ಸೈಕಲ್‌ ಓಡಿಸುತ್ತಿದ್ದ ಗೋರಿಲ್ಲಾ ಕೆಳಗೆ ಬಿದ್ದ ಬಳಿಕ ಮಾಡಿದ್ದೇನು?-ನಗು ತರಿಸುವ ವಿಡಿಯೋ ವೈರಲ್‌ - Vistara News

ವೈರಲ್ ನ್ಯೂಸ್

ಸೈಕಲ್‌ ಓಡಿಸುತ್ತಿದ್ದ ಗೋರಿಲ್ಲಾ ಕೆಳಗೆ ಬಿದ್ದ ಬಳಿಕ ಮಾಡಿದ್ದೇನು?-ನಗು ತರಿಸುವ ವಿಡಿಯೋ ವೈರಲ್‌

Viral Video: ಗೋರಿಲ್ಲಾಗಳು ಸೈಕಲ್‌ ಓಡಿಸುವ ದೃಶ್ಯ ನೋಡಲು ಸಿಗುವುದೇ ಅಪರೂಪ. ಅಂಥದ್ದರಲ್ಲಿ ಈ ಗೋರಿಲ್ಲಾ ಬಿದ್ದ ಬಳಿಕ ಮಾಡಿದ ಕೆಲಸ ನೋಡಿ ನೆಟ್ಟಿಗರು ನಗುತ್ತಿದ್ದಾರೆ.

VISTARANEWS.COM


on

Gorilla
ಸೈಕಲ್‌ ಓಡಿಸಲು ಹೋಗಿ ಬಿದ್ದ ಗೋರಿಲ್ಲಾ
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಗೋರಿಲ್ಲಾಗಳು ಮನುಷ್ಯರಂತೆ ಎರಡು ಕಾಲುಗಳ ಮೇಲೆ ಓಡಾಡಬಲ್ಲವು. ಮುಂದಿನ ಎರಡು ಕಾಲುಗಳನ್ನು ಕೈಗಳಂತೆ ಬಳಸಿಕೊಳ್ಳಬಲ್ಲವು. ಆದರೆ ಗೋರಿಲ್ಲಾಗಳು ಯಾವಾಗಲಾದರೂ ಸೈಕಲ್‌ ಹೊಡೆದಿದ್ದನ್ನು ನೋಡಿದ್ದೀರಾ? ಹಾಗೊಮ್ಮೆ ನೋಡಿರದೆ ಇದ್ದರೆ ಇಲ್ಲಿರುವ ವಿಡಿಯೋ ನೋಡಿ. ಗೋರಿಲ್ಲಾವೊಂದು ಹೇಗೆ ಸೈಕಲ್‌ ರೈಡ್‌ ಮಾಡುತ್ತದೆ ಮತ್ತು ಅದರಿಂದ ಕೆಳಗೆ ಬಿದ್ದ ತಕ್ಷಣ ಅದೇನು ಮಾಡಿತು?! ಎಂಬುದನ್ನು. ವಿಡಿಯೋವನ್ನು ಐಎಫ್‌ಎಸ್‌ ಅಧಿಕಾರಿ ಡಾ. ಸಾಮ್ರಾಟ್‌ ಗೌಡ ಎಂಬುವರು ಶೇರ್‌ ಮಾಡಿಕೊಂಡಿದ್ದಾರೆ.

ದೊಡ್ಡದಾದ ಗೋರಿಲ್ಲಾವೊಂದು ಸೈಕಲ್‌ ಹೊಡೆಯುತ್ತ ಫುಲ್‌ ಖುಷಿಯಲ್ಲಿ ಬರುತ್ತದೆ. ಆದರೆ ಕೆಲವೇ ದೂರ ಸಾಗುವಷ್ಟರಲ್ಲಿ ನಿಯಂತ್ರಣ ಕಳೆದುಕೊಂಡು ಬೀಳುತ್ತದೆ. ತಾನು ಬಿದ್ದಿದ್ದಕ್ಕೆ ಬೇಸರ-ಕೋಪಗೊಂಡ ಅದು, ಆ ಸೈಕಲ್‌ನ್ನೇ ಎತ್ತಿ ದೂರ ಬಿಸಾಕುತ್ತದೆ. ಈ ಕ್ಯೂಟ್‌ ವಿಡಿಯೋ ನೋಡಿದರೆ ನಗು ಬಾರದೆ ಇರದು.

65 ಸಾವಿರಕ್ಕೂ ಅಧಿಕ ವೀವ್ಸ್‌ ಕಂಡಿರುವ ವಿಡಿಯೋಕ್ಕೆ ನೆಟ್ಟಿಗರು ಫುಲ್‌ ಫನ್ನಿ ಕಮೆಂಟ್‌ಗಳನ್ನೇ ಹಾಕಿದ್ದಾರೆ. ʼಈ ಸೈಕಲ್‌ ಒಂದು ಮೂರ್ಖ, ನನ್ನನ್ನೇ ಕೆಡವಲು ಅದಕ್ಕೆಷ್ಟು ಧೈರ್ಯ ಇರಬಹುದುʼ ಎಂಬ ಭಾವ ಚಿಂಪಾಂಜಿಯದ್ದು ಎಂದು ಒಬ್ಬರು ಹೇಳಿದ್ದರೆ, ಇನ್ನೊಬ್ಬರು, ʼಆ ಗೋರಿಲ್ಲಾಕ್ಕೆ ಇನ್ನೂ ಉತ್ತಮವಾದ, ಆರಾಮದಾಯಕವಾದ ಸೈಕಲ್‌ ಕೊಡೋಣʼ ಎಂದು ಹೇಳಿದ್ದಾರೆ.

ಇದನ್ನೂ ಓದಿ: Viral Video: ಉಸಿರಾಡಲಾಗದೆ ಎಚ್ಚರ ತಪ್ಪಿದ್ದ ನಾಯಿಗೆ ಆತ ಜೀವ ತುಂಬಿದ; ಮನ ಮಿಡಿಯುವ ದೃಶ್ಯ ಇದು

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ವೈರಲ್ ನ್ಯೂಸ್

Vicky Pedia: ʻಬಿಸಿ ಗಾಳಿ.. ಬಿಸಿ ಗಾಳಿ.. ಸಹಿ ಹಾಕಿದೆ ಬಿಸಿಲಿನಲಿʼಎಂದು ಹಾಡಿದ ವಿಕಾಸ್ ವಿಕ್ಕಿಪಿಡಿಯ: ಫ್ಯಾನ್ಸ್‌ ಫಿದಾ!

