ಇದು ಜಾಲಿ ಡೇಸ್‌ ಅಲ್ಲ ಡಾಲಿ ಡೇಸ್‌! - Vistara News

ಸಿನಿಮಾ

ಇದು ಜಾಲಿ ಡೇಸ್‌ ಅಲ್ಲ ಡಾಲಿ ಡೇಸ್‌!

ಜುಲೈ ನಂತರ ಡಾಲಿ ಧನಂಜಯ್‌ ಅವರ ಹಲವಾರು ಸಿನಿಮಾಗಳು ಬಿಡುಗಡೆ ಆಗಲಿವೆ. ಬಿಡುಗಡೆ ಆಗಲಿರುವ ಅವರ ಹಲವಾರು ಸಿನಿಮಾಗಳು ಕುತೂಹಲ ಮೂಡಿಸಿವೆ.

VISTARANEWS.COM


on

ಡಾಲಿ
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು : ನಿರ್ದೇಶಕ ಗುರುಪ್ರಸಾದ್‌ ಅವರ ʼಡೈರೆಕ್ಟರ್‌ ಸ್ಪೆಷಲ್‌ʼ ಚಿತ್ರದ ಮೂಲಕ ಸಿನಿ ರಂಗಕ್ಕೆ ಕಾಲಿಟ್ಟವರು ಡಾಲಿ ಧನಂಜಯ್‌. ಪಿ. ಅರ್ಜುನ್ ಅವರ ಚಲನಚಿತ್ರ ʼರಾಟೆʼಯಲ್ಲಿ  ಶ್ರುತಿ ಹರಿಹರನ್ ಜತೆ ನಟಿಸಿದ್ದರು. ನಂತರ ಪ್ರೀತಮ್ ಗುಬ್ಬಿ ನಿರ್ದೇಶನದ ʼಬಾಕ್ಸರ್ʼ ಚಿತ್ರದಲ್ಲಿನ ನಟನೆ ಅವರಿಗೆ ವ್ಯಾಪಕ ಮೆಚ್ಚುಗೆಯನ್ನು ತಂದಿತು. ನಂತರ ಶಿವರಾಜ್‌ಕುಮಾರ್‌ ಅಭಿನಯದ ʼಟಗರುʼ ಚಿತ್ರದಲ್ಲಿ ನೆಗೆಟಿವ್ ಶೇಡ್‌ನಲ್ಲಿ ಅಬ್ಬರಿಸಿ ಬೊಬ್ಬಿರಿದ ಧನಂಜಯ್ ಇದೀಗ ಮೋಸ್ಟ್ ಡಿಮ್ಯಾಂಡೆಡ್ ಹೀರೋ ಕಮ್ ವಿಲನ್ ಆಗಿದ್ದಾರೆ.

ಒಂದಕ್ಕಿಂತ ಒಂದು ವಿಭಿನ್ನ ಸಿನಿಮಾಗಳನ್ನು ಮಾಡುತ್ತ ಬಂದಿರು ಡಾಲಿ ಈ ವರ್ಷದಲ್ಲಿ ಅತೀ ಹೆಚ್ಚು ಸಿನಿಮಾಗಳು ರಿಲೀಸ್‌ ಆದ ನಟ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಸರಾಸರಿ ಎರಡು ತಿಂಗಳಿಗೆ ಒಂದರಂತೆ ಅವರ ಅಭಿನಯದ ಸಿನಿಮಾಗಳು ರಿಲೀಸ್‌ ಆಗಲಿವೆ.

ಇದನ್ನೂ ಓದಿ | ಕಿಚ್ಚ ಸುದೀಪ್‌ V/S ಅಜಯ್‌ ದೇವಗನ್‌: ʼThank Godʼ ಸಿನಿಮಾ ರಿಲೀಸ್‌ ಡೇಟ್‌ ಮುಂದಕ್ಕೆ, ವಿಕ್ರಾಂತ್‌ ರೋಣ ಫಿಕ್ಸ್‌

ʼರತ್ನನ್‌ ಪ್ರಪಂಚʼ, ʼಬಡವ ರಾಸ್ಕಲ್‌ʼ, ʼಪಾಪ್‌ಕಾರ್ನ್ ಮಂಕಿ ಟೈಗರ್ʼ, ʼಸಲಗʼ, ʼಪುಷ್ಪ ದಿ ರೈಸ್‌ʼ, ʼ21 ಅವರ್ಸ್‌ʼ  ಹೀಗೆ ಹಲವಾರು ಚಿತ್ರದ ಮೂಲಕ ಹೆಸರು ಪಡೆದವರು ಡಾಲಿ.

ಸ್ಯಾಂಡಲ್‌ವುಡ್‌ನಲ್ಲಿ ಹವಾ ಸೃಷ್ಟಿ ಮಾಡುತ್ತಿರುವ ಡಾಲಿ

ಶುಕ್ರವಾರ (ಜೂನ್‌ 11 ) ಧನಂಜಯ್‌ ಅಭಿನಯದ ಹೊಸ ಸಿನಿಮಾದ ರಿಲೀಸ್‌ ಡೇಟ್‌ ಅನೌನ್ಸ್‌ ಆಗಿದೆ. ಅವರೇ ನಿರ್ಮಾಣ ಮಾಡಿ, ನಟಿಸಿರುವ ʼಹೆಡ್‌ ಬುಷ್‌ʼ ಸಿನಿಮಾ ಅಕ್ಟೋಬರ್‌ 21ರಂದು ತೆರೆಗೆ ಬರಲಿದೆ. ಈ ಸಿನಿಮಾದಲ್ಲಿ ಬೆಂಗಳೂರಿನ  ಭೂಗತ ದೊರೆ ಜಯರಾಜ್‌ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರಕ್ಕೆ ರವಿಚಂದ್ರನ್‌, ವಸಿಷ್ಠ ಸಿಂಹ, ಶ್ರುತಿ ಹರಿಹರನ್‌ ಸೇರಿದಂತೆ ಹೆಸರಾಂತ ತಾರಬಳಗವೇ ಚಿತ್ರಕ್ಕಿದೆ.

