ಅಂದು ಆಡ್ವಾಣಿಗೇ ಆವಾಜ್‌ ಹಾಕಿದವರು ಇಂದು ರಾಜ್ಯಸಭೆ ಸದಸ್ಯರಾದರು ! - Vistara News

ಪ್ರಮುಖ ಸುದ್ದಿ

ಅಂದು ಆಡ್ವಾಣಿಗೇ ಆವಾಜ್‌ ಹಾಕಿದವರು ಇಂದು ರಾಜ್ಯಸಭೆ ಸದಸ್ಯರಾದರು !

ರಾಜಕೀಯದಲ್ಲಿ ಯಾವ ಸ್ಥಾನವೂ ಶಾಶ್ವತವಲ್ಲ ಎನ್ನುವುದಕ್ಕೆ ಲೆಹರ್‌ಸಿಂಗ್‌ ಉದಾಹರಣೆ. ಬಿಜೆಪಿಯ ಭೀಷ್ಮನನ್ನೇ ಹಿಗ್ಗಾಮುಗ್ಗ ಜಾಡಿಸಿದವರು ಇಂದು ಅದೇ ಪಕ್ಷದಿಂದ ರಾಜ್ಯಸಭೆ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.

VISTARANEWS.COM


on

rajyasabha election 2022 nirmala seetharaman jairam ramesh lehar singh jaggesh new_edited
ರಾಜ್ಯಸಭೆ ಚುನಾವಣೆಯಲ್ಲಿ ಜಯಿಸಿದ ಲೆಹರ್‌ಸಿಂಗ್‌ ಸಿರೋಯಾ, ನಿರ್ಮಲಾ ಸೀತಾರಾಮನ್‌ ಹಾಗೂ ಜಗ್ಗೇಶ್‌ ಅವರನ್ನು ಸಿಎಂ ಬಸವರಾಜ ಬೊಮ್ಮಾಯಿ ಅಭಿನಂದಿಸಿದರು
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ರಮೇಶ ದೊಡ್ಡಪುರ ಬೆಂಗಳೂರು
ʼಆಡ್ವಾಣಿ ಜಿ, ನೀವು ಸರಿಯಾಗಿದ್ದಿದ್ದರೆ ನಮಗ್ಯಾಕೆ ಇಂಥ ಸ್ಥಿತಿ ಬರುತ್ತಿತ್ತು? ನಿಮ್ಮಿಂದಲೇ ಇಂದು ಬಿಜೆಪಿ ಇಂತಹ ಅವಮಾನ ಅನುಭವಿಸುತ್ತಿದೆ”. ಸರಿಯಾಗಿ ಒಂಭತ್ತು ವರ್ಷದ ಹಿಂದೆ ಇಂತಹದ್ದೇ ಪದಗಳನ್ನು ಬಿಜೆಪಿಯ ಭೀಷ್ಮ ಎಲ್‌.ಕೆ. ಆಡ್ವಾಣಿ ಅವರಿಗೆ ಬರೆದು ಪಕ್ಷದ ರಾಜ್ಯ ಖಜಾಂಚಿ ಸ್ಥಾನ ಕಳೆದುಕೊಂಡಿದ್ದಷ್ಟೆ ಅಲ್ಲದೆ ಉಚ್ಚಾಟನೆ ಶಿಕ್ಷೆಗೆ ಒಳಗಾಗಿದ್ದವರು ಇಂದು ಅದೇ ಬಿಜೆಪಿಯಲ್ಲಿ ರಾಜ್ಯಸಭೆ ಸದಸ್ಯರಾಗಿದ್ದಾರೆ.

ರಾಜ್ಯಸಭೆ ಚುನಾವಣೆಯಲ್ಲಿ ನಾಲ್ಕನೇಯವರಾಗಿ ಬಿಜೆಪಿಯಿಂದ ಆಯ್ಕೆಯಾದವರು 73 ವರ್ಷದ ಲೆಹರ್‌ಸಿಂಗ್‌ ಸಿರೋಯಾ. ಸತತ ಭ್ರಷ್ಟಾಚಾರ, ರಿಪಬ್ಲಿಕ್‌ ಆಫ್‌ ಬಳ್ಳಾರಿ ಮೆರೆದಾಟ, ಮೂರು ಮುಖ್ಯಮಂತ್ರಿಗಳು, ಜೈಲಿಗೆ ಹೋದ ಮುಖ್ಯಮಂತ್ರಿ… ಇಂತಹ ಸಾಲುಸಾಲು ಅಪಸವ್ಯಗಳನ್ನು ಕಂಡ ಬಿಜೆಪಿ ಸರ್ಕಾರ(ಗಳು) 2013ರವರೆಗೆ ರಾಜ್ಯದಲ್ಲಿತ್ತು. 2008ರಲ್ಲಿ ಪಡೆದಿದ್ದ 110 ಸ್ಥಾನಗಳನ್ನು ಸರಳ ಬಹುಮತಕ್ಕೆ ಹೆಚ್ಚಿಸಿಕೊಂಡು ಐದು ವರ್ಷ ನಿರಾತಂಕವಾಗಿ ಆಡಳಿತ ನಡೆಸಬೇಕೆಂಬ ಬಿ.ಎಸ್‌. ಯಡಿಯೂರಪ್ಪ ಆಸೆಯು ಅವರನ್ನು ಬಳ್ಳಾರಿ ಗಣಿ ಧಣಿಗಳ ತೆಕ್ಕೆಗೆ ಕೆಡವಿತು.

ಕೊನೆಗೆ ಆಪರೇಷನ್‌ ಕಮಲದಂತಹ ಬ್ಯಾಡ್‌ ಬ್ರ್ಯಾಂಡ್‌ ಅಂಬಾಸಡಾರ್‌ ಆಗಿ ಅಪಮಾನಕರವಾಗಿ ಜೈಲಿಗೆ ತೆರಳುವವರೆಗೆ ಯಡಿಯೂರಪ್ಪ ಕಷ್ಟ ಅನುಭವಿಸಿದರು. ಇದೆಲ್ಲದರ ನಂತರ 2013ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿಗೆ ಸಿಕ್ಕಿದ್ದು ಕೇವಲ 40 ಸ್ಥಾನ. ನಂತರ ನಡೆದ ಬೆಳವಣಿಗೆಯಲ್ಲಿ ಸಿದ್ದರಾಮಯ್ಯ ಸಿಎಂ ಆಗಿ ಅಧಿಕಾರ ಹಿಡಿದರು.

ಈ ಸಮಯದಲ್ಲಿ ಬಿಜೆಪಿ ಭೀಷ್ಮ ಎಂದೇ ಖ್ಯಾತರಾಗಿದ್ದ ಎಲ್‌.ಕೆ. ಆಡ್ವಾಣಿಯವರು ತಮ್ಮ ಬ್ಲಾಗ್‌ನಲ್ಲಿ ಕರ್ನಾಟಕ ಚುನಾವಣೆ ಬಗ್ಗೆ ಬರೆದುಕೊಂಡರು. ಇದಕ್ಕೆ ಮುನ್ನವೂ ಯಡಿಯೂರಪ್ಪ ಕುರಿತು ಅಸಮಾಧಾನ ಹೊರಹಾಕಿದ್ದ ಆಡ್ವಾಣಿ ಈ ಬಾರಿ ನೇರವಾಗಿ ಭ್ರಷ್ಟಾಚಾರ ವಿಚಾರ ಪ್ರಸ್ತಾಪಿಸಿದ್ದರು. ʼಕರ್ನಾಟಕದಲ್ಲಿ ಬಿಜೆಪಿಯ ಹೀನಾಯ ಸೋಲು ನನಗೆ ಅಚ್ಚರಿ ಉಂಟುಮಾಡಿಲ್ಲ. ಏಕೆಂದರೆ ಇದು ನಿರೀಕ್ಷಿತವಾಗಿತ್ತು. ಬಿಜೆಪಿಯೇನಾದರೂ ಗೆದ್ದಿದ್ದರೆ ಅಚ್ಚರಿಯಾಗುತ್ತಿತ್ತುʼ ಎಂದಿದ್ದರು.

ಇದನ್ನೂ ಓದಿ | ರಾಜ್ಯಸಭೆ ಚುನಾವಣೆ: ಬಿಜೆಪಿ, ಕಾಂಗ್ರೆಸ್‌ಗೆ ಎರಡು ರಾಜ್ಯಗಳಲ್ಲಿ ತಲಾ ನಾಲ್ಕು ಸ್ಥಾನ, ಹರಿಯಾಣ, ಮಹಾರಾಷ್ಟ್ರ ಫಲಿತಾಂಶ ವಿಳಂಬ

ಮುಂದುವರಿದಿದ್ದ ಆಡ್ವಾಣಿ, ಯಡಿಯೂರಪ್ಪ ಭ್ರಷ್ಟಾಚಾರ ಆರಂಭಿಸಿದಾಗಲೇ ಅವರನ್ನು ಪಕ್ಷದಿಂದ ಕಿತ್ತು ಹಾಕಿದ್ದರೆ ಇದೆಲ್ಲ ಸಮಸ್ಯೆಯೇ ಬರುತ್ತಿರಲಿಲ್ಲ ಅದರ ಬದಲಿಗೆ ನಾವು ಅವರನ್ನು ಮನವೊಲಿಸಲು ಆರಂಭಿಸಿದೆವು. ಅವರ ಎಲ್ಲ ಕೃತ್ಯಗಳನ್ನೂ ತಿಂಗಳುಗಟ್ಟಲೆ ಸಹಿಸಿಕೊಂಡೆವು. ದಕ್ಷಿಣದಲ್ಲಿ ಅಧಿಕಾರಕ್ಕೆ ಬಂದ ಏಕೈಕ ಸರ್ಕಾರವನ್ನು ಕಳೆದುಕೊಳ್ಳುವುದು ನಮಗೆ ಇಷ್ಟವಿರಲಿಲ್ಲ. ಇದೆಲ್ಲದರ ನಂತರ ಯಡಿಯೂರಪ್ಪ ಕೆಜೆಪಿ ಸ್ಥಾಪಿಸಿದರು. ನಾವು ಪರಿಸ್ಥಿತಿಗೆ ಸರಿಯಾಗಿ ಸ್ಪಂದಿಸಲಿಲ್ಲʼ ಎಂದು ವಿವರವಾಗಿ ತಿಳಿಸಿದ್ದರು.

