Madhva Navami 2023 : ‘ಜ್ಞಾನ’ ಮಧು ಕೊಟ್ಟ ಸತ್ಯ ‘ಮುಕ್ತಿ’ಯ ದಾರ್ಶನಿಕ ಮಧ್ವಾಚಾರ್ಯರು - Vistara News

ಧಾರ್ಮಿಕ

Madhva Navami 2023 : ‘ಜ್ಞಾನ’ ಮಧು ಕೊಟ್ಟ ಸತ್ಯ ‘ಮುಕ್ತಿ’ಯ ದಾರ್ಶನಿಕ ಮಧ್ವಾಚಾರ್ಯರು

ಇಂದು, ಈ ಜಗತ್ತು ಭಗವಂತನ ಲೀಲಾಸೃಷ್ಟಿ. ಇದನ್ನು ಅಪಲಾಪ ಮಾಡಿ ಅವನ ಮಹಿಮೆಗೆ ಅಪಚಾರ ಮಾಡಬಾರದು ಎಂದು ಸಾರಿದ ಶ್ರೀ ಮಧ್ವಾಚಾರ್ಯರು ಭೂಲೋಕದಲ್ಲಿ ತಮ್ಮ ಅವತಾರ ಸಮಾಪ್ತಿ ಮಾಡಿದ ದಿನ, ಮಧ್ವ ನವಮಿ (Madhva Navami 2023). ಅವರನ್ನು ಸ್ಮರಿಸೋಣ, ನಮಿಸೋಣ.

VISTARANEWS.COM


on

Madhva Navami 2023
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo
Madhva Navami 2023

ಪಂ. ಶ್ರೀಧರಾಚಾರ್ಯ ಹೆಚ್. ಎಲ್.
ಮಧ್ವಾಚಾರ್ಯರು 12ನೇ ಶತಮಾನದಲ್ಲಿ ಸಾಕ್ಷಿಗೆ, ಅಂತಃಪ್ರಜ್ಞೆಗೆ, ಅನುಭವಕ್ಕೆ ತಿಳಿಯುವ ಅಧ್ಯಾತ್ಮಸಂದೇಶ ಕೊಟ್ಟು, ವೇದಗಳ ನಿಜ ಆಂತರ್ಯ ತಿಳಿಸಿ, ಜೀವ-ಜಡ-ದೇವರು ಈ ಮೂರರ ನಿಜ ಸಂಬಂಧದ ಹಿನ್ನೆಲೆಯಲ್ಲಿ ‘‘ಈ ಜಗತ್ತು ಸತ್ಯ. ಸುಳ್ಳಲ್ಲ. ಜೀವನಿಗೆ ಅನಂತಕಾಲದ ಸುಖ ಅರ್ಥಾತ್ ಮುಕ್ತಿ ಇದೆ. ಅದಕ್ಕಾಗಿ ಅನಿವಾರ್ಯವಾದ, ಸಂತೋಷದ ‘ಶರಣು’ ಅರ್ಥಾತ್ ಪಾರಮಾರ್ಥಿಕವಾಗಿ ತಂದೆ-ತಾಯಿ-ಬಂಧು-ಬಳಗ ಎಲ್ಲವನ್ನಾಗಿ, ರಕ್ಷಕನನ್ನಾಗಿ ಆ ‘ಪರಬ್ರಹ್ಮ’ನನ್ನು ಭಜಿಸಿ, ಕೊಂಡಾಡುವ ಭಕ್ತಿಯ ಪರಾಕಾಷ್ಠೆಯ ತುಟ್ಟ ತುದಿಯನ್ನೇರುವ ದಾಸತ್ವದ ಸ್ಥಿತಿ ತಲುಪಿ, ಸಾಧನೆಯ ಮಾರ್ಗಗಳನ್ನು ಹೊಂದುವಂತೆ, ಆ  ‘ದೇವರ’ ಸ್ಥಾನವನ್ನು ತೋರಿಸಿ ಕೊಟ್ಟ ಮಹಾನುಭಾವರು.

ಇವರನ್ನು “ಪೂರ್ಣಪ್ರಜ್ಞರು” “ಆನಂದತೀರ್ಥರು” “ಮಧ್ವರು”  “ದಶಪ್ರಮತಿ” “ಸರ್ವಜ್ಞರು” ಮುಂತಾದ ಹಲವು ನಾಮಗಳಿಂದ ವೇದಗಳು ಉಲ್ಲೇಖಮಾಡಿವೆ. ವೇದದಲ್ಲಿ “ಮಾತರಿಶ್ವನ್” ಎನ್ನುವುದರ ಅರ್ಥ “ಮಾತರಿ ಶ್ವಯತಿ (ತದ್ವಿಷಯೇ) ಅಭಿವರ್ಧತೇ ಇತಿ ಮಾತರಿಶ್ವಾ” ಎಂಬ ವ್ಯುತ್ಪತ್ತಿಯಂತೆ ವಿದ್ಯೆಗಳ ವಿಷಯದಲ್ಲಿ ಸಮೃದ್ಧನಾಗಿರುವವನು ಎಂದರ್ಥ. ಅಥವಾ “ಮಾತರಿ ನಿರ್ಮಾತರಿ ಜಗನ್ನಿರ್ಮಾತೃವಿಷಯೇ  ಶ್ವಯತಿ ಅವಗಚ್ಛತಿ ಇತಿ ಮಾತರಿಶ್ವಾ” ಎಂಬಂತೆ ಜಗನ್ನಿರ್ಮಾತೃವಾದ ಶ್ರೀಹರಿಯ ವಿಷಯದಲ್ಲಿ ಜ್ಞಾನಿಯಾಗಿರುವವನು ಎಂದರ್ಥ. ತಮ್ಮ ಅಪ್ರತಿಮ ವೈದುಷ್ಯದಿಂದ ತಾತ್ವಿಕಪ್ರಪಂಚದಲ್ಲಿ  ಅಪೂರ್ವ ಅಧ್ಯಾತ್ಮಕ್ರಾಂತಿ ಮಾಡಿದ ಮಹಾಪುರುಷರು ಅವರು.

ಸಕಲ ತತ್ವವಿಷಯಗಳು, ಪ್ರಮಾಣಶಾಸ್ತ್ರ, ಪ್ರಮೇಯವಿಚಾರ, ಮೋಕ್ಷಸಾಧನೆ, ಮೋಕ್ಷ, ಜ್ಞಾನ, ಭಕ್ತಿ, ಆಚಾರ, ವಿಚಾರ, ಕರ್ಮ, ತರ್ಕ, ತಂತ್ರ, ಮಂತ್ರ, ಯಜ್ಞ, ಗಾನಶಾಸ್ತ್ರ, ರಾಜಕೀಯ ಹೀಗೆ ಸಕಲವಿಷಯಗಳಲ್ಲಿ ಪರಿಪೂರ್ಣ ಮಾಹಿತಿ ನೀಡುತ್ತಾ, ತಾತ್ವಿಕವಾದ ಅದ್ಭುತ ಮಹಿಮೆಗಳನ್ನು ತೋರುತ್ತಾ, ಭಾರತೀಯರಿಗೆ ಹೆಮ್ಮೆ ಎಂದೆನಿಸುವ ಭಾರತೀಯರಾಗಿ, ಕನ್ನಡನಾಡಿನಲ್ಲಿ ಅವತಾರ ಮಾಡಿ, ಕನ್ನಡಿಗರ ವಿಶೇಷ  ಸಂತೋಷಕ್ಕೆ ಕಾರಣರಾದ, ಪ್ರಸಿದ್ಧ ವ್ಯಾಕರಣವನ್ನೂ ಮೀರಿದ ಅನಾದಿವೇದಪರಿಭಾಷಾಪರಿಯನ್ನು ಪ್ರಯೋಗಿಸಿ, ಸಮಗ್ರವೇದವಾಙ್ಮಯವೇ ಸರ್ವೋತ್ತಮದೈವನಾದ  ಶ್ರೀವಿಷ್ಣುವಿನ ಗುಣಗಾನ ಎಂದು ಸಾರಿದ ಅಪ್ರತಿಮಚಿಂತಕರು ಎಂಬುದು ಅವರ ಪ್ರಶಸ್ತಿ.

ಅವರ ಮೂವತ್ತೆರಡು ಸಲ್ಲಕ್ಷಣಗಳ ಭವ್ಯ ಆಕೃತಿಯಂತೆ ಅನುಪಮಕೃತಿಶ್ರೇಣಿಯನ್ನೂ ಜನತೆಗೆ ನೀಡಿ, ಶಾಸ್ತ್ರಪ್ರಪಂಚದ ವಿಶ್ವರೂಪವನ್ನು ತೆರೆದಿಟ್ಟ ಮಹಾಮಹಿಮರು ಎಂಬುದು ಅವರ ಅನಾದೃಶಹಿರಿಮೆ. ದ್ವಾಪರದ ಕೊನೆಯ ಘಟ್ಟ. ಕಾಲದ ಜೊತೆಗೆ ಶಾಪದಿಂದ ಲುಪ್ತವಾದ ಜ್ಞಾನದ ಉದ್ಧಾರ ವೇದವ್ಯಾಸರಿಂದ ಆಗಿತ್ತು. ಆದರೆ ಕಾಲ ಕಳೆದಂತೆ ಕಲಿಪ್ರಭಾವದಿಂದ ಜನತೆ ತತ್ವಜ್ಞಾನದಿಂದ ದೂರಾಗಿ, ಪರಮಾತ್ಮನನ್ನು ಮರೆತು, ಆತ್ಮಚಿಂತನೆ ತೊರೆಯುವಂತಾಯಿತು.  ಈ ಸಂದರ್ಭದಲ್ಲಿ ಅವತರಿಸಿದ ಮಧ್ವಾಚಾರ್ಯರು ಸಕಲಸಾಧಕರಿಗೆ ಆಶಾಕಿರಣವಾಗಿ ದ್ವೈತಸಿದ್ಧಾಂತದ ಮೂಲಕ ಮೋಕ್ಷಮಾರ್ಗದ ಮೆಟ್ಟಿಲುಗಳನ್ನು ತೋರಿಸಿಕೊಟ್ಟರು.

ನಾರಾಯಣನೇ ಪರದೈವ, “ಬ್ರಹ್ಮ” ಎಂದರೆ ಅನಂತಕಲ್ಯಾಣಗುಣಪರಿಪೂರ್ಣ ಎಂದು ಅರ್ಥ. ನಾರಾಯಣ ಮುಂತಾದ ಶಬ್ದಗಳಿಗೂ ಇದೇ ಅರ್ಥ. ಕೇವಲ ವರ್ಣಾತ್ಮಕ ಶಬ್ದಗಳಷ್ಟೇ ಅಲ್ಲದೇ ಈ ವಿಶ್ವದಲ್ಲಿ ಭೇರೀನಾದ, ಸಮು ದ್ರಘೋಷ, ಹಕ್ಕಿಗಳ ಚಿಲಿಪಿಲಿ, ಮೊದಲಾಗಿ ಇರುವ ಪ್ರತಿಯೊಂದು ಧ್ವನ್ಯಾತ್ಮಕ ಶಬ್ದಗಳೂ ಓಂಕಾರವಾಚ್ಯನಾದ ಭಗವಂತನ ಮಹಿಮೆಯನ್ನೇ ಸಾರುತ್ತವೆ. ಪರಬ್ರಹ್ಮನಾದ “ವಿಷ್ಣು” ಒಬ್ಬನೇ ಸ್ವತಂತ್ರ. ಅವನೇ ಸೃಷ್ಟಿ, ಸ್ಥಿತಿ, ಲಯ, ನಿಯಮನ, ಜ್ಞಾನ, ಅಜ್ಞಾನ, ಬಂಧ, ಮೋಕ್ಷಗಳೆಂಬ ಸಕಲಕ್ಕೂ ಮುಖ್ಯಕಾರಣ.

