Valentines Day Party Dress: ಕ್ಯಾಂಡಲ್‌ ಲೈಟ್‌ ಡಿನ್ನರ್‌ ಪಾರ್ಟಿಗೆ ಸಾಥ್‌ ನೀಡುವ ಫ್ಯಾಷನ್‌ ವೇರ್ಸ್‌ಗೆ 5 ಐಡಿಯಾ - Vistara News

ಪ್ರೇಮಿಗಳ ದಿನಾಚರಣೆ

Valentines Day Party Dress: ಕ್ಯಾಂಡಲ್‌ ಲೈಟ್‌ ಡಿನ್ನರ್‌ ಪಾರ್ಟಿಗೆ ಸಾಥ್‌ ನೀಡುವ ಫ್ಯಾಷನ್‌ ವೇರ್ಸ್‌ಗೆ 5 ಐಡಿಯಾ

ವ್ಯಾಲೆಂಟೈನ್ಸ್‌ ಡೇಯಂದು ಸಂಗಾತಿಯೊಂದಿಗೆ ಕ್ಯಾಂಡಲ್‌ ಲೈಟ್‌ ಡಿನ್ನರ್‌ ಪಾರ್ಟಿಗೆ ಹೋಗುತ್ತಿದ್ದೀರಾ! ಯಾವುದಾದರೂ ಪಾರ್ಟಿ ಅಟೆಂಡ್‌ ಮಾಡುತ್ತಿದ್ದೀರಾ? ಹಾಗಾದಲ್ಲಿ ಇಲ್ಲಿವೆ 5 ಔಟ್‌ಫಿಟ್ಸ್‌ ಐಡಿಯಾ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.

VISTARANEWS.COM


on

Valentines Day Party Dress
ಚಿತ್ರಕೃಪೆ : ಪಿಕ್ಸೆಲ್‌
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಶೀಲಾ ಸಿ. ಶೆಟ್ಟಿ, ಬೆಂಗಳೂರು

ವ್ಯಾಲೆಂಟೈನ್ಸ್ ಡೇಯಂದು ನಿಮ್ಮ ಸಂಗಾತಿಯೊಂದಿಗೆ ಕ್ಯಾಂಡಲ್‌ ಲೈಟ್‌ ಡಿನ್ನರ್‌ ಪಾರ್ಟಿಗೆ ಹೋಗುತ್ತೀದ್ದೀರಾ! ಪ್ರೇಮಿಯೊಂದಿಗೆ ಪಾರ್ಟಿ ಅಟೆಂಡ್‌ ಮಾಡುತ್ತಿದ್ದೀರಾ! ಹಾಗಾದಲ್ಲಿ ಈ ಸಂದರ್ಭಕ್ಕೆ ಮ್ಯಾಚ್‌ ಆಗುವಂತೆ ನಿಮ್ಮ ಡ್ರೆಸ್‌ಕೋಡ್‌ ಹೀಗಿರಲಿ ಎನ್ನುತ್ತಿದ್ದಾರೆ ಸ್ಟೈಲಿಸ್ಟ್‌ಗಳು. ಇದಕ್ಕಾಗಿ ೫ ಸಿಂಪಲ್‌ ಔಟ್‌ಫಿಟ್‌ ಐಡಿಯಾಗಳನ್ನು ಹಂಚಿಕೊಂಡಿದ್ದಾರೆ.

Valentines Day Party Dress

1. ಥೀಮ್‌ಗೆ ತಕ್ಕ ಪಾರ್ಟಿವೇರ್ಸ್

ಯಾವ ಬಗೆಯ ಪಾರ್ಟಿಗೆ ಹೋಗುತ್ತಿದ್ದೀರಾ! ಅಲ್ಲಿನ ಥೀಮ್‌ ಯಾವುದು? ಯಾವ ವರ್ಗದ ಜನರು ಆಗಮಿಸುತ್ತಿದ್ದಾರೆ. ಇದಕ್ಕಾಗಿ ನಿಮಗೆ ಸೂಚಿಸಿರುವ ಔಟ್‌ಫಿಟ್ ಯಾವುದು? ಎಂಬುದರ ಬಗ್ಗೆ ಮೊದಲೇ ತಿಳಿದುಕೊಳ್ಳಿ. ಉದಾಹರಣೆಗೆ ರೆಟ್ರೋ ಲುಕ್‌, ೯೦ರ ದಶಕದ ಲುಕ್‌, ವೆಸ್ಟರ್ನ್ ಔಟ್‌ಫಿಟ್‌, ಸೆಮಿ ಎಥ್ನಿಕ್‌ ಸೇರಿದಂತೆ ನಾನಾ ಬಗೆಯ ಪಾರ್ಟಿ ಥೀಮ್‌ಗಳಿವೆ. ಅದಕ್ಕನುಸಾರವಾಗಿ ಉಡುಗೆ ಧರಿಸಿ. ಲೈಟಿಂಗ್‌ ಕಡಿಮೆ ಇರುವ ಪಾರ್ಟಿಯಾದಲ್ಲಿ ಶಿಮ್ಮರಿಂಗ್‌ ಔಟ್‌ಫಿಟ್‌ ಧರಿಸಿ.

Valentines Day Party Dress

2. ರೊಮ್ಯಾಂಟಿಕ್‌ ಡಿಸೈನರ್‌ವೇರ್ಸ್

ನೀವು ಹಾಗೂ ನಿಮ್ಮ ಸಂಗಾತಿ ಮಾತ್ರ ರೊಮ್ಯಾಂಟಿಕ್‌ ಡಿನ್ನರ್‌ ಪಾರ್ಟಿ ಮಾಡುತ್ತಿದ್ದಲ್ಲಿ, ನಿಮಗಿಷ್ಟವಾದ ಔಟ್‌ಫಿಟ್‌ಗಳನ್ನು ಆಯ್ಕೆ ಮಾಡಬಹುದು. ಉದಾಹರಣೆಗೆ ಇಬ್ಬರೂ ಪ್ಯಾಂಟ್‌ ಸೂಟ್‌ ಧರಿಸಬಹುದು. ಟ್ವಿನ್ನಿಂಗ್‌ ಮಾಡಬಹುದು. ಇಲ್ಲವಾದಲ್ಲಿ ಹುಡುಗರು ಕ್ಯಾಶುವಲ್‌ ಹುಡುಗಿಯರು ವೆಸ್ಟರ್ನ್ ಔಟ್‌ಫಿಟ್‌ ಇಲ್ಲವೇ ಸೆಮಿ ಫಾರ್ಮಲ್‌ ಗೌನ್‌ಗಳನ್ನು ಧರಿಸಬಹುದು.

3. ಕಲರ್‌ಫುಲ್‌ ಡ್ರೆಸ್‌

ಪುರುಷರಾಗಲಿ ಅಥವಾ ಮಹಿಳೆಯರಾಗಲಿ ತಾವು ಧರಿಸುವ ಉಡುಪಿನ ಬಣ್ಣದ ಬಗ್ಗೆ ಅರಿವಿರಲಿ. ಒಂದೊಂದು ಬಣ್ಣದ ಔಟ್‌ಫಿಟ್‌ಗೂ ಅರ್ಥವಿರುವುದರಿಂದ ಅರಿತು ನಿಮ್ಮ ಸ್ಟೇಟಸ್‌ಗೆ ಮ್ಯಾಚ್‌ ಆಗುವಂತಹ ಡಿಸೈನರ್‌ ಔಟ್‌ಫಿಟ್‌ ಧರಿಸಿ. ಪ್ರಪೋಸ್‌ ಮಾಡುತ್ತಿದ್ದೀರಾ? ಮಾಡಿದ್ದೀರಾ, ರೆಡಿಯಿದ್ದೀರಾ?ಈಗಾಗಲೇ ಎಂಗೇಜ್‌ ಆಗಿದ್ದೀರಾ?ಮೊದಲು ಈ ಬಗ್ಗೆ ಯೋಚಿಸಿ, ಅದಕ್ಕೆ ಮ್ಯಾಚ್‌ ಆಗುವಂತಹ ಕಲರ್‌ನ ಔಟ್‌ಫಿಟ್‌ ಆಯ್ಕೆ ಮಾಡಿ.