ಡಾಲಿ ಸಿನಿಮಾ ಫೆಸ್ಟಿವಲ್‌

ಜುಲೈನಲ್ಲಿ ಸಿನಿಮಾ ಹಬ್ಬ ಆಚರಿಸಲಿದ್ದಾರೆ ಡಾಲಿ. ಇವರ ಸಿನಿಮಾಗಳು ಜುಲೈ ನಂತರ ಒಂದರ ಮೇಲೊಂದು ನಾನ್‌ಸ್ಟಾಪ್‌ ಇಲ್ಲದೇ ರಿಲೀಸ್‌ ಆಗುತ್ತಿವೆ. ಶಿವರಾಜ್ ಕುಮಾರ್ ಜತೆಗಿನ ʼಭೈರಾಗಿʼ (Bairagi ), ಆಗಸ್ಟ್‌ನಲ್ಲಿ ʼಮಾನ್ಸೂನ್‌ ರಾಗʼ (Monsoon Raaga), ಸೆಪ್ಟೆಂಬರ್‌ನಲ್ಲಿ ʼಒನ್ಸ್‌ ಅಪಾನ್‌ ಅ ಟೈಮ್‌ ಇನ್‌ ಜಮಾಲಿಗುಡ್ಡʼ (‘Once Upon A Time in Jamaligudda’), ಅಕ್ಟೋಬರ್‌ನಲ್ಲಿ ʼಹೆಡ್‌ ಬುಷ್‌ʼ (Head Bush) , ನವೆಂಬರ್‌ನಲ್ಲಿ ʼಹೊಯ್ಸಳʼ (Hoysala ), ಅಲ್ಲದೇ ಈ ನಡುವೆ ಯಾವ ತಿಂಗಳಲ್ಲಾದರೂ ಜಗ್ಗೇಶ್‌ ಜತೆಗಿನ ʼತೋತಾಪುರಿʼ (Totapuri) ಸಿನಿಮಾ ಕೂಡ ರಿಲೀಸ್‌ ಆಗಬಹುದು.

ನಟನೆ ಮಾತ್ರವಲ್ಲ, ಬರಹಗಾರರೂ ಆಗಿರುವ ಡಾಲಿ, ‘ಜಯನಗರ 4ನೇ ಬ್ಲಾಕ್ʼ ಕಿರುಚಿತ್ರದ ಮೂಲಕ ನಟನೆ ಜತೆ ಅವರೇ ಚಿತ್ರಕಥೆಯನ್ನು ಬರೆದಿರುವುದು ವಿಶೇಷ. ಬೆಸ್ಟ್‌ ನೆಗೆಟಿವ್‌ ರೋಲ್‌ ಅವಾರ್ಡ್‌, ಬೆಸ್ಟ್‌ ಆ್ಯಕ್ಟರ್‌ ಅವಾರ್ಡ್‌, ಬೆಸ್ಟ್‌ ಸಪೋರ್ಟಿಂಗ್‌ ಆ್ಯಕ್ಟರ್‌ ಅವಾರ್ಡ್‌… ಹೀಗೆ ಸಾಕಷ್ಟು ಪ್ರಶಸ್ತಿಗಳನ್ನು ಮುಗಿಲೇರಿಸಿಕೊಂಡವರು. ಸ್ಯಾಂಡಲ್‌ವುಡ್‌ ಮಾತ್ರವಲ್ಲದೆ ತಮಿಳಿನಲ್ಲೂ ಪಾದಾರ್ಪಣೆ ಮಾಡಿರುವ ಡಾಲಿ, ಪುಷ್ಪ ಸಿನಿಮಾದ ಶೂಟಿಂಗ್‌ನಲ್ಲಿ ಸದ್ಯ ಬ್ಯುಸಿ ಆಗಿದ್ದಾರೆ. ಇನ್ನು ಡಾಲಿ ಅಭಿಮಾನಿಗಳಂತೂ ಸಾಲುಸಾಲು ಸಿನಿಮಾ ಡೇಟ್ಸ್ ನೋಡಿ ಇದು ಡಾಲಿ ಫೆಸ್ಟಿವಲ್ ಕಣೋ ಅಂತಿದ್ದಾರೆ.

ಇದನ್ನೂ ಓದಿ | Movie Review | ಕಣ್ಣಾಮುಚ್ಚಾಲೆ ಆಟದಂತಿರುವ ʼ 21 ಅವರ‍್ಸ್‌ ʼ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಸ್ಯಾಂಡಲ್ ವುಡ್

Dhanya Ramkumar: ʻದಿಯಾʼ ಹೀರೊಗೆ ಜೋಡಿಯಾದ ದೊಡ್ಮನೆ ಬ್ಯೂಟಿ!

Dhanya Ramkumar: ಚೌಕಿದಾರ್ ಬಹುಭಾಷೆಯಲ್ಲಿ ಮೂಡಿ ಬರ್ತಿದೆ. ಕನ್ನಡದ ಜತೆಗೆ ಹಲವು ಭಾಷೆಯಲ್ಲಿ ಚಿತ್ರ ತಯಾರಾಗುತ್ತಿದೆ. ಈವರೆಗೆ ಸಿನಿಮಾದಲ್ಲಿ ಲವರ್‌ ಬಾಯ್‌ನಂತೆ ಕಾಣಿಸಿಕೊಂಡಿರುವ ಪೃಥ್ವಿ ಅಂಬಾರ್‌ ಈ ಚಿತ್ರದಲ್ಲಿ ಆಕ್ಷನ್ ಸೀಕ್ವೆನ್ಸ್ ಮೂಲಕ ಪ್ರೇಕ್ಷಕರನ್ನು ರಂಜಿಸಲಿದ್ದಾರೆ, ಹಾಗಂತ ಚೌಕಿದಾರ್ ಕಂಪ್ಲೀಟ್ ಆಕ್ಷನ್ ಸಿನಿಮಾವಲ್ಲ. ಪಕ್ಕ ಫ್ಯಾಮಿಲಿ ಎಂಟರ್ ಟೈನರ್.

VISTARANEWS.COM


on

Dhanya Ramkumar heroine in choukidaar cinema
Koo

ಬೆಂಗಳೂರು: ʻರಥಾವರʼ ಖ್ಯಾತಿಯ ಚಂದ್ರಶೇಖರ್ ಬಂಡಿಯಪ್ಪ ನಿರ್ದೇಶಿಸುತ್ತಿರುವ ಹೊಸ ಸಿನಿಮಾ ಚೌಕಿದಾರ್. ಇತ್ತೀಚೆಗಷ್ಟೇ ಡೈಲಾಗ್ ಕಿಂಗ್ ಸಾಯಿಕುಮಾರ್ ಚಿತ್ರತಂಡ ಸೇರಿಕೊಂಡಿದ್ದರು. ಇದೀಗ ಚೌಕಿದಾರ್‌ಗೆ ನಾಯಕಿ ಸಿಕ್ಕಿದ್ದಾಳೆ. ದೊಡ್ಮನೆ ಬ್ಯೂಟಿ ಧನ್ಯರಾಮ್ ಕುಮಾರ್‌ಗೆ (Dhanya Ramkumar) ಪೃಥ್ವಿ ಅಂಬಾರ್‌ ಜೋಡಿಯಾಗಿ ನಟಿಸುತ್ತಿದ್ದಾರೆ.