ಆಡ್ವಾಣಿಯವರ ಈ ಮಾತುಗಳು ಯಡಿಯೂರಪ್ಪ ಅವರ ಹಿಂಬಾಲಕ ಎಂದೇ ಕರೆಸಿಕೊಂಡಿದ್ದ ಲೆಹರ್‌ಸಿಂಗ್‌ ಸಿರೋಯಾ ಅವರನ್ನು ಕೆರಳಿಸಿತ್ತು. ಆದರೂ, ಯಡಿಯೂರಪ್ಪ ಬಿಜೆಪಿ ಬಿಟ್ಟು ಕೆಜೆಪಿ ಕಟ್ಟಿದರೂ ಲೆಹರ್‌ಸಿಂಗ್‌ ಮಾತ್ರ ಬಿಜೆಪಿಯಲ್ಲೆ ಉಳಿದಿದ್ದರು. ಪ್ರಲ್ಹಾದ ಜೋಶಿ ರಾಜ್ಯ ಬಿಜೆಪಿ ಅಧ್ಯಕ್ಷರಾಗಿದ್ದಾಗ ರಾಜ್ಯ ಖಜಾಂಚಿಯಾಗಿ ನೇಮಕವಾದರು. ಭ್ರಷ್ಟಾಚಾರದ ಕುರಿತು ಮಾತನಾಡಿದ್ದ ಆಡ್ವಾಣಿ ಲೇಖನಕ್ಕೆ ಲೆಹರ್‌ಸಿಂಗ್‌ ಖಾರವಾಗಿ ಪ್ರತಿಕ್ರಿಯಿಸಿದರು.

(13 ಮೇ 2013) ಪಕ್ಷವು ಸೋತಾಗ ನಿಮ್ಮಂತಹ ಹಿರಿಯರು ನಮಗೆ ಸಮಾಧಾನ ಹೇಳುವ ಬದಲಿಗೆ ವ್ಯಂಗ್ಯ ಮಾಡುತ್ತಿರುವುದು ಅಚ್ಚರಿ ತಂದಿದೆ. ಈ ಹಿಂದೆಯೂ ಭ್ರಷ್ಟಾಚಾರದ ಕುರಿತು ನೀವು ಇಷ್ಟೇ ಕಠಿಣವಾಗಿದ್ದರೆ ಪಕ್ಷ ಇಂತಹ ಸ್ಥಿತಿಗೆ ಬರುತ್ತಿರಲಿಲ್ಲ. ಈ ಹಿಂದೆ ರಾಜ್ಯದಲ್ಲಿ ಚುನಾವಣೆ ನಡೆದಾಗ ಹಣ ಹರಿದು ಬಂದಿದ್ದು ಎಲ್ಲಿಂದ ಎಂದು ನೀವು ಪ್ರಶ್ನಿಸಲಿಲ್ಲ. ರಾಜ್ಯದಿಂದ 19 ಸಂಸದರನ್ನು ಜಯಿಸಿ ಕಳಿಸಿದಾಗ ಅದಕ್ಕೆ ಹಣ ಎಲ್ಲಿಂದ ವೆಚ್ಚ ಮಾಡಿದಿರಿ ಎಂದು ನೀವು ಕೇಳಲಿಲ್ಲ. ಆಪರೇಷನ್‌ ಕಮಲಕ್ಕೆ ಹಣ ಎಲ್ಲಿಂದ ಬಂತು ಎಂದು ನೀವು ಕೇಳಲಿಲ್ಲ. ಹೋಗಲಿ, ಹಿಂದಿನ ನಿಮ್ಮ ಯಾತ್ರೆಗಳಿಗೆ ಹಣ ಎಲ್ಲಿಂದ ಬಂತು ಎಂದೂ ನೀವು ಕೇಳಲಿಲ್ಲ.

ಇದನ್ನೂ ಓದಿ | ರಾಜ್ಯಸಭೆ ಚುನಾವಣೆ | ಜೈರಾಮ್‌, ನಿರ್ಮಲಾ ಜಗ್ಗೇಶ್‌ ʼಮೊದಲ ಪ್ರಾಶಸ್ತ್ಯʼದ ಗೆಲುವು

ಈಗ ನೀವು ತೆಗಳುತ್ತಿರುವ ಗಣಿ ಮಾಫಿಯಾ ನಿಮ್ಮ ಹುಟ್ಟುಹಬ್ಬಕ್ಕೆ ಉಡುಗೊರೆ ನೀಡಿದಾಗ ಭ್ರಷ್ಟಾಚಾರದ ಕುರಿತು ನಿಮಗೆ ಚಿಂತೆ ಆಗಿರಲಿಲ್ಲ. ಇಂತಹ ಗಣಿ ಧಣಿಗಳನ್ನು ಬೆಂಬಲಿಸಿದ ಸುಷ್ಮಾ ಸ್ವರಾಜ್‌ ಅವರನ್ನೇ ನೀವು ಬೆಂಬಲಿಸಿದಿರಿ. ಸುಷ್ಮಾ ಅವರನ್ನು ಆಟಲ್‌ಬಿಹಾರಿ ವಾಜಪೇಯಿಯವರಿಗೆ ಹೋಲಿಕೆ ಮಾಡಿದಿರಿ. ನೀವು ಈ ಹಿಂದೆಯೇ ಇದೆಲ್ಲವನ್ನೂ ಪ್ರಶ್ನಿಸಿದ್ದರೆ ಅಥವಾ ಸರಿಪಡಿಸಿದ್ದರೆ ಕರ್ನಾಟಕದಲ್ಲಿ ಪಕ್ಷ ಇಂತಹ ಸ್ಥಿತಿಗೆ ಬರುತ್ತಿರಲಿಲ್ಲ ಎಂದು ಲೆಹರ್‌ಸಿಂಗ್‌ ಆಕ್ರೋಶ ಹೊರಹಾಕಿದ್ದರು.

ಈ ಪತ್ರ ರಾಜ್ಯ ಹಾಗೂ ರಾಷ್ಟ್ರೀಯ ಬಿಜೆಪಿಯಲ್ಲಿ ಸಂಚಲನ ಸೃಷ್ಟಿಸಿತ್ತು. ಈ ಪತ್ರ ಬರೆದು ಐದು ದಿನದ ನಂತರ ರಾಜ್ಯ ಖಜಾಂಚಿ ಸ್ಥಾನದಿಂದ ಲೆಹರ್‌ಸಿಂಗ್‌ ಅವರನ್ನು ಕಿತ್ತೆಸೆಯಲಾಯಿತು ಹಾಗೂ ಪಕ್ಷದಿಂದ ಅಮಾನತು ಮಾಡಲಾಯಿತು.

ನರೇಂದ್ರ ಮೋದಿ ಗುಜರಾತ್‌ ಸಿಎಂ ಆಗಿದ್ದಾಗಿನಿಂದಲೇ ಅವರನ್ನು ಹೊಗಳುತ್ತ ಬಂದವರು ಲೆಹರ್‌ ಸಿಂಗ್‌. ಆಗಿನ್ನೂ ಮೋದಿಯವರ ಕುರಿತು ಹೊಗಳಲು ಹಿಂದೆ ಮುಂದೆ ಯೋಚಿಸುವ ಸ್ಥಿತಿ ಇತ್ತು. ಎಲ್ಲಿ ಆಡ್ವಾಣಿ ಬೇಸರಪಟ್ಟುಕೊಳ್ಳುತ್ತಾರೊ ಎಂಬ ಸಮಯದಲ್ಲಿ ಮೋದಿಯನ್ನು ಹೊಗಳಿ ಪಕ್ಷದೊಳಗೆ ದೂಷಣೆಗೆ ಒಳಗಾಗಿದ್ದರು. ಮೋದಿ ಜತೆಗೇ ಯಡಿಯೂರಪ್ಪ ಅವರ ಅನುಯಾಯಿ ಎಂದೇ ಗುರುತಿಸಿಕೊಂಡವರು.