4. ಕ್ಯಾಂಡಲ್‌ ಲೈಟ್‌ ಡಿನ್ನರ್‌ಗೆ ಕಪಲ್‌ ಡ್ರೆಸ್‌

ಈ ಸನ್ನಿವೇಶಕ್ಕೆ ಆದಷ್ಟೂ ಮನಮೋಹಕ ಉಡುಪನ್ನು ಸೆಲೆಕ್ಟ್‌ ಮಾಡಿ. ನಿಮ್ಮ ಸಂಗಾತಿಗೆ ಇಷ್ಟವಾಗುವಂತಿರಬೇಕು. ಇದೀಗ ಟ್ರೆಂಡ್‌ನಲ್ಲಿರುವ ಲಾಂಗ್‌ ಸ್ಕಿಟ್‌ ಗೌನ್‌, ಲಾಂಗ್‌ ಫ್ರಾಕ್‌, ಅಷ್ಟೇಕೆ? ಸೆಮಿ ಎಥ್ನಿಕ್‌ ಲುಕ್‌ ನೀಡುವಂತಹ ಔಟ್‌ಫಿಟ್ಸ್‌, ಇಂಡೋ-ವೆಸ್ಟರ್ನ್ ಕಾಕ್‌ಟೈಲ್‌ ಸೀರೆಯನ್ನೂ ಧರಿಸಬಹುದು. ಪುರುಷರಾದಲ್ಲಿ ಪ್ಯಾಂಟ್‌ ಸೂಟ್‌, ಬ್ಲೇಝರ್ ಅಥವಾ ಸೆಮಿ ಕ್ಯಾಶುವಲ್‌ ಔಟ್‌ಫಿಟ್‌ಗೆ ಮೊರೆ ಹೋಗಬಹುದು. ಅಲ್ಲದೇ ಕಪಲ್‌ ಡ್ರೆಸ್‌ನಲ್ಲಿ ಕಾಣಿಸಿಕೊಳ್ಳಬಹುದು.

Valentines Day Party Dress

5. ಕ್ಲಾಸಿಕ್‌ ಲುಕ್‌ ನೀಡುವ ಔಟ್‌ಫಿಟ್ಸ್

ಕ್ಲಾಸಿಕ್‌ ಲುಕ್‌ ನೀಡುವಂತಹ ಔಟ್‌ಫಿಟ್‌ಗಳಲ್ಲಿ ಫಂಕಿ ಲುಕ್‌ಗೆ ಜಾಗವಿಲ್ಲ. ಹಾಗಾಗಿ ತೋರಿಕೆಗಿಂತ ಹೆಚ್ಚಾಗಿ ಪುರುಷರಿಗೆ ಡಿಸೆಂಟ್‌ ಲುಕ್ ನೀಡುವ ಸೆಮಿ ಫಾರ್ಮಲ್‌ ಪ್ಯಾಂಟ್‌ ಹಾಗೂ ಸ್ಲಿಮ್‌ ಫಿಟ್‌ ಇನ್ಶರ್ಟ್ ಮಾಡಿದ ಶರ್ಟ್ ಎಲಿಗೆಂಟ್‌ ಲುಕ್‌ ನೀಡುತ್ತದೆ. ಇನ್ನು ಯುವತಿಯರಿಗೆ ಆದಷ್ಟೂ ಇಂಡೋ –ವೆಸ್ಟರ್ನ್ ವೆಸ್ಟರ್ನ್ ಸ್ಕಟ್ರ್ಸ್, ಮ್ಯಾಕ್ಸಿ ಹಾಗೂ ಲಾಂಗ್‌ ಸ್ಲಿಟ್‌ ಗೌನ್‌ಗಳು ಚೆನ್ನಾಗಿ ಕಾಣುತ್ತವೆ.

Valentines Day Party Dress

ಪಾರ್ಟಿ ಡ್ರೆಸ್‌ಕೋಡ್‌ಗೆ ಸಿಂಪಲ್‌ ಮೇಕೋವರ್‌ ಟಿಪ್ಸ್‌

ಡ್ರೆಸ್‌ಕೋಡ್‌ಗೆ ತಕ್ಕಂತೆ ಹೇರ್‌ಸ್ಟೈಲ್‌ ಕೂಡ ಟ್ರೆಂಡಿಯಾಗಿರಬೇಕು.

ಟ್ರೆಡಿಷನಲ್‌ ಹಾಗೂ ವೆಸ್ಟರ್ನ್ವೇರ್‌ ಮಿಕ್ಸ್‌ ಮಾಡಬೇಡಿ.

ಪಾರ್ಟಿ ರೂಲ್ಸ್ ಬ್ರೇಕ್‌ ಮಾಡುವಂತಹ ಔಟ್‌ಫಿಟ್ಸ್ ಆಯ್ಕೆ ಬೇಡ.

ಮಿನಿಮಲ್‌ ಜ್ಯುವೆಲರಿ ಧರಿಸಿ.

(ಲೇಖಕಿ : ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Valentines Day Fashion: ವ್ಯಾಲೆಂಟೈನ್ಸ್‌ ಡೇ ಫ್ಯಾಷನ್‌ಗೆ ಲಗ್ಗೆ ಇಟ್ಟ ಹೃದಯಾಕಾರದ ಆಕ್ಸೆಸರೀಸ್‌

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಲೈಫ್‌ಸ್ಟೈಲ್

Valentine’s Day 2024 : ಫೆಬ್ರುವರಿ 14 ರಂದೇ ಪ್ರೇಮಿಗಳ ದಿನ ಆಚರಿಸುವುದು ಯಾಕೆ? ಅದರ ಮಹತ್ವವೇನು?

Valentine’s Day : ಒಂದು ವಾರದ ಕಾಲ ನಡೆಯುವ ಪ್ರೇಮಿಗಳ ದಿನದ ಬಗ್ಗೆ ಹಲವಾರು ದಂತಕತೆಗಳಿವೆ. ಒಬ್ಬೊಬ್ಬರು ಒಂದೊಂದು ಕತೆಯನ್ನು ಹೇಳುತ್ತಾರೆ.

VISTARANEWS.COM


on

Valentine's Day
Koo

ಬೆಂಗಳೂರು: ವ್ಯಾಲೆಂಟೈನ್ಸ್ ಡೇ ಅಥವಾ ಸೇಂಟ್ ವ್ಯಾಲೆಂಟೈನ್ ಹಬ್ಬ ಎಂದೂ ಕರೆಯಲ್ಪಡುವ ಪ್ರೇಮಿಗಳ ದಿನವನ್ನು ಪ್ರತಿವರ್ಷ ಫೆಬ್ರವರಿ 14ರಂದು (Valentine’s Day 2024 ) ಆಚರಿಸಲಾಗುತ್ತದೆ. ಆದರೆ ಪ್ರೀತಿಯ ಹಬ್ಬ ಫೆಬ್ರವರಿ 7ಕ್ಕೆ ಅಂದರೆ ಒಂದು ವಾರ ಮುಂಚಿತವಾಗಿ ಪ್ರಾರಂಭವಾಗುತ್ತವೆ. ಈ ಎಲ್ಲ ದಿನಗಳಂದು ಪ್ರೇಮಿಗಳು ಶುಭಾಶಯ ಗ್ರೀಟಿಂಗ್ಸ್​​ ಕಾರ್ಡ್ ಗಳು (Greeting Cards) ಮತ್ತು ಗುಲಾಬಿ ಹೂವುಗಳನ್ನು (Roses) ಪರಸ್ಪರ ಹಂಚಿಕೊಳ್ಳುತ್ತಾರೆ. ಅಲ್ಲದೆ, ಪರಸ್ಪರ ಪ್ರೀತಿಯನ್ನು ಅಭಿವ್ಯಕ್ತಿಸಲು ವಿಶೇಷ ಸಮಯವನ್ನು ಮೀಸಲಿಡುತ್ತಾರೆ.