ಪೃಥ್ವಿ ಅಂಬಾರ್ ನಾಯಕನಾಗಿ ಅಭಿನಯಿಸುತ್ತಿರುವ ʻಚೌಕಿದಾರ್ʼ ಸಿನಿಮಾದಲ್ಲಿ ಧನ್ಯರಾಮ್ ಕುಮಾರ್ ಹೀರೊಯಿನ್ ಆಗಿ ಬಣ್ಣ ಹಚ್ಚುತ್ತಿದ್ದಾರೆ. ʻನಿನ್ನ ಸನಿಹಕೆʼ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೆ ಪರಿಚಯಿತರಾಗಿದ್ದ ಧನ್ಯ ಇತ್ತೀಚೆಗಷ್ಟೇ ʻಜಡ್ಜಮೆಂಟ್ʼ ಸಿನಿಮಾ ಮೂಲಕ ಪ್ರೇಕ್ಷಕರ ಎದುರು ಬಂದಿದ್ದರು. ಸದ್ಯ ಕಾಲಪತ್ತರ್ ರಿಲೀಸ್ ಗೆ ಎದುರು ನೋಡುತ್ತಿರುವ ದೊಡ್ಮನೆ ಸುಂದರಿ ಈಗ ಚೌಕಿದಾರ್ ಬಳಗ ಸೇರಿಕೊಂಡಿದ್ದಾರೆ.

ಚೌಕಿದಾರ್ ಬಹುಭಾಷೆಯಲ್ಲಿ ಮೂಡಿ ಬರ್ತಿದೆ. ಕನ್ನಡದ ಜತೆಗೆ ಹಲವು ಭಾಷೆಯಲ್ಲಿ ಚಿತ್ರ ತಯಾರಾಗುತ್ತಿದೆ. ಈವರೆಗೆ ಸಿನಿಮಾದಲ್ಲಿ ಲವರ್‌ ಬಾಯ್‌ನಂತೆ ಕಾಣಿಸಿಕೊಂಡಿರುವ ಪೃಥ್ವಿ ಅಂಬಾರ್‌ ಈ ಚಿತ್ರದಲ್ಲಿ ಆಕ್ಷನ್ ಸೀಕ್ವೆನ್ಸ್ ಮೂಲಕ ಪ್ರೇಕ್ಷಕರನ್ನು ರಂಜಿಸಲಿದ್ದಾರೆ, ಹಾಗಂತ ಚೌಕಿದಾರ್ ಕಂಪ್ಲೀಟ್ ಆಕ್ಷನ್ ಸಿನಿಮಾವಲ್ಲ. ಪಕ್ಕ ಫ್ಯಾಮಿಲಿ ಎಂಟರ್ ಟೈನರ್.

ಇದನ್ನೂ ಓದಿ: Kanguva Release Date: ʻಕಂಗುವ’ ರಿಲೀಸ್‌ ಡೇಟ್‌ ಅನೌನ್ಸ್‌; ಧ್ರುವ ಸರ್ಜಾ ಸಿನಿಮಾ ಜತೆ ಕ್ಲ್ಯಾಶ್‌!

ಇತ್ತೀಚೆಗಷ್ಟೇ ಟೈಟಲ್ ಬಿಡುಗಡೆ ಮಾಡಿದ್ದ ಚಿತ್ರತಂಡ ಡೈಲಾಗ್ ಕಿಂಗ್ ಸಾಯಿಕುಮಾರ್ ಅವರನ್ನು ತಮ್ಮ ಬಳಗಕ್ಕೆ ಸ್ವಾಗತಿಸಿತ್ತು. ಚೌಕಿದಾರ್ ಸಿನಿಮಾಗೆ ಬಹುಭಾಷಾ ನಟ ಸಾಯಿಕುಮಾರ್ ಎಂಟ್ರಿ ಕೊಟ್ಟಿದದರು. ಆದ್ರೆ ಡೈಲಾಗ್ ಕಿಂಗ್ ಪಾತ್ರದ ಬಗ್ಗೆ ಚಿತ್ರತಂಡ ಗುಟ್ಟುಬಿಟ್ಟುಕೊಟ್ಟಿಲ್ಲ.

ವಿದ್ಯಾ ಶೇಖರ್ ಎಂಟರ್ಟೈನ್ಮೆಂಟ್ ಬ್ಯಾನರ್ ಅಡಿಯಲ್ಲಿ ಡಾ.ಕಲ್ಲಹಳ್ಳಿ ಚಂದ್ರಶೇಖರ್ ಚೌಕಿದಾರ್ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಸಚಿನ್‌ ಬಸ್ರೂರು ಈ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡುತ್ತಿದ್ದು, ವಿ. ನಾಗೇಂದ್ರ ಪ್ರಸಾದ್‌, ಪ್ರಮೋದ್‌ ಮರವಂತೆ ಹಾಡುಗಳಿಗೆ ಸಾಹಿತ್ಯ ಬರೆಯುತ್ತಿದ್ದಾರೆ. ಜುಲೈ ಮೂರನೇ ತಾರೀಖಿನಂದು ಬಂಡಿ ಮಹಾಕಾಳಿ ದೇಗುಲದಲ್ಲಿ ಚೌಕಿದಾರ್ ಸಿನಿಮಾ ಮುಹೂರ್ತ ನೆರವೇರಿಸಲು ಚಿತ್ರತಂಡ ಯೋಜನೆ ಹಾಕಿದೆ.

Continue Reading

ಸಿನಿಮಾ

Kalki 2898 AD 2: ಶೀಘ್ರದಲ್ಲೇ ಬರಲಿದೆ ಕಲ್ಕಿ 2898ಎಡಿ ಭಾಗ- 2!

2024ರ ಬಹು ನಿರೀಕ್ಷಿತ ಚಿತ್ರ ಕಲ್ಕಿ 2898ಎಡಿ ಭಾರತೀಯ ಚಿತ್ರರಂಗದಲ್ಲಿ ಮೂರನೇ ಅತೀ ದೊಡ್ಡ ಓಪನರ್ ಕಂಡ ಸಿನಿಮಾವಾಗಿ ಹೊರಹೊಮ್ಮಿದ್ದು ಮಾತ್ರವಲ್ಲದೇ ಚಿತ್ರದ ಮುಂದಿನ ಸರಣಿ ಶೀಘ್ರದಲ್ಲೇ ತೆರೆ ಕಾಣುವ ನಿರೀಕ್ಷೆಯನ್ನು ಮೂಡಿಸಿದೆ. ಈ ಬಗ್ಗೆ ಚಿತ್ರ ತಂಡ ಈಗ ಸುಳಿವನ್ನೂ ಕೊಟ್ಟಿದೆ. ಹಾಗಾದರೆ ಕಲ್ಕಿ 2898ಎಡಿ ಭಾಗ- 2 (Kalki 2898 AD 2) ಯಾವಾಗ ಬರಲಿದೆ ಎನ್ನುವ ಕುರಿತು ಚಿತ್ರ ತಂಡ ಹೇಳಿರುವುದೇನು ಎನ್ನುವ ಮಾಹಿತಿ ಇಲ್ಲಿದೆ.

