Indian Spices: ಮನೆಯೊಳಗಿನ ಮಸಾಲೆ ಡಬ್ಬಿಯಲ್ಲಿದೆ ಮನೆಯವರ ಆರೋಗ್ಯ! - Vistara News

ಆರೋಗ್ಯ

Indian Spices: ಮನೆಯೊಳಗಿನ ಮಸಾಲೆ ಡಬ್ಬಿಯಲ್ಲಿದೆ ಮನೆಯವರ ಆರೋಗ್ಯ!

ಮಸಾಲೆ ಪದಾರ್ಥಗಳು ಶೀತ ಕಫದಂತಹ ಸಮಸ್ಯೆಗಳಿಂದ ಹಿಡಿದು ನಮ್ಮನ್ನು ಹಲವು ರೋಗರುಜಿನಗಳಿಂದ ಕಾಪಾಡುವ ಅಮೃತವೇ ಸರಿ. ನಮ್ಮ ಮನೆಯೊಳಗಿನ ಮಸಾಲೆ ಬಟ್ಟಲ ಮಸಾಲೆಗಳು ನಮ್ಮನ್ನು ವೈದ್ಯರಿಂದ ದೂರವಿರಿಸಲು ಹೇಗೆ ನೆರವಾಗುತ್ತದೆ ಎಂಬುದನ್ನು ತಿಳಿಯೋಣ.

VISTARANEWS.COM


on

Indian Spices
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮನೆಯೊಂದರ ಆರೋಗ್ಯದ ಕೀಲಿಕೈ ಇರುವುದು ಅಡುಗೆ ಮನೆಯಲ್ಲಿ. ನಮ್ಮ ನಿತ್ಯದ ಆಹಾರದ ಮೇಲೆ ನಮ್ಮ ಆರೋಗ್ಯ ಅವಲಂಬಿತವಾಗಿದೆ. ಆಹಾರ ಏರುಪೇರಾದರೆ ಆರೋಗ್ಯದಲ್ಲೂ ಏರುಪೇರೇ ಆಗುತ್ತದೆ. ನಮ್ಮ ಆರೋಗ್ಯವನ್ನು ಒಂದು ಮಟ್ಟಿಗೆ ಸಮಸ್ಥಿತಿಯಲ್ಲಿಡಲು, ನಮ್ಮ ಮನೆಯೊಳಗಿನ ನಿತ್ಯಾಹಾರದ ಕೆಲ ಪದಾರ್ಥಗಳು ಉತ್ತಮ ಪರಿಣಾಮಕಾರಿಯೂ ಹೌದು. ಮಸಾಲೆ ಪದಾರ್ಥಗಳು ಇವುಗಳಲ್ಲಿ ಒಂದು. ಕರಿಮೆಣಸಿನಿಂಧ ಹಿಡಿದು ಚೆಕ್ಕೆ ಲವಂಗದವರೆಗೆ ಎಲ್ಲವೂ ಶೀತ ಕಫದಂತಹ ಸಮಸ್ಯೆಗಳಿಂದ ಹಿಡಿದು ನಮ್ಮನ್ನು ರೋಗರುಜಿನಗಳಿಂದ ಕಾಪಾಡುವ ಅಮೃತವೇ ಸರಿ. ನಮ್ಮ ಮನೆಯೊಳಗಿನ ಮಸಾಲೆ ಬಟ್ಟಲ ಮಸಾಲೆಗಳು ನಮ್ಮನ್ನು ವೈದ್ಯರಿಂದ ದೂರವಿರಿಸಲು ಹೇಗೆ ನೆರವಾಗುತ್ತದೆ ಎಂಬುದನ್ನು ತಿಳಿಯೋಣ.

ಲವಂಗ: ಲವಂಗ ಒಂದು ನೈಸರ್ಗಿಕ ಆಂಟಿಬಯಾಟಿಕ್‌ನಂತೆ ಕೆಲಸ ಮಾಡುತ್ತದೆ. ಇದಕ್ಕೆ ದೇಹದ ಹಲವಾರು ಸಮಸ್ಯೆಗಳಿಗೆ ಪರಿಹಾರ ನೀಡುವ ತಾಕತ್ತಿದೆ. ಬ್ಯಾಕ್ಟೀರಿಯಾ ಇನ್‌ಫೆಕ್ಷನ್‌, ಹಲ್ಲಿನ ತೊಂದರೆಗಳು, ಬಾಯಿಯ ಇನ್‌ಫೆಕ್ಷನ್‌ಗಳು, ಫುಡ್‌ ಪಾಯ್ಸನ್‌, ಗಾಯ ಸೇರಿದಂತೆ ಹಲವಾರು ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ.

ಜೀರಿಗೆ: ಜೀರಿಗೆಯಲ್ಲಿರುವ ಆಂಟಿ ಆಕ್ಸಿಡೆಂಟ್‌ ಗುಣವು ನಮಗೆ ಸದಾ ಶಕ್ತಿಯನ್ನು ನೀಡಿ ಆರೋಗ್ಯವಾಗಿರಿಸುತ್ತದೆ. ಜೀರಿಗೆಯ ನಿತ್ಯೋಪಯೋಗ ಹಲವಾರು ಸಮಸ್ಯೆಗಳನ್ನು ನಮ್ಮ ಸಮೀಪಕ್ಕೆ ಬರದಂತೆ ದೂರವಿರಿಸುತ್ತದೆ. ಇದೊಂದು ಆಂಟಿಸೆಪ್ಟಿಕ್‌ ಏಜೆಂಟ್‌ ಆಗಿಯೂ ಕೆಲಸ ಮಾಡುತ್ತದೆ. ಬ್ಯಾಕ್ಟೀರಿಯಾದಿಂದಾದ ಇನ್‌ಫೆಕ್ಷನ್‌ಗಳನ್ನು ಇದು ಹೋಗಲಾಡಿಸುವುದಷ್ಟೇ ಅಲ್ಲ ನಮ್ಮಲ್ಲಿ ರೋಗನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ. ಗ್ಯಾಸ್ಟ್ರಿಕ್‌, ಹೊಟ್ಟೆ ಉಬ್ಬರಿಸುವಿಕೆ ಮೊದಲಾದ ಸಮಸ್ಯೆಗಳಿಗೆ ಜೀರಿಗೆ ಅತ್ಯುತ್ತಮ ಮನೆಮದ್ದು.

spices

ಏಲಕ್ಕಿ: ಪರಿಮಳಭರಿತ ಏಲಕ್ಕಿಯ ಆರೋಗ್ಯದ ಲಾಭ ಅನೇಕ. ಏಲಕ್ಕಿ ಕೇವಲ ಬ್ಯಾಕ್ಟೀರಿಯಾ ಮಾತ್ರವಲ್ಲ, ಫಂಗಲ್‌ ಇನ್‌ಫೆಕ್ಷನ್‌ಗೂ ಪರಿಣಾಮಕಾರಿ ಔಷಧಿ. ಶಸ್ತ್ರಚಿಕಿತ್ಸೆಯ ನಂತರ ಮತ್ತೆ ಸಹಜ ಸ್ಥಿತಿಗೆ ಬರುವಲ್ಲಿ ಇದು ನೆರವಾಗುತ್ತದೆ. ಉಸಿರಾಟದ ತೊಂದರೆಗೂ ಇದರಲ್ಲಿ ಪರಿಣಾಮಕಾರಿ ಮಾರ್ಗವಿದೆ. ಚರ್ಮ,ಕೂದಲ ಆರೋಗ್ಯಕ್ಕೆ ಉಪಯುಕ್ತ.

ಚಕ್ಕೆ(ದಾಲ್ಚಿನಿ): ದಾಲ್ಚಿನಿ ಕೂಡಾ ಆಂಟಿ ಬ್ಯಾಕ್ಟೀರಿಯಲ್‌ ಗುಣವನ್ನು ಹೊಂದಿದ ಮಸಾಲೆ. ಇದು ರೋಗನಿರೋಧಕತೆಯನ್ನು ಹೆಚ್ಚಿಸುತ್ತದೆ. ರಕ್ತದೊತ್ತಡವನ್ನು ಕಡಿಮೆ ಮಾಡಿ ಹೃದಯವನ್ನು ಆರೋಗ್ಯವಾಗಿರಿಸುತ್ತದೆ. ಪಚನಕ್ರಿಯೆಯನ್ನು ಚುರುಕುಗೊಳಿಸಿ ವಿಷಕಾರಕಗಳನ್ನು ಹೊರಕ್ಕೆ ಕಳಿಸುತ್ತದೆ. ಚರ್ಮದ ಆರೋಗ್ಯಕ್ಕೆ ಅತ್ಯುತ್ತಮ. ಶೀತ, ಕೆಮ್ಮು ನೆಗಡಿಯಂತಹ ಸಮಸ್ಯೆಗಳಿಗೂ ಇದರಿಂದ ಪರಿಹಾರ ಇದೆ. ಮಿದುಳಿನ ಆರೋಗ್ಯಕ್ಕೆ ಅತ್ಯುತ್ತಮ.

ಬೆಳ್ಳುಳ್ಳಿ: ಬೆಳ್ಳುಳ್ಳಿ ರೋಗ ನಿರೋಧಕತೆಯನ್ನು ಹೆಚ್ಚು ಮಾಡುವಲ್ಲಿ ಮುಖ್ಯಪಾತ್ರ ವಹಿಸುತ್ತದೆ. ರಕ್ತದೊತ್ತಡ, ಕೊಲೆಸ್ಟೆರಾಲನ್ನು ಕಡಿಮೆ ಮಾಡಬಲ್ಲ ಇದೂ ಕೂಡಾ ಹೃದಯಕ್ಕೆ ಒಳ್ಳೆಯ ಗೆಳೆಯ.ಇದರಲ್ಲಿರುವ ಆಂಟಿಬಯಾಟಿಕ್‌ ಗುಣಗಳು ಶೀತ, ಕೆಮ್ಮು, ನೆಗಡಿ, ಜ್ವರದಂತಹ ಸಮಸ್ಯೆಗಳನ್ನು ದೂರ ಇರಿಸುತ್ತದೆ. ಮರೆವಿನ ಕಾಯಿಲೆಗಳಾದ ಅಲ್ಝೈಮರ್‌ ಹಾಗೂ ಡಿಮೆನ್ಶಿಯಾದಂತಹ ಸಮಸ್ಯೆಗಳು ಬರದಂತೆ ತಡೆಯುತ್ತದೆ.

