Actor Rajinikanth : ಜೈಸಲ್ಮೇರ್‌ನಲ್ಲಿ ರಜನಿಕಾಂತ್‌ ಕಾರಿಗೆ ಮುತ್ತಿಗೆ ಹಾಕಿದ ಅಭಿಮಾನಿಗಳು - Vistara News

ಸಿನಿಮಾ

Actor Rajinikanth : ಜೈಸಲ್ಮೇರ್‌ನಲ್ಲಿ ರಜನಿಕಾಂತ್‌ ಕಾರಿಗೆ ಮುತ್ತಿಗೆ ಹಾಕಿದ ಅಭಿಮಾನಿಗಳು

ಸೂಪರ್‌ ಸ್ಟಾರ್‌ ರಜನಿಕಾಂತ್‌ (Actor Rajinikanth) ರಾಜಸ್ಥಾನದ ಜೈಸಲ್ಮೇರ್‌ನಲ್ಲಿ ʼಜೈಲರ್‌ʼ ಸಿನಿಮಾದ ಚಿತ್ರೀಕರಣದಲ್ಲಿದ್ದಾರೆ. ಅಲ್ಲಿ ಕಾರಿನಲ್ಲಿ ತೆರಳುತ್ತಿದ್ದ ನಟನಿಗೆ ಅಭಿಮಾನಿಗಳು ಫೋಟೋಕ್ಕಾಗಿ ಮುತ್ತಿಗೆ ಹಾಕಿದ ವಿಡಿಯೊ ಎಲ್ಲೆಡೆ ಹರಿದಾಡಿದೆ.

VISTARANEWS.COM


on

ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಜೈಪುರ: ದಕ್ಷಿಣ ಭಾರತದ ಪ್ರಸಿದ್ಧ ನಟ, ಸೂಪರ್‌ ಸ್ಟಾರ್‌ ರಜನಿಕಾಂತ್‌ (Actor Rajinikanth) ಸದ್ಯ ರಾಜಸ್ಥಾನದ ಜೈಸಲ್ಮೇರ್‌ನಲ್ಲಿ ʼಜೈಲರ್‌ʼ ಸಿನಿಮಾದ ಚಿತ್ರೀಕರಣದಲ್ಲಿ ಬಿಜಿ ಇದ್ದಾರೆ. ಚಿತ್ರೀಕರಣದ ಸ್ಥಳದಲ್ಲಿ ತಲೈವಾ ಅಭಿಮಾನಿಗಳ ದಂಡೇ ಕಾಣಿಸಿಕೊಂಡಿದ್ದು, ನಟನ ಕಾರಿಗೂ ಮುತ್ತಿಗೆ ಹಾಕಿರುವ ಘಟನೆ ನಡೆದಿದೆ. ಈ ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ.

ಇದನ್ನೂ ಓದಿ: BKS Varma Death: ಬಿಕೆಎಸ್ ವರ್ಮಾ ಅವರಿಂದಲೇ ರಾಘವೇಂದ್ರ ಸ್ವಾಮಿಗಳ ಚಿತ್ರ ಬರೆಸಿದ್ದರು ರಜನಿಕಾಂತ್‌
ರಜನಿಕಾಂತ್‌ ಬಿಳಿ ಬಣ್ಣದ ಕಾರಿನಲ್ಲಿ ಹಿಂಬದಿ ಸೀಟಿನಲ್ಲಿ ಕುಳಿತಿದ್ದರೆ, ಅಭಿಮಾನಿಗಳು ಅವರೊಂದಿಗೆ ಸೆಲ್ಫೀ ತೆಗೆದುಕೊಳ್ಳುವುದಕ್ಕೆಂದು ಮುಗಿಬೀಳುತ್ತಾರೆ. “ನಿಮ್ಮ ಜತೆಗೆ ಫೋಟೋ ತೆಗೆದುಕೊಳ್ಳಬೇಕು. ಸಾಧ್ಯವಾದರೆ ಹೊರಗೆ ಬನ್ನಿ” ಎಂದು ಕೇಳುತ್ತಾರೆ ಕೂಡ. ಈ ಎಲ್ಲ ಸಮಯದಲ್ಲಿ ರಜನಿಕಾಂತ್‌ ಕಾರಿನ ಒಳಗೇ ಕುಳಿತುಕೊಂಡು ಅಭಿಮಾನಿಗಳತ್ತ ಕೈ ಬೀಸಿದ್ದಾರೆ. ಕಾರಿನ ಗ್ಲಾಸ್‌ ಅನ್ನು ಸ್ವಲ್ಪ ಇಳಿಸಿ ಕೂಡ ಅಭಿಮಾನಿಗಳಿಗೆ ಕೈ ತೋರಿಸಿದ್ದಾರೆ. ನಟನ ರಕ್ಷಣೆಗಾಗಿ ಪೊಲೀಸರನ್ನೂ ಕೂಡ ನಿಯೋಜಿಸಲಾಗಿದ್ದು, ಅವರು ಅಭಿಮಾನಿಗಳನ್ನು ಸರಿಸಿ, ಕಾರಿಗೆ ಜಾಗ ಮಾಡಿಕೊಡುತ್ತಿರುವುದನ್ನು ವಿಡಿಯೊದಲ್ಲಿ ಕಾಣಬಹುದಾಗಿದೆ.


ʼಜೈಲರ್‌ʼ ಸಿನಿಮಾದಲ್ಲಿ ರಜನಿಕಾಂತ್‌ ಜೈಲಧಿಕಾರಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅವರೊಂದಿಗೆ ಹ್ಯಾಟ್ರಿಕ್‌ ಹೀರೋ ಶಿವರಾಜ್‌ಕುಮಾರ್‌, ಮೋಹನ್‌ಲಾಲ್‌, ಜಾಕಿ ಶ್ರಾಫ್, ತಮನ್ನಾ ಭಾಟಿಯಾ, ರಮ್ಯ ಕೃಷ್ಣನ್‌ ಕೂಡ ನಟಿಸುತ್ತಿದ್ದಾರೆ. ʼಉತ್ತರ ದಕ್ಷಿಣ್‌ʼ ಸಿನಿಮಾದಲ್ಲಿ ಒಟ್ಟಾಗಿ ನಟಿಸಿದ್ದ ರಜನಿ ಮತ್ತು ಜಾಕಿ ಶ್ರಾಫ್ ಜೋಡಿ ಇದೀಗ 36 ವರ್ಷಗಳ ನಂತರ ಒಟ್ಟಿಗೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಈ ಸಿನಿಮಾ ಇದೇ ವರ್ಷ ದೀಪಾವಳಿ ಹಬ್ಬದ ಸಮಯದಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ.


ರಜನಿಕಾಂತ್‌ ಜೈಲರ್‌ ನಂತರ ಮಗಳು ಐಶ್ವರ್ಯ ರಜನಿಕಾಂತ್‌ ನಿರ್ದೇಶನದ ʼಲಾಲ್‌ ಸಲಾಮ್‌ʼ ಸಿನಿಮಾದಲ್ಲಿ ಬಣ್ಣ ಹಚ್ಚಲಿದ್ದಾರೆ. ಈ ಸಿನಿಮಾದ ಮೂಲಕ ಐಶ್ವರ್ಯ ಹಲವು ವರ್ಷಗಳ ನಂತರ ನಿರ್ದೇಶನಕ್ಕೆ ಮರಳುತ್ತಿದ್ದಾರೆ. ಇದರಲ್ಲಿ ವಿಷ್ಣು ವಿಶಾಲ್‌ ಮತ್ತು ವಿಕ್ರಾಂತ್‌ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಸ್ಯಾಂಡಲ್ ವುಡ್

Rakshit Shetty: ಸಿಂಪಲ್‌ ಸ್ಟಾರ್‌ಗೆ ಇಂದು ಜನುಮದಿನದ ಸಂಭ್ರಮ; ರಕ್ಷಿತ್‌  ಸಿನಿ ಜರ್ನಿ ಹೀಗಿತ್ತು!