VISTARANEWS.COM


on

By

Kalki 2898 AD 2
Koo

ವಿಶ್ವದಾದ್ಯಂತ (world) ಅದ್ಧೂರಿಯಾಗಿ ಬಿಡುಗಡೆಯಾದ 2024ರ ಬಹು ನಿರೀಕ್ಷಿತ ಚಿತ್ರ ಕಲ್ಕಿ 2898ಎಡಿ (Kalki 2898 AD) ಭಾರತೀಯ ಚಿತ್ರರಂಗದಲ್ಲಿ (Indian cinema) ಮೂರನೇ ಅತೀ ದೊಡ್ಡ ಓಪನರ್ ಕಂಡ ಸಿನಿಮಾವಾಗಿ ಹೊರಹೊಮ್ಮಿದ್ದು ಮಾತ್ರವಲ್ಲದೇ ಚಿತ್ರದ ಮುಂದಿನ ಸರಣಿ (Kalki 2898 AD 2) ಶೀಘ್ರದಲ್ಲೇ ತೆರೆ ಕಾಣುವ ನಿರೀಕ್ಷೆಯನ್ನು ಮೂಡಿಸಿದೆ.

ಕಲ್ಕಿ 2898ಎಡಿ ದೊಡ್ಡ ಪರದೆಯ ಮೇಲೆ ದಾಖಲೆಯನ್ನೇ ಬರೆದಿದೆ. ಪ್ರಭಾಸ್, ದೀಪಿಕಾ ಪಡುಕೋಣೆ, ಅಮಿತಾಬ್ ಬಚ್ಚನ್ ಮತ್ತು ಕಮಲ್ ಹಾಸನ್ ಸೇರಿದಂತೆ ಬಹುದೊಡ್ಡ ತಾರಾ ಬಳಗವನ್ನೇ ಹೊಂದಿದ್ದು, ಪ್ರೇಕ್ಷಕರಿಂದ ಉತ್ತಮ ವಿಮರ್ಶೆಗಳನ್ನು ಗಳಿಸಿದೆ. ಮಾತ್ರವಲ್ಲದೆ ಇದೀಗ ಚಿತ್ರ ತಂಡ ಪ್ರೇಕ್ಷಕರಿಗೆ ಇನ್ನೊಂದು ಸಿಹಿ ಸುದ್ದಿಯನ್ನೂ ನೀಡಿದೆ.

ಚಿತ್ರದ ಮುಂದುವರಿದ ಭಾಗ ಶೀಘ್ರದಲ್ಲೇ ತೆರೆ ಕಾಣಲಿದೆ ಎಂಬ ಸಂದೇಶದೊಂದಿಗೆ ಕಲ್ಕಿ 2898ಎಡಿ ಚಲನಚಿತ್ರವು ಮುಕ್ತಾಯಗೊಂಡಿರುವುದರಿಂದ 2898ಎಡಿ ಚಿತ್ರ ಭಾಗ 2 ಸಾಕಷ್ಟು ಕುತೂಹಲ ಮೂಡುವಂತೆ ಮಾಡಿದೆ.

ಮಹಾಕಾವ್ಯವನ್ನು ಆಧರಿಸಿದ ಚಿತ್ರವೂ ಸಂಪೂರ್ಣವಾಗಿ ತೆರೆದುಕೊಳ್ಳಲು ಒಂದಕ್ಕಿಂತ ಹೆಚ್ಚು ಕಂತುಗಳ ಅಗತ್ಯವಿದೆ ಎಂದು ನಿರ್ದೇಶಕ ನಾಗ್ ಅಶ್ವಿನ್ ಕೂಡ ದೃಢಪಡಿಸಿದ್ದಾರೆ.

ಕಮಲ್ ಹಾಸನ್ ನಿರ್ವಹಿಸಿರುವ ಅಸಾಧಾರಣ ಪಾತ್ರ ಯಾಸ್ಕಿನ್ ನ ಅಪಾಯಕಾರಿ ಕಾರ್ಯಾಚರಣೆಯೊಂದಿಗೆ ‘ಕಲ್ಕಿ 2898ಎಡಿ ಭಾಗ 2 ಪ್ರಾರಂಭವಾಗುವ ನಿರೀಕ್ಷೆ ಇದೆ. ಚಿತ್ರದ ಮೊದಲ ಭಾಗದಲ್ಲಿ ಕಮಲ್ ಹಾಸನ್ ಅವರ ಚಿಕ್ಕ ಪಾತ್ರವನ್ನು ಮಾತ್ರ ತೋರಿಸಲಾಗಿದೆ. ಅಮಿತಾಬ್ ಬಚ್ಚನ್ ಅಶ್ವತ್ಥಾಮನ ಪಾತ್ರದಲ್ಲಿ, ಪ್ರಭಾಸ್ ಭೈರವ ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಯಾಸ್ಕಿನ್ ಅವರನ್ನು ಹೇಗೆ ಎದುರಿಸಲು ಯೋಜಿಸುತ್ತಾರೆ ಎಂಬುದರ ಸುತ್ತ ಕಥೆ ಕೇಂದ್ರೀಕೃತವಾಗಿದೆ.

ಕಲ್ಕಿ 2898ಎಡಿ ಭಾಗ 2 ಚಿತ್ರ ನಿರ್ಮಾಣಕ್ಕೆ ಮೂರು ವರ್ಷಗಳು ಬೇಕಾಗಬಹುದು ಎಂದು ನಿರೀಕ್ಷಿಸಲಾಗಿದೆ. ಪ್ರಭಾಸ್ ಈ ವಿಭಾಗವನ್ನು ಎರಡು ಭಾಗಗಳಾಗಿ ವಿಂಗಡಿಸುವ ಬಗ್ಗೆ ಸುಳಿವು ನೀಡಿದ್ದಾರೆ. ವಿವಿಧ ಸಂದರ್ಶನಗಳಲ್ಲಿ ತಮ್ಮ ಮುಂದಿನ ಸರಣಿಯ ಬಗ್ಗೆ ಉತ್ಸಾಹವನ್ನು ವ್ಯಕ್ತಪಡಿಸಿದ್ದಾರೆ. ಸುಮಾರು ಮೂರು ವರ್ಷಗಳಲ್ಲಿ ಎರಡನೇ ಕಂತನ್ನು ಅಭಿಮಾನಿಗಳು ಎದುರು ನೋಡಬಹುದು ಎಂದು ನಾಗ್ ಅಶ್ವಿನ್ ಕೂಡ ಖಚಿತಪಡಿಸಿದ್ದಾರೆ.

ಭವ್ಯವಾದ ವೈಜ್ಞಾನಿಕ ಮಹಾಕಾವ್ಯ ‘ಕಲ್ಕಿ 2898ಎಡಿ’ ಚಿತ್ರಮಂದಿರಗಳಿಗೆ ಆಗಮಿಸಿದ್ದು, ಹಿಂದೂ ಧರ್ಮಗ್ರಂಥಗಳಿಂದ ಪ್ರೇರಿತವಾಗಿದೆ. ದುಷ್ಟ ಶಕ್ತಿಗಳ ವಿರುದ್ಧ ಹೋರಾಡಲು ದೈವಿಕ ಜೀವಿಗಳ ಮೂಲವನ್ನು ವಿವರಿಸುವ ಈ ಚಿತ್ರವೂ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವ ಕಥಾಹಂದರ, ಉಸಿರುಕಟ್ಟುವ ದೃಶ್ಯವಳಿಗಳು ಮತ್ತು ವಿಶಿಷ್ಟ ಪರಿಕಲ್ಪನೆ ಮಂತ್ರಮುಗ್ಧರನ್ನಾಗಿಸುತ್ತದೆ. ಇದು ಭಾರತೀಯ ಚಿತ್ರರಂಗದಲ್ಲಿ ಒಂದು ಅದ್ಭುತ ಸಾಧನೆಯನ್ನು ಸೂಚಿಸುತ್ತದೆ.