ಇದನ್ನೂ ಓದಿ: Food Tips: ಅಡುಗೆಮನೆಯ ಒಗ್ಗರಣೆ ಡಬ್ಬಿ ನಿಮ್ಮ ಲೈಂಗಿಕ ಜೀವನಕ್ಕೂ ಒಗ್ಗರಣೆಯೇ!

ಕಾಳುಮೆಣಸು: ಆಂಟಿ ಆಕ್ಸಿಡೆಂಟ್‌ಗಳಿಂದ ಸಮೃದ್ಧವಾಗಿರುವ ಇದು ರೋಗ ನಿರೋಧಕತೆಯನ್ನು ಹೆಚ್ಚು ಮಾಡುವ ಇನ್ನೊಂದು ದಿವ್ಯ ಮಸಾಲೆ ಪದಾರ್ಥ. ನಮ್ಮ ಮಿದುಳಿನ ಆರೋಗ್ಯಕ್ಕೆ ಇದರ ಕಾಣಿಕೆಯಿದೆ. ದೇಹದಲ್ಲಿ ಸಕ್ಕರೆಯ ಮಟ್ಟವನ್ನು ಸಮತೋಲನದಲ್ಲಿಡಲು ನೆರವಾಗುತ್ತದೆ. ಕೊಲೆಸ್ಟೆರಾಲ್‌ ಮಟ್ಟವನ್ನೂ ಕಡಿಮೆ ಮಾಡುತ್ತದೆ.

masala

ಶುಂಠಿ: ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳಿಗೆ ಶುಂಠಿ ಶಮನಕಾರಿ. ಪಚನಕ್ರಿಯೆಯನ್ನು ಚುರುಕಾಗಿಸುವ ಗುಣ ಇದರಲ್ಲಿದೆ. ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ಹೊರಗೆ ಕಳಿಸುತ್ತದೆ. ಡಿಮೆನ್ಶಿಯಾ, ಖಿನ್ನತೆ ಮತ್ತಿತರ ಮಾನಸಿಕ ಸಮಸ್ಯೆಗಳಿಗೂ ಶುಂಠಿಯಿಂದ ಲಾಭಗಳಿವೆ. ಮೋಷನ್‌ ಸಿಕ್‌ನೆಸ್‌, ಪ್ರಯಾಣದ ವೇಳೆ ಸುಸ್ತು, ಶೀತ, ತಲೆನೋವು ಮತ್ತಿತರ ಎಲ್ಲ ಸಮಸ್ಯೆಗಳಲ್ಲೂ ತನ್ನಲ್ಲಿ ಪರಿಹಾರ ಇಟ್ಟುಕೊಂಡಿರುವ ಶುಂಠಿ ಒಂದು ದಿವ್ಯೌಷಧ.

ಒರಿಗಾನೋ: ಆಂಟಿ ಆಕ್ಸಿಡೆಂಟ್‌ಗಳಿಂದ ಸಮೃದ್ಧವಾಗಿರುವ ಇದರಿಂದಲೂ ಸಾಕಷ್ಟು ಆರೋಗ್ಯಕರ ಲಾಭಗಳಿವೆ. ವೈರಲ್‌ ಇನ್ಫೆಕ್ಷನ್‌ಗೆ ಇದು ಪರಿಣಾಮಕಾರಿ ಮನೆ ಔಷಧ. ಕ್ಯಾನ್ಸರ್‌ ನಾಶಕ ಗುಣಗಳೂ ಇದರಲ್ಲಿದೆ. ಶೀತ, ಕಫ, ನೆಗಡಿಯಂತಹ ಸಾಮಾನ್ಯ ಸಮಸ್ಯೆಗಳಿಗೆ ಇದು ಪರಿಹಾರ ನೀಡುತ್ತದೆ. ಜೀರ್ಣಕ್ರಿಯೆಯನ್ನು ಚುರುಕಾಗಿಸುವ ಸಾಮರ್ಥ್ಯ ಇದರಲ್ಲಿದೆ.

ಅರಿಶಿನ: ತನ್ನ ಬಣ್ಣದಿಂದ ಚಿತ್ತಾಕರ್ಷಕವಷ್ಟೇ ಅಲ್ಲ, ನಿತ್ಯ ಸಂಜೀವಿನಿಯಂತೆ ಮನೆಯಲ್ಲಿರುವ ಅತ್ಯಂತ ಉಪಯುಕ್ತ ಮಸಾಲೆಯಿದು. ಆಂಟಿ ಆಕ್ಸಿಡೆಂಟ್‌ ಗುಣಗಳಿಂದ ಸಮೃದ್ಧವಾಗಿರುವ ಇದು ಅನೇಕ ಇನ್ಫೆಕ್ಷನ್‌ಗಳಿಂದ ಕಾಪಾಡುತ್ತದೆ. ಕೊಲೆಸ್ಟೆರಾಲ್‌ ಮಟ್ಟವನ್ನು ತಗ್ಗಿಸುತ್ತದೆ. ಚರ್ಮದ ಕಾಯಿಲೆಗಳಿಗೆ, ಗಾಯಕ್ಕೆ ಇದು ಅತ್ಯುತ್ತಮ. ಶೀತ, ಕಫ, ನೆಗಡಿಯನ್ನು ದೂರವಿರಿಸುತ್ತದೆ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಇದನ್ನೂ ಓದಿ: Indian spices | ಮಸಾಲೆ ಪರಿಮಳ ಸದಾ ಘಮಘಮ ಅಂತಾ ಇರಬೇಕಿದ್ದರೆ ಹೀಗೆ ಮಾಡಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಬೆಂಗಳೂರು

Silicon City Hospital: ಲಕ್ಷಕ್ಕೆ ಇಬ್ಬರಿಗೆ ಬರುವ ಮೆದುಳಿನ ರಕ್ತನಾಳ ಒಡೆಯುವ ಕಾಯಿಲೆ; ಯಶಸ್ವಿ ಶಸ್ತ್ರಚಿಕಿತ್ಸೆಯಿಂದ ಬಾಲಕಿ ಪಾರು

Silicon City Hospital: ಲಕ್ಷದಲ್ಲಿ ಇಬ್ಬರಲ್ಲಿ ಕಾಣಿಸಿಕೊಳ್ಳುವ ಕಾಯಿಲೆಯಿಂದ ಬಳಲುತ್ತಿದ್ದ ಬಾಲಕಿಗೆ ಸಿಲಿಕಾನ್‌ ಸಿಟಿ ಆಸ್ಪತ್ರೆ ವೈದ್ಯರು ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿ, ಸಾವಿನ ದವಡೆಯಿಂದ ಪಾರು ಮಾಡಿದ್ದಾರೆ. ಬಾಲಕಿ ಉಳಿಸಲು ಆಗಲ್ಲ ಎಂದು ಕೈಚೆಲ್ಲಿದ್ದ ದೊಡ್ಡ ಆಸ್ಪತ್ರೆಗಳಿಗೂ ಅಚ್ಚರಿ ಮೂಡಿಸುವುದರೊಂದಿಗೆ ಮೆಚ್ಚುಗೆಯನ್ನು ಪಡೆದಿದ್ದಾರೆ.

VISTARANEWS.COM


on

By

Silicon City Hospital doctors successful surgery on girl suffering from Arterio Venus malpermation
Koo

ಬೆಂಗಳೂರು: ಮೆದುಳಿನ ರಕ್ತನಾಳ ಒಡೆದು ರಕ್ತ ಸೋರುವ ಕಾಯಿಲೆಯಿಂದ ಬಳಲುತ್ತಿದ್ದ ಬಾಲಕಿಯ ಪ್ರಾಣವನ್ನು ಸಿಲಿಕಾನ್‌ ಸಿಟಿ ಆಸ್ಪತ್ರೆ ವೈದ್ಯರು (Silicon City Hospital) ಉಳಿಸಿದ್ದಾರೆ. ಒಂದು ಲಕ್ಷದಲ್ಲಿ ಇಬ್ಬರಿಗೆ ಮಾತ್ರ ಬರುವ ಈ ಅಪರೂಪದ ಕಾಯಿಲೆಯು ಬಾಲಕಿಗೆ ಕೊನೆ ಹಂತದಲ್ಲಿತ್ತು. ಇದನ್ನೇ ಸವಾಲಾಗಿ ಸ್ವೀಕರಿಸಿದ ವೈದ್ಯರು ಯಶಸ್ವಿ ಶಸ್ತ್ರಚಿಕಿತ್ಸೆ ಮೂಲಕ ಬಾಲಕಿ ಜೀವ ಉಳಿಸಿದ್ದಾರೆ.

ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ನೆರನಹಳ್ಳಿ ಗ್ರಾಮದ ನೆರನಹಳ್ಳಿಯ ಬಾಬು ಮತ್ತು ಲಾವಣ್ಯ ದಂಪತಿ ಮಗಳು ಸ್ನೇಹಾ ಅಪಾಯದಿಂದ ಪಾರಾದವಳು . ಕಳೆದ ಮೇ 3ರಂದು ಚೆನ್ನಾಗಿದ್ದ ಸ್ನೇಹಾ ಇದ್ದಕ್ಕಿದ್ದಂತೆ ವಾಂತಿ ಮಾಡಿಕೊಂಡು ಒದ್ದಾಡಿದ್ದಳು. ಮಗಳ ಪರಿಸ್ಥಿತಿ ಕಂಡು ಭಯಗೊಂಡ ಪೋಷಕರು ಮುಳಬಾಗಿಲಿನ ಖಾಸಗಿ‌ ಆಸ್ಪತ್ರೆಗೆ ತೋರಿಸಿದ್ದರು. ಆದರೆ ಅಲ್ಲಿನ ವೈದ್ಯರು ನಿಮ್ಮ ಮಗಳಿಗೆ ನರರೋಗಕ್ಕೆ ಸಂಬಂಧಿಸಿದ ಕಾಯಿಲೆ ಇದೆ ಎಂದಿದ್ದರು.

ತಡ ಮಾಡದೆ ಅಲ್ಲಿಂದ ಬೆಂಗಳೂರಿಗೆ ಮಗಳು ಸ್ನೇಹಾಳನ್ನು ಕರೆತಂದು ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪರೀಕ್ಷೆ ವೇಳೆ ತಲೆ ಮೆದುಳಿನ ರಕ್ತನಾಳ ಒಡೆದು ರಕ್ತ ಸೋರುವ ಈ ಕಾಯಿಲೆ ಇದೆ ಎಂದು ಗೊತ್ತಾಗಿತ್ತು. ಸ್ನೇಹಾಳಿಗೆ ಬಂದ ಈ ಕಾಯಿಲೆ ಅದಾಗಲೇ ಯಾರಿಗೂ ತಿಳಿಯದಂತೆ ಕೊನೆ ಹಂತ ತಲುಪಿತ್ತು. ಹೀಗಾಗಿ ನಿಮ್ಹಾನ್ಸ್‌ ವೈದ್ಯರು ನಿಮ್ಮ ಮಗಳನ್ನು ಬದುಕಿಸುವುದು ಕಷ್ಟ ವಾಪಸ್‌ ಕರೆದುಕೊಂಡು ಹೋಗಿ ಎಂದು ಕೈ ಚೆಲ್ಲಿದ್ದರು.

ಇದರಿಂದ ಮತ್ತಷ್ಟು ಗಾಬರಿಗೊಂಡ ಬಾಬು, ಲಾವಣ್ಯ ದಂಪತಿಗೆ ಆ್ಯಂಬುಲೆನ್ಸ್ ಚಾಲಕ ಸಮಾಧಾನಪಡಿಸಿದ್ದಾರೆ. ಬಳಿಕ ಹೊಸಕೋಟೆಯಲ್ಲಿರುವ ಸಿಲಿಕಾನ್ ಸಿಟಿ ಆಸ್ಪತ್ರೆಗೆ ಹೋಗುವಂತೆ ಹೇಳಿದ್ದಾರೆ. ನುರಿತ ವೈದ್ಯರು ಇರುವ ನಿಮ್ಹಾನ್ಸ್‌ ಆಸ್ಪತ್ರೆಯಲ್ಲೆ ಮಗುವನ್ನು ಬದುಕಿಸುವುದು ಕಷ್ಟ ಎಂದಿರುವಾಗ ಬೇರೊಂದು ಆಸ್ಪತ್ರೆಗೆ ಹೋಗಿ ಏನು ಪ್ರಯೋಜನ ಎಂದು ಸ್ನೇಹಿತರು, ಸಂಬಂಧಿಕರು ಹೇಳಿದ್ದಾರೆ. ಆದರೆ ಮಗಳು ಉಳಿಯುತ್ತಾಳೆ ಎಂದಾಗ ಬಾಬು, ಲಾವಣ್ಯ ದಂಪತಿ ಕ್ಷಣವೂ ಯೋಚಿಸದೇ ಸಿಲಿಕಾನ್‌ ಸಿಟಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.

Silicon City Hospital doctors

ಇದನ್ನೂ ಓದಿ: Money Guide: ಎಫ್‌ಡಿಯಲ್ಲಿ ಹೂಡಿಕೆ ಮಾಡುವ ಮುನ್ನ ವಿವಿಧ ಬ್ಯಾಂಕ್‌ಗಳ ಬಡ್ಡಿದರ ಪರಿಶೀಲಿಸಿ

ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ನಗರದ ಸಿಲಿಕಾನ್ ಸಿಟಿ ಆಸ್ಪತ್ರೆ ವೈದ್ಯರಾದ ಡಾ.ಸುಪ್ರಿತ್ ಮತ್ತು ಡಾ.ಮನೋಹರ್‌ರವರ ನರರೋಗ ತಜ್ಞರ ತಂಡ, ಅಚ್ಚರಿ ಪಡುವ ರೀತಿ ಶಸ್ತ್ರಚಿಕಿತ್ಸೆ ಮಾಡಿ ಯಶಸ್ವಿಯಾಗಿ ಮಗುವಿನ ಜೀವ ಉಳಿಸಿದ್ದಾರೆ.

Silicon City Hospital doctors

ವೈದ್ಯ ಲೋಕದಲ್ಲಿ ಅಚ್ಚರಿ ಎನಿಸುವ ಅನೇಕ‌ ಕಾಯಿಲೆಗಳಿವೆ. ಒಂದು ಕಡೆ ವೈದ್ಯರಿಗೆ ಕೆಲವು‌‌ ಕಾಯಿಲೆ ಸವಾಲಾದರೆ, ಕೆಲವು ಕಾಯಿಲೆಯ ಸಕ್ಸಸ್ ರೇಟ್ ವೈದ್ಯರನ್ನು ಮತ್ತಷ್ಟು ಒಳ್ಳೆಯ ಕೆಲಸ ಮಾಡಲು ಪ್ರೇರೇಪಿಸುತ್ತದೆ. ಹೊಸಕೋಟೆ ಸಿಲಿಕಾನ್ ಸಿಟಿ ವೈದ್ಯರ ಸೇವೆಯೇ ಸಾಕ್ಷಿಯಾಗಿದೆ.

ಲಕ್ಷದಲ್ಲಿ ಇಬ್ಬರಿಗೆ ಕಾಣಿಸಿಕೊಳ್ಳುವ “ಅರ್ಟೆರಿಯೊ ವೀನಸ್ ಮಾಲ್ಪರ್ಮೇಷನ್- Alterio Venous Malformation (ಮೆದುಳು ನರಗಳಲ್ಲಿ ಗುಳ್ಳೆಗಳಾಗಿ‌ ಒಡೆದು ಹೋಗಿ ರಕ್ತ ಸೋರುವ ಕಾಯಿಲೆ) ಎಂಬ ಕಾಯಿಲೆಗೆ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಕಡು ಬಡವರಾದ ಅಂಗವಿಕಲರಾದ ಬಾಬು ಲಾವಣ್ಯ ದಂಪತಿ‌ ಇನ್ನೇನು ನಮ್ಮ ಒಬ್ಬಳೆ ಮಗಳು ನಮ್ಮಿಂದ ದೂರ ಆಗುತ್ತೆ ಎಂಬ ಆತಂಕವನ್ನು ಸಿಲಿಕಾನ್ ಸಿಟಿ ಆಸ್ಪತ್ರೆ ವೈದ್ಯರು ದೂರ ಮಾಡಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಆರೋಗ್ಯ

Vertigo Problem: ನಿಮಗೆ ಇದ್ದಕ್ಕಿದ್ದಂತೆ ತಲೆ ಸುತ್ತುತ್ತಿದೆಯೆ? ಈ ವಿಷಯ ತಿಳಿದುಕೊಂಡಿರಿ

ಭಾರತದಲ್ಲಿ ಸುಮಾರು 90 ಲಕ್ಷಕ್ಕಿಂತ ಹೆಚ್ಚು ಮಂದಿ ವರ್ಟಿಗೊದ ಸಮಸ್ಯೆಯಿಂದ (Vertigo Problem) ನರಳುತ್ತಿದ್ದಾರೆ. 60 ವರ್ಷದ ಮೇಲ್ಪಟ್ಟವರಲ್ಲಿ ಇದು ಕಂಡುಬರುವುದು ಹೆಚ್ಚಾದರೂ, ಕಡಿಮೆ ವಯೋಮಾನದವರನ್ನೂ ಬಾಧಿಸಬಹುದು. ಇದೇನು ಕಾಯಿಲೆಯಲ್ಲ, ವರ್ಟಿಗೊ ಎಂದು ಕರೆಯಲಾಗುವ ಇದು ಹೆಚ್ಚಾಗಿ ಒಳಗಿವಿಯ ತೊಂದರೆಯಿಂದ ಬರುವಂಥದ್ದು. ಆದರೆ ವರ್ಟಿಗೊ ಬರುವುದಕ್ಕೆ ಇದೊಂದೇ ಕಾರಣವಲ್ಲ, ಹಲವಾರಿವೆ. ಈ ಕುರಿತ ಮಾಹಿತಿ ಇಲ್ಲಿದೆ.