Madhva Navami 2023

“ಶ್ರೀ”ತತ್ವ, “ಅವ್ಯಕ್ತ”ತತ್ವ, “ಚಿತ್ ಪ್ರಕೃತಿ” ಎನಿಸುವ ಮಹಾಲಕ್ಷ್ಮೀ ಎಂದೆಂದಿಗೂ ಈ ಸಂಸಾರಬಂಧನಕ್ಕೊಳಗಾಗದೇ ಪರಮಾತ್ಮನ ಅನುಗ್ರಹದಿಂದ ನಿತ್ಯಮುಕ್ತಳಾಗಿರುವಳು.ತೃಣಾದಿ ಚತುರ್ಮುಖಪರ್ಯಂತ ಇರುವ ಚೇತನರಿಗಿಂತ ಅನಂತಗುಣಅಧಿಕಳು. ಈ ಜಗತ್ತು ಪಾರಮಾರ್ಥಿಕವಾದುದು. ಸತ್ಯವಾಗಿದೆ. ಇದಕ್ಕೆ ಪ್ರತ್ಯಕ್ಷವೇ ಪ್ರಮಾಣ. ಪ್ರತ್ಯಕ್ಷಕ್ಕೆ ಯೋಗ್ಯವಾದ ವಿಷಯಗಳಲ್ಲಿ, ಅದರ ಸತ್ಯತೆಯ ವಿಷಯದಲ್ಲಿ ಯಾವ ವೇದವಾಕ್ಯಗಳೂ ಅದನ್ನು “ಸುಳ್ಳು” ಎಂದು ಹೇಳಲು ಸಾಧ್ಯವಿಲ್ಲ.

ಪರಬ್ರಹ್ಮ ‘ನಿರ್ಗುಣ’ ‘ನಿರಾಕಾರ’ ಎಂದು ಕೆಲವು ವೇದವಾಕ್ಯಗಳು ಹೇಳುತ್ತಿರುವಂತೆ ಮೇಲ್ನೋಟಕ್ಕೆ ತೋರಿದರೂ, ಭಗವಂತನು ಅಪ್ರಾಕೃತನಾದುದರಿಂದ ಅಂದರೆ ನಮ್ಮಂತೆ ಜಡಪ್ರಕೃತಿಯ ಶರೀರ ಇಲ್ಲದಿರುವುರದಿಂದ, ಪ್ರಾಕೃತಿಕವಾದ ಆಕಾರ ಗುಣಗಳು ಇಲ್ಲದಿರುವುದರಿಂದ ಅವನನ್ನು ನಿರ್ಗುಣ, ನಿರಾಕಾರ ಎಂದು ಆ ವೇದವಾಕ್ಯಗಳು ಹೇಳುತ್ತವಷ್ಟೇ ಎಂಬ ಅತ್ಯಂತ ಪ್ರಬುದ್ಧ, ಪ್ರಾಮಾಣಿಕ ಅರ್ಥ ತಿಳಿಸಿ, ಈ ಹಿನ್ನೆಲೆಯಲ್ಲಿ ಸಮಸ್ತವೇದಗಳೂ ಪರಮಪ್ರಮಾಣಗಳೇ ಎಂದು ಮಂಡಿಸಿರುವರು.

ಚೈತನ್ಯಾತ್ಮಕವಾದ ಜ್ಞಾನಾನಂದಾದಿ ಗುಣಗಳಿಂದ ತುಂಬಿದ ಆಕಾರ ಪರಮಾತ್ಮನಿಗೆ ಇದೆ. ಅವನಿಗೆ ಅನಾದ್ಯನಂತಕಾಲದಲ್ಲೂ ಯಾವ ದೋಷವೂ ಇಲ್ಲ. ಜೀವರಲ್ಲಿ ಅವರವರ ಸ್ವರೂಪದಲ್ಲೇ ನಿತ್ಯವಾಗಿ ಅವರವರ ಯೋಗ್ಯತೆ, ಇಚ್ಛಾ, ಪ್ರಯತ್ನ, ಜ್ಞಾನ ಮುಂತಾದ ಚೈತನ್ಯಮಯವಾದ, ಎಂದೂ ನಾಶವಾಗದ, ವ್ಯತ್ಯಾಸವಾಗದ ಗುಣಗಳು ಇದ್ದೇ ಇವೆ. ಅವುಗಳಿಗೆ ಅನುಗುಣವಾಗಿ ಅನಾದಿಕಾಲದಿಂದ ಅವರವರಿಗೆ ಕರ್ಮವ್ಯತ್ಯಾಸ, ಅದರಿಂದಾಗಿ ಜನ್ಮಾಂತರದಲ್ಲಿ ಬೇರೆ ಬೇರೆ ಯೋನಿಗಳು, ಪುನಃ ಪುನಃ ಕರ್ಮಗಳು, ಕರ್ಮಗಳಲ್ಲಿ ವೈಚಿತ್ರ್ಯದಿಂದ ಫಲದಲ್ಲಿ ವ್ಯತ್ಯಾಸ ಈ ಮುಂತಾದ ತತ್ವಗಳನ್ನು ತಿಳಿಸಿದ ಮಹಾಜ್ಞಾನಿಗಳು.

ಜೀವ ಸ್ವಭಾವಕ್ಕನುಗುಣವಾದ ಬಹುದೀರ್ಘಕಾಲೀನ ಸಾಧನೆಯ ಪಥದಲ್ಲಿ ಸಾಗಿ ಸಾತ್ವಿಕನಾದರೆ ಉತ್ತಮಗತಿ, ರಾಜಸನಾದರೆ ಮಧ್ಯಮಗತಿ, ತಾಮಸನಾದರೆ ಅಧೋಗತಿ.ಇದನ್ನು ಸುಂದರವಾಗಿ ವಿವರಿಸಿರುವ ಮಧ್ವಾಚಾರ್ಯರು ಈ ವಿಚಾರದಲ್ಲಿ ಗೀತಾ, ಉಪನಿಷತ್ ಮುಂತಾದವುಗಳ ಪ್ರಮಾಣ ನೀಡುತ್ತಾರೆ. ವಸ್ತುಸ್ಥಿತಿ ಹೀಗಿರುವಾಗ ಮಧ್ವಾಚಾರ್ಯರು ಜೀವರನ್ನು ಒಳ್ಳೆಯವರು, ಕೆಟ್ಟವರು, ಉತ್ತಮರು, ಅಧಮರು ಎಂದೆಲ್ಲಾ ಹೇಳಿದ್ದಾರೆ ಎಂಬ ಆರೋಪ ಸರಿಯಲ್ಲ. ಬೇವು ಮಾವು ಎಂಬುದಾಗಿ ಭಿನ್ನ ಭಿನ್ನ ಬೀಜಗಳಿರುವಾಗ ವೃಕ್ಷವೆಂಬ ಫಲವೂ ಬೇವು ಮಾವು ಎಂದಾದೀತೇ ವಿನಹ ಎರಡೂ ಬೀಜಗಳು ಮಣ್ಣು-ನೀರಿನ ಸಂಬಂಧ ಸಮವಾಗಿ ಪಡೆದರೂ ಎರಡೂ ಬೇವೆಂದಾಗಲೀ ಅಥವಾ ಎರಡೂ ಮಾವೆಂದಾಗಲೀ ಆಗಲು ಸಾಧ್ಯವಿಲ್ಲ ಅಲ್ಲವೇ ? ಇದೇ ಮಧ್ವಾಚಾರ್ಯರ ಜೀವವೈವಿಧ್ಯ ವಿಚಾರ.  

ಇದನ್ನೇ ತಾರತಮ್ಯ ಪ್ರಮೇಯವೆಂದು ಹೇಳುತ್ತಾರೆ. ವಿವಿಧಗಾತ್ರದ ಆಕಾರದ ಪಾತ್ರೆಗಳಲ್ಲಿ ನೀರು ತುಂಬಿಸುವಾಗ ಗಾತ್ರ-ಆಕಾರಗಳಿಗೆ ತಕ್ಕಂತೆ ನೀರು ತುಂಬುವುದೇ ವಿನಹ ಎಲ್ಲ ಪಾತ್ರೆಗಳಲ್ಲಿ ಸರಿಸಮವಾಗಿ ನೀರು ತುಂಬೀತೇ ? ಇದೇ ಪ್ಪತಿಯೊಬ್ಬ ಜೀವನು ಇನ್ನೊಬ್ಬ ಜೀವನಿಂದ ಭಿನ್ನನಾಗಿದ್ದಾನೆ ಎಂಬ ಜೀವ-ಜೀವಭೇದವಾದ. ಮೂಲಭೂತ ಅಣುಗಳ ವ್ಯತ್ಯಾಸದಿಂದ  ಮೂಲವಸ್ತುಗಳ (ELEMENTS) ಗುಣ, ಸ್ವಭಾವ ವ್ಯತ್ಯಾಸವಿರುವುದು ಜಗತ್ ಪ್ರಸಿದ್ಧ. ಇದೇ ಜಡ-ಜಡಭೇದ. ಜ್ಞಾನ-ಇಚ್ಛಾದಿಗಳು ಜಡದಲ್ಲಿಲ್ಲ. ಇದು ಜಡ-ಜೀವರ ಭೇದ. ಯಾವ ಜಡವಸ್ತುವಾಗಲೀ, ಜೀವನಾಗಲೀ ಪರಬ್ರಹ್ಮನಿಗೆ ಯಾವ ರೀತಿಯಿಂದಲೂ ಸರಿ ಸಮಾನರಾಗಲಾರರು. ಇದೇ ಜಡ ಹಾಗೂ ಜೀವರಿಂದ ಪರಮಾತ್ಮನಿಗಿರುವ ಭೇದ. ಹೀಗಾಗಿ ಒಟ್ಟು ಸಾಮಾನ್ಯವಾಗಿ ” ಪಂಚಭೇದ” ಗಳ ಸಿದ್ಧಾಂತ ನಿರೂಪಿಸಿ, ಸಾಧಿಸಿ ತೋರಿಸಿದರು ಶ್ರೀಮದಾಚಾರ್ಯರು.