Rakshit Shetty: ಶೆಟ್ಟಿ ಅವರ ಚೊಚ್ಚಲ ಚಲನಚಿತ್ರ 2020 ರಲ್ಲಿ ಬಿಡುಗಡೆಯಾದ ʼನಮ್‌ ಏರಿಯಾಲ್‌ ಒಂದಿನʼ, ಆದರೆ ಈ ಸಿನಿಮಾ ಸದ್ದು ಮಾಡಿರಲಿಲ್ಲ. 2013 ರಲ್ಲಿ ಅವರ ‘ಸಿಂಪಲ್ಲಾಗಿ ಒಂದು ಲವ್ ಸ್ಟೋರಿʼ ಪ್ರೇಕ್ಷಕರನ್ನು ರಂಜಿಸಿತ್ತು.  ʼಉಳಿದವರು ಕಂಡಂತೆʼ ವ್ಯಾಪಕ ಪ್ರಶಂಸೆ ಪಡೆದಿದ್ದರೆ, ʼವಾಸ್ತು ಪ್ರಕಾರʼ, ʼಗೋಧಿ ಬಣ್ಣ ಸಾಧಾರಣ ಮೈಕಟ್ಟುʼ ಚಿತ್ರಗಳು ಅವರ ಯಶಸ್ಸಿನ ಪ್ರಯಾಣವನ್ನು ಮುಂದುವರಿಸಿದ್ದವು.

VISTARANEWS.COM


on

Rakshit Shetty Birthday here is the cinema Journey
Koo

ಬೆಂಗಳೂರು: ಸ್ಯಾಂಡಲ್‌ವುಡ್‌ನ ʼಸಿಂಪಲ್‌ ಸ್ಟಾರ್‌ʼ ಖ್ಯಾತಿಯ ರಕ್ಷಿತ್‌ ಶೆಟ್ಟಿಗೆ (Rakshit Shetty) ಇಂದು (ಜೂನ್ 6) ಜನುಮದಿನದ ಸಂಭ್ರಮ. 40ನೇ ವರ್ಷಕ್ಕೆ ಸಂಭ್ರಮದಿಂದ ಕಾಲಿಟ್ಟ ರಕ್ಷಿತ್‌ ಶೆಟ್ಟಿಗೆ ಅವರ ಅಭಿಮಾನಿ ಬಳಗ ಹಾಗೂ ಸ್ಯಾಂಡಲ್‌ವುಡ್‌ನ ಗಣ್ಯರು ಶುಭ ಕೋರುತ್ತಿದ್ದಾರೆ. ಮುಂಬರುವ ನಿಮ್ಮೆಲ್ಲಾ ಸಿನಿಮಾಗಳು ಭರ್ಜರಿ ಯಶಸ್ಸು ಕಾಣಲಿʼʼ ಎಂದು ಸೋಷಿಯಲ್‌ ಮಿಡಿಯಾಗಳಲ್ಲಿ ವಿಶೇಷವಾಗಿ ಅವರ ಅಭಿಮಾನಿಗಳು ಹಾರೈಸುತ್ತಿದ್ದಾರೆ. ‘ಸಿಂಪಲ್ಲಾಗಿ ಒಂದು ಲವ್ ಸ್ಟೋರಿʼ ಹಿಟ್‌ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟ ರಕ್ಷಿತ್‌ ಶೆಟ್ಟಿ ʼಕಿರಿಕ್‌ ಪಾರ್ಟಿʼ ಚಿತ್ರದ ಮೂಲಕ ಜನಮನ್ನಣೆ ಪಡೆದವರು.

ಕಿರಿಕ್‌ ರಕ್ಷಿತ್‌  ಸಿನಿ ಜರ್ನಿ ಹೀಗಿತ್ತು!

ಕಾರ್ಕಳದ ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ವಿದ್ಯಾಲಯ (NMAMIT) ದಿಂದ ಎಲೆಕ್ಟ್ರಾನಿಕ್ಸ್ ಕಮ್ಯುನಿಕೇಷನ್ಸ್ ವಿಷಯದಲ್ಲಿ ಬಿಇ ಪದವಿ ಪಡೆದ ರಕ್ಷಿತ್‌, ಚಲನಚಿತ್ರಗಳಲ್ಲಿ ಅಭಿನಯಿಸುವುದಕ್ಕೂ ಮುನ್ನ ಎರಡು ವರ್ಷಗಳ ಕಾಲ ಸಾಫ್ಟ್‌ವೇರ್ ಉದ್ಯೋಗಿಯಾಗಿ ಕೆಲಸಮಾಡಿದ್ದರು.

ಶೆಟ್ಟಿ ಅವರ ಚೊಚ್ಚಲ ಚಲನಚಿತ್ರ 2020 ರಲ್ಲಿ ಬಿಡುಗಡೆಯಾದ ʼನಮ್‌ ಏರಿಯಾಲ್‌ ಒಂದಿನʼ, ಆದರೆ ಈ ಸಿನಿಮಾ ಸದ್ದು ಮಾಡಿರಲಿಲ್ಲ. 2013 ರಲ್ಲಿ ಅವರ ‘ಸಿಂಪಲ್ಲಾಗಿ ಒಂದು ಲವ್ ಸ್ಟೋರಿʼ ಪ್ರೇಕ್ಷಕರನ್ನು ರಂಜಿಸಿತ್ತು.  ʼಉಳಿದವರು ಕಂಡಂತೆʼ ವ್ಯಾಪಕ ಪ್ರಶಂಸೆ ಪಡೆದಿದ್ದರೆ, ʼವಾಸ್ತು ಪ್ರಕಾರʼ, ʼಗೋಧಿ ಬಣ್ಣ ಸಾಧಾರಣ ಮೈಕಟ್ಟುʼ ಚಿತ್ರಗಳು ಅವರ ಯಶಸ್ಸಿನ ಪ್ರಯಾಣವನ್ನು ಮುಂದುವರಿಸಿದ್ದವು.

ಇದನ್ನೂ ಓದಿ: Rakshit Shetty: ʻರಿಚರ್ಡ್​ ಆಂಟನಿʼಯಲ್ಲಿ ಕರಾವಳಿ ಕಲಾವಿದರಿಗೆ ಮೊದಲ ಆದ್ಯತೆ ಅಂದ್ರಾ ರಕ್ಷಿತ್‌ ಶೆಟ್ಟಿ?

‘ಅವನೇ ಶ್ರೀಮನ್ನಾರಾಯಣ’ ಸಿನಿಮಾ ಪ್ಯಾನ್‌ ಇಂಡಿಯಾ ಸಿನಿಮಾವಾಗಿ ರಾಷ್ಟ್ರಮಟ್ಟದಲ್ಲಿ ಹವಾ ಎಬ್ಬಿಸಿತ್ತು. ಡಿಫ್‌ರೆಂಟ್‌ ಲುಕ್‌ನೊಂದಿಗೆ ಬಂದ ರಕ್ಷಿತ್‌ ಶೆಟ್ಟಿ, ಈ ಸಿನಿಮಾದ ಕಥೆ ಮತ್ತು ಸಾಹಿತ್ಯಗಳಿಂದ ಹೆಸರು ಪಡೆದಿದ್ದರು. ಅವರ ʼರಿಚರ್ಡ್ ಆ್ಯಂಟೋನಿʼ ಚಿತ್ರ ಬಿಡುಗಡೆಗೆ ಸಿದ್ಧವಾಗುತ್ತಿದೆ.

