬಲಿಯಾಗಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಮೈನ್‌ಪುರಿಯ ಆಸ್ಪತ್ರೆಯೊಂದರ ವೈದ್ಯರ ಸಲಹೆಯಂತೆ ನವಜಾತ ಶಿಶುವನ್ನು ತುಂಬಾ ಹೊತ್ತು ಸೂರ್ಯನ ಬಿಸಿಲು ತಾಕುವಂತೆ ತೆರೆದ ಸ್ಥಳದಲ್ಲಿ ಇರಿಸಲಾಗಿತ್ತು. ಇದರಿಂದ ಮಗು ಮೃತಪಟ್ಟಿದ್ದು, ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿ ತಲೆ ಮರೆಸಿಕೊಂಡಿದ್ದಾರೆ. ಸದ್ಯ ವೈದ್ಯರ ನಡೆಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ.

VISTARANEWS.COM


on

Medical Negligence
Koo

ಲಕ್ನೋ: ಇತ್ತೀಚೆಗೆ ವೈದ್ಯರ ನಿರ್ಲಕ್ಷ್ಯದಿಂದ ತೊಂದರೆ ಅನುಭವಿಸುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ (Medical Negligence). ಇದಕ್ಕೆ ತಾಜಾ ಉದಾಹರಣೆ ಇದು. 5 ದಿನಗಳ ಹೆಣ್ಣು ಮಗುವೊಂದು ವೈದ್ಯರ ನಿರ್ಲಕ್ಷ್ಯಕ್ಕೆ ಬಲಿಯಾಗಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಮೈನ್‌ಪುರಿಯ ಆಸ್ಪತ್ರೆಯೊಂದರ ವೈದ್ಯರ ಸಲಹೆಯಂತೆ ನವಜಾತ ಶಿಶುವನ್ನು ತುಂಬಾ ಹೊತ್ತು ಸೂರ್ಯನ ಬಿಸಿಲು ತಾಕುವಂತೆ ತೆರೆದ ಸ್ಥಳದಲ್ಲಿ ಇರಿಸಲಾಗಿತ್ತು. ಇದರಿಂದ ಮಗು ಮೃತಪಟ್ಟಿದ್ದು, ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿ ತಲೆ ಮರೆಸಿಕೊಂಡಿದ್ದಾರೆ (Viral News).

ಈ ಹೃದಯ ವಿದ್ರಾವಕ ಘಟನೆ ಮೈನ್‌ಪುರಿಯ ಘಿರೊರ್‌ ಥಾನಾ ಪ್ರದೇಶದಲ್ಲಿ ನಡೆದಿದೆ. ಭುಗೈ ಎಂಬ ಹಳ್ಳಿಯ ರಿತಾ ಎನ್ನುವ ಮಹಿಳೆ ಇತ್ತೀಚೆಗೆ ಮೈನ್‌ಪುರಿಯ ರಾಧಾರಮಣ್‌ ರಸ್ತೆಯಲ್ಲಿರುವ ಸಾಯಿ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಸಿಸೇರಿಯನ್‌ ಮೂಲಕ ಈ ಮಗು ಜನಿಸಿತ್ತು. ಜನಿಸುವಾಗಲೇ ಮಗುವಿಗೆ ಕೆಲ ಆರೋಗ್ಯ ಸಮಸ್ಯೆಗಳಿದ್ದವು. ಇದಕ್ಕೆ ವೈದ್ಯರು ಪ್ರತಿ ದಿನ ಅರ್ಧ ಗಂಟೆ ಮಗುವನ್ನು ಬಿಸಿಲಿನಲ್ಲಿ ಇರಿಸುವಂತೆ ಮನೆಯವರಿಗೆ ಸಲಹೆ ನೀಡಿದ್ದರು ಎಂದು ಮೂಲಗಳು ತಿಳಿಸಿವೆ.

ಬಿಸಿಲಿನ ತಾಪಕ್ಕೆ ಅಸುನೀಗಿದ ಹಸುಳೆ

ವೈದ್ಯರ ಸಲಹೆಯಂತೆ ಮಗುವಿನ ಮನೆಯವರು 5 ದಿನಗಳ ಹಸುಳೆಯನ್ನು ಆಸ್ಪತ್ರೆಯ ಟೆರೇಸ್‌ಗೆ ಒಯ್ದು ಬಿಸಿಲಿನಲ್ಲಿ ಮಲಗಿಸಿದ್ದರು. ಬೆಳಗ್ಗೆ ಸುಮಾರು 11.30ಕ್ಕೆ ಟೆರೇಸ್‌ನಲ್ಲಿ ಇರಿಸಿ ಅರ್ಧ ಗಂಟೆ ಆದ ಮೇಲೆ ಮಗುವನ್ನು ವಾರ್ಡ್‌ಗೆ ಕರೆದೊಯ್ದಿದ್ದರು. ಇದಾಗಿ ಕೆಲ ಹೊತ್ತಿನಲ್ಲೇ ಮಗು ಮೃತಪಟ್ಟಿತ್ತು ಎಂದು ಮೂಲಗಳು ತಿಳಿಸಿವೆ.

