Prerane : ಆಮೆಯಂತೆ ಒಳ ಸೆಳೆದುಕೊಳ್ಳೋಣ - Vistara News

ಧಾರ್ಮಿಕ

Prerane : ಆಮೆಯಂತೆ ಒಳ ಸೆಳೆದುಕೊಳ್ಳೋಣ

“ಪ್ರೇರಣೆʼʼ (Prerane) ಇದು ಧಾರ್ಮಿಕ ಮತ್ತು ಆಧ್ಯಾತ್ಮಿಕ ಚಿಂತನೆಗಳನ್ನು ಬಿತ್ತುವ ಬೆಳಗಿನ ಹೊಳಹು. ಪ್ರತಿ ನಿತ್ಯ ಧಾರ್ಮಿಕ ಚಿಂತಕರು, ಪ್ರವಚನಕಾರರು, ಆಧ್ಯಾತ್ಮ ಚಿಂತಕರು ಇಲ್ಲಿ ಬರೆಯುತ್ತಿದ್ದಾರೆ. ದುಃಖವನ್ನು ಎದುರಿಸುವು ಬಗೆಯನ್ನು ಇಂದು ವಿವರಿಸಲಾಗಿದೆ.

VISTARANEWS.COM


on

Prerane ಪ್ರೇರಣೆ
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo
mohan raghavan

ಡಾ. ಮೋಹನ ರಾಘವನ್ 
ದಟ್ಟವಾದ ಕಾಡಿನ ಪ್ರಶಾಂತವಾದ ಸರೋವರದ ತೀರದಲ್ಲಿ ಮೂವರು ಸಂಗಡಿಗರ ಸಹಬಾಳುವೆ. ಆಮೆ, ಜಿಂಕೆ ಮತ್ತು ಹದ್ದು. ಈ ಮೂವರೂ ದಿನವೂ ಕಾಡು ಹರಟೆಯಲ್ಲೂ, ವಿಚಾರ-ವಿನೋದದಲ್ಲೂ ಕಾಲ ಕಳೆಯುತ್ತಿದ್ದವು. ಒಮ್ಮೆ ಬೇಡನೊಬ್ಬನು ಆ ಪ್ರಶಾಂತ ವಾತಾವಾರಣಕ್ಕೆ ಭಂಗ ತರಲು ಬಂದನು. ಹದ್ದು ಹಾರಿಹೋಯಿತು, ಜಿಂಕೆ ವೇಗವಾಗಿ ಕಾಣದಂತಾಯಿತು. ಆದರೆ ನಿಧಾನವಾಗಿ ನಡೆದಾಡುತ್ತಿದ್ದ ಆಮೆ ಬೇಡನ ಕೈಗೆ ಸಿಲುಕಿತು. ಅದರ ಕೈ ಕಾಲುಗಳನ್ನು ಕಟ್ಟಿ, ತನ್ನ ಬಿಲ್ಲಿನ ತುದಿಗೇರಿಸಿ ಮನೆಯಕಡೆಗೆ ಹೊರಟನು.

ಆಗ ಜಿಂಕೆ ಮತ್ತು ಹದ್ದು ಸೇರಿ ಮಿತ್ರನನ್ನು ಉಳಿಸಿಕೊಳ್ಳಲು ಒಂದು ಯುಕ್ತಿಯನ್ನು ರೂಪಿಸಿದರು. ಜಿಂಕೆ ಓಡಿ ಹೋಗಿ ಬೇಡನು ಹೋಗುತ್ತಿದ್ದ ಮಾರ್ಗದಲ್ಲಿ ಸತ್ತಂತೆ ನಟಿಸುತ್ತಾ ಮಲಗಿತು. ಅದನ್ನು ನೋಡಿದ ಬೇಡ, ಆಮೆಯನ್ನು ಬದಿಗಿಟ್ಟು ಜಿಂಕೆಯನ್ನು ಎತ್ತಿಕೊಂಡು ಬರಲು ಹೋದ. ಹತ್ತಿರ ಬರುವವರೆಗೂ ಕಾದಿದ್ದು ಬೇಡ ಕಣ್ಣು ಮಿಟುಕಿಸುವುದರಲ್ಲಿ ಜಿಂಕೆ ಎದ್ದು ಕಾಡಿನೊಳಗೆ ಸೇರಿಕೊಂಡಿತು. ಈ ನಡುವೆ ಹದ್ದು ಆಮೆಯನ್ನು ಕಟ್ಟಿರುವ ಪಾಶವನ್ನು ಕಚ್ಚಿ ಆಮೆಯನ್ನು ಬಿಡಿಸಿತು. ಆಮೆಯು ತನ್ನ ಕೈಕಾಲುಗಳನ್ನು ಒಳಕ್ಕೆ ಸೆಳೆದು ಪಕ್ಕದಲ್ಲೇ ಇದ್ದ ಕಲ್ಲು ಬಂಡೆಗಳ ನಡುವೆ ತಾನೂ ಬಂಡೆಯಂತೆ ಕುಳಿತುಬಿಟ್ಟಿತು. ಯಾವ ಬೇಟೆಯೂ ಸಿಗದೇ ಬೇಡನು ಹತಾಶನಾಗಿ ಹಿಂತಿರುಗಬೇಕಾಯಿತು.

prerane

ಆಮೆಯೊಂದು ವಿಶಿಷ್ಟವಾದ ಪ್ರಾಣಿ. ಆಮೆಯ ಉದಾಹರಣೆಯ ಮೂಲಕ ಶ್ರೀರಂಗಮಹಾಗುರುಗಳು ಜೀವನದ ಗಾಢವಾದ ತತ್ತ್ವಗಳನ್ನು ತಿಳಿಸಿಕೊಡುತ್ತಿದ್ದರು. ಆಮೆ ನಾಲ್ಕು ಕಾಲುಗಳು, ಪುಚ್ಚ ಮತ್ತು ತಲೆಯನ್ನು ಹೊರಕ್ಕೆ ಚಾಚಿ ವ್ಯವಹಾರವನ್ನು ನಡೆಸಬಲ್ಲದು. ಅಂತೆಯೇ ಅವನ್ನು ಒಳಕ್ಕೆ ಸೆಳೆದು ಹೊರಲೋಕದಿಂದ ತನ್ನನ್ನು ಒಳಸೆಳೆದುಕೊಂಡು ತನ್ನ ಗೂಡಿನೊಳಗೆ ಸೇರಿಕೊಂಡು ಆರಾಮವಾಗಿ ಇರಲೂ ಬಲ್ಲದು. ನಾವೂ ಅಂತೆಯೇ ನಮ್ಮ ಇಂದ್ರಿಯಗಳ ಮೂಲಕ ಹೊರಲೋಕದೊಂದಿಗೆ ವ್ಯವಹರಿಸುತ್ತೇವೆ.