VISTARANEWS.COM


on

Vertigo Problem
Koo

ಇದ್ದಕ್ಕಿದ್ದಂತೆ ತಲೆ ಸುತ್ತು ಬಂದು, ಸುತ್ತಲಿನ ಲೋಕವೆಲ್ಲ ಬುಗರಿಯಂತೆ ತಿರುಗುವ ಹಾಗೆ ಭಾಸವಾಗಬಹುದು. ದೇಹದ ಸಮತೋಲನವೇ ತಪ್ಪಿದಂತಾಗಿ ವ್ಯಕ್ತಿ ಬೀಳಬಹುದು. ಜಗತ್ತಿನಲ್ಲಿ ಹತ್ತರಲ್ಲಿ ಒಬ್ಬರಿಗೆ ಬರಬಹುದಾದ ಇದೇನು ಕಾಯಿಲೆಯಲ್ಲ, ವರ್ಟಿಗೊ (Vertigo Problem) ಎಂದು ಕರೆಯಲಾಗುವ ಇದು ಹೆಚ್ಚಾಗಿ ಒಳಗಿವಿಯ ತೊಂದರೆಯಿಂದ ಬರುವಂಥದ್ದು. ಆದರೆ ವರ್ಟಿಗೊ ಬರುವುದಕ್ಕೆ ಇದೊಂದೇ ಕಾರಣವಲ್ಲ, ಹಲವಾರಿವೆ. ಸಿಕ್ಕಾಪಟ್ಟೆ ತಲೆಸುತ್ತುವ ಕಾರಣದಿಂದಲೇ ವ್ಯಕ್ತಿಯ ಜೀವನವನ್ನು ಕಷ್ಟಕ್ಕೆ ದೂಡುವ ಈ ಸಮಸ್ಯೆಯ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ. ಭಾರತದಲ್ಲಿ ಸುಮಾರು 90 ಲಕ್ಷಕ್ಕಿಂತ ಹೆಚ್ಚು ಮಂದಿ ವರ್ಟಿಗೊದ ಸಮಸ್ಯೆಯಿಂದ ನರಳುತ್ತಿದ್ದಾರೆ. 60 ವರ್ಷದ ಮೇಲ್ಪಟ್ಟವರಲ್ಲಿ ಇದು ಕಂಡುಬರುವುದು ಹೆಚ್ಚಾದರೂ, ಕಡಿಮೆ ವಯೋಮಾನದವರನ್ನೂ ಬಾಧಿಸಬಹುದು. ಪುರುಷರಿಗಿಂತ ಮಹಿಳೆಯರಿಗೆ ಇದು ಹೆಚ್ಚು ತೊಂದರೆ ಕೊಡುತ್ತದೆ ಎನ್ನುತ್ತವೆ ಅಧ್ಯಯನಗಳು. ಮನೆಗೆಲಸ, ಶಾಪಿಂಗ್‌, ಕಚೇರಿ ಕೆಲಸ, ವಾಹನ ಚಾಲನೆ ಮುಂತಾದ ನಿತ್ಯದ ಕ್ರಿಯೆಗಳಿಗೂ ಇದರಿಂದ ಅಡ್ಡಿಯಾಗಬಹುದು. ಸೂಕ್ತ ಚಿಕಿತ್ಸೆ ನಡೆಯದಿದ್ದರೆ, ಸಾಮಾಜಿಕ ಬದುಕು ಮತ್ತು ಆರ್ಥಿಕ ಅನುಕೂಲಗಳ ಮೇಲೂ ದುಷ್ಪರಿಣಾಮ ಬೀರಬಹುದು.

stressed sad young woman with vertigo

ಏನಾಗುತ್ತದೆ?

ವರ್ಟಿಗೊ ಸಮಸ್ಯೆ ಇದ್ದರೆ ಏನಾಗುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳೋಣ. ಕೂತಲ್ಲಿಂದ ಎದ್ದ ತಕ್ಷಣ ತಲೆ ಸುತ್ತುವುದು, ಸುತ್ತಲಿನ ಜಾಗವೆಲ್ಲ ತಿರುಗಿದ ಅನುಭವ, ತಲೆನೋವು, ಕೆಲವೊಮ್ಮೆ ಪ್ರಜ್ಞೆ ತಪ್ಪುವುದು, ದೇಹದ ಸಮತೋಲನ ತಪ್ಪಿ ಬೀಳಬಹುದು, ಬಿದ್ದಿದ್ದು ತೀವ್ರವಾದರೆ ಗಾಯವಾಗಬಹುದು ಅಥವಾ ಮೂಳೆ ಮುರಿಯಬಹುದು, ಕಿವಿಯಲ್ಲಿ ಜುಂಯ್‌ ಸದ್ದು, ಹೊಟ್ಟೆ ತೊಳೆಸಿದಂತಾಗುವುದು, ಅತಿಯಾಗಿ ಬೆವರುವುದು- ಇತ್ಯಾದಿ ಲಕ್ಷಣಗಳನ್ನು ವರ್ಟಿಗೊ ಬಾಧಿತರು ಅನುಭವಿಸಬಹುದು.

ಇದನ್ನೂ ಓದಿ: Moringa Leaves Health Benefits: ನುಗ್ಗೆ ಸೊಪ್ಪು ಏಕೆ ತಿನ್ನಬೇಕು? ಏನಿದೆ ಇದರಲ್ಲಿ ವಿಶೇಷ ಗುಣ?

ಚಿಕಿತ್ಸೆ ಇಲ್ಲವೇ?

ಖಂಡಿತವಾಗಿಯೂ ಇದೆ. ಒಳಗಿವಿ ಅಥವಾ ಕೇಂದ್ರ ನರಮಂಡಲದ ತೊಂದರೆಯಿಂದಾಗಿ ಉಂಟಾಗುವ ಸಮಸ್ಯೆಯಿದು. ಮುಖ್ಯವಾಗಿ ಯಾವ ಕಾರಣಕ್ಕೆ ಈ ಸಮಸ್ಯೆ ಕಾಣಿಸಿಕೊಂಡಿದೆ ಎಂಬುದನ್ನು ವೈದ್ಯರು ನಿರ್ಣಯಿಸಿದರೆ ಇದಕ್ಕೆ ಚಿಕಿತ್ಸೆ ನೀಡಬಹುದು. ಕೆಲವು ಔಷಧಗಳು, ಆಹಾರದಲ್ಲಿನ ಮತ್ತು ಜೀವನಶೈಲಿಯಲ್ಲಿನ ಬದಲಾವಣೆಯಿಂದ ರೋಗಿಯ ಬದುಕಿನ ತೊಂದರೆಯನ್ನು ತಪ್ಪಿಸಿ, ಸಮಸ್ಯೆಯನ್ನು ನಿಯಂತ್ರಿಸಲು ಸಾಧ್ಯವಿದೆ.

Vertigo BPPV Vestibular Disorders

ಪರಿಹಾರವೇನು?

ವೈದ್ಯರು ಹೇಳಿದ ಔಷಧಿಗಳನ್ನು ಮತ್ತು ಸೂಚನೆಗಳನ್ನು ಪಾಲಿಸುವುದು ಕಡ್ಡಾಯ. ಜೊತೆಗೆ, ದೇಹಕ್ಕೆ ನೀರು ಕಡಿಮೆಯಾಗದಂತೆ ಎಚ್ಚರ ವಹಿಸಿ. ಇದರಿಂದ ತಲೆಸುತ್ತು ತೀವ್ರಗೊಳ್ಳುತ್ತದೆ. ಆಹಾರದಲ್ಲಿ ಕೆಲವು ಬದಲಾವಣೆಗಳು ನೆರವಾಗುತ್ತವೆ. ಉದಾ, ಉಪ್ಪು, ಮಸಾಲೆ, ಕೆಫೇನ್‌, ಖಾರದ ತಿನಿಸುಗಳು ಮತ್ತು ಆಲ್ಕೊಹಾಲ್ ಸೇವನೆಯನ್ನು ಕಡಿಮೆ ಮಾಡುವುದು ಸಹಾಯಕ. ದೈನಂದಿನ ವ್ಯಾಯಾಮದ ಬಗ್ಗೆ ವೈದ್ಯರಲ್ಲಿ ಮಾತಾಡಿ. ಕುತ್ತಿಗೆಯ ಕೆಲವು ವ್ಯಾಯಾಮಗಳು ಈ ನಿಟ್ಟಿನಲ್ಲಿ ನೆರವಾಗಬಹುದು. ದೇಹದ ಸಮತೋಲನವನ್ನು ಹೆಚ್ಚಿಸುವ ವ್ಯಾಯಾಮಗಳು ಹೆಚ್ಚಿನ ನೆರವು ನೀಡುತ್ತವೆ. ಕೆಲವು ರೀತಿಯ ವರ್ಟಿಗೊಗೆ ಫಿಸಿಯೊ ಥೆರಪಿ ನೆರವಾಗಬಹುದು. ಈ ಬಗ್ಗೆ ವೈದ್ಯಕೀಯ ಸಲಹೆ ಬೇಕಾಗುತ್ತದೆ. ಮಾನಸಿಕ ಒತ್ತಡವನ್ನು ಕಡಿಮೆ ಮಾಡಲೇಬೇಕು. ಇದಕ್ಕಾಗಿ ಧ್ಯಾನ, ಪ್ರಾಣಾಯಾಮಗಳು ಉಪಯುಕ್ತ. ರಕ್ತದೊತ್ತಡ ಇದ್ದರೆ, ಅದನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳುವುದು ಅಗತ್ಯ. ಮಧುಮೇಹವೂ ಇದ್ದರೆ ಅದನ್ನೂ ನಿಯಂತ್ರಿಸಬೇಕಾಗುತ್ತದೆ. ಇಲ್ಲದಿದ್ದರೆ ವರ್ಟಿಗೊ ಸಮಸ್ಯೆಯೂ ಹೆಚ್ಚಬಹುದು. ನಿತ್ಯವೂ ಎಂಟು ತಾಸು ನಿದ್ದೆ ಮಾಡುವ ಗುರಿಯನ್ನು ಇರಿಸಿಕೊಳ್ಳಿ. ನಿದ್ದೆಗೆಟ್ಟರೆ ವರ್ಟಿಗೊ ನಿಯಂತ್ರಣ ಕಷ್ಟ. ಮಲಗುವಾಗ ಅತಿ ಎತ್ತರದ ತಲೆದಿಂಬು ಬೇಡ. ಇದು ಸಮಸ್ಯೆಯನ್ನು ಹೆಚ್ಚಿಸಬಹುದು. ಕುತ್ತಿಗೆಗೆ ಹಿತ ಎನಿಸುವಷ್ಟೇ ಎತ್ತರದ ದಿಂಬು ಸಾಕು. ಪ್ರಖರ ಬೆಳಕು, ಶಬ್ದ, ಧಿಡೀರ್‌ ಚಲನೆಗಳು ಇದ್ದಕ್ಕಿದ್ದಂತೆ ತಲೆ ಸುತ್ತು ತರಿಸುತ್ತವೆ. ಇವುಗಳಿಗೆ ಅವಕಾಶ ಕೊಡಬೇಡಿ. ಮೈಗ್ರೇನ್‌ ಸಮಸ್ಯೆಯೂ ವರ್ಟಿಗೊಗೆ ದಾರಿ ಮಾಡಬಹುದು. ಮೆಟ್ಟಿಲು ಹತ್ತಿಳಿಯುವಾಗ ರೇಲಿಂಗ್‌ ಹಿಡಿಯುವುದು ಸುರಕ್ಷಿತ. ಈ ಸಮಸ್ಯೆಯಿಂದ ಬಳಲುವವರು ಬಹಳಷ್ಟು ಜನರಿದ್ದಾರೆ, ನೀವೊಬ್ಬರೇ ಅಲ್ಲ. ಸೂಕ್ತ ಚಿಕಿತ್ಸೆಯಿಂದ ಸಾಮಾನ್ಯ ಬದುಕು ಸಾಗಿಸಲು ಖಂಡಿತ ಸಾಧ್ಯವಿದೆ.