ಪ್ರಸ್ತಕ ವರ್ಷ ಪ್ರೇಮಿಗಳ ದಿನ ಫೆಬ್ರವರಿ 14ರ ಪ್ರೇಮಿಗಳ ದಿನ ಬುಧವಾರದಂದು ಬರುತ್ತದೆ. ಆದಾಗ್ಯೂ, ಪ್ರೇಮಿಗಳ ದಿನವನ್ನು ಕೇವಲ ಒಂದು ದಿನಕ್ಕೆ ಸೀಮಿತವಾಗಿಲ್ಲ. “ವ್ಯಾಲೆಂಟೈನ್ಸ್ ಡೇ ವೀಕ್” (Valentine’s Day week) ಎಂದು ಇಡೀ ವಾರದವರೆಗೆ ಆಚರಿಸಿಕೊಂಡು ಬರಲಾಗುತ್ತಿದೆ. ಈ ವರ್ಷ, “ಲವ್ ವೀಕ್” ಅಥವಾ ” ರೊಮ್ಯಾನ್ಸ್​ ವೀಕ್​” ಎಂದೂ ಕರೆಯಲ್ಪಡುವ ವ್ಯಾಲೆಂಟೈನ್ಸ್ ವೀಕ್ ಫೆಬ್ರವರಿ 7ರಂದು ಪ್ರಾರಂಭಗೊಂಡಿದೆ. ಇದನ್ನು ಫೆಬ್ರವರಿ 14 ರ ಕೊನೆಯ ವ್ಯಾಲೆಂಟೈನ್ ಡೇ ತನಕ ಆಚರಿಸಲಾಗುತ್ತಿದೆ. ಅದಕ್ಕೂ ಮೊದಲು ರೋಸ್ ಡೇ, ಪ್ರಪೋಸ್ ಡೇ, ಚಾಕೊಲೇಟ್ ಡೇ, ಟೆಡ್ಡಿ ಡೇ, ಪ್ರಾಮಿಸ್ ಡೇ, ಹಗ್ ಡೇ ಮತ್ತು ಕಿಸ್ ಡೇ ಅನ್ನು ಆಚರಿಸಿದ್ದಾರೆ.

ಫೆಬ್ರವರಿ 14ರಂದೇ ಪ್ರೇಮಿಗಳ ದಿನವನ್ನು ಏಕೆ ಆಚರಿಸಲಾಗುತ್ತದೆ?

ಪ್ರತಿ ವರ್ಷ ಪ್ರೇಮಿಗಳ ದಿನವನ್ನು ಬಹಳ ಪ್ರೀತಿಯಿಂದ ಆಚರಿಸಲಾಗುತ್ತದೆ. ಈ ವಿಶೇಷ ದಿನವು ವ್ಯಕ್ತಿಯಿಂದ ವ್ಯಕ್ತಿಗೆ ಹಂಚಿಕೊಳ್ಳುವ ಅತ್ಯಂತ ಸುಂದರವಾದ ಭಾವನೆಯಾದ ಪ್ರೀತಿಯನ್ನು ವ್ಯಕ್ತಪಡಿಸಲು ಮತ್ತು ಅನುಭವಿಸಲು ಮೀಸಲಾಗಿದೆ. ಪ್ರೀತಿಯನ್ನು ಹಂಚಿಕೊಳ್ಳುವುದಕ್ಕೆ ಇದೇ ದಿನ ಯಾಕೆ ಎಂಬುದು ಎಲ್ಲರ ಪ್ರಶ್ನೆ. ಆದರೆ ಅದಕ್ಕೊಂದು ಹಿನ್ನೆಲೆಯಿದೆ. ಆದರೆ, ಈ ಬಗ್ಗೆ ಹಲವಾರು ಕತೆಗಳನ್ನು ಹೇಳಲಾಗುತ್ತದೆ.

ಕ್ರಿ.ಶ. 14, 270 ರಂದು ನಿಧನರಾದ ಮೂರನೇ ಶತಮಾನದ ರೋಮನ್ ಕ್ಯಾಥೊಲಿಕ್ ಪಾದ್ರಿ ಸೇಂಟ್ ವ್ಯಾಲೆಂಟೈನ್ ಅವರ ಗೌರವಾರ್ಥವಾಗಿ ಪ್ರೇಮಿಗಳ ದಿನವನ್ನು ಆಚರಿಸಲಾಗುತ್ತದೆ ಎಂದು ನಂಬಲಾಗಿದೆ. ಇನ್ನೊಂದು ನಂಬಿಕೆ ಪ್ರಕಾರ ರೋಮ್​ನಲ್ಲಿ ಲುಪರ್ಕಾಲಿಯಾ ಎಂಬ ಆಚರಣೆಯೊಂದಿತ್ತು. ಇಲ್ಲಿ ಪುರುಷ ಮತ್ತು ಮಹಿಳೆಯನ್ನು ಲಾಟರಿ ಎತ್ತುವ ಮೂಲಕ ಜೋಡಿ ಮಾಡಲಾಗುತ್ತಿತ್ತು. ಇವುಗಳಲ್ಲಿ ಕೆಲವು ಮದುವೆಯಲ್ಲಿ ಕೊನೆಗೊಳ್ಳುತ್ತಿತ್ತು. ಪೋಪ್‌ ಗೆಲಾಸಿಯಸ್‌ 1 ಈ ಹಬ್ಬವನ್ನು ವ್ಯಾಲೆಂಟೈನ್ಸ್‌ ಆಗಿ ಬದಲಿಸಿದರು ಎಂದು ಹೇಳಲಾಗುತ್ತದೆ. ಈ ಕಥೆಯ ಪ್ರಕಾರ 14ನೇ ಶತಮಾನದ ಅವಧಿಯಲ್ಲಿ ವ್ಯಾಲೆಂಟೈನ್ಸ್‌ ಡೇ ಆಚರಣೆ ಶುರುವಾಯಿತು.

ಇನ್ನೊಂದು ಕತೆಯ ಪ್ರಕಾರ ರೋಮ್‌ ದೇಶದ ದೊರೆ ಕ್ಲಾಡಿಯಸ್ II ತನ್ನ ಸೈನಿಕರು ಯಾರೂ ಮದುವೆಯಾಗಬಾರದು ಎಂಬ ಕಟ್ಟುನಿಟ್ಟಿನ ಕ್ರಮ ಜಾರಿಗೊಳಿಸಿದ್ದ. ಅಂತಹ ಸಮಯದಲ್ಲಿ ರಾಜನನ್ನೇ ಎದುರು ಹಾಕಿಕೊಂಡ ಸೇಂಟ್‌ ವ್ಯಾಲೆಂಟೈನ್‌ ಗುಟ್ಟಾಗಿ ಸೈನಿಕರಿಗೆ ಮದುವೆ ಮಾಡಿಸುತ್ತಿದ್ದರು. ಸೈನಿಕರ ಬದುಕಿನಲ್ಲೂ ಪ್ರೇಮ ಮೂಡುವಂತೆ ಮಾಡುತ್ತಿದ್ದರು. ಇದನ್ನು ತಿಳಿದ ರಾಜ ಕ್ಲಾಡಿಯಸ್‌ ವಾಲೈಂಟೈನ್‌ ಅವರನ್ನು ಫೆ. 14 ರಂದು ಗಲ್ಲಿಗೇರಿಸುತ್ತಾನೆ. ಆ ದಿನದಿಂದ ಪ್ರೇಮಿಗಳ ದಿನ ಆಚರಣೆಗೆ ಬಂತು ಎಂದು ಹೇಳಲಾಗುತ್ತದೆ.

ಇದನ್ನೂ ಓದಿ : Valentines Day: ಕೇಳಿ ಪ್ರೇಮಿಗಳೇ, ಇಲ್ಲಿದೆ ಗುಡ್‌ನ್ಯೂಸ್! ಈ ವಾರ ಪ್ರತಿದಿನವೂ ಪ್ರೇಮಿಗಳ ಹಬ್ಬವೇ!

ವ್ಯಾಲೆಂಟೈನ್ಸ್‌ ಡೇ ಎಂಬುದು ಪ್ರೀತಿಯ ದೇವತೆ ಕ್ಯುಪಿಡ್‌ನಿಂದಲೂ ಬಂದಿದೆ ಎನ್ನಲಾಗುತ್ತದೆ. ರೋಮನ್‌ ಪುರಾಣದ ಪ್ರಕಾರ ಕ್ಯುಪಿಡ್‌ ಶುಕ್ರನ ಮಗ. ಇವನು ಪ್ರೀತಿ ಹಾಗೂ ಸೌಂದರ್ಯದ ದೇವತೆ . ಕ್ಯುಪಿಡ್‌ ಬಿಡುವ ಬಾಣ ಹೃದಯಕ್ಕೆ ನಾಟಿದರೆ ಪ್ರೀತಿ ಬಿತ್ತುತ್ತದೆಹೀಗಾಗಿ ಈ ದೇವತೆಯ ಹೆಸರಿನಲ್ಲಿ ವ್ಯಾಲೆಂಟೈನ್ ಡೇ ಆಚರಿಸಲಾಗುತ್ತದೆ.