ಧಾರ್ಮಿಕ ಮತ್ತು ಆಧ್ಯಾತ್ಮಿಕ ಲೇಖನ, ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ.

ಈ ಲೋಕದಲ್ಲಿ ಸುಖವೂ ಉಂಟು, ಬೇಡನಂತೆ ಬೇಡದ ದುಃಖ, ಕಷ್ಟ ಕಾರ್ಪಣ್ಯಗಳೂ ಉಂಟು. ನಾನಾ ಇಂದ್ರಿಯದ ಬಯಕೆಗಳು. ಒಂದನ್ನು ತೀರಿಸಿದರೆ ಇನ್ನೊಂದು ಪುಟಿದೇಳುತ್ತವೆ. ಇಂದ್ರಿಯಗಳ ಬಯಕೆಗಳು ತೃಪ್ತಿಗೊಳಿಸಿ ತೀರವು. ಹೀಗೆ ಇಂದ್ರಿಯ ಸುಖಕ್ಕಾಗಿ ನಾವು ಆಮೆಯಂತೆ ಓಡಿ, ಇಂದ್ರಿಯಗಳನ್ನು ಹೊರಚಾಚಿ ಪ್ರಯತ್ನಿಸುತ್ತೇವೆ. ಆದರೆ ದುಃಖ ಬಂದಾಗ ಜಿಂಕೆಯಂತೆ ಓಡುವ ಸಾಮರ್ಥ್ಯ ಇಲ್ಲ, ಹದ್ದಿನಂತೆ ಹಾರುವ ಸಾಮರ್ಥ್ಯವೂ ಇಲ್ಲ. ಆದರಿಂದ ಎಷ್ಟು ಓಡಿದರೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ದುಃಖವೆಂಬ ಬೇಡ ಪಕ್ಕದಲ್ಲೇ ಇರುತ್ತಾನೆ. ದುಃಖದಿಂದ ತಪ್ಪಿಸಿಕೊಳ್ಳಲು ಏಕೈಕ ಉಪಾಯವೆಂದರೆ ಇಂದ್ರಿಯಗಳನ್ನು ಒಳಕ್ಕೆ ಸೆಳೆದು ನಮ್ಮ ಗೂಡಿನೊಳಗೆ ಇರುವ ಒಳ ನೆಮ್ಮದಿಯನ್ನು ಅನುಭವಿಸುವುದು. ಇದೇ ಯೋಗವು ತೋರಿಸಿಕೊಡುವ ದಾರಿ. ಆಮೆಯಂತೆ ಇಂದ್ರಿಯಗಳನ್ನು ಒಳಕ್ಕೆ ಸೆಳೆಯುವುದನ್ನು ಯೋಗಶಾಸ್ತ್ರದಲ್ಲಿ ಪ್ರತ್ಯಾಹಾರ ಎನ್ನುತ್ತಾರೆ. ಪ್ರತ್ಯಾಹಾರವು ಧ್ಯಾನ, ನಂತರದ ಸಮಾಧಿ ಶಾಂತಿಗಳಿಗೆ ಅಣಿಮಾಡಿ ಕೊಡುತ್ತದೆ.

ಹೀಗೆ ಹೊರಜೀವನದ ಬೇಗೆಯಿಂದ ಒಳಜೀವನದೆಡೆಗೆ ನಮ್ಮ ಇಂದ್ರಿಯಗಳನ್ನು ಸೆಳೆಯಲು ಆಮೆಯ ಉದಾಹರಣೆಯಿಂದ ಕಲಿಯೋಣ.

ಲೇಖಕರು ಸಂಸ್ಕೃತಿ ಚಿಂತಕರು
ಅಷ್ಟಾಂಗಯೋಗ ವಿಜ್ಞಾನಮಂದಿರಂ

ಇದನ್ನೂ ಓದಿ | Prerane : ಆಧ್ಯಾತ್ಮಿಕ ಸಾಧನೆಗಳನ್ನು ಮಾಡುವುದು ಜ್ಞಾನಿಯಾಗಲು ಅಲ್ಲ!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಧಾರ್ಮಿಕ

Koppala News: ವಿಜೃಂಭಣೆಯಿಂದ ಜರುಗಿದ ಹುಲಗಿಯ ಶ್ರೀ ಹುಲಿಗೆಮ್ಮ ದೇವಿ ಮಹಾರಥೋತ್ಸವ

Koppala News: ಉತ್ತರ ಕರ್ನಾಟಕದ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾಗಿರುವ ಕೊಪ್ಪಳ ತಾಲೂಕಿನ ಹುಲಗಿ ಗ್ರಾಮದ ಶ್ರೀ ಹುಲಿಗೆಮ್ಮದೇವಿ ಮಹಾರಥೋತ್ಸವವು ಶುಕ್ರವಾರ ಅಪಾರ ಭಕ್ತ ಸಾಗರದ ನಡುವೆ ವಿಜೃಂಭಣೆಯಿಂದ ಜರುಗಿತು.