ಆಗಲೂ ಎರಡನೇ ಪ್ರಾಶಸ್ತ್ಯದಲ್ಲೇ ಜಯ

ನಂತರ 2014ರಲ್ಲಿ ಯಡಿಯೂರಪ್ಪ ಬಿಜೆಪಿಗೆ ವಾಪಸಾಗಿ ರಾಜ್ಯ ಅಧ್ಯಕ್ಷರಾದರು. 2016ರಲ್ಲಿ ಬಿಜೆಪಿಯಿಂದ ವಿಧಾನಪರಿಷತ್‌ಗೆ ಲೆಹರ್‌ಸಿಂಗ್‌ ಆಯ್ಕೆಯಾದರು. ಆಗ ಬಿಜೆಪಿಯ ವಿ. ಸೋಮಣ್ಣ ಅವರು ಪ್ರಥಮ ಪ್ರಾಶಸ್ತ್ಯದ ಮತದಿಂದ ಜಯಿಸಿದರು. ಹೆಚ್ಚುವರಿ ಮತಗಳ ಜತೆಗೆ ಪಕ್ಷೇತರರು ಹಾಗೂ ಇನ್ನಿತರರನ್ನು ʼತಮ್ಮತ್ತ ಸೆಳೆದುʼ ಲೆಹರ್‌ ಸಿಂಗ್‌ ಜಯಗಳಿಸಿದ್ದರು. ಇದೀಗ 2022ರ ರಾಜ್ಯಸಭೆ ಚುನಾವಣೆಯಲ್ಲೂ ಬಿಜೆಪಿಯ ಹೆಚ್ಚುವರಿ ಮತಗಳ ಜತೆಗೆ ಇತರೆ ಮತಗಳನ್ನು ʼತಮ್ಮತ್ತ ಸೆಳೆದುʼ ಜಯಗಳಿಸಿದ್ದಾರೆ. ತಮ್ಮ ನೆಚ್ಚಿನ ನರೇಂದ್ರ ಮೋದಿಯವರು ಇರುವ ಸಂಸತ್‌ ಭವನವನ್ನು ಪ್ರವೇಶಿಸಲು ಲೆಹರ್‌ಸಿಂಗ್‌ ಸಜ್ಜಾಗಿದ್ದಾರೆ.

ಇದನ್ನೂ ಓದಿ | ಇಂದು ರಾಜ್ಯಸಭೆ ಮತದಾನ, ಫಲಿತಾಂಶ ಘೋಷಣೆ ಪ್ರಕ್ರಿಯೆ ನಡೆಯುವುದು ಹೀಗೆ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

Justin Trudeau: ಕೆನಡಾ ಪ್ರಧಾನಿ ಕಾರ್ಯಕ್ರಮದಲ್ಲಿ ಖಲಿಸ್ತಾನ ಪರ ಘೋಷಣೆ; ಭಾರತ ಸಮನ್ಸ್!

Justin Trudeau: ಕೆನಡಾದಲ್ಲಿ ಭಾನುವಾರ ನಡೆದ ಸಿಖ್‌ ಸಮುದಾಯದ ಕಾರ್ಯಕ್ರಮದಲ್ಲಿ ಪ್ರಧಾನಿ ಜಸ್ಟಿನ್‌ ಟ್ರುಡೋ ಮಾತನಾಡುವಾಗ ಖಲಿಸ್ತಾನ ಪರವಾಗಿ ಘೋಷಣೆ ಕೂಗಲಾಗಿದೆ. ಇದನ್ನು ಗಂಭೀರವಾಗಿ ತೆಗೆದುಕೊಂಡಿರುವ ಭಾರತ ಸರ್ಕಾರವು ಕೆನಡಾ ಡೆಪ್ಯುಟಿ ಹೈ ಕಮಿಷನರ್‌ಗೆ ಸಮನ್ಸ್‌ ನೀಡಿದೆ.

VISTARANEWS.COM


on

Justin Trudeau
Koo

ಒಟ್ಟಾವ: ಕೆನಡಾದ ಟೊರೊಂಟೊದಲ್ಲಿ ಭಾನುವಾರ (ಏಪ್ರಿಲ್‌ 28) ಸಿಖ್​ ಸಮುದಾಯದವರು ಆಯೋಜಿಸಿದ್ದ ಖಾಲ್ಸಾ ದಿನಾಚರಣೆಯ ಕಾರ್ಯಕ್ರಮದಲ್ಲಿ ಪ್ರಧಾನಿ ಜಸ್ಟಿನ್‌ ಟ್ರುಡೋ (Justin Trudeau) ಅವರು ಭಾಷಣ ಮಾಡುವ ವೇಳೆ ಖಲಿಸ್ತಾನ್‌ ಜಿಂದಾಬಾದ್‌ ಎಂಬ ಘೋಷಣೆ (Pro Khalistan Slogan) ಕೂಗಿರುವುದಕ್ಕೆ ಭಾರತ (India Canada Row) ಅಸಮಾಧಾನ ವ್ಯಕ್ತಪಡಿಸಿದೆ. ಅಷ್ಟೇ ಅಲ್ಲ, ಪ್ರಕರಣಕ್ಕೆ ಸಂಬಂಧಿಸಿದಂತೆ ಕೆನಡಾದ ಡೆಪ್ಯುಟಿ ಹೈ ಕಮಿಷನರ್‌ಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಸಮನ್ಸ್‌ ಜಾರಿ ಮಾಡಿದೆ.

“ಜಸ್ಟಿನ್‌ ಟ್ರುಡೋ ಅವರು ಭಾಗವಹಿಸಿದ ಕಾರ್ಯಕ್ರಮದಲ್ಲಿ ಖಲಿಸ್ತಾನ ಪರ ಘೋಷಣೆ ಕೂಗಿರುವುದು ಆತಂಕಕಾರಿಯಾಗಿದೆ. ಇದರ ಕುರಿತು ಭಾರತ ಕಳವಳ ವ್ಯಕ್ತಪಡಿಸುತ್ತದೆ. ಪ್ರಧಾನಿ ಕಾರ್ಯಕ್ರಮದಲ್ಲಿಯೇ ಇಂತಹ ಅಪಸವ್ಯಗಳು ನಡೆದಿರುವುದು ನಿಜಕ್ಕೂ ಗಂಭೀರ ಪ್ರಕರಣವಾಗಿದೆ. ಇಂತಹ ಪ್ರಕರಣಗಳಿಂದ ಕೆನಡಾದ ರಾಜಕೀಯ ವ್ಯವಸ್ಥೆಯಲ್ಲಿ ಪ್ರತ್ಯೇಕವಾದ, ತೀವ್ರವಾದ ಹಾಗೂ ಹಿಂಸಾಚಾರಕ್ಕೆ ಪ್ರಚೋದನೆ ನೀಡಿದಂತಾಗುತ್ತದೆ” ಎಂದು ಸಮನ್ಸ್‌ನಲ್ಲಿ ಭಾರತ ಅಸಮಾಧಾನ ವ್ಯಕ್ತಪಡಿಸಿದೆ.

“ಖಲಿಸ್ತಾನ ಪರ ಘೋಷಣೆಗಳನ್ನು ಕೂಗುವುದು ಭಾರತ ಹಾಗೂ ಕೆನಡಾ ಸಂಬಂಧದ ಮೇಲೆ ಪರಿಣಾಮ ಬೀರುವ ಜತೆಗೆ ಕೆನಡಾದಲ್ಲಿ ಹಿಂಸಾಚಾರಕ್ಕೆ ಪ್ರಚೋದನೆ ನೀಡಿದಂತಾಗುತ್ತದೆ. ಕೆನಡಾದಲ್ಲಿ ಹಿಂಸಾತ್ಮಕ ವಾತಾವರಣ ನಿರ್ಮಿಸಲು ಪ್ರೋತ್ಸಾಹ ಕೊಟ್ಟಂತಾಗುತ್ತದೆ” ಎಂದು ಭಾರತ ಆಕ್ರೋಶ ವ್ಯಕ್ತಪಡಿಸಿದೆ. ಇದಕ್ಕೂ ಮೊದಲು, ಜಸ್ಟಿನ್‌ ಟ್ರುಡೋ ಅವರು ಜಿ-20 ಶೃಂಗಸಭೆಯ ಹಿನ್ನೆಲೆಯಲ್ಲಿ ಭಾರತಕ್ಕೆ ಬಂದಾಗ, “ಕೆನಡಾದಲ್ಲಿ ಖಲಿಸ್ತಾನಿಗಳನ್ನು ನಿಗ್ರಹಿಸಿ” ಎಂಬುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಮನವಿ ಮಾಡಿದ್ದರು. ಇದರಿಂದಾಗಿ ಕೆನಡಾ ಮುನಿಸಿಕೊಂಡಿದ್ದು, ಎರಡೂ ದೇಶಗಳ ಮಧ್ಯೆ ಬಿಕ್ಕಟ್ಟು ಸೃಷ್ಟಿಯಾಗಿದೆ.