ಈ ಚಿತ್ರವು ಭಾರತದ ‘ಅವೆಂಜರ್ಸ್ ಕ್ಷಣ’. ವೈಜ್ಞಾನಿಕ, ಕಾಲ್ಪನಿಕ ಮತ್ತು ಪುರಾಣದ ಅಂಶಗಳನ್ನು ಅದ್ಭುತವಾಗಿ ಸಂಯೋಜಿಸುತ್ತದೆ. ಚಿತ್ರದ ಸುತ್ತ ಹೆಚ್ಚಿನ ನಿರೀಕ್ಷೆಗಳಿವೆ ಎಂದು ರಾಣಾ ದಗ್ಗುಬಾಟಿ ಅಭಿಪ್ರಾಯ ಪಟ್ಟಿದ್ದಾರೆ.


Sacnilk.com ನ ಅಂದಾಜು ಪ್ರಕಾರ ಚಿತ್ರವು ಆರಂಭದ ದಿನದಂದು 180 ಕೋಟಿ ರೂ. ಗೂ ಅಧಿಕ ಆದಾಯ ಗಳಿಸಿ ಭಾರತೀಯ ಚಿತ್ರರಂಗದಲ್ಲಿ ಮೂರನೇ ಅತೀ ದೊಡ್ಡ ಓಪನರ್ ಆಗುವ ಮೂಲಕ ಬಾಕ್ಸ್ ಆಫೀಸ್‌ನಲ್ಲಿ ಇತಿಹಾಸವನ್ನು ಸೃಷ್ಟಿಸಿದೆ.

ಇಂಡಸ್ಟ್ರಿ ಟ್ರ್ಯಾಕರ್ ಪ್ರಕಾರ, ನಾಗ್ ಅಶ್ವಿನ್ ನಿರ್ದೇಶಿಸಿದ ಕಲ್ಕಿ 2898ಎಡಿ ಎಲ್ಲಾ ಭಾಷೆಗಳಲ್ಲಿ ಮೊದಲ ದಿನದಲ್ಲಿ ಭಾರತದಲ್ಲಿ ಸುಮಾರು 95 ಕೋಟಿ ರೂಪಾಯಿ ಗಳಿಸಿದೆ. ಆದರೆ ಅದರ ಒಟ್ಟು ಸಂಗ್ರಹವು ಸುಮಾರು 115 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ.

ಇದನ್ನೂ ಓದಿ: Kalki 2898 AD: ಮೊದಲ ದಿನವೇ ಗಳಿಕೆಯಲ್ಲಿ ದಾಖಲೆ ಬರೆದ ‘ಕಲ್ಕಿ 2898 ಎಡಿ’ ಸಿನಿಮಾ; ಕಲೆಕ್ಷನ್‌ ಎಷ್ಟು?

ಒಟ್ಟಾರೆಯಾಗಿ ಚಿತ್ರವು ಮೊದಲ ದಿನ ವಿಶ್ವದಾದ್ಯಂತ 180 ಕೋಟಿ ರೂ ಗಳಿಸಿದೆ. ಈ ಭಾರಿ ಸಂಗ್ರಹದೊಂದಿಗೆ ಕಲ್ಕಿ 2898 ಎಡಿ ಕೆಜಿಎಫ್ 2 ನ 159 ಕೋಟಿ ರೂ., ಸಲಾರ್ ನ 158 ಕೋಟಿ ರೂ., ಲಿಯೋ ನ 142.75 ಕೋಟಿ ರೂ. ಜಾಗತಿಕ ಆರಂಭಿಕ ದಾಖಲೆಗಳನ್ನು ಹಿಂದಿಕ್ಕಿದೆ.

ಸಾಹೂ 130 ಕೋಟಿ ರೂ., ಜವಾನ್ 129 ಕೋಟಿ ರೂ., ಆರ್ ಆರ್ ಆರ್ ಇನ್ನೂ 223 ಕೋಟಿ ರೂ. ಕಲೆಕ್ಷನ್‌ಗಳೊಂದಿಗೆ ಅತೀ ಹೆಚ್ಚು ಭಾರತೀಯ ಓಪನರ್ ಆಗಿ ಉಳಿದಿದೆ. ಬಾಹುಬಲಿ 2 ತನ್ನ ಆರಂಭಿಕ ದಿನದಲ್ಲಿ 217 ಕೋಟಿ ರೂ. ಗಳಿಸಿತು.

Continue Reading

ಬಾಲಿವುಡ್

Bigg Boss OTT 3: ಬಿಗ್‌ ಬಾಸ್‌ ಒಟಿಟಿಯಲ್ಲಿ ಇಬ್ಬರ ಹೆಂಡಿರ ಮುದ್ದಿನ ಗಂಡ; ಗೋಳೋ ಎಂದು ಅತ್ತ ಮೊದಲ ಪತ್ನಿ!

Bigg Boss OTT 3: ಖ್ಯಾತ ಯುಟ್ಯೂಬರ್‌ ಅರ್ಮಾನ್‌ ಮಲಿಕ್‌ ಅವರು ಯುಟ್ಯೂಬ್‌ ಸೇರಿ ಯಾವುದೇ ಜಾಲತಾಣದಲ್ಲಿ ವಿಡಿಯೊ ಅಪ್‌ಲೋಡ್‌ ಮಾಡಿದರೂ ಅದು ಲಕ್ಷಾಂತರ ಜನರನ್ನು ತಲುಪುತ್ತದೆ, ಸುದ್ದಿಯಾಗುತ್ತದೆ. ಆದರೆ, ಈಗ ಅರ್ಮಾನ್‌ ಮಲಿಕ್‌ ಬಿಗ್‌ ಬಾಸ್‌ ಮನೆಯಿಲ್ಲಿದ್ದಾರೆ. ಹೊಸ ಪ್ರೋಮೊದಲ್ಲಿ ಅರ್ಮಾನ್ ಮಲಿಕ್ ಮೊದಲ ಪತ್ನಿ ಪಾಯಲ್, ಕೃತಿಕಾ ಮತ್ತು ಅವರ ಪತಿಯ ಎರಡನೇ ಮದುವೆ ಬಗ್ಗೆ ಮಾತನಾಡಿ ಕಣ್ಣೀರು ಹಾಕಿದ್ದಾರೆ.

VISTARANEWS.COM


on

Bigg Boss OTT 3 Armaan Malik both Kritika Malik and Payal Malik in bigg bos house
Koo

ಬೆಂಗಳೂರು: ಬಿಗ್ ಬಾಸ್ OTT ಸೀಸನ್‌ನಲ್ಲಿ (Bigg Boss OTT 3) ಅರ್ಮಾನ್ ಮಲಿಕ್ (Arman Malik) ಮತ್ತು ಅವರ ಇಬ್ಬರು ಪತ್ನಿಯರಾದ ಪಾಯಲ್ ಮತ್ತು ಕೃತಿಕಾ ಭಾಗವಹಿಸಿರುವುದು ಗೊತ್ತೇ ಇದೆ.