VISTARANEWS.COM


on

Sri Huligemma Devi Maharathotsava in Hulagi
Koo

ಕೊಪ್ಪಳ: ತಾಲೂಕಿನ ಹುಲಗಿ ಗ್ರಾಮದ ಶ್ರೀ ಹುಲಿಗೆಮ್ಮದೇವಿ ಜಾತ್ರಾ ಮಹೋತ್ಸವ ಅಂಗವಾಗಿ ಶುಕ್ರವಾರ ಅಪಾರ ಭಕ್ತಸಾಗರದ ನಡುವೆ ಮಹಾರಥೋತ್ಸವವು ವಿಜೃಂಭಣೆಯಿಂದ (Koppala News) ಜರುಗಿತು.

ಇದನ್ನೂ ಓದಿ: Old Students Association: ಸರ್ಕಾರಿ ಶಾಲೆಗಳಲ್ಲಿ ಹಳೇ ವಿದ್ಯಾರ್ಥಿಗಳ ಸಂಘ, ವಾಟ್ಸ್‌ಆ್ಯಪ್‌ ಗ್ರೂಪ್ ರಚಿಸಲು ಆದೇಶ

ಉತ್ತರ ಕರ್ನಾಟಕದ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾಗಿರುವ ಹುಲಗಿಯ ಶ್ರೀ ಹುಲಿಗೆಮ್ಮ ದೇವಿಯ ಪ್ರಸಕ್ತ ಸಾಲಿನ ಜಾತ್ರಾ ಮಹೋತ್ಸವದ ಅಂಗವಾಗಿ ಗುರುವಾರದಿಂದ ಜೂನ್ 3 ರ ಸೋಮವಾರದವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿದ್ದು, ಶುಕ್ರವಾರ ಸಂಜೆ ಮಹಾರಥೋತ್ಸವವು ಲಕ್ಷಾಂತರ ಭಕ್ತಾಧಿಗಳ ಸಮೂಹದ ನಡುವೆ ಅದ್ದೂರಿಯಾಗಿ ನಡೆಯಿತು.

ಸುಮಾರು 5 ಲಕ್ಷಕ್ಕೂ ಅಧಿಕ ಭಕ್ತಾದಿಗಳು ಭಾಗಿ

ಶ್ರೀ ಹುಲಿಗೆಮ್ಮ ದೇವಿ ಮಹಾರಥೋತ್ಸವದಲ್ಲಿ ಭಕ್ತರ ಉಧೋ ಉಧೋ ಘೋಷಣೆ ಮುಗಿಲು ಮುಟ್ಟಿತ್ತು. ಭಕ್ತವೃಂದ ರಥಕ್ಕೆ ಬಾಳೆಹಣ್ಣು, ಉತ್ತತ್ತಿ ಸಮರ್ಪಿಸಿ, ಭಕ್ತಿ ಭಾವ ಮೆರೆದರು. ಕರ್ನಾಟಕದ ವಿವಿಧ ಜಿಲ್ಲೆಗಳ ಮತ್ತು ಆಂಧ್ರಪ್ರದೇಶದ, ತೆಲಂಗಾಣ, ತಮಿಳುನಾಡು, ಮಹಾರಾಷ್ಟ್ರ ಹಾಗೂ ಇತರೆ ರಾಜ್ಯಗಳ ಸುಮಾರು ಐದು ಲಕ್ಷಕ್ಕೂ ಅಧಿಕ ಭಕ್ತಾದಿಗಳು ಜಾತ್ರೆಗೆ ಆಗಮಿಸಿ, ಮಹಾರಥೋತ್ಸವವನ್ನು ಕಣ್ತುಂಬಿಕೊಂಡರು.

ರಥೋತ್ಸವ ಸಂದರ್ಭದಲ್ಲಿ ಕೊಪ್ಪಳ ಉಪವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ್ ಮಾಲಗಿತ್ತಿ, ಹುಲಿಗೆಮ್ಮ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಅರವಿಂದ್ ಸುತಗುಂಡಿ ಹಾಗೂ ಕೊಪ್ಪಳ ಮತ್ತು ಗಂಗಾವತಿ ಡಿವೈಎಸ್ಪಿಗಳು ಹಾಗೂ ಇತರರು ಉಪಸ್ಥಿತರಿದ್ದರು

Continue Reading

ಧಾರ್ಮಿಕ

Vastu Tips: ನೆಲ ಒರೆಸುವಾಗಲೂ ವಾಸ್ತು ನಿಯಮ ಪಾಲಿಸಲೇಬೇಕು!

ಮನೆಯನ್ನು ಸ್ವಚ್ಛ ಮಾಡುವಾಗಲೂ ಪಾಲಿಸಬೇಕಾದ ವಾಸ್ತು ನಿಯಮಗಳಿವೆ. ಅದರಲ್ಲೂ ಮನೆ ಒರೆಸುವ ಕುರಿತು ವಾಸ್ತು ಶಾಸ್ತ್ರದಲ್ಲಿ (Vastu Tips) ಏನು ಹೇಳಿದೆ ಗೊತ್ತೇ? ಈ ಕುರಿತ ಮಾಹಿತಿ ಇಲ್ಲಿದೆ.

VISTARANEWS.COM


on

By

Vastu Tips
Koo

ಮನೆಯ (home) ಒಳಾಂಗಣ, ಹೊರಾಂಗಣ ಸ್ವಚ್ಛತೆ (cleaning) ಬಗ್ಗೆ ನಾವೆಲ್ಲ ಅತೀ ಹೆಚ್ಚು ಕಾಳಜಿ ವಹಿಸುತ್ತೇವೆ. ಆದರೆ ಇದರಲ್ಲೂ ವಾಸ್ತು ನಿಯಮ (Vastu Tips) ಪಾಲಿಸುವುದು ಬಹು ಮುಖ್ಯ ಎಂಬುದನ್ನು ಮರೆಯಬಾರದು. ಮನೆಯಲ್ಲಿ ಸುಖ, ಶಾಂತಿ, ನೆಮ್ಮದಿ ಇರಬೇಕಾದರೆ ಮನೆಯಿಂದ ಕಸ (garbage) ಹೊರಗೆ ಹಾಕುವ, ಕೊಳಕು ನೀರು ಹೊರ ಚೆಲ್ಲುವ ಬಗ್ಗೆಯೂ ವಾಸ್ತು ಶಾಸ್ತ್ರದಲ್ಲಿ ನಿಯಮಗಳಿವೆ. ಇದನ್ನು ಪಾಲಿಸಿದರೆ ಮನೆಯ ವಾಸ್ತುವಿಗೆ ಬಹಳ ಒಳ್ಳೆಯದು.