ಟೀಕೆಯೂ ಎದುರಾಗುತ್ತದೆ

ಕೃಷಿಯ ದೇವರಾದ ಫೌನಸ್, ರೋಮುಲಸ್ ಮತ್ತು ರೋಮ್​​ನ ಸ್ಥಾಪಕರಾದ ರೆಮಸ್​​ಗೆ ಸಮರ್ಪಿತವಾದ ರೋಮನ್ ಹಬ್ಬವಾದ ಲುಪರ್ಕಾಲಿಯಾ ರಜಾದಿನವನ್ನು ‘ಕ್ರಿಶ್ಚಿಯನೀಕರಣ’ ಮಾಡುವ ಚರ್ಚ್​​ನ ಪ್ರಯತ್ನವಾಗಿ ಈ ಆಚರಣೆ ಹುಟ್ಟಿಕೊಂಡವು ಎಂಬ ವಾದವೂ ಇದೆ. ಇದು ಪಾಶ್ಚಿಮಾತ್ಯ ಸಂಸ್ಕೃತಿ ಎಂದೂ ಆರೋಪಿಸುತ್ತಾರೆ.

ಪ್ರೇಮಿಗಳ ದಿನ ಯುವ ಜೋಡಿಗೆ ಮಾತ್ರ ಸೀಮಿತವೇ?

ಜನಪ್ರಿಯ ಸಂಸ್ಕೃತಿಯು ಪ್ರೇಮಿಗಳ ದಿನವು ಪ್ರೀತಿಯಲ್ಲಿ ಬಿದ್ದಿರುವ ಯುವ ಜೋಡಿಗೆ ಮಾತ್ರ ಎಂದು ನಂಬುವಂತೆ ಮಾಡುತ್ತದೆ. ಇದು ಪ್ರೀತಿಯ ದಿನ ಮತ್ತು ಆ ಪ್ರೀತಿ ಯಾರೊಂದಿಗ ಇದ್ದರೂ ವ್ಯಕ್ತಪಡಿಸಬಹುದು. ಎಲ್ಲಾ ರೀತಿಯ ಪ್ರೀತಿಯನ್ನು ಆಚರಿಸಬೇಕು; ಅದು ನಿಮ್ಮ ಹೆತ್ತವರು, ನಿಮ್ಮ ಒಡಹುಟ್ಟಿದವರು ಅಥವಾ ನಿಮ್ಮ ಮಕ್ಕಳು ಯಾರೂ ಇರಬಹುದು ಎಂದು ಹೇಳಲಾಗುತ್ತದೆ.

ಪ್ರೇಮಿಗಳ ವಾರದ ವಿವರ ಇಲ್ಲಿದೆ

ದಿನ 1: ರೋಸ್ ಡೇ, ಫೆಬ್ರವರಿ 7
ರೋಸ್ ಡೇ ವ್ಯಾಲೆಂಟೈನ್ಸ್ ವೀಕ್ ನ ಮೊದಲ ದಿನವಾಗಿದ್ದು ಫೆಬ್ರವರಿ 7ರಂದು ಆಚರಿಸಲಾಗುತ್ತದೆ. ಈ ದಿನ ಇಬ್ಬರು ಪ್ರೇಮಿಗಳು ಪರಸ್ಪರ ಗುಲಾಬಿಗಳನ್ನು ನೀಡುವ ಮೂಲಕ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ.

ದಿನ 2: ಪ್ರಪೋಸ್ ಡೇ, ಫೆಬ್ರವರಿ 8
ಪ್ರಪೋಸ್ ಡೇ ವ್ಯಾಲೆಂಟೈನ್ಸ್ ವೀಕ್ ನ ಎರಡನೇ ದಿನವಾಗಿದೆ. ಇದನ್ನು ಅತ್ಯಂತ ವಿಶೇಷ ದಿನವೆಂದು ಪರಿಗಣಿಸಲಾಗಿದೆ. ಈ ದಿನ ಪ್ರೇಮಿಗಳು ಯಾವುದೇ ಹಿಂಜರಿಕೆಯಿಲ್ಲದೆ ತಮ್ಮ ಪ್ರೀತಿಯನ್ನು ನಿವೇದಿಸುತ್ತಾರೆ.

ದಿನ 3: ಚಾಕೊಲೇಟ್ ಡೇ, ಫೆಬ್ರವರಿ 9
ಚಾಕೊಲೇಟ್ ಡೇ ವ್ಯಾಲೆಂಟೈನ್ಸ್ ವೀಕ್ ನ ಮೂರನೇ ದಿನ. ಪ್ರೀತಿ ನಿವೇದನೆಯಲ್ಲಿ ಯಶಸ್ವಿ ಆದರೂ ಆಗದಿದ್ದರೂ ಪ್ರೇಮಿಗಳು ಚಾಕೊಲೆಟ್ ಪೆಟ್ಟಿಯೊಂದಿಗೆ ತಮ್ಮ ಪ್ರೀತಿಯನ್ನು ಅಭಿವ್ಯಕ್ತಿಸುತ್ತಾರೆ.

ದಿನ 4: ಟೆಡ್ಡಿ ಡೇ, ಫೆಬ್ರವರಿ 10
ಟೆಡ್ಡಿ ಡೇ ವ್ಯಾಲೆಂಟೈನ್ಸ್ ಡೇ ವಾರದ ನಾಲ್ಕನೇ ದಿನ; ಇದನ್ನು ಫೆಬ್ರವರಿ 10ರಂದು ಆಚರಿಸಲಾಗುತ್ತದೆ. ಪ್ರಿಯತಮ ಟೆಡ್ಡಿಯನ್ನು (ಬೊಂಬೆಯನ್ನು) ಪ್ರಿಯತಮೆಗೆ ನೀಡುವ ದಿನ. ಅದನ್ನು ಆಕೆ ಜೀವನಪರ್ಯಂತ ಇಟ್ಟುಕೊಳ್ಳುವಂತೆ ಕೇಳಿಕೊಳ್ಳಬಹುದು.

ದಿನ 5: ಪ್ರಾಮಿಸ್ ಡೇ, ಫೆಬ್ರವರಿ 11
ಫೆಬ್ರವರಿ 11ರಂದು, ಪ್ರೇಮಿಗಳು ಕಷ್ಟ ಮತ್ತು ಸುಖದ ಕಾಲದಲ್ಲಿ ಜತೆಯಾಗಿಯೇ ಇರುತ್ತೇವೆ ಎಂಬುದನ್ನು ಪರಸ್ಪರ ಪ್ರಮಾಣ ಮಾಡುತ್ತಾರೆ.

ದಿನ 6: ಅಪ್ಪುಗೆ ದಿನ, ಫೆಬ್ರವರಿ 12
ವ್ಯಾಲೆಂಟೈನ್ಸ್ ವೀಕ್ ನ ಆರನೇ ದಿನ ಅಪ್ಪುಗೆ ದಿನ. ಈ ದಿನ, ಜನರು ತಮ್ಮ ಪ್ರೀತಿಪಾತ್ರರನ್ನು ತಬ್ಬಿಕೊಳ್ಳುವ ಮೂಲಕ ಪ್ರೀತಿ ವ್ಯಕ್ತಪಡಿಸುತ್ತಾರೆ. ಪ್ರೀತಿಸುವವರನ್ನು ತಬ್ಬಿಕೊಳ್ಳುವುದು ತುಂಬಾ ಸಂತೋಷದ ಕ್ಷಣವೆಂದು ಹೇಳಲಾಗುತ್ತದೆ.

ದಿನ 7: ಕಿಸ್ ಡೇ, ಫೆಬ್ರವರಿ 13
ವ್ಯಾಲೆಂಟೈನ್ಸ್ ವೀಕ್ ನ ಏಳನೇ ದಿನವನ್ನು “ಕಿಸ್ ಡೇ” ಎಂದು ಆಚರಿಸಲಾಗುತ್ತದೆ. ಕಿಸ್ ಡೇ ದಿನ ಪ್ರೀಮಿಗಳು ಪರಸ್ಪರ ಚುಂಬಿಸುತ್ತಾರೆ.