Vicky Pedia: ʻಆ ದಿನಗಳುʼ ಸಿನಿಮಾದ ಸಿಹಿ ಗಾಳಿ ಸಿಹಿ ಗಾಳಿ ಸಹಿ ಹಾಕಿದೆ ಮನಸಿನಲ್ಲಿ ಹಾಡಿನ ಟ್ಯೂನ್‌ ಬಳಸಿಕೊಂಡು ವಿಡಿಯೊವೊಂದನ್ನು ಶೇರ್‌ ಮಾಡಿಕೊಂಡಿದ್ದಾರೆ. ಇದೀಗ ತಂಡದ ಕ್ರಿಯೇಟಿವಿಟಿ ಲೆವಲ್‌ಗೆ ನೋಡುಗರು ಫಿದಾ ಆಗಿದ್ದಾರೆ. ವಿಕ್ಕಿಪೀಡಿಯಾ ಖ್ಯಾತಿಯ (Vicky Pedia) ವಿಕಾಸ್‌ (vickypedia) ಕಂಟೆಂಟ್ ಕ್ರಿಯೇಟರ್. ವಿಡಿಯೊದಲ್ಲಿ ವಿಕ್ಕಿಪೀಡಿಯಾ ವಿಕ್ಕಿ ಪಿಂಕ್‌ ವಿಗ್‌ ಧರಿಸಿ ಈ ರೀತಿಯ ಕ್ರಿಯೇಟಿವ್‌ ರೀಲ್ಸ್‌ ಹಂಚಿಕೊಳ್ಳುತ್ತಲೇ ಇರುತ್ತಾರೆ.

VISTARANEWS.COM


on

Vicky Pedia New reels about heat in Karnataka
Koo

ಬೆಂಗಳೂರು: ರಾಜ್ಯದಲ್ಲಿ ಅಲ್ಲಲ್ಲಿ ಸುರಿಯುತ್ತಿದ್ದ ಮಳೆಯು, ಕಳೆದ ನಾಲ್ಕೈದು ದಿನಗಳಿಂದ ಕಣ್ಮರೆಯಾಗಿದ್ದರಿಂದ ಹಲವೆಡೆ ಗರಿಷ್ಠ ತಾಪಮಾನ ದಾಖಲಾಗುತ್ತಿದೆ. ರಾಜಧಾನಿಯಲ್ಲಿ ದಿನದಿಂದ ದಿನಕ್ಕೆ ಗರಿಷ್ಠ ತಾಪಮಾನ ದಾಖಲಾಗುತ್ತಿದೆ.  ಹೀಗಿರುವಾಗ ಇದೇ ಟಾಪಿಕ್‌ ಇಟ್ಟುಕೊಂಡು ವಿಕಾಸ್ ವಿಕ್ಕಿಪಿಡಿಯ (Vicky Pedia) ತಂಡ ಹೊಸ ರೀಲ್ಸ್‌ವೊಂದು ಶೇರ್‌ ಮಾಡಿಕೊಂಡಿದೆ. ʻಆ ದಿನಗಳುʼ ಸಿನಿಮಾದ ಸಿಹಿ ಗಾಳಿ ಸಿಹಿ ಗಾಳಿ ಸಹಿ ಹಾಕಿದೆ ಮನಸಿನಲ್ಲಿ ಹಾಡಿನ ಟ್ಯೂನ್‌ ಬಳಸಿಕೊಂಡು ವಿಡಿಯೊವೊಂದನ್ನು ಶೇರ್‌ ಮಾಡಿಕೊಂಡಿದ್ದಾರೆ. ಇದೀಗ ತಂಡದ ಕ್ರಿಯೇಟಿವಿಟಿ ಲೆವಲ್‌ಗೆ ನೋಡುಗರು ಫಿದಾ ಆಗಿದ್ದಾರೆ.

“ಬಿಸಿ ಗಾಳಿ ಬಿಸಿ ಗಾಳಿ ಸಹಿ ಹಾಕಿದೆ ಬಿಸಿಲಿನಲಿ..
BURN ಆಯ್ತು
Sweat ಆಯ್ತು
ಕೈ ಕಾಲು HEATನಲಿ
ಸೂರ್ಯ ಬಂದರೆ ಸಾಕು ದಿನವೂ ಬೆವರಲೇ ಬೇಕು
ನೀರು ಖಾಲಿ ಆಗೈತೆ..ತುಂಬಸೋಣ ಬಾ..ʼʼಎಂದು ರೀಲ್ಸ್‌ ಶೇರ್‌ ಮಾಡಿಕೊಂಡಿದ್ದಾರೆ. ಇದೀಗ ಈ ವಿಡಿಯೊ ವೈರಲ್‌ ಆಗುತ್ತಿದ್ದಂತೆ ʻʻಅಷ್ಟು ಬಿಸಿಲು ಇದ್ರೂ ಶಾಲು ಬೇಕಾʼʼಎಂದು ಒಬ್ಬರು ಕಮೆಂಟ್‌ ಮಾಡಿದ್ದಾರೆ. ಮತ್ತೊಬ್ಬರು ʻʻಹಂಸಲೇಖ ಅವ್ರು ಹಿಂಗ್ ಬರ್ಯಲ್ಲ ಗುರುʼʼ ಎಂದು ಕಮೆಂಟ್‌ ಮಾಡಿದ್ದಾರೆ.

ತಮ್ಮ ವಿಭಿನ್ನ ಕಾಮಿಡಿ ವಿಡಿಯೊಗಳಿಂದ ವಿಡಿಯೊ ಕ್ರಿಯೇಟರ್ ವಿಕಾಸ್ ( ವಿಕ್ಕಿ ಪೀಡಿಯಾ) (Vicky Pedia) ಆಗಾಗ ಸುದ್ದಿಯಾಗುತ್ತಲೇ ಇರುತ್ತಾರೆ. ಇತ್ತೀಚಿನ ʻನಾನು ನಂದಿನಿʼ ಹಾಡಿಗೆ ರೀಲ್ಸ್‌ ಮಾಡಿ ಸಖತ್‌ ಫೇಮಸ್‌ ಆಗಿದ್ದರು. ವಿಕ್ಕಿಪೀಡಿಯಾ ಖ್ಯಾತಿಯ (Vicky Pedia) ವಿಕಾಸ್‌ (vickypedia) ಕಂಟೆಂಟ್ ಕ್ರಿಯೇಟರ್. ವಿಡಿಯೊದಲ್ಲಿ ವಿಕ್ಕಿಪೀಡಿಯಾ ವಿಕ್ಕಿ ಪಿಂಕ್‌ ವಿಗ್‌ ಧರಿಸಿ ಈ ರೀತಿಯ ಕ್ರಿಯೇಟಿವ್‌ ರೀಲ್ಸ್‌ ಹಂಚಿಕೊಳ್ಳುತ್ತಲೇ ಇರುತ್ತಾರೆ.

ಇದನ್ನೂ ಓದಿ: Vicky Pedia: ಕರ್ನಾಟಕದಲ್ಲಿ ಬರಗಾಲ: ʻಓ ನಲ್ಲ ನೀರಿಲ್ಲʼ ಎಂದ ವಿಕಾಸ್ ವಿಕ್ಕಿಪಿಡಿಯ!