ನಿರಾಸೆ ಮೂಡಿಸಿದ್ದ ದಿನಗಳು

ಸಿನಿಮಾ ಮಾಡಬೇಕು ಎಂಬ ಮಹಾದಾಸೆಯಿಂದ ರಕ್ಷಿತ್‌ ಎಂಜಿನಿಯರ್‌ ಕೆಲಸ ಬಿಟ್ಟು, ಸ್ಯಾಂಡ್‌ಲ್‌ವುಡ್‌ಗೆ ಎಂಟ್ರಿ ನೀಡಿದ್ದರು. ಆದರೆ ರಕ್ಷಿತ್‌ ಅಭಿನಯದ ಮೊದಲ ಸಿನಿಮಾ ʼತುಘಲಕ್‌ʼ ಸೋತಿತ್ತು.‌ ಮುಂದೇನು ಮಾಡಬೇಕು ಎಂದು ತೋಚದೇ ಇದ್ದಾಗ ಅವರ ಕೈ ಹಿಡಿದ್ದಿದ್ದು, ‘ಸಿಂಪಲ್ಲಾಗಿ ಒಂದು ಲವ್‌ ಸ್ಟೋರಿʼ. ಈ ಚಿತ್ರ ರಕ್ಷಿತ್ ಬದುಕಿನ ಹಾದಿಯನ್ನು ಬದಲಾಯಿಸಿದ್ದಲ್ಲದೇ, ಚಿತ್ರರಂಗದಲ್ಲಿ ಹೊಸ ನಾಯಕನ ಉದಯಕ್ಕೆ ಸಹ ಕಾರಣವಾಗಿತ್ತು.

ಈ ಎರಡು ಚಿತ್ರಗಳ ನಂತರ ಇತಿಹಾಸ ಸೃಷ್ಟಿಸಿದ ಇನ್ನೊಂದು ಚಿತ್ರ ಎಂದರೆ ʼಕಿರಿಕ್ ಪಾರ್ಟಿʼ. ಇದು ಕಾಲೇಜ್ ಹುಡುಗರ ಫೇವರೆಟ್​ ಚಿತ್ರವಾಯಿತು. ಅದರ ಡೈಲಾಗ್, ಕರ್ಣನ ಪಾತ್ರ ಅಭಿಮಾನಿಗಳ ಮನಸ್ಸಲ್ಲಿ ಈಗಲೂ ಉಳಿದಿದೆ.

ಪ್ರಶಸ್ತಿಗಳ ಸರಮಾಲೆ

ನಿರ್ದೇಶಕನಾಗಿ ಕರ್ನಾಟಕ ಸರ್ಕಾರದ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ, ಫಿಲಂಫೇರ್ (ದಕ್ಷಿಣ) ಪ್ರಶಸ್ತಿ, ಕರ್ನಾಟಕ ರಾಜ್ಯ ಸರ್ಕಾರದ ಅತ್ಯುತ್ತಮ ಚೊಚ್ಚಲ ನಿರ್ದೇಶಕ, ಅತ್ಯುತ್ತಮ ಸಾಹಿತಿ, ಅತ್ಯುತ್ತಮ ನಟ ಮುಂತಾದ ಪ್ರಶಸ್ತಿ ರಕ್ಷಿತ್‌ ಶೆಟ್ಟಿಗೆ ಸಂದಿವೆ.

ಚಾರ್ಲಿಯತ್ತ ಕಣ್ಣು

ರಕ್ಷಿತ್‌ ಅವರ ಬಹು ನಿರೀಕ್ಷೆಯ ಚಿತ್ರ ʼ777 ಚಾರ್ಲಿʼ ಈಗಾಗಲೇ ಬಿಡುಗಡೆಗೆ ಆಗಿ ರಾಷ್ಟ್ರ ಪ್ರಶಸ್ತಿಯೂ ಸಿಕ್ಕಿತು. ವಿಭಿನ್ನವಾದ ಕತೆಯನ್ನು ಹೊಂದಿರುವ ಈ ಚಿತ್ರವನ್ನು ಕಿರಣ್‌ ನಿರ್ದೇಶಿಸಿದ್ದು, ಚಾರ್ಲಿ ಎಂಬ ನಾಯಿಯೊಂದರ ಕತೆ ಈಗಾಗಲೇ ಸಿನಿ ರಸಿಕರಲ್ಲಿ ಮನಸಿನಲ್ಲಿ ಉಳಿಯುವಂತೆ ಮಾಡಿದೆ.

ಮುಂಬರುವ ಸಿನಿಮಾಗಳು

ರಕ್ಷಿತ್ ಶೆಟ್ಟಿ ( Rakshit Shetty) ನಟನೆಯ ‘ಸಪ್ತ ಸಾಗರದಾಚೆ ಎಲ್ಲೋ’ ಪಾರ್ಟ್ ʻಎʼ ಹಾಗೂ ʻಬಿʼ ಕಳೆದ ವರ್ಷ ರಿಲೀಸ್ ಆಗಿತ್ತು. ಇದೀಗ ʻರಿಚರ್ಡ್​ ಆಂಟನಿʼ (Richard Anthony) ಹಾಗೂ ‘ಪುಣ್ಯಕೋಟಿ ಸಿನಿಮಾಗಳನ್ನು ರಕ್ಷಿತ್‌ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ಹೊಂಬಾಳೆ ಫಿಲ್ಮ್ಸ್ ಬಂಡವಾಳ ಹೂಡುತ್ತಿದೆ. ವರದಿ ಪ್ರಕಾರ ಈ ಸಿನಿಮಾದಲ್ಲಿ ಕರಾವಳಿಯ ಕಲಾವಿದರು ಮಾತ್ರ ಮುಖ್ಯವಾಗಿ ನಟಿಸಲಿದ್ದಾರಂತೆ. ಜತೆಗೆ 2025ರ ವೇಳೆಗೆ ಸಿನಿಮಾ ತೆರೆಗೆ ಬರಲಿದೆ ಎಂದು ವರದಿಯಾಗಿದೆ.

ಮೂಲಗಳ ಪ್ರಕಾರ ರಿಚರ್ಡ್‌ ಆಂಟನಿ ಸಿನಿಮಾದ ಪ್ರಿ ಪ್ರೊಡಕ್ಷನ್‌ ಕೆಲಸಗಳು ಆರಂಭಗೊಂಡಿವೆ. ರಕ್ಷಿತ್ ಶೆಟ್ಟಿಯವರು ಈಗಾಗಲೇ ಉಡುಪಿಗೆ ಶಿಫ್ಟ್‌ ಆಗಿದ್ದಾರೆ. ಅವರ ಟೀಂ ಕೂಡ ಶೀಘ್ರವೇ ಉಡುಪಿಗೆ ಬರಲಿದೆ. ಮೇ 1ರಿಂದ ಸಿನಿಮಾದ ಪ್ರೀ ಪ್ರೊಡಕ್ಷನ್‌ ಕಾರ್ಯಗಳು ನೇರವೇರಲಿದೆಯಂತೆ. ಶೇ. 50ರಷ್ಟು ಸಿನಿಮಾ ಕರಾವಳಿಯಲ್ಲಿಯೇ ಶೂಟಿಂಗ್‌ ನಡಯಲಿದ್ದು, ಕೆಲವು ಸೀಕ್ವೆನ್ಸ್‌ಗಳು ಗೋಕರ್ಣ, ಕೇರಳದಲ್ಲಿ ಶೂಟ್‌ ಆಗಬಹುದು ಎನ್ನಲಾಗಿದೆ.