ಲಕ್ಷ್ಮಿ ದೇವಿಯು ಯಾವಾಗಲೂ ಸ್ವಚ್ಛವಾಗಿರುವ ಮನೆಗಳಲ್ಲಿ ನೆಲೆಸುತ್ತಾಳೆ. ಮನೆಯನ್ನು ಸ್ವಚ್ಛಗೊಳಿಸುವುದು ಮತ್ತು ಒರೆಸುವುದು ನಿತ್ಯ ಮಾಡಲೇಬೇಕಾದ ಸಾಮಾನ್ಯ ವಿಷಯ. ಮನೆಯ ಕೊಳೆಯನ್ನು ನಿತ್ಯ ಶುಚಿಗೊಳಿಸುವುದರಿಂದ ಮನೆಯಿಂದ ರೋಗಗಳನ್ನು ದೂರ ಮಾಡಬಹುದು ಮತ್ತು ಲಕ್ಷ್ಮಿ ದೇವಿಯು ಮನೆಯಲ್ಲಿ ಸಂತೋಷವಾಗಿ ನೆಲೆಯಾಗುವಂತೆ ಮಾಡಬಹುದು. ವಾಸ್ತು ಶಾಸ್ತ್ರದಲ್ಲಿ ನೆಲ ಒರೆಸುವ ಕೆಲವು ನಿಯಮಗಳನ್ನು ಉಲ್ಲೇಖಿಸಲಾಗಿದೆ. ಮನೆಯ ಸ್ವಚ್ಛತೆ ಮಾಡುವ ನೆಲ ಒರೆಸುವಾಗ ಕೆಲವು ತಪ್ಪುಗಳನ್ನು ಅಪ್ಪಿತಪ್ಪಿಯೂ ಮಾಡಬಾರದು.


ಮಾಪ್ ಅನ್ನು ಬಾಲ್ಕನಿಯಲ್ಲಿ ಇಡಬೇಡಿ

ಮನೆಯ ಬಾಲ್ಕನಿಯಲ್ಲಿ ಮಾಪ್ ಅನ್ನು ಎಂದಿಗೂ ನಿಲ್ಲಿಸಬಾರದು. ಮಾಪ್ ಮಾಡುವಾಗ ಬಟ್ಟೆಯನ್ನು ಹಿಸುಕಿ ಮತ್ತು ಸರಿಯಾದ ಸ್ಥಳದಲ್ಲಿ ಇರಿಸಿ. ಇದನ್ನು ಮಾಡದಿದ್ದರೆ, ಭಾರೀ ನಷ್ಟವನ್ನು ಅನುಭವಿಸಬೇಕಾಗಬಹುದು.

ತಕ್ಷಣ ಮಾಪ್ ಮಾಡಬಾರದು

ಮನೆಯಿಂದ ಯಾರಾದರೂ ಹೊರಗೆ ಹೋಗುತ್ತಿದ್ದರೆ ಅವರು ಹೋದ ತಕ್ಷಣ ನೆಲವನ್ನು ಒರೆಸಬಾರದು. ಹೀಗೆ ಮಾಡುವುದರಿಂದ ಹೊರಗೆ ಹೋದವರ ಆರೋಗ್ಯ ಕೆಡುತ್ತದೆ. ಅವರು ತಮ್ಮ ಕೆಲಸ ಅಥವಾ ವ್ಯವಹಾರದಲ್ಲಿ ತೊಂದರೆಗಳನ್ನು ಎದುರಿಸಬೇಕಾಗಬಹುದು.

ಮುರಿದ ಬಕೆಟ್ ಬಳಸದಿರಿ

ಜ್ಯೋತಿಷ್ಯಶಾಸ್ತ್ರದ ಪ್ರಕಾರ ನೆಲವನ್ನು ಒರೆಸುವಾಗ ತಪ್ಪಾಗಿಯೂ ಮುರಿದ ಬಕೆಟ್‌ನಲ್ಲಿ ನೆಲವನ್ನು ಒರೆಸದಂತೆ ವಿಶೇಷ ಕಾಳಜಿ ವಹಿಸಿ. ಮುರಿದ ಬಕೆಟ್ ಕೆಂಪು ಬಣ್ಣದಲ್ಲಿರಬಾರದು. ಅಪ್ಪಿತಪ್ಪಿಯೂ ಮಧ್ಯಾಹ್ನ ನೆಲವನ್ನು ಒರೆಸಬಾರದು. ಬೆಳಗ್ಗೆ ನೆಲವನ್ನು ಒರೆಸುವುದು ಸರಿಯಾದ ಸಮಯ ಎಂದು ಪರಿಗಣಿಸಲಾಗಿದೆ.

ಇದನ್ನು ಓದಿ Vastu Tips: ಮನೆಯಲ್ಲಿ ಚಪ್ಪಲಿ, ಶೂ ಎಲ್ಲೆಂದರಲ್ಲಿ ಇಟ್ಟು ಸಂಕಷ್ಟ ಮೈಮೇಲೆ ಎಳೆದುಕೊಳ್ಳಬೇಡಿ!