ಜೀವರಲ್ಲಿ ಅನಾದಿಯಿಂದ ಇರುವ, ಸ್ವರೂಪವಲ್ಲದ, ಸ್ವಾಭಾವಿಕವಲ್ಲದ ಜಡದ ಸಂಬಂಧ ಅದು ಲಿಂಗಶರೀರರೂಪ ದಿಂದ ಇರುವುದು. ಅದೇ ಸಂಸಾರಬಂಧ. ಅನಾದಿಯಿಂದಲೇ ಇರುವ ಅಹಂಕಾರ-ಮಮಕಾರಗಳ ನಿಮಿತ್ತ, ಭಗವಂತನೇ ನಿಯಾಮಕನಾಗಿ ಈ ಬಂಧನಕ್ಕೂ ಕಾರಣನು. ಇದನ್ನು ಬಿಡಿಸಿಕೊಳ್ಳಲು ಜೀವ ಸ್ವತಂತ್ರನಲ್ಲ. ಶಕ್ತನೂ ಅಲ್ಲ. ಅಂತಹ ಜೀವವನ್ನು ತನಗೆ ಯಾವ ಪ್ರಯೋಜನವಿಲ್ಲದಿದ್ದರೂ ಈ ಸಂಸಾರಬಂಧನದಿಂದ ಬಿಡಿಸಿ, ನಿತ್ಯಸುಖ ಅಭಿವ್ಯಕ್ತವಾಗುವ, ದುಃಖದ ಲವಲೇಶವೂ ಇಲ್ಲದ ಮೋಕ್ಷವನ್ನು ಕೊಡಲು ಸರ್ವಶಕ್ತ, ಸರ್ವತಂತ್ರ, ಸ್ವತಂತ್ರ, ಸರ್ವಜ್ಞನಾದ ವ್ಯಕ್ತಯಿಂದಷ್ಟೇ ಸಾಧ್ಯವಷ್ಟೇ ? ಇವನನ್ನೇ ಶಾಸ್ತ್ರಗಳು “ಪರಬ್ರಹ್ಮ” ಎಂದಿವೆ. ಅವನೇ ದೇವರು. ಇದು ಅವನ ಪರಮ ಕಾರುಣ್ಯವಲ್ಲವೇ?

ಆದರೆ ಆ ದೇವರು ಸುಮ್ಮ-ಸುಮ್ಮನೆ ಮೋಕ್ಷ ಕೊಡಲಾರ. ನಿಮ್ಮಿಂದ ಏನೋ ಬಯಸುತ್ತಾನೆ. ಅರೆ ! ಇದೇನಿದು ! ದೇವರಿಗೂ ನಿಮ್ಮಿಂದ ಬೇಕಾಗುವ ವಸ್ತುವಿನ ಕೊರತೆಯೇ ? ಹೆದರದಿರಿ. ಅವನು ನಮ್ಮಿಂದ ಬಯಸುವುದು ನಿರ್ಮಲವಾದ, ತನ್ನ ಬಗೆಗಿನ ಮಾಹಾತ್ಮ್ಯಜ್ಞಾನತುಂಬಿದ, ತಾನು ತನ್ನವರಿಗಿಂತಲೂ ಅತೀ ಹೆಚ್ಚಿನಮಟ್ಟದ ಸ್ನೇಹ-ಪ್ರೀತಿಯನ್ನಷ್ಟೇ. ಇಡೀ ಪ್ರಪಂಚವೇ ಅವನದ್ದಾಗಿರುವಾಗ ಅವನಿಗೆ ಕೊಡಲು ನಮ್ಮದು ಅಂತ ಏನಿದೆ ?
ಈ ಪ್ರೀತಿ-ಸ್ನೇಹಗಳನ್ನೇ ಶಾಸ್ತ್ರಗಳು “ಭಕ್ತಿ” ಎಂದಿವೆ.  ಈ ಕ್ರಮದಲ್ಲಿ ಭಕ್ತಿಪಂಥದ ಬೀಜ ಬಿತ್ತಿದ ಜ್ಞಾನಿವರೇಣ್ಯರೇ ಶ್ರೀಮಧ್ವಾಚಾರ್ಯರು.

ಇದೇ ಸಾಗಿ ಹೆಮ್ಮರವಾಗಿ ದಾಸಸಾಹಿತ್ಯಕ್ಕೆ ತಳಪಾಯವಾಗಿ, ದಾಸಶ್ರೇಷ್ಠರಾದ “ಕರ್ನಾಟಕಸಂಗೀತಪಿತಾಮಹ”ರಾದ ಶ್ರೀಪುರಂದರದಾಸರನ್ನು ಕೊಟ್ಟಿತಲ್ಲವೇ. ಇವರಿಂದ ಪ್ರಾರಂಭವಾಗಿ ಕನಕದಾಸರು, ವಾದಿರಾಜರು, ವಿಜಯದಾಸರು, ಗೋಪಾಲದಾಸರು, ಜಗನ್ನಾಥದಾಸರೇ ಮೊದಲಾದ ನೂರಾರು ದಾಸರಿಂದಾಗಿ ಲಕ್ಷ-ಲಕ್ಷಗಟ್ಟಲೇ ಶಾಸ್ತ್ರೀಯ ಸಂಗೀತಕ್ಕೊಳಪಡುವ, ತತ್ವ ತುಂಬಿದ, ಭಕ್ತಿರಸ ತುಂಬಿದ ಕೃತಿಗಳ ರಚನೆಯಾದವು. ಅದೂ ನಮ್ಮ ಹೆಮ್ಮೆಯ ಕರ್ನಾಟಕದ  ಕಸ್ತೂರಿ ಕನ್ನಡದಲ್ಲಿ. ಇದೆಲ್ಲವೂ ಕನ್ನಡಸಾಹಿತ್ಯಕ್ಕೆ ಕೊಡುಗೆ ಆಗಿಲ್ಲವೇ?  ಹಾಗಾದರೆ ಇವೆಲ್ಲಕ್ಕೂ ಮೂಲಭೂತರಾಗಿ ಶ್ರೀಮಧ್ವಾಚಾರ್ಯರು ಕಾರಣರಾದ್ದರಿಂದ ಅವರಿಂದ ಈ ಕರ್ನಾಟಕಕ್ಕೆ ಎಷ್ಟು ದೊಡ್ಡ, ಭಕ್ತಿ ತುಂಬಿದ ಸಾಹಿತ್ಯಭಂಡಾರ ದೊರಕಿದಂತಾಗಿದೆಯಲ್ಲವೇ ? ಈ ಎಲ್ಲದರ ಕೀರ್ತಿ ಶ್ರೀಮಧ್ವಾಚಾರ್ಯರಿಗೇ ಸಲ್ಲುತ್ತದೆಯಲ್ಲವೇ?

ಒಟ್ಟಿನಲ್ಲಿ “ಕುರು ಭುಂಕ್ಷ್ವ ಚ ಕರ್ಮ ನಿಜಂ ನಿಯತಂ ಹರಿಪಾದವಿನಮ್ರಧಿಯಾ ಸತತಂ” ಪರಮಾತ್ಮನ ಪರಮಪ್ರಸಾದ ಅರ್ಥಾತ್ ಅವನ ಅನುಗ್ರಹ ಪಡೆದು, ಈ ದುಃಖದ ಸಂಸಾರದಿಂದ ಪಾರಾಗಲು ಸಾಧನಮಾರ್ಗದಲ್ಲಿ ತೊಡಗಿರಿ ಎಂದು ಕರ್ಮಸಂದೇಶದ ಮರ್ಮ ತಿಳಿಸಿದ ಶ್ರೀಮಧ್ವಾಚಾರ್ಯರು “ಎಂದೂ ಸೋಮಾರಿಗಳಾಗಿರಬೇಡಿ” ಎಂಬ ಸಂದೇಶ ನೀಡಿದ್ದಾರೆ,

ಇಂತಹ ಮಹಾನ್ ಚೇತನರು ಭೂಲೋಕ ತ್ಯಜಿಸಿ, ಬದರಿಕಾಶ್ರಮ ಪ್ರವೇಶ ಮಾಡಿದ ದಿನ ಮಧ್ವನವಮಿ (Madhva Navami 2023). ಈ ದಿನ ವಿಶೇಷವಾಗಿ ಅವರ ಸ್ಮರಣೆ ಮಾಡಿ, ಜೀವನದಲ್ಲಿ ಅವರ ಸಂದೇಶಗಳನ್ನು ಪಾಲಿಸೋಣ.

ಲೇಖಕರು ಆಧ್ಯಾತ್ಮ ಚಿಂತಕರು ಮತ್ತು ಪ್ರವಚನಕಾರರು

ಧಾರ್ಮಿಕ ಮತ್ತು ಆಧ್ಯಾತ್ಮಿಕ ಲೇಖನ, ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಧಾರ್ಮಿಕ

Pretha Maduve: ವಧುವಿನ ಆತ್ಮಕ್ಕೆ ದೊರೆತ ವರ, ಆಷಾಢದಲ್ಲಿ ʻಪ್ರೇತ ಮದುವೆ’ ಫಿಕ್ಸ್

Pretha Maduve: ಜಾಹೀರಾತು ಹಾಗೂ ಈ ಕುರಿತು ಬಂದ ವರದಿಯಿಂದ ನೂರಾರು ಜನರು ಪೂರಕವಾಗಿ ಸ್ಪಂದಿಸಿದ್ದಾರೆ. ನೂರಾರು ಮಂದಿ ಸಂಪರ್ಕಿಸಿದ್ದರು. ವಿವಿಧ ಮಾಧ್ಯಮಗಳಲ್ಲಿಯೂ ಈ ವಿಚಾರ ಬಂದಿತ್ತು. ಇದು ತುಳುನಾಡಿನ ನಂಬಿಕೆಯ ಆಚರಣೆಯಾಗಿದೆ.

VISTARANEWS.COM


on

pretha maduve
Koo

ಮಂಗಳೂರು: ಕರ್ನಾಟಕ ಕರಾವಳಿಯ (karnataka Coastal) ತುಳುನಾಡಿನ (Tulunadu) ವಿಶಿಷ್ಟ ಆಚರಣೆಯಾದ ʼಪ್ರೇತ ಮದುವೆʼಗೆ (Pretha Maduve) ಸಜ್ಜಾಗಿದ್ದ ವಧುವಿಗೆ (bride) ವರ (groom) ಹಾಗೂ ದಿನಾಂಕ ಫಿಕ್ಸ್‌ ಆಗಿದೆ. ಆಷಾಢ (ಆಟಿ) ತಿಂಗಳಲ್ಲಿ ಮದುವೆ ನಡೆಯಲಿದೆ. ಇದು ಎರಡು ʼಆತ್ಮಗಳʼ (Souls) ಮದುವೆಯಾಗಿದ್ದು, ಸಾಂಪ್ರದಾಯಿಕ ಜಾನಪದ (Folk) ರೀತಿಯಲ್ಲಿ ನಡೆಯುತ್ತದೆ.

ಇತ್ತೀಚೆಗೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ವಧುವೊಬ್ಬಳಿಗೆ ʼವರ ಬೇಕಾಗಿದೆ’ ಎಂಬ ಜಾಹೀರಾತು ಭಾರಿ ಸುದ್ದಿಯಾಗಿತ್ತು. ಈ ʼವಧುʼ ಒಂದು ವಾರದ ಮಗುವಾಗಿದ್ದಾಗಲೇ ತೀರಿಕೊಂಡಿದ್ದಳು. ಇದು ನಡೆದು 30 ವರ್ಷಗಳು ಆಗಿವೆ. ಜ್ಯೋತಿಷ್ಯ ಪ್ರಕಾರ ನೋಡಿದಾಗ, ಹೆಣ್ಣುಮಗಳ ಆತ್ಮಕ್ಕೆ ವಿವಾಹ ಆಗಬೇಕು ಎಂದು ಕಂಡುಬಂದಿತ್ತು ಎನ್ನಲಾಗಿದೆ. ಈ ಮಗುವಿಗೆ ನಾಮಕರಣವೂ ಆಗಿರಲಿಲ್ಲ. ನಂತರ ಆಕೆಗೆ “ಪ್ರೇತ ಮದುವೆ’ ಮಾಡಲು ನಿರ್ಧರಿಸಲಾಗಿತ್ತು. ಈ ಕುರಿತು ಜಾಹೀರಾತು ಪ್ರಕಟಿಸಲಾಗಿತ್ತು.