Continue Reading

ಸಿನಿಮಾ

Arshad Warsi: 25 ವರ್ಷದ ಬಳಿಕ ಮತ್ತೆ ಮದುವೆಯಾದ ಅರ್ಷದ್ ವಾರ್ಸಿ-ಮಾರಿಯಾ ದಂಪತಿ!

Arshad Warsi: ಅರ್ಷದ್ ವಾರ್ಸಿ ಮತ್ತು ಮಾರಿಯಾ ಅವರು 1999 ಫೆಬ್ರವರಿ 14, ಪ್ರೇಮಿಗಳ ದಿನದಂದು ವಿವಾಹವಾಗಿದ್ದರು.

VISTARANEWS.COM


on

Arshad Warsi-Maria couple registered marriage after 25 years!
Koo

ಮುಂಬೈ: 25 ವರ್ಷಗಳ ದಾಂಪತ್ಯವನ್ನು ಪೂರೈಸಿರುವ ಬಾಲಿವುಡ್ ನಟ ಅರ್ಷದ್ ವಾರ್ಸಿ (Arshad Warsi) ಅವರು ತಮ್ಮ ಪತ್ನಿ ಮಾರಿಯಾ ಗೊರೆಟ್ಟಿ (Maria Goretti) ಅವರನ್ನು ಫೆ.14, ವ್ಯಾಲೆಂಟೈನ್ಸ್ (Valentine’s Day) ಮತ್ತೊಮ್ಮೆ ವಿವಾಹವಾಗಲಿದ್ದಾರೆ. ಅರ್ಷದ್ ವಾರ್ಸಿ ಮಾರಿಯಾ ಅವರು 1999 ಫೆ.14ರಂದು ಮದುವೆಯಾಗಿದ್ದರು. ಆದರೆ, ಆಗ ವಿವಾಹವನ್ನು ನೋಂದಣಿ ಮಾಡಿರಲಿಲ್ಲ. ಹಾಗಾಗಿ, ಅವರು ವಿವಾಹವನ್ನು 2024ರ ಜನವರಿ 23ರಂದು ನೋಂದಣಿ ಮಾಡಿಸಿದ್ದಾರೆ(Registered Marriage).

ಮಾಧ್ಯಮಗಳಿಗೆ ನೀಡಿದ ಸಂದರ್ಶನದಲ್ಲಿ ಅರ್ಷದ್ ಅವರು, ಮದುವೆಯನ್ನು ನೋಂದಣಿ ಮಾಡಿಸಬೇಕು ಎಂಬ ವಿಚಾರ ನಮ್ಮ ಮನಸ್ಸಿಗೆ ಬರಲೇ ಇಲ್ಲ. ಅದು ನಿಜವಾಗಿ ಮಹತ್ವದ್ದು ಅನಿಸಲಿಲ್ಲ. ಆದರೆ, ಬಳಿಕ ವಿವಾಹವನ್ನು ನೋಂದಣಿ ಮಾಡುವುದರ ಮಹತ್ವ ತಿಳಿಯಿತು. ಒಬ್ಬರ ಮರಣದ ನಂತರ ವಿಶೇಷವಾಗಿ ಆಸ್ತಿ ವ್ಯವಹಾರಗಳನ್ನು ನಿರ್ವಹಿಸುವಾಗ ಮದುವೆ ನೋಂದಣಿ ಬೇಕಾಗುತ್ತದೆ ಎಂದು ಹೇಳಿದರು.

ಅರ್ಷದ್ ವಾರ್ಸಿ ಅವರು ತಮ್ಮ ಮದುವೆ ದಿನಾಂಕವನ್ನು ಹಂಚಿಕೊಳ್ಳಲು ತುಸು ಮಜುಗಪಟ್ಟಿರುವ ಹಾಗಿತ್ತು. ಕೆಲಸದ ಒತ್ತಡದ ನಡುವೆ ಸರಿಯಾದ ದಿನಾಂಕಗಳನ್ನು ಹೊಂದಿಸಲು ಸಾಧ್ಯವಾಗಲಿಲ್ಲ. ಹಾಗಾಗಿ, ಫೆಬ್ರವರಿ 14ರಂದೇ ಮದುವೆಗೆ ಆಯ್ಕೆ ಮಾಡಿಕೊಂಡರು. ಹಾಗಾಗಿ, ಪ್ರೇಮಿಗಳ ದಿನ ಬಂದಾಗಲೆಲ್ಲ, ತಮ್ಮ ಮದುವೆ ಕೂಡ ಅದೇ ದಿನ ನಡೆದಿದ್ದು ಎಂದು ವಾರ್ಸಿ ನೆನಪಿಸಿಕೊಳ್ಳುತ್ತಾರೆ. ”ನನ್ನ ಪಾಲಿಗೆ ಪ್ರೇಮಿಗಳ ದಿನ ಭಯಾನಕವಾಗಿದೆ, ಯಾಕೆಂದರೆ, ಅದೇ ದಿನ ಮದುವೆಯಾಗಿದ್ದೇನೆ” ಎಂದು ವಾರ್ಸಿ ತಮಾಷೆಯಾಗಿ ಹೇಳಿದರು.

ಮಾರಿಯಾ ಹಾಗೂ ಅರ್ಷದ್ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಮಗನ ಹೆಸರು ಝೀಕ್ ಮತ್ತು ಪುತ್ರಿಯ ಹೆಸರು ಝೀನ್. ಅರ್ಷದ್ ವಾರ್ಸಿ ಅವರು ಅಸುರ್ 2ರಲ್ಲಿ ಕಾಣಿಸಿಕೊಂಡಿದ್ದಾರೆ. ಮಲ್ಟಿ ಸ್ಟಾರರ್ ವೆಲ್ ಕಮ್ ಟು ಜಂಗಲ್ ಚಿತ್ರದಲ್ಲಿ ನಟಿಸಿದ್ದು, ಶೀಘ್ರವೇ ಬಿಡುಗಡೆಯಾಗಲಿದೆ.

ಈ ಸುದ್ದಿಯನ್ನೂ ಓದಿ: Arshad Warsi: ಯೂಟ್ಯೂಬ್ ಮೂಲಕ ತಪ್ಪು ಮಾಹಿತಿ ನೀಡಿ ಷೇರು ಮಾರುಕಟ್ಟೆಯಲ್ಲಿ ವಂಚನೆ; ಅರ್ಷದ್‌ ವಾರ್ಸಿ ದಂಪತಿಗೆ ದಂಡ

Continue Reading

ದೇಶ

Valentine’s Day: ಪ್ರೇಮಿಗಳ ದಿನಕ್ಕೆ ರಿಲಯನ್ಸ್ ಜ್ಯುವೆಲ್ಸ್‌‌ನ ಹೊಸ ಸಂಗ್ರಹ

Valentine’s Day: ವೇಗವಾಗಿ ಬೆಳವಣಿಗೆ ಕಾಣುತ್ತಿರುವ ಜ್ಯುವೆಲರಿ ಬ್ರ್ಯಾಂಡ್ ಆಗಿರುವ ರಿಲಯನ್ಸ್ ಜ್ಯುವೆಲ್ಸ್ ಪ್ರೇಮಿಗಳ ದಿನಕ್ಕೆ ಹೊಸ ಕಲೆಕ್ಷನ್ ಲಾಂಚ್ ಮಾಡಿದೆ.