ಹೊಸ್ತಿಲಲ್ಲಿ ನೀರು ಸುರಿಯಬಾರದು

ಹೆಚ್ಚಿನ ಜನರು ಇದನ್ನು ಮಾಡುತ್ತಾರೆ. ನೆಲವನ್ನು ಒರೆಸಿದ ಅನಂತರ ಅವರು ಹೊಸ್ತಿಲಲ್ಲಿ ಕೊಳಕು ನೀರನ್ನು ಸುರಿಯುತ್ತಾರೆ. ಆದರೆ ಇದನ್ನು ಮಾಡುವುದು ತುಂಬಾ ಅಶುಭವೆಂದು ಪರಿಗಣಿಸಲಾಗಿದೆ. ವಾಸ್ತವವಾಗಿ, ಮನೆಯ ಹೊಸ್ತಿಲನ್ನು ಲಕ್ಷ್ಮಿ ದೇವಿಯ ಪ್ರವೇಶ ಎಂದು ಪರಿಗಣಿಸಲಾಗುತ್ತದೆ. ಅಲ್ಲಿ ಕೊಳಕು ನೀರನ್ನು ಸುರಿದರೆ ಲಕ್ಷ್ಮಿ ದೇವಿಗೆ ಅವಮಾನ ಮಾಡಿದಂತೆ. ಇದರಿಂದ ಲಕ್ಷ್ಮಿ ದೇವಿಯು ನಿಮ್ಮ ಮೇಲೆ ಕೋಪಗೊಳ್ಳಬಹುದು.

Continue Reading

ವಿಜಯನಗರ

Vijayanagara News : ದೇವಸ್ಥಾನಕ್ಕೆ ನುಗ್ಗಿ ಆಂಜನೇಯ ಮೂರ್ತಿಯನ್ನು ವಿರೂಪಗೊಳಿಸಿದ ದುಷ್ಕರ್ಮಿಗಳು

Vijayanagara News : ರಾತ್ರೋ ರಾತ್ರಿ ದೇವಸ್ಥಾನಕ್ಕೆ ನುಗ್ಗಿದ ಕಿಡಿಗೇಡಿಗಳು ಆಂಜನೇಯ ಮೂರ್ತಿಯನ್ನು ಧ್ವಂಸ ಮಾಡಿ ವಿಕೃತಿ ಮೆರೆದಿದ್ದಾರೆ. ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದು ತನಿಖೆಯನ್ನು ನಡೆಸುತ್ತಿದ್ದಾರೆ.

VISTARANEWS.COM


on

By

Vijayanagara News
Koo

ವಿಜಯನಗರ: ಆಂಜನೇಯ ಮೂರ್ತಿಯನ್ನು ವಿರೂಪಗೊಳಿಸಿ ಕಿಡಿಗೇಡಿಗಳು ವಿಕೃತಿ ಮೆರೆದಿದ್ದಾರೆ. ದುಷ್ಕರ್ಮಿಗಳ ಕೃತ್ಯಕ್ಕೆ ಆಂಜನೇಯ ಪ್ರತಿಮೆ ತುಂಡಾಗಿದೆ. ವಿಜಯನಗರ (Vijayanagara News) ಜಿಲ್ಲೆಯ ಹೊಸಪೇಟೆ ತಾಲೂಕಿನ ಹೊಸ ಹಂಪಿ ಗ್ರಾಮದಲ್ಲಿ ಘಟನೆ ನಡೆದಿದೆ.

ತಡರಾತ್ರಿ ಕಾರ್ಯಸಿದ್ಧಿ ಶ್ರೀ ಆಂಜನೇಯ ಸ್ವಾಮಿ ದೇಗುಲದ ಬೀಗ ಮುರಿದು, ಒಳ ನುಗ್ಗಿರುವ ದುಷ್ಟರು ಮೂರ್ತಿಯನ್ನು ಒಡೆದು ಹಾಕಿದ್ದಾರೆ. ಮುಂಜಾನೆ ಅರ್ಚಕರು ದೇವಸ್ಥಾನಕ್ಕೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ. ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಪೊಲೀಸರು ಹಾಗೂ ಬೆರಳಚ್ಚು ವಿಭಾಗ ತಜ್ಞರು, ಶ್ವಾನದಳದಿಂದ ಪರಿಶೀಲನೆ ನಡೆಸಲಾಗುತ್ತಿದೆ.

ಹೊಸಪೇಟೆ ಡಿವೈಎಸ್‌ಪಿ ಶರಣಬಸವೇಶ್ವರ, ಹಂಪಿ ಪ್ರವಾಸಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಹಲವು ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ. ಪ್ರಕರಣ ಸಂಬಂಧ ಹಂಪಿ ಪ್ರವಾಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಇದನ್ನೂ ಓದಿ: Physical Abuse : ಸಂಜೆಯಾದರೆ ರೂಮಿಗೆ ಬಾ ಅಂತಾರೆ! ಕೇಂದ್ರೀಯ ವಿವಿಯ ವಿದ್ಯಾರ್ಥಿನಿಗೆ ಪಿಎಚ್‌ಡಿ ಗೈಡ್ ಮಾನಸಿಕ ಕಿರುಕುಳ

ದೇವರ ಹರಕೆ ಕುರಿಯನ್ನೇ ಕದ್ಯೊಯ್ದ ಕಳ್ಳರು

ದಾವಣಗೆರೆ/ತುಮಕೂರು: ದೇವರ ಹರಕೆಗಾಗಿ ತಂದಿದ್ದ ಕುರಿಯನ್ನೇ ಕಳ್ಳರು (Theft Case) ಹೊತ್ತೊಯ್ದಿದ್ದಾರೆ. ದಾವಣಗೆರೆ (Davanagere news) ತಾಲೂಕಿನ ಮಾಯಾಕೊಂಡದಲ್ಲಿ ಘಟನೆ ನಡೆದಿದೆ. ಬೈಕ್‌ನಲ್ಲಿ ಬಂದ‌ ಕಿರಾತಕರು ರಾತ್ರೋ ರಾತ್ರಿ ಕುರಿಯನ್ನು ಕದ್ದಿದ್ದಾರೆ.

ಸುಮಾರು 8 ಮಂದಿ ಖದೀಮರ ಕೈಚಳಕ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮಾಯಾಕೊಂಡದ ನಿವಾಸಿ ಪ್ರಭು ಎಂಬುವರಿಗೆ ಸೇರಿದ ಕುರಿಯನ್ನು ಬೆಳಗಿನ‌ ಜಾವ 3ಗಂಟೆ ಸುಮಾರಿಗೆ ಬೈಕ್‌ನಲ್ಲಿ ಬಂದು ಎಗರಿಸಿದ್ದಾರೆ. ಸದ್ಯ ಪ್ರಭು ಅವರು ಮಾಯಕೊಂಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸಿಸಿಟಿವಿ ಆಧಾರದ ಮೇಲೆ ಖದೀಮರನ್ನು ಹಿಡಿಲು ಮುಂದಾಗಿದ್ದಾರೆ.