Pretha Maduve

ಇದೀಗ ಈ ವಧುವಿಗೆ ಕಾಸರಗೋಡು ಸಮೀಪದ ಬಾಯಾರು ಕಡೆಯ “ವರ’ನೊಬ್ಬ ನಿಗದಿಯಾಗಿದ್ದಾನೆ. ಮುಂದಿನ “ಆಟಿ’ ತಿಂಗಳಲ್ಲಿ ಪ್ರೇತ ಮದುವೆ ನಡೆಯಲಿದೆ. “ಸುಮಾರು 30 ವರ್ಷದ ಹಿಂದೆ ತೀರಿ ಹೋದಾಕೆಗೆ ಪ್ರೇತ ವರ ಸದ್ಯ ಬೇಕಾಗಿದೆ” ಎಂದು ಪತ್ರಿಕೆಯಲ್ಲಿ ಜಾಹೀರಾತು ಹಾಕಿದ್ದನ್ನು ಗಮನಿಸಿದ ಬಾಯಾರು ಸಮೀಪದ ನಿವಾಸಿ ಸಂಬಂಧಪಟ್ಟವರಿಗೆ ಕರೆ ಮಾಡಿ ಮಾತನಾಡಿದ್ದಾರೆ. ಮೊದಲ ಕರೆ ಅದಾಗಿತ್ತು. ಬಳಿಕ ಸರಿಹೊಂದುವ ಸುಮಾರು 30ಕ್ಕೂ ಅಧಿಕ ಸಂಬಂಧದವರು ಸಂಪರ್ಕಿಸಿದ್ದರು. ಪ್ರಶ್ನಾಚಿಂತನೆಯಲ್ಲಿ ಅವಲೋಕಿಸಿದಾಗ ಬಾಯಾರುವಿನ ವರ ಅಂತಿಮಗೊಳಿಸುವ ಬಗ್ಗೆ ಸಲಹೆ ಬಂದಿತ್ತು.

ಪ್ರೇತ ಮದುವೆಯಲ್ಲಿ, ಜೀವಂತ ಇರುವಾಗ ನಡೆಯದಿದ್ದ ಮದುವೆ ಕ್ರಮಗಳನ್ನು ಎರಡೂ ಕುಟುಂಬ ವರ್ಗ ಸೇರಿ ಸಾಂಕೇತಿಕವಾಗಿ ನಡೆಸುತ್ತವೆ. ಮುಂದಿನ ರವಿವಾರ “ಪ್ರೇತ ವರ’ನ ಕಡೆಯವರು “ವಧು’ವಿನ ಮನೆಗೆ ಬರಲಿದ್ದಾರೆ. ಬಳಿಕ ನಾವು ಅವರ ಮನೆಗೆ ಹೋಗುತ್ತೇವೆ. ಬಳಿಕ ನಿಶ್ಚಿತಾರ್ಥ. ಆಟಿಯಲ್ಲಿ ಮದುವೆ ನಿಗದಿಯಾಗಿದೆ ಎನ್ನುತ್ತಾರೆ ಪುತ್ತೂರು ನಿವಾಸಿ.

ಜಾಹೀರಾತು ಹಾಗೂ ಈ ಕುರಿತು ಬಂದ ವರದಿಯಿಂದ ನೂರಾರು ಜನರು ಪೂರಕವಾಗಿ ಸ್ಪಂದಿಸಿದ್ದಾರೆ. ನೂರಾರು ಮಂದಿ ಸಂಪರ್ಕಿಸಿದ್ದರು. ವಿವಿಧ ಮಾಧ್ಯಮಗಳಲ್ಲಿಯೂ ಈ ವಿಚಾರ ಬಂದಿತ್ತು. ಇದು ತುಳುನಾಡಿನ ನಂಬಿಕೆಯ ಆಚರಣೆಯಾಗಿದೆ. ವಿವಿಧ ಸಮಾಜದ ಬಂಧುಗಳು ಪ್ರತಿಕ್ರಿಯಿಸಿದ್ದಾರೆ. ನಮ್ಮ ಮನೆಗೆ ಪ್ರೇತ ವರ ಬೇಕಾಗಿದ್ದ ಹಾಗೆಯೇ ನೂರಾರು ಮನೆಗೆ ವಧು-ವರ ಬೇಕಾಗಿದ್ದ ವಿಚಾರ ಆ ಸಂದರ್ಭ ಬೆಳಕಿಗೆ ಬಂತು. ಈ ಕುರಿತು ಜಾಗೃತಿಯೊಂದು ಮೂಡಿದಂತಾಗಿದೆ ಎನ್ನುತ್ತಾರೆ ಸಂಬಂಧಪಟ್ಟ ಮನೆಯವರು.

ಇದನ್ನೂ ಓದಿ: Mother’s Day: ಆಕೆಗಾಗಿ ಕೊಂಚ ಸಮಯ ನೀಡೋಣ; ತಾಯಂದಿರ ದಿನ ಅರ್ಥಪೂರ್ಣವಾಗಿ ಆಚರಿಸೋಣ

Continue Reading

ಬೆಂಗಳೂರು

Bengaluru News: ಹರಿದಾಸ ಸಾಹಿತ್ಯ ಚಿಂತನೆಯಿಂದ ಬದುಕು ಸುಗಮ: ವಿ. ಅಪ್ಪಣ್ಣ ಆಚಾರ್ಯ

Bengaluru News: ಹರಿಕಥಾಮೃತಸಾರವನ್ನು ರಚನೆ ಮಾಡಿದಂತಹ ಶ್ರೀ ಜಗನ್ನಾಥದಾಸರ ಚಿಂತನೆ ಬಹಳ ವಿಶಾಲವಾದದ್ದು‌.ಅವರ ಕಾರುಣ್ಯ ಮಹತ್ವದ್ದು. ಅವರ ದೂರ ದೃಷ್ಟಿ ಸಮಾಜಮುಖಿಯಾಗಿತ್ತು. ಆದ ಕಾರಣವೇ ಹರಿಕಥಾಮೃತಸಾರ ಕೃತಿಯು ಇಂದಿಗೂ ನಿತ್ಯ ನೂತನವಾಗಿದೆ ಎಂದು ಮಂತ್ರಾಲಯದ ಗುರುಸಾರ್ವಭೌಮ ದಾಸ ಸಾಹಿತ್ಯ ಪ್ರಾಜೆಕ್ಟ್ ನ ಗೌರವ ನಿರ್ದೇಶಕ ವಿದ್ವಾನ್ ಅಪ್ಪಣ್ಣಾಚಾರ್ಯ ತಿಳಿಸಿದ್ದಾರೆ.

VISTARANEWS.COM


on

Sri Vedavyasa Jayanti programme at Bengaluru
Koo

ಬೆಂಗಳೂರು: ಹರಿದಾಸ ಸಾಹಿತ್ಯ ಚಿಂತನೆಯಿಂದ ಬದುಕು ಸುಗಮವಾಗುತ್ತದೆ ಎಂದು ಮಂತ್ರಾಲಯದ ಗುರುಸಾರ್ವಭೌಮ ದಾಸ ಸಾಹಿತ್ಯ ಪ್ರಾಜೆಕ್ಟ್ ನ ಗೌರವ ನಿರ್ದೇಶಕ ವಿದ್ವಾನ್ ಅಪ್ಪಣ್ಣಾಚಾರ್ಯ (Bengaluru News) ಹೇಳಿದರು‌.

ಬೆಂಗಳೂರಿನ ಗಿರಿನಗರದ ಭಂಡಾರಕೇರಿ ಮಠದಲ್ಲಿ ಗುರುವಾರ ಭಾಗವತಾಶ್ರಮ ಪ್ರತಿಷ್ಠಾನ ಮತ್ತು ಲೋಕ ಸಂಸ್ಕೃತಿ ಕಲಾವಿದ್ಯಾ ವಿಕಾಸ ಪ್ರತಿಷ್ಠಾನ ಹಮ್ಮಿಕೊಂಡಿದ್ದ ಗುರು ಶ್ರೀ ವಿದ್ಯಾಮಾನ್ಯ ತೀರ್ಥರ ಆರಾಧನಾ ಮಹೋತ್ಸವ, ಶ್ರೀ ಮಾಧ್ವ ರಾದ್ಧಾತ ಸಂವರ್ಧಕ ಸಭಾದ 81ನೇ ಅಧಿವೇಶನ, ಶ್ರೀ ವೇದವ್ಯಾಸ ಜಯಂತಿ ಸರಣಿಯ 2ನೇ ದಿನದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಇದನ್ನೂ ಓದಿ: Medicine Price: ಗುಡ್‌ ನ್ಯೂಸ್;‌ ಶುಗರ್‌, ಹೃದ್ರೋಗ ಸೇರಿ 41 ಔಷಧಗಳ ಬೆಲೆ ಇಳಿಸಿದ ಮೋದಿ ಸರ್ಕಾರ

ಹರಿದಾಸ ಸಾಹಿತ್ಯದಲ್ಲಿ ಅನುಭವ ಉದ್ಗಾರಗಳ ಚಿಂತನೆ ವಿಷಯ ಕುರಿತು ಪ್ರೌಢ ಉಪನ್ಯಾಸ ನೀಡಿದ ಅವರು, ಹರಿಕಥಾಮೃತಸಾರವನ್ನು ರಚನೆ ಮಾಡಿದಂತಹ ಶ್ರೀ ಜಗನ್ನಾಥದಾಸರ ಚಿಂತನೆ ಬಹಳ ವಿಶಾಲವಾದದ್ದು‌. ಅವರ ಕಾರುಣ್ಯ ಮಹತ್ವದ್ದು. ಅವರ ದೂರ ದೃಷ್ಟಿ ಸಮಾಜಮುಖಿಯಾಗಿತ್ತು. ಆದ ಕಾರಣವೇ ಹರಿಕಥಾಮೃತಸಾರ ಕೃತಿಯು ಇಂದಿಗೂ ನಿತ್ಯ ನೂತನವಾಗಿದೆ ಎಂದು ಹೇಳಿದರು.

ಹರಿಕಥಾಮೃತಸಾರವನ್ನು ಓದಿ ನಾವು ವಿಶಾಲರಾಗಬೇಕು. ಆ ಮೂಲಕ ದೊಡ್ಡವರಾಗಬೇಕು. ಬದುಕನ್ನು ಹಸನ ಮಾಡಿಕೊಳ್ಳಬೇಕು ಎಂದು ಅವರು ವಿವರಿಸಿದರು.

ಇದೇ ಸಂದರ್ಭದಲ್ಲಿ ಅವರು ಬ್ಯಾಗವಟ್ಟಿಯ ನರಸಿಂಹ ದಾಸ ಕುಲಕರ್ಣಿ ಅವರು ನಡೆಸಿದ ಸಮಾಜಮುಖಿ ಚಟುವಟಿಕೆಗಳನ್ನು ವಿವರಿಸಿದರು.