ರಕ್ಷಿತ್ ಶೆಟ್ಟಿ ಅವರು ಈ ಸಿನಿಮಾಗಾಗಿ ಮುಖ್ಯವಾಗಿ ಕರಾವಳಿ ಕಲಾವಿದರನ್ನೇ ಆಯ್ಕೆ ಮಾಡುತ್ತಿದ್ದಾರೆ ಎನ್ನಲಾಗಿದೆ. ಸಿನಿಮಾದಲ್ಲಿ ಉಡುಪಿ ಭಾಷೆಯೇ ಪ್ರಮುಖ ಹೈಲೈಟ್‌ ಆಗಿದ್ದು, ಬೇರೆಯವರು ಮಾತನಾಡಿದರೆ ಅನುಕರಣೆಯಂತಾಗುತ್ತದೆ. ಹೀಗಾಗಿ ಉಡುಪಿ ಭಾಷೆ ಬರುವವರಿಗೆ ಮಾತ್ರ ಮೊದಲ ಆದ್ಯತೆ ನೀಡುತ್ತಿದ್ದಾರೆ ಎನ್ನಲಾಗಿದೆ. 2025ಕ್ಕೆ ಸಿನಿಮಾ ಬಿಡುಗಡೆಯಾಗಲಿದೆ ಎಂದು ವರದಿಯಾಗಿದೆ.

ರಕ್ಷಿತ್ ಶೆಟ್ಟಿ ನಟನೆಯ ‘ಸಪ್ತ ಸಾಗರದಾಚೆ ಎಲ್ಲೋ’ ಪಾರ್ಟ್ ʻಎʼ ಹಾಗೂ ʻಬಿʼ ಕಳೆದ ವರ್ಷ ರಿಲೀಸ್ ಆಗಿತ್ತು. ಇದೀಗ ರಿಚರ್ಡ್​ ಆಂಟನಿ ಹಾಗೂ ‘ಪುಣ್ಯಕೋಟಿ ಸಿನಿಮಾಗಳನ್ನು ರಕ್ಷಿತ್‌ ನಿರ್ದೇಶನ ಮಾಡುತ್ತಿದ್ದಾರೆ. ನನ್ನ ಮುಂದಿನ ಎರಡು ಸಿನಿಮಾಗಳಿಗೆ (ʻರಿಚರ್ಡ್​ ಆಂಟನಿ’ ಹಾಗೂ ‘ಪುಣ್ಯಕೋಟಿ’) ಪರಶುರಾಮ ಹಾಗೂ ಆತನ ಕೊಡಲಿಯೇ ಸ್ಫೂರ್ತಿ. ಈ ಕಥೆ ಜತೆ ಹೀಗಾಗಲೇ 4 ವರ್ಷ ಕಳೆದಿದ್ದೇನೆ. ಇನ್ನೂ ನಾಲ್ಕು ವರ್ಷ ಕಳೆಯೋದು ಇದೆ ಅನಿಸುತ್ತಿದೆ ಎಂದು ರಕ್ಷಿತ್ ಶೆಟ್ಟಿ ಈ ಹಿಂದೆ ಹೇಳಿಕೊಂಡಿದ್ದರು.

ಇದನ್ನೂ ಓದಿ: Rakshit Shetty: ಕಿರುತೆರೆಗೂ ಲಗ್ಗೆ ಇಟ್ಟ ʼಸಪ್ತ ಸಾಗರದಾಚೆ ಎಲ್ಲೋ ಸೈಡ್‌ ಬಿʼ ಚಿತ್ರ; ಎಲ್ಲಿ, ಯಾವಾಗ ಪ್ರಸಾರ?

ರಿಚರ್ಡ್‌ ಆಂಟನಿ ಜತೆಗೆ ರಕ್ಷಿತ್‌ ಶೆಟ್ಟಿ ಹಲವು ಯೋಜನೆಗಳನ್ನು ಹೊಂದಿದ್ದಾರೆ. ಈ ಬಗ್ಗೆ ಈ ಹಿಂದೆ ಅವರು ಟ್ವೀಟ್‌ ಹಂಚಿಕೊಂಡಿದ್ದರು. ʻʻಸಪ್ತ ಸಾಗರದಾಚೆ ಎಲ್ಲೋ ನಂತರ ನನ್ನ ಲೈನ್ ಅಪ್‌ಗಳು ಸಾಕಷ್ಟು ಸ್ಪಷ್ಟವಾಗಿವೆ. ಅಂದರೆ ರಿಚರ್ಡ್​ ಆಂಟನಿ, ಪುಣ್ಯ ಕೋಟಿ 1 (PK 1), ಪುಣ್ಯ ಕೋಟಿ 2 (PK 2), (RA), PK 1 ಮತ್ತು 2,ಮಿಡ್ನೈಟ್ ಟು ಮೋಕ್ಷ (M2M) ಇವುಗಳು ನನಗೆ ನಿದ್ದೆಯಿಲ್ಲದ ರಾತ್ರಿಗಳನ್ನು ನೀಡುವ ನಾಲ್ಕು ಚಲನಚಿತ್ರಗಳಾಗಿವೆ. ಆದರೆ ಕಿರಿಕ್‌ ಪಾರ್ಟಿ 2 (KP2) ಗಾಗಿ ನಾನು ವಿಭಿನ್ನ ಯೋಜನೆಗಳನ್ನು ಹೊಂದಿದ್ದೇನೆʼʼ ಎಂದಿದ್ದರು.

Continue Reading

ಸಿನಿಮಾ

Koti Movie: ಡಾಲಿ ಧನಂಜಯ್ ನಟನೆಯ ‘ಕೋಟಿ’ ಚಿತ್ರದ ಟ್ರೈಲರ್ ರಿಲೀಸ್; ಪ್ರೇಕ್ಷಕರಿಂದ ಭಾರಿ ಮೆಚ್ಚುಗೆ

Koti Movie: ಪರಮೇಶ್ ಗುಂಡಕಲ್ ನಿರ್ದೇಶನ ಮಾಡಿರುವ ಚೊಚ್ಚಲ ಸಿನಿಮಾ ಜೂನ್ 14ರಂದು ತೆರೆಗೆ ಬರಲಿದೆ. ಈ ಸಿನಿಮಾ ಮಿಡ್ಲ್ ಕ್ಲಾಸ್ ಫ್ಯಾಮಿಲಿಗೆ ಕನೆಕ್ಟ್ ಆಗಲಿದೆ ಎಂದು ನಟ ಡಾಲಿ ಧನಂಜಯ್‌ ಹೇಳಿದ್ದಾರೆ.

VISTARANEWS.COM


on

Koti Movie
Koo

ಬೆಂಗಳೂರು: ಡಾಲಿ ಧನಂಜಯ್ ನಟನೆಯ ʼಕೋಟಿʼ (Koti Movie) ಚಿತ್ರದ ಟ್ರೈಲರ್ ಅನ್ನು ಚಿತ್ರತಂಡ ನಗರದಲ್ಲಿ ಬುಧವಾರ ರಿಲೀಸ್ ಮಾಡಿದ್ದು, ಟ್ರೈಲರ್‌ ಬಗ್ಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪರಮೇಶ್ ಗುಂಡಕಲ್ ನಿರ್ದೇಶನ ಮಾಡಿರುವ ಚೊಚ್ಚಲ ಸಿನಿಮಾ ಜೂನ್ 14ರಂದು ತೆರೆಗೆ ಬರಲಿದೆ.

ಟ್ರೈಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ನಿರ್ದೇಶಕ ಪರಮೇಶ್ ಗುಂಡಕಲ್ ಮಾತನಾಡಿ, ಇದು ದುಡ್ಡಿನ ಸುತ್ತ ಸುತ್ತುವ ಕತೆ, ಕಥೆ ಏನು ಅನ್ನೋದನ್ನ ಸಿನಿಮಾ ನೋಡಿ. ಚಿಕ್ಕಂದಿನಲ್ಲಿ ಕಷ್ಟದ ದಿನಗಳನ್ನು ನೋಡಿದ್ದೇನೆ. ಆ ಸಂದರ್ಭದಲ್ಲಿ ಜಾತ್ರೆಯಲ್ಲಿ ರಸ್ತೆಯಲ್ಲಿ 500 ರೂ. ಸಿಕ್ಕಿತ್ತು. ಅದು ಆ ಟೈಮ್‌ಗೆ ತುಂಬಾನೇ ದೊಡ್ಡದು. ಈಗ ಎಷ್ಟು ದುಡಿದಿದ್ದೇನೆ, ಎಲ್ಲಾ ಸಿಕ್ಕಿದೆ. ಆದರೂ ಆ 500 ರೂಪಾಯಿ ಮುಂದೆ ಏನೂ ಅಲ್ಲ ಎಂದು ಹೇಳಿದರು.