ವಿಕ್ಕಿಪೀಡಿಯಾ ಖ್ಯಾತಿಯ (Vicky Pedia) ವಿಕಾಸ್‌ (vickypedia) ಕಂಟೆಂಟ್ ಕ್ರಿಯೇಟರ್. ಭಾಷಣ ಟ್ರಾನ್ಸ್‌ಲೇಟ್‌ ವಿಡಿಯೊ ಅಣಕ ಮಾಡಿ ಇವರು ಸಾಕಷ್ಟು ಫೇಮಸ್ ಆಗಿದ್ದರು. ಚುನಾವಣಾ ಸಮಯದಲ್ಲಿ ರಾಷ್ಟ್ರಮಟ್ಟದ ನಾಯಕರ ಹಿಂದಿ ಭಾಷೆಯ ಭಾಷಣವನ್ನು ಸಖತ್‌ ಆಗಿ ಕಾಮಿಡಿಯಾಗಿ ಅಣುಕಿಸಿದ್ದರು.

ಮೇ 8 ರಿಂದ ಎರಡು ದಿನಗಳ ಕಾಲ ದಕ್ಷಿಣ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಭಾರಿ ಮಳೆ ಬೀಳುವ ಸಂಭವವಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ತುಮಕೂರಲ್ಲಿ ಮೇ 8 ರಿಂದ ಮೇ 10ರವರೆಗೆ ಬಿರುಸಾಗಿ ಮಳೆ ಬೀಳುವ ಸಾಧ್ಯತೆ ಇದೆ. ಇನ್ನು ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡದಲ್ಲಿ ಮೇ 9ರಿಂದ ಮುಂದಿನ ಎರಡು ದಿನ ಸಾಧಾರಣ ಪ್ರಮಾಣದಲ್ಲಿ ಮಳೆಯಾಗಲಿದೆ ಎಂದು ವರದಿಯಾಗಿದೆ.

Continue Reading

ವೈರಲ್ ನ್ಯೂಸ್

Viral News: ಅಣ್ಣನ ಕತ್ತು ಸೀಳಿದ ತಂಗಿ; ಮೊಬೈಲ್‌ಗಾಗಿ ನಡೀತು ಘೋರ ಕೃತ್ಯ

Viral News:14ವರ್ಷದ ಬಾಲಕಿ ಆಗಾಗ ಮೊಬೈಲ್‌ನಲ್ಲಿ ಯಾರೋ ಹುಡುಗನ ಜೊತೆ ಮಾತನಾಡುತ್ತಿದ್ದಳು. ಇದನ್ನು ಗಮನಿಸಿದ ಆಕೆಯ ಅಣ್ಣ(18) ಆಕ್ಷೇಪ ವ್ಯಕ್ತಪಡಿಸಿದ್ದಾನೆ. ಈ ವೇಳೆ ಇಬ್ಬರು ನಡುವೆ ಜಗಳ ಆಗಿತ್ತು. ಇನ್ನು ಮುಂದೆ ಮೊಬೈಲ್‌ ಬಳಸದಂತೆ ಅಣ್ಣ ಖಡಕ್‌ ಆಗಿ ವಾರ್ನ್‌ ಮಾಡಿ ಮೊಬೈಲ್‌ ಕಿತ್ತುಕೊಂಡಿದ್ದ. ಇದರಿಂದ ಕೋಪಗೊಂಡಿದ್ದ ಬಾಲಕಿ ತಾಯಿ ಮನೆಯಲ್ಲಿಲ್ಲದ ವೇಳೆ ಕೊಡಲಿಯಿಂದ ಮಲಗಿದ್ದ ಅಣ್ಣನ ಕುತ್ತಿಗೆಗೆ ಬೀಸಿದ್ದಾಳೆ. ಗಂಭೀರವಾಗಿ ಗಾಯಗೊಂಡಿದ್ದ ಯುವಕ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾನೆ.

VISTARANEWS.COM


on

Viral News
Koo

ಛತೀಸ್‌ಗಡ: ಈಗಿನ ಮಕ್ಕಳು ಎಷ್ಟು ಮೊಬೈಲ್‌(Mobile)ಗೆ ಅಡಿಕ್ಟ್‌ ಆಗಿರುತ್ತಾರೆ ಎಂದರೆ ಕೆಲವೊಮ್ಮೆ ದೊಡ್ಡ ದೊಡ್ಡ ಅನಾಹುತಕ್ಕೆ ಎಡೆಮಾಡಿಕೊಡುತ್ತದೆ. ಮೊಬೈಲ್‌ ಮೋಹಕ್ಕೆ ಬಿದ್ದು ತಮಗೂ ಅಪಾಯ ಮಾಡಿಕೊಳ್ಳುವುದು ಮಾತ್ರವಲ್ಲದೇ ಜೊತೆಗಿರುವವರನ್ನೂ ಅಪಾಯಕ್ಕೊಡ್ಡುತ್ತಾರೆ. ಇದೀಗ ಅಂತಹದ್ದೇ ಒಂದು ಘಟನೆ(Viral News) ಛತ್ತೀಸ್‌ಗಡ(Chhattisgarh)ದಲ್ಲಿ ನಡೆದಿದ್ದು, ಮೊಬೈಲ್‌ ಬಳಕೆಗೆ ಅಡ್ಡಿಯಾಗಿದ್ದನೆಂದು ಸ್ವತಃ ಅಣ್ಣನನ್ನೇ ತಂಗಿಯೊಬ್ಬಳು ಹೊಡೆದು ಕೊಂದಿದ್ದಾಳೆ.

ಏನಿದು ಘಟನೆ?

ಖೈರಗಢ-ಚುಯಿಖಾದನ್-ಗಂಡೈ ಜಿಲ್ಲೆಯ ಅಮ್ಲಿಧಿಕಾಲ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, 14ವರ್ಷದ ಬಾಲಕಿ ಆಗಾಗ ಮೊಬೈಲ್‌ನಲ್ಲಿ ಯಾರೋ ಹುಡುಗನ ಜೊತೆ ಮಾತನಾಡುತ್ತಿದ್ದಳು. ಇದನ್ನು ಗಮನಿಸಿದ ಆಕೆಯ ಅಣ್ಣ(18) ಆಕ್ಷೇಪ ವ್ಯಕ್ತಪಡಿಸಿದ್ದಾನೆ. ಈ ವೇಳೆ ಇಬ್ಬರು ನಡುವೆ ಜಗಳ ಆಗಿತ್ತು. ಇನ್ನು ಮುಂದೆ ಮೊಬೈಲ್‌ ಬಳಸದಂತೆ ಅಣ್ಣ ಖಡಕ್‌ ಆಗಿ ವಾರ್ನ್‌ ಮಾಡಿ ಮೊಬೈಲ್‌ ಕಿತ್ತುಕೊಂಡಿದ್ದ. ಇದರಿಂದ ಕೋಪಗೊಂಡಿದ್ದ ಬಾಲಕಿ ತಾಯಿ ಮನೆಯಲ್ಲಿಲ್ಲದ ವೇಳೆ ಕೊಡಲಿಯಿಂದ ಮಲಗಿದ್ದ ಅಣ್ಣನ ಕುತ್ತಿಗೆಗೆ ಬೀಸಿದ್ದಾಳೆ. ಗಂಭೀರವಾಗಿ ಗಾಯಗೊಂಡಿದ್ದ ಯುವಕ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾನೆ.