ಈ ಶೋ ಬಹುಪತ್ನಿತ್ವವನ್ನು ಉತ್ತೇಜಿಸುತ್ತಿದೆ ಎಂದು ಹಲವರು ಆರೋಪಿಸಿದ್ದರು. ಇದರ ಬೆನ್ನಲ್ಲೇ ಹೊಸ ಪ್ರೋಮೊ ಒಂದು ವೈರಲ್‌ ಆಗಿದೆ.

ಹೊಸ ಪ್ರೋಮೊದಲ್ಲಿ ಅರ್ಮಾನ್ ಮಲಿಕ್ ಮೊದಲ ಪತ್ನಿ ಪಾಯಲ್, ಕೃತಿಕಾ ಮತ್ತು ಅವರ ಪತಿಯ ಎರಡನೇ ಮದುವೆ ಬಗ್ಗೆ ಮಾತನಾಡಿ ಕಣ್ಣೀರು ಹಾಕಿದ್ದಾರೆ. ಅರ್ಮಾನ್ ಮತ್ತು ಕೃತಿಕಾ ವಿವಾಹಿತ ಜೋಡಿಯಾಗಿ ಹೇಗೆ ಮರಳಿದರು ಎಂಬುದನ್ನು ಪಾಯಲ್ ವಿವರಿಸಿದ್ದಾರೆ.

ಇದನ್ನೂ ಓದಿ: Kanguva Release Date: ʻಕಂಗುವ’ ರಿಲೀಸ್‌ ಡೇಟ್‌ ಅನೌನ್ಸ್‌; ಧ್ರುವ ಸರ್ಜಾ ಸಿನಿಮಾ ಜತೆ ಕ್ಲ್ಯಾಶ್‌!

ಅವರಿಬ್ಬರ ನಿರ್ಧಾರದಿಂದ ಪಾಯಲ್ ಎಷ್ಟು ದುಃಖಿತರಾಗಿದ್ದಾರೆಂಬುವುದು ಎಂಬುದು ಈ ಪ್ರೋಮೊದಲ್ಲಿದೆ.

Continue Reading

ಕ್ರೈಂ

Actor Darshan: ಪರಪ್ಪನ ಅಗ್ರಹಾರಕ್ಕೆ ದರ್ಶನ್‌ ನೋಡಲು ಆಗಮಿಸಿದ ಯುವತಿ; ಯಾರಾಕೆ?

Actor Darshan: ದರ್ಶನ್ ಅವರೇ ಈಗ ಅಭಿಮಾನಿಗಳಿಗೆ ಪರಪ್ಪನ ಅಗ್ರಹಾರಕ್ಕೆ ಬರಬೇಡಿ ಎಂದು ವಿಶೇಷ ಮನವಿ ಮಾಡಿದ್ದಾರೆ. ಹೀಗಿದ್ದರೂ ದರ್ಶನ್ ಭೇಟಿಗೆ ಯುವತಿವೊಬ್ಬಳು ಆಗಮಿಸಿದ್ದಳು. ಮಾಸ್ಕ್ ಧರಿಸಿ ಜೈಲು ಬಳಿ ಬಂದು , ಬಳಿಕ ಭೇಟಿಗೆ ಅವಕಾಶ ನೀಡದ ಹಿನ್ನೆಲೆಯಲ್ಲಿ ವಾಪಸ್ಸು ಹೋಗಿದ್ದಾರೆ.

VISTARANEWS.COM


on

Actor Darshan A young woman came to Parappa Agrahara to see Darshan
Koo

ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ ಕೇಸ್‌ನಲ್ಲಿ ನಟ ದರ್ಶನ್‌ (Actor Darshan) ಅವರು ಪರಪ್ಪನ ಅಗ್ರಹಾರದಲ್ಲಿದ್ದಾರೆ. ದರ್ಶನ್ ಫ್ಯಾನ್ಸ್ ಜೈಲಿನ ಎದುರು ಸೇರುತ್ತಿದ್ದಾರೆ. ದರ್ಶನ್ ಪರ ಘೋಷಣೆ ಕೂಗುತ್ತಿದ್ದಾರೆ.ಹೀಗಾಗಿ ದರ್ಶನ್ ಅವರೇ ಈಗ ಅಭಿಮಾನಿಗಳಿಗೆ ಪರಪ್ಪನ ಅಗ್ರಹಾರಕ್ಕೆ ಬರಬೇಡಿ ಎಂದು ವಿಶೇಷ ಮನವಿ ಮಾಡಿದ್ದಾರೆ. ಹೀಗಿದ್ದರೂ ದರ್ಶನ್ ಭೇಟಿಗೆ ಯುವತಿವೊಬ್ಬಳು ಆಗಮಿಸಿದ್ದಳು. ಮಾಸ್ಕ್ ಧರಿಸಿ ಜೈಲು ಬಳಿ ಬಂದು , ಬಳಿಕ ಭೇಟಿಗೆ ಅವಕಾಶ ನೀಡದ ಹಿನ್ನೆಲೆಯಲ್ಲಿ ವಾಪಸ್ಸು ಹೋಗಿದ್ದಾರೆ.

ಪರಪ್ಪನ ಅಗ್ರಹಾರ ಜೈಲಿನ ಬಳಿ ಯುವತಿ ದರ್ಶನ್‌ ನೋಡಲು ಆಗಮಿಸಿದ್ದಳು. ಬ್ಲೂ ಕಲರ್ ಹುಂಡೈ ಕ್ರೆಟಾ ಕಾರಿನಲ್ಲಿ ಆಗಮಿಸಿದ್ದ ಯುವತಿ, ಕ್ಯಾಮೆರಾ ನೋಡುತ್ತಿದ್ದಂತೆ ವಾಪಸ್ಸು ಆಗಿದ್ದಾರೆ. ʻʻದರ್ಶನ್ ಸರ್ ನಮ್ಮ ಕುಟುಂಬದವರು. ಅವರನ್ನು ನೋಡಲು ಬಂದಿದ್ದೆ. ಜೈಲು ಅಧಿಕಾರಿಗಳು ಅವಕಾಶ ನೀಡುವುದಿಲ್ಲʼʼ ಎಂದರು ಯುವತಿ. ಹೆಸರನ್ನು ಎಲ್ಲಿಯೂ ಹೇಳಿಕೊಂಡಿಲ್ಲ.

ದರ್ಶನ್‌ನಿಂದ ವಿಶೇಷ ಮನವಿ!