ತುಮಕೂರಿನ 2 ಸೂಪರ್ ಮಾರ್ಕೆಟ್‌ಗಳಲ್ಲಿ ಕಳ್ಳತನ

ತುಮಕೂರು ಜಿಲ್ಲೆಯ ಗುಬ್ಬಿ ಪಟ್ಟಣದ ಶ್ರೀನಿವಾಸ ಹೈಪರ್ ಮಾರ್ಕೆಟ್ ಹಾಗೂ ಜಿಎಮ್‌ಆರ್ ಮೆಗಾ ಮಾರ್ಟ್‌ನಲ್ಲಿ ಕಳ್ಳತನವಾಗಿದೆ. ಕಳ್ಳರು ಜಿಎಮ್‌ಆರ್ ಮೆಗಾ ಮಾರ್ಟ್‌ನ ಬೀಗ ಮುರಿಯುವಾಗ ಮಾಲೀಕನ ಕೈಗೆ ಸಿಕ್ಕಿಬಿದ್ದಿದ್ದಾರೆ. ಈ ವೇಳೆ ಕಳ್ಳತನ ತಡೆಯಲು ಬಂದವರ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ. ಅಂಗಡಿ ಮಾಲೀಕರನ್ನೇ ಹೆದರಿಸಿ ಕಳ್ಳರು ಪರಾರಿಯಾಗಿದ್ದಾರೆ.

theft Case

50 ಸಾವಿರ ರೂ. ನಗದು ಹಾಗೂ 10ಕ್ಕೂ ಹೆಚ್ಚು ಅಕ್ಕಿ ಚೀಲಗಳನ್ನು ಕದ್ದಿದ್ದು, ಜತೆಗೆ ಸಿಸಿಟಿವಿಯ ಡಿವಿಆರ್ ಕದ್ದಿದ್ದಾರೆ. ಸುಮಾರು ನಾಲ್ಕೈದು ಕಳ್ಳರ ತಂಡ ಲಗ್ಗೆ ಇಟ್ಟ ಪೂರ್ತಿ ದೃಶ್ಯವು ಮತ್ತೊಂದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಗುಬ್ಬಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಕೊಪ್ಪಳ

Huligemma Temple : ಹುಲಿಗೆಮ್ಮ ದೇವಿ ಜಾತ್ರೆಗೆ ಹೊರಟಿದ್ದ ಪಾದಯಾತ್ರಿ ಮೇಲೆ ಹರಿದ ಲಾರಿ; ಓರ್ವ ಸಾವು, ಮತ್ತೋರ್ವ ಗಂಭೀರ

Huligemma Temple : ಹುಲಿಗೆಮ್ಮ ದೇವಿ ಜಾತ್ರೆಗೆ ಪಾದಯಾತ್ರೆಯನ್ನು ಕೈಗೊಂಡಿದ್ದ ಭಕ್ತರ ಮೇಲೆ ಹಿಂಬದಿಯಿಂದ ಬಂದ ಲಾರಿಯೊಂದು (Road Accident) ಹರಿದಿದೆ. ಪರಿಣಾಮ ಓರ್ವ ಭಕ್ತ ಸ್ಥಳದಲ್ಲೇ ಮೃತಪಟ್ಟರೆ, ಮತ್ತೋರ್ವ ಗಂಭೀರ ಗಾಯಗೊಂಡಿದ್ದಾರೆ.

VISTARANEWS.COM


on

By

Huligemma Temple Road Accident
Koo

ಕೊಪ್ಪಳ: ಹುಲಿಗೆಮ್ಮ ದೇವಿ ಜಾತ್ರೆ (Huligemma Temple) ನಿಮಿತ್ತ ಪಾದಯಾತ್ರೆ ಕೈಗೊಂಡಿದ್ದ ಭಕ್ತರ ಮೇಲೆ ಲಾರಿಯೊಂದು (Lorry Hit) ಹರಿದಿದೆ. ಪಾದಯಾತ್ರೆ ಹೊರಟಿದ್ದವರಿಗೆ ವೇಗವಾಗಿ ಬಂದ ಲಾರಿಯೊಂದು ಡಿಕ್ಕಿ (Road Accident) ಹೊಡೆದಿದೆ. ಡಿಕ್ಕಿ ರಭಸಕ್ಕೆ ಓರ್ವ ಭಕ್ತ ಸ್ಥಳದಲ್ಲೇ ಮೃತಪಟ್ಟರೆ, ಮತ್ತೋರ್ವ ಗಂಭೀರ ಗಾಯಗೊಂಡಿದ್ದಾರೆ.

ಕೊಪ್ಪಳ ತಾಲೂಕಿನ ಕೆರಳ್ಳಿ ಫ್ಲೈಓವರ್ ಬಳಿ ಘಟನೆ ನಡೆದಿದೆ. ಯಮನೂರಪ್ಪ ಸಣ್ಣಮನಿ (34) ಮೃತ ದುರ್ದೈವಿ. ಯಮನೂರಪ್ಪ ಬಾಗಲಕೋಟಯ ಹುನಗುಂದ ತಾಲೂಕಿನ ರಕ್ಕಸಗಿ ಗ್ರಾಮದ ನಿವಾಸಿ ಆಗಿದ್ದಾರೆ. ಯಮನೂರಪ್ಪ ಹಾಗೂ ಮಹಾಂತೇಶ್‌ ಹುಲಿಗೆಮ್ಮ ದೇವಿ ಜಾತ್ರೆ ಹಿನ್ನೆಲೆಯಲ್ಲಿ ಪಾದಯಾತ್ರೆ ಮೂಲಕ ದೇವಸ್ಥಾನಕ್ಕೆ ಹೊರಟ್ಟಿದ್ದರು.