Continue Reading

ಆಹಾರ/ಅಡುಗೆ

Food Tips Kannada: ಸಸ್ಯಾಹಾರಿಗಳಿಗೆ ಒಮೇಗಾ 3 ಕೊಬ್ಬಿನಾಮ್ಲ ಯಾವುದರಲ್ಲಿ ದೊರೆಯುತ್ತದೆ?

ಒಮೇಗಾ 3 ಕೊಬ್ಬಿನಾಮ್ಲ ಎನ್ನುತ್ತಿದ್ದಂತೆ ಕೊಬ್ಬಿನ ಮೀನುಗಳು ನೆನಪಾಗುತ್ತವೆ. ಸಾಗರೋತ್ಪನ್ನಗಳಿಂದ ಹೆಚ್ಚಿನ ಪ್ರಮಾಣದ ಒಮೇಗಾ 3 ದೊರೆಯುವುದು ಹೌದು. ಅದರರ್ಥ ಸಸ್ಯಾಹಾರಿಗಳಿಗೆ ಈ ಸತ್ವ ಇಲ್ಲವೆಂದಲ್ಲ. ಹಾಗಾದರೆ ಯಾವೆಲ್ಲ ಸಸ್ಯಜನ್ಯ ವಸ್ತುಗಳಿಂದ ಒಮೇಗಾ 3 ಕೊಬ್ಬಿನಾಮ್ಲವನ್ನು (Food Tips Kannada) ಪಡೆಯಬಹುದು?

VISTARANEWS.COM


on

Food Tips Kannada
Koo

ದೇಹವು ಪೂರ್ಣಾರೋಗ್ಯದಲ್ಲಿ ಇರಬೇಕೆಂದಾದರೆ ಆವಶ್ಯಕ ಪೌಷ್ಟಿಕಾಂಶಗಳೆಲ್ಲ ಪೂರ್ಣ ಪ್ರಮಾಣದಲ್ಲಿ ದೊರೆಯಬೇಕು. ಉದಾ, ಒಮೇಗಾ ೩ ಕೊಬ್ಬಿನಾಮ್ಲ ಹಲವು ಕಾರಣಗಳಿಂದಾಗಿ ದೇಹಕ್ಕೆ ಬೇಕೆಬೇಕು. ಮುಖ್ಯವಾಗಿ ಹೃದಯದ ಆರೋಗ್ಯ ರಕ್ಷಣೆಗೆ ಮತ್ತು ಮೆದುಳಿನ ಸಂರಕ್ಷಣೆಗೆ ಒಮೇಗಾ ೩ ಕೊಬ್ಬಿನಾಮ್ಲ ಅಗತ್ಯವಾಗಿ ಬೇಕು. ಮೀನಿನಲ್ಲಿ ಈ ಅಂಶ ಯಥೇಚ್ಛವಾಗಿ ದೊರೆಯುತ್ತದೆ. ಆದರೆ ಸಸ್ಯಾಹಾರಿಗಳಿಗೆ? ಅವರೇನು ತಿಂದರೆ ಒಮೇಗಾ ೩ ಕೊಬ್ಬಿನಾಮ್ಲವನ್ನು ಸಾಕಷ್ಟು ಪ್ರಮಾಣದಲ್ಲಿ (Food Tips Kannada) ಪಡೆಯುವುದಕ್ಕ್ ಸಾಧ್ಯ?

Flax Seeds with Pottery

ಅಗಸೆ ಬೀಜ

ಸಸ್ಯಾದಿಗಳಲ್ಲಿ ದೊರೆಯುವ ಒಮೇಗಾ 3 ಕೊಬ್ಬಿನಾಮ್ಲದ ಮೂಲಗಳ ಪೈಕಿ ಅಗಸೆ ಬೀಜ ಅತ್ಯಂತ ಹೆಚ್ಚಿನದ್ದು. ಆಲ್ಫಲಿನೊಲೆನಿಕ್‌ ಆಮ್ಲವು ಈ ಸಣ್ಣ ಬೀಜಗಳಲ್ಲಿ ಸಾಂದ್ರವಾಗಿದೆ. ಇದಲ್ಲದೆ, ನಾರು, ಪ್ರೊಟೀನ್‌, ಹಲವು ರೀತಿಯ ವಿಟಮಿನ್‌ಗಳು, ಖನಿಜಗಳು ಇದರಲ್ಲಿ ಹೇರಳವಾಗಿವೆ. ಹಾಗಾಗಿ ಈ ಬೀಜದ ಚಟ್ಣಿಪುಡಿಯಿಂದ ತೊಡಗಿ, ಎಣ್ಣೆಯವರೆಗೆ ಹಲವು ರೀತಿಯಲ್ಲಿ ಇದನ್ನು ನಿತ್ಯವೂ ಆಹಾರದಲ್ಲಿ ಉಪಯೋಗಿಸುವುದು ಶ್ರೇಷ್ಠ.

Chia Different Types of Seeds with Health Benefits

ಚಿಯಾ ಬೀಜ

ಈ ಬೀಜಗಳಂತೂ ಅಗಸೆ ಬೀಜಕ್ಕಿಂತಲೂ ಸಣ್ಣವು. ಆದರೆ ಒಮೇಗಾ 3 ಕೊಬ್ಬಿನಾಮ್ಲದ ವಿಷಯಕ್ಕೆ ಬಂದರೆ ಮಾತ್ರ ಸಣ್ಣವಲ್ಲ. ಇದರಲ್ಲೂ ಆಲ್ಫ ಲಿನೋಲೆನಿಕ್‌ ಆಮ್ಲ ಧಾರಾಳವಾಗಿದೆ. ಇದನ್ನು ಆಹಾರದಲ್ಲಿ ಬಳಸುವುದೂ ಸಹ ಕಷ್ಟವಲ್ಲ. ನಿತ್ಯವೂ ನೀರಿಗೆ ಹಾಕಿ ಕುಡಿದರೂ ಸಾಕಾಗುತ್ತದೆ. ಇದರಿಂದ ಜೀರ್ಣಾಂಗಗಳ ಆರೋಗ್ಯ ವೃದ್ಧಿಸುತ್ತದೆ, ತೂಕ ನಿರ್ವಹಣೆಗೆ ಸಹಾಯವಾಗುತ್ತದೆ, ಹೃದಯದ ಆರೋಗ್ಯ ರಕ್ಷಣೆಗೂ ನೆರವಾಗುತ್ತದೆ.

Hemp seed Different Types of Seeds with Health Benefits

ಹೆಂಪ್‌ ಬೀಜಗಳು

ಭಾರತದಲ್ಲಿ ಅಷ್ಟಾಗಿ ಪ್ರಚಲಿತವಿಲ್ಲದ ಬೀಜಗಳಿವು. ಆದರೆ ಸತ್ವಗಳ ವಿಷಯದಲ್ಲಿ ಕಡಿಮೆಯಿಲ್ಲ. ಇದರಲ್ಲಿಯೂ ಒಮೇಗಾ 3 ಕೊಬ್ಬಿನಾಮ್ಲ ಸಾಂದ್ರವಾಗಿದೆ. ಜೊತೆಗೆ ಹಲವು ರೀತಿಯ ಅಮೈನೊ ಆಮ್ಲಗಳು, ಖನಿಜಗಳು ದೇಹಕ್ಕೆ ದೊರೆಯುತ್ತವೆ. ಇದರ ತೈಲವೂ ಲಭ್ಯವಿದ್ದು, ಅಡುಗೆಗೆ ಬಳಸಲು ಸಾಧ್ಯವಿದೆ. ಗೋಡಂಬಿಯಂತೆಯೇ ಹೆಂಪ್‌ ಬೀಜಗಳನ್ನು ಸಹ ನಾನಾ ಖಾದ್ಯಗಳಿಗೆ ಉಪಯೋಗಿಸಬಹುದು.