ಕಾರ್ಯಕ್ರಮದಲ್ಲಿ ಮಾತನಾಡಿದ್ದ ಜಸ್ಟಿನ್‌ ಟ್ರುಡೋ, ಕೆನಡಾ ದೇಶಾದ್ಯಂತ ಸಿಖ್ ಪರಂಪರೆಯ ಸುಮಾರು 800,000 ಕೆನಡಿಯನ್ನರಿಗೆ, ನಿಮ್ಮ ಹಕ್ಕುಗಳು ಮತ್ತು ನಿಮ್ಮ ಸ್ವಾತಂತ್ರ್ಯಗಳನ್ನು ರಕ್ಷಿಸಲು ನಾವು ಯಾವಾಗಲೂ ಇರುತ್ತೇವೆ. ದ್ವೇಷ ಮತ್ತು ತಾರತಮ್ಯದ ವಿರುದ್ಧ ನಿಮ್ಮ ಸಮುದಾಯವನ್ನು ನಾವು ಯಾವಾಗಲೂ ರಕ್ಷಿಸುತ್ತೇವೆ ಎಂದು ಟ್ರುಡೊ ಹೇಳಿದರು. ಸಮುದಾಯ ಕೇಂದ್ರಗಳು ಮತ್ತು ಗುರುದ್ವಾರಗಳಂತಹ ಪೂಜಾ ಸ್ಥಳಗಳಿಗೆ ಹೆಚ್ಚಿನ ಭದ್ರತೆಯನ್ನು ನೀಡಲಾಗುತ್ತದೆ. ಭದ್ರತೆ ಮತ್ತು ಮೂಲಸೌಕರ್ಯಗಳನ್ನು ಸುಧಾರಿಸುತ್ತೇವೆ ಎಂದು ಕೆನಡಾದ ಪ್ರಧಾನಿ ಉಲ್ಲೇಖಿಸಿದರು.

ನಿಮ್ಮ ಧರ್ಮವನ್ನು ಮುಕ್ತವಾಗಿ ಮತ್ತು ಬೆದರಿಕೆಯಿಲ್ಲದೆ ಆಚರಿಸುವ ನಿಮ್ಮ ಹಕ್ಕು ಕೆನಡಾದಲ್ಲಿ ಖಾತ್ರಿಯಿದೆ. ನಿಮ್ಮ ಮೂಲಭೂತ ಹಕ್ಕುಗಳನ್ನು ನಾವು ರಕ್ಷಿಸುತ್ತೇವೆ. ನಾವು ನಿಮ್ಮೊಂದಿಗೆ ನಿಲ್ಲುತ್ತೇವೆ. ಹ್ಯಾಪಿ ಬೈಸಾಖಿ! ವಹೇಗುರು ಜಿ ಕಾ ಖಾಲ್ಸಾ ವಹೇಗುರು ಜಿ ಕಿ ಫತೇಹ್” ಎಂದು ಟ್ರುಡೋ ಹೇಳಿದ್ದಾರೆ.

ಇದನ್ನೂ ಓದಿ: Student Death: ಕೆನಡಾದಲ್ಲಿ ಭಾರತೀಯ ವಿದ್ಯಾರ್ಥಿಯ ಗುಂಡಿಕ್ಕಿ ಹತ್ಯೆ

Continue Reading

ಕ್ರೀಡೆ

KKR vs DC: ಡೆಲ್ಲಿಗೆ ನೀರು ಕುಡಿಸಿದ ಸಾಲ್ಟ್​; ಪಂತ್​ ಪಡೆಯ ಪ್ಲೇ ಆಫ್ ಹಾದಿ ದುರ್ಗಮ

KKR vs DC: ಚೇಸಿಂಗ್​ ವೇಳೆ ಫಿಲ್​ ಸಾಲ್ಟ್​ 17 ರನ್​ ಗಳಿಸಿದ್ದ ವೇಳೆ ಖಲೀಲ್​ ಅಹ್ಮದ್​ ಎಸೆದ ಮೊದಲ ಓವರ್​ನ ಮೊದಲ ಎಸೆತದಲ್ಲಿ ಲಿಜಾಡ್ ವಿಲಿಯಮ್ಸ್ ಅವರಿಂದ ಕ್ಯಾಚ್​ ಕೈಚೆಲ್ಲಿ ಜೀವದಾನ ಪಡೆದರು. ಇದರ ಸಂಪೂರ್ಣ ಲಾಭವೆತ್ತಿದ ಸಾಲ್ಟ್​ ಆಕ್ರಮಣಕಾರಿ ಬ್ಯಾಟಿಂಗ್​ ಮೂಲಕ ಕೇವಲ 26 ಎಸೆತಗಳಲ್ಲಿ ಅರ್ಧಶತಕ ಪೂರ್ತಿಗೊಳಿಸಿದರು. ವಿಲಿಯಮ್ಸ್ ಕಳಪೆ ಫೀಲ್ಡಿಂಗ್​ ಜತೆಗೆ ಬೌಲಿಂಗ್​ನಲ್ಲಿಯೂ ಸರಿಯಾಗಿ ದಂಡಿಸಿಕೊಂಡರು.

VISTARANEWS.COM


on

KKR vs DC
Koo

ಕೋಲ್ಕತ್ತಾ: ಫಿಲ್​ ಸಾಲ್ಟ್​(68) ಅವರ ಅರ್ಧಶತಕ ಮತ್ತು ವರುಣ್​ ಚಕ್ರವರ್ತಿಯ( 16 ರನ್​ಗೆ 3 ವಿಕೆಟ್) ಸ್ಪಿನ್​ ಮೋಡಿಗೆ ಬೆದರಿದ ಡೆಲ್ಲಿ ಕ್ಯಾಪಿಟಲ್ಸ್(Delhi Capitals)​ ತಂಡ ಕೋಲ್ಕತ್ತಾ ನೈಟ್​ ರೈಡರ್ಸ್(KKR vs DC)​ ವಿರುದ್ಧ 7 ವಿಕೆಟ್​ ಅಂತರದ ಸೋಲಿಗೆ ತುತ್ತಾಗಿದೆ. ಸೋಲಿನಿಂದ ಪಂತ್​ ಪಡೆಯ ಪ್ಲೇ ಆಫ್​ ಪಯಣ ಕೂಡ ದುರ್ಗಮಗೊಂಡಿದೆ. ಇನ್ನುಳಿದ 3 ಪಂದ್ಯಗಳನ್ನು ಕೂಡ ಗೆಲ್ಲಬೇಕಾದ ಒತ್ತಡಕ್ಕೆ ಸಿಲುಕಿದೆ. ಜತೆಗೆ ಉಳಿದ ತಂಡಗಳ ಪ್ರದರ್ಶನವೂ ಡೆಲ್ಲಿ ಪ್ಲೇ ಆಫ್ ಹಾದಿಯ ಮೇಲೆ ಪರಿಣಾಮ ಬೀರಲಿದೆ.

ಐತಿಹಾಸಿಕ ಕ್ರಿಕೆಟ್​ ಸ್ಟೇಡಿಯಂ ಈಡನ್​ ಗಾರ್ಡನ್ಸ್​ನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ದುಕೊಂಡ ಡೆಲ್ಲಿ​ ನಾಟಕೀಯ ಕುಸಿತ ಕಂಡು ನಿಗದಿತ 20 ಓವರ್​ಗಳಲ್ಲಿ 9 ವಿಕೆಟ್​ ನಷ್ಟಕ್ಕೆ 153 ರನ್​ ಬಾರಿಸಿತು. ಸಾಧಾರಣ ಗುರಿಯನ್ನು ಬೆನ್ನಟ್ಟಿದ ಕೋಲ್ಕತ್ತಾ ನೈಟ್​ ರೈಡರ್ಸ್(Kolkata Knight Riders) 16.3​ ಓವರ್​ಗಳಲ್ಲಿ 3 ವಿಕೆಟ್​ ಕಳೆದುಕೊಂಡು 157 ರನ್​ ಬಾರಿಸಿ ಗೆಲುವಿನ ನಗೆ ಬೀರಿತು. ಇದು ಕೆಕೆಆರ್​ಗೆ 9ನೇ ಪಂದ್ಯದಲ್ಲಿ ಒಲಿದ 6ನೇ ಗೆಲುವಾಗಿದೆ. ಸದ್ಯ 12 ಅಂಕದೊಂದಿಗೆ ಅಂಕಪಟ್ಟಿಯಲ್ಲಿ 2ನೇ ಸ್ಥಾನಿಯಾಗಿ ಕಾಣಿಸಿಕೊಂಡಿದೆ.

ಜೀವದಾನ ಪಡೆದು ಅರ್ಧಶತಕ ಬಾರಿಸಿದ ಸಾಲ್ಟ್​


ಚೇಸಿಂಗ್​ ವೇಳೆ ಫಿಲ್​ ಸಾಲ್ಟ್​ 17 ರನ್​ ಗಳಿಸಿದ್ದ ವೇಳೆ ಖಲೀಲ್​ ಅಹ್ಮದ್​ ಎಸೆದ ಮೊದಲ ಓವರ್​ನ ಮೊದಲ ಎಸೆತದಲ್ಲಿ ಲಿಜಾಡ್ ವಿಲಿಯಮ್ಸ್ ಅವರಿಂದ ಕ್ಯಾಚ್​ ಕೈಚೆಲ್ಲಿ ಜೀವದಾನ ಪಡೆದರು. ಇದರ ಸಂಪೂರ್ಣ ಲಾಭವೆತ್ತಿದ ಸಾಲ್ಟ್​ ಆಕ್ರಮಣಕಾರಿ ಬ್ಯಾಟಿಂಗ್​ ಮೂಲಕ ಕೇವಲ 26 ಎಸೆತಗಳಲ್ಲಿ ಅರ್ಧಶತಕ ಪೂರ್ತಿಗೊಳಿಸಿದರು. ವಿಲಿಯಮ್ಸ್ ಕಳಪೆ ಫೀಲ್ಡಿಂಗ್​ ಜತೆಗೆ ಬೌಲಿಂಗ್​ನಲ್ಲಿಯೂ ಸರಿಯಾಗಿ ದಂಡಿಸಿಕೊಂಡರು. ಮೂರು ಓವರ್​ಗೆ 38 ರನ್​ ಹೊಡೆಸಿಕೊಂಡರು.