ಈ ವೇಳೆ ಹಿಂಬದಿಯಿಂದ ಬಂದ ಲಾರಿಯು ಪಾದಯಾತ್ರಿಗಳಿಗೆ ಡಿಕ್ಕಿ ಹೊಡೆದಿದೆ. ಯಮನೂರಪ್ಪ ಮೇಲೆ ಲಾರಿ ಹರಿದ ಪರಿಣಾಮ ಆತ ಸ್ಥಳದಲ್ಲೇ ಮೃತಪಟ್ಟರೆ, ಮಹಾಂತೇಶ್‌ ಫ್ಲೈಓವರ್‌ ಮೇಲಿಂದ ಬಿದ್ದು ಗಂಭೀರ ಗಾಯಗೊಂಡಿದ್ದಾರೆ. ಬಿದ್ದ ರಭಸಕ್ಕೆ ಅವರ ಕಾಲಿನ ಪಾದವೇ ತುಂಡಾಗಿ ಬಿದ್ದಿತ್ತು. ಸದ್ಯ ಸಾವು- ಬದುಕಿನ ಮಧ್ಯೆ ಹೋರಾಡುತ್ತಿರುವ ಗಾಯಾಳು ಮಹಾಂತೇಶ್‌ನನ್ನು ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ಮುನಿರಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಪ್ರಕರಣ ಸಂಬಂಧ ದೂರು ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.

ಇದನ್ನೂ ಓದಿ: Viral Video: ಬೆಂಕಿ ದುರಂತ ಸ್ಥಳದಲ್ಲಿ ಜಮಾಯಿಸಿದ್ದ ಜನ; ಆಮೇಲೆ ನಡೆದಿದ್ದೇ ಬೇರೆ- ವಿಡಿಯೋ ನೋಡಿ

ಬಿಸಿ ಗಾಳಿ ಶಾಖಕ್ಕೆ ತತ್ತರಿಸಿದ ಬಿಹಾರ; ಎರಡೇ ಗಂಟೆಗಳಲ್ಲಿ 16 ಮಂದಿ ಸಾವು

ಪಾಟ್ನಾ: ಬಿಹಾರ(Bihar)ದಲ್ಲಿ ಬಿಸಿ ಗಾಳಿ(Heat Wave) ಶಾಖಕ್ಕೆ ಜನ ತತ್ತರಿಸಿ ಹೋಗಿದ್ದಾರೆ. ಇದೀಗ ಇದರ ಪರಿಣಾಮವಾಗಿ ಕೇವಲ ಎರಡೇ ಗಂಟೆಗಳಲ್ಲಿ ಬಿಸಿಗಾಳಿ ಶಾಖಕ್ಕೆ ಬರೋಬ್ಬರಿ 16 ಜನ ಬಲಿಯಾಗಿದ್ದಾರೆ. ಔರಂಗಾಬಾದ್‌ ಜಿಲ್ಲಾಸ್ಪತ್ರೆಯಲ್ಲಿ ಈ ದುರ್ಘಟನೆ ಸಂಭವಿಸಿದ್ದು, ನಗರದ ಉಷ್ಣಾಂಶ 48.2 ಡಿಗ್ರಿಗೆ ಏರಿಕೆ ಆಗಿದೆ. ಇದು ಬಿಹಾರದಲ್ಲೇ ಅತಿ ಹೆಚ್ಚ ಉಷ್ಣಾಂಶ ಹೊಂದಿರುವ ನಗರವಾಗಿದೆ.

ಈ ಕುರಿತು ಔರಂಗಾಬಾದ್‌ ಜಿಲ್ಲಾಸ್ಪತ್ರೆ ವೈದ್ಯರು ಪ್ರತಿಕ್ರಿಯಿಸಿದ್ದು, ತೀವ್ರ ಬಿಸಿ ಗಾಳಿಗೆ ತುತ್ತಾಗಿ ಅಸ್ವಸ್ಥಗೊಂಡಿರುವ 35 ಕ್ಕೂ ಅಧಿಕ ಮಂದಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ದುರಾದೃಷ್ಟವಶಾತ್‌ 16ಕ್ಕೂ ಅಧಿಕ ಜನ ಬಿಸಿಗಾಳಿ ಶಾಖಕ್ಕೆ ಬಲಿಯಾಗಿದ್ದಾರೆ. ಉಳಿದವರಿಗೆ ಚಿಕಿತ್ಸೆ ಮುಂದುವರೆದಿದೆ. ನಮ್ಮ ಸಾಕಷ್ಟು ತಜ್ಞ ವೈದ್ಯರಿದ್ದಾರೆ. ಔಷಧ, ಐಸ್‌ ಪ್ಯಾಕ್‌ ಮತ್ತು ಅನೇಕ ಕೂಲರ್‌ಗಳ ಸೌಲಭ್ಯ ಒದಗಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಬಿಸಿಗಾಳಿ ಸಮಸ್ಯೆಯಿಂದಾಗಿ ಮುಂಜಾಗೃತಾ ಕ್ರಮವಾಗಿ ಬಿಹಾರ ಸರ್ಕಾರ ಎಲ್ಲಾ ಶಾಲಾ ಕಾಲೇಜುಗಳನ್ನು ಜೂ.8ರವರೆಗೆ ತಾತ್ಕಾಲಿಕವಾಗಿ ಮುಚ್ಚಿದೆ. ಕೆಲವು ದಿನಗಳಿಂದ ಶಾಲೆಗಳಲ್ಲಿ ಬಿಸಿ ಗಾಳಿ ಶಾಖಕ್ಕೆ ವಿದ್ಯಾರ್ಥಿಗಳು ಪ್ರಜ್ಞೆ ತಪ್ಪಿ ಬೀಳುತ್ತಿರುವ ಘಟನೆ ವರದಿ ಆಗಿತ್ತು. ಇದರ ಬೆನ್ನಲ್ಲೇ ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ. ಬಿಹಾರದ ಶೇಖ್‌ಪುರದ ಹಲವಾರು ಶಾಲಾ ವಿದ್ಯಾರ್ಥಿಗಳು ಪ್ರಜ್ಞೆ ತಪ್ಪಿದ್ದು, ಅವರನ್ನು ಆಸ್ಪತ್ರೆಗೆ ದಾಖಲಾಗಿದ್ದಾರೆ. ಸ್ಥಳೀಯವಾಗಿ ಮಂಗಳವಾರ ಗರಿಷ್ಠ ತಾಪಮಾನ 42.9 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.