Walnuts Dry Fruits For Hair Fall

ವಾಲ್‌ನಟ್‌

ಒಮೇಗಾ 3 ಕೊಬ್ಬಿನಾಮ್ಲವನ್ನು ನೈಸರ್ಗಿಕವಾಗಿಯೇ ಯಥೇಚ್ಛವಾಗಿ ಹೊಂದಿರುವ ಇನ್ನೊಂದು ವಸ್ತುವಿದು. ನೋಡಿದಾಗ ಮೆದುಳನ್ನು ನೆನಪಿಸುವ ವಾಲ್‌ನಟ್‌ನಲ್ಲಿ ಪ್ರೊಟೀನ್‌, ನಾರು ಮತ್ತು ಹಲವು ರೀತಿಯ ಉತ್ಕರ್ಷಣ ನಿರೋಧಕಗಳಿವೆ. ಇವುಗಳನ್ನು ಹಾಗೆಯೇ ಬಾಯಾಡಬಹುದು ಅಥವಾ ಸಲಾಡ್‌ಗಳಿಗೆ, ಬ್ರೆಡ್‌, ಓಟ್‌ಮೀಲ್‌ ಮುಂತಾದ ಹಲವು ತಿನಿಸುಗಳೊಂದಿಗೆ ಇದನ್ನು ಸೇರಿಸಲೂಬಹುದು.

ಕ್ಯಾನೊಲ ಎಣ್ಣೆ

ಅಡುಗೆಗೆ ಬಳಸುವ ಎಣ್ಣೆಯನ್ನು ಉಳಿದೆಲ್ಲದರ ಬದಲಿಗೆ ಕ್ಯಾನೊಲ ಎಣ್ಣೆಯನ್ನು ಬಳಸಬಹುದು. ಇದರಲ್ಲೂ ಒಮೇಗಾ 3 ಕೊಬ್ಬಿನಾಮ್ಲ ಧಾರಾಳವಾಗಿದೆ. ಗಾಣದಲ್ಲಿ ತೆಗೆದ ಅಥವಾ ಕೋಲ್ಡ್‌ ಪ್ರೆಸ್ಡ್‌ ರೀತಿಯಿಂದ ತೆಗೆದ ಕ್ಯಾನೊಲ ಎಣ್ಣೆಯನ್ನು ಬಳಸುವುದು ಸೂಕ್ತ. ಇದನ್ನು ಒಗ್ಗರಣೆಗೆ, ಹುರಿಯಲು, ಕರಿಯಲು ಹಾಗೂ ಉಳಿದ ಎಲ್ಲ ರೀತಿಯಲ್ಲೂ ಬಳಸಬಹುದು.

It provides good protein for vegetarians Soybeans Benefits

ಸೋಯಾ ಉತ್ಪನ್ನಗಳು

ತೋಫು, ಎಡಮೇಮ್‌ ಮುಂತಾದ ಎಲ್ಲ ರೀತಿಯ ಸೋಯಾ ಉತ್ಪನ್ನಗಳಲ್ಲಿ ಒಮೇಗಾ 3 ಕೊಬ್ಬಿನಾಮ್ಲ ದೊರೆಯುತ್ತದೆ. ಸೋಯಾ ಹಾಲನ್ನು ಕೂಡ ಈ ಪಟ್ಟಿಗೆ ಸೇರಿಸಬಹುದು. ಪನೀರ್‌ನಂತೆಯೇ ತೋಫು ಬಳಕೆಗೆ ಬರುತ್ತದೆ. ಉಳಿದೆಲ್ಲ ಕಾಳುಗಳಂತೆ ಎಡಮೇಮ್‌ ಬಳಸಬಹುದು. ಸೋಯಾ ಚಂಕ್‌ಗಳನ್ನು ತರಕಾರಿಗಳ ಜೊತೆಗೆ ಬೇಯಿಸಲು ಸಾಧ್ಯವಿದೆ.

ಇದನ್ನೂ ಓದಿ: Digestion Tips: ಜೀರ್ಣಾಂಗಗಳ ಕ್ಷಮತೆ ಹೆಚ್ಚಿಸುವುದು ಹೇಗೆ?

ಇತರ ಮೂಲಗಳು

ಲಘುವಾದ ಅಡಿಕೆಯಂಥ ಘಮವನ್ನು ಹೊಂದಿರುವ ಸೆಣಬಿನ ಬೀಜಗಳು, ಪಾಚಿಯೊಂದರಿಂದ ಸಿದ್ಧಪಡಿಸುವ ಆಲ್ಗಲ್‌ ಎಣ್ಣೆ, ಬ್ರಸೆಲ್‌ ಸ್ಪ್ರೌಟ್‌ ಮುಂತಾದ ಆಹಾರಗಳಲ್ಲೂ ಒಮೇಗಾ 3 ಕೊಬ್ಬಿನಾಮ್ಲ ಸಾಕಷ್ಟು ಪ್ರಮಾಣದಲ್ಲಿ ಇರುತ್ತದೆ. ಹೀಗೆ ಸಸ್ಯಾಹಾರಿಗಳಿಗೂ ಒಮೇಗಾ ೩ ಕೊಬ್ಬಿನಾಮ್ಲ ದೇಹಕ್ಕೆ ಅಗತ್ಯವಾದಷ್ಟು ದೊರೆಯುವುದಕ್ಕೆ ಸಾಧ್ಯವಿದೆ. ಇದಕ್ಕಾಗಿ ಇದಿಷ್ಟೂ ರೀತಿಯ ಆಹಾರಗಳನ್ನು ನಿಯಮಿತವಾಗಿ ಬಳಕೆ ಮಾಡುವುದು ಆವಶ್ಯಕ.

Continue Reading

ಆರೋಗ್ಯ

Moringa Leaves Health Benefits: ನುಗ್ಗೆ ಸೊಪ್ಪು ಏಕೆ ತಿನ್ನಬೇಕು? ಏನಿದೆ ಇದರಲ್ಲಿ ವಿಶೇಷ ಗುಣ?

ನುಗ್ಗೆ ಸೊಪ್ಪನ್ನು (Moringa Leaves Health Benefits) ಬೇಸಿಗೆಯಲ್ಲೂ ತಿನ್ನುವುದಕ್ಕೆ ಯೋಗ್ಯ. ಆದರೆ ಎಷ್ಟು ತಿನ್ನಬಹುದು? ಇದರಲ್ಲಿ ಏನಿವೆ ಅಂಥ ತಿನ್ನಲೇಬೇಕಾದ ಸತ್ವಗಳು? ಉಳಿದೆಲ್ಲ ಸೊಪ್ಪುಗಳಂತೆ ಅಲ್ಲವೇ ಇದು ಸಹ? ಅಂಥ ಗುಣಗಳು ಏನಿವೆ ಇದರಲ್ಲಿ? ಇದನ್ನೇಕೆ ಸೂಪರ್‌ಫುಡ್‌ ಎಂದು ಕರೆಯಬೇಕು? ಇದನ್ನು ಎಷ್ಟು ತಿಂದರೆ ಒಳ್ಳೆಯದು? ಈ ಕುರಿತ ಉಪಯುಕ್ತ ಮಾಹಿತಿ ಇಲ್ಲಿದೆ.

VISTARANEWS.COM


on

Moringa Leaves Health Benefits
Koo

ನುಗ್ಗೆ ಸೊಪ್ಪು (Moringa Leaves Health Benefits) ಎನ್ನುತ್ತಿದ್ದಂತೆ ಅದರ ಪಾಕದ ಘಮಕ್ಕೆ ಮೂಗರಳಿಸುವವರು ಹಲವರಿದ್ದಾರು. ಭಾರತದ ಉದ್ದಗಲಕ್ಕೆ ನುಗ್ಗೆ ಜನಪ್ರಿಯ. ಆದರೆ ಬೇಸಿಗೆಯಲ್ಲಿ ಇದು ದೇಹದ ಉಷ್ಣತೆ ಹೆಚ್ಚಿಸುತ್ತದೆ ಎಂದು ಇದನ್ನು ದೂರ ಮಾಡಿ, ಮಳೆಗಾಲ-ಚಳಿಗಾಲದಲ್ಲಿ ಮಾತ್ರವೇ ಬಳಸುವ ಕ್ರಮ ಹಲವೆಡೆಗಳಲ್ಲಿದೆ. ಆದರೆ ಈ ಎಲೆಗಳಲ್ಲಿ ಸಾಕಷ್ಟು ನೀರಿನಂಶವೂ ಇರುವುದರಿಂದ ಬೇಸಿಗೆಯಲ್ಲಿ ದೇಹವನ್ನು ತಂಪಾಗಿಸುವಂಥ ಸೂಪರ್‌ ಫುಡ್‌ ಇದು ಎಂಬುದು ಗೊತ್ತೇ? ಉಳಿದೆಲ್ಲ ಸೊಪ್ಪುಗಳಂತೆ ಅಲ್ಲವೇ ಇದು ಸಹ? ಅಂಥ ಗುಣಗಳು ಏನಿವೆ ಇದರಲ್ಲಿ? ಇದನ್ನೇಕೆ ಸೂಪರ್‌ಫುಡ್‌ ಎಂದು ಕರೆಯಬೇಕು? ಇದನ್ನು ಎಷ್ಟು ತಿಂದರೆ ಒಳ್ಳೆಯದು?

Moringa Leaves Medicinal Leaves

ಸತ್ವಗಳೇನಿವೆ?