ಬಿರುಸಿನ ಬ್ಯಾಟಿಂಗ್​ ಮೂಲಕ ರನ್​ ಕಲೆಹಾಕುವ ಸುನೀಲ್​ ನರೈನ್​ ಈ ಪಂದ್ಯದಲ್ಲಿ ವಿಫಲರಾದರು. 10 ಎಸೆತಗಳಿಂದ 15 ರನ್​ಗೆ ಸೀಮಿತರಾಗಿ ಅಕ್ಷರ್​ ಪಟೇಲ್​ಗೆ ವಿಕೆಟ್​ ಒಪ್ಪಿಸಿದರು. ಬ್ಯಾಟಿಂಗ್​ ಭಡ್ತಿ ಪಡೆದು ಬಂದ ರಿಂಕು ಸಿಂಗ್​ 11 ಎಸೆತಗಳಿಂದ 11 ರನ್​ ಗಳಿಸಿ ನಿರಾಸೆ ಮೂಡಿಸಿದರು. ಈ ವಿಕೆಟ್​ ಪತನಗೊಂಡು 4 ರನ್​ ಆಗುವಷ್ಟರಲ್ಲಿ ಫಿಲ್​ ಸಾಲ್ಟ್​​ ವಿಕೆಟ್​ ಕೂಡ ಬಿತ್ತು. ಸಾಲ್ಟ್​ 33 ಎಸೆತಗಳಿಂದ 68 ರನ್​ ಚಚ್ಚಿದರು. ಅವರ ಈ ಬ್ಯಾಟಿಂಗ್​ ಇನಿಂಗ್ಸ್​ನಲ್ಲಿ 5 ಸೊಗಸಾದ ಸಿಕ್ಸರ್​ ಮತ್ತು 7 ಬೌಂಡರಿ ಸಿಡಿಯಿತು.

ಅಂತಿಮವಾಗಿ ನಾಯಕ ಶ್ರೇಯಸ್​ ಅಯ್ಯರ್(33*)​ ಮತ್ತು ವೆಂಕಟೇಶ್​ ಅಯ್ಯರ್​(26*) ರನ್​ ಬಾರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಈ ಜೋಡಿ ನಾಲ್ಕನೇ ವಿಕೆಟ್​ಗೆ ಮುರಿಯದ 57 ರನ್​ಗಳ ಜತೆಯಾಟ ಕೂಡ ನಡೆಸಿತು. ಇದೇ ವೇಳೆ ಶ್ರೇಯಸ್ ಅಯ್ಯರ್​ ಐಪಿಎಲ್​ನಲ್ಲಿ 3 ಸಾವಿರ ರನ್​ ಪೂರ್ತಿಗೊಳಿಸಿದ ಮೈಲಿಗಲ್ಲು ನೆಟ್ಟರು. ಡೆಲ್ಲಿ ಪರ ಅಕ್ಷರ್​ ಪಟೇಲ್​ 2 ವಿಕೆಟ್​ ಪಡೆದರು.

ಇದನ್ನೂ ಓದಿ LSG vs MI: ಲಕ್ನೋ ಸವಾಲಿಗೆ ಮುಂಬೈ ಸಜ್ಜು; ಸೋತರೆ ಪಾಂಡ್ಯ ಪಡೆಯ ಪ್ಲೇ ಆಫ್​ ಹಾದಿ ಕಠಿಣ

ಮಾನ ಉಳಿಸಿದ ಕುಲ್​ದೀಪ್​


ಮೊದಲು ಬ್ಯಾಟಿಂಗ್​ ನಡೆಸಿದ ಡೆಲ್ಲಿ ತಂಡ ನಾಟಕೀಯ ಕುಸಿತ ಕಂಡು ಇನ್ನೇನು 100ರ ಒಳಗಡೆ ಗಂಟು-ಮೂಟೆ ಕಟ್ಟುತ್ತದೆ ಎನ್ನುವಷ್ಟರಲ್ಲಿ 9ನೇ ಕ್ರಮಾಂಕದಲ್ಲಿ ಆಡಲಿಳಿದ ಕುಲ್​ದೀಪ್​ ಯಾದವ್​ ಕೆಕೆಆರ್​ ಬೌಲಿಂಗ್​ ದಾಳಿಯನ್ನು ಸಮರ್ಥವಾಗಿ ಎದುರಿಸಿ ನಿಂತು ಅಜೇಯ 35 ರನ್​ ಬಾರಿಸಿದರು. ತಂಡದ ಒರ ಇವರದ್ದೇ ಗರಿಷ್ಠ ಮೊತ್ತದ ಗಳಿಕೆ. ಕುಲ್​ದೀಪ್​ ಅವರ ಈ ಬ್ಯಾಟಿಂಗ್​ ಇನಿಂಗ್ಸ್​ನಿಂದ ಡೆಲ್ಲಿ 150ರ ಗಡಿ ದಾಟಿ ಮಾನ ಉಳಿಸಿಕೊಂಡಿತು.

ಪೃಥ್ವಿ ಶಾ ಎಂದಿನಂತೆ ಒಂದೆಡರು ಬೌಂಡರಿಗೆ ಸೀಮಿತರಾಗಿ 13 ರನ್​ಗೆ ವಿಕೆಟ್​ ಒಪ್ಪಿಸಿದರು. ಇದರ ಬೆನ್ನಲೇ ಅಪಾಯಕಾರಿ ಜೇಕ್ ಫ್ರೇಸರ್-ಮ್ಯಾಕ್‌ಗುರ್ಕ್(12), ಶಾಯ್​ ಹೋಪ್​(6), ಅಭಿಷೇಕ್​ ಪೋರೆಲ್​(18), ಅಕ್ಷರ್​ ಪಟೇಲ್​(15) ಮತ್ತು ಟ್ರಿಸ್ಟಾನ್ ಸ್ಟಬ್ಸ್(4) ರನ್​ ಗಳಿಸಿ ಪೆವಿಲಿಯನ್​ ಪರೇಡ್ ನಡೆಸಿದರು. ನಾಯಕ ಪಂತ್​ 2 ಬೌಂಡರಿ ಮತ್ತು 1 ಸಿಕ್ಸರ್​ ಸಿಡಿಸಿ 27 ರನ್​ ಬಾರಿಸಿದರು.

ಕೆಕೆಆರ್​ ಪರ ಸ್ಪಿನ್ನರ್ ವರುಣ್ ಚಕ್ರವರ್ತಿ ತಮ್ಮ ಸ್ಪಿನ್​ ಜಾದು ಮೂಲಕ ಕೇವಲ 16 ರನ್​ಗೆ 3 ವಿಕೆಟ್​ ಕಿತ್ತು ಡೆಲ್ಲಿಗೆ ಆಘಾತವಿಕ್ಕಿದರು. ಉಳಿದಂತೆ ಹರ್ಷಿತ್​ ರಾಣಾ ಮತ್ತು ವೈಭವ್ ಅರೋರಾ ತಲಾ 2 ವಿಕೆಟ್​ ಉರುಳಿಸಿದರು. ಸುನೀಲ್​ ನರೈನ್​ ಮತ್ತು ಸ್ಟಾರ್ಕ್​ ತಲಾ 1 ವಿಕೆಟ್​ ಪಡೆದರು.

Continue Reading

ದೇಶ

Patanjali: ಪತಂಜಲಿಯ 14 ಉತ್ಪನ್ನಗಳ ಲೈಸೆನ್ಸ್‌ ರದ್ದು, ಬಾಬಾ ರಾಮದೇವ್‌ ವಿರುದ್ಧ ಬಿತ್ತು ಕೇಸ್

Patanjali: ಪತಂಜಲಿ ಆಯುರ್ವೇದ ಸಂಸ್ಥೆಯ ಉತ್ಪನ್ನಗಳ ದಕ್ಷತೆ ಹಾಗೂ ಅವುಗಳ ದಕ್ಷತೆ ಕುರಿತು ನೀಡಿರುವ ಜಾಹೀರಾತಿಗೂ ತಾಳೆಯಾಗದ ಹಿನ್ನೆಲೆಯಲ್ಲಿ ಉತ್ತರಾಖಂಡ ಸರ್ಕಾರವು 14 ಉತ್ಪನ್ನಗಳ ಪರವಾನಗಿಯನ್ನು ರದ್ದುಗೊಳಿಸಿದೆ ಎಂದು ತಿಳಿದುಬಂದಿದೆ. ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯಾಂಗ ನಿಂಧನೆ ಭೀತಿ ಎದುರಿಸುತ್ತಿರುವ ಬಾಬಾ ರಾಮದೇವ್‌ ಅವರಿಗೆ ಇದರಿಂದ ಮತ್ತೊಂದು ಹಿನ್ನಡೆಯಾದಂತಾಗಿದೆ.