ನಟ ಡಾಲಿ ಧನಂಜಯ್ (Daali Dhananjaya) ಮಾತನಾಡಿ, ಸೌತ್‌ನಿಂದ ಮುಂಬೈವರೆಗೂ ಹುಡುಕಿದರೂ ಈ ತರ ಗುಂಡಿಗೆ ಇರೋ ಹುಡುಗ ಸಿಗಲ್ಲ. ಹೊಸ ಪಾತ್ರ, ಹೊಸ ಕಥೆ ಹುಡುಕುತ್ತಲೇ ಇರುತ್ತೇವೆ. ಆ ತರ ಇಷ್ಟವಾದ ಕತೆ ಕೋಟಿ, ಅದಕ್ಕೆ ಈ ಚಿತ್ರದಲ್ಲಿ ನಟಿಸಲು ಒಪಿಕೊಂಡೆ. ಮಿಡ್ಲ್ ಕ್ಲಾಸ್ ಫ್ಯಾಮಿಲಿಗೆ ಕನೆಕ್ಟ್ ಆಗೋ ಸಿನಿಮಾ ಇದಾಗಿದ್ದು, ಜತೆಗೆ ಎಲ್ಲರಿಗೂ ಕನೆಕ್ಟ್ ಆಗುತ್ತೆ. ಚಿತ್ರರಂಗದ ಸದ್ಯದ ಸ್ಥಿತಿಯ ಬಗ್ಗೆ ಗೊತ್ತು, ಕೋಟಿ ಮೂಲಕ ಈ ಫೇಸ್ ಪಾಸ್ ಆಗಲಿ ಎಂದು ತಿಳಿಸಿದರು.

ಇದನ್ನೂ ಓದಿ | Kannada New Movie: ಅತೀ ಶೀಘ್ರದಲ್ಲೇ ತೆರೆಗೆ ಬರಲಿದೆ ‘ಆಪರೇಷನ್ ಲಂಡನ್ ಕೆಫೆ’!

ಮದುವೆ ಬಗ್ಗೆ ಕೇಳಿದ್ದಕ್ಕೆ ಪ್ರತಿಕ್ರಿಯಿಸಿ, ಕೋಟಿ ಸಿನಿಮಾ ಚೆನ್ನಾಗಿ ಹಿಟ್ ಆಗಲಿ, ಪಕ್ಕಾ ಮದುವೆ ಆಗುತ್ತೆ. ತಾರಾ ಅಮ್ಮಗೆ ಮಾತು ಕೊಟ್ಟಿರುವ ಹಾಗೆ ಮದುವೆ ಆಗುತ್ತೆ ಎಂದು ನಟ ಡಾಲಿ ಧನಂಜಯ್‌ ಹೇಳಿದರು.

ಕೋಟಿ ಕನ್ನಡದಲ್ಲಿ ಜಿಯೋ ಸ್ಟುಡಿಯೋಸ್ ಚೊಚ್ಚಲ ನಿರ್ಮಾಣವಾಗಿದ್ದು, ನಿರ್ದೇಶಕ ಪರಮ್ ಅವರ ನೇತೃತ್ವದಲ್ಲಿ ಮತ್ತು ಜ್ಯೋತಿ ದೇಶಪಾಂಡೆ ನಿರ್ಮಿಸಿದ ಫ್ಯಾಮಿಲಿ ಡ್ರಾಮಾ ಥ್ರಿಲ್ಲರ್ ಚಿತ್ರವಾಗಿದೆ. ನಟರಾಕ್ಷಸ ಡಾಲಿ ಧನಂಜಯ, ರಮೇಶ್ ಇಂದಿರಾ, ಮೋಕ್ಷ ಕುಶಾಲ್, ರಂಗಾಯಣ ರಘು, ತಾರಾ ಮುಂತಾದವರು ಸಿನಿಮಾದಲ್ಲಿ ನಟಿಸಿದ್ದಾರೆ. ಪರಮ್ ಬರವಣಿಗೆ ಸಾರಥ್ಯದ ಕೋಟಿ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ಟೀಸರ್ ಹಾಗೂ ಹಾಡುಗಳು ಹಿಟ್ ಲೀಸ್ಟ್ ಸೇರಿದ್ದು,, ಜೂನ್ 14 ರಿಂದ ಚಿತ್ರ ತೆರೆಗೆ ಬರಲಿದೆ.

ಇದನ್ನೂ ಓದಿ | Dolly Dhananjay: ಡಾಲಿ ಧನಂಜಯ್‌ ಜತೆ ಕೊಡಗಿನ ಕನ್ನಡತಿ ರೊಮ್ಯಾನ್ಸ್‌!

ಹೊಯ್ಸಳʼ ಚಿತ್ರ ಬಿಡುಗಡೆಯಾದ ಒಂದು ವರ್ಷದ ಬಳಿಕ ಈ ಸಿನಿಮಾ ಬಿಡುಗಡೆ ಆಗುತ್ತಿದೆ. ನಟ ರಾಕ್ಷಸ ಎಂದು ಬಿರುದು ಪಡೆದಿರುವ ಡಾಲಿ ಅವರ ವೃತ್ತಿ ಜೀವನದಲ್ಲಿ ಇದೊಂದು ಮೈಲುಗಲ್ಲು ಆಗಬಹುದಾದ ಸಿನಿಮಾ ಎಂಬ ಅಭಿಪ್ರಾಯ ಈಗಾಗಲೇ ಬಂದಿರುವುದು ಸಿನಿಮಾದ ಕುರಿತು ನಿರೀಕ್ಷೆಯನ್ನು ಹೆಚ್ಚು ಮಾಡಿದೆ.

Continue Reading

ಕರ್ನಾಟಕ

Kannada New Movie: ಅತೀ ಶೀಘ್ರದಲ್ಲೇ ತೆರೆಗೆ ಬರಲಿದೆ ‘ಆಪರೇಷನ್ ಲಂಡನ್ ಕೆಫೆ’!

Kannada New Movie: ಕವೀಶ್ ಶೆಟ್ಟಿ ಮತ್ತು ಮೇಘಾ ಶೆಟ್ಟಿ ಕಾಂಬಿನೇಷನ್‌ನ ಬಹು ನಿರೀಕ್ಷೆಯ ಕನ್ನಡ, ಮರಾಠಿ, ಹಿಂದಿ, ತಮಿಳು, ತೆಲುಗು, ಮಲಯಾಳಂ ಭಾಷೆಯಲ್ಲಿ ಅದ್ಧೂರಿಯಾಗಿ ತಯಾರಾಗುತ್ತಿರುವ ಮಾಸ್ ಆಕ್ಷನ್ ʼಆಪರೇಷನ್ ಲಂಡನ್ ಕೆಫೆʼ ಚಿತ್ರ ಈಗಾಗಲೇ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದ್ದು, ಆದಷ್ಟು ಬೇಗ ಚಿತ್ರವನ್ನು ಪ್ರೇಕ್ಷಕರ ಮುಂದೆ ತರುವುದಾಗಿ ನಿರ್ದೇಶಕ ಸಡಗರ ರಾಘವೇಂದ್ರ ತಿಳಿಸಿದ್ದಾರೆ.