ಇದರಲ್ಲಿ ಉಳಿದೆಲ್ಲ ಸೊಪ್ಪುಗಳಿಗಿಂತ ಪ್ರೊಟೀನ್‌ ಸಾಂದ್ರವಾಗಿದೆ. 18 ಬಗೆಯ ಅಮೈನೊ ಆಮ್ಲಗಳು ಇದರಲ್ಲಿವೆ. ಇದರಲ್ಲದೆ, ವಿಟಮಿನ್‌ ಎ, ವಿಟಮಿನ್‌ ಸಿ, ಕ್ಯಾಲ್ಸಿಯಂ, ಪೊಟಾಶಿಯಂ ಮತ್ತು ಕಬ್ಬಿಣದ ಅಂಶಗಳು ಇದರಲ್ಲಿ ಹೇರಳವಾಗಿದೆ. ಇವೆಲ್ಲವುಗಳಿಂದ ಸ್ನಾಯುಗಳು ದೃಢಗೊಂಡು, ದೃಷ್ಟಿ ಕ್ಷೇಮವಾಗಿದ್ದು, ಪ್ರತಿರೋಧಕ ಶಕ್ತಿ ಸುಧಾರಿಸಿ, ಮೂಳೆಗಳು ಬಲಗೊಂಡು, ರಕ್ತದಲ್ಲಿನ ಆಮ್ಲಜನಕದ ಮಟ್ಟವೂ ಸುಧಾರಿಸುತ್ತದೆ.

ಉತ್ಕರ್ಷಣ ನಿರೋಧಕಗಳು

ಇದರಲ್ಲಿ ಕ್ವೆರ್ಸೆಟಿನ್‌, ಕ್ಲೊರೊಜೆನಿಕ್‌ ಆಮ್ಲ ಮತ್ತು ಬೀಟಾ ಕ್ಯಾರೊಟಿನ್‌ಗಳು ವಿಫುಲವಾಗಿವೆ. ಈ ಅಂಶಗಳು ದೇಹದಲ್ಲಿ ಅಂಡಲೆಯುವ ಮುಕ್ತಕಣಗಳನ್ನು ಪ್ರತಿಬಂಧಿಸುತ್ತವೆ. ಇದರಿಂದ ಮಾರಕ ರೋಗಗಳು ಬಾರದಂತೆ ತಡೆಯಬಹುದು. ಜೊತೆಗೆ ದೇಹದೆಲ್ಲೆಡೆ ಹೆಚ್ಚುವ ಉರಿಯೂತದ ಕಾಟದಿಂದ ಮುಕ್ತರಾದರೆ ಆರ್ಥರೈಟಿಸ್‌ನಿಂದ ಹಿಡಿದು ಹೃದಯ ರೋಗಗಳವರೆಗೆ ಬಹಳಷ್ಟು ತೊಂದರೆಗಳನ್ನು ದೂರ ಇರಿಸಲು ಸಾಧ್ಯವಿದೆ.

Antioxidants in it keep immunity strong Benefits Of Mandakki

ರೋಗನಿರೋಧಕ ಶಕ್ತಿ ಹೆಚ್ಚಳ

ಇದರಲ್ಲಿ ವಿಟಮಿನ್‌ ಸಿ ಪ್ರಮಾಣ ಹೆಚ್ಚಿದೆ. ಅಂದಾಜಿಗೆ ಹೇಳುವುದಾದರೆ, ಕಿತ್ತಳೆ ಹಣ್ಣುಗಳಲ್ಲಿ ಇರುವ ಪ್ರಮಾಣಕ್ಕಿಂತಲೂ ನುಗ್ಗೆ ಸೊಪ್ಪಿನಲ್ಲಿ ಹೆಚ್ಚು ಸಿ ಜೀವಸತ್ವವಿದೆ. ಹಾಗಾಗಿ ಸೋಂಕುಗಳನ್ನು ದೂರ ಮಾಡಲು, ಒಂದೊಮ್ಮೆ ಋತುಮಾನದ ವೈರಸ್‌ಗಳು ಕಾಡಿದರೂ ಬೇಗ ಚೇತರಿಸಿಕೊಳ್ಳಲು ಇದರ ನಿಯಮಿತ ಸೇವನೆಯಿಂದ ಸಾಧ್ಯವಾಗುತ್ತದೆ.

Weight Loss tension

ತೂಕ ಇಳಿಸಲು ನೆರವು

ಕಡಿಮೆ ಕ್ಯಾಲರಿಯಲ್ಲಿ ಹೆಚ್ಚಿನ ಪೋಷಕಾಂಶಗಳನ್ನು ನೀಡುವಂಥ ಆಹಾರಗಳು ತೂಕ ಇಳಿಸಿಕೊಳ್ಳಲು ಸೂಕ್ತವಾದಂಥವು. ಜೊತೆಗೆ ಹೇರಳವಾದಂಥ ನಾರು ಮತ್ತು ಪ್ರೊಟೀನ್‌ ಅಂಶಗಳಿದ್ದ ಆಹಾರದಿಂದ ಹೊಟ್ಟೆ ತುಂಬುವುದು ಬೇಗ, ಕಳ್ಳ ಹಸಿವಿನ ಕಾಟವೂ ಇಲ್ಲ. ಈ ಎಲ್ಲ ಗುಣಗಳನ್ನು ಹೊಂದಿರುವ ನುಗ್ಗೆ ಸೊಪ್ಪು ತೂಕ ಇಳಿಸಿಕೊಳ್ಳುವವರಿಗೆ ಪ್ರಯೋಜನಕಾರಿ.

Diabetes Diabetes concept Tired of diabetes high sugar disea Spinach Benefits

ಮಧುಮೇಹಿಗಳಿಗೆ ಒಳ್ಳೆಯದು

ನಾರು ಮತ್ತು ಪ್ರೊಟೀನ್‌ ಹೆಚ್ಚಿರುವ ಆಹಾರಗಳು ಮಧುಮೇಹಿಗಳಿಗೆ ಪೂರಕ, ಇದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ಸ್ಥಿರವಾಗಿರುತ್ತದೆ ಎನ್ನುವುದನ್ನು ಅಧ‍್ಯಯನಗಳು ತಿಳಿಸುತ್ತವೆ. ಇದರ ಜೊತೆಗೆ, ನುಗ್ಗೆಯಲ್ಲಿರುವ ಐಸೊಥಿಯೊಸಯನೇಟ್‌ ಎಂಬ ನೈಸರ್ಗಿಕ ಉತ್ಕರ್ಷಣ ನಿರೋಧಕಗಳು ರಕ್ತದಲ್ಲಿ ಸಕ್ಕರೆಯಂಶ ಏರಿಳಿತ ಆಗದಂತೆ ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಪಾಲಿಫೆನಾಲ್‌ ಅಂಶಗಳೂ ಇದರಲ್ಲಿ ಇರುವುದರಿಂದ ಯಕೃತ್ತಿನ ಆರೋಗ್ಯ ರಕ್ಷಣೆ ಮಾಡುವುದು ಕಷ್ಟವಲ್ಲ.

ಎಷ್ಟು ಸೇವಿಸಬೇಕು?

ಶರೀರಕ್ಕೆ ಯಾವುದಾದರೂ ಸತ್ವ ಅತಿಯಾದರೂ ಜೀರ್ಣಿಸಿಕೊಳ್ಳುವುದು ಕೆಲವೊಮ್ಮೆ ಕಷ್ಟವಾಗಬಹುದು. ಹಾಗಾಗಿ ನುಗ್ಗೆ ಸೊಪ್ಪು ಒಳ್ಳೆಯದು ಎನ್ನುವುದು ನಿಜ. ಆದರೆ ಅದನ್ನು ಎಷ್ಟು ಸೇವಿಸಬೇಕು? ಎಷ್ಟು ತಿಂದರೆ ದೇಹ ತೆಗೆದುಕೊಳ್ಳಬಲ್ಲದು? ನುಗ್ಗೆ ಸೊಪ್ಪಿನ ಪುಡಿಯನ್ನು (ಮೊರಿಂಗ ಪೌಡರ್‌) ಸೇವಿಸುವ ಅ‍ಭ್ಯಾಸವಿದ್ದರೆ ದಿನಕ್ಕೆ ಒಂದು ದೊಡ್ಡ ಚಮಚ ಸಾಕಾಗುತ್ತದೆ. ಇದರಿಂದ, ಅಂದಾಜಿಗೆ ಹೇಳುವುದಾದರೆ, 35 ಕ್ಯಾಲರಿ ಶಕ್ತಿ ದೊರೆಯುತ್ತದೆ. ಅದಿಲ್ಲದಿದ್ದರೆ, ಒಂದು ದೊಡ್ಡ ಮುಷ್ಟಿಯಷ್ಟು ಹಸಿ ಸೊಪ್ಪು ಸೇವನೆಯಿಂದ ಈ ಅಭ್ಯಾಸವನ್ನು ಪ್ರಾರಂಭಿಸಬಹುದು. ಗರ್ಭಿಣಿಯರು ಸ್ವಲ್ಪ ತಿಂದರೆ ತೊಂದರೆಯಿಲ್ಲ, ಆದರೆ ಅತಿಯಾಗಿ ತಿನ್ನುವುದು ಸಮಸ್ಯೆಗಳನ್ನು ತರಬಹುದು.

ಇದನ್ನೂ ಓದಿ: Dates Benefits: ಲೈಂಗಿಕ ಶಕ್ತಿ ಹೆಚ್ಚಿಸಿಕೊಳ್ಳಬೇಕೆ? ದಿನಕ್ಕೊಂದು ಖರ್ಜೂರ ತಿಂದರೆ ಸಾಕು!

ಹೇಗೆಲ್ಲ ತಿನ್ನಬಹುದು?