ಘಟನೆ ಬಳಿಕ ಸ್ನಾನ ಮಾಡಿದ ಬಾಲಕಿ ತನ್ನ ಬಟ್ಟೆ ಮೇಲಿದ್ದ ರಕ್ತದ ಕಲೆಯನ್ನು ಸ್ವಚ್ಛ ಮಾಡಿದ್ದಳು. ಇದಾದ ಬಳಿಕ ತನ್ನ ಅಣ್ಣನನ್ನು ಯಾರೋ ಕೊಲೆ ಮಾಡಿದ್ದಾರೆಂದು ಬಾಲಕಿ ನೆರೆಮನೆಯವರಿಗೆ ತಿಳಿಸಿದ್ದಾಳೆ. ತಕ್ಷಣ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸರು ಬಾಲಕಿಯನ್ನು ವಿಚಾರಣೆ ನಡೆಸಿದಾಗ ತಾನೇ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾಳೆ. ಆಕೆಯ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಕೆಲವು ದಿನಗಳ ಹಿಂದೆ ಬಾಲಕಿಯ ಹೆತ್ತವರು ಆಕೆಯ ಬಳಿ ಇದ್ದ ಮೊಬೈಲ್ ಫೋನ್ ಕಿತ್ತುಕೊಂಡಿದ್ದರು. ವಾಪಸ್ ಕೊಡೋದಿಲ್ಲ ಎಂದು ಕಟ್ಟುನಿಟ್ಟಾಗಿ ಹೇಳಿದ್ದರು. ಏಕೆಂದರೆ, 13 ವರ್ಷದ ಬಾಲಕಿ ಇಡೀ ದಿನ ಮೊಬೈಲ್ ಫೋನ್‌ನಲ್ಲೇ ಮುಳುಗಿರುತ್ತಿದ್ದಳು. ಸ್ನೇಹಿತರ ಜೊತೆ ಚಾಟ್ ಮಾಡೋದು, ಆನ್‌ಲೈನ್ ಸ್ನೇಹಿತರ ಜೊತೆ ಮಾತುಕತೆ ನಡೆಸೋದು, ಸೋಷಿಯಲ್ ಮೀಡಿಯಾಗಳಲ್ಲಿ ರೀಲ್ಸ್‌ ನೋಡೋದು.. ಹೀಗೆ ಇಡೀ ದಿನ ಮೊಬೈಲ್‌ನಲ್ಲೇ ಮುಳುಗಿರುತ್ತಿದ್ದ ಬಾಲಕಿ, ಓದುತ್ತಲೇ ಇರಲಿಲ್ಲ. ಇನ್ನು ಕುಟುಂಬಸ್ಥರ ಜೊತೆಗೂ ಆಕೆ ಬೆರೆಯುತ್ತಿರಲಿಲ್ಲ.

ಇದನ್ನೂ ಓದಿ:Viral Video: ಯುವಕನನ್ನು ಹಿಗ್ಗಾಮುಗ್ಗಾ ಥಳಿಸಿ ಕೊಂದೇ ಬಿಟ್ಟ ಜನ; ಶಾಕಿಂಗ್‌ ವಿಡಿಯೋ ವೈರಲ್‌

ಈ ಎಲ್ಲಾ ಕಾರಣಗಳಿಂದಾಗಿ ಮಗಳಿಂದ ಮೊಬೈಲ್ ಕಸಿದುಕೊಂಡಿದ್ದ ಪೋಷಕರಿಗೆ ತಮ್ಮ ಮಗಳು ತಮ್ಮ ವಿರುದ್ದವೇ ಸಂಚು ಮಾಡಬಹುದು, ತಮ್ಮ ಕೊಲೆಗೆ ಯತ್ನಿಸಬಹುದು ಎಂಬ ಸಂಗತಿ ಗೊತ್ತಾಗಿದ್ದೇ ತಡ, ಶಾಕ್‌ಗೆ ಒಳಗಾಗಿದ್ದಾರೆ. ಕೇವಲ ಮೊಬೈಲ್ ಫೋನ್ ಕೊಡಲಿಲ್ಲ ಅನ್ನೋ ಕಾರಣಕ್ಕೆ ಹೆತ್ತವರ ಹತ್ಯೆಗೆ ಪುಟಾಣಿ ಬಾಲಕಿ ಸಂಚು ರೂಪಿಸಿದ ವಿಚಾರ ಅಭಯಂ ಹೆಲ್ಪ್‌ಲೈನ್ ಸಿಬ್ಬಂದಿಯನ್ನೂ ದಂಗು ಬಡಿಸಿದೆ!

Continue Reading

ವೈರಲ್ ನ್ಯೂಸ್

Viral Video: ಯುವಕನನ್ನು ಹಿಗ್ಗಾಮುಗ್ಗಾ ಥಳಿಸಿ ಕೊಂದೇ ಬಿಟ್ಟ ಜನ; ಶಾಕಿಂಗ್‌ ವಿಡಿಯೋ ವೈರಲ್‌

Viral Video: ಗುರು ಗ್ರಂಥ ಸಾಹೀಬ್‌ ಗ್ರಂಥದ ಪುಟಗಳನ್ನು ಹರಿದು ಭಕ್ಷೀಸ್‌ ಅಲ್ಲಿಂದ ಪರಾರಿಯಾಗಲು ಯತ್ನಿಸಿದ್ದ. ಆಗ ಕೆಲವು ಜನರ ಗುಂಪು ಆತನನ್ನು ಹಿಡಿದಿದ್ದಾರೆ. ಈ ಸುದ್ದಿ ಕಾಡ್ಗಿಚ್ಚಿನಂತೆ ಇಡೀ ಗ್ರಾಮಕ್ಕೆ ಹಬ್ಬಿತ್ತು. ತಕ್ಷಣ ಅನೇಕ ಗ್ರಾಮಸ್ಥರು ಸ್ಥಳಕ್ಕೆ ದೌಡಾಯಿಸಿ ಭಕ್ಷೀಸ್‌ನನ್ನು ಮನಬಂದಂತೆ ಥಳಿಸಿದ್ದಾರೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಭಕ್ಷೀಸ್‌ ಸ್ಥಳದಲ್ಲೇ ಅಸುನೀಗಿದ್ದಾನೆ.