ಮಾನವಿ ಜಗನ್ನಾಥದಾಸರ ಮನೆಯೇ ಮಂದಿರವಾದ ಕಥೆಯನ್ನು ಸುಂದರವಾಗಿ ನಿರೂಪಿಸಿದರು. ಹರಿಕಥಾಮೃತಸಾರ ರಚನೆ ಆದಂತಹ ಸಂದರ್ಭ, ಹಿರಿಯರು ಅವರ ಮೇಲೆ ಮಾಡಿದಂತಹ ಕೃಪೆ ಮತ್ತು ಜಗನ್ನಾಥದಾಸರ ಕಾರುಣ್ಯಗಳನ್ನು ಸಮರ್ಥವಾಗಿ ಅಪ್ಪಣ್ಣಾಚಾರ್ಯರು ವಿವರಿಸಿದರು.

ಭಂಡಾರಕೇರಿ ಮಠದ ಶ್ರೀ ವಿದ್ಯೇಶ ತೀರ್ಥ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು.

ಇದನ್ನೂ ಓದಿ: Udupi News: ಮೂವರು ಸಾಧಕರಿಗೆ ಭಂಡಾರಕೇರಿ ಮಠದ ಪ್ರಶಸ್ತಿ; ಬೆಂಗಳೂರಿನಲ್ಲಿ ಮೇ 20ರಂದು ಪ್ರಶಸ್ತಿ ಪ್ರದಾನ

ಸಂಜೆ ಮಹಾಭಾರತ ಕುರಿತು ವಿವಾದ-ಸಂವಾದ ಕಾರ್ಯಕ್ರಮ ನಡೆಯಿತು. ವಿದ್ವಾನ್ ತಿರುಮಲ ಕುಲಕರ್ಣಿ ಮತ್ತು ವೆಂಕಟೇಶ ಕುಲಕರ್ಣಿ ಅವರು ಹತ್ತು ಹಲವು ವಿಚಾರಗಳ ಬಗ್ಗೆ ಬೆಳಕು ಚೆಲ್ಲಿದರು.

Continue Reading

ಕರ್ನಾಟಕ

Udupi News: ಮೂವರು ಸಾಧಕರಿಗೆ ಭಂಡಾರಕೇರಿ ಮಠದ ಪ್ರಶಸ್ತಿ; ಬೆಂಗಳೂರಿನಲ್ಲಿ ಮೇ 20ರಂದು ಪ್ರಶಸ್ತಿ ಪ್ರದಾನ

Udupi News: ಉಡುಪಿ ಶ್ರೀ ಭಂಡಾರಕೇರಿ ಮಠದ ವಾರ್ಷಿಕ ಪ್ರಶಸ್ತಿಗೆ ಈ ಬಾರಿ ಈರೋಡ್ ವೇದವ್ಯಾಸ ಸಂಸ್ಕೃತ ಗುರುಕುಲ ಸೇರಿದಂತೆ ಇಬ್ಬರು ವಿದ್ವಾಂಸರು ಆಯ್ಕೆಯಾಗಿದ್ದಾರೆ. ವೇದಪೀಠ ಪ್ರಶಸ್ತಿಗೆ ಈರೋಡ್ ವೇದವ್ಯಾಸ ಸಂಸ್ಕೃತ ಗುರುಕುಲ ಆಯ್ಕೆಯಾಗಿದ್ದು, ಹಿರಿಯ ಅಗ್ನಿಹೋತ್ರಿ, ಪ್ರಾಚಾರ್ಯ ದಾಮೋದರಾಚಾರ್ಯರಿಗೆ 1 ಲಕ್ಷ ರೂ. ನಗದು, ಸನ್ಮಾನ ಪತ್ರ, ಸ್ಮರಣಿಕೆ ನೀಡಿ ಗೌರವಿಸಲಾಗುವುದು ಹಾಗೂ ಯುವ ವಿದ್ವಾಂಸರಿಗೆ ಮಠ ನೀಡುವ ಶ್ರೀ ಭಂಡಾರಕೇರಿ ರಾಜಹಂಸ ಪ್ರಶಸ್ತಿಗೆ ಬೆಂಗಳೂರಿನ ಪೂರ್ಣಪ್ರಜ್ಞ ವಿದ್ಯಾಪೀಠದ ಪ್ರಾಧ್ಯಾಪಕ ಮಧ್ವೇಶ ನಡಿಲ್ಲಾಯ, ಶ್ರೀ ಸತ್ಯತೀರ್ಥ ಅನುಗ್ರಹ ಪ್ರಶಸ್ತಿಗೆ ಬಸವನಗುಡಿ ಶ್ರೀ ಜಯತೀರ್ಥ ವಿದ್ಯಾಪೀಠದ ವಿದ್ವಾನ್ ಸತ್ಯಬೋಧಾಚಾರ್ಯ ಹೊನ್ನಾಳಿ ಆಯ್ಕೆ ಗೊಂಡಿದ್ದಾರೆ. ಎರಡೂ ಪ್ರಶಸ್ತಿಗಳು ತಲಾ 50 ಸಾವಿರ ರೂ. ನಗದು, ಸನ್ಮಾನಪತ್ರ, ಸ್ಮರಣಿಕೆ ಒಳಗೊಂಡಿವೆ ಎಂದು ಎಂದು ಭಂಡಾರಕೇರಿ ಮಠಾಧೀಶ ಶ್ರೀ ವಿದ್ಯೇಶತೀರ್ಥ ಸ್ವಾಮೀಜಿ ತಿಳಿಸಿದ್ದಾರೆ.

VISTARANEWS.COM


on

Udupi
ಉಡುಪಿ ಶ್ರೀ ಭಂಡಾರಕೇರಿ ಮಠದ ಪ್ರಶಸ್ತಿಗೆ ಭಾಜನರಾದ ವಿದ್ವಾನ್ ದಾಮೋದರಾಚಾರ್ಯ, ವಿದ್ವಾನ್ ಮಧ್ವೇಶ ನಡಿಲ್ಲಾಯ, ವಿದ್ವಾನ್ ಸತ್ಯಬೋಧಾಚಾರ್ಯ ರಟ್ಟಿಹಳ್ಳಿ.
Koo

ಉಡುಪಿ: ಉಡುಪಿ ಶ್ರೀ ಭಂಡಾರಕೇರಿ ಮಠದ ವಾರ್ಷಿಕ ಪ್ರಶಸ್ತಿಗೆ ಈ ಬಾರಿ ಈರೋಡ್ ವೇದವ್ಯಾಸ ಸಂಸ್ಕೃತ ಗುರುಕುಲ ಸೇರಿದಂತೆ ಇಬ್ಬರು ವಿದ್ವಾಂಸರು ಆಯ್ಕೆಯಾಗಿದ್ದಾರೆ. ವೇದಪೀಠ ಪ್ರಶಸ್ತಿಗೆ ಈರೋಡ್ ವೇದವ್ಯಾಸ ಸಂಸ್ಕೃತ ಗುರುಕುಲ ಆಯ್ಕೆಯಾಗಿದ್ದು, ಹಿರಿಯ ಅಗ್ನಿಹೋತ್ರಿ, ಪ್ರಾಚಾರ್ಯ ದಾಮೋದರಾಚಾರ್ಯರಿಗೆ 1 ಲಕ್ಷ ರೂ. ನಗದು, ಸನ್ಮಾನ ಪತ್ರ, ಸ್ಮರಣಿಕೆ ನೀಡಿ ಗೌರವಿಸಲಾಗುವುದು ಎಂದು ಭಂಡಾರಕೇರಿ ಮಠಾಧೀಶ ಶ್ರೀ ವಿದ್ಯೇಶತೀರ್ಥ ಸ್ವಾಮೀಜಿ (Udupi News) ತಿಳಿಸಿದ್ದಾರೆ.

ಯುವ ವಿದ್ವಾಂಸರಿಗೆ ಮಠ ನೀಡುವ ಶ್ರೀ ಭಂಡಾರಕೇರಿ ರಾಜಹಂಸ ಪ್ರಶಸ್ತಿಗೆ ಬೆಂಗಳೂರಿನ ಪೂರ್ಣಪ್ರಜ್ಞ ವಿದ್ಯಾಪೀಠದ ಪ್ರಾಧ್ಯಾಪಕ ಮಧ್ವೇಶ ನಡಿಲ್ಲಾಯ, ಶ್ರೀ ಸತ್ಯತೀರ್ಥ ಅನುಗ್ರಹ ಪ್ರಶಸ್ತಿಗೆ ಬಸವನಗುಡಿ ಶ್ರೀ ಜಯತೀರ್ಥ ವಿದ್ಯಾಪೀಠದ ವಿದ್ವಾನ್ ಸತ್ಯಬೋಧಾಚಾರ್ಯ ಹೊನ್ನಾಳಿ ಆಯ್ಕೆ ಗೊಂಡಿದ್ದಾರೆ. ಎರಡೂ ಪ್ರಶಸ್ತಿಗಳು ತಲಾ 50 ಸಾವಿರ ರೂ. ನಗದು, ಸನ್ಮಾನಪತ್ರ, ಸ್ಮರಣಿಕೆ ಒಳಗೊಂಡಿವೆ.

ಇದನ್ನೂ ಓದಿ: Money Guide: ಎನ್‌ಪಿಎಸ್‌ಗೆ 15 ವರ್ಷ; ಇಲ್ಲಿದೆ ಯೋಜನೆಯ ಸಂಪೂರ್ಣ ವಿವರ

ಬೆಂಗಳೂರಿನ ಗಿರಿನಗರದ ಭಾಗವತಾಶ್ರಮದಲ್ಲಿ ಮೇ 20ರಂದು ಆಯೋಜಿಸಿರುವ ರಾಷ್ಟ್ರಗುರು ಶ್ರೀ ವೇದವ್ಯಾಸ ಜಯಂತಿ, ಮಾಧ್ವ ರಾದ್ಧಾಂತ ಸಂವರ್ಧಕ ಸಭಾ 81ನೇ ಅಧಿವೇಶನ ಮತ್ತು ಶ್ರೀ ವಿದ್ಯಾಮಾನ್ಯ ತೀರ್ಥರ 24ನೇ ಆರಾಧನೋತ್ಸವದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಇದೇ ಸಂದರ್ಭದಲ್ಲಿ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥರಿಗೆ ಅಭಿನಂದನೆ, ಶ್ರೀ ವಿದ್ಯೇಶತೀರ್ಥರ 70ನೇ ವರ್ಧಂತಿ, ವಿದ್ವಾಂಸರಿಂದ ವಾಕ್ಯಾರ್ಥ ಗೋಷ್ಠಿ, ಶೋಭಾಯಾತ್ರೆ, ನರಸಿಂಹ ಮಂತ್ರಹೋಮವೂ ನೆರವೇರಲಿದೆ ಎಂದು ಶ್ರೀಗಳು ತಿಳಿಸಿದ್ದಾರೆ.