VISTARANEWS.COM


on

New collection of Reliance Jewels for Valentines Day
Koo

ಮುಂಬೈ: ಅತ್ಯಂತ ವೇಗವಾಗಿ ಬೆಳವಣಿಗೆ ಕಾಣುತ್ತಿರುವ ಮತ್ತು ಭಾರತದ ವಿಶ್ವಾಸಾರ್ಹ ಜ್ಯುವೆಲರಿ ಬ್ರ್ಯಾಂಡ್ (Jewelery Brand) ಆಗಿರುವ ರಿಲಯನ್ಸ್ ಜ್ಯುವೆಲ್ಸ್(reliance jewels), ಪ್ರೀತಿ ಮತ್ತು ಒಡನಾಟದ ಪ್ರತೀಕವಾದ ಪ್ರೇಮಿಗಳ ದಿನಕ್ಕೆಂದು ವಿಶೇಷವಾದ ‘ವ್ಯಾಲೆಂಟೈನ್ಸ್ ಡೇ ಜ್ಯುವೆಲರಿ ಕಲೆಕ್ಷನ್'(Valentine’s Day) ಬಿಡುಗಡೆ ಮಾಡಿದೆ. ಈ ಸಂಗ್ರಹವು ಸೊಗಸಾದ ಕೆತ್ತನೆಯ ಉಂಗುರಗಳು, ಜೋಡಿ ಬ್ಯಾಂಡ್‌ಗಳು ಮತ್ತು 14 ಕ್ಯಾರಟ್ (ಕೆಟಿ) ಹಳದಿ ಚಿನ್ನ, ಗುಲಾಬಿ ಚಿನ್ನ ಮತ್ತು ವಜ್ರಗಳಿಂದ ಮಾಡಿದ ಪೆಂಡೆಂಟ್‌ಗಳನ್ನು ಒಳಗೊಂಡಿದೆ.

ದೈನಂದಿನದ ಉಡುಗೆಗಳಿಗಾಗಿ ವಿನ್ಯಾಸಗೊಳಿಸಲಾದ ಈ ಸಂಗ್ರಹವು ದಂಪತಿ ನಡುವಿನ ಪ್ರೀತಿಯನ್ನು ಸದಾ ನೆನಪಿನಲ್ಲಿ ಇರುವಂತೆ ಮಾಡುತ್ತದೆ. ಈ ಸಂಗ್ರಹದಲ್ಲಿರುವ ರಿಲಯನ್ಸ್ ಜುವೆಲ್ಸ್‌ನ ವಿಶಿಷ್ಟ ವಿನ್ಯಾಸಗಳು ದೈನಂದಿನ ನೋಟವನ್ನು ಹೆಚ್ಚಿಸುತ್ತದೆ.

ವ್ಯಾಲೆಂಟೈನ್ಸ್ ಡೇ ಸಂಗ್ರಹವು ಮಹಿಳೆಯರು ಸಂಬಂಧಗಳಲ್ಲಿ ತರುವ ಮೆರಗು ಮತ್ತು ಸೌಂದರ್ಯದ ಚೈತನ್ಯವನ್ನು ಸೆರೆಹಿಡಿಯಲು ಮತ್ತು ಸಂಭ್ರಮಿಸಲು ಪೂರಕವಾಗಿವೆ. ಅತ್ಯಾಧುನಿಕ ಮತ್ತು ಸಂಕೀರ್ಣವಾಗಿ ವಿನ್ಯಾಸಗೊಳಿಸಲಾದ ಸಂಗ್ರಹವು ಮಹಿಳೆಯರು ಸಂಬಂಧದಲ್ಲಿ ತುಂಬುವ ಶಕ್ತಿಯನ್ನು ಪ್ರತಿಬಿಂಬಿಸುತ್ತದೆ. ಇದು ರಿಲಯನ್ಸ್ ಜ್ಯುವೆಲ್ಸ್‌ನ ಹೊಸ ಅಭಿಯಾನ #MyStrongerHalf ಗೆ ಪೂರಕವಾಗಿದೆ. ಈ ಅಭಿಯಾನವು ಮಹಿಳೆಯರು ಜೀವನದ ಏರಿಳಿತಗಳಲ್ಲಿ ತಮ್ಮ ಸಂಗಾತಿಯನ್ನು ಪ್ರೋತ್ಸಾಹಿಸುವ ಮತ್ತು ಬೆಂಬಲಿಸುವ ಕ್ಷಣಗಳನ್ನು ಉತ್ತೇಜಿಸುತ್ತದೆ.

ಪ್ರೇಮಿಗಳ ದಿನವು ದೀರ್ಘಕಾಲದಿಂದ ನಿಜವಾದ ಪ್ರೀತಿಯ ಸಾರವನ್ನು ಸಂಕೇತಿಸುತ್ತದೆ. ದಂಪತಿಗಳ ನಡುವಿನ ಪರಸ್ಪರ ಪ್ರೀತಿ ಮತ್ತು ಮೆಚ್ಚುಗೆಯನ್ನು ಪ್ರತಿನಿಧಿಸುತ್ತದೆ. ‘ರಿಲಯನ್ಸ್ ಜ್ಯುವೆಲ್ಸ್ ವ್ಯಾಲೆಂಟೈನ್ ಡೇ’ ಸಂಗ್ರಹವು ಮಹಿಳೆಯರ ಶಕ್ತಿ ಮತ್ತು ಸಾಧನೆಗಳನ್ನು ಆಚರಿಸುವುದಲ್ಲದೆ ಇಂದಿನ ವೇಗದ ಜಗತ್ತಿನಲ್ಲಿ ಅವರು ನಿರ್ವಹಿಸುವ ಅನೇಕ ಪಾತ್ರಗಳಿಗಾಗಿ ಅವರನ್ನು ಗೌರವಿಸುತ್ತದೆ. ಆನ್‌ಲೈನ್ ಮತ್ತು ಆಯ್ದ ರಿಲಯನ್ಸ್ ಜ್ಯುವೆಲ್ಸ್ ಮಳಿಗೆಗಳಲ್ಲಿ ಲಭ್ಯವಿರುವ ಈ ಸಂಗ್ರಹವನ್ನು ಅನ್ವೇಷಿಸಲು ಎಲ್ಲ ಗ್ರಾಹಕರನ್ನೂ ರಿಲಯನ್ಸ್ ಜ್ಯುವೆಲ್ಸ್ ಆಹ್ವಾನಿಸುತ್ತದೆ.

ಈ ಸುದ್ದಿಯನ್ನೂ ಓದಿ: Reliance Jio: ಜಿಯೋ ಬ್ರೈನ್ ಎಐ ಪ್ಲಾಟ್ ಫಾರ್ಮ್ ಆರಂಭಿಸಿದ ಜಿಯೋ ಪ್ಲಾಟ್ ಫಾರ್ಮ್ಸ್

Continue Reading

ಪ್ರೇಮಿಗಳ ದಿನಾಚರಣೆ

Valentines Week Red Dress: ವ್ಯಾಲೆಂಟೈನ್ಸ್ ವೀಕ್‌ನಲ್ಲಿ ಟ್ರೆಂಡಿಯಾಗಿವೆ ಈ 5 ರೆಡ್‌ ಡ್ರೆಸ್‌

ವ್ಯಾಲೆಂಟೈನ್ಸ್ ವೀಕ್‌ನಲ್ಲಿ 5 ಶೈಲಿಯ ರೆಡ್‌ ಡ್ರೆಸ್‌ಗಳು (Valentines Week Red Dress) ಟ್ರೆಂಡಿಯಾಗಿವೆ. ಈಗಾಗಲೇ ಮಾರುಕಟ್ಟೆಗೆ ಲಗ್ಗೆ ಇಟ್ಟಿರುವ ಈ ಔಟ್‌ಫಿಟ್‌ಗಳ್ಯಾವುವು? ಎಂಬುದರ ಬಗ್ಗೆ ಸ್ಟೈಲಿಸ್ಟ್‌ಗಳು ವಿವರಿಸಿದ್ದಾರೆ. ಇಲ್ಲಿದೆ ಡಿಟೇಲ್ಸ್.

VISTARANEWS.COM


on

Valentines Week Red Dress
ಚಿತ್ರಕೃಪೆ: ಪಿಕ್ಸೆಲ್‌
Koo

ಶೀಲಾ ಸಿ. ಶೆಟ್ಟಿ, ಬೆಂಗಳೂರು
ಪ್ರತಿವರ್ಷದಂತೆ ಈ ವರ್ಷವೂ ವ್ಯಾಲೆಂಟೈನ್ಸ್ ವೀಕ್‌ನಲ್ಲಿ ರೆಡ್‌ ಡ್ರೆಸ್‌ಗಳು (Valentines Week Red Dress) ಟ್ರೆಂಡಿಯಾಗಿವೆ. ನೋಡಲು ಒಂದೇ ಕಲರ್‌ನ ನಾನಾ ಶೇಡ್‌ಗಳಾದರೂ ಆಕರ್ಷಕವಾಗಿರುವ ಡಿಸೈನ್‌ನ ಔಟ್‌ಫಿಟ್‌ಗಳು ಲಗ್ಗೆ ಇಟ್ಟಿವೆ. ಅವುಗಳಲ್ಲಿ, 5 ಶೈಲಿಯ ರೆಡ್‌ ಡ್ರೆಸ್‌ಗಳು ವಿಶೇಷವಾಗಿ ಟ್ರೆಂಡಿಯಾಗಿವೆ. ಈಗಾಗಲೇ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಆನ್‌ಲೈನ್‌ ಶಾಪ್‌ಗಳಲ್ಲೂ ಬೇಡಿಕೆ ಹೆಚ್ಚಿಸಿಕೊಂಡಿವೆ.