ದರ್ಶನ್‌ ಹೇಳಿದ್ದು ಹೀಗೆ ʻʻಅಭಿಮಾನಿಗಳು ಯಾರು ಕೂಡ ಜೈಲಿನ ಬಳಿ ಬರಬೇಡಿ. ಜೈಲಿನ ನಿಯಮಗಳ ಪ್ರಕಾರ ಅಭಿಮಾನಿಗಳ ಭೇಟಿ ಅಸಾಧ್ಯ. ಜೈಲಿನ ಬಳಿ ನನ್ನ ಭೇಟಿಗೆ ಬಂದು ನೀವು ಕಾಯುವುದು. ನನ್ನ ಭೇಟಿಗೆ ಅವಕಾಶ ಸಿಗದೆ ನಿರಾಸೆಯಿಂದ ವಾಪಸ್ ಹೋಗುವುದು. ಅದರಲ್ಲೂ ನಿನ್ನೆ ವಿಶೇಷ ಚೇತನ ಯುವತಿ ಸೌಮ್ಯ ಭೇಟಿಗೆ ಆಗಮಿಸಿದ್ದು ಕೂಡ ಬೇಸರ ತಂದಿದೆʼʼಎಂದು ಸಂದೇಶ ರವಾನಿಸಿದ್ದಾರೆ.

ಇದನ್ನೂ ಓದಿ: Actor Darshan: ಜೈಲಿನಲ್ಲಿ ದರ್ಶನ್‌ಗೆ ತಾಯಿ, ತಮ್ಮನ ನೆನಪಾಗ್ತಿದೆಯಂತೆ!

ಇತ್ತೀಚೆಗೆ ಸೌಮ್ಯ ಹೆಸರಿನ ವಿಶೇಷ ಚೇತನ ಯುವತಿ ದರ್ಶನ್ ಭೇಟಿಗೆ ಬಂದಿದ್ದರು. ಜೈಲಿನ ಬಳಿ ಬಂದು ದರ್ಶನ್ ಭೇಟಿಗೆ ಹಠ ಮಾಡಿದ್ದರು. ಇದನ್ನು ಕೇಳಿ ದರ್ಶನ್ ಬೇಸರಗೊಂಡಿದ್ದಾರೆ. ಅನ್ನ ಆಹಾರ ಸೇವಿಸದೇ ಹಠ ಮಾಡಿದ್ದರು ಸೌಮ್ಯ. ನಟ ದರ್ಶನ್ ‌ಕೊಡಿಸಿದ್ದ ಆಟೋದಲ್ಲಿ ಪೋಷಕರ ಜತೆ ಸೌಮ್ಯ ಆಗಮಿಸಿದ್ದರು. ಸೌಮ್ಯ ಜೈಲಿನ ಬಳಿ ಆಗಮಿಸಿದ್ದ ವಿಚಾರ ತಿಳಿದು ದರ್ಶನ್ ಬೇಸರಗೊಂಡಿದ್ದಾರೆ. ಕಳೆದ ಮೂರು ದಿನಗಳ ಹಿಂದೆ ಸೂರ್ಯಕಾಂತ್ ಎಂಬ ವಿಶೇಷ ಚೇತನ ಕೂಡ ಆಗಮಿಸಿದ್ದ.ತ್ರಿ ವೀಲರ್ ಬೈಕ್‌ನಲ್ಲಿ ವಿಶೇಷ ಚೇತನ ಆಗಮಿಸಿದ್ದ . ಈ ಎಲ್ಲಾ ವಿಚಾರ ತಿಳಿದು ಅಭಿಮಾನಿಗಳ ಬಳಿ ದರ್ಶನ್ ಈ ರೀತಿ ಮನವಿ ಮಾಡಿದ್ದಾರೆ.

ಯುವತಿ ಪೋಷಣೆಗೆ ಆಟೋ ಕೊಡಿಸಿದ್ದ ದರ್ಶನ್‌

2016 ರಲ್ಲಿ ಈ ಬಡ ಕುಟುಂಬಕ್ಕೆ ನಟ ದರ್ಶನ್‌ ಆಟೋವೊಂದನ್ನು ಕೊಡಿಸಿದ್ದರು. ಲಕ್ಷ್ಮೀ ಹಾಗೂ ರಂಗಸ್ವಾಮಿ ದಂಪತಿಯ ಪುತ್ರಿ ಸೌಮ್ಯಳನ್ನು ಪೋಷಣೆಗಾಗಿ ನಟ ದರ್ಶನ್‌ ಖುದ್ದು ಆಟೋ ಕೊಡಿಸಿದ್ದರು. ಹೀಗಾಗಿ ಇದೇ ಆಟೋದಲ್ಲಿ ಜೈಲಿಗೆ ಬಂದು ದರ್ಶನ್‌ ಭೇಟಿಗಾಗಿ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಆದರೆ ಇಂದು ದರ್ಶನ್ ಭೇಟಿಗೆ ಅವರ ಕುಟುಂಬದವರು ಬರುತ್ತಿದ್ದು, ವಿಶೇಷ ಚೇತನ ಯುವತಿ ಭೇಟಿಗೆ ಅವಕಾಶವನ್ನು ಅಧಿಕಾರಿಗಳು ನಿರಾಕರಿಸಿದ್ದಾರೆ.

ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್‌ ಪರಪ್ಪನ ಅಗ್ರಹಾರ ಜೈಲಿನ ಸೆರೆವಾಸ ಏಳನೇ ದಿನಕ್ಕೆ ಕಾಲಿಟ್ಟಿದೆ. ರಾತ್ರಿ ಮುದ್ದೆ, ಅನ್ನ, ಸಾಂಬಾರ್, ಚಪಾತಿ ಮತ್ತು ಮಜ್ಜಿಗೆ ಕುಡಿದು ದರ್ಶನ್‌ ತಡವಾಗಿ ನಿದ್ರೆಗೆ ಜಾರಿದರು. ಮುಂಜಾನೆ 6 ಗಂಟೆ ಸುಮಾರಿಗೆ ಎಚ್ಚರಗೊಂಡು ಎಂದಿನಂತೆ ಬಿಸಿನೀರು ಸೇವಿಸಿದ್ದಾರೆ ದರ್ಶನ್‌. ಕೆಲಹೊತ್ತು ಕೊಠಡಿಯಲ್ಲಿ ವಾಕಿಂಗ್ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

Continue Reading
Advertisement
Vikram Misri
ಪ್ರಮುಖ ಸುದ್ದಿ4 mins ago

Vikram Misri: ವಿದೇಶಾಂಗ ಕಾರ್ಯದರ್ಶಿಯಾಗಿ ವಿಕ್ರಮ್‌ ಮಿಸ್ರಿ ಆಯ್ಕೆ; ಚೀನಾ ವಿಷಯದಲ್ಲಿ ಇವರು ಎಕ್ಸ್‌ಪರ್ಟ್!