VISTARANEWS.COM


on

Operation London Cafe movie will be released very soon
Koo

ಬೆಂಗಳೂರು: ಕವೀಶ್ ಶೆಟ್ಟಿ ಮತ್ತು ಮೇಘಾ ಶೆಟ್ಟಿ ಕಾಂಬಿನೇಷನ್‌ನ ಬಹು ನಿರೀಕ್ಷೆಯ ಕನ್ನಡ, ಮರಾಠಿ, ಹಿಂದಿ, ತಮಿಳು, ತೆಲುಗು, ಮಲಯಾಳಂ ಭಾಷೆಯಲ್ಲಿ ಅದ್ಧೂರಿಯಾಗಿ ತಯಾರಾಗುತ್ತಿರುವ ಮಾಸ್ ಆಕ್ಷನ್ ‘ಆಪರೇಷನ್ ಲಂಡನ್ ಕೆಫೆ’ ಚಿತ್ರ ಈಗಾಗಲೇ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದ್ದು, ಆದಷ್ಟು ಬೇಗ ಚಿತ್ರವನ್ನು (Kannada New Movie) ಪ್ರೇಕ್ಷಕರ ಮುಂದೆ ತರುವುದಾಗಿ ನಿರ್ದೇಶಕ ಸಡಗರ ರಾಘವೇಂದ್ರ ತಿಳಿಸಿದ್ದಾರೆ.

ಕವೀಶ್ ಮತ್ತು ಮೇಘಾ ಶೆಟ್ಟಿ ಜತೆಯಲ್ಲಿ ಮರಾಠಿಯ ಶಿವಾನಿ ಸುರ್ವೆ. ವಿರಾಟ್ ಮಡಕೆ ಪ್ರಸಾದ್ ಕಾಂಡೇಕರ್ ಹಾಗೂ ಕನ್ನಡದ ಅರ್ಜುನ್ ಕಾಪಿಕಾಡ್, ಬಿ ಸುರೇಶ್, ಕೃಷ್ಣ ಹೆಬ್ಬಾಳೆ, ಧರ್ಮೇಂದ್ರ ಅರಸ್, ನೀನಾಸಂ ಅಶ್ವತ್ ಮುಂತಾದ ಹೆಸರಾಂತ ಕಲಾವಿದರು ಈ ಚಿತ್ರಕ್ಕಾಗಿ ಬಣ್ಣ ಹಚ್ಚಿದ್ದಾರೆ. ಯುವ ಸಂಗೀತ ನಿರ್ದೇಶಕ ಪ್ರಾನ್ಶು ಝಾ ಸಂಗೀತವಿರುವ ಈ ಚಿತ್ರಕ್ಕೆ ಛಾಯಾಗ್ರಾಹಕ ಸುಂದರನಾಥ ಸುವರ್ಣ ಅವರ ಜತೆಯಲ್ಲಿ ದೀರ್ಘ ಕಾಲ ಕೆಲಸ ಮಾಡಿದ ಅನುಭವವಿರುವ ಡಿ. ನಾಗಾರ್ಜುನ್ ಛಾಯಾಗ್ರಹಣವಿದೆ.

ಇದನ್ನೂ ಓದಿ: Virat Kohli: ಬೌಂಡರಿ ಮೂಲಕ ವಿಶ್ವ ದಾಖಲೆ ಬರೆಯಲು ಸಜ್ಜಾದ ಕಿಂಗ್​ ಕೊಹ್ಲಿ

ಕಲಾ ನಿರ್ದೇಶಕ ವರದರಾಜ್ ಕಾಮತ್, ಕೆ. ಎಂ. ಪ್ರಕಾಶ್ ಸಂಕಲನದ ಜತೆಯಲ್ಲಿ ನಾಗೇಂದ್ರ ಪ್ರಸಾದ್, ಕವಿರಾಜ್ ಮತ್ತು ಸಡಗರ ರಾಘವೇಂದ್ರ ಸಾಹಿತ್ಯ ಮತ್ತು ವಿಕ್ರಂ ಮೊರ್, ಅರ್ಜುನ್ ಮತ್ತು ಮಾಸ್ ಮಾದ ವಿಶೇಷವಾಗಿ ಸಂಯೋಜಿಸಿದ ಸಾಹಸವಿದೆ.

ಇದನ್ನೂ ಓದಿ: R Ashwin: ಮೆಗಾ ಹರಾಜಿಗೂ ಮುನ್ನ ಚೆನ್ನೈ ಫ್ರಾಂಚೈಸಿ ಸೇರಿದ ಆರ್​. ಅಶ್ವಿನ್; ಹೊಸ ಜವಾಬ್ದಾರಿ

ಇಂಡಿಯನ್ ಫಿಲಂ ಫ್ಯಾಕ್ಟರಿ ಮತ್ತು ದೀಪಕ್ ರಾಣೆ ಫಿಲಂ ಲಾಂಛನದ ಅಡಿಯಲ್ಲಿ ಅದ್ಧೂರಿಯಾಗಿ ನಿರ್ಮಾಣಗೊಳ್ಳುತ್ತಿರುವ ಈ ಚಿತ್ರವನ್ನು ಉಡುಪಿಯ ವಿಜಯ್ ಕುಮಾರ್ ಶೆಟ್ಟಿ ಹವರಾಲ್, ರಮೇಶ್ ಕೊಠಾರಿ, ದೀಪಕ್ ರಾಣೆ ಮತ್ತು ವಿಜಯ್ ಪ್ರಕಾಶ್ ಜಂಟಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ.

Continue Reading

ಸಿನಿಮಾ

Kalki 2898 AD: ಪ್ರಭಾಸ್‌-ದೀಪಿಕಾ ಜೋಡಿಯ ʼಕಲ್ಕಿʼ ಚಿತ್ರದ ಟ್ರೈಲರ್‌ ರಿಲೀಸ್‌ಗೆ ಮುಹೂರ್ತ ಫಿಕ್ಸ್‌

Kalki 2898 AD: ಈ ವರ್ಷದ ಬಹು ನಿರೀಕ್ಷಿತ ಚಿತ್ರ ʼಕಲ್ಕಿ 2898 ಎಡಿʼ ಪ್ಯಾನ್‌ ಇಂಡಿಯಾ ಚಿತ್ರವಾಗಿ ಜೂನ್‌ 27ರಂದು ತೆರೆಗೆ ಬರಲಿದೆ. ಪ್ರಭಾಸ್‌ ಮತ್ತು ದೀಪಿಕಾ ಪಡುಕೋಣೆ ಮೊದಲ ಬಾರಿಗೆ ತೆರೆ ಹಂಚಿಕೊಳ್ಳುತ್ತಿರುವ ಈ ಚಿತ್ರ ಮುಖ್ಯ ಪಾತ್ರದಲ್ಲಿ ಬಾಲಿವುಡ್‌ ನಟ ಅಮಿತಾಭ್‌ ಬಚ್ಚನ್‌, ಕಮಲ್‌ ಹಾಸನ್‌ ಮುಂತಾದ ಘಟಾನುಘಟಿಗಳು ಅಭಿನಯಿಸುತ್ತಿದ್ದಾರೆ. ಇದೀಗ ಚಿತ್ರತಂಡ ಟ್ರೈಲರ್‌ ರಿಲೀಸ್‌ ದಿನಾಂಕವನ್ನು ಘೋಷಿಸಿದೆ.