ಹೇಳಿ ಕೇಳಿ ಇದು ಬಿರು ಬೇಸಗೆ ಕಾಲ. ಇತ್ತೀಚೆಗಂತೂ ಉಷ್ಣಾಂಶ ವಿಪರೀತ ಎನ್ನುವಷ್ಟು ಏರಿಕೆಯಾಗಿದೆ. ಹೀಗಾಗಿ ಅತಿಯಾದ ತಾಪಮಾನ ತಾಳಲಾರದೆ ಮಗು ಅಸುನೀಗಿದೆ. ಅಲ್ಲದೆ ಈ ಪ್ರದೇಶದಲ್ಲಿ ಉಷ್ಣಾಂಶ 42 ಡಿಗ್ರಿ ಸೆಲ್ಶಿಯಸ್‌ ದಾಖಲಾಗಿತ್ತು. ವಯಸ್ಕರಿಗೇ ಈ ಬಿಸಿಲಿನ ಝಳವನ್ನು ತಾಳಲು ಸಾಧ್ಯವಾಗುತ್ತಿಲ್ಲ. ಇನ್ನು 5 ದಿನಗಳ ಹಸುಳೆ ಹೇಗೆ ತಡೆದುಕೊಳ್ಳುತ್ತದೆ ಎಂದು ಮನೆಯವರು ಪ್ರಶ್ನಿಸಿದ್ದಾರೆ. ವೈದ್ಯರ ನಿರ್ಲಕ್ಷ್ಯವೇ ತಮ್ಮ ಮಗುವಿನ ಸಾವಿಗೆ ನೇರ ಹೊಣೆ ಎಂದು ಆರೋಪಿಸಿದ್ದಾರೆ.

ಪ್ರತಿಭಟನೆ

ಪ್ರತಿದಿನ ಅರ್ಧ ಗಂಟೆ ಬಿಸಿಲಿನಲ್ಲಿ ಇರುವಂತೆ ವೈದ್ಯರು ಸಲಹೆ ನೀಡಿದ್ದರಿಂದಲೇ ಮಗು ಅಸುನೀಗಿದೆ ಎಂದಿರುವ ಕುಟುಂಬಸ್ಥರು ಆಸ್ಪತ್ರೆಯ ಆಡಳಿತದ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಜತೆಗೆ ಆಸ್ಪತ್ರೆಯ ಆಡಳಿತದ ವಿರುದ್ಧ ದೂರು ದಾಖಲಿಸಿದ್ದಾರೆ. ಇತ್ತ ಮಗು ಮೃತಪಡುತ್ತಿದ್ದಂತೆ ವೈದ್ಯರು ಮತ್ತು ಆಸ್ಪತ್ರೆ ಸಿಬ್ಬಂದಿ ತಲೆ ಮರೆಸಿಕೊಂಡಿದ್ದಾರೆ. ಸಿಎಂಒ ಆದೇಶದ ಮೇರೆಗೆ ಸದ್ಯ ಆಸ್ಪತ್ರೆಯನ್ನು ಸೀಲ್ ಮಾಡಲಾಗಿದೆ ಮತ್ತು ವೈದ್ಯರ ವಿರುದ್ಧ ತನಿಖೆಯನ್ನು ಪ್ರಾರಂಭಿಸಲಾಗಿದೆ.

ಇದನ್ನೂ ಓದಿ: Medical Negligence : ವೈದ್ಯರ ನಿರ್ಲಕ್ಷ್ಯಕ್ಕೆ 4 ತಿಂಗಳ ಮಗು ಬಲಿ? ಆಕ್ಸಿಜನ್‌ ಹಾಕಿದ 10 ನಿಮಿಷಕ್ಕೆ ಮೃತ್ಯು!