ಮಕ್ಕಳು ಪ್ರಜ್ಞೆ ತಪ್ಪಿರುವ ವೀಡಿಯೊಗಳು ವೈರಲ್ ಆಗಿದ್ದು, ಶಾಲೆಯ ವಿದ್ಯಾರ್ಥಿಗಳು ತುಂಬಾ ದಣಿದಿದ್ದಾರೆ ಎಂದು ಕಂಡುಬಂದಿದೆ. ಶಿಕ್ಷಕರು ಅವರಿಗೆ ನೀರು ಒದಗಿಸುವ ಮೂಲಕ ಮತ್ತು ಅವರಿಗೆ ಗಾಳಿ ಬೀಸುವ ಮೂಲಕ ಸಹಾಯ ಮಾಡಲು ಪ್ರಯತ್ನಿಸಿದರು. ನಂತರ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು, ಅಲ್ಲಿ ಅವರಿಗೆ ಸಲೈನ್ ಚುಚ್ಚುಮದ್ದು ನೀಡಲಾಗಿದೆ. ಇನ್ನು ವಿದ್ಯಾರ್ಥಿಗಳು ಮಾತ್ರವಲ್ಲದೇ ಶಿಕ್ಷಕರೂ ಬಿಸಿಗಾಳಿಯ ತಾಪಮಾನಕ್ಕೆ ಪ್ರಜ್ಞೆ ತಪ್ಪಿ ಬೀಳುತ್ತಿರುವ ಘಟನೆಯೂ ವರದಿ ಆಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
Lok Sabha Election
ದೇಶ6 mins ago

Lok Sabha Election: ಇಂದು ಕೊನೇ ಹಂತದ ಮತದಾನ; ಸಂಜೆ ಎಕ್ಸಿಟ್‌ ಪೋಲ್, ಇಂದೇ ತಿಳಿಯಲಿದೆ ಭವಿಷ್ಯ!

Dina Bhavishya
ಭವಿಷ್ಯ7 mins ago

Dina Bhavishya : ತಿಂಗಳ ಮೊದಲ ದಿನವೇ ಉದ್ಯೋಗದ ಸ್ಥಳದಲ್ಲಿ ಈ ರಾಶಿಯವರಿಗೆ ಕಿರಿಕಿರಿ ಅನುಭವ

Anti Islam Rally
ವಿದೇಶ5 hours ago

Anti Islam Rally: ಇಸ್ಲಾಂ ವಿರೋಧಿ ರ‍್ಯಾಲಿಯಲ್ಲಿ ಸಿಕ್ಕಸಿಕ್ಕವರಿಗೆ ಚಾಕು ಇರಿದ ವ್ಯಕ್ತಿ; ಗುಂಡಿಕ್ಕಿದ ಪೊಲೀಸರು

Modi Meditation
ದೇಶ6 hours ago

Modi Meditation: ವಿವೇಕಾನಂದರ ಮೂರ್ತಿ ಎದುರು ಮೋದಿ ಗಾಢ ಧ್ಯಾನ; ಇಲ್ಲಿವೆ ಫೋಟೊಗಳು

Yamaha has opened a new Blue Square outlet in Bengaluru
ಬೆಂಗಳೂರು7 hours ago

Yamaha: ಬೆಂಗಳೂರಿನಲ್ಲಿ ಹೊಸ ‘ಬ್ಲೂ ಸ್ಕ್ವೇರ್’ ಔಟ್‌ಲೆಟ್ ತೆರೆದ ಯಮಹಾ

Neha Hiremath
ಕರ್ನಾಟಕ7 hours ago

Neha Hiremath: ಲಿಂಗಾಯತಳಾದ ನೇಹಾ ಹಿರೇಮಠ ಎಸ್‌ಸಿ ಪ್ರಮಾಣಪತ್ರ ಮಾಡಿಸಿದ್ದೇಕೆ? ಸರ್ಟಿಫಿಕೇಟ್‌ ಫೋಟೊ ಈಗ ವೈರಲ್

Kanyakumari Tour
ಪ್ರವಾಸ8 hours ago

Kanyakumari Tour: ನಿಮ್ಮ ಕನ್ಯಾಕುಮಾರಿ ಪ್ರವಾಸದ ಪಟ್ಟಿಯಲ್ಲಿರಲಿ ಈ 10 ಸಂಗತಿಗಳು

Sri Huligemma Devi Maharathotsava in Hulagi
ಧಾರ್ಮಿಕ8 hours ago

Koppala News: ವಿಜೃಂಭಣೆಯಿಂದ ಜರುಗಿದ ಹುಲಗಿಯ ಶ್ರೀ ಹುಲಿಗೆಮ್ಮ ದೇವಿ ಮಹಾರಥೋತ್ಸವ

Vijayanagara ZP CEO Sadashiva Prabhu instructed that Dadara Rubella Lasika Abhiyan should be conducted neatly
ಆರೋಗ್ಯ8 hours ago

Vijayanagara News: ದಡಾರ, ರುಬೆಲ್ಲಾ ಲಸಿಕಾ ಅಭಿಯಾನಕ್ಕೆ ಸಿದ್ಧತೆ

District administration all preparations for vote counting says DC Prashanth Kumar Mishra
ಬಳ್ಳಾರಿ8 hours ago

Lok Sabha Election 2024: ಮತ ಎಣಿಕೆಗೆ ಬಳ್ಳಾರಿ ಜಿಲ್ಲಾಡಳಿತ ಸಕಲ ಸಿದ್ಧತೆ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Assault Case in Shivamogga
ಕ್ರೈಂ2 days ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ3 days ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು4 days ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ4 days ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ5 days ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು6 days ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ7 days ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ1 week ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ1 week ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ1 week ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

ಟ್ರೆಂಡಿಂಗ್‌