VISTARANEWS.COM


on

Kalki 2898 AD
Koo

ಹೈದರಾಬಾದ್‌: ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ತೆರೆಗೆ ಬರಲಿರುವ ತೆಲುಗು ಚಿತ್ರ ʼಕಲ್ಕಿ 2898 ಎಡಿʼ (Kalki 2898 ADಸದ್ಯ ನಿರೀಕ್ಷೆ ಹುಟ್ಟು ಹಾಕಿದೆ. ಜೂನ್‌ 27ರಂದು ತೆರೆಗೆ ಬರಲಿರುವ ಈ ಸಿನಿಮಾ ಈ ವರ್ಷದ ಅತ್ಯಂತ ದುಬಾರಿ ಚಿತ್ರ ಎನಿಸಿಕೊಂಡಿದೆ. ಟಾಲಿವುಡ್‌ ಸ್ಟಾರ್‌ ಪ್ರಭಾಸ್‌, ಬಾಲಿವುಡ್‌ ಬ್ಯೂಟಿ‌, ಕನ್ನಡತಿ ದೀಪಿಕಾ ಪಡುಕೋಣೆ (Prabhas-Deepika Padukone) ಮೊದಲ ಬಾರಿಗೆ ತೆರೆ ಹಂಚಿಕೊಳ್ಳುತ್ತಿರುವ ಈ ಸೈನ್ಸ್‌ ಫಿಕ್ಷನ್‌ ಈಗಾಗಲೇ ಕುತೂಹಲ ಮೂಡಿಸಿದೆ. ಇತ್ತೀಚೆಗೆ ಚಿತ್ರದಲ್ಲಿ ವಿಶೇಷ ಪಾತ್ರ ಎನಿಕೊಂಡಿರುವ ಬುಜ್ಜಿ (ಕಾರು)ಯನ್ನು ಪರಿಚಯಿಸಿ ಇನ್ನಷ್ಟು ನಿರೀಕ್ಷೆ ಹೆಚ್ಚಿಸಿದ್ದ ಚಿತ್ರತಂಡ ಇದೀಗ ಟ್ರೈಲರ್‌ ಬಿಡುಗಡೆ ದಿನಾಂಕವನ್ನು ಘೋಷಿಸಿದೆ.

ಟ್ರೈಲರ್‌ ಯಾವಾಗ ರಿಲೀಸ್‌?

ಜೂನ್‌ 10ರಂದು ʼಕಲ್ಕಿ 2898 ಎಡಿʼ ಟ್ರೈಲರ್‌ ರಿಲೀಸ್‌ ಆಗಲಿದೆ. ಹೊಸ ಪೋಸ್ಟರ್‌ ರಿಲೀಸ್‌ ಮಾಡಿರುವ ಚಿತ್ರತಂಡ ಆ ಮೂಲಕ ಟ್ರೈಲರ್‌ ರಿಲೀಸ್‌ ದಿನಾಂಕವನ್ನು ಘೋಷಿಸಿದೆ. ಪೋಸ್ಟರ್‌ನಲ್ಲಿ ಗುಡ್ಡದ ಮೇಲೆ ಪ್ರಭಾಸ್‌ ನಿಂತಿರುವ ಚಿತ್ರ ಕಂಡು ಬಂದಿದ್ದು, ‘ಎಲ್ಲವೂ ಬದಲಾಗುವ ಸಮಯ ಬಂದಿದೆ’ ಎಂದು ಬರೆಯಲಾಗಿದೆ. ಭೂತ ಮತ್ತು ಭವಿಷ್ಯತ್‌ ಕಾಲದ ಕಥೆ ಹೇಳಲಿರುವ ʼಕಲ್ಕಿ 2898 ಎಡಿʼ ಚಿತ್ರಕ್ಕೆ ಟಾಲಿವುಡ್‌ನ ಪ್ರತಿಭಾವಂತ ನಿರ್ದೇಶಕ ನಾಗ್‌ ಅಶ್ವಿನ್‌ ಆ್ಯಕ್ಷನ್‌ ಕಟ್‌ ಹೇಳುತ್ತಿದ್ದಾರೆ. ವೈಜಯಂತಿ ಮೂವೀಸ್‌ ಅದ್ಧೂರಿಯಾಗಿ ಚಿತ್ರವನ್ನು ನಿರ್ಮಿಸುತ್ತಿದೆ.

ಗಮನ ಸೆಳೆದ ಬುಜ್ಜಿ ಕಾರು

ಇತ್ತೀಚೆಗೆ ಬಿಡುಗಡೆಯಾದ ಬುಜ್ಜಿ ಕಾರಿನ ಟೀಸರ್‌ ಗಮನ ಸೆಳೆದಿದೆ. ಜತೆಗೆ ಚಿತ್ರದಲ್ಲಿ ಪ್ರಭಾಸ್‌ ಓಡಿಸಲಿರುವ ಈ ಕಾರನ್ನು ಇದೀಗ ಚಿತ್ರದ ಪ್ರಚಾರಕ್ಕೆ ಬಳಸಲಾಗುತ್ತಿದೆ. ವಿಶೇಷವಾಗಿ ತಯಾರಿಸಿದ ಈ ಕಾರನ್ನು ಈಗಾಗಲೇ ಸೆಲೆಬ್ರಿಟಿಗಳು ಡ್ರೈವ್‌ ಮಾಡಿದ್ದಾರೆ.

ಕುತೂಹಲ ಮೂಡಿಸಿದ ಅಮಿತಾಭ್‌

ಈ ಸಿನಿಮಾದಲ್ಲಿ ಬಾಲಿವುಡ್‌ ನಟ ಅಮಿತಾಭ್‌ ಬಚ್ಚನ್‌ ಕೂಡ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದು, ಕೆಲವು ದಿನಗಳ ಹಿಂದೆ ಚಿತ್ರತಂಡ ಅವರ ಪಾತ್ರ ಹೇಗಿರಲಿದೆ ಎನ್ನುವುದನ್ನು ರಿವೀಲ್ ಮಾಡಿತ್ತು. ಬಿಗ್ ಬಿ ಅಶ್ವತ್ಥಾಮನಾಗಿ ಕಾಣಿಸಿಕೊಳ್ಳುತ್ತಿದ್ದು, ಅವರ ಪಾತ್ರದ ಟೀಸರ್‌ ನೋಡಿ ಅಭಿಮಾನಿಗಳು ಫಿದಾ ಆಗಿದ್ದರು. ಗುಹೆಯೊಂದರಲ್ಲಿ ಮಗುವೊಂದು ನೀನು ಯಾರು? ಎಂದು ಕೇಳಿದಾಗ ʻʻಪ್ರಾಚೀನ ಕಾಲದಿಂದಲೂ ನಾನು ಕಲ್ಕಿಯ ಅವತಾರದ ಆಗಮನಕ್ಕಾಗಿ ಕಾಯುತ್ತಿದ್ದೇನೆ. ನಾನು ಗುರು ದ್ರೋಣರ ಮಗ ಅಶ್ವತ್ಥಾಮʼʼ ಎಂದು ಅಮಿತಾಭ್‌ ಹೇಳುವ ಮೂಲಕ ಈ ಸಿನಿಮಾದ ಕಥೆ ಪುರಾಣ ಕಾಲದಿಂದ ಭವಿಷ್ಯದತ್ತ ಸಾಗುತ್ತದೆ ಎನ್ನುವ ಸುಳಿವು ಲಭಿಸಿತ್ತು. ಭಾರತ ಚಿತ್ರರಂಗದ ಮಟ್ಟಿಗೆ ಇಂತಹ ಪ್ರಯೋಗ ಬಹಳ ಅಪರೂಪ.

ಈ ಹಿಂದೆ ಚಿತ್ರದ ಬಗ್ಗೆ ಮಾತನಾಡಿದ್ದ ನಿರ್ದೇಶಕ ಅಶ್ವಿನ್‌ ಚೈತ್ಯನ್ಯ, ʼʼಈ ಸಿನಿಮಾದ ಕಥೆ ಮಹಾಭಾರತದ ಕಾಲಘಟ್ಟಲ್ಲಿ ಆರಂಭವಾಗಿ ಕ್ರಿ.ಶ. 2898ರಲ್ಲಿ ಕೊನೆಗೊಳ್ಳಲಿದೆ. ಆ ಮೂಲಕ ಸುಮಾರು 6,000 ವರ್ಷಗಳ ಕಥೆಯನ್ನು ತೆರೆ ಮೇಲೆ ಮೂಡಿಸಲಿದ್ದೇವೆ. ಇದಕ್ಕಾಗಿ ಬಹಳಷ್ಟು ಶ್ರಮ ವಹಿಸಿದ್ದೇವೆʼʼ ಎಂದು ಹೇಳುವ ಮೂಲಕ ಕುತೂಹಲ ಮೂಡಿಸಿದ್ದರು.