VISTARANEWS.COM


on

Patanjali
Koo

ಡೆಹ್ರಾಡೂನ್:‌ ಜನರ ದಾರಿತಪ್ಪಿಸುವ ಜಾಹೀರಾತು ಪ್ರಕರಣಕ್ಕೆ ಸಂಬಂಧಿಸಿದಂತೆ ಪತಂಜಲಿ ಆಯುರ್ವೇದ ಸಂಸ್ಥೆ (Patanjali Ayurved) ಮುಖ್ಯಸ್ಥ ಬಾಬಾ ರಾಮದೇವ್‌ (Baba Ramdev) ಹಾಗೂ ವ್ಯವಸ್ಥಾಪಕ ನಿರ್ದೇಶಕ ಆಚಾರ್ಯ ಬಾಲಕೃಷ್ಣ (Acharya Balkrishna) ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಪತಂಜಲಿ (Patanjali) ಸಂಸ್ಥೆಯ 14 ಉತ್ಪನ್ನಗಳ ಪರವಾನಗಿಯನ್ನು ಉತ್ತರಾಖಂಡ ಸರ್ಕಾರವು (Uttarakhand Government) ರದ್ದುಗೊಳಿಸಿದೆ.

ಪತಂಜಲಿ ಉತ್ಪನ್ನಗಳ ಪರವಾನಗಿ ರದ್ದುಗೊಳಿಸುವ ಜತೆಗೆ ಡ್ರಗ್ಸ್‌ ಆ್ಯಂಡ್‌ ಮ್ಯಾಜಿ ರೆಮೆಡೀಸ್‌ ಆ್ಯಕ್ಟ್‌ನ ನಿಯಮ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಬಾಬಾ ರಾಮದೇವ್‌ ಹಾಗೂ ಆಚಾರ್ಯ ಬಾಲಕೃಷ್ಣ ಅವರ ವಿರುದ್ಧ ಕ್ರಿಮಿನಲ್‌ ಕೇಸ್‌ ಕೂಡ ದಾಖಲಿಸಲಾಗಿದೆ. ಜನರ ದಾರಿ ತಪ್ಪಿಸುವ ರೀತಿಯ ಜಾಹೀರಾತು ಪ್ರಕರಣದಲ್ಲಿ ನ್ಯಾಯಾಂಗ ನಿಂದನೆ ಭೀತಿ ಎದುರಿಸುತ್ತಿರುವ ಕೇಸ್‌ ಕುರಿತು ಕೂಡ ಸುಪ್ರೀಂ ಕೋರ್ಟ್‌ ವಿಚಾರಣೆ ನಡೆಸುತ್ತಿದೆ. ಇದರ ಮಧ್ಯೆಯೇ ಪತಂಜಲಿ ಉತ್ಪನ್ನಗಳ ಪರವಾನಗಿ ರದ್ದುಗೊಳಿಸಿರುವುದು ಬಾಬಾ ರಾಮದೇವ್‌ ಅವರಿಗೆ ಭಾರಿ ಹಿನ್ನಡೆಯಾದಂತಾಗಿದೆ.

ಪತಂಜಲಿ ಆಯುರ್ವೇದ ಸಂಸ್ಥೆಯ ಉತ್ಪನ್ನಗಳ ದಕ್ಷತೆ ಹಾಗೂ ಅವುಗಳ ದಕ್ಷತೆ ಕುರಿತು ನೀಡಿರುವ ಜಾಹೀರಾತಿಗೂ ತಾಳೆಯಾಗದ ಹಿನ್ನೆಲೆಯಲ್ಲಿ ಉತ್ತರಾಖಂಡ ಸರ್ಕಾರವು ಉತ್ಪನ್ನಗಳ ಪರವಾನಗಿಯನ್ನು ರದ್ದುಗೊಳಿಸಿದೆ ಎಂದು ಮೂಲಗಳು ತಿಳಿಸಿವೆ. ಆದಾಗ್ಯೂ, ಪರವಾನಗಿ ರದ್ದು ಕುರಿತು ಇದುವರೆಗೆ ಉತ್ತರಾಖಂಡ ಸರ್ಕಾರದಿಂದ ಅಧಿಕೃತ ಆದೇಶ ಹೊರಬಿದ್ದಿಲ್ಲ.

ಪತಂಜಲಿ ಸಂಸ್ಥೆ ವಿರುದ್ಧ ಭಾರತೀಯ ವೈದ್ಯಕೀಯ ಸಂಘವು (IMA) ಅರ್ಜಿ ಸಲ್ಲಿಸಿದೆ. ಪತಂಜಲಿ ಸಂಸ್ಥೆಯು ಕೊರೊನಾ ನಿರೋಧಕ ಲಸಿಕೆ ಹಾಗೂ ಆಧುನಿಕ ಔಷಧ ಪದ್ಧತಿ ಬಗ್ಗೆ ಸುಳ್ಳು ಅಭಿಯಾನ ಆರಂಭಿಸಿದೆ. ಅಷ್ಟೇ ಅಲ್ಲ, ಅಲೋಪಥಿ ಸೇರಿ ಹಲವು ವಿಷಯಗಳಿಗೆ ಸಂಬಂಧಿಸಿದಂತೆ ಜನರ ದಾರಿ ತಪ್ಪಿಸುವ ರೀತಿ ಪತಂಜಲಿ ಸಂಸ್ಥೆಯು ಜಾಹೀರಾತುಗಳನ್ನು ನೀಡುತ್ತಿದೆ. ಇದು ಡ್ರಗ್ಸ್‌ ಆ್ಯಂಡ್‌ ಮ್ಯಾಜಿಕ್‌ ರೆಮೆಡೀಸ್‌ (ಆಕ್ಷೇಪಾರ್ಹ ಜಾಹೀರಾತುಗಳು) ಕಾಯ್ದೆಯ ಉಲ್ಲಂಘನೆಯಾಗಿದೆ ಎಂದು ಐಎಂಎ ಅರ್ಜಿ ಸಲ್ಲಿಸಿತ್ತು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್‌ ವಿಚಾರಣೆ ನಡೆಸುವಾಗ ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ ಹಾಗೂ ಅಹ್ಸಾನುದ್ದೀನ್‌ ಅಮಾನುಲ್ಲಾ ಅವರು ಬಾಬಾ ರಾಮದೇವ್‌ ಹಾಗೂ ಆಚಾರ್ಯ ಬಾಲಕೃಷ್ಣ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಇಬ್ಬರೂ ಸುಪ್ರೀಂ ಕೋರ್ಟ್‌ಗೆ ತೆರಳಿ ಕ್ಷಮೆಯಾಚಿಸಿದರೂ ಕೇಳಿರಲಿಲ್ಲ. ಕೊನೆಗೆ ಪತ್ರಿಕೆಯಲ್ಲಿ ಜಾಹೀರಾತು ಹೊರಡಿಸಿ ಇಬ್ಬರೂ ಕ್ಷಮೆ ಕೇಳುವಂತೆ ಮಾಡಿದ್ದರು.

ಇದನ್ನೂ ಓದಿ: Baba Ramdev: ನೀವೇನು ಅಮಾಯಕರಲ್ಲ, ಕ್ಷಮಿಸಲ್ಲ; ಬಾಬಾ ರಾಮದೇವ್‌ಗೆ ಸುಪ್ರೀಂ ಚಾಟಿ!

Continue Reading

ಕೊಪ್ಪಳ

Lok Sabha Election 2024: ನಾಯಕತ್ವ ಕೊರತೆ ಇರುವುದು ಬಿಜೆಪಿಗೆ ಎಂದ ಸಿದ್ದರಾಮಯ್ಯ

Lok Sabha Election 2024: ಹಿಂದಿನ ಬಿಜೆಪಿ ಸರ್ಕಾರದ 40 % ಕಮಿಷನ್ ಬಗ್ಗೆ ತನಿಖೆ ನಡೆಯುತ್ತಿದ್ದು, ಒಂದು ವೇಳೆ ಕಮಿಷನ್ ಪಡೆದ ಆರೋಪ ಸಾಬೀತಾದರೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

VISTARANEWS.COM


on

CM Siddaramaiah inaugurated by prajadhwani lok sabha election campaign meeting at kushtagi
Koo

ಕೊಪ್ಪಳ: ಇಂಡಿಯಾ ಮೈತ್ರಿಕೂಟದಲ್ಲಿ ಪ್ರಧಾನಿ ಅಭ್ಯರ್ಥಿಗಳಿಗೆ ಮತ್ತು ನಾಯಕರಿಗೆ ಕೊರತೆಯಿಲ್ಲ. ಬಿಜೆಪಿಯಲ್ಲಿ ಮೋದಿ ಬಿಟ್ಟರೆ ಪ್ರಧಾನಿ ಯಾರಾಗ್ತಾರೇ? ನಿಜವಾಗಿಯೂ ನಾಯಕತ್ವ ಕೊರತೆ ಬಿಜೆಪಿಗಿದೆ ಎಂದು ಸಿಎಂ ಸಿದ್ದರಾಮಯ್ಯ (Lok Sabha Election 2024) ಹೇಳಿದ್ದಾರೆ.

ಜಿಲ್ಲೆಯ ಕುಷ್ಟಗಿ ಪಟ್ಟಣದಲ್ಲಿ ನಡೆದ ಪ್ರಜಾಧ್ವನಿ ಲೋಕಸಭಾ ಚುನಾವಣಾ ಪ್ರಚಾರ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂಡಿಯಾ ಮೈತ್ರಿಕೂಟದಲ್ಲಿ ಪ್ರಧಾನಿ ಅಭ್ಯರ್ಥಿಗಳಿಗೆ ಮತ್ತು ನಾಯಕರಿಗೆ ಕೊರತೆಯಿಲ್ಲ. ಬಿಜೆಪಿಯಲ್ಲಿ ಮೋದಿ ಬಿಟ್ಟರೇ ಪ್ರಧಾನಿ ಯಾರಾಗ್ತಾರೇ, ನಿಜವಾಗಿಯೂ ನಾಯಕತ್ವ ಕೊರತೆ ಬಿಜೆಪಿಗಿದೆ. ಹೀಗಾಗಿ ಸೋಲಿನ ಹತಾಶೆಯಿಂದ ಜನರ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಟೀಕಿಸಿದರು.

ಹಿಂದಿನ ಬಿಜೆಪಿ ಸರ್ಕಾರದ 40% ಕಮಿಷನ್ ಬಗ್ಗೆ ತನಿಖೆ ನಡೆಯುತ್ತಿದ್ದು, ಒಂದು ವೇಳೆ ಕಮಿಷನ್ ಪಡೆದ ಆರೋಪ ಸಾಬೀತಾದರೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುತ್ತೇವೆ ಎಂದು ಸಿಎಂ ತಿಳಿಸಿದರು.

ಇದನ್ನೂ ಓದಿ: Karnataka Weather: ರಾಯಚೂರಿನಲ್ಲಿ ರಾಜ್ಯದಲ್ಲೇ ಗರಿಷ್ಠ ಉಷ್ಣಾಂಶ ದಾಖಲು; ಇನ್ನೂ 4 ದಿನ ಶಾಖದ ಅಲೆ ಎಚ್ಚರಿಕೆ

ಮೋದಿ ಕಳೆದ ಹತ್ತು ವರ್ಷದಲ್ಲಿ ಪ್ರಮಾಣಿಕ ಆಡಳಿತ ನಡೆಸಲಿಲ್ಲ. ರೈತರಿಗೆ ಜನಪರ ಕಾರ್ಯಕ್ರಮ ಜಾರಿ ಮಾಡಲಿಲ್ಲ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಆಶ್ವಾಸನೆ ನೀಡಿದ ಐದು ಗ್ಯಾರಂಟಿ ಜಾರಿಗೊಳಿಸಿದ್ದೇವೆ. ಈವರೆಗೂ ಶಕ್ತಿ ಯೋಜನೆಯಡಿ 200 ಕೋಟಿ ಜನ ಸೌಲಭ್ಯ ಪಡೆದಿದ್ದಾರೆ. ಬಡವರೆಲ್ಲಾ ಕಾಂಗ್ರೆಸ್ ಪರ ಆಗ್ತಾರೆ ಅಂತ ಮೋದಿಯವರು ಅಕ್ಕಿ ನೀಡದೇ ರಾಜ್ಯದ ಜನತೆಗೆ ದ್ರೋಹ ಮಾಡಿದ್ರು. ಹೀಗಾಗಿ ಅಕ್ಕಿ ಬದಲಾಗಿ ಐದು ಕೆಜಿ ಅಕ್ಕಿಯ ಹಣ ಫಲಾನುಭವಿ ಅಕೌಂಟ್‌ಗೆ ಹಾಕುತ್ತಿದ್ದೇವೆ ಎಂದರು.

ದೇಶದಲ್ಲಿ ಹಿಂದುಳಿದ, ದಲಿತ, ಎಸ್‌ಟಿ, ಮುಸ್ಲಿಂ ಸಮುದಾಯಕ್ಕೆ ಮೀಸಲಾತಿ ಕೊಟ್ಟಿದ್ದು ಕಾಂಗ್ರೆಸ್. ಆದರೆ, ಮೋದಿಯವರು ಮೀಸಲಾತಿ ವಿರುದ್ಧ ಇದ್ದಾರೆ. ಜಾತಿ ಜಾತಿಗಳ ವಿರುದ್ಧ ಎತ್ತಿಕಟ್ಟುವ ಮೋದಿ ಸ್ಕೆಚ್ ವಿಫಲಗೊಳಿಸಿ. ಸುಳ್ಳು ಹೇಳಿ ಜನರನ್ನು ದಾರಿತಪ್ಪಿಸುವ ಬಿಜೆಪಿಗರಿಗೆ ಈ ಚುನಾವಣೆಯಲ್ಲಿ ತಕ್ಕ ಉತ್ತರ ನೀಡಿ ಎಂದರು.

ಕಾಂಗ್ರೆಸ್‌ನ ಮನಮೋಹನ್ ಸಿಂಗ್ ಪ್ರಧಾನಮಂತ್ರಿಯಾಗಿದ್ದಾಗ ಇಡೀ ದೇಶದ ರೈತರ 76 ಸಾವಿರ ಕೋಟಿ ಸಾಲ ಮನ್ನಾ ಮಾಡಿದರು. ಆದರೆ ಮೋದಿ ಅಂಬಾನಿ, ಅದಾನಿಯಂತಹ ಬಂಡವಾಳಶಾಹಿ ಶ್ರೀಮಂತರ 16 ಲಕ್ಷ ಕೋಟಿ ರೂಪಾಯಿ ಸಾಲ ಮನ್ನಾ ಮಾಡಿದರು. ರೈತರ ಸಾಲ ಮನ್ನಾ ಮಾಡಲು ಒಪ್ಪದ ಮೋದಿ ಯಾರ ಪರ ಎನ್ನುವುದನ್ನು ದೇಶದ ಜನರಿಗೆ ಮನವರಿಕೆಯಾಗಿದೆ‌ ಎಂದು ಆರೋಪಿಸಿದರು‌‌.

ಕೆಪಿಸಿಸಿ ಅಧ್ಯಕ್ಷ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಮಾತನಾಡಿ, ಪ್ರಧಾನಿ ಮೋದಿ ಹತ್ತು ವರ್ಷದ ಅವಧಿಯಲ್ಲಿ ರಾಜ್ಯಕ್ಕೆ ಎಷ್ಟು ಅನುದಾನ ನೀಡಿದ್ದಾರೆ ? ಎಷ್ಟು ಅಭಿವೃದ್ಧಿ ಮಾಡಿದರು? ರೈತರ ಬದುಕಿನಲ್ಲಿ ಬದಲಾವಣೆ ಆಯ್ತಾ? ಅಚ್ಛೇದಿನ ಬಂತಾ? ನಿಮ್ಮ ಖಾತೆಗೆ 15 ಲಕ್ಷ ಬಂತಾ? ಬಿಜೆಪಿ ನುಡಿದಂತೆ ನಡೆದಿದ್ದಾರಾ? ಎಂದು ಆಲೋಚಿಸಿ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಎಲ್ಲ ಗ್ಯಾರಂಟಿ ಅನುಷ್ಠಾನಗೊಳಿಸಿ, ರಾಜ್ಯದ ಬಡವರ ಹಿತ ಕಾಪಾಡಿದ್ದೇವೆ ಎಂದರು.

ಇಲ್ಲಿನ ತುಂಗಭದ್ರಾ ಜಲಾಶಯದಲ್ಲಿ ಹೂಳು ತುಂಬಿದ್ದರಿಂದ ನವಲಿಯಲ್ಲಿ ಅಣೆಕಟ್ಟು ಕಟ್ಟಲು ನಾವು ಮುಂದಾಗಿದ್ದೇವೆ. ಇದಕ್ಕಾಗಿ ನಮ್ಮ ಮುಖ್ಯಮಂತ್ರಿಗಳು ಬಜೆಟ್‌ನಲ್ಲಿ ಅನುದಾನ ಮೀಸಲಿಟ್ಟಿದ್ದು, ಚುನಾವಣೆ ನಂತರ ಆಂಧ್ರ ಪ್ರದೇಶ ಹಾಗೂ ತೆಲಂಗಾಣದ ಜತೆ ಚರ್ಚೆ ಮಾಡಿ, ರೈತರ ಬದುಕು ರಕ್ಷಿಸುತ್ತೇವೆ ಎಂದರು.

ಇದನ್ನೂ ಓದಿ: Toyota Kirloskar Motor: ಕಾರ್‌ ಕೇರ್‌ಗೆ ʼಟಿಗ್ಲೊಸ್ʼ ಆರಂಭಿಸಿದ ಟೊಯೊಟಾ ಕಿರ್ಲೋಸ್ಕರ್ ಮೋಟಾರ್

ಬಡವರಿಗಾಗಿ ಕಾರ್ಯಕ್ರಮ ರೂಪಿಸಿದ್ದರೆ ಅದು ಕಾಂಗ್ರೆಸ್ ಪಕ್ಷ. ಮೋದಿ ಗ್ಯಾರಂಟಿ ಎಂದು ಪ್ರಚಾರ ಮಾಡುತ್ತಿದ್ದಾರೆ. ಮೋದಿ ಗ್ಯಾರಂಟಿಯಿಂದ ನಿಮ್ಮ ಹೊಟ್ಟೆ ತುಂಬುತ್ತಿದೆಯೇ? ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೊದಲ ದಿನವೇ ನಮ್ಮ ಐದು ಗ್ಯಾರಂಟಿ ಯೋಜನೆಗಳ ಜಾರಿಗೆ ಅನುಮೋದನೆ ನೀಡಿದೆವು ಎಂದು ತಿಳಿಸಿದರು.

ಸಚಿವರಾದ ಶಿವರಾಜ ತಂಗಡಗಿ, ಭೈರತಿ ಸುರೇಶ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹಾಗೂ ಮಾಜಿ ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪುರ ಮತ್ತು ಕಾಡಾ ಅಧ್ಯಕ್ಷ ಹಾಗೂ ಮಾಜಿ ಶಾಸಕ ಹಸನಸಾಬ್ ದೋಟಿಹಾಳ ಮಾತನಾಡಿದರು.