ಬೆಳಗ್ಗೆ ನುಗ್ಗೆ ಸೊಪ್ಪಿನ ಪುಡಿಯ ಕಷಾಯ ಅಥವಾ ಚಹಾ ಮಾಡಿ ಸೇವಿಸುವವರಿದ್ದಾರೆ. ಈ ಪುಡಿಯನ್ನು ಸ್ಮೂದಿಗಳಿಗೆ ಬಳಸಬಹುದು. ಸ್ಯಾಂಡ್‌ವಿಚ್‌ಗಳಿಗೆ ಇದರ ಪೇಸ್ಟ್‌ ಬಳಸಬಹುದು; ಡಿಪ್‌ ಆಗಿಯೂ ರುಚಿ ಹೆಚ್ಚಿಸುತ್ತದೆ. ಸೂಪ್‌ಗಳಿಗೆ ಬಲು ರುಚಿ. ಪೆಸ್ಟೊ ಪಾಸ್ತ ಮಾಡುವಾಗ ಬೆಸಿಲ್‌ ಬದಲಿಗೆ ನುಗ್ಗೆ ಎಲೆಗಳನ್ನು ಬಳಸಿಕೊಳ್ಳಬಹುದು. ಉಳಿದಂತೆ ಅಪ್ಪಟ ದಕ್ಷಿಣ ಭಾರತೀಯ ಶೈಲಿಯ ಸಾಂಬಾರ್‌, ಪಲ್ಯ, ರೊಟ್ಟಿ, ಗೊಜ್ಜುಗಳಿಗೆ ಇದನ್ನು ಖಂಡಿತವಾಗಿ ಬಳಸಬಹುದು.

Continue Reading
Advertisement
Image-Fantastic Dragon Jewellery!
ಫ್ಯಾಷನ್14 mins ago

Fashion Trend: ಜೆನ್‌ ಜಿ ಹುಡುಗ-ಹುಡುಗಿಯರ ಆವರಿಸಿದ ಚಿತ್ರ-ವಿಚಿತ್ರ ಡ್ರಾಗನ್‌ ಜ್ಯುವೆಲರಿಗಳು!

Silicon City Hospital doctors successful surgery on girl suffering from Arterio Venus malpermation
ಬೆಂಗಳೂರು19 mins ago

Silicon City Hospital: ಲಕ್ಷಕ್ಕೆ ಇಬ್ಬರಿಗೆ ಬರುವ ಮೆದುಳಿನ ರಕ್ತನಾಳ ಒಡೆಯುವ ಕಾಯಿಲೆ; ಯಶಸ್ವಿ ಶಸ್ತ್ರಚಿಕಿತ್ಸೆಯಿಂದ ಬಾಲಕಿ ಪಾರು

CM Siddaramaiah says Our government is stable for 5 years BJP will disintegrate
Lok Sabha Election 202425 mins ago

CM Siddaramaiah: ನಮ್ಮ ಸರ್ಕಾರ 5 ವರ್ಷ ಸುಭದ್ರ; ಚುನಾವಣೆ ಬಳಿಕ ಬಿಜೆಪಿ ಛಿದ್ರ ಎಂದ ಸಿಎಂ ಸಿದ್ದರಾಮಯ್ಯ!

Team India New Head Coach
ಕ್ರೀಡೆ28 mins ago

Team India New Head Coach: ಭಾರತ ತಂಡಕ್ಕೆ ಆಸೀಸ್ ಮಾಜಿ​ ಆಟಗಾರ ಕೋಚ್​ ಆಗುವುದು ನಿಶ್ಚಿತ

Money Guide
ಮನಿ-ಗೈಡ್39 mins ago

Money Guide: ಎಫ್‌ಡಿಯಲ್ಲಿ ಹೂಡಿಕೆ ಮಾಡುವ ಮುನ್ನ ವಿವಿಧ ಬ್ಯಾಂಕ್‌ಗಳ ಬಡ್ಡಿದರ ಪರಿಶೀಲಿಸಿ

Hebbal Flyover
ಪ್ರಮುಖ ಸುದ್ದಿ48 mins ago

Hebbal flyover: ಬಿಡಿಎ ಕಾಮಗಾರಿ; ಹೆಬ್ಬಾಳ ಮೇಲ್ಸೇತುವೆಗೆ ಕೆ.ಆರ್.ಪುರಂನಿಂದ ಬರುವ ವಾಹನಗಳಿಗೆ ನಿರ್ಬಂಧ

DK Shivakumar hits back at HD Kumaraswamy
ರಾಜಕೀಯ1 hour ago

HD Kumaraswamy: ಎಚ್‌ಡಿಕೆ ಯಾವ ತಿಮಿಂಗಿಲವನ್ನಾದರೂ ಹಿಡಿದು, ಬಡಿದು ನುಂಗಿಕೊಳ್ಳಲಿ: ಡಿಕೆ ಶಿವಕುಮಾರ್ ತಿರುಗೇಟು

theft case
ಬೆಂಗಳೂರು1 hour ago

Theft Case : ಪಕ್ಕದ ಮನೆಗೆ ಕನ್ನ ಹಾಕಿದ ಚೋರ್‌ ದಂಪತಿ; ಕೆಲಸ ಕೊಟ್ಟ ಮಾಲೀಕನನ್ನೇ ದೋಚಿದ

America
ವಿದೇಶ1 hour ago

America: ಶ್ವೇತಭವನದಲ್ಲಿ ಮೊಳಗಿದ ಸಾರೆ ಜಹಾನ್‌ ಸೇ ಅಚ್ಚಾ..ವಿಡಿಯೋ ನೋಡಿ

KL Rahul
ಕ್ರೀಡೆ2 hours ago

KL Rahul: ರಾಹುಲ್ ಆರ್​ಸಿಬಿಗೆ ಬರಲ್ಲ; ಔತಣ ಕೂಟಕ್ಕೆ ಕರೆದು ತಬ್ಬಿಕೊಂಡ ಸಂಜೀವ್ ಗೋಯೆಂಕಾ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

CM Siddaramaiah says Our government is stable for 5 years BJP will disintegrate
Lok Sabha Election 202425 mins ago

CM Siddaramaiah: ನಮ್ಮ ಸರ್ಕಾರ 5 ವರ್ಷ ಸುಭದ್ರ; ಚುನಾವಣೆ ಬಳಿಕ ಬಿಜೆಪಿ ಛಿದ್ರ ಎಂದ ಸಿಎಂ ಸಿದ್ದರಾಮಯ್ಯ!

I dont want to go to other states for Lok Sabha Election 2024 campaign for Congress says CM Siddaramaiah
Lok Sabha Election 20244 hours ago

CM Siddaramaiah: ಕಾಂಗ್ರೆಸ್‌ ಪರ ಬೇರೆ ರಾಜ್ಯಗಳಿಗೆ ಪ್ರಚಾರಕ್ಕೆ ಹೋಗಲು ನನಗೆ ಇಷ್ಟವಿಲ್ಲ: ಸಿಎಂ ಸಿದ್ದರಾಮಯ್ಯ!

HD Revanna Bail I am not happy that Revanna has been released says HD Kumaraswamy
ರಾಜಕೀಯ4 hours ago

HD Revanna Bail: ರೇವಣ್ಣ ಬಿಡುಗಡೆಯಾಗಿದ್ದಕ್ಕೆ ನಾನಂತೂ ಖುಷಿ ಪಡಲ್ಲ ಎಂದ ಎಚ್‌ಡಿಕೆ!

karnataka Rain Effected
ಬೆಂಗಳೂರು6 hours ago

Karnataka Rain: ಮಿಡ್‌ನೈಟ್‌ ಮಳೆ ಅವಾಂತರ; ಮರಗಳು, ವಿದ್ಯುತ್‌ ಕಂಬಗಳು ಧರೆಗೆ, ಕುಸಿದು ಬಿದ್ದ ಮನೆ

Dina Bhavishya
ಭವಿಷ್ಯ12 hours ago

Dina Bhavishya : ಉದ್ಯೋಗದ ಸ್ಥಳದಲ್ಲಿ ನಿಮ್ಮ ವಿರುದ್ಧ ಪಿತೂರಿ ಮಾಡ್ಬಹುದು ಎಚ್ಚರ!

HD Revanna Bail Revanna will not leave the country condition imposed by the court
ಕ್ರೈಂ22 hours ago

HD Revanna Bail: ರೇವಣ್ಣ ದೇಶ ಬಿಡಂಗಿಲ್ಲ, ಕೆ.ಆರ್‌. ನಗರಕ್ಕೆ ಎಂಟ್ರಿ ಕೊಡಂಗಿಲ್ಲ! ಕೋರ್ಟ್‌ ವಿಧಿಸಿದ ಷರತ್ತು ಏನು?

HD Revanna Bail
ಕ್ರೈಂ23 hours ago

HD Revanna Bail: ಎಚ್‌.ಡಿ ರೇವಣ್ಣಗೆ ಕೊನೆಗೂ ಜಾಮೀನು; ಎಸ್‌ಐಟಿಗೆ ಮುಖಭಂಗ!

Prajwal Revanna Case Revanna bail plea to be heard Judge reprimands SIT cops for their behaviour
ಕ್ರೈಂ23 hours ago

Prajwal Revanna Case: ರೇವಣ್ಣ ಜಾಮೀನು ಅರ್ಜಿ ವಿಚಾರಣೆ; ಎಸ್‌ಐಟಿ ಪೊಲೀಸರ ವರ್ತನೆಗೆ ಜಡ್ಜ್‌ ಗರಂ!

Karnataka Weather Forecast
ಮಳೆ23 hours ago

Karnataka Weather : ನಾಳೆ ಮುಕ್ಕಾಲು ಕರ್ನಾಟಕದಲ್ಲಿ ಬಿರುಗಾಳಿ ಜತೆಗೆ ವಿಪರೀತ ಮಳೆ

Modi Roadshow Live
ದೇಶ24 hours ago

Modi Roadshow Live: ವಾರಾಣಸಿಯಲ್ಲಿ ಮೋದಿ ಭರ್ಜರಿ ರೋಡ್‌ ಶೋ; ಲೈವ್‌ ಇಲ್ಲಿ ವೀಕ್ಷಿಸಿ

ಟ್ರೆಂಡಿಂಗ್‌