VISTARANEWS.COM


on

Viral Video
Koo

ಪಂಜಾಬ್‌: ಸಿಖ್ಖರ ಪವಿತ್ರ ಗ್ರಂಥವನ್ನು ಹರಿದು ಹಾಕಿದನೆಂದು 19 ವರ್ಷದ ಯುವಕನನ್ನು ಜನ ಹೊಡೆದು ಕೊಂದಿರುವ ಘಟನೆ ಪಂಜಾಬ್‌(Panjab)ನಲ್ಲಿ ನಡೆದಿದೆ. ಬಂದಾಳ ಗ್ರಾಮದಲ್ಲಿರುವ ಗುರುದ್ವಾರದ ಬಳಿ ಈ ಘಟನೆ ನಡೆದಿದ್ದು, ತಲ್ಲಿ ಗುಲಾಮ್‌ ಗ್ರಾಮದ ನಿವಾಸಿಯಾಗಿದ್ದ ಭಕ್ಷೀಸ್‌ ಸಿಂಗ್‌ ಎಂಬ ಯುವಕ ಗುರುದ್ವಾರ(Gurudwara)ಕ್ಕೆ ಪ್ರವೇಶಿಸುತ್ತಿದ್ದಂತೆ ಗುರು ಗ್ರಂಥ ಸಾಹೀಬ್‌ ಪುಸ್ತಕ(Guru Granth Sahib)ದ ಕೆಲವೊಂದು ಪುಟಗಳನ್ನು ಹರಿದು ಹಾಕಿದ್ದಾನೆ. ಇದರಿಂದ ಅಲ್ಲದೇ ಇದ್ದ ಜನರು ಕೋಪಗೊಂಡು ಆತನನ್ನು ಚೆನ್ನಾಗಿ ಥಳಿಸಿದ್ದಾರೆ. ಪರಿಣಾಮವಾಗಿ ಆತನ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾನೆ. ಘಟನೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌(Viral Video) ಆಗಿದ್ದು, ಹಲವೆಡೆ ಖಂಡನೆ ವ್ಯಕ್ತವಾಗಿದೆ.

ಮಾನಸಿಕ ಅಸ್ವಸ್ಥ ಎಂದ ತಂದೆ

ಘಟನೆ ಬಗ್ಗೆ ಭಕ್ಷೀಸ್‌ ಸಿಂಗ್‌ ತಂದೆ ಲಖ್ವಿಂದರ್‌ ಸಿಂಗ್‌ ಪ್ರತಿಕ್ರಿಯಿಸಿದ್ದು, ತಮ್ಮ ಮಗ ಮಾನಸಿಕ ಅಸ್ವಸ್ಥನಾಗಿದ್ದು, ಆತನಿಗೆ ಚಿಕಿತ್ಸೆ ನೀಡಲಾಗುತ್ತಿತ್ತು ಎಂದು ಹೇಳಿದ್ದಾರೆ. ಘಟನೆ ಬಗ್ಗೆ ಅವರು ಪೊಲೀಸರಿಗೆ ದೂರು ನೀಡಿದ್ದು, ತನಿಖೆ ಮುಂದುವರೆದಿದೆ. ಇನ್ನು ತಮ್ಮ ಮಗನನ್ನು ಹತ್ಯೆ ಮಾಡಿರುವವರ ವಿರುದ್ಧ ಕೇಸ್‌ ದಾಖಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಅಪರಾಧಿಗಳಿಗೆ ಕಠಿಣ ಶಿಕ್ಷೆಯಾಗುವ ಮೂಲಕ ಮಗನ ಸಾವಿಗೆ ನ್ಯಾಯ ಒದಗಿಸಿಕೊಡಬೇಕು ಎಂದು ಆಗ್ರಹಿಸಿದ್ದಾರೆ.

ಪೊಲೀಸರು ಹೇಳೋದೇನು?

ಪೊಲೀಸರ ಮಾಹಿತಿ ಪ್ರಕಾರ ಗುರು ಗ್ರಂಥ ಸಾಹೀಬ್‌ ಗ್ರಂಥದ ಪುಟಗಳನ್ನು ಹರಿದು ಭಕ್ಷೀಸ್‌ ಅಲ್ಲಿಂದ ಪರಾರಿಯಾಗಲು ಯತ್ನಿಸಿದ್ದ. ಆಗ ಕೆಲವು ಜನರ ಗುಂಪು ಆತನನ್ನು ಹಿಡಿದಿದ್ದಾರೆ. ಈ ಸುದ್ದಿ ಕಾಡ್ಗಿಚ್ಚಿನಂತೆ ಇಡೀ ಗ್ರಾಮಕ್ಕೆ ಹಬ್ಬಿತ್ತು. ತಕ್ಷಣ ಅನೇಕ ಗ್ರಾಮಸ್ಥರು ಸ್ಥಳಕ್ಕೆ ದೌಡಾಯಿಸಿ ಭಕ್ಷೀಸ್‌ನನ್ನು ಮನಬಂದಂತೆ ಥಳಿಸಿದ್ದಾರೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಭಕ್ಷೀಸ್‌ ಸ್ಥಳದಲ್ಲೇ ಅಸುನೀಗಿದ್ದಾನೆ. ಸ್ಥಳಕ್ಕೆ ಪೊಲೀಸ್‌ ವರಿಷ್ಠಾಧಿಕಾರಿ ಸೌಮ್ಯ ಮಿಶ್ರಾ ಸೇರಿದಂತೆ ಹಿರಿಯ ಪೊಲೀಸರು ದೌಡಾಯಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇನ್ನು ಮೃತ ಯುವಕ ಮತ್ತು ಆತನ ಕುಟುಂಬದ ವಿರುದ್ಧ ಗುರು ಗ್ರಂಥ ಸಾಹೀಬ್‌ ಸತ್ಕಾರ್‌ ಸಮಿತಿ ಅಧ್ಯಕ್ಷ ಲಖ್ವೀರ್‌ ಸಿಂಗ್‌ ದೂರು ನೀಡಿದ್ದು, ಪೊಲೀಸರು ಸೆಕ್ಷನ್‌ 295-A (ಧಾರ್ಮಿಕ ಭಾವನೆಗೆ ಧಕ್ಕೆ ಆರೋಪ)ಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಇದನ್ನೂ ಓದಿ: Jyotika Trolled: ಆನ್​ಲೈನ್​ ಮೂಲಕ ವೋಟ್ ಮಾಡಿದ್ದಾರಂತೆ ಜ್ಯೋತಿಕಾ! ಟ್ರೋಲ್‌ ಆದ ಸೂರ್ಯ ಪತ್ನಿ!

ಯುವಕನ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರಕ್ಕೆ ಆಗ್ರಹ

ಇಷ್ಟೆಲ್ಲದರ ನಡುವೆ ಅಕಾಲ್‌ ಜತೇದರ್‌(ಸಿಖ್‌ ಮುಖಂಡ) ಗೈನಿ ರಗ್ಬೀರ್‌ ಸಿಂಗ್‌ ಗುರುದ್ವಾರದಲ್ಲಿ ನಡೆದಿರುವ ಅಪವಿತ್ರತೆಗೆ ಖಂಡನೆ ವ್ಯಕ್ತಪಡಿಸಿದ್ದು, ಮೃತ ಯುವಕನ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ ಹಾಕುವಂತೆ ಒತ್ತಾಯಿಸಿದ್ದಾರೆ. ಇಂತಹದ್ದೇ ಘಟನೆಗಳು ಹಿಂದೆ ನಡೆದ ಸಂದರ್ಭದಲ್ಲಿ ಆರೋಪಿಗಳ ವಿರುದ್ಧ ಸೂಕ್ತ ಜರುಗಿಸುವಲ್ಲಿ ವಿಫಲವಾಗಿರುವುದೇ ಮತ್ತೆ ಇಂತಹ ಘಟನೆಗಳು ನಡೆಯಲು ಕಾರಣ. ಸಿಖ್‌ ಸಂಘಟನೆ ಈ ಕುಟುಂಬವನ್ನು ಸಾಮಾಜಿಕ ಮತ್ತು ಧಾರ್ಮಿಕವಾಗಿ ಬಹಿಷ್ಕರಿಸಬೇಕು. ಸಿಖ್‌ ಧಾರ್ಮಿಕ ಭಾವನೆಗೆ ಧಕ್ಕೆ ತರಬೇಕೆಂಬ ಉದ್ದೇಶದಿಂದಲೇ ಇಂತಹ ಕೃತ್ಯಗಳಿಗೆ ಸಂಚು ರೂಪಿಸಲಾಗುತ್ತಿದೆ. ಸರ್ಕಾರ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಕಿಡಿಕಾರಿದರು.

Continue Reading

ಕ್ರೀಡೆ

Viral News: ಎಐ ತಂತ್ರಜ್ಞಾನದ ಮೂಲಕ ತಂಡ ಆಯ್ಕೆ ಮಾಡಿ ಟಿ20 ಸರಣಿ ಗೆದ್ದ ಇಂಗ್ಲೆಂಡ್​ ಮಹಿಳಾ ತಂಡ

viral news: ಕೃತಕ ಬುದ್ದಿಮತ್ತೆ ತಂತ್ರಜ್ಞಾನವು ಬಲಿಷ್ಠ ತಂಡದ ಆಯ್ಕೆ ಪ್ರಕ್ರಿಯೆಗೆ ಸಂಬಂಧಿಸಿ ನಿರ್ಣಾಯಕ ಅಭಿಪ್ರಾಯಗಳನ್ನು ನೀಡಿತು ಮತ್ತು ಆಸ್ಟ್ರೆಲಿಯಾ ವಿರುದ್ಧದ ಟಿ20 ಸರಣಿಯನ್ನು ಗೆಲ್ಲಲು ಇದು ಸಹಾಯ ಮಾಡಿತು ಎಂದು ಅವರು ತಿಳಿಸಿದ್ದಾರೆ.

VISTARANEWS.COM


on

viral news
Koo

ಲಂಡನ್​: ಕೃತಕ ಬುದ್ಧಿಮತ್ತೆ ತಂತ್ರಜ್ಞಾನಕ್ಕೆ (Artificial Intelligence) ಜಗತ್ತೇ ತೆರೆದುಕೊಳ್ಳುತ್ತಿದೆ. ಅದರಲ್ಲೂ, ಕೃತಕ ಬುದ್ಧಿಮತ್ತೆ ಆಧಾರಿತ ಚಾಟ್‌ಜಿಪಿಟಿಯಂತಹ ಚಾಟ್‌ಬಾಟ್‌ಗಳು (ChatBot) ಪ್ರಬಂಧ ಬರೆಯುವುದರಿಂದ ಹಿಡಿದು, ಕೋಡ್‌ ರಚನೆವರೆಗೆ ಛಾಪು ಮೂಡಿಸುತ್ತಿವೆ. ಆಧುನಿಕ ಯುಗದಲ್ಲಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಪ್ರಾಮುಖ್ಯತೆಯನ್ನು ಇದು ಸಾರುತ್ತಿದೆ. ಇದೀಗ ಈ ತಂತ್ರಜ್ಞಾನವನ್ನು ಇಂಗ್ಲೆಂಡ್​ ಮಹಿಳಾ ಕ್ರಿಕೆಟ್(England women’s cricket team)​ ತಂಡವೂ ಇದರ ಲಾಭ ಪಡೆದಿದೆ.

ಆಡುವ ಹನ್ನೊಂದರ ಬಳಗವನ್ನು ಆರಿಸಲು ಕೃತಕ ಬುದ್ದಿಮತ್ತೆಯನ್ನು (ಎಐ) ಬಳಸುತ್ತಿರುವುದಾಗಿ ತಂಡದ ಮುಖ್ಯ ಕೋಚ್​ ಜಾನ್​ ಲೆವಿಸ್​ ಬಹಿರಂಗಪಡಿಸಿದ್ದಾರೆ. ತಂತ್ರಜ್ಞಾನವು ಬಲಿಷ್ಠ ತಂಡದ ಆಯ್ಕೆ ಪ್ರಕ್ರಿಯೆಗೆ ಸಂಬಂಧಿಸಿ ನಿರ್ಣಾಯಕ ಅಭಿಪ್ರಾಯಗಳನ್ನು ನೀಡಿತು ಮತ್ತು ಆಸ್ಟ್ರೆಲಿಯಾ ವಿರುದ್ಧದ ಟಿ20 ಸರಣಿಯನ್ನು ಗೆಲ್ಲಲು ಇದು ಸಹಾಯ ಮಾಡಿತು ಎಂದು ಅವರು ತಿಳಿಸಿದ್ದಾರೆ.

ಲಂಡನ್​ ಮೂಲದ ‘ಪಿಎಸ್​ಐ’ ಕಂಪನಿ ತಯಾರಿಸುವ ತಂತ್ರಜ್ಞಾನವನ್ನು ಬಳಸಿಕೊಂಡು ಈ ಪ್ರಯೋಗ ಮಾಡಲಾಯಿತು(Viral News) ಎಂದು ಲೆವಿಸ್​ ತಿಳಿಸಿದ್ದಾರೆ. ಉತ್ತಮ ಫಾಮ್​ರ್ನಲ್ಲಿರುವ ಇಬ್ಬರು ಆಟಗಾರ್ತಿಯರ ಪೈಕಿ ಒಬ್ಬರನ್ನು ಮಾತ್ರ ಆರಿಸುವ ಸಂಕಷ್ಟದ ಸಮಯದಲ್ಲಿ ಎಐ ನಮಗೆ ಯಶಸ್ವಿಯಾಗಿ ಸಹಾಯ ಮಾಡಿದೆ ಎಂದು ಅವರು​ ಹೇಳಿಕೊಂಡಿದ್ದಾರೆ.

ಕೃತಕ ಬುದ್ಧಿಮತ್ತೆ ಕೌಶಲ ಅಭಿವೃದ್ಧಿಯಲ್ಲಿ ಯಾವ ದೇಶಗಳು ಎಷ್ಟು ಪ್ರಗತಿ ಸಾಧಿಸಿವೆ ಎಂಬ ಕುರಿತು ಅಮೆರಿಕದ ಸ್ಟ್ಯಾನ್‌ಫೋರ್ಡ್‌ ವಿಶ್ವವಿದ್ಯಾಲಯವು ಇತ್ತೀಚೆಗೆ ಎಐ ಇಂಡೆಕ್ಸ್‌ ವರದಿ (AI Index Report 2023) ಪ್ರಕಟಿಸಿತ್ತು. ಜಾಗತಿಕವಾಗಿ ಕೃತಕ ಬುದ್ಧಿಮತ್ತೆ ಕ್ರಾಂತಿ ಸೃಷ್ಟಿಮಾಡುವಲ್ಲಿ ಭಾರತದ ಪಾತ್ರ ಮಹತ್ವದ್ದಾಗಿದೆ ಎಂದೂ ವರದಿಯಲ್ಲಿ ಉಲ್ಲೇಖಿಸಿರುವುದು ಸಕಾರಾತ್ಮಕ ಸಂಗತಿಯಾಗಿದೆ.