ಕೇರಳದಲ್ಲಿ ಮತ್ತೊಂದು ಪ್ರಕರಣ

ಇತ್ತ ಕೇರಳದಲ್ಲಿಯೂ ವೈದ್ಯರು ಎಡವಟ್ಟು ಮಾಡಿಕೊಂಡಿದ್ದಾರೆ. ಕೋಝಿಕ್ಕೋಡ್ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿನ ಡಾಕ್ಟರ್‌ ಮಗುವಿನ ಕೈ ಬೆರಳಿನ ಬದಲು ನಾಲಿಗೆಯ ಶಸ್ತ್ರಚಿಕಿತ್ಸೆಯ ಮಾಡಿದ್ದಾರೆ. ವೈದ್ಯರ ನಿರ್ಲಕ್ಷ್ಯಕ್ಕೆ ಪೋಷಕರು ಅಸಮಾಧಾನ ಹೊರ ಹಾಕುತ್ತಿದ್ದಂತೆ ವೈದ್ಯರು ಬಂದು ತಪ್ಪಿಗೆ ಕ್ಷಮೆ ಯಾಚಿಸಿದ್ದು, ಮತ್ತೆ ಮಗುವನ್ನು ಕರೆದುಕೊಂಡು ಹೋಗಿ ಬೆರಳಿನ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಮಗುವಿನ ಕೈಯಲ್ಲಿರುವ ಆರನೇ ಬೆರಳನ್ನು ತೆಗೆಯಲು ಪೋಷಕರು ಆಸ್ಪತ್ರೆಗೆ ದಾಖಲಿಸಿದ್ದರು. ಸದ್ಯ ವೈದ್ಯರ ನಿರ್ಲಕ್ಷ್ಯಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ.

Continue Reading
Advertisement
Murder case In Bengaluru
ಬೆಂಗಳೂರು3 mins ago

Murder case : ಕಳ್ಳನೆಂದು ಹಿಡಿಯಲು ಹೋದ ಸೆಕ್ಯೂರಿಟಿ ಗಾರ್ಡ್‌ಗಳು; ನೂಕಾಟದಲ್ಲಿ ಬಿದ್ದ ಯುವಕ, ಕರೆಂಟ್‌ ಶಾಕ್‌ನಿಂದ ಸಾವು

IPL Ticket Scam
ಕ್ರೀಡೆ23 mins ago

IPL Ticket Scam: ಆನ್​ಲೈನ್​ ಟಿಕೆಟ್​ ಖರೀದಿಸಲು ಹೋಗಿ 3 ಲಕ್ಷ ರೂ ಕಳೆದುಕೊಂಡ ಆರ್​ಸಿಬಿ ಅಭಿಮಾನಿ

Zakir Naik
ವಿದೇಶ29 mins ago

Zakir Naik: ಹಿಂದುಗಳನ್ನು ಮತಾಂತರಗೊಳಿಸುವ ಜಾಕೀರ್ ನಾಯ್ಕ್‌ನನ್ನು ಭಾರತದ ಚಕ್ರವರ್ತಿಯನ್ನಾಗಿಸಬೇಕು; ವಿವಾದ ಹುಟ್ಟುಹಾಕಿದ ಮೌಲ್ವಿ

prajwal revanna case bhavani revanna hd revanna
ಕ್ರೈಂ44 mins ago

Prajwal Revanna Case: ಕಷ್ಟಕ್ಕಾಗದ ಭವಾನಿ ರೇವಣ್ಣ ಮೇಲೆ ದೇವೇಗೌಡ ಫ್ಯಾಮಿಲಿ ಕೆಂಡಾಮಂಡಲ

Murder Case in Anekla
ಬೆಂಗಳೂರು ಗ್ರಾಮಾಂತರ51 mins ago

Murder case : ಬಯಲು ಶೌಚಾಲಯಕ್ಕೆ ಹೋದ ಬಾಲಕನ ದೊಣ್ಣೆಯಿಂದ ಹೊಡೆದು ಕೊಂದರು

Kannada New Movie tanush shivannas mr natwarlal In OTT
ಸ್ಯಾಂಡಲ್ ವುಡ್53 mins ago

Kannada New Movie: ಒಟಿಟಿಗೆ ಲಗ್ಗೆ ಇಟ್ಟ ತನುಷ್ ಶಿವಣ್ಣ ಅಭಿನಯದ ಕ್ರೈಮ್-ಆ್ಯಕ್ಷನ್ ಸಿನಿಮಾ ʻMr ನಟ್ವರ್ ಲಾಲ್ʼ!

Viral News
ವೈರಲ್ ನ್ಯೂಸ್56 mins ago

Viral News: ಅಂತ್ಯಕ್ರಿಯೆ ವೇಳೆ ಬದುಕಿ ಬಂದ ಮಗಳು; ಖುಷಿಯಾಗಿದ್ದ ಪೋಷಕರಿಗೆ ಕಾದಿತ್ತು ಮತ್ತೊಂದು ಶಾಕ್‌!

Aniruddha Jatkar Chef Chidambara Release Date announce
ಸ್ಯಾಂಡಲ್ ವುಡ್1 hour ago

Aniruddha Jatkar: ಅನಿರುದ್ದ್ ನಟನೆಯ “Chef ಚಿದಂಬರ” ರಿಲೀಸ್‌ ಡೇಟ್‌ ಅನೌನ್ಸ್‌!