Prajwal Revanna Case
ಕರ್ನಾಟಕ9 mins ago

Prajwal Revanna Case: ಮಾಜಿ ಶಾಸಕ ಪ್ರೀತಂ ಗೌಡಗೆ ರಿಲೀಫ್‌; ಬಂಧಿಸದಂತೆ ಹೈಕೋರ್ಟ್ ಆದೇಶ

Vasavi Condiments owner attempts suicide by consuming sleeping pills
ಬೆಂಗಳೂರು13 mins ago

vasavi condiments : ವಾಸವಿ ಕಾಂಡಿಮೆಂಟ್ಸ್‌ಗೆ ಬೀಗ; ನಿದ್ರೆ ಮಾತ್ರೆ ಸೇವಿಸಿ ಮಾಲಕಿ ಗೀತಾ ಆತ್ಮಹತ್ಯೆಗೆ ಯತ್ನ

Dengue Prevention
ಆರೋಗ್ಯ20 mins ago

Dengue Prevention: ರಾಜ್ಯದಲ್ಲಿ 6000ಕ್ಕೂ ಡೆಂಗ್ಯೂ ಪ್ರಕರಣ; ಇದರಿಂದ ಪಾರಾಗಲು ಹೀಗೆ ಮಾಡಿ

ಕ್ರೀಡೆ32 mins ago

IND vs SA: ಗೆದ್ದು ಬಾ ಭಾರತ; ನಾಳೆ ಟಿ20 ವಿಶ್ವಕಪ್​ ಫೈನಲ್​

CM Siddaramaiah
ಕರ್ನಾಟಕ45 mins ago

CM Siddaramaiah: ನಿತಿನ್‌ ಗಡ್ಕರಿ ಭೇಟಿಯಾದ ಸಿಎಂ ಸಿದ್ದರಾಮಯ್ಯ; ಪ್ರಮುಖ ಹೆದ್ದಾರಿ ಯೋಜನೆಗಳ ಬಗ್ಗೆ ಚರ್ಚೆ

Dhanya Ramkumar heroine in choukidaar cinema
ಸ್ಯಾಂಡಲ್ ವುಡ್54 mins ago

Dhanya Ramkumar: ʻದಿಯಾʼ ಹೀರೊಗೆ ಜೋಡಿಯಾದ ದೊಡ್ಮನೆ ಬ್ಯೂಟಿ!

Road Accident A huge tree fell on the bike Riders are serious
ಉತ್ತರ ಕನ್ನಡ56 mins ago

Road Accident : ಅಂತ್ಯಸಂಸ್ಕಾರ ಮುಗಿಸಿ ಬರುತ್ತಿದ್ದ ದಂಪತಿ ಮೇಲೆ ಮುರಿದು ಬಿದ್ದ ಬೃಹತ್‌ ಮರ!

Viral Video
Latest1 hour ago

Viral Video: ಸಲಿಂಗ ಪ್ರೇಮ ಪ್ರಕರಣ; ಯುವತಿಯನ್ನು ಮೆಚ್ಚಿ ಮದುವೆಯಾದ ಟಿವಿ ನಟಿ!

US Presidential Election
ವಿದೇಶ1 hour ago

US Presidential Election: ನೀಲಿ ಚಿತ್ರ ತಾರೆ ಜತೆ ಡೊನಾಲ್ಡ್‌ ಟ್ರಂಪ್‌ ಸೆಕ್ಸ್;‌ ಚರ್ಚೆ ವೇಳೆ ಬೈಡೆನ್‌ ಆರೋಪ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Rain
ಮಳೆ6 hours ago

Karnataka Rain : ಭಾರಿ ಮಳೆಗೆ ಪಾತಾಳ ಸೇರಿದ ಬಾವಿ; ಅಲೆಗಳ ಹೊಡೆತಕ್ಕೆ ಸಮುದ್ರಪಾಲಾದ ಮನೆ

Karnataka Weather Forecast
ಮಳೆ23 hours ago

Karnataka Weather : ಭಾರಿ ಮಳೆ ಹಿನ್ನೆಲೆ ದಕ್ಷಿಣ ಕನ್ನಡಕ್ಕೆ ರೆಡ್ ಅಲರ್ಟ್; ಶುಕ್ರವಾರವೂ ಶಾಲೆಗಳಿಗೆ ರಜೆ ಘೋಷಣೆ

karnataka Weather Forecast
ಮಳೆ1 day ago

Karnataka Weather : ಭಾರಿ ಮಳೆಗೆ ಸೇತುವೆಯಿಂದ ಹೊಳೆಗೆ ಬಿದ್ದ ಕಾರು; ಮರ ಹಿಡಿದು ಪ್ರಾಣ ಉಳಿಸಿಕೊಂಡ ಸವಾರರು

Heart Attack
ಕೊಡಗು1 day ago

Heart Attack : ಕೊಡಗಿನಲ್ಲಿ ಹೃದಯಾಘಾತಕ್ಕೆ ಯುವತಿ ಬಲಿ; ಹೆಚ್ಚಾಯ್ತು ಅಲ್ಪಾಯುಷ್ಯದ ಭಯ

karnataka Rains Effected
ಮಳೆ1 day ago

Karnataka Rain : ಧಾರಾಕಾರ ಮಳೆಗೆ ಸಡಿಲಗೊಂಡ ಗುಡ್ಡಗಳು; ಧರೆ ಕುಸಿದು ಮಣ್ಣಿನಡಿ ಸಿಲುಕಿದ ಇಬ್ಬರು ಮಕ್ಕಳು

karnataka Weather Forecast
ಮಳೆ4 days ago

Karnataka Weather : ಕರಾವಳಿಯಲ್ಲಿ ಮುಂದುವರಿದ ವರುಣಾರ್ಭಟ; ಸಾಂಪ್ರದಾಯಿಕ ಮೀನುಗಾರಿಕೆಗೂ ಬ್ರೇಕ್

karnataka weather Forecast
ಮಳೆ7 days ago

Karnataka Weather : ರಭಸವಾಗಿ ಹರಿಯುವ ನೀರಲ್ಲಿ ಸಿಲುಕಿದ ಬೊಲೆರೋ; ಬಿರುಗಾಳಿ ಸಹಿತ ಮಳೆ ಎಚ್ಚರಿಕೆ

International Yoga Day 2024
ಕರ್ನಾಟಕ1 week ago

International Yoga Day 2024: ಎಲ್ಲೆಲ್ಲೂ ಯೋಗಾಯೋಗ‌ಕ್ಕೆ ಮಂಡಿಯೂರಿದ ಜನತೆ

Karnataka Weather Forecast
ಮಳೆ1 week ago

Karnataka Weather : ಬಾಗಲಕೋಟೆ, ಬೆಂಗಳೂರು ಸೇರಿ ಚಿಕ್ಕಮಗಳೂರಲ್ಲಿ ಸುರಿದ ಗಾಳಿ ಸಹಿತ ಮಳೆ

Actor Darshan
ಮೈಸೂರು2 weeks ago

Actor Darshan : ಕೊಲೆ ಕೇಸ್‌ ಬೆನ್ನಲ್ಲೇ ನಟ ದರ್ಶನ್‌ ಸೇರಿ ಪತ್ನಿ ವಿಜಯಲಕ್ಷ್ಮಿಗೆ ಬಾರ್ ಹೆಡೆಡ್ ಗೂಸ್ ಸಂಕಷ್ಟ!

ಟ್ರೆಂಡಿಂಗ್‌