ಇದನ್ನೂ ಓದಿ IPL 2024: ಇಂದು ಐಪಿಎಲ್​ನಲ್ಲಿ ಡಬಲ್​ ಹೆಡರ್​ ಪಂದ್ಯ; ಮೊದಲ ಪಂದ್ಯ ಯಾವುದು?

2022ರಲ್ಲಿ ಜಗತ್ತಿನಲ್ಲಿ ಮೂರು ರಾಷ್ಟ್ರಗಳು ಕೃತಕ ಬುದ್ಧಿಮತ್ತೆ ಕೌಶಲ ವೃದ್ಧಿಯಲ್ಲಿ ಅಗ್ರ ಸ್ಥಾನ ಪಡೆದಿವೆ. ಭಾರತವು 3.2 ರೇಟಿಂಗ್‌ನೊಂದಿಗೆ ಅಗ್ರಸ್ಥಾನಿಯಾದರೆ, ಅಮೆರಿಕ 2.2 ಹಾಗೂ ಜರ್ಮನಿ 1.7 ರೇಟಿಂಗ್‌ ಪಡೆದಿವೆ. ನೀತಿ ಆಯೋಗದ ಮಾಜಿ ಸಿಇಒ ಅಮಿತಾಭ್‌ ಕಾಂತ್‌ ಅವರು ಭಾರತದ ಏಳಿಗೆ ಕುರಿತು ಸಂತಸ ವ್ಯಕ್ತಪಡಿಸಿದ್ದಾರೆ. “ಭಾರತದ ಚಾಣಾಕ್ಷತೆಯು ಜಾಗತಿಕವಾಗಿ ಮಿನುಗುತ್ತಿದೆ. ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಬಳಸಿಕೊಂಡು ಭಾರತವು ಜಾಗತಿಕ ಶಿಕ್ಷಣ, ಆರೋಗ್ಯ, ಪೌಷ್ಟಿಕಾಂಶ ಸೇರಿ ಹಲವು ಕ್ಷೇತ್ರಗಳ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುತ್ತಿದೆ” ಎಂದು ಪೋಸ್ಟ್​ ಮಾಡಿತ್ತು.

ಇಟ್ಟು ಮರೆತು ಹೋದ ವಸ್ತುಗಳನ್ನು ಹುಡುಕಲು ‘ಕೃತಕ ಜ್ಞಾಪಕ ಶಕ್ತಿ’ ಅಭಿವೃದ್ಧಿ!

ಇಟ್ಟಿರುವ ಸಾಮಾನು ಟೈಮ್‌ಗೆ ಸರಿಯಾಗಿ ಕೈಗೆ ಸಿಗುವುದಿಲ್ಲ ಎಂದು ಮನೆಯಲ್ಲಿ ಆಗಾಗ ಹಿರಿಯರು ಮಾತನಾಡಿಕೊಳ್ಳವುದನ್ನು ಕೇಳಿದ್ದೇವೆ. ಇನ್ನು ಆ ಚಿಂತೆ ಇಲ್ಲ ಬಿಡಿ. ಯಾಕೆಂದರೆ, ಸಂಶೋಧಕರು ಕೃತಕ ಬುದ್ಧಿಮತ್ತೆ (Artificial Intelligence) ಆಧಾರಿತ ಹೊಸ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ್ದಾರೆ. ಈ ತಂತ್ರಜ್ಞಾನವನ್ನು ಬಳಸಿಕೊಂಡು ರೋಬಾಟ್‌ಗಳು, ವಿಶೇಷವಾಗಿ ಮರೆವಿನ ಕಾಯಿಲೆಯಿಂದ ಬಳಲುತ್ತಿರುವವರಿಗೆ, ಔಷಧಗಳು, ಕನ್ನಡಕ, ಫೋನ್‌ಗಳು ಮತ್ತಿತರ ವಸ್ತುಗಳನ್ನು ಹುಡುಕಿಕೊಡಲು ನೆರವು ನೀಡಲಿವೆ.

ಮೆರೆವು ಕಾಯಿಲೆಯು, ಮೆದುಳಿನ ಕಾರ್ಯನಿರ್ವಹಣೆಯನ್ನು ನಿರ್ಬಂಧಿಸುತ್ತದೆ. ಇದರಿಂದಾಗಿ ಗೊಂದಲ, ನೆನಪು ನಷ್ಟ ಮತ್ತು ಅಂಗವೈಕಲ್ಯವನ್ನು ಉಂಟುಮಾಡುತ್ತದೆ. ಈ ಸ್ಥಿತಿಯನ್ನು ಹೊಂದಿರುವ ಅನೇಕ ಜನರು ದಿನನಿತ್ಯದ ವಸ್ತುಗಳ ಸ್ಥಳವನ್ನು ಪದೇ ಪದೇ ಮರೆತುಬಿಡುತ್ತಾರೆ. ಇದು ಅವರ ಜೀವನದ ಗುಣಮಟ್ಟವನ್ನು ಕುಗ್ಗಿಸುತ್ತದೆ. ಹಾಗಾಗಿ ಆರೈಕೆ ಮಾಡುವವರ ಮೇಲೆ ಹೆಚ್ಚುವರಿ ಹೊರೆಯಾಗುತ್ತದೆ. ಈ ಹೊರೆಯನ್ನು ಕಡಿಮೆ ಮಾಡಲು ಈ ತಂತ್ರಜ್ಞಾನವು ನೆರವು ಒದಗಿಸಲಿದೆ.

Continue Reading
Advertisement
ICC Women's T20 World Cup
ಕ್ರೀಡೆ18 mins ago

ICC Women’s T20 World Cup: ಮಹಿಳಾ ಟಿ20 ವಿಶ್ವಕಪ್​ ವೇಳಾಪಟ್ಟಿ ಪ್ರಕಟ; ಒಂದೇ ಗುಂಪಿನಲ್ಲಿ ಭಾರತ-ಪಾಕ್​

Pakistan
ವಿದೇಶ38 mins ago

Pakistan: ಪಾಕಿಸ್ತಾನಕ್ಕೂ ಕಾಲಿಟ್ಟ ಯೋಗ; ಅಧಿಕೃತವಾಗಿ ತರಗತಿ ಆರಂಭ

Prajwal Revanna Case HD Revanna arrest is correct says R Ashok
ರಾಜಕೀಯ2 hours ago

Prajwal Revanna Case: ಅಶ್ಲೀಲ ವಿಡಿಯೊ ಪೆನ್‌ಡ್ರೈವ್‌ ಕೇಸ್‌; ರೇವಣ್ಣ ಬಂಧನ ಕ್ರಮ ಸರಿ ಇದೆ ಎಂದ ಆರ್.‌ ಅಶೋಕ್‌!