ಪ್ರಶಸ್ತಿಗೆ ಭಾಜನರಾದವರ ಪರಿಚಯ ಹೀಗಿದೆ:

ವಿದ್ವಾನ್ ದಾಮೋದರಾಚಾರ್ಯ

ಪ್ರತಿ ದಿನವೂ ಶಾಸ್ತ್ರ ವಿದ್ಯಾ ಅಧ್ಯಯನ, ಅಧ್ಯಾಪನ, ಅಗ್ನಿಹೋತ್ರ ನಡೆಸುತ್ತಾ, ಸನಾತನ ಭಾರತೀಯ ಪರಂಪರೆಯನ್ನು ಸಂರಕ್ಷಿಸುವ ಮಹತ್ತರ ಜವಾಬ್ದಾರಿಯನ್ನು ಸಂಭ್ರಮದಿಂದಲೇ ನಿರ್ವಹಿಸುತ್ತಿರುವವರು ಈರೋಡಿನ ವಿದ್ವಾನ್ ದಾಮೋದರಾಚಾರ್ಯ. ವಿದ್ವಾನ್ ಪದ್ಮನಾಭಾಚಾರ್ಯ-ಜಾನಕೀಬಾಯಿ ಅವರ ಪುತ್ರರಾದ ಇವರು ತಂದೆಯಿಂದಲೇ ವ್ಯಾಕರಣ, ವೇದ, ಶಾಸ್ತ್ರಗಳನ್ನು ಕಲಿತರು. ಪವಿತ್ರ ಕ್ಷೇತ್ರ ರಂಗದ ಬಳಿಯ ಸಿರುಗಮಣಿ ಎಂಬ ಗ್ರಾಮದಲ್ಲಿ ತಂದೆಯವರೇ ಪ್ರಾರಂಭಿಸಿದ ವೇದರಕ್ಷಣ ವೇದವ್ಯಾಸ ಗುರುಕುಲದಲ್ಲಿ 12 ವರ್ಷ ವೇದ ಅಧ್ಯಯನ ಮಾಡಿದವರು. ನಂತರ ಕಾಂಚೀಪುರದ ಶ್ರೀ ಶಂಕರಾಚಾರ್ಯ ಸಂಸ್ಕೃತ ಪಾಠಶಾಲೆಯಲ್ಲಿ ವೇದಾಂತ, ಘನ, ಐತರೇಯ ಬ್ರಾಹ್ಮಣ, ಗೃಹ್ಯಸೂತ್ರಗಳ ಸಹಿತ ವೇದಾಧ್ಯಯನ ನಡೆಸಿದರು.

ನಂತರ ಮುಂಬೈನ ಶ್ರೀ ಸತ್ಯಧ್ಯಾನ ವಿದ್ಯಾಪೀಠದಲ್ಲಿ ಹಿರಿಯ ವಿದ್ವಾಂಸ ಮಾಹುಲಿ ಗೋಪಾಲಾಚಾರ್ಯ ಮತ್ತು ವಿದ್ಯಾಸಿಂಹಾಚಾರ್ಯರ ಶಿಷ್ಯತ್ವ ಪಡೆದು 8 ವರ್ಷಗಳ ಕಾಲ ದ್ವೈತ ವೇದಾಂತ ಅಧ್ಯಯನ ನಡೆಸಿದರು. ಬಹು ವಿಶೇಷ ಎಂದರೆ ಇವರು ನಿತ್ಯ ಅಗ್ನಿಹೋತ್ರಿಗಳು, ಸೋಮಯಾಜಿಗಳು. ವಾಜಪೇಯ ಮಹಾಯಾಗ ಮಾಡಲು ಸಿದ್ಧರಾಗಿರುವ ಸಿದ್ಧಪುರುಷರು. ತಮ್ಮ ತಂದೆಯರು ಸ್ಥಾಪಿಸಿದ ಗುರುಕುಲವನ್ನು 2000ರಿಂದ ಈರೋಡಿನಲ್ಲಿ ಮುನ್ನಡೆಸುತ್ತಿರುವುದು ಬಹು ವಿಶೇಷ. ಚೆನ್ನೈನಲ್ಲಿರುವ ಶ್ರೀ ಕಾಂಚಿಪುರಂ ವೇದ ರಕ್ಷಣಾ ನಿಧಿ ಟ್ರಸ್ಟ್ ಸಹಾಯ ಪಡೆದು ಗುರುಕುಲವನ್ನು ಸುವ್ಯವಸ್ಥಿತ ವಿದ್ಯಾಕೇಂದ್ರ ಮಾಡಿರುವುದು ಹೆಮ್ಮೆಯ ವಿಚಾರ. ಪ್ರಸ್ತುತ ಎಂಟನೇ ತಂಡದ ವಿದ್ಯಾರ್ಥಿಗಳಿಗೆ ಪಾಠ ಹೇಳುತ್ತಿರುವ ದಾಮೋದರಾಚಾರ್ಯ ನಾಡಿನ ಹಿರಿಮೆ. ಅಪರೂಪದಲ್ಲಿ ಅನುರೂಪ ವ್ಯಕ್ತಿತ್ವ ಹೊಂದಿದವರು.

ಇದನ್ನೂ ಓದಿ: BMW X3 : ಬಿಎಂಡಬ್ಲ್ಯು ಎಕ್ಸ್3 ಎಕ್ಸ್ ಡ್ರೈವ್ 20ಡಿ ಎಂ ಸ್ಪೋರ್ಟ್ ಶಾಡೋ ಎಡಿಷನ್ ಬಿಡುಗಡೆ

ವಿದ್ವಾನ್ ಮಧ್ವೇಶ ನಡಿಲ್ಲಾಯ

ಪೇಜಾವರ ಅಧೋಕ್ಷಜ ಮಠದ ಪೀಠಾಧಿಪತಿ ಶ್ರೀ ವಿಶ್ವಪ್ರಸನ್ನ ತೀರ್ಥರ ಶಿಷ್ಯರು. ಬೆಂಗಳೂರಿನ ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ಅಧ್ಯಯನ ಮಾಡಿದ ಈ ಯುವ ಪ್ರತಿಭೆ, ವಿದ್ಯಾರ್ಥಿ ದಿಸೆಯಲ್ಲಿಯೇ ದೆಹಲಿಯ ರಾಷ್ಟ್ರೀಯ ಸಂಸ್ಕೃತ ಸಂಸ್ಥಾನ ಆಯೋಜಿಸಿದ್ದ ರಾಷ್ಟ್ರ ಮಟ್ಟದ ಸಂಸ್ಕೃತ ಸ್ಪರ್ಧೆಗಳಲ್ಲಿ 7 ಚಿನ್ನದ ಪದಕ, ತಿರುಪತಿಯ ವಿಶ್ವವಿದ್ಯಾಲಯ ಹಮ್ಮಿಕೊಂಡಿದ್ದ ರಾಷ್ಟ್ರ ಮಟ್ಟದ ಸ್ಪರ್ಧೆಗಳಲ್ಲಿ 3 ಚಿನ್ನದ ಪದಕ, ರಾಜ್ಯ ಮಟ್ಟದ ಸಂಸ್ಕೃತ ಸ್ಪರ್ಧೆಗಳಲ್ಲಿ 11 ಚಿನ್ನದ ಪದಕ ಪಡೆದ ಜ್ಞಾನ ಚೇತನ. 2021 ರಲ್ಲಿ ವಿವಿಧ ಮಾಧ್ವ ಪೀಠಾಧಿಪತಿಗಳ ಸಮ್ಮುಖ ಸಮಗ್ರ ಶ್ರೀಮನ್ ನ್ಯಾಯಸುಧಾ ಪರೀಕ್ಷೆ ನೀಡಿ ‘ಸುಧಾ ಪಂಡಿತ’ ಕೀರ್ತಿಗೆ ಭಾಜನರಾದವರು. ಸದ್ಯ ಬೆಂಗಳೂರಿನ ಪ್ರತಿಷ್ಠಿತ ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ಅಧ್ಯಾಪಕರಾಗಿ ಮಧ್ವೇಶ ಕಾರ್ಯನಿರ್ವಹಿಸುತ್ತಿರುವುದು ವಿಶೇಷ.

ವಿದ್ವಾನ್ ಸತ್ಯಬೋಧಾಚಾರ್ಯ ರಟ್ಟಿಹಳ್ಳಿ

ದಾವಣಗೆರೆ ಜಿಲ್ಲೆ ಹೊನ್ನಾಳಿ ಮೂಲದ ಸತ್ಯಬೋಧಾಚಾರ್ಯ ರಟ್ಟಿಹಳ್ಳಿ ಅವರು ಶ್ರೀಧರಾಚಾರ್ಯ ಮತ್ತು ಧನ್ಯಾ ಅವರ ಪುತ್ರ. ದ್ವಿತೀಯ ಮಂತ್ರಾಲಯ ಹೊನ್ನಾಳಿಯಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ ವೃಂದಾವನ ಸೇವೆ ಮಾಡಿ ವಿಶೇಷ ಅನುಗ್ರಹಿತರಾದ ಇವರು ಬೆಂಗಳೂರಿನ ಉತ್ತರಾದಿ ಮಠದ ಶ್ರೀ ಜಯತೀರ್ಥ ವಿದ್ಯಾಪೀಠದಲ್ಲಿ 14 ವರ್ಷ ಅಧ್ಯಯನ ಮಾಡಿದರು. 2012 ರಲ್ಲಿ ಧಾರವಾಡದಲ್ಲಿ ಸುಧಾ ಪರೀಕ್ಷೆ ನೀಡಿ ಸುಧಾ ಪಂಡಿತರೆಂಬ ಕೀರ್ತಿಗೆ ಭಾಜನರಾದವರು.

ಇದನ್ನೂ ಓದಿ: Head Coach: ದ್ರಾವಿಡ್ ಬಳಿಕ ಕೋಚ್ ಹುದ್ದೆ ನಿರಾಕರಿಸಿದ ಟೀಮ್​ ಇಂಡಿಯಾದ ಸ್ಟಾರ್​ ಮಾಜಿ ಆಟಗಾರ

2015ರಲ್ಲಿ ಬೆಂಗಳೂರಿನಲ್ಲಿ ಸಮಗ್ರ ಶ್ರೀಮನ್ ನ್ಯಾಯ ಸುಧಾ ಎಂಬ ಕಠಿಣತಮ ಪರೀಕ್ಷೆ, 2017ರಲ್ಲಿ ಏಕಕಾಲದಲ್ಲಿ ವ್ಯಾಸತ್ರಯಗಳ ಪರೀಕ್ಷೆ ನೀಡಿದ ಪ್ರತಿಭಾ ಪುಂಜ. ಉತ್ತರಾದಿ ಮಠಾಧೀಶ ಶ್ರೀ ಸತ್ಯಾತ್ಮತೀರ್ಥ ಸ್ವಾಮೀಜಿ ಸಾನ್ನಿಧ್ಯದಲ್ಲಿ ಆಯೋಜನೆಗೊಂಡಿದ್ದ ವಿದ್ವತ್ ಸಭೆಯಲ್ಲಿ ಶ್ರೀ ಮನ್ ನ್ಯಾಯಸುಧಾಚಾರ್ಯ ಹಾಗೂ ವ್ಯಾಸತ್ರಯಾಚಾರ್ಯ ಪ್ರಶಸ್ತಿಯನ್ನು ಸ್ವೀಕರಿಸಿದ ಯುವ ಚೇತನ. ತಿರುಪತಿಯಲ್ಲಿ ಖ್ಯಾತ ವಿದ್ವಾಂಸ ದೇವನಾಥಾಚಾರ್ಯರ ಬಳಿ ತರ್ಕ ಮತ್ತು ಮೀಮಾಂಸಾ ಶಾಸ್ತ್ರಗಳ ಅಧ್ಯಯನ ಮಾಡಿ, 2009- 2010ರಲ್ಲಿ ತೆನಾಲಿ ಪರೀಕ್ಷೆಯಲ್ಲೂ ಜಯಭೇರಿ ಬಾರಿಸಿದ ಜ್ಞಾನವಂತ. ವಯಸ್ಸು ಚಿಕ್ಕದಿದ್ದರೂ ಅಧ್ಯಯನ ಮತ್ತು ಅಧ್ಯಾಪನದಲ್ಲಿ ವಿಶೇಷ ಶ್ರದ್ಧೆ ಮತ್ತು ಆಸಕ್ತಿ ಹೊಂದಿದ್ದು, ಗುರುಸೇವೆಯಲ್ಲೇ ಪರಮ ಸುಖ ಕಾಣುವ ಸಾಧಕರಾಗಿರುವುದು ಗಮನಾರ್ಹ. ಪ್ರಸ್ತುತ ಉತ್ತರಾದಿ ಮಠದ ಸುಧಾ ಗ್ರಂಥ ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ಅಂತಿಮ ಹಂತದ ಪರೀಕ್ಷೆಗಾಗಿ ಉನ್ನತ ಮಟ್ಟದ ತರಬೇತಿ ನೀಡುವ ಗುರುತರ ಜವಾಬ್ದಾರಿ ನಿರ್ವಹಣೆ ಮಾಡುತ್ತಿರುವುದು ವಿಶೇಷ.