Demand for glamorous looking red dresses

ಗ್ಲಾಮರಸ್‌ ಲುಕ್‌ನ ರೆಡ್‌ ಡ್ರೆಸ್‌ಗಳಿಗೆ ಬೇಡಿಕೆ

“ವ್ಯಾಲೈಂಟೈನ್ಸ್ ವೀಕ್‌ನಲ್ಲಿ ಇತರೇ ಕಲರ್‌ಗಳಿಗಿಂತ ಅತಿ ಹೆಚ್ಚಾಗಿ ರೆಡ್‌ ಡ್ರೆಸ್‌ಗಳು ಬಿಕರಿಯಾಗುತ್ತವೆ. ಅದರಲ್ಲೂ ಗ್ಲಾಮರಸ್‌ ಲುಕ್‌ ನೀಡುವಂತಹ ಪಾರ್ಟಿವೇರ್‌ ಡ್ರೆಸ್‌ಗಳು ಬಿಡುಗಡೆಗೊಳ್ಳುತ್ತವೆ. ಇನ್ನು ಜನರೇಷನ್‌ ಬದಲಾದಂತೆ ಇಂದಿನ ಹುಡುಗಿಯರಿಗೂ ಇಷ್ಟವಾಗುವಂತಹ ಡಿಸೈನ್‌ನಲ್ಲಿ ಬಂದಿವೆ. ಇದಕ್ಕೆ ಸಾಕ್ಷಿ ಎಂಬಂತೆ, ಮಾಲ್‌ಗಳಲ್ಲಿ ನಾನಾ ಬಗೆಯ ಡಿಸೈನರ್‌ವೇರ್‌ ರೆಡ್‌ ಔಟ್‌ಫಿಟ್‌ಗಳನ್ನು ಕಾಣಬಹುದು. ಇನ್ನು ಆನ್‌ಲೈನ್‌ನಲ್ಲಂತೂ ಲೆಕ್ಕವಿಲ್ಲದಷ್ಟೂ ಶೈಲಿಯವು ಲಭ್ಯ. ಕೆಲವಲ್ಲಂತೂ ಈ ವಿಶೇಷ ಸಂದರ್ಭಕ್ಕೆ ಆಫರ್‌ನಲ್ಲಿ ಸಿಗುತ್ತಿವೆ” ಎನ್ನುತ್ತಾರೆ ಶಾಪಿಂಗ್‌ ಎಕ್ಸ್‌ಫಟ್ರ್ಸ್.

ಮಿನುಗುವ ಸಿಕ್ವಿನ್ಸ್ ಪಾರ್ಟಿ ಫ್ರಾಕ್‌

ಗ್ಲಾಮರಸ್‌ ಲುಕ್‌ ನೀಡುವ ಡಿಸೈನ್‌ನಲ್ಲಿ ಲಭ್ಯವಿರುವ ಸಿಕ್ವಿನ್ಸ್ ಪಾರ್ಟಿ ಫ್ರಾಕ್‌ಗಳು ಆಕರ್ಷಕವಾದ ಡಿಸೈನ್‌ನಲ್ಲಿ ಬಂದಿವೆ. ಡೀಪ್‌ ನೆಕ್‌, ಸ್ಲೀವ್ಲೆಸ್‌, ಶಾರ್ಟ್ ಡ್ರೆಸ್‌ಗಳು ಕಾಲೇಜು ಹುಡುಗಿಯರನ್ನು ಸೆಳೆದಿವೆ.

Glamorous bardot dress

ಗ್ಲಾಮರಸ್‌ ಬಾರ್ಡಟ್ ಡ್ರೆಸ್‌

ಶೋಲ್ಡರ್‌ ಇಲ್ಲದ ಬಾರ್ಡಟ್ ಡ್ರೆಸ್‌ಗಳು ಗ್ಲಾಮರಸ್‌ ಲುಕ್‌ಗೆಂದೇ ಬಿಡುಗಡೆಗೊಂಡಿವೆ. ಸ್ಲಿಮ್‌ ಫಿಟ್‌ ಶೈಲಿಯಲ್ಲಿ ಕೆಲವು ವಿನ್ಯಾಸಗೊಂಡಿದ್ದರೇ ಇನ್ನು ಕೆಲವು ಶಿಮ್ಮರಿಂಗ್‌ ಫ್ಯಾಬ್ರಿಕ್‌ನಲ್ಲಿ ಯುವತಿಯರನ್ನು ಆಕರ್ಷಿಸುತ್ತಿವೆ.

ಫಿಟ್ಟಿಂಗ್‌ಗಾಗಿ ಬಾಡಿಕಾನ್‌ ಡ್ರೆಸ್

ಮೈಗೆ ಅಂಟುಕೊಂಡಂತೆ ಕಾಣುವ ಫುಲ್‌ ಸ್ಲೀವ್‌ನ ಬಾಡಿಕಾನ್‌ ಡ್ರೆಸ್‌ಗಳು ನಾನಾ ಶೇಡ್‌ನಲ್ಲಿ ಹಾಗೂ ವಿನ್ಯಾಸದಲ್ಲಿ ಆಗಮಿಸಿವೆ. ಹೈ ನೆಕ್‌ ಹಾಗೂ ಬೋಟ್‌ ನೆಕ್‌ನವು ಟೈಟ್‌ ಫಿಟ್ಟಿಂಗ್‌ನಲ್ಲಿ ದೊರೆಯುತ್ತಿವೆ.

ಆಕರ್ಷಕ ಮ್ಯಾಕ್ಸಿ ಡ್ರೆಸ್

ರೆಡ್‌ ಸ್ಟ್ರಾಪ್‌ ಮ್ಯಾಕ್ಸಿ ಡ್ರೆಸ್‌ಗಳು ಕಾಲೇಜು ಹುಡುಗಿಯರನ್ನು ಸವಾರಿ ಮಾಡಲು ಸಜ್ಜಾಗಿವೆ. ಪಾರ್ಟಿವೇರ್‌ ಕೆಟಗರಿಯಲ್ಲಿ ಫ್ಲೇರ್‌ ಹಾಗೂ ಅಂಬ್ರೆಲ್ಲಾ ಶೈಲಿಯಲ್ಲಿ ಬಂದಿವೆ.

Tube dress for hot look

ಹಾಟ್‌ ಲುಕ್‌ಗಾಗಿ ಟ್ಯೂಬ್‌ ಡ್ರೆಸ್

ನೋಡಲು ಹಾಟ್‌ ಲುಕ್‌ ನೀಡುವ ಈ ಟ್ಯೂಬ್‌ ಡ್ರೆಸ್‌ಗಳು ಇದೀಗ ಮತ್ತೊಮ್ಮೆ ಟ್ರೆಂಡಿಯಾಗಿವೆ. ರೆಡ್‌ ಸಿಲ್ಕ್ ಮೆಟಿರಿಯಲ್‌ನಲ್ಲೂ ಇವು ಕಾಣಿಸಿಕೊಂಡಿವೆ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Giant Teddy Bear Trend: ಹುಡುಗಿಯರನ್ನು ಆಲಂಗಿಸಲು ಬಂತು ಜೈಂಟ್ ಟೆಡ್ಡಿಬೇರ್ಸ್ !