ಇದನ್ನೂ ಓದಿ: Labour Day 2024: ಮೇ 1ರ ಕಾರ್ಮಿಕ ದಿನಾಚರಣೆಯ ಹಿನ್ನೆಲೆ ಏನು? ಏನಿದರ ಸಂದೇಶ?

ಈ ಸಂದರ್ಭದಲ್ಲಿ ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ, ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ, ಸಿಂಧನೂರು ಶಾಸಕ ಹಂಪನಗೌಡ ಬಾದರ್ಲಿ, ಮಸ್ಕಿ ಶಾಸಕ ಬಸವನಗೌಡ ತುರವಿಹಾಳ, ಮಾಜಿ ವಿಪ ಸಭಾಪತಿ ವಿ.ಆರ್.ಸುದರ್ಶನ, ವೆಂಕಟರಾಮಯ್ಯ, ವಿಪ ಸದಸ್ಯ ಶರಣೇಗೌಡ ಪಾಟೀಲ್ ಬಯ್ಯಾಪುರ, ಎಎಪಿ ಜಿಲ್ಲಾಧ್ಯಕ್ಷ ಕನಕಪ್ಪ, ರಾಜ್ಯ ಕಾರ್ಯದರ್ಶಿ ಸಿದ್ದನಗೌಡ, ಮಹಿಳಾ ಜಿಲ್ಲಾಧ್ಯಕ್ಷೆ ಮಾಲತಿ ನಾಯಕ, ಮುಖಂಡರಾದ ಬಸವರಾಜಸ್ವಾಮಿ ಮಳೇಮಠ, ಅಮರೇಶ ಕರಡಿ, ಕೃಷ್ಣ ಎಂ. ಇಟ್ಟಂಗಿ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

Continue Reading
Advertisement
Sadhguru Jaggi Vasudev
ಬೆಂಗಳೂರು12 mins ago

Sadhguru Jaggi Vasudev: ಮೆದುಳಿನ ಶಸ್ತ್ರಚಿಕಿತ್ಸೆಯ ತಿಂಗಳ ಬಳಿಕ ಕಾಂಬೋಡಿಯಾಗೆ ಸದ್ಗುರು ಪ್ರವಾಸ

Justin Trudeau
ದೇಶ17 mins ago

Justin Trudeau: ಕೆನಡಾ ಪ್ರಧಾನಿ ಕಾರ್ಯಕ್ರಮದಲ್ಲಿ ಖಲಿಸ್ತಾನ ಪರ ಘೋಷಣೆ; ಭಾರತ ಸಮನ್ಸ್!

M P Rudramba
ಕರ್ನಾಟಕ34 mins ago

M P Rudramba: ಮಾಜಿ ಡಿಸಿಎಂ ದಿವಂಗತ ಎಂ.ಪಿ. ಪ್ರಕಾಶ್ ಧರ್ಮ ಪತ್ನಿ ರುದ್ರಾಂಬಾ ನಿಧನ

KKR vs DC
ಕ್ರೀಡೆ43 mins ago

KKR vs DC: ಡೆಲ್ಲಿಗೆ ನೀರು ಕುಡಿಸಿದ ಸಾಲ್ಟ್​; ಪಂತ್​ ಪಡೆಯ ಪ್ಲೇ ಆಫ್ ಹಾದಿ ದುರ್ಗಮ

Patanjali
ದೇಶ52 mins ago

Patanjali: ಪತಂಜಲಿಯ 14 ಉತ್ಪನ್ನಗಳ ಲೈಸೆನ್ಸ್‌ ರದ್ದು, ಬಾಬಾ ರಾಮದೇವ್‌ ವಿರುದ್ಧ ಬಿತ್ತು ಕೇಸ್

Murder Case
ಕರ್ನಾಟಕ59 mins ago

Murder Case: ಹೆಂಡ್ತಿ ಬಿಟ್ಟು ಹೋಗುತ್ತಾಳೆಂದು ಕತ್ತು ಸೀಳಿ ಕೊಂದ ಪತಿರಾಯ!

CM Siddaramaiah inaugurated by prajadhwani lok sabha election campaign meeting at kushtagi
ಕೊಪ್ಪಳ1 hour ago

Lok Sabha Election 2024: ನಾಯಕತ್ವ ಕೊರತೆ ಇರುವುದು ಬಿಜೆಪಿಗೆ ಎಂದ ಸಿದ್ದರಾಮಯ್ಯ

DCM D K Shivakumar Latest statement in Belagavi
ಪ್ರಮುಖ ಸುದ್ದಿ1 hour ago

DK Shivakumar: ಪ್ರಜ್ವಲ್‌ ರೇವಣ್ಣ ಪ್ರಕರಣದ ಬಗ್ಗೆ ಬಿಜೆಪಿ ನಿಲುವೇನು; ಶಿವಕುಮಾರ್ ಪ್ರಶ್ನೆ

Murder Case
ಕರ್ನಾಟಕ2 hours ago

Murder Case: ದ್ವಿತೀಯ ಪಿಯುಸಿಯಲ್ಲಿ ಮಾರ್ಕ್ಸ್‌ ಕಡಿಮೆ ಬಂದಿದ್ದಕ್ಕೆ ಚಾಕು ಇರಿದು ಮಗಳನ್ನೇ ಕೊಂದ ತಾಯಿ!

Chandrayaan 3
ದೇಶ2 hours ago

Chandrayaan 3: ಚಂದ್ರಯಾನ 3 ಆಗುತ್ತಿತ್ತು ಛಿದ್ರ; ಆ 4 ಸೆಕೆಂಡ್‌ಗಳಲ್ಲೇ ಮಿಷನ್‌ ಬಚಾವ್‌ ಆಗಿದ್ದು ಹೇಗೆ?

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

PM Narendra modi in Bagalakote and Attack on Congress
Lok Sabha Election 202411 hours ago

PM Narendra Modi: ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್‌ ಷಡ್ಯಂತ್ರ: ಮೋದಿ ವಾಗ್ದಾಳಿ

PM Narendra modi in Bagalakote for Election Campaign and here is Live telecast
Lok Sabha Election 202412 hours ago

PM Narendra Modi Live: ಇಂದು ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಲೈವ್‌ಗಾಗಿ ಇಲ್ಲಿ ವೀಕ್ಷಿಸಿ

dina bhavishya read your daily horoscope predictions for April 29 2024
ಭವಿಷ್ಯ19 hours ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

Narendra Modi
Lok Sabha Election 20241 day ago

PM Narendra Modi: ಇವಿಎಂ ದೂರುವ ಕಾಂಗ್ರೆಸ್‌ಗೆ ಸೋಲಿನ ಭೀತಿ; ಕರ್ನಾಟಕದಲ್ಲಿ 1 ಸೀಟನ್ನೂ ಗೆಲ್ಲಲ್ಲವೆಂದ ಮೋದಿ!

PM Narendra Modi in Sirsi
Lok Sabha Election 20241 day ago

PM Narendra Modi: ಕಾಂಗ್ರೆಸ್ ರಾಮ ವಿರೋಧಿ; ಮನೆಗೆ ಹೋಗಿ ಕರೆದರೂ ಮಂದಿರ ಉದ್ಘಾಟನೆಗೆ ಬರಲಿಲ್ಲ: ಮೋದಿ ಟೀಕೆ

If Congress comes to power all your assets will belong to Government says PM Narendra Modi
Lok Sabha Election 20241 day ago

Narendra Modi: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನೀವು ಕಷ್ಟಪಟ್ಟು ಸಂಪಾದಿಸಿದ ಆಸ್ತಿಯೆಲ್ಲ ಅನ್ಯರ ಪಾಲು: ಮೋದಿ ಎಚ್ಚರಿಕೆ

Congress ties with Aurangzeb supporters and Girls killed under his rule says Narendra Modi
Lok Sabha Election 20241 day ago

Narendra Modi: ಔರಂಗಜೇಬ್ ಬೆಂಬಲಿಗರ ಜತೆ ಕಾಂಗ್ರೆಸ್ ದೋಸ್ತಿ; ಇವರ ಆಡಳಿತದಲ್ಲಿ ಹೆಣ್ಣು ಮಕ್ಕಳ ಹತ್ಯೆ: ಮೋದಿ ವಾಗ್ದಾಳಿ

Modi in Karnataka stay in Belagavi tomorrow and Huge gatherings at five places
Latest2 days ago

Narendra Modi Live : ಪ್ರಧಾನಿ ಮೋದಿಯ ಬೆಳಗಾವಿ ಪ್ರಚಾರ ಸಭೆಯ ನೇರ ಪ್ರಸಾರವನ್ನು ಇಲ್ಲಿ ವೀಕ್ಷಿಸಿ…

Dina Bhavishya
ಭವಿಷ್ಯ2 days ago

Dina Bhavishya : ಈ ರಾಶಿಯವರಿಗೆ ದಿನದ ಮಟ್ಟಿಗೆ ಖರ್ಚು ಹೆಚ್ಚು

Lok sabha election 2024
Lok Sabha Election 20242 days ago

Lok Sabha Election 2024 : ಮೊಬೈಲ್ ನಿಷೇಧದ ನಡುವೆಯೂ ವೋಟ್‌ ಹಾಕಿದ ವಿಡಿಯೊ ಮಾಡಿದ ಪುಂಡರು

ಟ್ರೆಂಡಿಂಗ್‌