Continue Reading

ಬೆಂಗಳೂರು

Bengaluru News: ವ್ಯಾಸ-ದಾಸ ಸಾಹಿತ್ಯ ಜ್ಞಾನ ಪ್ರಸಾರಕ್ಕೆ ಮಾನ್ಯತೆ ನೀಡಿ; ಶ್ರೀ ವಿದ್ಯೇಶತೀರ್ಥ ಸ್ವಾಮೀಜಿ

Bengaluru News: ಉಡುಪಿ ಶ್ರೀ ಭಂಡಾರಕೇರಿ ಮಠ, ಲೋಕ ಸಂಸ್ಕೃತಿ ವಿದ್ಯಾ ವಿಕಾಶ ಪ್ರತಿಷ್ಠಾನವು ಬೆಂಗಳೂರಿನ ಗಿರಿನಗರದ ಭಾಗವತ ಕೀರ್ತಿಧಾಮದಲ್ಲಿ ಹಮ್ಮಿಕೊಂಡಿರುವ ರಾಷ್ಟ್ರಗುರು ಶ್ರೀ ವೇದವ್ಯಾಸ ಜಯಂತಿ, ಮಾಧ್ವ ರಾದ್ಧಾಂತ ಸಂವರ್ಧಕ ಸಭಾ 81ನೇ ಅಧಿವೇಶನ ಮತ್ತು ಶ್ರೀ ವಿದ್ಯಾಮಾನ್ಯ ತೀರ್ಥರ 24ನೇ ಆರಾಧನೋತ್ಸವಕ್ಕೆ ಬುಧವಾರ ಶ್ರೀ ವಿದ್ಯೇಶತೀರ್ಥ ಸ್ವಾಮೀಜಿ ವಿಧ್ಯುಕ್ತ ಚಾಲನೆ ನೀಡಿದರು. ಬಳಿಕ ಶ್ರೀಗಳು ಆಶೀರ್ವಚನ ನೀಡಿದರು.

VISTARANEWS.COM


on

Sri Vedavyasa Jayanti Madhva Raddhanta Samvardhak Sabha 81st session at Bengaluru
Koo

ಬೆಂಗಳೂರು: ಉಡುಪಿ ಶ್ರೀ ಭಂಡಾರಕೇರಿ ಮಠ, ಲೋಕ ಸಂಸ್ಕೃತಿ ವಿದ್ಯಾ ವಿಕಾಶ ಪ್ರತಿಷ್ಠಾನವು ನಗರದ (Bengaluru News) ಗಿರಿನಗರದ ಭಾಗವತ ಕೀರ್ತಿಧಾಮದಲ್ಲಿ ಹಮ್ಮಿಕೊಂಡಿರುವ ರಾಷ್ಟ್ರಗುರು ಶ್ರೀ ವೇದವ್ಯಾಸ ಜಯಂತಿ, ಮಾಧ್ವ ರಾದ್ಧಾಂತ ಸಂವರ್ಧಕ ಸಭಾ 81ನೇ ಅಧಿವೇಶನ ಮತ್ತು ಶ್ರೀ ವಿದ್ಯಾಮಾನ್ಯ ತೀರ್ಥರ 24ನೇ ಆರಾಧನೋತ್ಸವಕ್ಕೆ ಬುಧವಾರ ಶ್ರೀ ವಿದ್ಯೇಶತೀರ್ಥ ಸ್ವಾಮೀಜಿ ವಿಧ್ಯುಕ್ತ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಆಶೀರ್ವಚನ ನೀಡಿದ ಶ್ರೀಗಳು, ವ್ಯಾಸ ಮತ್ತು ದಾಸ ಸಾಹಿತ್ಯದಲ್ಲಿರುವ ವಿಶೇಷ ಜ್ಞಾನದ ಅರಿವು ಮೂಡಿದರೆ ಬದುಕು ಸಾರ್ಥಕವಾಗುತ್ತದೆ ಎಂದರು. ವ್ಯಾಸ ಸಾಹಿತ್ಯ ಪ್ರಖರ ಸೂರ್ಯನಂತೆ. ನಾವು ಅದರ ಪ್ರಭೆಯನ್ನು ನೇರವಾಗಿ ಪಡೆಯಲು ಅಸಾಧ್ಯ. ಆದರೆ ಅದೇ ಕಿರಣ ಚಂದ್ರಮಂಡಲದ ಮೇಲೆ ಬಿದ್ದು, (ದಾಸ ಸಾಹಿತ್ಯವಾಗಿ) ನಮಗೆ ಬಂದರೆ ಅದು ಸಂತೋಷ, ನೆಮ್ಮದಿ ಮತ್ತು ಸುಖವನ್ನು ನೀಡಬಲ್ಲದು. ಆದ ಕಾರಣ ಈ ಸಭಾದಲ್ಲಿ ದಾಸ ಸಾಹಿತ್ಯದ ಚಿಂತನ- ಮಂಥನಕ್ಕೆ ವಿಶೇಷ ಆದ್ಯತೆ ನೀಡಲಾಗಿದೆ ಎಂದು ಹೇಳಿದರು.

ಇದನ್ನೂ ಓದಿ: BMW X3 : ಬಿಎಂಡಬ್ಲ್ಯು ಎಕ್ಸ್3 ಎಕ್ಸ್ ಡ್ರೈವ್ 20ಡಿ ಎಂ ಸ್ಪೋರ್ಟ್ ಶಾಡೋ ಎಡಿಷನ್ ಬಿಡುಗಡೆ

ಮಂತ್ರಾಲಯ ದಾಸ ಸಾಹಿತ್ಯ ಪ್ರಾಜೆಕ್ಟ್ ಗೌರವ ನಿರ್ದೇಶಕ ಅಪ್ಪಣ್ಣಾಚಾರ್ಯ, ಮಠದ ಹಿರಿಯ ಸ್ವಯಂಸೇವಕರಾದ ಗೋಪಾಲಕೃಷ್ಣ ಇತರರು ಇದ್ದರು. ಸಂಜೆ ವಾಲ್ಮೀಕಿ ರಾಮಾಯಣದ ವಿವಾದ-ಸಂವಾದದಲ್ಲಿ ವಿದ್ವಾಂಸರಾದ ಕೆ. ಕೃಷ್ಣರಾಜ ಭಟ್ ಮತ್ತು ಬಂಡಿ ಶ್ಯಾಮಾಚಾರ್ಯ ಪಾಲ್ಗೊಂಡಿದ್ದರು. ಮೇ 21ರವರೆಗೆ ನಿತ್ಯ ಶ್ರೀ ಮಠದಲ್ಲಿ ವೈವಿಧ್ಯಮಯ ಕಾರ್ಯಕ್ರಮ ನೆರವೇರಲಿದೆ.

ಏನೇನು ಕಾರ್ಯಕ್ರಮ?

ಮೇ 16ರಂದು ಬೆಳಗ್ಗೆ 9ಕ್ಕೆ ಮಂತ್ರಾಲಯ ದಾಸ ಸಾಹಿತ್ಯ ಪ್ರಾಜೆಕ್ಟ್ ಗೌರವ ನಿರ್ದೇಶಕ ಅಪ್ಪಣ್ಣಾಚಾರ್ಯ ಅವರು ‘ ಹರಿದಾಸ ಸಾಹಿತ್ಯದಲ್ಲಿ ಅನುಭವ ಉದ್ಗಾರಗಳ ಚಿಂತನೆ’ಕುರಿತು ಉಪನ್ಯಾಸ ನೀಡಲಿದ್ದಾರೆ. ಸಂಜೆ 5ಕ್ಕೆ ಪಂಡಿತರಾದ ತಿರುಮಲ ಕುಲಕರ್ಣಿ ಮತ್ತು ವೆಂಕಟೇಶ ಕುಲಕರ್ಣಿ ಅವರು ಮಹಾಭಾರತ- ವಾದ- ಸಂವಾದ- ನಡೆಸಿಕೊಡಲಿದ್ದಾರೆ.

ಮೇ 17ರಂದು ಬೆಳಗ್ಗೆ 9ರಿಂದ 12-ಸಂಜೆ 4ರಿಂದ 6ರವರೆಗೆ ವಾಕ್ಯಾರ್ಥ ಗೋಷ್ಠಿ ಸಂಪನ್ನಗೊಳ್ಳಲಿದೆ. ವಿದ್ವಾನ್ ಪಿ.ಎಸ್. ಶೇಷಗಿರಿ ಆಚಾರ್ ಅಧ್ಯಕ್ಷತೆ ವಹಿಸಲಿದ್ದಾರೆ. ವಿದ್ವಾಂಸರಾದ ವೀರನಾರಾಯಣ ಪಾಂಡುರಂಗಿ, ಸತ್ತಿಗೇರಿ ವಾಸುದೇವ, ಕಟ್ಟಿ ನರಸಿಂಹ ಆಚಾರ್ಯ, ಪ್ರಹ್ಲಾದಾಚಾರ್ಯ ಜೋಷಿ, ಸುಧೀಂದ್ರಾಚಾರ್ಯ, ರಂಗನಾಥ ಗಣಾಚಾರಿ, ನಾಗರಾಜಾಚಾರ್ಯ, ಗುರುರಾಜ ಕಲ್ಕೂರ, ಶ್ರೀನಿವಾಸಮೂರ್ತಿ ಮತ್ತು ಮಾತರಿಶ್ವಾಚಾರ್ಯ ಭಾಗವಹಿಸಲಿದ್ದಾರೆ. ಶ್ರೀ ವಿದ್ಯೇಶತೀರ್ಥ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ.