ಇದನ್ನೂ ಓದಿ: Kalki 2898 AD: ʼಕಲ್ಕಿʼ ಚಿತ್ರಕ್ಕಾಗಿ ಕನ್ನಡದಲ್ಲಿ ಡಬ್‌ ಮಾಡಲಿದ್ದಾರೆ ದೀಪಿಕಾ ಪಡುಕೋಣೆ

ಈ ಸಿನಿಮಾದಲ್ಲಿ ಪ್ರಭಾಸ್‌ ಭೈರವನಾಗಿ ಮಿಂಚಲಿದ್ದು, ಬಾಲಿವುಡ್‌ ನಟಿ ದಿಶಾ ಪಠಾಣಿ, ಕಮಲ್‌ ಹಾಸನ್‌ ಕೂಡ ಮುಖ್ಯ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಮತ್ತೊಂದು ವಿಶೇಷ ಎಂದರೆ ವಿವಿಧ ಭಾಷೆಗಳಲ್ಲಿ ತೆರೆಗೆ ಬರಲಿರುವ ಈ‌ ಸಿನಿಮಾದ ಕನ್ನಡ ಅವತರಣಿಕೆಯಲ್ಲಿ ತಮ್ಮ ಪಾತ್ರಕ್ಕೆ ದೀಪಿಕಾ ಪಡುಕೋಣೆಯೇ ಧ್ವನಿ ನೀಡಲಿದ್ದಾರೆ. ಜತೆಗೆ ಹಿಂದಿಯಲ್ಲಿಯೂ ಅವರು ಡಬ್‌ ಮಾಡಲಿದ್ದಾರೆ.

Continue Reading
Advertisement
Norway Tour
ಪ್ರವಾಸ11 mins ago

Norway Tour: ಜಗತ್ತಿನ ಕೊನೆಯ ದೇಶ ಇದು! ಇಲ್ಲಿ 6 ತಿಂಗಳು ಹಗಲು, 6 ತಿಂಗಳು ರಾತ್ರಿ!

Rohit Sharma
ಕ್ರೀಡೆ15 mins ago

Rohit Sharma: ಹಲವು ದಾಖಲೆಗಳ ಸರದಾರನಾದ ಹಿಟ್​ಮ್ಯಾನ್​ ರೋಹಿತ್​

Election Results 2024
Lok Sabha Election 202416 mins ago

Election Results 2024: ಜೈಲಿನಿಂದಲೇ ಸ್ಪರ್ಧಿಸಿ ಗೆದ್ದ ಇವರು ಸಂಸತ್‌ಗೆ ಹಾಜರಾಗಬಹುದೆ? ಕಾನೂನು ಏನು ಹೇಳುತ್ತದೆ?

Rakshit Shetty Birthday here is the cinema Journey
ಸ್ಯಾಂಡಲ್ ವುಡ್18 mins ago

Rakshit Shetty: ಸಿಂಪಲ್‌ ಸ್ಟಾರ್‌ಗೆ ಇಂದು ಜನುಮದಿನದ ಸಂಭ್ರಮ; ರಕ್ಷಿತ್‌  ಸಿನಿ ಜರ್ನಿ ಹೀಗಿತ್ತು!

Super Food For Kids
ಆರೋಗ್ಯ25 mins ago

Super Food For Kids: ನಿಮ್ಮ ಮಕ್ಕಳು ಜಾಣರಾಗಿ ಹೆಚ್ಚು ಅಂಕ ಗಳಿಸಬೇಕೆ? ಈ ಆಹಾರಗಳನ್ನು ಕೊಡಿ

Viral Video
ವೈರಲ್ ನ್ಯೂಸ್28 mins ago

Viral Video: ಹೃದಯ ಸ್ತಬ್ಧಗೊಳಿಸುವ ಈ 3ಡಿ ದೃಶ್ಯ ನೋಡಿ! ಇನ್ನಾದರು ಸುರಕ್ಷಿತವಾಗಿ ವಾಹನ ಚಲಾಯಿಸಿ

Lok Sabha Election 2024
ದೇಶ30 mins ago

Lok Sabha Election 2024: ಒಬ್ಬ ಅಭ್ಯರ್ಥಿ ಎರಡೂ ಕ್ಷೇತ್ರಗಳಲ್ಲೂ ಗೆದ್ದರೆ ಏನಾಗುತ್ತದೆ?

HD Kumaraswamy NDA government
ಪ್ರಮುಖ ಸುದ್ದಿ45 mins ago

HD Kumaraswamy: ಕೃಷಿ ಖಾತೆ ಬಯಸಿದ್ದ ಎಚ್‌ಡಿಕೆ ಎನ್‌ಡಿಎ ಮೈತ್ರಿಕೂಟದ ಸಭೆಯಲ್ಲಿ ತುಟಿ ಬಿಚ್ಚಲೇ ಇಲ್ಲ!

death news kapu siddalingaswamy
ಮೈಸೂರು1 hour ago

Death News: ಬಿಎಸ್‌ವೈ ಆಪ್ತ ಕಾ.ಪು ಸಿದ್ದಲಿಂಗಸ್ವಾಮಿ ನಿಧನ

Lotus Seeds Benefits
ಆರೋಗ್ಯ2 hours ago

Lotus Seeds Benefits: ತಾವರೆ ಬೀಜಗಳನ್ನು ಸೇವಿಸಿ; ಇದು ರುಚಿಗೂ ಒಳ್ಳೆಯದು, ಹೃದಯಕ್ಕೂ ಒಳ್ಳೆಯದು

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Lok Sabha Election Result 2024 Live
ದೇಶ2 days ago

Lok Sabha Election Result 2024 Live: ಲೋಕಸಭೆ ಚುನಾವಣೆ ಫಲಿತಾಂಶದ ಲೈವ್‌ ಇಲ್ಲಿ ವೀಕ್ಷಿಸಿ

Karnataka Rain
ಮಳೆ3 days ago

Karnataka Rain : 133 ವರ್ಷದ ರೆಕಾರ್ಡ್ ಬ್ರೇಕ್ ಮಾಡಿದ ʻಬೆಂಗಳೂರು ಮಳೆʼ

Snake Rescue Snakes spotted in heavy rain
ಮಳೆ3 days ago

Snake Rescue: ಮಳೆ ನೀರಿನಲ್ಲಿ ಹರಿದು ಬಂದು ಬೈಕ್‌ನಲ್ಲಿ ಸೇರಿಕೊಂಡ ಹಾವು; ಮನೆಗಳಲ್ಲೂ ಪ್ರತ್ಯಕ್ಷ

Karnataka Rain
ಮಳೆ4 days ago

Karnataka Rain : ವೀಕೆಂಡ್‌ ಮೋಜಿಗೆ ವರುಣ ಅಡ್ಡಿ; ಭಾನುವಾರ ಸಂಜೆಗೆ ಮಳೆ ಕಾಟ

Liquor ban
ಬೆಂಗಳೂರು5 days ago

Liquor Ban : ಮುಂದಿನ ಏಳು ದಿನಗಳಲ್ಲಿ ನಾಲ್ಕೂವರೆ ದಿನ ಬಾರ್ ಕ್ಲೋಸ್; ಎಣ್ಣೆ ಸಿಗೋದು ಯಾವ ದಿನ?

Assault Case in Shivamogga
ಕ್ರೈಂ7 days ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ1 week ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು1 week ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ1 week ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ2 weeks ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

ಟ್ರೆಂಡಿಂಗ್‌