Vicky Pedia New reels about heat in Karnataka
ವೈರಲ್ ನ್ಯೂಸ್2 hours ago

Vicky Pedia: ʻಬಿಸಿ ಗಾಳಿ.. ಬಿಸಿ ಗಾಳಿ.. ಸಹಿ ಹಾಕಿದೆ ಬಿಸಿಲಿನಲಿʼಎಂದು ಹಾಡಿದ ವಿಕಾಸ್ ವಿಕ್ಕಿಪಿಡಿಯ: ಫ್ಯಾನ್ಸ್‌ ಫಿದಾ!

Lok Sabha Election 2024
Lok Sabha Election 20242 hours ago

Lok Sabha Election 2024: ಬಿಜೆಪಿಯ ʼಮೊಟ್ಟೆʼ ವಿಡಿಯೊ ವಿರುದ್ಧ ಕಾಂಗ್ರೆಸ್‌ ಕೆಂಡಾಮಂಡಲ; ಅಂತಹದ್ದೇನಿದೆ?

Prajwal Revanna Case Siddaramaiah tweets vote for Prajwal Full class from BJP!
ಕ್ರೈಂ2 hours ago

Prajwal Revanna Case: ಪ್ರಜ್ವಲ್‌ಗೆ ವೋಟ್‌ ಹಾಕಿ ಎಂಬ ಸಿದ್ದರಾಮಯ್ಯ ಟ್ವೀಟ್‌; ಬಿಜೆಪಿಯಿಂದ ಫುಲ್‌ ಕ್ಲಾಸ್‌!

bajrang punia Suspended
ಕ್ರೀಡೆ2 hours ago

Bajrang Punia: ಬಜರಂಗ್​ಗೆ ಅಮಾನತು ಶಿಕ್ಷೆ ವಿಧಿಸಿದ ರಾಷ್ಟ್ರೀಯ ಉದ್ದೀಪನ ನಿಗ್ರಹ ಸಂಸ್ಥೆ; ಪ್ಯಾರಿಸ್ ಒಲಿಂಪಿಕ್ಸ್​ಗೆ ಹಿನ್ನಡೆ

Kannada New Movie Adhipatra audio rights
ಸಿನಿಮಾ2 hours ago

Kannada New Movie: ಭಾರಿ ಮೊತ್ತಕ್ಕೆ ಸೇಲ್ ಆಯ್ತು ರೂಪೇಶ್ ಶೆಟ್ಟಿ-ಜಾಹ್ನವಿ ಸಿನಿಮಾ ಆಡಿಯೊ ರೈಟ್ಸ್!

assault case
Lok Sabha Election 20242 hours ago

Assault Case : ಕಾಂಗ್ರೆಸ್‌ಗೆ ಅಲ್ಲ.. ಬಿಜೆಪಿಗೆ ಮತ ಹಾಕುವೆ ಎಂದಿದ್ದಕ್ಕೆ ರಸ್ತೆಗೆ ಎಳೆದು ತಂದು ಕೈ-ಕಾಲು ಮುರಿದರು ದುರುಳರು

Viral News
ವೈರಲ್ ನ್ಯೂಸ್2 hours ago

Viral News: ಅಣ್ಣನ ಕತ್ತು ಸೀಳಿದ ತಂಗಿ; ಮೊಬೈಲ್‌ಗಾಗಿ ನಡೀತು ಘೋರ ಕೃತ್ಯ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ11 hours ago

Dina Bhavishya : ಈ ರಾಶಿಯವರಿಗೆ ಆಪ್ತರಿಂದ ಸಿಗಲಿದೆ ಸಿಹಿ ಸುದ್ದಿ

Dina Bhavishya
ಭವಿಷ್ಯ1 day ago

Dina Bhavishya: ವೀಕೆಂಡ್‌ನಲ್ಲೂ ಬಾಸ್‌ ಕಾಟ ತಪ್ಪಲ್ಲ; ಈ ರಾಶಿಯವರಿಗೆ ಇಡೀ ದಿನ ಕೆಲಸದ ಒತ್ತಡ

Bengaluru Rains
ಮಳೆ2 days ago

Bengaluru Rains:‌ ಅಬ್ಬಾಬ್ಬ ಲಾಟ್ರಿ.. ಕಂಗ್ರಾಜುಲೇಷನ್ ಬ್ರದರ್.. ಬೆಂಗಳೂರು ಮಳೆಗೆ ನೆಟ್ಟಿಗರ ವಿಷ್‌, ಫುಲ್ ಖುಷ್‌

Dina Bhavishya
ಭವಿಷ್ಯ2 days ago

Dina Bhavishya: ಈ ರಾಶಿಯ ವಿವಾಹ ಅಪೇಕ್ಷಿತರಿಗೆ ಸಿಗಲಿದೆ ಗುಡ್‌ ನ್ಯೂಸ್‌

Prajwal Revanna Case Another victim gives statement before judge Will Revanna get anticipatory bail
ಕ್ರೈಂ3 days ago

Prajwal Revanna Case: ನ್ಯಾಯಾಧೀಶರ ಮುಂದೆ 2 ಗಂಟೆ ಹೇಳಿಕೆ ನೀಡಿದ ಮತ್ತೊಬ್ಬ ಸಂತ್ರಸ್ತೆ; ರೇವಣ್ಣಗೆ ಸಿಗುತ್ತಾ ನಿರೀಕ್ಷಣಾ ಜಾಮೀನು?

Dina Bhavishya
ಭವಿಷ್ಯ3 days ago

Dina Bhavishya : ದಿನದ ಕೊನೆಯಲ್ಲಿ ಈ ರಾಶಿಯವರು ಯಾವುದಾದರೂ ಶುಭ ಸುದ್ದಿ ಕೇಳುವಿರಿ

dina bhavishya read your daily horoscope predictions for April 30 2024
ಭವಿಷ್ಯ5 days ago

Dina Bhavishya: ಈ ರಾಶಿಗಳ ಉದ್ಯೋಗಿಗಳಿಗೆ ಇಂದು ಒತ್ತಡ ಹೆಚ್ಚಲಿದೆ!

PM Narendra modi in Bagalakote and Attack on Congress
Lok Sabha Election 20246 days ago

PM Narendra Modi: ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್‌ ಷಡ್ಯಂತ್ರ: ಮೋದಿ ವಾಗ್ದಾಳಿ

PM Narendra modi in Bagalakote for Election Campaign and here is Live telecast
Lok Sabha Election 20246 days ago

PM Narendra Modi Live: ಇಂದು ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಲೈವ್‌ಗಾಗಿ ಇಲ್ಲಿ ವೀಕ್ಷಿಸಿ

dina bhavishya read your daily horoscope predictions for April 29 2024
ಭವಿಷ್ಯ6 days ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

ಟ್ರೆಂಡಿಂಗ್‌