ಇದನ್ನೂ ಓದಿ: Job Alert: ಗುಡ್‌ನ್ಯೂಸ್‌: 277 ಗ್ರೂಪ್‌ ಬಿ ಹುದ್ದೆಗಳ ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಿಸಿದ ಕೆಪಿಎಸ್‌ಸಿ; ಇಲ್ಲಿದೆ ಹೊಸ ವೇಳಾಪಟ್ಟಿ

ಮೇ 18ರಂದು ವರ್ಧಂತಿ ಮಹೋತ್ಸವ

ಮೇ 18ರಂದು ಶ್ರೀ ವಿದ್ಯೇಶತೀರ್ಥ ಸ್ವಾಮೀಜಿ ಅವರ 70ನೇ ವರ್ಧಂತಿ ಮಹೋತ್ಸವ ಹಮ್ಮಿಕೊಳ್ಳಲಾಗಿದೆ. ಬೆಳಗ್ಗೆ 11ಕ್ಕೆ ವಿವಿಧ ಹೋಮ, ಹರಿಕಥಾಮೃತ ಸಾರ ಪಾರಾಯಣ, ಪೂರ್ಣಪ್ರಜ್ಞ ವಿದ್ಯಾಪೀಠದ ಪ್ರಾಚಾರ್ಯ ಡಾ. ಎಚ್.ವಿ. ಸತ್ಯನಾರಾಯಣರಿಂದ ಉಪನ್ಯಾಸ (ವಾದಿರಾಜ ವಿರಚಿತ ವೈಕುಂಠ ವರ್ಣನೆ), ಸಂಜೆ ವಿವಿಧ ರಂಗದ ಗಣ್ಯರಿಗೆ ಸನ್ಮಾನವಿದೆ.

ಮೇ 19ರಂದು ಶ್ರೀ ವಿದ್ಯಾಮಾನ್ಯರ ಪುಣ್ಯಸ್ಮರಣೆ

ಉಡುಪಿ ಪಲಿಮಾರು- ಭಂಡಾರಕೇರಿ ಉಭಯ ಮಠದ ಪೀಠಾಧೀಶರಾಗಿದ್ದ ಶ್ರೀ ವಿದ್ಯಾಮಾನ್ಯ ತೀರ್ಥರ ಪುಣ್ಯಸ್ಮರಣೆ ಮೇ 19ರಂದು ನೆರವೇರಲಿದೆ. ಬೆಳಗ್ಗೆ 9ಕ್ಕೆ ಶ್ರೀ ವಿದ್ಯೇಶ ವಿಠಲಾಂಕಿತ ಕೃತಿಗಳ ಚಿಂತನ- ಮಂಥನ ನಡೆಯಲಿದ್ದು, ಹಲವು ವಿದ್ವಾಂಸರು ಭಾಗವಹಿಸಲಿದ್ದಾರೆ. ಸಂಜೆ 6ಕ್ಕೆ ಶ್ರೀ ವಿದ್ಯೇಶತೀರ್ಥರಿಂದ ಅನುಗ್ರಹ ಸಂದೇಶವಿದೆ.

ಇದನ್ನೂ ಓದಿ: Money Guide: ಎನ್‌ಪಿಎಸ್‌ಗೆ 15 ವರ್ಷ; ಇಲ್ಲಿದೆ ಯೋಜನೆಯ ಸಂಪೂರ್ಣ ವಿವರ

ಮೇ 20ರಂದು ಶೋಭಾಯಾತ್ರೆ- ಪೇಜಾವರ ಶ್ರೀ ಸಾನ್ನಿಧ್ಯ

ಮೇ 20 ರಂದು ವೇದವ್ಯಾಸ ಜಯಂತಿ ಮತ್ತು ವಿದ್ಯಾಮಾನ್ಯರ ಮಧ್ಯಾರಾಧನೆ ನಿಮಿತ್ತ ಬೆಳಗ್ಗೆ 8ಕ್ಕೆ ಹೋಮ, 9ಕ್ಕೆ ವೇದ ಶಾಸ್ತ್ರ ವಿನೋದ, ಮಧ್ಯಾಹ್ನ 2ಕ್ಕೆ ವಸಂತ ಉತ್ಸವ, ಸಂಜೆ 5ಕ್ಕೆ ಶ್ರೀ ವಿದ್ಯಾಮಾನ್ಯರ ಭಾವಚಿತ್ರ ಶೋಭಾಯಾತ್ರೆ, ಸಂಜೆ 6ಕ್ಕೆ ಸಭಾ ಕಾರ್ಯಕ್ರಮವಿದೆ. ಪೇಜಾವರ ಶ್ರೀ ವಿಶ್ವ ಪ್ರಸನ್ನತೀರ್ಥರು ಸಾನ್ನಿಧ್ಯ ವಹಿಸಲಿದ್ದಾರೆ. ಹಿರಿಯ ವಿದ್ವಾಂಸ ಡಾ. ಆನಂದತೀರ್ಥ ನಾಗಸಂಪಿಗೆ ಉಪನ್ಯಾಸ ನೀಡಲಿದ್ದಾರೆ. ನಂತರ ಮಠದ ವಾರ್ಷಿಕ ಪ್ರಶಸ್ತಿ ಪ್ರದಾನ ನೆರವೇರಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

Continue Reading
Advertisement
Job Alert
ಉದ್ಯೋಗ2 mins ago

Job Alert: ಗಮನಿಸಿ: 277 ಗ್ರೂಪ್‌ ಬಿ ಹುದ್ದೆಗಳ ಅರ್ಜಿ ಸಲ್ಲಿಕೆಗೆ ಮೇ 24 ಕೊನೆಯ ದಿನ

belagavi farmer self harming
ಕ್ರೈಂ5 mins ago

Farmer Self Harming: ಸಾಲ ವಸೂಲಿಗೆ ಹೆಂಡತಿ- ಮಗನಿಗೆ ಗೃಹಬಂಧನ, ಅವಮಾನದಿಂದ ರೈತ ಆತ್ಮಹತ್ಯೆ, ಎಂಥ ರಾಕ್ಷಸಿ ಇವಳು!

Health Benefits Of Tofu
ಆರೋಗ್ಯ7 mins ago

Health Benefits Of Tofu: ಪನೀರ್‌ನಂತೆ ಕಾಣುವ ಈ ಆಹಾರದ ಬಗ್ಗೆ ನಿಮಗೆ ಗೊತ್ತೆ?

2nd PUC Exam 2 Result tomorrow
ಶಿಕ್ಷಣ39 mins ago

2nd PUC Exam 2 Result: ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ-2ರ ಫಲಿತಾಂಶ ಇಂದು; ಸಿಇಟಿ ಫಲಿತಾಂಶ ಯಾವಾಗ?

Karnataka Weather Forecast
ಮಳೆ1 hour ago

Karnataka Weather : ಗರಿಷ್ಠ ತಾಪಮಾನ ಇಳಿಕೆ; ಗುಡುಗು ಸಹಿತ ಭಾರಿ ಮಳೆ ಎಚ್ಚರಿಕೆ

Tea Tips
ಆರೋಗ್ಯ1 hour ago

Tea Tips: ಹಾಲಿನ ಚಹಾ ಬದಲು ಬ್ಲ್ಯಾಕ್‌ ಟೀ ಕುಡಿಯಿರಿ!

Sambita Patra
ದೇಶ2 hours ago

Sambit Patra: ಭಗವಾನ್‌ ಜಗನ್ನಾಥನೇ ಮೋದಿಯ ಭಕ್ತ ಎಂದ ಬಿಜೆಪಿ ನಾಯಕ; ಭುಗಿಲೆದ್ದ ವಿವಾದ

Anti Terrorism Day
ದೇಶ2 hours ago

Anti Terrorism Day: ಇಂದು ಭಯೋತ್ಪಾದನಾ ವಿರೋಧಿ ದಿನ; ಏನು ಈ ದಿನದ ಹಿನ್ನೆಲೆ?

Dina Bhavishya
ಭವಿಷ್ಯ3 hours ago

Dina Bhavishya : ಹೂಡಿಕೆ ವ್ಯವಹಾರದಲ್ಲಿ ಹೆಚ್ಚು ಲಾಭ; ಈ ರಾಶಿಯವರಿಗೆ ಖುಲಾಯಿಸಲಿದೆ ಅದೃಷ್ಟ

Prajwal Revanna Case
ಕರ್ನಾಟಕ8 hours ago

Prajwal Revanna Case: ಪ್ರಜ್ವಲ್ ರೇವಣ್ಣ ಪಾಸ್‌ ಪೋರ್ಟ್ ರದ್ದು ಮಾಡಲು ವಿದೇಶಾಂಗ ಇಲಾಖೆಗೆ ಎಸ್‌ಐಟಿ ಪತ್ರ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ18 hours ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

Karnataka Rain
ಮಳೆ2 days ago

Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

Karnataka rain
ಮಳೆ2 days ago

Karnataka Rain : ವಿಜಯನಗರದಲ್ಲಿ ಸಿಡಿಲಿಗೆ ಜಾನುವಾರು ಬಲಿ; ಬೆಂಗಳೂರು ಸೇರಿ ಹಲವೆಡೆ ಭಾರಿ ಮಳೆ

Karnataka Rain
ಮಳೆ2 days ago

Karnataka Rain: ಧಾರಾಕಾರ ಮಳೆಗೆ ಕಾಂಪೌಂಡ್ ಕುಸಿದು 4 ಬೈಕ್‌ಗಳು ಜಖಂ; ಮದುವೆ ಮಂಟಪಕ್ಕೆ ನುಗ್ಗಿದ ನೀರು‌

Prajwal Revanna Case JDS calls CD Shivakumar pen drive gang
ರಾಜಕೀಯ3 days ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

Karnataka weather Forecast
ಮಳೆ4 days ago

Karnataka Weather : ಮೈಸೂರು, ಮಂಡ್ಯ ಸೇರಿ ಈ 7 ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಂಭವ

Dina Bhavishya
ಭವಿಷ್ಯ4 days ago

Dina Bhavishya : ಈ ರಾಶಿಯ ಪ್ರೇಮಿಗಳಿಗೆ ಮನೆಯಿಂದ ಸಿಗುತ್ತೆ ಗ್ರೀನ್‌ ಸಿಗ್ನಲ್‌

Karnataka Weather Forecast
ಮಳೆ5 days ago

Karnataka Weather : ಭಾರಿ ಮಳೆಗೆ ಕೊಟ್ಟೂರು ಬಸ್ ಸ್ಟ್ಯಾಂಡ್‌ ಜಲಾವೃತ; ‌ ತಾಯಿ-ಮಗ ಗ್ರೇಟ್‌ ಎಸ್ಕೇಪ್‌

Drowned in water
ಹಾಸನ5 days ago

Drowned in water : ಕೆರೆಯಲ್ಲಿ ಈಜಲು ಹೋದ ನಾಲ್ವರು ನೀರುಪಾಲು; ಓರ್ವ ಬಾಲಕ ಪಾರು

Suspicious Case
ಬೆಂಗಳೂರು5 days ago

Suspicious Case : ಬಾತ್‌ ರೂಂನಲ್ಲಿತ್ತು ಕಾಲೇಜು ಹುಡುಗಿ ಡೆಡ್‌ ಬಾಡಿ; ಕುತ್ತಿಗೆ ಕೊಯ್ದು ಸಾಯಿಸಿದವರು ಯಾರು?

ಟ್ರೆಂಡಿಂಗ್‌