Viral Video
ಕ್ರೀಡೆ1 hour ago

Viral Video: ಗಲ್ಲಿ ಕ್ರಿಕೆಟ್​ನಲ್ಲಿ ಎಡಗೈ ಬ್ಯಾಟಿಂಗ್​ ನಡೆಸಿದ ಕೆ.ಎಲ್​ ರಾಹುಲ್​

Physical Abuse
ಕ್ರೈಂ2 hours ago

Physical Abuse: ತೀರ್ಥದಲ್ಲಿ ನಿದ್ದೆ ಮಾತ್ರೆ ಬೆರೆಸಿ ಅರ್ಚಕನಿಂದ ನಿರೂಪಕಿ ಮೇಲೆ ಅತ್ಯಾಚಾರ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka weather Forecast
ಮಳೆ5 hours ago

Karnataka Weather : ಮೈಸೂರು, ಮಂಡ್ಯ ಸೇರಿ ಈ 7 ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಂಭವ

Dina Bhavishya
ಭವಿಷ್ಯ7 hours ago

Dina Bhavishya : ಈ ರಾಶಿಯ ಪ್ರೇಮಿಗಳಿಗೆ ಮನೆಯಿಂದ ಸಿಗುತ್ತೆ ಗ್ರೀನ್‌ ಸಿಗ್ನಲ್‌

Karnataka Weather Forecast
ಮಳೆ19 hours ago

Karnataka Weather : ಭಾರಿ ಮಳೆಗೆ ಕೊಟ್ಟೂರು ಬಸ್ ಸ್ಟ್ಯಾಂಡ್‌ ಜಲಾವೃತ; ‌ ತಾಯಿ-ಮಗ ಗ್ರೇಟ್‌ ಎಸ್ಕೇಪ್‌

Drowned in water
ಹಾಸನ22 hours ago

Drowned in water : ಕೆರೆಯಲ್ಲಿ ಈಜಲು ಹೋದ ನಾಲ್ವರು ನೀರುಪಾಲು; ಓರ್ವ ಬಾಲಕ ಪಾರು

Suspicious Case
ಬೆಂಗಳೂರು1 day ago

Suspicious Case : ಬಾತ್‌ ರೂಂನಲ್ಲಿತ್ತು ಕಾಲೇಜು ಹುಡುಗಿ ಡೆಡ್‌ ಬಾಡಿ; ಕುತ್ತಿಗೆ ಕೊಯ್ದು ಸಾಯಿಸಿದವರು ಯಾರು?

Prajwal Revanna Case
ಕರ್ನಾಟಕ2 days ago

Prajwal Revanna Case: ಪ್ರಜ್ವಲ್‌ ರೇವಣ್ಣ ಇಂದೇ ಜರ್ಮನಿಯಿಂದ ಭಾರತಕ್ಕೆ? ಎಸ್‌ಐಟಿ ಅಲರ್ಟ್‌

Dina Bhavishya
ಭವಿಷ್ಯ2 days ago

Dina Bhavishya : ಭೂ ವ್ಯವಹಾರಕ್ಕೆ ಇದು ಸೂಕ್ತ ಸಮಯ; ವ್ಯಾಪಾರದಲ್ಲಿ ಡಬಲ್‌ ಲಾಭ

HD Revanna Released first reaction after release will be acquitted of all charges
ರಾಜಕೀಯ3 days ago

HD Revanna Released: ರಿಲೀಸ್‌ ಬಳಿಕ ರೇವಣ್ಣ ಫಸ್ಟ್‌ ರಿಯಾಕ್ಷನ್;‌ ನ್ಯಾಯಾಂಗದ ಮೇಲೆ ನಂಬಿಕೆ ಇದೆ; ಆರೋಪ ಮುಕ್ತನಾಗುವೆ

CM Siddaramaiah says Our government is stable for 5 years BJP will disintegrate
Lok Sabha Election 20243 days ago

CM Siddaramaiah: ನಮ್ಮ ಸರ್ಕಾರ 5 ವರ್ಷ ಸುಭದ್ರ; ಚುನಾವಣೆ ಬಳಿಕ ಬಿಜೆಪಿ ಛಿದ್ರ ಎಂದ ಸಿಎಂ ಸಿದ್ದರಾಮಯ್ಯ!

I dont want to go to other states for Lok Sabha Election 2024 campaign for Congress says CM Siddaramaiah
Lok Sabha Election 20243 days ago

CM Siddaramaiah: ಕಾಂಗ್ರೆಸ್‌ ಪರ ಬೇರೆ ರಾಜ್ಯಗಳಿಗೆ ಪ್ರಚಾರಕ್ಕೆ ಹೋಗಲು ನನಗೆ ಇಷ್ಟವಿಲ್ಲ: ಸಿಎಂ ಸಿದ್ದರಾಮಯ್ಯ!

ಟ್ರೆಂಡಿಂಗ್‌