Continue Reading
Advertisement
Dina Bhavishya
ಭವಿಷ್ಯ9 mins ago

Dina Bhavishya : ಅಮಾವಾಸ್ಯೆ ದಿನ ಈ ರಾಶಿಯವರಿಗೆ ಅದೃಷ್ಟ; ಹಣ ಗಳಿಕೆಗೆ ಪುಷ್ಟಿ

70.94 percent voting in Koppal Lok Sabha constituency says Koppal DC Nalin Atul
ಕೊಪ್ಪಳ5 hours ago

Lok Sabha Election 2024: ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಶೇ 70.94ರಷ್ಟು ಮತದಾನ

Rampura PSI Mahesh Hosapete admitted to the hospital Hanagal village road accident injured persons
ಕರ್ನಾಟಕ5 hours ago

Road Accident: ಅಪಘಾತವಾಗಿ ರಕ್ತದ ಮಡುವಿನಲ್ಲಿ ಬಿದ್ದ ಯುವಕರನ್ನು ಆಸ್ಪತ್ರೆಗೆ ಸೇರಿಸಿದ ಪಿಎಸ್‌ಐ

Lok Sabha Election 2024
ಕರ್ನಾಟಕ5 hours ago

Lok Sabha Election 2024: 2ನೇ ಹಂತದಲ್ಲಿ ಶೇ.70.41 ಮತದಾನ; ಕಳೆದ ಬಾರಿಗಿಂತ ಹೆಚ್ಚು, ಚಿಕ್ಕೋಡಿಯಲ್ಲಿ ಗರಿಷ್ಠ

Mayawati
ಪ್ರಮುಖ ಸುದ್ದಿ5 hours ago

Mayawati: ನೇಮಿಸಿದ 5 ತಿಂಗಳಲ್ಲೇ ಸೋದರಳಿಯನನ್ನು ಉತ್ತರಾಧಿಕಾರಿ ಹುದ್ದೆಯಿಂದ ತೆಗೆದ ಮಾಯಾವತಿ!

IPL 2024
ಪ್ರಮುಖ ಸುದ್ದಿ5 hours ago

IPL 2024 : ರಾಜಸ್ಥಾನ್​ ವಿರುದ್ಧ ಡೆಲ್ಲಿಗೆ 20 ರನ್​ ಗೆಲುವು, ಪ್ಲೇಆಫ್ ಕನಸು ಜೀವಂತ

Music Festival
ಬೆಂಗಳೂರು6 hours ago

Music Festival: ಬೆಂಗಳೂರಿನಲ್ಲಿ ಮೇ 12ರಂದು ಸಪ್ತಕ ʼಸಂಗೀತ ಸಂಭ್ರಮʼ

Amanatullah Khan
ದೇಶ6 hours ago

Amanatullah Khan: ಪೆಟ್ರೋಲ್‌ ಬಂಕ್‌ ಸಿಬ್ಬಂದಿ ಮೇಲೆ ಆಪ್‌ ಎಂಎಲ್‌ಎ ಪುತ್ರನಿಂದ ಹಲ್ಲೆ; ಬಿತ್ತು ಕೇಸ್

Yuzvendra Chahal
ಕ್ರಿಕೆಟ್6 hours ago

Yuzvendra Chahal : ಟಿ20 ವಿಕೆಟ್​​ಗಳ ಗಳಿಕೆಯಲ್ಲಿ ನೂತನ ದಾಖಲೆ ಬರೆದ ಸ್ಪಿನ್ನರ್ ಯಜ್ವೇಂದ್ರ ಚಹಲ್​

Bescom Helpline
ಕರ್ನಾಟಕ6 hours ago

BESCOM Helpline: ಮಳೆ ಹಾನಿ; ದೂರು ಸಲ್ಲಿಸಲು ಬೆಸ್ಕಾಂ ಗ್ರಾಹಕರಿಗೆ ಪರ್ಯಾಯ ವಾಟ್ಸ್‌ಆ್ಯಪ್‌, ದೂರವಾಣಿ ಸಂಖ್ಯೆ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ9 mins ago

Dina Bhavishya : ಅಮಾವಾಸ್ಯೆ ದಿನ ಈ ರಾಶಿಯವರಿಗೆ ಅದೃಷ್ಟ; ಹಣ ಗಳಿಕೆಗೆ ಪುಷ್ಟಿ

Prajwal Revanna Case HD Revanna has severe chest pain Admission in Victoria
ರಾಜಕೀಯ8 hours ago

Prajwal Revanna Case: ಎಚ್.ಡಿ. ರೇವಣ್ಣಗೆ ಹೆಚ್ಚಾದ ಎದೆ ನೋವು; ಸಲೈನ್‌ ಹಾಕಿ ಕಳಿಸಿದ ವೈದ್ಯರು

Karnataka Weather Forecast
ಮಳೆ11 hours ago

Karnataka Weather : ಹಾಸನ, ಚಿಕ್ಕಮಗಳೂರಲ್ಲಿ ಆಲಿಕಲ್ಲು ಸಹಿತ ಭಾರಿ ಮಳೆ; ನಾಳೆ ಬಿರುಗಾಳಿ ಎಚ್ಚರಿಕೆ

Prajwal Revanna Case Government work against Revanna HD Kumaraswamy gives details of the case
ರಾಜಕೀಯ13 hours ago

Prajwal Revanna Case: ರೇವಣ್ಣರಿಗೆ ಖೆಡ್ಡಾ ತೋಡಿದ್ದು ಸರ್ಕಾರ; ಎಲ್ಲೆಲ್ಲಿ ಏನೇನು ಮಾಡಲಾಯಿತೆಂಬ ಇಂಚಿಂಚು ಡಿಟೇಲ್ಸ್‌ ಕೊಟ್ಟ ಎಚ್‌ಡಿಕೆ!

Prajwal Revanna Case 2nd accused in KR Nagar victim abduction case sent to SIT custody Trouble for Revanna
ಕ್ರೈಂ1 day ago

Prajwal Revanna Case: ಕೆ.ಆರ್.‌ ನಗರ ಸಂತ್ರಸ್ತೆ ಕಿಡ್ನ್ಯಾಪ್‌ ಕೇಸ್‌ನ 2ನೇ ಆರೋಪಿ SIT ಕಸ್ಟಡಿಗೆ; ರೇವಣ್ಣಗೆ ಸಂಕಷ್ಟ?

karnataka weather forecast
ಮಳೆ1 day ago

Karnataka Weather : ಬೆಂಗಳೂರು ಸೇರಿ ಹಲವೆಡೆ ಮತ್ತೆ ಅಬ್ಬರಿಸುತ್ತಿರುವ ಮಳೆ; ಇನ್ನೊಂದು ವಾರ ಅಲರ್ಟ್‌

Prajwal Revanna Case DK Shivakumar behind Prajwal video leak Devaraje Gowda demands CBI probe
ಕ್ರೈಂ1 day ago

Prajwal Revanna Case: ಪ್ರಜ್ವಲ್‌ ವಿಡಿಯೊ ಲೀಕ್‌ ಹಿಂದೆ ಇರೋದು ಡಿಕೆಶಿ; ದಾಖಲೆ ತೋರಿಸಿ, ಸಿಬಿಐಗೆ ಕೇಸ್‌ ವಹಿಸಲು ದೇವರಾಜೇಗೌಡ ಆಗ್ರಹ

Dina bhavishya
ಭವಿಷ್ಯ2 days ago

Dina Bhavishya : ಈ ರಾಶಿಯವರಿಗೆ ಇಂದು ಹುಡುಕಿಕೊಂಡು ಬರಲಿವೆ ಹೊಸ ಅವಕಾಶಗಳು

Prajwal Revanna Case HD Revanna sent to judicial custody Shift to Parappana Agrahara
ಕ್ರೈಂ2 days ago

Prajwal Revanna Case: ಎಸ್‌ಐಟಿ ಕಸ್ಟಡಿಗೆ ಮಾಜಿ ಸಚಿವ ಎಚ್‌.ಡಿ. ರೇವಣ್ಣ; ಮತ್ತೆ ತೀವ್ರ ವಿಚಾರಣೆ

Prajwal Revanna Case No evidence against me its a conspiracy says HD Revanna
ಕರ್ನಾಟಕ2 days ago

Prajwal Revanna Case: ನನ್ನ ವಿರುದ್ಧ ಯಾವುದೇ ಸಾಕ್ಷಿಗಳಿಲ್ಲ, ಇದೊಂದು ಷಡ್ಯಂತ್ರ: ಎಚ್‌.ಡಿ. ರೇವಣ್ಣ ಫಸ್ಟ್‌ ರಿಯಾಕ್ಷನ್‌!

ಟ್ರೆಂಡಿಂಗ್‌